ಬೆಂಗಳೂರು/ವಿಜಯಪುರ: ಚಿಕಿತ್ಸೆಗೆಂದು ಬಂದಿದ್ದ ವೇಳೆ ಕಿದ್ವಾಯಿ ಆಸ್ಪತ್ರೆಯಿಂದ (Kidwai Hospital) ಪರಾರಿಯಾಗಿದ್ದ ಕೈದಿಯನ್ನು ಸಿದ್ದಾಪುರ ಪೊಲೀಸರು (Siddapura Police) ವಿಜಯಪುರದಲ್ಲಿ (Vijayapura) ಬಂಧಿಸಿದ್ದಾರೆ.
ಕೈದಿ ಚೇತನ್ ಕಲ್ಯಾಣಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಸಜಾ ಕೈದಿಯನ್ನ ಬಿಜಾಪುರದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿತ್ತು. ಬಾಯಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅಪರಾಧಿಯನ್ನ ಕಿದ್ವಾಯಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆ ತಂದಿದ್ದ ವೇಳೆ ಜೈಲು ಸಿಬ್ಬಂದಿ ಕಣ್ತಪ್ಪಿಸಿ ಎಸ್ಕೇಪ್ ಆಗಿದ್ದಾನೆ. ಆಸ್ಪತ್ರೆ ಸಿಬ್ಬಂದಿ ಹಿಡಿಯಲು ಪ್ರಯತ್ನಿಸಿದರೂ ಸಿಗದೇ ಎಸ್ಕೇಪ್ ಆಗಿದ್ದ. ಇದನ್ನೂ ಓದಿ: ಕಿದ್ವಾಯಿ ಆಸ್ಪತ್ರೆಯಿಂದ ಸಜಾ ಕೈದಿ ಪರಾರಿ – ಕ್ಯಾನ್ಸರ್ ಟ್ರೀಟ್‌ಮೆಂಟ್‌ಗೆ ಬಂದು ಎಸ್ಕೇಪ್
ಕಳೆದ ಆಗಸ್ಟ್ 21ರಿಂದ ಕಿದ್ವಾಯಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಜಾ ಕೈದಿ ಚೇತನ್ ಸೆ.8ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಿಬ್ಬಂದಿ ಕಣ್ತಪ್ಪಿಸಿ ಪರಾರಿಯಾಗಿದ್ದ.
ಕಲಬುರಗಿ: ಲಿಕ್ವಿಡ್ ಆಕ್ಸಿಜನ್ (Liquid Oxygen) ಕೊರತೆಯಿಂದ ಕ್ಯಾನ್ಸರ್ ರೋಗಿಯೊಬ್ಬರು ಸಾವನ್ನಪ್ಪಿರುವಂತಹ ಘಟನೆ ಕಲಬುರಗಿಯ ಕಿದ್ವಾಯಿ ಆಸ್ಪತ್ರೆಯಲ್ಲಿ ನಡೆದಿದೆ.
ಝಕೀರಾ ಬೇಗಂ ಮೃತ ಮಹಿಳೆ. ಬೀದರ್ ಜಿಲ್ಲೆಯ ಝಕೀರಾ ಬೇಗಂ ಕ್ಯಾನ್ಸರ್ ರೋಗ (Cancer Patient) ದಿಂದ ಬಳಲುತ್ತಿರುವ ಹಿನ್ನೆಲೆ ಕಲಬುರಗಿಯ ಕಿದ್ವಾಯಿ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡೋದಕ್ಕೆ ಮುಂದಾಗಿದ್ದರು. ಆದರೆ ಬೆಳಗ್ಗೆ ಕಿದ್ವಾಯಿ ಆಸ್ಪತ್ರೆ (Kidwai Hospital) ಯ ಐಸಿಯುನಲ್ಲಿನ ಆಕ್ಸಿಜನ್ ಖಾಲಿಯಾಗಿದ್ದರಿಂದ ಝಕೀರಾ ಬೇಗಂ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪಿಎಸ್‌ಐ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವಕ ಆತ್ಮಹತ್ಯೆ
ಮತ್ತೊಂದೆಡೆ ಐಸಿಯುನಲ್ಲಿದ್ದ ಕನ್ಯಾಕುಮಾರಿ ಅನ್ನೋ ಮಹಿಳೆಯನ್ನ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೋಡಿಸೋದಕ್ಕೆ ಮುಂದಾಗಿದ್ದಾರೆ. ಇನ್ನೂ ಆಕ್ಸಿಜನ್ ಕೊರತೆಯಿಂದ ಮಹಿಳೆ ಸಾವನ್ನಪ್ಪಿರೋದನ್ನ ಅಲ್ಲಗಳೆದ ಆಸ್ಪತ್ರೆಯ ವೈದ್ಯರು, ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಹಿನ್ನೆಲೆ ಸಾವನ್ನಪ್ಪಿದ್ದಾರೆ. ಇನ್ನೂ ಜಸ್ಟ್ 15 ರಿಂದ 20 ನಿಮಿಷದಲ್ಲಿ ಆಕ್ಸಿಜನ್ ಬರುತ್ತಿತ್ತು. ಆದರೆ ರಿಸ್ಕ್ ಬೇಡ ಅಂತಾ ಬೇರೆಡೆ ಕಳುಹಿಸಿದ್ದೇವೆ. ಅದಾದ ಬಳಿಕ ಆ ಆಸ್ಪತ್ರೆಗೆ ದಾಖಲಿಸಿದ ಮೇಲೆ ಆ ಮಹಿಳೆ ಸಾವನ್ನಪ್ಪಿದ್ದಾರೆ ಅಂತಾ ವೈದ್ಯ ಎಡವಟ್ಟಿನ ಹೇಳಿಕೆ ನೀಡಿದ್ದಾರೆ.
ಅದೃಷ್ಟ ಅಂದ್ರೆ ಜಿಮ್ಸ್ ಆಸ್ಪತ್ರೆಯಲ್ಲಿ ಕನ್ಯಾಕುಮಾರಿ ಅನ್ನೋ ಮಹಿಳೆ ಚಿಕಿತ್ಸೆ ಪಡೆಯೋದಕ್ಕೆ ಮುಂದಾಗಿದ್ದಾರೆ. ಆದರೆ ಕಿದ್ವಾಯಿ ಆಸ್ಪತ್ರೆಯ ವೈದ್ಯ ನವೀನ್ ಕನ್ಯಾಕುಮಾರಿ ಕೂಡ ಸಾವನ್ನಪ್ಪಿದ್ದಾರೆ ಅಂತಾ ಎಡವಟ್ಟಿನ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಕ್ಯಾನ್ಸರ್ ಪೀಡಿತರಿಗೆ ಔಷಧಿಯ ವೆಚ್ಛ ಭರಿಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಕನಿಷ್ಠ ದರದಲ್ಲಿ ಚಿಕಿತ್ಸೆ ಕೊಡುವ ವ್ಯವಸ್ಥೆ ಕಲ್ಪಿಸಲು ಸೊಸೈಟಿಯನ್ನು ಸ್ಥಾಪನೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಕಿದ್ವಾಯಿ ಸ್ಮಾರಕ ಸಂಸ್ಥೆ, ಕ್ಯಾನ್ಸರ್ ಸಂಶೋಧನಾ ಮತ್ತು ತರಬೇತಿ ಕೇಂದ್ರದಲ್ಲಿ ಇನ್ಫೋಸಿಸ್ ಪ್ರತಿಷ್ಠಾನ ನಿರ್ಮಿಸಿರುವ ಒಪಿಡಿ ಬ್ಲಾಕ್ ಹಾಗೂ ಇತರೆ ಸೌಲಭ್ಯಗಳ ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.
ಸಿ.ಎಸ್.ಆರ್ ಹಾಗೂ ಸರ್ಕಾರದ ನಿಧಿಯನ್ನು ಬಳಸಿ ಸೊಸೈಟಿಯ ಮೂಲಕ ರೋಗಿಗಳ ಆರೈಕೆಯಲ್ಲಿರುವ ಅವರ ಕುಟುಂಬದವರಿಗೆ ಅಗತ್ಯವಿರುವ ಅನುಕೂಲವನ್ನು ಸಹ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದರು. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಆವಿಷ್ಕಾರಗಳ ಬಳಕೆಗೆ ಒತ್ತು ನೀಡಲಾಗುವುದು ಎಂದ ಅವರು ದೇಶದಲ್ಲಿಯೇ ಮುಂಚೂಣಿಯಲ್ಲಿರುವ ಕಿದ್ವಾಯಿ ಸಂಸ್ಥೆ, ಜಗತ್ತಿನ ಎಲ್ಲ ಉತ್ತಮ ವೈದ್ಯಕೀಯ ಸಂಸ್ಥೆಗಳೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.
ಇನ್ಫೋಸಿಸ್ ಪ್ರತಿಷ್ಠಾನ ರಾಜ್ಯದ ಅನೇಕ ಆಸ್ಪತ್ರೆಗಳಿಗೆ ಹಾಗೂ ಶಾಲಾ, ಕಾಲೇಜುಗಳಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂಬ ಸರ್ವಜ್ಞನ ಮಾತನ್ನು ಪ್ರತಿಷ್ಠಾನದ ವತಿಯಿಂದ ಅಕ್ಷರಶ: ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿಯವರು ಪಾಲಿಸಿಕೊಂಡು ಬಂದಿದ್ದಾರೆ ಎಂದು ಶ್ಲಾಘಿಸಿದರು.
ಕ್ಯಾನ್ಸರ್ ಜೊತೆ ಹೋರಾಟ ಮಾಡುವಾಗ ಮಾನವೀಯತೆಯನ್ನು ಉಳಿಸಿಕೊಳ್ಳಬೇಕು. ಬಡ ರೋಗಿಗಳಿಗೆ ಸಹಾಯಕ್ಕೆ ಇನ್ನಷ್ಟು ದಾನಿಗಳು ಮುಂದೆ ಬರಬೇಕು ಎಂದರು.
ನಾಡಿಗೆ ಹೃದಯವಿರುವ ಶ್ರೀಮಂತರ ಅಗತ್ಯವಿದೆ. ಒಬ್ಬರಿಗೊಬ್ಬರ ಪ್ರೇರಣೆಯಿಂದ ಜಗತ್ತು ನಡೆಯುತ್ತಿದೆ. ಒಳ್ಳೆಯ ಕೆಲಸ ಮಾಡಿದಾಗ ಮರೆಯದೆ ಮೆಲುಕು ಹಾಕಬೇಕು. ಈ ಬಗ್ಗೆ ಚಿಂತನೆ ಮಾಡಿದಾಗ ಶಕ್ತಿ ತುಂಬಿ ಇನ್ನಷ್ಟು ದೊಡ್ಡ ಕೆಲಸ ಮಾಡಲು ಪ್ರೇರಣೆ ದೊರೆಯುತ್ತದೆ ಎಂದರು. ಇದನ್ನೂ ಓದಿ: ಯುವ ಬ್ಯಾಡ್ಮಿಂಟನ್ ಪ್ರತಿಭೆಗಳ ತರಬೇತಿಗೆ ಇನ್ಫೋಸಿಸ್ 16 ಕೋಟಿ ರೂ. ನೆರವು
ತಮ್ಮ ತಾಯಿಗೆ ಕ್ಯಾನ್ಸರ್ ಪೀಡಿತರಾಗಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿದ ಮುಖ್ಯಮಂತ್ರಿಗಳು, ಕ್ಯಾನ್ಸರ್ ಚಿಕಿತ್ಸೆಯೇ ಸಮಸ್ಯೆ ಎನ್ನುವಂಥ ಕಾಲವಿತ್ತು. ಸಂಶೋಧನೆಯ ಫಲವಾಗಿ ಚಿಕಿತ್ಸೆಯಲ್ಲಿ ಈಗ ಸಾಕಷ್ಟು ಸುಧಾರಣೆಯಾಗಿದೆ. ಕಾಯಿಲೆಗೆ ಒಳಗಾದವರು ಮಾನಸಿಕ ಒತ್ತಡ ಬಹಳವಿರುತ್ತದೆ. ಕಿದ್ವಾಯಿ ಸಂಸ್ಥೆ ಕಳೆದ ನಾಲ್ಕು ದಶಕಗಳಿಂದ ಅಸ್ತಿತ್ವದಲ್ಲಿದ್ದು, ಇಲ್ಲಿ ಮಾಡುವ ಪ್ರತಿಯೊಬ್ಬರೂ ಶ್ರದ್ಧೆಯಿಂದ ಕೆಲಸ ಮಾಡಿದ್ದು, ಅವರೆಲ್ಲರ ಸೇವೆ ಅಮೋಘವಾಗಿದೆ ಎಂದು ಶ್ಲಾಘಿಸಿದರಲ್ಲದೆ ಇಂಥ ಸೇವೆ ಮಾಡುವ ಸಂಸ್ಥೆಗೆ ನಮ್ಮ ಸರ್ಕಾರದ ಬೆಂಬಲ ಸದಾ ಇರುತ್ತದೆ ಎಂದರು. ಇದನ್ನೂ ಓದಿ: ಇನ್ಫೋಸಿಸ್ ಫೌಂಡೇಶನ್‍ನಿಂದ ರಾಯರ ಮಠಕ್ಕೆ ಒಂದು ಲಾರಿ ಆಹಾರ ಪದಾರ್ಥ
ಕಲಬುರಗಿ, ಶಿವಮೊಗ್ಗ, ಮೈಸೂರಿನಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳಿದ್ದು, ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಕ್ಯಾನ್ಸರ್ ಆಸ್ಪತ್ರೆ ತೆರೆಯಲು ಹಾಗೂ ಪ್ರಾದೇಶಿಕವಾರು ಕ್ಯಾನ್ಸರ್ ಆಸ್ಪತ್ರೆಗಳನ್ನು ತೆರೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಆರೋಗ್ಯ ಸಚಿವ ಡಾ. ಸುಧಾಕರ್, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ ಡಾ. ಸಿ.ರಾಮಚಂದ್ರ ಹಾಗೂ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೆಂಗಳೂರು: ಸಣ್ಣಪುಟ್ಟ ಕಾಯಿಲೆ ಇದ್ದರೆ ಬರಲೇಬೇಡಿ, ಎಮರ್ಜೆನ್ಸಿ ಇದ್ದವರು ಮಾತ್ರ ಕಿದ್ವಾಯಿ ಆಸ್ಪತ್ರೆಗೆ ಬನ್ನಿ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ ಡಾ. ಸಿ ರಾಮಚಂದ್ರ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವಿನಾಕಾರಣ ಮನೆಯಿಂದ ಹೊರ ಬರಬೇಡಿ. ಸರ್ಕಾರದ ಆದೇಶಗಳನ್ನ ಪಾಲನೆ ಮಾಡಿ. ಉಸಿರಾಟ, ಹೊಟ್ಟೆ ಉಬ್ಬರ, ತುರ್ತು ಆರೋಗ್ಯ ಚಿಕಿತ್ಸೆ ಇದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ. ವಿನಾಕಾರಣ ನೀವು ಹೊರಗೆ ಬಂದು, ಇತರರಿಗೂ ತೊಂದರೆ ಕೊಡಬೇಡಿ. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಸಹಕರಿಸಿ ಎಂದು ಸಂಸ್ಥೆಯ ನಿರ್ದೇಶಕರು ಸಾರ್ವಜನಿಕರಲ್ಲಿ ಕೋರಿಕೊಂಡಿದ್ದಾರೆ.
ಈ ಹಿಂದೆ ಗುರುವಾರ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಶಿಫ್ಟ್ ಮಾಡಿದಾಗ, ಓಪಿಡಿ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ, ತುರ್ತು ಸೇವೆ ಮಾತ್ರ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ಸಿಗಲಿದೆ ಎಂದು ವೈದ್ಯಕೀಯ ಅಧೀಕ್ಷಕರು ಪ್ರಕಟಣೆ ಹೊರಡಿಸಿದ್ದರು.
ಕಿಮೋಥೆರಪಿ ಮತ್ತು ರೇಡಿಯೋ ತೆರಪಿ ಮಾಡಿಸಿಕೊಳ್ಳುವ ರೋಗಿಗಳು ಕೆಎಂಸಿಗೆ ಯಾವುದೇ ಕಾರಣಕ್ಕೆ ಕಾಲಿಡಬಾರದು. ಅವರು ನೇರವಾಗಿ ಶಿರಡಿ ಸಾಯಿಬಾಬಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಗರ್ಭಿಣಿ ಸ್ತ್ರೀಯರು ಎಮರ್ಜೆನ್ಸಿ ಮತ್ತು ಒಪಿಡಿ ಕಟ್ಟಡದ ಬಳಿ ಸುಳಿದಾಡುತ್ತಿಲ್ಲ, ಅವರು ನೇರವಾಗಿ ಮಹಿಳಾ ಮತ್ತು ಮಕ್ಕಳ ಘಟಕಕ್ಕೆ ತೆರಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ಯಾವುದೇ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಯನ್ನು ಪ್ರವೇಶ ಮಾಡುವವರು ಹೊರಭಾಗದಲ್ಲಿ ಸಂಪೂರ್ಣ ತಪಾಸಣೆಗೆ ಒಳಗಾಗಬೇಕು. ರೋಗದ ಯಾವುದೇ ಲಕ್ಷಣಗಳು ಇದ್ದಲ್ಲಿ ಅಂತಹ ವ್ಯಕ್ತಿಯನ್ನು ಮಣಿಪಾಲ ಕೆಎಂಸಿಯ ಒಳಗೆ ವೈದ್ಯರು ಮತ್ತು ಸಿಬ್ಬಂದಿಗಳು ಬಿಟ್ಟುಕೊಳ್ಳುವುದಿಲ್ಲ. ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ 10 ಮಂದಿ ಕೊರೊನಾ ಸೋಂಕಿತರಿಗೆ ಸಂಪೂರ್ಣ ಚಿಕಿತ್ಸೆ ಕೊಡುವಂತಹ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಲಾಗಿತ್ತು.
– 40 ವರ್ಷ ಮೇಲ್ಪಟ್ಟ ಹೆಣ್ಮಕ್ಕಳು ವಾರ್ಷಿಕ ಚೆಕಪ್ ಮಾಡಿಸಬೇಕು
ಬೆಂಗಳೂರು: ಕ್ಯಾನ್ಸರ್ ಎಂಬ ಮಹಾಮಾರಿ ಕಾಯಿಲೆಗೆ ಯಾರು ಹೆದರಬೇಕಿಲ್ಲ. ಅದಕ್ಕೆ ಸೂಕ್ತ ಚಿಕಿತ್ಸೆಯಿದೆ. ಕ್ಯಾನ್ಸರ್ ಅನ್ನೋದು ಒಂದು ಕಾಯಿಲೆ. ಅದರಿಂದ ಭಯಪಡುವ ಅಗತ್ಯವಿಲ್ಲ. ಕ್ಯಾನ್ಸರ್ ಖಾಯಿಲೆಯ ಸೊಂಕು ಬಗ್ಗೆ ತಿಳಿದ ಕೂಡಲೇ ತುರ್ತಾಗಿ ಚಿಕಿತ್ಸೆಗೆ ಬರಬೇಕು. ಆಗ ಮಾತ್ರ ಕ್ಯಾನ್ಸರ್‌ಗೆ ಕಡಿವಾಣ ಹಾಕಬಹುದು ಎಂದು ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ನಿರ್ದೇಶಕ ರಾಮಚಂದ್ರ ಹೇಳಿದ್ದಾರೆ.
ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಮಾತನಾಡಿದ ಅವರು, ಪ್ರಸ್ತುತ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಗರ್ಭಕೋಶದ ಕಂಟಕದ ಕ್ಯಾನ್ಸರ್ ಕಡಿಮೆಯಾಗುತ್ತಿದೆ. ತಂಬಾಕು, ಪಾನ್ ಪರಾಗ್ ತಿನ್ನುವುದರಿಂದ ಕ್ಯಾನ್ಸರ್ ಹೆಚ್ಚಾಗುತ್ತಿದೆ. ಸರ್ಕಾರ ಇವುಗಳನ್ನ ನಿಷೇಧಿಸಿದ್ದರೂ ಜನ ಇವುಗಳ ಮೇಲೆಯೇ ಅವಲಂಬನೆಯಾಗಿದ್ದಾರೆ. ಕ್ಯಾನ್ಸರ್ ಸೊಂಕು ತಗುಲಿದಾಗ ಶೇ. 60ರಷ್ಟು ತಡೆಗಟ್ಟಬಹುದು ಎಂದು ತಿಳಿಸಿದರು.
ನಮ್ಮ ಜನ ಕ್ಯಾನ್ಸರ್ ಬಗ್ಗೆ ಗೊತ್ತಿದ್ದರೂ ಬೇಗ ಚಿಕಿತ್ಸೆಗೆ ಬರುವುದಿಲ್ಲ. ಕೊನೆಯ ಹಂತದಲ್ಲಿದ್ದಾಗ ಮಾತ್ರ ಆಸ್ಪತ್ರೆಗಳಿಗೆ ಬರುತ್ತಾರೆ. ಆ ಸಮಯದಲ್ಲಿ ಪರಸ್ಥಿತಿ ಕೈ ಮೀರಿ ಹೋಗಿರುತ್ತೆ. ಹೀಗಾಗಿ ಕ್ಯಾನ್ಸರ್ ಬಗ್ಗೆ ಸಾಕಷ್ಟು ಜನರಲ್ಲಿ ಆತಂಕವಿದೆ ಎಂದರು.
ಇಂದು ವಿಶ್ವ ಕ್ಯಾನ್ಸರ್ ದಿನಾಚರಣೆ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಿಸಿಎಂ ಅಶ್ವತ್ ನಾರಾಯಣ್ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ಭೇಟಿ ನೀಡಿ ಸ್ವಚ್ಛತೆ ಹಾಗೂ ಕ್ಯಾನ್ಸರ್ ರೋಗಿಗಳ ಆರೋಗ್ಯವನ್ನು ವಿಚಾರಿಸಿದರು. ಆ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ನಿರ್ದೇಶಕ ರಾಮಚಂದ್ರ, 40 ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳು, ವರ್ಷಕ್ಕೊಮ್ಮೆ ಮ್ಯಾಮೋಗ್ರಾಮ್, ಅನ್ಯೂವಲ್ ಚೆಕಪ್ ಮಾಡಿಸಬೇಕು. ಕ್ಯಾನ್ಸರ್ ಖಾಯಿಲೆಯ ಬಗ್ಗೆ ಹೆದರುವಂತ ಅವಶ್ಯಕತೆಯಿಲ್ಲ ಎಂದು ಕ್ಯಾನ್ಸರ್ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಿದರು.
ಬೆಂಗಳೂರು: ಪ್ರತಿಯೊಂದು ಯಶಸ್ವಿ ಮಹಿಳೆ ಹಿಂದೆ ಒಬ್ಬ ಪುರಷ ಇರುತ್ತಾನೆ ಎಂದು ಇನ್ಫೋಸಿಸ್ ಸಂಸ್ಥಾಪಕಿ ಸುಧಾಮೂರ್ತಿ ಅವರು ಹೇಳಿದ್ದಾರೆ.
ಇಂದು ಕಿದ್ವಾಯಿ ಆಸ್ಪತ್ರೆಯ 5 ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಬ್ಬ ಒಳ್ಳೆಯ ವೈದ್ಯನಿಂದ ಮಾತ್ರ ರೋಗಿ ಗುಣಪಡಿಸಲು ಸಾಧ್ಯ ಎಂದು ವೈದ್ಯರಿಗೆ ಕಿವಿ ಮಾತು ಹೇಳಿದರು.
ನನಗೆ ಸರ್ಕಾರಿ ಆಸ್ಪತ್ರೆ ಮೇಲೆ ವಿಶೇಷ ಪ್ರೀತಿ ಇದೆ. ಏಕೆಂದರೆ ನನ್ನ ತಂದೆ ಕೂಡ ಒಬ್ಬ ಸರ್ಕಾರಿ ಆಸ್ಪತ್ರೆ ವೈದ್ಯರಾಗಿದ್ದರು. ವೈದ್ಯರ ಮೇಲೆ ಆಗ ಹಲ್ಲೆ ಎಲ್ಲಿಯೂ ಆಗುತ್ತಿರಲಿಲ್ಲ. ವೈದ್ಯರನ್ನು ದೇವರು ಎಂದು ಕಾಣುತ್ತಿದ್ದರು. ನಾನು ಇಂಟರ್‌ನೆಟ್ ನೋಡಲ್ಲ. ಅದು ಬರೀ ಮಾಹಿತಿ ನೀಡುತ್ತೆ ಅಷ್ಟೇ ಆದರೆ ನಾವು ವೈದ್ಯರ ಮೇಲೆ ವಿಶ್ವಾಸ ಇಡಬೇಕು. ಅದರಿಂದಲೇ ನಾವು ಆರೋಗ್ಯವಂತರಾಗಬಹುದು. ಒಬ್ಬ ಒಳ್ಳೆಯ ವೈದ್ಯನಿಂದ ಮಾತ್ರ ರೋಗಿ ಗುಣಪಡಿಸಲು ಸಾಧ್ಯ ಎಂದು ಹೇಳಿದರು.
ಕಾರವಾರದಲ್ಲಿ ಒಂದು ರಸ್ತೆ ಸಮಸ್ಯೆ ಇತ್ತು ಅದನ್ನು ಸಿಎಂ ಅವರಿಗೆ ಹೇಳಿದ್ದೆ. ಅವರು ನಾವು ಸರಿ ಮಾಡ್ತೀವಿ ಅಮ್ಮ ಎಂದು ಹೇಳಿದ್ದರು. ಆದರೆ ನಮಗೆ ಸರ್ಕಾರದಿಂದ ಅನುಮತಿ ಕೊಟ್ಟರೆ ನಾವೇ ಅದನ್ನು ಸರಿ ಮಾಡುತ್ತೇವೆ. ನಮ್ಮ ಸಂಸ್ಥೆಯಿಂದ 400 ಕೋಟಿ ವರ್ಷಕ್ಕೆ ಖರ್ಚು ಮಾಡುತ್ತೇವೆ. ಅದರೊಳಗೆ ಈ ರಸ್ತೆ ಕಾರ್ಯವನ್ನು ಮಾಡುತ್ತೇವೆ ಎಂದು ಹೇಳಿದರು.
ಈ ಎಲ್ಲಾ ಕೆಲಸಗಳಲ್ಲೂ ನನ್ನ ಜೊತೆ 7 ಜನ ಕೆಲಸ ಮಾಡುತ್ತಾರೆ. ನನಗೆ ಉತ್ತಮವಾದ ಸೆಕ್ಯೂರಿಟಿ ಮತ್ತು ಚಾಲಕರು ಇದ್ದಾರೆ ಮತ್ತು ನಾರಾಯಣಮೂರ್ತಿ ಅಂತಹ ಗಂಡ ನನ್ನ ಜತೆ ಇದ್ದಾರೆ. ಹೆಂಡತಿಯರ ಸಾಧನೆ ಹಿಂದೆ ಪತಿ ಇರುತ್ತಾರೆ “ಬಿಹೈಂಡ್ ದ ಸಕ್ಸಸ್ ಆಫ್ ವುಮೆನ್ ದೇರ್ ಇಸ್ ಎ ಅಂಡರ್‌ಸ್ಟಾಡಿಂಗ್ ಮೆನ್” ಎಂದು ಹೇಳಿದ್ದಾರೆ.
ಇನ್ನೂ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು, ವೈದ್ಯಕೀಯ ಶಿಕ್ಷಣ ಸಚಿವ ಇ. ತುಕಾರಾಂ, ಆರೋಗ್ಯ ಸಚಿವ ಶಿವಾನಂದ ಪಾಟೀಲ್, ಜಯದೇವ ಆಸ್ಪತ್ರೆ ಮುಖಸ್ಥ ಡಾ.ಮಂಜುನಾಥ್ ಉಪಸ್ಥಿತರಿದ್ದರು.
ಬೆಂಗಳೂರು: ಇಂದು ಇನ್ಫೋಸಿಸ್ ಫೌಂಡೇಶನ್ ವತಿಯಿಂದ ನಿರ್ಮಾಣಗೊಂಡಿರುವ 5 ಶಸ್ತ್ರಚಿಕಿತ್ಸೆ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ ಆಗಮಿಸಿದ್ದರು. ಈ ವೇಳೆ 6 ವರ್ಷದ ಸೃಜನ್ ಎಂಬ ಪುಟ್ಟ ಬಾಲಕ ಸಿಎಂ ಅವರಿಗೆ ಧನ್ಯವಾದ ಹೇಳಿದ್ದಾನೆ.
16 ತಿಂಗಳ ಮಗುವಾಗಿದ್ದಾಗ ಸೃಜನ್ ಬ್ಲಡ್ ಕ್ಯಾನ್ಸರ್‍ಯಿಂದ ಬಳಲುತ್ತಿದ್ದ. ಚಿಕಿತ್ಸೆಗೆ 30 ಲಕ್ಷ ಖರ್ಚಾಗುತ್ತೆ ಎಂದು ಖಾಸಗಿ ಆಸ್ಪತ್ರೆಗಳು ಹೇಳಿದ್ದವು. ಹಾಗಾಗಿ ಸೃಜನ್ ತಂದೆ ಮೈಸೂರಿನ ಸೋಮಶೇಖರ್ ಸಿಎಂ ಬಳಿ ಸಹಾಯ ಕೇಳಿದ್ದರು. ಇದಕ್ಕೆ ಸ್ಪಂದಿಸಿದ್ದ ಮುಖ್ಯಮಂತ್ರಿಗಳು, ಸೃಜನ್ ಪೋಷಕರನ್ನು ಕಿದ್ವಾಯಿ ಆಸ್ಪತ್ರೆಗೆ ಕಳುಹಿಸಿಕೊಟ್ಟು, ಚಿಕಿತ್ಸೆ ಕೊಡಿಸುವುದಾಗಿ ಭರವಸೆ ನೀಡಿದ್ದರು.
ಸಿಎಂ ಅವರ ಕೊಟ್ಟ ಮಾತಿನಂತೆ ಆ ಮಗುವಿಗೆ ಐದು ವರ್ಷ ಉಚಿತವಾಗಿ ಚಿಕಿತ್ಸೆ ಕೊಡಿಸಿದ್ದಾರೆ. ಇದರಿಂದ ಈಗ ಸೃಜನ್ ಗುಣಮುಖನಾಗಿದ್ದಾನೆ. ಅದ್ದರಿಂದ ಇಂದು ಕಿದ್ವಾಯಿ ಆಸ್ಪತ್ರೆಗೆ ಬಂದಿದ್ದ ಸಿಎಂ ಅವರನ್ನು ವೇದಿಕೆ ಮೇಲೆ ಅವರ ತಂದೆಯ ಜೊತೆ ಭೇಟಿ ಮಾಡಿದ ಸೃಜನ್ ಥ್ಯಾಂಕ್ಯೂ ಸಿಎಂ ಅಂಕಲ್, ನನ್ನ ಪ್ರಾಣ ಉಳಿಸಿದ್ರಿ. ನಮಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಕಮ್ಮಿನೇ ಎಂದು ಸಿಎಂ ಕಾಲಿಗೆ ಬಿದ್ದು ನಮಸ್ಕರಿಸಿದ್ದಾನೆ.
ಮಗುವನ್ನು ಕಂಡು ಖುಷಿ ಪಟ್ಟ ಸಿಎಂ, ಈ ರೀತಿಯ ಸೇವೆಗೆ ನಮ್ಮ ಸರ್ಕಾರವೂ ಸಹಕಾರ ನೀಡಲಿದೆ. ವೇದಿಕೆ ಮೇಲೆ ಒಂದು ಮಗು ನನ್ನ ಮಾತನಾಡಿಸಲು ಬಂದಿತ್ತು. ಈಗಷ್ಟೇ ವೇದಿಕೆ ಮೇಲೆ ಮಾತನಾಡಿಸಿದೆ. ಆ ಮಗು ಚಿಕ್ಕವನಿದ್ದಾಗ ನನ್ನ ಬಳಿ ಚಿಕಿತ್ಸೆಗೆ ಸಹಾಯ ಕೇಳಿಕೊಂಡು ಬಂದಿದ್ದರು. ನಾನು ಅವರಿಗೆ ಕಿದ್ವಾಯಿ ಆಸ್ಪತ್ರೆಗೆ ಹೋಗಲು ಹೇಳಿದ್ದೆ. ಈಗ ಆ ಮಗು ಗುಣಮುಖವಾಗಿದೆ ಎಂದು ಹೇಳಿದರು.