Tag: kidney

  • ಕಿಡ್ನಿ ಮಾರಿ ಅಪ್ಪ-ಅಮ್ಮನ ಸಾಲ ತೀರಿಸ್ತೀನಿ, ಪರ್ಮಿಷನ್ ಕೊಡ್ಸಿ ಸರ್: ಸರ್ಕಾರಕ್ಕೆ ಬಾಲಕನ ಮನವಿ

    ಕಿಡ್ನಿ ಮಾರಿ ಅಪ್ಪ-ಅಮ್ಮನ ಸಾಲ ತೀರಿಸ್ತೀನಿ, ಪರ್ಮಿಷನ್ ಕೊಡ್ಸಿ ಸರ್: ಸರ್ಕಾರಕ್ಕೆ ಬಾಲಕನ ಮನವಿ

    – ಖಾಸಗಿ ಮೈಕ್ರೋ ಫೈನಾನ್ಸ್ ಕಂಪನಿಗಳ ಸಾಲದ ಕಿರುಕುಳಕ್ಕೆ ಬೇಸತ್ತು ಬಾಲಕ ಕಣ್ಣೀರು

    ಚಾಮರಾಜನಗರ: ಮೈಕ್ರೋ ಫೈನಾನ್ಸ್ ಕಂಪನಿಗಳ (Micro Finance Company) ಸಾಲದ ಕಿರುಕುಳ ಜಾಸ್ತಿಯಾಗಿದೆ. ನಮ್ಮ ಕಿಡ್ನಿ ಮಾರಿಯಾದರೂ ಅಪ್ಪ-ಅಮ್ಮನ ಸಾಲ ತೀರಿಸುತ್ತೇವೆ, ಅನುಮತಿ ಕೊಡಿಸಿ ಎಂದು ಸರ್ಕಾರಕ್ಕೆ ಬಾಲಕನೋರ್ವ ಮನವಿ ಮಾಡಿರುವ ಕರುಣಾಜನಕ ದೃಶ್ಯ ಮನಕಲಕುವಂತಿದೆ.

    ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಬೇಸತ್ತು ಚಾಮರಾಜನಗರ ಜಿಲ್ಲೆಯ ಹಲವೆಡೆ ಗ್ರಾಮ ತೊರೆದ 100 ಕ್ಕೂ ಹೆಚ್ಚು ಕುಟುಂಬಗಳು ಸಾಲ ತೀರಿಸಲಾಗದೆ ಮನೆಗೆ ಬೀಗ ಹಾಕಿ ಊರು ಖಾಲಿ ಮಾಡಿವೆ. ಹಲವೆಡೆ ಮಕ್ಕಳನ್ನು ಶಾಲೆ ಬಿಡಿಸಿ ಪೋಷಕರು ತಮ್ಮ ಜೊತೆ ಕರೆದೊಯ್ದಿದ್ದಾರೆ. ಸಾಲದ ಹೊಡೆತಕ್ಕೆ ಮಕ್ಕಳ ವಿದ್ಯಾಭ್ಯಾಸವೇ ಮೊಟಕುಗೊಳ್ಳುತ್ತಿದೆ. ಎಲ್ಲಿ ಹೋದರು ಎಂಬುದೇ ಗೊತ್ತಿಲ್ಲ. ಇದನ್ನೂ ಓದಿ: ಡಿಕೆಶಿ ಎರಡೂವರೆ ವರ್ಷ ಯಾಕೆ, ಮುಂದೆ ಐದು ವರ್ಷ ಸಿಎಂ ಆಗಲಿ: ಕೆ.ಎನ್.ರಾಜಣ್ಣ

    ಸಾಲದ ಜಾಲಕ್ಕೆ ಸಿಲುಕಿ ಕುಟುಂಬಗಳು ಊರನ್ನೇ ತೊರೆದು ಹೋಗಿವೆ. ಗೃಹಕೃತ್ಯದ ಖರ್ಚು ವೆಚ್ಚಗಳಿಗೆ ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಸಾಲ ಮಾಡಿಕೊಂಡಿದ್ದರು. ಸಾಲದ ಕಂತು ಕಟ್ಟುವುದು ಒಂದು ದಿನ ತಡವಾದರೂ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ.

    ನಮ್ಮಮ್ಮ ಚಾಪೆ ಹಾಸಿ ಸಾಲ ಕಟ್ಟು ಅಂತಾರೆ ಸಾರ್. ಕೈ ಮುಗಿದು ಕೇಳಿಕೊಳ್ತೀನಿ. ನನ್ನ ಒಂದು ಕಿಡ್ನಿ ಮಾರೋಕೆ ಪರ್ಮಿಷನ್ ಕೊಡ್ಸಿ ಸರ್. ಕಿಡ್ನಿ ಮಾರಿ ಅಪ್ಪ-ಅಮ್ಮನ ಸಾಲ ತೀರಿಸಿ ಹೆಂಗೋ ಬದುಕೊಂಡು ಹೋಗ್ತೀವಿ. ಸರ್ಕಾರ ಪರ್ಮಿಷನ್ ಕೊಟ್ರೆ ನನ್ನ ಕಿಡ್ನಿ ಮಾರಿ ಸಾಲ ತೀರಿಸ್ತೀನಿ ಎಂದು ಬಾಲಕನೊಬ್ಬ ಮನವಿ ಮಾಡಿಕೊಂಡಿದ್ದಾನೆ.

    ಬಾಯಿಗೆ ಬಂದಂತೆ ಬಯ್ತಾರೆ, ರಾತ್ರಿ ವೇಳೆ ಹೊತ್ತಲ್ಲದ ಹೊತ್ತಿನಲ್ಲಿ ಬಂದು ಕೆಟ್ಟದಾಗಿ ಬಯ್ತಾರೆ, ಕಿರುಕುಳ ಕೊಡ್ತಾರೆ. ನಾವು ಸತ್ತೋಗ್ತೀವಿ ಬದುಕಲ್ಲ. ನಿಮ್ಮ ಎಜುಕೇಷನ್ ನೀವು ನೋಡ್ಕೊಂಡು ಹೋಗಿ ಅಂತ ಅಪ್ಪ-ಅಮ್ಮ ಹೇಳ್ತಿದ್ದಾರೆ. ನಮ್ಮ ಅಪ್ಪ-ಅಮ್ಮನನ್ನು ಬಿಟ್ಟು ನಾನು, ನನ್ನ ತಂಗಿ ಬದ್ಕೋಕ್ಕೆ ಆಗುತ್ತಾ ಸರ್. ನಾವೆಲ್ಲರು ಸಾಯ್ಬೇಕು ಅನ್ನೋ ಪರಿಸ್ಥಿತಿ ಬಂದಿದೆ. ದಯವಿಟ್ಟು ಕಿಡ್ನಿ ಮಾರೋಕೆ ಪರ್ಮಿಷನ್ ಕೊಡ್ಸಿ ಸರ್ ಎಂದು ಚಾಮರಾಜನಗರ ತಾಲೂಕು ಹೆಗ್ಗವಾಡಿಪುರದ ಬಾಲಕ ಅಳಲು ತೋಡಿಕೊಂಡಿದ್ದಾನೆ. ಇದನ್ನೂ ಓದಿ: ಅಧಿಕಾರಕ್ಕಾಗಿಯೇ ಶತ್ರು ಸಂಹಾರ ಪೂಜೆ: ಕುಮಾರಸ್ವಾಮಿ

  • ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಆರೋಗ್ಯ ಸ್ಥಿತಿ ಗಂಭೀರ

    ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಆರೋಗ್ಯ ಸ್ಥಿತಿ ಗಂಭೀರ

    ಭಾರತ ಸಿನಿಮಾ ರಂಗದ ಖ್ಯಾತ ನಿರ್ದೇಶಕ, ರಾಷ್ಟ್ರ ಪ್ರಶಸ್ತಿ ವಿಜೇತ ಶ್ಯಾಮ್ ಬೆನಗಲ್ (Shyam Benegal) ಆರೋಗ್ಯ (Health) ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಎರಡೂ ಕಿಡ್ನಿ ಫೇಲ್ (Kidney) ಆಗಿರುವ ಹಿನ್ನೆಲೆಯಲ್ಲಿ ಅವರಿಗೆ ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯಲ್ಲೇ ಅವರು ಡಯಾಲಿಸಿಸ್ ಗೆ (Dialysis) ಒಳಗಾಗಿದ್ದು, ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ಅವರ ಕಛೇರಿ ಸಿಬ್ಬಂದಿ ತಿಳಿಸಿದ್ದಾರೆ ಎಂದು ವರದಿ ಮಾಡಿದೆ.

    ಭಾರತ ಸಿನಿಮಾ ರಂಗ ಕಂಡ ಅತ್ಯಂತ ಪ್ರತಿಭಾವಂತ ಮತ್ತು ವಿಶೇಷ ಸಿನಿಮಾಗಳನ್ನು ನೀಡಿದ ನಿರ್ದೇಶಕರು. ಎಂಟು ರಾಷ್ಟ್ರ ಪ್ರಶಸ್ತಿಗಳನ್ನು ಇವರ ಚಿತ್ರಗಳು ಪಡೆದುಕೊಂಡಿವೆ. ಅಲ್ಲದೇ, ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣವನ್ನೂ ಪಡೆದಿದ್ದಾರೆ. ಸಿನಿಮಾ ರಂಗಕ್ಕೆ ಸಲ್ಲಿಸಿದ ಸೇವೆಗಾಗಿ ಭಾರತ ಸರಕಾರವು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು 2005ರಲ್ಲೇ ನೀಡಿ ಗೌರವಿಸಿದೆ. ಇದನ್ನೂ ಓದಿ: ರಿಷಬ್ ಶೆಟ್ಟಿ ಮಗಳ ಬರ್ತ್‌ಡೇ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

    ಶಬಾನಾ ಅಜ್ಮಿ ಮತ್ತು ಅನಂತ್ ನಾಗ್ ಕಾಂಬಿನೇಷನ್ ನ ಅಂಕುರ್ ಇವರ ಮೊದಲ ಸಿನಿಮಾ. ಆನಂತರ ಮಥಣ್, ಭೂಮಿಕಾ: ದಿ ರೋಲ್, ವೆಲ್ ಡನ್ ಅಬ್ಬಾ, ಆರೋಹನ್, ನೇತಾಜಿ ಸುಭಾಸ್ ಚಂದ್ರ ಬೋಸ್ ಸೇರಿದಂತೆ ಸಾಕಷ್ಟು ಚಿತ್ರಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ಇವರ ಗರಡಿಯಲ್ಲಿ ಪಳಗಿದ ಅನೇಕ ಕಲಾವಿದರು ಸೂಪರ್ ಸ್ಟಾರ್ ಆಗಿ ಮಿಂಚಿದ್ದಾರೆ. ಸ್ಟಾರ್ ಗಳನ್ನು ತಯಾರಿಸಿದ ಅಪರೂಪದ ನಿರ್ದೇಶಕರು ಕೂಡ ಇವರಾಗಿದ್ದಾರೆ.

  • ಕಿಡ್ನಿ ಮಾರಿ ದುಡ್ಡು ಕೊಡ್ತೀನಿ.. ನಮ್ಮ ನಾಯಕರಿಗೆ ಟಿಕೆಟ್ ಕೊಡಿ – ಯುವಕನ ಹುಚ್ಚಾಟ

    ಕಿಡ್ನಿ ಮಾರಿ ದುಡ್ಡು ಕೊಡ್ತೀನಿ.. ನಮ್ಮ ನಾಯಕರಿಗೆ ಟಿಕೆಟ್ ಕೊಡಿ – ಯುವಕನ ಹುಚ್ಚಾಟ

    ತುಮಕೂರು: `ನನ್ನ ಕಿಡ್ನಿ (Kidney) ಮಾರಿ ಚುನಾವಣಾ ಖರ್ಚು ಹೊಂದಿಸುತ್ತೇನೆ, ನಮ್ಮ ನಾಯಕರಿಗೆ ಟಿಕೆಟ್ ಕೊಡಿ’ ಅಂತಾ ಯುವಕನೊಬ್ಬ ಹುಚ್ಚಾಟ ಮೆರೆದಿರುವ ಘಟನೆ ನಡೆದಿದೆ.

    ತುಮಕೂರು (Tumakuru) ಜಿಲ್ಲೆಯ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೈ.ಸಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ (Congress) ಟಿಕೆಟ್ ಕೊಡಿ ಎಂದು ಕೆಂಕೆರೆ ಗ್ರಾಮದ ಪ್ರಭುಕುಮಾರ್ ಈ ರೀತಿ ಹುಚ್ವಾಟ ಮೆರೆದಿದ್ದಾನೆ. ಯುವಕನ ಅತಿರೇಕದ ಹೇಳಿಕೆ ತುಮಕೂರು ಜಿಲ್ಲೆಯಲ್ಲಿ ಸದ್ದು ಮಾಡುತ್ತಿದೆ. ಪರ-ವಿರೋಧ ಚರ್ಚೆಗಳಿಗೂ ಕಾರಣವಾಗಿದೆ.

    ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಕೈ ಟಿಕೆಟ್ ಆಕಾಂಕ್ಷಿಯಾಗಿರುವ ವೈ.ಸಿ ಸಿದ್ದರಾಮಯ್ಯ ಈ ಬಾರಿ ತಮಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ: ಕಲಬುರಗಿಯ ದರ್ಗಾ ಆವರಣದಲ್ಲಿ ಹಿಂದೂಗಳಿಂದ ಶಿವರಾತ್ರಿ, ಮುಸ್ಲಿಮರಿಂದ ಉರುಸ್ ಆಚರಣೆ

    ಕೆಂಕೆರೆ ಗ್ರಾಮದ ಪ್ರಭುಕುಮಾರ್ ಕಳೆದ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ. ಈ ವೇಳೆ ಚುನಾವಣೆಗೆ ನಿಲ್ಲಲು ಸಿದ್ದರಾಮಯ್ಯ ಸಾಕಷ್ಟು ಸಹಾಯ ಮಾಡಿದ್ದರು ಎಂಬುದಾಗಿಯೂ ಯುವಕ ವೀಡಿಯೋನಲ್ಲಿ ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಸಿನಿಮಾ: ಕ್ಷಮೆ ಕೋರಿದ ಪ್ರಕಾಶ್ ಬೆಳವಾಡಿ

    ಈಗಾಗಲೇ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ 7 ಮಂದಿ ಕಾಂಗ್ರೆಸ್ ಪಕ್ಷದ ಟಿಕೆಟ್ (Congress Election Ticket) ರೇಸ್‌ನಲ್ಲಿದ್ದಾರೆ. ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಮುಖಂಡರು ಪಟ್ಟು ಹಿಡಿದಿರೋದು ಹೈಕಮಾಂಡ್ ಅಂಗಳಕ್ಕೂ ತಲುಪಿದೆ. ಈ ನಡುವೆ ಬೆಂಬಲಿಗನ ಅತಿರೇಕದ ವರ್ತನೆಯ ವೀಡಿಯೋ ಗಮನಸೆಳೆದಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಮೀಬಿಯಾದಿಂದ ತಂದ ಚೀತಾಗೆ ಕಿಡ್ನಿಯಲ್ಲಿ ಸೋಂಕು

    ನಮೀಬಿಯಾದಿಂದ ತಂದ ಚೀತಾಗೆ ಕಿಡ್ನಿಯಲ್ಲಿ ಸೋಂಕು

    ಭೋಪಾಲ್‌: ಕಳೆದ ವರ್ಷ ನಮೀಬಿಯಾದಿಂದ (Namibia) ತಂದ 8 ಚೀತಾ (Cheetahs) ಪೈಕಿ ಒಂದು ಚಿರತೆ ಅಸ್ವಸ್ಥಗೊಂಡಿದೆ.

    ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿರುವ (Kuno National Park) ಸಶಾ ಹೆಸರಿನ ಚೀತಾ ಮೂತ್ರಪಿಂಡದ (Kidney) ಸೋಂಕಿನಿಂದ ಬಳಲುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸೋಮವಾರದಂದು ದೈನಂದಿನ ಮೇಲ್ವಿಚಾರಣೆಯ ಸಮಯದಲ್ಲಿ ಹೆಣ್ಣು ಚೀತಾ ಆಯಾಸಗೊಂಡ ಸ್ಥಿತಿಯಲ್ಲಿತ್ತು. ಕೂಡಲೇ ಟ್ರಾನ್ಸ್‌ಕ್ವಿಲೈಸ್ ಮಾಡಿ ಕ್ವಾರಂಟೈನ್‌ ಆವರಣಕ್ಕೆ ಬಿಡಲಾಗಿದೆ. ಆರೋಗ್ಯ ತಪಾಸಣೆಯಲ್ಲಿ ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ವಿಚಾರ ತಿಳಿದು ಬಂದಿದೆ.

    ಸಶಾ ಮೇಲೆ ಈಗ ನಿಗಾ ಇಡಲಾಗಿದ್ದು ಉಳಿದ ಚೀತಾಗಳು ಚೆನ್ನಾಗಿವೆ. ಭೋಪಾಲ್‌ನ ವಾನ್ ವಿಹಾರ್‌ನಿಂದ ಡಾ ಅತುಲ್ ಗುಪ್ತಾ ನೇತೃತ್ವದ ವೈದ್ಯರ ತಂಡ ಆಗಮಿಸಿದೆ. ಚಿಕಿತ್ಸೆಗಾಗಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದ ವನ್ಯಜೀವಿ ತಜ್ಞರನ್ನೂ ಸಂಪರ್ಕಿಸಲಾಗಿದೆ ಎಂದು ಕುನೋ ರಾಷ್ಟ್ರೀಯ ಉದ್ಯಾನವನದ ವಿಭಾಗೀಯ ಅರಣ್ಯಾಧಿಕಾರಿ ಪ್ರಕಾಶ್ ಕುಮಾರ್ ವರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: 74th Republic Day: ದೆಹಲಿಯ ಕರ್ತವ್ಯ ಪಥ್‌ನಲ್ಲಿ‌ ಹಲವು ಪ್ರಥಮಗಳಿಗೆ ಸಾಕ್ಷಿಯಾದ ಪರೇಡ್‌

    ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು(Wildlife) ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾದಿಂದ(Namibia) ಭಾರತಕ್ಕೆ(India) 2 ರಿಂದ 6 ವರ್ಷ ವಯಸ್ಸಿನ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು ವಿಶೇಷ ವಿಮಾನದಲ್ಲಿ ತರಲಾಗಿತ್ತು. ತಮ್ಮ ಜನ್ಮದಿನವಾದ ಸೆ.17 ರಂದು ಪ್ರಧಾನಿ ಮೋದಿ (PM Modi) ಈ ಚಿರತೆಗಳು ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದರು. ನವೆಂಬರ್‌ನಲ್ಲಿ ದೊಡ್ಡ ಆವರಣಕ್ಕೆ ಸ್ಥಳಾಂತರಿಸಿದ ಬಳಿಕ ಕಾಡಿಗೆ ಬಿಡುಗಡೆ ಮಾಡಲಾಗಿತ್ತು.

    ಚೀತಾ ವಿಶೇಷತೆಯೇನು?
    ಮಚ್ಚೆ ಗುರುತಿನ ಚೀತಾಗಳ ಸಂತತಿ ಈಗಾಗಲೇ ಭಾರತದಲ್ಲಿ ನಾಶವಾಗಿದೆ. ಭಾರತದಲ್ಲಿದ್ದ ಕೊನೆಯ ಚೀತಾ 1947ರಲ್ಲಿ ಸಾವನ್ನಪ್ಪಿತ್ತು. 1952ರಲ್ಲಿ ಈ ಪ್ರಭೇದ ಭಾರತದಲ್ಲಿ ಇಲ್ಲ ಎಂದು ಘೋಷಣೆ ಮಾಡಲಾಗಿತ್ತು. 2009ರಲ್ಲಿ ಆಫ್ರಿಕನ್ ಚಿರತೆ ಯೋಜನೆ ಮಾಡಲಾಗಿತ್ತು, ಆದರೆ ಕಾರಣಾಂತರಗಳಿಂದ ಅನುಷ್ಠಾನವಾಗಿರಲಿಲ್ಲ.

    75 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಿದ ಚೀತಾಗಳಿಗೆ ಕುನ್ಹೋ ಉದ್ಯಾನವನ ಪರಿಸರ ಅನುಕೂಲಕರವಾಗಿದ್ದು, ಅಲ್ಲಿನ ಸುತ್ತಮುತ್ತಲ 24 ಗ್ರಾಮಗಳ ಜನರನ್ನು ಖಾಲಿ ಮಾಡಿಸಲಾಗಿದೆ. 8 ಚೀತಾಗಳ ಸ್ಥಳಾಂತರಕ್ಕೆ 75 ಕೋಟಿ ರೂ. ಖರ್ಚು ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತಂದೆಯ ಸಾಲ ತೀರಿಸಲು ಮೂತ್ರ ಪಿಂಡ ಮಾರಲು ಮುಂದಾದ ಮಗಳು 16 ಲಕ್ಷ ಕಳೆದುಕೊಂಡಳು

    ತಂದೆಯ ಸಾಲ ತೀರಿಸಲು ಮೂತ್ರ ಪಿಂಡ ಮಾರಲು ಮುಂದಾದ ಮಗಳು 16 ಲಕ್ಷ ಕಳೆದುಕೊಂಡಳು

    ಹೈದರಾಬಾದ್: ತಂದೆಯ ಸಾಲ ತೀರಿಸಲು ತನ್ನ ಮೂತ್ರಪಿಂಡ (Kidney) ಮಾರಲು ಯತ್ನಿಸಿದ್ದ ವಿದ್ಯಾರ್ಥಿನಿ (Student) ಸೈಬರ್ ವಂಚಕರ (Cyber Crooks) ಜಾಲಕ್ಕೆ ಸಿಕ್ಕಿ 16 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

    ಹೈದರಾಬಾದ್‌ನ ಗುಂಟೂರಿನ ನರ್ಸಿಂಗ್ ವಿದ್ಯಾರ್ಥಿನಿ (Nursing Student) ತನ್ನ ತಂದೆ ಮಾಡಿದ್ದ 2 ಲಕ್ಷ ರೂಪಾಯಿ ಸಾಲ ತೀರಿಸಲು ತನ್ನ ಮೂತ್ರಪಿಂಡ ಮಾರಾಟ ಮಾಡಲು ಯತ್ನಿಸಿದ್ದಾಳೆ. ಈ ವೇಳೆ ಸೈಬರ್ ವಂಚಕರಿಗೆ ಸಿಕ್ಕಿ ತನ್ನ ಬ್ಯಾಂಕ್ ಖಾತೆಯಿಂದ 16 ಲಕ್ಷ ರೂ. ಕಳೆದುಕೊಂಡಿದ್ದಾಳೆ. ಈ ಸಂಬಂಧ ಗುಂಟೂರು ಪೊಲೀಸರಿಗೆ (Guntur Police) ದೂರು ನೀಡಿದ್ದಾಳೆ. ಇದನ್ನೂ ಓದಿ: ಗಡಿ ವಿವಾದದ ನಡುವೆಯೂ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಭೇಟಿ

    ಆಕೆ ಕಿಡ್ನಿ ಮಾರಲು ಯತ್ನಿಸಿದಾಗ ವಂಚಕರು 3 ಕೋಟಿ ಆಫರ್ ನೀಡಿದ್ದಾರೆ. ಅದಕ್ಕೂ ಮುನ್ನ ಪೊಲೀಸ್ ವೆರಿಫಿಕೇಶನ್ ಹಾಗೂ ತೆರಿಗೆ ಹಣವಾಗಿ 16 ಲಕ್ಷ ರೂಪಾಯಿ ಪಾವತಿ ಮಾಡಬೇಕು ಎಂದು ಹೇಳಿದ್ದಾರೆ. ಈ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಪ್ರವೀಣ್ ರಾಜ್ ಎಂಬವನನ್ನ ಭೇಟಿಯಾಗಿದ್ದು, ಆತ ಶೇ.50 ರಷ್ಟು ಹಣವನ್ನು ಆಪರೇಷನ್‌ಗೆ ಮುಂಚಿತವಾಗಿ, ಉಳಿದ ಹಣವನ್ನು ಕೆಲಸ ಮುಗಿದ ನಂತರ ಕೊಡುವುದಾಗಿ ಹೇಳಿದ್ದಾನೆ. ಇದನ್ನೂ ಓದಿ: ಭಾರತ-ಚೀನಾ ಗಡಿ ಸಂಘರ್ಷ – ಅರುಣಾಚಲ ಪ್ರದೇಶದಲ್ಲಿ ವಾಯು ಗಸ್ತು ಆರಂಭಿಸಿದ ಭಾರತೀಯ ಸೇನೆ

    ಸಾಂದರ್ಭಿಕ ಚಿತ್ರ

    ಹಣ ವರ್ಗಾವಣೆ ಮಾಡುವುದಕ್ಕಾಗಿ ಚೆನ್ನೈ ಸಿಟಿ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದಾಳೆ. ಈ ಖಾತೆ ಮೂಲಕ 16 ಲಕ್ಷ ಪಾವತಿಸಿದ ಬಳಿಕ ಹಣ ಕೇಳಿದ್ದಾಳೆ. ನಂತರ ಹಣ ವಸೂಲಿ ಮಾಡಲು ದೆಹಲಿಗೆ ಹೋಗುವಂತೆ ಹೇಳಿದ್ದಾರೆ. ಆಕೆ ದೆಹಲಿಗೆ ತೆರಳಿದಾಗ ವಿಳಾಸ ಸಹ ನಕಲಿಯಾಗಿರುವುದು ಕಂಡುಬಂದಿದೆ.

    ಸಂತ್ರಸ್ತೆಯ ತಂದೆ ತನ್ನ ಎಟಿಎಂ ಕಾರ್ಡ್‌ಗಳಲ್ಲಿ ಒಂದನ್ನು ಮಗಳಿಗೆ ನೀಡಿದ್ದರು. ನವೆಂಬರ್‌ನಲ್ಲಿ ಖಾತೆಯಿಂದ ಹಣ ತೆಗೆದುಕೊಂಡಿರುವ ಬಗ್ಗೆ ಅವರಿಗೆ ಗೊತ್ತಾಯಿತು. ನಂತರ ಮಗಳನ್ನು ಮನೆಗೆ ಬರುವಂತೆ ಹೇಳಿದಾಗ, ಆಕೆ ಹಾಸ್ಟೆಲ್ ಬಿಟ್ಟು ಹೋಗಿದ್ದಳು. ಬಳಿಕ ಹುಡುಕಾಟ ನಡೆಸಿದ್ದ ಎನ್‌ಟಿಆರ್ ಜಿಲ್ಲೆಯ ಪೊಲೀಸರು ಜಗ್ಗಯ್ಯಪೇಟಾದಲ್ಲಿ ಆಕೆಯ ಸ್ನೇಹಿತನ ಮನೆಯಲ್ಲಿ ಆಕೆಯನ್ನು ಪತ್ತೆ ಹಚ್ಚಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸ್ಟೋನ್ ತೆಗೆಯುವ ನೆಪದಲ್ಲಿ ರೋಗಿಯ ಕಿಡ್ನಿಯನ್ನೇ ಎಗರಿಸಿದ್ರು

    ಸ್ಟೋನ್ ತೆಗೆಯುವ ನೆಪದಲ್ಲಿ ರೋಗಿಯ ಕಿಡ್ನಿಯನ್ನೇ ಎಗರಿಸಿದ್ರು

    ಲಕ್ನೋ: ಕಿಡ್ನಿ ಸ್ಟೋನ್ (Stone) ಆಗಿದೆ ಎಂದು ವ್ಯಕ್ತಿಯೊಬ್ಬನಿಗೆ ಶಸ್ತ್ರಚಿಕಿತ್ಸೆ ಮಾಡಿದ್ದ ಖಾಸಗಿ ಆಸ್ಪತ್ರೆಯ (Hospital) ವೈದ್ಯರು ಒಂದು ಕಿಡ್ನಿಯನ್ನೇ (Kidney) ತೆಗೆದ ಆಘಾತಕಾರಿ ಘಟನೆ ಉತ್ತರಪ್ರದೇಶದ ಅಲಿಗಢದಲ್ಲಿ ನಡೆದಿದೆ.

    ಕಸ್ಗಂಜ್ ಜಿಲ್ಲೆಯ ನಾಗ್ಲಾ ತಾಲ್ ಗ್ರಾಮದ ನಿವಾಸಿ ಸುರೇಶ್ ಚಂದ್ರ(53) ಎಂಬಾತ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಈತ ಏ.14ರಂದು ಅಲ್ಟ್ರಾಸೌಂಡ್ ಮಾಡಿಸಿಕೊಂಡಿದ್ದ. ಈ ವೇಳೆ ಮೂತ್ರಪಿಂಡದಲ್ಲಿ ಕಲ್ಲುಗಳಿರುವುದು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಆಪರೇಷನ್ (Surgery) ಮಾಡಿಸಿಕೊಳ್ಳಲು ತಿಳಿಸಿದ್ದಾರೆ.

    ವೈದ್ಯರ ಸೂಚನೆ ಮೇರೆಗೆ ಏ.14ರಂದು ಆತ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಡಿದ್ದ. ಅದಾದ ಬಳಿಕ ವೈದ್ಯರು ಕಲ್ಲುಗಳನ್ನು ತೆಗೆಯಲಾಗಿದೆ ಎಂದು ಕೆಲವು ಔಷಧಿಗಳನ್ನು ನೀಡಿದರು. ಸುರೇಶ್ ಏ.17ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ.

    ಆದರೆ ಅದಾದ ಕೆಲ ತಿಂಗಳ ಬಳಿಕ ಸುರೇಶ್‍ಗೆ ಹೊಟ್ಟೆಯ ಕೆಳಭಾಗದಲ್ಲಿ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅಲ್ಟ್ರಾಸೌಂಡ್ ಮಾಡಿಸಿಕೊಂಡಿದ್ದಾನೆ. ಆ ವೇಳೆ ಒಂದು ಕಿಡ್ನಿಯೇ ನಾಪತ್ತೆ ಆಗಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಡೇರ್ ಡೆವಿಲ್ ಸ್ಟಂಟ್ ಮಾಡಿದ ನಟ ಪವನ್ – ಕೇಸ್ ದಾಖಲಿಸಿದ ಪೊಲೀಸರು

    ಘಟನೆಯ ಕುರಿತು ಸಿಎಂಒಗೆ ದೂರು ನೀಡಿದ್ದು, ತನಿಖೆ ಆರಂಭಿಸಿದೆ. ಆದರೆ ಈ ಬಗ್ಗೆ ಆಸ್ಪತ್ರೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದನ್ನೂ ಓದಿ: ಟಿಪ್ಪು ಪ್ರತಿಮೆ ಪ್ರತಿಷ್ಠಾಪಿಸಿ ಊದುಬತ್ತಿ ಹಚ್ಚಿ, ಆರತಿ ಬೆಳಗ್ತಾರಾ ನೋಡೋಣ – ಪ್ರಹ್ಲಾದ್‌ ಜೋಶಿ ಟಾಂಗ್‌

    Live Tv
    [brid partner=56869869 player=32851 video=960834 autoplay=true]

  • ಲಾಲುಗೆ ಕಿಡ್ನಿ ನೀಡಲು ಮುಂದಾದ ಪುತ್ರಿ – ನವೆಂಬರ್ ಅಂತ್ಯದಲ್ಲಿ ವಿದೇಶಕ್ಕೆ RJD ಮುಖ್ಯಸ್ಥ

    ಲಾಲುಗೆ ಕಿಡ್ನಿ ನೀಡಲು ಮುಂದಾದ ಪುತ್ರಿ – ನವೆಂಬರ್ ಅಂತ್ಯದಲ್ಲಿ ವಿದೇಶಕ್ಕೆ RJD ಮುಖ್ಯಸ್ಥ

    ಪಾಟ್ನಾ: ಕಳೆದ ಹಲವಾರು ವರ್ಷಗಳಿಂದ ಮೂತ್ರಪಿಂಡ ಕಾಯಿಲೆ (kidney) ಹಾಗೂ ಇತರ ಕಾಯಿಲೆಗಳಿಂದ ಬಳಲುತ್ತಿದ್ದ ಆರ್‌ಜೆಡಿ (ರಜದ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರಿಗೆ ಪುತ್ರಿ ರೋಹಿಣಿ ಆಚಾರ್ಯ (Rohini Aacharya) ತಮ್ಮ ಕಿಡ್ನಿಯಲ್ಲಿ ಒಂದನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಇದರಿಂದ ಲಾಲು ಪ್ರಸಾದ್ ಯಾದವ್ ಹೊಸ ಜೀವನವನ್ನು ಪಡೆದುಕೊಳ್ಳಲಿದ್ದಾರೆ.

    ಅಕ್ಟೋಬರ್‌ನಲ್ಲಿ ಸಿಂಗಾಪುರಕ್ಕೆ (Singapore) ಭೇಟಿ ಕೊಟ್ಟ ಲಾಲು ಪ್ರಸಾದ್ ಯಾದವ್ ಅವರಿಗೆ, ಕಿಡ್ನಿ ಕಸಿ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು. ಈ ಬಳಿಕ ರೋಹಿಣಿ ಅವರು ಮೂತ್ರಪಿಂಡವನ್ನು ತನ್ನ ತಂದೆಗೆ ದಾನ ಮಾಡಲು ಮುಂದಾಗಿದ್ದಾರೆ. 

    ತಮ್ಮ ಜೀವವನ್ನು ಉಳಿಸಿಕೊಳ್ಳಲು ಮೊದಲಿಗೆ ರೋಹಿಣಿ ಕಿಡ್ನಿಯನ್ನು ಪಡೆಯಲು ಲಾಲು ಪ್ರಸಾದ್ ಒಪ್ಪಿಕೊಳ್ಳಲಿಲ್ಲ. ಆದರೆ ಆಕೆಯ ಮತ್ತು ಕುಟುಂಬಸ್ಥರ ಒತ್ತಡದ ಮೇರೆಗೆ ಕೊನೆಗೆ ಕಿಡ್ನಿ ಪಡೆಯಲು ಒಪ್ಪಿಕೊಂಡಿದ್ದಾರೆ. ನವೆಂಬರ್ 20 ರಿಂದ 24ರ ಒಳಗೆ ಲಾಲು ಅವರು ಮತ್ತೆ ಸಿಂಗಾಪುರಕ್ಕೆ ಭೇಟಿ ನೀಡುವ ಸಾಧ್ಯತೆಯಿದ್ದು, ಈ ಸಮಯದಲ್ಲಿ ಅವರು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಮುರುಘಾ ಮಠದಲ್ಲಿ ಫೋಟೋ ಕಳವು ಪ್ರಕರಣ – ಮಾಜಿ ಶಾಸಕ ಬಸವರಾಜನ್ ವಶಕ್ಕೆ

    ಲಾಲು ಪ್ರಸಾದ್ ಅವರ ಎರಡನೇ ಪುತ್ರಿಯಾಗಿರುವ ರೋಹಿಣಿ ಅವರು ಸಿಂಗಾಪುರದಲ್ಲಿ ನೆಲೆಸಿದ್ದು, ತಮ್ಮ ತಂದೆಗೆ ಮೂತ್ರಪಿಂಡ ಕಾಯಿಲೆ ಸಮಸ್ಯೆ ಇರುವ ಬಗ್ಗೆ ಬಹಳ ಆತಂಕಕ್ಕೊಳಗಾಗಿದ್ದರು. ನಂತರ ಮೂತ್ರಪಿಂಡ ಕಸಿ ಸಲಹೆ ನೀಡಿದ ವೈದ್ಯರ ತಂಡವನ್ನು ಸಂಪರ್ಕಿಸಲು ಲಾಲು ಪ್ರಸಾದ್ ಅವರು ಸಿಂಗಾಪುರಕ್ಕೆ ಭೇಟಿ ನೀಡಿದ್ದರು.

    ಹಲವು ವರ್ಷಗಳಿಂದ ಕಿಡ್ನಿ ಸಮಸ್ಯೆಗೆ ದೆಹಲಿ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲು ಪ್ರಸಾದ್‍ಗೆ ಎಐಐಎಂಎಸ್‍ನ ವೈದ್ಯರು ಕಿಡ್ನಿ ಕಸಿ ಮಾಡಿಸಿಕೊಳ್ಳಲು ಸಲಹೆ ನೀಡಿರಲಿಲ್ಲ. ಆದರೆ ಸಿಂಗಾಪುರಕ್ಕೆ ಭೇಟಿ ನೀಡಿದ ಲಾಲು ಅವರಿಗೆ ಅಲ್ಲಿನ ವೈದ್ಯರು ಕಿಡ್ನಿ ಕಸಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಕೊಯಮತ್ತೂರು ಕಾರು ಸ್ಫೋಟ ಪ್ರಕರಣ – 45ಕ್ಕೂ ಹೆಚ್ಚು ಕಡೆ NIA ದಾಳಿ

    Live Tv
    [brid partner=56869869 player=32851 video=960834 autoplay=true]

  • ಹೊಟ್ಟೆನೋವೆಂದು ಖಾಸಗಿ ಕ್ಲಿನಿಕ್ ಸೇರಿದ ಮಹಿಳೆ – ಆಪರೇಷನ್ ನೆಪದಲ್ಲಿ ಎರಡೂ ಕಿಡ್ನಿ ಕದ್ದ ವೈದ್ಯರು

    ಹೊಟ್ಟೆನೋವೆಂದು ಖಾಸಗಿ ಕ್ಲಿನಿಕ್ ಸೇರಿದ ಮಹಿಳೆ – ಆಪರೇಷನ್ ನೆಪದಲ್ಲಿ ಎರಡೂ ಕಿಡ್ನಿ ಕದ್ದ ವೈದ್ಯರು

    ಪಾಟ್ನಾ: ಹೊಟ್ಟೆನೋವೆಂದು ಚಿಕಿತ್ಸೆಗಾಗಿ ಖಾಸಗಿ ಕ್ಲಿನಿಕ್‌ಗೆ (Private Clinic) ದಾಖಲಾಗಿದ್ದ ಮಹಿಳೆಗೆ ಶಸ್ತ್ರಚಿಕಿತ್ಸೆ (Opration) ಮಾಡುವ ನೆಪದಲ್ಲಿ ವೈದ್ಯರು (Doctors) ಎರಡೂ ಕಿಡ್ನಿಗಳನ್ನು ಕದ್ದಿರುವ ಘಟನೆ ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ನಡೆದಿದೆ.

    ಮಹಿಳೆಯ ಆರೋಗ್ಯ ತೀವ್ರವಾಗಿ ಕ್ಷೀಣಿಸಿದ ಬಳಿಕ ಹೆಚ್ಚುವರಿ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ (Hospital) ದಾಖಲಿಸಲಾಯಿತು. ಬಳಿಕ ಕಿಡ್ನಿ (Kidney) ತೆಗೆದಿರುವ ವಿಷಯ ತಿಳಿದುಬಂದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಹಿಳೆ ಕುಟುಂಬಸ್ಥರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಬರಿಯಾರ್‌ಪುರ ಠಾಣೆಯ ಪೊಲೀಸರು (Police) ತನಿಖೆ ಆರಂಭಿಸಿದ್ದಾರೆ.

    ಸಂತ್ರಸ್ತ ಮಹಿಳೆ (Women) ಬಾಜಿರೌತ್ ಗ್ರಾಮದವರಾಗಿದ್ದು, ಮಹಿಳೆಯ ವೈದ್ಯಕೀಯ ವರದಿಗಳನ್ನು ನೀಡುವಂತೆ ಕುಟುಂಬಸ್ಥರನ್ನು ಕೇಳಿದಾಗ ಆಕೆಯ ಎರಡೂ ಕಿಡ್ನಿಗಳನ್ನು ತೆಗೆಯಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದಕ್ಕೂ ಮುನ್ನ ರೊಚ್ಚಿಗೆದ್ದ ಮಹಿಳೆಯ ಕುಟುಂಬಸ್ಥರು ಕ್ಲಿನಿಕ್ ಮುಂಭಾಗದಲ್ಲೇ ಗಲಾಟೆ ಆರಂಭಿಸಿದ್ದರು. ಇದನ್ನೂ ಓದಿ: ರಾಜಕಾಲುವೆ ಒತ್ತುವರಿ ಹಿಂದೆ IT ಕಂಪನಿಗಳ ಕೈವಾಡವೂ ಇದೆ: ಸಂತೋಷ್ ಹೆಗ್ಡೆ

    ಅಷ್ಟಕ್ಕೂ ನಡೆದಿದ್ದೇನು?
    ಬಾಜಿರೌತ್ ನಿವಾಸಿ ಲಾಲ್‌ದೇವ್ ರಾಮ್ ಅವರ ಪುತ್ರಿ ಸುನೀತಾ ದೇವಿ ಆರೋಗ್ಯ ಕಳೆದ ಆಗಸ್ಟ್ 3 ರಂದು ಕ್ಷೀಣಿಸಿತ್ತು. ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಬರಿಯಾರ್‌ಪುರದ ಖಾಸಗಿ ಕ್ಲಿನಿಕ್‌ಗೆ ಕರೆದೊಯ್ಯಲಾಗಿತ್ತು. ಬಳಿಕ ಆಪರೇಷನ್ ಮಾಡಬೇಕಾಗುತ್ತದೆ ಎಂದು ಹೇಳಿದ ವೈದ್ಯರು 20 ಸಾವಿರ ರೂಪಾಯಿಯಿಂದ ಚಿಕಿತ್ಸೆ ಆರಂಭಿಸಿದ್ದರು. ಅದಾದ ನಂತರವೂ ಹೊಟ್ಟೆನೋವು ಹೆಚ್ಚಾದ ಬಳಿಕ ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸಲಾಯಿತು. ಅಲ್ಲಿ ವೈದ್ಯರು ತಪಾಸಣೆ ನಡೆಸಿದ ಬಳಿಕ ಎರಡೂ ಕಿಡ್ನಿ ತೆಗೆದಿರುವ ರಹಸ್ಯ ಬಯಲಾಗಿದೆ ಕುಟುಂಬಸ್ಥರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ರೀಲ್ಸ್ ಮಾಡಲು ಹೋಗಿ ಯುವತಿ ಕೆರೆ ಪಾಲು – ಉಪ್ಪು ಸುರಿದು ಬದುಕಿಸಲು ಯತ್ನ

    ಸದ್ಯ ಪೊಲೀಸರು ವೈದ್ಯಕೀಯ ವರದಿಯ ಮಾಹಿತಿ ಪಡೆಯುತ್ತಿದ್ದಾರೆ. ವೈದ್ಯರಿಂದ ಮಹಿಳೆ ವಂಚನೆಗೆ ಒಳಗಾಗಿದ್ದಾರೆ ಎಂಬುದು ಸತ್ಯಾಂಶವಾಗಿದ್ದು, ಎರಡೂ ಕಿಡ್ನಿ ತೆಗೆಯಲಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಟಿ ಮಾನ್ವಿತಾ ತಾಯಿಯ ಚಿಕಿತ್ಸೆಗೆ ನೆರವಾದ ಬಾಲಿವುಡ್ ನಟ ಸೋನು ಸೂದ್

    ನಟಿ ಮಾನ್ವಿತಾ ತಾಯಿಯ ಚಿಕಿತ್ಸೆಗೆ ನೆರವಾದ ಬಾಲಿವುಡ್ ನಟ ಸೋನು ಸೂದ್

    ನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ನಟಿ ಮಾನ್ವಿತಾ ಕಾಮತ್, ಬಾಲಿವುಡ್ ನಟ ಸೋನು ಸೂದ್ ಅವರಿಗೆ ಧನ್ಯವಾದಗಳನ್ನು ತಿಳಿಸಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ತಾಯಿಯ ಚಿಕಿತ್ಸೆಗಾಗಿ ಸೋನು ನೆರವಾಗಿದ್ದನ್ನು ಅವರು ನೆನದಿದ್ದಾರೆ. ನನ್ನ ಕುಟುಂಬದ ಪಾಲಿನ ರಿಯಲ್ ಹೀರೋ ನೀವು ಎಂದು ಸೋನು ಸೂದ್ ಅವರನ್ನು ಗುಣಗಾನ ಮಾಡಿದ್ದಾರೆ.

    ಏಪ್ರಿಲ್ ತಿಂಗಳಲ್ಲಿ ಮಾನ್ವಿತಾ ಅವರ ತಾಯಿಗೆ ಕಿಡ್ನಿ ಸಮಸ್ಯೆ ಆಗಿತ್ತು. ಚಿಕಿತ್ಸೆಗಾಗಿ ಒಳ್ಳೆಯ ವೈದ್ಯರನ್ನು ಸಲಹೆ ನೀಡಿ ಎಂದು ಅವರು ಪೋಸ್ಟ್ ಮಾಡಿಕೊಂಡಿದ್ದರು. ಇದನ್ನು ಗಮನಿಸಿದ್ದ ಮಂಗಳೂರಿನ ಸೋನು ಸೂದ್ ಟ್ರಸ್ಟ್, ಮಾನ್ವಿತಾ ಅವರನ್ನು ಸಂಪರ್ಕಿಸಿತ್ತು. ತಾಯಿಯ ಚಿಕಿತ್ಸೆಗೆ ಅಗತ್ಯವಿರುವ ನೆರವನ್ನು ನೀಡುವುದಾಗಿ ಫೌಂಡೇಷನ್ ತಿಳಿಸಿತ್ತು. ತಾನು ಕೊಟ್ಟ ಮಾತಿನಂತೆ ನೆರವಾಗಿದೆ. ಹಾಗಾಗಿಯೇ ಮಾನ್ವಿತಾ ಅವರು ಸೋನು ಅವರನ್ನು ನೆನೆದಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಈಗೀಗ ಚೈತ್ರಾ ಹಳ್ಳಿಕೇರಿ ಮುಖವಾಡ ಕಳಚ್ತಾ ಇದ್ದಾರೆ : ಸ್ಪೂರ್ತಿ ಗೌಡ

    ಮಾನ್ವಿತಾ ಅವರ ತಾಯಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಬೇಕಾಗುತ್ತದೆ. ಅಲ್ಲದೇ, ಅವರಿಗೆ ಕಿಡ್ನಿ ಕಸಿಯನ್ನೂ ಮಾಡಿಸಬೇಕಿದೆಯಂತೆ. ಈ ಚಿಕಿತ್ಸೆಗೆ ಅಗತ್ಯ ಇರುವ ನೆರವನ್ನೂ ಸೋನು ಸೂದ್ ನೀಡುವುದಾಗಿ ಆಸ್ಪತ್ರೆಗೆ ತಿಳಿಸಿದ್ದಾರಂತೆ. ಆದಷ್ಟು ಬೇಗ ಮಾನ್ವಿತಾ ತಾಯಿಯ ಆರೋಗ್ಯ ಸುಧಾರಿಸಲಿ ಎಂದು ಅವರೂ ಹಾರೈಸಿದ್ದಾರಂತೆ.

    ಕೆಂಡಸಂಪಿಗೆ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ ಮಾನ್ವಿತಾ, ಆನಂತರ ಅನೇಕ ಚಿತ್ರಗಳಿಗೆ ನಾಯಕಿಯಾಗಿ ಆಯ್ಕೆಯಾದರು. ಈ ವಾರ ಮಾನ್ವಿತಾ ನಟನೆಯ ಶಿವ 143 ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಅವರು ಹೊಸ ಬಗೆಯ ಪಾತ್ರ ಮಾಡಿದ್ದಾರಂತೆ. ಅಲ್ಲದೇ, ಮತ್ತಷ್ಟು ಚಿತ್ರಗಳಿಗೂ ಅವರು ಸಹಿ ಮಾಡಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • ಕಿಡ್ನಿ ಸ್ಟೋನ್‍ನಿಂದ ಬಳಲುತ್ತಿದ್ದೀರಾ..?- ಹಾಗಾದರೆ ಇಲ್ಲಿದೆ ಮನೆ ಮದ್ದು

    ಕಿಡ್ನಿ ಸ್ಟೋನ್‍ನಿಂದ ಬಳಲುತ್ತಿದ್ದೀರಾ..?- ಹಾಗಾದರೆ ಇಲ್ಲಿದೆ ಮನೆ ಮದ್ದು

    ಧುನಿಕ ಜೀವನ ಶೈಲಿ ಹಾಗೂ ಪ್ರತಿನಿತ್ಯ ಸೇವಿಸುವ ಆಹಾರದಿಂದಾಗಿ ಯುವ ಜನಾಂಗದವರಲ್ಲೂ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈ ಕಿಡ್ನಿ ಸ್ಟೋನ್ ಎಂದರೆ ಯಾವಾಗ ಮೂತ್ರದಲ್ಲಿ ಅಧಿಕವಾಗಿ ಲವಣಾಂಶಗಳು ಶೇಖರಣೆ ಆಗುತ್ತದೆಯೋ ಅದು ಸ್ಫಟಿಕ ರೂಪಕ್ಕೆ ಮಾರ್ಪಟ್ಟು ಘನ ವಸ್ತುವಾಗಿ ರೂಪಗೊಳ್ಳುವುದಾಗಿದೆ.

    ಮೂತ್ರದಲ್ಲಿನ ಅಂಶಗಳಿಂದ ರೂಪುಗೊಳ್ಳುವ ಈ ಕಲ್ಲು ಒಂದು ಮರಳಿನ ಕಣದಿಂದ ಹರಳುಗಳ ಗಾತ್ರದವರೆಗೂ ಬೆಳೆಯುತ್ತವೆ. ಈ ಕಲ್ಲುಗಳು ಮೂತ್ರನಾಳದಲ್ಲಿ ಸೇರಿಕೊಂಡು ಮೂತ್ರ ಹರಿವನ್ನು ನಿರ್ಬಂಧಿಸಿದರೆ ಆಗ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಹೋಗಲಾಡಿಸಲು ವೈದ್ಯರ ಸಲಹೆ ಜೊತೆಗೆ ಕೆಲವು ಮನೆ ಮದ್ದನ್ನು ಅನುಸರಿಸಿ.

    ತುಳಸಿ: ತುಳಸಿಯಲ್ಲಿರುವ ಮೂತ್ರವರ್ಧಕ ಗುಣ ಮತ್ತು ಕಲ್ಮಶ ನಿವಾರಕಗಳ ಗುಣಗಳು ಮೂತ್ರಪಿಂಡದಲ್ಲಿನ ಕಲ್ಲುಗಳನ್ನು ಹೊರಹಾಕಲು ನೆರವಾಗುತ್ತದೆ. ಅಷ್ಟೇ ಅಲ್ಲದೇ ತುಳಸಿ ಎಲೆಗಳ ರಸದಲ್ಲಿ ಅಸೆಟಿಕ್ ಆಮ್ಲವಿದ್ದು, ಈ ಆಮ್ಲದಿಂದಾಗಿ ಮೂತ್ರಪಿಂಡದ ಕಲ್ಲುಗಳು ಕರಗುತ್ತವೆ.

    ಕಲ್ಲಂಗಡಿ ಬೀಜ: ನಿಮ್ಮ ಕಿಡ್ನಿ ಸ್ಟೋನ್ ಅನ್ನು ಹೊರಹಾಕಲು ಕಲ್ಲಂಗಡಿ ಮತ್ತು ಅದರ ಬೀಜ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಒಂದು ಲೀಟರ್‍ನಷ್ಟು ನೀರನ್ನು ಕುದಿಸಿಕೊಳ್ಳಿ ಹಾಗೂ ಬೀಜವನ್ನು ಪೇಸ್ಟ್ ರೂಪದಲ್ಲಿ ತಯಾರಿಸಿಕೊಂಡು ಈ ನೀರಿಗೆ ಮಿಶ್ರ ಮಾಡಿ. ಅರ್ಧ ಗಂಟೆಗಳ ಕಾಲ ಈ ನೀರನ್ನು ಕುದಿಸಿ ನಂತರ ತಣಿಸಿ ಕುಡಿಯುವರಿಂದ ಕಿಡ್ನಿ ಸ್ಟೋನ್ ನಿವಾರಣೆಯಾಗಿ ನೋವಿನಿಂದಲೂ ಮುಕ್ತಿ ಪಡೆಯುತ್ತಿರಿ.

    ಬಾಳೆ ದಿಂಡು ಜ್ಯೂಸ್: ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು ನಿತ್ಯವೂ ಬಾಳೆ ದಿಂಡು ಜ್ಯೂಸ್ ಅನ್ನು ಕುಡಿಯಿರಿ. ಹಾಗೂ ಇದರ ಜೊತೆಗೆ ದೇಹಕ್ಕೆ ನಿಯಮಿತಕ್ಕಿಂತಲೂ ಅಧಿಕವಾಗಿ ನೀರನ್ನು ಕುಡಿಯಿರಿ. ಇದರಿಂದಾಗಿ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇದನ್ನೂ ಓದಿ: ಬೇಸಿಗೆಯಲ್ಲಿ ಕಾಮಕಸ್ತೂರಿ ಬೀಜ ಬಲು ಆರೋಗ್ಯಕಾರಿ

    ಆ್ಯಪಲ್ ಸಿಡರ್ ವಿನೆಗರ್: ಒಂದು ಅಥವಾ ಎರಡು ಟೇಬಲ್ ಸ್ಪೂನ್‍ಗಳಷ್ಟು ಆ್ಯಪಲ್ ಸಿಡರ್ ವಿನೆಗರ್‍ಗೆ ಒಂದಿಷ್ಟು ನೀರನ್ನು ಬೆರೆಸಿ ಅದನ್ನು ಪ್ರತಿನಿತ್ಯ ಕುಡಿಯಿರಿ. ಇದರಿಂದಾಗಿ ಮೂತ್ರಪಿಂಡದಲ್ಲಿ ಆಗಿರುವ ಕಲ್ಲನ್ನು ಕರಗಿಸಲು ಸಹಾಯವಾಗುತ್ತದೆ. ಇದನ್ನೂ ಓದಿ: ನೋಡಲು ಪುಟ್ಟದಾಗಿರುವ ನೆಲನೆಲ್ಲಿಯಿಂದ ಬೆಟ್ಟದಷ್ಟು ಪ್ರಯೋಜನ

    Live Tv