Tag: Kick Boxing

  • ಎದುರಾಳಿಯ ಒಂದೇ ಒಂದು ಏಟಿಗೆ ಕಿಕ್ ಬಾಕ್ಸರ್ ಪ್ರಾಣವೇ ಹೋಯ್ತು!

    ಎದುರಾಳಿಯ ಒಂದೇ ಒಂದು ಏಟಿಗೆ ಕಿಕ್ ಬಾಕ್ಸರ್ ಪ್ರಾಣವೇ ಹೋಯ್ತು!

    ಮೈಸೂರು: ಎದುರಾಳಿಯ ಒಂದೇ ಒಂದು ಏಟಿಗೆ ಗಂಭೀರ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಬಾಕ್ಸರ್‌ ಚಿಕಿತ್ಸೆ ಫಲಕಾರಿಯಾಗದೇ ಪ್ರಾಣ ಬಿಟ್ಟಿದ್ದಾರೆ.

    ನಿಖಿಲ್ (24) ಮೃತಪಟ್ಟ ಕಿಕ್ ಬಾಕ್ಸರ್. ಜುಲೈ 10 ರಂದು ಬೆಂಗಳೂರಿನ ಕೆಂಗೇರಿಯಲ್ಲಿ A-1 ಕಿಕ್ ಬಾಕ್ಸರ್ ಆರ್ಗನೈಸೇಷನ್ ವತಿಯಿಂದ ಸ್ಪರ್ಧೆ ಆಯೋಜನೆಗೊಂಡಿತ್ತು. ಈ ವೇಳೆ ರಿಂಗ್‌ನಲ್ಲಿ ಸೆಣಸಾಡುತ್ತಿದ್ದಂತೆ ಎದುರಾಳಿಯ ಏಟಿಗೆ ನಿಖಿಲ್ ಗಂಭೀರ ಗಾಯಗೊಂಡಿದ್ದರು. ಇದನ್ನೂ ಓದಿ: ತುಂಬಿ ಹರಿಯುತ್ತಿರೋ ಕಪಿಲೆಯಲ್ಲಿ ಈಜಲು ತೆರಳಿ ಯುವಕ ನಾಪತ್ತೆ 

    ಎದುರಾಳಿ ತಲೆಗೆ ಹೊಡೆದ ಒಂದೇ ಏಟಿಗೆ ಬಾಕ್ಸಿಂಗ್ ರಿಂಗ್ ನಲ್ಲಿಯೇ ನಿಖಿಲ್ ಕೆಳಗೆ ಬಿದ್ದಿದ್ದರು. ತಕ್ಷಣ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಎರಡು ದಿನಗಳ ಕಾಲ ಕೋಮಾದಲ್ಲಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಸಾವನ್ನಪ್ಪಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಎಸ್‍ಎಫ್ ಯೋಧರ ಜೊತೆ ನಟ ಅಕ್ಷಯ್ ಕುಮಾರ್ ಕಿಕ್ ಬಾಕ್ಸಿಂಗ್: ವಿಡಿಯೋ

    ಬಿಎಸ್‍ಎಫ್ ಯೋಧರ ಜೊತೆ ನಟ ಅಕ್ಷಯ್ ಕುಮಾರ್ ಕಿಕ್ ಬಾಕ್ಸಿಂಗ್: ವಿಡಿಯೋ

    ನವದೆಹಲಿ: ಬಾಲಿವುಡ್ ಕಿಲಾಡಿ ನಟ ಅಕ್ಷಯ್ ಕುಮಾರ್ ನವದೆಹಲಿಯಲ್ಲಿ ಬಿಎಸ್‍ಎಫ್ ಯೋಧರನ್ನು ಭೇಟಿ ಮಾಡಿ ಅವರ ಕಿಕ್ ಬಾಕ್ಸಿಂಗ್ ಆಡಿದ್ದಾರೆ.

    ಇತ್ತೀಚೆಗೆ ಅಕ್ಷಯ್ ಕುಮಾರ್ ತಮ್ಮ ಮುಂಬರುವ ‘ಕೇಸರಿ’ ಚಿತ್ರದ ಪ್ರಚಾರಕ್ಕಾಗಿ ದೆಹಲಿಗೆ ಹೋಗಿದ್ದರು. ಈ ವೇಳೆ ಅವರು ಬಿಎಸ್‍ಎಫ್ ಯೋಧರನ್ನು ಭೇಟಿ ಮಾಡಿ ಅವರ ಜೊತೆ ಕಿಕ್ ಬಾಕ್ಸಿಂಗ್ ಆಡಿದ್ದಾರೆ. ಈ ವಿಡಿಯೋವನ್ನು ಅಕ್ಷಯ್ ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ.

    ಅಕ್ಷಯ್ ಕುಮಾರ್ ತಮ್ಮ ಟ್ವಿಟ್ಟರಿನಲ್ಲಿ, “ಬಿಎಸ್‍ಎಫ್ ಯೋಧರನ್ನು ಭೇಟಿ ಮಾಡುವುದಕ್ಕೆ ಯಾವಾಗಲೂ ಖುಷಿಯಾಗುತ್ತದೆ. ಅವರ ತರಬೇತಿ ಹಾಗೂ ಉತ್ಸಾಹವು ಉನ್ನತ ದರ್ಜೆಯಲ್ಲಿ ಇರುತ್ತದೆ ಹಾಗೂ ಯಾವಾಗಲೂ ಒಂದು ಕಲಿಕೆಯ ಅನುಭವವಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.

    ಅಕ್ಷಯ್ ಕುಮಾರ್ ಜೊತೆ ಕೇಸರಿ ಚಿತ್ರದ ನಟಿ ಪರಿಣೀತಿ ಚೋಪ್ರಾ ಕೂಡ ಭಾಗಿಯಾಗಿದ್ದು ಬಾಕ್ಸಿಂಗ್ ಆಟದ ವಿಡಿಯೋ ಈಗ ವೈರಲ್ ಆಗಿದೆ.

    1897 ರಲ್ಲಿ 10 ಸಾವಿರ ಅಫ್ಘಾನರ ವಿರುದ್ಧ ಬ್ರಿಟಿಷ್ ಸೇನೆಯ ಸಿಖ್ ರೆಜಿಮೆಂಟ್ ನ 21 ಮಂದಿ ಸೈನಿಕರು ಅಫ್ಘಾನಿಸ್ತಾನದಲ್ಲಿ ನಡೆಸಿ ಸಾರ್ಗಘಿ ಯುದ್ಧದ ಕಥೆಯನ್ನು ಆಧಾರಿಸಿ ಕೇಸರಿ ಚಿತ್ರ ನಿರ್ಮಿಸಲಾಗಿದೆ.