Tag: Kichha Sudeep

  • ಅನಾಥ ಮಹಿಳೆಗೆ ಮನೆ ಕಟ್ಟಿಸಿಕೊಟ್ಟ ಕಿಚ್ಚ ಸುದೀಪ್

    ಅನಾಥ ಮಹಿಳೆಗೆ ಮನೆ ಕಟ್ಟಿಸಿಕೊಟ್ಟ ಕಿಚ್ಚ ಸುದೀಪ್

    ಸ್ಯಾಂಡಲ್‌ವುಡ್‌ನಲ್ಲಿ ಮಾತ್ರ ಅಲ್ಲ ದೇಶದ ಮೂಲೆ ಮೂಲೆಯಲ್ಲೂ ಕಿಚ್ಚ ಸುದೀಪ್ ಅವರದ್ದೇ ಹವಾ. ಸದ್ಯ `ವಿಕ್ರಾಂತ್ ರೋಣ’ ಚಿತ್ರ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಪ್ರಚಾರದ ನಡುವೆಯೂ ಸಂಕಷ್ಟದಲ್ಲಿರುವ ಓರ್ವ ಮಹಿಳೆಗೆ ಸುದೀಪ್ ಸಹಾಯ ಮಾಡಿದ್ದಾರೆ.

    ಸದ್ಯ ರಿಲೀಸ್‌ಗೆ ರೆಡಿಯಿರುವ `ವಿಕ್ರಾಂತ್ ರೋಣ’ ಸಿನಿಮಾ ಪ್ರಚಾರದಲ್ಲಿ ಸುದೀಪ್ ಬ್ಯುಸಿಯಾಗಿದ್ದರೂ ಅವರ ಸಮಾಜ ಸೇವೆ ಕೆಲಸಗಳು ಮಾತ್ರ ನಿರಂತರವಾಗಿ ನಡೆಯುತ್ತಿವೆ. ತೆರೆಯ ಮರೆಯಲ್ಲಿ ಕಿಚ್ಚ ಸುದೀಪ್ ಬಡವರಿಗೆ, ಶ್ರಮಿಕರಿಗೆ ಸಹಾಯ ಮಾಡುವುದನ್ನು ಮರೆಯುವುದಿಲ್ಲ. ಈಗ ತಮ್ಮದೇ ಟ್ರಸ್ಟ್ ಮೂಲಕ ಸಮಾಜಮುಖಿ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಈಗ ಅನಾಥ ಮಹಿಳೆಯ ಸಂಕಷ್ಟಕ್ಕೆ ಸುದೀಪ್ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ನಟ ನರೇಶ್ ಆತ್ಮೀಯರಾಗಿದ್ದು ದುಡ್ಡಿನ ಕಾರಣಕ್ಕೆ ಅಲ್ಲ, ನಾನು ದುಡ್ಡಿನ ಹಿಂದೆ ಹೋಗಿಲ್ಲ : ನಟಿ ಪವಿತ್ರಾ ಲೋಕೇಶ್

    ಚಿತ್ರದುರ್ಗದ ಚಳ್ಳಕೆರೆಯ ಪುಟ್ಟ ಗ್ರಾಮದ ಅನಾಥೆ ಮಹಿಳೆ ಹೊನ್ನೂರಮ್ಮ ಒಂದು ಹಳೆಯ ಮನೆಯಿತ್ತು ಬೀಳುವ ಸ್ಥಿತಿಯಲ್ಲಿತ್ತು. ಈ ವಿಚಾರ ಸುದೀಪ್‌ಗೆ ತಿಳಿದ ಬೆನ್ನಲ್ಲೇ, ಹಳೆ ಮನೆ ದುರಸ್ಥಿ ಮಾಡಿಸಿ, ಖಾಲಿಯಿದ್ದ ಜಾಗದಲ್ಲಿ ಪುಟ್ಟದೊಂದು ಶೀಟ್ ಮನೆ ಕಟ್ಟಿಸಿ ಕೊಟ್ಟಿದ್ದಾರೆ.ಸುಮಾರು 2 ಲಕ್ಷ ರೂ ವೆಚ್ಚದಲ್ಲಿ ಒಂದು ಕೋಣೆ, ಬಚ್ಚಲುಮನೆ ಇರೋ ಪುಟ್ಟ ಶೀಟ್ ಮನೆ ಕಟ್ಟಿಸಿದ್ದಾರೆ. ಅಗತ್ಯದ ವೇಳೆಯಲ್ಲಿ ಸುದೀಪ್ ಸಹಾಯ ಮಾಡಿರುವುದಕ್ಕೆ ಹೊನ್ನೂರಮ್ಮ ಧನ್ಯವಾದ ತಿಳಿಸಿದ್ದಾರೆ. ಕಿಚ್ಚನ ನಡೆಯಿಂದ ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

    Live Tv

  • ಕಿಚ್ಚ ಸುದೀಪ್‌ಗೆ ಬ್ಯಾಟ್ ಗಿಫ್ಟ್ ಕೊಟ್ಟ ಜೋಸ್ ಬಟ್ಲರ್

    ಕಿಚ್ಚ ಸುದೀಪ್‌ಗೆ ಬ್ಯಾಟ್ ಗಿಫ್ಟ್ ಕೊಟ್ಟ ಜೋಸ್ ಬಟ್ಲರ್

    ಮುಂಬೈ: ಇಂಗ್ಲೆಂಡ್ ತಂಡದ ಕ್ರಿಕೆಟಿಗ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಬ್ಯಾಟ್‌ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

    2022ರ 15ನೇ ಆವೃತ್ತಿ ಐಪಿಎಲ್‌ನಲ್ಲಿ ತಾವು ಆಡಿದ್ದ ಬ್ಯಾಟ್ ಮೇಲೆ ಸಹಿ ಮಾಡಿ ಅದನ್ನು ಕಿಚ್ಚ ಸುದೀಪ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೆ ಸುದೀಪ್ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಆಟವಾಡಿದ ಫೋಟೋವೊಂದನ್ನು ರಾಜಾಸ್ಥಾನ್ ರಾಯಲ್ಸ್ ತಂಡವು ಟ್ವೀಟ್‌ನಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: ಮುಂಬೈಗೆ 725 ರನ್‍ಗಳ ದಾಖಲೆಯ ಜಯ – ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ 129 ವರ್ಷಗಳ ಬಳಿಕ ರೆಕಾರ್ಡ್ ಬ್ರೇಕ್

    ಇದಕ್ಕೆ ಉತ್ಸಾಹದಿಂದಲೇ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್ ವಿಶೇಷ ವೀಡಿಯೋವೊಂದನ್ನು ಮಾಡಿದ್ದು, ಜೋಸ್ ಬಟ್ಲರ್‌ಗೆ ಧನ್ಯವಾದ ಹೇಳಿದ್ದಾರೆ. ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಸಂಭ್ರಮ ಹಂಚಿಕೊಂಡಿದ್ದಾರೆ. ಅದರೊಂದಿಗೆ ಬ್ಯಾಟ್ ಸಿಗಲು ಸಹಾಯ ಮಾಡಿದ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಕನ್ನಡಿಗ ಕೆ.ಸಿ.ಕಾರ್ಯಪ್ಪ ಹಾಗೂ ರಾಜಸ್ಥಾನ ರಾಯಲ್ಸ್ ತಂಡಕ್ಕೂ ಧನ್ಯವಾದ ಸಲ್ಲಿಸಿದ್ದಾರೆ.

    `ನಿಜಕ್ಕೂ ನನಗೆ ಬಹಳ ಅಚ್ಚರಿಯಾಯಿತು. ನಾನು ಇದನ್ನು ನಿರೀಕ್ಷೆ ಸಹ ಮಾಡಿರಲಿಲ್ಲ. ಮೊದಲಿಗೆ ನಾನು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಇದನ್ನು ಸಾಧ್ಯವಾಗಿಸಿದ ನನ್ನ ಸ್ನೇಹಿತ ಕೆಸಿ ಕಾರ್ಯಪ್ಪಗೂ ಥ್ಯಾಂಕ್ಸ್ ಹೇಳುತ್ತೇನೆ. ವಿಶೇಷವಾಗಿ ಜೋಸ್ ಬಟ್ಲರ್ ಸಲುವಾಗಿ ಈ ವೀಡಿಯೋ ಮಾಡಿದ್ದೇನೆ. ವೈಯಕ್ತಿಕವಾಗಿ ನೀವು ಸಹಿ ಮಾಡಿದಂಥ ಬ್ಯಾಟ್ ಅನ್ನು ನನಗೆ ನೀಡಿದ್ದಕ್ಕೆ ಬಹಳ ಧನ್ಯವಾದ. ಇದನ್ನು ನಾನು ಸ್ವೀಕರಿಸಿದ್ದೇನೆ. ನನಗೆ ಬಹಳ ಸಂತೋಷವಾಗಿದೆ ಎಂದು ಕೃತಜ್ಞತಾ ವೀಡಿಯೋವನ್ನು ಸುದೀಪ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕೊಹ್ಲಿಯ ದಾಖಲೆಯ ರನ್ ಶಿಖರವನ್ನು ಪುಡಿಗಟ್ಟಿದ ಬಾಬರ್ ಅಜಾಮ್‌

    ಈ ಬಾರಿ ಐಪಿಎಲ್ ಸೀಜನ್‌ನಲ್ಲೂ ಜೋಸ್ ಬಟ್ಲರ್ ಭರ್ಜರಿ ಪ್ರದರ್ಶನ ನೀಡಿದ್ದಾರೆ ಎಂದಿರುವ ಸುದೀಪ್ ಖಂಡಿತವಾಗಿ ನಾನು ಇದನ್ನು ಜೋಪಾನವಾಗಿ ಕಾಯ್ದಿಟ್ಟುಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.

    15ನೇ ಆವೃತ್ತಿ ಐಪಿಎಲ್‌ನಲ್ಲಿ ಜೋಸ್ ಬಟ್ಲರ್ ಏಕಾಂಗಿ ಹೋರಾಟದ ಮೂಲಕ ರಾಜಾಸ್ಥಾನ್ ರಾಯಲ್ಸ್ ತಂಡವನ್ನು ಫೈನಲ್ ಪಂದ್ಯದ ವೆರೆಗೆ ಮುನ್ನಡೆಸಿದ್ದರು. ಒಟ್ಟು 15 ಪಂದ್ಯಗಳಲ್ಲಿ 718 ರನ್‌ಗಳನ್ನು ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಗಳಿಸಿಕೊಂಡರು.

  • ಕರುನಾಡ ಚಕ್ರವರ್ತಿಯ ಹುಟ್ಟುಹಬ್ಬಕ್ಕೆ ಕಿಚ್ಚನಿಂದ ಅಡ್ವಾನ್ಸ್ ಗಿಫ್ಟ್

    ಕರುನಾಡ ಚಕ್ರವರ್ತಿಯ ಹುಟ್ಟುಹಬ್ಬಕ್ಕೆ ಕಿಚ್ಚನಿಂದ ಅಡ್ವಾನ್ಸ್ ಗಿಫ್ಟ್

    ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಇನ್ನೂ 7 ದಿನ ಬಾಕಿ ಇದ್ದು, ಅವರ ಅಭಿಮಾನಿಗಳು ಈಗಿನಿಂದಲೇ ತಯಾರಿ ನಡೆಸಿದ್ದಾರೆ. ಅಭಿಮಾನಿಗಳು ಸಿದ್ಧತೆ ಮಾಡಿಕೊಳ್ಳುತ್ತಿರುವುದು ಒಂದು ಕಡೆಯಾದರೆ ಇನ್ನೊಂದೆಡೆ ಕಿಚ್ಚ ಸುದೀಪ್ ಈಗಲೇ ವಿಶೇಷ ಗಿಫ್ಟ್ ನೀಡುವ ಮೂಲಕ ಶುಭ ಕೋರಿದ್ದಾರೆ.

    ನಟ ಶಿವರಾಜ್ ಕುಮಾರ್ ಕೊರೊನಾ ಕಾರಣದಿಂದಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಹುಟ್ಟುಹಬ್ಬದ ದಿನ ಮನೆಯಲ್ಲಿ ಇರುವುದಿಲ್ಲ. ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮ ಆರೋಗ್ಯ ಮುಖ್ಯ. ಇದರಲ್ಲಿ ನನ್ನ ಆರೋಗ್ಯಕ್ಕಿಂತ ನಿಮ್ಮ ಆರೋಗ್ಯ ಮುಖ್ಯ. ಕೊರೊನಾ ಪರಿಸ್ಥಿತಿ ಎಲ್ಲ ತಿಳಿಯಾದ ಮೇಲೆ ನಾವೆಲ್ಲರೂ ಭೇಟಿಯಾಗೋಣ ಇದು ನನ್ನ ಪ್ರಾಮಿಸ್ ಎಂದು ತಿಳಿಸಿದ್ದರು.

    ಅಲ್ಲದೆ ನೀವು ಧೈರ್ಯವಾಗಿರಿ, ನೀತಿ, ನಿಯಮಗಳನ್ನು ಪಾಲಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಂಡು ಸುರಕ್ಷಿತವಾಗಿರಬೇಕು. ಧೈರ್ಯವಾಗಿರಿ ಏನೂ ಆಗಲ್ಲ ದೇವರಿದ್ದಾನೆ. ನಮ್ಮೆಲ್ಲರನ್ನೂ ಕಾಪಾಡಲು ದೇವರು ಇದ್ದೇ ಇರುತ್ತಾನೆ. ಎಲ್ಲರೂ ಸೇರೋಣ ಎಂದು ವಿಡಿಯೋ ಸಂದೇಶದ ಮೂಲಕ ತಿಳಿಸಿದ್ದಾರೆ. ಕರುನಾಡ ಚಕ್ರವರ್ತಿಯ ಹುಟ್ಟುಹಬ್ಬವನ್ನು ಸಾಮಾಜಿಕ ಜಾಲತಾಣಗಳಲ್ಲೇ ಗ್ರ್ಯಾಂಡ್ ಆಚರಿಸಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.

    ನೀವು ಮನೆ ಬಳಿ ಸೇರಿದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸವಾಲಿನ ಸಂಗತಿ. ಹೀಗಾಗಿ ಈ ಬಾರಿ ಹುಟ್ಟುಹಬ್ಬ ಆಚರಣೆ ಬೇಡ, ನಾನೂ ಸಹ ಮನೆಯಲ್ಲಿರುವುದಿಲ್ಲ. ಕೊರೊನಾ ಪರಿಸ್ಥಿತಿ ತಿಳಿಯಾದ ಮೇಲೆ ಒಟ್ಟಿಗೆ ಸೇರೋಣ ಎಂದು ಕೇಳಿಕೊಂಡಿದ್ದಾರೆ. ಹೀಗಾಗಿ ಅಭಿಮಾನಿಗಳು ಶಿವಣ್ಣನ ಹುಟ್ಟುಹಬ್ಬವನ್ನು ಸಿಡಿಪಿ(ಕಾಮನ್ ಡಿಪಿ) ಮೂಲಕ ಸಾಮಾಜಿಕ ಜಾಲತಾಣಗಳಲ್ಲೇ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಈಗಾಗಲೇ ಇದನ್ನು ಸಿದ್ಧಪಡಿಸಲಾಗಿದ್ದು, ಶನಿವಾರ ಸಂಜೆ ಕಿಚ್ಚ ಸುದೀಪ್ ಅವರಿಂದ ಬಿಡುಗಡೆಗೊಳಿಸಿದ್ದಾರೆ. ಸಿಡಿಪಿ ಬಿಡುಗಡೆ ಮಾಡಿರುವ ಕುರಿತು ಸ್ವತಃ ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

    ಟ್ವಿಟ್ಟರ್ ನಲ್ಲಿ ಸಿಡಿಪಿ ಫೋಟೋ ಹಾಕಿ ಸಾಲುಗಳನ್ನು ಬರೆದಿರುವ ಕಿಚ್ಚ, ಜುಲೈ 12ರಂದು ಶಿವಣ್ಣನ ಹುಟ್ಟುಹಬ್ಬದ ಹಿನ್ನೆಲೆ ಅವರ ಅಭಿಮಾನಿಗಳು ಸಿಡಿಪಿ ಡಿಸೈನ್ ಮಾಡಿದ್ದು, ಇದನ್ನು ಬಿಡುಗಡೆಗೊಳಿಸಲು ಸಂತಸವಾಯಿತು ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕಿಚ್ಚ ಸುದೀಪ್ ಶಿವಣ್ಣನಿಗೆ ವಿಶೇಷವಾಗಿ ಶುಭಾಶಯ ಕೋರಿದ್ದಾರೆ.

  • ತಂದೆ-ತಾಯಿ ವಿವಾಹ ವಾರ್ಷಿಕೋತ್ಸವಕ್ಕೆ ಕಿಚ್ಚನ ಭಾವನಾತ್ಮಕ ಸಾಲು

    ತಂದೆ-ತಾಯಿ ವಿವಾಹ ವಾರ್ಷಿಕೋತ್ಸವಕ್ಕೆ ಕಿಚ್ಚನ ಭಾವನಾತ್ಮಕ ಸಾಲು

    ಬೆಂಗಳೂರು: ಲಾಕ್‍ಡೌನ್ ಸಮಯದಲ್ಲಿ ಎಲ್ಲ ನಟ, ನಟಿಯರು ಮನೆಯಲ್ಲೇ ಕಾಲ ಕಳೆಯುತ್ತಿದ್ದು, ಕುಟುಂಬದೊಂದಿಗೆ ಸಂತಸ ಕ್ಷಣಗಳನ್ನು ಆನಂದಿಸುತ್ತಿದ್ದಾರೆ. ಕಿಚ್ಚ ಸುದೀಪ್ ತಮ್ಮ ಮನೆಯಲ್ಲೇ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದು, ತಂದೆ ತಾಯಿಯ ವಿವಾಹ ವಾರ್ಷಿಕೋತ್ಸಕ್ಕೆ ಶುಭ ಕೋರಿದ್ದು, ಭಾವನಾತ್ಮಕ ಸಾಲುಗಳ ಮೂಲಕ ಟ್ವೀಟ್ ಮಾಡಿದ್ದಾರೆ.

    ಅವರು ನನ್ನನ್ನು ರೂಪಿಸಿದವರು, ಬೆಳೆಸಿದವರು, ಬಿಗಿಗೊಳಿಸಿದವರು, ಅಂದವಾಗಿಸಿದವರು. ಇಷ್ಟು ಮಾತ್ರವಲ್ಲ ನನ್ನನ್ನು ಆಶೀರ್ವದಿಸಿ, ನನಗಾಗಿ ಪ್ರಾರ್ಥಿಸುವವರು. ಅಮ್ಮ-ಅಪ್ಪ 54 ವರ್ಷಗಳ ನಿಮ್ಮ ಒಗ್ಗಟ್ಟಿನ ಜೀವನಕ್ಕೆ ಶುಭಾಶಯ. ನೀವು ಇನ್ನೂ ಹಲವು ವರ್ಷಗಳ ಕಾಲ ನಮ್ಮೊಂದಿಗೆ ಇರಬೇಕಿದೆ. ಲವ್ ಯು ಬೋತ್ ಫಾರ್‍ಎವರ್ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಭಾವನಾತ್ಮಕವಾಗಿ ತಂದೆ, ತಾಯಿಯನ್ನು ನೆನೆದಿದ್ದಾರೆ.

    ಮನೆಯಲ್ಲೇ ಕಾಲ ಕಳೆಯುತ್ತಿರುವ ಕಿಚ್ಚ ಸುದೀಪ್, ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುತ್ತಾರೆ. ಲಾಕ್‍ಡೌನ್ ಸಂದರ್ಭದಲ್ಲಿ ಅವರ ಅಭಿಮಾನಿಗಳು ಮಾಡುವ ಸಹಾಯದ ಕುರಿತು ಪ್ರತಿಕ್ರಿಯಿಸುತ್ತಿರುತ್ತಾರೆ. ಅಲ್ಲದೆ ಹಲವು ಅಭಿಮಾನಿಗಳ ಪ್ರಶ್ನೆಗೆಗಳಿಗೆ ಉತ್ತರಿಸುತ್ತಿದ್ದಾರೆ. ಹೀಗೆ ಲಾಕ್‍ಡೌನ್ ಸಮಯದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ.

    ಕೋಟಿಗೊಬ್ಬ-3 ಸಿನಿಮಾದಲ್ಲಿ ಕಿಚ್ಚ ಸುದೀಪ್ ಬ್ಯುಸಿಯಾಗಿದ್ದು, ಸಿನಿಮಾ ಅಂತಿಮ ಹಂತ ತಲುಪಿದೆ. ಇನ್ನೇನು ಬಿಡುಗಡೆಯಾಗಲಿದೆ ಎನ್ನುವಷ್ಟರಲ್ಲಿ ಲಾಕ್‍ಡೌನ್ ಘೋಷಣೆಯಾಯಿತು. ಹೀಗಾಗಿ ಸಿನಿಮಾ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಚಿತ್ರವನ್ನು ಶಿವ ಕಾರ್ತಿಕ್ ನಿರ್ದೇಶಿಸುತ್ತಿದ್ದು, ಕಿಚ್ಚನಿಗೆ ಜೋಡಿಯಾಗಿ ಮೆಡೋನ್ನ ಸೆಬಾಸ್ಟಿಯನ್ ನಟಿಸುತ್ತಿದ್ದಾರೆ. ಶ್ರದ್ಧಾ ದಾಸ್ ಇಂಟರ್‍ಪೋಲ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಕ್‍ಲೈನ್ ವೆಂಕಟೇಶ್ ಹಾಗೂ ಎಂ.ಬಿ ಬಾಬು ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

  • ನಾಳೆ ‘ಪತಿ ಬೇಕು ಡಾಟ್ ಕಾಮ್’ ಟ್ರೇಲರ್ ರಿಲೀಸ್ ಮಾಡ್ತಾರೆ ಕಿಚ್ಚ ಸುದೀಪ್!

    ನಾಳೆ ‘ಪತಿ ಬೇಕು ಡಾಟ್ ಕಾಮ್’ ಟ್ರೇಲರ್ ರಿಲೀಸ್ ಮಾಡ್ತಾರೆ ಕಿಚ್ಚ ಸುದೀಪ್!

    – ಇದು ಶೀತಲ್ ಶೆಟ್ಟಿಯ ಕಾಮಿಡಿ ಟ್ರ್ಯಾಕ್!

    ಆಂಕರ್ ಆಗಿ ತನ್ನ ಸ್ಫುಟವಾದ ಕನ್ನಡ ಉಚ್ಛಾರದಿಂದಲೇ ಖ್ಯಾತರಾಗಿದ್ದವರು ಶೀತಲ್ ಶೆಟ್ಟಿ. ಆಂಕರಿಂಗ್ ಗೆ ಗುಡ್ ಬೈ ಹೇಳಿದ ನಂತರ ಬಿಗ್ ಬಾಸ್ ಪ್ರವೇಶ ಮಾಡಿದ್ದ ಶೀತಲ್ ಇದೀಗ ನಟನೆಯತ್ತಲೇ ಗಮನ ಕೇಂದ್ರೀಕರಿಸಿದ್ದಾರೆ. ಸದ್ಯ ಅವರು ವಿಶಿಷ್ಟವಾದ ಪಾತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸುತ್ತಿರುವ ಚಿತ್ರ `ಪತಿಬೇಕು ಡಾಟ್ ಕಾಮ್’!

    ಈ ಚಿತ್ರದ ಕಡೆಯಿಂದ ಇದೀಗ ಖುಷಿಯ ವಿಚಾರವೊಂದು ಹೊರ ಬಿದ್ದಿದೆ. ಸೆನ್ಸಾರ್ ಮುಗಿಸಿಕೊಂಡ ಬೆನ್ನಲ್ಲಿಯೇ ನಾಳೆ ಈ ಚಿತ್ರದ ಟ್ರೈಲರ್ ಕಿಚ್ಚ ಸುದೀಪ್ ಅವರಿಂದಲೇ ಬಿಡುಗಡೆಯಾಗಲಿದೆ. ರಾಕೇಶ್ ನಿರ್ದೇಶನ ಮಾಡಿ ನಿರ್ಮಾಪಕರಾಗಿಯೂ ಕಾರ್ಯನಿರ್ವಹಿಸಿರುವ ಪತಿ ಬೇಕು ಡಾಟ್ ಕಾಮ್ ಚಿತ್ರ ಈ ಹಿಂದೆ ಟೀಸರ್ ಮೂಲಕವೇ ಅಲೆಯೆಬ್ಬಿಸಿತ್ತು. ಆದ್ದರಿಂದಲೇ ನಾಳೆ ಬಿಡುಗಡೆಯಾಗಲಿರುವ ಟ್ರೇಲರ್ ಬಗ್ಗೆ ಸಹಜವಾಗಿಯೇ ಕುತೂಹಲವಿದೆ.

    ರಾಕೇಶ್ ಒಂದು ಸರಳವಾದ ಆದರೆ ಸಂಕೀರ್ಣವಾದ, ಬದುಕಿಗೆ ಹತ್ತಿರಾದ ಕಥಾ ಹಂದರವೊಂದನ್ನು ಹಾಸ್ಯದ ಶೈಲಿಯಲ್ಲಿ ಪ್ರೇಕ್ಷಕರಿಗೆ ದಾಟಿಸಲು ಸನ್ನದ್ಧರಾಗಿದ್ದಾರೆ. ಮಧ್ಯಮ ವರ್ಗದ ಪೋಷಕರ ಪಾಲಿಗೆ ಮಗಳಿಗೆ ಮದುವೆ ಮಾಡೋದೆಂದರೆ ಜೀವನದ ಪ್ರಮುಖ ಘಟ್ಟ. ಅದರಲ್ಲಿಯೂ ಮಗಳು ಮೂವತ್ತು ವರ್ಷ ದಾಟಿಸಿದರೆ ಅದರ ಪಡಿಪಾಟಲುಗಳನ್ನು ಹೇಳಲಾಗೋದಿಲ್ಲ. ಅಂಥಾ ಮೂವತ್ತು ವರ್ಷ ದಾಟಿದ ಮದುವೆಗೆ ತಯಾರಾದ ಹುಡುಗಿಯ ಪಾತ್ರದಲ್ಲಿ ಶೀತಲ್ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈವರೆಗೂ ಶೀತಲ್ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅದೆಲ್ಲವೂ ಗಂಭೀರವಾದ ಪಾತ್ರಗಳೇ. ಆದರೆ ಈ ಚಿತ್ರದಲ್ಲಿ ಶೀತಲ್ ನಗಿಸುವಂಥಾ ನಟನೆಯನ್ನು ನೀಡಲಿದ್ದಾರಂತೆ.

  • ದರ್ಶನ್ ಜೊತೆ ಸಿನಿಮಾ ಮಾಡ್ತೀರಾ: ಅಭಿಮಾನಿಯ ಪ್ರಶ್ನೆಗೆ ಸುದೀಪ್ ಉತ್ತರ ನೀಡಿದ್ದು ಹೀಗೆ

    ದರ್ಶನ್ ಜೊತೆ ಸಿನಿಮಾ ಮಾಡ್ತೀರಾ: ಅಭಿಮಾನಿಯ ಪ್ರಶ್ನೆಗೆ ಸುದೀಪ್ ಉತ್ತರ ನೀಡಿದ್ದು ಹೀಗೆ

    ಬೆಂಗಳೂರು: ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಟ್ಟಿಗೆ ಚಿತ್ರದಲ್ಲಿ ಅಭಿನಯಿಸ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಬಹಳ ವರ್ಷದಿಂದ ಕಾಡುತ್ತಲೇ ಇದೆ. ಈ ಪ್ರಶ್ನೆಗೆ ಸುದೀಪ್ ಈಗ ಜಾಣ್ಮೆಯ ಉತ್ತರ ನೀಡಿದ್ದಾರೆ.

    ಕೆಲ ದಿನಗಳ ಹಿಂದೆ ನಗರದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ನಡೆದ ಫೆಸ್ಟ್ ನಲ್ಲಿ ನಟ ಕಿಚ್ಚ ಸುದೀಪ್ ಭಾಗವಹಿಸಿದ್ದರು. ಈ ವೇಳೆ ಅಭಿಮಾನಿಯೊಬ್ಬರು, ಬಾಸ್ ಸ್ಟ್ರೇಟ್ ಆಗಿ ಕೇಳ್ತಾ ಇದ್ದೀನಿ, ದರ್ಶನ್ ಅವರನ್ನ ನಿಮ್ಮನ್ನ ಒಂದೇ ಮೂವಿಯಲ್ಲಿ ನೋಡೋಕೆ ತುಂಬಾ ಆಸೆ ಇದೆ ಇಸ್ ಇಟ್ ಪಾಸಿಬಲ್ ಎಂದು ಪ್ರಶ್ನೆ ಹಾಕಿದ್ರು.

    ಈ ಪ್ರಶ್ನೆಗೆ ಸುದೀಪ್, ನಾನು ಚಿಕ್ಕವನಾಗಿರಬೇಕಾದ್ರೆ ನನಗೆ ನಮ್ಮಮ್ಮ ಏನೂ ಇಲ್ಲ ಅಂತ ಹೇಳೇ ಇಲ್ಲ. ನಾನು ಏನ್ ಕೇಳಿದ್ರೂ ನಮ್ ತಾಯಿ ಕೊಡ್ಸೋರು. ಆಗ ನಮ್ಮ ತಾಯಿಗೆ , ಅಮ್ಮ ಸೂರ್ಯ, ಚಂದ್ರ ಯಾಕೆ ಒಟ್ಟಿಗೆ ಕಾಣಿಸಿಕೊಳ್ಳೊಲ್ಲ ಅಂತ ಕೇಳ್ದೆ. ಆವಾಗ ನಮ್ ತಾಯಿ ಹೇಳಿದ್ರು, ಏನ್ಮಾಡ್ಲಿ ಕಂದಾ, ಸೂರ್ಯ ಬಂದಾಗ ಬೆಳಕಾಗುತ್ತೆ, ಚಂದ್ರ ಬಂದಾಗ ಕತ್ತಲಾಗುತ್ತೆ. ಅದು ಅಲ್ಲೇ ಸರಿ, ಇದು ಇಲ್ಲೇ ಸರಿ ಅಂತ ಥ್ಯಾಂಕ್ಯೂ  ಹೇಳಿ ಮಾತು ಮುಗಿಸಿದ್ರು.

    ಈ ಫೆಸ್ಟ್ ನಲ್ಲಿ ಇಂಧನ ಸಚಿವ ಡಿಕೆ ಶಿವಕುಮಾರ್, ಸಂಗೀತ ಗಾಯಕ ವಿಜಯ್ ಪ್ರಕಾಶ್, ಸಂಸದ ಡಿಕೆ ಸುರೇಶ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಜಯ್ ಪ್ರಕಾಶ್ ಮತ್ತು ಸುದೀಪ್ ಹಾಡುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು.

    https://www.youtube.com/watch?v=Ya5CZaXCNac