Tag: kichchasudeep

  • ಸುದೀಪ್ ಹೇಳಿದ ಒಂದು ಮಾತಿಗೆ ಶಾಕ್ ಆದ ಬಿಗ್ ಸ್ಪರ್ಧಿಗಳು

    ಸುದೀಪ್ ಹೇಳಿದ ಒಂದು ಮಾತಿಗೆ ಶಾಕ್ ಆದ ಬಿಗ್ ಸ್ಪರ್ಧಿಗಳು

    ವಾರದ ಕಥೆಯಲ್ಲಿ ಸುದೀಪ್ ಅವರು ವಾರ ಪೂರ್ತಿಯಾಗಿ ಬಿಗ್ ಬಾಸ್ ಮನೆಯಲ್ಲಿ ನಡೆದಿರುವ ವಿಚಾರಗಳನ್ನು ಆಧರಿಸಿ ಮಾತನಾಡುತ್ತಾರೆ. ಬಿಗ್ ಮನೆಯ ಸ್ಪರ್ಧಿಗಳಿಗೆ ಸರಿ, ತಪ್ಪಿನ ಕುರಿತಾಗಿ ತಿಳಿಸುವ ಪ್ರಯತ್ನವನ್ನು ಮಾಡುತ್ತಾರೆ. ಆದರೆ ಈ ವಾರ ಸುದೀಪ್ ಹೇಳಿರುವ ಆ ಒಂದು ಮಾತನ್ನು ಕೇಳಿ ಸ್ಪರ್ಧಿಗಳು ಆಘಾತಕ್ಕೊಳಗಾಗಿದ್ದಾರೆ.

    ಬಿಗ್‍ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕವಾಗಿ ಚಕ್ರವರ್ತಿ ಚಂದ್ರಚೂಡ್ ಅವರು ಎಂಟ್ರಿ ಕೊಟ್ಟಿದ್ದಾರೆ. ಈ ವಿಚಾರವಾಗಿ ಮನೆ ಮಂದಿಗೆ ಕೊಂಚ ಬೇಸರವಾಗಿದೆ. 35 ದಿನವಾಗಿದೆ ನಾವು ಬಂದು ನಾವು ಹಾಯ್ ಆಗಿ ಇದ್ದೇವು, ಈಗ ವೈಲ್ಡ್ ಕಾರ್ಡ್ ಎಂಟ್ರಿ ಬೇಡವಾಗಿತ್ತು ಎಂದು ಹಲವರು ನೇರವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

     ಸುದೀಪ್ ಹೇಳಿದ್ದೇನು?
    ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟಿದ್ದು ಎಷ್ಟರಮಟ್ಟಿಗೆ ಖುಷಿ ಇದೆ ಎನ್ನುವುದನ್ನು ತಿಳಿದುಕೊಳ್ಳಲು ಸುದೀಪ್ ಮನೆಯವರ ಬಳಿ ಚಕ್ರವರ್ತಿ ಚಂದ್ರಚೂಡ್ ಅವರ ಕುರಿತಾಗಿ ಮಾತನಾಡಿದ್ದಾರೆ. ಈ ವೇಳೆ ಮನೆ ಮಂದಿಗೆ ಅವರು ಬಿಗ್‍ಬಾಸ್ ಮನೆಗೆ ಬಂದಿರುವ ಕುರಿತಾಗಿ ಬೇಸರವಾಗಿದೆ ಎನ್ನುವುದು ತಿಳಿದಿದೆ. ಮನೆ ಪ್ರವೇಶ ಮಾಡುತ್ತಿದ್ದಂತೆ ಎಲ್ಲರನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅವರತ್ತ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಹೀಗೆ ಹಲವು ಕಾರಣಗಳನ್ನು ಕೊಟ್ಟಿದ್ದಾರೆ.

    ಈ ವೇಳೆ ಸುದೀಪ್ ಬಿಗ್‍ಬಾಸ್ ಮನೆ ಯಾರ ಮನೆಯಲ್ಲ.. ಅಲ್ಲಿರುವವರು ಯಾರು ನಿಮ್ಮವರಲ್ಲ ಆದರೂ ಹೀಗೆ ಒಂದು ಅಭಿಪ್ರಾಯವಿದೆ. ಆದರೆ ಬಿಗ್‍ಬಾಸ್ ಮನೆಗೆ  ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟಿರುವುದು ಇದು ಆರಂಭ ಮಾತ್ರವಾಗಿದೆ ಎಂದಿದ್ದಾರೆ. ಸುದೀಪ್ ಅವರ ಈ ಒಂದು ಮಾತು ಕೇಳಿ ಮನೆ ಮಂದಿ ಶಾಕ್ ಆಗಿದ್ದಾರೆ.

    ವೈಲ್ಡ್ ಕಾರ್ಡ್ ಎಂಟ್ರಿ ಇದು ಆರಂಭ ಮಾತ್ರ ಎಂದು ಹೇಳುವ ಮೂಲಕವಾಗಿ ಇನ್ನು ಹಲವರು ಬರಲಿದ್ದಾರೆ ಎನ್ನುವ ಸೂಚನೆಯನ್ನು ಕೊಟ್ಟಿದ್ದಾರೆ. ಒಂಟಿ ಮನೆಗೆ ಘಟಾನುಘಟಿ ಸ್ಫರ್ಧಿಗಳು ಬರಲಿದ್ದಾರೆ ಎನ್ನುವ ಸೂಚನೆಯನ್ನು ಸುದೀಪ್ ನೀಡಿದ್ದಾರೆ. ಸುದೀಪ್ ಅವರ ಮಾತನ್ನು ಕೇಳಿ ಮನೆಯ ಸ್ಪರ್ಧಿಗಳಿಗೆ ನಡುಕ ಶುರುವಾದಂತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತಾಗಿ ನೆಟ್ಟಿಗರು ಚರ್ಚೆ ಮಾಡಲು ಪ್ರಾರಂಭಿಸಿದ್ದಾರೆ.

  • ಸರಿಯಾದ ಹುಲಿ ಬಂದ್ರೆ ‘ಹೆಬ್ಬುಲಿ’ ಓಡಿ ಹೋಗ್ತಾರೆ – ವಿನಯ್ ಗುರೂಜಿ ವಿರುದ್ಧ ಸುದೀಪ್ ಅಭಿಮಾನಿಗಳು ಗರಂ

    ಸರಿಯಾದ ಹುಲಿ ಬಂದ್ರೆ ‘ಹೆಬ್ಬುಲಿ’ ಓಡಿ ಹೋಗ್ತಾರೆ – ವಿನಯ್ ಗುರೂಜಿ ವಿರುದ್ಧ ಸುದೀಪ್ ಅಭಿಮಾನಿಗಳು ಗರಂ

    ಬೆಂಗಳೂರು: ಒಂದಿಲ್ಲೊಂದು ವಿಡಿಯೋ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುವ ಅವಧೂತ ವಿನಯ್ ಗುರೂಜಿ ಇದೀಗ ಸ್ಯಾಂಡಲ್‍ವುಡ್ ನಟರೊಬ್ಬರನ್ನು ಅಪಹಾಸ್ಯ ಮಾಡಿದ್ದಾರೆ.

    ಹೌದು. ಚಿಕ್ಕಮಗಳೂರು ಮೂಲದ ವಿಜಯ್ ಗುರೂಜಿ ಈ ಬಾರಿ ಸ್ಯಾಂಡಲ್‍ವುಡ್‍ನ ಕಿಚ್ಚ ಸುದೀಪ್ ಅವರನ್ನು ಅಪಹಾಸ್ಯ ಮಾಡಿದ್ದಾರೆ. ಈ ಮೂಲಕ ಕಿಚ್ಚನ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಗುರೂಜಿ ಹೇಳಿದ್ದೇನು..?
    ಸುದೀಪ್ ಸಿನಿಮಾ ನೋಡಿ ರೋಮ ಎಲ್ಲ ಎದ್ದು ನಿಲ್ಲುತ್ತೆ ಅಂತ ಹುಡುಗರು ಹೇಳುತ್ತಾರೆ. ಅವನು ಮಾಣಿಕ್ಯ- ಹೆಬ್ಬುಲಿ ಅಂತೆ. ಸರಿಯಾದ ಹುಲಿ ಬಂದ್ರೆ ಓಡಿಹೋಗುತ್ತಾರೆ ಎಂದು ಗುರೂಜಿ ಅಪಹಾಸ್ಯ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಸುದೀಪ್ ಅವರನ್ನು ಅಪಹಾಸ್ಯ ಮಾಡಿದ್ದಕ್ಕೆ ಕಿಚ್ಚ ಫ್ಯಾನ್ಸ್, ಗುರೂಜಿ ವಿರುದ್ಧ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

    ನಾಗಾರಾಧನೆ ಬಗ್ಗೆ ಅವಹೇಳನ:
    ಈ ಹಿಂದೆ ವಿನಯ್ ಗುರೂಜಿ ಕರಾವಳಿಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಇನ್ನೊಬ್ಬರಿಗೆ ಅಡ್ಡ ಬೀಳಬೇಕಾದರೆ (ಕಾಲಿಗೆ ಬೀಳಬೇಕಾದರೆ) ಯಾಕೆ ಬೀಳಬೇಕು? ಅವನು ಏನು? ನಾನು ಏನು? ಎಂದು ಯೋಚನೆ ಮಾಡಿ. ಪೂಜೆ ಎಂದರೆ ಏನು? ಏಕೆ ಪೂಜೆ ಮಾಡಬೇಕು? ಅದರಿಂದ ಏನಾಗುತ್ತದೆ ಎಂದು ತಿಳಿದುಕೊಂಡು ಪೂಜೆ ಮಾಡಿ. ನಾಗಮಂಡಲಕ್ಕಾಗಿ ಕೆಲವರು 2- 3 ಕೋಟಿ ರೂ. ಖರ್ಚು ಮಾಡುತ್ತಾರೆ. ನಾಗಮಂಡಲಕ್ಕೆ ಮಾಡುವ ಕೋಟಿ ಕೋಟಿ ಖರ್ಚಿನಲ್ಲಿ ಒಳ್ಳೆಯ ರಸ್ತೆ ಮಾಡಬಹುದು ಎಂದು ಹೇಳಿದ್ದರು. ಹೀಗೆ ನಾಗಾರಾಧನೆ ಮತ್ತು ಭೂತಾರಾಧನೆಯನ್ನು ಅವಹೇಳನಗೈದಿರುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

    ಅಲ್ಲದೆ ತುಳುನಾಡಿನ ಭೂತಗಳು ಬ್ರಾಹ್ಮಣರ ಮನೆಯಲ್ಲಿ ಇಡ್ಲಿ ಸಾಂಬಾರ್ ಸ್ವೀಕರಿಸಿದರೆ, ಶೆಟ್ರ ಮನೆಯಲ್ಲಿ ಕೋಳಿ ಸ್ವೀಕಾರ ಮಾಡುತ್ತದೆ. ಇದೇನು ಭೂತಗಳಲ್ಲೂ ವೈರುಧ್ಯ, ತಾರತಮ್ಯ ಇದೆಯೇ? ದೇವರಿರುವುದು ನಮ್ಮಲ್ಲಿ ಶ್ರದ್ಧೆ ತರಿಸಲು ಹೊರತು ಅಂಧ ವಿಶ್ವಾಸಗಳಿಗಲ್ಲ ಎಂದು ವ್ಯಂಗ್ಯವಾಡಿದ್ದರು. ವಿನಯ್ ಗುರೂಜಿಯ ಈ ಮಾತುಗಳ ಬಗ್ಗೆ ಕರಾವಳಿಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿತ್ತು.

  • ವಾಲ್ಮೀಕಿ ಸಮುದಾಯದ ಪ್ರತಿಭಟನೆಗೆ ನಟ ಸುದೀಪ್ ಬೆಂಬಲ

    ವಾಲ್ಮೀಕಿ ಸಮುದಾಯದ ಪ್ರತಿಭಟನೆಗೆ ನಟ ಸುದೀಪ್ ಬೆಂಬಲ

    ಬೆಂಗಳೂರು: ನಗರದ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ವಾಲ್ಮೀಕಿ ಸಮುದಾಯದ ಪ್ರತಿಭಟನೆಗೆ ನಟ ಕಿಚ್ಚ ಸುದೀಪ್ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ವಿಡಿಯೋ ಮಾಡಿರುವ ನಟ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಪರಿಶಿಷ್ಠ ಪಂಗಡದವರಿಗೆ ಶೇ.7.5ರಷ್ಟು ಮಿಸಲಾತಿಗೆ ಒತ್ತಾಯಿಸಿ ಧರಣಿ ನಡೆಯುತ್ತಿದ್ದು, ಸ್ವಾಮೀಜಿ ಹಾಗೂ ಸ್ನೇಹಿತರಿಗೆ ನನ್ನ ಬೆಂಬಲವಿದೆ ಎಂದು ಸುದೀಪ್ ಹೇಳಿದ್ದಾರೆ. ಇದನ್ನೂ ಓದಿ: ಸ್ವಾಮೀಜಿ ಒಪ್ಪಿದ್ರೆ ಈಗಲೇ ರಾಜೀನಾಮೆ ಕೊಡುತ್ತೇನೆ- ಶ್ರೀರಾಮುಲು

    ವಿಡಿಯೋದಲ್ಲೇನಿದೆ?
    ಶ್ರೀ ಪರಮಪೂಜ್ಯ ಪ್ರಸನ್ನಾನಂದ ಮಹಾಸ್ವಾಮಿಗಳು 16 ದಿನಗಳಿಂದ ನೂರಾರು ಮೈಲಿ ಪಾದಯಾತ್ರೆ ಮಾಡಿ ಇಂದು ಬೆಂಗಳೂರಿಗೆ ತಲುಪಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯಕ್ಕೋಸ್ಕರ ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಈ ಕೆಲಸ ಮಾಡಿದ್ದಾರೆ. ಇದನ್ನು ಒಂದು ಒಳ್ಳೆಯ ಛಲ ಎಂದರೆ ತಪ್ಪಾಗಲ್ಲ. ಅದಕ್ಕೆ ಸಾವಿರಾರು ಜನ ಹೆಜ್ಜೆಗೆ ಹೆಜ್ಜೆ ಇಟ್ಟು ಒಂದು ಆನೆ ಬಲ ಕೊಟ್ಟಿದ್ದೀರಿ. ಇದಕ್ಕೆ ಸರ್ಕಾರ ಆದಷ್ಟು ಬೇಗ ಸ್ಪಂದಿಸಿ ಒಂದು ಒಳ್ಳೆಯ ಪರಿಹಾರ ನೀಡುತ್ತದೆ ಎಂಬ ನಂಬಿಕೆಯಿಂದೆ. ಸ್ವಾಮಿಗಳು ಹಾಗೂ ಸ್ನೇಹಿತರೇ ನಿಮಗೆ ನನ್ನ ಬೆಂಬಲ ಕೂಡ ಇದೆ ಎಂದು ಹೇಳುತ್ತಾ, ಆ ಎಲ್ಲಾ ವಿದ್ಯಾರ್ಥಿಗಳ ಪರವಾಗಿ ನಾನು ನಿಮಗೆ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳಿದ್ದಾರೆ.

  • ಕಿಚ್ಚ ದಬಾಂಗ್‍ಗೆ ಹೋದರೆ ಬಿಲ್ಲಾರಂಗನ ಕತೆಯೇನು?

    ಕಿಚ್ಚ ದಬಾಂಗ್‍ಗೆ ಹೋದರೆ ಬಿಲ್ಲಾರಂಗನ ಕತೆಯೇನು?

    ಪೈಲ್ವಾನ್ ಸಿನಿಮಾ ಮುಗಿಸಿ ಕೋಟಿಗೊಬ್ಬ-3 ಸಿನಿಮಾದ ಶೂಟಿಂಗ್‍ನಲ್ಲಿ ತೊಡಗಿಕೊಂಡಿರುವ ಸುದೀಪ್ ಮುಂದಿನ ಸಿನಿಮಾ ಯಾವುದು? ರಂಗಿತರಂಗ, ರಾಜರಥ ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನದಲ್ಲಿ ‘ಬಿಲ್ಲಾರಂಗ’ದಲ್ಲಿ ನಟಿಸುತ್ತಾರೆ ಅನ್ನೋದು ಈಗಾಗಲೇ ಹೊರಬಿದ್ದಿರುವ ವಿಚಾರ. ಇದಕ್ಕೂ ಮುಂದೆ ಸರಿಸುಮಾರು ಎಂಭತ್ತು ದಿನಗಳ ಡೇಟ್ಸ್ ಅನ್ನು ದಬಾಂಗ್-3 ಗಾಗಿ ಸುದೀಪ್ ನೀಡಿದ್ದಾರೆ. ಸಲ್ಮಾನ್ ಖಾನ್ ನಟನೆಯ ಈ ಸಿನಿಮಾವನ್ನು ಪ್ರಭುದೇವಾ ನಿರ್ದೇಶಿಸುತ್ತಿದ್ದು, ಇದರಲ್ಲಿ ಸುದೀಪ್ ಅವರಿಗೆ ಹೀರೋಗೆ ಸರಿಸಮನಾಗಿರುವ ವಿಲನ್ ಪಾತ್ರ ಎಂದು ಹೇಳಲಾಗುತ್ತಿದೆ.

    ಕನ್ನಡದಲ್ಲಿ ಸೂಪರ್ ಸ್ಟಾರ್‍ಗಳಾಗಿರುವ ಸುದೀಪ್, ಉಪೇಂದ್ರರಂಥಾ ನಟರು ಪರಭಾಷೆಗಳಲ್ಲಿ ವಿಲನ್ನುಗಳಾಗಿ ಹೆಸರು ಮಾಡುತ್ತಿರೋದು ವಿಚಿತ್ರವಾದರೂ ವಿಶೇಷವಾಗಿದೆ. ಅಂದಹಾಗೆ ಸುದೀಪ್ ಹಾಲಿವುಡ್ ಸಿನಿಮಾವೊಂದರಲ್ಲಿ ನಟಿಸುವುದಾಗಿ ಸುದ್ದಿಯಾಗಿತ್ತಲ್ಲಾ? ಅದು ಖುದ್ದು ಸುದೀಪ್ ಅವರ ಕಾರಣಕ್ಕೇ ಒಮ್ಮೆ ಮುಂದೂಡಲಾಗಿದೆಯಂತೆ.

    ಈಗ ದಬಾಂಗ್-3ಗಾಗಿ ಎಂಭತ್ತು ದಿನ ಡೇಟ್ಸ್ ಕೊಟ್ಟಿರುವ ಸುದೀಪ್ ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಾರಾ ಇಲ್ಲವಾ ಅನ್ನೋದು ಇದೇ ಏಪ್ರಿಲ್‍ನಲ್ಲಿ ಗೊತ್ತಾಗಲಿದೆಯಂತೆ. ಒಂದು ವೇಳೆ ಹಾಲಿವುಡ್ ಸಿನಿಮಾದಲ್ಲಿ ನಟಿಸುವುದು ಪಕ್ಕಾ ಆದರೆ ಕನ್ನಡದ ಬಿಲ್ಲಾರಂಗ ಶುರುವಾಗೋದು ಲೇಟು. ಅಲ್ಲಿಗೆ 2019ರಲ್ಲಿ ಪೈಲ್ವಾನ್ ಮತ್ತು ಕೋಟಿಗೊಬ್ಬ-3 ರಿಲೀಸಾದರೆ, 2020ರಲ್ಲಿ ಸುದೀಪ್ ನಟನೆಯ ಯಾವ ಕನ್ನಡ ಸಿನಿಮಾಗಳೂ ಬಿಡುಗಡೆಯಾಗೋದು ಡೌಟು!