Tag: kichcha Sudeepa

  • ನನ್ನ ಮೇಲೆ 15 ಮಂದಿ ರಾಡ್‌ನಿಂದ ಹಲ್ಲೆ ಮಾಡಿದ್ರು- ಸುದೀಪ್ ಅಭಿಮಾನಿ

    ನನ್ನ ಮೇಲೆ 15 ಮಂದಿ ರಾಡ್‌ನಿಂದ ಹಲ್ಲೆ ಮಾಡಿದ್ರು- ಸುದೀಪ್ ಅಭಿಮಾನಿ

    ಉಡುಪಿ: ನಾನು ಕಿಚ್ಚ ಸುದೀಪ್ ಅವರ ಅಭಿಮಾನಿ. ಅವರ ಪರ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸುದೀಪ್ ಅಭಿಮಾನಿ ಕೋಟ ರತ್ನಾಕರ ಪೂಜಾರಿ ಹೇಳಿಕೆ ಕೊಟ್ಟಿದ್ದಾರೆ.

    ಘಟನೆ ಕುರಿತು ಪ್ರತಿಕ್ರಿಯಿಸಿದ ರತ್ನಾಕರ ಪೂಜಾರಿ, ಸುದೀಪ್ ಅವರ ಬಗ್ಗೆ ಗುರೂಜಿ ಮಾತನಾಡಿದ್ದನ್ನು ಫೇಸ್‍ಬುಕ್‍ನಲ್ಲಿ ಶೇರ್ ಮಾಡಿದ್ದೆ. ಆ ನಂತರ ಸುದೀಪ್ ಅವರಿಗೆ ಬೆಂಬಲವಾಗಿ ಬಂದ ಬರಹ, ಪೋಸ್ಟರ್ ಹಾಕಿಕೊಂಡು ಬೆಂಬಲ ನೀಡಿದ್ದೆ. ಈ ಒಂದೇ ಕಾರಣಕ್ಕೆ ನನ್ನ ಮೇಲೆ ಹಲ್ಲೆಯಾಗಿದೆ. ಕಬ್ಬಿಣದ ರಾಡ್ ನಿಂದ ನನ್ನ ಮೇಲೆ 15 ಮಂದಿ ಹಲ್ಲೆ ಮಾಡಿದ್ದಾರೆ. ಕಾಲು ಮುರಿತಕ್ಕೊಳಗಾಗಿದ್ದು, ತಲೆಗೆ ಕೊಡುತ್ತಿದ್ದ ಪೆಟ್ಟು ಕೈಗೆ ಬಿದ್ದಿದ್ದರಿಂದ ಪ್ರಾಣ ಉಳಿದಿದೆ ಎಂದು ಹೇಳಿದ್ದಾರೆ.

    ಐಸಿಯುನಿಂದ ವಾರ್ಡ್ ಗೆ ಈಗ ಶಿಫ್ಟಾಗಿದ್ದೇನೆ. ನಾನು ಮಾಡಿರುವ ತಪ್ಪಾದ್ರು ಏನು? ದಯವಿಟ್ಟು ನನಗೆ ನ್ಯಾಯ ಕೊಡಿಸಿ. ತಪ್ಪು ಮಾಡಿದವರಿಗೆ ಸೂಕ್ತ ಶಿಕ್ಷೆ ಕೊಡಿಸಿ ಎಂದು ತಿಳಿಸಿದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರತ್ನಾಕರ ಪೂಜಾರಿ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಐಸಿಯುನಿಂದ ಸದ್ಯ ವಾರ್ಡ್ ಗೆ ಶಿಫ್ಟ್ ಮಾಡಿದ್ದಾರೆ.

    ನಡೆದಿದ್ದೇನು?
    ನಟ ಸುದೀಪ್ ಬಗ್ಗೆ ಅವಧೂತ ವಿನಯ್ ಗುರೂಜಿ ಹೇಳಿದ್ದ ಮಾತು ಸುದೀಪ್ ಅಭಿಮಾನಿಗಳನ್ನು ಕೆರಳಿಸಿತ್ತು. ಅದಕ್ಕೆ ಗುರೂಜಿ ಸ್ಪಷ್ಟನೆ ಕೂಡ ಕೊಟ್ಟಿದ್ದರು. ಆದರೆ ಅಭಿಮಾನಿಗಳು ಹಾಗೂ ಗುರೂಜಿ ಬೆಂಬಲಿಗರ ಘರ್ಷಣೆ ಮಾತ್ರ ನಿಂತಿಲ್ಲ.

    ಬ್ರಹ್ಮಾವರ, ಕೋಟತಟ್ಟು ಬಾರಿಕೆರೆ ನಿವಾಸಿ ರತ್ನಾಕರ ಪೂಜಾರಿ ಅವರು ನಟ ಸುದೀಪ್ ಅಭಿಮಾನಿಯಾಗಿದ್ದಾರೆ. ಈ ಹಿಂದೆ ವಿನಯ್ ಗುರೂಜಿ ಅವರು ನಟನ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಬಂದ ಸಂದೇಶವನ್ನು ರತ್ನಾಕರ್ ಅವರು ತಮ್ಮ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದರು.

    ಇದರಿಂದ ಕೋಪಗೊಂಡಿದ್ದ 8-10 ಮಂದಿ ಆರೋಪಿಗಳು ಕುಂದಾಪುರ ಸಂಗಮ್ ಶಾಲೆ ಬಳಿ ರತ್ನಾಕರ್ ಅವರಿಗೆ, ಗುರೂಜಿ ಬಗ್ಗೆ ಫೇಸ್‍ಬುಕ್‍ನಲ್ಲಿ ಅವಹೇಳನ ಮಾಡುತ್ತಿಯಾ? ಎಂದು ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ರಾಡ್‍ನಿಂದ 10 ಮಂದಿ ಹಲ್ಲೆ ಮಾಡಿದ್ದರು. ಈ ಸಂಬಂಧ ಕುಂದಾಪುರ ನಿವಾಸಿ ಗುರುರಾಜ್ ಪುತ್ರನ್(28), ಸಂತೋಷ್ (30), ಪ್ರದೀಪ್(29), ರವಿರಾಜ್ ಈ ನಾಲ್ವರನ್ನು ಬಂಧಿಸಲಾಗಿದೆ.

  • ದುಡ್ಡು ನನಗೆ ಮುಖ್ಯವಲ್ಲ, ಅದು ನನ್ನ ವ್ಯಕ್ತಿತ್ವವೂ ಅಲ್ಲ: ಕಿಚ್ಚ

    ದುಡ್ಡು ನನಗೆ ಮುಖ್ಯವಲ್ಲ, ಅದು ನನ್ನ ವ್ಯಕ್ತಿತ್ವವೂ ಅಲ್ಲ: ಕಿಚ್ಚ

    ಬೆಂಗಳೂರು: ಪೈಲ್ವಾನ್ ಸಿನಿಮಾ ಸಂಪಾದನೆಯ ಬಗ್ಗೆ ಮಾತನಾಡುತ್ತಾ ನನಗೆ ದುಡ್ಡು ಮುಖ್ಯವಲ್ಲ. ಅದು ನನ್ನ ವ್ಯಕ್ತಿತ್ವವೂ ಅಲ್ಲ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯ ಸಂದರ್ಶನದಲ್ಲಿ ಪೈಲ್ವಾನ್ ಸಿನಿಮಾ ನೂರು ಕೋಟಿ ಹಣ ಮಾಡಿದೆ ಅಭಿಮಾನಿಗಳು ಅದರ ಸಂಭ್ರಮಾಚರಣೆ ಮಾಡಲು ಕಾಯುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದುಡ್ಡು ನನಗೆ ಮುಖ್ಯವಲ್ಲ. ಅದು ನನ್ನ ವ್ಯಕ್ತಿತ್ವವೂ ಅಲ್ಲ. ನಾಲ್ಕು ಜನಕ್ಕೆ ತೋರಿಸೋಕೆ ಕೇಕ್ ಕಟ್ ಮಾಡಬೇಕು ಅಷ್ಟೇ. ಸಿನಿಮಾ ಚೆನ್ನಾಗಿ ಇದ್ದರೆ ಸಾಕು ಎಂದು ಹೇಳಿದರು.

    ಸಿನಿಮಾ ಜನರಿಗೆ ಇಷ್ಟವಾದರೆ ಸಾಕು. ಅದು ನೂರು ಕೋಟಿ ದಾಟಿದರೆಷ್ಟು ನೂರು ರೂ. ದಾಟಿದರೆಷ್ಟು. ಈ ರೀತಿಯ ಸಮಾರಂಭಗಳು ನನಗೆ ಇಷ್ಟವಾಗಲ್ಲ. ನಾನು ಈ ರೀತಿಯ ವಿಚಾರದಲ್ಲಿ ಭಾಗಿಯೂ ಆಗಲ್ಲ. ಸಿನಿಮಾ ಚೆನ್ನಾಗಿದೆ. ಜನರು ಥಿಯೇಟರ್ ಗೆ ಬಂದು ಸಿನಿಮಾ ನೋಡುತ್ತಿದ್ದಾರೆ. ಸಿನಿಮಾ ಆಗಲೇ ಗೆದ್ದಿದೆ. ಇದರ ಮುಂದೆ ಹಣವನ್ನು ಲೆಕ್ಕಹಾಕಬಾರದು. ಸಿನಿಮಾವನ್ನು ಜನರು ನೋಡುತ್ತಿರುವುದೇ ಸಂಭ್ರಮ ನಮಗೆ ಎಂದು ಕಿಚ್ಚ ತಿಳಿಸಿದರು. ಇದನ್ನು ಓದಿ: ನಾನು ಟ್ವಿಟ್ಟರನ್ನು ದುರುಪಯೋಗ ಪಡಿಸಿಕೊಂಡಿಲ್ಲ: ಸುದೀಪ್

    ನಮ್ಮ ಜೀವದಲ್ಲಿ ಸಿನಿಮಾ ಎಷ್ಟು ಕೋಟಿ ಸಂಪಾದನೆ ಮಾಡಿತು ಎಂಬುದು ಮುಖ್ಯವಲ್ಲ. ನಾವು ವ್ಯಕ್ತಿಗಳಾಗಿ ಎಲ್ಲಿಗೆ ತಲುಪಿದ್ದೇವೆ ಎಂಬುದನ್ನು ನೋಡಿಕೊಳ್ಳೋಣ. ಈ ಸಮಯದಲ್ಲಿ ಕೋಟಿ ಬಗ್ಗೆ ಮಾತನಾಡುವುದು ಚಿಕ್ಕತನ. ದಾಟಿದರೆ ಖುಷಿಯಾಗಿತ್ತೆ ನಿರ್ಮಾಪಕರಿಗೆ ಒಳ್ಳೆಯಾದಗುತ್ತದೆ. ಮುಂದಿನ ಸಿನಿಮಾ ಇನ್ನೂ ಸ್ವಲ್ಪ ಜಾಸ್ತಿ ದುಡ್ಡು ಹಾಕಿ ಚಿತ್ರ ತೆಗೆಯಲು ಹುಮ್ಮಸ್ಸು ಬರುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

    ಇದೇ ವೇಳೆ ಸಂಗೀತ ನಿರ್ದೇಶಕ ಅರ್ಜನ್ ಜನ್ಯ ಮತ್ತು ರವಿಶಂಕರ್ ಬಗ್ಗೆ ಮಾತನಾಡಿ, ಇಬ್ಬರು ಒಳ್ಳೆಯ ಕಲೆ ಇರುವ ವ್ಯಕ್ತಿಗಳು. ಅವರವರ ಕ್ಷೇತ್ರದಲ್ಲಿ ಒಳ್ಳೆಯ ಸಾಧನೆ ಮಾಡಿದ್ದಾರೆ. ಈ ಇಬ್ಬರು ಕಲಾವಿದರೂ ನನ್ನ ಕೆಂಪೇಗೌಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯ ಆದರು ಎಂದು ಹೇಳಲು ಬಹಳ ಖುಷಿಯಾಗುತ್ತೆ ಎಂದು ಹೇಳಿದರು ಮತ್ತು ಪೈಲ್ವಾನ್ ರೀತಿ ಇನ್ನೊಂದು ಸಿನಿಮಾ ಬಂದರೆ ಮಾಡುತ್ತೇನೆ ಎಂದು ತಿಳಿಸಿದರು.

  • ನಾನು ಟ್ವಿಟ್ಟರನ್ನು ದುರುಪಯೋಗ ಪಡಿಸಿಕೊಂಡಿಲ್ಲ: ಸುದೀಪ್

    ನಾನು ಟ್ವಿಟ್ಟರನ್ನು ದುರುಪಯೋಗ ಪಡಿಸಿಕೊಂಡಿಲ್ಲ: ಸುದೀಪ್

    – ನನಗೆ ಬಳೆಯ ಮೇಲೆ ತುಂಬಾ ಗೌರವವಿದೆ
    – ನಾನು ವೈಯಕ್ತಿವಾಗಿ ಟ್ವೀಟ್ ಮಾಡಿಲ್ಲ

    ಬೆಂಗಳೂರು: ನಾನು ಟ್ವಿಟ್ಟರ್ ನನ್ನು ದುರುಪಯೋಗ ಪಡಿಸಿಕೊಂಡಿಲ್ಲ. ನನಗೆ ಅನ್ನಿಸಿದ್ದನ್ನು ನಾನು ಹೇಳಿದ್ದೇನೆ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯ ವಿಶೇಷ ಸಂದರ್ಶನದಲ್ಲಿ ಮಾತನಾಡುತ್ತಾ ಇತ್ತೀಚೆಗೆ ಅವರು ಮಾಡಿದ ಕೆಲ ಟ್ವೀಟ್‍ಗಳ ಬಗ್ಗೆ ಮಾತನಾಡಿ, ನಾನು ಟ್ವಿಟ್ಟರನ್ನು ದುರುಪಯೋಗ ಪಡಿಸಿಕೊಂಡಿಲ್ಲ. ನನ್ನ ಮನಸ್ಸಿನಲ್ಲಿರುವುದನ್ನು ಅಲ್ಲಿ ಹೇಳಿಕೊಂಡಿದ್ದೇನೆ. ನನಗೆ ಅನ್ನಿಸಿದ್ದನ್ನು ಟ್ವಿಟ್ಟರ್ ಬಿಟ್ಟರೆ ಬೇರೆ ಎಲ್ಲಿ ಹೇಳಿಕೊಳ್ಳಲಿ ಎಂದು ಪ್ರಶ್ನೆ ಮಾಡಿದರು.

    ನಾನು ಯಾರ ತಂಟೆಗೂ ಹೋಗಲ್ಲ. ನನ್ನ ಸಿನಿಮಾ ಬಗ್ಗೆ ನಾನು ಧ್ವನಿ ಎತ್ತದೇ ಇನ್ನು ಯಾರು ಮಾತನಾಡುತ್ತಾರೆ. ನಾನು ನನ್ನ ನಿರ್ಮಾಪಕರ ಪರವಾಗಿ ನಿಂತಿದ್ದೇನೆ. ಅದರಲ್ಲಿ ನನಗೆ ಯಾವುದೇ ತಪ್ಪು ಕಾಣಿಸುತ್ತಿಲ್ಲ. ಟ್ವಿಟ್ಟರ್ ನಲ್ಲಿ ನಾನು ಒಳ್ಳೆಯದನ್ನು ಹೇಳಿದ್ದೇನೆ. ನನಗೆ ಏನ್ ಹೇಳಬೇಕು ಎಂದು ಅನ್ನಿಸಿದ್ದನ್ನು ಹೇಳುತ್ತೇನೆ. ನನ್ನ ಉದ್ದೇಶ ಸರಿಯಲ್ಲ ಎಂದರೆ ನನಗೆ ಗೊತ್ತಾಗುತ್ತೆ. ನಾನು ವೈಯಕ್ತಿವಾಗಿ ಟ್ವೀಟ್ ಮಾಡಿಲ್ಲ. ನನ್ನ ಸಿನಿಮಾಗಾಗಿ ಟ್ವೀಟ್ ಮಾಡಿದ್ದೇನೆ ಎಂದು ಹೇಳಿದರು. ಇದನ್ನು ಓದಿ: ಪೈರಸಿ ಮಾಡೋದಕ್ಕೆ ತುಂಬಾ ಶ್ರಮಪಟ್ಟಿದ್ದಾರೆ, ದೇವ್ರು ಅವ್ರನ್ನು ಚೆನ್ನಾಗಿ ಇಟ್ಟಿರಲಿ: ಸುದೀಪ್

    ಇದೇ ವೇಳೆ ನಾನು ನನ್ನ ಸ್ನೇಹಿತರು ಕೈಗೆ ಹಾಕಿರುವುದು ಖಡ್ಗ ಬಳೆಯಲ್ಲ ಎಂಬ ಟ್ವೀಟ್ ವಿಚಾರವಾಗಿ ಮಾತನಾಡಿದ ಕಿಚ್ಚ, ಕೆಲ ದಿನಗಳ ಹಿಂದೆ ನನಗೆ ಕೆಲ ಸಂದೇಶಗಳು ಬಂದಿದ್ದವು. ಅದರಲ್ಲಿ ನಿಮ್ಮ ಸ್ನೇಹಿತರಿಗೆ ಬಳೆ ಹಾಕಿಕೊಂಡು ಕುಳಿತುಕೊಳ್ಳಲು ಹೇಳಿ ಎಂದು ಕೆಲವರು ಹೇಳಿದ್ದರು. ಅದಕ್ಕಾಗಿ ನಾನು, ನಾವು ಹಾಕಿರುವುದು ಬಳೆಯಲ್ಲ ಖಡ್ಗ ಎಂದು ಹೇಳಿದ್ದೆ ಅಷ್ಟೇ. ನನಗೆ ಬಳೆಯ ಮೇಲೆ ತುಂಬಾ ಗೌರವವಿದೆ. ನನ್ನ ತಾಯಿ ಕೂಡ ಬಳೆ ಹಾಕುತ್ತಾರೆ. ನಾನು ಇಲ್ಲಿ ಯಾರಿಗೂ ಅರ್ಥ ಮಾಡಿಸಲು ಹುಟ್ಟಿಲ್ಲ. ನನ್ನ ಜೀವನ ಚೆನ್ನಾಗಿದ್ದು, ಕನ್ನಡಿ ನನ್ನ ನೋಡಿ ನಗದೆ ಇದ್ದರೆ ಸಾಕು ಎಂದರು.

    ಪೈಲ್ವಾನ್ ಸಿನಿಮಾ ಬಗ್ಗೆ ಮಾತನಾಡಿ, ಮಗುವನ್ನು ಹೆಗಲ ಮೇಲೆ ಕೂರಿಸಿಕೊಂಡು ಹೋಗುವುದು ನನಗೆ ತುಂಬಾ ಇಷ್ಟವಾದ ಸೀನ್. ಕಿಟ್ಟಪ್ಪ ನಮಗೆ ತುಂಬಾ ಒಳ್ಳೆಯ ಸ್ವಾತಂತ್ರ್ಯ ನೀಡಿದ್ದರು. ಹಾಗಾಗಿ ಚೆನ್ನಾಗಿ ನಟನೆ ಮಾಡಲು ಅವಕಾಶ ಸಿಕ್ಕಿತು. ಚಿತ್ರದ ನಾಯಕಿ ಆಕಾಂಕ್ಷಾ ಸಿಂಗ್ ತುಂಬಾ ಒಳ್ಳೆಯ ನಟಿ, ತುಂಬಾ ಚೆನ್ನಾಗಿ ನಟನೆ ಮಾಡಿದ್ದಾರೆ. ಪೈಲ್ವಾನ್ ಎಂಬ ಸಿನಿಮಾ ಜನರ ಎಮೋಷನ್‍ಗಳನ್ನು ಎತ್ತಿ ಹಿಡಿಯುವ ಸಿನಿಮಾ ಎಂದು ತಿಳಿಸಿದರು.

  • ಹಿರಿಯರ ಮಾತಿಗೆ ಬೆಲೆ ಕೊಡಿ- ಸ್ಟಾರ್ ವಾರ್‌ಗೆ ಹ್ಯಾಟ್ರಿಕ್ ಹೀರೋ ಕಿಡಿ

    ಹಿರಿಯರ ಮಾತಿಗೆ ಬೆಲೆ ಕೊಡಿ- ಸ್ಟಾರ್ ವಾರ್‌ಗೆ ಹ್ಯಾಟ್ರಿಕ್ ಹೀರೋ ಕಿಡಿ

    – ‘ಪೈಲ್ವಾನ್’ ಸಿನಿಮಾ ಸೂಪರ್ ಮೇಕಿಂಗ್ ಅಂದ್ರು ಶಿವಣ್ಣ
    – ಕುಟುಂಬದಲ್ಲಿ ಒಂದಾಗಿರೋದನ್ನು ಕಲಿಬೇಕು

    ಬೆಂಗಳೂರು: ಬಾಕ್ಸ್ ಆಫೀಸ್ ಭಾರೀ ಸದ್ದು ಮಾಡುತ್ತಿರುವ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾವ್’ ಸಿನಿಮಾದ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ನಗರದ ಒರಾಯನ್ ಮಾಲ್‍ನಲ್ಲಿ ‘ಪೈಲ್ವಾನ್’ ಸಿನಿಮಾ ವೀಕ್ಷಿಸಿ ಮಾತನಾಡಿದ ಶಿವಣ್ಣ, ಪೈಲ್ವಾನ್ ಸಿನಿಮಾ ಮೇಕಿಂಗ್ ತುಂಬಾ ಚೆನ್ನಾಗಿದೆ. ಸಂಸ್ಕೃತಿಯನ್ನು ಉತ್ತಮವಾಗಿ ಬಿಂಬಿಸಲಾಗಿದೆ. ಸುದೀಪ್ ಅಭಿನಯ ಅದ್ಭುತವಾಗಿದ್ದು, ಪಾತ್ರಕ್ಕೆ ತಕ್ಕಂತೆ ಮೈಕಟ್ಟು ಬೆಳೆಸಿಕೊಂಡಿದ್ದಾರೆ. ನಿರ್ದೇಶಕ ಎಸ್.ಕೃಷ್ಣ ಅವರು ಕೂಡ ಉತ್ತಮ ಸಿನಿಮಾವನ್ನು ಪ್ರೇಕ್ಷಕರಿಗೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಸೈಬರ್ ಕ್ರೈಂಗೆ ಪೈಲ್ವಾನ್ ಚಿತ್ರತಂಡ ದೂರು

    ಎಸ್.ಕೃಷ್ಣ ಅವರು ‘ಕಡ್ಡಿಪುಡಿ’ ಸಿನಿಮಾದಲ್ಲಿ ಕ್ಯಾಮೆರಾಮೆನ್ ಆಗಿ ನನ್ನ ಜೊತೆಗೆ ಕೆಲಸ ಮಾಡಿದ್ದರು. ಆದರೆ ಈಗ ಉತ್ತಮ ನಿರ್ದೇಶಕರಾಗಿ ಬೆಳೆಯುತ್ತಿದ್ದಾರೆ. ಅವರ ಮೊದಲ ಸಿನಿಮಾ ‘ಗಜಕೇಸರಿ’ ಹಾಗೂ ಎರಡನೇ ಸಿನಿಮಾ ಹೆಬ್ಬುಲಿ ಅಭಿಮಾನಿಗಳ ಮನ ಗೆದ್ದಿವೆ. ಈಗ ಅವರ ಮೂರನೇ ಸಿನಿಮಾ ‘ಪೈಲ್ವಾನ್’ ಭರ್ಜರಿ ಸದ್ದು ಮಾಡುತ್ತಿದೆ. ಈ ಮೂಲಕ ತಾವು ಉತ್ತಮ ನಿರ್ದೇಶಕ ಎನ್ನುವುದನ್ನು ಕೃಷ್ಣ ಹಂತ ಹಂತವಾಗಿ ನಿರೂಪಿಸುತ್ತಾ ಬಂದಿದ್ದಾರೆ ಎಂದು ನಿರ್ದೇಶಕರ ಬೆನ್ನು ತಟ್ಟಿದರು. ಇದನ್ನೂ ಓದಿ: ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು ಬರದಿರಿ: ದರ್ಶನ್

    ಸ್ಟಾರ್ ವಾರ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಿವಣ್ಣ ಅವರು, ಕುಟುಂಬದಲ್ಲಿ ಒಬ್ಬರಾಗಿ ಇರಬೇಕು. ನಾನು ದೊಡ್ಡವನು, ಅವರು ದೊಡ್ಡವರು ಎನ್ನುವುದು ಸರಿಯಲ್ಲ. ಕನ್ನಡ ಚಿತ್ರರಂಗದಲ್ಲಿ ಉತ್ತಮ ಸಿನಿಮಾ ಬಂದಾಗ ಮೆಚ್ಚುಗೆ ವ್ಯಕ್ತಪಡಿಸಬೇಕೇ ಹೊರತು ಹೊಟ್ಟೆಕಿಚ್ಚು ಪಡಬಾರದು. ಒಬ್ಬರಿಗೆ ಒಬ್ಬರು ಟಾಂಗ್ ಕೊಡುವುದು ಸರಿಯಲ್ಲ. ಹಿರಿಯನಾಗಿ ಒಂದು ಮಾತು ಹೇಳುತ್ತೇನೆ. ಸರಿಯಾಗಿದ್ದರೆ ಸ್ವೀಕರಿಸಿ, ಹಿರಿಯರ ಮಾತಿಗೆ ಬೆಲೆ ಕೊಡಿ ಎಂದರು.

    ಸಿನಿಮಾ ಪೈರಸಿ ಮಾಡುವುದು ಉತ್ತಮ ನಡೆಯಲ್ಲ. ಹೀಗೆ ಮಾಡಿದವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬೇಕು. ನಿರ್ಮಾಪಕರು ಪ್ರಕರಣ ದಾಖಲಿಸಿ, ತನಿಖೆಗೆ ಒತ್ತಾಯಿಸಬೇಕು ಎಂದು ತಿಳಿಸಿದರು.

    ಪೈಲ್ವಾನ್ ಸಿನಿಮಾದಲ್ಲಿ ಸುದೀಪ್ ನಟಿ ಆಕಾಂಕ್ಷಾ ಸಿಂಗ್ ಅವರನ್ನು ಪ್ರೀತಿಸಿ ಪೋಷಕರ ವಿರೋಧದ ನಡುವೆ ಮದುವೆಯಾಗುತ್ತಾರೆ. ಆಗ ನಟಿಯ ತಂದೆ ಅವಿನಾಶ್ ಅವರು ತುಂಬಾ ನೋವನ್ನು ವ್ಯಕ್ತಪಡಿಸುತ್ತಾರೆ. ಈ ಸನ್ನಿವೇಶದ ಕುರಿತು ಪ್ರತಿಕ್ರಿಯೆ ನೀಡಿದ ಶಿವಣ್ಣ ಅವರು, ಹೆಣ್ಣು ಮಕ್ಕಳು ಇದ್ದವರಿಗೆ ಆ ನೋವು ಏನು ಅಂತ ತಿಳಿಯುತ್ತದೆ. ನನಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಣ್ಣ, ತಾಯಿ, ತಂದೆ ಯಾರೇ ಆಗಿದ್ದರೂ ಅವರಿಗೆ ಹೆಣ್ಣು ಮಕ್ಕಳು ಅಂದ್ರೆ ಅತ್ಯಮೂಲ್ಯ ಸಂಬಂಧ. ನಾನು ನಟಿಸಿದ ‘ತವರಿಗೆ ಬಾ ತಂಗಿ’, ‘ಜೋಗಿ’ ಅಂತಹ ಸಿನಿಮಾಗಳಲ್ಲಿ ಹೆಣ್ಣಿನ ಭಾವನೆಗಳಿವೆ. ಇಂತಹ ಸಿನಿಮಾಗಳು ಪ್ರೇಕ್ಷಕರ ಮನ ಗೆಲ್ಲುತ್ತವೆ ಎಂದು ತಿಳಿಸಿದರು.

    ನಟನಿಗೆ ವಯಸ್ಸು ಮುಖ್ಯವಲ್ಲ. ಪಾತ್ರಕ್ಕೆ ತಕ್ಕಂತೆ ಬದಲಾಗುವ ಪವರ್ ಇರಬೇಕು. ಇಂತಹ ಬದಲಾವಣೆ ನನ್ನಿಂದ ಆಗಿದೆ ಎಂದು ಹೇಳುವುದು ಸರಿಯಲ್ಲ. ‘ಭಜರಂಗಿ’ ಸಿನಿಮಾದಲ್ಲಿ ಕೊನೆಯ ಸೀನ್‍ನಲ್ಲಿ ಮೈಕಟ್ಟು ತೋರಿಸಿದ್ದೇನೆ. ಅಗತ್ಯವಿರುವ ಸೀನ್‍ಗಳಲ್ಲಿ ಮಾತ್ರ ಮೈಕಟ್ಟು ತೋರಿಸಬೇಕು. ಕಿಚ್ಚ ಸುದೀಪ್ ಹಾಗೂ ದುನಿಯಾ ವಿಜಯ್ ಅವರು ಕೂಡ ತಮ್ಮ ಸಿನಿಮಾಗೆ ತಕ್ಕಂತೆ ಮೈಕಟ್ಟು ಬೆಳೆಸಿಕೊಳ್ಳಲು ಹಾರ್ಡ್ ವರ್ಕೌಟ್ ಮಾಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಪೈಲ್ವಾನ್ ರೀತಿಯ ಚಿತ್ರಕಥೆ ಬಂದರೆ ಖಂಡಿತ ನಟಿಸುತ್ತೇನೆ. ನಾನು ಫಿಟ್ ಆಗಿರಲು ಬಯಸುತ್ತೇನೆ. ನನಗೆ ಶಸ್ತ್ರಚಿಕಿತ್ಸೆ ಆಗಿದ್ದರೂ ವರ್ಕೌಟ್ ಆರಂಭಿಸಿದ ನಾಲ್ಕು ದಿನಕ್ಕೆ ವೇಟ್ ಲಿಫ್ಟ್ ಮಾಡಲು ಆರಂಭಿಸಿದೆ. ಇಂತಹ ಅದ್ಭುತ ಸಿನಿಮಾ ಮಾಡಲು ನಿರ್ದೇಶಕ ಕೃಷ್ಣ ಹೆಚ್ಚು ಶ್ರಮಪಟ್ಟಿದ್ದಾರೆ ಎಂದು ತಿಳಿಸಿದರು.

  • ನಾಳೆ ಪೈಲ್ವಾನ್ ಆಡಿಯೋ ರಿಲೀಸ್ ಆಗುವುದಿಲ್ಲವಂತೆ!

    ನಾಳೆ ಪೈಲ್ವಾನ್ ಆಡಿಯೋ ರಿಲೀಸ್ ಆಗುವುದಿಲ್ಲವಂತೆ!

    ಬೆಂಗಳೂರು: ನಾಳೆ ಅಂದರೆ ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿಯೇ ಪೈಲ್ವಾನ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯೋದಾಗಿ ಘೋಷಿಸಲಾಗಿತ್ತು. ಇದಕ್ಕಾಗಿ ಭರ್ಜರಿ ತಯಾರಿ ಕೂಡಾ ನಡೆದಿತ್ತು. ಕಿಚ್ಚ ಸುದೀಪ್ ಅಭಿಮಾನಿಗಳು ಕೂಡಾ ಚಿತ್ರದುರ್ಗದತ್ತ ಹೊರಡಲನುವಾಗಿದ್ದರು. ಆದರೆ ನಾಳೆ ನಡೆಯ ಬೇಕಿದ್ದ ಈ ಆಡಿಯೋ ಬಿಡುಗಡೆ ಕಾರ್ಯಕ್ರಮ ರದ್ದುಗೊಂಡಿದೆ. ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಪೈಲ್ವಾನ್ ನಿರ್ದೇಶಕ ಕೃಷ್ಣ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.

    ಎಲ್ಲ ತಯಾರಿಯೂ ನಡೆದಿದ್ದರೂ ಕಡೇ ಕ್ಷಣದಲ್ಲಿ ಇಂಥಾ ನಿರ್ಧಾರ ಕೈಗೊಳ್ಳಲು ಕಾರಣವೇನೆಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿಕೊಳ್ಳೋದು ಸಹಜ. ಈ ಬಗ್ಗೆ ನಿರ್ದೇಶಕ ಕೃಷ್ಣ ಸ್ಪಷ್ಟನೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಮೇಘಸ್ಫೋಟ ಸಂಭವಿಸಿ ಉಕ್ಕಿ ಹರಿಯುತ್ತಿರೋ ಕೃಷ್ಣೆ ಉತ್ತರ ಕರ್ನಾಟಕ ಜಿಲ್ಲೆಯನ್ನೇ ಮುಳುಗಿಸಿ ಬಿಟ್ಟಿದೆ. ಅಲ್ಲಿನ ಜನ ಅಕ್ಷರಶಃ ಬದುಕು ಕಳೆದುಕೊಂಡಿದ್ದಾರೆ. ನಮ್ಮ ಜನ ಅಷ್ಟೊಂದು ತಲ್ಲಣಿಸುತ್ತಿರುವಾಗ, ಅಲ್ಲಿ ಜೀವ ಹಾನಿ ಸಂಭವಿಸುತ್ತಿರುವಾಗ ಇಲ್ಲಿ ಪೈಲ್ವಾನ್ ಆಡಿಯೋ ಬಿಡುಗಡೆ ಮಾಡಿ ಸಂಭ್ರಮಿಸೋದು ಸರಿಯಲ್ಲ ಎಂಬ ಕಾರಣದಿಂದ ಈ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಅಂತ ನಿರ್ದೇಶಕ ಕೃಷ್ಣ ಹೇಳಿಕೊಂಡಿದ್ದಾರೆ. ಈ ಬಗ್ಗೆ ಅಭಿಮಾನಿಗಳ್ಯಾರೂ ಬೇಸರಿಸಿಕೊಳ್ಳಲಾರರೆಂಬ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ.

    ನಾಳೆ ಚಿತ್ರದುರ್ಗದಲ್ಲಿ ಅದ್ಧೂರಿಯಾಗಿ ಪೈಲ್ವಾನ್ ಚಿತ್ರದ ಆಡಿಯೋ ಬಿಡುಗಡೆ ನಡೆಯಲಿತ್ತು. ಆದರೆ ಕಿಚ್ಚ ಸುದೀಪ್ ಅವರೇ ಉತ್ತರ ಕರ್ನಾಟಕಕ್ಕೆ ಬಂದೊದಗಿದ ಸ್ಥಿತಿ ಕಂಡು ಮರುಗಿದ್ದಾರೆ. ವೀಡಿಯೋ ಮೂಲಕ ಸಂದೇಶ ರವಾನಿಸಿ ತಮ್ಮ ಅಭಿಮಾನಿಗಳೆಲ್ಲರೂ ಸಂತ್ರಸ್ತ ಜನರ ನೆರವಿಗೆ ಧಾವಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಮಳೆ ದಿನೇ ದಿನೇ ಹೆಚ್ಚುತ್ತಿರೋದರಿಂದ ಉತ್ತರ ಕರ್ನಾಟಕ ಸಂಪೂರ್ಣ ಮುಳುಗಡೆಯಾಗೋ ಸ್ಥಿತಿ ಬಂದೊದಗಿದೆ. ಇಂಥಾ ಸಂದರ್ಭದಲ್ಲಿ ಪೈಲ್ವಾನ್ ಆಡಿಯೋ ಬಿಡುಗಡೆ ಮಾಡಿ ಸಂಭ್ರಮಿಸೋದರಲ್ಲಿ ಅರ್ಥವಿಲ್ಲ ಅನ್ನೋದು ನಿರ್ದೇಶಕ ಕೃಷ್ಣ ಅವರ ಅಭಿಪ್ರಾಯ. ಇದಕ್ಕೆ ಈಗಾಗಲೇ ಉತ್ತರ ಕರ್ನಾಟಕ ಮಂದಿಯತ್ತ ನೆರವಿನ ಹಸ್ತ ಚಾಚುತ್ತಿರುವ ಕಿಚ್ಚನ ಅಭಿಮಾನಿಗಳು ಖಂಡಿತಾ ಸಮ್ಮತಿಸುತ್ತಾರೆಂಬುದರಲ್ಲಿ ಸಂಶಯವೇನಿಲ್ಲ.

  • ದರ್ಶನ್ ಜೊತೆ ಫಿಲ್ಮ್ ಮಾಡಲು ನಾನು ರೆಡಿ: ಸುದೀಪ್

    ದರ್ಶನ್ ಜೊತೆ ಫಿಲ್ಮ್ ಮಾಡಲು ನಾನು ರೆಡಿ: ಸುದೀಪ್

    ಬೆಂಗಳೂರು: ಸ್ಯಾಂಡಲ್ ವುಡ್ ನ ಬಿಗ್ ಸ್ಟಾರ್ ಗಳಾದ ಚಾಲೆಂಜಿಂಗ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರ ಎಂಬ ಅಭಿಮಾನಿಯ ಪ್ರಶ್ನೆಗೆ ಸುದೀಪ್ ಉತ್ತರಿಸಿದ್ದು, ಒಳ್ಳೆಯ ಕಥೆ ಸಿಕ್ಕರೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ.

    ಕನ್ನಡ ಸಿನಿ ರಂಗದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಇಬ್ಬರು ನಾಯಕರ ನಡುವೆ ಸ್ಟಾರ್ ವಾರ್ ನಡೆಯುತ್ತಿದೆ ಎನ್ನಲಾಗಿತ್ತು. ಈ ಕುರಿತು ದರ್ಶನ್ ಅಭಿಮಾನಿಯೊಬ್ಬರು ಸುದೀಪ್ ಅವರಿಗೆ ಟ್ವೀಟ್ ಮಾಡಿದ್ದರು. ಈ ಟ್ವೀಟ್ ನಲ್ಲಿ ದರ್ಶನ್ ಅವರ ಜೊತೆ ಸಿನಿಮಾ ಮಾಡುತ್ತೀರಾ? ಕನ್ನಡದಲ್ಲಿ ನಿಮ್ಮ ನಡುವೆ ಉತ್ತಮ ಸಂಬಂಧವಿಲ್ಲ ಎಂಬ ಮಾಹಿತಿ ಲಭಿಸಿದೆ. ನಾನು ನಿಮ್ಮಿಬ್ಬರ ಅಭಿಮಾನಿಯಾಗಿದ್ದು, ದರ್ಶನ್ ಅವರೊಂದಿಗೆ ಒಂದು ಸಿನಿಮಾ ಮಾಡುತ್ತೀರಾ ಅಣ್ಣ ಎಂದು ಕೇಳಿದ್ದರು.

    ಅಭಿಮಾನಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವ ಸುದೀಪ್ ಈ ಟ್ವೀಟ್ ಗೆ ಉತ್ತರಿಸಿದ್ದು, ದರ್ಶನ್ ಹಾಗೂ ನಾನು ಉತ್ತಮ ಸ್ನೇಹಿತರು. ಇಬ್ಬರನ್ನು ಮೆಚ್ಚಿಸುವ ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ದರ್ಶನ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಸುದೀಪ್ ಅವರ ಈ ಟ್ವೀಟ್ ನೊಂದಿಗೆ ಅಭಿಮಾನಿಗಳಲ್ಲಿದ್ದ ಹಲವು ಸಂದೇಹಗಳು ದೂರವಾಗಿದೆ. ಒಂದೊಮ್ಮೆ ಒಳ್ಳೆಯ ಕಥೆಯೊಂದಿಗೆ ದರ್ಶನ್ ಹಾಗೂ ಸುದೀಪ್ ಸ್ಕ್ರೀನ್ ಶೇರ್ ಮಾಡಿದರೆ ಬಾಕ್ಸ್ ಆಫೀಸ್ ಚಿಂದಿಯಾಗಲಿದೆ. ಅದಷ್ಟು ಬೇಗ ಇಬ್ಬರು ತೆರೆ ಮೇಲೆ ಒಂದಾಗಿ ಕಾಣಿಸಿಕೊಳ್ಳಲಿ ಎಂಬುವುದು ಅಭಿಮಾನಿಗಳು ಆಶಯ ವ್ಯಕ್ತಪಡಿಸಿದ್ದಾರೆ.

    ದರ್ಶನ್ ಜೊತೆ ಸಿನಿಮಾ ಮಾಡ್ತೀರಾ ಎನ್ನುವ ಪ್ರಶ್ನೆಯನ್ನು ಸುದೀಪ್ ಅವರಿಗೆ ಅಭಿಮಾನಿಗಳು ಕೇಳುವುದು ಇದೆ ಮೊದಲಲ್ಲ. 2017ರಲ್ಲಿ ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ನಡೆದ ಫೆಸ್ಟ್ ನಲ್ಲಿ ನಟ ಕಿಚ್ಚ ಸುದೀಪ್ ಭಾಗವಹಿಸಿದ್ದರು. ಈ ವೇಳೆ ಅಭಿಮಾನಿಯೊಬ್ಬರು, ಬಾಸ್ ಸ್ಟ್ರೇಟ್ ಆಗಿ ಕೇಳ್ತಾ ಇದ್ದೀನಿ, ದರ್ಶನ್ ಅವರನ್ನ ನಿಮ್ಮನ್ನ ಒಂದೇ ಮೂವಿಯಲ್ಲಿ ನೋಡೋಕೆ ತುಂಬಾ ಆಸೆ ಇದೆ. ಇಸ್ ಇಟ್ ಪಾಸಿಬಲ್ ಎಂದು ಪ್ರಶ್ನೆ ಹಾಕಿದ್ರು.

    ಈ ಪ್ರಶ್ನೆಗೆ ಸುದೀಪ್, ನಾನು ಚಿಕ್ಕವನಾಗಿರಬೇಕಾದ್ರೆ ನನಗೆ ನಮ್ಮಮ್ಮ ಏನೂ ಇಲ್ಲ ಅಂತ ಹೇಳೇ ಇಲ್ಲ. ನಾನು ಏನ್ ಕೇಳಿದ್ರೂ ನಮ್ ತಾಯಿ ಕೊಡ್ಸೋರು. ಆಗ ನಮ್ಮ ತಾಯಿಗೆ , ಅಮ್ಮ ಸೂರ್ಯ, ಚಂದ್ರ ಯಾಕೆ ಒಟ್ಟಿಗೆ ಕಾಣಿಸಿಕೊಳ್ಳೊಲ್ಲ ಅಂತ ಕೇಳ್ದೆ. ಆವಾಗ ನಮ್ ತಾಯಿ ಹೇಳಿದ್ರು, ಏನ್ಮಾಡ್ಲಿ ಕಂದಾ, ಸೂರ್ಯ ಬಂದಾಗ ಬೆಳಕಾಗುತ್ತೆ, ಚಂದ್ರ ಬಂದಾಗ ಕತ್ತಲಾಗುತ್ತೆ. ಅದು ಅಲ್ಲೇ ಸರಿ, ಇದು ಇಲ್ಲೇ ಸರಿ ಅಂತ ಥ್ಯಾಂಕ್ಯೂ ಹೇಳಿ ಮಾತು ಮುಗಿಸಿದ್ದರು.

    https://www.youtube.com/watch?v=Ya5CZaXCNac

     

  • ಕಿಚ್ಚ ಸುದೀಪ್ – ಶಿವಣ್ಣನ ಕಿಲ್ಲರ್ ‘ದಿ ವಿಲನ್’ ಲುಕ್ ನೋಡಿ!

    ಕಿಚ್ಚ ಸುದೀಪ್ – ಶಿವಣ್ಣನ ಕಿಲ್ಲರ್ ‘ದಿ ವಿಲನ್’ ಲುಕ್ ನೋಡಿ!

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಜೊತೆಯಾಗಿ ನಟಿಸುತ್ತಿರುವ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರದ ಮೋಷನ್ ಪೋಸ್ಟರ್ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ.  ಕಿಚ್ಚ ಸುದೀಪ್ ಬರ್ತ್ ಡೇ ಹಿನ್ನೆಲೆಯಲ್ಲಿ ಸುದೀಪ್ ಅಭಿನಯದ ಹೊಸ ಚಿತ್ರಗಳ ಟೀಸರ್, ಮೋಷನ್ ಪೋಸ್ಟರ್ ರಿಲೀಸ್ ಆಗ್ತಿವೆ.

    ‘ರಣ ರಣ ರಣ ರಾಕ್ಷಸರ ರಾಜಾ, ಅಸುರ ಕುಲ ಚಕ್ರಾಧಿಪತೇ….., ವೀರ ಶೂರ ಧೀರಾ… ರಣ ರಣ ರಂಗಾಧಿಪತೇ….., ರಾವಣಾ, ರಾವಣಾ, ರಾವಣಾ’ ಎಂದು ದಿ ವಿಲನ್ ಮೋಷನ್ ಪೋಸ್ಟರ್ ಅಂತ್ಯವಾಗುತ್ತದೆ.

    https://youtu.be/TWI7WeA2BPc

    ಮೋಷನ್ ಪೋಸ್ಟರ್ ನಲ್ಲಿರುವ ಸುದೀಪ್, ಶಿವಣ್ಣ ಲುಕ್ ಈ ಜೋಡಿಯದ್ದು ಕಿಲ್ಲರ್ ಕಾಂಬಿನೇಷನ್ ಎಂಬಂತೆ ಭಾಸವಾಗುತ್ತಿದೆ. ಅದರಲ್ಲೂ ಶಿವಣ್ಣ ಮುಖದಿಂದ ಸುದೀಪ್ ಮುಖವಾಡ ಹಾಗೂ ಸುದೀಪ್ ಮುಖದಿಂದ ಶಿವಣ್ಣನ ಮುಖವಾಡ ಕಳಚಿ ಬೀಳುವಾಗಂತೂ ನೋಡುಗರಿಗೆ ರೋಮಾಂಚಕಾರಿ ಅನುಭೂತಿ ಸಿಗುತ್ತದೆ.

    ನಿನ್ನೆಯಷ್ಟೇ ರಾಜು ಕನ್ನಡ ಮೀಡಿಯಂ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಟ್ವಿಟ್ಟರ್, ಫೇಸ್‍ಬುಕ್ ಸೇರಿದಂತೆ ಎಲ್ಲಾ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

    ಕಿಚ್ಚ-ಶಿವಣ್ಣ ಕಾಂಬಿನೇಷನ್ ಅಭಿಮಾನಿಗಳಿಗೆ ಇಬ್ಬರು ಮೇರು ನಟರ ದಿ ವಿಲನ್ ಚಿತ್ರ ಕಣ್ಣಿಗೆ ಹಬ್ಬ ನೀಡೋದಂತೂ ಸುಳ್ಳಲ್ಲ. ಇದರ ಜೊತೆಗೆ ಅಭಿಮಾನಿಗಳೂ ಟ್ವಿಟ್ಟರ್ ನಲ್ಲಿ ತಾವೇ ತಯಾರಿಸಿದ ಕೆಲವು ವೀಡಿಯೋಗಳನ್ನು ಅಪ್ ಲೋಡ್ ಮಾಡುತ್ತಿದ್ದಾರೆ.