Tag: kichcha Sudeepa

  • ನಟ ಸುದೀಪ್ ಪ್ರಚಾರಕ್ಕೆ ಮಹತ್ವ ಕೊಡಬೇಕಿಲ್ಲ, ನಟರನ್ನ ನಾನು ದುರುಪಯೋಗಪಡಿಸಿಕೊಳ್ಳಲ್ಲ: ಹೆಚ್‌ಡಿಕೆ

    ನಟ ಸುದೀಪ್ ಪ್ರಚಾರಕ್ಕೆ ಮಹತ್ವ ಕೊಡಬೇಕಿಲ್ಲ, ನಟರನ್ನ ನಾನು ದುರುಪಯೋಗಪಡಿಸಿಕೊಳ್ಳಲ್ಲ: ಹೆಚ್‌ಡಿಕೆ

    ಬೆಂಗಳೂರು: ನಟ ಸುದೀಪ್ (Kichcha Sudeepa) ಅವರು ಸಿಎಂ ಬೊಮ್ಮಾಯಿ (BasavarajBommai) ಪರ ಪ್ರಚಾರ ಮಾಡೋದ್ರಿಂದ ನಮಗೇನು ತೊಂದರೆ ಇಲ್ಲ. ಸುದೀಪ್‌ ಪ್ರಚಾರಕ್ಕೆ ಹೆಚ್ಚು ಮಹತ್ವ ಕೊಡಬೇಕಿಲ್ಲ ಅಂತಾ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ.

    ನಟ ಸುದೀಪ್ ಬೆಂಬಲದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹಿಂದಿನಿಂದಲೂ ವಿಶ್ವಾಸದ ಮೇಲೆ ಹಲವು ನಟರು ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೋಗ್ತಾರೆ, ಅದು ಮಾಮೂಲಿಯಾಗಿ ನಡೆಯುತ್ತಿದೆ. ಬೊಮ್ಮಾಯಿ ಮೇಲಿನ ವಿಶ್ವಾಸದಲ್ಲಿ ಸುದೀಪ್ ಪ್ರಚಾರ ಮಾಡ್ತೀನಿ ಅಂತಾ ಹೇಳಿದ್ದಾರೆ. ಇದು ಅವರ ನಡುವೆ ಇರುವ ವೈಯಕ್ತಿಕ ಸಂಬಂಧಗಳು. ಅದಕ್ಕೆ‌ ಹೆಚ್ಚು ಮಹತ್ವದ ಕೊಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಖಾಸಗಿ ವಿಡಿಯೋ ಲೀಕ್ ಬೆದರಿಕೆ ಪತ್ರ ಬರೆದದ್ದು ಚಿತ್ರರಂಗದವರೆ : ಸುದೀಪ್

    ಬಿಜೆಪಿ ಅವರು ಅಭಿವೃದ್ಧಿ ಮಾಡುವುದರಲ್ಲಿ ವಿಫಲರಾಗಿದ್ದಾರೆ. ಈ ರೀತಿ ಮಾಡಿಯೇ ಚುನಾವಣೆಯಲ್ಲಿ ಮತ ಪಡೆಯೋಕೆ ಮುಂದಾಗಿದ್ದಾರೆ. ಇದ್ಯಾವುದೂ ವರ್ಕ್ ಆಗಲ್ಲ. ನಟರನ್ನ ನೋಡೋಕೆ ಜನ ಬರ್ತಾರೆ. ಅಭಿಮಾನಿಗಳು ಜೈಕಾರ ಹಾಕ್ತಾರೆ, ‌ಶಿಳ್ಳೆ ಹೊಡೆಯುತ್ತಾರೆ. ನಟರು ಅನೇಕರ ಪರ ಪ್ರಚಾರಕ್ಕೆ ಹೋಗ್ತಾರೆ. ಕಾಂಗ್ರೆಸ್ ಪರವೂ ಹೋಗ್ತಾರೆ, ಬಿಜೆಪಿಗೂ ಹೋಗ್ತಾರೆ. ಬೇರೆ ಬೇರೆ ಕಡೆ ಹೋಗ್ತಾರೆ. ನಟರಲ್ಲಿ ಸ್ಥಿರತೆ ಇಲ್ಲ. ವೈಯಕ್ತಿಕ ಬಾಂಧವ್ಯ, ಸ್ನೇಹದ ಮೇಲೆ ಹೋಗ್ತಾರೆ. ಆದ್ರೆ ಜನ ಅಂತಿಮವಾಗಿ ತೀರ್ಮಾನ ಮಾಡ್ತಾರೆ ಅಂತಾ ಹೇಳಿದ್ದಾರೆ.

    ಜೆಡಿಎಸ್‌ಗೆ ಸ್ಟಾರ್ ಕ್ಯಾಂಪೇನ್ ನನ್ನ ಕಾರ್ಯಕರ್ತರು. ಪಂಚರತ್ನ ಯೋಜನೆಯೇ ಪಕ್ಷದ ಪ್ರಮುಖ ಆಕರ್ಷಣೆ. ಅ ಕಾರ್ಯಕ್ರಮ ಇಟ್ಟುಕೊಂಡು ಜನತೆ ಮುಂದೆ ಹೋಗ್ತೀನಿ. ಅಲ್ಲದೇ ಮುಖ್ಯಮಂತ್ರಿಗಳಾದ ಕೆ.ಚಂದ್ರಶೇಖರ ರಾವ್‌ ಮತ್ತು ಮಮತಾ ಬ್ಯಾನರ್ಜಿ ಅವರು ಕೆಲವು ಕಡೆ ಅವಶ್ಯಕತೆ ಇದ್ದರೆ ಪ್ರಚಾರಕ್ಕೆ ಬರ್ತೀನಿ ಅಂತಾ ಹೇಳಿದ್ದಾರೆ. ಮುಂದೆ ಅದನ್ನ ತೀರ್ಮಾನ ಮಾಡ್ತೀನಿ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: Breaking- ಬಿಜೆಪಿ ಪರವಾಗಿ ಪ್ರಚಾರಕ್ಕೆ ಹೊರಟ ಸುದೀಪ್ : ‘ಮಾಮಾ’ಗಾಗಿ ಇದೆಲ್ಲ ಎಂದ ಕಿಚ್ಚ

    ನಾನು ಯಾವ ಚಿತ್ರ ನಟರನ್ನು ವಯಕ್ತಿಕವಾಗಿ ದುರುಪಯೋಗ ಪಡಿಸಿಕೊಳ್ಳಲ್ಲ. ಅವರು ಸಮಾಜದಲ್ಲಿ ಎಲ್ಲಾ ವರ್ಗಕ್ಕೆ ಸೇರಿದ ಚಿತ್ರನಟರು. ಅವರನ್ನ ಸ್ವಂತಕ್ಕೆ ದುರುಪಯೋಗ ಪಡಿಸಿಕೊಂಡು ಅವರ ಘನತೆ ಗೌರವವನ್ನ ಸ್ಥಿಮಿತ ಮಾಡೋಕೆ‌ ಇಷ್ಟಪಡಲ್ಲ. ನನ್ನ ಕಾರ್ಯಕರ್ತರೇ ಸ್ಟಾರ್ ಕ್ಯಾಂಪೇನ್ ಗಳು. ಅವರೇ ನಮ್ಮ ಪಕ್ಷದ ಪರ ಪ್ರಚಾರ ಮಾಡ್ತಿದ್ದಾರೆ. ಮುಂದೆಯೂ ಮಾಡ್ತಾರೆ ಎಂದಿದ್ದಾರೆ.

  • ಆರ್ಯವರ್ಧನ್ ಮುಗ್ಧರಲ್ಲ ಅನ್ನೋದು ಮನೆಮಂದಿಗೆಲ್ಲ ಪ್ರೂವ್ ಆಯ್ತು!

    ಆರ್ಯವರ್ಧನ್ ಮುಗ್ಧರಲ್ಲ ಅನ್ನೋದು ಮನೆಮಂದಿಗೆಲ್ಲ ಪ್ರೂವ್ ಆಯ್ತು!

    ಬಿಗ್ ಬಾಸ್ (Bigg Boss) ಮನೆಯಲ್ಲಿ ಮುಗ್ಧರು ಯಾರು ಅಂತ ಯಾರಾದರೂ ಕೇಳಿದರೆ ಅದು ಆರ್ಯವರ್ಧನ್ ಗುರೂಜಿ (Aryavardhan Guruji) ಎಂದೇ ಮನೆ ಮಂದಿಯೆಲ್ಲಾ ವೋಟ್ ಹಾಕತ್ತಾ ಇದ್ದರು. ಸುದೀಪ್ (Kichcha Sudeepa) ಕೂಡ ಆರ್ಯವರ್ಧನ್ ಅವರಿಗೆ ಏನು ಅರ್ಥವಾಗುವುದಿಲ್ಲ ಅಂತ ಹೇಳಿದ್ದರು. ವೀಕೆಂಡ್ ವೇದಿಕೆಯಲ್ಲಂತೂ ಗುರೂಜಿ ನಡವಳಿಕೆ ಸಖತ್ ಕಾಮಿಡಿ ಕೊಡುತ್ತಿದೆ. ಆದರೆ ಗುರೂಜಿ ನಿಜವಾಗಿಯೂ ಅಷ್ಟು ಮುಗ್ಧರಾ ಎಂಬುದು ಇದೀಗ ಬಯಲಾಗಿದೆ.

    ಆರ್ಯವರ್ಧನ್‍ಗೆ ಬಿಗ್ ಬಾಸ್ ಸ್ಪೆಷಲ್ ಅವಕಾಶವೊಂದನ್ನು ನೀಡಿದೆ. ಅದು 9 ಟಾಸ್ಕ್ ಇರುತ್ತದೆ. ಆ ಟಾಸ್ಕ್ ನ ಮುಂದಾಳತ್ವವನ್ನು ಆರ್ಯವರ್ಧನ್ ವಹಿಸಿಕೊಳ್ಳಬೇಕು. ಆ 9 ಟಾಸ್ಕ್ ಗಳು ಕೂಡ ಈ ಹಿಂದೆ ಆಡಿರುವಂತದ್ದೇ ಆಗಿದೆ. ಮೊದಲ ಆಟದಲ್ಲಿ ಕಲ್ಲಾಟ ಆಯ್ಕೆ ಮಾಡಿಕೊಂಡಿದ್ದಾರೆ. ಈ ಆಟದಲ್ಲಿ ಸ್ವಿಮ್ಮಿಂಗ್ ಪೂಲ್ (Swimming Pool) ನಲ್ಲಿ ಕಲ್ಲುಗಳನ್ನು ಹುಡುಕುವುದಾಗಿದೆ. ಈ ಆಟಕ್ಕೆ ಆರ್ಯವರ್ಧನ್, ಸೋಮಣ್ಣ (Somanna) ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲಿಯ ತನಕ ಯಾರಿಗೆ ಏನೂ ಅನ್ನಿಸಿರಲಿಲ್ಲ.

    ಈವೆನ್ ಸೋಮಣ್ಣನಿಗೆ ಕೂಡ ಅದು ನೆಗೆಟಿವ್ ಪಾಯಿಂಟ್ ಎಂದು ಅನ್ನಿಸಿ ಇರಲಿಲ್ಲ. ಬದಲಿಗೆ ನಾನು ಗೆಲ್ಲಲಿ ಎಂಬುದು ಅವರಿಗೆ ಇದೆ ಎಂದುಕೊಂಡಿದ್ದರು. ಇತ್ತ ಸ್ವಿಮ್ಮಿಂಗ್ ಪೂಲ್‍ನಲ್ಲಿ ಆಟ ಶುರುವಾದಾಗ ಗುರೂಜಿ ಒಂದಷ್ಟು ಕಲ್ಲುಗಳನ್ನು ಸೋಮಣ್ಣನ ಕಡೆಗೆ ಎಸೆದರು. ಇದನ್ನು ಜಯಶ್ರೀ (Jayashree) ಗಮನಿಸಿದ್ದು, ಗುರೂಜಿ ಅಂದುಕೊಂಡಂತೆಯೇ ಸೋಮಣ್ಣ ಸೋತರು. ಆಗ ಜಯಶ್ರೀಯು ಗುರೂಜಿ ಸ್ಟಾಟರ್ಜಿ ಬಗ್ಗೆ ಮಾತನಾಡಿದ್ದಳು. ಇದನ್ನೂ ಓದಿ: ಬಿಗ್ ಬಾಸ್ ಮನೆ ಕಂಡ ಅಚ್ಚರಿಯ ಕ್ಷಣಗಳು

    ಅವರು ತಾವೂ ಗೆಲ್ಲಬೇಕು ಅಂತ ನೋಡುತ್ತಿದ್ದಾರೆಯೇ ವಿನಃ, ನೀವೂ ಗೆಲ್ಲಲಿ ಎಂಬುದು ಅವರ ಮನಸ್ಸಲ್ಲಿ ಇರಲಿಲ್ಲ. ಈಗ ನೆಕ್ಸ್ಟ್ ನನ್ನ ಆಯ್ಕೆ ಮಾಡಿಕೊಳ್ಳುತ್ತೀನಿ ಎಂದಿದ್ದಾರಲ್ಲ ಆಗ ಬಾಲ್ ಆಟ ಆಕೆ ಮಾಡಿಕೊಳ್ಳುತ್ತಾರೆ. ಯಾಕೆಂದ್ರೆ ಅದರಲ್ಲಿ ಅವರು ಗೆದ್ದಿದ್ದರು, ನಾನು ಸೋತಿದ್ದೆ ಎಂದಿದ್ದಾಳೆ. ಬಿಗ್ ಬಾಸ್ ನೆಕ್ಸ್ಟ್ ಗೇಮ್ ಆಡುವ ಸಮಯ ನೀಡಿದಾಗ ಜಯಶ್ರೀ ಹೇಳಿದ್ದೇ ಪ್ರೂವ್ ಆಯ್ತು. ಆ ಆಟದಲ್ಲಿ ಜಯಶ್ರೀ ಸೋತು, ಗುರೂಜಿ ಮತ್ತೊಂದು ಅವಕಾಶ ನೀಡಿದರು. ಆದರೆ ಅಷ್ಟರಲ್ಲಾಗಲೇ ಓವರ್ ಕಾನ್ಫಿಡೆನ್ಸ್ ಗುರೂಜಿಗೆ ಬಂದಿತ್ತು.

    ಆಗ ಮುಂದಿನ ಆಟ ಕ್ಯಾನ್ ನಿಂದ ಬಾಲ್ ಶಿಫ್ಟ್ ಮಾಡುವುನ್ನು ಆಯ್ಕೆ ಮಾಡಿಕೊಂಡರು. ಅದಕ್ಕೂ ಮತ್ತೆ ಜಯಶ್ರೀಯನ್ನೇ ಆಯ್ಕೆ ಮಾಡಿದರು. ನಿರೀಕ್ಷೆಯಂತೆ ಅವರೇ ಗೆದ್ದರು. ಆದರೆ ಮಾಡಿದ ಸಣ್ಣ ಮಿಸ್ಟೇಕ್ ಆಟದಿಂದ ಔಟ್ ಆದರೂ, ಅಧಿಕಾರ ಮನೆಮಂದಿಗೆ ವೋಟ್ (Vote) ಮಾಡಿ ಅಥವಾ ಒಮ್ಮತದಿಂದ ಆಯ್ಕೆ ಮಾಡುವ ಅವಕಾಶ ಸಿಕ್ಕಿತು. ಇದರಿಂದ ಇಡೀ ಮನೆ ಮಂದಿಗೆ ಗುರೂಜಿ ಏನು, ಅವರ ಟ್ರಿಕ್ಸ್ ಏನು ಎಂಬುದು ಪ್ರೂವ್ ಆಯ್ತು.

    ಜಯಶ್ರೀ ತನ್ನನ್ನು ಮೊದಲ ಬಾರಿ ಆಯ್ಕೆ ಮಾಡಿಕೊಂಡಾಗ ಖುಷಿಯಾದಳು. ನಾನು ಸೋಲುತ್ತೀನಿ ಅಂತ ಗೊತ್ತಿದ್ದರೂ ಬೇಕಂತಲೇ ಮಾಡಿದ್ದಾರೆ ಎಂದುಕೊಂಡಳು. ಆದರೆ ಮತ್ತೊಂದು ಸಲ ಆಯ್ಕೆ ಮಾಡಿದಾಗ ತಮಾಷೆಯಾಗಿ ನೀವೂ ನನ್ನನ್ನ ಆಯ್ಕೆ ಮಾಡಿ, ನಾನು ಗೆದ್ದರೆ ಮತ್ತೆ ನಿಮ್ಮನ್ನೆ ಆಯ್ಕೆ ಮಾಡುತ್ತೀನಿ ಎಂದಿದ್ದಳು. ಅದಾದ ಬಳಿಕ ಮುಂದಿನ ಆಟಕ್ಕೆ ನನ್ನನ್ನು ಆಯ್ಕೆ ಮಾಡಬೇಡಿ ಎಲ್ಲರೂ ಬೇಜಾರು ಮಾಡಿಕೊಳ್ಳುತ್ತಾರೆ. ಇದು ಕೊನೆ ವಾರ ಎಲ್ಲರಿಗೂ ಅವಕಾಶ ಸಿಗಲಿ ಎಂದೇ ಹೇಳಿದ್ದಳು. ಇದನ್ನೂ ಓದಿ: ಸೋನು ಗೌಡ ಪ್ರಕಾರ ಆರ್ಯವರ್ಧನ್‌ ಗುರೂಜಿ ಕಳ್ಳ ಸ್ವಾಮಿ ಅಂತೆ

    Live Tv
    [brid partner=56869869 player=32851 video=960834 autoplay=true]

  • ಸಾನ್ಯ ಒಳ ಉಡುಪಿನ ಬಗ್ಗೆ ಮಾತನಾಡಿದ್ದ ಉದಯ್- ಚಳಿ ಬಿಡಿಸಿದ ಕಿಚ್ಚ

    ಸಾನ್ಯ ಒಳ ಉಡುಪಿನ ಬಗ್ಗೆ ಮಾತನಾಡಿದ್ದ ಉದಯ್- ಚಳಿ ಬಿಡಿಸಿದ ಕಿಚ್ಚ

    ಬಿಗ್‍ಬಾಸ್‍ನಲ್ಲಿ ಸ್ಪರ್ಧಿ ಉದಯ್ ಎಲ್ಲರ ಬಳಿಯೂ ಎಲ್ಲರ ಬಗ್ಗೆ ಮಾತನಾಡಿರುತ್ತಾರೆ. ಹೀಗಾಗಿ ಉದಯ್‍ಗೆ ಮನೆಮಂದಿ ಪೋಸ್ಟ್ ಮಾಸ್ಟರ್ ಎಂದು ಹೆಸರಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಸಾನ್ಯಾ ಜೊತೆ ಸ್ನೇಹದಲ್ಲಿದ್ದಾಗ ಬೆಳೆಸಿಕೊಂಡ ಸಲಿಗೆಯನ್ನು ಕೆಟ್ಟದಾಗಿ ಮಾತನಾಡಿದ್ದನು. ಇದೀಗ ವಾರದ ಕಥೆಯಲ್ಲಿ ಕಿಚ್ಚ ಸುದೀಪ್ ಅವರು ಈ ವಿಚಾರವನ್ನು ಪ್ರಸ್ತಾಪ ಮಡುವ ಮೂಲಕ ಉದಯ್ ಗೆ ಮನದಟ್ಟು ಮಾಡಿಸಿದ್ದಾರೆ.

    ವಾರದ ಕಥೆಯಲ್ಲಿ ಸುದೀಪ್ ಅವರು ಉದಯ್ ಜೊತೆ ಮಾತನಾಡುತ್ತಾ, ಈ ಮನೆಯಲ್ಲಿ ನಿಮಗೊಂದು ಅಡ್ಡ ಹೆಸರಿದೆ ಗೊತ್ತಾ ಎಂದು ಕೇಳುತ್ತಾರೆ. ಆಗ ಉದಯ್ ಇಲ್ಲ ಸರ್ ಎಂದು ಹೇಳುತ್ತಾರೆ. ಹಾಗಾದರೆ ಯಾರಿಗಾದರೂ ಗೊತ್ತಿದ್ದರೆ ಹೇಳಿ ಎಂದಾಗ ಆರ್ಯವರ್ಧನ್, ನನಗೆ ಗೊತ್ತು ಎಂದು ಹೇಳುತ್ತಾ, ಪೋಸ್ಟ್ ಮ್ಯಾನ್ ಕೆಲಸ. ಅವರ ಬಾಯಿ ಸುಮ್ಮನೆ ಇರಲ್ಲ. ಅಲ್ಲಿ ಇಲ್ಲಿ ಹೇಳಿ ಬಿಡುತ್ತಾರೆ. ಜಗಳ ಆಡುವಾಗ ನನ್ನ ಬೇಡ ಹೋಗಿ ಎನ್ನುತ್ತಾರೆ. ಇದಕ್ಕೆ ಬೈಸಿಕೊಂಡು ಇದ್ದಾರೆ ಎಂದು ಹೇಳುತ್ತಾರೆ.

    ಈ ವೇಳೆ ಸುದೀಪ್ ಅವರು, ಉದಯ್ ಅವರೇ ಚೈತ್ರಾ ಬಳಿ ಹೋಗಿ ಸಾನ್ಯಾ ಬಗ್ಗೆ ಅಂದು ಹೇಳಿದ ಮಾತು ಹಾಗೂ ನಂದಿನಿ ಮತ್ತು ಜಶ್ವಂತ್ ಅವರ ರಿಲೇಷನ್ ಶಿಪ್ ಬಗ್ಗೆ ಮಾತನಾಡಿದ್ದು ತುಂಬಾ ಗೊಂದಲಕ್ಕೆ ಕಾರಣವಾಗಿದೆ. ಅದು ಈಗ ಒಂದು ಹಂತಕ್ಕೆ ಬಂದು ನಿಂತಿದೆ. ಜನ ನೋಡಿದ್ದಾರೆ, ನಾವೂ ನೋಡಿದ್ದೀವಿ ನೋಡಿದವರಿಗೆ ಒಂದು ಕ್ಲಾರಿಟಿ ಇದೆ. ಆದರೆ ಮನೆಯವರಿಗೆ ಇನ್ನೂ ಯಾವ ಕ್ಲಾರಿಟಿ ಇಲ್ಲ. ಹೀಗಾಗಿ ನಾನು ಒಂದು ಅವಕಾಶ ಕೊಡ್ತೀನಿ, ಎಲ್ಲಿಂದ, ಯಾಕೆ ಸ್ಟಾರ್ಟ್ ಆಯ್ತು, ಹೇಗೆ ಎಂಡ್ ಆಯ್ತು, ಚೈತ್ರಾ ಅವರ ಬಳಿ ಹೋಗಿ ನೀವೂ ಹೇಳಿದ್ದೇನು ಅನ್ನೋದನ್ನು ಕ್ಲಿಯರ್ ಆಗಿ ಹೇಳಿ ಎಂದಿದ್ದಾರೆ. ಇದನ್ನೂ ಓದಿ: ಬಿಗ್‌ ಬಾಸ್‌ ಮನೆಯಿಂದ ಉದಯ್‌ ಸೂರ್ಯ ಔಟ್

    ಕಿಚ್ಚ ಈ ರೀತಿ ಹೇಳುತ್ತಿದ್ದಂತೆಯೇ ಉದಯ್ ತಬ್ಬಿಬ್ಬಾಗುತ್ತಾರೆ. ಅಲ್ಲದೆ ಪ್ರತಿಕ್ರಿಯಿಸುತ್ತಾ, ಚೈತ್ರಾ ಬಳಿ ಹೋಗಿ ಹೇಳಿದೆ. ಜಶ್ವಂತ್ ಹೋಟೆಲ್ ಊಟಕ್ಕೆ ಹೋಗ್ತಾರೆ. ಇಲ್ಲಿ ಕ್ಯಾಮೆರಾ ಇಲ್ಲದೆ ಇದ್ದಾಗ ಏನೋ ಒಂದು ಆಗಬಹುದು ಎಂದು ಹೇಳಿದೆ ಸರ್ ಅನ್ನುತ್ತಾರೆ. ಆಗ ಸುದೀಪ್, ಸರಿಯಾದ ಕ್ಲಾರಿಟಿ ಸಿಕ್ಕಿಲ್ಲ ಅನ್ನುತ್ತಾ ಮತ್ತೆ ಪ್ರಶ್ನೆ ಮಾಡುತ್ತಾರೆ. ಇಷ್ಟೆ ಆಗಿದ್ದಿದ್ದರೆ ಜಶ್ವಂತ್ ನಿಮ್ಮ ನಡುವೆ ಮಾತುಕತೆಯಾಗುತ್ತಿತ್ತು. ಆದರೆ ಇಲ್ಲಿ ರೂಪೇಶ್ ಹೇಗೆ ಬಂದ್ರು, ಸಾನ್ಯಾ ಹೇಗೆ ಬಂದ್ರು ಅದನ್ನು ಕ್ಲಾರಿಟಿ ಕೊಡಿ ಎಂದಿದ್ದಾರೆ.

    ಮತ್ತೆ ತಡಬಡಾಯಿಸಿದ ಉದಯ್, ಸಾನ್ಯಾ ಅವರ ಬಗ್ಗೆ ಮಾತು ಬಂದಾಗ ನನ್ನ ಮತ್ತು ಸಾನ್ಯಾ ನಡುವೆ ಕ್ಲೋಸ್ ನೆಸ್ ಇತ್ತು. ಅದು ಯಾವ ಮಟ್ಟಿಗೆ ಇತ್ತು ಎಂಬುದನ್ನು ಉದಾಹರಣೆ ಕೊಟ್ಟು ಹೇಳಿದೆ ಎಂದು ತೊದಲುತ್ತಲಕೇ ಉದಯ್ ಹೇಳಿದ್ದಾರೆ. ಆ ಉದಾಹರಣೆಯೇ ತುಂಬಾ ಮುಖ್ಯವಾಗಿದ್ದರಿಂದ ಏನು ಉದಾಹರಣೆ ಕೊಟ್ಟಿ ಹೇಳಿದ್ರಿ ಎಂದು ಸುದೀಪ್ ಪ್ರಶ್ನಿಸಿದ್ದಾರೆ. ಆಗ ಉದಯ್, ಗುರೂಜಿ ಹತ್ರ ನಾನು ಕಲರ್ ಕೇಳಿನೇ ಪ್ರತಿ ದಿನ ಬಟ್ಟೆ ಹಾಕುವುದು. ಒಂದು ದಿನ ನಾನು ಕಲರ್ ಕೇಳುವಾಗ ಸಾನ್ಯಾ ಕೂಡ ನನ್ನ ಪಕ್ಕದಲ್ಲಿ ಇದ್ರು. ಆಗ ನನ್ನನ್ನು ಕೇಳಿದ್ರು. ಆ ಕಲರ್ ದು ಒಳ ಉಡುಪು ತೋರಿಸಿದರು. ಇದನ್ನೂ ಓದಿ: ಬಿಗ್‌ ಬಾಸ್‌: ಜಯಶ್ರೀಗೆ ಮೆಂಟಲ್ ಆಗೋಗ್ತಿಯಾ ಎಂದು ಎಚ್ಚರಿಕೆ ನೀಡಿದ ನಂದು

    ಆಗ ನಾನು ಹೇಳಿದೆ, ಬೇಕಾದರೇ ಗುರೂಜಿ ಹತ್ರ ಹೋಗಿ ತೋರಿಸು ಅವರು ಖುಷಿ ಖುಷಿಯಾಗಿ ಒಪ್ಪಿಕೊಳ್ಳುತ್ತಾರೆ ಎಂದೆ. ಅದಕ್ಕೆ ಅವರು, ಈ ಥರ ಎಲ್ಲಾ ಮಾತನಾಡುವ ಹಾಗಿಲ್ಲ ಅಂತ ನಡೆದ ವಿಚಾರವನ್ನು ತಿಳಿಸಿದ್ದಾರೆ. ಈ ವಿಚಾರದಲ್ಲಿ ಸುದೀಪ್, ಚೈತ್ರಾ ಅವರನ್ನು ಹೊಗಳಿದ್ದಾರೆ. ಉದಯ್ ಅಂದು ಆ ಮಾತು ಹೇಳಿದಾಗ ನೀವು ನಡೆದುಕೊಂಡಿದ್ದು, ನಿಮಗೆ ಹೆಚ್ಚು ಗೌರವ ತಂದುಕೊಟ್ಟಿದೆ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಿಚ್ಚ ಸುದೀಪ್‌ಗೆ ಬ್ಯಾಟ್ ಗಿಫ್ಟ್ ಕೊಟ್ಟ ಜೋಸ್ ಬಟ್ಲರ್

    ಕಿಚ್ಚ ಸುದೀಪ್‌ಗೆ ಬ್ಯಾಟ್ ಗಿಫ್ಟ್ ಕೊಟ್ಟ ಜೋಸ್ ಬಟ್ಲರ್

    ಮುಂಬೈ: ಇಂಗ್ಲೆಂಡ್ ತಂಡದ ಕ್ರಿಕೆಟಿಗ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಬ್ಯಾಟ್‌ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

    2022ರ 15ನೇ ಆವೃತ್ತಿ ಐಪಿಎಲ್‌ನಲ್ಲಿ ತಾವು ಆಡಿದ್ದ ಬ್ಯಾಟ್ ಮೇಲೆ ಸಹಿ ಮಾಡಿ ಅದನ್ನು ಕಿಚ್ಚ ಸುದೀಪ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೆ ಸುದೀಪ್ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಆಟವಾಡಿದ ಫೋಟೋವೊಂದನ್ನು ರಾಜಾಸ್ಥಾನ್ ರಾಯಲ್ಸ್ ತಂಡವು ಟ್ವೀಟ್‌ನಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: ಮುಂಬೈಗೆ 725 ರನ್‍ಗಳ ದಾಖಲೆಯ ಜಯ – ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ 129 ವರ್ಷಗಳ ಬಳಿಕ ರೆಕಾರ್ಡ್ ಬ್ರೇಕ್

    ಇದಕ್ಕೆ ಉತ್ಸಾಹದಿಂದಲೇ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್ ವಿಶೇಷ ವೀಡಿಯೋವೊಂದನ್ನು ಮಾಡಿದ್ದು, ಜೋಸ್ ಬಟ್ಲರ್‌ಗೆ ಧನ್ಯವಾದ ಹೇಳಿದ್ದಾರೆ. ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಸಂಭ್ರಮ ಹಂಚಿಕೊಂಡಿದ್ದಾರೆ. ಅದರೊಂದಿಗೆ ಬ್ಯಾಟ್ ಸಿಗಲು ಸಹಾಯ ಮಾಡಿದ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಕನ್ನಡಿಗ ಕೆ.ಸಿ.ಕಾರ್ಯಪ್ಪ ಹಾಗೂ ರಾಜಸ್ಥಾನ ರಾಯಲ್ಸ್ ತಂಡಕ್ಕೂ ಧನ್ಯವಾದ ಸಲ್ಲಿಸಿದ್ದಾರೆ.

    `ನಿಜಕ್ಕೂ ನನಗೆ ಬಹಳ ಅಚ್ಚರಿಯಾಯಿತು. ನಾನು ಇದನ್ನು ನಿರೀಕ್ಷೆ ಸಹ ಮಾಡಿರಲಿಲ್ಲ. ಮೊದಲಿಗೆ ನಾನು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಇದನ್ನು ಸಾಧ್ಯವಾಗಿಸಿದ ನನ್ನ ಸ್ನೇಹಿತ ಕೆಸಿ ಕಾರ್ಯಪ್ಪಗೂ ಥ್ಯಾಂಕ್ಸ್ ಹೇಳುತ್ತೇನೆ. ವಿಶೇಷವಾಗಿ ಜೋಸ್ ಬಟ್ಲರ್ ಸಲುವಾಗಿ ಈ ವೀಡಿಯೋ ಮಾಡಿದ್ದೇನೆ. ವೈಯಕ್ತಿಕವಾಗಿ ನೀವು ಸಹಿ ಮಾಡಿದಂಥ ಬ್ಯಾಟ್ ಅನ್ನು ನನಗೆ ನೀಡಿದ್ದಕ್ಕೆ ಬಹಳ ಧನ್ಯವಾದ. ಇದನ್ನು ನಾನು ಸ್ವೀಕರಿಸಿದ್ದೇನೆ. ನನಗೆ ಬಹಳ ಸಂತೋಷವಾಗಿದೆ ಎಂದು ಕೃತಜ್ಞತಾ ವೀಡಿಯೋವನ್ನು ಸುದೀಪ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕೊಹ್ಲಿಯ ದಾಖಲೆಯ ರನ್ ಶಿಖರವನ್ನು ಪುಡಿಗಟ್ಟಿದ ಬಾಬರ್ ಅಜಾಮ್‌

    ಈ ಬಾರಿ ಐಪಿಎಲ್ ಸೀಜನ್‌ನಲ್ಲೂ ಜೋಸ್ ಬಟ್ಲರ್ ಭರ್ಜರಿ ಪ್ರದರ್ಶನ ನೀಡಿದ್ದಾರೆ ಎಂದಿರುವ ಸುದೀಪ್ ಖಂಡಿತವಾಗಿ ನಾನು ಇದನ್ನು ಜೋಪಾನವಾಗಿ ಕಾಯ್ದಿಟ್ಟುಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.

    15ನೇ ಆವೃತ್ತಿ ಐಪಿಎಲ್‌ನಲ್ಲಿ ಜೋಸ್ ಬಟ್ಲರ್ ಏಕಾಂಗಿ ಹೋರಾಟದ ಮೂಲಕ ರಾಜಾಸ್ಥಾನ್ ರಾಯಲ್ಸ್ ತಂಡವನ್ನು ಫೈನಲ್ ಪಂದ್ಯದ ವೆರೆಗೆ ಮುನ್ನಡೆಸಿದ್ದರು. ಒಟ್ಟು 15 ಪಂದ್ಯಗಳಲ್ಲಿ 718 ರನ್‌ಗಳನ್ನು ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಗಳಿಸಿಕೊಂಡರು.

  • ಸುದೀಪ್ Vs ದೇವಗನ್ – ಈಗ ಭಾರತದ ತುತ್ತ ತುದಿಯಿಂದ ಬಂತು ಪ್ರತಿಕ್ರಿಯೆ

    ಸುದೀಪ್ Vs ದೇವಗನ್ – ಈಗ ಭಾರತದ ತುತ್ತ ತುದಿಯಿಂದ ಬಂತು ಪ್ರತಿಕ್ರಿಯೆ

    ಶ್ರೀನಗರ: ಹಿಂದಿ ರಾಷ್ಟ್ರಭಾಷೆಯನ್ನಾಗಿ ಬಳಸುವುದರ ಕುರಿತು ಬಾಲಿವುಡ್ ನಟ ಅಜಯ್ ದೇವಗನ್ ಹಾಗೂ ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಅವರ ನಡುವೆ ಟ್ವೀಟ್ ವಾರ್ ನಡೆಯುತ್ತಿರುವ ಬೆನ್ನಲ್ಲೇ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಹಾಗೂ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಹ ಪ್ರತಿಕ್ರಿಯಿಸಿದ್ದು, ಸುದೀಪ್ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

    FotoJet

    ಈ ಕುರಿತು ಮಾತನಾಡಿರುವ ಅವರು, ಭಾಷೆಗಳಿಂದಲೇ ನಮ್ಮ ರಾಜ್ಯಗಳು ರೂಪುಗೊಂಡಿದ್ದು ಹಾಗಾಗಿ ಪ್ರಾದೇಶಿಕ ಭಾಷೆಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಸುದೀಪ್ ಹೇಳಿಕೆ ಸರಿಯಾಗಿದೆ, ಅದನ್ನು ಎಲ್ಲರೂ ಗೌರವಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಐದೈದು ಸರಣಿಯಲ್ಲಿ ಅವತಾರ್ : 13 ವರ್ಷಗಳ ಬಳಿಕ ತೆರೆಗೆ ಬಂದ ಬಾಕ್ಸ್ ಆಫೀಸ್ ಕಿಂಗ್

    ರಾಷ್ಟ್ರಭಾಷೆಯನ್ನು ಹೊಂದಲು ಭಾರತ ವೈವಿಧ್ಯಮಯ ದೇಶವಾಗಿದೆ. ಭಾರತದ ಪರಿಕಲ್ಪನೆಯು ಪ್ರತಿಯೊಬ್ಬರಿಗೂ ಸ್ಥಳಾವಕಾಶ ನೀಡುತ್ತದೆ. ಭಾರತೀಯ ಕರೆನ್ಸಿ ನೋಟು ಎಲ್ಲ ಭಾಷೆಗಳಿಗೆ ಜಾಗ ನೀಡಿರುವುದು ನಾವು ಕೇವಲ ಒಂದು ಭಾಷೆ, ಸಂಸ್ಕೃತಿ ಮತ್ತು ಧರ್ಮಕ್ಕೆ ಸೀಮಿತವಲ್ಲ ಎಂಬುದು ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.

    FotoJet

    ಇದೇ ವೇಳೆ ಮಸೀದಿಗಳಲ್ಲಿ ಲೌಡ್‌ಸ್ಪೀಕರ್ ನಿಷೇಧ ಕುರಿತು ಮಾತನಾಡಿರುವ ಅವರು, ರಾಜಕೀಯ ಲಾಭಕ್ಕಾಗಿ ಮತ್ತು ಧರ್ಮದ ವಿರುದ್ಧ ದ್ವೇಷ ಹರಡುವ ಉದ್ದೇಶದಿಂದ ಈ ದೇಶದಲ್ಲಿ ಮುಸ್ಲಿಮರನ್ನು ಮಾತ್ರ ಗುರಿ ಮಾಡಲಾಗುತ್ತಿದೆ. ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಬಳಸಬೇಡಿ, ಹಲಾಲ್ ಮಾಂಸ ಮಾರಾಟ ಮಾಡಬೇಡಿ, ಹಿಜಬ್ ಧರಿಸಬೇಡಿ ಎಂದು ವಿವಾದ ಎಬ್ಬಿಸಲಾಗುತ್ತಿದೆ. ಭಾರತದಲ್ಲಿ ಕೇವಲ ಮುಸ್ಲಿಮರನ್ನೇ ಏಕೆ ಟಾರ್ಗೆಟ್ ಮಾಡಲಾಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಇದನ್ನೂ ಓದಿ: ಅಜಯ್ ದೇವಗನ್ ವಿರುದ್ಧವೇ ನಿಂತ ಬಾಲಿವುಡ್ ಇಬ್ಬರೂ ಸ್ಟಾರ್ ನಟರು

    ಬಾರಾಮುಲ್ಲಾದ ಶಾಲೆಯೊಂದರಲ್ಲಿ ಹಿಜಾಬ್ ವಿವಾದ ತಲೆಎತ್ತಿದೆ. ಈಗ ಈ ಜನರು (ಬಿಜೆಪಿ) ಕರ್ನಾಟಕದಂತೆ ಜಮ್ಮು-ಕಾಶ್ಮೀರದಲ್ಲಿಯೂ ರಾಜಕೀಯ ಲಾಭಕ್ಕಾಗಿ ಸಮಸ್ಯೆಯನ್ನು ಹುಟ್ಟುಹಾಕುತ್ತಿರುವುದಾಗಿ ಒಮರ್ ಅಬ್ದುಲ್ಲಾ ಆರೋಪಿಸಿದ್ದಾರೆ.

    ಹಿಜಬ್ ಇಸ್ಲಾಂನ ಮೂಲಭೂತ ಹಕ್ಕು. ಇನ್ನೊಬ್ಬರ ಧಾರ್ಮಿಕ ವಿಚಾರದಲ್ಲಿ ಯಾರೂ ಕೂಡಾ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಒಂದು ವೇಳೆ ಇದು ದೇಶದಲ್ಲಿ ಕಾರ್ಯಗತಗೊಂಡಲ್ಲಿ, ಆಗ ನಮ್ಮ ನಿರ್ಧಾರವೂ ಕೂಡ ವಿಭಿನ್ನವಾಗಿರಲಿದೆ. ರಂಜಾನ್ ತಿಂಗಳಲ್ಲಿ ಅನಾವಶ್ಯಕವಾಗಿ ಪವರ್ ಕಟ್ ಮಾಡುವ ಮೂಲಕ ಉದ್ದೇಶಪೂರ್ವಕವಾಗಿ ಕಾಶ್ಮೀರದ ಜನರನ್ನು ಕೆರಳಿಸುತ್ತಿರುವುದಾಗಿ ಒಮರ್ ದೂರಿದ್ದಾರೆ. ಇದನ್ನೂ ಓದಿ: ರಾಷ್ಟ್ರ ಭಾಷೆ ಹಿಂದಿ: ಅಜಯ್ ದೇವಗನ್ ಪ್ರಶ್ನೆಗೆ ಕಿಚ್ಚ ಸುದೀಪ್ ಖಡಕ್ ಉತ್ತರ

    ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮುಸ್ಲಿಮರ ಮನೆಗಳನ್ನು ಬುಲ್ಡೋಜರ್ ನಿಂದ ತೆರವುಗೊಳಿಸುತ್ತಿರುವ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಭಾರತವು ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಆದರೆ ಪ್ರಜಾಪ್ರಭುತ್ವವು ಕೇವಲ ಪದಗಳಲ್ಲಿ ಇರಬಾರದು ಅದು ಕಾರ್ಯದಲ್ಲಿಯೂ ಇರಬೇಕು. ಅಸಹಿಷ್ಣುತೆಯ ವಾತಾವರಣವನ್ನು ನಿಯಂತ್ರಿಸುವ ಈ ಕ್ರಮವು ಈ ದೇಶಕ್ಕೆ ಒಳ್ಳೆಯದಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  • ಹಿಂದಿಯನ್ನ ರಾಷ್ಟ್ರೀಯ ಭಾಷೆಯನ್ನಾಗಿ ಮಾಡಿದ್ರೆ ತಪ್ಪೇನಿಲ್ಲ: ಮುರುಗೇಶ್ ನಿರಾಣಿ

    ಹಿಂದಿಯನ್ನ ರಾಷ್ಟ್ರೀಯ ಭಾಷೆಯನ್ನಾಗಿ ಮಾಡಿದ್ರೆ ತಪ್ಪೇನಿಲ್ಲ: ಮುರುಗೇಶ್ ನಿರಾಣಿ

    ಮೈಸೂರು/ಚಿಕ್ಕಮಗಳೂರು/ ವಿಜಯಪುರ: ಹಿದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಿದರೆ ತಪ್ಪೇನಿಲ್ಲ ಎಂದು ಸಚಿವ ಮುರುಗೇಶ್ ನಿರಾಣಿ ಹೇಳುವ ಮೂಲಕ ವಿವಾದಕ್ಕೀಡಾಗಿದ್ದಾರೆ.

    ಸುದೀಪ್, ಅಜಯ್ ದೇವಗನ್ ಮಧ್ಯೆ ಹಿಂದಿವಾರ್ ಸಂಬಂಧ ಪ್ರತಿಕ್ರಿಯಿಸಿದ ಅವರು, ಕನ್ನಡ ಪ್ರಾದೇಶಿಕ ಭಾಷೆ, ಹಿಂದಿ ರಾಷ್ಟ್ರೀಯ ಭಾಷೆ. ಹಿಂದಿ ಭಾಷೆಯೂ ನಮಗೆ ಬೇಕು. ಬೇರೆ ಭಾಷೆ ಕಲಿಯುವುದರಲ್ಲಿ ತಪ್ಪೇನಿಲ್ಲ. ಹಿಂದಿಯನ್ನ ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬೇಕು ಎಂಬುದು ಮೊದಲಿನಿಂದಲೂ ಇದೆ, ಇದರಿಂದ ತಪ್ಪೇನಿಲ್ಲ ಎಂದರು.

    ಹೆಚ್ಚು ಭಾಷೆ ಕಲಿಯೋದ್ರಿಂದ ನಾವು ಶ್ರೀಮಂತರಾಗುತ್ತೇವೆ. ನಾವು ಕನ್ನಡಿಗರು, ಕನ್ನಡಕ್ಕೆ ಮೊದಲ ಆದ್ಯತೆ. ಆ ಬಳಿಕ ಬೇರೆ ಬೇರೆ ಭಾಷೆಗಳಿಗನ್ನು ಕಲಿಯಬೇಕು. ನಾನು ಗ್ರಾಮೀಣ ಪ್ರದೇಶದವನಾಗಿರೋದ್ರಿಂದ ಕನ್ನಡವನ್ನ ಪ್ರೀತಿಸುತ್ತೇನೆ. ಇತರ ಭಾಷಣಗಳನ್ನೂ ಪ್ರೀತಿಸ್ತೀನಿ ಎಂದು ನಿರಾಣಿ ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಭಾಷಾವಾರು ಪ್ರಾಂತ್ಯಗಳನ್ನು ರಚಿಸಿರುವುದನ್ನು ನೆನಪಿಸಬಯಸುತ್ತೇನೆ: ಡಿಕೆಶಿ

    ಇತ್ತ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಾತನಾಡಿ, ಇನ್ನೊಂದು ಭಾಷೆಯನ್ನು ಆಕ್ರಮಿಸಲ್ಲ, ಗೌರವಿಸ್ತೇವೆ. ಶೇ.48 ರಷ್ಟು ನಮ್ಮ ದೇಶದ ಜನರಿಗೆ ಹಿಂದಿ ಮಾತೃ ಭಾಷೆ. ಸಂಪರ್ಕ ಭಾಷೆಯಾಗಿ ಹಿಂದಿಯನ್ನು ಬಳಸಿಕೊಳ್ಳಬಹುದು ಎಂದಿದ್ದಾರೆ. ಇದನ್ನೂ ಓದಿ: ಹಿಂದಿ ರಾಷ್ಟ್ರ ಭಾಷೆ : ಕಿಚ್ಚ ಸುದೀಪ್ ಮಾತಿಗೆ ದನಿಗೂಡಿಸಿದ ಸಿಎಂ ಬೊಮ್ಮಾಯಿ

    ವಿಜಯಪುರದಲ್ಲಿ ಕೇಂದ್ರದ ಮಾಜಿ ಸಚಿವ, ಸಂಸದ ರಮೇಶ್ ಜಿಗಜಿಣಗಿ ಪ್ರತಿಕ್ರಿಯಿಸಿ, ನಾನು ಇಬ್ಬರು ಪರವಾಗಿಯೂ ಇಲ್ಲ. ಸರ್ಕಾರದ ನೀತಿ ಪರವಾಗಿ ಇದ್ದೇನೆ. ಹಿಂದಿ ಬೇಕು ಅಂದ್ರೇ ಹಿಂದಿ ಪರ ಇರುತ್ತೇನೆ. ಬೇಡ ಅಂದ್ರೇ ಬೇಡವಾದ ಪರವಾಗಿ ಇರುತ್ತೇನೆ. ಕೇಂದ್ರ ಸರ್ಕಾರದ ಪರ ನಾನು ಇರುತ್ತೇನೆ ಅಷ್ಟೆ ಎಂದು ಹೇಳಿದ್ದಾರೆ. ಈ ಮೂಲಕ ಇದೀಗ ಈ ಇಬ್ಬರು ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಒಟ್ಟಿನಲ್ಲಿ ಮಾತೃಭಾಷೆ ಬಗ್ಗೆ ಬಿಜೆಪಿಯಲ್ಲಿ ದ್ವಂದ್ವ ಹೇಳಿಕೆ ನೀಡಲಾಗುತ್ತಿದೆ. ನಿರಾಣಿ, ಜಿಗಜಿಣಗಿಯದ್ದು ಕನ್ನಡದ್ರೋಹಿ ಹೇಳಿಕೆಯಾದ್ರೆ, ಸಿಟಿ ರವಿ ಅವರು ದ್ವಂದ್ವ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಚಿತ್ರನಟರ ಮಾತಿಗೆ ನಾವು ಚರ್ಚೆ ಮಾಡುವ ಅಗತ್ಯವಿಲ್ಲ: ಡಿಕೆಶಿ

  • ಹುಟ್ಟುಹಬ್ಬಕ್ಕೆ ಮೊದಲೇ ಕಿಚ್ಚನಿಗೆ ಸರ್ಪ್ರೈಸ್ ನೀಡಿದ ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ

    ಹುಟ್ಟುಹಬ್ಬಕ್ಕೆ ಮೊದಲೇ ಕಿಚ್ಚನಿಗೆ ಸರ್ಪ್ರೈಸ್ ನೀಡಿದ ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ

    – ಸೋಶಿಯಲ್ ಮೀಡಿಯಾದಲ್ಲಿ ಕಾಮನ್ ಡಿಪಿ ಫೋಟೋ ವೈರಲ್

    ಬೆಂಗಳೂರು: ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ ಅವರು ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಬಿಗ್ ಸರ್ಪ್ರೈಸ್ ಒಂದನ್ನು ನೀಡಿದ್ದಾರೆ.

    ಹೌದು. ಸೆಪ್ಟೆಂಬರ್ 2ರಂದು ಅಭಿನಯಚಕ್ರವರ್ತಿಯ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಹುಟ್ಟುಹಬ್ಬಕ್ಕೆ 10 ದಿನ ಮೊದಲೇ ಸಿದ್ಧವಾಗಿರುವ ಫೋಟೋವನ್ನು ಕುಂಬ್ಳೆ ಇಂದು ರಿಲೀಸ್ ಮಾಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಫೋಟೋದಲ್ಲಿ ಸುತ್ತಲೂ ಜನರು ನೆರೆದಿರುವ ಕ್ರೀಡಾಂಗಣದ ಮಧ್ಯದಲ್ಲಿ ಕುಳಿತು ತಮ್ಮ ಅಭಿಮಾನಿಗಳ ಮುಂದೆ ಕಿಚ್ಚ ಕೈ ಚಾಚುತ್ತಿರುವಂತೆ ಫೋಟೋವೊಂದನ್ನು ಅದ್ಭುತವಾಗಿ ಎಡಿಟ್ ಮಾಡಲಾಗಿದೆ. ಅಲ್ಲದೆ ಫೋಟೋದಲ್ಲಿ ಬಾದ್ ಷಾ ಎಂದು ಬರೆಯಲಾಗಿದ್ದು, ಈ ಫೋಟೋವನ್ನು ಕುಂಬ್ಳೆ ಸೇರಿದಂತೆ ಹಲವಾರು ಅಭಿಮಾನಿಗಳು ತಮ್ಮ ಟ್ವಿಟ್ಟರ್ ಖಾತೆಗಳ ಮೂಲಕ ಮುಂಚಿತವಾಗಿಯೇ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

    ನನ್ನ ಆತ್ಮೀಯ ಸ್ನೇಹಿತ ಹಾಗೂ ನಟ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಕಾಮನ್ ಡಿಪಿ ಶೇರ್ ಮಾಡಿಕೊಳ್ಳಲು ತುಂಬಾ ಸಂತಸವಾಗುತ್ತಿದೆ. ಎಂದಿಗೂ ಸ್ಫೂರ್ತಿದಾಯಕವಾಗಿರಿ ಎಂದು ಕುಂಬ್ಳೆ ಫೋಟೋದೊಂದಿಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಕಿಚ್ಚ ಕೂಡ ಪ್ರತಿಕ್ರಿಯಿಸಿದ್ದು, ಇದಕ್ಕಿಂತ ಉತ್ತಮವಾದ ಉಡುಗೊರೆ ಇನ್ನೇನು ಇರಲು ಸಾಧ್ಯ ಅನಿಲ್ ಕುಂಬ್ಳೆ ಸರ್. ಇದು ನಿಜಕ್ಕೂ ದೊಡ್ಡ ಸರ್ಪ್ರೈಸ್ ಎಂದು ಧನ್ಯವಾದಗಳನ್ನು ತಿಳಿಸಿದ್ದಾರೆ. ಸುದೀಪ್ ಫೋಟೋ ವೈರಲ್ ಆಗುತ್ತಿದ್ದ ಹಿನ್ನೆಲೆಯಲ್ಲಿ ಟ್ವಿಟ್ಟರ್ ನಲ್ಲಿ ಹ್ಯಾಶ್ ಟ್ಯಾಗ್ ಕಿಚ್ಚ ಸುದೀಪ್ ಹಾಗೂ ಕೋಟಿಗೊಬ್ಬ ಅಂತ ಕೆಲ ಕಾಲ ಟ್ರೆಂಡಿಗ್ ನಲ್ಲಿತ್ತು.  ಇದನ್ನೂ ಓದಿ: ಡೇವಿಡ್ ವಾರ್ನರ್ ಕನ್ನಡ ಪ್ರೀತಿಗೆ ಕನ್ನಡಿಗರು ಫಿದಾ

    ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇದೇ ವರಮಹಾಲಕ್ಷ್ಮಿ ಹಬ್ಬದಂದು ‘ವಿಕ್ರಾಂತ್ ರೋಣ’ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ಎರಡನೇ ಅಲೆಯ ಆತಂಕ ಹಾಗೂ ಲಾಕ್ ಡೌನ್ ನಿಂದಾಗಿ ಚಿತ್ರ ಚಿಡುಗಡೆಯಾಗಿಲ್ಲ. ಪರಿಣಾಮ ತೆರಮೇಲೆ ಕಿಚ್ಚನನ್ನು ಕಾಣಲು ತುದಿಗಾಲಲ್ಲಿ ಕಾಯುತ್ತಿದ್ದ ಅಭಿಮಾನಿಗಳಲ್ಲಿ ನಿರಾಸೆ ಉಂಟಾಗಿದೆ. ಈ ಮಧ್ಯೆ ಹಬ್ಬದಂದು ಕಿಚ್ಚ ಫೋಟೋವೊಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದರು. ಹಬ್ಬದ ಪ್ರಯುಕ್ತ ಸ್ಟೈಲಿಶ್ ಫೋಟೋ ಶೃ ಮಾಡಿರುವ ಕಿಚ್ಚ, ಬಹಳ ದಿನಗಳ ನಂತರ ವೈಯಕ್ತಿಕವಾಗಿ ಮಾಡಿದ ಫೊಟೋಶೂಟ್ ಎಂದು ಕ್ಯಾಪ್ಷನ್ ಕೂ ಹಾಕಿಕೊಂಡಿದ್ದು, ನೆಚ್ಚಿನ ನಟನ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ತೂಕ ಕಳೆದುಕೊಂಡ ರಣಧೀರ ನಟಿ

  • ಮಂಜನ ಅಪ್ಪ, ಅಮ್ಮನ ಜೊತೆ ಮದುವೆ ಬಗ್ಗೆ ಮಾತನಾಡಿದ್ದೇನೆ: ದಿವ್ಯಾ ಸುರೇಶ್

    ಮಂಜನ ಅಪ್ಪ, ಅಮ್ಮನ ಜೊತೆ ಮದುವೆ ಬಗ್ಗೆ ಮಾತನಾಡಿದ್ದೇನೆ: ದಿವ್ಯಾ ಸುರೇಶ್

    ಬಿಗ್‍ಬಾಸ್ ಸೀಸನ್-8 ಗ್ರ್ಯಾಂಡ್ ಫಿನಾಲೆ ಭಾನುವಾರ ಅದ್ಧೂರಿಯಾಗಿ ನೆರವೇರಿದೆ. ಈ ವೇಳೆ ಕಿಚ್ಚ ಸುದೀಪ್ ಅವರು ಅರವಿಂದ್ ಮದುವೆಗಿಂತ ಮೊದಲು ಮಂಜನ ಮದುವೆಯಾಗುತ್ತೆ ಎಂದು ಕೇಳಿದರು. ಅದಕ್ಕೆ ಒಂದಿಬ್ಬರು ಹೊರತುಪಡಿಸಿ ಎಲ್ಲರೂ ಯಸ್ ಎಂದು ಹೇಳಿದರು.

    ಇದೇ ವೇಳೆ ಸುದೀಪ್ ಯಸ್ ಯಾಕೆ ದಿವ್ಯಾ ಸುರೇಶ್ ಎಮದು ಕೇಳಿದಾಗ, ನಾನು ಅವರ ಅಪ್ಪ-ಅಮ್ಮ ಜೊತೆ ಮದುವೆ ವಿಚಾರ ಮಾತನಾಡಿದ್ದೇನೆ. ಆಗ ಅವರು ಅವನು ಆಡುತ್ತಿರುವ ರೇಂಜ್ ನೋಡಿದರೆ ಶೋ ಮುಗಿಸಿ ಬಂದ ಕೊಡಲೇ ಮದುವೆಯಾಗುತ್ತಾನೆ ಎಂದು ಹೇಳಿದ್ದಾಗಿ ತಿಳಿಸಿದರು. ಇದನ್ನೂ ಓದಿ: ದಿವ್ಯಾ ಸುರೇಶ್ ಬಗ್ಗೆ ಲ್ಯಾಗ್ ಮಂಜು ಹೇಳಿದ್ದೇನು..?

    ಆಗ ಕಿಚ್ಚ ಆ ರೇಂಜ್ ಅಂದ್ರೆ ಏನ್ ನೋಡಿದ್ರು ಅವರು ಎಂದು ಕೇಳಿದಕ್ಕೆ ದಿವ್ಯಾ, ಯಾವಾಗಲೂ ಮದುವೆಯಾಗಬೇಕು, ಮದುವೆ ಆಗಬೇಕು ಎಂದು ಹೇಳುತ್ತಿರುತ್ತಾರೆ. ಅದಕ್ಕೆ ಬಂದ ಕೂಡಲೇ ಆಗಬಹುದು ಎಂದು ಹೇಳಿದೆ ಎಂದರು. ಇದನ್ನೂ ಓದಿ: ಮಂಜು ಬಗ್ಗೆ ಹೇಳುತ್ತಾ ಭಾವುಕರಾದ ಚಕ್ರವರ್ತಿ ಚಂದ್ರಚೂಡ್..!

    ಇತ್ತ ರಾಜೀವ್ ಅವರು ಈ ಬಗ್ಗೆ ಮಾತನಾಡಿ, ಹೌದು ಅಣ್ಣ ಮಂಜಗೆ ತುಂಬಾ ಆಸೆ ಇದೆ. ಅದರಲ್ಲಿ ಮದುವೆಯಾಗಬೇಕು ಎಂಬುದು ಟಾಪ್‍ನಲ್ಲಿದೆ. ಅದಕ್ಕೆ ಅವರು ಆಚೆ ಬಂದ ತಕ್ಷಣ ಮದುವೆಯಾಗುತ್ತಾರೆ. ರಾಜೀವ್ ಮಾತಿಗೆ ಅರವಿಂದ್ ಸಹ ದನಿಗೂಡಿಸಿದ್ದು, ಹೌದು ಸರ್ ತುಂಬಾ ಅಜೆರ್ಂಟ್‍ನಲ್ಲಿದ್ದಾನೆ. ಬೇಗ ಮದುವೆಯಗುತ್ತಾನೆ ಎಂದು ತಮಾಷೆ ಮಾಡಿ ಎಲ್ಲಾ ಸ್ಪರ್ಧಿಗಳು ಮಂಜನ ಕಾಲೆಳೆದಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ಮನೆಯಲ್ಲಿ ಮಂಜು ಕಲಿತಿದ್ದೇನು..?- ಮುಂದಿನ ಯೋಚನೆ, ಯೋಜನೆಗಳ ಬಗ್ಗೆ ವಿನ್ನರ್ ಮಾತು

    ನಂತರ ಮಂಜ ಅವರ ತಾಯಿಯ ಬಳಿ ಕಿಚ್ಚ ಮಾತನಾಡಿ, ಯಾವಾಗ ಮದುವೆ ಮಾಡಿಸುತ್ತೀರಾ ಅಮ್ಮ ಎಂದು ಕೇಳಿದಕ್ಕೆ, ಅವನು ಹೊರಗೆ ಬಂದು ಯಾವಾಗ ಇಷ್ಟ ಪಡುತ್ತಾನೆ ಆಗ ಮದುವೆ ಮಾಡಿಸುತ್ತೇವೆ ಎಂದರು. ಅದಕ್ಕೆ ಸುದೀಪ್ ಬೇಡ ಅವರು ಬಂದ ತಕ್ಷಣ ಮದುವೆ ಮಾಡಿಬಿಡಿ. ನೋಡಿ ಫುಲ್ ರೆಡಿಯಾಗಿ, ಚೆನ್ನಾಗಿ ಹಲ್ಲು ಉಜ್ಜಿಕೊಂಡಿದ್ದಾರೆ. ಹುಡುಗಿಯನ್ನ ಹುಡುಕಲು ಹೋಗುವಾಗ ಶುಭಾ ಮತ್ತೆ ಚಕ್ರವರ್ತಿ ಅವರನ್ನು ಕರೆದುಕೊಂಡು ಹೋಗಿ ಎಂದು ತಮಾಷೆ ಮಾಡಿದ್ದಾರೆ. ಕಿಚ್ಚನ ಮಾತಿಗೆ ನೆರೆದಿದ್ದವರು ಜೋರಾಗಿ ನಕ್ಕಿದ್ದಾರೆ.

  • ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡಲಿರುವ ಬಿಗ್‍ಬಾಸ್ ಸ್ಪರ್ಧಿಗಳು

    ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡಲಿರುವ ಬಿಗ್‍ಬಾಸ್ ಸ್ಪರ್ಧಿಗಳು

    ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆಯ ವಾಸ್ತವ ದರ್ಶನ ಮಾಡಿಸಿದ ಬಳಿಕ ಬಿಗ್ ಬಾಸ್ ಕಾರ್ಯಕ್ರಮ ರದ್ದಾಗುತ್ತಿರುವ ವಿಚಾರವನ್ನು ಸ್ಪರ್ಧಿಗಳಿಗೆ ತಿಳಿಸಲಾಯಿತು. ಲಾಕ್‍ಡೌನ್ ಹೇರಿಕೆಯಿಂದಾಗಿ ಬಿಗ್‍ಬಾಸ್ ಕನ್ನಡ 8 ಕಾರ್ಯಕ್ರಮ ಸ್ಥಗಿತಗೊಂಡಿದೆ.

    ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆಯ ಭೀಕರತೆ ಬಗ್ಗೆ ಮನದಟ್ಟಾದ ಬಳಿಕ, ನಮ್ಮೆಲ್ಲರ ಸುರಕ್ಷತೆಗಾಗಿ ಈ ಶೋ ಎಂಡ್ ಮಾಡುತ್ತಿದ್ದೀರಾ. ನಿಮಗೆ ಸಾಷ್ಟಾಂಗ ನಮಸ್ಕಾರಗಳು. ನೀವು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೀರಾ ಎಂದು ಸ್ಪರ್ಧಿಗಳೆಲ್ಲಾ ಬಿಗ್ ಬಾಸ್‍ಗೆ ಧನ್ಯವಾದ ಅರ್ಪಿಸಿದರು.

    ಬಳಿಕ ಕೋವಿಡ್ ಕಾರಣದಿಂದ ಸಂಕಷ್ಟದಲ್ಲಿ ಸಿಲುಕಿರುವ ಅನೇಕರಿಗೆ ಸಹಾಯ ಮಾಡುವುದಾಗಿಯೂ ಬಿಗ್ ಬಾಸ್ ಸ್ಪರ್ಧಿಗಳು ಭರವಸೆ ನೀಡಿದರು. ನಾವೆಲ್ಲ ಕೊರೊನಾ ವಾರಿಯರ್ ಆಗಿ ಕೆಲಸ ಮಾಡ್ತೇವೆ. ನಮ್ಮ ಕೈಲಾದ ಸಹಾಯ ಮಾಡುತ್ತೇವೆ ಎಂದು ನಟಿ ಶುಭಾ ಪೂಂಜಾ, ಚಕ್ರವರ್ತಿ ಚಂದ್ರಚೂಡ್, ಪ್ರಶಾಂತ್ ಸಂಬರಗಿ ಹಾಗೂ ಅರವಿಂದ್ ಹೇಳಿದರು.

    17 ಸ್ಪರ್ಧಿಗಳು ಕೂಡ ಕೊರೊನಾ ವಾರಿಯರ್ ಆಗುತ್ತೇವೆ ಎಂದು ಸ್ಪರ್ಧಿಗಳು ಬಿಗ್ ಬಾಸ್‍ಗೆ ತಿಳಿಸಿದರು. ನಾನು ಮುಂಚೆಯೂ ಈ ಬಗ್ಗೆ ಕೆಲಸ ಮಾಡಿದ್ದೆ. ಈಗಲೂ ಕೆಲಸ ಮಾಡುತ್ತೇನೆ. ಜನರಿಗೆ ಸಹಾಯ ಮಾಡುತ್ತೇನೆ ಅಂತ ಚಕ್ರವರ್ತಿ ಚಂದ್ರಚೂಡ್ ಹೇಳಿದರು. ಬಿಗ್ ಬಾಸ್ ಕಾರ್ಯಕ್ರಮ ಸ್ಥಗಿತಗೊಂಡ ಬಳಿಕ ಸ್ಪರ್ಧಿಗಳೆಲ್ಲಾ ತಮ್ಮ ತಮ್ಮ ನಿವಾಸಗಳಿಗೆ ಹಿಂದಿರುಗಿದ್ದಾರೆ.

  • ಅಭಿಮಾನಿಗಳಿಗೆ ಗುಡ್ ನ್ಯೂಸ್ – ಈ ವಾರ ವೀಕೆಂಡ್ ಎಪಿಸೋಡ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕಿಚ್ಚ!

    ಅಭಿಮಾನಿಗಳಿಗೆ ಗುಡ್ ನ್ಯೂಸ್ – ಈ ವಾರ ವೀಕೆಂಡ್ ಎಪಿಸೋಡ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕಿಚ್ಚ!

    ಬೆಂಗಳೂರು: ಆರೋಗ್ಯ ಸರಿಯಿರದ ಕಾರಣ 2 ವಾರದ ವೀಕೆಂಡ್ ಎಪಿಸೋಡ್ ನಲ್ಲಿ ಕಾಣಿಸಿಕೊಳ್ಳದ ಕಿಚ್ಚ ಸುದೀಪ್ ಅವರು ಇದೇ ಶನಿವಾರ ವೀಕ್ಷಕರ ಮುಂದೆ ಬರುವ ಸಾಧ್ಯತೆಗಳಿವೆ.

    ಈ ಸಂಬಂಧ ಟ್ವೀಟ್ ಮಾಡಿ ಸುಳಿವು ನೀಡಿರುವ ಅಭಿನಯ ಚಕ್ರವರ್ತಿ, ಆರೋಗ್ಯ ಸುಧಾರಿಸಿದ್ದು, ಈ ವಾರ ಬಿಗ್ ಬಾಸ್ ಎಪಿಸೊಡ್ ನಲ್ಲಿ ಕಾಣಿಸಿಕೊಳ್ಳಲು ಕಾತುರರಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಹಾಗೂ ಹಾರೈಸಿದ ಎಲ್ಲರಿಗೂ ಕೃತಜ್ಞನಾಗಿದ್ದೇನೆ ಎಂದಿದ್ದಾರೆ. ಇದೇ ವೇಳೆ ಕಿಚ್ಚ, ವೈದ್ಯ ಡಾ. ವೆಂಕಟೇಶ್ ಹಾಗೂ ಡಾ. ವಿನಯ್ ಅವರಿಗೂ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

    ನನ್ನ ಆರೋಗ್ಯ ಸುಧಾರಣೆಗಾಗಿ ಹಲವಾರು ಮಂದಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಇದರ ವೀಡಿಯೋಗಳು ನನಗೆ ದೊರಕಿವೆ. ಎಲ್ಲರಿಗೂ ಧನ್ಯವಾದ ತಿಳಿಸಿರುವ ಕಿಚ್ಚ ‘ಲವ್ ಯೂ ಆಲ್’ ಇಷ್ಟೇ ಹೇಳಬಲ್ಲೇ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

    ಸುದೀಪ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಚಿಕಿತ್ಸೆ ಪಡೆದು ರೆಸ್ಟ್ ಮಾಡುತ್ತಿದ್ದಾರೆ. ಹೀಗಂತ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇತ್ತು. ಬಳಿಕ ಇದೇ ವಿಚಾರವಾಗಿ ಸ್ವತಃ ಕಿಚ್ಚ ಸುದೀಪ್ ಟ್ವೀಟ್ ಮಾಡಿ ಸ್ಪಷ್ಟನೆ ಕೊಟ್ಟಿದ್ದರು.

    ಟ್ವೀಟ್‍ನಲ್ಲಿ ಏನಿತ್ತು..? 
    ನನಗೆ ಆರೋಗ್ಯ ಸರಿಯಿಲ್ಲ. ಸದ್ಯದಲ್ಲೇ ಗುಣಮುಖನಾಗುತ್ತೇನೆ ಎಂಬ ಭರವಸೆಯಿದೆ. ಆದರೆ ವೈದ್ಯರು ಇನ್ನೂ ಕೆಲವು ದಿನಗಳ ಕಾಲ ಸಂಪೂರ್ಣ ರೆಸ್ಟ್ ಮಾಡಬೇಕೆಂದು ಹೇಳಿದ್ದಾರೆ. ಹೀಗಾಗಿ ಬಿಗ್‍ಬಾಸ್ ಕನ್ನಡ 8ನೇ ಸೀಸನ್‍ನ ಈ ವೀಕೆಂಡ್‍ನ ಎಪಿಸೋಡ್‍ನಲ್ಲಿ ನಾನು ಪಾಲ್ಗೊಳ್ಳುವುದಿಲ್ಲ ಎಂದು ಟ್ವೀಟ್ ಮೂಲಕವಾಗಿ ತಿಳಿಸಿದ್ದರು.

    ಅಲ್ಲದೆ ಬಿಗ್ ಬಾಸ್ ಕನ್ನಡದ ಕ್ರಿಯೇಟಿವ್ ಟೀಂ ಈ ವೀಕೆಂಡ್‍ನಲ್ಲಿ ವಾರದ ಕತೆ ಕಿಚ್ಚನ ಜೊತೆ ಬದಲಾಗಿ ಯಾವ ರೀತಿಯ ವಿಭಿನ್ನವಾದ ಪ್ಲಾನ್ ಮಾಡಿಕೊಳ್ಳಲಿದೆ ಎಂಬ ಬಗ್ಗೆ ನನಗೂ ಕುತೂಹಲವಿದೆ. ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಹೇಗಾಗಲಿದೆ ಎಂಬುದನ್ನು ಕಾದು ನೋಡಿ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದರು.