Tag: Kichcha Sudeep

  • ಕಿಚ್ಚ ಸುದೀಪ್ ಜೆಡಿಎಸ್ ನಿಂದ ಸ್ಪರ್ಧಿಸುತ್ತಾರಾ?

    ಕಿಚ್ಚ ಸುದೀಪ್ ಜೆಡಿಎಸ್ ನಿಂದ ಸ್ಪರ್ಧಿಸುತ್ತಾರಾ?

    ಬೆಂಗಳೂರು: ಇಡೀ ಕರ್ನಾಟಕ ವಿಧಾನಸಭಾ ಚುನಾವಣೆಯ ಬಿಸಿಯೇರಿಸಿಕೊಂಡಿದೆ. ಇಂಥಾ ವಾತಾವರಣದಲ್ಲಿ ರಾಜಕೀಯ ವಲಯದಲ್ಲಿ ಬಿರುಸಿನ ವಾತಾವರಣ ಇರೋದು ಸಹಜವೇ. ಆದರೆ ಈ ಸಲ ಚಿತ್ರರಂಗದಲ್ಲಿಯೂ ಚುನಾವಣಾ ಪ್ರಭಾವ ಬಲು ಜೋರಾಗಿದೆ. ಆ ಸ್ಟಾರ್ ರಾಜಕೀಯಕ್ಕಿಳೀತಾರೆ, ಮತ್ಯಾರಿಗೋ ಟಿಕೆಟು ಪಕ್ಕಾ ಆಗಿದೆ ಎಂಬೆಲ್ಲ ರೂಮರ್ ಮಾಮೂಲಿ. ಆದರೆ ಈ ಸಲ ಈ ರೇಸಿನಲ್ಲಿ ಕಿಚ್ಚ ಸುದೀಪ್ ಅವರ ಹೆಸರೂ ಚಾಲ್ತಿಯಲ್ಲಿರೋದು ನಿಜವಾದ ವಿಶೇಷ!

    ಸುದೀಪ್ ರಾಜಕೀಯಕ್ಕೆ ಬರುತ್ತಾರೆಂಬ ಅಂತೆ ಕಂತೆಯಾಗಲಿ, ಅವರನ್ನು ಸೆಳೆದುಕೊಳ್ಳಲು ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಒಳಗೊಳಗೇ ಕಸರತ್ತು ನಡೆಸೋದಾಗಲಿ ಹೊಸದೇನೂ ಅಲ್ಲ. ಆದರೆ ಒಂದು ಮೂಲದ ಪ್ರಕಾರ ಈ ಸಲ ರಾಜಕೀಯಕ್ಕೆ ಅಡಿಯಿರಿಸಲು ತೀರ್ಮಾನ ಮಾಡಿಕೊಂಡಿರೋ ಸುದೀಪ್ ಅದಕ್ಕಾಗಿ ತಯಾರಾಗಲಾರಂಭಿಸಿದ್ದಾರಂತೆ!

    ಹಾಗಾದರೆ ಅವರು ಯಾವ ಪಕ್ಷದಿಂದ ಸ್ಪರ್ಧಿಸ್ತಾರೆ, ಕ್ಷೇತ್ರ ಯಾವುದು ಅಂತೆಲ್ಲ ಸಾಲು ಸಾಲು ಪ್ರಶ್ನೆಗಳೇಳೋದು ಸಹಜವೇ. ಈ ನಿಟ್ಟಿನಲ್ಲಿ ನೋಡ ಹೋದರೆ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಲು ಸ್ವತಃ ಸುದೀಪ್ ಇಚ್ಛೆ ಹೊಂದಿದ್ದಾರೆ ಎಂಬ ಮಾತೂ ಕೇಳಿಬಂದಿತ್ತು. ಸುದೀಪ್ ಅವರ ರಾಜಕೀಯ ಎಂಟ್ರಿ ಮತ್ತು ಅವರು ಬಯಸೋ ಕ್ಷೇತ್ರವನ್ನು ನೀಡಲು ರಾಹುಲ್ ಗಾಂಧಿಯನ್ನು ಒಪ್ಪಿಸೋ ಜವಾಬ್ದಾರಿಯನ್ನು ನಟಿ ರಮ್ಯಾ ವಹಿಸಿಕೊಂಡಿದ್ದಾರಂತೆ ಎಂಬೆಲ್ಲಾ ಅಂತೆಕಂತೆಗಳೂ ಹರಿದಾಡಿದ್ದವು.

    ಆದರೆ ದಿಢೀರ್ ಅಂತಾ ಇವತ್ತು ಬೆಳಬೆಳಿಗ್ಗೆಯೇ ಸುದೀಪ್ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರನ್ನು ಸ್ವತಃ ಕುಮಾರಣ್ಣನ ಮನೆಯಲ್ಲೇ ಭೇಟಿ ಮಾಡಿ ಸರಿಸುಮಾರು ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿರೋದು ರಾಜಕೀಯ ಪಂಡಿತರ ತಲೆ ಕೆಡಿಸಿದೆ. ಈ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಮತ್ತು ಶಾಸಕ ಸಾರಾ ಮಹೇಶ್ ಮುಂತಾದವರು ಹಾಜರಿದ್ದರು.

    ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸುತ್ತಾರಾ?: ಈ ಕ್ಷೇತ್ರದಲ್ಲಿ 90 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನಾಯಕ ಸಮಾಜದ ಮತದಾರರಿದ್ದಾರೆ. ಇದೂ ಕೂಡಾ ಸುದೀಪ್ ಗೆಲುವಿಗೆ ಸಹಕಾರಿಯಾಗುತ್ತದೆ ಎಂಬ ಲೆಕ್ಕಾಚಾರ ಜೆಡಿಎಸ್ ಪಾಳೆಯದಲ್ಲಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮೂಲದ ನೇರಳಗುಂಟೆ ತಿಪ್ಪೇಸ್ವಾಮಿ ಕಳೆದ ಬಾರಿ ಬಿಎಸ್‍ಆರ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಬಾರಿ ಯೂಥ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಹಾಲಿ ಜಿಲ್ಲಾ ಪಂಚಾಯತ್ ಸದಸ್ಯರೋರ್ವರು ಈ ಬಾರಿ ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಕ್ಷೇತ್ರಕ್ಕೆ ಅನೇಕರು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಅದರಲ್ಲಿ ಮಾಜಿ ಎಂಪಿ ನಟ ಶಶಿಕುಮಾರ್ ಕೂಡಾ ಒಬ್ಬರು. ಅವರೂ ಕೂಡಾ ಈ ಬಾರಿ ಹೇಗಾದರೂ ಮಾಡಿ ಕಾಂಗ್ರೆಸ್ ಟಿಕೆಟ್ ಪಡೆದು ಶಾಸಕನಾಗೋ ಹಂಬಲ ಹೊಂದಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಚಳ್ಳಕೆರೆ ಕ್ಷೇತ್ರದಿಂದ ಶಶಿಕುಮಾರ್ ಟಿಕೆಟ್ ಬಯಸಿದ್ದರಾದರೂ ಸಿಕ್ಕಿರಲಿಲ್ಲ. ಆಗ ಟಿಕೆಟ್ ರಘುಮೂರ್ತಿ ಪಾಲಾಗಿತ್ತು. ಹೀಗಾಗಿ ಕಿಚ್ಚ ಸುದೀಪ್ ಜೆಡಿಎಸ್ ನಿಂದ ಸ್ಪರ್ಧಿಸುತ್ತಾರಾ ಎಂಬ ಅನುಮಾನ ಮೂಡಿದೆ.

    ಇನ್ನು ಇದೇ ಚಿತ್ರದುರ್ಗದಿಂದ ಮೊಗವೀರ ಸಮುದಾಯದ ನಟಿ ಭಾವನಾ ಕೂಡಾ ಆಕಾಂಕ್ಷಿಯಾಗಿದ್ದಾರಂತೆ. ಆದರೆ ಬೇರೆಲ್ಲರ ಕಥೆ ಏನೋ ಹೇಳಲು ಬರೋದಿಲ್ಲ. ಕಿಚ್ಚ ಸುದೀಪ್ ಮನಸು ಬದಲಾವಣೆ ಮಾಡಿಕೊಳ್ಳದೆ ರಾಜಕೀಯಕ್ಕಿಳಿದರೆ ಅವರು ಮೊಳಕಾಲ್ಮೂರು ಕ್ಷೇತ್ರದಿಂದಲೇ ಕಣಕ್ಕಿಳಿಯೋದು ಖಚಿತ ಅನ್ನೋದು ಕೆಲವರ ಅಭಿಪ್ರಾಯವಾದರೆ ಇನ್ನು ಕೆಲವರು ಜೆಡಿಎಸ್ ಪ್ರಚಾರಕ್ಕಷ್ಟೇ ಕಿಚ್ಚ ಒಪ್ಪಿದ್ದಾರೆ ಅನ್ನೋ ಮಾತುಗಳೂ ವ್ಯಕ್ತವಾಗುತ್ತಿವೆ. ಒಟ್ಟಾರೆ ಕಿಚ್ಚ ಕುಮಾರಣ್ಣ ಭೇಟಿಯ ಅಂತಿಮ ಸೀಕ್ರೆಟ್ ಏನೆನ್ನುವುದು ಶೀಘ್ರದಲ್ಲೇ ಹೊರಬೀಳಲಿದೆ.

  • ಮಾಜಿ ಸಿಎಂ ಎಚ್‍ಡಿಕೆ ಮನೆಗೆ ಸುದೀಪ್ ಭೇಟಿ – 2 ಗಂಟೆಗಳ ಕಾಲ ಸುದೀರ್ಘ ಚರ್ಚೆ

    ಮಾಜಿ ಸಿಎಂ ಎಚ್‍ಡಿಕೆ ಮನೆಗೆ ಸುದೀಪ್ ಭೇಟಿ – 2 ಗಂಟೆಗಳ ಕಾಲ ಸುದೀರ್ಘ ಚರ್ಚೆ

    ಬೆಂಗಳೂರು: ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಮನೆಗೆ ಕಿಚ್ಚ ಸುದೀಪ್ ಭೇಟಿ ನೀಡಿದ್ದಾರೆ.

    ಕಿಚ್ಚ ಸುದೀಪ್ ಬೆಂಗಳೂರಿನಲ್ಲಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿಕೆ ಮನೆಗೆ ಭೇಟಿ ನೀಡಿ 2 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ದಾರೆ. ರಾಜಕೀಯ ವಿದ್ಯಮಾನಗಳ ಹಾಗೂ ಜೆಡಿಎಸ್ ಪರ ಪ್ರಚಾರ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.

    ಸುದೀಪ್ ಸಕ್ರಿಯ ರಾಜಕಾರಣದ ಬಗ್ಗೆ ಒಲವು ತೋರಲಿಲ್ಲ. ಆದರೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದು, ಸ್ಟಾರ್ ಕ್ಯಾಂಪೇನರ್ ಆಗೋ ಸಾಧ್ಯತೆಯಿದೆ. ಭೇಟಿ ವೇಳೆ ಇವರಿಬ್ಬರು ಯಾವ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನುವ ಬಗ್ಗೆ ಅಧಿಕೃತವಾಗಿ ಯಾರು ಹೇಳಿಕೆ ನೀಡಿಲ್ಲ.

    ಈ ಹಿಂದೆ ಬೆಂಗಳೂರು ಹೊರವಲಯ ನೆಲಮಂಗಲ ಶಾಸಕ ಶ್ರೀನಿವಾಸಮೂರ್ತಿ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದ್ದರು. ಶಾಸಕ ಶ್ರೀನಿವಾಸಮೂರ್ತಿ ಹಾಗೂ ಸುದೀಪ್ ಭೇಟಿಯಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

  • ಕಿಚ್ಚನನ್ನು ಟ್ರೋಲ್ ಮಾಡಿದವರ ವಿರುದ್ಧ ಕೇಸ್ ದಾಖಲು!

    ಕಿಚ್ಚನನ್ನು ಟ್ರೋಲ್ ಮಾಡಿದವರ ವಿರುದ್ಧ ಕೇಸ್ ದಾಖಲು!

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಅವರ ಕುಟುಂಬದ ವಿರುದ್ಧ ಕೆಲವರು ಅವಹೇಳನಕಾರಿ ಹೇಳಿಕೆ ನೀಡುತ್ತಿರುವವರಿಗೆ ಹಾಗೂ ಅವಮಾನ ಮಾಡುತ್ತಿರುವವರ ವಿರುದ್ಧ ಅಭಿಮಾನಿ ಸಂಘ ಸೈಬರ್ ಕ್ರೈಂಗೆ ದೂರು ನೀಡಿದೆ.

    ಏಲಿಯನ್ ದಿ ಹೆಬ್ಬುಲಿ, ದೇವಣ್ಣ ಅಂಗಡಿ, ಬಿಗ್ ಬಾಸ್ ಸುದೀಪ್ ಎನ್ನುವ ಟ್ರೋಲ್ ಪೇಜ್ ಗಳಲ್ಲಿ ಸುದೀಪ್‍ರನ್ನು ತೀರಾ ಕೆಳ ಮಟ್ಟದ ಭಾಷೆ ಬಳಸಿ ಗೇಲಿ ಮಾಡಲಾಗುತ್ತಿದೆ. ಸುದೀಪ್ ಜೊತೆ ಜೊತೆಗೆ ಅವರ ಕುಟುಂಬದವರನ್ನು ಎಳೆ ತರಲಾಗುತ್ತಿದೆ. ಕಳೆದ ಹಲವಾರು ದಿನಗಳಿಂದ ಇದು ನಿರಾತಂಕವಾಗಿ ನಡೆದಿದೆ. ಇದನ್ನು ಸಹಿಸಿಕೊಳ್ಳದ ಸುದೀಪ್ ಅಭಿಮಾನಿ ಸಂಘ ಟ್ರೋಲರ್ ಗಳ ವಿರುದ್ಧ ಸೈಬರ್ ಕ್ರೈಂಗೆ ದೂರು ನೀಡಿದೆ.

    ಸುದೀಪ್ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷರಾದ ನವೀನ್ ಗೌಡ ಸೈಬರ್ ಕ್ರೈಂಗೆ ದೂರು ನೀಡಿ ಟ್ರೋಲ್ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

  • ತಮಿಳು ನಟ ಸೂರ್ಯ ಬಗ್ಗೆ ಸುದೀಪ್ ಟ್ವಿಟ್ಟರ್ ನಲ್ಲಿ ಹೇಳಿದ್ದು ಹೀಗೆ!

    ತಮಿಳು ನಟ ಸೂರ್ಯ ಬಗ್ಗೆ ಸುದೀಪ್ ಟ್ವಿಟ್ಟರ್ ನಲ್ಲಿ ಹೇಳಿದ್ದು ಹೀಗೆ!

    ಬೆಂಗಳೂರು: ತಮಿಳು ಅಭಿಮಾನಿಯೊಬ್ಬರು ಕಿಚ್ಚ ಸುದೀಪ್ ತಮಿಳು ನಟ ಸೂರ್ಯ ಜೊತೆ ಒಂದೇ ವೇದಿಕೆಯಲ್ಲಿ ನಿಂತಿರುವ ವಿಡಿಯೋವೊಂದನ್ನು ಕರುನಾಡ ಕಿಚ್ಚನಿಗೆ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ತಮಿಳು ಸಿನಿಮಾ ಹಾಗೂ ಸೂರ್ಯ ಜೊತೆ ಸಿನಿಮಾ ಮಾಡಬೇಕೆಂದು ಕೋರಿದ್ದಾರೆ.

    ಸೂರ್ಯ ನಟಿಸಿದ ಸಿಗಂ-2 ಚಿತ್ರದ ಆಡಿಯೋ ಲಾಂಚ್ ವೇಳೆ ಕಿಚ್ಚ ಸುದೀಪ್ ಆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದರು. ಅಷ್ಟೇ ಅಲ್ಲದೇ ಅವರ ಜೊತೆ ವೇದಿಕೆ ಕೂಡ ಹಂಚಿಕೊಂಡಿದ್ದರು. ಆದರೆ ಈಗ ಆ ವಿಡಿಯೋವನ್ನು ಅಭಿಮಾನಿಯೊಬ್ಬರು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿ, ತಮಿಳು ಸಿನಿಮಾಗಳಲ್ಲಿ ಹಾಗೂ ಸೂರ್ಯನ ಜೊತೆ ನಟಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

    ಅಭಿಮಾನಿಯ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಕಿಚ್ಚ, ವಿಡಿಯೋ ನೋಡಿ ಸಂತಸಗೊಂಡಿದ್ದು, ಈ ವಿಡಿಯೋ ಟ್ವೀಟ್ ಮಾಡಿದ್ದಕ್ಕೆ ಧನ್ಯವಾದ ಫ್ರೆಂಡ್. ಸೂರ್ಯ ಅವರು ಗ್ರೇಟ್ ವ್ಯಕ್ತಿ ಹಾಗೂ ನನ್ನ ಆತ್ಮೀಯ ಸ್ನೇಹಿತ. ಅವರ ಜೊತೆ ವೇದಿಕೆ ಹಂಚಿಕೊಂಡಿದ್ದ ಕ್ಷಣ ಅದ್ಭುತವಾಗಿತ್ತು ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

    ಕಿಚ್ಚ ಸುದೀಪ್ ಕನ್ನಡ ಭಾಷೆಯಲ್ಲದೇ ಬೇರೆ ಬೇರೆ ಭಾಷೆಗಳಲ್ಲಿ ನಟಿಸಿದ್ದು, ಈ ಹಿಂದೆ ತೆಲುಗು ಅಭಿಮಾನಿಯೊಬ್ಬರು ಕಿಚ್ಚ ಅವರಿಗೆ ಟ್ವೀಟ್ ಮಾಡಿ, “ಸುದೀಪ್ ಅಣ್ಣ ನಾನು ಆಂಧ್ರದವನು. ನಿಮ್ಮ ಸಿನಿಮಾಗಳನ್ನು ಹೆಚ್ಚು ಇಷ್ಟ ಪಡುತ್ತೀನಿ. ಅದರಲ್ಲೂ `ಹೆಬ್ಬುಲಿ’ ಅಂದರೆ ನನಗೆ ತುಂಬಾ ಇಷ್ಟ. ದಯವಿಟ್ಟು ತೆಲುಗು ಸಿನಿಮಾ ಮಾಡಿ. ನಾವು ನಿಮ್ಮನ್ನ ಮತ್ತು ನಿಮ್ಮ ಧ್ವನಿಯನ್ನ ಹೆಚ್ಚು ಮಿಸ್ ಮಾಡಿಕೊಳ್ಳುತ್ತಿದ್ದೇವೆ” ಎಂದು ಕೇಳಿಕೊಂಡಿದ್ದರು.

    ಆ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಸುದೀಪ್ ”ಒಳ್ಳೆ ಸ್ಕ್ರಿಪ್ಟ್ ಸಿಕ್ಕರೆ ಖಂಡಿತವಾಗಿಯೂ ತೆಲುಗು ಸಿನಿಮಾ ಮಾಡುತ್ತೇನೆ” ಎಂದು ಅಭಿಮಾನಿಯ ಮನವಿಗೆ ಉತ್ತರಿಸಿದ್ದರು.

    https://twitter.com/Suriyafan_1/status/977216721571397632

  • ಕಿರುತೆರೆಯಲ್ಲೂ ಒಂದಾದ್ರೂ ದಿ-ವಿಲನ್ ಸ್ಟಾರ್ಸ್!

    ಕಿರುತೆರೆಯಲ್ಲೂ ಒಂದಾದ್ರೂ ದಿ-ವಿಲನ್ ಸ್ಟಾರ್ಸ್!

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ‘ದಿ-ವಿಲನ್’ ಚಿತ್ರದಲ್ಲಿ ನಟಿಸುತ್ತಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಆದರೆ ಈ ಜೋಡಿ ಈಗ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮತ್ತೆ ಒಂದಾಗಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಶಿವರಾಜ್ ಕುಮಾರ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅತಿಥಿಯಾಗಿ ಆಗಮಿಸಿದ್ದಾರೆ. ಈಗಾಗಲೇ ಸುದೀಪ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಚಿಕೆಯನ್ನು ಚಿತ್ರಿಕರಿಸಲಾಗಿದ್ದು, ಕಿಚ್ಚನ ಜೊತೆ ಬೇರೆ ಯಾವ ಅತಿಥಿ ಬರಲಿದ್ದಾರೆ ಎಂಬ ಕುತೂಹಲ ಹುಟ್ಟಿಸಿದೆ.

    ಕಿಚ್ಚ ಸುದೀಪ್ ಕಾರ್ಯಕ್ರಮದಲ್ಲಿ ಭಾಗವಹಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಫೋಟೋದಲ್ಲಿ ಸುದೀಪ್ ಕಪ್ಪು ಬಣ್ಣದ ಉಡುಪಿನಲ್ಲಿ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲದೇ ಫೋಟೋದಲ್ಲಿ ಶಿವಣ್ಣ, ಕಿಚ್ಚ ಸುದೀಪ್ ಅವರಿಗೆ ಡ್ಯಾನ್ಸ್ ಹೇಳಿಕೊಡುತ್ತಿರುವುದು ಕಾಣಬಹುದು.

    ಸದ್ಯ ಶಿವಣ್ಣನ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರ ಸಂಚಿಕೆ ಇದೇ ಭಾನುವಾರ ಪ್ರಸಾರವಾಗುತ್ತಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಈ ಹಿಂದೆ ಈ ಕಾರ್ಯಕ್ರಮದಲ್ಲಿ ನಟಿ ಶೃತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಉಪೇಂದ್ರ, ಶರಣ್, ಲೂಸ್ ಮಾದ ಯೋಗಿ, ಧನಂಜಯ್, ವಸಿಷ್ಟ ಸಿಂಹ, ದಿಗಂತ್ ಅತಿಥಿಯಾಗಿ ಆಗಮಿಸಿದ್ದರು.

  • ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪರ ಪ್ರಚಾರ ಮಾಡಲು ಹೊರಟ ಕಿಚ್ಚ: ಫೋಟೋ ವೈರಲ್

    ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪರ ಪ್ರಚಾರ ಮಾಡಲು ಹೊರಟ ಕಿಚ್ಚ: ಫೋಟೋ ವೈರಲ್

    ಬೆಂಗಳೂರು: 2018ರ ವಿಧಾನಸಭಾ ಚುನಾವಣೆಯಲ್ಲಿ ವಿರೋಧಿಗಳನ್ನು ಮಣಿಸಲು ಸ್ಟಾರ್ ಕ್ಯಾಂಪೇನ್ ಅಖಾಡ ರೆಡಿಯಾದಂತಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ಶಾಸಕ ಶ್ರೀನಿವಾಸಮೂರ್ತಿ ತಮ್ಮ ಗೆಲುವಿಗಾಗಿ ಚಿತ್ರನಟರ ಮೊರೆಹೋಗಿರುವಂತೆ ಕಾಣುತ್ತಿದೆ. ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದ್ದು, ನೆಲಮಂಗಲದಲ್ಲಿ ಜೆಡಿಎಸ್ ಪಕ್ಷದ ಪರ ಪ್ರಚಾರ ಮಾಡಲು ಕಿಚ್ಚ ಸುದೀಪ್ ಈಗಾಗಲೇ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಎಚ್‍ಡಿಕೆಗೆ ಕೈಯಾರೆ ಅಡುಗೆ ಮಾಡಿ ಬಡಿಸಿದ ಕಿಚ್ಚ ಸುದೀಪ್

    ಶಾಸಕ ಶ್ರೀನಿವಾಸಮೂರ್ತಿ ಹಾಗೂ ಕಿಚ್ಚ ಸುದೀಪ್ ಭೇಟಿಯಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸುದೀಪ್ ಕೂಡ 2018ರ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಕ್ಷೇತ್ರದಲ್ಲಿ ಸ್ಪರ್ಧಿಸುವ ಊಹಾಪೋಹಗಳು ಕೂಡ ಹರಿದಾಡುತ್ತಿವೆ. ಈ ನಡುವೆ ಅಭ್ಯರ್ಥಿಗಳ ಗೆಲುವಿಗಾಗಿ ಸ್ಟಾರ್ ಕ್ಯಾಂಪೇನ್ ನಲ್ಲಿ ನಟರ ಬಳಕೆ ಈಗಿನಿಂದಲೇ ರಂಗೇರುತ್ತಿದೆ. ಇದನ್ನೂ ಓದಿ: ಜೆಡಿಎಸ್‍ನ ಸ್ಟಾರ್ ಪ್ರಚಾರಕರಾಗಿ ನಟ ಪವನ್ ಕಲ್ಯಾಣ್- ಪವರ್ ಸ್ಟಾರ್ ಗೆ ನಿಖಿಲ್ ಕುಮಾರಸ್ವಾಮಿ ಸಾಥ್

    ಈ ಹಿಂದೆ ಸುದೀಪ್ ಚುನವಾಣೆಗೆ ಸ್ಪರ್ಧೆ ಮಾಡದೇ ಜೆಡಿಎಸ್ ಅಭ್ಯರ್ಥಿಗಳ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಮಾಜಿ ಸಿಎಂ ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ವೇಳೆ ಕಿಚ್ಚ ಭೇಟಿಯಾಗಿದ್ದರು. ಈ ವೇಳೆ ಸುದೀಪ್ ನಾನು ಚುನಾವಣೆಗೆ ಸ್ಪರ್ಧೆ ಮಾಡಲ್ಲ. ಆದರೆ ಪ್ರಚಾರ ಮಾಡುವ ಮನಸ್ಸಿದೆ ಎಂದು ಹೇಳಿದ್ದರು. ನಾಯಕ ಸಮುದಾಯದ ಮತಗಳನ್ನು ಸೆಳೆಯೋಕೆ ಕಿಚ್ಚನನ್ನು ಬಳಸಿಕೊಳ್ಳೋಕೆ ಜೆಡಿಎಸ್ ಕೂಡ ಒಳಗೊಳಗೇ ಸಿದ್ಧತೆ ಮಾಡಿಕೊಂಡಿತ್ತು ಎಂದು ಹೇಳಲಾಗಿತ್ತು.

    ಚಿತ್ರದುರ್ಗ, ಚಳ್ಳಕೆರೆ, ಬಳ್ಳಾರಿಯ ಸುತ್ತಮುತ್ತ ಭಾಗಗಳಲ್ಲಿ ಜೆಡಿಎಸ್ ಪರವಾಗಿ ಸುದೀಪ್ ಪ್ರಚಾರ ಮಾಡುವ ಸಾಧ್ಯತೆಗಳಿವೆ. ಇದನ್ನೂ ಓದಿ: ಕರ್ನಾಟಕ ರಾಜಕೀಯ ಅಖಾಡಕ್ಕೆ ಧುಮುಕ್ತಾರಾ ನಟ ಪವನ್ ಕಲ್ಯಾಣ್?

  • ವಿಷ್ಣು ಸ್ಮಾರಕದಲ್ಲಿ ದಿ-ವಿಲನ್ ಕಿಚ್ಚನ ಎಂಟ್ರಿ ಸಾಂಗ್!

    ವಿಷ್ಣು ಸ್ಮಾರಕದಲ್ಲಿ ದಿ-ವಿಲನ್ ಕಿಚ್ಚನ ಎಂಟ್ರಿ ಸಾಂಗ್!

    ಬೆಂಗಳೂರು: `ದಿ- ವಿಲನ್’ ಚಿತ್ರದ ಚಿತ್ರೀಕರಣ ಶುರುವಾದಾಗಿಂದ ಸಿನಿಪ್ರೇಕ್ಷಕರಲ್ಲಿ ಭಾರೀ ಕ್ರೇಜ್ ಹುಟ್ಟಿಸಿದೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಇಂಟ್ರಡಕ್ಷನ್ ಸಾಂಗ್‍ಗೆ ವಿಷ್ಣು ಸ್ಮಾರಕದ ಬಳಿ ಚಿತ್ರಿಕರಿಸಲಾಗಿದ್ದು, ಈಗ ಆ ಶೂಟಿಂಗ್‍ನಲ್ಲಿ ತೆಗೆದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    `ದಿ-ವಿಲನ್’ ಚಿತ್ರದ ಎಲ್ಲಾ ಸಂಗತಿಗಳು ಒಂದೊಂದಾಗಿ ಹೊರಬರುತ್ತಿದ್ದು, ಇದೀಗ ಕಿಚ್ಚ ಸುದೀಪ್ ಅವರ ಇಂಟ್ರಡಕ್ಷನ್ ಸಾಂಗ್ ಅನ್ನು ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕದಲ್ಲಿ ಚಿತ್ರೀಕರಿಸಲಾಗಿರುವ ವಿಷಯ ತಿಳಿದುಬಂದಿದೆ. ಕಿಚ್ಚ ಸುದೀಪ್ ಶೂಟಿಂಗ್ ವೇಳೆ ಸ್ಮಾರಕದ ಬಳಿ ಫೋಟೋ ಕ್ಲಿಕ್ಕಿಸಿಕೊಂಡು ತಮ್ಮ ಫೇಸ್‍ಬುಕ್ ಅಕೌಂಟ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ.

    ನಿರ್ದೇಶಕ ಪ್ರೇಮ್, ಕಿಚ್ಚನ ಇಂಟ್ರಡಕ್ಷನ್ ಸಾಂಗ್ ವಿಶೇಷವಾಗಿರಲು ವಿಷ್ಣು ಸ್ಮಾರಕದ ಬಳಿ ಚಿತ್ರೀಕರಿಸಿದ್ದಾರೆ ಎಂದು ಹೇಳಲಾಗಿದೆ. ಕಿಚ್ಚ ಸುದೀಪ್ ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿದ್ದು, ದಿ-ವಿಲನ್ ಚಿತ್ರದಲ್ಲಿ ತಮ್ಮ ನೆಚ್ಚಿನ ನಟನನ್ನು ಸ್ಮರಣೆ ಮಾಡಿದ್ದರೂ ಯಾವುದೇ ಅಚ್ಚರಿ ಪಡಬೇಕಾಗಿಲ್ಲ.

    ಸದ್ಯ ದಿ-ವಿಲನ್ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರ ಮಾತಿನ ಭಾಗ ಮುಗಿದಿದ್ದು, ಶಿವಣ್ಣ ತಮ್ಮ ಭಾಗದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರ ಮಲ್ಟಿಸ್ಟಾರ್ ಫಿಲಂ ಆಗಿದ್ದು, ಚಿತ್ರದಲ್ಲಿ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಬಹುಭಾಷಾ ನಟಿ ಆ್ಯಮಿ ಜಾಕ್ಸನ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

  • ಪುನೀತ್, ಸುದೀಪ್ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು ‘ಪಡ್ಡೆಹುಲಿ’ ಮುಹೂರ್ತ!

    ಪುನೀತ್, ಸುದೀಪ್ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು ‘ಪಡ್ಡೆಹುಲಿ’ ಮುಹೂರ್ತ!

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸುತ್ತಿರುವ `ಪಡ್ಡೆಹುಲಿ’ ಚಿತ್ರದ ಮುಹೂರ್ತ ಅದ್ಧೂರಿಯಾಗಿ ನೆರವೇರಿದೆ.

    ಬೆಂಗಳೂರಿನ ಬನಶಂಕರಿ ಬಳಿಯ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಾಲಯದಲ್ಲಿ `ಪಡ್ಡೆಹುಲಿ’ ಚಿತ್ರದ ಶುಭ ಮುಹೂರ್ತ ನಡೆಯಿತು. `ರಾಜಹುಲಿ’, `ಜಾನ್ ಜಾನಿ ಜನಾರ್ದನ್’ ಹಾಗೂ `ಸಂಹಾರ’ ಖ್ಯಾತಿಯ ಗುರು ದೇಶ್‍ಪಾಂಡೆ ಕಲ್ಪನೆಯಲ್ಲಿ ಚಿತ್ರ ಮೂಡಿಬರಲಿದೆ. ಚಿತ್ರದಲ್ಲಿ ಶ್ರೇಯಸ್ ಗೆ ಜೊತೆಯಾಗಿ ನಿಶ್ವಿಕಾ ನಟಿಸಲಿದ್ದಾರೆ. ಇದನ್ನೂ ಓದಿ: ಪಡ್ಡೆಹುಲಿ ನಾಯಕಿ ನಿಶ್ವಿಕಾ ಯಾರು ಗೊತ್ತೆ?

    ಮುಹೂರ್ತ ಸಮಾರಂಭದಲ್ಲಿ ಭಾಗಿಯಾದ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ಕಿಚ್ಚ ಸುದೀಪ್ ಈ ಚಿತ್ರಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಕಿಚ್ಚ ಸುದೀಪ್ ಕ್ಲಾಪ್ ಮಾಡಿ ಶುಭಾಶಯ ತಿಳಿಸಿದರೆ, ಪುನೀತ್ ರಾಜ್‍ಕುಮಾರ್ ಕ್ಯಾಮೆರಾ ಚಾಲನೆ ಮಾಡಿ ಶುಭ ಹಾರೈಸಿದ್ರು. ಇದನ್ನೂ ಓದಿ: ಪಡ್ಡೆ ಹುಲಿಯ ಫಸ್ಟ್ ಲುಕ್ ರಿಲೀಸ್ ಮಾಡಿದ ಹೆಬ್ಬುಲಿ ಹೀಗಂದ್ರು! 

    ನಿರ್ಮಾಪಕ ಕೆ. ಮಂಜು ಅವರ ಆರಾಧ್ಯ ದೈವ ಸಾಹಸ ಸಿಂಹ ವಿಷ್ಣುವರ್ಧನ್ ಮಡದಿ ಭಾರತಿ ವಿಷ್ಣುವರ್ಧನ್ ದೀಪ ಹಚ್ಚಿ ಚಿತ್ರತಂಡಕ್ಕೆ ಶುಭಸಂದೇಶ ಕೊಟ್ಟರು. ಚಿತ್ರರಂಗದ ಅನೇಕ ಗಣ್ಯರು ಪಡ್ಡೆಹುಲಿ ಚಿತ್ರದ ಮುಹೂರ್ತಕ್ಕೆ ಸಾಕ್ಷಿಯಾದರು. ಇದನ್ನೂ ಓದಿ: ಡ್ಯೂಪ್ ಗಳಿಲ್ಲದೇ ಬೆಂಕಿಯಲ್ಲಿ ಫೋಟೋ ಶೂಟ್ ಮಾಡಿದ ಪಡ್ಡೆ ಹುಲಿ ಶ್ರೇಯಸ್! ಫೋಟೋಗಳಲ್ಲಿ ನೋಡಿ 

     

     

     

  • ಅಸಾಧ್ಯವಾಗಿದ್ದನ್ನು ಸಾಧ್ಯ ಮಾಡಿದೆ ಟಗರು: ಚಿತ್ರ ನೋಡಿ ವಿಮರ್ಶೆ ಬರೆದ ಸುದೀಪ್

    ಅಸಾಧ್ಯವಾಗಿದ್ದನ್ನು ಸಾಧ್ಯ ಮಾಡಿದೆ ಟಗರು: ಚಿತ್ರ ನೋಡಿ ವಿಮರ್ಶೆ ಬರೆದ ಸುದೀಪ್

    ಬೆಂಗಳೂರು: ಟಗರು ಸಿನಿಮಾ ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ಸು ಕಾಣುತ್ತಿದ್ದು ಕಿಚ್ಚ ಸುದೀಪ್ ಪ್ರೇಕ್ಷಕರಂತೆ ಟಗರು ಚಿತ್ರವನ್ನು ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲದೇ ಸಿನಿಮಾದ ಬಗ್ಗೆ ಕಿರು ಬರಹವನ್ನು ಬರೆದು ಟ್ವೀಟ್ ಮಾಡಿದ್ದಾರೆ.

    ಕಿಚ್ಚ ಸುದೀಪ್ ಟಗರು ಸಿನಿಮಾ ನೋಡಿ ಚಿತ್ರವನ್ನು ತಮ್ಮದೇ ಸ್ಟೈಲ್‍ನಲ್ಲಿ ವಿಮರ್ಶಿಸಿದ್ದಾರೆ. ಟಗರು ಸಿನಿಮಾದ ನಿರೂಪಣೆ ತುಂಬಾ ವಿಶೇಷವಾಗಿದೆ ಹಾಗೂ ಚೆನ್ನಾಗಿದೆ. ತೆರೆ ಮೇಲೆ ಬರುವ ಪ್ರತಿಯೊಂದು ಪಾತ್ರವೂ ಪ್ರೇಕ್ಷಕರನ್ನು ಕನ್ ಫ್ಯೂಸ್ ಮಾಡಿಸುತ್ತದೆ. ಕನ್ನಡ ಚಿತ್ರರಂಗದಲ್ಲಿ ಪ್ರೇಕ್ಷಕರ ಕನ್ ಫ್ಯೂಸ್ ದೂರ ಮಾಡುವ ಪ್ರಯತ್ನ ಅದ್ಭುತವಾಗಿ ಮಾಡಿದ್ದಾರೆ ಎಂದು ಸುದೀಪ್ ಹೇಳಿದ್ದಾರೆ.

    ಟಗರು ಅಂತಹ ಸಿನಿಮಾವನ್ನು ಮಾಡಲು ಸೂರಿಯಿಂದ ಮಾತ್ರ ಸಾಧ್ಯ. ಚಿತ್ರದಲ್ಲಿ ವಿಭಿನ್ನ ಪಾತ್ರ, ಪಾತ್ರಕ್ಕೆ ತಕ್ಕಂತೆ ಲೋಕೇಶನ್ ಆಯ್ಕೆ ಮಾಡಿಕೊಳ್ಳುವುದು ಅವರಿಂದ ಮಾತ್ರ ಸಾಧ್ಯ. ಸಿನಿಮಾ ನೋಡಿ ಚಿತ್ರಮಂದಿರದಿಂದ ಹೊರಬರುತ್ತಿದ್ದಂತೆ ಕೆಲವರಿಗೆ ಪಾತ್ರಗಳ ಹೆಸರು ನೆನಪಿರುವುದ್ದೀಲ್ಲ. ಆದರೆ ಸೂರಿ ತಮ್ಮ ಚಿತ್ರದ ಪಾತ್ರಗಳಿಗೆ ಚಿಟ್ಟೆ, ಜಿರಳೆ ಹೀಗೆ ವಿಭಿನ್ನ ಹೆಸರನ್ನು ನೀಡಿ ಜನರು ಆ ಪಾತ್ರವನ್ನು ನೆನಪು ಮಾಡಿಕೊಳ್ಳುವಂತೆ ಮಾಡುತ್ತಾರೆ ಎಂದು ಸುದೀಪ್ ಸೂರಿ ನಿರ್ದೇಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಚಿತ್ರದ ನಾಯಕ ಶಿವರಾಜ್ ಕುಮಾರ್ ಬಗ್ಗೆ ನಿಜ ಹೇಳಬೇಕೆಂದರೆ ಶಿವಣ್ಣ ತಮ್ಮ ಎನರ್ಜಿಯನ್ನು ಈ ಚಿತ್ರದಲ್ಲಿ ಒಟ್ಟುಗೂಡಿಸಿದ್ದಾರೆ. ಅವರ ಎನರ್ಜಿ ಎಂದಿಗೂ ಅಂತ್ಯವಾಗುವುದಿಲ್ಲ ಎಂಬುದು ಈ ಚಿತ್ರದಲ್ಲಿ ಗೊತ್ತಾಗುತ್ತದೆ. ಇನ್ನೂ ಈ ಚಿತ್ರದಲ್ಲಿ ಡಾಲಿ ಪಾತ್ರದಲ್ಲಿ ಕಾಣಿಸಿಕೊಂಡ ಧನಂಜಯ್ ಅಭಿನಯವೂ ಚೆನ್ನಾಗಿದೆ. ಅವರ ಸ್ಕ್ರೀನ್ ಅಪಿಯರೆನ್ಸ್ ಅದ್ಭುತವಾಗಿದೆ ಎಂದು ಸುದೀಪ್ ಬಣ್ಣಿಸಿದ್ದಾರೆ.

    ಚಿತ್ರದಲ್ಲಿ ಚಿಟ್ಟೆ ಪಾತ್ರದಲ್ಲಿ ಕಾಣಿಸಿಕೊಂಡ ನಟ ವಸಿಷ್ಠ ಸಿಂಹ ಅವರ ಧ್ವನಿಯನ್ನು ಸುದೀಪ್ ಮೆಚ್ಚಿಗೊಂಡಿದ್ದಾರೆ. ಚಿತ್ರದ ಕೆಲ ಸೀನ್‍ಗಳಲ್ಲಿ ವಸಿಷ್ಠ ಧ್ವನಿ ಎಲ್ಲರ ಗಮನ ಅವರತ್ತ ಸೆಳೆಯುವ ಹಾಗೇ ಮಾಡುತ್ತದೆ. ಅವರ ಧ್ವನಿ ಅದ್ಭುತವಾಗಿದ್ದು, ಅವರ ಸೂಕ್ಷ್ಮ ನಟನೆ ಎಲ್ಲರನ್ನೂ ಸೆಳೆಯುತ್ತದೆ ಎಂದು ಕಿಚ್ಚ ಹೇಳಿದ್ದಾರೆ.

    ಟಗರು ಚಿತ್ರದಲ್ಲಿ ಸಂಗೀತ ಕೂಡ ಮುಖ್ಯ ಪಾತ್ರ ವಹಿಸುತ್ತದೆ. ಈ ಚಿತ್ರದ ಸೀನ್‍ಗಳಿಗೆ ತಕ್ಕಂತೆ ಅದಕ್ಕೆ ಹಿನ್ನಲೆ ಸಂಗೀತ ನೀಡಿರುವುದು ಚೆನ್ನಾಗಿದೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸುಕೊಳ್ಳುತ್ತಿರುವ ಹೊಸ ಸಂಗೀತ ನಿರ್ದೇಶಕರಿಗೆ ಸುದೀಪ್ ಶುಭ ಕೋರಿದ್ದಾರೆ.

    ಟಗರು ಚಿತ್ರ ವೀಕ್ಷಿಸಿದ ಸುದೀಪ್ ಇಡೀ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ. ಅಸಾಧ್ಯವಾಗಿದ್ದನ್ನು ಸಾಧ್ಯ ಮಾಡಿ ತೋರಿಸಿದ ಚಿತ್ರದ ಪ್ರತಿಯೊಬ್ಬ ಸದಸ್ಯರಿಗೂ ನನ್ನ ಶುಭಾಶಯ ಎಂದು ಸುದೀಪ್ ಟಗರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಗೂಗಲ್ ಪ್ಲಸ್ ನಲ್ಲಿ ಬರೆದುಕೊಂಡಿದ್ದಾರೆ.

  • ಅಭಿಮಾನಿಯ ಸಾವಿನ ಸುದ್ದಿ ಕೇಳಿ ಕಣ್ಣೀರಿಟ್ಟ ಕಿಚ್ಚ ಸುದೀಪ್!

    ಅಭಿಮಾನಿಯ ಸಾವಿನ ಸುದ್ದಿ ಕೇಳಿ ಕಣ್ಣೀರಿಟ್ಟ ಕಿಚ್ಚ ಸುದೀಪ್!

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ. ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ಕೇಳುವ ಕೋರಿಕೆಗಳನ್ನ ಈಡೇರಿಸುತ್ತಾರೆ. ಹೀಗೆ ವಿನುತಾ ಎಂಬ ಅಭಿಮಾನಿಯ ಆಸೆಯನ್ನು ಕೂಡ ಪೂರೈಸಿದ್ದರು. ಆದರೆ ಈಗ ಈ ಅಭಿಮಾನಿಯ ಸಾವಿನ ಸುದ್ದಿ ಕೇಳಿ ಸುದೀಪ್ ಮನನೊಂದಿದ್ದಾರೆ.

    ವಿನುತಾ ಕ್ಯಾನ್ಸರ್ ರೋಗದಿಂದ ಬಳುತ್ತಿದ್ದ ಕಿಚ್ಚನ ಅಭಿಮಾನಿ. ವಿನುತಾಗೆ ಕಿಚ್ಚ ಸುದೀಪ್ ಎಂದರೆ ತುಂಬಾನೇ ಇಷ್ಟ. ವಿನುತಾರ ಕೊನೆಯ ಆಸೆಯ ಬಗ್ಗೆ ಕಿಚ್ಚ ಸುದೀಪ್ ಸೇನಾ ಸಮಿತಿಯು ನಟ ಸುದೀಪ್ ಅವರಿಗೆ ಹೇಳಿದ್ದರು. ವಿಷಯ ತಿಳಿದ ನಂತರ ಸುದೀಪ್ ವಿನುತಾ ಕೊನೆಯಾಸೆಯಂತೆ ಅವರನ್ನು ತಮ್ಮ ಜೆ.ಪಿ ನಗರದಲ್ಲಿರುವ ಮನೆಗೆ ಕರೆಸಿ ಭೇಟಿ ಮಾಡಿದ್ದರು. ವಿನುತಾ ಮಾತನಾಡುತ್ತಾ ಹಾಗೂ ಫೋಟೋಗಳನ್ನು ತೆಗೆದುಕೊಳ್ಳುತ್ತಾ ಸುದೀಪ್ ಜೊತೆ ಸಮಯ ಕಳೆದಿದ್ದರು.

    ಸುದೀಪ್‍ರನ್ನು ಭೇಟಿ ಮಾಡಿದ್ದಾಗ ವಿನುತಾ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಕ್ಯಾನ್ಸರ್ ಉಲ್ಬಣಗೊಂಡು ನಾಲ್ಕನೆಯ ಹಂತ ತಲುಪಿತ್ತು. ವೈದ್ಯರು ವಿನುತಾ ಬದುಕುಳಿಯುವ ಸಾಧ್ಯತೆ ತುಂಬಾ ಕಡಿಮೆ ಎಂದು ತಿಳಿಸಿದ್ದರು.

    ಸುದೀಪ್ ಅವರನ್ನು ಭೇಟಿ ಮಾಡಿದ ಬಳಿಕವೂ ವಿನುತಾ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೆ ವಿನುತಾ ಸಾವನ್ನಪ್ಪಿದ್ದಾರೆ. ವಿನುತಾ ಸಾವಿನ ಸುದ್ದಿ ಕೇಳಿ ಸುದೀಪ್ ಟ್ವಿಟ್ಟರ್ ನಲ್ಲಿ ವಿನುತಾ ಜೊತೆ ಇರುವ ಫೋಟೋ ಹಾಕಿ “ಇದು ತುಂಬಾ ನೋವಿನ ವಿಚಾರ, ನನ್ನ ತಂಗಿ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಜೊತೆಯಿರುವ ಈ ಫೋಟೋವನ್ನು ನಿಧಿಯಂತೆ ಕಾಪಾಡಿಕೊಳ್ಳುತ್ತೇನೆ” ಎಂದು ಬರೆದು ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕೊನೆಯಾಸೆ ತೀರಿದ ಬಳಿಕ ಕೊನೆ ಉಸಿರೆಳೆದ ದರ್ಶನ್ ಅಭಿಮಾನಿ