Tag: Kichcha 46

  • ಸುದೀಪ್ ಹುಟ್ಟು ಹಬ್ಬಕ್ಕೆ ‘ಕಿಚ್ಚ 46’ ಸಿನಿಮಾದ ಟೈಟಲ್ ಲಾಂಚ್

    ಸುದೀಪ್ ಹುಟ್ಟು ಹಬ್ಬಕ್ಕೆ ‘ಕಿಚ್ಚ 46’ ಸಿನಿಮಾದ ಟೈಟಲ್ ಲಾಂಚ್

    ಸುದೀಪ್ (Sudeep) ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಈಗಾಗಲೇ ‘ಕಿಚ್ಚ 46’ ಹೆಸರಿನಲ್ಲಿ ಶೂಟಿಂಗ್ ಶುರು ಮಾಡಿರುವ ಚಿತ್ರದ ಹೆಸರನ್ನು ಅವರ ಹುಟ್ಟು ಹಬ್ಬದ ದಿನದಂದು ಲಾಂಚ್ ಮಾಡುವ ಸುದ್ದಿ ಹೊರ ಬಿದ್ದಿದೆ. ಸೆಪ್ಟಂಬರ್ 2 ರಂದು ಸುದೀಪ್ ತಮ್ಮ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಹೊಸ ಸಿನಿಮಾದ ಟೈಟಲ್ ಘೋಷಣೆ ಆಗಲಿದೆ ಎನ್ನುವ ಮಾಹಿತಿ ಇದೆ.

    ಸದ್ಯ ಸುದೀಪ್ ಚೆನ್ನೈನಲ್ಲಿ ಬೀಡು ಬಿಟ್ಟಿದ್ದಾರೆ. ತಮಿಳುನಾಡಿನಲ್ಲಿ ಕನ್ನಡದ ಕಹಳೆ ಊದಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಹೀರೋ ಆಗಿದ್ದರೂ ಕನ್ನಡ ನಾಡಿನ ಋಣ ತೀರಿಸಲು ಏನು ಮಾಡಬೇಕೊ ಎಲ್ಲವನ್ನೂ ಮುಗಿಸಿದ್ದಾರೆ. `ಕೆ-46′ (K-46) ಚಿತ್ರದಲ್ಲಿ ಈ ಕಾಯಕ ಮಾಡಿ ಕನ್ನಡಿಗರಿಂದ ಶಹಬ್ಬಾಶ್‌ ಗಿರಿ ಪಡೆದಿದ್ದಾರೆ. ಇದನ್ನೂ ಓದಿ:ಸಕ್ಸಸ್ ಸೀಕ್ರೆಟ್ ಬಿಚ್ಚಿಟ್ಟ ನಟಿ- ಡಿಸೆಂಬರ್ ನನ್ನ ಲಕ್ಕಿ ತಿಂಗಳು ಎಂದ ರಶ್ಮಿಕಾ ಮಂದಣ್ಣ

    ಇದು ಕಿಚ್ಚನ ಹೊಸ ಸಿನಿಮಾ (New Cinema). ಟೈಟಲ್ ಇನ್ನೂ ಇಟ್ಟಿಲ್ಲ. ಇದರ ಶೂಟಿಂಗ್‌ಗಾಗಿ ಚೆನ್ನೈನ (Chennai) ಮಹಾಬಲಿಪುರಂನಲ್ಲಿ ಹಾಕಿದ ಸೆಟ್‌ನಲ್ಲಿ ಕಾರ್ಯ ನಿರತರಾಗಿದ್ದಾರೆ. ಇಲ್ಲಿಂದಲೇ ಅದೊಂದು ಮಹಾ ಗುಟ್ಟು ಹೊರ ಬಿದ್ದಿದೆ. ಇದರ ನಿರ್ಮಾಪಕ ಎಸ್ ಥಾನು (S Thanu), ನಿರ್ದೇಶಕ ವಿಜಯ್ (Vijay). ಇಬ್ಬರದೂ ತಮಿಳು ಮೂಲ. ಆದರೆ ಶೂಟಿಂಗ್ ಸೆಟ್‌ನಲ್ಲಿ ಬಹುತೇಕರು ಕನ್ನಡಿಗರೇ. ಅದಕ್ಕೆ ಕಾರಣ ಸುದೀಪ್. ತಮಿಳು ಭಾಷೆಯಲ್ಲೇ ಶೂಟಿಂಗ್ ಮಾಡೋಣ ಎಂದಿದ್ದ ನಿರ್ಮಾಪಕರ ಮಾತನ್ನು ಸುದೀಪ್ ನಿರಾಕರಿಸಿದ್ದು ಮೂಲ ಹೂರಣ.

    ‘ಮೊದಲು ಕನ್ನಡ ಭಾಷೆಯಲ್ಲೇ ಶೂಟಿಂಗ್ ಮಾಡೋಣ. ನಂತರ ಅದನ್ನು ತಮಿಳಿಗೆ ಡಬ್ ಮಾಡೋಣ’ ಹೀಗಂತ ಸುದೀಪ್ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ತಾಕೀತು ಮಾಡಿದ್ದಾರಂತೆ. ಅದೇ ರೀತಿ ಕೆಲಸ ನಡೆಯುತ್ತಿದೆ. ಕೆಲವು ಹೀರೋಗಳು ತಮಿಳು ಸಿನಿಮಾ ಸಿಕ್ಕಿದ ಮಾತ್ರಕ್ಕೆ ಹುಟ್ಟಿದ ನೆಲ ಮರೆಯುತ್ತಾರೆ. ಆದರೆ ಸುದೀಪ್ ಹಾಗೆ ಮಾಡಿಲ್ಲ. ಮಾಡುವುದೂ ಇಲ್ಲ. ಅದರ ಪರಿಣಾಮ ಕಣ್ಣ ಮುಂದಿದೆ. ಕನ್ನಡ ನಾಡಿನ ಜನರು ಕೇಕೆ ಹಾಕುವಂತೆ ಮಾಡಿದೆ.

     

    ಈ ಸಿನಿಮಾಗಾಗಿ ಸುದೀಪ್ ಒಂದೇ ಹಂತದ ಶೂಟಿಂಗ್ ಮಾಡಲು ತಯಾರಿ ಮಾಡಿಕೊಂಡಿದ್ದಾರಂತೆ. ಅಂದುಕೊಂಡಂತೆ ಶೂಟಿಂಗ್ ಮಾಡಿ, ಇದೇ ವರ್ಷವೇ ಸಿನಿಮಾವನ್ನು ತೆರೆಗೆ ತರಲು ಸಿದ್ದತೆ ಕೂಡ ಮಾಡಿಕೊಂಡಿದ್ದಾರಂತೆ. ಸುದೀಪ್ ಸಿನಿಮಾಗಾಗಿ ಕಾದ ಅಭಿಮಾನಿಗಳಿಗೆ ನಿಜಕ್ಕೂ ಇದೊಂದು ಗುಡ್ ನ್ಯೂಸ್.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಕಿಚ್ಚ 46’ ಚಿತ್ರಕ್ಕೆ 65 ದಿನಗಳ ನಿರಂತರ ಚಿತ್ರೀಕರಣ: 5 ಭಾಷೆಗಳಲ್ಲಿ ಸಿನಿಮಾ

    ‘ಕಿಚ್ಚ 46’ ಚಿತ್ರಕ್ಕೆ 65 ದಿನಗಳ ನಿರಂತರ ಚಿತ್ರೀಕರಣ: 5 ಭಾಷೆಗಳಲ್ಲಿ ಸಿನಿಮಾ

    ವಿವಾದದ ಕಾರಣದಿಂದ ಬೇಸತ್ತಿದ್ದ ಕಿಚ್ಚನ (Kichcha Sudeep) ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಸುದೀಪ್ ಅವರ ಹೊಸ ಸಿನಿಮಾದ ಶೂಟಿಂಗ್ ನಾಳೆಯಿಂದ ಶುರುವಾಗಲಿದ್ದು, ಚೆನ್ನೈನಲ್ಲಿ ಸುದೀಪ್ ಬೀಡು ಬಿಡಲಿದ್ದಾರೆ. ನಿರಂತರ ಚಿತ್ರೀಕರಣಕ್ಕೆ ನಿರ್ದೇಶಕರು ಪ್ಲ್ಯಾನ್ ಮಾಡಿದ್ದು, ಚೆನ್ನೈ ಮತ್ತು ಸುತ್ತಮುತ್ತ ಶೂಟಿಂಗ್ ನಡೆಯಲಿದೆ ಎಂದು ಹೇಳಲಾಗುತ್ತಿದೆ.

    ಕಿಚ್ಚ 46 (Kichcha 46) ಸಿನಿಮಾದ ಶೂಟಿಂಗ್ ಶುರುವಾಗುವುದಕ್ಕೂ ಮುನ್ನ ಸುದೀಪ್ ತಿರುಪತಿಗೆ (Thirupathi Thimmappa) ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಹಲವು ದಿನಗಳಿಂದ ಕಿರಿಕಿರಿ ಅನುಭವಿಸುತ್ತಿದ್ದ ಕಿಚ್ಚ, ದೇವರ ದರ್ಶನ ಪಡೆದುಕೊಂಡು ನಿರಾಳರಾಗಿದ್ದಾರೆ. ಅಲ್ಲದೇ, ಹೊಸ ಸಿನಿಮಾದ ಚಿತ್ರೀಕರಣ ನಿರಾತಂಕವಾಗಿ ನಡೆಯಲಿ ಎಂದು ಬೇಡಿಕೊಂಡಿದ್ದಾರೆ. ಇದನ್ನೂ ಓದಿ:ಓ ಮೈ ಗಾಡ್: ಅಕ್ಷಯ್ ಕುಮಾರ್ ಶಿವನಾಗೋದು ಬೇಡ ಅಂದಿತಾ ಸೆನ್ಸಾರ್ ಮಂಡಳಿ?

    ʼವಿಕ್ರಾಂತ್ ರೋಣ’ (Vikrant Rona) ಸಿನಿಮಾ 2022ರಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ಸುದೀಪ್ ಒಂದು ಬ್ರೇಕ್ ಪಡೆದರು. ವೃತ್ತಿ ಜೀವನದಲ್ಲಿ ಅವರು ಪಡೆದ ಮೊದಲ ಬ್ರೇಕ್ ಇದು ಅನ್ನೋದು ವಿಶೇಷ. ಈ ಸಮಯದಲ್ಲಿ ಸುದೀಪ್ ಅವರು ಕುಟುಂಬಕ್ಕೆ ಹೆಚ್ಚು ಆದ್ಯತೆ ಕೊಟ್ಟರು. ಚುನಾವಣಾ ಪ್ರಚಾರದಲ್ಲಿ ಭಾಗಿ ಆದರು. ಬಿಜೆಪಿ ಕ್ಷೇತ್ರದ ಪರ ಪ್ರಚಾರಕ್ಕೆ ಕಣಕ್ಕೆ ಇಳಿದರು. ಈಗ ಅವರು ಶೂಟಿಂಗ್ ಹೊರಡೋಕೆ ರೆಡಿ ಆಗಿದ್ದಾರೆ.

     

    ಒಟ್ಟು 65 ದಿನಗಳ ಸುದೀರ್ಘ ಶೆಡ್ಯೂಲ್‌ನಲ್ಲಿ ಚಿತ್ರೀಕರಣ ನಡೆಯಲಿದ್ದು, ಐದು ಭಾಷೆಗಳಲ್ಲಿ ಸಿನಿಮಾ ಮೂಡಿ ಬರಲಿದೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ(Mahabalipuram) ಸಿನಿಮಾದ ಬಹುತೇಕ ಚಿತ್ರೀಕರಣ ನಡೆಯಲಿದೆ. ಸಿನಿಮಾದ ಮೊದಲ ಝಲಕ್ ಸಂಚಲನ ಮೂಡಿಸಿದೆ. ನಾನು ಮನುಷ್ಯನಲ್ಲ ರಾಕ್ಷಸ ಎನ್ನುವ ಕಿಚ್ಚನ ಖಡಕ್ ಡೈಲಾಗ್ ಫ್ಯಾನ್ಸ್ ಕಿಕ್ ಕೊಟ್ಟಿತ್ತು. ಈಗ ಸಿನಿಮಾ ಚಿತ್ರೀಕರಣಕ್ಕೆ ಕೌಂಟ್‌ಡೌನ್ ಶುರುವಾಗಿದೆ. ವಿಜಯ್ ಕಾರ್ತಿಕೇಯ ಅವರು ‘K 46ʼ ಚಿತ್ರಕ್ಕೆ ನಿರ್ದೇಶನ ಮಾಡ್ತಿದ್ದಾರೆ. ವಿ ಕ್ರಿಯೇಷನ್ಸ್ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]