ಹಿಂದಿ ರಾಷ್ಟ್ರ ಭಾಷೆ. ನೀವು ಒಪ್ಪಿಕೊಳ್ಳದೇ ಇದ್ದರೆ ನಿಮ್ಮ ಸಿನಿಮಾವನ್ನು ಹಿಂದಿಯಲ್ಲಿ ಡಬ್ ಮಾಡಿ ಏಕೆ ರಿಲೀಸ್ ಮಾಡುತ್ತೀರಿ ಎಂದು ಕಿಚ್ಚ ಸುದೀಪ್ ಅವರ ಮಾತಿಗೆ ಟ್ವಿಟ್ ಮಾಡಿದ್ದ ಅಜಯ್ ದೇವಗನ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ನಿನ್ನೆಯಷ್ಟೇ ಸ್ಯಾಂಡಲ್ ವುಡ್ ಬಹುತೇಕ ನಟರು ಅಜಯ್ ದೇವಗನ್ ಮಾತನ್ನು ಖಂಡಿಸಿದ್ದರು. ಇಂದು ಅಜಯ್ ದೇವಗನ್ ವಿರುದ್ಧ ಕರಾವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಮಾತನಾಡಿರುವ ಪ್ರವೀಣ್ ಶೆಟ್ಟಿ, ‘ನಾವು ಹಿಂದಿ ಭಾಷಿಗರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಅಜಯ್ ದೇವಗನ್ ನಟನೆಯ ಸಿನಿಮಾಗಳನ್ನು ರಿಲೀಸ್ ಮಾಡಲು ಬಿಡುವುದಿಲ್ಲ. ಅವರು ಕನ್ನಡದ ವಿಷಯದಲ್ಲಿ ತಲೆ ಹಾಕುವುದು ಬೇಡ’ ಎಂದಿದ್ದಾರೆ. ಇಂದು ಬೆಂಗಳೂರಿನ ಮೈಸೂರು ವೃತ್ತದಲ್ಲಿ ಪ್ರತಿಭಟನೆಯನ್ನೂ ಹಮ್ಮಿಕೊಂಡಿದ್ದಾರೆ. ಇದನ್ನೂ ಓದಿ: ‘ಗುರು’ ಹೆಸರು ‘ಯುವ’ ರಾಜಕುಮಾರ್ ಬದಲಾಗಿದ್ದು ಹೇಗೆ? : ನಾಮಬಲ ನಂಬಿಕೆಯ ಡಾ.ರಾಜ್ ಕುಟುಂಬ
ನಿನ್ನೆ ನಡೆದ ಟ್ವಿಟ್ ವಾರ್ ನಲ್ಲಿ ಕಿಚ್ಚ ಸುದೀಪ್ ಮತ್ತು ಅಜಯ್ ದೇವಗನ್ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಕನ್ನಡ ಪರ ಮಾತನಾಡಿದ್ದ ಸುದೀಪ್ ಅವರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಅಜಯ್ ದೇವಗನ್ ಹೇಳಿಕೆ ಖಂಡಿಸಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೂಡ ಟ್ವಿಟ್ ಮಾಡಿದ್ದರು. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್‌ನಿಂದ ಯುವರಾಜ್ ಕುಮಾರ್ ಲಾಂಚ್: ನಿನ್ನೆಯೇ ಬ್ರೇಕ್ ಮಾಡಿತ್ತು ಪಬ್ಲಿಕ್ ಟಿವಿ
ಕೇವಲ ಸ್ಯಾಂಡಲ್ ವುಡ್ ನಟರು ಮಾತ್ರವಲ್ಲ, ದಕ್ಷಿಣದ ಅನೇಕ ತಾರೆಯರು ಕಿಚ್ಚನ ಬೆನ್ನಿಗೆ ನಿಂತಿದ್ದರು. ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕಿಚ್ಚನನ್ನು ಬೆಂಬಲಿಸಿ ಸರಣಿ ಟ್ವಿಟ್ ಮಾಡಿದ್ದರು. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚನ ಜೈಕಾರವೇ ಹಾಕಲಾಯಿತು.
ಹಿಂದಿ ರಾಷ್ಟ್ರ ಭಾಷೆಯ ವಿಚಾರವಾಗಿ ಕನ್ನಡದ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ಅಜಯ್ ದೇವಗನ್ ನಡುವೆ ಟ್ವೀಟ್ ಸರಣಿ ನಡೆದಿತ್ತು. ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದು ಸುದೀಪ್ ಹೇಳಿದ್ದಕ್ಕೆ, ನೀವೇಕೆ ಹಿಂದಿಯಲ್ಲಿ ನಿಮ್ಮ ಸಿನಿಮಾಗಳನ್ನು ಡಬ್ ಮಾಡಿ ಬಿಡುತ್ತೀರಿ ಎಂದು ಅಜಯ್ ದೇವಗನ್ ಟ್ವೀಟ್ ಮಾಡುವ ಮೂಲಕ ಪ್ರಶ್ನೆ ಮಾಡಿದ್ದರು. ಇದರಿಂದಾಗಿ ಇಬ್ಬರು ಸ್ಟಾರ್ ಗಳ ನಡುವೆ ಟ್ವಿಟ್ಟರ್ ನಲ್ಲೇ ಪ್ರಶ್ನೋತ್ತರ ನಡೆದಿತ್ತು. ಇದನ್ನೂ ಓದಿ : ‘ಗುರು’ ಹೆಸರು ‘ಯುವ’ ರಾಜಕುಮಾರ್ ಬದಲಾಗಿದ್ದು ಹೇಗೆ? : ನಾಮಬಲ ನಂಬಿಕೆಯ ಡಾ.ರಾಜ್ ಕುಟುಂಬ
ಅಜಯ್ ದೇವಗನ್ ಮಾಡಿದ್ದ ಟ್ವೀಟ್‌ಗೆ ಉತ್ತರ ನೀಡಿರುವ ಸುದೀಪ್, ‘ನಾನು ದೇಶದ ಪ್ರತಿ ಭಾಷೆಯನ್ನೂ ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ಈ ವಿಷಯವನ್ನು ಇಲ್ಲಿಗೆ ಬಿಡುವಂತೆ ಕೇಳಿಕೊಳ್ಳುವೆ. ನಾನು ಆ ಸಾಲುಗಳನ್ನು ಯಾವ ಸನ್ನಿವೇಶದಲ್ಲಿ ಹೇಳಿದ್ದೇನೆ ಎನ್ನುವುದು ಇಲ್ಲಿ ಮುಖ್ಯ. ಮಚ್ ಲವ್. ಶೀಘ್ರದಲ್ಲೇ ನಿಮ್ಮನ್ನು ಕಾಣುವೆ. ಶುಭಾಶಯಗಳು’ ಎಂದು ಒಂದು ಟ್ವೀಟ್ ಮಾಡಿದ್ದರೆ. ಮತ್ತೊಂದು ಟ್ವಿಟ್ ನಲ್ಲಿ ವಿಷಾದದ ಅರ್ಥದಲ್ಲಿಯೂ ಬರೆದಿದ್ದಾರೆ.
ನಾನು ಯಾವ ಅರ್ಥದಲ್ಲಿ ಆ ಮಾತನ್ನು ಹೇಳಿದ್ದೇನೆ ಎನ್ನುವುದನ್ನು ಖುದ್ದಾಗಿ ತಮ್ಮನ್ನು ಭೇಟಿಯಾದ ನಂತರ ವಿವರಿಸುವೆ. ನನ್ನ ಹೇಳಿಕೆ ಸಂಪೂರ್ಣ ವಿಭಿನ್ನವಾದದ್ದು. ಯಾರನ್ನೂ ನೋಯಿಸಲು, ಪ್ರಚೋದಿಸಲು ಮತ್ತು ಚರ್ಚೆ ಮಾಡಲು ಅದನ್ನು ಹೇಳಿದ್ದಂತೂ ಅಲ್ಲ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ ಕಿಚ್ಚ ಸುದೀಪ್. ಇದನ್ನೂ ಓದಿ : ಹೊಂಬಾಳೆ ಫಿಲ್ಮ್ಸ್‌ನಿಂದ ಯುವರಾಜ್ ಕುಮಾರ್ ಲಾಂಚ್: ನಿನ್ನೆಯೇ ಬ್ರೇಕ್ ಮಾಡಿತ್ತು ಪಬ್ಲಿಕ್ ಟಿವಿ
ಈ ಟ್ವೀಟ್‌ಗೆ ಉತ್ತರಿಸಿರುವ ಅಜಯ್ ದೇವಗನ್ , ತಪ್ಪು ತಿಳುವಳಿಕೆಯಿಂದಾಗಿ ಇಷ್ಟೆಲ್ಲ ಆಯಿತು. ಈ ವಿಷಯವನ್ನು ತಿಳಿಗೊಳಿಸಿದ್ದಕ್ಕೆ ಧನ್ಯವಾದಗಳು ಸ್ನೇಹಿತ ಸುದೀಪ್. ನಾವು ಎಲ್ಲ ಭಾಷೆಗಳನ್ನೂ ಗೌರವಿಸುತ್ತೇವೆ. ಮತ್ತು ಪ್ರತಿಯೊಬ್ಬರೂ ನಮ್ಮ ಭಾಷೆಯನ್ನು ಗೌರವಿಸಬೇಕು ಎಂದು ನಿರೀಕ್ಷಿಸುತ್ತೇವೆ. ಬಹುಶಃ ಅನುವಾದದಲ್ಲಿ ಏನೋ ಮಿಸ್ ಆಗಿರಬಹುದು’ ಎಂದು ಅಜಯ್ ದೇವಗನ್ ಟ್ವಿಟ್ ಮಾಡುವ ಮೂಲಕ ಈ ಪ್ರಕರಣಕ್ಕೆ ಸುಖಾಂತ್ಯ ಹಾಡಿದ್ದಾರೆ.
ಕೆಲ ಗಂಟೆಗಳ ಹಿಂದೆಯಷ್ಟೇ ಬಾಲಿವುಡ್ ನಟ ಅಜಯ್ ದೇವಗನ್ ಟ್ವೀಟ್ ಮಾಡಿ, ‘ಹಿಂದಿ ರಾಷ್ಟ್ರ ಭಾಷೆ ಅಲ್ಲದೇ ಇದ್ದರೆ, ಹಿಂದಿ ಭಾಷೆಯಲ್ಲಿ ನಿಮ್ಮ ಸಿನಿಮಾಗಳನ್ನು ಡಬ್ ಮಾಡಿ ಯಾಕೆ ರಿಲೀಸ್ ಮಾಡುತ್ತೀರಿ?’ ಎಂದು ನೇರವಾಗಿ ಕಿಚ್ಚ ಸುದೀಪ್ ಅವರಿಗೆ ಪ್ರಶ್ನೆ ಮಾಡಿದ್ದರು. ನಮಗೆ ಹಿಂದಿ ರಾಷ್ಟ್ರ ಭಾಷೆ ಮತ್ತು ಮಾತೃ ಭಾಷೆ ಎಂದು ಹೇಳಿಕೊಂಡಿದ್ದರು. ಈ ಟ್ವೀಟ್ ಗೆ ಕಿಚ್ಚ ಸುದೀಪ್ ಕೂಡ ಉತ್ತರಿಸಿದ್ದಾರೆ. ಇದನ್ನೂ ಓದಿ: ‘ಗುರು’ ಹೆಸರು ‘ಯುವ’ ರಾಜಕುಮಾರ್ ಬದಲಾಗಿದ್ದು ಹೇಗೆ? : ನಾಮಬಲ ನಂಬಿಕೆಯ ಡಾ.ರಾಜ್ ಕುಟುಂಬ
ಅಜಯ್ ದೇವಗನ್ ಮಾಡಿದ್ದ ಟ್ವೀಟ್ ಗೆ ಉತ್ತರ ನೀಡಿರುವ ಸುದೀಪ್, ‘ನಾನು ದೇಶದ ಪ್ರತಿ ಭಾಷೆಯನ್ನೂ ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ಈ ವಿಷಯವನ್ನು ಇಲ್ಲಿಗೆ ಬಿಡುವಂತೆ ಕೇಳಿಕೊಳ್ಳುವೆ. ನಾನು ಆ ಸಾಲುಗಳನ್ನು ಯಾವ ಸನ್ನಿವೇಶದಲ್ಲಿ ಹೇಳಿದ್ದೇನೆ ಎನ್ನುವುದು ಇಲ್ಲಿ ಮುಖ್ಯ. ಮಚ್ ಲವ್. ಶೀಘ್ರದಲ್ಲೇ ನಿಮ್ಮನ್ನು ಕಾಣುವೆ. ಶುಭಾಶಯಗಳು’ ಎಂದು ಒಂದು ರೀಟ್ವೀಟ್ ಮಾಡಿದ್ದಾರೆ. ಮತ್ತೊಂದು ಟ್ವೀಟ್ ನಲ್ಲಿ ವಿಷಾದದ ಅರ್ಥದಲ್ಲಿಯೂ ಬರೆದಿದ್ದಾರೆ. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್‌ನಿಂದ ಯುವರಾಜ್ ಕುಮಾರ್ ಲಾಂಚ್: ನಿನ್ನೆಯೇ ಬ್ರೇಕ್ ಮಾಡಿತ್ತು ಪಬ್ಲಿಕ್ ಟಿವಿ
ನಾನು ಯಾವ ಅರ್ಥದಲ್ಲಿ ಆ ಮಾತನ್ನು ಹೇಳಿದ್ದೇನೆ ಎನ್ನುವುದನ್ನು ಖುದ್ದಾಗಿ ತಮ್ಮನ್ನು ಭೇಟಿಯಾದ ನಂತರ ವಿವರಿಸುವೆ. ನನ್ನ ಹೇಳಿಕೆ ಸಂಪೂರ್ಣ ವಿಭಿನ್ನವಾದದ್ದು. ಯಾರನ್ನೂ ನೋಯಿಸಲು, ಪ್ರಚೋದಿಸಲು ಮತ್ತು ಚರ್ಚೆ ಮಾಡಲು ಅದನ್ನು ಹೇಳಿದ್ದಂತೂ ಅಲ್ಲ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ ಕಿಚ್ಚ ಸುದೀಪ್.
ಈ ವಿಷಯವಾಗಿ ಮೂರನೇ ಟ್ವೀಟ್ ಮಾಡಿರುವ ಸುದೀಪ್, ನೀವು ಹಿಂದಿಯಲ್ಲೇ ಕಳುಹಿಸಿದ ಟೆಕ್ಸ್ಸ್ಟ್ ಅರ್ಥವಾಯಿತು. ನಾವೆಲ್ಲರೂ ಹಿಂದಿಯನ್ನು ಗೌರವಸಿದ್ದೇವೆ ಮತ್ತು ಪ್ರೀತಿಸುತ್ತೇವೆ. ನನ್ನ ಉತ್ತರವನ್ನು ಕನ್ನಡದಲ್ಲೇ ಟೈಪ್ ಮಾಡಿದ್ದರೆ ಪರಿಸ್ಥಿತಿ ಏನಾಗಬಹುದು ಎಂದು ಅಚ್ಚರಿ ಪಡುತ್ತಿದ್ದೇನೆ. ನಾವೆಲ್ಲರೂ ಭಾರತಕ್ಕೆ ಸೇರಿದವರು ಎಂದು ಟ್ವೀಟ್ ಮಾಡಿದ್ದಾರೆ.
ಹಿಂದಿ ರಾಷ್ಟ್ರ ಭಾಷೆಯಲ್ಲ, ದಕ್ಷಿಣದ ಸಿನಿಮಾಗಳ ತಯಾರಕರು ಪ್ಯಾನ್ ಇಂಡಿಯಾ ಪದವನ್ನು ಬಳಸಬೇಡಿ ಎಂದು ಮೊನ್ನೆಯಷ್ಟೇ ಕಿಚ್ಚ ಸುದೀಪ್ ಮಾತನಾಡಿದ್ದರು. ಹಿಂದಿಯನ್ನು ರಾಷ್ಟ್ರ ಭಾಷೆಯನ್ನಾಗಿ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲವೆಂದು ಹೇಳುವ ಮೂಲಕ ಕನ್ನಡಪರ ಹೋರಾಟಗಾರರ ಜೊತೆ ನಿಂತುಕೊಂಡಿದ್ದರು. ಅದಕ್ಕೀಗ ಬಾಲಿವುಡ್ ಖ್ಯಾತ ನಟ ಅಜಯ್ ದೇವಗನ್ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ : ‘ಗುರು’ ಹೆಸರು ‘ಯುವ’ ರಾಜಕುಮಾರ್ ಬದಲಾಗಿದ್ದು ಹೇಗೆ? : ನಾಮಬಲ ನಂಬಿಕೆಯ ಡಾ.ರಾಜ್ ಕುಟುಂಬ
ನೇರವಾಗಿಯೇ ಕಿಚ್ಚ ಸುದೀಪ್ ಅವರಿಗೆ ಟ್ವಿಟ್ ಮಾಡಿರುವ ಅಜಯ್ ದೇವಗನ್, ‘ನನ್ನ ಸಹೋದರ ಕಿಚ್ಚ ಸುದೀಪ್, ನಿಮ್ಮ ಪ್ರಕಾರ ಹಿಂದಿಯು ರಾಷ್ಟ್ರ ಭಾಷೆ ಅಲ್ಲದಿದ್ದರೆ, ನಿಮ್ಮ ಮಾತೃ ಭಾಷೆಯಲ್ಲೇ ಚಿತ್ರಗಳನ್ನು ಬಿಡುಗಡೆ ಮಾಡಿಕೊಳ್ಳಿ. ಅವುಗಳನ್ನು ಹಿಂದಿಗೆ ಡಬ್ ಮಾಡುತ್ತೀರೇಕೆ? ಹಿಂದಿ ನಮಗೆ ಯಾವಾಗಲೂ ಮಾತೃಭಾಷೆ ಆಗಿರುತ್ತದೆ. ಹಿಂದಿ ಭಾಷೆ ಮತ್ತು ರಾಷ್ಟ್ರ ಭಾಷೆ. ಜನ ಗಣ ಮನ’ ಎಂದು ಹಿಂದಿಯಲ್ಲೇ ಟ್ವಿಟ್ ಮಾಡಿದ್ದಾರೆ ಅಜಯ್. ಇದನ್ನೂ ಓದಿ : ಹೊಂಬಾಳೆ ಫಿಲ್ಮ್ಸ್‌ನಿಂದ ಯುವರಾಜ್ ಕುಮಾರ್ ಲಾಂಚ್: ನಿನ್ನೆಯೇ ಬ್ರೇಕ್ ಮಾಡಿತ್ತು ಪಬ್ಲಿಕ್ ಟಿವಿ
.@KicchaSudeep मेरे भाई,
आपके अनुसार अगर हिंदी हमारी राष्ट्रीय भाषा नहीं है तो आप अपनी मातृभाषा की फ़िल्मों को हिंदी में डब करके क्यूँ रिलीज़ करते हैं?
हिंदी हमारी मातृभाषा और राष्ट्रीय भाषा थी, है और हमेशा रहेगी।
जन गण मन ।
ಇತ್ತೀಚಿನ ದಿನಗಳಲ್ಲಿ ಹಿಂದಿ ಹೇರಿಕೆ ಮತ್ತು ಬಾಲಿವುಡ್ ಸಿನಿಮಾಗಳ ಕುರಿತಾಗಿ ಭಾರೀ ಚರ್ಚೆ ಆಗುತ್ತಿದೆ. ಕೆಜಿಎಫ್ 2, ಆರ್.ಆರ್.ಆರ್ ಮತ್ತು ಪುಷ್ಪಾ ಸಿನಿಮಾಗಳು ಬಾಲಿವುಡ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ನಂತರ ಬಾಲಿವುಡ್ ಮಂದಿಗೆ ನಡುಕ ಶುರುವಾಗಿದೆ. ಹೀಗಾಗಿಯೇ ಅವರು ದಕ್ಷಿಣದ ಸಿನಿಮಾಗಳ ವಿರುದ್ಧ ತೊಡೆತಟ್ಟುತ್ತಿದ್ದಾರೆ.
ಮೊನ್ನೆಯಷ್ಟೇ ನವಾಜುದ್ದೀನ್ ಸಿದ್ದಿಕಿ ಕೂಡ ದಕ್ಷಿಣದ ಸಿನಿಮಾಗಳ ಬಗ್ಗೆ ಮಾತನಾಡಿದ್ದರು. ಈ ಗೆಲುವು ಯಾವಾಗಲೂ ನಿರಂತರವಾಗಿ ಇರುವುದಿಲ್ಲ. ವ್ಯಾಪಾರಿ ಸಿನಿಮಾಗಳಿಗೆ ಆಯುಷ್ಯ ಕಡಿಮೆ. ಒಂದು ಸಿನಿಮಾ ಗೆಲ್ಲಬಹುದು. ಮುಂದಿನ ಸಿನಿಮಾಗಳ ಬಗ್ಗೆಯೂ ಯೋಚಿಸಿ ಎನ್ನುವ ಮೂಲಕ ದಕ್ಷಿಣದ ಸಿನಿಮಾಗಳ ಗೆಲುವು ತಾತ್ಕಾಲಿಕ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು.
ಕೆಜಿಎಫ್ 2 ಸಿನಿಮಾ ವಿಶ್ವದಾದ್ಯಂತ ಭಾರೀ ಯಶಸ್ಸು ಗಳಿಸುತ್ತಿದ್ದಂತೆಯೇ ಸಿನಿಮಾ ರಂಗದಲ್ಲಿ ಇದೀಗ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ. ಯಶ್ ನಟನೆಯ ಕೆಜಿಎಫ್ 2 ಸಿನಿಮಾ ಹಲವು ದಾಖಲೆಗಳನ್ನು ಬರೆದಿದೆ. ಅವುಗಳನ್ನು ಸ್ವತಃ ನಿರ್ಮಾಣ ಸಂಸ್ಥೆಯೇ ಹೇಳಿಕೊಂಡಿದೆ. ಹೀಗಾಗಿ ಕನ್ನಡ ಸಿನಿಮಾ ರಂಗವನ್ನು ರಾಷ್ಟ್ರ ಮಟ್ಟಕ್ಕೆ ತಗೆದುಕೊಂಡು ಹೋದ ಶ್ರೇಯಸ್ಸು ಕೆಜಿಎಫ್ 2 ಸಿನಿಮಾಗೆ ಸೇರುತ್ತದೆ ಎಂದೇ ಬಣ್ಣಿಸಲಾಗುತ್ತಿದೆ. ಇದನ್ನೂ ಓದಿ : ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ
ಈ ನಡುವೆ ಜಗ್ಗೇಶ್ ಕನ್ನಡ ಸಿನಿಮಾ ರಂಗವನ್ನು ರಾಷ್ಟ್ರಮಟ್ಟಕ್ಕೆ ಮೊದಲ ಬಾರಿಗೆ ತಗೆದುಕೊಂಡು ಹೋದ ನಟನ ಬಗ್ಗೆ ಮಾತಾಡಿದ್ದಾರೆ. ಈ ಮಾತು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಜಗ್ಗೇಶ್ ಆ ರೀತಿ ಮಾತನಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಮಾತನಾಡಿದ ಗಳಿಗೆ ಸರಿಯಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ : ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?
ಕೆಜಿಎಫ್ 2 ಸಿನಿಮಾವನ್ನು ಕೇವಲ ದಕ್ಷಿಣದವರು ಮಾತ್ರವಲ್ಲ, ಬಾಲಿವುಡ್ ನಟ ನಟಿಯರೇ ಹಾಡಿಹೊಗಳುತ್ತಿದ್ದಾರೆ. ಹೀಗಾಗಿ ಕನ್ನಡ ಸಿನಿಮಾವನ್ನು ಯಶ್ ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದರು ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಮೊದಲ ಬಾರಿಗೆ ಸಿನಿಮಾ ರಂಗವನ್ನು ರಾಷ್ಟ್ರಮಟ್ಟಕ್ಕೆ ಪರಿಚಯಿಸಿದವರು ಮತ್ತು ಹಲವಾರು ದಾಖಲೆಗಳನ್ನು ಮಾಡಿದವರು ಡಾ.ವಿಷ್ಣುವರ್ಧನ್ ಎಂದು ಹಲವರು ಸಾಕ್ಷಿ ಸಮೇತ ಬರೆದುಕೊಂಡಿದ್ದಾರೆ. ಅಲ್ಲದೇ, ಕನ್ನಡದಲ್ಲಿ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದು ಡಾ.ರಾಜ್ ಕುಮಾರ್ ಎಂದೂ ದಾಖಲಾಗಿದೆ. ಇದನ್ನೂ ಓದಿ : ಗಮನ ಸೆಳೆದ ‘ಒಂದಂಕೆ ಕಾಡು’ ಮೋಷನ್ ಪೋಸ್ಟರ್
ಇಷ್ಟೊಂದು ಚರ್ಚೆ ಆಗುತ್ತಿರುವ ಈ ಹೊತ್ತಿನಲ್ಲ, ಮೊದಲ ಬಾರಿಗೆ ಕನ್ನಡ ಸಿನಿಮಾ ರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋಗಿದ್ದು ಕಿಚ್ಚ ಸುದೀಪ್ ಎಂದು ಹೇಳುವ ಮೂಲಕ ಜಗ್ಗೇಶ್ ತಮ್ಮ ಪ್ರೀತಿಯನ್ನು ಸುದೀಪ್ ಮೇಲೆ ತೋರಿದ್ದಾರೆ. ಆದರೆ, ಈ ಮಾತೇ ಈಗ ಮತ್ತೊಂದು ಚರ್ಚೆಗೆ ನಾಂದಿ ಹಾಡಿದೆ. ತೋತಾಪುರಿ ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಜಗ್ಗೇಶ್ ಇಂಥದ್ದೊಂದು ಮಾತು ಹೇಳುವ ನಡೆಯುತ್ತಿರುವ ಚರ್ಚೆಗೆ ಮತ್ತಷ್ಟು ವೇಗ ಕೊಟ್ಟಿದ್ದಾರೆ. ಇದನ್ನೂ ಓದಿ : Love…ಲಿ ಅಂತಿದ್ದಾರೆ ಆಂಗ್ರಿ ಯಂಗ್ ಮ್ಯಾನ್ ವಸಿಷ್ಠ ಸಿಂಹ: ಚಿಟ್ಟೆ ನ್ಯೂ ಲುಕ್ ಹೇಗಿದೆ ಗೊತ್ತಾ?
ಈಗಾಗಲೇ ಸುದೀಪ್ ಅವರು ಕೆಜಿಎಫ್ 2 ಸಿನಿಮಾಗೆ ವಿಶ್ ಮಾಡಲಿಲ್ಲ ಎನ್ನುವ ಕಾರಣ ಇಟ್ಟುಕೊಂಡು ವಿವಾದ ಮಾಡಲಾಗಿದೆ. ನಾನು ಮಾತಾಡಿದರೂ ಸುದ್ದಿ ಆಗ್ತೀನಿ, ಡೈಲಾಗ್ ಹೊಡೆದರೂ ಸುದ್ದಿ ಆಗುತ್ತೇನೆ ಎಂದು ಹೇಳುವ ಮೂಲಕ ಕಿಚ್ಚ ಸುದೀಪ್ ವಿವಾದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ನಡುವೆ ಜಗ್ಗೇಶ್ ಆಡಿದ ಈ ಮಾತು ಇನ್ನ್ಯಾವ ದಿಕ್ಕಿನತ್ತ ಕರೆದುಕೊಂಡು ಹೋಗಲಿದೆಯೋ ಕಾದು ನೋಡಬೇಕು.
ಬಿಗ್ ಬಾಸ್ ಮನೆಯಿಂದ ಪ್ರಿಯಾಂಕ ತಿಮ್ಮೇಶ್ ಅವರು ಎಲಿಮಿನೇಟ್ ಆಗಿ ಮನೆಯಿಂದ ಹೊರ ಹೋಗುವಾಗ ಚಕ್ರವರ್ತಿ ಚಂದ್ರಚೂಡ್ ಅವರು ತೋರಿಸಿದ ಅಶ್ಲೀಲ ಸನ್ನೆಯ ಕುರಿತು ಸಾಕಷ್ಟು ಚರ್ಚೆಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಹ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಕಿಚ್ಚ ಸುದೀಪ್ ಸಹ ಚಕ್ರವರ್ತಿಯವರ ಚಳಿ ಬಿಡಿಸಿದ್ದಾರೆ.
ಹೌದು ಇಂದು ವಾರದ ಕತೆ ಕಿಚ್ಚ ಜೊತೆ ವೇಳೆ ಮಾತನಾಡುವಾಗ ಚಕ್ರವರ್ತಿಯವರ ಬೆರಳಿನ ವಿಚಾರದ ಕುರಿತು ಪ್ರಶ್ನಿಸಿದ್ದಾರೆ. ಅಲ್ಲದೆ ಅದರ ಅರ್ಥ ಏನು ಎಂದು ಹೇಳುವವರೆಗೆ ಬಿಡುವುದಿಲ್ಲ ಎಂದು ಬಿಡುವುದಿಲ್ಲ ಎಂದಿದ್ದಾರೆ. ನಮ್ಮ ಕೈಯ್ಯಲ್ಲಿನ ಐದು ಬೆರಳುಗಳ ಮೂಲಕ ಸನ್ನೆ ಮಾಡಬಹುದು ಪ್ರತಿ ಬೆರಳಿನ ಸನ್ನೆಗೂ ಅರ್ಥವಿದೆ ಎಂದು ಹೇಳಿದ ಸುದೀಪ್, ನೀವು ಮಾಡಿದ ಸನ್ನೆಯ ಅರ್ಥವೇನು ಎಂದು ಚಕ್ರವರ್ತಿಯವರನ್ನು ಪ್ರಶ್ನಿಸಿದ್ದಾರೆ.
ಇದಕ್ಕೆ ಆರಂಭದಲ್ಲಿ ಉತ್ತರಿಸಿದ ಚಕ್ರವರ್ತಿ ಚಂದ್ರಚೂಡ್, ಸಿಟ್ಟು ಬಂತು ಹೀಗಾಗಿ ತೋರಿಸಿಬಿಟ್ಟೆ ಎನ್ನುತ್ತಾರೆ. ಬಳಿಕ ಮತ್ತೊಮ್ಮೆ ಕೇಳಿದಾಗ ಐದು ಬೆರಳುಗಳು ಪಂಚಭೂತಗಳ ಸಂಕೇತ, ಮಧ್ಯದ ಬೆರಳು ಸಮತೋಲನದ ಸಂಕೇತ, ಕಷ್ಟ, ಸುಖ ಎಲ್ಲವನ್ನೂ ಸಮತೋಲನವಾಗಿ ಸವೀಕರಿಸಲಿ ಎಂದು ಪ್ರಿಯಾಂಕಾ ಅವರಿಗೆ ಆ ಬೆರಳು ತೋರಿಸಿದೆ ಎನ್ನುತ್ತಾರೆ. ತಕ್ಷಣವೇ ಸುದೀಪ್ ಕೋಪಗೊಳ್ಳುತ್ತಾರೆ, ಮತ್ತೆ ನಿಧಾನವಾಗಿ ಪ್ರಶ್ನಿಸಿ, ಸಮತೋಲನದ ಬೆರಳು ಆಗಿದ್ದರೆ, ಹೇಗೆ ಅಪರಾಧವಾಗುತ್ತದೆ ಎಂದು ಕೇಳುತ್ತಾರೆ.
ಅದು ಅಪರಾಧವಾಗುತ್ತದೆ, ಆ ಸನ್ನೆ ಮಾಡುವುದು ಕಾನೂನಿನ ಪ್ರಕಾರ ಸಹ ತಪ್ಪು ಎನ್ನುತ್ತಾರೆ. ಆಗ ಚಕ್ರವರ್ತಿ ಹೌದು ಸರ್ ಕೆಟ್ಟ ಸನ್ನೆ ಎನ್ನುತ್ತಾರೆ. ಅದು ಕೆಟ್ಟ ಸನ್ನೆಯೇ, ಹೊರಗಡೆ ಈ ರೀತಿ ತೋರಿಸಿದರೆ ಜಗಳವಾಗುತ್ತದೆ. ಅದೂ ಒಂದು ಹುಡುಗಿಗೆ ಅದನ್ನು ನೀವು ತೋರಿಸುವುದು ನಾಟ್ ಒಕೆ ಸರ್ ಎಂದು ಸುದೀಪ್ ಹೇಳುತ್ತಾರೆ. ಆಗ ಎಸ್ ಸರ್ ಐ ಅಗ್ರೀ ಸರ್, ಆ ಕ್ಷಣ ಸಿಟ್ಟು ಬಂದು ಮಾಡಿದೆ. ಅಲ್ಲದೆ ಕನ್ನಡಿಯಲ್ಲಿ ಮತ್ತೆ ನೋಡಿಕೊಂಡಿದ್ದು, ಯಾವ ಮಟ್ಟಕ್ಕೆ ಕಾಣುತ್ತಿದೆ, ಏನೋ ಮಾಡಿಬಿಟ್ನಲ್ಲ ಎಂದು ನನಗೆ ನಾನೇ ನೋಡಿಕೊಂಡೆ ಎಂದು ಚಕ್ರವರ್ತಿ ಹೇಳುತ್ತಾರೆ.
ಆಗ ಸುದೀಪ್ ಯಾವ ನಿಮ್ಮ ಪ್ರಕಾರ ಯಾವ ಮಟ್ಟಕ್ಕೆ ಕಾಣಿಸಿರಬಹುದು ಎಂದು ಮರಳಿ ಕೇಳುತ್ತಾರೆ, ತುಂಬಾ ಕೆಟ್ಟದಾಗಿ ಕಾನೀಸುತ್ತದೆ ಎಂದು ಚಕ್ರವರ್ತಿ ಮತ್ತೆ ಹೇಳುತ್ತಾರೆ. ಮಧ್ಯ ಪ್ರವೇಶಿಸಿದ ಸುದೀಪ್, ಯಾವುದೇ ಸ್ಪರ್ಧಿಗಳಲ್ಲಿ ಯಾರೇ ಆಗಲಿ, ನಾನು ನನ್ನ ಮಾನ, ಮರ್ಯಾದೆ ಹರಾಜು ಹಾಕಿಕೊಳ್ಳುವುದಕ್ಕೆ ಮನೆಯೊಳಗೆ ಹೋಗಿದ್ದೇನೆ ಎಂದುಕೊಂಡರೆ ಯಾರೂ ತಡೆಯಲು ಆಗಲ್ಲ ಸರ್, ಕಾಪಾಡಬಹುದು, ನಡೆಯುತ್ತಿರುವುದನ್ನು ನಿಮ್ಮ ಬಳಿಗೆ ತಲುಪಿಸಬಹುದು. ಆದರೆ ಯಾರಿಗೂ ಏನೂ ಮಾಡಬೇಡಿ ಎಂದು ನಾವು ಹೇಳುವುದಿಲ್ಲ. ಕೆಲವು ಕಾನೂನಿನ ಚೌಕಟ್ಟು ಮೀರಿ ನಡೆದಾಗ ಹೊರಗಡೆ ಕಳುಹಿಸುತ್ತೇವೆ. ಅದನ್ನು ಬಿಟ್ಟರೆ ಎಲ್ಲವೂ ನಿಮಗೆ ಬಿಟ್ಟಿದ್ದು ಎಂದು ಸುದೀಪ್ ಹೇಳಿದ್ದಾರೆ.
ಅಲ್ಲದೆ ನೀವು ಹೆಣ್ಣುಮಕ್ಕಳಿಗೆ ಗೌರವ ಕೊಡುತ್ತೀರಿ ಎಂದು ಹೇಳುತ್ತೀರಿ, ಹೀಗಿರಬೇಕಾದರೆ ಯಾವ ರೇಂಜ್‍ಗೆ ಕೆಟ್ಟದಾಗಿ ಕಾಣಿಸಿರಬಹುದು ಯೋಚಿಸಿ. ಅವರ ತಾಯಂದಿರು, ಮನೆಯವರು ಕರೆ ಮಾಡಿ ಅವರು ತೋರಿಸಿದ್ದು ಯಾವ ಸನ್ನೆ ಎಂದು ಕೇಳಿದರೆ ಏನು ವಿವರಣೆ ಕೊಡುತ್ತೀರಿ? ಮಾತೆತ್ತಿದರೆ ಜನ ನೋಡುತ್ತಿದ್ದಾರೆ ಎನ್ನುತ್ತೀರಿ ಇದು ಅರ್ಥವಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ 8 ಸೀಸನ್‍ನಲ್ಲಿ 160 ಜನ ಬಿಗ್ ಬಾಸ್ ಮನೆಗೆ ಹೋಗಿರಬಹುದು. ಮುಂದಿನ 10 ವರ್ಷಗಳಲ್ಲಿ ಇನ್ನೂ 160 ಜನ ಅಂದುಕೊಂಡರೂ ಅಂದಾಜು 300 ಜನರಿಗೆ ಸೀಮಿತವಾದ ಅದ್ಭುತ ವೇದಿಕೆ ಇದು. ಹೊರಗಡೆ ಲಕ್ಷಾಂತರ ಜನ ಬಿಗ್ ಬಾಸ್ ಮನೆ ಒಳಗೆ ಹೋಗಲು ಕಾಯುತ್ತಿದ್ದಾರೆ. ಇಷ್ಟು ಪವರ್‍ಫುಲ್ ಆಗಿರುವ ವೇದಿಕೆಯಲ್ಲಿ ನೀವು ನಡೆದುಕೊಳ್ಳಬೇಕಾದ ರೀತಿ ಸಹ ಮುಖ್ಯ ಆಗುತ್ತೆ. ಇದರಲ್ಲಿ ನೀವು ಫೇಲ್ ಆಗಿದ್ದೀರಿ ಎಂದು ನನಗನ್ನಿಸುತ್ತಿದೆ. ಮೊದಲು ತಪ್ಪು ಮಾಡಿದಾಗ ಇನ್ನೊಮ್ಮೆ ಈ ರೀತಿ ಮಾಡುವುದಿಲ್ಲ ಎಂದಿರಿ ಇದನ್ನು ನೀವು ಉಳಿಸಿಕೊಂಡಿರಾ ಎಂದು ಸುದೀಪ್ ಬೇಸರದಿಂದ ಪ್ರಶ್ನಿಸಿದ್ದಾರೆ.
ಅದರಲ್ಲೂ ಈ ಬಾರಿ ನನಗೆ ತುಂಬಾ ನೋವಾಯಿತು. ನಮ್ಮ ಮನೆಯಲ್ಲಿ ತಂಗಿ, ಹೆಂಡತಿ, ತಾಯಿ ಅಕ್ಕ ಇರುತ್ತಾರೆ ಯಾವನೋ ಒಬ್ಬ ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಆ ರೀತಿ ತೋರಿಸಿದಾಗ ನಾವು ಏನು ಮಾಡಬಹುದು? ಸಿಟ್ಟು ಬರುತ್ತೆ, ನಾವು ಶಕ್ತಿ ಇಲ್ಲದಿದ್ದರೂ ಅವರ ಕೆನ್ನೆಗೆ ಹೊಡೆಯುತ್ತೇವೆ ಎಂದು ಚಕ್ರವರ್ತಿ ಉತ್ತರಿಸುತ್ತಾರೆ. ಹಾಗೇ ಅವರು ನಮ್ಮ ಬಿಗ್ ಬಾಸ್ ಫ್ಯಾಮಿಲಿಗೆ ಸೇರಿದ್ದಾರೆ, ಕೋಟ್ಯಂತರ ಜನ ನೋಡುತ್ತಿದ್ದಾರೆ. ಏನು ಅಭಿಪ್ರಾಯ ಕೊಟ್ಟಿರಿ ಎಂದು ಸುದೀಪ್ ಕೇಳಿದ್ದಾರೆ.
ಅಲ್ಲದೆ ಮಾತನಾಡಿದಾಗ ಬೀಪ್ ಮಾಡಿ ಪ್ರಸಾರ ಮಾಡಬಹುದು. ಆದರೆ ಬೆರಳು ಮಾಡಿದಾಗ ಬ್ಲರ್ ಮಾಡಬೇಕಾಗುತ್ತದೆ. ಅದು ಇನ್ನೂ ಅಸಹ್ಯವಾಗಿ ಕಾಣುತ್ತದೆ ಈ ರೀತಿ ಮಾಡಬೇಡಿ. ನಿಮ್ಮ ಗೌರವ ಕಾಪಾಡುವುದು. ಹೆಣ್ಣುಮಗಳ ಬಗ್ಗೆ ಮಾತನಾಡಿದ್ದಕ್ಕೆ ಪ್ರಶ್ನಿಸುವುದು ನನ್ನ ಜವಾಬ್ದಾರಿ. ನಾನು ಈ ವೇದಿಕೆ ಮೇಲಿರುವುದು ನಿಮಗೋಸ್ಕರ ಅದನ್ನು ನೀವು ಮರೆಯಬೇಡಿ ಎಂದು ಹೇಳಿದ್ದಾರೆ.
ಬಳಿಕ ಚಕ್ರವರ್ತಿ ಪ್ರತಿ ವಾರ ನನ್ನನ್ನೇ ಬೈತಾರೆ, ನಾನೇ ಟಾರ್ಗೆಟ್ ಆಗುತ್ತಿದ್ದೇನೆ ಅನ್ನಿಸುತ್ತಿದೆ ಎಂದು ಸ್ಪರ್ಧಿಗಳ ಬಳಿ ಹೇಳುತ್ತಾರೆ. ಅಲ್ಲದೆ ನಾನೊಬ್ಬ ಸ್ತ್ರೀ ವಿರೋಧಿ, ಸ್ತ್ರೀ ಪೀಡಕನ ರೀತಿ ಬಿಂಬಿಸುತ್ತಿದ್ದಾರೆ ಎಂದು ನನಗೆ ಅನ್ನಿಸುತ್ತದೆ ಎಂದು ಪ್ರಶಾಂತ್ ಬಳಿ ಚಕ್ರವರ್ತಿ ಮತ್ತೆ ಹೇಳಿಕೊಳ್ಳುತ್ತಾರೆ. ಬಳಿಕ ಇದನ್ನು ಸುದೀಪ್ ಅವರ ಬಳಿಯೂ ಹೇಳುತ್ತಾರೆ. ಪ್ರತಿ ವಾರ ನನ್ನನ್ನು ಸ್ತ್ರೀ ನಿಂದಕ, ಸ್ತ್ರೀ ಪೀಡಕನನ್ನಾಗಿ ಮಾಡಿದ್ದೀರಿ. ನಿಮ್ಮ ಬಾಯಲ್ಲಿ ಇಷ್ಟು ವಾರ ನಾನೊಬ್ಬ ಕ್ರಿಮಿನಲ್ ಆಗಿದ್ದೇನೆ ಎಂದು ಚಕ್ರವರ್ತಿ ಹೇಳಿದ್ದಾರೆ. ಆಗ ನೀವು ಮಾಡಿದ್ದನ್ನೇ ನನ್ನ ಬಾಯಲ್ಲಿ ಹೇಳಿದ್ದೇನೆ. ನಿಮ್ಮನ್ನು ಹೊಗಳಿಯೂ ಇದ್ದೇನೆ, ನಿಮ್ಮ ಬುದ್ಧಿ, ಬರವಣಿಗೆಗೆ ಅಭಿಮಾನಿ ಎಂದು ಸಹ ಹೊಗಳಿದ್ದೇನೆ ಎಂದು ಸುದೀಪ್ ಹೇಳಿದ್ದಾರೆ. ತುಂಬಾ ಸುಧೀರ್ಘವಾಗಿ ಚಕ್ರವರ್ತಿ ಹಾಗೂ ಸುದೀಪ್ ಮಾತನಾಡಿದ್ದಾರೆ.
ಬೆಂಗಳೂರು: ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಅವರು ಐದು ಬಾರಿ ವಿಶ್ವ ಚೆಸ್ ಚಾಂಪಿಯನ್ ಆಗಿರುವ ವಿಶ್ವನಾಥನ್ ಆನಂದ್ ಅವರಿಗೆ ಚೆಸ್ ಸ್ಪರ್ಧೆಯಲ್ಲಿ ಕಠಿಣ ಸ್ಪರ್ಧೆಯನ್ನೇ ನೀಡಿದ್ದಾರೆ.
ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ನಟನೆಯಲ್ಲಿ ತಮ್ಮದೇ ಅಗಿರುವ ಚಾಪನ್ನು ಮೂಡಿಸಿದ್ದಾರೆ. ಕ್ರಿಕೆಟ್‍ನಲ್ಲೂ ಸೈ ಎನಿಸಿಕೊಂಡಿದ್ದಾರೆ. ಇದೀಗ ಚೆಸ್‍ನಲ್ಲೂ ಘಟಾನುಘಟಿಗೆ ಪೈಪೋಟಿ ನೀಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
— Akshaya Patra Official (@AkshayaPatra) June 13, 2021
ಕೋವಿಡ್ ಪರಿಹಾರ ನಿಧಿ ಸಂಗ್ರಹಕ್ಕಾಗಿ ಅಕ್ಷಯಪಾತ್ರ ಪ್ರತಿಷ್ಠಾನದ ಸಹಯೋಗದಲ್ಲಿ ಚೆಸ್.ಕಾಮ್ ಭಾನುವಾರ ಆಯೋಜಿಸಿದ್ದ ಚೆಕ್‍ಮೇಟ್ ಕೋವಿಡ್ ಸೆಲೆಬ್ರಿಟಿ ಆವೃತ್ತಿಯಲ್ಲಿ, ನಟ ಸುದೀಪ್, ರಿತೇಷ್ ದೇಶ್‍ಮುಖ್, ಕ್ರಿಕೆಟಿಗ ಯಜುವೇಂದ್ರ ಚಾಹಲ್ ಸೇರಿದಂತೆ ಕೆಲ ಗಣ್ಯರೊಂದಿಗೆ 30 ನಿಮಿಷಗಳ ಟೈಂಔಟ್‍ನಲ್ಲಿ ಏಕಕಾಲದಲ್ಲಿ ವಿಶ್ವನಾಥನ್ ಆನಂದ್ ಚೆಸ್ ಅಡಿದ್ದಾರೆ. ಇದನ್ನೂ ಓದಿ: ವರ್ಲ್ಡ್ ಚೆಸ್ ಚಾಂಪಿಯನ್ ಜೊತೆಗೆ ಕಿಚ್ಚನ ಆಟ
— Akshaya Patra Official (@AkshayaPatra) June 13, 2021
ಟೈಂಔಟ್‍ನಲ್ಲಿ ಸುದೀಪ್ ಅವರು ವಿಶ್ವನಾಥನ್ ಆನಂದ್ ಅವರೆದುರು ಸೋತರು. ವಿಶ್ವನಾಥನ್ ಆನಂದ್ ಅವರ ಟೈಮರ್‍ನಲ್ಲಿ 46 ಸೆಕೆಂಡ್‍ಗಳಷ್ಟೇ ಉಳಿದಿತ್ತು. ಆಟದ ಬಳಿಕ ಸ್ಪರ್ಧಿಗಳ ಜೊತೆ ವಿಶ್ವನಾಥನ್ ಆನಂದ್ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಸುದೀಪ್, ನನ್ನ ಹಂತದ ಸ್ಪರ್ಧಿಗಳೊಂದಿಗೆ ಚೆನ್ನಾಗಿ ಆಡುತ್ತೇನೆ. ಇಂತಹ ದಿಗ್ಗಜರ ಜೊತೆ ಆಡುವುದೇ ನಮಗೆ ಸಿಕ್ಕ ದೊಡ್ಡ ಅವಕಾಶ. ಇಲ್ಲಿ ಯಾರು ಗೆಲ್ಲುತ್ತಾರೆ ಸೋಲುತ್ತಾರೆ ಎನ್ನುವುದು ಮುಖ್ಯವಲ್ಲ ಎಂದಿದ್ದಾರೆ.
The first set of celebs are done!
This was super fun!
ಯಾರು ಹೆಚ್ಚು ಹೊತ್ತು ವಿಶ್ವನಾಥನ್ ಅವರ ವಿರುದ್ಧ ಕಣದಲ್ಲಿ ಇರುತ್ತಾರೆ ಎನ್ನುವುದು ಮುಖ್ಯ. ಆನ್‍ಲೈನ್ ಚೆಸ್ ಬಗ್ಗೆ ನನಗೇ ಯಾವುದೇ ಮಾಹಿತಿ ಇರಲಿಲ್ಲ. ನಮಗೆ ಸೋಲುವ ಭಯವಿರಲಿಲ್ಲ, ಏಕೆಂದರೆ ನಾವು ಆಡುತ್ತಿರುವುದು ವಿಶ್ವನಾಥನ್ ಆನಂದ್ ಅವರ ವಿರುದ್ಧ. ಈ ಅನುಭವ ಜೀವನಪೂರ್ತಿ ಇರಲಿದೆ. ಈ ಆಟ ಕೇವಲ ಮನರಂಜನೆಗಾಗಿ ಆಗಿರಲಿಲ್ಲ. ಒಂದು ಉದ್ದೇಶ ಇದರ ಹಿಂದೆ ಇತ್ತು ಎಂದು ಸುದೀಪ್ ಹೇಳಿದ್ದಾರೆ.
Superstar @KicchaSudeep looks very comfortable in his game against the five-time world champion, @vishy64theking
ಎರಡನೇ ಹಂತದಲ್ಲಿ ವಿಶ್ವನಾಥನ್ ಆನಂದ್ ಬಾಲಿವುಡ್ ನಟ ಅಮೀರ್ ಖಾನ್ ವಿರುದ್ಧವೂ ಆಡಿದರು. ವಿಶ್ವನಾಥನ್ ಆನಂದ್ ಅವರ ಜೀವನದ ಬಗ್ಗೆ ಸಿನಿಮಾ ಆದರೆ ಅದರಲ್ಲಿ ನಟಿಸುತ್ತೀರಾ? ಎನ್ನುವ ಜನರ ಪ್ರಶ್ನೆಗೆ ಉತ್ತರಿಸಿದ ಅಮೀರ್ ಖಾನ್, ಖಂಡಿತವಾಗಿಯೂ..ಇದಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದರು. ಆನ್‍ಲೈನ್‍ನಲ್ಲಿ ನಡೆದ ಈ ಸ್ಪರ್ಧೆಯನ್ನು 20 ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದು, 6.65 ಲಕ್ಷ ದೇಣಿಗೆ ಸಂಗ್ರಹವಾಗಿದೆ.
ಅಭಿನಯ ಚಕ್ರವರ್ತಿ ಸುದೀಪ್ ಮತ್ತು ಚೆಸ್ ಗ್ರ್ಯಾಂಡ್‍ಮಾಸ್ಟರ್ ವಿಶ್ವನಾಥನ್ ಅವರ ನಡುವೆ ನಡೆದಿರುವ ರೋಚಕ ಆಟವನ್ನು ನೋಡಿ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ಪರದೆ ಮೇಲೆ, ಮೈದಾನದಲ್ಲಿ ಕಿಚ್ಚನ ಖದರ್ ನೋಡಿದ ಅಭಿಮಾನಿಗಳು ಚಿಸ್‍ನಲ್ಲಿ ಕಿಚ್ಚನ ಆಟವನ್ನು ನೋಡಿ ಫಿದಾ ಆಗಿರುವುದು ಖಂಡಿತಾ ಹೌದು.
ಬೆಂಗಳೂರು: ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ನಿಜ ಹುಲಿ ಬಂದರೆ ಓಡಿ ಹೋಗ್ತಾರೆ ಎಂದಿದ್ದ ವಿನಯ್ ಗುರೂಜಿ ಈಗ ಉಲ್ಟಾ ಹೊಡೆದಿದ್ದಾರೆ.
ಹೌದು, ಸುದೀಪ್ ಅವರನ್ನು ಕಿಚಾಯಿಸಿದ್ದ ವಿನಯ್ ಗುರೂಜಿ ಈಗ ಸುದೀಪ್ ಮಾಣಿಕ್ಯ, ಹೆಬ್ಬುಲಿ ಅಂತ ಹೊಗಳಿದ್ದಾರೆ. ಶಿವಮೊಗ್ಗದ ಪುಟ್ಟ ಹಳ್ಳಿಯಿಂದ ಬಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುವಾಗ ಸುದೀಪ್ ಎಷ್ಟು ಕಷ್ಟ ಅನುಭವಿಸಿ ಬಂದಿರಬೇಕು. ಸುದೀಪ್ ಗುಣಕ್ಕೆ, ಸಾಧನೆಗೆ ಸಾಷ್ಟಾಂಗ ನಮಸ್ಕಾರ ಎಂದಿದ್ದಾರೆ.
ಗಾಂಧಿನಗರದಲ್ಲಿ ಮುಂದೆ ಬರೋದು ಅಷ್ಟು ಸುಲಭದ ಮಾತಲ್ಲ. ನಾವು ಅದನ್ನು ಗೌರವಿಸುತ್ತೇವೆ. ಕೋಮುಗಲಭೆ ಸೃಷ್ಟಿಸೋಕೆ ಕೆಲವು ಗುಂಪುಗಳು ಪ್ರಯತ್ನ ಮಾಡುತ್ತಲೇ ಇರುತ್ತವೆ. ನನ್ನ ಭಾಷಣಗಳನ್ನ ಇಟ್ಕೊಂಡು ಅವರಿಗೆ ಬೇಕಾದ ರೀತಿಯಲ್ಲಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಗುರೂಜಿ ಹೇಳಿದ್ದೇನು..?
ಸುದೀಪ್ ಸಿನಿಮಾ ನೋಡಿ ರೋಮ ಎಲ್ಲ ಎದ್ದು ನಿಲ್ಲುತ್ತೆ ಅಂತ ಹುಡುಗರು ಹೇಳುತ್ತಾರೆ. ಅವನು ಮಾಣಿಕ್ಯ- ಹೆಬ್ಬುಲಿ ಅಂತೆ. ಸರಿಯಾದ ಹುಲಿ ಬಂದ್ರೆ ಓಡಿಹೋಗುತ್ತಾರೆ ಎಂದು ಗುರೂಜಿ ಅಪಹಾಸ್ಯ ಮಾಡಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಸುದೀಪ್ ಅವರನ್ನು ಅಪಹಾಸ್ಯ ಮಾಡಿದ್ದಕ್ಕೆ ಕಿಚ್ಚ ಫ್ಯಾನ್ಸ್, ಗುರೂಜಿ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದರು.
ಇದಕ್ಕೆ ಮೈಸೂರಿನ ವಾಲ್ಮೀಕಿ ಸಮುದಾಯದ ಅರ್ಜುನ್ ಗುರೂಜಿ ಟಾಂಗ್ ಕೊಟ್ಟಿದ್ದು, ಕಲಾವಿದನನ್ನು ಪ್ರತಿಯೊಬ್ಬರು ಗೌರವಿಸೋದನ್ನು ಕಲಿಯಬೇಕು. ಸುದೀಪ್ ಎಂದರೆ ವಾಲ್ಮೀಕಿ ಸಮುದಾಯದ ಹೆಮ್ಮೆ. ಡಾ. ರಾಜ್‍ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಎಲ್ಲರೂ ಚಲನಚಿತ್ರದ ಮೂಲಕ ಭಾಷೆಯನ್ನು ಬೆಳೆಸಿದವರು. ಚಲನಚಿತ್ರ ಅನ್ನೋದೇ ಭಾಷೆಯ ಕಲೆಯನ್ನು ತೋರಿಸುವಂತದ್ದು. ಹೀಗಾಗಿ ಕಲಾವಿದನನ್ನು ಗೌರವಿಸಬೇಕು ಎಂದು ವಿನಯ್ ಗುರೂಜಿ ವಿರುದ್ಧ ಕಿಡಿಕಾರಿದ್ದರು.
– ಮೊದಲ ಆವೃತ್ತಿಯ ಸ್ಪರ್ಧಿಗಳು ನೈಜವಾಗಿ ಅಭಿನಯಿಸಿದ್ರು
– ಅಯ್ಯಪ್ಪ ಬಿಟ್ಟರೆ ನಾನು ಯಾರನ್ನೂ ರೆಫರ್ ಮಾಡಿಲ್ಲ
ಬೆಂಗಳೂರು: ಬಿಗ್ ಬಾಸ್ ಶೋ ನಡೆಸುತ್ತಿರುವ ನಿಮ್ಮ ಸಂಭಾವನೆ ಎಷ್ಟು ಎನ್ನುವ ಪ್ರಶ್ನೆಗೆ ಸುದೀಪ್ ಸ್ಮಾರ್ಟ್ ಉತ್ತರ ನೀಡಿದ್ದಾರೆ.
ಬಿಗ್ ಬಾಸ್ ಶೋ ಹಿನ್ನೆಲೆಯಲ್ಲಿ ಇಂದು ವಾಹಿನಿ ಸುದ್ದಿಗೋಷ್ಠಿಯನ್ನು ಆಯೋಜಿಸಿತ್ತು. ಈ ವೇಳೆ ನಿಮ್ಮ ಸಂಭಾವನೆ ಎಷ್ಟು ಎನ್ನುವ ಪ್ರಶ್ನೆಯನ್ನು ಸುದೀಪ್ ಅವರಲ್ಲಿ ಕೇಳಲಾಯಿತು. ಈ ಪ್ರಶ್ನೆಗೆ, ಸಂಭಾವನೆ ವಿಚಾರವನ್ನು ನಾನು ಪತ್ನಿ ಬಿಟ್ಟು ಬೇರೆ ಯಾರ ಜೊತೆಗೂ ಹಂಚಿಕೊಳ್ಳುವುದಿಲ್ಲ ಎಂದು ಸ್ಮಾರ್ಟ್ ಉತ್ತರ ನೀಡಿದರು.
ಈ ವೇಳೆ ಶೋಗೆ ನೀವು ಇಲ್ಲಿಯವರೆಗೆ ಯಾರನ್ನು ರೆಫರ್ ಮಾಡಿದ್ರಾ ಎನ್ನುವ ಪ್ರಶ್ನೆಗೆ, ಒಬ್ಬ ಕ್ರೀಡಾಪಟು ಇದ್ದರೆ ಚಂದ ಎಂಬ ಕಾರಣಕ್ಕೆ ಬಿಗ್ ಬಾಸ್‍ನ 4ನೇ ಆವೃತ್ತಿಯಲ್ಲಿ ಕ್ರಿಕೆಟರ್ ಅಯ್ಯಪ್ಪನನ್ನು ಕರೆದುಕೊಳ್ಳುವಂತೆ ರೆಫರ್ ಮಾಡಿದ್ದೆ ಅಷ್ಟೇ ಎಂದು ಹೇಳಿದರು.
ನಾನು ಇಲ್ಲಿಯವರೆಗೆ ಯಾರನ್ನೂ ಕರೆದುಕೊಳ್ಳಿ ಎಂದು ರೆಫರ್ ಮಾಡಿಲ್ಲ. ಆದರೆ ಒಬ್ಬರು ಸ್ಪರ್ಧಿ ಕೈಕೊಟ್ಟ ಸಂದರ್ಭದಲ್ಲಿ ಕ್ರೀಡಾಪಟು ಇದ್ದರೆ ಚೆಂದ ಎನ್ನುವ ಕಾರಣಕ್ಕೆ ಕ್ರಿಕೆಟರ್ ಅಯ್ಯಪ್ಪನನ್ನು ನಾನು ರೆಫರ್ ಮಾಡಿದ್ದೆ. ಅದನ್ನು ಬಿಟ್ಟರೆ ಮತ್ತೆ ಯಾರನ್ನೂ ನಾನು ರೆಫರ್ ಮಾಡಿಲ್ಲ. ಹಲವು ರಾಜಕಾರಣಿಗಳು ಸೇರಿ ನಮ್ಮ ಕಡೆಯೊಬ್ಬರು ಇರುತ್ತಾರೆ ಎಂದು ಕರೆ ಮಾಡುತ್ತಲೇ ಇರುತ್ತಾರೆ ಎಂದರು.
ಮೊದಲ ಅವೃತ್ತಿಗೆ ಮೆಚ್ಚುಗೆ
ಬಿಗ್ ಬಾಸ್‍ನಲ್ಲಿ ಮತ್ತೆ ಭಾಗಿಯಾಗುತ್ತಿರುವುದು ಖುಷಿ ತಂದಿದೆ. ಏಳು ವರ್ಷ ಕಳೆದಿರುವುದೇ ಗೊತ್ತಾಗಿಲ್ಲ. ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿಯನ್ನು ನಾನೆಂದೂ ಕೇಳುವುದಿಲ್ಲ. ಬಿಗ್ ಬಾಸ್‍ನಿಂದ ಒಂದೊಳ್ಳೆ ಅನುಭವ ಸಿಕ್ಕಿದೆ. ಮೊದಲ ಆವೃತ್ತಿಯ ಸ್ಪರ್ಧಿಗಳು ನನಗೆ ತುಂಬಾ ಫೇವರಿಟ್. ಅವರೆಲ್ಲ ನೈಜವಾಗಿ ಅಭಿನಯಿಸಿದರು. ಅಲ್ಲದೆ ಅವರಿಗೆ ಬಿಗ್ ಬಾಸ್ ಏನು ಎಂಬುದು ತಿಳಿದಿರಲಿಲ್ಲ. ಹೀಗಾಗಿ ಅವರು ನನಗಿಷ್ಟ ಎಂದು ಬಿಗ್ ಬಾಸ್ ಮೊದಲನೇ ಸೀಸನ್‍ನ ಸ್ಪರ್ಧಿಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಮೊದಲ ಸೀಸನ್‍ನ ಯಾವೊಬ್ಬ ಸ್ಪರ್ಧಿಗಳಿಗೆ ಬಿಗ್ ಬಾಸ್ ಹೇಗೆ ನಡೆಯುತ್ತದೆ ಎನ್ನುವುದು ಗೊತ್ತಿರಲಿಲ್ಲ. ಆದರೆ ಮುಂದೆ ಬಂದವರು ಗೆಲ್ಲುವುದಕ್ಕೋಸ್ಕರ ಏನೇನು ಮಾಡಬೇಕೋ ಅದೆಲ್ಲವನ್ನೂ ಮಾಡಿದರು. ಆದ್ದರಿಂದ ಫಸ್ಟ್ ಸೀಸನ್ ಸ್ಪರ್ಧಿಗಳು ನನಗೆ ತುಂಬಾ ಇಷ್ಟ ಎಂದರು.
ಈ ಬಾರಿಯ ವಿಜೇತರಿಗೆ ಕೇವಲ 50 ಲಕ್ಷ ರೂಪಾಯಿ ಮಾತ್ರವಲ್ಲ ಬೇರೆ ಮೂಲಗಳಿಂದಲೂ ಲಾಭ ಆಗಲಿದೆ. ಈ ಹಿಂದಿನ ಸೀಸನ್‍ನ ಎಷ್ಟೋ ಸ್ಪರ್ಧಿಗಳು ಕಿರುತೆರೆ, ಬೆಳ್ಳಿತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ಒಂದಷ್ಟು ಜನ ಏನೇನೋ ಮಾಡುತ್ತೇನೆ ಎಂದುಕೊಂಡು ಏನೂ ಮಾಡಿಲ್ಲ. ಆದ್ದರಿಂದ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಸ್ಪರ್ಧಿಗಳಿಗೆ ಸುದೀಪ್ ಸಲಹೆ ನೀಡಿದರು.
ಬಿಗ್ ಬಾಸ್‍ನಿಂದ ನಮ್ಮ ಮೇಲಿದ್ದ ದೃಷ್ಟಿ ಬದಲಾಯಿತು. ಇಲ್ಲವಾದಲ್ಲಿ ಅಯ್ಯೋ ಅವನ ಎನ್ನುವ ರೀತಿ ಮಾತನಾಡುತ್ತಿದ್ದರು. ಇದು ಪ್ಯೂರ್ ಸೆಲೆಬ್ರಿಟಿಗಳಿಗಾಗಿ ಇದ್ದದ್ದು, ಆದರೆ ಇದರ ನಡುವೆ ಹೊಸದೊಂದು ಪ್ರಯೋಗ ಆಗಲಿ ಎಂದು ಸಾರ್ವಜನಿಕರಿಗೆ ಪ್ರವೇಶ ನೀಡಲಾಗಿತ್ತು. ಆದರೆ ಈ ಬಾರಿ ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಜೊತೆಗೆ ಜನರ ಪ್ರೀತಿ ಸ್ಪರ್ಧಿಗಳಿಗೆ ಸಿಗಲಿದೆ ಎಂದು ತಿಳಿಸಿದರು.
ಬಿಗ್ ಬಾಸ್ ವಿಶೇಷತೆ
ಕಲರ್ಸ್ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಮಾತನಾಡಿ, ಈ ಬಾರಿ 1.30 ಗಂಟೆಗಳ ಕಾಲ ಶೋ ಇರಲಿದೆ. ಅಲ್ಲದೆ ಪ್ರತಿ ಭಾನುವಾರ ವಿಶೇಷ ಶೋ ಇರಲಿದೆ. ಜೊತೆಗೆ ಅಕ್ಟೋಬರ್ 13 ರಂದು ಆರು ಮಲ್ಟಿಪ್ಲೆಕ್ಸ್ ಸ್ಕ್ರೀನ್‍ಗಳಲ್ಲಿ ಲೈವ್ ನಡೆಯಲಿದೆ. ಇದು ಲಾಂಚ್ ಡೇ ಶೋ ವಿಶೇಷತೆಯಾಗಿದೆ. ಬೆಂಗಳೂರಿನ 3, ಮೈಸೂರು 1, ಮಣಿಪಾಲ್ ಮತ್ತು ಉಡುಪಿಯಲ್ಲಿ ತಲಾ ಒಂದೊಂದು ಸ್ಕ್ರೀನ್‍ಗಳಲ್ಲಿ ಲೈವ್ ಪ್ರಸಾರವಾಗಲಿದೆ ಮಾಹಿತಿ ನೀಡಿದರು.