Tag: Kicchan Panchayat

  • ಬಿಗ್ ಬಾಸ್: ಈ ವಾರ ಕಿಚ್ಚನ ಪಂಚಾಯತಿ ಅನುಮಾನ

    ಬಿಗ್ ಬಾಸ್: ಈ ವಾರ ಕಿಚ್ಚನ ಪಂಚಾಯತಿ ಅನುಮಾನ

    ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಕಿಚ್ಚನ ಪಂಚಾಯತಿಗಾಗಿ (Kicchan Panchayat) ಅಷ್ಟೂ ಕಂಟೆಸ್ಟೆಂಟ್ ಗಳು ಕಾಯುವುದು ಸಾಮಾನ್ಯ. ಕೇವಲ ಕಂಟೆಸ್ಟೆಂಟ್ ಗಳು ಮಾತ್ರವಲ್ಲ, ಅಸಂಖ್ಯಾತ ಕಿಚ್ಚನ ಅಭಿಮಾನಿಗಳು ಕೂಡ ಈ ಪಂಚಾಯತಿಗಾಗಿ ಕಾಯುತ್ತಾರೆ. ಆದರೆ, ಈ ವಾರ ಕಿಚ್ಚನ ಪಂಚಾಯತಿ ಇರೋದು ಅನುಮಾನ ಎನ್ನುವ ಮಾಹಿತಿ ಹರಿದಾಡುತ್ತಿದೆ.

    ಕಿಚ್ಚನ (Sudeep) ಪಂಚಾಯತಿ ಇಲ್ಲದೇ ಎಲಿಮಿನೇಷನ್ ಸಾಧ್ಯವಾ? ಎಂದು ಹಲವರು ಕೇಳಬಹುದು. ಆದರೆ, ಅದಕ್ಕೊಂದು ಲಾಜಿಕ್ ಹುಡುಕಿಕೊಂಡು ಈ ವಾರ ಮುಗಿಸಲಾಗುತ್ತಿದೆ ಎನ್ನುವುದು ಸದ್ಯಕ್ಕಿರುವ ಮಾಹಿತಿ. ಈ ವಾರ ಕಿಚ್ಚನಿಗೆ ಏನಾಯಿತು? ಯಾಕೆ ಪಂಚಾಯತಿಗೆ ಬರುವುದಿಲ್ಲ ಎನ್ನುವುದಕ್ಕೂ ಕಾರಣವಿದೆ. ಇಂದಿನಿಂದ ಕಿಚ್ಚ ಕ್ರಿಕೆಟ್ ನಲ್ಲಿ ಬ್ಯುಸಿಯಾಗಿದ್ದಾರೆ.

    ಕಿಚ್ಚನ ನೇತೃತ್ವದಲ್ಲಿ ಕೆಸಿಸಿ ನಡೆಯುತ್ತಿದೆ. ಇಂದು ಅದರ ಉದ್ಘಾಟನೆ ಸಮಾರಂಭ. ಸಿಎಂ ಸಿದ್ಧರಾಮಯ್ಯ ಸೇರಿದಂತೆ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹಾಗಾಗಿ ಕಿಚ್ಚ ಇರಲೇಬೇಕು. ಜೊತೆಗೆ ಕಿಚ್ಚನ ಟೀಮ್ ಕೂಡ ಕ್ರಿಕೆಟ್ ಆಡುತ್ತಿದೆ. ಇಂದು ಮತ್ತು ನಾಳೆ ಕ್ರಿಕೆಟ್ ಇರುವುದರಿಂದ ಕಿಚ್ಚನ ಪಂಚಾಯತಿ ಅನುಮಾನ ಎಂದು ಹೇಳಲಾಗುತ್ತಿದೆ.

     

    ಸದ್ಯ ಮಾಹಿತಿ ಇಷ್ಟಿದೆ. ನಿನ್ನೆಯೇ ಕಿಚ್ಚನ ಪಂಚಾಯತಿ ಮುಗಿದೆಯಾ? ಅಥವಾ ಇಲ್ಲವಾ ಎನ್ನುವುದಕ್ಕೆ ಯಾವುದಕ್ಕೂ ಇವತ್ತು ಸಂಜೆವರೆಗೂ ಕಾಯಬೇಕು.

  • Breaking: ‘ಬಿಗ್ ಬಾಸ್’ ಮನೆಯಿಂದ ಸ್ನೇಕ್ ಶ್ಯಾಮ್ ಹೊರಗೆ?

    Breaking: ‘ಬಿಗ್ ಬಾಸ್’ ಮನೆಯಿಂದ ಸ್ನೇಕ್ ಶ್ಯಾಮ್ ಹೊರಗೆ?

    ಮೈಸೂರಿನ ಸ್ನೇಕ್ ಶ್ಯಾಮ್ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಈ ಸೀಸನ್ ನ ಮೊದಲ ಎಲಿಮಿನೇಟ್ (Eliminate) ಶ್ಯಾಮ್ ಆಗಿದ್ದಾರೆ ಎನ್ನುವುದು ಸಿಗುತ್ತಿರುವ ಮಾಹಿತಿ. ಆದರೆ, ಶ್ಯಾಮ್ (Snake Shyam) ಮನೆಯಲ್ಲಿ ಇದ್ದರಾ? ಅಥವಾ ನಿಜವಾಗಿಯೂ ಎಲಿಮೇನ್ ಆಗಿ ಹೊರ ಬಂದಿದ್ದಾರಾ ಎನ್ನುವುದು ಇಂದು ಸಂಜೆಯೇ ಕಿಚ್ಚನ ಪಂಚಾಯತಿಯಲ್ಲಿ ತೀರ್ಮಾನವಾಗಲಿದೆ.

    ಒಂದು ವಾರದ ಎಪಿಸೋಡ್ ಗಳನ್ನು ನೋಡಿದಾಗ ಸ್ನೇಕ್ ಶ್ಯಾಮ್ ಅಷ್ಟಾಗಿ ಉತ್ಸಾಹದಿಂದ ಇರಲಿಲ್ಲ. ವಯಸ್ಸಿನ ಕಾರಣದಿಂದಾಗಿ ಟಾಸ್ಕ್ ಮಾಡುವುದು ಕೂಡ ಅವರಿಗೆ ಕಷ್ಟದ ಕೆಲಸವೇ. ಮನೆಯಲ್ಲಿರುವವರನ್ನು ಹೋಲಿಸಿದರೆ ಶ್ಯಾಮ್ ಲವಲವಿಕೆಯಿಂದ ಇರುತ್ತಿರಲಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಅವರನ್ನು ಮನೆಯಿಂದ ಆಚೆ ಹಾಕಿರಬಹುದಾ? ಗೊತ್ತಿಲ್ಲ. ಯಾಕೆಂದರೆ, ಅವರು ಮನೆಯಿಂದ ಹೊರ ಬಂದಿರುವುದು ನಿಕ್ಕಿ ಆಗಿಲ್ಲ.

    ಕಿಚ್ಚನ ಪಂಚಾಯತಿಯಲ್ಲೂ ಗರಂ

    ಬಿಗ್ ಬಾಸ್ ಕನ್ನಡ 10 (Bigg Boss Kannada)ರ ಕಿಚ್ಚನ ಮೊದಲ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ವಾಹಿನಿಯು ಪ್ರೋಮೋವನ್ನು ರಿಲೀಸ್ ಮಾಡಿದ್ದು, ಕಿಚ್ಚ ಆಡಿದ ಮಾತುಗಳು ಸಖತ್ ಕುತೂಹಲ ಮೂಡಿಸಿವೆ. ‘ದೇವರ ಮುಂದೆ ನಿಯತ್ತಾಗಿ ಬೇಡಿಕೊಂಡರೆ, ದೇವರೇ ಕ್ಷಮಿಸಿ ಒಂದು ವರ ಕೊಡ್ತಾನೆ’ ಎಂದು ಹೇಳಲಾದ ಮಾತು ವೈರಲ್ ಆಗಿದೆ. ಆ ಮಾತುಗಳನ್ನು ಅವರು ಯಾರಿಗೆ ಹೇಳಿದ್ದಾರೆ ಎನ್ನುವುದು ಪ್ರೊಮೋದಲ್ಲಿ ಬಳಸಲಾದ ದೃಶ್ಯಗಳೇ ಹೇಳುತ್ತವೆ.

    ಇಂದು ಬಿಗ್ ಬಾಸ್ ಮನೆಯಲ್ಲಿ ಕಿಚ್ಚನ ಮೊದಲ ಪಂಚಾಯತಿ. ವೀಕೆಂಡ್ ನಲ್ಲಿ ಸುದೀಪ್ (Sudeep) ಜೊತೆ ಮಾತನಾಡೋಕೆ ಬಿಗ್ ಬಾಸ್ ಸ್ಪರ್ಧಿಗಳು ತುದಿಗಾಲಲ್ಲಿ ಕಾಯುತ್ತಾರೆ. ವೀಕೆಂಡ್ ಪಂಚಾಯತಿಯಲ್ಲಿ (Kichchaana Panchayati) ಭಾಗಿಯಾಗಲೆಂದೇ ಹೊಸ ಹೊಸ ವಿನ್ಯಾಸದ ಕಾಸ್ಟ್ಯೂಮ್ ಅನ್ನೂ ರೆಡಿ ಮಾಡಿಕೊಂಡಿರುತ್ತಾರೆ. ಹಾಗಂತ ಕಿಚ್ಚನ ಪಂಚಾಯತಿ, ಯಾವ ವೇಳೆಯಲ್ಲೇ ಹೇಗೆ ಟರ್ನ್ ಆಗತ್ತೋ ಗೊತ್ತಿಲ್ಲ. ನಗುತ್ತಲೇ ಅಳಿಸುತ್ತಾರೆ, ಅಳಿಸುತ್ತಲೇ ನಗಿಸುತ್ತಾರೆ, ಕೋಪ ಬಂದರೆ ಮುಖಾಮೋತಿ ನೋಡದೇ ಉಗಿದು ಬಿಡುತ್ತಾರೆ ಸುದೀಪ್. ಹಾಗಾಗಿ ಕಿಚ್ಚನ ಪಂಚಾಯತಿಗಾಗಿ ಕಿರುತೆರೆ ಪ್ರೇಕ್ಷಕ ಕೂಡ ಕಾದಿರುತ್ತಾನೆ.

    ಬಿಗ್ ಬಾಸ್ ಸೀಸನ್ 10ರ ಮೊದಲ ಕಿಚ್ಚನ ಪಂಚಾಯತಿ ಅಂದರೆ, ‘ವಾರದ ಕಥೆ ಕಿಚ್ಚನ ಜೊತೆ’ ಇಂದು ಆರಂಭವಾಗಿದೆ. ಈಗಾಗಲೇ ಶೂಟಿಂಗ್ ಕೂಡ ನಡೆದಿದ್ದು, ಮನೆಯಲ್ಲಿದ್ದವರ ಮೇಲೆ ಕಿಚ್ಚ ಗರಂ ಆಗಿದ್ದಾರೆ ಎನ್ನುವ ಮಾಹಿತಿ ಇದೆ. ಬಿಗ್ ಬಾಸ್ ಮನೆಯೊಳಗೆ ಕಂಟೆಸ್ಟೆಂಟ್ ಬಂದು ಕೇವಲ ಒಂದು ವಾರವಾಗಿದೆಯಷ್ಟೆ. ಒಬ್ಬರಿಗೊಬ್ಬರನ್ನು ಅರ್ಥ ಮಾಡಿಕೊಳ್ಳಲು ಇದು ಅತ್ಯಂತ ಕಡಿಮೆ ಸಮಯ. ಆದರೂ, ಡ್ರೋನ್ ಪ್ರತಾಪ್ ಮೇಲೆ ಮನೆಮುಂದಿಯಲ್ಲ ಮುರಿದು ಬಿದ್ದಿದ್ದಾರೆ. ಡ್ರೋನ್‍ ಪ್ರತಾಪ್ ಬಗ್ಗೆ ಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ. ಅವಮಾನಿಸುವಂತಹ ಸನ್ನಿವೇಶಗಳೂ ಸೃಷ್ಟಿಯಾಗಿವೆ. ಇವೆಲ್ಲ ಕಿಚ್ಚನ ಕೋಪಕ್ಕೆ ಕಾರಣವಾಗಿವೆ.

     

    ಡ್ರೋನ್ ‍ಪ್ರತಾಪ್ ತಮ್ಮ ನಿಜ ಜೀವನದಲ್ಲಿ ಏನೇ ಇರಲಿ. ಆದರೆ, ಮನೆಗೆ ಬಂದಾಗ ಇತರರಂತೆ ಅವರೂ ಕೂಡ ಸ್ಪರ್ಧಿ. ಸಮಾಜದಲ್ಲಿ ಅವರಿಗೂ ಅವರದ್ದೇ ಆದ ಸ್ಥಾನವಿದೆ. ಅವರ ಖಾಸಗಿ ಬದುಕನ್ನು ಸಾಕಷ್ಟು ರೀತಿಯಲ್ಲಿ ಕೆದಕಿ ಬಿಗ್ ಬಾಸ್ ಮನೆಯಲ್ಲಿ ಅಪಮಾನ ಮಾಡಲಾಗುತ್ತಿದೆ. ಯಾರೆಲ್ಲ ಡ್ರೋನ್ ಪ್ರತಾಪ್‍ ರನ್ನು ಅವಮಾನಿಸಿದ್ದಾರೋ ಅವರಿಗೆಲ್ಲ ಮುಟ್ಟಿ ನೋಡಿಕೊಳ್ಳುವಂತಹ ಮಾತುಗಳನ್ನು ಆಡಿದ್ದಾರಂತೆ ಸುದೀಪ್. ಅಲ್ಲದೇ, ಡ್ರೋನ್ ಅವರಿಗೂ ಕಿಚ್ಚ ಕೆಲವು ಕಿವಿ ಮಾತುಗಳನ್ನು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]