Tag: Kiccha

  • ಉಪೇಂದ್ರ ಬರ್ತಡೇ ಮತ್ತು ‘ಕಬ್ಜ’ ಸಿನಿಮಾದ ಟೀಸರ್ ಗಾಗಿ ಕಿಚ್ಚ ಸುದೀಪ್ ಕೂಡ ಕಾಯ್ತಿದ್ದಾರಂತೆ

    ಉಪೇಂದ್ರ ಬರ್ತಡೇ ಮತ್ತು ‘ಕಬ್ಜ’ ಸಿನಿಮಾದ ಟೀಸರ್ ಗಾಗಿ ಕಿಚ್ಚ ಸುದೀಪ್ ಕೂಡ ಕಾಯ್ತಿದ್ದಾರಂತೆ

    ನಾಳೆಯೊಂದು ದಿನ ಕಳೆದರೆ ನಾಡಿದ್ದು (ಸೆ.17) ಉಪೇಂದ್ರ ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್ ನ ‘ಕಬ್ಜ’ (Kabzaa) ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದೆ. ಈವರೆಗೂ ಕೇವಲ ಪೋಸ್ಟರ್, ಮೋಷನ್ ಪೋಸ್ಟರ್ ಅಷ್ಟನ್ನೇ ಬಿಡುಗಡೆ ಮಾಡಿದ್ದ ನಿರ್ದೇಶಕ ಆರ್.ಚಂದ್ರು ಇದೀಗ ಮೊದಲ ಬಾರಿಗೆ ಟೀಸರ್ (Teaser) ರಿಲೀಸ್ ಮಾಡುತ್ತಿದ್ದಾರೆ. ಈ ಟೀಸರ್ ಅನ್ನು ನೋಡಲು ಸ್ವತಃ ಕಿಚ್ಚ ಸುದೀಪ್ ಕಾಯುತ್ತಿದ್ದಾರಂತೆ. ಅಭಿಮಾನಿಗಳಿಗೂ ಕಡ್ಡಾಯವಾಗಿ ಈ ಟೀಸರ್ ನೋಡಿ ಎಂದು ವಿಡಿಯೋ ಮೂಲಕ ಸಂದೇಶ ನೀಡಿದ್ದಾರೆ ಸುದೀಪ್ (Sudeep).

    ಕಬ್ಜ ಸಿನಿಮಾದ ಟೀಸರ್ ಉಪೇಂದ್ರರ ಹುಟ್ಟು ಹಬ್ಬದ ದಿನಕ್ಕಾಗಿ ಬಿಡುಗಡೆ ಆಗುತ್ತಿದ್ದು, ಟೀಸರ್ ನೋಡಲು ನಾನಂತೂ ಎಕ್ಸೈಟ್ ಆಗಿದ್ದೇನೆ. ಎಲ್ಲರೂ ಈ ಸಿನಿಮಾಗೆ ಪ್ರೋತ್ಸಾಹಿಸಿ ಎಂದು ಕಿಚ್ಚ ಸುದೀಪ್ (Kiccha) ವಿಡಿಯೋ ಸಂದೇಶ ಕಳುಹಿಸಿದ್ದಾರೆ. ಈ ಸಿನಿಮಾದಲ್ಲಿ ಸ್ವತಃ ಸುದೀಪ್ ಕೂಡ ಹೊಸ ಬಗೆಯ ಪಾತ್ರ ಮಾಡಿದ್ದರಿಂದ ಸುದೀಪ್ ಮತ್ತು ಉಪೇಂದ್ರ ಅಭಿಮಾನಿಗಳು ಈ ಸಿನಿಮಾದ ಟೀಸರ್ ಗಾಗಿ ಕಾಯುತ್ತಿದ್ದಾರೆ. ಕೆಜಿಎಫ್ 2 ಸಿನಿಮಾದ ನಂತರ ಭಾರೀ ಬಜೆಟ್ ನಲ್ಲಿ ನಿರ್ಮಾಣ ಆಗಿರುವ ಮತ್ತೊಂದು ಕನ್ನಡ ಸಿನಿಮಾ ಇದಾಗಿದ್ದು, ಪ್ಯಾನ್ ಇಂಡಿಯಾ ಲೇವಲ್ ನಲ್ಲೇ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಇದನ್ನೂ ಓದಿ:‘ಥ್ಯಾಂಕ್ ಗಾಡ್’ ಚಿತ್ರದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ: ನಟ ಅಜಯ್ ದೇವಗನ್ ವಿರುದ್ಧ ದೂರು ದಾಖಲು

    ಒಟ್ಟು ಐದು ಭಾಷೆಗಳಲ್ಲಿ ಟೀಸರ್ ರಿಲೀಸ್ ಆಗುತ್ತಿದ್ದು, ಕನ್ನಡದ ಸಿನಿಮಾವೊಂದು ಭಾರತೀಯ ಸಿನಿಮಾ ರಂಗದಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಈಗಾಗಲೇ ಕಬ್ಜ ಸಿನಿಮಾ ಪ್ಯಾನ್ ಇಂಡಿಯಾ ಲೇವಲ್ ನಲ್ಲಿ ಹವಾ ಕ್ರಿಯೇಟ್ ಮಾಡಿದೆ. ನಿರ್ದೇಶಕ ಚಂದ್ರು, ಕಿಚ್ಚ ಸುದೀಪ್ ಮತ್ತು ಉಪೇಂದ್ರ (Upendra) ಇದೇ ಮೊದಲ ಬಾರಿಗೆ ಒಟ್ಟಾಗಿ ಕೆಲಸ ಮಾಡಿದ್ದು, ಕೆಜಿಎಫ್ 2 ಸಿನಿಮಾದಲ್ಲಿದ್ದ ತಾಂತ್ರಿಕ ತಂಡ ಕೂಡ ಈ ಚಿತ್ರಕ್ಕಾಗಿ ಕೆಲಸ ಮಾಡಿದೆ. ಹಾಗಾಗಿ ಕೆಜಿಎಫ್ 2 ಸಿನಿಮಾಗೆ ಕಬ್ಜವನ್ನು ಹೋಲಿಕೆ ಮಾಡಲಾಗುತ್ತಿದೆ.

    ಉಪ್ಪಿ ಹುಟ್ಟು ಹಬ್ಬವನ್ನು ಮತ್ತಷ್ಟು ರಂಗಾಗಿಸಲು ಕಬ್ಜ ನಿರ್ದೇಶಕ ಆರ್.ಚಂದ್ರು (R. Chandru) ಸಜ್ಜಾಗಿದ್ದು, ಉಪ್ಪಿ ಅಭಿಮಾನಿಗಳಿಗೆ ಭರ್ಜರಿ ಬಹುಮಾನವನ್ನೇ ಕೊಡಲಿದ್ದಾರಂತೆ. ‘ಕೆಜಿಎಫ್ 2’ (KGF 2) ಚಿತ್ರಕ್ಕೆ ಸಂಗೀತ ನೀಡಿದ್ದ ರವಿ ಬಸ್ರೂರ್ ಅವರೇ ಈ ಸಿನಿಮಾಗೂ ಸಂಗೀತ ನೀಡುತ್ತಿದ್ದು, ಟೀಸರ್ ಹೇಗೆ ಇರಲಿದೆ ಎನ್ನುವ ಕುತೂಹಲವಂತೂ ಮೂಡಿದೆ. ಚಂದ್ರು ಅವರು ಸೆರೆ ಹಿಡಿದಿರುವ ವಿಷ್ಯುವೆಲ್ಸ್, ರವಿ ಬಸ್ರೂರ್ ಮ್ಯೂಸಿಕ್ ಅಭಿಮಾನಿಗಳನ್ನು ಮೋಡಿ ಮಾಡುವದಂತೂ ಕಂಡಿತ.

    Live Tv
    [brid partner=56869869 player=32851 video=960834 autoplay=true]

  • ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಟೀಸರ್ ಬಿಡುಗಡೆಗೆ ದಿನಗಣನೆ: ಉಪ್ಪಿ ಬರ್ತಡೇಗೆ ‘ಕಬ್ಜ’ ಝಲಕ್

    ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಟೀಸರ್ ಬಿಡುಗಡೆಗೆ ದಿನಗಣನೆ: ಉಪ್ಪಿ ಬರ್ತಡೇಗೆ ‘ಕಬ್ಜ’ ಝಲಕ್

    ಕೆಜಿಎಫ್ 2 ಸಿನಿಮಾದ ನಂತರ ಕನ್ನಡದಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ ‘ಕಬ್ಜ’ ತಯಾರಾಗಿದ್ದು, ಈಗಾಗಲೇ ಹಲವು ಲುಕ್ ಗಳಿಂದ ಗಮನ ಸೆಳೆದಿದೆ. ಇದೇ ಮೊದಲ ಬಾರಿಗೆ ಈ ಚಿತ್ರದ ಟೀಸರ್ (Teaser) ರೆಡಿಯಾಗಿದ್ದು, ಚಿತ್ರದ ನಾಯಕ ಉಪೇಂದ್ರ (Upendra) ಅವರ ಹುಟ್ಟು ಹಬ್ಬದ ದಿನದಂದು ಬಿಡುಗಡೆ ಆಗುತ್ತಿರುವುದು ವಿಶೇಷ. ಕನ್ನಡದ ಹೆಸರಾಂತ ನಿರ್ದೇಶಕ ಆರ್.ಚಂದ್ರು (R. Chandru) ಈಗಾಗಲೇ ಟೀಸರ್ ರೆಡಿ ಮಾಡುತ್ತಿದ್ದು ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಹೀಗೆ ಐದು ಭಾಷೆಗಳಲ್ಲಿ ಟೀಸರ್ ರಿಲೀಸ್ ಆಗುತ್ತಿರುವುದು ವಿಶೇಷ.

    ಸೆಪ್ಟಂಬರ್ 18ಕ್ಕೆ ಉಪ್ಪಿ ಹುಟ್ಟು ಹಬ್ಬ. ಈ ಹುಟ್ಟು ಹಬ್ಬವನ್ನು ಮತ್ತಷ್ಟು ರಂಗಾಗಿಸಲು ಕಬ್ಜ ನಿರ್ದೇಶಕ ಆರ್.ಚಂದ್ರು ಸಜ್ಜಾಗಿದ್ದು, ಉಪ್ಪಿ ಅಭಿಮಾನಿಗಳಿಗೆ ಭರ್ಜರಿ ಬಹುಮಾನವನ್ನೇ ಕೊಡಲಿದ್ದಾರಂತೆ. ‘ಕೆಜಿಎಫ್ 2’ ಚಿತ್ರಕ್ಕೆ ಸಂಗೀತ ನೀಡಿದ್ದ ರವಿ ಬಸ್ರೂರ್ (Ravi Basrur) ಅವರೇ ಈ ಸಿನಿಮಾಗೂ ಸಂಗೀತ ನೀಡುತ್ತಿದ್ದು, ಟೀಸರ್ ಹೇಗೆ ಇರಲಿದೆ ಎನ್ನುವ ಕುತೂಹಲವಂತೂ ಮೂಡಿದೆ. ಚಂದ್ರು ಅವರು ಸೆರೆ ಹಿಡಿದಿರುವ ವಿಷ್ಯುವೆಲ್ಸ್, ರವಿ ಬಸ್ರೂರ್ ಮ್ಯೂಸಿಕ್ ಅಭಿಮಾನಿಗಳನ್ನು ಮೋಡಿ ಮಾಡುವದಂತೂ ಕಂಡಿತ. ಇದನ್ನೂ ಓದಿ:‘ಮದುವೆ’ ನಂತರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆದ ಮಹಾಲಕ್ಷ್ಮಿ ರವೀಂದರ್

    ಕನ್ನಡ ಸಿನಿಮಾ ರಂಗಕ್ಕೆ (Sandalwood) ಅನೇಕ ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಆರ್.ಚಂದ್ರು ‘ಕಬ್ಜ’ (Kabzaa) ಸಿನಿಮಾವನ್ನು ಮತ್ತೊಂದು ಲೇವಲ್ ಗೆ ತಗೆದುಕೊಂಡು ಹೋಗಿದ್ದು, ಯಾವುದೇ ರೀತಿಯಲ್ಲಿ ಕಾಂಪ್ರಮೈಸ್ ಮಾಡಿಕೊಳ್ಳದೇ ಅದ್ಧೂರಿಯಾಗಿ ಚಿತ್ರ ಮಾಡಿದ್ದು, ಭಾರತೀಯ ಸಿನಿಮಾ ರಂಗದಲ್ಲಿ ‘ಕಬ್ಜ’ ಮತ್ತೊಂದು ಇತಿಹಾಸವನ್ನು ನಿರ್ಮಿಸಲಿದೆ ಎಂದು ಅಂದಾಜಿಸಲಾಗಿದೆ. ಚಿತ್ರಕ್ಕೆ ಭಾರೀ ಬೇಡಿಕೆ ಕೂಡ ಬರುತ್ತಿದ್ದು, ಸಿನಿಮಾ ರಿಲೀಸ್ ಗೂ ಮುನ್ನವೇ ಸೇಫ್ ಆಗಲಿದೆ ಎನ್ನುವ ಲೆಕ್ಕಾಚಾರವೂ ಶುರುವಾಗಿದೆ.

    ಹೊಸ ರೀತಿಯಲ್ಲಿ ಆಲೋಚಿಸುವ ನಿರ್ದೇಶಕ ಚಂದ್ರು, ಸೂಪರ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ (Sudeep) ಕಾಂಬಿನೇಷನ್ ನ ಮೊದಲ ಸಿನಿಮಾ ಇದಾಗಿದ್ದು, ಹೀಗಾಗಿ ಪ್ಯಾನ್ ಇಂಡಿಯಾ ಲೇವಲ್ ನಲ್ಲಿ ಸುದ್ದಿ ಆಗುತ್ತಿದೆ. ಕೆಜಿಎಫ್ 2 ಸಿನಿಮಾದಲ್ಲಿ ಕೆಲಸ ಮಾಡಿರುವ ಅನೇಕ ತಂತ್ರಜ್ಞರು ಈ ಸಿನಿಮಾಗೂ ಕೆಲಸ ಮಾಡಿದ್ದಾರೆ. ಹಾಗಾಗಿ ಕೆಜಿಎಫ್ 2 ಚಿತ್ರದ ಜೊತೆಗೆ ಕಬ್ಜ ಸಿನಿಮಾವನ್ನು ಹೋಲಿಕೆ ಮಾಡಲಾಗುತ್ತಿದೆ. ಹಾಗಾಗಿ ಭಾರತೀಯ ಸಿನಿಮಾ ರಂಗದಲ್ಲಿ ಕನ್ನಡದ ಮತ್ತೊಂದು ಸಿನಿಮಾ ಗೆಲುವಿನ ಬಾವುಟ ಹಾರಿಸಲು ರೆಡಿ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • Breaking-‘ಬಿಗ್ ಬಾಸ್’ ಮನೆಗೆ ಜೊತೆ ಜೊತೆಯಲಿ ಆರ್ಯವರ್ಧನ್ ಅಲಿಯಾಸ್ ನಟ ಅನಿರುದ್ಧ ಹೋಗೋದು ಪಕ್ಕಾ

    Breaking-‘ಬಿಗ್ ಬಾಸ್’ ಮನೆಗೆ ಜೊತೆ ಜೊತೆಯಲಿ ಆರ್ಯವರ್ಧನ್ ಅಲಿಯಾಸ್ ನಟ ಅನಿರುದ್ಧ ಹೋಗೋದು ಪಕ್ಕಾ

    ಬಿಗ್ ಬಾಸ್ ಕನ್ನಡ ಓಟಿಟಿ ಫಿನಾಲೆ ಹಂತ ತಲುಪಿದೆ. ಇದೇ ವಾರ ಕೊನೆಯ ಆಟ ಆಗಿರುವುದರಿಂದ ಬಿಗ್ ಬಾಸ್ ಸೀಸನ್ 9ರ ಬಗ್ಗೆ ಕುತೂಹಲ ಹೆಚ್ಚಾಗಿದೆ. ಈಗಾಗಲೇ ವಾಹಿನಿಯು ಸೀಸನ್ 9ರ ಪ್ರೊಮೊಗಳನ್ನು ಹಾಕಲು ಶುರು ಮಾಡಿದ್ದು, ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲ ಹೋಗಲಿದ್ದಾರೆ ಎನ್ನುವ ಚರ್ಚೆ ಕೂಡ ನಡೆದಿದೆ. ಮೂಲಗಳ  ಪ್ರಕಾರ ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ಬಂದಿರುವ ಅನಿರುದ್ಧ (Aniruddha) ಅವರು ಬಿಗ್ ಬಾಸ್ ಮನೆಗೆ ಹೋಗಲಿದ್ದಾರಂತೆ.

    ಬಿಗ್ ಬಾಸ್ (Bigg Boss Kannada) ಮತ್ತೆ ಶುರುವಾಗಲಿದೆ ಎಂದು ಸುದ್ದಿ ಹರಡಿದಾಗಲೇ ‘ಜೊತೆ ಜೊತೆಯಲಿ’ ಸೀರಿಯಲ್ ಸೆಟ್ ನಲ್ಲಿ ಈ ಬಾರಿ ಅನಿರುದ್ಧ ಬಿಗ್ ಬಾಸ್ ಮನೆಗೆ ಹೋಗುತ್ತಾರಂತೆ. ಅದಕ್ಕಾಗಿ ಅವರು ಧಾರಾವಾಹಿ ಬಿಡಲಿದ್ದಾರೆ ಅಥವಾ ಬೇಗ ಧಾರಾವಾಹಿಯನ್ನು ಮುಗಿಸಲು ತಿಳಿಸಿದ್ದಾರೆ ಅಂತೆಲ್ಲ ಮಾತುಗಳು ಕೇಳಿ ಬಂದಿದ್ದು ನಿಜ. ವಾಹಿನಿಯೂ ಕೂಡ ಅನಿರುದ್ಧ ಅವರನ್ನು ಆಹ್ವಾನಿಸಿದ್ದು ಸುಳ್ಳಲ್ಲ. ಹೀಗಾಗಿ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಅನಿರುದ್ಧ ಇರಲಿದ್ದಾರೆ ಎನ್ನುತ್ತವೆ ಬಲ್ಲ ಮೂಲಗಳು. ಇದನ್ನೂ ಓದಿ:ನಂದಿನಿ ಔಟ್ ಆದ್ಮೇಲೆ ಸಾನ್ಯ ಜೊತೆ ಜಶ್ವಂತ್ ಲವ್ವಿ-ಡವ್ವಿ: ರೂಪೇಶ್‌ಗೆ ಟೆನ್ಷನ್ ಶುರು

    ಧಾರಾವಾಹಿ ಮತ್ತು ಯಾವುದೇ ರಿಯಾಲಿಟಿ ಶೋಗಳಲ್ಲಿ ಅನಿರುದ್ಧ ಅವರನ್ನು ಬಳಸಿಕೊಳ್ಳಬೇಡಿ ಎಂದು ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಅಂಗ ಸಂಸ್ಥೆಯಾದ ಟೆಲಿವಿಷನ್ ನಿರ್ದೇಶಕರ ಸಂಘ ಈಗಾಗಲೇ ಕನ್ನಡದ ಅಷ್ಟೂ ಮನರಂಜನಾ ವಾಹಿನಿಗಳಿಗೆ ಮನವಿ ಮಾಡಿವೆ. ಜೊತೆ ಜೊತೆಯಲಿ ಟೀಮ್ ಜೊತೆ ಕಿರಿಕ್ ಮಾಡಿಕೊಂಡ ಸಂದರ್ಭದಲ್ಲಿಇಂಥದ್ದೊಂದು ನಿರ್ಧಾರವನ್ನು ನಿರ್ಮಾಪಕರು ತಗೆದುಕೊಂಡಿದ್ದಾರೆ. ಆದರೆ, ವಾಹಿನಿಗಳು ಎಷ್ಟರ ಮಟ್ಟಿಗೆ ಇದನ್ನು ಪಾಲಿಸುತ್ತವೆ ಎನ್ನುವುದೇ ಈಗಿರುವ ಪ್ರಶ್ನೆ.

    ಬಿಗ್ ಬಾಸ್ ಸೀಸನ್ 9ಕ್ಕೆ (Bigg Boss Season 9) ಹೋಗಲು ಅನಿರುದ್ಧ ಅವರು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಕುರಿತು ವಾಹಿನಿಯಾಗಲಿ ಅಥವಾ ಅನಿರುದ್ಧ ಆಗಲಿ ಖಚಿತ ಪಡಿಸಿಲ್ಲ. ಆದರೂ, ಕೂಡ ಇಂಥದ್ದೊಂದು ಸುದ್ದಿಯು ಕಿರುತೆರೆ ವಲಯದಲ್ಲಿ ಹರಿದಾಡುತ್ತಿದೆ. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ (Aryavardhan) ಪಾತ್ರಕ್ಕೆ ಬೇರೆ ಶೇಪು ಕೊಟ್ಟಿರುವುದರಿಂದ ಅನಿರುದ್ಧ ಅವರು ಮತ್ತೆ ಆ ಧಾರಾವಾಹಿಯಲ್ಲಿ ನಟಿಸುವ ಆಸೆಯನ್ನು ಕೈ ಬಿಟ್ಟಿದ್ದಾರೆ. ಬಂದಿರುವ ಬಿಗ್ ಬಾಸ್ ಅವಕಾಶವನ್ನು ಒಪ್ಪಿಕೊಂಡಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • ಒಟಿಟಿಯಲ್ಲಿ ‘ವಿಕ್ರಾಂತ್ ರೋಣ’ ಹವಾ: 24 ಗಂಟೆಯಲ್ಲಿ ವೀಕ್ಷಣೆ ಆಗಿದ್ದೆಷ್ಟು?

    ಒಟಿಟಿಯಲ್ಲಿ ‘ವಿಕ್ರಾಂತ್ ರೋಣ’ ಹವಾ: 24 ಗಂಟೆಯಲ್ಲಿ ವೀಕ್ಷಣೆ ಆಗಿದ್ದೆಷ್ಟು?

    ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಜೀ5 ಒಟಿಟಿಯಲ್ಲಿ ಧೂಳ್ ಎಬ್ಬಿಸುತ್ತಿದೆ. ಅಡ್ವೆಂಚರ್ಸ್ ಕಥಾನಕದ ಜೊತೆಗೆ ಮರ್ಡರ್ ಮಿಸ್ಟ್ರೀ ಕಂಟೆಂಟ್ ಹೊತ್ತುಬಂದಿದ್ದ ಈ ಚಿತ್ರಕ್ಕೆ ಒಟಿಟಿಯಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಸುದೀಪ್ ಹುಟ್ಟುಹಬ್ಬಕ್ಕೆ ಅಂದ್ರೆ ಸೆಪ್ಟಂಬರ್ 2ರಂದು ಜೀ5 ಒಟಿಟಿಗೆ ಲಗ್ಗೆ ಇಟ್ಟಿದ್ದ ವಿಕ್ರಾಂತ್ ರೋಣ ಜಸ್ಟ್ 24 ಗಂಟೆಯಲ್ಲಿ 500 ಮಿಲಿಯನ್ಸ್ ಸ್ಟ್ರೀಮಿಂಗ್ ಕಂಡು ದಾಖಲೆ ಬರೆದಿದೆ.

    ಜುಲೈ 28ರಂದು ಬಿಗ್ ಸ್ಕ್ರೀನ್ ನಲ್ಲಿ ದಿಬ್ಬಣ ಹೊರಟಿದ್ದ ವಿಕ್ರಾಂತ್ ರೋಣನಿಗೆ ಸುದೀಪಿಯನ್ಸ್ ಬಹುಪರಾಕ್ ಎಂದಿದ್ದರು. ತ್ರಿಡಿಯಲ್ಲಿ ಕಿಚ್ಚನ ನಯಾ ಅವತಾರ ಕಣ್ತುಂಬಿಕೊಂಡು ಫುಲ್ ಮಾರ್ಕ್ಸ್ ಕೊಟ್ಟಿದ್ದರು. ಅನೂಪ್ ಭಂಡಾರಿ ಸಾರಥ್ಯದಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ಬಿಟೌನ್ ಬೊಂಬೆ ಜಾಕ್ವೆಲಿನ್ ಫರ್ನಾಂಡಿಸ್, ಅನೂಪ್ ಭಂಡಾರಿ, ನೀತಾ ಆಶೋಕ್ ಸೇರಿದಂತೆ ಹಲವರು ಅಭಿನಯಿಸಿದ್ದರು. ಜಾಕ್ ಮಂಜು ನಿರ್ಮಾಣದಲ್ಲಿ ಅದ್ಧೂರಿಯಾಗಿ ನಿರ್ಮಾಣಗೊಂಡಿದ್ದ ವಿಕ್ರಾಂತ್ ರೋಣ ಬಾಕ್ಸ್ ಆಫೀಸ್ ನಲ್ಲೂ ಕೋಟಿ-ಕೋಟಿ ಕಮಾಯಿ ಮಾಡಿತ್ತು. ಇದನ್ನೂ ಓದಿ:ಪ್ರೀ ವೆಡ್ಡಿಂಗ್ ಫೋಟೋಶೂಟ್‌ನಲ್ಲಿ ಮಿಂಚಿದ `ಕಮಲಿ’ ಖ್ಯಾತಿಯ ಗೇಬ್ರಿಯೆಲಾ- ಸುಹಾಸ್

    ಅದ್ಧೂರಿ ಸೆಟ್ ನಲ್ಲಿ ಚಿತ್ರೀಕರಿಸಿದ್ದ ರಾ ರಾ ರಕ್ಕಮ್ಮ ಹಾಡು ಹಿಟ್ ಲೀಸ್ಟ್ ಸೇರಿತ್ತು. ಬಿ ಅಜನೀಶ್ ಲೋಕನಾಥ್ ಸಂಗೀತವಿದ್ದ ಎಲ್ಲಾ ಹಾಡುಗಳು ಪ್ರೇಕ್ಷಕ ಗಮನಸೆಳೆದಿದ್ದವು. ಸಿಲ್ವರ್ ಸ್ಕ್ರೀನ್ ನಲ್ಲಿ ಗುಮ್ಮನ  ಆರ್ಭಟ ಮಿಸ್ ಮಾಡಿಕೊಂಡ ಪ್ರೇಕ್ಷಕರು ಈಗ ಕುಳಿತು ವಿಕ್ರಾಂತ್ ರೋಣ ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದು.

    Live Tv
    [brid partner=56869869 player=32851 video=960834 autoplay=true]

  • ಸುದೀಪ್ ಹುಟ್ಟು ಹಬ್ಬಕ್ಕೆ ಯಾಕೆ ಸಿನಿಮಾ ಘೋಷಣೆ ಇಲ್ಲ?: ಅನುಮಾನ ಮೂಡಿಸಿದ ಕಿಚ್ಚನ ನಡೆ

    ಸುದೀಪ್ ಹುಟ್ಟು ಹಬ್ಬಕ್ಕೆ ಯಾಕೆ ಸಿನಿಮಾ ಘೋಷಣೆ ಇಲ್ಲ?: ಅನುಮಾನ ಮೂಡಿಸಿದ ಕಿಚ್ಚನ ನಡೆ

    ನಿನ್ನೆಯಷ್ಟೇ ಕಿಚ್ಚ ಸುದೀಪ್ ಅದ್ಧೂರಿಯಾಗಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ನಾಡಿನ ಅನೇಕ ನಟ, ನಟಿಯರು, ಮುಖ್ಯಮಂತ್ರಿಗಳಾದಿಯಾಗಿ ರಾಜಕೀಯ ಮುಖಂಡರು ಕಿಚ್ಚನಿಗೆ ಶುಭಾಶಯ ಕೋರಿದ್ದಾರೆ. ಈ ಸಂದರ್ಭದಲ್ಲಿ ಕಿಚ್ಚನ ಅಭಿಮಾನಿಗಳು ಹೊಸ ಸಿನಿಮಾ ಘೋಷಣೆ ಬಗ್ಗೆ ನಿರೀಕ್ಷೆ ಹೊಂದಿದ್ದರು. ಆದರೆ ಯಾವುದೇ ಸಿನಿಮಾ ಘೋಷಣೆ ಮಾಡದೆ ಅಚ್ಚರಿ ಮೂಡಿಸಿದ್ದಾರೆ ಸುದೀಪ್. ಕೈಯಲ್ಲಿ ಅಷ್ಟೊಂದು ಸಿನಿಮಾಗಳಿದ್ದರೂ, ಒಂದೂ ಘೋಷಣೆ ಆಗದೇ ಇರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

    ವಿಕ್ರಾಂತ್ ರೋಣ ಸಿನಿಮಾದ ನಂತರ ಮತ್ತೆ ಅನೂಪ್ ಭಂಡಾರಿ ಜೊತೆ ಸಿನಿಮಾ ಮಾಡುತ್ತಿರುವ ವಿಷಯ ಹರಿದಾಡುತ್ತಿದೆ. ಈ ಹಿಂದೆ ಘೋಷಣೆ ಆದಂತೆ ಬಿಲ್ಲ ರಂಗ ಬಾಷಾ ಸಿನಿಮಾದ ಕಥೆ ಕೆಲಸ ಶುರು ಮಾಡಿದ್ದಾರೆ. ಅಲ್ಲದೇ, ಇತ್ತೀಚೆಗಷ್ಟೇ ತೆಲುಗು ಸಿನಿಮಾವನ್ನು ಒಪ್ಪಿಕೊಂಡಿರುವ ಸುದ್ದಿಯೂ ಇತ್ತು. ಅಲ್ಲದೇ ಸ್ವತಃ ತಾವೇ ಸಲ್ಮಾನ್ ಖಾನ್‌ಗಾಗಿ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರು. ರಕ್ಷಿತ್ ಶೆಟ್ಟಿ ಮಾಡಬೇಕಿರುವ ಸಿನಿಮಾ ಹಾಗೆಯೇ ಉಳಿದುಕೊಂಡಿದೆ. ಇಷ್ಟೊಂದು ಚಿತ್ರಗಳು ಕೈಯಲ್ಲಿದ್ದೂ, ಒಂದೂ ಘೋಷಣೆ ಮಾಡಿದೇ ಇರುವುದು ಕುತೂಹಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಹಳೆ ಗರ್ಲ್ ಫ್ರೆಂಡ್‍ಗಾಗಿ ಹಂಬಲಿಸುತ್ತಿರುವ ಜಶ್ವಂತ್..!

    ಕಿಚ್ಚ ಸುದೀಪ್ ಮೊದಲು ಯಾವ ಸಿನಿಮಾ ಮಾಡಬೇಕು ಎನ್ನುವ ಗೊಂದಲದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ನಟಿಸಬೇಕಾ ಅಥವಾ ನಿರ್ದೇಶನ ಮಾಡಬೇಕಾ ಎನ್ನುವ ಚರ್ಚೆ ಕೂಡ ಶುರುವಾಗಿದೆ. ಹೀಗಾಗಿ ಹೊಸ ಸಿನಿಮಾದ ಅಪ್‌ಡೇಟ್ ನೀಡಲು ಸಾಧ್ಯವಾಗಿಲ್ಲ ಎನ್ನುತ್ತವೆ ಮೂಲಗಳು. ಪ್ರತಿ ಸಾರಿಯೂ ಒಂದಿಲ್ಲೊಂದು ವಿಶೇಷ ಕಂಡಿದ್ದ ಅಭಿಮಾನಿಗಳು ಈ ಬಾರಿಯೂ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಸ್ವತಃ ಸುದೀಪ್ ಅವರೇ ಅಭಿಮಾನಿಗಳಿಗೆ ಸಿಗುವ ಮೂಲಕ ಎಲ್ಲರನ್ನೂ ಖುಷಿಗೊಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಿಚ್ಚ ಸುದೀಪ್ ಮನೆ ಮುಂದೆ ಅಭಿಮಾನಿಗಳ ಮಹಾಸಾಗರ: ಹ್ಯಾಪಿ ಬರ್ತ್‌ ಡೇ ಕಿಚ್ಚ

    ಕಿಚ್ಚ ಸುದೀಪ್ ಮನೆ ಮುಂದೆ ಅಭಿಮಾನಿಗಳ ಮಹಾಸಾಗರ: ಹ್ಯಾಪಿ ಬರ್ತ್‌ ಡೇ ಕಿಚ್ಚ

    ಟ ಕಿಚ್ಚ ಸುದೀಪ್ ಇಂದು ತಮ್ಮ 49ನೇ ಹುಟ್ಟು ಹಬ್ಬವನ್ನು ಸಡಗರದಿಂದ ಆಚರಿಸಿಕೊಂಡರು. ಮೂರ್ನಾಲ್ಕು ವರ್ಷಗಳಿಂದ ಹುಟ್ಟು ಹಬ್ಬದ ದಿನದಂದು ಅಭಿಮಾನಿಗಳ ಕೈಗೆ ಸಿಗದಿದ್ದ ಕಿಚ್ಚ, ಇಂದು ಅವರಿಗಾಗಿ ಇಡೀ ದಿನ ಮೀಸಲಿಟ್ಟಿದ್ದಾರೆ. ಹಾಗಾಗಿ ದೇಶದ ನಾನಾ ಭಾಗಗಳಿಂದ ಕಿಚ್ಚನ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ಬೆಂಗಳೂರಿಗೆ ಆಗಮಿಸಿದ್ದಾರೆ.

    ತಡರಾತ್ರಿಯಿಂದಲೇ ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಆಚರಿಸಲು ಅಭಿಮಾನಿಗಳು ಕಿಚ್ಚನ ಮನೆಮುಂದೆ ಜಮಾಯಿಸಿದ್ದು, ನಟನಿಗೆ ಜೈಕಾರ ಕೂಗುತ್ತಿದ್ದಾರೆ. ಅಭಿಮಾನಿಗಳ ಭೇಟಿ ಬೆಳಗ್ಗೆ ಬಂದ ಸುದೀಪ್, ಎಲ್ಲರೊಂದಿಗೂ ಕೈ ಕುಲುಕಿ, ಸೆಲ್ಫಿ ತಗೆಸಿಕೊಂಡು ಸಂತಸ ಪಟ್ಟಿದ್ದಾರೆ. ನೆಚ್ಚಿನ ನಟನನ್ನು ಹತ್ತಿರದಿಂದ ನೋಡಿದ ಅಭಿಮಾನಿಗಳು ಕೂಡ ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ಗೆ ಎಂಟ್ರಿ ಕೊಟ್ಟ `ಮಾಸ್ಟರ್ ಪೀಸ್’ ನಟಿ ಶಾನ್ವಿ ಶ್ರೀವಾಸ್ತವ್

    ಸುದೀಪ್ ಅವರ ಜೆಪಿ ನಗರ ನಿವಾಸಕ್ಕೆ ಬರುವವರು ಕೇಕು ಮತ್ತು ಹಾರಗಳನ್ನು ತರಬಾರದು ಎಂದು ಮೊದಲೇ ಅಭಿಮಾನಿಗಳಿಗೆ ತಿಳಿಸಲಾಗಿತ್ತು. ಹಾಗಾಗಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಮೊಬೈಲ್ ಮಾತ್ರ ತಂದಿದ್ದರು. ಸುದೀಪ್ ಅವರ ಕೈಕುಲುಕಿ, ಶುಭಾಶಯ ತಿಳಿಸಿ, ಸೆಲ್ಫಿ ತಗೆದುಕೊಂಡು ಹೋಗುತ್ತಿದ್ದರು. ಹಾಗಾಗಿ ಕಿಚ್ಚನ ಜೆಪಿ ನಗರದ ನಿವಾಸ ಅಭಿಮಾನಿಗಳಿಂದ ತುಂಬಿ ತುಳುಕಿತ್ತು.

    Live Tv
    [brid partner=56869869 player=32851 video=960834 autoplay=true]

  • ಸರ್ಕಾರದ ‘ಪುಣ್ಯಕೋಟಿ’ ಯೋಜನೆಯ ರಾಯಭಾರಿಯಾದ ಕಿಚ್ಚ ಸುದೀಪ್

    ಸರ್ಕಾರದ ‘ಪುಣ್ಯಕೋಟಿ’ ಯೋಜನೆಯ ರಾಯಭಾರಿಯಾದ ಕಿಚ್ಚ ಸುದೀಪ್

    ರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪುಣ್ಯಕೋಟಿ ಯೋಜನೆಯ  ರಾಯಭಾರಿಯಾಗಿ ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ನೇಮಿಸಲಾಗಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದ್ದಾರೆ. ಈ ಕುರಿತು ಕಿಚ್ಚ ಸುದೀಪ್ ಅವರಿಗೆ ಪತ್ರ ಬರೆದಿರುವ ಪ್ರಭು ಚವ್ಹಾಣ್, ತಾವು ಈ  ಸತ್ಕಾರ್ಯದಲ್ಲಿ ಭಾಗಿಯಾಗಿ ಗೋ ಸಂಪತ್ತಿನ ಸಂರಕ್ಷಣೆಗೆ ಸರ್ಕಾರ ತೊಟ್ಟಿರುವ ಸಂಕಲ್ಪಕ್ಕೆ ಕೈ ಜೋಡಿಸಿ, ಗೋಮಾತಾ ರಕ್ಷಣೆಯಲ್ಲಿ ನಾವೆಲ್ಲರೂ ಭಾಗಿಯಾಗೋಣ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಪಶು ಸಂಗೋಪನೆ ಇಲಾಖೆಯು ಜಾನುವಾರುಗಳ ರಕ್ಷಣೆಗಾಗಿ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪ್ರಚುರಪಡಿಸಿ, ಹೈನುಗಾರಿಕೆಗೆ ಉತ್ತೇಜನ ನೀಡಿ, ಜಾನುವಾರುಗಳ ಸಂರಕ್ಷಣೆ, ಪಾಲನೆ, ಪೋಷಣೆ ಮಾಡುತ್ತಿರುವ ಸರ್ಕಾರದೊಂದಿಗೆ ಕೈಜೋಡಿಸಿ, ಸಾರ್ವಜನಿಕರಲ್ಲಿ ಸ್ಫೂರ್ತಿ ತುಂಬಲು ತಮ್ಮನ್ನು ತಮ್ಮ ಜನ್ಮದಿನದ  ಈ ಶುಭಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪುಣ್ಯಕೋಟಿ ದತ್ತು ಯೋಜನೆ ಯ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ ಎಂದು ಪತ್ರ ಬರೆದಿದ್ದಾರೆ. ಪಶು ಸಂಗೋಪನೆ ಇಲಾಖೆಯ ಪುಣ್ಯಕೋಟಿ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ಸುದೀಪ್ ಅವರು ಯಾವುದೇ ಸಂಭಾವನೆ ಇಲ್ಲದೆ ಈ ಕೆಲಸವನ್ನು ನಿರ್ವಹಿಸುವುದಾಗಿ ಒಪ್ಪಿಕೊಂಡಿದ್ದಾರೆ ಪ್ರಭು ಚವ್ಹಾಣ್ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ‘ಜೊತೆ ಜೊತೆಯಲಿ’ ಧಾರಾವಾಹಿ: ಆರ್ಯವರ್ಧನ್ ಅಲ್ಲ, ಅವನ ಸಹೋದರನ ಪಾತ್ರದಲ್ಲಿ ಹರೀಶ್ ರಾಜ್

    ಈ ಹಿಂದೆ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು ನಟ ಸುದೀಪ್‌ ಅವರಿಗೆ ಪತ್ರ ಬರೆದು, ಪುಣ್ಯಕೋಟಿ ರಾಯಭಾರಿಯಾಗುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ನಟ ಸುದೀಪ್‌ ಪಶು ಸಂಗೋಪನೆ ಇಲಾಖೆಯ ರಾಯಭಾರಿ ಕೆಲಸ ನಿರ್ವಹಿಸಲು ಒಪ್ಪಿಕೊಂಡಿದ್ದಾರೆ. ಇಂದು ಅವರ ಜನ್ಮದಿನದ ಅಂಗವಾಗಿ  ಪುಣ್ಯಕೋಟಿ ರಾಯಭಾರಿಯಾಗಿ ನೇಮಕ ಮಾಡಿರುವ ಕುರಿತು ಅಧಿಕೃತವಾಗಿ ಪತ್ರ ಬರೆಯಲಾಗಿದೆ. ಸುದೀಪ್ ಈ ಕೆಲಸಕ್ಕ ಯಾವುದೇ ಸಂಭಾವನೆ ಪಡೆಯದೇ ಗೋಸಂಪತ್ತಿನ ಸಂರಕ್ಷಣೆಗೆ ತಮ್ಮ ಸಣ್ಣದೊಂದು ಅಳಿಲು ಸೇವೆ ಸಲ್ಲಿಸುವುದಾಗಿ ತಿಳಿಸಿರುವುದಾಗಿ ಪ್ರಭು ಚವ್ಹಾಣ್ ವಿವರಿಸಿ, ಜನ್ಮದಿನಕ್ಕೆ ಶುಭ ಕೋರಿದ್ದಾರೆ.

    ರಾಜ್ಯದಲ್ಲಿ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆ, ಪ್ರಾಣಿ ಕಲ್ಯಾಣ ಮಂಡಳಿ, ಪ್ರಾಣಿ ಸಹಾಯವಾಣಿ, 100 ಸರ್ಕಾರಿ ಗೋಶಾಲೆಗಳು, ಪಶು ಸಂಜೀವಿನಿ ಆ್ಯಂಬುಲೆನ್ಸ್, ಗೋಮಾತಾ ಸಹಕಾರ ಸಂಘ, ಆತ್ಮನಿರ್ಭರ ಗೋಶಾಲೆ, ಸಂಚಾರಿ ಪಶು ಚಿಕಿತ್ಸಾ ವಾಹನಗಳು, ಪಶು ಜಿಲ್ಲಾಸ್ಪತ್ರೆಗಳ ನಿರ್ಮಾಣ, ಸ್ಪೇಷಲ್, ಸೂಪರ್ ಸ್ಪೇಷಾಲಿಟಿ ಹಾಗೂ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಗಳು, 100 ಪಶು ಚಿಕಿತ್ಸಾಲಯಗಳು, 400 ಪಶು ವೈದ್ಯರ ನೇಮಕಾತಿ, 250 ಕಿರಿಯ ಪಶು ವೈದ್ಯಕೀಯ ಸಹಾಯಕರ ನೇಮಕಾತಿ, ಪುಣ್ಯಕೋಟಿ ದತ್ತು ಯೋಜನೆ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದೀಗ ಕಿಚ್ಚ ಸುದೀಪ್ ರಾಯಭಾರಿಯಾಗಲು ಒಪ್ಪಿರುವುದು ಗೋಸೇವೆಯಲ್ಲಿ ತೋಡಗಿರುವ ನಮಗೆ ಆನೆಬಲ ಬಂದಂತಾಗಿದೆ ಎಂದು ಪ್ರಭು ಚವ್ಹಾಣ್ ಹರ್ಷ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಡಾ.ವಿಷ್ಣು ನಂತರ ಮರಳು ಶಿಲ್ಪದ ಗೌರವಕ್ಕೆ ಪಾತ್ರರಾದ ಕಿಚ್ಚ ಸುದೀಪ್

    ಡಾ.ವಿಷ್ಣು ನಂತರ ಮರಳು ಶಿಲ್ಪದ ಗೌರವಕ್ಕೆ ಪಾತ್ರರಾದ ಕಿಚ್ಚ ಸುದೀಪ್

    ಳೆದ ವರ್ಷ ಡಾ.ವಿಷ್ಣುವರ್ಧನ್ ಅವರ ಹುಟ್ಟು ಹಬ್ಬಕ್ಕೆ ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರು ನೆಚ್ಚಿನ ನಟನ ಮರಳು ಶಿಲ್ಪ ಮಾಡಿಸಿ, ಗೌರವ ಸೂಚಿಸಿದ್ದರು. ಇದೀಗ  ಆ ಉಡುಗೊರೆಯನ್ನು ಕಿಚ್ಚ ಸುದೀಪ್ ಅವರಿಗೆ ಸಲ್ಲುವಂತೆ ಮಾಡಿದ್ದಾರೆ. ಸುದೀಪ್ ಅವರ ಜನ್ಮ ದಿನಕ್ಕೆ ಒರಿಸ್ಸಾದ ಸಮುದ್ರ ತೀರದಲ್ಲಿ ಕಿಚ್ಚನ ಮರಳು ಶಿಲ್ಪ ರಾರಾಜಿಸುತ್ತಿದೆ.

    ಅಭಿನಯ ಚಕ್ರವರ್ತಿ ಸುದೀಪ್ ಅವರು ರಾಷ್ಟ್ರದಾದ್ಯಂತ ಖ್ಯಾತಿ ಜೊತೆಗೆ ಅಭಿಮಾನ ಸಮೂಹವನ್ನು ಹೊಂದಿರುವ ಕನ್ನಡದ ಮೇರುನಟ. ಸೆಪ್ಟೆಂಬರ್ 2ರಂದು ಸುದೀಪ್ ಅವರ ಜನ್ಮದಿನ. ಈ ಜನ್ಮದಿನವನ್ನು ಸ್ಮರಣೀಯವಾಗಿಸಲು ಮತ್ತು ಸಂಭ್ರಮವನ್ನು ದುಪ್ಪಟ್ಟುಗೊಳಿಸಲು ಮಾನಸ್ ಕುಮಾರ್ ಎಂಬ ಹೆಸರಾಂತ ಮರಳುಶಿಲ್ಪಿ ಒರಿಸ್ಸಾದ ಸಮುದ್ರ ತೀರದಲ್ಲಿ ಕಿಚ್ಚ ಸುದೀಪ್ ಅವರ ಮರಳು ಶಿಲ್ಪವನ್ನು ನಿರ್ಮಿಸುವ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ.  ಇದನ್ನೂ ಓದಿ: ‘ಜೊತೆ ಜೊತೆಯಲಿ’ ಧಾರಾವಾಹಿ: ಆರ್ಯವರ್ಧನ್ ಅಲ್ಲ, ಅವನ ಸಹೋದರನ ಪಾತ್ರದಲ್ಲಿ ಹರೀಶ್ ರಾಜ್

    ಈ ಶಿಲ್ಪವು 20 ಅಡಿ ಅಗಲ, 7 ಅಡಿ ಎತ್ತರವಿದೆ. ಈ ಶಿಲ್ಪಕ್ಕಾಗಿ ಸುಮಾರು 20 ಟನ್ ಮರಳನ್ನು ಬಳಸಲಾಗಿದೆ ಎಂದು ಶಿಲ್ಪಿ ತಿಳಿಸಿದ್ದಾರೆ. ಸುದೀಪ್ ಅವರ ಆಪ್ತರಾದ ವೀರಕಪುತ್ರ ಶ್ರೀನಿವಾಸ ಅವರು ಯಾವಫೋಟೋ ಬಳಸಬೇಕು ಮತ್ತು ಕನ್ನಡ ಬರವಣಿ ಹೇಗಿರಬೇಕು ಎಂಬ ಗೊಂದಲಕ್ಕೆ ಅಗತ್ಯವಿದ್ದ ಮಾಹಿತಿಯನ್ನು ನೀಡಿರುವುದನ್ನು ತಿಳಿಸಿದರು.

    ದಕ್ಷಿಣ ಭಾರತದಲ್ಲಿಯೇ ಈ ಮರಳು ಶಿಲ್ಪ ಗೌರವಕ್ಕೆ ಪಾತ್ರವಾಗುತ್ತಿರುವ ಎರಡನೇ ಕಲಾವಿದರೆಂದರೆ ಅದು ಕಿಚ್ಚ ಸುದೀಪ್ ಅವರು ಮಾತ್ರ. ಈ ಹಿಂದೆ 2020ರಲ್ಲಿ ಡಾ.ವಿಷ್ಣುವರ್ಧನ್ ಅವರ 70ನೇ ಜನ್ಮದಿನ ಪ್ರಯುಕ್ತ ಮರಳು ಶಿಲ್ಪದ ಗೌರವ ನೀಡಲಾಗಿತ್ತು ಎಂಬುದು ಬಿಟ್ಟರೆ ಇದುವರೆಗೆ ಯಾವುದೇ ದಕ್ಷಿಣ ಭಾರತದ ನಟರಿಗೆ ಈ ಗೌರವ ದಕ್ಕಿರಲಿಲ್ಲ. ಈಗ ಎರಡನೆಯವರಾಗಿ ಕಿಚ್ಚ ಸುದೀಪ್ ಅವರು ಅಂತಹ ಗೌರವವಕ್ಕೆ ಪಾತ್ರರಾಗಿದ್ದಾರೆ. ನಿನ್ನೆ ತಾನೇ ಅಂಚೆ ಇಲಾಖೆಯಿಂದ ವಿಶೇಷ ಲಕೋಟೆಯ ಗೌರವವನ್ನು ಪಡೆದಿದ್ದಂತಹ ಸುದೀಪ್ ಅವರು ಈಗ ಮರಳು ಶಿಲ್ಪ ಗೌರವಕ್ಕೂ ಪಾತ್ರರಾಗಿರುವುದು ಅವರ ಅಭಿಮಾನಿಗಳನ್ನು ಖುಷಿಯಿಂದ ಕುಣಿಯುವಂತೆ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ಅಂಚೆ ಇಲಾಖೆಯಿಂದ ಕಿಚ್ಚನಿಗೆ ಗೌರವ:  ಸುದೀಪ್ ಅವರ ವಿಶೇಷ ಅಂಚೆ ಲಕೋಟೆ ಬಿಡುಗಡೆಗೆ ಸಿದ್ಧತೆ

    ಅಂಚೆ ಇಲಾಖೆಯಿಂದ ಕಿಚ್ಚನಿಗೆ ಗೌರವ: ಸುದೀಪ್ ಅವರ ವಿಶೇಷ ಅಂಚೆ ಲಕೋಟೆ ಬಿಡುಗಡೆಗೆ ಸಿದ್ಧತೆ

    ಭಾರತೀಯ ಅಂಚೆ ಇಲಾಖೆಯು ನಮ್ಮ ಪ್ರೀತಿಯ ಕಿಚ್ಚ ಸುದೀಪ್ ಅವರ “ವಿಶೇಷ ಅಂಚೆ ಲಕೋಟೆ” ಯನ್ನು ಹೊರ ತರುತ್ತಿದೆ. ಈ ಹಿಂದೆ ಡಾ.ವಿಷ್ಣುವರ್ಧನ್ ಅವರ ಅಂಚೆ ಲಕೋಟೆ ತರಲು ಹರಸಾಹಸ ಪಟ್ಟಿದ್ದ ಡಾ.ವಿಷ್ಣು ಸೇನಾಸಮಿತಿಯ ವೀರಕಪುತ್ರ ಶ್ರೀನಿವಾಸ್ ಅವರೇ, ಈ ಅಂಚೆ ಲಕೋಟೆ ಹಿಂದಿರುವ ಶಕ್ತಿ ಎನ್ನಲಾಗುತ್ತಿದೆ.

    ಭಾರತ ಸರ್ಕಾರದ ಅಂಚೆ ಇಲಾಖೆಯು ದೇಶದ ಮಹತ್ತರ ಘಟನೆಗಳನ್ನು, ಪ್ರಶಸ್ತಿಗಳನ್ನು ಅಥವಾ ವ್ಯಕ್ತಿಗಳ ಸಾಧನೆಗಳನ್ನು ನೂರಾರು ವರ್ಷ ದಾಖಲೆಯಾಗಿ ಉಳಿಸಬೇಕೆಂಬ ಕಾರಣಕ್ಕೆ   “ವಿಶೇಷ ಅಂಚೆ ಲಕೋಟೆಯನ್ನು ” ಬಿಡುಗಡೆ ಮಾಡುತ್ತದೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ಅದೇ ಪ್ರಕಾರ 25ವರ್ಷಗಳ ಸಿನಿ ಜರ್ನಿಯನ್ನು ಪೂರ್ಣಗೊಳಿಸಿರುವ ರಾಷ್ಟ್ರತಾರೆ ಸುದೀಪ್ ಅವರ ಸಾಧನೆಯನ್ನು ಸಹ ಭಾರತೀಯ ಅಂಚೆ ಇಲಾಖೆ ದಾಖಲೆ ಮಾಡುತ್ತಿದೆ.  ಆ ನಿಮಿತ್ತ ಇಂದು ಅಂಚೆ ಇಲಾಖೆಯ ಅಧೀಕ್ಷರಾದ ಶ್ರೀ ಮಾದೇಶ್ ಅವರು ಕಿಚ್ಚ ಸುದೀಪ್ ಅವರ ಮನೆಗೆ ಆಗಮಿಸಿ ಅವರಿಂದ NOC ಯನ್ನು ಪಡೆದರು ಮತ್ತು ಬಿಡುಗಡೆ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಿದರು. ಈ ವಿಶೇಷ ಅಂಚೆ ಲಕೋಟೆಯ ಬಿಡುಗಡೆ ಸಮಾರಂಭವು ಶೀಘ್ರದಲ್ಲಿಯೇ ನೆರವೇರಲಿದೆ.

    ಕಿಚ್ಚ ಸುದೀಪ್ ಅವರ ಸಾಧನೆಗಳನ್ನು ಗುರುತಿಸಿ “ವಿಶೇಷ ಅಂಚೆ ಲಕೋಟೆ” ಮೂಲಕ ಗೌರವ ಸಲ್ಲಿಸುತ್ತಿರುವ  ಭಾರತೀಯ ಅಂಚೆ ಇಲಾಖೆಯನ್ನು ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಮತ್ತು ಕನ್ನಡ ಮನಸುಗಳು ಸಾಮಾಜಿಕ ಜಾಲತಾಣದಲ್ಲಿ ಹೃದಯತುಂಬಿ ಶ್ಲಾಘಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಓಟಿಟಿಗೆ ಬಂದ ಗುಮ್ಮ: ಕಿಚ್ಚನ ‘ವಿಕ್ರಾಂತ್ ರೋಣ’ ಇನ್ನೊಂದೇ ವಾರದಲ್ಲಿ ಪ್ರಸಾರ

    ಓಟಿಟಿಗೆ ಬಂದ ಗುಮ್ಮ: ಕಿಚ್ಚನ ‘ವಿಕ್ರಾಂತ್ ರೋಣ’ ಇನ್ನೊಂದೇ ವಾರದಲ್ಲಿ ಪ್ರಸಾರ

    ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್ ನ ವಿಕ್ರಾಂತ್ ರೋಣ ಕೆಲವೇ ದಿನಗಳಲ್ಲಿ ಜೀ 5 ಓಟಿಟಿಯಲ್ಲಿ ಪ್ರಸಾರವಾಗಲಿದೆ. ಹಾಗಂತ ಜೀ 5 ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದೆ. ಥಿಯೇಟರ್ ನಲ್ಲಿ ಈ ಸಿನಿಮಾವನ್ನು ನೋಡದೇ ಇರುವವರು ಓಟಿಟಿಯಲ್ಲಿ ಸಿನಿಮಾವನ್ನು ಆನಂದಿಸಬಹುದಾಗಿದೆ. ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡಿರುವ ಈ ಸಿನಿಮಾ ಇನ್ನೊಂದೇ ವಾರದಲ್ಲೇ ಓಟಿಟಿಗೆ ಎಂಟ್ರಿ ಕೊಡುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.

    ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರ ಚಿತ್ರಕ್ಕೆ ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದರು. 3 ಡಿ ಹಾಗೂ 2 ಡಿಯಲ್ಲಿ ವಿಕ್ರಾಂತ್ ರೋಣ ಬಿಡುಗಡೆ ಆಗಿತ್ತು. ಒಳ್ಳೆಯ ಓಪನಿಂಗ್ ಕೂಡ ಪಡೆದಿತ್ತು. ನಂತರದ ದಿನಗಳಲ್ಲಿ ಸಿನಿಮಾ ಸೋಲಿಸಲೆಂದೇ ಹಲವರು ಮುಂದಾಗಿದ್ದರು. ಪೈರಸಿ ಮಾಡಲಾಯಿತು. ಆ ಲಿಂಕ್ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಲವರು ಹಂಚಿಕೊಂಡು ಸಿನಿಮಾ ತಂಡಕ್ಕೆ ತೊಂದರೆಯನ್ನೂ ಕೊಟ್ಟರು. ಅಲ್ಲದೇ, ವಸತಿ ಶಾಲೆಯಲ್ಲಿ ಪೈರಸಿ ಸಿನಿಮಾವನ್ನೂ ತೋರಿಸಿದ ಘಟನೆ ನಡೆಯಿತು. ಇದನ್ನೂ ಓದಿ:ಎರಡನೇ ಮದುವೆ ವದಂತಿಯ ಬಗ್ಗೆ ಮೇಘನಾ ರಾಜ್ ಸ್ಪಷ್ಟನೆ

    ಹಾಗಂತ ನಿರ್ಮಾಪಕರಿಗೆ ಈ ಸಿನಿಮಾದಿಂದ ಲಾಸ್ ಆಗಿಲ್ಲ ಎಂದು ಹೇಳಲಾಗಿತ್ತು. ಸಿನಿಮಾ ರಿಲೀಸ್ ಗೂ ಮುನ್ನ ನಿರ್ಮಾಪಕರು ಸೇಫ್ ಎಂದು ಜಾಕ್ ಮಂಜು ಅವರು ಹೇಳಿಕೊಂಡಿದ್ದರು. ಹಾಗಾಗಿ ನಿಶ್ಚಿಂತೆಯಿಂದ ಆದಷ್ಟು ಬೇಗ ಓಟಿಟಿಯಲ್ಲಿ ಸಿನಿಮಾ ನೋಡುವಂತಹ ಅವಕಾಶವನ್ನು ನಿರ್ಮಾಪಕರು ನೋಡುಗರಿಗೆ ಒದಗಿಸಿಕೊಟ್ಟಿದ್ದಾರೆ. ಇದೇ ಸೆಪ್ಟಂಬರ್ 2 ರಂದು ಓಟಿಟಿಯಲ್ಲಿ ವಿಕ್ರಾಂತ್ ರೋಣ ಸಿನಿಮಾವನ್ನು ನೋಡಬಹುದಾಗಿದೆ.

    Live Tv
    [brid partner=56869869 player=32851 video=960834 autoplay=true]