Tag: Kiara Advani

  • ನಟಿಗೆ ಸುಶಾಂತ್ ಕಿಸ್- ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್

    ನಟಿಗೆ ಸುಶಾಂತ್ ಕಿಸ್- ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್

    -ಫೋಟೋ ಪೋಸ್ಟ್ ಮಾಡಿದ್ದ ನಟಿ
    -ಸಲ್ಮಾನ್ ಬರ್ತ್ ಡೇ ಪಾರ್ಟಿಯಲ್ಲಿ ಕಿಸ್ಸಿಂಗ್

    ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಟಿಗೆ ಕಿಸ್ ಮಾಡಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 2016ರ ವೇಳೆ ನಟ ಸಲ್ಮಾನ್ ಖಾನ್ ಬರ್ತ್ ಡೇ ಪಾರ್ಟಿಯಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನ ನಟಿಯೇ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡು ಸುಶಾಂತ್ ತಲೆಹರಟೆಯನ್ನ ರಿವೀಲ್ ಮಾಡಿದ್ದರು. ಸದ್ಯ ಈ ಫೋಟೋಗಳು ವೈರಲ್ ಆಗಿವೆ.

    ಎಂ.ಎಸ್.ಧೋನಿ ಸಿನಿಮಾದಲ್ಲಿ ಸುಶಾಂತ್ ಗೆ ಜೊತೆಯಾಗಿ ಕಿಯಾರಾ ಅದ್ವಾನಿ ನಟಿಸಿದ್ದರು. ಸಲ್ಮಾನ್ ಖಾನ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಇಬ್ಬರು ಭಾಗಿಯಾಗಿದ್ದ ವೇಳೆ ಸುಶಾಂತ್ ನಟಿಗೆ ಕಿಸ್ ಮಾಡಿದ್ದರು. ಅಂದು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದ ಕಿಯಾರಾ, ನೀವು ಯಾವಾಗಲೂ ಸಿಕ್ಕಾಗಲೂ ಹೀಗೆ ಆಗೋದು ಎಂದು ಬರೆದು ಸುಶಾಂತ್ ಅಟ್ಯಾಕ್ ಹ್ಯಾಶ್ ಟ್ಯಾಗ್ ಬಳಸಿದ್ದರು. ಇದನ್ನೂ ಓದಿ: ರಿಯಾ ನನ್ನ ಮಗನಿಗೆ ಹಂತ ಹಂತವಾಗಿ ವಿಷ ನೀಡಿ ಕೊಂದ್ಳು: ಸುಶಾಂತ್ ತಂದೆ

    https://www.instagram.com/p/BOg0M_0jExw/?utm_source=ig_embed

    ಸುಶಾಂತ್ ನಿಧನವಾದಗಲೂ ಕಿಯಾರಾ ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡು ಸಂತಾಪ ಸೂಚಿಸಿದ್ದರು. ಸುಶಾಂತ್ ನಿಧನದ ಬಳಿಕ ನಟನ ಹಳೆಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿವೆ. ಇದನ್ನೂ ಓದಿ: ಹೌದು, ಸುಶಾಂತ್ ಶವದ ಮುಂದೆ ಕ್ಷಮೆ ಕೇಳಿದ್ದೆ: ರಿಯಾ ಚಕ್ರವರ್ತಿ

    ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಜೀವನಾಧರಿತ ಸಿನಿಮಾದಲ್ಲಿ ಸುಶಾಂತ್ ಸಿಂಗ್ ರಜಪೂತ್ ಗೆ ದೊಡ್ಡ ಬ್ರೇಕ್ ನೀಡಿತ್ತು. ಚಿತ್ರದಲ್ಲಿ ನಟಿಸಿದ ಕಿಯಾರಾ ಅದ್ವಾನಿ ಮತ್ತು ದಿಶಾ ಪಟಾಣಿಗೂ ಹೆಸರು ತಂದುಕೊಟ್ಟಿತ್ತು. 2016ರಲ್ಲಿ ಬಿಡುಗಡೆಯಾಗಿದ್ದ ಸಿನಿಮಾ 200ಕ್ಕೂ ಅಧಿಕ ಕೋಟಿ ಹಣವನ್ನ ತನ್ನ ಜೇಬಿಗೆ ಇಳಿಸಿಕೊಂಡಿತ್ತು. ಇದನ್ನೂ ಓದಿ: ಸರ್ ನಿಧನದ ಬಳಿಕ ಮನೆಯಲ್ಲಿದ್ದ ಡ್ರಗ್ ಸಿಗರೇಟ್  ರೋಲ್ ಮಾಯವಾಯ್ತು: ಸುಶಾಂತ್ ಮನೆಯ ಕುಕ್ 

    ಜೂನ್ 14ರಂದು ಸುಶಾಂತ್ ಮೃತದೇಹ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಆತ್ಮಹತ್ಯೆ ಎಂದು ಹೇಳಲಾಗಿದ್ರೂ ಅಭಿಮಾನಿಗಳು ನಟನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಸುಶಾಂತ್ ನಿಧನ ಬಾಲಿವುಡ್ ನಲ್ಲಿರುವ ಸ್ವಜನಪಕ್ಷಪಾತದಿಂದ ಆಗಿದ್ದು, ಸೂಕ್ತ ತನಿಖೆ ನಡೆಸಬೇಕೆಂದು ನಟಿ ಕಂಗನಾ ರಣಾವತ್ ಆಗ್ರಹಿಸಿದ್ದರು. ಸುಶಾಂತ್ ನಿಧನದ ಒಂದು ತಿಂಗಳ ಬಳಿ ಕಂಗನಾಗೆ ನಟಿ ಅಂಕಿತಾ ಲೋಖಂಡೆ ಸಾಥ್ ನೀಡಿ, ಮಾಜಿ ಪ್ರಿಯಕರನ ಸಾವಿನ ರಹಸ್ಯ ಬಹಿರಂಗವಾಗಬೇಕೆಂದು ಒತ್ತಾಯಿಸಿದ್ದರು. ಇದನ್ನೂ ಓದಿ: ಸುಶಾಂತ್ ಸಾವಿಗೆ ಭೂಗತ ಲೋಕದ ಲಿಂಕ್: ಸುಬ್ರಮಣಿಯನ್ ಸ್ವಾಮಿ

    ಕಳೆದ ಮೂರು ತಿಂಗಳಲ್ಲಿ ಹಲವು ಮಜಲುಗಳಲ್ಲಿ ಸಾಗಿದ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆಯನ್ನ ಸಿಬಿಐ ನಡೆಸುತ್ತಿದೆ. ಸಿಬಿಐ ತನಿಖೆ ವೇಳೆ ಡ್ರಗ್ಸ್ ದಂಧೆಯ ಸುಳಿವು ಲಭ್ಯವಾಗಿದ್ದರಿಂದ ಎನ್‍ಸಿಬಿ ಸಹ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಎನ್‍ಸಿಬಿ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಸೇರಿದಂತೆ ಹಲವರನ್ನ ಬಂಧಿಸಿದೆ. ಇತ್ತ ಬಾಲಿವುಡ್ ನಟಿಯರಾದ ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್ ಗೂ ಎನ್‍ಸಿಬಿ ಸಮನ್ಸ್ ನೀಡಿರುವ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಪ್ರಕರಣಕ್ಕೆ ಹೊಸ ತಿರುವು ನೀಡಿದ ಸುಶಾಂತ್ ಪಕ್ಕದ್ಮನೆ ಮಹಿಳೆ ಹೇಳಿಕೆ

  • ಟಾಪ್ ಲೆಸ್ ಫೋಟೋಶೂಟ್ ಮಾಡಿಸಿದ ನಟಿಗೆ ಸೀರೆ ಉಡಿಸಿದ ನೆಟ್ಟಿಗರು

    ಟಾಪ್ ಲೆಸ್ ಫೋಟೋಶೂಟ್ ಮಾಡಿಸಿದ ನಟಿಗೆ ಸೀರೆ ಉಡಿಸಿದ ನೆಟ್ಟಿಗರು

    ಮುಂಬೈ: ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಇತ್ತೀಚೆಗೆ ಟಾಪ್‍ಲೆಸ್ ಫೋಟೋಶೂಟ್‍ನಲ್ಲಿ ಪೋಸ್ ಕೊಟ್ಟಿದ್ದರು. ಈ ಫೋಟೋವನ್ನು ನೋಡಿದ ನೆಟ್ಟಿಗರು ಕಿಯಾರಾ ಅವರನ್ನು ಸಖತ್ ಟ್ರೋಲ್ ಮಾಡುತ್ತಿದ್ದು, ಟಾಪ್ ಲೆಸ್ ಫೋಟೋನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ನಟಿಗೆ ಸೀರೆ ಉಡಿಸಿ ಸಾಂಪ್ರದಾಯಿಕ ಲುಕ್ ನೀಡಿದ್ದಾರೆ.

    ಹೌದು. ಕಿಯಾರಾ ಅಡ್ವಾಣಿ ಇದೀಗ ಫೋಟೋ ಶೂಟ್ ಒಂದರಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಪ್ರಖ್ಯಾತ ಸೆಲೆಬ್ರಿಟಿ ಫೋಟೋಗ್ರಾಫರ್ ಡಬೂ ರತ್ನಾನಿ ನಡೆಸಿದ ಕ್ಯಾಲೆಂಡರ್ ಫೋಟೋಶೂಟ್‍ನಲ್ಲಿ ಕಿಯಾರಾ ಟಾಪ್ ಲೆಸ್ ಆಗಿ ಪೋಸ್ ಕೊಟ್ಟಿದ್ದಾರೆ. ದೊಡ್ಡ ಎಲೆ ಹಿಂದೆ ನಿಂತು ಬೆತ್ತಲಾಗಿ ಕಿಯಾರ ಪೋಸ್ ಕೊಟ್ಟ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರಿಗೆ ಟ್ರೋಲ್ ಮಾಡಲು ವಿಷಯ ದೊರೆತಂತಾಗಿದೆ.

    https://www.instagram.com/p/B8tb_w5HCtW/

    ಫೋಟೋಶೂಟ್‍ನಲ್ಲಿ ಕಿಯಾರಾ ನೋಡಲು ಚೆನ್ನಾಗೆ ಕಾಣಿಸುತ್ತಾರೆ. ಆದರೆ ಟಾಪ್ ಲೆಸ್ ಆಗಿ ಪೋಸ್ ಕೊಟ್ಟು ಸದ್ಯ ಟ್ರೋಲ್ ಆಗುತ್ತಿದ್ದಾರೆ. ಟಾಪ್ ಲೆಸ್ ಆಗಿದ್ದ ಕಿಯಾರಾಗೆ ನೆಟ್ಟಿಗರು ಸೀರೆ ತೊಡಿಸಿ, ಇದು ನಿಜವಾದ ಅಂದ ಎಂದು ಕಾಲೆಳೆಯುತ್ತಿದ್ದಾರೆ.

    ಎಲೆ ಹಿಂದೆ ಬೆತ್ತಲಾಗಿರುವ ಕಿಯಾರಾರಿಗೆ ಸೀರೆ ಉಡಿಸಿ ನೆಟ್ಟಿಗರು ಮದುಮಗಳಂತೆ ಸಿಂಗರಿಸಿ, ಕೈಯಲ್ಲಿ ಹಿಡಿದಿರುವ ಎಲೆ ಮೇಲೆ ಮದುವೆ ಊಟವನ್ನೂ ಬಡಿಸಿರುವ ಹಾಗೆ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗುತ್ತಿದ್ದು ಸಖತ್ ಟ್ರೋಲ್ ಆಗುತ್ತಿದೆ.

    ಅಷ್ಟೇ ಅಲ್ಲದೆ ಡಬೂ ರತ್ನಾನಿ ನಡೆಸಿರುವ ಟಾಪ್ ಲೆಸ್ ಕ್ಯಾಲೆಂಡರ್ ಫೋಟೋಶೂಟ್ ಕೆಲ ನೆಟ್ಟಿಗರ ಕೆಂಗಣ್ಣಿಗೆ ಕಾರಣವಾಗಿದ್ದು, ದಯವಿಟ್ಟು ಸರಿಯಾದ ಬಟ್ಟೆ ಹಾಕಿ ಎಂದು ನೆಟ್ಟಿಗರು ಮನವಿ ಮಾಡಿಕೊಂಡಿದ್ದಾರೆ. ಡಬೂ ರತ್ನಾನಿ ನಡೆಸಿದ ಲೇಟೆಸ್ಟ್ ಕ್ಯಾಲೆಂಡರ್ ಫೋಟೋಶೂಟ್‍ನಲ್ಲಿ ಕೇವಲ ಕಿಯಾರಾ ಅಡ್ವಾಣಿ ಮಾತ್ರವಲ್ಲ ಬಾಲಿವುಡ್ ನಟಿ ಭೂಮಿ ಪಡ್ನೇಕರ್ ಮತ್ತು ಸನ್ನಿ ಲಿಯೋನ್ ಕೂಡ ಟಾಪ್ ಲೆಸ್ ಆಗಿ ಪೋಸ್ ಕೊಟ್ಟಿದ್ದಾರೆ.

    https://twitter.com/BrutalBhau/status/1229805948803407872

    ಡಬೂ ರತ್ನಾನಿಗೆ ಸೇರೆ ಉಡಿಸಿ ಟ್ರೋಲ್:
    ಕೆಲ ನೆಟ್ಟಿಗರು ಟಾಪ್ ಲೆಸ್ ಆಗಿ ಹಾಟ್ ಪೋಸ್ ಕೊಟ್ಟ ನಟಿಗೆ ಸೀರೆ ಉಡಿಸಿದರೆ, ಇನ್ನೂ ಕೆಲವರು ಒಂದು ಸ್ಟೆಪ್ ಮುಂದಕ್ಕೆ ಹೋಗಿ ಟಾಪ್ ಲೆಸ್ ಫೋಟೋ ಶೂಟ್ ನಡೆಸಿದ ಡಬೂ ರತ್ನಾನಿಗೆ ಸೀರೆ ಉಡಿಸಿ ಫೋಟೋ ಎಡಿಟ್ ಮಾಡಿದ್ದಾರೆ. ಈ ಫೋಟೋಗಳು ಕೂಡ ಎಲ್ಲೆಡೆ ಸಖತ್ ಟ್ರೋಲ್ ಆಗುತ್ತಿದೆ.

  • ಮದುವೆಗೂ ಮೊದಲು ಸೆಕ್ಸ್ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ: ನಟಿ ಕಿಯಾರಾ

    ಮದುವೆಗೂ ಮೊದಲು ಸೆಕ್ಸ್ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ: ನಟಿ ಕಿಯಾರಾ

    ಮುಂಬೈ: ಬಾಲಿವುಡ್ ನಟಿ ಕಿಯಾರಾ ಅಡ್ವಾನಿ ಮದುವೆಗೂ ಮೊದಲು ಸೆಕ್ಸ್ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

    ಇತ್ತೀಚೆಗೆ ಕಿಯಾರಾ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು, ಮದುವೆಗೂ ಮೊದಲು ಸೆಕ್ಸ್ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಈ ವ್ಯಕ್ತಿಯ ಜೊತೆ ಮದುವೆಯಾಗಿ ಕೊನೆವರೆಗೂ ಜೊತೆಯಲ್ಲಿರುತ್ತೇನೆ ಎಂಬ ನಂಬಿಕೆ ನಿಮಗಿದ್ದರೆ, ನೀವು ದೈಹಿಕ ಸಂಬಂಧವನ್ನು ಹೊಂದಬಹುದು ಎಂದು ಹೇಳಿದ್ದಾರೆ.

    ಇದೇ ವೇಳೆ ಕಿಯಾರಾ, ನಾನು ಯಾರನ್ನು ಪ್ರೀತಿಸುತ್ತಿಲ್ಲ. ಹಾಗೇನಾದರು ಇದ್ದರೆ ನಾನು ಎಲ್ಲರಿಗೂ ನೇರವಾಗಿಯೇ ಹೇಳುತ್ತೇನೆ ಎಂದು ಹೇಳಿದ್ದಾರೆ. ಸದ್ಯ ಕಿಯಾರಾ ‘ಲಕ್ಷ್ಮಿ ಬಾಂಬ್’, ‘ಭೂಲ್‍ಭುಲಯ್ಯ-2’, ‘ಶೇರ್ ಷಾ’ ಹಾಗೂ ‘ಇಂದೂ ಕಿ ಜವಾನಿ’ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    ಕಿಯಾರಾ ಕೊನೆಯದಾಗಿ ‘ಕಬೀರ್ ಸಿಂಗ್’ ಹಾಗೂ ‘ಗುಡ್ ನ್ಯೂಸ್’ ಚಿತ್ರದಲ್ಲಿ ನಟಿಸಿದ್ದರು. ಇದೀಗ ಅವರು ಟಾಲಿವುಡ್ ನಟ ಪ್ರಿನ್ಸ್ ಮಹೇಶ್ ಬಾಬು ಅವರ ಹೊಸ ಚಿತ್ರಕ್ಕೆ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಕಿಯಾರಾ ಅಡ್ವಾನಿ ಹಾಗೂ ನಟ ಸಿದ್ಧಾರ್ಥ್ ಮಲ್ಹೋತ್ರಾ ಈ ಹಿಂದೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಬಿ- ಟೌನ್‍ನಲ್ಲಿ ಹರಿದಾಡುತ್ತಿತ್ತು. ಆದರೆ ಈಗ ಕಿಯಾರಾ ನಾನು ಯಾರನ್ನು ಪ್ರೀತಿಸುತ್ತಿಲ್ಲ ಎಂದು ಹೇಳುವ ಮೂಲಕ ಗಾಸಿಪ್‍ಗಳಿಗೆ ತೆರೆ ಎಳೆದಿದ್ದಾರೆ.

  • ನಟಿ ಜೊತೆ ಬಾಗಿಲು ಮುಚ್ಚಿಕೊಂಡ ಶಾಹಿದ್- ಪತ್ನಿ ಜೊತೆ ಜಗಳ ಆಗುತ್ತೆ ಎಂದು ಟ್ರೋಲ್

    ನಟಿ ಜೊತೆ ಬಾಗಿಲು ಮುಚ್ಚಿಕೊಂಡ ಶಾಹಿದ್- ಪತ್ನಿ ಜೊತೆ ಜಗಳ ಆಗುತ್ತೆ ಎಂದು ಟ್ರೋಲ್

    ಮುಂಬೈ: ಬಾಲಿವುಡ್ ಕಬೀರ್ ಸಿಂಗ್ ನಟ ಶಾಹಿದ್ ಕಪೂರ್ ಅವರು ನಟಿ ಕಿಯಾರಾ ಅಡ್ವಾನಿ ಅವರ ಹುಟ್ಟುಹಬ್ಬದ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಶಾಹಿದ್ ಕಪೂರ್ ಅವರು ನಟಿ ಕಿಯಾರಾ ಜೊತೆ ಬಾಗಿಲು ಕ್ಲೋಸ್ ಮಾಡಿಕೊಂಡಿದ್ದಾರೆ.

    ಕಿಯಾರಾ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಇದು ಈಗ ಚರ್ಚೆ ಆಗುತ್ತಿದೆ. ವಿಡಿಯೋದಲ್ಲಿ ಶಾಹಿದ್ ಕಪೂರ್ ಹಾಗೂ ಕಿಯಾರಾ ಅಡ್ವಾನಿ ಮಾಧ್ಯಮಗಳ ಕ್ಯಾಮೆರಾಗೆ ಪೋಸ್ ನೀಡಿ ಬಳಿಕ ಡೋರ್ ಕ್ಲೋಸ್ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ಬಾಲಿವುಡ್ ಫೋಟೋಗ್ರಾಫರ್ ವೈರಲ್ ಭಯಾನಿ ಅವರು ಪೋಸ್ಟ್ ಮಾಡಿಕೊಂಡಿದ್ದಾರೆ. ಈ ವಿಡಿಯೋಗೆ ಈಗ 2 ಲಕ್ಷಕ್ಕೂ ಹೆಚ್ಚು ವ್ಯೂ ಬಂದಿದ್ದು, ಜನರು ವಿವಿಧವಾಗಿ ಕಮೆಂಟ್ ಮಾಡುತ್ತಿದ್ದಾರೆ.

    ಈ ವಿಡಿಯೋ ನೋಡಿ ಕೆಲವರು, ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ. ಮೀರಾ (ಶಾಹಿದ್ ಪತ್ನಿ) ಇದನ್ನು ಗಮನಿಸಬೇಕು ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಅರೇ. ಏನಿದು? ಎಂದು ಕಮೆಂಟ್ ಮಾಡಿದ್ದಾರೆ. ಅಲ್ಲದೆ ಮತ್ತೆ ಕೆಲವು ಮಂದಿ, ಈಗ ಶಾಹಿದ್ ಹಾಗೂ ಅವರ ಪತ್ನಿ ಮೀರಾ ನಡುವೆ ಜಗಳ ಆಗುತ್ತಿದೆ ಎಂದು ಹೇಳುವ ಮೂಲಕ ಶಾಹಿದ್ ಕಪೂರ್ ಅವರ ಕಾಲೆಳೆಯುತ್ತಿದ್ದಾರೆ.

    ಕಿಯಾರಾ ಜುಲೈ 31ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದಲ್ಲಿ ಅವರ ಪೋಷಕರು ಹಾಗೂ ತನ್ನ ಸಹೋದರ ಭಾಗಿಯಾಗಿದ್ದರು. ಶಾಹಿದ್ ಕಪೂರ್, ಕರಣ್ ಜೋಹರ್, ಅರ್ಮಾನ್ ಜೈನ್ ಸೇರಿದಂತೆ ಹಲವು ಬಾಲಿವುಡ್ ಕಲಾವಿದರು ಭಾಗಿಯಾಗಿದ್ದರು. ಕಿಯಾರಾ ಹುಟ್ಟುಹಬ್ಬದ ಪಾರ್ಟಿಗೆ ತನ್ನ ಪೋಷಕರ ಜೊತೆ ಬಂದಿದ್ದರು. ಬಳಿಕ ಪಾರ್ಟಿ ಮುಗಿಸಿಕೊಂಡು ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಹೋಗಿದ್ದಾರೆ. ಇದೀಗ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಬಿ-ಟೌನ್‍ನಲ್ಲಿ ಹರಿದಾಡುತ್ತಿದೆ.

     

    View this post on Instagram

     

    370 crores worldwide collection for #kabirsingh ???? #kiaraadvani #shahidkapoor have every reason to party like it is 1999 @viralbhayani

    A post shared by Viral Bhayani (@viralbhayani) on

  • 200 ಕೋಟಿ ಗಳಿಸಿ ಬಾಲಿವುಡ್‍ನಲ್ಲಿ ದಾಖಲೆ ಬರೆದ ಕಬೀರ್ ಸಿಂಗ್

    200 ಕೋಟಿ ಗಳಿಸಿ ಬಾಲಿವುಡ್‍ನಲ್ಲಿ ದಾಖಲೆ ಬರೆದ ಕಬೀರ್ ಸಿಂಗ್

    ಮುಂಬೈ: ಶಾಹಿದ್ ಕಪೂರ್ ಮತ್ತು ಕಿಯಾರ ಅದ್ವಾನಿ ನಟನೆಯ ಕಬೀರ್ ಸಿಂಗ್ ಸಿನಿಮಾ 200 ಕೋಟಿ ರೂ. ಗಳಿಗೆ ಬಾಲಿವುಡ್‍ನಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಎ ಸರ್ಟಿಫಿಕೇಟ್ ಪಡೆದ ಚಿತ್ರ ಮೊದಲ ಬಾರಿಗೆ 200 ಕೋಟಿ ಸಿನಿಮಾಗಳ ಕ್ಲಬ್ ಸೇರಿದೆ.

    ಚಿತ್ರ ಬಿಡುಗಡೆಗೊಂಡ ಎರಡನೇ ವಾರ ಸಹ ಕಬೀರ್ ಸಿಂಗ್ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಕರೆ ತರುವಲ್ಲಿ ಯಶಸ್ವಿಯಾಗಿದ್ದಾನೆ. ವಿಕ್ಕಿ ಕೌಶಲ್ ಅಭಿನಯದ ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಮತ್ತು ಸಲ್ಮಾನ್ ಖಾನ್ ನಟನೆಯ ಭಾರತ್ ಸಿನಿಮಾವನ್ನು ಮೂರನೇ ವಾರದಲ್ಲಿ ಕಬೀರ್ ಸಿಂಗ್ ಹಿಂದಿಕ್ಕಿದೆ.

    ಸಂದೀಪ್ ವಂಗಾ ರೆಡ್ಡಿ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದ್ದು, ಶಾಹಿದ್ ಕಪೂರ್ ಮತ್ತು ಕಿಯಾರಾ ಕೆಮಿಸ್ಟ್ರಿ ವರ್ಕೌಟ್ ಆಗಿದೆ. ಚಿತ್ರದಲ್ಲಿ ಶಾಹಿದ್ ಮತ್ತು ಕಿಯಾರಾ ವೈದ್ಯಕೀಯ ವಿದ್ಯಾರ್ಥಿಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಯುವ ಸಮುದಾಯದ ಕಥೆಯನ್ನು ಒಳಗೊಂಡಿದೆ. ಹೀಗಾಗಿ ಯುವ ಜನತೆಯನ್ನು ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ಸಿನಿಮಾ ಸಕ್ಸಸ್ ಕಂಡಿದೆ.

    2017ರಲ್ಲಿ ತೆಲುಗಿನಲ್ಲಿ ಬಿಡುಗಡೆಗೊಂಡಿದ್ದ ‘ಅರ್ಜುನ್ ರೆಡ್ಡಿ’ ಸಿನಿಮಾದ ರಿಮೇಕ್ ಚಿತ್ರವೇ ಕಬೀರ್ ಸಿಂಗ್. ತೆಲುಗಿನಲ್ಲಿಯೂ ಆ್ಯಕ್ಷನ್ ಕಟ್ ಹೇಳಿದ್ದ ಸಂದೀಪ್ ವಂಗಾ ರೆಡ್ಡಿ ಇಲ್ಲಿಯೂ ನಿರ್ದೇಶನ ಮಾಡಿದ್ದಾರೆ. ತೆಲುಗಿನಲ್ಲಿ ವಿಜಯ್ ದೇವರಕೊಂಡ ಮತ್ತು ಶಾಲಿನಿ ಪಾಂಡ್ಯ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದರು. ನಟ ವಿಜಯ್ ದೇವರಕೊಂಡಗೆ ಅರ್ಜುನ್ ರೆಡ್ಡಿ ಸಿನಿಮಾ ಟಾಲಿವುಡ್ ನಲ್ಲಿ ಭದ್ರ ಬುನಾದಿಯನ್ನೇ ಹಾಕಿದೆ.