Tag: Kiara Advani

  • ಕ್ರಶ್ ಮದುವೆ ಆಗಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಬೇಸರ ಹೊರಹಾಕಿದ ಸುದೀಪ್ ಪುತ್ರಿ

    ಕ್ರಶ್ ಮದುವೆ ಆಗಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಬೇಸರ ಹೊರಹಾಕಿದ ಸುದೀಪ್ ಪುತ್ರಿ

    ಸ್ಯಾಂಡಲ್‌ವುಡ್ (Sandalwood) ನಟ ಸುದೀಪ್ ಪುತ್ರಿ ಸಾನ್ವಿ (Sanvi Sudeep) ಇದೀಗ ಸುದ್ದಿಯಲ್ಲಿದ್ದಾರೆ. ತನ್ನ ಕ್ರಶ್ ಮದುವೆ ಮಾಡಿಕೊಂಡಿದ್ದಕ್ಕೆ ಸಾನ್ವಿ ಬೇಜಾರು ಮಾಡಿಕೊಂಡಿದ್ದಾರೆ. ಕಿಚ್ಚ ಸುದೀಪ್ ಮೇಲೆ ಹುಡುಗಿಯರಿಗೆ ಕ್ರಶ್ ಆಗಿದ್ದರೆ, ಸುದೀಪ್ ಮಗಳಿಗೆ ಈ ಸ್ಟಾರ್ ನಟನ ಮೇಲೆ ಕ್ರಶ್ ಆಗಿದೆ. ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳ ನಡುವೆ ಕಾವಿತೊಟ್ಟು ಅಚ್ಚರಿ ಮೂಡಿಸಿದ ಮಿಲ್ಕಿ ಬ್ಯೂಟಿ

     

    View this post on Instagram

     

    A post shared by Sanvi Sudeep (@sanvisudeepofficial)

    ಕನ್ನಡ ಮತ್ತು ಸೌತ್ ಸಿನಿಮಾಗಳ ಮೂಲಕ ಮೋಡಿ ಮಾಡಿರುವ ಕಿಚ್ಚ ಸುದೀಪ್‌ಗೆ (Kiccha Sudeep) ಅಪಾರ ಅಭಿಮಾನಿಗಳ ಬಳಗವಿದೆ. ಅದರಲ್ಲೂ ಹುಡುಗಿರ ಫ್ಯಾನ್ ಬೇಸ್ ಜಾಸ್ತಿಯೇ ಇದೆ. ಹುಡುಗಿಯರ ಕ್ರಶ್ ಆಗಿರುವ ಕಿಚ್ಚನ ಮೇಲೆ ಎಲ್ಲರೂ ಕಣ್ಣೀಟ್ಟರೇ, ಇಲ್ಲಿ ಸುದೀಪ್ ಪುತ್ರಿಗೆ ಬಾಲಿವುಡ್ (Bollywood) ನಟನ (Actor) ಮೇಲೆ ಕ್ರಶ್ ಆಗಿದೆ.

    ಎಲ್ಲರಿಗೂ ಒಬ್ಬರು ಕ್ರಶ್ ಇದ್ದೇ ಇರುತ್ತಾರೆ. ಇದೇ ನಟ, ಇದೇ ನಟಿ ಅಂದ್ರೆ ಭಾರೀ ಇಷ್ಟ ಅನ್ನೋ ಕ್ರೇಜ್ ಎಲ್ಲರಲ್ಲೂ ಇರುತ್ತದೆ. ಸ್ಯಾಂಡಲ್‌ವುಡ್ ಕಿಚ್ಚ ಸುದೀಪ್ ಅವರ ಮಗಳಿಗೂ ಈ ಥರ ಒಬ್ಬ ಕ್ರಶ್ ಇದ್ದರು. ಬಾಲಿವುಡ್ ನಟ ಸಿದ್ಧಾರ್ಥ್‌ ಮೇಲೆ ಸಾನ್ವಿ ಕ್ರಶ್ ಆಗಿದ್ದು, ಅವರು ಕಿಯಾರಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋದ್ದಕ್ಕೆ ಸಾನ್ವಿ ಬೇಜಾರು ಮಾಡಿಕೊಂಡಿದ್ದಾರೆ. ಇತ್ತೀಚಿಗೆ ಸಿದ್-ಕಿಯಾರಾ ಮದುವೆ ಫೋಟೋ ಶೇರ್ ಮಾಡಿ ಅಳುವ ಇಮೋಜಿಯನ್ನ ಸಾನ್ವಿ ಹಾಕಿದ್ದರು. ಈ ಮೂಲಕ ಸುದೀಪ್ ಪುತ್ರಿ ಸಾನ್ವಿ ತಮ್ಮ ಕ್ರಶ್ ಯಾರು ಎಂಬುದನ್ನ ರಿವೀಲ್ ಆಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿದ್-ಕಿಯಾರಾ ಮದುವೆಯಲ್ಲಿ ಮಿಂಚಿದ ಜೂಹಿ ಚಾವ್ಲಾ‌, ಪೃಥ್ವಿರಾಜ್ ಸುಕುಮಾರನ್

    ಸಿದ್-ಕಿಯಾರಾ ಮದುವೆಯಲ್ಲಿ ಮಿಂಚಿದ ಜೂಹಿ ಚಾವ್ಲಾ‌, ಪೃಥ್ವಿರಾಜ್ ಸುಕುಮಾರನ್

    ಬಾಲಿವುಡ್‌ನ (Bollywood) ಮುದ್ದಾದ ಜೋಡಿ ಸಿದ್ಧಾರ್ಥ್ (Siddarth Malhotra) ಮತ್ತು ಕಿಯಾರಾ (Kiara Advani) ದಾಂಪತ್ಯ (Wedding) ಬದುಕಿಗೆ ಕಾಲಿಟ್ಟಿದ್ದಾರೆ. ಈ ಸಂಭ್ರಮಕ್ಕೆ ಸಾಕಷ್ಟು ಸೆಲೆಬ್ರಿಟಿ (Stars) ಸ್ನೇಹಿತರು ಸಾಕ್ಷಿಯಾಗಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಬಿಟೌನ್‌ನ `ಷೇರ್‌ಷಾ’ ಜೋಡಿ ಇದೇ ಫೆ.7ಕ್ಕೆ ರಾಜಸ್ಥಾನದಲ್ಲಿ (Rajastan) ಹಸೆಮಣೆ ಏರಿದ್ದರು. ಇದೀಗ ಖುಷಿ ಖುಷಿಯಾಗಿ ಸಿದ್ಧಾರ್ಥ್ ದೆಹಲಿ ಮನೆಗೆ ಅದ್ದೂರಿಯಾಗಿ ಸೊಸೆಯಾಗಿ ಕಾಲಿಟ್ಟಿದ್ದು ಆಯ್ತು. ಈಗ ಸಿದ್-ಕಿಯಾರಾ ಅದ್ದೂರಿ ಮದುವೆಯಲ್ಲಿ ಯಾರೆಲ್ಲಾ ಭಾಗಿಯಾಗಿದ್ದರು ಈ ಕುರಿತ ಫೋಟೋ ನೆಟ್ಟಿಗರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್ -ಕಿಯಾರಾ ಜೋಡಿ

    ಸಿದ್- ಕಿಯಾರಾ ಮದುವೆ ಸಂಭ್ರಮದಲ್ಲಿ ಖ್ಯಾತ ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ, ಮಲಯಾಳಂ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ದಂಪತಿ (Prithviraj Sukumaran)  ಬಾಲಿವುಡ್ ನಟಿ ಜೂಹಿ ಚಾವ್ಲಾ, ನಿರ್ಮಾಪಕ ಕರಣ್ ಜೋಹರ್ ಭಾಗಿಯಾಗಿದ್ದರು. ಅಂದ್ಹಾಗೆ ಸಿದ್ಧಾರ್ಥ್ ಮೊದಲ ಸಿನಿಮಾಗೆ ಕರಣ್ ಜೋಹರ್ ನಿರ್ದೇಶನದಲ್ಲಿ ಮೂಡಿ ಬಂದಿತ್ತು.

     

    View this post on Instagram

     

    A post shared by Sidharth Malhotra (@sidmalhotra)

    ಸದ್ಯ ನವಜೋಡಿ ಸಿದ್ಧಾರ್ಥ್ ಮತ್ತು ಕಿಯಾರಾ ಮದುವೆಗೆ ಅಭಿಮಾನಿಗಳಿಂದ, ಸಿನಿಮಾರಂಗದ ಸ್ನೇಹಿತರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುವೆ ನಂತರ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡ ಸಿದ್-ಕಿಯಾರಾ

    ಮದುವೆ ನಂತರ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡ ಸಿದ್-ಕಿಯಾರಾ

    ಬಾಲಿವುಡ್‌ನ (Bollywood) ನವ ಜೋಡಿ ಸಿದ್ (Siddarth Malhotra) ಮತ್ತು ಕಿಯಾರಾ (Kiara Advani) ಫೆ.7ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ನಂತರ ಈಗ ಮೊದಲ ಬಾರಿಗೆ ʻಷೇರ್‌ಷಾʼ ಜೋಡಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಹಲವು ವರ್ಷಗಳ ಪ್ರೀತಿಗೆ ಸಿದ್-ಕಿಯಾರಾ ಮದುವೆಯೆಂಬ ಮುದ್ರೆ ಒತ್ತಿದ್ದಾರೆ. ತಮ್ಮ ಪ್ರೀತಿ, ಮದುವೆ ಬಗ್ಗೆ ಅದೆಷ್ಟೇ ಸುದ್ದಿಯಾಗಿದ್ದರೂ ಸೈಲೆಂಟ್ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾಗಿರುವ ನವ ಜೋಡಿ ಈಗ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಇದನ್ನೂ ಓದಿ: ಮದುವೆ ಫೋಟೋ ಹಂಚಿಕೊಂಡ ಬೆನ್ನಲ್ಲೇ ವೈರಲಾಯ್ತು ಸಿದ್- ಕಿಯಾರಾ ಆಮಂತ್ರಣ ಪತ್ರಿಕೆ

     

    View this post on Instagram

     

    A post shared by Viral Bhayani (@viralbhayani)

    ರಾಜಸ್ಥಾನದಲ್ಲಿ (Rajastan) ಅದ್ದೂರಿ ಮದುವೆ ಬಳಿಕ ವರನ ಸ್ವಗೃಹ ಅಂದರೆ ಸಿದ್ಧಾರ್ಥ್ ಮನೆಯತ್ತ ಈ ಜೋಡಿ ಸತಿ-ಪತಿಗಳಾಗಿ ಕಾಲಿಟ್ಟಿದ್ದಾರೆ. ದೆಹಲಿಯತ್ತ ಪ್ರಯಾಣ ಮಾಡುವ ಮುನ್ನ ಜೈಸಲ್ಮೇರ್‌ನ ವಿಮಾನ ನಿಲ್ದಾಣದಲ್ಲಿ ಸಿದ್-ಕಿಯಾರಾ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಹೊಸ ಜೋಡಿಗೆ ಪಾಪರಾಜಿಗಳು ಶುಭಹಾರೈಸಿದ್ದಾರೆ. ಧನ್ಯವಾದಗಳನ್ನ ತಿಳಿಸಿ ದೆಹಲಿಗೆ ಹಾರಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಸಿದ್ ಜೋಡಿಯ ಮದುವೆಯ ಬಗ್ಗೆಯೇ ಸುದ್ದಿಯಾಗುತ್ತಿದೆ. ಹೊಸ ಜೋಡಿಗೆ ಫ್ಯಾನ್ಸ್, ಸಿನಿಮಾ ಸ್ನೇಹಿತರು ವಿಶ್ ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುವೆ ಫೋಟೋ ಹಂಚಿಕೊಂಡ ಬೆನ್ನಲ್ಲೇ ವೈರಲಾಯ್ತು ಸಿದ್- ಕಿಯಾರಾ ಆಮಂತ್ರಣ ಪತ್ರಿಕೆ

    ಮದುವೆ ಫೋಟೋ ಹಂಚಿಕೊಂಡ ಬೆನ್ನಲ್ಲೇ ವೈರಲಾಯ್ತು ಸಿದ್- ಕಿಯಾರಾ ಆಮಂತ್ರಣ ಪತ್ರಿಕೆ

    ಬಾಲಿವುಡ್‌ನ (Bollywood) ಮುದ್ದಾದ ಜೋಡಿ ಸಿದ್ಧಾಥ್ ಮಲ್ಹೋತ್ರಾ (Siddarth Malhotra)-ಕಿಯಾರಾ ಅಡ್ವಾಣಿ (Kiara Advani) ಫೆ.7ರಂದು ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟರು. ಈ ಬೆನ್ನಲ್ಲೇ ಸಿದ್ ದಂಪತಿಯ ಮದುವೆ ಪತ್ರಿಕೆ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

    ಸಿದ್- ಕಿಯಾರಾ ಲವ್ (Love) ಬಗ್ಗೆ ಗಾಸಿಪ್ ಕೇಳಿ ಬರುತ್ತಲೆ ಇತ್ತು. ಆದರೆ ತುಟಿಕ್ ಪಿಟಿಕ್ ಎನ್ನದೇ ಸೈಲೆಂಟ್ ಆಗಿದ್ದರು. ಈಗ ನೇರವಾಗಿ ಮದುವೆ ಫೋಟೋ ಹಂಚಿಕೊಂಡು ಈ ಜೋಡಿ ಸಂಭ್ರಮಿಸಿದ್ದಾರೆ. ಈಗ ನಮ್ಮ ಪರ್ಮನೆಂಟ್ ಬುಕ್ಕಿಂಗ್ ಆಗಿದೆ. ನಮ್ಮ ಪ್ರೀತಿ ಹಾಗೂ ಮುಂದಿನ ಪಯಣಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕಾಗಿದೆ ಎಂದು ಕಿಯಾರಾ ಹಾಗೂ ಸಿದ್ಧಾರ್ಥ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಶರಣ್ ಜೊತೆ ತೆರೆಹಂಚಿಕೊಳ್ಳಲಿದ್ದಾರೆ ಅಮೃತಾ ಅಯ್ಯಂಗಾರ್

    ಸೆಲೆಬ್ರಿಟಿ ಜೋಡಿಗೆ ಅಭಿಮಾನಿಗಳಿಂದ ಸಿನಿಮಾರಂಗದ ಸ್ನೇಹಿತರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಬೆನ್ನಲ್ಲೇ ಸಿದ್ ದಂಪತಿಯ ಮದುವೆ ಪತ್ರಿಕೆ ಹೇಗಿತ್ತು ಎಂಬುದು ಕೂಡ ರಿವೀಲ್ ಆಗಿದೆ.

     

    View this post on Instagram

     

    A post shared by KIARA (@kiaraaliaadvani)

    ಸಿದ್ಧಾರ್ಥ್ -ಕಿಯಾರಾ ಮದುವೆ ಪತ್ರಿಕೆ (Wedding Invitation) ಸರಳವಾಗಿ ಮೂಡಿ ಬಂದಿದೆ. ಪತ್ರಿಕೆ ಸುತ್ತ ಬ್ಲ್ಯಾಕ್ ಮತ್ತು ಕಂದು ಬಣ್ಣದಲ್ಲಿ ಡಿಸೈನ್ ಮಾಡಲಾಗಿದೆ. ಮಧ್ಯಭಾಗದಲ್ಲಿ ಜೋಡಿಯ ಮೊದಲ ಅಕ್ಷರವನ್ನು ಕೆ ಮತ್ತು ಎಸ್ ಅನ್ನು ಹೈಲೈಟ್ ಮಾಡಲಾಗಿದೆ. ಫೆ.5ರಿಂದ 7ರವರೆಗೆ ಮದುವೆ ಸಂಭ್ರಮವಾಗಿದ್ದು, ಸೂರ್ಯಗಢ ಜೈಸಲ್ಮೇರ್‌ನಲ್ಲಿ ಮದುವೆ ಎಂಬುದನ್ನ ಬರೆಯಲಾಗಿದೆ. ಸದ್ಯ ಸಿದ್-ಕಿಯಾರಾ ಮದುವೆ ಫೋಟೋ ಮತ್ತು ಪತ್ರಿಕೆ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್ -ಕಿಯಾರಾ ಜೋಡಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್ -ಕಿಯಾರಾ ಜೋಡಿ

    ಬಾಲಿವುಡ್‍ನ ಪ್ರೇಮ ಪಕ್ಷಿಗಳಾದ ಸಿದ್ಧಾರ್ಥ್ (Sidharth Malhotra) ಮತ್ತು ಕಿಯಾರಾ (Kiara Advani) ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಮದುವೆಯ ಮುದ್ದಾದ ಫೋಟೋ ಶೇರ್ ಮಾಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

    ಹಲವು ವರ್ಷಗಳ ಪ್ರೀತಿ (Love Marriage) ಗೆ ಇದೀಗ ಮದುವೆಯೆಂಬ ಮುದ್ರೆ ಒತ್ತಿದ್ದಾರೆ. ಗುರು-ಹಿರಿಯರು, ಆಪ್ತರ ಸಮ್ಮುಖದಲ್ಲಿ ಸಿದ್- ಕಿಯಾರಾ ಜೋಡಿ ಅದ್ಧೂರಿಯಾಗಿ ಹಸೆಮಣೆ ಏರಿದ್ದಾರೆ. ರಾಜಸ್ಥಾನದ ಸೂರ್ಯಗಢನಲ್ಲಿ ಮದುವೆ ಆಗಿದ್ದಾರೆ.

    ನಟಿ ಕಿಯಾರಾ ಪಿಂಕ್ ಬಣ್ಣದ ಲೆಹೆಂಗಾದಲ್ಲಿ ಮಿಂಚಿದ್ರೆ, ಸಿದ್ಧಾರ್ಥ್ ಮಲ್ಹೋತ್ರಾ ಬಿಳಿ ಶೆರ್ವಾನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ನಟ ಪ್ರಭಾಸ್ ಜೊತೆ ಕೃತಿ ಸನೋನ್ ಮದುವೆ: ಬ್ರೇಕಿಂಗ್ ನ್ಯೂಸ್ ಎಂದ ಉಮೈರ್

    ನವಜೋಡಿಯ ಮದುವೆಯ ಫೋಟೋ ಶೇರ್ ಆಗ್ತಿದ್ದಂತೆ ಅಭಿಮಾನಿಗಳು, ಸೆಲೆಬ್ರಿಟಿ ಸ್ನೇಹಿತರ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿದ್-ಕಿಯಾರಾ ಮದುವೆ ಜೀವನದ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ

    ಸಿದ್-ಕಿಯಾರಾ ಮದುವೆ ಜೀವನದ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ

    ಬಾಲಿವುಡ್‌ನ (Bollywood) ಲವ್ ಬರ್ಡ್ಸ್ (Love Birds) ಸಿದ್ಧಾಥ್ ಮಲ್ಹೋತ್ರಾ (Siddarth Malhotra) ಮತ್ತು ಕಿಯಾರಾ (Kiara Advani) ವೈವಾಹಿಕ ಬದುಕಿಗೆ ಕಾಲಿಡಲಿದ್ದಾರೆ. ಈ ವೇಳೆ `ಷೇರ್‌ಷಾ’ ಜೋಡಿ ಬಗ್ಗೆ ಸೆಲೆಬ್ರಿಟಿ ಜ್ಯೋತಿಷಿ ವಿನೋದ್ ಕುಮಾರ್ ಭವಿಷ್ಯ ನುಡಿದಿದ್ದಾರೆ.

    ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಸಿದ್ ಮತ್ತು ಕಿಯಾರಾ ಜೋಡಿ ಇದೀಗ ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಫೆ.4ರಿಂದಲೇ ವಿವಾಹ ಪೂರ್ವ ಸಿದ್ಧತೆಗಳು ನಡೆಯುತ್ತಿದೆ. ಮಂಗಳವಾರ (ಫೆ.7) ರಂದು ಈ ಜೋಡಿ ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಇದೆ. ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಅದ್ದೂರಿಯಾಗಿ ಮದುವೆಯಾಗಲಿದೆ. ಹೀಗಿರುವಾಗ ಸೆಲೆಬ್ರಿಟಿ ಜ್ಯೋತಿಷಿ ವಿನೋದ್‌ ಕುಮಾರ್‌, ಸಿದ್-ಕಿಯಾರಾ ವಿವಾಹ ಜೀವನ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ.

    ಹೊಸ ಜೀವನ ಆರಂಭಿಸುತ್ತಿರುವುದಕ್ಕೆ ನವಜೋಡಿಗೆ ಶುಭಾಶಯಗಳು. ಜಾತಕದ ವಿಷಯವಾಗಿ ಹೇಳುವುದಾದರೆ ಸಿದ್ಧಾರ್ಥ್ ಹಾಗೂ ಕಿಯಾರಾ ಅವರ ಜೋಡಿಯ ಸಂಬಂಧ ತುಂಬ ಗಟ್ಟಿಯಾಗಿದೆ. ರಿಲೇಶನ್‌ಶಿಪ್, ಕಮಿಟ್‌ಮೆಂಟ್ಸ್, ಕುಟುಂಬ, ಎಮೋಶನ್‌ಗಳಿಗೆ ಬೆಲೆ ಕೊಡುವ ಕಿಯಾರಾ ಅಡ್ವಾಣಿಯ ಭಾವನೆಗಳನ್ನು ಸಿದ್ಧಾರ್ಥ್‌ ಅರ್ಥ ಮಾಡಿಕೊಳ್ಳಬೇಕು. ಸಿದ್ಧಾರ್ಥ್ ಅವರು ವೃತ್ತಿ ಅಥವಾ ವೈಯಕ್ತಿಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಕಿಯಾರಾ ಭಾವನೆಗಳನ್ನು ನೆನಪಿನಲ್ಲಿಡಬೇಕು. ಈ ಜೋಡಿ ಮನೆಯಲ್ಲಿ ಹಿರಿಯರ ಮಾತನ್ನು ಕೇಳಬೇಕು. ಇದನ್ನೂ ಓದಿ: ಬೆಡ್‌ರೂಮ್ ಫೋಟೋ ಹಂಚಿಕೊಂಡ ನಟಿ ರಾಗಿಣಿ ದ್ವಿವೇದಿ

    ಚಿತ್ರರಂಗವು ಈ ಜೋಡಿಯನ್ನು ಅದ್ದೂರಿಯಾಗಿ ಸ್ವಾಗತಿಸುತ್ತದೆ, ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಇವರಿಬ್ಬರ ಜೋಡಿಯ ಸಿನಿಮಾಗಳು ಹಿಟ್ ಆಗುತ್ತವೆ, ಪ್ರಶಸ್ತಿ ಪಡೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

    ಸದ್ಯ ಈ ಜೋಡಿಯ ಮದುವೆ ಅಪ್‌ಡೇಟ್‌ಗಾಗಿ ಸಂಭ್ರಮದ ಕ್ಷಣಗಳ ಫೋಟೋ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಿಯಾರಾ ಅಡ್ವಾಣಿಗೆ ಹೋಲಿಸಿದ ಪತಿಗೆ ಊಟ ನೀಡಲು ನಿರಾಕರಿಸಿದ ಪತ್ನಿ

    ಕಿಯಾರಾ ಅಡ್ವಾಣಿಗೆ ಹೋಲಿಸಿದ ಪತಿಗೆ ಊಟ ನೀಡಲು ನಿರಾಕರಿಸಿದ ಪತ್ನಿ

    ನವದೆಹಲಿ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು (Wife) ಖುಷಿ ಪಡಿಸಲು ಹೋಗಿ ಪಜೀತಿಗೆ ಒಳಗಾದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿರುವ ವೀಡಿಯೋದಲ್ಲಿ ಪ್ರೀತಿಯಿಂದ ವ್ಯಕ್ತಿಯು ತನ್ನ ಪತ್ನಿಯನ್ನು ಕಿಯಾರಾ ಅಡ್ವಾನಿಗೆ (Kiara Advani) ಹೋಲಿಸುತ್ತಾರೆ. ಇದಕ್ಕೆ ಪತ್ನಿ ಕೋಪಗೊಂಡು ಊಟ ನಿರಾಕರಿಸಿದ್ದಾಳೆ.

    ಈ ಸಂಪೂರ್ಣ ವೀಡಿಯೋವನ್ನು ಪ್ರವೀಣ್ ಎಂಬ ಟ್ವಿಟ್ಟರ್ ಬಳಕೆದಾರ ಹಂಚಿಕೊಂಡಿದ್ದಾನೆ. 52 ಸೆಕೆಂಡುಗಳ ವೀಡಿಯೋ ಇದಾಗಿದ್ದು, ಕೋಪಗೊಂಡ ಪತ್ನಿ ಅಡುಗೆಮನೆಯಲ್ಲಿ ಅಡುಗೆ ಮಾಡುತ್ತಿರುತ್ತಾಳೆ.

    ಕೋಪಬೇಡ, ನನ್ನನ್ನು ಕ್ಷಮಿಸು, ಅವಳು ನಟಿ. ನಾನು ಅವಳನ್ನು ಮದುವೆ ಆಗುತ್ತೇನೆ ಎಂದು ನೀನು ಕೋಪಗೊಳ್ಳುತ್ತೀದ್ದೀಯಾ ಎಂದು ಆತ ಕೇಳುತ್ತಾನೆ. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಹ್ಲಾದ್ ಜೋಶಿ ಸಿಎಂ- ಹೆಚ್‍ಡಿಕೆ ಹೊಸ ಬಾಂಬ್

    ಅದಕ್ಕೆ ಆತನ ಪತ್ನಿ ಪ್ರತಿಕ್ರಿಯಿಸಿ, ಹೋಗಿ ಅವಳನ್ನೇ ಮದುವೆಯಾಗು, ನೀನು ಇಲ್ಲಿ ಉಳಿಯಬೇಕಾಗಿಲ್ಲ ಎಂದು ಉತ್ತರಿಸುತ್ತಾಳೆ. ಅದಕ್ಕೆ ಪತಿ, ಹೌದು, ಅವಳು ನನ್ನನ್ನು ಮದುವೆಯಾಗಲು ಸಾಯುತ್ತಿದ್ದಾಳೆ ಎಂದು ವ್ಯಂಗ್ಯವಾಡುತ್ತಾನೆ. ಅದಕ್ಕೆ ಪತ್ನಿ, ಇಲ್ಲ, ಇಲ್ಲ, ಅವಳು ನಿನ್ನನ್ನು ಮದುವೆಯಾಗುತ್ತಾಳೆ. ಎಲ್ಲಾ ಹುಡುಗಿಯರು ನಿನ್ನನ್ನು ಮದುವೆಯಾಗಲು ಸಾಯುತ್ತಿದ್ದಾರೆ ಎಂದು ಉತ್ತರಿಸುತ್ತಾಳೆ.

    ಆಗ ಆತ, ನಟಿಯಾಗಿ ಆಕೆಯನ್ನು ಇಷ್ಟಪಡುತ್ತೇನೆ. ನಾನು ಯಾವುದೇ ನಟಿಯನ್ನು ಇಷ್ಟಪಡಬಾರದೇ ಎಂದು ಕೇಳುತ್ತಾನೆ. ಅದಕ್ಕೆ ಪತ್ನಿಯು, ಹಾಗಾದರೆ ನನ್ನನ್ನು ಕಿಯಾರಾ ಅಡ್ವಾಣಿ ಜೊತೆಗೆ ಯಾಕೆ ಹೋಲಿಸಿದ್ದೀರಿ, ನಾನು ನಟಿಯೇ ಎಂದು ಎಂದು ವ್ಯಂಗ್ಯವಾಡುತ್ತಾಳೆ.

    ಅವಳು ಚೆನ್ನಾಗಿ ನಟಿಸುತ್ತಾಳೆ ಎಂದು ತನ್ನ ಹೇಳಿಕೆಗೆ ಸಮರ್ಥನೆಯನ್ನು ನೀಡಲು ಬಂದ ಪತಿಗೆ ಪತ್ನಿಯು ಇಲ್ಲಿಂದ ಹೊರಡಿ, ಇಂದು ನಿಮಗೆ ಊಟ ಸಿಗುವುದಿಲ್ಲ ಎಂದು ಹೇಳುತ್ತಾಳೆ. ಇದನ್ನೂ ಓದಿ: ಚೀನಾದೊಂದಿಗೆ ಲಿಂಕ್ – 200ಕ್ಕೂ ಅಧಿಕ ಸಾಲ, ಬೆಟ್ಟಿಂಗ್ ಆ್ಯಪ್‌ಗಳನ್ನು ಬ್ಯಾನ್ ಮಾಡಲಿದೆ ಭಾರತ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿದ್ಧಾರ್ಥ್‌ ಜೊತೆ ಕಿಯಾರಾ ಮದುವೆ, ರಾಜಸ್ಥಾನಕ್ಕೆ ಬಂದಿಳಿದ ನಟಿ

    ಸಿದ್ಧಾರ್ಥ್‌ ಜೊತೆ ಕಿಯಾರಾ ಮದುವೆ, ರಾಜಸ್ಥಾನಕ್ಕೆ ಬಂದಿಳಿದ ನಟಿ

    ಬಾಲಿವುಡ್‌ನ (Bollywood) ಕ್ಯೂಟ್ ಕಪಲ್ ಕಿಯಾರಾ ಅಡ್ವಾಣಿ (Kiara Advani) ಮತ್ತು ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra) ಮದುವೆ (Wedding) ದಿನಗಣನೆ ಶುರುವಾಗಿದೆ. ಸದ್ದಿಲ್ಲದೇ ಸೈಲೆಂಟ್ ಆಗಿ ಈ ಜೋಡಿ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಹೀಗಿರುವಾಗ ನಟಿ ಕಿಯಾರಾ ರಾಜಸ್ಥಾನಕ್ಕೆ ಬಂದಿಳಿದಿದ್ದಾರೆ. ಈ ಕುರಿತ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

    `ಷೇರ್‌ಷಾ’ ಸಿನಿಮಾ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದ ಜೋಡಿ ಕಿಯಾರಾ-ಸಿದ್ಧಾರ್ಥ್ ಅವರು ಸಾಕಷ್ಟು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಈಗ ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಲು ಈ ಜೋಡಿ ಸಜ್ಜಾಗಿದ್ದಾರೆ. ಆದರೆ ಅಧಿಕೃತವಾಗಿ ತಮ್ಮ ಮದುವೆಯ ಗುಟ್ಟನ್ನು ಎಲ್ಲೂ ಬಿಟ್ಟುಕೊಟ್ಟಿಲ್ಲ. ಇದನ್ನೂ ಓದಿ: ಸಿದ್ಧಾರ್ಥ್-ಕಿಯಾರಾ ಅವರದ್ದು ನಿಜವಾದ ಪ್ರೀತಿ ಎಂದು ಹಾಡಿ ಹೊಗಳಿದ ಕಂಗನಾ ರಣಾವತ್

     

    View this post on Instagram

     

    A post shared by Viral Bhayani (@viralbhayani)

    ಸದ್ಯ ಕಿಯಾರಾ ರಾಜಸ್ತಾನಕ್ಕೆ ಬಂದಿಳಿರುವ ವೀಡಿಯೋ ಸದ್ದು ಮಾಡ್ತಿದೆ. ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ ಮತ್ತು ತನ್ನ ಕುಟುಂಬದ ಜೊತೆ ಕಿಯಾರಾ ವಿಮಾನ ನಿಲ್ದಾಣದಿಂದ ಬರುವಾಗ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಇನ್ನೂ ಫೆ.4ರಿಂದ ಮದುವೆ ಶಾಸ್ತ್ರಗಳು ಶುರುವಾಗಲಿದೆ. ಫೆ.6ರಂದು ಸಿದ್ಧಾರ್ಥ್-ಕಿಯಾರಾ ಮದುವೆಯಾಗುತ್ತಿದ್ದಾರೆ. ರಾಜಸ್ಥಾನದ ಸೂರ್ಯಗಡನಲ್ಲಿ ಅದ್ದೂರಿಯಾಗಿ ಮದುವೆ ನಡೆಯಲಿದೆ.

     

    View this post on Instagram

     

    A post shared by Viral Bhayani (@viralbhayani)

    ಸಿದ್-ಕಿಯಾರಾ ಮದುವೆಗೆ 100 ಜನ ಅತಿಥಿಗಳನ್ನ ಕರೆಯಲಾಗಿದೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ `ಷೇರ್‌ಷಾ’ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿದ್ಧಾರ್ಥ್-ಕಿಯಾರಾ ಅವರದ್ದು ನಿಜವಾದ ಪ್ರೀತಿ ಎಂದು ಹಾಡಿ ಹೊಗಳಿದ ಕಂಗನಾ ರಣಾವತ್

    ಸಿದ್ಧಾರ್ಥ್-ಕಿಯಾರಾ ಅವರದ್ದು ನಿಜವಾದ ಪ್ರೀತಿ ಎಂದು ಹಾಡಿ ಹೊಗಳಿದ ಕಂಗನಾ ರಣಾವತ್

    ಬಾಲಿವುಡ್‌ನ (Bollywood) ಕ್ಯೂಟ್ ಕಪಲ್ ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra)- ಕಿಯಾರಾ ಹಸೆಮಣೆ ಏರುತ್ತಿದ್ದಾರೆ. ರಾಜಸ್ತಾನದ ಸೂರ್ಯಗಡನಲ್ಲಿ ಅದ್ದೂರಿಯಾಗಿ ಮದುವೆಗೆ (Wedding) ಸಿದ್ಧತೆ ನಡೆಯುತ್ತಿದ್ದರೂ ಕೂಡ ಈ ಬಗ್ಗೆ ಸಿದ್ ಮತ್ತು ಕಿಯಾರಾ (Kiara Advani) ಜೋಡಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಹೀಗಿರುವಾಗ ಇವರಿಬ್ಬರದ್ದು ನಿಜವಾದ ಪ್ರೀತಿ ಎಂದು ಹೇಳುವ ಮೂಲಕ ಕಂಗನಾ ʻಷೇರ್‌ಷಾʼ ಜೋಡಿ ಹಾರೈಸಿದ್ದಾರೆ.

    ಅಥಿಯಾ ಶೆಟ್ಟಿ (Athiya Shetty) ಮತ್ತು ರಾಹುಲ್ (Rahul) ಮದುವೆಯಾಗಿ ಕೆಲವೇ ದಿನಗಳಾಗಿದೆ. ಈ ಬೆನ್ನಲ್ಲೇ ಸಿದ್ಧಾರ್ಥ್ ಮತ್ತು ಕಿಯಾರಾ ಹಸೆಮಣೆ ಏರಲು ರೆಡಿಯಾಗಿದ್ದಾರೆ. ರಾಜಸ್ತಾನದ ಸೂರ್ಯಗಡನಲ್ಲಿ (Suryagada) ಅದ್ದೂರಿಯಾಗಿ ʻಷೇರ್‌ಷಾʼ ಜೋಡಿ ಮದುವೆಯಾಗುತ್ತಿದ್ದಾರೆ. ಈ ಬಗ್ಗೆ ಯಾವುದೇ ಸುಳಿವು ನೀಡದೇ ಇಬ್ಬರು ಮೌನವಾಗಿದ್ದಾರೆ. ಆದರೆ ಕಂಗನಾ ಈ ಜೋಡಿಗೆ ಶುಭ ಹಾರೈಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ನಟ ಸಿದ್ದಾರ್ಥ್ ಹಾಗೂ ಕಿಯಾರಾ ಅವರು ಜೊತೆಯಾಗಿ ಇರುವ ಅಪರೂಪದ ವಿಡಿಯೋವನ್ನು ಕಂಗನಾ ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಜೋಡಿ ಎಷ್ಟು ಚೆನ್ನಾಗಿ ಕಾಣುತ್ತಿದೆ. ಚಿತ್ರರಂಗದಲ್ಲಿ ನಾವು ನಿಜವಾದ ಪ್ರೀತಿಯನ್ನು ನೋಡುವುದು ತುಂಬ ವಿರಳ ಎಂದು ಕಂಗನಾ (Kangana Ranaut) ಅವರು ಕ್ಯಾಪ್ಷನ್ ನೀಡಿದ್ದಾರೆ. ಇಬ್ಬರದ್ದು ನಿಜವಾದ ಪ್ರೀತಿ ಎಂದು ಹೊಗಳಿದ್ದಾರೆ. ಹಾಗೆಯೇ ಕಿಯಾರಾ- ಸಿದ್‌ಗೆ ಟ್ಯಾಗ್ ಮಾಡಿದ್ದಾರೆ. ಇದನ್ನೂ ಓದಿ: ಸಿಹಿ ಸುದ್ದಿ ಕೊಡಲು ಸಜ್ಜಾದ್ರಾ ನಟ ಸಿದ್ಧಾರ್ಥ್- ಅದಿತಿ ರಾವ್‌ ಹೈದರಿ?

    ʻಷೇರ್‌ಷಾʼ ಕಪಲ್ ಮದುವೆಗೆ ಬಾಲಿವುಡ್‌ನಿಂದ ಅಂದಾಜು 100 ಜನರು ಈ ವಿವಾಹದಲ್ಲಿ ಭಾಗಿ ಆಗುವ ಸಾಧ್ಯತೆ ಇದೆ. ಕರಣ್ ಜೋಹರ್, ಮನೀಶ್ ಮಲ್ಹೋತ್ರಾ, ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಮುಂತಾದವರು ಭಾಗಿಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಯಾರೂ ಕೂಡ ಮದುವೆ ಬಗ್ಗೆ ಬಾಯಿ ಬಿಡುತ್ತಿಲ್ಲ. ಹೀಗಿರುವಾಗ ಕಂಗನಾ ಅವರು ವಿಡಿಯೋ ಹಂಚಿಕೊಂಡು ಮೆಚ್ಚುಗೆ ಸೂಚಿಸಿದ್ದು ಕುತೂಹಲ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅದ್ದೂರಿಯಾಗಿ ನಡೆಯಲಿದೆ ಸಿದ್ಧಾರ್ಥ್- ಕಿಯಾರಾ ಅಡ್ವಾನಿ ಮದುವೆ

    ಅದ್ದೂರಿಯಾಗಿ ನಡೆಯಲಿದೆ ಸಿದ್ಧಾರ್ಥ್- ಕಿಯಾರಾ ಅಡ್ವಾನಿ ಮದುವೆ

    ಬಾಲಿವುಡ್‌ನ (Bollywood) ಲವ್ ಬರ್ಡ್ಸ್ ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra) ಮತ್ತು ಕಿಯಾರಾ ಅಡ್ವಾಣಿ (Kiara Advani) ದಾಂಪತ್ಯ ಜೀವನಕ್ಕೆ ಕಾಲಿಡಲು ಕೌಂಟ್‌ಡೌನ್ ಶುರುವಾಗಿದೆ. ಸಿದ್- ಕಿಯಾರಾ ಜೋಡಿ ಅದ್ದೂರಿಯಾಗಿ ಮದುವೆಯಾಗುತ್ತಿದ್ದಾರೆ.

    ಅಥಿಯಾ ಶೆಟ್ಟಿ (Athiya Shetty) ಮತ್ತು ಕೆ.ಎಲ್ ರಾಹುಲ್ (K.l Rahul) ಹಸೆಮಣೆ ಏರಿದ ಬೆನ್ನಲ್ಲೇ ಇದೀಗ ಸಿದ್ ಮತ್ತು ಕಿಯಾರಾ ಮದುವೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಲು ದಿನಗಣನೆ ಶುರುವಾಗಿದೆ.

    ಸಿದ್ ಜೋಡಿಯ ಮದುವೆ ಸಂಭ್ರಮ ಫೆ.4ರಿಂದ 6ರವರೆಗೆ ಇರಲಿದೆ. ರಾಜಸ್ತಾನದ ಜೈಸಲ್ಮೇರ್‌ನಲ್ಲಿರುವ ಸೂರ್ಯಗಢ ಅರಮನೆಯಲ್ಲಿ ಮದುವೆ ನಡೆಯಲಿದೆ. ಇದನ್ನೂ ಓದಿ: ಅಪಘಾತವಾಗಿ ಎರಡು ವರ್ಷ: ನಟಿ ರಿಷಿಕಾ ಸಿಂಗ್ ಬದುಕುಳಿದಿದ್ದೇ ಪವಾಡ

    ಇನ್ನೂ ಕಿಯಾರಾ-ಸಿದ್ಧಾರ್ಥ್ ಮದುವೆ 100 ಜನ ಅತಿಥಿಗಳಿಗಷ್ಟೇ ಆಹ್ವಾನ ನೀಡಲಾಗಿದೆ. ಕರಣ್ ಜೋಹರ್, ಶಾಹಿದ್ ಕಪೂರ್ ದಂಪತಿ, ಮನೀಷ್ ಮಲ್ಹೋತ್ರಾ, ರಶ್ಮಿಕಾ ಮಂದಣ್ಣ (Rashmika Mandanna) ಸೇರಿದಂತೆ ಹಲವರಿಗೆ ಆಹ್ವಾನ ನೀಡಿದ್ದಾರೆ. ನೆಚ್ಚಿನ ಜೋಡಿಯ ಮದುವೆ ಸಂಭ್ರಮ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k