Tag: Kiara Advani

  • ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ ಸಿದ್-ಕಿಯಾರಾ ದಂಪತಿ

    ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ ಸಿದ್-ಕಿಯಾರಾ ದಂಪತಿ

    ಬಾಲಿವುಡ್‌ನ (Bollywood) ಪ್ರೇಮ ಪಕ್ಷಿಗಳಾಗಿದ್ದ ಸಿದ್ಧಾರ್ಥ್-ಕಿಯಾರಾ (Kiara Advani) ಜೋಡಿ ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಿನಿಮಾ ಮತ್ತು ವೈವಾಹಿಕ ಜೀವನದಲ್ಲಿ ಬ್ಯುಸಿಯಿರುವ ಈ ಜೋಡಿ ಇದೀಗ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ.

    ‘ಶೇರ್‌ಷಾ’ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟು 2 ತಿಂಗಳಾಗಿದೆ. 2 ವರ್ಷಗಳ ಡೇಟಿಂಗ್ ನಂತರ ಫೆ.7ರಂದು ರಾಜಸ್ಥಾನದಲ್ಲಿ ಅದ್ದೂರಿಯಾಗಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದ ಸಿದ್- ಕಿಯಾರಾ ಇದೀಗ ಖುಷಿ ಖುಷಿಯಾಗಿ ಜೀವನ ಸಾಗಿಸುತ್ತಿದ್ದಾರೆ. ತಮ್ಮ ಪ್ರೀತಿ- ಮದುವೆ ಬಗ್ಗೆ ಎಲ್ಲೂ ಸುಳಿವು ನೀಡದೇ ಸಿಹಿಸುದ್ದಿ ನೀಡಿದ್ದರು. ಇದನ್ನೂ ಓದಿ:`ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ ಆಲಿಯಾ ಭಟ್- ರಶ್ಮಿಕಾ ಮಂದಣ್ಣ

     

    View this post on Instagram

     

    A post shared by KIARA (@kiaraaliaadvani)

    ಇದೀಗ ನೀತಾ ಮುಖೇಶ್ ಅಂಬಾನಿ ಆಯೋಜಿಸಿದ ಸಮಾರಂಭದಲ್ಲಿ ಶೇರ್‌ಷಾ ಕಪಲ್ ಮಸ್ತ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಅದಕ್ಕೂ ಮುನ್ನ ಚೆಂದದ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಸಿದ್-ಕಿಯಾರಾ ಗೋಲ್ಡನ್ ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಇಬ್ಬರ ನಯಾ ಫೋಟೋಶೂಟ್ ಈಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

     

    View this post on Instagram

     

    A post shared by Viral Bhayani (@viralbhayani)

    `ಶೇರ್‌ಷಾ’ ನಂತರ ಕರಣ್ ಜೋಹರ್ ನಿರ್ಮಾಣದ ಬ್ಯಾಕ್ ಟು ಬ್ಯಾಕ್ 3 ಚಿತ್ರಗಳಲ್ಲಿ ಸಿದ್-ಕಿಯಾರಾ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಅಧಿಕೃತ ಅಪ್‌ಡೇಟ್ ಸಿಗುವವರೆಗೂ ಕಾದುನೋಡಬೇಕಿದೆ.

  • ರಾಮ್ ಚರಣ್ ನಟನೆಯ ಹೊಸ ಚಿತ್ರದ ಟೈಟಲ್ ಅನೌನ್ಸ್‌

    ರಾಮ್ ಚರಣ್ ನಟನೆಯ ಹೊಸ ಚಿತ್ರದ ಟೈಟಲ್ ಅನೌನ್ಸ್‌

    `ಆರ್‌ಆರ್‌ಆರ್’ (RRR) ಚಿತ್ರದ ಸೂಪರ್ ಡೂಪರ್ ಸಕ್ಸಸ್ ನಂತರ ರಾಮ್ ಚರಣ್ (Ram Charan) ನಿರ್ದೇಶಕ ಶಂಕರ್ (Shankar) ಜೊತೆ ಕೈಜೋಡಿಸಿದ್ದಾರೆ. ರಾಮ್ ಚರಣ್ ಅವರ ಹುಟ್ಟುಹಬ್ಬದ (ಮಾ.27) ಸಂದರ್ಭದಲ್ಲಿ ತಮ್ಮ ಹೊಸ ಚಿತ್ರದ ಟೈಟಲ್ ಅನೌನ್ಸ್ ಮಾಡಿದ್ದಾರೆ.

    ರಾಮ್ ಚರಣ್ ಕುಟುಂಬದಲ್ಲಿ ಇದೀಗ ಡಬಲ್ ಸಂಭ್ರಮ. ಒಂದ್‌ಕಡೆ `ನಾಟು ನಾಟು’ (Naatu Naatu) ಹಾಡಿಗೆ ಆಸ್ಕರ್ (Oscar)  ಸಿಕ್ಕಿರೋದು. ಮತ್ತೊಂದು ಕಡೆ ತಮ್ಮ ಹುಟ್ಟುಹಬ್ಬದ ದಿನ ಹೊಸ ಚಿತ್ರದ ಟೈಟಲ್ ಘೋಷಣೆ ಮಾಡಿರೋದು. ರಾಮ್ ಚರಣ್-ನಿರ್ದೇಶಕ ಶಂಕರ್ ಕಾಂಬಿನೇಷನ್ ಹೊಸ ಸಿನಿಮಾದ ಟೈಟಲ್ ಯಾವುದು ಎಂಬ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ.

     

    View this post on Instagram

     

    A post shared by Ram Charan (@alwaysramcharan)

    `ಗೇಮ್ ಚೇಂಜರ್’ ಎಂಬ ಪವರ್‌ಫುಲ್ ಟೈಟಲ್ ಅನ್ನ ರಾಮ್ ಚರಣ್ ನಟನೆಯ ಚಿತ್ರಕ್ಕೆ ಇಡಲಾಗಿದೆ. ಚರಣ್‌ಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ದಿಲ್ ರಾಜು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಹೊಸ ಬಗೆಯ ಕಥೆಯಲ್ಲಿ ಚರಣ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ತೆಲಂಗಾಣಕ್ಕೆ ತೆರಳಿ ಪತ್ನಿಗೆ ವಸಿಷ್ಠ ಸಿಂಹ ಸರ್ಪ್ರೈಸ್

    ಇನ್ನೂ ಸೋಮವಾರ (ಮಾ.27) ರಾಮ್ ಚರಣ್ ಹುಟ್ಟುಹಬ್ಬವಿರುವ ಕಾರಣ ಒಂದು ದಿನ ಮುಂಚಿತವಾಗಿಯೇ `ಗೇಮ್ ಚೇಂಜರ್’ ಸಿನಿಮಾ ತಂಡ ಚರಣ್ ಬರ್ತ್ಡೇ ಮಾಡಿ ಸಂಭ್ರಮಿಸಿದ್ದಾರೆ.

  • ಪಿಂಕ್ ಬಣ್ಣದ ಡ್ರೆಸ್‌ನಲ್ಲಿ ಮಿರ ಮಿರ ಮಿಂಚಿದ ಕಿಯಾರಾ

    ಪಿಂಕ್ ಬಣ್ಣದ ಡ್ರೆಸ್‌ನಲ್ಲಿ ಮಿರ ಮಿರ ಮಿಂಚಿದ ಕಿಯಾರಾ

    ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ (Kiara Advani) ಅವರು ಮದುವೆಯಾದ್ಮೇಲೆ (Wedding) ಮತ್ತಷ್ಟು ಹಾಟ್ ಮತ್ತು ಬೋಲ್ಡ್ ಆಗಿದ್ದಾರೆ. ಹನಿಮೂನ್ ಮುಗಿಸಿ ಬರುತ್ತಿದ್ದಂತೆ ಒಪ್ಪಿಕೊಂಡಿರುವ ಪ್ರಾಜೆಕ್ಟ್‌ಗಳತ್ತ ನಟಿ ಗಮನ ಕೊಡುತ್ತಿದ್ದಾರೆ. ಸದ್ಯ ಹಾಟ್ ಹಾಟ್ ಫೋಟೋಶೂಟ್ ನಿಂದ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಇದನ್ನೂ ಓದಿ: ಹೃದಯಘಾತದಿಂದ ಬದುಕುಳಿದ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ನಟಿ ಸುಶ್ಮಿತಾ ಸೇನ್

     

    Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ

     

    KIARA (@kiaraaliaadvani) ಅವರು ಹಂಚಿಕೊಂಡ ಪೋಸ್ಟ್

    ಇತ್ತೀಚಿಗೆ ಸಿದ್- ಕಿಯಾರಾ ಮದುವೆಯಾಗುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟರು. ಇಬ್ಬರ ಡೇಟಿಂಗ್ ಸುದ್ದಿ ಅದೆಷ್ಟೋ ಸೌಂಡ್ ಮಾಡಿದ್ದರು. ತಲೆ ಕೆಡಿಸಿಕೊಳ್ಳದೇ ಸೈಲೆಂಟ್ ಹಸೆಮಣೆ ಏರಿದ್ದರು. ಇದೀಗ `ಶೇರ್ಷಾ’ ಜೋಡಿ ಖುಷಿಯಿಂದ ಜೀವನ ಸಾಗಿಸುತ್ತಿದೆ.

    ಸದ್ಯ ಹನಿಮೂನ್ ಟ್ರಿಪ್ ಮುಗಿಸಿ ಬಂದಿರುವ ಸಿದ್- ಕಿಯಾರಾ ಜೋಡಿ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಅದರಲ್ಲೂ ಕಿಯಾರಾ ಬಗೆ ಬಗೆಯ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಿದೆ. (ಫೆ.4)ರಂದು ನಡೆದ ಮಹಿಳಾ ಪ್ರಿಮಿಯರ್‌ ಶನಿವಾರ ಕಾರ್ಯಕ್ರಮದಲ್ಲಿ ಕಿಯಾರಾ ಪಿಂಕ್ ಕಲರ್ ಮಾಡರ್ನ್ ಡ್ರೆಸ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಈ ಡ್ರೆಸ್‌ನಲ್ಲಿ ನಟಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಚೆಂದದ ಫೋಟೋಶೂಟ್‌ನ್ನ ನಟಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಸಿದ್ದಾರ್ಥ್ ಮಲ್ಹೋತ್ರ (Siddarth Malhotra) ಕೂಡ ಮೆಚ್ಚುಗೆ ಸೂಚಿಸಿದ್ದಾರೆ.

     

    Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ

     

    KIARA (@kiaraaliaadvani) ಅವರು ಹಂಚಿಕೊಂಡ ಪೋಸ್ಟ್

    ಅಂದಹಾಗೆ ನಟಿ ಕಿಯಾರಾ ಅವರು, ರಾಮ್ ಚರಣ್ 15ನೇ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಕರಣ್ ಜೋಹರ್ ನಿರ್ಮಾಣದ ಹೊಸ ಚಿತ್ರಕ್ಕೆ ಸಿದ್ಧಾರ್ಥ್‌ಗೆ ಕಿಯಾರಾ ಜೋಡಿಯಾಗಲಿದ್ದಾರೆ. `ಶೇರ್ಷಾ’ ಚಿತ್ರದ ಬಳಿಕ ಮತ್ತೆ ಈ ಜೋಡಿ ತೆರೆಯ ಮೇಲೆ ಒಂದಾಗಲಿದೆ.

  • ಇಂದಿನಿಂದ ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್ ಧಮಾಕ – ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

    ಇಂದಿನಿಂದ ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್ ಧಮಾಕ – ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

    ಮುಂಬೈ: ಮಾರ್ಚ್ 4 ರಿಂದ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (WPL) ಆವೃತ್ತಿ ಆರಂಭವಾಗುತ್ತಿದ್ದು, ಮುಂಬೈನಲ್ಲಿ (Mumbai) ಅದ್ಧೂರಿ ಚಾಲನೆ ದೊರೆಯಲಿದೆ.

    ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಬಾಲಿವುಡ್ ತಾರೆಯರಾದ ಕಿಯಾರಾ ಅಡ್ವಾಣಿ (Kiara Advani) ಹಾಗೂ ಕೃತಿ ಸನೋನ್ (Kriti Sanon) ಅದ್ಧೂರಿ ವೇದಿಕೆಯಲ್ಲಿ ಸೊಂಟ ಬಳುಕಿಸಲಿದ್ದಾರೆ. ಇದರೊಂದಿಗೆ ಪಂಜಾಬಿ ಗಾಯಕ ಎ.ಪಿ ಧಿಲ್ಲೋನ್ ಗಾಯನ ಪ್ರಸ್ತುತಪಡಿಸಲಿದ್ದಾರೆ. ರಾತ್ರಿ 8 ಗಂಟೆಗೆ ಮೊದಲ ಪಂದ್ಯ ಆರಂಭವಾಗಲಿದೆ.

    ಮುಂಬೈನ ಬ್ರಬೋನ್ ಹಾಗೂ ಡಿವೈ ಪಾಟೀಲ ಕ್ರೀಡಾಂಗಣಗಳು ಸಜ್ಜಾಗಿದ್ದು, ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಸೆಣಸಲಿವೆ. ಇದನ್ನೂ ಓದಿ: WPL ಉದ್ಘಾಟನಾ ಸಮಾರಂಭದಲ್ಲಿ ಸೊಂಟ ಬಳುಕಿಸಲಿದ್ದಾರೆ ಬಾಲಿವುಡ್ ತಾರೆಯರು

    ಟೂರ್ನಿ ಮಾದರಿ ಹೇಗೆ?
    ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಲೀಗ್ ಹಂತ ನಡೆಯಲಿದೆ. ಪ್ರತಿ ತಂಡ ಇತರ 4 ತಂಡಗಳ ವಿರುದ್ಧ ತಲಾ 2 ಬಾರಿ ಸೆಣಸಲಿವೆ. ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. 2 ಮತ್ತು 3ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್‌ನಲ್ಲಿ ಸೆಣಸಲಿವೆ. ಇದನ್ನೂ ಓದಿ: WPL 2023ː ಮಹಿಳೆಯರು, ಹುಡ್ಗೀರಿಗೆ ಪ್ರವೇಶ ಉಚಿತ, ಯಾರೂ ಬೇಕಾದ್ರೂ ಹೋಗ್ಬೋದು

    ಯಾವ ದಿನ ಯಾವ ತಂಡ ಕಾದಾಟ?

    ಮಾರ್ಚ್ 04: ಗುಜರಾತ್ ಜೈಂಟ್ಸ್ Vs ಮುಂಬೈ ಇಂಡಿಯನ್ಸ್ – ಡಿವೈ ಪಾಟೀಲ್ ಸ್ಟೇಡಿಯಂ

    ಮಾರ್ಚ್ 05: ಆರ್‌ಸಿಬಿ Vs ಡೆಲ್ಲಿ ಕ್ಯಾಪಿಟಲ್ಸ್‌ – ಬ್ರಬೋರ್ನ್‌ ಸ್ಟೇಡಿಯಂ – ಮಧ್ಯಾಹ್ನ 3:30ಕ್ಕೆ

    ಮಾರ್ಚ್ 05: ಯುಪಿ ವಾರಿಯರ್ಝ್‌ Vs ಗುಜರಾತ್ ಜೈಂಟ್ಸ್ – ಡಿವೈ ಪಾಟೀಲ್ ಸ್ಟೇಡಿಯಂ – ಸಂಜೆ 7:30ಕ್ಕೆ

    ಮಾರ್ಚ್ 06: ಮುಂಬೈ ಇಂಡಿಯನ್ಸ್ Vs ಆರ್‌ಸಿಬಿ – ಬ್ರಬೋರ್ನ್ – ಸಂಜೆ 7:30ಕ್ಕೆ

    ಮಾರ್ಚ್ 07: ಡೆಲ್ಲಿ ಕ್ಯಾಪಿಟಲ್ಸ್‌ Vs ಯುಪಿ ವಾರಿಯರ್ಝ್‌ – ಡಿವೈ ಪಾಟೀಲ್ ಸ್ಟೇಡಿಯಂ – ಸಂಜೆ 07:30ಕ್ಕೆ

    ಮಾರ್ಚ್ 08 – ಗುಜರಾತ್ ಜೈಂಟ್ಸ್ Vs ಆರ್‌ಸಿಬಿ – ಬ್ರಬೋರ್ನ್ ಸ್ಟೇರಿಯಂ – ಸಂಜೆ 07:30ಕ್ಕೆ

    ಮಾರ್ಚ್ 09: ಡೆಲ್ಲಿ ಕ್ಯಾಪಿಟಲ್ಸ್‌ Vs ಮುಂಬೈ ಇಂಡಿಯನ್ಸ್‌ – ಡಿವೈ ಪಾಟೀಲ್ ಸ್ಟೇಡಿಯಂ – ಸಂಜೆ 7:30ಕ್ಕೆ

    ಮಾರ್ಚ್ 10: ಆರ್‌ಸಿಬಿ Vs ಯುಪಿ ವಾರಿಯರ್ಝ್‌ – ಬ್ರಬೋರ್ನ್‌ ಸ್ಟೇಡಿಯಂ – ಸಂಜೆ 07:30ಕ್ಕೆ

    ಮಾರ್ಚ್ 11: ಗುಜರಾತ್ ಜೈಂಟ್ಸ್ Vs ಡೆಲ್ಲಿ ಕ್ಯಾಪಿಟಲ್ಸ್ – ಡಿವೈ ಪಾಟೀಲ್ ಸ್ಟೇಡಿಯಂ – ಸಂಜೆ 07:30ಕ್ಕೆ

    ಮಾರ್ಚ್ 12: ಯುಪಿ ವಾರಿಯರ್ಝ್‌ Vs ಮುಂಬೈ ಇಂಡಿಯನ್ಸ್ – ಬ್ರಬೋರ್ನ್‌ ಸ್ಟೇಡಿಯಂ – ಸಂಜೆ 07:30ಕ್ಕೆ

    ಮಾರ್ಚ್ 13: ಡೆಲ್ಲಿ ಕ್ಯಾಪಿಟಲ್ಸ್‌ Vs ಆರ್‌ಸಿಬಿ – ಡಿವೈ ಪಾಟೀಲ್ ಸ್ಟೇಡಿಯಂ – ಸಂಜೆ 07:30ಕ್ಕೆ

    ಮಾರ್ಚ್ 14: ಮುಂಬೈ ಇಂಡಿಯನ್ಸ್‌ Vs ಗುಜರಾತ್‌ ಜೈಂಟ್ಸ್‌ – ಬ್ರಬೋರ್ನ್ ಸ್ಟೇಡಿಯಂ – ಸಂಜೆ 07:30ಕ್ಕೆ

    ಮಾರ್ಚ್ 15: ಯುಪಿ ವಾರಿಯರ್ಝ್‌ Vs ಆರ್‌ಸಿಬಿ – ಡಿವೈ ಪಾಟೀಲ್ ಸ್ಟೇಡಿಯಂ – ಸಂಜೆ 07:30ಕ್ಕೆ

    ಮಾರ್ಚ್ 16: ಡೆಲ್ಲಿ ಕ್ಯಾಪಿಟಲ್ಸ್‌ Vs ಗುಜರಾತ್‌ ಜೈಂಟ್ಸ್‌ – ಬ್ರಬೋರ್ನ್‌ ಸ್ಟೇಡಿಯಂ – ಸಂಜೆ 07:30ಕ್ಕೆ

    ಮಾರ್ಚ್ 18: ಮುಂಬೈ ಇಂಡಿಯನ್ಸ್ Vs ಯುಪಿ ವಾರಿಯರ್ಝ್‌ – ಡಿವೈ ಪಾಟೀಲ್ ಸ್ಟೇಡಿಯಂ – ಮಧ್ಯಾಹ್ನ 03:30ಕ್ಕೆ

    ಮಾರ್ಚ್ 18: ಆರ್‌ಸಿಬಿ Vs ಗುಜರಾತ್‌ ಜೈಂಟ್ಸ್‌ – ಬ್ರಬೋರ್ನ್‌ ಸ್ಟೇಡಿಯಂ – ಸಂಜೆ 07:30ಕ್ಕೆ

    ಮಾರ್ಚ್ 20: ಗುಜರಾತ್‌ ಜೈಂಟ್ಸ್‌ Vs ಯುಪಿ ವಾರಿಯರ್ಝ್‌ – ಬ್ರಬೋರ್ನ್‌ ಸ್ಟೇಡಿಯಂ – ಮಧ್ಯಾಹ್ನ 3:30ಕ್ಕೆ

    ಮಾರ್ಚ್ 20: ಮುಂಬೈ ಇಂಡಿಯನ್ಸ್ Vs ಡೆಲ್ಲಿ ಕ್ಯಾಪಿಟಲ್ಸ್ – ಡಿವೈ ಪಾಟೀಲ್ ಸ್ಟೇಡಿಯಂ – ಸಂಜೆ 07:30ಕ್ಕೆ

    ಮಾರ್ಚ್ 21: ಆರ್‌ಸಿಬಿ Vs ಮುಂಬೈ ಇಂಡಿಯನ್ಸ್ – ಡಿವೈ ಪಾಟೀಲ್ ಕ್ರೀಡಾಂಗಣ – ಮಧ್ಯಾಹ್ನ 03:30ಕ್ಕೆ

    ಮಾರ್ಚ್ 21: ಯುಪಿ ವಾರಿಯರ್ಝ್‌ Vs ಡೆಲ್ಲಿ ಕ್ಯಾಪಿಟಲ್ಸ್‌ – ಬ್ರಬೋರ್ನ್‌ ಸ್ಟೇಡಿಯಂ – ಸಂಜೆ 07:30ಕ್ಕೆ

    ಮಾರ್ಚ್ 24: ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಎಲಿಮಿನೇಟರ್ ಪಂದ್ಯ – ಸಂಜೆ 07:30ಕ್ಕೆ

    ಮಾರ್ಚ್ 26 – ಬ್ರಬೋರ್ನ್‌ನಲ್ಲಿ ಫೈನಲ್ – ಸಂಜೆ 07:30ಕ್ಕೆ

  • ಮದುವೆಯ ಬಳಿಕ ಮ್ಯಾಂಗೋ ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ ಕಿಯಾರಾ ಅಡ್ವಾಣಿ

    ಮದುವೆಯ ಬಳಿಕ ಮ್ಯಾಂಗೋ ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ ಕಿಯಾರಾ ಅಡ್ವಾಣಿ

    ಬಾಲಿವುಡ್‌ನ (Bollywood) ಕ್ಯೂಟ್ ಕಪಲ್ ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra) ಮತ್ತು ಕಿಯಾರಾ ಅಡ್ವಾಣಿ (Kiara Advani) ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹನಿಮೂನ್ ಮುಗಿಸಿ ಇದೀಗ ಮತ್ತೆ ಕೆಲಸದಲ್ಲಿ ಆಕ್ಟೀವ್ ಆಗಿರುವ ಕಿಯಾರಾ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ.

    `ಶೇರ್ಷಾ’ ಚಿತ್ರದ ಮೂಲಕ ಜನಪ್ರಿಯ ಜೋಡಿಯಾಗಿ ಸಿದ್-ಕಿಯಾರಾ ಹೈಲೆಟ್ ಆದರು. ಈ ಸಿನಿಮಾದ ಚಿತ್ರೀಕರಣದಲ್ಲಿಯೇ ಇಬ್ಬರಿಗೂ ಪ್ರೇಮಾಂಕುರವಾಗಿತ್ತು. ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ ಈ ಜೋಡಿ ಕಾಲಿಟ್ಟರು. ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾದರು. ಇದನ್ನೂ ಓದಿ: ದೇಶ ಗೆದ್ದ ಗೃಹಿಣಿಯ ಕಥೆ ಹೇಳಲು ಬರುತ್ತಿದ್ದಾರೆ ಅನುಪಮ

    ಬಿಟೌನ್ ಬೆಡಗಿ ಕಿಯಾರಾ -ಸಿದ್ ಹನಿಮೂನ್ ಮುಗಿಸಿ ಮುಂಬೈ ಮನೆಗೆ ಬಂದಿದ್ದಾರೆ. ಇಬ್ಬರೂ ತಮ್ಮ ಕೆಲಸದತ್ತ ಬ್ಯುಸಿಯಾಗಿದ್ದಾರೆ. ಸದ್ಯ ಮ್ಯಾಂಗೋ ಬಣ್ಣದ ಡ್ರೆಸ್‌ನಲ್ಲಿ ನಟಿ ಮಿಂಚಿದ್ದಾರೆ. ಫೋಟೋ ಬ್ಯಾಕ್‌ಗ್ರೌಂಡ್ ಕೂಡ ಮ್ಯಾಂಗೋ ಬಣ್ಣದಲ್ಲಿ ಇದೆ. ಜ್ಯೂಸ್ ಕಂಪನಿಯ ಜಾಹಿರಾತಿಗಾಗಿ ಕಿಯಾರಾ ಈ ರೀತಿಯ ಡ್ರೆಸ್ ಧರಿಸಿದ್ದಾರೆ.

    ಇನ್ನೂ ರಾಮ್ ಚರಣ್ ನಟನೆಯ 15ನೇ ಸಿನಿಮಾಗೆ ಕಿಯಾರಾ (Kiara Advani) ನಾಯಕಿಯಾಗಿದ್ದಾರೆ. ಕರಣ್ ಜೋಹರ್ (Karan Johar) ನಿರ್ಮಾಣ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳಿಗೆ ಸಿದ್ಧಾರ್ಥ್ ಮಲ್ಹೋತ್ರಾಗೆ ಕಿಯಾರಾ ನಾಯಕಿ ಎಂದು ಹೇಳಲಾಗುತ್ತಿದೆ.

  • WPL ಉದ್ಘಾಟನಾ ಸಮಾರಂಭದಲ್ಲಿ ಸೊಂಟ ಬಳುಕಿಸಲಿದ್ದಾರೆ ಬಾಲಿವುಡ್ ತಾರೆಯರು

    WPL ಉದ್ಘಾಟನಾ ಸಮಾರಂಭದಲ್ಲಿ ಸೊಂಟ ಬಳುಕಿಸಲಿದ್ದಾರೆ ಬಾಲಿವುಡ್ ತಾರೆಯರು

    ಮುಂಬೈ: ಮಾರ್ಚ್ 4 ರಿಂದ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (WPL 2023) ಆರಂಭವಾಗುತ್ತಿದ್ದು, ಬಿಸಿಸಿಐ (BCCI) ಸಕಲ ಸಿದ್ಧತೆ ಮಾಡಿಕೊಂಡಿದೆ.

    ಟೂರ್ನಿಯ ಮೊದಲ ಪಂದ್ಯ ಮುಂಬೈನ (Mumbai) ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿದೆ. ಪಂದ್ಯ ಆರಂಭಕ್ಕೂ ಮುನ್ನ ಸಂಜೆ 5:30ಕ್ಕೆ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬಾಲಿವುಡ್ ತಾರೆಯರಾದ ಕಿಯಾರಾ ಅಡ್ವಾಣಿ (Kiara Advani) ಹಾಗೂ `ಪರಮ್ ಸುಂದರಿ’ ಹಾಡಿನ ಖ್ಯಾತಿಯ ಕೃತಿ ಸನೋನ್ (Kriti Sanon) ಭರ್ಜರಿ ನೃತ್ಯ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ಮಹಿಳಾ ತಂಡಕ್ಕೆ ಹರ್ಮನ್‌ಪ್ರೀತ್‌ ಕೌರ್​ ನಾಯಕಿ

    WPL

    ಇದರೊಂದಿಗೆ ಜನಪ್ರಿಯ ಪಂಜಾಬಿ ಗಾಯಕ ಎ.ಪಿ ಧಿಲ್ಲೋನ್ ತಮ್ಮ ಹಾಡುಗಳ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ ಎಂದು ಡಬ್ಲ್ಯೂಪಿಎಲ್ ಟ್ವೀಟ್ ಮಾಡಿ ತಿಳಿಸಿದೆ. ಇದನ್ನೂ ಓದಿ: WPL 2023ː ಮಹಿಳೆಯರು, ಹುಡ್ಗೀರಿಗೆ ಪ್ರವೇಶ ಉಚಿತ, ಯಾರೂ ಬೇಕಾದ್ರೂ ಹೋಗ್ಬೋದು

    FotoJet 7

    ಚೊಚ್ಚಲ ಡಬ್ಲ್ಯೂಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಡೆಲ್ಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಕಣಕ್ಕಿಳಿಯುತ್ತಿವೆ. ಮಾರ್ಚ್ 4 ರಿಂದ 21ರ ವರೆಗೆ ಲೀಗ್ ಪಂದ್ಯಗಳು ನಡೆಯಲಿವೆ. ಮಾರ್ಚ್ 24 ರಂದು ಪ್ಲೆ ಆಫ್ ಹಾಗೂ ಮಾರ್ಚ್ 26ರಂದು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

  • ರೆಡ್ ಗೌನ್ ಧರಿಸಿ ಪಡ್ಡೆಗಳ ನಿದ್ದೆಗೆಡಿಸಿದ ನವವಧು ಕಿಯಾರಾ

    ರೆಡ್ ಗೌನ್ ಧರಿಸಿ ಪಡ್ಡೆಗಳ ನಿದ್ದೆಗೆಡಿಸಿದ ನವವಧು ಕಿಯಾರಾ

    ತ್ತೀಚೆಗಷ್ಟೇ ಬಾ‍ಯ್ ಫ್ರೆಂಡ್ ಸಿದ್ದಾರ್ಥ ಜೊತೆ ಹೊಸ ಜೀವನಕ್ಕೆ ಕಾಲಿಟ್ಟ ಕಿಯಾರಾ ಅಡ್ವಾಣಿ ಹನಿಮೂನ್ ಮುಗಿಸಿಕೊಂಡು ಮತ್ತೆ ಟ್ರ್ಯಾಕ್ ಗೆ ಮರಳಿದ್ದಾರೆ. ಖಾಸಗಿ ವಾಹಿನಿಯ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದ ಅವರು, ರೆಡ್ ಗೌನ್ ನಲ್ಲಿ ಅಪ್ಸರೆಯಂತೆ ಕಂಗೊಳಿಸಿದ್ದಾರೆ.

    ಕಿಯಾರಾ ಅಡ್ವಾಣಿ ಕೆಂಪು ಗೌನ್ ನಲ್ಲಿ ಬರುತ್ತಿದ್ದಂತೆಯೇ ಇಡೀ ಕ್ಯಾಮೆರಾಗಳು ಅವರನ್ನು ಸುತ್ತುವರೆದವು. ಒಂದು ಕ್ಷಣ ಅಚ್ಚರಿಯಿಂದಲೇ ಕಿಯಾರಾ ಕ್ಯಾಮೆರಾಗೆ ಪ್ರತಿಕ್ರಿಯೆ ನೀಡಿದರು. ಹಲವು ಬಗೆಯ ಪೋಸ್ ಗಳನ್ನೂ ಕ್ಯಾಮೆರಾಗೆ ಅವರು ನೀಡಿದರು. ಆ ಫೋಟೋಗಳು ಇದೀಗ ವೈರಲ್ ಕೂಡ ಆಗಿವೆ. ಇದನ್ನೂ ಓದಿ: `ಆಚಾರ್ಯ’ ಚಿತ್ರಕ್ಕಾಗಿ ನಿರ್ಮಿಸಿದ್ದ 20 ಕೋಟಿ ವೆಚ್ಚದ ಸೆಟ್ ಬೆಂಕಿಗಾಹುತಿ

    Kiara Advani

    ಪ್ರಶಸ್ತಿ ಪ್ರದಾನ ಸಮಾರಂಭದ ರೆಡ್ ಕಾರ್ಪೆಟ್ ಗಾಗಿಯೇ ಅವರು ವಿಶೇಷ ಗೌನ್ ಅನ್ನು ಸಿದ್ಧಪಡಿಸಿದ್ದರು. ಹೊಸ ಬಗೆಯ ವಿನ್ಯಾಸದಲ್ಲಿ ತಯಾರಾಗಿದ್ದ ಗೌನ್ ಬಗ್ಗೆಯೂ ಅವರು ಹಲವು ಮಾಹಿತಿಗಳನ್ನು ಹಂಚಿಕೊಂಡರು. ಈ ಗೌನ್ ನಲ್ಲಿ ಅವರು ಮತ್ತಷ್ಟು ಸ್ಟೈಲೀಶ್ ಆಗಿ ಕಂಡಿದ್ದು ವಿಶೇಷ.

    ವೈಯಕ್ತಿಕ ಬದುಕು ಮತ್ತು ವೃತ್ತಿ ಬದುಕು ಎರಡನ್ನೂ ಸಮತೋಲನದಿಂದ ಕಾಪಾಡಿಕೊಂಡು ಬಂದವರು ಕಿಯಾರಾ. ಹಲವು ವರ್ಷಗಳಿಂದ ಸಿದ್ದಾರ್ಥ ಮಲ್ಹೋತ್ರಾ ಜೊತೆ ಡೇಟಿಂಗ್ ಮಾಡುತ್ತಿದ್ದವರು ಫೆಬ್ರವರಿ 7ರಂದು ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾದರು. ಮದುವೆಯ ನಂತರ ಈಗ ಮತ್ತೆ ಸಿನಿಮಾ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರಾಮ್ ಚರಣ್ ಜೊತೆ ಈಗ ಸಿನಿಮಾವೊಂದನ್ನು ಕಿಯಾರಾ ಮಾಡುತ್ತಿದ್ದಾರೆ.

  • ಮದುವೆಯ ಬಳಿಕ ಸಿಹಿ ಸುದ್ದಿ ನೀಡಿದ ಸಿದ್-ಕಿಯಾರಾ ಜೋಡಿ

    ಮದುವೆಯ ಬಳಿಕ ಸಿಹಿ ಸುದ್ದಿ ನೀಡಿದ ಸಿದ್-ಕಿಯಾರಾ ಜೋಡಿ

    ಬಾಲಿವುಡ್ (Bollywood) ಜೋಡಿ ಸಿದ್-ಕಿಯಾರಾ (Siddarth Malhotra-Kiara Advani) ದಾಂಪತ್ಯ ಜೀವನವನ್ನ ಖುಷಿಯಾಗಿ ಕಳೆಯುತ್ತಿದ್ದಾರೆ. ಇತ್ತೀಚಿಗಷ್ಟೇ ಹಸೆಮಣೆ ಏರುವ ಮೂಲಕ ಗುಡ್ ನ್ಯೂಸ್ ನೀಡಿದ್ದ ಈ ಜೋಡಿ ಈಗ ಮತ್ತೆ ಸಿನಿಮಾ ವಿಚಾರವಾಗಿ ಸಿಹಿಸುದ್ದಿ ನೀಡಿದ್ದಾರೆ.

    ಸಿದ್-ಕಿಯಾರಾ ಜೋಡಿ `ಶೇರ್‌ಷಾ’ ಸಿನಿಮಾದ ಮೂಲಕ ಅಭಿಮಾನಿಗಳಿಗೆ ಮೋಡಿ ಮಾಡಿದ್ದರು. ಈ ಸಿನಿಮಾದಿಂದ ಕ್ಯೂಟ್ ಕಪಲ್ ಆಗಿ ಹೈಲೈಟ್ ಆಗಿದ್ದರು. ಶೇರ್‌ಷಾ ಸಿನಿಮಾದಿಂದಲೇ ಇಬ್ಬರಿಗೂ ಪ್ರೇಮಾಂಕುರವಾಗಿ ಮದುವೆಯಾದರು. ಈಗ ಮತ್ತೆ ತೆರೆಯ ಮೇಲೂ ರೊಮ್ಯಾನ್ಸ್ ಮಾಡೋದ್ದಕ್ಕೆ `ಶೇರ್‌ಷಾ’ ಜೋಡಿ ರೆಡಿಯಾಗಿದ್ದಾರೆ. ಈ ಸಿನಿಮಾಗೆ ಕರಣ್ ಜೋಹರ್ ಬಂಡವಾಳ ಹೂಡಲಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ರೊಮ್ಯಾಂಟಿಕ್ ಆಗಿ ಪ್ರೇಮಿಗಳ ದಿನ ಆಚರಿಸಿದ ಯಶ್- ರಾಧಿಕಾ

    ಕರಣ್ ಜೋಹರ್ (Karan Johar) ಅವರು ಅನೇಕ ಸೆಲೆಬ್ರಿಟಿಗಳ ಮಕ್ಕಳನ್ನು ಲಾಂಚ್ ಮಾಡಿದ್ದಾರೆ. ಸಿದ್ದಾರ್ಥ್ ಮಲ್ಹೋತ್ರಾ ಅವರನ್ನು `ಸ್ಟುಡೆಂಟ್ ಆಫ್ ದಿ ಇಯರ್’ ಮೂಲಕ ಹಿಂದಿ ಚಿತ್ರರಂಗಕ್ಕೆ ಕರಣ್ ಪರಿಚಯಿಸಿದರು. ಹೀಗಾಗಿ ಇಬ್ಬರ ಮಧ್ಯೆ ಆಪ್ತತೆ ಇದೆ. ಕಿಯಾರಾ ನಟನೆಯ `ಲಸ್ಟ್ ಸ್ಟೋರಿಸ್’ ಸಿನಿಮಾಗೆ ಕರಣ್ ಜೋಹರ್ ಬಂಡವಾಳ ಹೂಡಿದರು. ಅಲ್ಲಿಂದ ಕಿಯಾರಾ ಜೊತೆಗೆ ಕರಣ್ ಒಳ್ಳೆಯ ಫ್ರೆಂಡ್‌ಶಿಪ್ ಬೆಳೆಸಿಕೊಂಡರು. ಹೀಗಾಗಿ, ಸಿದ್ದಾರ್ಥ್ ಹಾಗೂ ಕಿಯಾರಾಗೆ ಕರಣ್ ಮೆಂಟರ್ ಕೂಡ ಆಗಿದ್ದಾರೆ.

    ಮದುವೆ ಹಾಗೂ ಆರತಕ್ಷತೆ ಸಂದರ್ಭದಲ್ಲಿ ಕರಣ್ ಜೋಹರ್ ಹಾಜರಿದ್ದರು. ಅವರು ಮದುವೆ ಸಂಭ್ರಮದಲ್ಲಿ ಭಾಗಿ ಆಗಿ ಎಂಜಾಯ್ ಮಾಡಿದ್ದಾರೆ. ಅಷ್ಟೇ ಅಲ್ಲ ನವದಂಪತಿ ಸಿದ್-ಕಿಯಾರಾ ಜೊತೆ ಅವರು ದೊಡ್ಡ ಡೀಲ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಿದ್ದಾರ್ಥ್- ಕಿಯಾರಾ ಜೋಡಿ ಜೊತೆಯಾಗಿ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳಲ್ಲಿ ನಟಿಸಲು ಒಪ್ಪಿದ್ದಾರೆ. ಇದಕ್ಕೆ ಧರ್ಮ ಪ್ರೊಡಕ್ಷನ್ ಬಂಡವಾಳ ಹೂಡಲಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಿಯಾರಾ- ಸಿದ್ಧಾರ್ಥ್‌ನ ನೋಡಿದ್ರೆ ಹೊಟ್ಟೆ ಉರಿಯುತ್ತದೆ: ರಾಖಿ ಸಾವಂತ್

    ಕಿಯಾರಾ- ಸಿದ್ಧಾರ್ಥ್‌ನ ನೋಡಿದ್ರೆ ಹೊಟ್ಟೆ ಉರಿಯುತ್ತದೆ: ರಾಖಿ ಸಾವಂತ್

    ಬಾಲಿವುಡ್‌ನ (Bollywood) ಪ್ರೇಮ ಪಕ್ಷಿಗಳಾಗಿರುವ ಸಿದ್ (Siddarth Malhotra) ಮತ್ತು ಕಿಯಾರಾ (Kiara Advani) ಇತ್ತೀಚಿಗೆ ಹಸೆಮಣೆ ಏರಿದ್ದರು. ಖುಷಿ ಖುಷಿಯಾಗಿ `ಶೇರ್‌ಷಾ’ ಜೋಡಿ ಜೀವನ ಸಾಗಿಸುತ್ತಿದ್ದಾರೆ. ಹೀಗಿರುವಾಗ ಈ ಜೋಡಿಯ ಕುರಿತು ರಾಖಿ ಸಾವಂತ್ (Rakhi Sawant) ಹೇಳಿಕೆಯೊಂದನ್ನ ನೀಡಿದ್ದಾರೆ. ಪ್ರೇಮಿಗಳನ್ನ ನೋಡಿದ್ದರೆ ಅಳು ಬರುತ್ತದೆ ಎಂದು ನಟಿ ಭಾವುಕರಾಗಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಸಿದ್-ಕಿಯಾರಾ ಮದುವೆಯಾಗಿದ್ದಾರೆ. ಇದೇ ಭಾನುವಾರ (ಫೆ.12)ರಂದು ಬಾಲಿವುಡ್ ಸೆಲೆಬ್ರಿಟಿಗಳಿಗೆ ಅದ್ದೂರಿ ಆರತಕ್ಷತೆ ನೀಡಿದ್ದಾರೆ. `ಶೇರ್ ಷಾ’ ಜೋಡಿಯ ರಿಸ್ಪೆಷನ್‌ನಲ್ಲಿ ಇಡೀ ಬಾಲಿವುಡ್ ದಂಡೇ ಭಾಗಿಯಾಗಿ ಸಂಭ್ರಮಿಸಿದ್ದರು. ಚಿತ್ರರಂಗದ ಮಂದಿ ಎಲ್ಲರೂ ಕಿಯಾರಾ-ಸಿದ್ ಅವರ ಲವ್ ಸ್ಟೋರಿ, ಮದುವೆ, ಹೊಂದಾಣಿಕೆ ಬಗ್ಗೆ ಹಾಡಿ ಹೊಗಳುತ್ತಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲಿ ರಜನಿ ಜೊತೆ ಶಿವರಾಜ್ ಕುಮಾರ್: ಫೋಟೋ ಲೀಕ್

    `ಶೇರ್‌ಷಾ’ ಜೋಡಿಯ ಬಗ್ಗೆ ರಾಖಿ ಸಾವಂತ್ ಕೂಡ ರಿಯಾಕ್ಟ್ ಮಾಡಿದ್ದಾರೆ. ಸಿದ್-ಕಿಯಾರಾ ಒಬ್ಬರನೊಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಇದು ನಿಜಕ್ಕೂ ಖುಷಿಯ ವಿಚಾರ. ಎಲ್ಲಾ ಕಡೆ ಅವರ ಮದುವೆಯ ಬಗ್ಗೆಯೇ ಚರ್ಚೆಯಾಗುತ್ತಿದೆ. ಇನ್ನೊಂದು ಕಡೆ ನನ್ನ ಮದುವೆಯ ಬಗ್ಗೆ ಕೆಟ್ಟ ಸುದ್ದಿ ಬರುತ್ತಿದೆ. ಪ್ರೀತಿಸಿ ಮದುವೆಯಾದವರನ್ನು ನೋಡಿದರೆ ನನಗೆ ಹೊಟ್ಟೆ ಉರಿಯುತ್ತದೆ. ಅವರನ್ನ ನೋಡಿದರೆ ಅಳು ಬರುತ್ತದೆ. ನನ್ನ ಜೊತೆ ಈಗ ಯಾರು ಇಲ್ಲಾ, ನನ್ನನ್ನೂ ಪ್ರೀತಿಸುವವರು ಕೂಡ ಯಾರು ಇಲ್ಲಾ ಎಂದು ನಟಿ ಭಾವುಕರಾಗಿದ್ದಾರೆ.

    ಇನ್ನೂ ರಾಖಿ ಕೂಡ ಇತ್ತೀಚಿಗೆ ಮೈಸೂರು ಮೂಲದ ಆದಿಲ್ ಜೊತೆ ಹೊಸ ಬಾಳಿಗೆ ಕಾಲಿಟ್ಟಿದ್ದರು. ರಾಖಿ ನೀಡಿರುವ ದೂರಿನ ಮೇರೆಗೆ ಕಂಬಿ ಹಿಂದೆ ಆದಿಲ್ ದಿನ ಕಳೆಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುವೆಯಾದ ಸಂಭ್ರಮದಲ್ಲಿ ಪತ್ನಿ ಕಿಯಾರಾಗೆ ಮುತ್ತಿಟ್ಟ ಸಿದ್ಧಾರ್ಥ್

    ಮದುವೆಯಾದ ಸಂಭ್ರಮದಲ್ಲಿ ಪತ್ನಿ ಕಿಯಾರಾಗೆ ಮುತ್ತಿಟ್ಟ ಸಿದ್ಧಾರ್ಥ್

    ಬಾಲಿವುಡ್‌ನ (Bollywood) `ಷೇರ್‌ಷಾ’ ಜೋಡಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಸಾಕಷ್ಟು ಗಾಸಿಪ್‌ ನಡುವೆ ಸಿದ್-ಕಿಯಾರಾ ಸತಿ-ಪತಿಗಳಾಗಿ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಸದ್ಯ ತಮ್ಮ ಮದುವೆ (Wedding) ವೀಡಿಯೋ ಮೂಲಕ ಈ ಜೋಡಿ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದಾರೆ. ಕಿಯಾರಾ ಅಡ್ವಾಣಿ (Kiara Advani) ತುಟಿಗೆ ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra) ಮುತ್ತಿಟ್ಟಿರುವ (Kiss) ವೀಡಿಯೋ ಸಖತ್ ಸದ್ದು ಮಾಡ್ತಿದೆ.

    ಹಲವು ವರ್ಷಗಳ ಪ್ರೀತಿಗೆ ಮದುವೆಯ ಮೂಲಕ ಅಭಿಮಾನಿಗಳಿಗೆ ಕಿಯಾರಾ ಮತ್ತು ಸಿದ್ ಗುಡ್ ನ್ಯೂಸ್ ಕೊಟ್ಟರು. ಫೆ.7ರಂದು ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾದರು. ಸಿದ್-ಕಿಯಾರಾ ಮದುವೆಯ ಮುದ್ದಾದ ಫೋಟೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದರು. ಈಗ ಮದುವೆಯ ರೊಮ್ಯಾಂಟಿಕ್ ವೀಡಿಯೋ ಶೇರ್ ಮಾಡುವ ಮೂಲಕ ಹವಾ ಕ್ರಿಯೆಟ್ ಮಾಡಿದ್ದಾರೆ.‌ ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳ ನಡುವೆ ಕಾವಿತೊಟ್ಟು ಅಚ್ಚರಿ ಮೂಡಿಸಿದ ಮಿಲ್ಕಿ ಬ್ಯೂಟಿ

     

    View this post on Instagram

     

    A post shared by KIARA (@kiaraaliaadvani)

    ವಧು ಕಿಯಾರಾ ಡ್ಯಾನ್ಸ್ ಮಾಡುತ್ತ ಮದುವೆ ಮಂಟಪದತ್ತ ಬರುತ್ತಾರೆ. ಮದುವೆಗೆ ಸಮಯವಾಯಿತು ಎಂದು ಸಿದ್ಧಾರ್ಥ್ ಸನ್ನೆ ಮಾಡುತ್ತಾರೆ. ಬಳಿಕ ಖುಷಿ ಖುಷಿಯಾಗಿ ಹಾರ ಬದಲಾಯಿಸುತ್ತ ಮದುವೆಯಾಗಿದ್ದಾರೆ. ಇಬ್ಬರ ಮೇಲೆ ಹೂವಿನ ಮಳೆ ಸುರಿಯುತ್ತದೆ. ಪತ್ನಿ ಕಿಯಾರಾಗೆ ತುಟಿಗೆ ಮುತ್ತಿಟ್ಟು ರೊಮ್ಯಾಂಟಿಕ್ ಆಗಿ ಸ್ವಾಗತಿಸಿದ್ದಾರೆ. ಈ ಚೆಂದದ ವೀಡಿಯೋ `ಷೇರ್‌ಷಾ’ ಸಿನಿಮಾದ ʻರಾಂಜಾʼ ಹಾಡನ್ನೇ ವೀಡಿಯೋಗೆ ಬಳಕೆ ಮಾಡಲಾಗಿದೆ. ಈ ವೀಡಿಯೋ ಇದೀಗ ನೆಟ್ಟಿಗರ ಗಮನ ಸೆಳೆದಿದೆ.

     

    View this post on Instagram

     

    A post shared by KIARA (@kiaraaliaadvani)

    ಮದುವೆಗೆ ಆಪ್ತರು ಮತ್ತು ಕುಟುಂಬಸ್ಥರು ಸಮ್ಮುಖದಲ್ಲಿ ನೆರವೇರಿದ ಕಾರಣ ಸದ್ಯದಲ್ಲೇ ಸಿನಿಮಾರಂಗ ಸ್ನೇಹಿತರಿಗಾಗಿ ಮುಂಬೈನಲ್ಲಿ ಅದ್ದೂರಿಯಾಗಿ ಆರತಕ್ಷತೆ ಪ್ಲ್ಯಾನ್ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k