Tag: Kiara Advani

  • ‘ಸಲಾರ್ 2’ ಚಿತ್ರದಲ್ಲಿ ಕಿಯಾರಾ ಅಡ್ವಾಣಿ- ಕೊನೆಗೂ ಸಿಕ್ತು ಸ್ಪಷ್ಟನೆ

    ‘ಸಲಾರ್ 2’ ಚಿತ್ರದಲ್ಲಿ ಕಿಯಾರಾ ಅಡ್ವಾಣಿ- ಕೊನೆಗೂ ಸಿಕ್ತು ಸ್ಪಷ್ಟನೆ

    ಬಾಲಿವುಡ್ ನಟಿ ಕಿಯಾರಾ ಅಡ್ವಾಣಿಗೆ (Kiara Advani) ಹಿಂದಿ ಮತ್ತು ತೆಲುಗಿನಲ್ಲಿ ಭಾರೀ ಬೇಡಿಕೆಯಿದೆ. ಇತ್ತೀಚೆಗೆ ಸಲಾರ್-2 (Salaar 2) ಸಿನಿಮಾದಲ್ಲಿ ಕಿಯಾರಾ ಕಾಣಿಸಿಕೊಳ್ತಾರೆ ಎಂಬ ಸುದ್ದಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿತ್ತು. ಅಸಲಿಗೆ ಅವರು ಇರುತ್ತಾರಾ? ಎಂಬುದು ಸ್ಪಷ್ಟನೆ ಸಿಕ್ಕಿರಲಿಲ್ಲ. ಇದೀಗ ಉತ್ತರ ಸಿಕ್ಕಿದೆ. ಇದನ್ನೂ ಓದಿ:ಗಮನ ಸೆಳೆದ ಭೂಮಿ ಪೆಡ್ನೇಕರ್ ಧರಿಸಿದ ಕಾಸ್ಟ್ಯೂಮ್

    ‘ಸಲಾರ್’ ಪಾರ್ಟ್ 2ನಲ್ಲಿ ಕಿಯಾರಾ ಅಡ್ವಾಣಿ ಸಿನಿಮಾದಲ್ಲಿ ನಟಿಸುತ್ತಿಲ್ಲ. ಹರಿದಾಡುತ್ತಿರುವ ಸುದ್ದಿ ಸುಳ್ಳು ಎನ್ನಲಾಗುತ್ತಿದೆ. ನಾಯಕಿಯ ಆಯ್ಕೆ ವಿಚಾರದಲ್ಲಿ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಐಟಂ ಡ್ಯಾನ್ಸ್‌ಗೆ ಹೆಜ್ಜೆ ಹಾಕಲಿದ್ದಾರೆ ಎಂದು ಸುದ್ದಿಯಾಗಿತ್ತು. ಇದು ಕೂಡ ಸುಳ್ಳು ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಚಿತ್ರತಂಡ ಯಾವ ಮಾಹಿತಿ ರಿವೀಲ್ ಮಾಡಲಿದೆ ಎಂದು ಕಾಯಬೇಕಿದೆ.

    ಕಿಯಾರಾ ಸದ್ಯ ರಾಮ್ ಚರಣ್ ಜೊತೆಗಿನ ‘ಗೇಮ್ ಚೇಂಜರ್’ ಸಿನಿಮಾ ರಿಲೀಸ್‌ಗಾಗಿ ಎದುರು ನೋಡ್ತಿದ್ದಾರೆ. ಕೆಲವು ಬಾಲಿವುಡ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಇನ್ನೊಂದು ಕಡೆ ಯಶ್ ನಟನೆಯ ‘ಟಾಕ್ಸಿಕ್’ ಚಿತ್ರಕ್ಕೆ ಕಿಯಾರಾ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿ ಇದೆ. ಚಿತ್ರತಂಡದ ಅಧಿಕೃತ ಮಾಹಿತಿಗಾಗಿ ಕಾಯಬೇಕಿದೆ.

    ಸಲಾರ್‌ ಪಾರ್ಟ್‌ 1ರಲ್ಲಿ ಪ್ರಭಾಸ್‌, ಪೃಥ್ವಿರಾಜ್‌ ಸುಕುಮಾರನ್‌, ಶ್ರುತಿ ಹಾಸನ್‌ ನಟಿಸಿದ್ದರು. ಚಿತ್ರಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು. ಈ ಸಿನಿಮಾವನ್ನು ಪ್ರಶಾಂತ್‌ ನೀಲ್‌ ನಿರ್ದೇಶನ ಮಾಡಿದ್ದಾರೆ.

  • ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಬಾಲಿವುಡ್ ದಂಡು

    ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಬಾಲಿವುಡ್ ದಂಡು

    ಶ್ (Yash) ನಟನೆಯ ಟಾಕ್ಸಿಕ್ (Toxic) ಸಿನಿಮಾ ಬಗ್ಗೆ ಅಧಿಕೃತ ಮಾಹಿತಿಯನ್ನು ಚಿತ್ರತಂಡ ಕೊಡದೇ ಇದ್ದರೂ, ಸಾಕಷ್ಟು ವಿಷಯಗಳು ಆಚೆ ಬರುತ್ತಿವೆ. ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ ಬಾಲಿವುಡ್ ದಂಡೇ ಈ ಸಿನಿಮಾದಲ್ಲಿ ಇರಲಿದೆ. ಕನ್ನಡಕ್ಕೆ ಪ್ರತಿಭಾವಂತ ಕಲಾವಿದರನ್ನು ಮತ್ತು ತಂತ್ರಜ್ಞರನ್ನು ಈ ಸಿನಿಮಾ ಮೂಲಕ ಯಶ್ ಕರೆಯಿಸಿಕೊಳ್ಳುತ್ತಿದ್ದಾರೆ.

    ಈಗಾಗಲೇ ಈ ಚಿತ್ರದಲ್ಲಿ ಕರೀನಾ ಕಪೂರ್ ನಟಿಸಲಿದ್ದಾರೆ ಎನ್ನುವ ಸುದ್ದಿ ಇದೆ. ಇವರ ಜೊತೆಗೆ ಹಿಂದಿಯ ಫೇಮಸ್ ನಟ ನವಾಜುದ್ದೀನ್ ಸಿದ್ದಿಕ್ (Nawazuddin Siddique), ಖ್ಯಾತ ನಟಿ ಕಿಯಾರಾ ಅಡ್ವಾಣಿ (Kiara Advani), ಮಲಯಾಳಂ ನಟ ಶೈನ್ ಟಾಮ್ ಚಾಕೊ ಕೂಡ ಚಿತ್ರದಲ್ಲಿ ನಟಿಸಲಿದ್ದಾರಂತೆ. ಈ ಪಟ್ಟಿ ಅಧಿಕೃತವಾಗಿ ಸಿನಿಮಾ ತಂಡ ಹೇಳಿಲ್ಲವಾದರೂ, ಆಪ್ತರ ಪ್ರಕಾರ ನಿಜವಂತೆ.

    ಗೋವಾ, ಶ್ರೀಲಂಕಾ, ಲಂಡನ್ ಹೀಗೆ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಬಗ್ಗೆ ಸಾಕಷ್ಟು ಹೆಸರುಗಳು ಕೇಳಿ ಬಂದವು. ಈಗಾಗಲೇ ಗೋವಾದಲ್ಲಿ ಯಶ್ ಶೂಟಿಂಗ್ ಶೂರು ಮಾಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಯಶ್ ಆಪ್ತರ ಪ್ರಕಾರ ಇನ್ನೂ ಸಿನಿಮಾದ ಶೂಟಿಂಗ್ ನಡೆದಿಲ್ಲವಂತೆ. ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ 15ರಿಂದ ಬೆಂಗಳೂರಿನಿಂದಲೇ (Bangalore) ಮೊದಲ ಹಂತದ ಚಿತ್ರೀಕರಣ ಶುರುವಾಗಬೇಕಿತ್ತು. ಅದೂ ಆಗಿಲ್ಲ.

     

    ಬೆಂಗಳೂರಿನ ಎಚ್.ಎಂ.ಟಿ ಫ್ಯಾಕ್ಟರಿಯಲ್ಲಿ ಶೂಟಿಂಗ್ ಗಾಗಿ ಬೃಹತ್ ಸೆಟ್ ಹಾಕಲಾಗಿದೆ. ಇನ್ನೂ ಕೆಲಸಗಳು ನಡೆದಿವೆ. ಜೊತೆಗೆ ಹೆಸರಾಂತ ಕಲಾವಿದರ ಡೇಟ್ ಹೊಂದಾಣಿಕೆ ಕಾರ್ಯ ನಡೆಯುತ್ತಿದೆ. ಹಾಗಾಗಿ ಏಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಿಂದ ಚಿತ್ರೀಕರಣ ಶುರು ಮಾಡಲಿದ್ದಾರಂತೆ ಯಶ್.

  • ‘ಟಾಕ್ಸಿಕ್’ ಸಿನಿಮಾದಲ್ಲಿ ಕಿಯಾರಾ ಅಡ್ವಾನಿ: ಮೌನಕ್ಕೆ ಶರಣಾದ ಟೀಮ್

    ‘ಟಾಕ್ಸಿಕ್’ ಸಿನಿಮಾದಲ್ಲಿ ಕಿಯಾರಾ ಅಡ್ವಾನಿ: ಮೌನಕ್ಕೆ ಶರಣಾದ ಟೀಮ್

    ಟಾಕ್ಸಿಕ್ ಸಿನಿಮಾ ವಿಚಾರವಾಗಿ ದಿನಕ್ಕೊಬ್ಬರ ಹೆಸರು ತೇಲಿ ಬರುತ್ತಿದೆ. ಅದು ದೊಡ್ಡಮಟ್ಟದಲ್ಲೂ ಸುದ್ದಿ ಆಗಿತ್ತು. ಇಷ್ಟು ದಿನ ಕರೀನಾ ಕಪೂರ್, ಶ್ರುತಿ ಹಾಸನ್ ಸೇರಿದಂತೆ ನಾಲ್ಕೈದು ನಾಯಕಿಯರ ಹೆಸರು ಕೇಳಿ ಬಂದಿದ್ದವು. ಈಗ ಮತ್ತೊಂದು ಹೆಸರು ಅದಕ್ಕೆ ಪೋಣಿಸಿಕೊಂಡಿದೆ. ಅದೇ ಬಾಲಿವುಡ್ ನಟಿ ಕಿಯಾರಾ ಅಡ್ವಾನಿ (Kiara Advani). ಈ ನಟಿ ಕೂಡ ಸಿನಿಮಾದಲ್ಲಿ ಇರಲಿದ್ದಾರೆ ಎಂದು ಕೇಳಿ ಬರುತ್ತಿದೆ.

    ಬಾಲಿವುಡ್ ನಟಿ ಕರೀನಾ ಕಪೂರ್ (Kareena Kapoor) ಕೂಡ ಟಾಕ್ಸಿಕ್ ನಲ್ಲಿ  ನಟಿಸ್ತಾರಾ? ಇಂಥದ್ದೊಂದು ಪ್ರಶ್ನೆ ಹಲವು ತಿಂಗಳ ಹಿಂದೆಯೇ ಶುರುವಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಂತೆ ಕಾಣುತ್ತಿದೆ. ಬಿಟೌನ್ ನಲ್ಲಿ ಸುದ್ದಿ ಆಗಿರುವ ಪ್ರಕಾರ, ಸ್ವತಃ ಕರೀನಾ ಅವರೇ ಹೇಳಿಕೊಂಡಂತೆ ಬಾಲಿವುಡ್ (Bollywood) ಚಿತ್ರದಲ್ಲಿ ಕರೀನಾ ನಟಿಸುತ್ತಿದ್ದಾರಂತೆ. ಆದರೆ, ಆ ಸಿನಿಮಾ ಯಾವುದನ್ನು ಎನ್ನುವುದನ್ನು ಸದ್ಯಕ್ಕೆ ಹೇಳಲಾರೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.

    ಈ ಹಿಂದೆಯೇ ಸಂದರ್ಶನವೊಂದರಲ್ಲಿ ಕರೀನಾ ಅವರು, ಯಶ್ ಜೊತೆ ಮಾತ್ರ ನಟಿಸುತ್ತೇನೆ. ಪ್ರಭಾಸ್, ಅಲ್ಲು ನಕೋ ಬಾಬಾ ಎಂದಿದ್ದರು. ಯಶ್ ಜೊತೆ ನಟಿಸೋದು ಹೆವ್ವಿ ಇಷ್ಟ. ಅದೇ ಲೈಫ್ ಟೈಮ್ ಅಚೀವ್‌ಮೆಂಟು ಎಂದಿದ್ದರು. ಈ ಮೂಲಕ ತಾವು ಯಶ್ ಜೊತೆ ನಟಿಸುವ ಉತ್ಸಾಹವನ್ನೂ ತೋರಿಸಿದ್ದರು. ಆ ಕನಸು ನನಸಾದಂತೆ ಕಾಣುತ್ತಿದೆ.

    ಈ ನಡುವೆ ಯಶ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಇದೆ. ಟಾಕ್ಸಿಕ್ (Toxic) ಸಿನಿಮಾವನ್ನು ಗೀತು ಮೋಹನ್ ದಾಸ್ (Geethu Mohan Das) ನಿರ್ದೇಶನ ಮಾಡಲಿದ್ದಾರೆ ಎನ್ನುವ ವಿಷಯ ಬಿಟ್ಟರೆ, ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದ ಒಂದೇ ಒಂದು ಫೋಟೋ ಕೂಡ ಆಚೆ ಬಂದಿರಲಿಲ್ಲ. ಇದೇ ಮೊದಲ ಬಾರಿಗೆ ಯಶ್ ಮತ್ತು ಗೀತು ಅವರ ಫೋಟೋ ಸಿಕ್ಕಿದೆ. ಗೋವಾದಲ್ಲಿ ಸಿನಿಮಾದ ಶೂಟಿಂಗ್ ನಡೆದಿದ್ದು, ಆ ಫೋಟೋ ಅದು ಎನ್ನಲಾಗುತ್ತಿದೆ.

     

    ಟೆಂಪಲ್ ರನ್ ಮುಗಿಸಿಕೊಂಡು ಸದ್ಯ ಯಶ್ (Yash) ಗೋವಾದಲ್ಲಿ (Goa) ಬೀಡು ಬಿಟ್ಟಿದ್ದಾರೆ. ಗೋವಾದ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು. ಸದ್ಯ ಅವರು ಗೋವಾನಲ್ಲಿ ಬೀಡು ಬಿಟ್ಟಿರೋದು ಟಾಕ್ಸಿಕ್ ಸಿನಿಮಾದ ಶೂಟಿಂಗ್ ಗಾಗಿ ಎನ್ನುವ ವಿಚಾರ ಹರಿದಾಡುತ್ತಿತ್ತು. ಅದು ಈಗ ನಿಜವಾಗಿದೆ. ಶೂಟಿಂಗ್ ಸಮಯದ್ದು ಎನ್ನಲಾದ ಫೋಟೋ ವೈರಲ್ ಆಗಿದೆ.

  • ತಾರಾಲೋಕದಲ್ಲಿ ಕಲರ್‌ಫುಲ್ ಹೋಳಿ

    ತಾರಾಲೋಕದಲ್ಲಿ ಕಲರ್‌ಫುಲ್ ಹೋಳಿ

    ಹೋಳಿ ಹಬ್ಬವು ಹಿಂದೂಗಳ ಅತ್ಯಂತ ಪ್ರಸಿದ್ಧ ಮತ್ತು ದೇಶಾದ್ಯಂತ ಆಚರಿಸಲಾಗುವ ಹಬ್ಬಗಳಲ್ಲಿ ಒಂದಾಗಿದೆ. ಹೋಳಿಯನ್ನು ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ. ಈ ಬಾರಿ ಫಾಲ್ಗುಣ ಮಾಸದ ಹುಣ್ಣಿಮೆ ತಿಥಿಯಂದು ಅಂದರೆ ಮಾ.25ರಂದು ಹೋಳಿ ಹಬ್ಬವನ್ನು ಆಚರಿಸಲಾಗುವುದು.

    ಹೋಳಿ ಹಬ್ಬ ಭಾರತೀಯ ಸಂಸ್ಕೃತಿಯ ಸಂಕೇತ. ಹೋಳಿ ಎಂದಾಕ್ಷಣ ಎಲ್ಲರಿಗೂ ಥಟ್ ಅಂತ ನೆನಪಾಗುವುದು ಬಣ್ಣ. ಒಬ್ಬರು ಮತ್ತೊಬ್ಬರಿಗೆ ಬಣ್ಣ ಹಚ್ಚುವುದು. ಇದೀಗ ಹೋಳಿ ಸಂಭ್ರಮಕ್ಕೆ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದಾರೆ. ಸೆಲೆಬ್ರೇಶನ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

    ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಕೂಡ ತಮ್ಮ ಕೆಲಸದ ನಡುವೆಯೇ ಹೋಳಿ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಈ ಬಾರಿ ನಮ್ಮೆಲ್ಲರಿಗೂ ಕೆಲಸದ ನಡುವೆಯೇ ಹೋಳಿ. ಆದರೆ ನೀವೆಲ್ಲರೂ ಸುರಕ್ಷಿತವಾಗಿ ಹೋಳಿ ಆಡುತ್ತಾ ಎಂಜಾಯ್ ಮಾಡುತ್ತಿದ್ದೀರಿ ಎಂದು ನಾನು ಭಾವಿಸಿದ್ದೇನೆ. ಇಲ್ಲಿಂದ ನಾವು ನಿಮಗೆ ಹೋಳಿ ಹಬ್ಬದ ಶುಭಾಶಯ ತಿಳಿಸುತ್ತೇವೆ ಎಂದು ತಮ್ಮ ತಂಡದ ಜೊತೆ ಇರುವ ಫೋಟೋವನ್ನ ರಶ್ಮಿಕಾ ಮಂದಣ್ಣ ಅವರು ಶೇರ್ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by Kriti Kharbanda (@kriti.kharbanda)

    ‘ಗೂಗ್ಲಿ’ ನಟಿ ಕೃತಿ ಕರಬಂಧ (Kriti Kharabanda) ಅವರು ಮದುವೆಯ ಬಳಿಕ ಪತಿ ಪುಲ್ಕಿತ್ ಸಾಮ್ರಾಟ್ ಜೊತೆ ರೊಮ್ಯಾಂಟಿಕ್ ಆಗಿ ಹೋಳಿ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ.

    ರಿಯಲ್ ಸ್ಟಾರ್ ಉಪೇಂದ್ರ- ಪ್ರಿಯಾಂಕಾ (Priyanka Upendra) ದಂಪತಿ ಮನೆಯಲ್ಲಿ ಅದ್ಧೂರಿಯಾಗಿ ಹೋಳಿ ಸೆಲೆಬ್ರೇಶನ್ ಮಾಡಿದ್ದಾರೆ. ಉಪ್ಪಿ ಮನೆಯಲ್ಲಿ ತಾರೆಯರ ದಂಡೇ ಸೇರಿದೆ. ನಿರಂಜನ್, ಶರಣ್ಯಾ ಶೆಟ್ಟಿ, ಗುರುಕಿರಣ್ ದಂಪತಿ, ಪೂಜಾ ಲೋಕೇಶ್, ಗ್ರೀಷ್ಮಾ ಸೃಜನ್ ಲೋಕೇಶ್, ಶಿಲ್ಪಾ ಗಣೇಶ್ ಸೇರಿದಂತೆ ಅನೇಕರು ಭಾಗಿಯಾಗಿ ಸಂಭ್ರಮಿಸಿದ್ದಾರೆ.

    ಚಂದನವನದ ನಟಿ ಸುಧಾರಾಣಿ (Sudharani) ಹೋಳಿ ಹಬ್ಬವನ್ನು ಡ್ಯಾನ್ಸ್ ಮಾಡುವ ಮೂಲಕ ಸೆಲೆಬ್ರೇಟ್ ಮಾಡಿದ್ದಾರೆ. ಕಲರ್ ಕಲರ್ ‌ ಎಂಬ ಹಾಡಿಗೆ ಜಬರ್‌ದಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ನಟಿಯ ಡ್ಯಾನ್ಸ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

    ಬಾಲಿವುಡ್‌ನ ಲವ್ ಬರ್ಡ್ಸ್ ಕಿಯಾರಾ ಅಡ್ವಾಣಿ- ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra) ಜೋಡಿ ಕೂಡ ಹೋಳಿ ಹಬ್ಬವನ್ನು ಕಲರ್‌ಫುಲ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ. ಇದನ್ನೂ ಓದಿ:ಸೀಕ್ರೆಟ್ ಆಗಿ ಮದುವೆಯಾದ ನಟಿ ತಾಪ್ಸಿ ಪನ್ನು

    ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆ ಟೈಗರ್ ಶ್ರಾಫ್, ದಿಶಾ ಪಟಾನಿ (Disha Patani) ಹೋಳಿಯಲ್ಲಿ ಆಟವಾಡುತ್ತಾ ಒಬ್ಬರಿಗೊಬ್ಬರು ಬಣ್ಣ ಹಚ್ಚಿ ತರಲೆ ಮಾಡುತ್ತಾ ಸೆಲೆಬ್ರೇಟ್ ಮಾಡಿದ್ದಾರೆ. ಓಕಳಿ ವಿಡಿಯೋ ಇಂಟರ್‌ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ.

  • ಮತ್ತೆ ಒಂದಾದ ಕಾರ್ತಿಕ್ ಆರ್ಯನ್, ಕಿಯಾರಾ

    ಮತ್ತೆ ಒಂದಾದ ಕಾರ್ತಿಕ್ ಆರ್ಯನ್, ಕಿಯಾರಾ

    ಸಿನಿಮಾದಲ್ಲಿ ಸೂಪರ್ ಜೋಡಿಯಾಗಿ ಮಿಂಚಿ ಸಾಲು ಸಾಲು ಸಿನಿಮಾಗಳ ಮೂಲಕ ಮನರಂಜನೆ ನೀಡಿದವರು ಅನೇಕರಿದ್ದಾರೆ. ಆ ಸಾಲಿಗೆ ಕಾರ್ತಿಕ್ ಆರ್ಯನ್ (Karthik Aryan), ಕಿಯಾರಾ ಅಡ್ವಾಣಿ ಕೂಡ ಸೇರ್ಪಡೆಯಾಗುತ್ತಾರೆ. ಸತ್ಯಪ್ರೇಮ್ ಕೀ ಕಥಾ, ಭೂಲ್ ಭುಲೈಯಾ 2 ಸಿನಿಮಾದಲ್ಲಿ ಕಾರ್ತಿಕ್, ಕಿಯಾರಾ (Kiara Advani) ಮೋಡಿ ಮಾಡಿದ್ದರು. ಇದೀಗ 3ನೇ ಬಾರಿ ಹೊಸ ಚಿತ್ರಕ್ಕಾಗಿ ಕೈಜೋಡಿಸುತ್ತಿದ್ದಾರೆ.

    ಕಳೆದ ವರ್ಷ ಕಿಯಾರಾ ಮದುವೆಯಾದ್ಮೇಲೆ ತೆರೆಕಂಡ ‘ಸತ್ಯಪ್ರೇಮ್ ಕೀ ಕಥಾ’ ಸೂಪರ್ ಡೂಪರ್ ಹಿಟ್ ಆಗಿತ್ತು. ಕಾರ್ತಿಕ್ ಆರ್ಯನ್‌ಗೆ ನಾಯಕಿಯಾಗಿ ಕಿಯಾರಾ ನಟಿಸಿದ್ದರು. ಇದೀಗ ಮತ್ತೆ ಈ ಚಿತ್ರದ ಪಾರ್ಟ್ 2ಗೆ ಸಿದ್ಧತೆ ಮಾಡಲಾಗುತ್ತಿದೆ. ಸದ್ಯದಲ್ಲೇ ಸಿನಿಮಾಗೆ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ:ಲೋಕಸಭಾ ಚುನಾವಣೆ: ನಟಿ ರಾಧಿಕಾಗೆ ಟಿಕೆಟ್ ನೀಡಿದ ಬಿಜೆಪಿ

    ‘ಸತ್ಯಪ್ರೇಮ್ ಕೀ ಕಥಾ 2’ ಸಿನಿಮಾದಲ್ಲಿ ಹೊಸ ಬಗೆಯ ಕಥೆಯನ್ನು ತೋರಿಸಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಮೊದಲ ಭಾಗಕ್ಕೆ ನಿರ್ಮಾಣ ಮಾಡಿದವರೇ ಪಾರ್ಟ್ 2ಗೂ ಬಂಡವಾಳ ಹೂಡುತ್ತಿದ್ದಾರೆ.

    ಕಾರ್ತಿಕ್, ಕಿಯಾರಾ ನಟಿಸಿದ ಸತ್ಯಪ್ರೇಮ್ ಕೀ ಕಥಾ ಚಿತ್ರದ ಮುಂದುವರೆದ ಭಾಗನಾ? ಅಥವಾ ಈ ಜೋಡಿ ಇಟ್ಟುಕೊಂಡು ಹೊಸ ಕಥೆಯನ್ನು ತೋರಿಸಲು ಚಿತ್ರತಂಡ ಯೋಚಿಸಿದ್ಯಾ? ಎಂಬುದರ ಬಗ್ಗೆ ಖಾತ್ರಿಯಾಗಿಲ್ಲ. ಸದ್ಯ ಕಾರ್ತಿಕ್, ಕಿಯಾರಾ ನಟಿಸುತ್ತಿರುವ ಬಗ್ಗೆ ಅಷ್ಟೇ ರಿವೀಲ್ ಆಗಿದೆ.

    ಕಾರ್ತಿಕ್, ಕಿಯಾರಾ ಜೋಡಿಯ ಹೊಸ ಕಥೆ ನೋಡುಗರಿಗೆ ಈ ಬಾರಿಯೂ ಮನಮುಟ್ಟುತ್ತಾ? ಪ್ರೇಕ್ಷಕ ಪ್ರಭುಗಳು ಏನು ಹೇಳ್ತಾರೆ ಕಾಯಬೇಕಿದೆ.

  • Don 3: ರಣ್‌ವೀರ್ ಜೊತೆ ರೊಮ್ಯಾನ್ಸ್ ಮಾಡಲು ದುಬಾರಿ ಸಂಭಾವನೆ ಬೇಡಿಕೆಯಿಟ್ಟ ಕಿಯಾರಾ

    Don 3: ರಣ್‌ವೀರ್ ಜೊತೆ ರೊಮ್ಯಾನ್ಸ್ ಮಾಡಲು ದುಬಾರಿ ಸಂಭಾವನೆ ಬೇಡಿಕೆಯಿಟ್ಟ ಕಿಯಾರಾ

    ಬಾಲಿವುಡ್ ನಟಿ ಕಿಯಾರಾ ಅಡ್ವಾಣಿಗೆ (Kiara Advani) ಮದುವೆಯಾದ್ಮೇಲೂ ಬಾಲಿವುಡ್‌ನಲ್ಲಿ ಭಾರೀ ಬೇಡಿಕೆಯಿದೆ. ಮದುವೆಯ ಬಳಿಕ ಮತ್ತಷ್ಟು ಹಾಟ್ ಆಗಿ ನಟಿ ಕಾಣಿಸಿಕೊಳ್ತಿದ್ದಾರೆ. ಇದೀಗ ‘ಡಾನ್ 3’ (Don 3) ಚಿತ್ರದಲ್ಲಿ ರಣ್‌ವೀರ್ ಸಿಂಗ್ (Ranveer Singh) ಜೊತೆ ನಟಿಸಲು 50%ರಷ್ಟು ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ನಟಿಯ ಸಂಭಾವನೆ ಕೇಳಿ ಬಾಲಿವುಡ್ ಮಂದಿ ದಂಗಾಗಿದ್ದಾರೆ.

    Kiara Advani

    ಫರ್ಹಾನ್ ಅಖ್ತರ್ ನಿರ್ದೇಶನದ ‘ಡಾನ್ 3’ ಚಿತ್ರದಲ್ಲಿ ರಣ್‌ವೀರ್ ಸಿಂಗ್ ಹೀರೋ ಆಗಿ ನಟಿಸಲಿದ್ದಾರೆ. ಅವರಿಗೆ ಕಿಯಾರಾ ಅಡ್ವಾಣಿ ಹೀರೋಯಿನ್ ಆಗಿ ನಟಿಸುವ ಚಾನ್ಸ್ ಸಿಕ್ಕಿದೆ. ಈ ಸಿನಿಮಾದಲ್ಲಿ ನಟಿಸಲು ಕಿಯಾರಾ, 13 ಕೋಟಿ ರೂ. ಸಂಭಾವನೆಗೆ ಬೇಡಿಕೆಯಿಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:ಲೂಸ್ ಮಾದ ಯೋಗಿ ನಟನೆಯ ‘ರೋಸಿ’ ಸಿನಿಮಾದಲ್ಲಿ ಒರಟ ಪ್ರಶಾಂತ್

    Kiara Advani

    ಕಿಯಾರಾ ನಟಿಸಿದ ಎಂ.ಎಸ್ ಧೋನಿ, ಶೇರ್ಷಾ, ಕಬೀರ್ ಸಿಂಗ್, ಭೂಲ್ ಭುಲಯ್ಯ 2, ಚಿತ್ರಗಳು ಸೂಪರ್ ಹಿಟ್ ಆಗಿದೆ. ಈ ಹಿಂದೆ 4ರಿಂದ 5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದ ನಟಿ ಈಗ ಡಾನ್ ಪಾರ್ಟ್ 3ಗೆ 13 ಕೋಟಿ ರೂ. ಡಿಮ್ಯಾಂಡ್ ಮಾಡಿ ಸಂಭಾವನೆ ಕೇಳಿದ್ದಾರೆ ಎನ್ನಲಾಗುತ್ತಿದೆ. ಆ ಪಾತ್ರಕ್ಕೆ ಕಿಯಾರಾನೇ ಸೂಕ್ತ ಎಂದು ನಟಿಯ ಬೇಡಿಕೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರಂತೆ ಚಿತ್ರತಂಡ.

    ‘ಡಾನ್ 3’ ಸಿನಿಮಾದಲ್ಲಿ ಸಾಹಸ ದೃಶ್ಯಗಳು ಹೆಚ್ಚಾಗಿರಲಿದೆ. ಚಿತ್ರದ ಆ್ಯಕ್ಷನ್ ದೃಶ್ಯಗಳಿಗಾಗಿ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ. ಎಂದೂ ನಟಿಸಿರದ ಪಾತ್ರದಲ್ಲಿ ಕಿಯಾರಾ ನಟಿಸುತ್ತಿದ್ದಾರೆ. ರಣ್‌ವೀರ್ ಸಿಂಗ್- ಕಿಯಾರಾ ರೊಮ್ಯಾನ್ಸ್ ನೋಡಲು ಫ್ಯಾನ್ಸ್ ಎದುರು ನೋಡ್ತಿದ್ದಾರೆ.

  • ಬೆಂಗಳೂರಿನ ರಸ್ತೆಬದಿಯಲ್ಲಿ ತಿಂಡಿ ಸವಿದ ಕಾರ್ತಿಕ್ ಆರ್ಯನ್

    ಬೆಂಗಳೂರಿನ ರಸ್ತೆಬದಿಯಲ್ಲಿ ತಿಂಡಿ ಸವಿದ ಕಾರ್ತಿಕ್ ಆರ್ಯನ್

    ಬಾಲಿವುಡ್ ಸ್ಟಾರ್ ನಟ ಕಾರ್ತಿಕ್ ಆರ್ಯನ್ (Karthik Aryan) ಅವರು ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಸಿಕ್ಕ ಬೆನ್ನಲ್ಲೇ ಬೆಂಗಳೂರಿಗೆ ಬಂದಿದ್ದಾರೆ. ರಸ್ತೆಬದಿಯಲ್ಲಿ ಸ್ನೇಹಿತರ ಜೊತೆ ಕಾರ್ತಿಕ್ ಆರ್ಯನ್ ರುಚಿಯಾದ ತಿಂಡಿ ಸವಿದಿದ್ದಾರೆ. ಕನ್ನಡದಲ್ಲೇ ತಮ್ಮದೇ ನಟ ಆರ್ಡರ್ ಮಾಡಿರೋದು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.

    ಕಾರ್ತಿಕ್ ಆರ್ಯನ್ ಬೆಂಗಳೂರಿಗೆ ಆಗಮಿಸಿದ್ದು, ನಗರದ ಪ್ರಮುಖ ಹೋಟೆಲ್‌ಗಳಿಗೆ ಭೇಟಿ ನೀಡಿ ಊಟದ ಸವಿ ಸವಿದಿದ್ದಾರೆ. ದೇಶವ್ಯಾಪಿ ಜನಪ್ರಿಯಗೊಂಡಿರುವ ‘ದಿ ರಾಮೇಶ್ವರಮ್’ ಕೆಫೆಗೆ ಭೇಟಿ ನೀಡಿದ ನಟ ಕಾರ್ತಿಕ್ ಆರ್ಯನ್ ಮತ್ತು ಗೆಳೆಯರು, ದೋಸೆ, ಇಡ್ಲಿ ಇನ್ನಿತರೆ ತಿಂಡಿಗಳನ್ನು ತಿಂದಿದ್ದಾರೆ. ಜೊತೆಗೆ ಫಿಲ್ಟರ್ ಕಾಫಿ ಕುಡಿದಿದ್ದಾರೆ. ವಿಶೇಷವೆಂದರೆ ‘ದಿ ರಾಮೇಶ್ವರನ್ ಕೆಫೆ’ಯಲ್ಲಿ ನಟ ಕಾರ್ತಿಕ್ ಆರ್ಯನ್ ಕನ್ನಡದಲ್ಲಿ ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ.

     

    View this post on Instagram

     

    A post shared by KARTIK AARYAN (@kartikaaryan)

    ‘ಪ್ಯಾರ್ ಕಾ ಪಂಚನಾಮ’ ಚಿತ್ರದ ಮೂಲಕ ಬಾಲಿವುಡ್‌ಗೆ ಕಾರ್ತಿಕ್ ಆರ್ಯನ್ ಎಂಟ್ರಿ ಕೊಟ್ಟರು. ಆಕಾಶ ವಾಣಿ, ಧಮಾಕಾ, ಲವ್ ಆಜ್ ಕಲ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಇದನ್ನೂ ಓದಿ:ಎದೆಯ ಗೀಟು ಕಾಣುವಂತೆ ಹಾಟ್ ಆಗಿ ಕಾಣಿಸಿಕೊಂಡ ಸಾರಾ ಅಣ್ಣಯ್ಯ

    ಬೂಲ್ ಭುಲಯ್ಯ, ‘ಸತ್ಯಪ್ರೇಮ್ ಕೀ ಕಥಾ’ ಕಿಯಾರಾ ಅಡ್ವಾಣಿ (Kiara Advani) ಜೊತೆ ಕಾರ್ತಿಕ್ ರೊಮ್ಯಾನ್ಸ್ ಮಾಡಿದ್ದರು. ಈ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಕಿಯಾರಾ- ಕಾರ್ತಿಕ್ ಜೋಡಿ ಮೋಡಿ ಮಾಡಿತ್ತು.

    ‘ಬೂಲ್ ಭುಲಯ್ಯ’ ಪಾರ್ಟ್ 2ಗೆ ಸಿದ್ಧತೆ ನಡೆಯುತ್ತಿದೆ. ತೃಪ್ತಿ ದಿಮ್ರಿ ಜೊತೆ ಕಾರ್ತಿಕ್ ಆರ್ಯನ್ ಹೊಸ ಸಿನಿಮಾ ಮಾಡುತ್ತಿದ್ದಾರೆ. ಒಂದಿಷ್ಟು ಸಿನಿಮಾಗಳು ಮಾತುಕತೆ ಹಂತದಲ್ಲಿದೆ.

  • ‘ಲಿಪ್ ಲಾಕ್’ ಮಾಡಿ ಗಂಡನಿಗೆ ವಿಶ್ ಮಾಡಿದ ನಟಿ ಕಿಯಾರಾ

    ‘ಲಿಪ್ ಲಾಕ್’ ಮಾಡಿ ಗಂಡನಿಗೆ ವಿಶ್ ಮಾಡಿದ ನಟಿ ಕಿಯಾರಾ

    ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ, ಪತಿಯ ಹುಟ್ಟು ಹಬ್ಬಕ್ಕೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ಪತಿಯೊಂದಿಗೆ ಲಿಪ್ ಲಾಕ್ ಮಾಡಿಕೊಂಡು ಶುಭಾಶಯ ತಿಳಿಸಿದ್ದಾರೆ. ಈ ಹಿಂದೆ ತಮ್ಮ ಹುಟ್ಟುಹಬ್ಬವನ್ನು ಪತಿ ಸಿದ್ಧಾರ್ಥ್ (Siddarth Malhotra) ಜೊತೆ ಥೈಲ್ಯಾಂಡ್‌ನಲ್ಲಿ ಆಚರಿಸಿಕೊಂಡಿದ್ದವರು, ಪತಿಯ ಹುಟ್ಟು ಹಬ್ಬವನ್ನು ಸಿಂಪಲ್ ಆಗಿ ಆಚರಿಸಿದ್ದಾರೆ. ಲಿಪ್ ಲಾಕ್ ಕಾರಣದಿಂದಾಗಿ ಸುದ್ದಿ ಆಗಿದ್ದಾರೆ.

    Kiara Advani

    ಈ ನಡುವೆ ವೈಯಕ್ತಿಕ ಕಾರಣದಿಂದಾಗಿಯೂ ಕಿಯಾರಾ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ನಾನಾ ರೀತಿಯ ಉತ್ತರಗಳನ್ನೂ ಅವರು ಕೊಡ್ತಾರೆ. ಮದುವೆಯಾದ್ಮೇಲೆ ಸಿದ್ಧಾರ್ಥ್‌ಗಾಗಿ ತಯಾರಿಸಿದ ಮೊದಲ ಅಡುಗೆ ಯಾವುದು? ಎಂಬ ಪ್ರಶ್ನೆಗೆ ಅಚ್ಚರಿಯ ಹೇಳಿಕೆಯನ್ನ ನಟಿ ನೀಡಿದ್ದಾರೆ.

    ಮದುವೆ ಆದ ಬಳಿಕ ನೀವು ಮಾಡಿದ ಮೊದಲ ತಿನಿಸು ಯಾವುದು ಎಂದು ಕಿಯಾರಾಗೆ ಕೇಳಲಾಯಿತು. ಇದಕ್ಕೆ ಕಿಯಾರಾ ಅವರು ಉತ್ತರಿಸಿದ್ದಾರೆ. ಇಲ್ಲಿಯವರೆಗೆ ನಾನು ಏನನ್ನೂ ಮಾಡಿಲ್ಲ. ಬಹುಶಃ ನೀರನ್ನು ಬಿಸಿ ಮಾಡಿರಬಹುದು ಅಷ್ಟೇ. ನನ್ನ ಪತಿಗೆ ಅಡುಗೆ ಮಾಡುವುದು ಎಂದರೆ ಇಷ್ಟ. ಅವರು ಯಾವಾಗಲೂ ಏನಾದರೂ ಮಾಡುತ್ತಲೇ ಇರುತ್ತಾರೆ. ನಾನು ಕೂಡ ಅದನ್ನು ತಿಂದು ಎಂಜಾಯ್ ಮಾಡುತ್ತೇನೆ ಎಂದಿದ್ದಾರೆ.

    ಸಿದ್ದಾರ್ಥ್ ಅವರು ವಿಶೇಷವಾಗಿ ತಯಾರಿಸುವ ಪದಾರ್ಥ ಯಾವುದು ಎಂದು ಕೇಳಲಾಯಿತು. ಇದಕ್ಕೆ ಕಿಯಾರಾ ಬ್ರೆಡ್ ಎನ್ನುವ ಉತ್ತರ ನೀಡಿದ್ದಾರೆ. ಸಿದ್ದಾರ್ಥ್ ಅವರು ಬ್ರೆಡ್‌ನ ಚೆನ್ನಾಗಿ ಮಾಡುತ್ತಾರೆ. ಅದನ್ನು ಮಾಡೋದು ನಿಜಕ್ಕೂ ಕಠಿಣ ಸವಾಲು. ಆದರೆ, ಸಿದ್ದಾರ್ಥ್ ಬ್ರೆಡ್‌ನ ಚೆನ್ನಾಗಿ ಸಿದ್ಧಪಡಿಸುತ್ತಾರೆ ಎಂದು ಕಿಯಾರಾ ಪತಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

     

    ಸಿದ್ಧಾರ್ಥ್- ಕಿಯಾರಾ ಅಡ್ವಾಣಿ ಈ ವರ್ಷ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟರು. ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಿದ್ದರು. ಇಬ್ಬರು ಜೊತೆಯಾಗಿ ಖುಷಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಮದುವೆ ಬಳಿಕ ಕಿಯಾರಾ ಮತ್ತಷ್ಟು ಬೋಲ್ಡ್‌ ಆಗಿ ಕಾಣಿಸಿಕೊಳ್ತಿದ್ದಾರೆ.

  • ಎರಡು ಪಾರ್ಟ್‌ಗಳಲ್ಲಿ ಬರಲಿದೆ ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’

    ಎರಡು ಪಾರ್ಟ್‌ಗಳಲ್ಲಿ ಬರಲಿದೆ ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’

    ಚಿತ್ರರಂಗದಲ್ಲಿ ಸೀಕ್ವೆಲ್‌ಗಳ ಹಾವಳಿ ಜಾಸ್ತಿಯಾಗಿದೆ. ಬಾಹುಬಲಿ, ಕೆಜಿಎಫ್, ಪುಷ್ಪ, ಸಲಾರ್ (Salaar) ಎರಡು ಪಾರ್ಟ್‌ಗಳಲ್ಲಿ ಬರುತ್ತಿದೆ. ಅದರಂತೆಯೇ ರಾಮ್ ಚರಣ್ (Ram Charan) ನಟನೆಯ ‘ಗೇಮ್ ಜೇಂಜರ್’ (Game Changer) ಸಿನಿಮಾ ಎರಡು ಭಾಗಗಳಾಗಿ ತೆರೆಯ ಮೇಲೆ ಅಬ್ಬರಿಸಲಿದೆ. ಸದ್ಯ ಈ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ:ಡಿ.17ಕ್ಕೆ ಶ್ರೀಮುರಳಿ ನಟನೆಯ ‘ಬಘೀರ’ ಸಿನಿಮಾದ ಟೀಸರ್

    ‘ಆರ್‌ಆರ್‌ಆರ್’ (RRR) ಸಿನಿಮಾದ ಸಕ್ಸಸ್ ನಂತರ ಎಸ್. ಶಂಕರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಗೇಮ್ ಚೇಂಜರ್’ ಸಿನಿಮಾದಲ್ಲಿ ರಾಮ್ ಚರಣ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಇತ್ತೀಚೆಗೆ ಮೈಸೂರಿನಲ್ಲಿ ನಡೆದಿತ್ತು. ಆದರೆ ಸಿನಿಮಾಗೂ ಮೈಸೂರಿಗೂ ಏನು ಲಿಂಕ್ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲವಿದೆ.

    ‘ಬಾಹುಬಲಿ 2’ ರಿಲೀಸ್ ಆದ ಬಳಿಕ ಎರಡು ಭಾಗಗಳಲ್ಲಿ ಕಥೆ ಹೇಳುವ ಟ್ರೆಂಡ್ ಜೋರಾಗಿದೆ. ಇದೀಗ ಬಹುತೇಕ ಸ್ಟಾರ್ ನಟರ ಸಿನಿಮಾಗಳು ಎರಡು ಭಾಗಗಳಾಗಿ ಬರುತ್ತಿವೆ. ಹಾಗಾಗಿ ‘ಗೇಮ್ ಚೇಂಜರ್’ ನಿರ್ಮಾಪಕ ದಿಲ್ ರಾಜು ಎರಡು ಪಾರ್ಟ್‌ಗಳಲ್ಲಿ ಸಿನಿಮಾ ತರೋದಕ್ಕೆ ಪ್ಲ್ಯಾನ್ ಮಾಡಿದ್ದಾರೆ.

    ಈ ಸಿನಿಮಾ ಚುನಾವಣೆಗೆ ಸಂಬಂಧಿಸಿದ್ದು, ರಾಮ್ ಚರಣ್ ಐಎಎಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ನಾಯಕಿಯಾಗಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ.

  • ‘ಗೇಮ್ ಚೇಂಜರ್’ ಚಿತ್ರೀಕರಣದ ರಾಮ್ ಚರಣ್, ಕಿಯಾರಾ ಫೋಟೋ ಲೀಕ್

    ‘ಗೇಮ್ ಚೇಂಜರ್’ ಚಿತ್ರೀಕರಣದ ರಾಮ್ ಚರಣ್, ಕಿಯಾರಾ ಫೋಟೋ ಲೀಕ್

    ‘ಆರ್‌ಆರ್‌ಆರ್’ (RRR) ಸಿನಿಮಾದ ಸಕ್ಸಸ್ ನಂತರ ‘ಗೇಮ್ ಚೇಂಜರ್’ (Game Changer) ಸಿನಿಮಾವನ್ನ ರಾಮ್ ಚರಣ್ ಕೈಗೆತ್ತಿಕೊಂಡಿದ್ದಾರೆ. ಚಿತ್ರೀಕರಣ ಯಾವುದೇ ಫೋಟೋ ಲೀಕ್ ಆಗದಂತೆ ನೋಡಿಕೊಂಡಿದ್ರು ಕೂಡ ಎಲ್ಲವೂ ವ್ಯರ್ಥವಾಗಿದೆ. ಚರಣ್- ಕಿಯಾರಾ ಲುಕ್ ರಿವೀಲ್ ಆಗಿದೆ.

    ಡೈರೆಕ್ಟರ್ ಶಂಕರ್ (Shankar) ನಿರ್ದೇಶನದ ‘ಗೇಮ್ ಚೇಂಜರ್’ನಲ್ಲಿ(Game Changer) ಕಿಯಾರಾ ಅಡ್ವಾಣಿ- ರಾಮ್ ಚರಣ್ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಸೋರಿಕೆ ಕಾಟ ಶುರುವಾಗಿದೆ. ಸಾಕಷ್ಟು ಎಚ್ಚರಿಕೆ ವಹಿಸಿದ ಹೊರತಾಗಿಯೂ ಸಿನಿಮಾ ಸೆಟ್‌ನ ಫೋಟೋ ಲೀಕ್ ಆಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ಆಗುತ್ತಿದೆ.

    ಸಮುದ್ರ ತೀರದಲ್ಲಿ ರಾಮ್ ಚರಣ್- ಕಿಯಾರಾ(Kiara Advani) ನಟಿಸುತ್ತಿರುವ ದೃಶ್ಯ ಲೀಕ್ ಆಗಿದೆ. ಇಬ್ಬರೂ ಕಪ್ಪು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಡಾಲಿ ಹುಟ್ಟುಹಬ್ಬಕ್ಕೆ ಖಡಕ್ ರೊಟ್ಟಿ, ಪುಂಡೆಪಲ್ಯೆ ಮೆನು

    ಈ ಹಿಂದೆ ‘ವಿನಯಾ ವಿಧೇಯ ರಾಮ’ ಸಿನಿಮಾದಲ್ಲಿ ಚರಣ್-ಕಿಯಾರಾ ಜೋಡಿಯಾಗಿ ನಟಿಸಿದ್ದರು. ಇದೀಗ ಗೇಮ್ ಚೇಂಜರ್‌ಗಾಗಿ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಮುಂದಿನ ವರ್ಷ ಹೊಸತರಲ್ಲಿ ಚಿತ್ರ ತೆರೆಗೆ ಬರಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]