Tag: Kiara Advani

  • ಕಿಯಾರಾ ಜೊತೆ ರಾಮ್ ಚರಣ್ ರೊಮ್ಯಾನ್ಸ್- ‘ಗೇಮ್ ಚೇಂಜರ್’ ಸಾಂಗ್ ಔಟ್

    ಕಿಯಾರಾ ಜೊತೆ ರಾಮ್ ಚರಣ್ ರೊಮ್ಯಾನ್ಸ್- ‘ಗೇಮ್ ಚೇಂಜರ್’ ಸಾಂಗ್ ಔಟ್

    ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ (Kiara Advani) ಮತ್ತು ರಾಮ್ ಚರಣ್ (Ram Charan) ನಟನೆಯ ‘ಗೇಮ್ ಚೇಂಜರ್’ (Game Changer) ಸಿನಿಮಾದ ರೊಮ್ಯಾಂಟಿಕ್ ಸಾಂಗ್‌ವೊಂದು ರಿಲೀಸ್ ಆಗಿದೆ. ಕಿಯಾರಾ ಜೊತೆಗಿನ ರಾಮ್ ಚರಣ್ ಲವ್ಲಿ ಸಾಂಗ್ ನೋಡಿ ಫ್ಯಾನ್ಸ್‌ಗೆ ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ:ಧನುಷ್, ಐಶ್ವರ್ಯಾಗೆ ಡಿವೋರ್ಸ್ ಮಂಜೂರು ಮಾಡಿದ ಕೋರ್ಟ್- 18 ವರ್ಷಗಳ ದಾಂಪತ್ಯ ಅಂತ್ಯ

    ‘ಗೇಮ್ ಚೇಂಜರ್’ ಸಿನಿಮಾದ ಹಾಡಿನಲ್ಲಿ ಕಿಯಾರಾ, ರಾಮ್ ಚರಣ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಕಲರ್‌ಫುಲ್ ಬ್ಯಾಕ್ ಗ್ರೌಂಡ್‌ನಲ್ಲಿ ಈ ಜೋಡಿ ಕುಣಿದು ಕುಪ್ಪಳಿಸಿದೆ. ಗಾಯಕಿ ಶ್ರೇಯಾ ಘೋಷಾಲ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಸದ್ಯ ಈ ಹಾಡು ನೋಡಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

     

    View this post on Instagram

     

    A post shared by Thirunavukarasu (@dop_tirru)

    ಈ ಚಿತ್ರಕ್ಕೆ ಶಂಕರ್ ಎಸ್. ಆ್ಯಕ್ಷನ್ ಕಟ್ ಹೇಳಿದ್ದಾರೆ. ಮುಂದಿನ ವರ್ಷ ಜ.10ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ರಾಮ್ ಮತ್ತು ಕಿಯಾರಾ ಎರಡನೇ ಬಾರಿ ಈ ಚಿತ್ರಕ್ಕಾಗಿ ಒಂದಾಗಿದ್ದಾರೆ.

  • ‘ಶೇರ್ಷಾ’ ಬಳಿಕ ಮತ್ತೊಂದು ಲವ್ ಸ್ಟೋರಿ ಸಿನಿಮಾದಲ್ಲಿ ಸಿದ್ಧಾರ್ಥ್, ಕಿಯಾರಾ?

    ‘ಶೇರ್ಷಾ’ ಬಳಿಕ ಮತ್ತೊಂದು ಲವ್ ಸ್ಟೋರಿ ಸಿನಿಮಾದಲ್ಲಿ ಸಿದ್ಧಾರ್ಥ್, ಕಿಯಾರಾ?

    ಟ ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra) ಮತ್ತು ಕಿಯಾರಾ (Kiara Advani) ಮತ್ತೊಮ್ಮೆ ತೆರೆಯ ಮೇಲೆ ಜೋಡಿಯಾಗಿ ನಟಿಸಲು ಸಜ್ಜಾಗಿದ್ದಾರೆ. ಲವ್ ಸ್ಟೋರಿ ಒಳಗೊಂಡ ಚಿತ್ರವನ್ನು ಒಪ್ಪಿದ್ದಾರೆ ಎನ್ನಲಾದ ಸುದ್ದಿಯೊಂದು ಬಿಟೌನ್‌ನಲ್ಲಿ ಹರಿದಾಡುತ್ತಿದ್ದಾರೆ. ಇದನ್ನೂ ಓದಿ:ಸೂಚನ್‌ ಶೆಟ್ಟಿ ನಟನೆಯ ‘ಒಂದು ತಾತ್ಕಾಲಿಕ ಪಯಣ’ ಚಿತ್ರದ ಟ್ರೈಲರ್‌ ಔಟ್

    ಸೂಪರ್ ಹಿಟ್ ‘ಶೇರ್ಷಾ’ (Shershaah) ಸಿನಿಮಾದಿಂದಲೇ ರಿಯಲ್ ಲೈಫ್‌ನಲ್ಲೂ ಸಿದ್ಧಾರ್ಥ್ ಮತ್ತು ಕಿಯಾರಾ ಪ್ರೀತಿಸಿ ಮದುವೆಯಾದರು. ಈ ಸಿನಿಮಾ ಬಳಿಕ ಮತ್ತೆ ಯಾವಾಗ ಜೊತೆಯಾಗಿ ನಟಿಸುತ್ತಾರೆ ಎಂಬ ಅಭಿಮಾನಿಗಳ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

    ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮ್ಯಾಡಾಕ್ ಫಿಲ್ಮ್ ಇದೀಗ ಸಿದ್ಧಾರ್ಥ್ ಮತ್ತು ಕಿಯಾರಾ ಜೊತೆ ಹೊಸ ಸಿನಿಮಾ ಮಾಡಲು ಚರ್ಚಿಸಿದ್ದಾರೆ ಎನ್ನಲಾಗಿದೆ. ಲವ್ ಸ್ಟೋರಿ ಸಿನಿಮಾ ಆಗಿದ್ರೂ ಸಾಕಷ್ಟು ಟ್ವಿಸ್ಟ್‌ಗಳಿರುವಂತಹ ವಿಭಿನ್ನ ಕಥೆಗೆ ಈ ಜೋಡಿಯೇ ಸರಿ ಎಂದು ನಿರ್ಮಾಣ ಸಂಸ್ಥೆ ಸಿದ್ಧಾರ್ಥ್ ದಂಪತಿಯನ್ನು ಅಪ್ರೋಚ್ ಮಾಡಿದೆ ಎನ್ನಲಾಗಿದೆ. ಹಾಗಾದ್ರೆ ಸದ್ಯ ಹರಿದಾಡುತ್ತಿರುವ ಈ ಸುದ್ದಿ ಅದೆಷ್ಟರ ಮಟ್ಟಿಗೆ ನಿಜ? ಕಾದುನೋಡಬೇಕಿದೆ.

    ಅಂದಹಾಗೆ, 2021ರಲ್ಲಿ ತೆರೆಕಂಡ ‘ಶೇರ್ಷಾ’ ಸಿನಿಮಾದಲ್ಲಿ ಸಿದ್ಧಾರ್ಥ್ ಮತ್ತು ಕಿಯಾರಾ ಮೊದಲ ಬಾರಿಗೆ ಜೋಡಿಯಾಗಿ ನಟಿಸಿದರು. ಈ ಚಿತ್ರಕ್ಕೆ ವಿಷ್ಣುವರ್ಧನ್ ಆ್ಯಕ್ಷನ್ ಕಟ್ ಹೇಳಿದ್ದರು.

  • ಯಶ್ ಜೊತೆ ‘ಟಾಕ್ಸಿಕ್’ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಕಿಯಾರಾ- ಯಾವಾಗ?

    ಯಶ್ ಜೊತೆ ‘ಟಾಕ್ಸಿಕ್’ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಕಿಯಾರಾ- ಯಾವಾಗ?

    ನ್ಯಾಷನಲ್ ಸ್ಟಾರ್ ಯಶ್‌ (Yash) ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾಗಾಗಿ ಅದರ ಅಪ್‌ಡೇಟ್‌ಗಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಇದೀಗ ಈ ಸಿನಿಮಾದ ಬಗ್ಗೆ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಯಶ್ ಜೊತೆ ಕಿಯಾರಾ ಅಡ್ವಾಣಿ `ಟಾಕ್ಸಿಕ್’ ತಂಡ ಸೇರಿಕೊಳ್ತಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಇತ್ತೀಚೆಗೆ ನಯನತಾರಾ ಅವರು ಬೆಂಗಳೂರಿನಲ್ಲಿ ‘ಟಾಕ್ಸಿಕ್’ ಚಿತ್ರತಂಡಕ್ಕೆ ಸಾಥ್ ಕೊಟ್ಟಿರುವ ಬಗ್ಗೆ ವರದಿ ಆಗಿತ್ತು. ಈಗ ಮುಂದಿನ ಶೆಡ್ಯೂಲ್ ಶೂಟಿಂಗ್ ಬಗ್ಗೆ ಸುಳಿವು ಸಿಕ್ಕಿದೆ. ಅಕ್ಟೋಬರ್ ಅಂತ್ಯದಲ್ಲಿ ಯಶ್ ಜೊತೆ ಕಿಯಾರಾ (Kiara Advani) ಭಾಗದ ಚಿತ್ರೀಕರಣ ಮುಂಬೈನಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ:BBK 11: ಬಿಗ್ ಬಾಸ್ ಮನೆಯಿಂದ ಯಮುನಾ ಔಟ್

    45 ದಿನಗಳ ಕಾಲ ಸುದೀರ್ಘವಾಗಿ ಚಿತ್ರೀಕರಣ ನಡೆಯಲಿದ್ದು, ‘ಟಾಕ್ಸಿಕ್’ (Toxic Film) ಚಿತ್ರದ ಜೋಡಿಗಳಾದ ಯಶ್ ಮತ್ತು ಕಿಯಾರಾ ಭಾಗದ ರೊಮ್ಯಾಂಟಿಕ್ ಸೀನ್‌ಗಳ ಶೂಟಿಂಗ್ ಮಾಡಲಿದ್ದಾರೆ ಎನ್ನಲಾಗಿದೆ. ಇನ್ನೂ ಆಗಸ್ಟ್ 8ರಂದು ಸರಳವಾಗಿ ಚಿತ್ರಕ್ಕೆ ಚಾಲನೆ ನೀಡಿದ್ದ ಯಶ್ ಅವರು ತಾರಾಗಣದ ಬಗ್ಗೆ ಚಿತ್ರೀಕರಣದ ಪ್ಲ್ಯಾನಿಂಗ್ ಬಗ್ಗೆ ಎಲ್ಲೂ ಗುಟ್ಟು ಬಿಟ್ಟು ಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಅವರು ಚಿತ್ರದ ಬಗ್ಗೆ ಮಾಹಿತಿ ನೀಡ್ತಾರಾ? ಕಾದುನೋಡಬೇಕಿದೆ.

    ಇನ್ನೂ ‘ಕೆವಿಎನ್ ಸಂಸ್ಥೆ’ ಜೊತೆ ಯಶ್ ಕೂಡ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಮುಂದಿನ ವರ್ಷ ಏಪ್ರಿಲ್‌ನಲ್ಲಿ ಸಿನಿಮಾ ರಿಲೀಸ್‌ ಮಾಡಲಿದ್ದಾರೆ. ಇನ್ನೂ ಮೊದಲ ಬಾರಿಗೆ ಯಶ್‌ ಜೊತೆ ಕಿಯಾರಾ ಅಡ್ವಾಣಿ ನಟಿಸುತ್ತಿರುವ ಕಾರಣ, ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಯಿದೆ.

  • ‘ವಾರ್ 2’ ಸೆಟ್‌ನ ಫೋಟೋ ಹಂಚಿಕೊಂಡ ಕಿಯಾರಾ ಅಡ್ವಾಣಿ

    ‘ವಾರ್ 2’ ಸೆಟ್‌ನ ಫೋಟೋ ಹಂಚಿಕೊಂಡ ಕಿಯಾರಾ ಅಡ್ವಾಣಿ

    ಹೃತಿಕ್ ರೋಷನ್ (Hrithik Roshan), ಜ್ಯೂ.ಎನ್‌ಟಿಆರ್ ನಟನೆಯ ವಾರ್ 2 ಸಿನಿಮಾದ ಶೂಟಿಂಗ್ ವಿದೇಶದಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಇದೀಗ ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ (Kiara Advani) ‘ವಾರ್ 2’ ಸೆಟ್‌ನ ಫೋಟೋ ಹಂಚಿಕೊಂಡಿದ್ದಾರೆ.

    ಅಯಾನ್ ಮುಖರ್ಜಿ ಆ್ಯಕ್ಷನ್ ಕಟ್ ಹೇಳ್ತಿರುವ ‘ವಾರ್ 2’ (War 2) ಚಿತ್ರಕ್ಕೆ ಕಿಯಾರಾ ನಾಯಕಿಯಾಗಿದ್ದಾರೆ. ಚಿತ್ರೀಕರಣದಲ್ಲಿ ಭಾಗಿಯಾಗುರುವ ನಟಿ ಡೈರೆಕ್ಟರ್ ಅಯಾನ್ ಜೊತೆ ಕುಳಿತಿರುವ ಸೆಟ್‌ನ ಫೋಟೋ ಶೇರ್ ಮಾಡಿದ್ದಾರೆ. ಅದಕ್ಕೆ ಹೋಲಿ ಸನ್‌ಡೇ ಎಂದು ಅಡಿಬರಹ ನೀಡಿದ್ದಾರೆ. ಇದನ್ನೂ ಓದಿ:ದೊಡ್ಮನೆಯ ಮೊದಲ ಎಲಿಮಿನೇಷನ್- ಪ್ರಬಲ ಸ್ಪರ್ಧಿಯೇ ಔಟ್?

    ಅಂದಹಾಗೆ, ಇತ್ತೀಚೆಗೆ ಗ್ರೀಸ್‌ನಲ್ಲಿ ಹೃತಿಕ್ ರೋಷನ್ (Hrithik Roshan) ಮತ್ತು ಕಿಯಾರಾ (Kiara Advani) ರೊಮ್ಯಾಂಟಿಕ್ ಸಾಂಗ್ ಶೂಟ್ ನಡೆಯುತ್ತಿದೆ. ಅದರ ಕೆಲ ತುಣುಕುಗಳನ್ನು ಕೆಲ ಕಿಡಿಗೇಡಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದರು. ಚಿತ್ರತಂಡ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

    ಇನ್ನೂ ಮೊದಲ ಬಾರಿಗೆ ಹೃತಿಕ್, ಕಿಯಾರಾ, ಜ್ಯೂ.ಎನ್‌ಟಿಆರ್ ಜೊತೆಯಾಗಿ ನಟಿಸುತ್ತಿದ್ದಾರೆ. ಹಾಗಾಗಿ ಈ ಚಿತ್ರದ ಮೇಲೆ ಫ್ಯಾನ್ಸ್ಗೆ ಭಾರೀ ಭರವಸೆ ಇದೆ.

  • ರಾಮ್ ಚರಣ್ ನಟನೆಯ ಗೇಮ್ ಚೇಂಜರ್ ಬಿಗ್ ಅಪ್‌ಡೇಟ್

    ರಾಮ್ ಚರಣ್ ನಟನೆಯ ಗೇಮ್ ಚೇಂಜರ್ ಬಿಗ್ ಅಪ್‌ಡೇಟ್

    ಆರ್‌ಆರ್‌ಆರ್ (RRR) ಸಿನಿಮಾ ನಂತರ ಗ್ಲೋಬಲ್‌ಸ್ಟಾರ್ ರಾಮ್‌ಚರಣ್ (Ram Charan )ನಟನೆಯ ಭಾರೀ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ `ಗೇಮ್ ಚೇಂಜರ್’. ಸದ್ಯ ತಮ್ಮ ಅಭಿಮಾನಿಗಳಿಗೆ ರಾಮ್‌ಚರಣ್ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಗ್ಲೋಬಲ್‌ಸ್ಟಾರ್ ಕೊಟ್ಟ ಸಿಹಿ ಸುದ್ದಿಗೆ ಫ್ಯಾನ್ಸ್ ಖುಷಿಯಿಂದ ಕುಣಿದಾಡಿದ್ದಾರೆ. ಹೌದು, ಗೇಮ್ ಚೇಂಜರ್ (Game Changer) ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗಿ ಫ್ಯಾನ್ಸ್ ರಣಕೇಕೆ ಹಾಕಿಯಾಗಿದೆ. ಇದೀಗ ಸೆಕೆಂಡ್ ಸಿಂಗಲ್ ಸರದಿ.

    ರಾಮ್ ಚರಣ್ ಹಾಗೂ ಕಿಯಾರ ಅಡ್ವಾನಿ ಜೋಡಿ ಫಸ್ಟ್ ಸಿಂಗಲ್ `ಜರಗಂಡಿ’ ಮೂಲಕ ಗಮನ ಸೆಳೆದಿದೆ. ಇದೀಗ ಈ ಸಿನಿಮಾದ ಸೆಕೆಂಡ್ ಸಿಂಗಲ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ಸೆಪ್ಟಂಬರ್ 28ಕ್ಕೆ ಎರಡನೇ ಹಾಡು ರಿಲೀಸ್ ಆಗ್ತಿದೆ. ಈ ಬಗ್ಗೆ ಚಿತ್ರತಂಡ ಖಚಿತಪಡಿಸಿದೆ. ಡೇಟ್ ಅನೌನ್ಸ್ ಮಾಡಿರುವ ಪೋಸ್ಟರ್‌ನಲ್ಲಿ ಸಾಂಗ್ ನೇಮ್ `ರಾ ಮಚ್ಚಾ ಮಚ್ಚಾ’ ಕೂಡಾ ರಿವೀಲ್ ಮಾಡಿದೆ ಚಿತ್ರತಂಡ. ಇದನ್ನೂ ಓದಿ: `ಮನೆ ಒಳಗೆ ಬಿಟ್ಟುಕೊಳ್ತಿಲ್ಲ ಪತ್ನಿ’ – ಪೊಲೀಸರ ಮೊರೆ ಹೋದ ಜಯಂ ರವಿ

    ಶಂಕರ್.ಎಸ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಚಿತ್ರ ಅಂದ್ರೆ ಕೇಳ್ಬೇಕಾ? ಸಹಜವಾಗಿಯೇ `ಗೇಮ್ ಚೇಂಜರ್’ ಮೇಲೆ ಮತ್ತಷ್ಟು ಕ್ಯೂರಿಯಾಸಿಟಿ ಜಾಸ್ತಿಯಾಗಿದೆ. ಹಬ್ಬಕ್ಕೆ ತಮ್ಮ ಭಕ್ತಗಣಕ್ಕೆ ರಾಮ್ ಚರಣ್ ಮಸ್ತ್ ಸ್ಟೆಪ್ ಹಾಕುವ ಹಾಡೊಂದು ಉಡುಗೊರೆಯಾಗಿ ನೀಡ್ತಿದ್ದಾರೆ ಅಂತಾ ಅವ್ರ ಅಭಿಮಾನಿಗಳು ಕುಣಿಯೋಕೆ ಕಾದು ಕುಳಿತಿದ್ದಾರೆ. ಇದನ್ನೂ ಓದಿ: ರಂಗೀಲಾ ಬೆಡಗಿ ಊರ್ಮಿಳಾ ವಿಚ್ಛೇದನ !

    ಸಾಂಗ್ `ರಾ ಮಚ್ಚಾ ಮಚ್ಚಾ’ ಅನ್ನೋ ಸಾಲುಗಳಿಂದ ಸ್ಟಾರ್ಟ್ ಆಗಬಹುದೇನೋ ಆದ್ರೆ, ರಾಮ್‌ಚರಣ್ ಲುಕ್ ಮಾತ್ರ ಡಿಸೆಂಟ್ ಆಗಿ ಆಫೀಸರ್ ಥರ ಕಾಣಿಸಿಕೊಂಡಿದ್ದಾರೆ. `ತ್ರಿಪಲ್ ಆರ್’ ಸಿನಿಮಾದ ನಂತರ ಮತ್ತೊಂದು ವಿಭಿನ್ನ ರೀತಿಯ ಸಿನಿಮಾವನ್ನ ಮಾಡಿದ್ದಾರೆ ರಾಮ್ ಚರಣ್. ಜೊತೆಗೆ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆಯನ್ನಿಟ್ಟುಕೊಂಡು ಕುಳಿತಿದೆ ಟೀಮ್. ನಿರ್ದೇಶಕ ಶಂಕರ್.ಎಸ್ ಹಾಗೂ ರಾಮ್ ಚರಣ್ ಫಸ್ಟ್ ಕಾಂಬೋ ಹೇಗೆ ವರ್ಕೌಟ್ ಆಗುತ್ತೆ ಅನ್ನೋ ಮಹಾ ನಿರೀಕ್ಷೆಗಳು, ಲೆಕ್ಕಾಚಾರಗಳು ಸೌತ್‌ನಲ್ಲಿ ಚರ್ಚೆಯಾಗ್ತಿವೆ.

     

  • ಹೃತಿಕ್‌, ಕಿಯಾರಾ ನಟನೆಯ ‘ವಾರ್‌ 2’ ಚಿತ್ರದ ವಿಡಿಯೋ ಲೀಕ್‌

    ಹೃತಿಕ್‌, ಕಿಯಾರಾ ನಟನೆಯ ‘ವಾರ್‌ 2’ ಚಿತ್ರದ ವಿಡಿಯೋ ಲೀಕ್‌

    ಹೃತಿಕ್ ರೋಷನ್ ಮತ್ತು ಕಿಯಾರಾ (Kiara Advani) ನಟನೆಯ ಬಹುನಿರೀಕ್ಷಿತ ‘ವಾರ್ 2’ (War 2) ಚಿತ್ರದ ಶೂಟಿಂಗ್ ಇಟಲಿಯಲ್ಲಿ ಭರದಿಂದ ನಡೆಯುತ್ತಿದೆ. ‘ವಾರ್ 2’ ಸಿನಿಮಾ ಸೆಟ್‌ನ ವಿಡಿಯೋ ಮತ್ತು ಫೋಟೋಗಳು ಲೀಕ್ ಆಗಿವೆ. ಚಿತ್ರದಲ್ಲಿನ ಹೃತಿಕ್, ಕಿಯಾರಾ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    ನಾಲ್ಕೈದು ದಿನಗಳ ಹಿಂದೆ ‘ವಾರ್ 2’ ತಂಡದ ಜೊತೆ ಹೃತಿಕ್ (Hrithik Roshan) ಮತ್ತು ಕಿಯಾರಾ ಇಟಲಿಗೆ ತೆರಳಿದ್ದರು. ರೊಮ್ಯಾಂಟಿಕ್ ಸಾಂಗ್ ಶೂಟ್ ಇಟಲಿಯಲ್ಲಿ ಭರದಿಂದ ನಡೆಯುತ್ತಿತ್ತು. ಚಿತ್ರೀಕರಣದಲ್ಲಿ ಭಾಗಿಯಾದ ‘ವಾರ್ 2’ ಜೋಡಿಯ ಫೋಟೋ ಇದೀಗ ಲೀಕ್ ಆಗಿದೆ. ಇಬ್ಬರೂ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಹಾಗೂ ಫೋಟೋ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಈ ತುಣುಕುಗಳನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇನ್ನೂ ಫೋಟೋ ಲೀಕ್‌ ಆಗಿರೋದು ಸಹಜವಾಗಿ ಚಿತ್ರತಂಡಕ್ಕೆ ಬೇಸರವುಂಟು ಮಾಡಿದೆ.

    ಅಂದಹಾಗೆ, ‘ವಾರ್ 2’ ಸಿನಿಮಾದಲ್ಲಿ ಹೃತಿಕ್ ರೋಷನ್ ಜೊತೆ ತೆಲುಗಿನ ನಟ ಜ್ಯೂ.ಎನ್‌ಟಿಆರ್ (Jr.Ntr) ನಟಿಸಿದ್ದಾರೆ. ತಾರಕ್ ಕೂಡ ಪವರ್‌ಫುಲ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಚಿತ್ರವನ್ನು ‘ಬ್ರಹ್ಮಾಸ್ತ್ರ’ ಖ್ಯಾತಿಯ ನಿರ್ದೇಶಕ ಆಯಾನ್ ಮುಖರ್ಜಿ ನಿರ್ದೇಶನ ಮಾಡಿದ್ದಾರೆ.

    ಇನ್ನೂ ಮೊದಲ ಬಾರಿಗೆ ಹೃತಿಕ್‌ ಮತ್ತು ಕಿಯಾರಾ ಜೊತೆಯಾಗಿ ನಟಿಸುತ್ತಿರುವ ಕಾರಣ ಚಿತ್ರದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಅದಷ್ಟೇ ಅಲ್ಲ, ಹೃತಿಕ್‌ ಮತ್ತು ತಾರಕ್‌ ಜುಗಲ್‌ಬಂದಿ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.

  • ರಣ್‌ವೀರ್ ಸಿಂಗ್ ನಟನೆಯ ‘ಡಾನ್ 3’ ಸಿನಿಮಾ ಮುಂದೂಡಿದ ಫರ್ಹಾನ್ ಅಖ್ತರ್

    ರಣ್‌ವೀರ್ ಸಿಂಗ್ ನಟನೆಯ ‘ಡಾನ್ 3’ ಸಿನಿಮಾ ಮುಂದೂಡಿದ ಫರ್ಹಾನ್ ಅಖ್ತರ್

    ಣ್‌ವೀರ್ ಸಿಂಗ್ (Ranveer Singh) ಮತ್ತು ಕಿಯಾರಾ (Kiara Advani) ನಟನೆಯ ‘ಡಾನ್ 3’ (Don 3) ಚಿತ್ರೀಕರಣವನ್ನು ಡೈರೆಕ್ಟರ್ ಫರ್ಹಾನ್ ಅಖ್ತರ್ ಮುಂದೂಡಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ‘ಡಾನ್ 3’ ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಯಶ್ ನಟನೆಯ ‘ಟಾಕ್ಸಿಕ್’ ಚಿತ್ರತಂಡ ಸೇರಿಕೊಂಡ ಅಮೆರಿಕದ ನಟ

    ನಟ ಕಮ್ ನಿರ್ದೇಶಕ ಫರ್ಹಾನ್ ಅಖ್ತರ್ ಡೈರೆಕ್ಷನ್ ಸಿನಿಮಾ ‘ಡಾನ್ 3’ ಇದೇ ಆಗಸ್ಟ್‌ನಿಂದ ಚಿತ್ರೀಕರಣ ಶುರುವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಮುಂದಿನ ಮೇ ಅಥವಾ ಜೂನ್‌ನಿಂದ ಶೂಟಿಂಗ್ ಶುರು ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಇದನ್ನೂ ಓದಿ:ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ ಪಕ್ಷವನ್ನು ಅಧಿಕೃತಗೊಳಿಸಿದ ಚುನಾವಣಾ ಆಯೋಗ

     

    View this post on Instagram

     

    A post shared by Farhan Akhtar (@faroutakhtar)

    ಆ ಕಡೆ ಆದಿತ್ಯಾ ಧರ್ ನಿರ್ದೇಶನದ ಹೊಸ ಸಿನಿಮಾದಲ್ಲಿ ರಣ್‌ವೀರ್ ಬ್ಯುಸಿಯಾಗಿದ್ರೆ, ಇತ್ತ ಕಿಯಾರಾ ‘ವಾರ್ 2’ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಇಬ್ಬರ ಡೇಟ್ಸ್ ಬ್ಯುಸಿಯಿರುವ ಹಿನ್ನೆಲೆ ತಾವು ನಟಿಸಲು ಒಪ್ಪಿಕೊಂಡಿದ್ದ ಸಿನಿಮಾಗೆ ಫರ್ಹಾನ್ ಗ್ರೀನ್ ಕೊಟ್ಟಿದ್ದಾರೆ. ‘120 ಬಹದ್ದೂರ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಕುರಿತು ನಿರ್ದೇಶಕ ಅಧಿಕೃತ ಮಾಹಿತಿ ಕೂಡ ನೀಡಿದ್ದಾರೆ.

    ಇನ್ನೂ ‘ಡಾನ್ 3’ ಚಿತ್ರವನ್ನು ಮುಂದಿನ ವರ್ಷ ಮೇಯಿಂದ ಶೂಟಿಂಗ್ ಶುರು ಮಾಡಲು ತಂಡ ನಿರ್ಧರಿಸಿದೆ. ಅಷ್ಟರಲ್ಲಿ ಫರ್ಹಾನ್, ರಣ್‌ವೀರ್, ಕಿಯಾರಾ (Kiara Advani) ಪ್ರಸ್ತುತ ನಟಿಸುತ್ತಿರುವ ಸಿನಿಮಾಗಳ ಚಿತ್ರೀಕರಣ ಮುಗಿಸಿಕೊಡಬೇಕಿದೆ.

  • ಲಂಡನ್‌ನತ್ತ ‘ಟಾಕ್ಸಿಕ್’ ಟೀಮ್- 150ಕ್ಕೂ ಹೆಚ್ಚು ದಿನ ಶೂಟಿಂಗ್‌ಗೆ ಯಶ್ ಪ್ಲ್ಯಾನ್

    ಲಂಡನ್‌ನತ್ತ ‘ಟಾಕ್ಸಿಕ್’ ಟೀಮ್- 150ಕ್ಕೂ ಹೆಚ್ಚು ದಿನ ಶೂಟಿಂಗ್‌ಗೆ ಯಶ್ ಪ್ಲ್ಯಾನ್

    ನ್ಯಾಷನಲ್ ಸ್ಟಾರ್ ಯಶ್ (Yash) ಸದ್ಯ ‘ಟಾಕ್ಸಿಕ್’ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ‘ಟಾಕ್ಸಿಕ್’ (Toxic Film) ಚಿತ್ರದ ಕೆಲಸ ಎಲ್ಲಿಯವರೆಗೆ ಬಂತು ಎಂದು ಕೇಳುವವರಿಗೆ ಇಲ್ಲಿದೆ ಲೇಟೆಸ್ಟ್ ಸುದ್ದಿ. ಸದ್ಯ ಚಿತ್ರೀಕರಣಕ್ಕಾಗಿ ಯಶ್ & ಟೀಮ್ ಲಂಡನ್‌ಗೆ ಹಾರಲಿದೆ. ಅದಕ್ಕಾಗಿ ತೆರೆಮರೆಯಲ್ಲಿ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ.

    ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆ ಯಶ್ (Yash) ಕೈಜೋಡಿಸಿದ್ದಾರೆ. ಯಶ್ ಜೊತೆ ನಯನತಾರಾ, ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. 150ಕ್ಕೂ ಹೆಚ್ಚು ದಿನ ಶೂಟಿಂಗ್ ಮಾಡಲು ಯಶ್ ಪ್ಲ್ಯಾನ್ ಮಾಡಿದ್ದಾರೆ. ಸಿನಿಮಾದ ಬಹುಪಾಲು ಚಿತ್ರೀಕರಣ ಲಂಡನ್‌ನಲ್ಲಿಯೇ (London) ಆಗಲಿದೆ.

    ಈ ಚಿತ್ರದಲ್ಲಿ ಯಶ್ ಸ್ಟೈಲೀಶ್ ಡಾನ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದು ಕೆಜಿಎಫ್ ಸರಣಿ (KGF) ಪಾತ್ರಕ್ಕಿಂತಲೂ ತುಂಭಾ ವಿಭಿನ್ನವಾಗಿದೆ. ಅಂಡರ್‌ವರ್ಲ್ಡ್ ಡಾನ್ ಪಾತ್ರಕ್ಕೆ ರಾಕಿ ಭಾಯ್ ಜೀವ ತುಂಬಲಿದ್ದಾರೆ. ಕಿಯಾರಾ (Kiara Advani) ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ರೆ, ನಯನತಾರಾ (Nayanathara) ಅವರು ಯಶ್ ಸಹೋದರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ‘ಟಾಕ್ಸಿಕ್’ ಸಿನಿಮಾದಲ್ಲಿ ಗೋವಾ ಡ್ರಗ್ಸ್ ಮಾಫಿಯಾ ಕಥೆಯನ್ನು ತೋರಿಸಲಾಗುತ್ತದೆ. ಕೆವಿಎನ್ ಸಂಸ್ಥೆ ಜೊತೆ ನಿರ್ಮಾಣಕ್ಕೂ ಯಶ್ ಕೈಜೋಡಿಸಿದ್ದಾರೆ. 2025ರ ಏ.10ರಂದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್ ಆಗಲಿದೆ.

  • ರಣ್‌ವೀರ್ ಸಿಂಗ್, ಕಿಯಾರಾ ಸಿನಿಮಾದ ಚಿತ್ರೀಕರಣಕ್ಕೆ ಮುಹೂರ್ತ ಫಿಕ್ಸ್

    ರಣ್‌ವೀರ್ ಸಿಂಗ್, ಕಿಯಾರಾ ಸಿನಿಮಾದ ಚಿತ್ರೀಕರಣಕ್ಕೆ ಮುಹೂರ್ತ ಫಿಕ್ಸ್

    ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ (Kiara Advani) ಅವರು ರಣ್‌ವೀರ್ ಸಿಂಗ್ (Ranveer Singh) ಹೊಸ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಡಾನ್-3 (Don 3) ಚಿತ್ರದ ಶೂಟಿಂಗ್ ಯಾವಾಗ ಎಂಬುದಕ್ಕೆ ಇದೀಗ ಮಾಹಿತಿ ಸಿಕ್ಕಿದೆ. ಇದನ್ನೂ ಓದಿ:ಬಿಗ್ ಬಾಸ್ ವಿನ್ನರ್ ವಿರುದ್ಧ ED ಕೇಸ್ ದಾಖಲು

    ರಣ್‌ವೀರ್ ‌(Ranveer Singh) ಮತ್ತು ಕಿಯಾರಾ ಜೋಡಿಯ ಹೊಸ ಚಿತ್ರಕ್ಕೆ ಫರ್ಹಾನ್ ಅಖ್ತರ್ ನಿರ್ದೇಶನ ಮಾಡಲಿದ್ದಾರೆ. ಶೂಟಿಂಗ್‌ಗಾಗಿ ಲಂಡನ್‌ನಲ್ಲಿ ಸ್ಥಳಗಳ ಹುಡುಕಾಟದಲ್ಲಿದೆ ಚಿತ್ರತಂಡ. ಈಗಾಗಲೇ ಚಿತ್ರಕಥೆ ಸಿದ್ಧವಾಗಿದ್ದು, ಮುಂದಿನ ಫೆಬ್ರವರಿಯಿಂದ ಶೂಟಿಂಗ್‌ಗೆ ಚಾಲನೆ ನೀಡಲು ನಿರ್ಧರಿಸಿದ್ದಾರೆ.

    ಫರ್ಹಾನ್ ಅಖ್ತರ್ ಸದ್ಯ ಬೇರೇ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ರಣ್‌ವೀರ್ ಸಿಂಗ್ ಜೊತೆಗಿನ ಡಾನ್-3 ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಗುಡ್ ನ್ಯೂಸ್

    ಇತ್ತ ರಣ್‌ವೀರ್ ಮತ್ತು ಕಿಯಾರಾ ಕೂಡ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಒಪ್ಪಿಕೊಂಡಿರುವ ಚಿತ್ರದ ಶೂಟಿಂಗ್ ಮುಗಿದ ನಂತರ ಫರ್ಹಾನ್ ನಿರ್ದೇಶನದ ಚಿತ್ರಕ್ಕೆ ಸಾಥ್ ನೀಡಲಿದ್ದಾರೆ.

  • ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ

    ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ

    ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra), ಕಿಯಾರಾ ಅಡ್ವಾಣಿ (Kiara Advani) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇಬ್ಬರೂ ಹೊಸ ಸಿನಿಮಾಗಾಗಿ ಕೈಜೋಡಿಸಿದ್ದಾರೆ. ತಮ್ಮ ಹೊಸ ಚಿತ್ರದ ಬಗ್ಗೆ ಸಿದ್ಧಾರ್ಥ್ ಮಾಹಿತಿ ನೀಡಿದ್ದಾರೆ.

    ‘ಶೇರ್ಷಾ’ ಸಿನಿಮಾ ನಂತರ ಮತ್ತೆ ಸಿದ್ಧಾರ್ಥ್, ಕಿಯಾರಾ ಒಂದಾಗಿದ್ದಾರೆ. ಒಂದೊಳ್ಳೆಯ ಕಥೆಯ ಮೂಲಕ ಹೊಸ ಪ್ರೇಮಕಥೆಯನ್ನು ಹೇಳಲು ಹೊರಟಿದ್ದಾರೆ. ಆ್ಯಕ್ಷನ್ ಕಮ್ ರೊಮ್ಯಾನ್ಸ್ ಜೊತೆಯಾಗಿ ನಟಿಸುವ ವಿಚಾರ ನಿಜ ಎಂದು ಸಿದ್ಧಾರ್ಥ್ ಖಚಿತಪಡಿಸಿದ್ದಾರೆ. ಇದನ್ನೂ ಓದಿ:ತಮಿಳಿನ ರಿಮೇಕ್ ಸಿನಿಮಾದಲ್ಲಿ ಪೂಜಾ ಹೆಗ್ಡೆ

    ಈ ಹಿಂದೆ ಈ ಜೋಡಿಯ ಹೊಸ ಸಿನಿಮಾವನ್ನು ಕರಣ್ ಜೋಹರ್ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡೋದಾಗಿ ತಿಳಿಸಿತ್ತು. ಅದೇ ಸಿನಿಮಾ ಬಗ್ಗೆ ನಟ ಮಾತನಾಡುತ್ತಿದ್ದಾರಾ ಎಂಬ ಮಾಹಿತಿ ಬಿಟ್ಟು ಕೊಟ್ಟಿಲ್ಲ.

    ‘ಶೇರ್ಷಾ’ ಸಿನಿಮಾ ಸಿದ್ಧಾರ್ಥ್ ದಂಪತಿ ಪಾಲಿಗೆ ತುಂಬಾನೇ ಸ್ಪೆಷಲ್. ಕೆರಿಯರ್ ಮತ್ತು ವೈವಾಹಿಕ ಜೀವನದಲ್ಲಿ ಖುಷಿಯಾಗಿ ಜೀವಿಸೋದಕ್ಕೆ ‘ಶೇರ್ಷಾ’ (Shershaah) ಚಿತ್ರ ಕಾರಣವಾಗಿದೆ. ಈಗ ಮೂರು ವರ್ಷಗಳ ನಂತರ ಹೊಸ ಚಿತ್ರಕ್ಕಾಗಿ ಇಬ್ಬರೂ ಜೊತೆಯಾಗುತ್ತಿದ್ದಾರೆ.