Tag: Kiara Advani

  • ಅಮೆರಿಕದಲ್ಲಿ ವಾರ್-2 ಚಿತ್ರಕ್ಕೆ ಭಾರೀ  ಡಿಮ್ಯಾಂಡ್

    ಅಮೆರಿಕದಲ್ಲಿ ವಾರ್-2 ಚಿತ್ರಕ್ಕೆ ಭಾರೀ ಡಿಮ್ಯಾಂಡ್

    ಹೃತಿಕ್ ರೋಷನ್ (Hrithik Roshan), ಜೂ.ಎನ್‌ಟಿಆರ್ (Jr NTR) ಹಾಗೂ ಕಿಯಾರ ಅಡ್ವಾಣಿ (Kiara Advani) ಮುಖ್ಯ ಪಾತ್ರದಲ್ಲಿ ನಟಿಸಿರುವ ಹೈ-ವೊಲ್ಟೇಜ್ ವಾರ್-2 (War 2) ಸಿನಿಮಾ ಇದೇ ಆಗಸ್ಟ್‌ 14ರಂದು ವಿಶ್ವದಾದ್ಯಂತ ತೆರೆಗೆ ಬರಲು ರೆಡಿಯಾಗಿದೆ. ಈ ಸಿನಿಮಾ ಆಗಸ್ಟ್‌ 13 ರಂದು ಉತ್ತರ ಅಮೆರಿಕದಲ್ಲಿ ಪ್ರೀಮಿಯರ್ ಆಗಲಿವೆ. ಹೀಗಾಗಿ ಸಿನಿಮಾಗೆ ಈಗಿನಿಂದಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು, ಬರೋಬ್ಬರಿ 80 ಸಾವಿರ ಡಾಲರ್  ಟಿಕೆಟ್ ಬುಕ್ಕಿಂಗ್ ಆಗಿದೆ. ಇದನ್ನೂ ಓದಿ: ಕನ್ನಡ, ತೆಲುಗಿನಲ್ಲಿ ಏಕಕಾಲದಲ್ಲಿ ಚಿತ್ರೀಕರಣವಾಗಲಿದೆ ರಿಷಬ್ ಶೆಟ್ಟಿ ಹೊಸ ಚಿತ್ರ

    ಅಯಾನ್ ಮುಖರ್ಜಿ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ವಾರ್-2 ಟೀಸರ್ ಹಾಗೂ ಟ್ರೇಲರ್ ಮೂಲಕವೇ ಗಮನಸೆಳೆದಿದೆ. ಅಮೆರಿಕದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಓಪನ್ ಆದ ಕೆಲವೇ ಗಂಟೆಗಳಲ್ಲಿ ಸಿನಿಮಾ 80 ಸಾವಿರ ಡಾಲರ್ ಟಿಕೆಟ್ ಬುಕ್ಕಿಂಗ್ ಆಗಿರೋದು ಸಿನಿಮಾ ಮೇಲಿನ ಕ್ರೇಜ್ ನ ಮತ್ತಷ್ಟು ಹೆಚ್ಚಿಸಿದೆ. ಜೂ.ಎನ್ ಟಿಆರ್ ಹಾಗೂ ಹೃತಿಕ್ ರೋಶನ್ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ತಿರುವ ಸಿನಿಮಾ ಇದಾಗಿದ್ದು, ಸಹಜವಾಗಿಯೇ ಸಿನಿಮಾ ಮೇಲೆ ನಿರೀಕ್ಷೆಗಳಿವೆ.

     

    ವಾರ್ – 2 ಸಿನಿಮಾ ಅಮೆರಿಕ ಹಾಗೂ ಕೆನಡಾದಲ್ಲಿ ಅತಿಹೆಚ್ಚು ಸ್ಕ್ರೀನ್ ಗಳನ್ನ ಪಡೆದುಕೊಂಡಿದೆ. ಅಲ್ಲದೇ ಸಿನಿಮಾ ರಿಲೀಸ್ ಗೆ ಎರಡು ವಾರ ಬಾಕಿ ಇರುವಾಗಲೇ ಬೇಡಿಕೆ ಹೆಚ್ಚಾಗಿದೆ. ವಾರ್ ಮೊದಲ ಭಾಗ ತೆರೆಕಂಡು ಪ್ರೇಕ್ಷಕರ ಮನಸೊರೆ ಮಾಡಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಮೊತ್ತವನ್ನೇ ಕಲೆ ಹಾಕಿತ್ತು. ಹೀಗಾಗಿ ಸಿನಿಮಾ ತೆರೆಗೆ ಬರೋದನ್ನೇ ಅಭಿಮಾನಿ ಬಳಗ ಕಾಯುತ್ತಿದೆ.

  • ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ ದಂಪತಿಗೆ ಹೆಣ್ಣು ಮಗು ಜನನ

    ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ ದಂಪತಿಗೆ ಹೆಣ್ಣು ಮಗು ಜನನ

    ಬಾಲಿವುಡ್ ನಟರಾದ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಮತ್ತು ಕಿಯಾರಾ ಅಡ್ವಾಣಿ (Kiara Advani) ಹೆಣ್ಣು ಮಗುವಿಗೆ ತಂದೆ-ತಾಯಿಯಾಗಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

    ನಟಿಗೆ ಆಗಸ್ಟ್‌ನಲ್ಲಿ ಮಗು ಜನಿಸಬೇಕಿತ್ತು. ಆದರೆ ಮಗು ಬೇಗನೆ ಜನಿಸಿದೆ. ಕಿಯಾರಾಳನ್ನು ಹೆರಿಗೆಗಾಗಿ ಮುಂಬೈನ ಗಿರ್ಗಾಂವ್ ಪ್ರದೇಶದ ಹೆಚ್‌ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

     

    View this post on Instagram

     

    A post shared by KIARA (@kiaraaliaadvani)

    ಕಳೆದ ವಾರ, ಸಿದ್ಧಾರ್ಥ್ ಮತ್ತು ಕಿಯಾರಾ ಮುಂಬೈನ ಕ್ಲಿನಿಕ್ ಒಂದರಲ್ಲಿ ಕಾಣಿಸಿಕೊಂಡಿದ್ದರು. ಸಿದ್ಧಾರ್ಥ್ ಅವರ ತಾಯಿ ರಿಮ್ಮಾ ಮಲ್ಹೋತ್ರಾ ಮತ್ತು ಕಿಯಾರಾ ಅವರ ಪೋಷಕರು ಜೆನೆವೀವ್ ಮತ್ತು ಜಗದೀಪ್ ಅಡ್ವಾಣಿ ಅವರೊಂದಿಗೆ ಆಸ್ಪತ್ರೆಯಲ್ಲಿದ್ದಾರೆ.

    ಕಿಯಾರಾ ಪ್ರೆಗ್ನೆನ್ಸಿ ಘೋಷಿಸಿದಾಗಿನಿಂದ, ಕಿಯಾರಾ ಮತ್ತು ಸಿದ್ಧಾರ್ಥ್‌ ಸೋಷಿಯಲ್‌ ಮೀಡಿಯಾದಲ್ಲಿ ಅಷ್ಟೇನು ಆಕ್ಟೀವ್‌ ಆಗಿರಲಿಲ್ಲ. ಫೆಬ್ರವರಿ 28 ರಂದು, ಸಿದ್ಧಾರ್ಥ್ ಮತ್ತು ಕಿಯಾರಾ ಇನ್ಸ್ಟಾಗ್ರಾಮ್‌ನಲ್ಲಿ ‘ನಮ್ಮ ಜೀವನದ ಶ್ರೇಷ್ಠ ಉಡುಗೊರೆ ಶೀಘ್ರದಲ್ಲೇ ಬರಲಿದೆ’ ಎಂದು ಪೋಸ್ಟ್ ಮಾಡಿದ್ದರು.

  • Met Gala 2025 | ಬಾಲಿವುಡ್ ತಾರೆಯರು ಕಾಣಿಸಿಕೊಂಡಿದ್ದು ಹೇಗೆ ಗೊತ್ತಾ?

    Met Gala 2025 | ಬಾಲಿವುಡ್ ತಾರೆಯರು ಕಾಣಿಸಿಕೊಂಡಿದ್ದು ಹೇಗೆ ಗೊತ್ತಾ?

    ತ್ತೀಚೆಗಷ್ಟೆ ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ನಡೆದ ಅತಿ ದೊಡ್ಡ ಫ್ಯಾಷನ್ ನೈಟ್ ಮೆಟ್ ಗಾಲಾ 2025ರ(Met Gala 2025) `ಸೂಪರ್‌ಫೈನ್: ಟೈಲರಿಂಗ್ ಬ್ಲ್ಯಾಕ್ ಸ್ಟೈಲ್’ ಥೀಮ್‌ನಲ್ಲಿ ಹಾಲಿವುಡ್ ಹಾಗೂ ಬಾಲಿವುಡ್‌ನ ಸ್ಟಾರ್ಸ್ ಬ್ಲೂ ಕಾರ್ಪೆಟ್‌ನಲ್ಲಿ ಮಿಂಚಿದ್ದರು. ಇದೊಂದು ಕಾಸ್ಟ್ಯೂಮ್‌ ಇನ್‌ಸ್ಟಿಟ್ಯೂಟ್‌ಗಾಗಿ ನಿಧಿ ಸಂಗ್ರಹಿಸಲು ಆಯೋಜಿಸಲಾಗುವ ಫ್ಯಾಷನ್ ಕಾರ್ಯಕ್ರಮ.

    ಈ ಮೆಟ್ ಗಾಲಾ ಫ್ಯಾಷನ್ ನೈಟ್ ಮಾಡೆಲ್ಸ್, ಆಕ್ಟರ್ಸ್‌ಗಳು ತಮ್ಮ ಫ್ಯಾಷನ್ ಬಗೆಗಿನ ಆಸಕ್ತಿಯನ್ನು ತೋರಿಸುವ ಅತಿ ದೊಡ್ಡ ಕಾರ್ಯಕ್ರಮವಾಗಿದೆ. ಇದರಲ್ಲಿ ಖ್ಯಾತ ನಟ ನಟಿಯರು, ಸೆಲೆಬ್ರಿಟಿಗಳು ವಿಭಿನ್ನವಾದ ಉಡುಗೆ ತೊಟ್ಟು ಫ್ಯಾಷನ್ ನೈಟ್‌ನ ಮೆರುಗು ಹೆಚ್ಚಿಸುತ್ತಾರೆ.

    ಭಾರತದಲ್ಲಿ ತಯಾರಾದ ಬ್ಲೂ ಕಾರ್ಪೆಟ್
    ಈ ಬಾರಿಯ ಮೆಟ್ ಗಾಲಾದ ಇನ್ನೊಂದು ವಿಶೇಷವೇನೆಂದರೆ, ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಬದಲಾಗಿದೆ. ಬಿಳಿ ಹಾಗೂ ನೀಲಿ ಬಣ್ಣದ ಡ್ಯಾಫೋಡಿಲ್‌ಗಳಿಂದ ಅಲಂಕರಿಸಲ್ಲಟ್ಟ ಬ್ಲೂ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು. ಇನ್ನೊಂದು ವಿಷಯವೇನೆಂದರೆ ಈ ಬ್ಲೂ ಕಾರ್ಪೆಟ್ ತಯಾರಾಗಿದ್ದು ಭಾರತದಲ್ಲೇ. ಹೌದು, ಈ ಕಾರ್ಪೆಟ್‌ನ ಬೇಸ್ ಅನ್ನು ನೆಯ್ಟ್ ಹೋಮ್ಸ್ ಸಂಸ್ಥಾಪಕರಾದ ಶಿವನ್ ಸಂತೋಷ್ ಮತ್ತು ನಿಮಿಷಾ ಆರೀನಿವಾಸ್ ಅವರು ಕೇರಳದ(Kerala) ಅಲಪ್ಪುಳದಲ್ಲಿ ತಯಾರಿಸಿದ್ದಾರೆ.

    ಬೇಬಿ ಬಂಪ್‌ನೊಂದಿಗೆ ಬ್ಲ್ಯಾಕ್ ಗೌನ್‌ನಲ್ಲಿ ಮಿಂಚಿದ ಕಿಯಾರಾ
    ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ(Kiara Advani) ಬೇಬಿ ಬಂಪ್‌ನೊಂದಿಗೆ ಗೋಲ್ಡ್ ವಿಥ್ ಬ್ಲ್ಯಾಕ್ ಕಲರ್‌ನ ಆಫ್-ಶೋಲ್ಡರ್ ಗೌನ್‌ನಲ್ಲಿ ಮೆಟ್ ಗಾಲಾದಲ್ಲಿ ಕಾಣಿಸಿಕೊಂಡರು. ಫ್ಯಾಷನ್ ಜಗತ್ತಿನ ಅತಿ ದೊಡ್ಡ ಕಾರ್ಯಕ್ರಮದಲ್ಲಿ ಕಿಯಾರಾ ಭಾರತೀಯ ವಸ್ತ್ರ ವಿನ್ಯಾಸಕ ಗೌರವ್ ಗುಪ್ತಾ ವಿನ್ಯಾಸಗೊಳಿಸಿದ್ದ ಗೌನ್ ಧರಿಸಿದ್ದರು. ಈ ಫ್ಯಾಷನ್ ನೈಟ್‌ನಲ್ಲಿ ಕಿಯಾರ ಪ್ರೆಗ್ನೆನ್ಸಿ ಗ್ಲೋನಲ್ಲಿ ಕಂಗೊಳಿಸಿದ್ದು ವಿಶೇಷವಾಗಿತ್ತು.

    ಬಾಲಿವುಡ್ `ಕಿಂಗ್ ಖಾನ್’ ಐಕಾನಿಕ್ ಲುಕ್
    ಮೆಟ್ ಗಾಲಾದ ಬ್ಲೂ ಕಾರ್ಪೆಟ್‌ನಲ್ಲಿ ಭಾಗವಹಿಸಿದ ಮೊದಲ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಬಾಲಿವುಡ್‌ನ ಕಿಂಗ್ ಖಾನ್ ಎಂದೇ ಖ್ಯಾತಿ ಪಡೆದಿರುವ ನಟ ಶಾರುಖ್ ಖಾನ್(Shah Rukh Khan) ಪಾತ್ರರಾಗಿದ್ದಾರೆ. ಶಾರುಖ್ ಖಾನ್ ವಸ್ತ್ರ ವಿನ್ಯಾಸಕ ಸಬ್ಯಸಾಚಿ ಮುಖರ್ಜ ವಿನ್ಯಾಸಗೊಳಿಸಿದ ಬ್ಲಾಕ್ ಸ್ಟೈಲೀಶ್ ಸೂಟ್‌ನಲ್ಲಿ ಮಿಂಚಿದ್ದರು. ಇನ್ನು ಡ್ರೆಸ್‌ಗೆ `K’ ಎಂಬ ಲಾಕೆಟ್ ಇರುವ ಚೈನ್ ಮ್ಯಾಚ್ ಮಾಡಿದ್ದರು.

    ಕ್ಲಾಸಿಕ್ ಹಾಲಿವುಡ್ ಸ್ಟೈಲ್‌ನಲ್ಲಿ ಪ್ರಿಯಾಂಕಾ ಚೋಪ್ರಾ
    ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಅವರು ಪತಿ ನಿಕ್ ಜೋನಸ್‌ರೊಂದಿಗೆ(Nik Jonas) ಕ್ಲಾಸಿಕ್ ಹಾಲಿವುಡ್ ಸ್ಟೈಲ್‌ನ ಬಿಳಿ ಹಾಗೂ ಕಪ್ಪು ಚುಕ್ಕೆಯ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದರು. 2017ರಲ್ಲಿ ಮೊದಲ ಬಾರಿಗೆ ಮೆಟ್ ಗಾಲಾದಲ್ಲಿ ಭಾಗವಹಿಸಿದ್ದರು. ಈ ಬಾರಿಯ ಮೆಟ್ ಗಾಲಾ ಅವರಿಗೆ 5ನೇ ಶೋ ಆಗಿದೆ. ಇನ್ನು ಪ್ರಿಯಾಂಕಾ ಅವರ ಪತಿ ನಿಕ್ ಜೋನಸ್ ಟೈಲರ್ಡ್ ಸೂಟ್‌ನಲ್ಲಿ ಪತ್ನಿಗೆ ಮ್ಯಾಚ್ ಮಾಡಿದ್ದರು.

    ಮೆಟ್ ಗಾಲಾದಲ್ಲಿ ಕಾಣಿಸಿಕೊಂಡ ಅಂಬಾನಿ ಪುತ್ರಿ
    ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿಯ ಏಕೈಕ ಪುತ್ರಿ ಇಶಾ ಅಂಬಾನಿ(Isha Ambani) ಸಹ ಮೆಟ್ ಗಾಲಾದಲ್ಲಿ ವಿಶಿಷ್ಟ ಉಡುಪು ಹಾಗೂ ಆಭರಣದಲ್ಲಿ ಎಲ್ಲರ ಗಮನ ಸೆಳೆದರು. ಇಶಾ ಅಂಬಾನಿ ಧರಿಸಿದ್ದ ಉಡುಪನ್ನು ಖ್ಯಾತ ಭಾರತೀಯ ವಸ್ತ್ರ ವಿನ್ಯಾಸಕಿ ಅನಾಮಿಕಾ ಖನ್ನಾ ವಿನ್ಯಾಸಗೊಳಿಸಿದ್ದರು. ಇಶಾ ಧರಿಸಿದ್ದ ಬಿಳಿ ಬಣ್ಣದ ಕಾರ್ಸೆಟ್, ಕಪ್ಪು ಬಣ್ಣದ ಟೇಲರ್ಡ್ ಪ್ಯಾಂಟ್ ಹಾಗೂ ಉದ್ದದ ಅಲಂಕೃತ ಕೇಪ್ ಉಡುಪಿನ ಪ್ರಮುಖ ಆಕರ್ಷಣೆಯಾಯಿತು. ಈ ಡ್ರೆಸ್‌ಗೆ ದುಬಾರಿ ಬೆಲೆಯ ಆಭರಣಗಳನ್ನು ಧರಿಸಿ ಕ್ಲಾಸಿಕ್ ಲುಕ್ ನೀಡಿದ್ದರು.

    ಪಂಜಾಬಿ ಸ್ಟೈಲ್‌ ಡ್ರೆಸ್‌ನಲ್ಲಿ ದಿಲ್ಜಿತ್ ದೋಸಾಂಜ್
    ಪಂಜಾಬ್‌ನ ಖ್ಯಾತ ಗಾಯಕ ದಿಲ್ಜಿತ್ ದೋಸಾಂಜ್(Diljit Dosanjh) ಪೇಟ ಧರಿಸಿ ಥೇಟ್ ಪಂಜಾಬಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಇವರು ತಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಮೆಟ್ ಗಾಲಾ ಫ್ಯಾಷನ್ ನೈಟ್‌ನಲ್ಲಿ ಪ್ರತಿನಿಧಿಸಿದ್ದರು. ಇವರ ಈ ವಸ್ತ್ರ ವಿನ್ಯಾಸವನ್ನು ಪ್ರಬಲ್ ಗುರುಂಗ್ ಅವರು ಮಾಡಿದ್ದಾರೆ. ಬಿಳಿ ಹಾಗೂ ಗೋಲ್ಡ್ ಬಣ್ಣದ ಶೆರ್ವಾಣಿ ವಿನ್ಯಾಸದ ಉಡುಪು ಧರಿಸಿದ್ದ ದಿಲ್ಜಿತ್, ಹಸಿರು ಬಣ್ಣದ ಹರಳುಗಳಿರುವ ಜ್ಯುವೆಲರಿಯನ್ನು ಮ್ಯಾಚ್ ಮಾಡಿದ್ದರು.

    ಗಾರಾ ಉಡುಪಿನಲ್ಲಿ ನತಾಶಾ ಪೂನಾವಾಲ್ಲಾ
    ನತಾಶಾ ಪೂನಾವಾಲ್ಲಾ(Natasha Poonawalla) ಅವರು ಮೆಟ್ ಗಾಲಾದಲ್ಲಿ ಪಾರ್ಸಿಯ ಗಾರಾ ಉಡುಪಿನಲ್ಲಿ ಮಿಂಚಿದರು. ಈ ಉಡುಪಿನ ಕೇಂದ್ರಬಿಂದುವೇನೆಂದರೆ ಫಿಶ್‌ಟೇಲ್ ಸ್ಕರ್ಟ್ ಹಾಗೂ 2 ವಿಂಟೇಜ್ ಗಾರಾ ಸೀರೆಯಲ್ಲಿ ಈ ವಸ್ತ್ರ ವಿನ್ಯಾಸವನ್ನು ಮಾಡಲಾಗಿತ್ತು. ಇದರ ಸ್ಕರ್ಟ್‌ನ ಸಂಪೂರ್ಣ ವಿನ್ಯಾಸವನ್ನು ಕೈ ಕಸೂತಿಯಿಂದಲೇ ಮಾಡಲಾಗಿದೆ. ಇದರಲ್ಲಿ ಇನ್ನೊಂದು ವಿಶೇಷವೆಂದರೆ ಕತ್ತಿನ ಭಾಗಕ್ಕೆ ಕಮಲದ ಆಕಾರವನ್ನು ಹೋಲುವ ಮಳೆಹನಿಯಂತೆ ನೇತಾಡುವ ಮುತ್ತುಗಳನ್ನು ಜೋಡಿಸಲಾಗಿತ್ತು. ನತಾಶಾ ಪೂನಾವಾಲ್ಲಾ ಅವರ ಮೆಟ್ ಗಾಲಾದ ವಸ್ತ್ರ ವಿನ್ಯಾಸವನ್ನು ಮನೀಶ್ ಮಲ್ಹೋತ್ರಾ ಮಾಡಿದ್ದಾರೆ.

    ಈ ಬಾರಿ ನ್ಯೂಯಾರ್ಕ್‌ನಲ್ಲಿ ನಡೆದ ಮೆಟ್ ಗಾಲಾ ಫ್ಯಾಷನ್ ನೈಟ್‌ನಲ್ಲಿ ಬಾಲಿವುಡ್ ತಾರೆಯರು ವಿಭಿನ್ನ ಹಾಗೂ ವಿಶಿಷ್ಟ ವಸ್ತ್ರ ವಿನ್ಯಾಸದಲ್ಲಿ ಕಂಗೊಳಿಸಿದರು. ಈ ಮೆಟ್ ಗಾಲಾದಲ್ಲಿ ದೇಶ-ವಿದೇಶದ ಫ್ಯಾಷನ್ ಮಾಡೆಲ್ಸ್, ಸೆಲೆಬ್ರಿಟಿಸ್ ಭಾಗಿಯಾಗಿದ್ದರು.

  • ಬೇಬಿ ಬಂಪ್‌ನೊಂದಿಗೆ ‘ಮೆಟ್ ಗಾಲಾ’ದಲ್ಲಿ ಹೆಜ್ಜೆ ಹಾಕಿದ ಕಿಯಾರಾ ಅಡ್ವಾಣಿ

    ಬೇಬಿ ಬಂಪ್‌ನೊಂದಿಗೆ ‘ಮೆಟ್ ಗಾಲಾ’ದಲ್ಲಿ ಹೆಜ್ಜೆ ಹಾಕಿದ ಕಿಯಾರಾ ಅಡ್ವಾಣಿ

    ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ (Kiara Advani) ಅಮ್ಮನಾಗ್ತಿರೋ ಸಂತಸದಲ್ಲಿದ್ದಾರೆ. ಇದೇ ಖುಷಿಯಲ್ಲಿ ಅವರು ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ನಡೆದ ಮೆಟ್ ಗಾಲಾ ಫ್ಯಾಷನ್ ಹಬ್ಬದಲ್ಲಿ ಭಾಗಿಯಾಗಿದ್ದಾರೆ.‌ ಇದನ್ನೂ ಓದಿ:ಅಯ್ಯೋ ನನಗೆ ಹೊಟ್ಟೆ ಬಂದಿದೆ ಎಂದಿದ್ದ ನಟಿ ರಿತಿಕಾ ಸಿಂಗ್ ಸೊಂಟ ಬಳ್ಳಿಯಂತಾಗಿದ್ದು ಹೇಗೆ ಗೊತ್ತಾ?

    ಪ್ರತಿ ವರ್ಷದಂತೆ ಈ ವರ್ಷವು ಕೂಡ ‘ಮೆಟ್ ಗಾಲಾ 2025’ (Met Gala 2025) ಫ್ಯಾಷನ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ದೇಶ- ವಿದೇಶಗಳಿಂದ ಸೆಲೆಬ್ರಿಟಿಗಳು ಆಗಮಿಸುತ್ತಿದ್ದಾರೆ. ಈ ಸಾಲಿನಲ್ಲಿ ಪ್ರೆಗ್ನೆಂಟ್ ಕಿಯಾರಾ ಅಡ್ವಾಣಿ ಕೂಡ ಭಾಗಿಯಾಗಿದ್ದಾರೆ.

    ನ್ಯೂಯಾರ್ಕ್‌ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ‘ಮೆಟ್ ಗಾಲಾ’ ಫ್ಯಾಷನ್ ಹಬ್ಬ ನಡೆಯುತ್ತಿದೆ. ಇಲ್ಲಿನ ರೆಡ್ ಕಾರ್ಪೆಟ್‌ನಲ್ಲಿ ಕಿಯಾರಾ ಮಸ್ತ್ ಆಗಿ ಬೇಬಿ ಬಂಪ್‌ನೊಂದಿಗೆ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ:ಅವಮಾನ ಸಹಿಸುವಷ್ಟು ಚಿಕ್ಕವನಲ್ಲ – ಸ್ಯಾಂಡಲ್‌ವುಡ್‌ನಿಂದ ಅಸಹಕಾರದ ಬೆನ್ನಲ್ಲೇ ಸೋನು ನಿಗಮ್ ರಿಯಾಕ್ಷನ್

    ಕಪ್ಪು ಬಣ್ಣದ ಗೌನ್‌ಗೆ ಗೋಲ್ಡನ್ ಕಲರ್ ವಿನ್ಯಾಸವಿರುವ ಧಿರಿಸಿನಲ್ಲಿ ಕಿಯಾರಾ ಮಿಂಚಿದ್ದಾರೆ. ಈ ವೇಳೆ, ಅವರಲ್ಲಿ ಪ್ರೆಗ್ನೆನ್ಸಿ ಗ್ಲೋ ಎದ್ದು ಕಾಣುತ್ತಿದೆ. ಗೌನ್‌ನ ಹೊಟ್ಟೆಯ ಭಾಗದಲ್ಲಿ ಹೃದಯಾಕಾರದ ಚಿತ್ತಾರವಿದೆ. ಈ ಲುಕ್‌ನಲ್ಲಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ರೆಡ್ ಕಾರ್ಪೆಟ್‌ನಲ್ಲಿ ಸ್ಟೈಲಿಶ್ ಆಗಿ ಹೆಜ್ಜೆ ಹಾಕಿದ್ದಾರೆ.

    ಅಂದಹಾಗೆ, ಪತ್ನಿಯನ್ನು ನೋಡಿಕೊಳ್ಳಲು ಸಿದ್ಧಾರ್ಥ್ ಮಲ್ಹೋತ್ರಾ ಕೂಡ ಭಾಗಿಯಾಗಿದ್ದರು. ಕಿಯಾರಾ ಅವರನ್ನು ನಟ ಆರೈಕೆ ಮಾಡುತ್ತಿರುವ ರೀತಿ ಕಂಡು ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

    ಅಂದಹಾಗೆ, ಕಿಯಾರಾ ಅವರ ಲುಕ್ ಅನ್ನು ಐಶ್ವರ್ಯಾ ರೈ ಹೊಲಿಸಿದ್ದಾರೆ. ಕಳೆದ ಬಾರಿ `ಮೆಟ್ ಗಾಲಾ’ ಕಾರ್ಯಕ್ರಮದಲ್ಲಿ ಇದೇ ಕಪ್ಪು ಬಣ್ಣದ ಗೌನ್‌ನಲ್ಲಿ ಅವರು ಮಿಂಚಿದ್ದರು.

    2023ರಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಕಿಯಾರಾ ಮದುವೆಯಾದರು. ಹಲವು ವರ್ಷಗಳ ಡೇಟಿಂಗ್ ಬಳಿಕ ಗುರುಹಿರಿಯರ ಸಮ್ಮತಿ ಪಡೆದು ಮದುವೆಯಾದರು. ಈಗ ಪೋಷಕರಾಗುತ್ತಿರುವ ಸಂತಸದಲ್ಲಿದ್ದಾರೆ.

  • ಪತಿಯೊಂದಿಗೆ ಗರ್ಭಿಣಿ ಕಿಯಾರಾ ಅಡ್ವಾಣಿ ವೆಕೇಷನ್

    ಪತಿಯೊಂದಿಗೆ ಗರ್ಭಿಣಿ ಕಿಯಾರಾ ಅಡ್ವಾಣಿ ವೆಕೇಷನ್

    ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ (Kiara Advani) ವೆಕೇಷನ್ ಮೂಡ್‌ನಲ್ಲಿದ್ದಾರೆ. ಪತಿ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಜೊತೆ ಗರ್ಭಿಣಿ ಕಿಯಾರಾ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಪ್ರವಾಸದ ಸುಂದರ ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಬೇಬಿ ಬಂಪ್ ಮರೆ ಮಾಚಿ ವೆಕೇಷನ್ ಸುಂದರ ಫೋಟೋಗಳನ್ನು ಕಿಯಾರಾ ಹಂಚಿಕೊಂಡಿದ್ದಾರೆ. ನಟಿಯ ಮುಖದಲ್ಲಿ ಪ್ರೆಗ್ನೆನ್ಸಿ ಕಳೆ ಎದ್ದು ಕಾಣುತ್ತಿದೆ. ಪತಿಯೊಂದಿಗೆ ನಟಿ ಖುಷಿಯಲ್ಲಿರೋದನ್ನು ನೋಡಬಹುದಾಗಿದೆ. ಇದನ್ನೂ ಓದಿ:ತಮಿಳು ನಟ ಅಜಿತ್ ಕುಮಾರ್ ಆಸ್ಪತ್ರೆಗೆ ದಾಖಲು

    ಫೆ.28ರಂದು ಕಿಯಾರಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿರೋದಾಗಿ ಅಧಿಕೃತವಾಗಿ ಘೋಷಿಸಿದ್ದರು. ಈ ದಂಪತಿಗೆ ಸಮಂತಾ, ರಶ್ಮಿಕಾ, ಆಲಿಯಾ ಭಟ್, ಜಾಕ್ವೆಲಿನ್ ಸೇರಿದಂತೆ ಅನೇಕರು ಶುಭಕೋರಿದ್ದರು. ಇದನ್ನೂ ಓದಿ:ಮದುವೆ ಬಳಿಕ ಮೊದಲ ಬಾರಿಗೆ ಪತಿಯೊಂದಿಗಿನ ಫೋಟೋ ಹಂಚಿಕೊಂಡ ಗಾಯಕಿ ಪೃಥ್ವಿ ಭಟ್

    ಪ್ರೆಗ್ನೆಂಟ್ ಆಗಿರೋ ಹಿನ್ನೆಲೆ ಇತ್ತೀಚೆಗೆ ರಣವೀರ್ ಸಿಂಗ್ ನಟನೆಯ ‘ಡಾನ್ 3’ ಚಿತ್ರದಿಂದ ಕಿಯಾರಾ ಹೊರಬಂದಿದ್ದಾರೆ. ಕೆಲವು ಪ್ರಾಜೆಕ್ಟ್‌ಗಳನ್ನು ಅವರು ಕೈಬಿಟ್ಟಿದ್ದಾರೆ.

    2023ರ ಫೆ.7ರಂದು ಬಾಲಿವುಡ್‌ ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಕಿಯಾರಾ ಅಡ್ವಾಣಿ ಮದುವೆಯಾದರು. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು.

  • 1.12 ಕೋಟಿ ಮೌಲ್ಯದ ದುಬಾರಿ ಕಾರು ಖರೀದಿಸಿದ ಸಿದ್ಧಾರ್ಥ್ ಮಲ್ಹೋತ್ರಾ

    1.12 ಕೋಟಿ ಮೌಲ್ಯದ ದುಬಾರಿ ಕಾರು ಖರೀದಿಸಿದ ಸಿದ್ಧಾರ್ಥ್ ಮಲ್ಹೋತ್ರಾ

    ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra) ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. 1.12 ಕೋಟಿ ರೂ. ಮೌಲ್ಯದ ಲಕ್ಷುರಿ ಕಾರೊಂದನ್ನು ಅವರು ಖರೀದಿಸಿದ್ದಾರೆ. ಇದನ್ನೂ ಓದಿ:ಹೊಸ ಚಿತ್ರಕ್ಕಾಗಿ ಕುಮಟಾದಲ್ಲಿ ಬೀಡುಬಿಟ್ಟ ಜ್ಯೂ.ಎನ್‌ಟಿಆರ್‌, ಪ್ರಶಾಂತ್‌ ನೀಲ್

    ಕಿಯಾರಾ ಅಡ್ವಾಣಿ ತಾಯಿಯಾಗುತ್ತಿರೋ ಗುಡ್ ನ್ಯೂಸ್ ಕೊಟ್ಟ ಬೆನ್ನಲ್ಲೇ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. 1.12 ಕೋಟಿ ರೂ. ಮೌಲ್ಯದ ಟೊಯೋಟಾ ವೆಲ್‌ಫೈರ್ ಕಾರು ಕೊಂಡುಕೊಂಡಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸದ್ಯ ಈ ಜೋಡಿಗೆ ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ. ಇದನ್ನೂ ಓದಿ:ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅನುಷ್ಕಾ ಶೆಟ್ಟಿ ಬ್ಯುಸಿ

     

    View this post on Instagram

     

    A post shared by Viral Bhayani (@viralbhayani)

    ಇತ್ತೀಚೆಗೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕೂಡ 1.12 ಕೋಟಿ ರೂ. ಮೌಲ್ಯದ ಟೊಯೋಟಾ ವೆಲ್‌ಫೈರ್ ಖರೀದಿಸಿದ್ದರು. ಬಾಲಿವುಡ್‌ನಲ್ಲಿ ನಟರಾದ ಅಕ್ಷಯ್ ಕುಮಾರ್, ಅಜಯ್ ದೇವಗನ್, ಆಮೀರ್ ಖಾನ್, ಅನಿಲ್ ಕಪೂರ್, ಐಶ್ವರ್ಯಾ ರೈ ಸೇರಿದಂತೆ ಅನೇಕರ ಬಳಿ ಈ ಕಾರ್‌ ಇದೆ.

  • ಪ್ರೆಗ್ನೆನ್ಸಿ ಗುಡ್ ನ್ಯೂಸ್ ಕೊಟ್ಮೇಲೆ ಮತ್ತೆ ಚಿತ್ರೀಕರಣದಲ್ಲಿ ಕಿಯಾರಾ ಬ್ಯುಸಿ

    ಪ್ರೆಗ್ನೆನ್ಸಿ ಗುಡ್ ನ್ಯೂಸ್ ಕೊಟ್ಮೇಲೆ ಮತ್ತೆ ಚಿತ್ರೀಕರಣದಲ್ಲಿ ಕಿಯಾರಾ ಬ್ಯುಸಿ

    ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ (Kiara Advani) ಅವರು ತಾಯಿ ಆಗುತ್ತಿರುವ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಬೆನ್ನಲ್ಲೇ ಮೊದಲ ಬಾರಿಗೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಸಿಹಿಸುದ್ದಿ ಕೊಟ್ಟ ಬೆನ್ನಲ್ಲೇ ಚಿತ್ರೀಕರಣಕ್ಕೆ ನಟಿ ಹಾಜರಿ ಹಾಕಿದ್ದಾರೆ. ಇದನ್ನೂ ಓದಿ:ನಿನ್ನ ನಗುವಿನ ಬೆಳಕಲ್ಲಿ, ನನ್ನ ಬದುಕು ಬೆಳಗಿದೆ: ಪತ್ನಿ ಬರ್ತ್‌ಡೇಗೆ ರಿಷಬ್ ಲವ್ಲಿ ವಿಶ್

    ನಿನ್ನೆಯಷ್ಟೇ (ಫೆ.28) ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ಕಿಯಾರಾ ದಂಪತಿ ಘೋಷಿಸಿದ್ದರು. ಈ ಬೆನ್ನಲ್ಲೇ ನಟಿ ಚಿತ್ರೀಕರಣಕ್ಕೆ ಮರಳಿದ್ದಾರೆ. ವ್ಯಾನಿಟಿ ವ್ಯಾನ್‌ ಬಳಿ ಕಿಯಾರಾ ನಡೆದುಕೊಂಡು ಬರುವ ವೇಳೆ, ನಟಿಯ ಮುಖದಲ್ಲಿ ಪ್ರೆಗ್ನೆನ್ಸಿ ಗ್ಲೋ ಎದ್ದು ಕಾಣುತ್ತಿತ್ತು. ಶುಭಹಾರೈಸಿದ ಪಾಪರಾಜಿಗಳಿಗೆ ನಗುತ್ತಾ ಧನ್ಯವಾದ ಹೇಳಿದ್ದಾರೆ.ತಾಯಿ ಆಗುತ್ತಿರುವ ಸಂತಸದ ನಡುವೆಯೂ ಶೂಟಿಂಗ್‌ಗೆ ಮರಳಿರುವ ನಟಿಯ ನಡೆಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

     

    View this post on Instagram

     

    A post shared by Manav Manglani (@manav.manglani)

    ಇನ್ನೂ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಹಾಗೂ ಕಿಯಾರಾ ಅಡ್ವಾಣಿ ಹಲವು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದರು. 2023ರಲ್ಲಿ ರಾಜಸ್ಥಾನದಲ್ಲಿ ಈ ಜೋಡಿ ಅದ್ಧೂರಿಯಾಗಿ ಮದುವೆಯಾದರು. ಇದನ್ನೂ ಓದಿ:ತಂಗಿ ಬಗ್ಗೆ ರಶ್ಮಿಕಾ ಮಂದಣ್ಣ ಶಾಕಿಂಗ್ ಕಾಮೆಂಟ್: ಹೀಗ್ಯಾಕಂದ್ರು ಶ್ರೀವಲ್ಲಿ?

     

    View this post on Instagram

     

    A post shared by KIARA (@kiaraaliaadvani)

    ಅಂದಹಾಗೆ, ಕಿಯಾರಾ ಸದ್ಯ ವಾರ್ 2, ಟಾಕ್ಸಿಕ್, ಕರಣ್ ಜೋಹರ್ ನಿರ್ಮಾಣದ ಹೊಸ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಿವೆ.

  • ಗುಡ್ ನ್ಯೂಸ್ ಕೊಟ್ಟ ನಟಿ- ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಿಯಾರಾ ಅಡ್ವಾಣಿ

    ಗುಡ್ ನ್ಯೂಸ್ ಕೊಟ್ಟ ನಟಿ- ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಿಯಾರಾ ಅಡ್ವಾಣಿ

    ಬಾಲಿವುಡ್ ಸ್ಟಾರ್ ಕಪಲ್ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಹಾಗೂ ಕಿಯಾರಾ ಅಡ್ವಾಣಿ ದಂಪತಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಾಯಿಯಾಗುತ್ತಿರುವ ಕುರಿತು ನಟಿ ಇನ್ಸ್ಟಾಗ್ರಾಂನಲ್ಲಿ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ನಟ ದರ್ಶನ್‌ಗೆ ಇನ್ಮುಂದೆ ದೇಶಾದ್ಯಂತ ಸಂಚಾರಕ್ಕೆ ಅವಕಾಶ – ಹೈಕೋರ್ಟ್ ಆದೇಶ

    ‘ನಮ್ಮ ಜೀವನದ ಶ್ರೇಷ್ಠ ಉಡುಗೊರೆ ಶೀಘ್ರದಲ್ಲಿಯೇ ಬರಲಿದೆ’ ಎಂದು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಸಿಹಿಸುದ್ದಿಯನ್ನು ಕಿಯಾರಾ ದಂಪತಿ ಬರೆದುಕೊಂಡಿದ್ದಾರೆ. ಮಗುವಿನ ಪುಟ್ಟ ಶೂ ಫೋಟೋ ಶೇರ್‌ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಜೋಡಿಗೆ ಅನೇಕರು ಶುಭಕೋರುತ್ತಿದ್ದಾರೆ.

     

    View this post on Instagram

     

    A post shared by KIARA (@kiaraaliaadvani)

    ಇನ್ನೂ ಹಲವು ವರ್ಷಗಳ ಡೇಟಿಂಗ್ ಬಳಿಕ 2023ರಲ್ಲಿ ಫೆ.7ರಂದು ಕಿಯಾರಾ ಮತ್ತು ಸಿದ್ಧಾರ್ಥ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

  • ಸಲ್ಮಾನ್ ಖಾನ್ ಸಿನಿಮಾ ನೋಡಲು ಕಾಯುತ್ತಿದ್ದೇವೆ: ರಾಮ್ ಚರಣ್

    ಸಲ್ಮಾನ್ ಖಾನ್ ಸಿನಿಮಾ ನೋಡಲು ಕಾಯುತ್ತಿದ್ದೇವೆ: ರಾಮ್ ಚರಣ್

    ನ್ನಡದ ‘ಬಿಗ್ ಬಾಸ್ ಸೀಸನ್ 11’ರ ಕಾರ್ಯಕ್ರಮ ಅಂತ್ಯವಾಗಲು ಕೆಲವೇ ದಿನಗಳು ಬಾಕಿಯಿವೆ. ಇತ್ತ ಹಿಂದಿ ‘ಬಿಗ್ ಬಾಸ್’ ಸೀಸನ್ 18 (Bigg Boss Hindi 18) ಕೂಡ ಸದ್ದು ಮಾಡುತ್ತಿದೆ. ಸಲ್ಮಾನ್ ಖಾನ್ (Salman Khan) ನಿರೂಪಣೆಯ ಈ ಕಾರ್ಯಕ್ರಮಕ್ಕೆ ರಾಮ್ ಚರಣ್ ಮತ್ತು ಕಿಯಾರಾ ಅತಿಥಿಯಾಗಿ ಭಾಗವಹಿಸಿದ್ದಾರೆ. ಈ ವೇಳೆ, ನಿಮ್ಮ ಸಿನಿಮಾ ನೋಡಲು ಕಾಯುತ್ತೀದ್ದೇವೆ ಎಂದು ಸಲ್ಮಾನ್‌ರನ್ನು ರಾಮ್ ಚರಣ್ ಹಾಡಿ ಹೊಗಳಿದ್ದಾರೆ.

     

    View this post on Instagram

     

    A post shared by beingsalmankhan (@salmanic_mun)

    ರಾಮ್ ಚರಣ್ (Ram Charan) ಮತ್ತು ಕಿಯಾರಾ ಅಡ್ವಾಣಿ (Kiara Advani) ‘ಗೇಮ್ ಚೇಂಜರ್’ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಿಮಿತ್ತ ಹಿಂದಿ ಬಿಗ್ ಬಾಸ್‌ಗೂ ಅತಿಥಿಗಳಾಗಿ ಆಗಮಿಸಿದ್ದಾರೆ. ಈ ವೇಳೆ ರಾಮ್ ಚರಣ್ ಮಾತನಾಡಿ, ಸಲ್ಮಾನ್ ಭಾಯ್ ನಿಮ್ಮ ಸಿನಿಮಾ ನೋಡಿ ಬಹಳ ಸಮಯ ಆಯಿತು. ನಿಮ್ಮಲಿರುವ ಸಿಖಂದರ್ ಅನ್ನು ನೋಡಲು ಕಾಯುತ್ತಿದ್ದೇವೆ ಎಂದರು. ಆಗ ಕಿಯಾರಾ ಕೂಡ ‘ಸಿಖಂದರ್’ ಚಿತ್ರದ ಟೀಸರ್ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

     

    View this post on Instagram

     

    A post shared by ColorsTV (@colorstv)

    ಅಂದಹಾಗೆ, ‘ಸಿಖಂದರ್’ ಸಿನಿಮಾದಲ್ಲಿ ಸಲ್ಮಾನ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಎ.ಆರ್ ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಮುಂದಿನ ವರ್ಷ ಈದ್ ಹಬ್ಬದಂದು ಸಿನಿಮಾ ರಿಲೀಸ್ ಆಗಲಿದೆ.

  • ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಅನಿಲ್ ಕಪೂರ್?

    ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಅನಿಲ್ ಕಪೂರ್?

    ಬಾಲಿವುಡ್ ನಟ ಅನಿಲ್ ಕಪೂರ್ (Anil Kapoor) ಅವರ ಮುಂದಿನ ಸಿನಿಮಾ ಕುರಿತು ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಅನಿಲ್ ಕಪೂರ್ ಅವರು ನಟಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ದಿಲ್ಜಿತ್ ದೋಸಾಂಜ್ ಸಂಗೀತ ಕಚೇರಿಯಲ್ಲಿ ಮದ್ಯ ಮತ್ತು ಮಾಂಸದೂಟ: ಬಜರಂಗದಳ ಪ್ರತಿಭಟನೆ

    ಮುಂಬೈನಲ್ಲಿ ‘ಟಾಕ್ಸಿಕ್’ (Toxic) ಸಿನಿಮಾ ಶೂಟಿಂಗ್ ನಡೆಯುತ್ತಿರುವ ಸ್ಥಳದಲ್ಲಿ ಕಿಯಾರಾ ಅಡ್ವಾಣಿ ಜೊತೆ ಅನಿಲ್ ಕಪೂರ್ ಕಾಣಿಸಿಕೊಂಡಿದ್ದಾರೆ. ಆ ನಂತರ ಇಬ್ಬರೂ ಬೋಟ್‌ನಲ್ಲಿ ಕುಳಿತು ತೆರಳಿದ್ದಾರೆ. ಹಾಗಾಗಿ ಅನಿಲ್ ಕಪೂರ್ ಕೂಡ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಫ್ಯಾನ್ಸ್ ಊಹಿಸಿದ್ದಾರೆ.

     

    View this post on Instagram

     

    A post shared by Snehkumar Zala (@snehzala)

    ಅಂದಹಾಗೆ, 1983ರಲ್ಲಿ ‘ಪಲ್ಲವಿ ಅನುಪಲ್ಲವಿ’ ಸಿನಿಮಾದಲ್ಲಿ ಅನಿಲ್ ಕಪೂರ್ ನಟಿಸಿದ್ದರು. ಈ ಚಿತ್ರವನ್ನು ಕನ್ನಡ ಮತ್ತು ತಮಿಳಿನಲ್ಲಿ ಖ್ಯಾತ ನಿರ್ದೇಶನ ಮಣಿರತ್ನಂ ನಿರ್ದೇಶಿಸಿದರು. ಒಂದು ವೇಳೆ, ‘ಟಾಕ್ಸಿಕ್‌’ನಲ್ಲಿ ಅನಿಲ್ ನಟಿಸಿದ್ದೇ ಆದರೆ 41 ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಂತಾಗುತ್ತದೆ.

    ಇನ್ನೂ ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಜೊತೆ ಕಿಯಾರಾ, ನಯನತಾರಾ, ಹುಮಾ ಖುರೇಶಿ ಸೇರಿದಂತೆ ಅನೇಕರು ಹೆಸರು ಸದ್ದು ಮಾಡುತ್ತಿದೆ. ಆದರೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಗುವವರೆಗೂ ಕಾದುನೋಡಬೇಕಿದೆ.