ಕಲಬುರಗಿ: ವಿವಿಧ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಶುಕ್ರವಾರ (ಜ.19) ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿ (Kalaburagi) ಜಿಲ್ಲೆಗೆ ಆಗಮಿಸಿದ್ದಾರೆ.
ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ (Kalaburagi Airport) ಆಗಮಿಸಿದ ಪ್ರಧಾನಿಗೆ, ರಾಜ್ಯ ಸರ್ಕಾರದ ಪರವಾಗಿ ಸಚಿವ ಶರಣಪ್ರಕಾಶ್ ಪಾಟೀಲ್ ರಿಂದ ಸ್ವಾಗತ ಕೋರಿದ್ದಾರೆ. ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಉಮೇಶ್ ಜಾಧವ್, ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ್, ಪರಿಷತ್ ಸದಸ್ಯ ಬಿ.ಜಿ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷರು ಪ್ರಮುಖ ನಾಯಕರು ಶಾಲು ಹೊದಿಸಿ ಹೂಗುಚ್ಛ ನೀಡಿ ಸ್ವಾಗತ ಕೋರಿದ್ದಾರೆ.
ಬೆಂಗ್ಳೂರಲ್ಲಿ ಭಾರೀ ಭದ್ರತೆ:
ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿ ಭದ್ರತೆಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIAL), ಬೇಗೂರು, ಮೈಲನಹಳ್ಳಿ, ಬಿಐಇಟಿಸಿ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಇಡೀ ರಸ್ತೆಯನ್ನು ಬಾಂಬ್ ಸ್ಕ್ವಾಡ್ ಹಾಗೂ ಡಾಗ್ ಸ್ಕ್ವಾಡ್‌ನಿಂದ ತಪಾಸಣೆ ನಡೆಸಲಾಗಿದೆ. ಪ್ರತಿ 50 ಮೀಟರ್‌ಗೆ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಮಧ್ಯಾಹ್ನ 2.45ರ ವೇಳೆಗೆ ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸೆಂಟರ್ (ಬಿಐಇಟಿಸಿ) ಉದ್ಘಾಟಿಸಲಿದ್ದಾರೆ.
ಬೀದರ್‌ನಲ್ಲಿ ಎಫ್.ಎಂ ಕೇಂದ್ರ ಉದ್ಘಾಟಿಸಲಿರುವ ಮೋದಿ:
ರಾಜ್ಯಕ್ಕೆ ಭೇಟಿ ನೀಡಿರುವ ಮೋದಿ ಅವರು ವರ್ಚುವಲ್ ಮೂಲಕ ಬೀದರ್‌ನ ನೂತನ ಎಫ್.ಎಂ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಇಂದು (ಜ.19) ಸಂಜೆ 5 ಗಂಟೆ ವೇಳೆಗೆ ವರ್ಚುವಲ್ ಮೂಲಕ ಎಫ್‌ಎಂ ಕೇಂದ್ರ ಉದ್ಘಾಟಿಸಲಿದ್ದಾರೆ.
ಬೆಂಗಳೂರಿನ ಆಕಾಶವಾಣಿ ಕೇಂದ್ರದಿಂದ ಪ್ರಸಾರಗೊಳ್ಳುವ ಎಲ್ಲಾ ಕಾರ್ಯಕ್ರಮಗಳು ಮುಂದೆ ಬೀದರ್‌ನ ಎಫ್.ಎಂ ಕೇಂದ್ರದಲ್ಲೂ ಪ್ರಸಾರವಾಗಲಿದೆ. ಬೀದರ್ ನಗರದ ಜನವಾಡ ರಸ್ತೆಯಲ್ಲಿರುವ ಎಫ್.ಎಂ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಭಗವಂತ್ ಖೂಬಾ ಹಾಗೂ ನೂರಾರು ಜನರು ಭಾಗಿಯಾಲಿದ್ದಾರೆ.
ಬೆಂಗಳೂರು: 2022ನೇ ಕ್ಯಾಲೆಂಡರ್ ವರ್ಷದಲ್ಲಿ 2.75 ಕೋಟಿ ಪ್ರಯಾಣಿಕರು ಪ್ರಯಾಣಿಸುವ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIAL) ದಾಖಲೆ ಬರೆದಿದೆ. ಇದು 2019ರ ಕೋವಿಡ್ ಪೂರ್ವ ಅವಧಿಗಿಂತಲೂ ಹೆಚ್ಚು. ದೇಶಿಯ ವಲಯದಲ್ಲಿ ಶೇ.85ರಷ್ಟು ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಶೇ.65ರಷ್ಟು ಚೇತರಿಕೆ ಕಂಡಿದೆ.
2.75 ಕೋಟಿ ಪ್ರಯಾಣಿಕರ ಪೈಕಿ 2.43 ಕೋಟಿ ದೇಶೀಯ ಹಾಗೂ 31.4 ಲಕ್ಷ ಅಂತಾರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ. ಡಿಸೆಂಬರ್ ತಿಂಗಳಲ್ಲಿಯೇ ಅತ್ಯಧಿಕ ಜನರು ವಿಮಾನ ಪ್ರಯಾಣವನ್ನು ಆಯ್ಕೆ ಮಾಡುವ ಮೂಲಕ ಈ ದಾಖಲೆ ನಿರ್ಮಾಣವಾಗಿದೆ. ಪ್ರಮುಖ ದೇಶಿಯ ಹಾಗೂ ವಿದೇಶಿಯ ವ್ಯಾಪಾರ ಕೇಂದ್ರಗಳ ಮಾರ್ಗ ಮರುಪ್ರಾರಂಭ ಹಾಗೂ ಹೊಸಮಾರ್ಗಗಳ ಪರಿಚಯ ಈ ತ್ವರಿತ ಸುಧಾರಣೆ ಹಾಗೂ ವಿಮಾನ ನಿಲ್ದಾಣದಲ್ಲಿ (Bengaluru Airport) ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.
ವರ್ಷಾಂತ್ಯದ ಚೇತರಿಕೆ:
ಡಿಸೆಂಬರ್ ತಿಂಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದೆ. ಈ ಒಂದು ತಿಂಗಳಲ್ಲಿಯೇ 31.3 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. 2019ರ ಡಿಸೆಂಬರ್‌ನಲ್ಲಿ 3.06 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದರು. ಆದರೆ 2022ರ ಡಿಸೆಂಬರ್ ಹಿಂದಿನ ಎಲ್ಲಾ ದಾಖಲೆಗಳನ್ನು ಹಿಂದಿಟ್ಟಿದ್ದು, ಡಿ.23 ಒಂದೇ ದಿನದಂದು ಬರೋಬ್ಬರಿ 1,07,825 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಕೋವಿಡ್ ಪೂರ್ವಕ್ಕೆ ಹೋಲಿಸಿದರೆ, ವಿಮಾನ ಸಾರಿಗೆ ಚಲನೆಗಳಲ್ಲಿ (ಎಟಿಎಂ) ಶೇ. 98ರಷ್ಟು ಚೇತರಿಕೆ ಕಂಡಿದೆ. ಇದನ್ನೂ ಓದಿ: Top Performing Airports 2022 – ವಿಶ್ವದಲ್ಲೇ ಬೆಂಗಳೂರು ನಂ.2
ಪ್ರಮುಖ ವಿಸ್ತರಣೆ:
ಕೋವಿಡ್ ಸಾಂಕ್ರಾಮಿಕದ ಬಳಿಕ, ಬಹುತೇಕ ವಿಮಾನಯಾನ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಪುನರಾರಂಭಿಸಿವೆ ಹಾಗೂ 2022ರಲ್ಲಿ ಹೆಚ್ಚಿನ ಸಂಖ್ಯೆಯ ನಗರಗಳಿಗೆ ಸಂಪರ್ಕ ಕಲ್ಪಿಸಿವೆ. ಪ್ರಸ್ತುತ BLR ವಿಮಾನ ನಿಲ್ದಾಣವು ಭಾರತಾದ್ಯಂತ 75 ಸ್ಥಳಗಳಿಗೆ ಸಂಪರ್ಕ ಹೊಂದಿದ್ದು, ಪೂರ್ವ ಕೋವಿಡ್‌ಗೆ ಹೋಲಿಸಿದರೆ 16 ಸ್ಥಳಗಳು ಹೊಸದಾಗಿ ಸೇರ್ಪಡೆಗೊಂಡಿದೆ. ಆಕಾಶ ಏರ್‌ಲೈನ್ ಸಂಸ್ಥೆಯ ಬೆಳವಣಿಗೆ ಗಮನಾರ್ಹವಾಗಿದ್ದು, ಬಿಎಲ್‌ಆರ್ ವಿಮಾನ ನಿಲ್ದಾಣದಲ್ಲಿ ತಮ್ಮ ಉಪಸ್ಥಿತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಏರ್‌ಲೈನ್ ಪ್ರಾರಂಭಗೊಂಡ 6 ತಿಂಗಳೊಳಗೆ 11 ಸ್ಥಳಗಳಿಗೆ ಪ್ರತಿದಿನ 30 ಬಾರಿ ವಿಮಾನಯಾನ ನಡೆಸುತ್ತಿದೆ.
ಮಾರ್ಚ್ 2022 ರಲ್ಲಿ ನಿಗದಿತ ಅಂತರಾಷ್ಟ್ರೀಯ ಕಾರ್ಯಾಚರಣೆಗಳ ಪುನರಾರಂಭದ ನಂತರ, ಕ್ವಾಂಟಾಸ್ ಏರ್‌ವೇಸ್‌ನಿಂದ ಬೆಂಗಳೂರು ಮತ್ತು ಸಿಡ್ನಿ ನಡುವೆ ನೇರ ಮಾರ್ಗವನ್ನು (ನಾಲ್ಕು ಸಾಪ್ತಾಹಿಕ ವಿಮಾನಗಳು) ಪರಿಚಯಿಸಲಾಗಿದೆ. ಇದು ದಕ್ಷಿಣ ಭಾರತದಿಂದ ಆಸ್ಟ್ರೇಲಿಯಾಕ್ಕೆ ಮೊದಲ ನೇರ ಸಂಪರ್ಕವಾಗಿದೆ. ಬಿಎಲ್‌ಆರ್ ಮತ್ತು ದಕ್ಷಿಣ ಭಾರತದಿಂದ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಎಮಿರೇಟ್ಸ್ A380 (ವಿಶ್ವದ ಅತಿ ದೊಡ್ಡ ವಿಮಾನ) ಸೇವೆಯನ್ನು ದುಬೈಗೆ ಪ್ರಾರಂಭಿಸಲಾಗಿದೆ. ಜೊತೆಗೆ, ಏರ್ ಇಂಡಿಯಾ ತನ್ನ ಬೆಂಗಳೂರು – ಸ್ಯಾನ್ ಫ್ರಾನ್ಸಿಸ್ಕೊ ಮೂರು-ಸಾಪ್ತಾಹಿಕ ಮಾರ್ಗವನ್ನು ಡಿಸೆಂಬರ್ 2022ರಲ್ಲಿ ಪುನರ್ ಪ್ರಾರಂಭ ಮಾಡಿದೆ. ಈ ವಿಮಾನಯಾನದಿಂದ BLR ವಿಮಾನನಿಲ್ದಾಣವು ಉತ್ತರ ಅಮೆರಿಕಕ್ಕೆ ನೇರ ಸಂಪರ್ಕ ಹೊಂದುವ ದಕ್ಷಿಣ ಮತ್ತು ಮಧ್ಯ ಭಾರತದ ಮೊದಲ ವಿಮಾನ ನಿಲ್ದಾಣವಾಗಿದೆ. ಇದು BLR ಮಾರುಕಟ್ಟೆಯ ವಿಕಾಸ / ಅಭಿವೃದ್ಧಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಇದೇ ಮಾದರಿ ಇತರ ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಸಹ 2022 ರಲ್ಲಿ BLR ವಿಮಾನ ನಿಲ್ದಾಣದಿಂದ ವಿಮಾನಯಾನವನ್ನು ಪುನರಾರಂಭಿಸಿವೆ.
ವರ್ಗಾವಣೆ ಕೇಂದ್ರ:
BLR ವಿಮಾನ ನಿಲ್ದಾಣವು ಬೌಗೋಳಿಕವಾಗಿ ಪ್ರಾದೇಶಿಕ ಸಂಪರ್ಕದ ಕೇಂದ್ರವಾಗಿದ್ದು, ಈ ಕಾರಣದಿಂದಾಗಿ ವರ್ಗಾವಣೆ ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೂ ಕಾರಣವಾಗಿದೆ. 100 ಕ್ಕೂ ಹೆಚ್ಚು ದೈನಂದಿನ ನಿರ್ಗಮನಗಳೊಂದಿಗೆ, ವರ್ಗಾವಣೆ ಪ್ರಯಾಣಿಕರ ಪಾಲು ಶೇ.15ಕ್ಕೆ ಏರಿದೆ. ಪೂರ್ವ ಕೋವಿಡ್ ವರ್ಷಗಳಿಗೆ ಹೋಲಿಸಿದರೆ ಶೇ.5ರಷ್ಟು ಏರಿಕೆಯಾಗಿದೆ. ಇದು ದಕ್ಷಿಣ ಮತ್ತು ಮಧ್ಯ ಭಾರತದಲ್ಲಿ ಆದ್ಯತಾ ವರ್ಗಾವಣೆ / ಸಾರಿಗೆ ವಿಮಾನ ನಿಲ್ದಾಣವಾಗಿ BLR ವಿಮಾನ ನಿಲ್ದಾಣ ಸ್ಥಾನ ಪಡೆದುಕೊಂಡಿದೆ.
2022 ವರ್ಷದಲ್ಲಿ ದೆಹಲಿ, ಮುಂಬೈ, ಕೋಲ್ಕತ್ತಾ, ಕೊಚ್ಚಿ ಮತ್ತು ಹೈದರಾಬಾದ್ ಅಗ್ರ ದೇಶೀಯ ಮಾರ್ಗಗಳಾಗಿ, ದೇಶೀಯ ಟ್ರಾಫಿಕ್‌ಗೆ ಸರಿಸುಮಾರು ಶೇ.40ರಷ್ಟು ಕೊಡುಗೆ ನೀಡಿವೆ. ದುಬೈ, ಮಾಲೆ, ಸಿಂಗಾಪುರ್, ದೋಹಾ ಮತ್ತು ಅಬುಧಾಬಿಗಳು BLR ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಸಂಚಾರಕ್ಕೆ ಸರಿಸುಮಾರು ಶೇ.47ರಷ್ಟು ಕೊಡುವ ಅಗ್ರ ಅಂತಾರಾಷ್ಟ್ರೀಯ ಮಾರ್ಗಗಳಾಗಿವೆ.
“ಕೋವಿಡ್ ವರ್ಷಗಳು ನಮಗೆ ತುಂಬಾ ಸವಾಲಾಗಿತ್ತು. ಅದರ ಹೊರತಾಗಿಯೂ, ಪ್ರಯಾಣಿಕರ ದಟ್ಟಣೆಯಲ್ಲಿ ಸ್ಥಿರವಾದ ಚೇತರಿಕೆಯಿಂದ ಸಂತಸವಾಗಿದೆ. ಪ್ರಯಾಣಿಕರ ಸೌಕರ್ಯ ಮತ್ತು ತಡೆರಹಿತ ಪ್ರಯಾಣವು ಆದ್ಯತೆಯಾಗಿ ಮುಂದುವರಿಯುತ್ತದೆ. ಇದರ ಜೊತೆಗೆ, ನಮ್ಮ ಸರಕು ಪಾಲುದಾರಿಕೆಗಳು ನಮ್ಮ ವ್ಯಾಪಾರದ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿವೆ. BLR ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ 2 (T2) ಉದ್ಘಾಟನೆಯೊಂದಿಗೆ ನಮ್ಮ ಕಾರ್ಯಾಚರಣೆಯ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿರುವುದರಿಂದ 2022 ವರ್ಷವು ನಮಗೆ ಮಹತ್ವದ ಮೈಲಿಗಲ್ಲು ಸಾಧಿಸಲು ಸಾಧ್ಯವಾಗಿದೆ. T2 ಕಾರ್ಯಾಚರಣೆಯೊಂದಿಗೆ, ನಾವು ದಕ್ಷಿಣ ಮತ್ತು ಮಧ್ಯ ಭಾರತಕ್ಕೆ ನೈಸರ್ಗಿಕ ಹೆಬ್ಬಾಗಿಲಾಗಿ ಸೇವೆ ಸಲ್ಲಿಸುವ ಮೂಲಕ ಇನ್ನಷ್ಟು ಉತ್ತಮ ಸ್ಥಾನವನ್ನು ಪಡೆದುಕೊಳ್ಳುತ್ತೇವೆ ಎಂಬ ಭರವಸೆ ಇದೆ ಎಂದು ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (BIAL) ಮುಖ್ಯ ಕಾರ್ಯತಂತ್ರ ಮತ್ತು ಅಭಿವೃದ್ಧಿ ಅಧಿಕಾರಿ ಸಾತ್ಯಕಿ ರಘುನಾಥ್ ತಿಳಿಸಿದ್ದಾರೆ.
ಕಾರ್ಗೋ ಬೆಳವಣಿಗೆ:
BLR ಕಾರ್ಗೋ ಸತತ ಎರಡನೇ ವರ್ಷ, ಪೆರಿಷೆಬಲ್ ಸರಕುಗಳ ಸಾಗಾಟಣೆಯಲ್ಲಿ ಮೊದಲ ವಿಮಾನ ನಿಲ್ದಾಣವಾಗಿ ಗುರುತಿಸಿಕೊಂಡಿದೆ. ಜೊತೆಗೆ, ಅಂತಾರಾಷ್ಟ್ರೀಯ ಸರಕು ಸಾಗಣೆಯಲ್ಲಿ ಮೂರನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿಯೂ ಹೆಸರು ಪಡೆದುಕೊಂಡಿದೆ. ಇದಲ್ಲದೆ UPS, DHL ಮತ್ತು FedEx ಎಂಬ ವಿಶ್ವದ ಮೂರು ಬಹು ದೊಡ್ಡ ಎಕ್ಸ್‌ಪ್ರೆಸ್ ಸರಕು ಸಾಗಣೆದಾರರನ್ನು ಹೊಂದಿರುವ ಭಾರತದ ಎರಡನೇ ವಿಮಾನ ನಿಲ್ದಾಣವೂ ಆಗಿದೆ.
14 ದೇಶೀಯ ಮತ್ತು ವಿದೇಶಿ ಸರಕು ವಾಹಕಗಳು 41 ನೇರ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. BLR ಕಾರ್ಗೋ, ದೇಶದ ಅಗ್ರ ಕಾರ್ಗೋ ವಿಮಾನ ನಿಲ್ದಾಣಗಳಲ್ಲಿ BLR ವಿಮಾನ ನಿಲ್ದಾಣದ ಸ್ಥಾನವನ್ನು ಭದ್ರಮಾಡಿಕೊಂಡಿದೆ.
2022 ವರ್ಷದಲ್ಲಿ ಸರಕು ಪ್ರಮಾಣವು 412,668 MT ಆಗಿದ್ದು, ಇದು ವಿಮಾನ ನಿಲ್ದಾಣದ ಪ್ರಾರಂಭದ ದಿನದಿಂದ ನಿರ್ವಹಿಸಲಾದ ಅತ್ಯಧಿಕ ಪ್ರಮಾಣದ ಸರಕಾಗಿದೆ. ಜುಲೈ ತಿಂಗಳಲ್ಲಿ ಅತಿ ಹೆಚ್ಚು ಟನ್ ಸರಕು ಸಾಗಣೆ ಆಮದು ಮಾಡಿಕೊಳ್ಳುವ ಮೂಲಕ 2022ರಲ್ಲಿ ದೇಶೀಯ ಸರಕು ಶೇ.8ರಷ್ಟು ಹೆಚ್ಚಳವಾಗಿದೆ. ಸೆಪ್ಟೆಂಬರ್ 29 ರಂದು ಒಂದೇ ದಿನದಲ್ಲಿ 1,612 MT ಅತ್ಯಧಿಕ ಸರಕು ಸಾಗಣೆಯಾಗುವ ಮೂಲಕ ದಾಖಲೆ ನಿರ್ಮಿಸಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಕೆಐಎಎಲ್(ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು) ಏರ್ಪೋರ್ಟ್‌ನಲ್ಲಿ ಬಾಂಬ್ ಇದೆ ಎಂದು ಹುಸಿ ಕರೆ ಬರುವುದು ಸಾಮಾನ್ಯವಾಗಿದೆ. ಆದರೆ ಈ ಸುದ್ದಿ ಸ್ವಲ್ಪ ಭಿನ್ನವಾಗಿದ್ದು, ಅನಾಮಧೇಯ ವ್ಯಕ್ತಿಯೊಬ್ಬ ಟಾಯ್ಲೆಟ್ ಟಿಶ್ಯೂ ಪೇಪರ್ ಮೇಲೆ ಫ್ಲೈಟ್‍ನಲ್ಲಿ ಬಾಂಬ್ ಇದೆ ಎಂದು ಬರೆದು ಎಲ್ಲರಿಗೂ ಶಾಕ್ ಕೊಟ್ಟಿದ್ದಾನೆ.
ಭಾನುವಾರ ರಾತ್ರಿ 9:30ಕ್ಕೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜೈಪುರದಿಂದ ಬೆಂಗಳೂರಿಗೆ 175 ಪ್ರಯಾಣಿಕರನ್ನ ಹೊತ್ತು ತಂದಿದ್ದ ಇಂಡಿಗೋ ವಿಮಾನದ ಫ್ಲೈಟ್ ಟಾಯ್ಲೆಟ್ ಟಿಶ್ಯೂ ಪೇಪರ್ ಮೇಲೆ ಅನಾಮಧೇಯನೊಬ್ಬ ಗೀಚಿದ ಬರಹ ಎಲ್ಲರಿಗೂ ತಲೆಬಿಸಿ ಮಾಡಿತ್ತು. ಈ ಪೇಪರ್‍ನಲ್ಲಿ, ಲ್ಯಾಂಡ್ ನಾ ಕರ್ನಾ, ಇಸ್ ಪ್ಲೈಟ್ ಮೇ ಬಾಂಬ್ ಹೈ(ಈ ಫ್ಲ್ಯೆಟ್ ಲ್ಯಾಂಡ್ ಮಾಡಬೇಡಿ. ಇದರಲ್ಲಿ ಬಾಂಬ್ ಇದೆ) ಎಂದು ಹಿಂದಿ ಭಾಷೆಯಲ್ಲಿ ಬರೆದಿತ್ತು. ಇದನ್ನೂ ಓದಿ: ಗ್ರಾಮಕ್ಕೆ ರಸ್ತೆ, ವಿದ್ಯುತ್ ಸಂಪರ್ಕ ಕಲ್ಪಿಸಿ – ಡಿಸಿಗೆ ಮನವಿ ಮಾಡಿದ ಪುಟ್ಟ ಬಾಲಕಿ
ವಿಮಾನದ ಪೈಲಟ್ ಗಮನಕ್ಕೆ ಬಂದ ಕೂಡಲೇ ಕೆಐಎಎಲ್ ಎ ಭದ್ರತಾ ಏಜೆನ್ಸಿ ಸಂಪರ್ಕಿಸಿ, ಅನುಮತಿ ಬಳಿಕ ಫ್ಲೈಟ್ ಲ್ಯಾಂಡ್ ಮಾಡಿದ್ದಾರೆ. ಬರಹವುಳ್ಳ ಟಿಶ್ಯೂ ಪೇಪರ್ ಗಮನಿಸಿ ಸಿಬ್ಬಂದಿ ಕಾಕ್ ಪಿಟ್ ಸಿಬ್ಬಂದಿಗೆ ತಿಳಿಸಿದ್ದಾರೆ. ಕೂಡಲೇ ಅISಈ ಮತ್ತು ವಾಯು ಸಂಚಾರ ನಿಯಂತ್ರಣ ಘಟಕ ಸಿಬ್ಬಂದಿ ಸಂಪರ್ಕ ಮಾಡಿದೆ.
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಳೇ (ಮೊದಲಿನ) ರನ್ ವೇ ಪುನರ್ ನಿರ್ಮಾಣದ ಕಾಮಗಾರಿ ಈ ತಿಂಗಳಾಂತ್ಯಕ್ಕೆ ಮುಗಿಯಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಅವರು ಪ್ರಸ್ತುತ ಕಾಮಗಾರಿ ಬಹುತೇಕ ಮುಗಿಯುತ್ತಾ ಬಂದಿದ್ದು, ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ ಎಂದರು.
ಸದ್ಯ ಹೊಸ ರನ್ ವೇನಲ್ಲಿಯೇ ವಿಮಾನಗಳ ಸಂಚಾರ ನಡೆಯುತ್ತಿದ್ದು, ಮುಂದಿನ ತಿಂಗಳ ಅಂತ್ಯದಿಂದ ಪುನರ್ ನಿರ್ಮಾಣವಾದ ಹಳೆಯ ರನ್ ವೇನಲ್ಲೂ ವಿಮಾನ ಸಂಚಾರ ಆರಂಭವಾಗಲಿದೆ. ಮುಂಬೈನ ಎಐಸಿ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆ ಈ ಯೋಜನೆಯನ್ನು 260 ಕೋಟಿ ರೂ. ವೆಚ್ಚದಲ್ಲಿ ದಾಖಲೆಯ ಕಡಿಮೆ ಅವಧಿಯಲ್ಲಿ ನಿರ್ಮಿಸಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.
ರನ್ ವೇ ಉದ್ದ 4 ಕಿ.ಮೀ ದೂರವಿದ್ದು, ರನ್ ವೇ ಮಧ್ಯದಲ್ಲೂ ಈಗ ಲೈಟ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ವಿಮಾನಗಳ ಸಂಚಾರಕ್ಕೆ ಹೆಚ್ಚು ಅನುಕೂಲ ಆಗುತ್ತದೆ. ಜತೆಗೆ, ಟ್ಯಾಕ್ಸಿ ವೇಯನ್ನು ಹಾಗೂ ಒಳಚರಂಡಿ, ಏರ್‌ಫೀಲ್ಡ್ ಬೆಳಕಿನ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಅವರು ಹೇಳಿದರು.
ಈ ರನ್ ವೇ ಕಾರ್ಯಾರಂಭವಾದ ಮೇಲೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಒಟ್ಟು ಎರಡೂ ರನ್ ವೇಗಳ ಮೂಲಕ ವರ್ಷಕ್ಕೆ 60 ರಿಂದ 75 ದಶಲಕ್ಷ ಪ್ರಯಾಣಿಕರನ್ನು ನಿಭಾಯಿಸಬಲ್ಲದು. ಇದರಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಉತ್ತಮ ಲಾಭವಾಗಲಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಕೋವಿಡ್ ಸಂಕಷ್ಟವು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಅಪಾರ ನಷ್ಟವನ್ನೇ ಉಂಟು ಮಾಡಿದೆ. . ಕೋವಿಡ್‌ಗೂ ಮೊದಲು ವಾರ್ಷಿಕ 33 ದಶಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಬಳಿಕ ಆ ಪ್ರಮಾಣ 12 ದಶಲಕ್ಷಕ್ಕೆ ಇಳಿದಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಹೆಚ್ಚಳವನ್ನು ನಿರೀಕ್ಷೆ ಮಾಡಬಹುದಾಗಿದೆ ಎಂದರು ಅವರು. ಈ ವೇಳೆ ವಿಮಾನ ನಿಲ್ದಾಣದ ಅಧಿಕಾರಿಗಳು ಹಾಜರಿದ್ದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ರನ್ ವೇ ಕಾಮಗಾರಿಯನ್ನು ಪರಿಶೀಲಿಸಿದೆ.
ದಾಖಲೆ ಗತಿಯಲ್ಲಿ ನಡೆಯುತ್ತಿರುವ ಈ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಮುಂದಿನ ತಿಂಗಳು ಸಂಪೂರ್ಣವಾಗಿ ಸಿದ್ಧವಾಗಲಿದೆ ಎಂಬುದು ಶ್ಲಾಘನೀಯ. ನವ ಬೆಂಗಳೂರಿನ ಜಾಗತಿಕ ಆಕಾಂಕ್ಷೆಗಳಿಗೆ ಇದು ರಹದಾರಿಯಾಗಲಿ!@CMofKarnataka@BLRAirporthttps://t.co/xfDSqDDQkp
ಬೆಂಗಳೂರು: ಲಾಕ್‍ಡೌನ್ ಮಧ್ಯೆಯೂ ಏರ್ಪೋರ್ಟ್ ಗಳಿಗೆ ಸಬಂಧಿಸಿದಂತೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್)ದ ಕುರಿತು ಸಂತಸದ ಸುದ್ದಿ ಹೊರ ಬಿದ್ದಿದ್ದು, ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ದೇಶದ ಪ್ರಮುಖ ನಗರಗಳ ಹೊಸ ವಿಮಾನ ನಿಲ್ದಾಣಗಳ ಪೈಕಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೈ ಸ್ಟಾಂಡರ್ಡ್ ಮೆಂಟೇನ್ ಹೊಂದಿದ್ದು, ವಿಮಾನ ನಿಲ್ದಾಣದಲ್ಲಿನ ಸೌಲಭ್ಯಗಳು ಪ್ರಯಾಣಿಕರು ವೇಗವಾಗಿ ಹಾಗೂ ಸರಳವಾಗಿ ಸಂಚರಿಸಲು ಅನುಕೂಲವಾಗಿದೆ. ಹೀಗಾಗಿ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎಂಬ ಬಿರುದು ಪಡೆದಿದೆ. ಈ ಮೂಲಕ ಸತತ ಮೂರನೇ ಬಾರಿ ಕೇಂದ್ರ ಏಷ್ಯಾದಲ್ಲೇ ಅತ್ಯುತ್ತಮ ವಿಮಾನ ನಿಲ್ದಾಣ ಖ್ಯಾತಿ ಪಡೆದಿದೆ.
ವರ್ಲ್ಡ್ ಏರ್ಪೋರ್ಟ್ ಅವಾರ್ಡ್ಸ್ 2020ನಲ್ಲಿ ಪ್ರಯಾಣಿಕರು ಮತ ಹಾಕಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಸತತ ಮೂರು ಬಾರಿ ಪ್ರಯಾಣಿಕರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಆಯ್ಕೆ ಮಾಡಿದ್ದಾರೆ. ಇದು ಕೇಂದ್ರ ಏಷ್ಯಾ ಭಾಗದಲ್ಲಿ ಹಾಗೂ ಭಾರತದಲ್ಲೇ ನಮ್ಮ ನೆಚ್ಚಿನ ಪ್ರಾದೇಶಿಕ ವಿಮಾನ ನಿಲ್ದಾಣವಾಗಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಪ್ರಯಾಣಿಕರ ವಾರ್ಷಿಕ ಸರ್ವೇ ಆಧಾರದ ಮೇಲೆ ವಿಶ್ವಾದ್ಯಂತ ಎಲ್ಲ ವಿಮಾನ ನಿಲ್ದಾಣಗಳಿಗೆ ವರ್ಲ್ಡ್ ಏರ್ಪೋರ್ಟ್ ಅವಾರ್ಡ್ಸ್ ನೀಡಲಾಗುತ್ತದೆ. ಒಟ್ಟು ಸುಮಾರು 100 ದೇಶಗಳ ಪ್ರಯಾಣಿಕರು ವಿಮಾನ ನಿಲ್ದಾಣಗಳ ಸ್ಥಿತಿಗತಿ, ಚೆಕ್-ಇನ್, ವಿಮಾನಗಳ ಆಗಮನ, ಟ್ರಾನ್ಸಫರ್ಸ್, ಶಾಪಿಂಗ್, ಭದ್ರತೆ, ಇಮಿಗ್ರೇಷನ್ ಹಾಗೂ ಡಿಪಾರ್ಚರ್ಸ್ ಈ ಸೌಲಭ್ಯಗಳನ್ನು ಪರಿಗಣಿಸಿ ಮತ ಹಾಕುತ್ತಾರೆ.
ಇದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯವಸ್ಥಾಪಕ ಮಂಡಳಿ, ಸಿಬ್ಬಂದಿ ಸಾಧನೆಯಾಗಿದೆ. ಇವರೆಲ್ಲರ ಅವಿರತ ಸೇವೆಯಿಂದಾಗಿ ಮತ್ತೊಮ್ಮೆ ಅತ್ಯುತ್ತಮ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ. ಭಾರತವು ವಿಶ್ವ ಮಟ್ಟದಲ್ಲಿ ವಿಮಾನ ಪ್ರಯಾಣದಲ್ಲಿ ಭಾರೀ ಸ್ಪರ್ಧೆಯೊಡ್ಡುತ್ತಿದೆ. ಅಲ್ಲದೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತನ್ನ ಗೆಲುವಿನ ಓಟವನ್ನು ಮುಂದುವರಿಸಿದೆ. ಹಲವಾರು ಅಧುನಿಕ ಬದಲಾವಣೆಗಳ ಮೂಲಕ ಪ್ರಯಾಣಿಕರಿಗೆ ನೆಚ್ಚಿನ ತಾಣವಾಗಿದೆ. ಪ್ರಯಾಣಿಕರು ಇದನ್ನು ಸವಿಯುತ್ತಿದ್ದಾರೆ ಎಂದು ಸ್ಕೈಟ್ರ್ಯಾಕ್ಸ್ ಸಿಇಒ ಎಡ್ವರ್ಡ್ ಪ್ಲ್ಯಾಸ್ಟೆಡ್ ತಿಳಿಸಿದ್ದಾರೆ.
ಹೊಸ ಅತ್ಯಾಧುನಿಕ ಟರ್ಮಿನಲ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಇದರ ಜೊತೆಗೆ ಮುಂಬರುವ ತಿಂಗಳುಗಳಲ್ಲಿ ಬಾರ್ ಗಳನ್ನು ಹೆಚ್ಚಿಸಲು ಚಿಂತನೆ ನಡೆಸಲಾಗಿದೆ. 11 ವರ್ಷಗಳ ವಿಮಾನ ನಿಲ್ದಾಣ ಭಾರತ ಹಾಗೂ ಕೇಂದ್ರ ಏಷ್ಯಾದಲ್ಲಿ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಸ್ಥಾನವನ್ನು ಸತತ 3ನೇ ಬಾರಿ ಉಳಿಸಿಕೊಂಡಿರುವುದು ದೊಡ್ಡ ಸಾಧನೆ. ಈ ಪ್ರಶಸ್ತಿಯು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಪ್ರಯಾಣಿಕರಿಗೆ ವರ್ಲ್ಡ್ ಕ್ಲಾಸ್ ಎಕ್ಸ್ ಪೀರಿಯನ್ಸ್ ನೀಡುವ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ಅಲ್ಲದೆ ಅತ್ಯುತ್ತಮ ತಂತ್ರಜ್ಞಾನ ಹಾಗೂ ಸುಸ್ಥಿರತೆಯನ್ನು ಗುರುತಿಸಲಾಗಿದೆ.
ಏರ್ಪೋರ್ಟ್ ಸಿಬ್ಬಂದಿಯ ಅಸಾಧಾರಣ ಪ್ರಯತ್ನ ಹಾಗೂ ಬದ್ಧತೆಗೆ ಸಂದಿರುವ ಅತ್ಯದ್ಭುತ ಬಹುಮಾನ ಇದು. ವಿಮಾನ ನಿಲ್ದಾಣದ ಈ ಸಾಧನೆಗೆ ಸಿಬ್ಬಂದಿ ಅವಿರತವಾಗಿ ಶ್ರಮಿಸಿದ್ದಾರೆ ಎಂದು ಬಿಐಎಎಲ್ ಎಂಡಿ ಹಾಗೂ ಸಿಇಒ ಹರಿ ಕೆ.ಮರಾರ್ ತಿಳಿಸಿದ್ದಾರೆ.
ಕೊರೊನಾ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಈ ಪ್ರಶಸ್ತಿ ಲಭಿಸಿರುವುದು ಏರ್‍ಪೋರ್ಟ್ ಹಾಗೂ ಏರ್ ಲೈನ್ಸ್ ಇಂಡಸ್ಟ್ರಿಗೆ ನೈತಿಕ ಸ್ಥೈರ್ಯವನ್ನು ತುಂಬಿದಂತಾಗಿದೆ.
– ವಿಮಾನ ನಿಲ್ದಾಣದಲ್ಲಿ ಸಚಿವ ಸುಧಾಕರ್‌ಗೆ ಕೊರೊನಾ ತಪಾಸಣೆ
ಬೆಂಗಳೂರು: ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‍ಗೆ ಸಿಬ್ಬಂದಿ ಕೊರೊನಾ ತಪಾಸಣೆ ನಡೆಸಿದ್ದಾರೆ.
ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲು ಸಚಿವರು ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿದರು. ಈ ವೇಳೆ ಸಿಬ್ಬಂದಿ ಸಚಿವರಿಗೂ ಉಷ್ಣದ ಮಾಪನ ಹಿಡಿದು ತಪಾಸಣೆ ನಡೆಸಿದರು. ಸುಧಾಕರ್ ಅವರು ಸಹ ತಪಾಸಣೆಗೆ ಸಹಕರಿಸಿ, ನಂತರ ಒಳಗೆ ಹೋದರು.
ಕೊರೊನಾ ತಪಾಸಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ನಂತರ ಮಾತನಾಡಿ, ವಿಮಾನ ನಿಲ್ದಾಣದ ಒಳಬರುವ ಎಲ್ಲ ಪ್ರಯಾಣಿಕರನ್ನು ತಪಾಸಣೆ ನಡೆಸಲಾಗುತ್ತಿದ್ದು, ಶಂಕಿತರನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಅನುಸರಿಸುತ್ತಿದ್ದು, ಇದಕ್ಕೆ ಸಹಕರಿಸಬೇಕಾದ್ದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಸಚಿವರು ಕರೆ ನೀಡಿದರು.
#COVID19 ವಿರುದ್ಧದ ಈ ಸಮರದಲ್ಲಿ, ಸೋಂಕಿತರ ಸೇವೆಯಲ್ಲಿ ಹಗಲಿರುಳೆನ್ನದೆ ದುಡಿಯುತ್ತಿರುವ ವೈದ್ಯರು, PG ವಿದ್ಯಾರ್ಥಿಗಳು, ಶುಶ್ರೂಷಕಿಯರು, ಅರೆವೈದ್ಯಕೀಯ, ಸಿಬ್ಬಂದಿ – ಈ ಎಲ್ಲ ನಮ್ಮ #HealthWarriors – ಆರೋಗ್ಯ ಸೈನಿಕರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ನಾವು ನಿಶ್ಚಿತವಾಗಿ #Corona ವಿರುದ್ಧದ ಈ ಯುದ್ಧದಲ್ಲಿ ಗೆಲ್ಲಲ್ಲಿದ್ದೇವೆ.
ಇದೇ ವೇಳೆ ವಿಮಾನ ನಿಲ್ದಾಣದ ಹತ್ತಿರದಲ್ಲಿರುವ ಹೋಟೆಲುಗಳನ್ನು ಸೋಂಕಿತರಿಗಾಗಿ ಪ್ರತ್ಯೇಕಿಸುವಂತೆ ಕೇಂದ್ರ ಸರ್ಕಾರ ಸೂಚನೆ ಹೊರಡಿಸಿದ್ದು, ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣದ ಹತ್ತಿರದ ಹೋಟೆಲುಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಖಾಸಗಿ ಸ್ಥಳಗಳಲ್ಲಿ ಸರ್ಕಾರದ ವತಿಯಿಂದಲೇ ಸೋಂಕಿತರನ್ನು ಪ್ರತ್ಯೇಕವಾಗಿರಿಸುವ ಕುರಿತು ಪರಾಮರ್ಶೆ ಮಾಡಲಾಗುತ್ತಿದೆ ಎಂದರು.
ಮತ್ತೊಂದೆಡೆ ವಿಮಾನ ನಿಲ್ದಾಣದಲ್ಲಿ ಅನಿರೀಕ್ಷಿತವಾಗಿ ಎದುರಾದ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿ ಸೌಲಭ್ಯಗಳ ಕುರಿತು ಚರ್ಚೆ ನಡೆಸಿದರು. ನಂತರ ಶಂಕಿತರನ್ನು ಪ್ರತ್ಯೇಕ ನಿಗಾ ಘಟಕದಲ್ಲಿ ಇರಿಸಲಾಗುವ ಆಕಾಶ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಂಗಳೂರು: ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣದ ಆರೋಪಿ ಆದಿತ್ಯ ರಾವ್‍ನನ್ನು ಮಂಗಳೂರು ಪೊಲೀಸರ ವಶಕ್ಕೆ ನೀಡಲಾಗಿದೆ. ನ್ಯಾಯಾಲಯದ ಎದುರು ಹಾಜರು ಪಡಿಸುವ ಹಿನ್ನೆಲೆಯಲ್ಲಿ ಮಂಗಳೂರಿಗೆ ಕರೆಕೊಂಡು ಹೋಗಲು ಆರೋಪಿ ಆದಿತ್ಯನನ್ನು ಪೊಲೀಸರು ಕೆಐಎಎಲ್ ವಿಮಾನ ನಿಲ್ದಾಣಕ್ಕೆ ಕರೆತಂದಿದ್ದು, ಈ ವೇಳೆ ಆತನಿಗೆ ತಿನ್ನಲು ನೀಡಲಾಗಿದ್ದ ಸಮೋಸವನ್ನು ನಿರಾಕರಿಸಿದ್ದಾನೆ ಎನ್ನಲಾಗಿದೆ.
ಇಂದು ಸಂಜೆ 7:15ಕ್ಕೆ ಕೆಐಎಎಲ್‍ನಿಂದ ಮಂಗಳೂರಿಗೆ ತೆರಳುವ ವಿಮಾನವಿದ್ದು, ಸಂಜೆ ವೇಳೆಗೆ ಆದಿತ್ಯನನ್ನು ಕರೆತಂದ ಪೊಲೀಸರು ಆತನನ್ನು ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಇರಿಸಿದ್ದರು. ಈ ವೇಳೆ ಆದಿತ್ಯಗೆ ಪೊಲೀಸರು ತಿನ್ನಲು ಸಮೋಸಾ ನೀಡಿದ್ದು, ಆದರೆ ಅದನ್ನು ತಿನ್ನಲು ಆದಿತ್ಯ ನಿರಾಕರಿಸಿದ್ದಾನೆ. ಇದನ್ನೂ ಓದಿ; ಹರಸಾಹಸ ಪಟ್ಟು 2018ರಲ್ಲಿ ಆದಿತ್ಯನನ್ನು ಹಿಡಿದಿದ್ರು ಬೆಂಗ್ಳೂರು ಪೊಲೀಸರು
ಆರೋಪಿ ಆದಿತ್ಯ ರಾವ್ ಇಂದು ಪೊಲೀಸರ ಎದುರು ಶರಣಾದ ಹಿನ್ನೆಲೆಯಲ್ಲಿ ಆತನನ್ನು ಹಲಸೂರು ಪೊಲೀಸರು ವಿಚಾರಣೆ ನಡೆಸಿ ಬಳಿಕ ನಗರ 1ನೇ ಎಸಿಎಂಎಂ ನ್ಯಾಯಾಧೀಶರ ಎದುರು ಹಾಜರು ಪಡಿಸಿದ್ದರು. ಆರೋಪಿಯ ಪ್ರಾಥಮಿಕ ಹೇಳಿಕೆ ಪರಿಶೀಲನೆ ನಡೆಸಿ ನ್ಯಾಯಾಧೀಶರು ಮಂಗಳೂರು 6ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಮಂಗಳೂರಿಗೆ ಕರೆದುಕೊಂಡು ಹೋಗಲು ಕೆಐಎಎಲ್ ವಿಮಾನ ನಿಲ್ದಾಣದಕ್ಕೆ ಸಂಜೆ 5:15ರ ವೇಳೆಗೆ ಕರೆ ತಂದಿದ್ದರು. ಇದನ್ನೂ ಓದಿ: I Am Fit And Fine- ವೈದ್ಯರ ಬಳಿ ಆದಿತ್ಯ ರಾವ್ ಡೈಲಾಗ್
ವಿಮಾನ ನಿಲ್ದಾಣದ ಪೊಲೀಸ್ ರಾಣೆಯಲ್ಲಿ ಕೆಲ ನಿಯಮಗಳನ್ನು ಪೂರೈಸಲು ಹಾಗೂ ವಿಮಾನದ ಅವಧಿ ತಡವಾದ ಕಾರಣ ಆತನನ್ನು ಪೊಲೀಸ್ ಠಾಣೆಗೆ ಕರೆತರಲಾಗಿತ್ತು ಎನ್ನಲಾಗಿದೆ. ಈ ವೇಳೆ 2018ರ ಹುಸಿ ಬಾಂಬ್ ಕರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಿಂದ ಕೆಲ ಮಾಹಿತಿಯನ್ನು ಪಡೆದ್ದರು ಎನ್ನಲಾಗಿದೆ. ಪೊಲೀಸ್ ಠಾಣೆಯಲ್ಲಿದ್ದ ಸಂದರ್ಭದಲ್ಲಿ ಮಂಗಳೂರು ಪೊಲೀಸರಿಗೆ ಸೇರಿದಂತೆ ಆರೋಪಿಗೆ ಸಮೋಸ ನೀಡಲಾಗಿತ್ತು.
ಮಂಗ್ಳೂರಿಗೆ ಆದಿತ್ಯ: ಆರೋಪಿ ಆದಿತ್ಯ ರಾವ್‍ನನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದು ಮಂಗಳೂರಿಗೆ ಕರೆದುಕೊಂಡು ಹೋದರು. ಹಲಸೂರುಗೇಟ್ ಪೊಲೀಸರಿಂದ ಆದಿತ್ಯ ರಾವ್ ನನ್ನ ವಶಕ್ಕೆ ಪಡೆದ ಮಂಗಳೂರು ಪೊಲೀಸರ ತಂಡ ನೇರವಾಗಿ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ವಿಮಾನ ನಿಲ್ದಾಣದ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದರು. ಇದನ್ನೂ ಓದಿ: ತಾಯಿಗೆ ಕ್ಯಾನ್ಸರ್ ಆಗಿದ್ರೂ ಸಹಾಯಕ್ಕೆ ಬಂದಿರಲಿಲ್ಲ ಆದಿತ್ಯ ರಾವ್!
ಪೊಲೀಸ್ ಠಾಣೆಯಲ್ಲಿ ಕಾಫಿ-ಟೀ, ಸಮೋಸ ಸವಿದ ಪೊಲೀಸರ ತಂಡ 6:00 ಗಂಟೆ ಸುಮಾರಿಗೆ ನೇರವಾಗಿ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಡಿಪಾರ್ಚರ್ ಗೇಟ್ ನಂ.1ರ ಮೂಲಕ ವಿಮಾನ ನಿಲ್ದಾಣದ ಒಳಭಾಗಕ್ಕೆ ಕರೆದುಕೊಂಡು ಹೋದರು. ಸಂಜೆ 7.15 ರ ಸ್ಪೈಸ್ ಜೆಟ್ ವಿಮಾನದಲ್ಲಿ ಆದಿತ್ಯ ರಾವ್ ನನ್ನ ಕರೆದುಕೊಂಡು ಮಂಗಳೂರಿನತ್ತ ಪೊಲೀಸರು ಪ್ರಯಾಣ ಬೆಳೆಸಿದರು.
ಚಿಕ್ಕಬಳ್ಳಾಪುರ: ಬಸ್, ಟ್ರೈನ್ ತಡವಾಗಿ ಬರೋದು ಸಾಮಾನ್ಯ ಆದರೆ ವಿಮಾನವೊಂದು 9 ಗಂಟೆ ತಡವಾಗಿ ಬಂದು ಪ್ರಯಾಣಿಕರ ಅಕ್ರೋಶಕ್ಕೆ ಕಾರಣವಾದ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಪಾಟ್ನಾದಿಂದ ಕೆಐಎಎಲ್ ಗೆ ಮಧ್ಯಾಹ್ನ 1 ಗಂಟೆಗೆ ಆಗಮಿಸಿ ಮರಳಿ 2 ಗಂಟೆಗೆ ಪಾಟ್ನಾಗೆ ವಾಪಾಸ್ ತೆರಳಬೇಕಿದ್ದ ಸ್ಪೈಸ್ ಜೆಟ್ 768 ವಿಮಾನ ರಾತ್ರಿ 10 ಗಂಟೆ ಸುಮಾರಿಗೆ ಆಗಮಿಸಿದೆ. ಹೀಗಾಗಿ ಪಾಟ್ನಾಗೆ ತೆರಳಲು 1 ಗಂಟೆಗೆ ಕೆಎಐಎಲ್‍ಗೆ ಆಗಮಿಸಿ ಕಾದಿದ್ದ 180 ಪ್ರಯಾಣಿಕರು ಕೊನೆಗೆ ರಾತ್ರಿ 10 ಗಂಟೆ 45 ನಿಮಿಷಕ್ಕೆ 180 ಪಾಟ್ನಾದತ್ತ ಪ್ರಯಾಣ ಬೆಳೆಸಿದ್ದಾರೆ.
9 ಗಂಟೆಗೂ ಹೆಚ್ಚು ಕಾಲ ವಿಮಾನಕ್ಕಾಗಿ ಕಾದು ಕಾದು ರೋಸಿ ಹೋದ ಪ್ರಯಾಣಿಕರು ರಾತ್ರಿ 9 ಗಂಟೆ ಸುಮಾರಿಗೆ ಸ್ಪೈಸ್ ಜೆಟ್ ಏರ್ ವೇಸ್ ಸಂಸ್ಥೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಸಲಿಗೆ ತಾಂತ್ರಿಕ ದೋಷದ ಹಿನ್ನೆಲೆ ಎಸ್‍ಜಿ 768 ವಿಮಾನ ಪಾಟ್ನಾದಿಂದ ಕೆಐಎಎಲ್‍ಗೆ ಬರುವುದು ತಡವಾಗಿದೆ ಎಂದು ಸಂಸ್ಥೆ ತಿಳಿಸಿದೆ.
ತಾಂತ್ರಿಕ ದೋಷ ಉಂಟಾದರೆ ಬೇರೊಂದು ವಿಮಾನದ ವ್ಯವಸ್ಥೆ ಮಾಡಬೇಕಿತ್ತು. ಇಲ್ಲವಾದಲ್ಲಿ ಕನಿಷ್ಟ ಪಕ್ಷ 9 ಗಂಟೆ ಕಾದ ಪ್ರಯಾಣಿಕರಿಗೆ ಮೂಲಭೂತ ಸೌಲಭ್ಯಗಳನ್ನು ಓದಗಿಸಿ ಸಮಾಧಾನಪಡಿಸುವ ಕೆಲಸವಾದರೂ ಮಾಡಬೇಕಿತ್ತು. ಇದನ್ನು ಮಾಡದ ಸ್ಪೈಸ್ ಜೆಟ್ ಸಂಸ್ಥೆಯ ಸಿಬ್ಬಂದಿ ಸಮರ್ಪಕವಾಗಿ ಪ್ರಯಾಣಿಕರಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿ ಕೆಐಎಎಲ್‍ನ ಸ್ಪೈಸ್ ಜೆಟ್ ಸಂಸ್ಥೆ ಬಳಿಯೇ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ: ಕ್ಯಾಬ್‍ಗಳಲ್ಲಿ ಮಹಿಳೆಯರಿಗೆ ಚಾಲಕರು ಲೈಂಗಿಕ ಕಿರುಕುಳ ನೀಡಿರುವ ಆರೋಪಗಳು ಕೇಳಿ ಬಂದು ಹಲವು ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಲೇರಿದ ಬೆನ್ನಲ್ಲೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏಕಾಂಗಿಯಾಗಿ ಬರುವ ಮಹಿಳೆಯರು, ಯುವತಿಯರಿಗೆ ಪ್ರತ್ಯೇಕ ಕ್ಯಾಬ್ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ.
ರಾಜ್ಯ ಪ್ರವಾಸೋದ್ಯಮ ಇಲಾಖೆ (ಕೆಎಸ್‍ಟಿಡಿಸಿ) ಮತ್ತು ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ಪ್ರಾಧಿಕಾರ (ಕೆಐಎಎಲ್) ಈ ಹೊಸ ಯೋಜನೆ ಜಾರಿ ಮಾಡಿದ್ದು, ಕೆಐಎಎಲ್ ನಲ್ಲಿ ಮಹಿಳಾ ಚಾಲಕರಿರುವ ಗೋ ಪಿಂಕ್ ಕ್ಯಾಬ್ ಗಳಿಗೆ ಇಂದಿನಿಂದ ಚಾಲನೆ ನೀಡಲಾಗಿದೆ.
ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ 10 ಗೋ ಪಿಂಕ್ ಕ್ಯಾಬ್ ಗಳಿಗೆ ಕೆಐಎಎಲ್‍ನ ಉಪಾಧ್ಯಕ್ಷ ವೆಂಕಟರಾಮನ್ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮಹಿಳಾ ಪ್ರಯಾಣಿಕರ ಸ್ಪಂದನೆ ಗಮನಿಸಿ ಬೇಡಿಕೆಗೆ ಅನುಗುಣವಾಗಿ ಹೆಚ್ಚು ಗೋ ಪಿಂಕ್ ಕ್ಯಾಬ್ ಗಳನ್ನ ರಸ್ತೆಗಿಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಏನೆಲ್ಲಾ ಸೌಲಭ್ಯ ಇರಲಿದೆ: ಗೋ ಪಿಂಕ್ ಕ್ಯಾಬ್ ಗಳಲ್ಲಿ ಜಿಪಿಎಸ್ ಟ್ರಾಕಿಂಗ್ ಸೇರಿದಂತೆ, ಪ್ಯಾನಿಕ್ ಬಟನ್ ಆಳವಡಿಸಲಾಗಿದೆ. 24 ಗಂಟೆಗಳ ಈ ಸೇವೆ ಲಭ್ಯವಿರುತ್ತದೆ. ಕೆಐಎಎಲ್ ಹಾಗೂ ಕೆಎಸ್‍ಟಿಡಿಸಿ ಜೊತೆಗೂಡಿ ಮಹಿಳೆಯರಿಗಾಗಿಯೇ ನೂತನ ಕ್ಯಾಬ್‍ಗಳನ್ನು ರಸ್ತೆಗಿಳಿಸಿದ್ದು, ಇದರಿಂದ ಮಹಿಳಾ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
– ಭಾರತದಲ್ಲೇ ಮೊದಲ ಬಾರಿಗೆ ಸೆಲ್ಫ್ ರೆಕಾಗ್ನೇಸಿಂಗ್ ಬೋರ್ಡಿಂಗ್ ತಂತ್ರಜ್ಞಾನ!
ಚಿಕ್ಕಬಳ್ಳಾಪುರ: ಪ್ರಯಾಣಿಕ ಸ್ನೇಹಿ ವಿಮಾನ ನಿಲ್ದಾಣವೆಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆ ಗಳಿಸಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್)ದಲ್ಲಿ ಶೀಘ್ರವೇ ಸೆಲ್ಫ್ ರೆಕಾಗ್ನೇಸಿಂಗ್ ಬೋರ್ಡಿಂಗ್ ತಂತ್ರಜ್ಞಾನ ಅಳವಡಿಸಲಿದೆ.
ಕೆಐಎಎಲ್ ನಿರ್ವಹಣೆ ನಡೆಸುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್) ಮತ್ತು ವಿಷನ್ ಬಾಕ್ಸ್‍ಗಳು ಕಾಗದ ರಹಿತ ಬಯೋಮೆಟ್ರಿಕ್ ಸೆಲ್ಫ್ ರೆಕಾಗ್ನೇಸಿಂಗ್ ಬೋರ್ಡಿಗ್ ತಂತ್ರಜ್ಞಾನವನ್ನು ಆರಂಭಿಸುವ ಒಪ್ಪಂದವೊಂದಕ್ಕೆ ಸಹಿ ಹಾಕಿವೆ. ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ಹಾಗೂ ಮತ್ತು ಭವಿಷ್ಯಕ್ಕೆ ಸಜ್ಜಾದ ಹೈಟೆಕ್ ವಿಮಾನ ನಿಲ್ದಾಣವನ್ನು ಸೃಷ್ಟಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಸ್ಮಾರ್ಟ್ ಫೋನ್ ಗಳಲ್ಲಿ ಇತ್ತೀಚೆಗೆ ಹೊಚ್ಚ ಹೊಸ ನವಜಮಾನದ ಟ್ರೆಂಡಿಂಗ್ ಆಗಿರುವ ಫೇಸ್ ಅನ್ ಲಾಕಿಂಗ್ ಮಾದರಿಯ ತಂತ್ರಜ್ಞಾನವನ್ನ ಬಳಕೆ ಮಾಡಿಕೊಂಡು ವಿಮಾನ ನಿಲ್ದಾಣದಲ್ಲೂ ಸಹ ಪ್ರಯಾಣಿಕರ ಮುಖವನ್ನು ಗುರುತಿಸುವ ಮೂಲಕ ವಿಮಾನಯಾನಕ್ಕೆ ಅವಕಾಶ ಮಾಡಿಕೊಡುವುದಾಗಿದೆ. ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಅಭಿಯಾನದ ಕನಸಿಗೆ ಇದೊಂದು ಅತ್ಯಂತ ಗಮನಾರ್ಹ ಹೆಜ್ಜೆಗಳಲ್ಲಿ ಒಂದಾಗಿದ್ದು,.
ಏನಿದು ಯೋಜನೆ?
ಭಾರತ ಸರ್ಕಾರದ ಮಹತ್ವಕಾಂಕ್ಷಿ ಡಿಜಿಯಾತ್ರಾ ಯೋಜನೆಗೆ ಬಯೋಮೆಟ್ರಿಕ್ ಸೆಲ್ಫ್ ರೆಕಾಗ್ನೇಸಿಂಗ್ ಬೋರ್ಡಿಂಗ್ ತಂತ್ರಜ್ಞಾನ ಮತ್ತಷ್ಟು ಮೆರುಗು ನೀಡಲಿದೆ. ವಿಮಾನಯಾನದ ಪ್ರತಿಯೊಂದು ಹಂತದಲ್ಲಿ ಕಾಗದ ರಹಿತ ಪ್ರಯಾಣವನ್ನು ಸೃಷ್ಟಿಸಿ ಡಿಜಿಟಲ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಡಿಜಿಯಾತ್ರಾ ಹೊಂದಿದೆ. ಬಯೋಮೆಟ್ರಿಕ್ ತಂತ್ರಜ್ಞಾನದ ಅನುಷ್ಟಾನದಿಂದ ಕಾಗದರಹಿತ ವಿಮಾನ ಪ್ರಯಾಣ ಹೊಂದಿರುವ ಭಾರತದ ಪ್ರಪ್ರಥಮ ವಿಮಾನ ನಿಲ್ದಾಣವಾಗಿ ಶೀಘ್ರವೇ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೊರಹೊಮ್ಮಲಿದೆ.
ಕಾಗದರಹಿತ ವಿಮಾನಯಾನ:
ಈ ಡಿಜಿಯಾತ್ರಾ ಯೋಜನೆಯ ಉದ್ದೇಶ ಎಂದರೆ ಟಿಕೆಟ್ ನೋಂದಣಿಯಿಂದ ವಿಮಾನ ಹತ್ತುವವರೆಗಿನ ಪ್ರಕ್ರಿಯೆಯನ್ನು ಕಾಗದ ರಹಿತವಾಗಿಸುವುದರೊಂದಿಗೆ ವಿಮಾನ ಪ್ರಯಾಣವನ್ನು ಸರಳವಾಗಿಸುವುದು. ಬಯೋಮೆಟ್ರಿಕ್ ಸೆಲ್ಫ್ ಬೋರ್ಡಿಂಗ್ ತಂತ್ರಜ್ಞಾನದಿಂದ ವಿಮಾನ ನಿಲ್ದಾಣದಲ್ಲಿ ಚಲಿಸುವಾಗಲೇ ಪ್ರಯಾಣಿಕರನ್ನು ಫೇಸ್ ರೆಕಾಗ್ನೇಸಿಂಗ್ ಮೂಲಕ ಅವರ ಮುಖಚರ್ಯೆಗಳಿಂದಲೆ ಗುರುತಿಸುವುದಲ್ಲದೆ, ಪದೇ ಪದೇ ಬೋರ್ಡಿಂಗ್ ಪಾಸ್‍ಗಳು, ಪಾಸ್‍ಪೋರ್ಟ್‍ಗಳನ್ನು ಅಥವ ಇತರೆ ಭೌತಿಕ ಗುರುತಿನ ದಾಖಲೆಗಳನ್ನು ಸಲ್ಲಿಸುವ ಮತ್ತು ಅನಗತ್ಯ ತಡೆಗಳನ್ನು ಇಲ್ಲವಾಗಿಸುವುದು. ಈ ಯೋಜನೆಯಿಂದಾಗಿ ಸಮಯದ ಉಳಿತಾಯದ ಜೊತೆಗೆ ಪ್ರಯಾಣಿಕರನ್ನು ಸಾಲುಗಟ್ಟಿ ನಿಲ್ಲದಂತೆ ಮಾಡಿ ಕಿರಿಕಿರಿ ತಪ್ಪಿಸುತ್ತದೆ.
ಯಾವಾಗ ಬರುತ್ತೆ?
ದೇಶದಲ್ಲೇ ಮೊದಲ ಅನುಷ್ಟಾನದ ಮೈಲುಗಲ್ಲಿನ ಪ್ರಕ್ರಿಯೆಯು ಬೆಂಗಳೂರು ವಿಮಾನ ನಿಲ್ದಾಣದಲ್ಲಿ 2019 ರ ಮೊದಲ ತ್ರೈಮಾಸಿಕದಲ್ಲಿ ಪೂರ್ಣವಾಗಲಿದೆ ಎನ್ನಲಾಗಿದೆ.
ಈಗಾಗಲೇ ಈ ಒಪ್ಪಂದಕ್ಕೆ ಪೋರ್ಚುಗಲ್‍ನ ಲಿಸ್ಬನ್‍ನಲ್ಲಿ ಬಿಐಎಎಲ್ ನ ನಿರ್ದೇಶಕ ಹರಿ ಮಾರರ್ ಮತ್ತು ವಿಷನ್ ಬಾಕ್ಸ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಿಗೆಲ್ ಲೀಟ್‍ಮನ್ ಸಹಿ ಹಾಕಿದ್ದಾರೆ. ಈ ಸಮಾರಂಭದಲ್ಲಿ ಪೋರ್ಚುಗೀಸ್ ಪ್ರಧಾನ ಮಂತ್ರಿ ಆಂಟೋನಿಯೊಕೋಸ್ಟಾ, ಹಣಕಾಸು ಸಚಿವರಾದ ಮ್ಯಾನ್ಯುವೆಲ್ ಕಾಲ್ಡಿರಾ ಕಾಬ್ರಲ್, ಪೋರ್ಚುಗಲ್ ಭಾರತದ ರಾಯಭಾರಿ ನಂದಿನಿ ಸಿಂಗ್ಲಾ, ಇಂಟರ್‌ನ್ಯಾಷನಲೈಷನ್‍ನ ರಾಷ್ಟ್ರೀಯ ಕಾರ್ಯದರ್ಶಿ ಯುರಿಕೊ ಬ್ರಿಲ್‍ಹಾಂಟೆ ಡಯಾಸ್ ಮತ್ತು ಇತರೆ ಸರ್ಕಾರಿ ಪ್ರತಿನಿಧಿಗಳು ಹಾಜರಿದ್ದರು.