Tag: KIA

  • ಜ್ವರ, ನೆಗಡಿ, ಕೆಮ್ಮು ಇದ್ರೆ ನೋ ಟೆಸ್ಟ್ – ನೇರವಾಗಿ ಏರ್‌ಪೋರ್ಟ್‌ನಿಂದ ಆಸ್ಪತ್ರೆಗೆ: ವಿದೇಶಿ ಪ್ರಯಾಣಿಕರಿಗೆ ಗೈಡ್‍ಲೈನ್

    ಜ್ವರ, ನೆಗಡಿ, ಕೆಮ್ಮು ಇದ್ರೆ ನೋ ಟೆಸ್ಟ್ – ನೇರವಾಗಿ ಏರ್‌ಪೋರ್ಟ್‌ನಿಂದ ಆಸ್ಪತ್ರೆಗೆ: ವಿದೇಶಿ ಪ್ರಯಾಣಿಕರಿಗೆ ಗೈಡ್‍ಲೈನ್

    ಚಿಕ್ಕಬಳ್ಳಾಪುರ: ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಲ್ಲಿ ಕೋವಿಡ್ (Covid-19) ಗುಣ ಲಕ್ಷಣಗಳಾದ ಜ್ವರ, ನೆಗಡಿ, ಕೆಮ್ಮು ಕಂಡುಬಂದರೆ ಸೀದಾ ವಿಮಾನ (Flight) ನಿಲ್ದಾಣದಿಂದ ಆಸ್ಪತ್ರೆಗೆ (Hospital) ಕಳುಹಿಸಲಾಗುವುದು, ಈ ಹೊಸ ಮಾರ್ಗಸೂಚಿ ನಿನ್ನೆಯಿಂದಲೇ ಜಾರಿಯಾಗಿದೆ ಎಂದು ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲಾಧಿಕಾರಿ ಆರ್. ಲತಾ ತಿಳಿಸಿದರು.

    ಕೋವಿಡ್ ಕಡಿವಾಣ ಸಂಬಂಧ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಹೊಸ ನಿಯಮ ಮಾರ್ಗಸೂಚಿ ಜಾರಿ ಮಾಡಲಾಗಿದೆ. RTPCR ಟೆಸ್ಟ್‌ಗೆ ಗಂಟಲು ದ್ರವ ಸಂಗ್ರಹ ಮಾಡಿಕೊಂಡು ವರದಿ ಬರೋಕು ಮುನ್ನವೇ ಅವರನ್ನು ನೇರವಾಗಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಕಳುಹಿಸಲಾಗುವುದು. ಪ್ರಯಾಣಿಕರು ಖಾಸಗಿ ಆಸ್ಪತ್ರೆಗೆ ಹೋಗಲು ಇಚ್ಚೆಪಟ್ಟಲ್ಲಿ ಅವರು ಸ್ವಂತ ಹಣ ವ್ಯಯಿಸಿ ಹೋಗಬಹುದು ಅದಕ್ಕೂ ಅವಕಾಶವಿದೆ ಎಂದರು. ಇದನ್ನೂ ಓದಿ: ಆಸ್ಪತ್ರೆ ಸೇರಿರೋ ಪ್ರಧಾನಿ ತಾಯಿ – ನಿಮ್ಮೊಂದಿಗೆ ನಾನಿದ್ದೇನೆ ಎಂದು ಮೋದಿಗೆ ರಾಹುಲ್‌ ಗಾಂಧಿ ಅಭಯ

    ಈ ಸಂಬಂಧ 8 ಮಂದಿ ಆರೋಗ್ಯ ನಿರೀಕ್ಷಕರು ಸೇರಿದಂತೆ ಹೆಚ್ಚುವರಿ ಸಿಬ್ಬಂದಿಯನ್ನು ಏರ್‌ಪೋರ್ಟ್‌ನಲ್ಲಿ ನಿಯೋಜನೆ ಮಾಡಲಾಗಿದೆ. ರೋಗ ಲಕ್ಷಣಗಳುಳ್ಳ ಪ್ರಯಾಣಿಕರನ್ನು ಆಸ್ಪತ್ರೆಗೆ ಕರೆದೊಯ್ಯಲು ಎರಡು ಅಂಬುಲೆನ್ಸ್‌ಗಳನ್ನು ಸಹ ಏರ್‌ಪೋರ್ಟ್‌ನಲ್ಲಿ ಮೀಸಲಿಡಲಾಗಿದೆ ಎಂದು ಡಿಸಿ ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಮತ್ತೆ ಟೆಸ್ಟಿಂಗ್ ಎಡವಟ್ಟು- ಕೋವಿಡ್ ಟೆಸ್ಟ್ ಮಾಡಿಸದಿದ್ರೂ ಬಂತು ಮೆಸೇಜ್

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿಗೆ ಬರುವಾಗ ದಾರಿ ಮಧ್ಯೆ ವಿಮಾನದಲ್ಲಿ ಯಶಸ್ವಿ ಹೆರಿಗೆ

    ಬೆಂಗಳೂರಿಗೆ ಬರುವಾಗ ದಾರಿ ಮಧ್ಯೆ ವಿಮಾನದಲ್ಲಿ ಯಶಸ್ವಿ ಹೆರಿಗೆ

    ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಗರ್ಭಿಣಿಯೊಬ್ಬರು ವಿಮಾನದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಇಂದು ಸಂಜೆ ದೆಹಲಿಯಿಂದ ಬೆಂಗಳೂರಿಗೆ ಹೊರಟ್ಟಿದ್ದ ಇಂಡಿಗೋ ವಿಮಾನದಲ್ಲಿ ಗರ್ಭಿಣಿ ಹತ್ತಿದ್ದರು. ದಾರಿ ಮಧ್ಯೆ ಅವರಿಗೆ ಹೆರಿಗೆ ನೋವಾಗಿದೆ.

    ಈ ವೇಳೆ ವಿಮಾನದಲ್ಲಿ ಪ್ರಸೂತಿ ತಜ್ಞೆ ಬೆಂಗಳೂರಿನ ಕ್ಲೌಡ್‌ ನೈನ್‌ ಆಸ್ಪತ್ರೆಯ ಡಾ. ಶೈಲಜಾ ವಲ್ಲಭನಿ ಪ್ರಯಾಣಿಸುತ್ತಿದ್ದರು. ಹೆರಿಗೆ ನೋವಾಗುತ್ತಿದ್ದಂತೆ ಇಂಡಿಗೋ ಸಿಬ್ಬಂದಿ ಸಹಕಾರದಿಂದ ಡಾ. ಶೈಲಜಾ ಅವರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ.

    ವಿಮಾನ ಬೆಂಗಳೂರಿನಲ್ಲಿ ಲ್ಯಾಂಡ್‌ ಆಗುತ್ತಿದ್ದಂತೆ ಅಂಬುಲೆನ್ಸ್‌ ಸಿದ್ಧವಾಗಿ ನಿಂತಿತ್ತು. ಅಂಬುಲೆನ್ಸ್‌ ಮೂಲಕ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು.

    ಸಾಮಾಜಿಕ ಜಾಲತಾಣದಲ್ಲಿ ಈಗ ಪ್ರಯಾಣಿಕರು ಈ ವಿಚಾರವನ್ನು ಹಂಚಿಕೊಂಡು ವೈದ್ಯರಿಗೆ ಮತ್ತು ಇಂಡಿಗೋ ಸಿಬ್ಬಂದಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಫೆಬ್ರವರಿಯಲ್ಲಿ ಅತಿ ಹೆಚ್ಚು ಕಿಯಾ ಕಾರು ಮಾರಾಟ

    ಫೆಬ್ರವರಿಯಲ್ಲಿ ಅತಿ ಹೆಚ್ಚು ಕಿಯಾ ಕಾರು ಮಾರಾಟ

    ನವದೆಹಲಿ: ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ದಕ್ಷಿಣ ಕೊರಿಯಾದ ಕಿಯಾ ಕಂಪನಿಯ ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ.

    ಜನವರಿಯಲ್ಲಿ 14,024 ಕಾರುಗಳು ಮಾರಾಟಗೊಂಡಿದ್ದರೆ ಫೆಬ್ರವರಿಯಲ್ಲಿ 15,644 ಕಾರುಗಳು ಮಾರಾಟಗೊಂಡಿದೆ. ಜನವರಿ ತಿಂಗಳಿಗೆ ಹೋಲಿಸಿದರೆ ಫೆಬ್ರವರಿ ತಿಂಗಳಿನಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಇಳಿಕೆ ಶೇ.4.4 ರಷ್ಟು ಇಳಿಕೆಯಾಗಿದ್ದರೆ ಈ ಅವಧಿಯಲ್ಲಿ ಕಿಯಾ ಶೇ.1.3 ರಷ್ಟು ಬೆಳವಣಿಗೆ ಸಾಧಿಸಿದೆ.

    ಕಳೆದ ತಿಂಗಳು ಕಿಯಾ 14,024 ಸೆಲ್ಟೋಸ್ ಕಾರು ಮಾರಾಟಗೊಂಡಿದ್ದರೆ ಹೊಸದಾಗಿ ಬಿಡುಗಡೆಯಾದ ಎಂಪಿವಿ(ಮಲ್ಟಿ ಪರ್ಪಸ್ ವೆಹಿಕಲ್) ಕಾರ್ನಿವಾಲ್ 1,620 ಮಾರಾಟಗೊಂಡಿದೆ.

    ಭಾರತದ ಕಿಯಾದ ಆಡಳಿತ ನಿರ್ದೇಶಕ ಕುಖಿಯಾನ್ ಶಿಮ್ ಪ್ರತಿಕ್ರಿಯಿಸಿ, ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ವಿನ್ಯಾಸವನ್ನು ಭಾರತದ ಜನರು ಮೆಚ್ಚಿಕೊಂಡಿದ್ದಾರೆ. ಉತ್ತಮ ಬೆಲೆಗೆ ಗುಣಮಟ್ಟದ ಕಾರನ್ನು ಜನ ಇಷ್ಟ ಪಟ್ಟಿದ್ದಾರೆ. ಈ ಪ್ರಗತಿಯಿಂದ ನಾವು ಉತ್ಸಾಹಗೊಂಡಿದ್ದು ಎರಡನೇ ಅವಧಿಯಲ್ಲಿ ನಾವು ಕಾಂಪ್ಯಾಕ್ಟ್ ಎಸ್‍ಯುವಿ (ಸ್ಫೋರ್ಟ್ಸ್ ಯುಟಿಲಿಟಿ ವೆಹಿಕಲ್) ಸೋನೆಟ್ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಕಿಯಾ ಕಾರ್ನಿವಾಲ್ ಬಿಡುಗಡೆಯಾದ 15 ದಿನಗಳಲ್ಲಿ 3,500 ಬುಕ್ಕಿಂಗ್ ಆಗಿತ್ತು. ಈಗ ಎಷ್ಟು ಕಾರು ಬುಕ್ಕಿಂಗ್ ಆಗಿದೆ ಎನ್ನುವುದನ್ನು ತಿಳಿಸಿಲ್ಲ. ಆದರೆ ಮೊದಲಿಗಿಂತ ದುಪ್ಪಟ್ಟು ಕಾರುಗಳು ಬುಕ್ ಆಗಿದೆ ವರದಿಯಾಗಿದೆ. ಶೋ ರೂಂ ಮಾಲೀಕರು ಹೇಳುವಂತೆ ಮಾದರಿಗೆ ಅನುಗುಣವಾಗಿ ಒಂದು ಕಾರು ಬರಲು ಮೂರು ತಿಂಗಳು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

    ಬೆಂಗಳೂರು ಶೋ ರೂಂ ದರ ಎಷ್ಟಿದೆ?
    ಕಿಯಾ ಸೆಲ್ಟೋಸ್ ಎಚ್‍ಟಿಇ(ಪಟ್ರೋಲ್) 9.89 ಲಕ್ಷ ರೂ., ಎಚ್‍ಟಿಕೆ ಜಿ(ಪೆಟ್ರೋಲ್) 10.29 ಲಕ್ಷ ರೂ. ಎಚ್‍ಟಿಇ (ಡೀಸೆಲ್) 10.34 ಲಕ್ಷ ರೂ. ದರ ಇದೆ. ಹೈ ಎಂಡ್ ಮಾಡೆಲ್ ಎಚ್‍ಟಿಎಕ್ಸ್ ಪ್ಲಸ್ ಎಟಿ ಡಿ(ಡೀಸೆಲ್) 16.34 ಲಕ್ಷ ರೂ. ಇದ್ದರೆ ಜಿಟಿಎಕ್ಸ್ ಪ್ಲಸ್ ಡಿಸಿಟಿ(ಪೆಟ್ರೋಲ್) 17.29 ಲಕ್ಷ ರೂ. ದರ ಇದ್ದರೆ ಜಿಟಿಎಕ್ಸ್ ಪ್ಲಸ್ ಎಟಿಡಿ (ಡೀಸೆಲ್) ಕಾರಿನ ಬೆಲೆ 17.34 ಲಕ್ಷ ರೂ. ಇದೆ.

    ಕಿಯಾ ಕಾರ್ನಿವಾಲ್ 5 ಡೀಸೆಲ್ ಮಾದರಿಯಲ್ಲಿ ಲಭ್ಯವಿದೆ. ಪ್ರೀಮಿಯಂ 24.85 ಲಕ್ಷ ರೂ. ಪ್ರೀಮಿಯಂ 8 ಎಸ್‍ಟಿಆರ್ 25.15 ಲಕ್ಷ ರೂ., ಪ್ರೆಸ್ಟೀಜ್ 28.95 ಲಕ್ಷ ರೂ., ಪ್ರೆಸ್ಟೀಜ್ 9 ಎಸ್‍ಟಿಆರ್ 29.95 ಲಕ್ಷ ರೂ., ಲಿಮೋಸಿನ್ 33.95 ಲಕ್ಷ ರೂ.

  • ಮುಂಬೈಯನ್ನು ಶೀಘ್ರವೇ ಹಿಂದಿಕ್ಕಿ 2ನೇ ಸ್ಥಾನಕ್ಕೆ ಏರಲಿದೆ ಬೆಂಗ್ಳೂರು ವಿಮಾನ ನಿಲ್ದಾಣ

    ಮುಂಬೈಯನ್ನು ಶೀಘ್ರವೇ ಹಿಂದಿಕ್ಕಿ 2ನೇ ಸ್ಥಾನಕ್ಕೆ ಏರಲಿದೆ ಬೆಂಗ್ಳೂರು ವಿಮಾನ ನಿಲ್ದಾಣ

    ಬೆಂಗಳೂರು: ಸಿಲಿಕಾನ್ ಸಿಟಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್) ಇದೀಗ ಮುಂಬೈ ನಿಲ್ದಾಣವನ್ನು ಹಿಂದಿಕ್ಕಿ ಎರಡನೇ ಅತಿ ಹೆಚ್ಚು ದಟ್ಟಣೆ ಹೊಂದಿದ ಏರ್ ಪೋರ್ಟ್ ಆಗುವತ್ತ ಹೆಜ್ಜೆ ಇಡಲಿದೆ.

    ಒಂದು ರನ್ ವೇಯಲ್ಲಿ ಅತಿ ಹೆಚ್ಚು ವಿಮಾನಗಳನ್ನು ನಿರ್ವಹಿಸುತ್ತಿರುವ ಏಕೈಕ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಕೆಐಎಎಲ್ ಪಾತ್ರವಾಗಿದ್ದು, ಎರಡನೇ ರನ್‍ವೇ ಸಹ ಡಿಸೆಂಬರ್ 5ರಿಂದ ಕಾರ್ಯನಿರ್ವಹಿಸಲಿದೆ. ನಂತರ ಪ್ರತಿ ದಿನ ಇನ್ನೂ ಹೆಚ್ಚು ವಿಮಾನಗಳನ್ನು ನಿರ್ವಹಿಸಲು ಸಜ್ಜಾಗುತ್ತಿದೆ. ಈ ಮೂಲಕ ಮುಂದಿನ ಚಳಿಗಾಲದ ಹೊತ್ತಿಗೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೂರನೇ ಸ್ಥಾನಕ್ಕೆ ದೂಡಿ ಎರಡನೇ ಸ್ಥಾನವನ್ನು ಅಲಂಕರಿಸಲಿದೆ.

    ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 2009ರಲ್ಲಿ ಮುಂಬೈ ನಿಲ್ದಾಣವನ್ನು ಹಿಂದಿಕ್ಕಿ ಭಾರತದ ಅತ್ಯಂತ ದಟ್ಟಣೆಯ ವಿಮಾನ ನಿಲ್ದಾಣ ಎಂದು ಖ್ಯಾತಿ ಪಡೆದಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಎರಡು ಕ್ರಾಸ್ ರನ್ ವೇಗಳಿದ್ದು, ಪ್ರತಿನಿತ್ಯ 960 ವಿಮಾನಗಳನ್ನು ನಿಯಂತ್ರಿಸುತ್ತದೆ. ಕೆಲವು ಬಾರಿ ಇದು 1 ಸಾವಿರ ವಿಮಾನಗಳನ್ನು ನಿಯಂತ್ರಿಸುತ್ತದೆ.

    ಪ್ರಸ್ತುತ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿ ದಿನ ಒಟ್ಟು 731 ವಿಮಾನಗಳನ್ನು ನಿರ್ವಹಿಸುತ್ತಿದೆ. ಇದಕ್ಕಿಂತ ಹೆಚ್ಚು ವಿಮಾನಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ಇತರೆ ವಿಮಾನ ನಿಲ್ದಾಣಗಳಿಗೆ ಹೋಲಿಸಿದರೆ ಒಂದೇ ರನ್ ವೇಯಲ್ಲಿ ಈ ಪರಿಪ್ರಮಾಣದ ವಿಮಾನಗಳನ್ನು ನಿಯಂತ್ರಿಸುತ್ತಿದ್ದು ಪ್ರಪಂಚದ ಅತ್ಯಂತ ಬ್ಯುಸಿಯಸ್ಟ್ ರನ್ ವೇ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಪ್ರಸ್ತುತ ಕೆಂಪೇಗೌಡ ವಿಮಾನ ನಿಲ್ದಾಣ ಪ್ರತಿ ದಿನ 731 ವಿಮಾನಗಳನ್ನು ನಿರ್ವಹಿಸುತ್ತಿದ್ದು, ಡಿಸೆಂಬರ್ 5ರಿಂದ ಎರಡನೇ ರನ್ ವೇ ಕಾರ್ಯಾರಂಭ ಮಾಡಿದರೆ ವಿಮಾನಗಳ ನಿರ್ವಹಣೆ ಪ್ರಮಾಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಮುಂದಿನ ಚಳಿಗಾಲದ ಹೊತ್ತಿಗೆ ಬೆಂಗಳೂರು ವಿಮಾನ ನಿಲ್ದಾಣ ಮುಂಬೈಯನ್ನು ಮೀರಿಸುತ್ತದೆ ಎಂದು ಹಿರಿಯ ಏರ್ ಟ್ರಾಫಿಕ್ ಕಂಟ್ರೋಲ್ ಅಧಿಕಾರಿ(ಎಟಿಸಿ) ಮಾಹಿತಿ ನೀಡಿದ್ದಾರೆ.

    ಇನ್ನೊಂದೆಡೆ ದೆಹಲಿ ವಿಮಾನ ನಿಲ್ದಾಣ ಸಹ 2021ರ ಬೇಸಿಗೆ ವೇಳೆಗೆ ನಾಲ್ಕನೇ ರನ್ ವೇಯನ್ನು ಪ್ರಾರಂಭಿಸುತ್ತಿದೆ. ಪ್ರಸ್ತುತ 3 ರನ್ ವೇಗಳಲ್ಲಿ 1,515 ವಿಮಾನಗಳನ್ನು ಪ್ರತಿನಿತ್ಯ ನಿರ್ವಹಿಸುತ್ತಿದೆ. ಬ್ಯುಸಿಯಸ್ಟ್ ವಿಮಾನ ನಿಲ್ದಾಣಗಳ ಪೈಕಿ ಕ್ರಮವಾಗಿ ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ ಹಾಗೂ ಕೋಲ್ಕತ್ತಾ ವಿಮಾನ ನಿಲ್ದಾಣಗಳು ಸ್ಥಾನ ಪಡೆದಿವೆ.

    ದಶಕಗಳಿಂದ ಮುಂಬೈ ವಾಯುಯಾನದ ಹಬ್ ಆಗಿ ಮಾರ್ಪಟ್ಟಿದೆ. ವಾಣಿಜ್ಯ ನಗರಿಯ ನವಿ ಮುಂಬೈ ವಿಮಾನ ನಿಲ್ದಾಣ ಪ್ರಾರಂಭವಾದರೆ ಮತ್ತೆ ಹೆಚ್ಚು ವಿಮಾನಗಳ ಸಂಪರ್ಕಕ್ಕೆ ಸಹಕಾರಿಯಾಗಲಿದೆ. ಉತ್ತರ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಇನ್ನೊಂದು ವಿಮಾನ ನಿಲ್ದಾಣ ಕಾರ್ಯಾರಂಭವಾಗಲು ಇನ್ನೂ 3-4 ವರ್ಷ ಬೇಕಾಗುತ್ತದೆ.