Tag: Khyber Pakhtunkhwa

  • ಪಾಕ್ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಆತ್ಮಾಹುತಿ ದಾಳಿ – 7 ಪೊಲೀಸರು, 6 ಉಗ್ರರು ಸಾವು

    ಪಾಕ್ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಆತ್ಮಾಹುತಿ ದಾಳಿ – 7 ಪೊಲೀಸರು, 6 ಉಗ್ರರು ಸಾವು

    ಇಸ್ಲಮಾಬಾದ್‌: ಉಗ್ರರು (Terrorist) ಪಾಕಿಸ್ತಾನದ (Pakistan) ಖೈಬರ್ ಪಖ್ತುನ್ಖ್ವಾ (Khyber Pakhtunkhwa) ಪ್ರಾಂತ್ಯದ ಪೊಲೀಸ್ ತರಬೇತಿ ಕೇಂದ್ರದ ಗೇಟ್‌ಗೆ ಸ್ಫೋಟಕಗಳನ್ನು ತುಂಬಿದ್ದ ಟ್ರಕ್ ಡಿಕ್ಕಿ ಹೊಡೆಸಿ ಸ್ಫೋಟಿಸಿದ್ದಾರೆ.

    ಶುಕ್ರವಾರ ತಡರಾತ್ರಿ ಈ ದಾಳಿ ನಡೆದಿದ್ದು, ಇದಾದ ಬಳಿಕ ಐದು ಗಂಟೆಗಳ ಕಾಲ ಉಗ್ರರು ಮತ್ತು ಪೊಲೀಸರ ನಡುವೆ ಗುಂಡಿನ ದಾಳಿ ನಡೆದಿದೆ. ಗುಂಡಿನ ಚಕಮಕಿಯಲ್ಲಿ 6 ಭಯೋತ್ಪಾದಕರು ಹಾಗೂ 7 ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಈ ದಾಳಿಯಲ್ಲಿ 13 ಮಂದಿ ಪೊಲೀಸರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಅಮೆರಿಕದ ಯುದ್ಧ ಸಾಮಗ್ರಿ ಸ್ಥಾವರದಲ್ಲಿ ಭೀಕರ ಸ್ಫೋಟ – 19 ಮಂದಿ ಸಾವು ಶಂಕೆ

    ದಾಳಿಯ ಸಮಯದಲ್ಲಿ ಸುಮಾರು 200 ತರಬೇತಿ ನಿರತ ಪೊಲೀಸರು, ಬೋಧಕರು ಮತ್ತು ಸಿಬ್ಬಂದಿ ತರಬೇತಿ ಕೇಂದ್ರದಲ್ಲಿದ್ದರು. ಎಲ್ಲಾ ತರಬೇತಿ ನಿರತ ಅಭ್ಯರ್ಥಿಗಳು ಮತ್ತು ಸಿಬ್ಬಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪಾಕ್‌ ಸೇನಾ ಸಿಬ್ಬಂದಿ ಬಗ್ಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಭದ್ರತಾ ಸಿಬ್ಬಂದಿ ಉಗ್ರರ ಬಳಿ ಇದ್ದ ಆತ್ಮಹತ್ಯಾ ಜಾಕೆಟ್‌ಗಳು, ಸ್ಫೋಟಕಗಳು, ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಅಡಗಿರುವ ಉಗ್ರರಿಗಾಗಿ ಭದ್ರತಾ ಸಿಬ್ಬಂದಿ ಹೆಚ್ಚಿನ ಶೋಧ ನಡೆಸುತ್ತಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಿ: ಭಾರತ ನೆಲದಿಂದ ಪಾಕ್‌ಗೆ ತಾಲಿಬಾನ್‌ ಸಚಿವ ಸಲಹೆ

  • ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಘರ್ಷಣೆ; 11 ಪಾಕಿಸ್ತಾನಿ ಸೈನಿಕರು, ಟಿಟಿಪಿಯ 19 ಉಗ್ರರು ಸಾವು

    ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಘರ್ಷಣೆ; 11 ಪಾಕಿಸ್ತಾನಿ ಸೈನಿಕರು, ಟಿಟಿಪಿಯ 19 ಉಗ್ರರು ಸಾವು

    – ನಿಷೇಧಿತ ಟಿಟಿಪಿ & ಪಾಕ್ ಭದ್ರತಾ ಪಡೆಗಳ ನಡುವೆ ಸಂಘರ್ಷ

    ಇಸ್ಲಾಮಾಬಾದ್‌: ಪಾಕಿಸ್ತಾನದ (Pakistan) ಖೈಬರ್ ಪಖ್ತುಂಖ್ವಾ (Khyber Pakhtunkhwa) ಪ್ರಾಂತ್ಯದಲ್ಲಿ ನಿಷೇಧಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ ಸಂಘಟನೆಯ ಉಗ್ರರು ಮತ್ತು ಪಾಕಿಸ್ತಾನ ಭದ್ರತಾ ಪಡೆಗಳ ನಡುಗೆ ಘರ್ಷಣೆ ಏರ್ಪಟ್ಟಿದೆ. ಘಟನೆಯಲ್ಲಿ 11 ಪಾಕಿಸ್ತಾನಿ ಸೈನಿಕರು, ಟಿಟಿಪಿಯ 19 ಉಗ್ರರು ಮೃತಪಟ್ಟಿದ್ದಾರೆ.

    ಅ.7-8 ರ ರಾತ್ರಿ ಫಿಟ್ನಾ ಅಲ್-ಖವಾರಿಜ್ ಎಂದು ಕರೆಯಲ್ಪಡುವ ಗುಂಪಿನ ಭಯೋತ್ಪಾದಕರಿರುವ ಮಾಹಿತಿ ಮೇರೆಗೆ ಅಫ್ಘಾನಿಸ್ತಾನದ ಗಡಿಯಲ್ಲಿರುವ ಒರಾಕ್ಜೈ ಜಿಲ್ಲೆಯಲ್ಲಿ ಪಾಕ್ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದ ಬಳಿಕ ಈ ಘಟನೆ ನಡೆದಿದೆ. ಇದನ್ನೂ ಓದಿ: ಅಮೆರಿಕಕ್ಕೆ ಅಪರೂಪದ ಖನಿಜಗಳ ಮೊದಲ ರಫ್ತು ಕಳುಹಿಸಿದ್ದೇವೆ : ಪಾಕ್

    ಭದ್ರತಾ ಪಡೆಗಳು ಮತ್ತು ಉಗ್ರರ ನಡುವಿನ ಭೀಕರ ಗುಂಡಿನ ಚಕಮಕಿಯಲ್ಲಿ, 19 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಮಿಲಿಟರಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಲೆಫ್ಟಿನೆಂಟ್ ಕರ್ನಲ್ ಮತ್ತು ಮೇಜರ್ ಸೇರಿದಂತೆ 11 ಪಾಕಿಸ್ತಾನಿ ಸೈನಿಕರು ಸಹ ಪ್ರಾಣ ಕಳೆದುಕೊಂಡಿದ್ದಾರೆ.

    ನಿಷೇಧಿತ ಟಿಟಿಪಿ 2022 ರ ನವೆಂಬರ್‌ನಲ್ಲಿ ಸರ್ಕಾರದೊಂದಿಗೆ ಕದನ ವಿರಾಮ ಕೊನೆಗೊಳಿಸಿದ ನಂತರ, ಪಾಕಿಸ್ತಾನವು ವಿಶೇಷವಾಗಿ ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನದಲ್ಲಿ ಉಗ್ರಗಾಮಿ ದಾಳಿಗಳಲ್ಲಿ ಹೆಚ್ಚಳವಾಗಿತ್ತು. ಈ ಗುಂಪು ಭದ್ರತಾ ಪಡೆಗಳು, ಪೊಲೀಸರು ಮತ್ತು ಕಾನೂನು ಜಾರಿ ಸಂಸ್ಥೆಗಳನ್ನು ಗುರಿಯಾಗಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿತ್ತು. ಇದನ್ನೂ ಓದಿ: S-400ಗೆ ಟಕ್ಕರ್‌ ಕೊಡಲು ತನ್ನದೇ ಮಿಸೈಲ್‌ ಅಭಿವೃದ್ಧಿಪಡಿಸಿದ ಪಾಕ್‌ – ಇದು ಬ್ರಹ್ಮೋಸ್‌ಗಿಂತ ಶಕ್ತಿಶಾಲಿಯೇ?

  • ಪಾಕ್‌ ಒಳಗಡೆಯೇ ಏರ್‌ಸ್ಟ್ರೈಕ್‌ – 7 ಬಾಂಬ್‌ಗೆ 30 ಮಂದಿ ಬಲಿ

    ಪಾಕ್‌ ಒಳಗಡೆಯೇ ಏರ್‌ಸ್ಟ್ರೈಕ್‌ – 7 ಬಾಂಬ್‌ಗೆ 30 ಮಂದಿ ಬಲಿ

    ಇಸ್ಲಾಮಾಬಾದ್‌: ಖೈಬರ್ ಪಖ್ತುಂಖ್ವಾ (Khyber Pakhtunkhwa) ಪ್ರಾಂತ್ಯದಲ್ಲಿ ಪಾಕಿಸ್ತಾನ ವಾಯುಪಡೆ (Pakistan Air Force) ನಡೆಸಿದ ವೈಮಾನಿಕ ದಾಳಿಯಲ್ಲಿ (Air Strike) ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ.

    ಕಣಿವೆಯಲ್ಲಿರುವ ಮಾಟ್ರೆ ದಾರಾ ಗ್ರಾಮದ ಮೇಲೆ ಪಾಕಿಸ್ತಾನದ ಜೆ-17 ಯುದ್ಧ ವಿಮಾನಗಳು ಎಂಟು LS-6 ಬಾಂಬ್‌ಗಳನ್ನು ಹಾಕಿವೆ. ಸೋಮವಾರ ನಸುಕಿನ ಜಾವ 2 ಗಂಟೆಯ ವೇಳೆ ಈ ದಾಳಿ ನಡೆದಿದ್ದು ಭಾರೀ ಪ್ರಮಾಣದಲ್ಲಿ ಸಾವು ನೋವು ಸಂಭವಿಸಿದೆ ಎಂದು ವರದಿಯಾಗಿದೆ.  ಇದನ್ನೂ ಓದಿ:  ಒಂದಿಂಚು ಜಾಗವನ್ನೂ ಬಿಡಲ್ಲ – ಬಾಗ್ರಾಮ್‌ ವಾಯುನೆಲೆ ಹಿಂದಿರುಗಿಸುವ ಟ್ರಂಪ್ ಬೇಡಿಕೆ ತಿರಸ್ಕರಿಸಿದ ತಾಲಿಬಾನ್

     

    ರಕ್ಷಣಾ ತಂಡಗಳು ಅವಶೇಷಗಳ ಅಡಿಯಲ್ಲಿ ಶವಗಳನ್ನು ಹುಡುಕುವಲ್ಲಿ ನಿರತವಾಗಿವೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಚೀರಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ.

    ಖೈಬರ್ ಪಖ್ತುಂಖ್ವಾದಲ್ಲಿ ಹಿಂದೆ ಅನೇಕ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು. ಪಾಕಿಸ್ತಾನದಲ್ಲಿ ಭಯೋತ್ಪಾದ ದಾಳಿ ಹೆಚ್ಚಾಗುತ್ತಿದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ಶೇ.42 ರಷ್ಟು ಹೆಚ್ಚಳ ಕಂಡಿದೆ. ಇದನ್ನೂ ಓದಿ:  ಅಮೆರಿಕ ವಿರೋಧದ ನಡ್ವೆ ಪ್ಯಾಲೆಸ್ಟೀನ್‌ಗೆ ದೇಶದ ಮಾನ್ಯತೆ ನೀಡಲು ಬ್ರಿಟನ್ ಸಿದ್ಧತೆ

    ಈ ವರ್ಷದ ದೇಶಾದ್ಯಂತ ಕನಿಷ್ಠ 74 ಭಯೋತ್ಪಾದಕ ದಾಳಿಗಳು ದಾಖಲಾಗಿದ್ದು, 90 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಖೈಬರ್ ಪಖ್ತುಂಖ್ವಾದ ಪ್ರಾಂತ್ಯದಲ್ಲಿ ಹೆಚ್ಚು ದಾಳಿ ನಡೆದರೆ ನಂತರದ ಸ್ಥಾನದಲ್ಲಿ ಬಲೂಚಿಸ್ತಾನ್ ಇದೆ.

  • ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಮೇಲೆ ಬಾಂಬ್‌ ಸ್ಫೋಟ – 7 ಮಂದಿ ದುರ್ಮರಣ

    ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಮೇಲೆ ಬಾಂಬ್‌ ಸ್ಫೋಟ – 7 ಮಂದಿ ದುರ್ಮರಣ

    ಇಸ್ಲಾಮಾಬಾದ್: ಒಂದೆಡೆ ಭಾರತದ ಮೇಲೆ ಯುದ್ಧಕ್ಕೆ ಹಪಹಪಿಸುತ್ತಿರುವ ಪಾಕಿಸ್ತಾನಕ್ಕೆ (Pakistan) ತನ್ನ ದೇಶದಲ್ಲೇ ಸುರಕ್ಷತೆ ಇಲ್ಲದಂತಾಗಿದೆ. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ (Khyber Pakhtunkhwa) ಪ್ರಾಂತ್ಯದಲ್ಲಿರುವ ಶಾಂತಿ ಸಮಿತಿಯ ಕಚೇರಿಯ ಬಳಿ ಬಾಂಬ್ ಸ್ಫೋಟ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕನಿಷ್ಠ 7 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

    ದಕ್ಷಿಣ ವಜೀರಿಸ್ತಾನ್ ಜಿಲ್ಲೆಯ ಪ್ರಧಾನ ಕಚೇರಿಯಾದ ವಾನಾದಲ್ಲಿರುವ ಸ್ಥಳೀಯ ಶಾಂತಿ ಸಮಿತಿಯ ಕಚೇರಿಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಕಚೇರಿಯೇ ಧ್ವಂಸವಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ 16 ಮಂದಿಯನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಯುದ್ಧದ ಬಿಸಿಗೆ ಬೆದರಿ ಸಾಮೂಹಿಕ ರಾಜೀನಾಮೆ ನೀಡುತ್ತಿದ್ದಾರೆ ಪಾಕ್‌ ಸೈನಿಕರು!

    ಸದ್ಯ ಈವರೆಗೆ ಯಾವುದೇ ಗುಂಪು ಬಾಂಬ್‌ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ. ಮಾಹಿತಿ ಪಡೆದ ಬಳಿಕ ಸ್ಥಳೀಯ ರಕ್ಷಣಾ ಪಡೆಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಇನ್ನೂ ಅವಶೇಷಗಳ ಅಡಿ ಜನ ಸಿಲುಕಿರುವ ಸಾಧ್ಯತೆಗಳಿವೆ ಎಂದು ಶಂಕಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: US ಆಯ್ತು! ಈಗ ಆಸ್ಟ್ರೇಲಿಯಾ ವಿವಿಗಳಿಂದ ಭಾರತೀಯ ವಿದ್ಯಾರ್ಥಿಗಳಿಗೆ ವೀಸಾ ಬಂದ್.. ಯಾಕೆ?

    ಸದ್ಯ ಆರ್ಥಿಕವಾಗಿ ಈಗಾಗಲೇ ತತ್ತರಿಸಿ ಹೋಗಿರುವ ಪಾಕಿಸ್ತಾನದ ಮೇಲೆ ಒಂದು ಕಡೆಯಿಂದ ಬಲೂಚಿಸ್ತಾನದ ಪ್ರತ್ಯೇಕತಾವಾದಿಗಳು ಮತ್ತೊಂದು ಕಡೆಯಿಂದ ತಾಲಿಬಾನ್‌ ಕಡೆಯಿಂದ ದಾಳಿ ನಡೆಯುತ್ತಿದೆ. ಬಲೂಚಿಸ್ತಾನ, ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ – ಬಲೂಚಿಸ್ತಾನ ಲಿಬರೇಷನ್ ಆರ್ಮಿ ಬಂಡುಕೋರರು ಸೇನೆಯನ್ನು ಗುರಿಯಾಗಿಸಿಕೊಂಡು ನಿರಂತರ ದಾಳಿ ನಡೆಸುತ್ತಲೇ ಇದ್ದಾರೆ. ಇದರಿಂದ ಭಾರೀ ಸಂಖ್ಯೆಯಲ್ಲಿ ಸೈನಿಕರು ಮೃತಪಟ್ಟಿದ್ದು, ಸಾಮೂಹಿಕ ರಾಜೀನಾಮೆಗೆ ಮುಂದಾಗುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಭಾರತ – ಪಾಕ್‌ ನಡುವೆ ಉದ್ವಿಗ್ನತೆ ಮೇಲೆ ಚೀನಾ ನಿಗಾ – ಪಾಕಿಸ್ತಾನದ ಈ ಬೇಡಿಕೆಗೆ ಬೆಂಬಲ 

  • ಶಿಯಾ-ಸುನ್ನಿಗಳ ನಡುವೆ ಮತ್ತೆ ರಕ್ತಪಾತ – ದಿನ ದಿನಕ್ಕೂ ಏರುತ್ತಿದೆ ಸಾವಿನ ಸಂಖ್ಯೆ!

    ಶಿಯಾ-ಸುನ್ನಿಗಳ ನಡುವೆ ಮತ್ತೆ ರಕ್ತಪಾತ – ದಿನ ದಿನಕ್ಕೂ ಏರುತ್ತಿದೆ ಸಾವಿನ ಸಂಖ್ಯೆ!

    ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ (Khyber Pakhtunkhwa) ಜಿಲ್ಲೆಯೊಂದರಲ್ಲಿ ಕೋಮುಗಲಭೆ ಭುಗಿಲೆದ್ದಿದೆ. ಮುಸ್ಲಿಂ ಧರ್ಮದ ಎರಡು ದೊಡ್ಡ ಪಂಗಡಗಳಾದ ಶಿಯಾ ಮತ್ತು ಸುನ್ನಿಗಳ ನಡುವಿನ ಸಂಘರ್ಷ ಸಂಘರ್ಷಗಳು ನಿರಂತರವಾಗಿ ಶಾಂತಿ ಕದಡುತ್ತಿವೆ. ಪಾಕ್‌ನ ಆಫ್ಘನ್ ಗಡಿಯ ಕುರ್ರಂ ಜಿಲ್ಲೆಯ ಖೈಬ‌ರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಈ ಎರಡು ಪಂಗಡಗಳು ಪರಸ್ಪರ ಕಾದಾಟಕ್ಕಿಳಿದಿದ್ದು, ಕಂಡಕಂಡಲ್ಲಿ ದಾಳಿಗಳು ನಡೆಯುತ್ತಿವೆ. ಈ ಸಂಘರ್ಷ ಕೇವಲ ಪಾಕಿಸ್ತಾನ ಮಾತ್ರವಲ್ಲದೇ ವಿಶ್ವದ ಇತರ ಮುಸ್ಲಿಂ ರಾಷ್ಟ್ರಗಳಲ್ಲೂ (Muslims Nation) ಕಂಪನ ಸೃಷ್ಟಿಸಿವೆ.

    ಕಳೆದ 6 ತಿಂಗಳಿನಿಂದ ಮತ್ತೆ ಶಿಯಾ – ಸುನ್ನಿ ಪಂಗಡಗಳ ನಡುವಿನ ಸಂಘರ್ಷ (Shia Sunni Clash) ತಾರಕಕ್ಕೇರಿದ್ದು, ಈ ಅವಧಿಯಲ್ಲಿ ನೂರಾರು ಮಂದಿ ಪ್ರಾಣ ತೆತ್ತಿದ್ದಾರೆ. ಸದ್ಯ ಒಂದು ವಾರ ಕದನವಿರಾಮ ಘೋಷಣೆಯಾಗಿದ್ದರೂ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರುತಲೇ ಇದೆ. ಇದರಿಂದ 1 ವಾರದಲ್ಲಿ 87 ಇದ್ದ ಸಾವಿನ ಸಂಖ್ಯೆ ಕಳೆದ 3 ದಿನಗಳಿಂದ 133ಕ್ಕೆ ಏರಿಕೆಯಾಗಿದೆ. ಇದರೊಂದಿಗೆ 300ಕ್ಕೂ ಅಧಿಕ ಕುಟುಂಬಗಳು ವಲಸೆ ಹೋಗಿವೆ. ಈ ಸಂಘರ್ಷ ನಿಯಂತ್ರಣಕ್ಕೆ ಅಲ್ಲಿನ ಜಿಲ್ಲಾಡಳಿತ ಹಾಗೂ ಭದ್ರತಾ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಅದಕ್ಕಾಗಿ ಭದ್ರತಾ ಪಡೆಗಳು ಸ್ಥಳದಲ್ಲೇ ಬೀಡುಬಿಟ್ಟಿವೆ. ಕುರ್ರಂನ ಪ್ರಮುಖ ನಗರಗಳಾದ ಪರಾಚಿಬಾರ್‌, ಪೇಶಾಬವರ್‌ ಅನ್ನು ಸಂಪರ್ಕಿಸುವ ಮುಖ್ಯರಸ್ತೆಯನ್ನು ಬಂದ್‌ ಮಾಡಲಾಗಿದೆ.

    ಸಂಘರ್ಷಕ್ಕೆ ಕಾರಣವೇನು?

    ಇಸ್ಲಾಮಿನ ಅಂತಿಮ ಪ್ರವಾದಿ ಮೊಹಮ್ಮದ್‌ರ ನಂತರದ ಉತ್ತರಾಧಿಕಾರ ವಿಚಾರದಲ್ಲಿ ಹುಟ್ಟಿಕೊಂಡ ವಿವಾದ ಇಂದಿಗೂ ಮುಂದುವರಿದಿದೆ. ಪಾಕ್‌ನಲ್ಲಿ ಬಹುಸಂಖ್ಯಾತರಾಗಿರುವ ಸುನ್ನಿ ಸಮುದಾಯದವರು ರಾಜಕೀಯ ಸಹಿತ ಎಲ್ಲ ಅಧಿಕಾರವೂ ತಮ್ಮ ಬಳಿಯೇ ಇರಬೇಕೆಂದು ಬಯಸುತ್ತಿದ್ದು, ಹಾಗಾಗಿ ಅವರು ಶಿಯಾಗಳ (Shia) ನೆರಳನ್ನೂ ಕಾಣಲು ತಯಾರಿಲ್ಲ. ಈ ವಿಚಾರದಲ್ಲಿ ಎರಡೂ ಪಂಗಡಗಳ ನಡುವೆ ಘರ್ಷಣೆ ಸದಾ ಇದ್ದಿದ್ದೇ.

    ಸಂಘರ್ಷ ಶುರುವಾಗಿದ್ದು ಎಲ್ಲಿಂದ?

    ಪಾಕಿಸ್ತಾನದ ಪಖ್ತುಂಖ್ವಾ ಪ್ರಾಂತ್ಯ ಅನ್ನೋದು ಅಫ್ಘಾನಿಸ್ತಾನದ (Afghanistan) ಗಡಿಯಲ್ಲಿರುವ ಒಂದು ಸಣ್ಣ ಜಿಲ್ಲೆ. ಇಂದು ಅಲ್ಲಿ ಈ ಪರಿಯಾಗಿ ಸಂಘರ್ಷ ಶುರುವಾಗಲು ಕಾರಣ ಏನು ಎಂದು ಹುಡುಕುತ್ತಾ ಹೋದರೆ ಅಫ್ಘಾನಿಸ್ತಾನದ ಸಂಘರ್ಷ ಹಾಗೂ 70ರ ದಶಕದಲ್ಲಿ ಪಾಕಿಸ್ತಾನದ ಮಿಲಿಟರಿ ಅಧಿ ಕಾರಿಯಾಗಿದ್ದ ಜಿಯಾ ಉಲ್ ಹಕ್ ಎಂಬ ಸೇನಾ ನಾಯಕನ ಪಾತ್ರ ಕಾಣಿಸುತ್ತದೆ.

    ವಿಶ್ವದ 2ನೇ ಮಹಾಯುದ್ಧದ ಬಳಿಕ 2 ಬಲಾಡ್ಯ ರಾಷ್ಟ್ರಗಳ ನಡುವೆ ಉಂಟಾದ ʻಶೀತಲ ಸಮರ’ದ ಕಾಲದಲ್ಲಿ ಅಫ್ಘಾನಿಸ್ತಾನದಲ್ಲಿ ರಷ್ಯಾದ ಪಡೆಗಳು ಬೀಡುಬಿಟ್ಟಿದ್ದವು. ಇತ್ತ ಪಾಕಿಸ್ತಾನವು ಅಮೆರಿಕ ಪರ ನಿಂತುಕೊಂಡಿತ್ತು. ಆಗ ಅಫ್ಘಾನಿಸ್ತಾನದ ನಿರಾಶ್ರಿತರನ್ನು ಕರೆತಂದಿರುವ ಜಿಯಾ ಉಲ್ ಹಕ್ ಇದೇ ಪ್ರಾಂತ್ಯದಲ್ಲಿ ಆಶ್ರಯ ನೀಡುತ್ತಾ ಬಂದ. ಅವರಿಗಾಗಿಯೇ ಮದರಸಾಗಳನ್ನ ತೆರೆಯಲಾಯಿತು. ಇವರೆಲ್ಲರೂ ಶಿಯಾ ಸಮುದಾಯದವರಾಗಿದ್ದು, ಇವರನ್ನು ಅಫ್ಘಾನ್‌ನಲ್ಲಿದ್ದ ರಷ್ಯಾ ಪಡೆಗಳ ವಿರುದ್ಧ ಹಾಗೂ ಕಾಶ್ಮೀರದಲ್ಲಿ ಗೆರಿಲ್ಲಾ ಮಾದರಿಯ ಯುದ್ಧದಲ್ಲಿ ಬಳಸಲು ಯೋಜನೆ ರೂಪಿಸಿ ಅವರಿಗೆ ಹಣಕಾಸಿನ ನೆರವನ್ನೂ ನೀಡಲಾಯಿತು. ವರ್ಷಗಳು ಉರುಳಿದಂತೆ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶಿಯಾಗಳ ಸಂಖ್ಯೆ ಕಡಿಮೆಯಾಗಿ ಸುನ್ನಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಇದರಿಂದ ನಿಧಾನವಾಗಿ ಎರಡು ಪಂಗಡಗಳ ನಡುವೆ ಸಂಘರ್ಷದ ಕಿಡಿ ಹೊತ್ತಿಕೊಂಡಿತ್ತು.

    ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು ಹೇಗೆ?

    ಈ ಸಮುದಾಯಗಳ ಸಂಘರ್ಷಕ್ಕೆ ಇನ್ನೂ ಒಂದು ಮುಖ್ಯ ಕಾರಣವಿದೆ. ಕುರ್ರಂ ಜಿಲ್ಲೆಯು ಬುಡಕಟ್ಟು ಪ್ರದೇಶವಾಗಿದ್ದು, 7.84 ಲಕ್ಷದಷ್ಟು ಜನಸಂಖ್ಯೆಯನ್ನು ಹೊಂದಿದೆ. ಈ ಪೈಕಿ ಶೇ.99 ರಷ್ಟು ತುರಿ, ಬಂಗಾಶ್‌, ಜೈಮುಷ್ಟ್‌, ಮಂಗಲ್‌, ಮುಕ್ಬಾಲ್‌ ಮತ್ತು ಮುಸುಜೈ ಮತ್ತು ಪರ್ಷಮ್ಕಾನಿ, ಬಂಗಾಶ್‌ ಶಿಯಾ ಸಮುದಾಗಳಿವೆ. ಉಳಿದವರು ಸುನ್ನಿಗಳಿದ್ದಾರೆ. 2001ರಲ್ಲಿ ಅಮೆರಿಕವು ಪಾಕಿಸ್ತಾನದ ಮೇಲೆ ದಾಳಿ ಮಾಡಿದಾಗ ಲಕ್ಷಾಂತರ ಸುನ್ನಿಗಳು ಪಾಕಿಸ್ತಾನಕ್ಕೆ ಪಲಾಯನ ಮಾಡಿದರು. ಅಫ್ಘಾನಿಸ್ತಾನದಲ್ಲಿದ್ದ ಸುನ್ನಿಗಳು ಪಾಕ್‌ನ ಹಲವು ಪ್ರದೇಶಗಳಲ್ಲಿ ನೆಲೆದರು. ಆದ್ರೆ ಕುರ್ರಂ ಜಿಲ್ಲೆಯಲ್ಲಿದ್ದ ಶಿಯಾಗಳು ಇಲ್ಲಿನ ಸುನ್ನಿಗಳಿಗೆ ನೆಲೆಯೂರಲು ವಿರೋಧ ವ್ಯಕ್ತಪಡಿಸಿತ್ತು. ಆದ್ರೆ ಅಂದಿನ ಜನರಲ್‌ ಜಿಯಾ ಉಲ್‌ ಹಕ್‌ನಿಂದಾಗಿ ಸುನ್ನಿಗಳಿಗೆ ಈ ಪ್ರದೇಶದಲ್ಲಿ ನೆಲೆಸುವ ಅವಕಾಶ ಸಿಕ್ಕಿತು. 2007ರಲ್ಲಿ ಶಿಯಾ – ಸುನ್ನಿಗಳ ನಡುವೆ ರಕ್ತಸಿಕ್ತ ಘರ್ಷಣೆ ನಡೆಯಿತು. ಈ ನಡುವೆ 2008 ರಲ್ಲಿ, ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಹೆಸರಿನ ಶಿಯಾ ವಿರೋಧಿ ಭಯೋತ್ಪಾದಕ ಸಂಘಟನೆ ರಚಿಸಲಾಯಿತು. ಇದು ಹಿಂಸಾಚಾರವನ್ನು ಮತ್ತಷ್ಟು ಹೆಚ್ಚಿಸಿತು. ಸುಮಾರು ನಾಲ್ಕು ವರ್ಷಗಳ ಕಾಲ ನಡೆದ ಈ ಯುದ್ಧದಲ್ಲಿ ಸಾವಿರಾರು ಜನ ಸತ್ತರು. ಅಂತಿಮವಾಗಿ 2011ರಲ್ಲಿ ಶಾಂತಿ ಒಪ್ಪಂದಕ್ಕೆ ಬರಲಾಯಿತು. 2021ರಲ್ಲಿ ತಾಲಿಬಾನ್‌ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಾಗ ಮತ್ತೆ ಇಲ್ಲಿ ಹಿಂಸಾಚಾರ ಭುಗಿಲೆದ್ದಿತು.

    ಸಮುದಾಯಗಳ ಬಲಾ-ಬಲ ಹೇಗಿದೆ?

    ಪಾಕಿಸ್ತಾನದಲ್ಲಿ ಒಟ್ಟು 24.5 ಕೋಟಿ ಜನಸಂಖ್ಯೆಯಲ್ಲಿ ಸುಮಾರು 96% ರಷ್ಟು ಮುಸ್ಲಿಮರೇ ಇದ್ದಾರೆ. ಮುಸ್ಲಿಮರಲ್ಲಿ 80% ರಷ್ಟು ಸುನ್ನಿಗಳಿದ್ದಾರೆ. ಸುಮಾರು 12% ರಷ್ಟು ಶಿಯಾಗಳು ವಾಸವಾಗಿದ್ದಾರೆ. ಈ ಎರಡು ಪಂಗಡಗಳಲ್ಲದೇ ಸುಮಾರು 45 ಲಕ್ಷ ಅಹಮದೀಯರು ಈ ದೇಶದಲ್ಲಿದ್ದಾರೆ. ಧರ್ಮಾಚರಣೆ ಸಹಿತ ಅನೇಕ ವಿಚಾರಗಳಲ್ಲಿ ಈ ಪಂಗಡಗಳ ನಡುವೆ ಭಿನ್ನತೆ ಇದೆ.

    ಹಲವು ಬುಡಕಟ್ಟು ಸಮುದಾಯಗಳ ನೆಲೆಯಾಗಿರುವ ಕುರ್ರಂನಲ್ಲಿ ರಕ್ತಪಾತವಾಗಲು ಸ್ಥಳೀಯರು ಮಾತ್ರ ಕಾರಣವಲ್ಲ, ವಾಸ್ತವವಾಗಿ ಸೌದಿ ಅರೇಬಿಯಾ, ಇರಾನ್‌ ಸಹ ಇಲ್ಲಿನ ಹಿಂಸಾಚಾರಕ್ಕೆ ಕಾರಣ ಅನುಮಾನಗಳು ವ್ಯಕ್ತವಾಗಿವೆ. ಇರಾನ್‌ ಶಿಯಾಗಳನ್ನು ಹೆಚ್ಚಾಗಿ ಹೊಂದಿರುವ ದೇಶವಾಗಿದ್ದು, ಸೌದಿ ಅರೇಬಿಯಾ ಸುನ್ನಿಗಳ ಬಹುಸಂಖ್ಯಾತ ರಾಷ್ಟ್ರವಾಗಿದೆ. ಪಾಕಿಸ್ತಾನದ ಸೆಂಟರ್ ಫಾರ್ ಸ್ಟ್ರಾಟೆಜಿಕ್ ಅಂಡ್ ಕಾಂಟೆಂಪರರಿ ರಿಸರ್ಚ್ ವರದಿಯು ಸೌದಿ ಅರೇಬಿಯಾ ಕುರ್ರಂನಲ್ಲಿ ಸುನ್ನಿ ಉಗ್ರಗಾಮಿ ಸಂಘಟನೆಗಳನ್ನು ಹಾಗೂ ಇರಾನ್‌ ಶಿಯಾ ಸಂಘಟನೆಗಳನ್ನು ಬೆಂಬಲಿಸುತ್ತಿದೆ. ತಾಲಿಬಾನ್ ಬೆಂಬಲಿತ ಸಂಘಟನೆಗಳ ವಿರುದ್ಧ ಹೋರಾಡಲು ಜೈನ್ಬಿಯುನ್ ಬ್ರಿಗೇಡ್ ಎಂಬ ಹೆಸರಿನ ಸಂಘಟನೆಯನ್ನು ಇರಾನ್ ಇಲ್ಲಿ ಸ್ಥಾಪಿಸಿದೆ. ಪಾಕಿಸ್ತಾನ ಸರ್ಕಾರ ಜೈನ್ಬಿಯುನ್ ಬ್ರಿಗೇಡ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಅಂಕಿ ಅಂಶಗಳ ಪ್ರಕಾರ 2007 ಮತ್ತು 2011ರ ನಡುವೆ ಕುರ್ರಂನಲ್ಲಿ ನಡೆದ ಶಿಯಾ-ಸುನ್ನಿಗಳ ನಡುವಿನ ದಂಗೆಗಳಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 5 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡರು, 10 ಸಾವಿರಕ್ಕೂ ಹೆಚ್ಚು ಮಂದಿ ಆ ಪ್ರದೇಶದಿಂದಲೇ ಕಾಲ್ಕಿತ್ತರು ಎಂದು ಹೇಳಲಾಗಿದೆ.

    ಇತರ ಪಂಗಡಗಳಿಗೂ ನೆಮ್ಮದಿ ಇಲ್ಲ!

    ಪಾಕಿಸ್ತಾನದಲ್ಲಿ ಶಿಯಾ- ಸುನ್ನಿಗಳ ಹೊರತಾಗಿ ಅಹಮದೀಯರು, ಇಸ್ಮಾಯಿಲಿ, ಬಹುರಾ, ಜೈದಿ, ಸೂಫಿ ಪಂಥ ಸಹಿತ ಇನ್ನಿತರ ಪಂಗಡಗಳು ಇವೆ. ಆದರೆ, ಇವರೆಲ್ಲ ತೀರಾ ಚಿಕ್ಕ ಸಮುದಾಯ ಆಗಿರುವ ಕಾರಣ ಇವರ ಏಳಿಗೆಯನ್ನು ಅಲ್ಲಿನ ಬಹುಸಂಖ್ಯಾತರು ಸಹಿಸುತ್ತಿಲ್ಲ. ಬಹುತೇಕ ಈ ಚಿಕ್ಕ ಸಮುದಾಯವನ್ನು ಗುರಿಯಾಗಿಸಿಯೇ ಭಯೋತ್ಪಾದನಾ ದಾಳಿಗಳು ನಡೆಯುತ್ತಿದ್ದು, ರಕ್ತಸಿಕ್ತ ಅಧ್ಯಾಯದಿಂದ ಈ ಪಂಗಡಗಳು ನಲುಗಿ ಹೋಗಿವೆ.

    ಅಹಮದೀಯರಿಗೇಕೆ ನೆಲೆ ಇಲ್ಲ?

    ಪಾಕಿಸ್ತಾನದಲ್ಲಿ ಸುನ್ನಿ ಮತ್ತು ಶಿಯಾಗಳ ನಡುವೆ ಇನ್ನೊಂದು ಮುಸ್ಲಿಂ ಪಂಗಡ ವಾಸಿಸುತ್ತಿದೆ. ಅದುವೇ ಅಹಮ್ಮದೀಯ ಸಮುದಾಯ. ಆದರೆ, ಪಾಕಿಸ್ತಾನದಲ್ಲಿ ಸದ್ಯ ಅವರಿಗೆ ನೆಲೆಯೇ ಇಲ್ಲದ ಸ್ಥಿತಿ ಇದೆ. ಅಹಮದೀಯ ಪಂಥದವರು ತಮ್ಮನ್ನು ತಾವು ಮುಸ್ಲಿಂ ಎಂದು ಕರೆದುಕೊಳ್ಳುತ್ತಾರೆ. ಆದರೆ, ಅವರನ್ನು ಪಾಕಿಸ್ತಾನದ ಸಂವಿಧಾನದ ಅಡಿಯಲ್ಲಿ 1974ರಲ್ಲಿ ʻಮುಸ್ಲಿಮೇತರರು’ ಎಂದು ಘೋಷಿಸಲಾಯಿತು. ಪಂಜಾಬ್ ಪ್ರಾಂತ್ಯದಲ್ಲಿ ಇವರ ಸಂಖ್ಯೆ ಹೆಚ್ಚಾಗಿದೆ. ಧಾರ್ಮಿಕ ವಿಚಾರವಾಗಿ ಇವರ ಮೇಲೆ ನಿರಂತರ ದಾಳಿಗಳು ನಡೆಯುತ್ತಿದ್ದು, ಅವರಿಗೆ ಸೇರಿದ ಧಾರ್ಮಿಕ ಸ್ಥಳಗಳು ಮತ್ತು ಖಬರಸ್ಥಾನಗಳನ್ನು (ಸ್ಮಶಾನ) ನಾಶ ಮಾಡಲಾಗಿದೆ. ಪಾಕಿಸ್ತಾನದಲ್ಲಿ 1985ರಲ್ಲಿ ವಿವಿಧ ಧಾರ್ಮಿಕ ಗುಂಪುಗಳಿಗೆ ಪ್ರತ್ಯೇಕ ಮತದಾರರ ಪಟ್ಟಿಯನ್ನು ಪರಿಚಯಿಸಲಾಯಿತು. ಇದರಲ್ಲಿ ಅಹಮ್ಮದೀಯರನ್ನೂ ಸೇರಿಸಲಾಯಿತು. ಇದು ಅಹಮ್ಮದೀಯರನ್ನು ಕೆರಳಿಸಿದ್ದು, ಇಂದಿಗೂ ಅವರು ಪೂರ್ಣ ಪ್ರಮಾಣದಲ್ಲಿ ಅಲ್ಲಿನ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸದೆ ದೂರವೇ ಉಳಿದಿದ್ದಾರೆ ಎನ್ನುತ್ತವೆ ವರದಿಗಳು.

    WTC ದಾಳಿಯೂ ಸಂಘರ್ಷಕ್ಕೆ ಕಾರಣವಾಗಿದ್ದು ಹೇಗೆ?

    ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ 2001ರ ಸೆ.11ರಂದು ತಾಲಿಬಾನಿಗಳು ದಾಳಿ ನಡೆಸಿದ ಬಳಿಕ ಅಮೆರಿಕದಿಂದ ಲಕ್ಷಾಂತರ ಮಂದಿ ಸುನ್ನಿ ಸಮುದಾಯದವರನ್ನು ಓಡಿಸಲಾಯಿತು. ಅವರು ನೆಲೆ ಇಲ್ಲದೇ ಬೇರೆ-ಬೇರೆ ದೇಶಗಳಿಗೆ ಹೋಗಿ ಆಶ್ರಯ ಪಡೆದರು. ಪಾಕಿಸ್ತಾನಕ್ಕೂ ಲಕ್ಷಾಂತರ ಸುನ್ನಿಗಳು ವಲಸೆ ಹೋದರು. ಅವರಿಗೆ ಪುನರ್ವಸತಿ ಕಲ್ಪಿಸುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿತ್ತು. ಈ ಹಂತದಲ್ಲಿ ಪಾಕಿಸ್ತಾನದ ಅಂದಿನ ಸರ್ಕಾರ ಖೈಬ‌ರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಆಶ್ರಯ ಕಲ್ಪಿಸಲು ಮುಂದಾಗಿತ್ತು. ಆದ್ರೆ, ಆ ಪ್ರಾಂತ್ಯದಲ್ಲಿ ಬಹುಸಂಖ್ಯಾತರಾಗಿದ್ದ ಶಿಯಾ ಸಮುದಾಯ ಸುನ್ನಿಗಳಿಗೆ ಆಶ್ರಯ ನೀಡುವುದನ್ನು ವಿರೋಧಿಸಿತು. ಇಲ್ಲಿಂದ ಸಂಘರ್ಷ ತಾರಕಕ್ಕೇರಿತು.

  • ಕುರಾನ್‌ಗೆ ಅಪಮಾನ – ಠಾಣೆಗೆ ನುಗ್ಗಿ ಆರೋಪಿಯನ್ನ ಗುಂಡಿಕ್ಕಿ ಕೊಂದ ಉದ್ರಿಕ್ತ ಗುಂಪು!

    ಕುರಾನ್‌ಗೆ ಅಪಮಾನ – ಠಾಣೆಗೆ ನುಗ್ಗಿ ಆರೋಪಿಯನ್ನ ಗುಂಡಿಕ್ಕಿ ಕೊಂದ ಉದ್ರಿಕ್ತ ಗುಂಪು!

    – ಆರೋಪಿ ಶವ ಎಳೆದಾಡಿ, ಮರಕ್ಕೆ ನೇತು ಹಾಕಿ ವಿಕೃತಿ

    ಇಸ್ಲಾಮಾಬಾದ್‌: ಮುಸ್ಲಿಮರ (Muslims) ಪವಿತ್ರ ಗ್ರಂಥ ಕುರಾನ್‌ ಅನ್ನು ಅಪವಿತ್ರಗೊಳಿದ್ದಾರೆಂದು ಆರೋಪಿಸಿ ಉದ್ರಿಕ್ತರ ಗುಂಪೊಂದು ಠಾಣೆಯಲ್ಲೇ ವ್ಯಕ್ತಿಯೊಬ್ಬನನ್ನ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಪಾಕಿಸ್ತಾನದಲ್ಲಿ (Pakistan) ನಡೆದಿದೆ.

    ಇಲ್ಲಿನ ಖೈಬರ್ ಪಖ್ತುಂಕ್ವಾದ (Khyber Pakhtunkhwa) ಸ್ವಾತ್‌ ತಾಲೂಕಿನಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ನಿಯೋಜಿಸಲಾಗಿದೆ. ಇದನ್ನೂ ಓದಿ: ವಿಜಯೇಂದ್ರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಲಿ, ನಾನು ರಾಜ್ಯಾಧ್ಯಕ್ಷ ಆಗ್ತೀನಿ: ಯತ್ನಾಳ್

    ಪಾಕಿಸ್ತಾನದ ಪಂಜಾಬ್‌ನ ಸಿಯಾಲ್‌ಕೋಟ್ ಜಿಲ್ಲೆಯ ವ್ಯಕ್ತಿಯೊಬ್ಬ ತೆಹಸಿಲ್‌ನಲ್ಲಿ ಪವಿತ್ರ ಕುರಾನ್‌ (Quran) ಗ್ರಂಥದ ಕೆಲವು ಪುಟಗಳನ್ನು ಸುಟ್ಟು ಹಾಕಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿತ್ತು. ಆದ್ರೆ ಉದ್ರಿಕ್ತರ ಗುಂಪು ಠಾಣೆ ಮುಂದೆ ಜಮಾಯಿಸಿ ಆತನನ್ನು ತಮಗೆ ಒಪ್ಪಿಸುವಂತೆ ಪಟ್ಟು ಹಿಡಿದಿತ್ತು. ಒಪ್ಪಿಸಲು ಪೊಲೀಸರು ನಿರಾಕರಿಸಿದ ನಂತರ ಆರೋಪಿಯನ್ನ ಗುಂಡಿಕ್ಕಿ ಕೊಂದಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಜಹಿದುಲ್ಲಾ ತಿಳಿಸಿದ್ದಾರೆ.

    ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?
    ಕುರಾನ್‌ ಗ್ರಂಥವನ್ನು ಅವಹೇಳನ ಮಾಡಿದ್ದಕ್ಕೆ ಮತ್ತು ಕುರಾನ್‌ ಗ್ರಂಥದ ಕೆಲ ಪುಟಗಳನ್ನು ಸುಟ್ಟುಹಾಕಿದ ಆರೋಪದ ಮೇಲೆ ಸ್ವಾತ್‌ ತಾಲೂಕಿನ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿ ಮಧ್ಯಾನ್‌ ಠಾಣೆಗೆ ಕರೆತಂದಿದ್ದರು. ಈ ಬೆನ್ನಲ್ಲೇ ಠಾಣೆ ಎದುರು ಜಮಾಯಿಸಿದ ನೂರಾರು ಜನರ ಉದ್ರಿಕ್ತರ ಗುಂಪು ಆರೋಪಿಯನ್ನು ತಮ್ಮ ಕೈಗೊಪ್ಪಿಸುವಂತೆ ಪಟ್ಟು ಹಿಡಿದಿದ್ದರು.

    ಇದಕ್ಕೆ ಪೊಲೀಸರು ಒಪ್ಪದಿದ್ದ ನಂತರ ಜನರ ನಡುವೆ ಭಾರೀ ಘರ್ಷಣೆ ಉಂಟಾಗಿತ್ತು. ಬಳಿಕ ಉದ್ರಿಕ್ತರ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್‌ ನಡೆಸಿದರು. ಘಟನೆಯಲ್ಲಿ ಒಬ್ಬ ವ್ಯಕ್ತಿಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ತಕ್ಷಣ ಮಧ್ಯಾನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ದರ್ಶನ್‌ ಬಳಿ 70 ಲಕ್ಷ ರೂ. ಪತ್ತೆ – ʻದಾಸʼನಿಗೆ ಕೊಲೆ ಆರೋಪದ ಜೊತೆಗೆ ಐಟಿ ಸಂಕಷ್ಟ!

    ಇದರಿಂದ ಮತ್ತಷ್ಟು ಉದ್ರಿಕ್ತಗೊಂಡ ಗುಂಪು ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿತ್ತು. ಬಳಿಕ ಕೆಲವರು ನೇರವಾಗಿ ಪೊಲೀಸ್‌ ಠಾಣೆಗೆ ನುಗ್ಗಿ ಆರೋಪಿಯನ್ನ ಗುಂಡಿಕ್ಕಿ ಕೊಂದು ಆತನ ಮೃತದೇಹವನ್ನು ಹೊರಗೆಳೆದು ಅದನ್ನು ಮರಕ್ಕೆ ನೇತು ಹಾಕಿ ವಿಕೃತಿ ಮೆರೆದಿದೆ. ಘಟನೆಯಲ್ಲಿ 8 ಮಂದಿಗೆ ಗಂಭೀರ ಗಾಯಗಳಾಗಿವೆ, ಕೆಲ ಪೊಲೀಸರೂ ಗಾಯಗೊಂಡಿದ್ದಾರೆ ಎಂದು ಜಹೀದುಲ್ಲಾ ಹೇಳಿದ್ದಾರೆ.

  • ಪಾಕ್‌ನಲ್ಲಿ ಪರಸ್ಪರ ಡಿಕ್ಕಿಯಾಗಿ ಆಳವಾದ ಕಂದರಕ್ಕೆ ಉರುಳಿದ ಬಸ್‌, ಕಾರು – 30 ಮಂದಿ ದುರ್ಮರಣ

    ಪಾಕ್‌ನಲ್ಲಿ ಪರಸ್ಪರ ಡಿಕ್ಕಿಯಾಗಿ ಆಳವಾದ ಕಂದರಕ್ಕೆ ಉರುಳಿದ ಬಸ್‌, ಕಾರು – 30 ಮಂದಿ ದುರ್ಮರಣ

    ಇಸ್ಲಾಮಾಬಾದ್: ಪ್ರಯಾಣಿಕರಿದ್ದ ಬಸ್‌ ಮತ್ತು ಕಾರು ಆಳವಾದ ಕಂದರಕ್ಕೆ ಉರುಳಿ ಬಿದ್ದ ಪರಿಣಾಮ 30 ಮಂದಿ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿರುವ ದಾರುಣ ಘಟನೆ ಪಾಕಿಸ್ತಾನದಲ್ಲಿ (Pakistan) ನಡೆದಿದೆ.

    ಇಲ್ಲಿನ ಖೈಬರ್ ಪಖ್ತುಂಖ್ವಾದ (Khyber Pakhtunkhwa) ಕೊಹಿಸ್ತಾನ್ ಜಿಲ್ಲೆಯ ಕಾರಕೋರಂ ಹೆದ್ದಾರಿಯಲ್ಲಿ ಎರಡು ವಾಹನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡು ನಂತರ ಕಂದರಕ್ಕೆ ಉರುಳಿ ಬಿದ್ದಿವೆ. ಬಸ್ ಗಿಲ್ಗಿಟ್‌ನಿಂದ ರಾವಲ್ಪಿಂಡಿಗೆ ಹೋಗುತ್ತಿದ್ದಾಗ ಶಿಥಿಯಾಲ್ ಪ್ರದೇಶದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: Turkey, Syria Earthquake: 7,900ಕ್ಕೇರಿದ ಸಾವಿನ ಸಂಖ್ಯೆ – ಅವಶೇಷಗಳಡಿ ಕೇಳುತ್ತಿದೆ ಸಂತ್ರಸ್ತರ ಚೀತ್ಕಾರ

    ಬಸ್‌ ಮತ್ತು ಕಾರು ಎರಡೂ ಕಂದರಕ್ಕೆ ಉರುಳಿವೆ. ಘಟನೆಯ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಮತ್ತು ರಕ್ಷಣಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರು ಗಾಯಾಳುಗಳು ಹಾಗೂ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

    ಭೀಕರ ರಸ್ತೆ ಅಪಘಾತಕ್ಕೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಮರುಕ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ ಅವರು, ಅಗಲಿದವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಜೊತೆಗೆ ಗಿಲ್ಗಿಟ್ ಬಾಲ್ಟಿಸ್ತಾನ್ ಮುಖ್ಯಮಂತ್ರಿ ಕೂಡ ಬಸ್ ಅಪಘಾತದ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಪಾಕ್ ಪ್ರೇಮಿ ಪತ್ತೆ ಪ್ರಕರಣ – ಪ್ಯೂರ್ ಲವ್‍ಗಾಗಿ ಭಾರತಕ್ಕೆ ಅಕ್ರಮ ಪ್ರವೇಶ

    ಇದೇ ರೀತಿ ಜನವರಿ 29 ರಂದು ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಪ್ರಯಾಣಿಕರ ಕೋಚ್ ಕಂದರಕ್ಕೆ ಬಿದ್ದು 41 ಜನರು ಸಾವನ್ನಪ್ಪಿದ್ದರು. 48 ಪ್ರಯಾಣಿಕರನ್ನು ಹೊತ್ತಿದ್ದ ವಾಹನವು ಕ್ವೆಟ್ಟಾದಿಂದ ಕರಾಚಿಗೆ ಪ್ರಯಾಣಿಸುತ್ತಿತ್ತು. ವಾಹನವು ಲಾಸ್ಬೆಲಾ ಬಳಿ ಸೇತುವೆಯ ಪಿಲ್ಲರ್‌ಗೆ ಡಿಕ್ಕಿ ಹೊಡೆದು ನಂತರ ಕಂದರಕ್ಕೆ ಬಿದ್ದು ಬೆಂಕಿ ಹೊತ್ತಿಕೊಂಡಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k