Tag: Khwaja Asif

  • ಪಾಕ್‌ನಲ್ಲಿರುವ ಎಲ್ಲಾ ಭಯೋತ್ಪಾದಕರು ಈಗ ಧರ್ಮಗುರುಗಳಾಗಿದ್ದಾರೆ – ಸಚಿವ ಖವಾಜಾ ಆಸಿಫ್

    ಪಾಕ್‌ನಲ್ಲಿರುವ ಎಲ್ಲಾ ಭಯೋತ್ಪಾದಕರು ಈಗ ಧರ್ಮಗುರುಗಳಾಗಿದ್ದಾರೆ – ಸಚಿವ ಖವಾಜಾ ಆಸಿಫ್

    ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿರುವ ಎಲ್ಲಾ ಭಯೋತ್ಪಾದಕರು ಈಗ ಸಂಪೂರ್ಣ ಬದಲಾಗಿದ್ದಾರೆ. ಈ ಪೈಕಿ ಹೆಚ್ಚಿನವರು ಧರ್ಮಗುರುಗಳಾಗಿದ್ದಾರೆ ಎಂದು ಪಾಕಿಸ್ತಾನ ಸಚಿವ ಖವಾಜಾ ಆಸಿಫ್ (Khwaja Asif) ಹೇಳಿದ್ದಾರೆ.

    ಪಹಲ್ಗಾಮ್‌ ಭಯೋತ್ಪಾದಕ ದಾಳಿ (Pahalgam Terrorist Attack) ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸಚಿವ ಖವಾಜಾ ಆಸಿಫ್, ಅನೇಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. ಪಾಕಿಸ್ತಾನ ಸರ್ಕಾರ ಭಯೋತ್ಪಾದನೆ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದೆಯಾ? ಪಾಕ್‌ನಲ್ಲಿ ಭಯೋತ್ಪಾದಕರು ಮತ್ತು ಉಗ್ರ ನಾಯಕರು ಸಕ್ರೀಯವಾಗಿದ್ದಾರಾ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದನ್ನೂ ಓದಿ: 3 ದಶಕಗಳಿಂದ ಅಮೆರಿಕಾಗೋಸ್ಕರ ಈ ಕೊಳಕು ಕೆಲಸ ಮಾಡ್ತಿದ್ದೇವೆ: ಪಾಕ್‌ ಸಚಿವ ಬಾಂಬ್‌

    ಪಾಕಿಸ್ತಾನದಲ್ಲಿರುವ ಎಲ್ಲಾ ಭಯೋತ್ಪಾದಕರನ್ನು ಈಗ ಸಂಪೂರ್ಣ ಶುಚಿಯಾಗಿದ್ದಾರೆ, ಇದರಲ್ಲಿ ಹೆಚ್ಚಿನವರು ಧಾರ್ಮಿಕ ಮುಖಂಡರಾಗಿದ್ದಾರೆ. ಅವರೆಲ್ಲರು ಇನ್ಮುಂದೆ ಪಾಕಿಸ್ತಾನದಲ್ಲಾಗಲಿ ಅಥವಾ ಭಾರತದ ಗಡಿಯಾಚೆ ಆಗಲಿ ಉಗ್ರ ಕೃತ್ಯಗಳನ್ನು ಎಸಗುವುದಿಲ್ಲ. ಏಕೆಂದರೆ ಆದ್ರೆ ಪಾಕಿಸ್ತಾನವು ಇನ್ಮುಂದೆ ಸಕ್ರಿಯ ಭಯೋತ್ಪಾದಕರು ಅಥವಾ ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ ನೀಡಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್ ʻಕದನ-ವಿರಾಮʼ ಮಾತುಕತೆ – ಇಂದು ಎರಡೂ ದೇಶಗಳ ಡಿಜಿಎಂಒಗಳ ಸಭೆ

    ಇದೇ ವೇಳೆ ಉಗ್ರ ಸಂಘಟನೆಗಳ ಪೋಷಣೆಯಲ್ಲಿ ಅಮೆರಿಕದ ಪಾತ್ರ ವಿವರಿಸಿದ ಆಸಿಫ್‌, ಭಯೋತ್ಪಾದಕ ಸಂಘಟನೆಗಳಿಗೆ ತರಬೇತಿ ನೀಡುವ ಮತ್ತು ಹಣಕಾಸು ಒದಗಿಸುವ ಕೆಲಸವನ್ನು ಪಾಕಿಸ್ತಾನ ಮಾಡುತ್ತಿಲ್ಲ. ಕಳೆದ ಮೂರು ದಶಕಗಳಿಂದಲೂ ಅಮೆರಿಕಾಗೋಸ್ಕರ (USA) ಈ ಕೊಳಕು ಕೆಲಸವನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್‍ಗೆ ನಾವು ಹೇಗಾದ್ರೂ ಪ್ರತಿಕ್ರಿಯಿಸುತ್ತೇವೆ, ಇದನ್ನು ಟ್ರಂಪ್ ಅರ್ಥ ಮಾಡಿಕೊಳ್ಳಲಿ: ಮೋದಿ

    ಕಳೆದ ಏಪ್ರಿಲ್‌ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದ ಮೂರ್ನಾಲ್ಕು ದಿನಗಳ ಬಳಿಕ ಪಾಕ್‌ ಸಚಿವ ಖವಾಜಾ ಆಸಿಫ್‌ ಅವರ ಸಂದರ್ಶನ ನಡೆಸಲಾಗಿತ್ತು. ಆದ್ರೆ ಈಗ ಈ ಕುರಿತ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಯುದ್ಧ ಭೀತಿ ನಡುವೆ ಮತ್ತೊಂದು ಶಾಕ್‌ – ಪಾಕಿಸ್ತಾನದ 51 ಸ್ಥಳಗಳ ಮೇಲೆ ಬಲೂಚ್‌ ಹೋರಾಟಗಾರರಿಂದ ದಾಳಿ

  • 3 ದಶಕಗಳಿಂದ ಅಮೆರಿಕಾಗೋಸ್ಕರ ಈ ಕೊಳಕು ಕೆಲಸ ಮಾಡ್ತಿದ್ದೇವೆ: ಪಾಕ್‌ ಸಚಿವ ಬಾಂಬ್‌

    3 ದಶಕಗಳಿಂದ ಅಮೆರಿಕಾಗೋಸ್ಕರ ಈ ಕೊಳಕು ಕೆಲಸ ಮಾಡ್ತಿದ್ದೇವೆ: ಪಾಕ್‌ ಸಚಿವ ಬಾಂಬ್‌

    – ಪಾಕ್‌ನಲ್ಲಿ ಉಗ್ರರು ಇದ್ದಾರೆ, ಆದ್ರೆ ಇನ್ಮುಂದೆ ಆ ಕೆಲಸ ಮಾಡಲ್ಲ
    – ಕೊನೆಗೂ ಉಗ್ರರ ಪೋಷಣೆ ಬಗ್ಗೆ ಸತ್ಯ ಒಪ್ಪಿಕೊಂಡ ಪಾಕ್‌

    ಇಸ್ಲಾಮಾಬಾದ್‌: ಪಹಲ್ಗಾಮ್‌ ದಾಳಿಯ (Pahalgam Terrorist Attack)) ಬಳಿಕ ಪಾಕ್‌ನ ಒಂದೊಂದೇ ಮುಖವಾಡಗಳು ಬಯಲಾಗುತ್ತಿವೆ. ಅಮೆರಿಕದ ಕೈಕಾಲು ಹಿಡಿದು ಭಾರತವನ್ನು ಒಪ್ಪಿಸಿ ಕದನ ವಿರಾಮ ಪಡೆದ ಪಾಕ್‌, ಅಮೆರಿಕ ವಿರುದ್ಧವೇ ಗುಟುರು ಹಾಕಿದೆ. ಪಾಕಿಸ್ತಾನ ಸಚಿವ ಖವಾಜಾ ಆಸಿಫ್ (Khwaja Asif), ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಉಗ್ರ ಸಂಘಟನೆಗಳ ಪೋಷಣೆಯಲ್ಲಿ ಅಮೆರಿಕದ ಪಾತ್ರವನ್ನು ಬಹಿರಂಗಗೊಳಿಸಿದ್ದಾರೆ.

    ಉಗ್ರರಿಗೆ ಹಣಕಾಸು ನೆರವು ಯಾರು ನೀಡುತ್ತಾರೆ? ಪಾಕ್‌ ಸರ್ಕಾರ ಉಗ್ರರನ್ನು (Terrorists) ಪೋಷಿಸುತ್ತಿದೆಯಾ? ಅನ್ನೋ ಪ್ರಶ್ನೆಗೆ ಉತ್ತರಿಸಿದ ಸಚಿವ, ಭಯೋತ್ಪಾದಕ ಸಂಘಟನೆಗಳಿಗೆ ತರಬೇತಿ ನೀಡುವ ಮತ್ತು ಹಣಕಾಸು ಒದಗಿಸುವ ಕೆಲಸವನ್ನು ಪಾಕಿಸ್ತಾನ ಮಾಡುತ್ತಿಲ್ಲ. ಕಳೆದ ಮೂರು ದಶಕಗಳಿಂದಲೂ ಅಮೆರಿಕಾಗೋಸ್ಕರ (USA) ಈ ಕೊಳಕು ಕೆಲಸವನ್ನು ಮಾಡುತ್ತಿದ್ದೇವೆ ಎಂದು ಬಾಂಬ್‌ ಸಿಡಿಸಿದ್ದಾರೆ. ಇದನ್ನೂ ಓದಿ: ಲಷ್ಕರ್ ಉಗ್ರನ ಅಂತ್ಯಕ್ರಿಯೆಯಲ್ಲಿ ಪಾಕ್ ಸೇನಾಧಿಕಾರಿಗಳು ಭಾಗಿ – ಭಾರತ ತೀವ್ರ ಆಕ್ಷೇಪ

    ಇನ್ನೂ‌ ಪಾಕ್‌ನಲ್ಲಿ ಉಗ್ರರು ಅಥವಾ ಉಗ್ರ ನಾಯಕರು ಇದ್ದಾರಾ ಅನ್ನೋ ಪ್ರಶ್ನೆಗೆ ಉತ್ತರಿಸಿ, ಪಾಕಿಸ್ತಾನವು ಸಕ್ರಿಯ ಭಯೋತ್ಪಾದಕರು ಅಥವಾ ಭಯೋತ್ಪಾದಕ ಸಂಘಟನೆಗಳಿಗೆ ಇನ್ಮುಂದೆ ಆಶ್ರಯ ನೀಡುವುದಿಲ್ಲ. ಉಗ್ರ ನಾಯಕರು ಬದುಕಿದ್ದಾರೆ, ಆದ್ರೆ ಇನ್ಮುಂದೆ ಅವರು ಪಾಕಿಸ್ತಾನದಲ್ಲಾಗಲಿ ಅಥವಾ ಭಾರತದ ಗಡಿಯಾಚೆ ಆಗಲಿ ಉಗ್ರ ಕೃತ್ಯಗಳನ್ನು ಎಸಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯುದ್ಧ ಭೀತಿ ನಡುವೆ ಮತ್ತೊಂದು ಶಾಕ್‌ – ಪಾಕಿಸ್ತಾನದ 51 ಸ್ಥಳಗಳ ಮೇಲೆ ಬಲೂಚ್‌ ಹೋರಾಟಗಾರರಿಂದ ದಾಳಿ

    ಕಳೆದ ಏಪ್ರಿಲ್‌ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದ ಮೂರ್ನಾಲ್ಕು ದಿನಗಳ ಬಳಿಕ ಪಾಕ್‌ ಸಚಿವ ಖವಾಜಾ ಆಸಿಫ್‌ ಅವರ ಸಂದರ್ಶನ ನಡೆಸಲಾಗಿತ್ತು. ಆದ್ರೆ ಈಗ ಈ ಕುರಿತ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಪಾಕ್‍ಗೆ ನಾವು ಹೇಗಾದ್ರೂ ಪ್ರತಿಕ್ರಿಯಿಸುತ್ತೇವೆ, ಇದನ್ನು ಟ್ರಂಪ್ ಅರ್ಥ ಮಾಡಿಕೊಳ್ಳಲಿ: ಮೋದಿ

  • ಪ್ರಾರ್ಥನೆ ಮಾಡುವಾಗ ಭಾರತದಲ್ಲೂ ಕೊಂದಿಲ್ಲ.. ಆದ್ರೆ ಪಾಕಿಸ್ತಾನದಲ್ಲಿ ಆಗಿದೆ: ಮಸೀದಿ ದಾಳಿ ಬಗ್ಗೆ ಪಾಕ್‌ ಸಚಿವ ಹೇಳಿಕೆ

    ಪ್ರಾರ್ಥನೆ ಮಾಡುವಾಗ ಭಾರತದಲ್ಲೂ ಕೊಂದಿಲ್ಲ.. ಆದ್ರೆ ಪಾಕಿಸ್ತಾನದಲ್ಲಿ ಆಗಿದೆ: ಮಸೀದಿ ದಾಳಿ ಬಗ್ಗೆ ಪಾಕ್‌ ಸಚಿವ ಹೇಳಿಕೆ

    ಇಸ್ಲಾಮಾಬಾದ್: ಪ್ರಾರ್ಥನೆ ಮಾಡುವ ವೇಳೆ ಭಾರತದಲ್ಲೂ (India) ಕೊಂದಿಲ್ಲ ಎಂದು ಪೇಶಾವರ್‌ನಲ್ಲಿ ಮಸೀದಿ (Peshawar Mosque) ಮೇಲೆ ನಡೆದ ಬಾಂಬ್‌ ದಾಳಿ ಬಗ್ಗೆ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ (Khwaja Asif) ಪ್ರತಿಕ್ರಿಯಿಸಿದ್ದಾರೆ.

    ಪ್ರಾರ್ಥನೆ ಮಾಡುವಾಗ ಭಾರತದಲ್ಲಾಗಲಿ ಅಥವಾ ಇಸ್ರೇಲ್‌ನಲ್ಲಾಗಿ (Israel) ಯಾರನ್ನೂ ಹತ್ಯೆ ಮಾಡಿಲ್ಲ. ಆದರೆ ಅದು ಪಾಕಿಸ್ತಾನದಲ್ಲಿ (Pakistan) ಸಂಭವಿಸಿದೆ ಎಂದು ಆಸಿಫ್‌ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಕ್‌ನಲ್ಲಿ ನಡೆದಿದ್ದು ಪ್ರತೀಕಾರದ ದಾಳಿ – ಸ್ಫೋಟದ ಸ್ಥಳದಲ್ಲಿ ಆತ್ಮಾಹುತಿ ಬಾಂಬರ್‌ನ ತುಂಡರಿಸಿದ ತಲೆ ಪತ್ತೆ

    2010-2017 ರ ಭಯೋತ್ಪಾದನಾ ಘಟನೆಗಳ ಕುರಿತು ಮಾತನಾಡಿದ ಸಚಿವರು, “ಈ ಯುದ್ಧವು ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿ ಅಧಿಕಾರಾವಧಿಯಲ್ಲಿ ಸ್ವಾತ್‌ನಿಂದ ಪ್ರಾರಂಭವಾಯಿತು. ಪಿಎಂಎಲ್-ಎನ್‌ನ ಹಿಂದಿನ ಅಧಿಕಾರಾವಧಿಯಲ್ಲಿ ಮುಕ್ತಾಯಗೊಂಡಿತು. ನಂತರ ಕರಾಚಿಯಿಂದ ಸ್ವಾತ್‌ವರೆಗೆ ದೇಶದಲ್ಲಿ ಶಾಂತಿ ಸ್ಥಾಪಿಸಲಾಯಿತು” ಎಂದು ನೆನೆಪಿಸಿಕೊಂಡಿದ್ದಾರೆ.

    ಆಫ್ಘನ್ನರು ಪಾಕಿಸ್ತಾನಕ್ಕೆ ಬಂದು ನೆಲೆಸಿದ ನಂತರ ಸಾವಿರಾರು ಜನರು ಉದ್ಯೋಗವಿಲ್ಲದೆ ಕಂಗಾಲಾಗಿದ್ದಾರೆ ಎಂದು ಡಾನ್ ವರದಿ ಹೇಳಿದೆ. ಪುನರ್ವಸತಿ ಸೌಲಭ್ಯದಲ್ಲಿರುವ ಜನರ ವಿರುದ್ಧ ಸ್ವಾತ್‌ನ ಜನರು ಪ್ರತಿಭಟನೆ ನಡೆಸಿದಾಗ ಈ ಸಮಸ್ಯೆಗೆ ಪುರಾವೆ ಸಿಕ್ಕಿತು ಎಂದು ಆಸಿಫ್ ತಿಳಿಸಿದ್ದಾರೆ. ಇದನ್ನೂ ಓದಿ: ಪೇಶಾವರ ಮಸೀದಿಯಲ್ಲಿ ಬಾಂಬ್ ಸ್ಫೋಟ – 89ಕ್ಕೇರಿದ ಸಾವಿನ ಸಂಖ್ಯೆ

    ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟಾಗಬೇಕು ಎಂದು ಇದೇ ವೇಳೆ ಸಚಿವರು ಕರೆ ನೀಡಿದ್ದಾರೆ. ಪೇಶಾವರ್‌ನ ಮಸೀದಿಯಲ್ಲಿ ನಡೆದ ಆತ್ಮಹತ್ಯಾ ದಾಳಿಯಲ್ಲಿ 100 ಜನರು ಸಾವನ್ನಪ್ಪಿದ್ದಾರೆ. ಅನೇಕ ಮಂದಿ ಗಾಯಗೊಂಡಿದ್ದಾರೆ.

    Live Tvpes
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರಧಾನಿ ನರೇಂದ್ರ ಮೋದಿ ಒಬ್ಬ ಉಗ್ರ: ಪಾಕ್ ವಿದೇಶಾಂಗ ಸಚಿವ

    ಪ್ರಧಾನಿ ನರೇಂದ್ರ ಮೋದಿ ಒಬ್ಬ ಉಗ್ರ: ಪಾಕ್ ವಿದೇಶಾಂಗ ಸಚಿವ

    ನವದೆಹಲಿ: ಭಾರತ ಹಾಗೂ ಪಾಕಿಸ್ತಾನದ ನಡುವೆ ಮಾತಿನ ಯುದ್ಧವು ಮುಂದುವರೆದಿದ್ದು, ಪಾಕ್ ವಿದೇಶಾಂಗ ಸಚಿವ ಖ್ವಾಜಾ ಆಸಿಫ್, ಪ್ರಧಾನಿ ಮೋದಿಯವರನ್ನು ಭಯೋತ್ಪಾದಕ ಎಂದು ಕರೆಯುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

    ವಿಶ್ವ ಸಂಸ್ಥೆ ಭದ್ರತಾ ಸಭೆಯ ಅಧಿವೇಶನದಲ್ಲಿ ಪಾಕಿಸ್ತಾನದ ನೈಜ ಚಿತ್ರವನ್ನು ತೆರೆದಿಟ್ಟ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನವು ಭಯೋತ್ಪಾದಕರನ್ನು ಉತ್ಪಾದಿಸುವ ಕಾರ್ಖಾನೆ ಎಂದು ಟೀಕಿದ್ದರು.

    ಭಾರತದ ಟೀಕೆಗಳಿಗೆ ಉತ್ತರಿಸುವ ಬರದಲ್ಲಿ ಪಾಕ್ ಸಚಿವ ಆಸಿಫ್ ಪ್ರಧಾನಿ ಮೋದಿಯವರನ್ನು ಭಯೋತ್ಪಾದಕ ಎಂದು ಹೇಳಿ ಉದ್ದಟತನವನ್ನು ಮೆರೆದಿದ್ದಾರೆ. ಗುಜರಾತ್ ನಲ್ಲಿ ನಡೆದ ಮುಸ್ಲಿಮರ ಹತ್ಯೆಯ ರಕ್ತದ ಕಲೆಗಳು ಮೋದಿಯವರ ಕೈ ಮೆತ್ತಿಕೊಂಡಿವೆ. ಭಾರತವನ್ನು ಆರ್‍ಎಸ್‍ಎಸ್ ಎಂಬ ಭಯೋತ್ಪಾದಕ ಪಕ್ಷವು ಮುನ್ನಡೆಸುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ.

    ಕಳೆದ ಕೆಲವು ದಿನಗಳ ಹಿಂದೆ ವಿಶ್ವಸಂಸ್ಥೆಯ ಭದ್ರತಾ ಸಭೆಯಲ್ಲಿ ಮಾತನಾಡಿದ್ದ ಆಸಿಫ್ ಪಾಕಿಸ್ತಾನಕ್ಕೆ ಸಯೀದ್, ಎಲ್‍ಇಟಿ ಸಂಘಟನೆಗಳು ಹೆಚ್ಚಿನ ಹೊರೆಯಾಗಿದೆ ಎಂದು ತಿಳಿಸಿದ್ದರು. ಅಲ್ಲದೇ ಸಯೀದ್ ಹಾಗೂ ಎಲ್‍ಇಟಿ ಸಂಘಟನೆಗಳು ಜನಿಸಲು ಮೂಲ ಕಾರಣವೇ ಅಮೆರಿಕ. 20-30 ಹಿಂದೆ ಅಮೆರಿಕಗೆ ಎಲ್‍ಇಟಿ ಮತ್ತು ಸಯೀದ್ ಬಹಳ ಪ್ರಿಯರಾಗಿದ್ದರು. ಶ್ವೇತ ಭವನದಲ್ಲಿ ಒಟ್ಟಿಗೆ ಕೂತು ವೈನ್ ಕುಡಿಯುತ್ತಿದ್ದರು ಈಗ ನಮ್ಮ ಮೇಲೆ ನಿಂದನೆ ಮಾಡುತ್ತಿದೆ ಎಂದು ಅಮೆರಿಕ ವಿರುದ್ಧ ಕಿಡಿಕಾರಿದ್ದರು. ಅಲ್ಲದೇ ಪಾಕಿಸ್ತಾನಕ್ಕೆ ಭಯೋತ್ಪಾದಕರ ವಿರುದ್ಧ ಕ್ರಮಕೈಗೊಳ್ಳಲು ಕಾಲಾವಕಾಶವನ್ನು ಕೇಳಿದ್ದರು.

    ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಲ ದಿನಗಳ ಹಿಂದೆ ಪಾಕಿಸ್ತಾನ ತಮ್ಮಿಂದ ಪಡೆದ ಸಹಾಯಧನವನ್ನು ಉಗ್ರರಿಗೆ ಸಹಾಯ ಮಾಡಲು ಬಳಸಿಕೊಳ್ಳುತ್ತಿದೆ ಎಂದು ಆರೋಪ ಮಾಡಿದ್ದರು. ಅಲ್ಲದೇ ಪಾಕಿಸ್ತಾನವು ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ಭಾರತ ಸಾಕ್ಷಿ ಸಮೇತ ವಿಶ್ವಮಟ್ಟದಲ್ಲಿ ಸಾಬಿತುಪಡಿಸಿತ್ತು. ಜಪಾನ್ ಸಹ ಪಾಕಿಸ್ತಾನದ ಲಷ್ಕರ್ ಎ ತೊಯ್ಬಾ (ಎಲ್‍ಇಟಿ) ಮತ್ತು ಜೈಶ್ ಎ ಮೊಹಮ್ಮದ್(ಜೆಇಎಂ) ಸಂಸ್ಥೆಗಳನ್ನು ಭಯೋತ್ಪಾದನಾ ಸಂಘಟನೆಗಳು ಎಂದು ಘೋಷಣೆಯನ್ನು ಮಾಡಿತ್ತು. ಬ್ರೀಕ್ ಸಮಾವೇಶದಲ್ಲಿಯೂ ಸಹ ಭಾರತ ಈ ಸಂಸ್ಥೆಗಳ ನಿಷೇಧಕ್ಕೆ ಆಗ್ರಹಿಸಿತ್ತು.

    ನೆರೆಯ ರಾಷ್ಟ್ರ ಅಪ್ಘಾನಿಸ್ತಾನವು ಸಹ ತನ್ನ ನೆಲದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಗಡಿಯಲ್ಲಿ ಪಾಕಿಸ್ತಾನ ಎಲ್ಲಾ ಸೌಲಭ್ಯಗಳನ್ನು ಉಗ್ರರಿಗೆ ನೀಡುತ್ತಿದೆ ಎಂದು ಆರೋಪಿಸಿತ್ತು.

    https://publictv.in/how-india-bashed-pakistan-at-un-eenam-gambhirs-reply-to-islamabad/