Tag: Khushbu

  • `ಕೈ’ ಸ್ಟಾರ್ ಪ್ರಚಾರಕಿ ನಟಿ ಖುಷ್ಬೂ `ಕಮಲ’ದ ಕಿವಿಯೋಲೆ ಫುಲ್ ವೈರಲ್!

    `ಕೈ’ ಸ್ಟಾರ್ ಪ್ರಚಾರಕಿ ನಟಿ ಖುಷ್ಬೂ `ಕಮಲ’ದ ಕಿವಿಯೋಲೆ ಫುಲ್ ವೈರಲ್!

    ಬೆಂಗಳೂರು: ಕೈ ಸ್ಟಾರ್ ಪ್ರಚಾರಕಿ, ಬಹುಭಾಷಾ ನಟಿ, ಕಾಂಗ್ರೆಸ್ ವಕ್ತಾರೆ ನಟಿ ಖುಷ್ಬೂ ಅವರ ಕಿವಿಯೋಲೆ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಶನಿವಾರ ನಡೆದ ಕೆಪಿಸಿಸಿ ಸಭೆಗೆ ಖುಷ್ಬೂ ಕಮಲದ ಹೂವಿನ ಕಿವಿಯೋಲೆ ಧರಿಸಿದ್ದು, ಸದ್ಯ ಈಗ ಸಾಕಷ್ಟು ವೈರಲ್ ಆಗಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜನರಲ್ಲಿ ಭಾರೀ ಕುತೂಹಲ ಉಂಟಾಗಿದೆ.

    ಇದಕ್ಕೂ ಮೊದಲು ಬಿಜೆಪಿ ಖುಷ್ಬೂ ಅವರ ಮೂಲ ಹೆಸರನ್ನಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ದಾಳಿ ಆರಂಭಿಸಿತ್ತು. ಖುಷ್ಬೂ ತಮ್ಮ ಗುರುತನ್ನು ಮರೆಮಾಚುತ್ತಿದ್ದು, ತಮ್ಮ ಧರ್ಮವನ್ನು ಕೀಳಾಗಿ ನೋಡುತ್ತಿದ್ದಾರೆ. ಅಷ್ಟೇ ಅಲ್ಲದೇ ಹೆಸರನ್ನು ಮುಚ್ಚಿಡುತ್ತಿದ್ದಾರೆ ಎಂದು ಬಿಜೆಪಿ ಫಾಲೋವರ್ಸ್ ಗಳು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡತೊಡಗಿದರು.

    ಈ ಟೀಕೆಯ ಬಳಿಕ ಖುಷ್ಬೂ ಅವರು ಟ್ವೀಟರ್ ಖಾತೆಯಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಖುಷ್ಬೂ ಸುಂದರ್ ಜೊತೆಗೆ ಬಿಜೆಪಿಗಾಗಿ ನಖಟ್ ಖಾನ್ ಎಂದು ಬರೆದುಕೊಂಡಿದ್ದಾರೆ.

    ಬಿಜೆಪಿಯ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಸಮಸ್ಯೆಗಳನ್ನು ಪರಿಹರಿಸಬೇಕಾದವರು ಬೇರೆಯವರ ವೈಯಕ್ತಿಕ ಜೀವನದಲ್ಲಿ ಚಿಲ್ಲರೆ ರಾಜಕೀಯ ಮಾಡುತ್ತಿದ್ದಾರೆ. ನನ್ನ ಪೋಷಕರು ನಖಟ್ ಎಂದು ಹೆಸರನ್ನು ಇಟ್ಟಿದ್ದರು. ಬಿಜೆಪಿಯವರಿಗೆ ಬುದ್ಧಿ ಕಲಿಸಲು ನಾನು ಹೆಸರು ಬದಲಾಯಿಸಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.

  • ಬಹುಭಾಷಾ ನಟಿ ಖುಷ್ಬೂ ಆಸ್ಪತ್ರೆಗೆ ದಾಖಲು

    ಬಹುಭಾಷಾ ನಟಿ ಖುಷ್ಬೂ ಆಸ್ಪತ್ರೆಗೆ ದಾಖಲು

    ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ, ಕಾಂಗ್ರೆಸ್ ವಕ್ತಾರೆ ಖುಷ್ಬೂ ಆರೋಗ್ಯದಲ್ಲಿ ಏರುಪೇರು ಆಗಿದ್ದು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ನಟಿ ಖುಷ್ಬೂ ಅವರ ಹೊಟ್ಟೆಯಲ್ಲಿ ಗಂಟು ಕಾಣಿಸಿಕೊಂಡಿದ್ದರಿಂದ ಶಸ್ತ್ರಚಿಕಿತ್ಸೆಗೆಂದು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಖುಷ್ಬೂ ಆರೋಗ್ಯದಲ್ಲಿ ಈಗ ಚೇತರಿಕೆ ಕಂಡುಬಂದಿದ್ದು, ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ.

    ಶಸ್ತ್ರಚಿಕಿತ್ಸೆ ಬಗ್ಗೆ ಖುಷ್ಬೂ ತಮ್ಮ ಟ್ವಿಟ್ಟರ್ ನಲ್ಲಿ “ಸ್ನೇಹಿತರೇ, ಈಗ ನಾನು ನಿಮಗೆ ಸಾಕಷ್ಟು ವಿಷಯ ಹೇಳುವುದಿದೆ. ನಾನು ಆಸ್ಪತ್ರೆಯಲ್ಲಿ ದಾಖಲಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ವೈದ್ಯರು ನನಗೆ ಎರಡೂ ವಾರಗಳ ಕಾಲ ವಿಶ್ರಾಂತಿ ಪಡೆಯಲು ತಿಳಿಸಿದ್ದಾರೆ. ನಿಮ್ಮ ಈ ಕಾಳಜಿಗಾಗಿ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ.

    ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ನಟಿ ಖುಷ್ಬೂಗೆ ಕೆಲವು ವಾರಗಳ ಕಾಲ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ.