Tag: Khomeini Tomb

  • ಇರಾನ್ ಸಂಸತ್ ಭವನದ ಮೇಲೆ ಉಗ್ರರ ದಾಳಿ

    ಇರಾನ್ ಸಂಸತ್ ಭವನದ ಮೇಲೆ ಉಗ್ರರ ದಾಳಿ

    ಟೆಹ್ರಾನ್: ಇರಾನ್ ರಾಜಧಾನಿ ಟೆಹ್ರಾನ್ ನಲ್ಲಿರುವ ಸಂಸತ್ ಭವನ ಮತ್ತು ಖೊಮೇನಿ ಗೋರಿಯ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ.

    ಸಂಸತ್ ಭವನದ ಒಳಗಡೆ ಈ ದಾಳಿ ನಡೆದಿದ್ದು, ಸ್ಥಳಿಯ ಮಾಧ್ಯಮಗಳು ಮೂವರು ಉಗ್ರರು ಈ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ವರದಿ ಮಾಡಿದೆ.

    ಸಂಸತ್ ಭವನದಲ್ಲಿ ನಡೆದ ದಾಳಿಯಲ್ಲಿ ಮೂವರು ನಾಗರಿಕರು ಮತ್ತು ಓರ್ವ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ. ಸಂಸತ್ ಭವನದಲ್ಲಿ ಉಗ್ರರು ಅವಿತುಕೊಂಡಿದ್ದಾರೆ. ಈಗ ಸೇನೆಯ ವಿಶೇಷ ತುಕಡಿ ಸ್ಥಳಕ್ಕೆ ಆಗಮಿಸಿದ್ದು, ಗುಂಡಿನ ಚಕಮಕಿ ಮುಂದುವರಿದಿದೆ.

    ಖೊಮೇನಿ ಸಮಾಧಿ ಸ್ಥಳದ ಬಳಿ ನಡೆದ ಉಗ್ರರ ದಾಳಿಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ.