Tag: Kho Kho World Cup

  • ಖೋ ಖೋ ವಿಶ್ವಕಪ್ ವಿಜೇತರಿಗೆ ಸಿಎಂ ಸನ್ಮಾನ – ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ಬಹುಮಾನ

    ಖೋ ಖೋ ವಿಶ್ವಕಪ್ ವಿಜೇತರಿಗೆ ಸಿಎಂ ಸನ್ಮಾನ – ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ಬಹುಮಾನ

    ಬೆಂಗಳೂರು: 2025ರ ಪುರುಷರ ಹಾಗೂ ಮಹಿಳಾ ಖೋ ಖೋ ವಿಶ್ವಕಪ್‌ನಲ್ಲಿ (Kho Kho World Cup) ಅತ್ಯುತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಗೆದ್ದ ಭಾರತ ತಂಡಕ್ಕೆ ರಾಜ್ಯ ಸರ್ಕಾರ ಅಭಿನಂದನೆ ಸಲ್ಲಿಸಿದೆ.

    ಇದೇ ವೇಳೆ ಎರಡೂ ವಿಭಾಗದಲ್ಲಿ ಭಾರತ ವಿಶ್ವ ಚಾಂಪಿಯನ್ ಆಗಲು ಕಾರಣರಾದ ಮಂಡ್ಯ ಜಿಲ್ಲೆಯ ಡಿ.ಮಲ್ಲಿಗೆರೆ ಗ್ರಾಮದ ಎಂ.ಕೆ ಗೌತಮ್ ಹಾಗೂ ಮೈಸೂರಿನ ತಿ.ನರಸೀಪುರದ ಕುರುಬೂರಿನ ಚೈತ್ರಾ (Chaitra) ಅವರನ್ನು ಸರ್ಕಾರ ಗೌರವಿಸಿತು. ಇದನ್ನೂ ಓದಿ: Kho Kho World Cup | ಭಾರತಕ್ಕೆ ಡಬಲ್‌ ಧಮಾಕ – ಮಹಿಳೆಯರು, ಪುರುಷರ ತಂಡಕ್ಕೆ ಖೋ ಖೋ ವಿಶ್ವಕಪ್‌ ಕಿರೀಟ

    ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ವಿಧಾನಸೌಧದ ತಮ್ಮ ಕಚೇರಿಯಲ್ಲಿಂದು ಕ್ರೀಡಾಪಟುಗಳಿಗೆ ಸನ್ಮಾನಿಸಿ ಗೌರವಿಸಿದರು. ಇಬ್ಬರೂ ಕ್ರೀಡಾಪಟುಗಳಿಗೆ ತಲಾ 5 ಲಕ್ಷ ರೂ. ಬಹುಮಾನ ಸಹ ಘೋಷಿಸಿದರು. ಇದನ್ನೂ ಓದಿ: ಖೋ ಖೋ ವಿಶ್ವಕಪ್; ಎಂಕೆ ಗೌತಮ್, ಚೈತ್ರಾರನ್ನು ಗೌರವಿಸಿದ ಹೆಚ್‌ಡಿಕೆ

    ಈ ಸಂದರ್ಭದಲ್ಲಿ ಸಚಿವ ಚಲುವರಾಯಸ್ವಾಮಿ (Chaluvaraya Swamy) ಮತ್ತು ಒಲಿಂಪಿಕ್ಸ್‌ ಅಸೋಸಿಯೇಷನ್ ಅಧ್ಯಕ್ಷರೂ ಆದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಉಪಸ್ಥಿತರಿದ್ದರು. ಇದನ್ನೂ ಓದಿ: IPL 2025 | ಲಕ್ನೋ ಸೂಪರ್‌ ಜೈಂಟ್ಸ್‌ಗೆ ರಿಷಬ್‌ ನೂತನ ಸಾರಥಿ

  • ಖೋ ಖೋ ವಿಶ್ವಕಪ್; ಎಂಕೆ ಗೌತಮ್, ಚೈತ್ರಾರನ್ನು ಗೌರವಿಸಿದ ಹೆಚ್‌ಡಿಕೆ

    ಖೋ ಖೋ ವಿಶ್ವಕಪ್; ಎಂಕೆ ಗೌತಮ್, ಚೈತ್ರಾರನ್ನು ಗೌರವಿಸಿದ ಹೆಚ್‌ಡಿಕೆ

    ನವದೆಹಲಿ: 2025ರ ಪುರುಷರ ಹಾಗೂ ಮಹಿಳಾ ಖೋ ಖೋ ವಿಶ್ವಕಪ್‌ನಲ್ಲಿ (Kho Kho World Cup) ಅತ್ಯುತ್ತಮ ಆಟವಾಡಿ ಭಾರತ ತಂಡವು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಪ್ರಮುಖ ಪಾತ್ರ ವಹಿಸಿದ ಕರ್ನಾಟಕದ ಎಂಕೆ ಗೌತಮ್ (MK Gowtham) ಹಾಗೂ ಚೈತ್ರಾ (Chaitra) ಅವರನ್ನು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಸನ್ಮಾನಿಸಿ ಗೌರವಿಸಿದರು.

    ನವದೆಹಲಿಯ ಬೃಹತ್ ಕೈಗಾರಿಕೆ ಸಚಿವಾಲಯಕ್ಕೆ ಆಟಗಾರರಾದ ಎಂ.ಕೆ.ಗೌತಮ್ ಹಾಗೂ ಚೈತ್ರಾ, ಮತ್ತವರ ಕೋಚ್‌ಗಳಾದ ಸುಮಿತ್ ಭಾಟಿಯಾ ಹಾಗೂ ತಂಡದ ಮ್ಯಾನೇಜರ್ ರಾಜಕುಮಾರಿ ಅವರನ್ನು ಬರಮಾಡಿಕೊಂಡ ಸಚಿವರು, ಎಲ್ಲರನ್ನೂ ಗೌರವಪೂರ್ವಕವಾಗಿ ಸನ್ಮಾನಿಸಿದರು. ಇದನ್ನೂ ಓದಿ: ಈಗಿನದು ಮಹಾತ್ಮ ಗಾಂಧಿ ಕಾಲದ ಕಾಂಗ್ರೆಸ್ ಅಲ್ಲ, ಪಕ್ಷದ ಸಮಾವೇಶಕ್ಕೆ ಹಣ ಎಲ್ಲಿಂದ?: ಛಲವಾದಿ ನಾರಾಯಣಸ್ವಾಮಿ

    ಗೌತಮ್, ಚೈತ್ರಾ ಇಬ್ಬರಿಗೂ ಶುಭ ಕೋರಿದ ಸಚಿವರು, ಭಾರತದ ಪುರುಷರು ಮತ್ತು ಮಹಿಳೆಯರ ಖೋ ಖೋ ವಿಶ್ವಕಪ್ ತಂಡದಲ್ಲಿ ಅಮೋಘ ಆಟವನ್ನಾಡಿ ಭಾರತವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ನಿಮ್ಮಿಬ್ಬರಿಗೂ ನನ್ನ ಅಭಿನಂದನೆಗಳು. ಕರ್ನಾಟಕದ ಗರಿಮೆಯನ್ನು ನೀವು ಹೆಚ್ಚಿಸಿದ್ದೀರಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರದ ಸಾಧನೆಗಳನ್ನು ಮಾಡಿ ಎಂದು ಶುಭಹಾರೈಸಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಗೃಹ ಇಲಾಖೆ ಸತ್ತು ಹೋಗಿದೆ: ಶರವಣ ವ್ಯಂಗ್ಯ

    ದೇಶೀಯ ಕ್ರೀಡೆ ಖೋ ಖೋದಲ್ಲಿ ಭಾರತ ವಿಶ್ವ ಚಾಂಪಿಯನ್ ಆಗಿರುವುದಕ್ಕೆ ನಿಮ್ಮ ಜೊತೆ ತಂಡಸ್ಫೂರ್ತಿಯಿಂದ ಆಟವಾಡಿದ ಇತರೆ ಎಲ್ಲಾ ಆಟಗಾರರಿಗೂ, ನಿಮ್ಮ ತರಬೇತುದಾರರಿಗೆ ಕೂಡ ನನ್ನ ಅಭಿನಂದನೆಗಳು ಎಂದು ಹೇಳಿದರು. ಇದನ್ನೂ ಓದಿ: 10 ವರ್ಷದ ಮಗನ ಮೇಲೆ 5 ನಿಮಿಷ ಕುಳಿತು ಹತ್ಯೆ ಮಾಡಿದ 154 ಕೆಜಿ ತೂಕದ ತಾಯಿ

    ಕನ್ನಡ ನೆಲದ ಗ್ರಾಮೀಣ ಮಕ್ಕಳಿಬ್ಬರೂ ಇಂದು ಭಾರತಾಂಬೆಯ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ್ದಾರೆ. ಮಾತ್ರವಲ್ಲದೆ, ಕನ್ನಡಮ್ಮನ ಕೀರ್ತಿ ಕಿರೀಟಕ್ಕೆ ಮತ್ತಷ್ಟು ಗರಿಗಳನ್ನು ಪೇರಿಸಿ ನಮ್ಮ ಸಂತಸವನ್ನು ಇಮ್ಮಡಿಗೊಳಿಸಿದ್ದಾರೆ. ಇಬ್ಬರಿಗೂ ಶುಭವಾಗಲಿ, ಭವಿಷ್ಯದಲ್ಲಿ ಇಂತಹ ಅನೇಕ ಉನ್ನತ ಸಾಧನೆಗಳನ್ನು ಮಾಡಲಿ ಎಂದು ಹಾರೈಸುತ್ತೇನೆ ಹಾಗೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮಕ್ಕಳಿಗೆ ಇವರ ಸಾಧನೆ ಸದಾ ಪ್ರೇರಣೆಯಾಗಲಿ ಎಂದು ಆಶಿಸುತ್ತೇನೆ ಎಂದರು. ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಹೋಗಲ್ಲ: ರವಿಕುಮಾರ್

    ಎಂಕೆ ಗೌತಮ್ ಅವರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಡಿ.ಮಲ್ಲೀಗೆರೆ ಗ್ರಾಮದವರು ಹಾಗೂ ಚೈತ್ರಾ ಅವರು ಚಾಮರಾಜನಗರ ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕುರುಬೂರು ಗ್ರಾಮದವರು. ಗ್ರಾಮೀಣ ಮಕ್ಕಳು ಹೆಚ್ಚು ಪ್ರಮಾಣದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಬರಬೇಕು. ನಮ್ಮಿಂದ ಸಾಧ್ಯ ಆಗುವಷ್ಟು ಪ್ರೋತ್ಸಾಹ ನೀಡುತ್ತೇವೆ. ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕ್ರೀಡೆಗೆ ಬಹಳಷ್ಟು ಬೆಂಬಲ, ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ – ಸಿಎಂ, ಡಿಸಿಎಂ ರಾಜೀನಾಮೆ ಕೊಡ್ಬೇಕು: ರವಿಕುಮಾರ್

    ಈ ಸಂದರ್ಭದಲ್ಲಿ ಮಾತನಾಡಿದ ಗೌತಮ್, ಚೈತ್ರಾ ಇಬ್ಬರೂ; ಕರ್ನಾಟಕದವರೇ ಆಗಿರುವ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಕಚೇರಿಗೆ ಬರಮಾಡಿಕೊಂಡು ನಮ್ಮಿಬ್ಬರನ್ನು ಗೌರವಿಸಿದ್ದು ಬಹಳ ಸಂತೋಷ ಉಂಟು ಮಾಡಿದೆ. ನಮ್ಮ ಬದುಕಿನಲ್ಲಿ ಇದು ಅವಿಸ್ಮರಣೀಯ ಘಟನೆ ಆಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: Kolar | ಅರಣ್ಯ ಇಲಾಖೆ ಗೋಡೌನ್ ಬೀಗ ಒಡೆದು ಕಳ್ಳತನಕ್ಕೆ ಯತ್ನ – ಇಬ್ಬರು ಅರೆಸ್ಟ್

  • Kho Kho World Cup | ಭಾರತಕ್ಕೆ ಡಬಲ್‌ ಧಮಾಕ – ಮಹಿಳೆಯರು, ಪುರುಷರ ತಂಡಕ್ಕೆ ಖೋ ಖೋ ವಿಶ್ವಕಪ್‌ ಕಿರೀಟ

    Kho Kho World Cup | ಭಾರತಕ್ಕೆ ಡಬಲ್‌ ಧಮಾಕ – ಮಹಿಳೆಯರು, ಪುರುಷರ ತಂಡಕ್ಕೆ ಖೋ ಖೋ ವಿಶ್ವಕಪ್‌ ಕಿರೀಟ

    ನವದೆಹಲಿ: ಭಾರತದ ಮಹಿಳೆಯರ ತಂಡವು ಖೋ ಖೋ ವಿಶ್ವಕಪ್‌ನ ಫೈನಲ್‌ನಲ್ಲಿ ಅದ್ಭುತ ಗೆಲುವು ಸಾಧಿಸಿದೆ. ಅದರ ಬೆನ್ನಲ್ಲೇ ಪುರುಷರ ತಂಡವೂ ಸಾಂಘಿಕ ಆಟ ಪ್ರದರ್ಶಿಸಿ ದೇಸಿ ಕ್ರೀಡೆಯ ಚೊಚ್ಚಲ ವಿಶ್ವಕಿರೀಟ ಮುಡಿಗೇರಿಸಿಕೊಂಡಿದೆ.

    ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ತವರಿನ ಪ್ರೇಕ್ಷಕರ ಮುಂದೆ ಪ್ರಿಯಾಂಕಾ ಇಂಗೈ ಮತ್ತು ಪ್ರತೀಕ್ ವೈಕರ್‌ ಬಳಗವು ಗೆದ್ದು ಬೀಗಿತು.

    ಎರಡೂ ವಿಭಾಗಗಳಲ್ಲೂ ನೇಪಾಳ ತಂಡವು ರನ್ನರ್‌ಅಪ್‌ ಪ್ರಶಸ್ತಿಗೆ ಪಾತ್ರವಾಯಿತು. ಆತಿಥೇಯ ತಂಡಗಳು ಜಯ ಸಾಧಿಸುತ್ತಿದ್ದಂತೆ ಕಿಕ್ಕಿರಿದು ಸೇರಿದ್ದ ಕ್ರೀಡಾಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿ, ರಾಷ್ಟ್ರಧ್ವಜದೊಂದಿಗೆ ಕುಣಿದು ಕುಪ್ಪಳಿಸಿದರು.

    19 ತಂಡಗಳಿದ್ದ ಮಹಿಳೆಯರ ವಿಭಾಗದಲ್ಲಿ ಭಾರತ ಮತ್ತು ನೇಪಾಳವು ಅಜೇಯವಾಗಿ ಫೈನಲ್ ಪ್ರವೇಶಿಸಿದ್ದವು. ಹೀಗಾಗಿ, ಅವುಗಳ ಸೆಣಸಾಟ ಭಾರೀ ಕುತೂಹಲ ಮೂಡಿಸಿತ್ತಾದರೂ, ಅಂತಿಮವಾಗಿ 78-40ರಿಂದ ಆತಿಥೇಯ ಬಳಗವು ಪಾರಮ್ಯ ಮೆರೆಯಿತು.