Tag: Kho kho

  • Kho Kho World Cup | ಭಾರತಕ್ಕೆ ಡಬಲ್‌ ಧಮಾಕ – ಮಹಿಳೆಯರು, ಪುರುಷರ ತಂಡಕ್ಕೆ ಖೋ ಖೋ ವಿಶ್ವಕಪ್‌ ಕಿರೀಟ

    Kho Kho World Cup | ಭಾರತಕ್ಕೆ ಡಬಲ್‌ ಧಮಾಕ – ಮಹಿಳೆಯರು, ಪುರುಷರ ತಂಡಕ್ಕೆ ಖೋ ಖೋ ವಿಶ್ವಕಪ್‌ ಕಿರೀಟ

    ನವದೆಹಲಿ: ಭಾರತದ ಮಹಿಳೆಯರ ತಂಡವು ಖೋ ಖೋ ವಿಶ್ವಕಪ್‌ನ ಫೈನಲ್‌ನಲ್ಲಿ ಅದ್ಭುತ ಗೆಲುವು ಸಾಧಿಸಿದೆ. ಅದರ ಬೆನ್ನಲ್ಲೇ ಪುರುಷರ ತಂಡವೂ ಸಾಂಘಿಕ ಆಟ ಪ್ರದರ್ಶಿಸಿ ದೇಸಿ ಕ್ರೀಡೆಯ ಚೊಚ್ಚಲ ವಿಶ್ವಕಿರೀಟ ಮುಡಿಗೇರಿಸಿಕೊಂಡಿದೆ.

    ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ತವರಿನ ಪ್ರೇಕ್ಷಕರ ಮುಂದೆ ಪ್ರಿಯಾಂಕಾ ಇಂಗೈ ಮತ್ತು ಪ್ರತೀಕ್ ವೈಕರ್‌ ಬಳಗವು ಗೆದ್ದು ಬೀಗಿತು.

    ಎರಡೂ ವಿಭಾಗಗಳಲ್ಲೂ ನೇಪಾಳ ತಂಡವು ರನ್ನರ್‌ಅಪ್‌ ಪ್ರಶಸ್ತಿಗೆ ಪಾತ್ರವಾಯಿತು. ಆತಿಥೇಯ ತಂಡಗಳು ಜಯ ಸಾಧಿಸುತ್ತಿದ್ದಂತೆ ಕಿಕ್ಕಿರಿದು ಸೇರಿದ್ದ ಕ್ರೀಡಾಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿ, ರಾಷ್ಟ್ರಧ್ವಜದೊಂದಿಗೆ ಕುಣಿದು ಕುಪ್ಪಳಿಸಿದರು.

    19 ತಂಡಗಳಿದ್ದ ಮಹಿಳೆಯರ ವಿಭಾಗದಲ್ಲಿ ಭಾರತ ಮತ್ತು ನೇಪಾಳವು ಅಜೇಯವಾಗಿ ಫೈನಲ್ ಪ್ರವೇಶಿಸಿದ್ದವು. ಹೀಗಾಗಿ, ಅವುಗಳ ಸೆಣಸಾಟ ಭಾರೀ ಕುತೂಹಲ ಮೂಡಿಸಿತ್ತಾದರೂ, ಅಂತಿಮವಾಗಿ 78-40ರಿಂದ ಆತಿಥೇಯ ಬಳಗವು ಪಾರಮ್ಯ ಮೆರೆಯಿತು.

  • ಖೋ ಖೋ ಪಂದ್ಯಾಟಕ್ಕೆ ಕಿರಿಕ್‌ – ಶಾಲಾ ಆವರಣದಲ್ಲಿ ಡ್ರ್ಯಾಗರ್‌, ಚಾಕು ಹಿಡಿದ ಪುಂಡರು

    ಖೋ ಖೋ ಪಂದ್ಯಾಟಕ್ಕೆ ಕಿರಿಕ್‌ – ಶಾಲಾ ಆವರಣದಲ್ಲಿ ಡ್ರ್ಯಾಗರ್‌, ಚಾಕು ಹಿಡಿದ ಪುಂಡರು

    ಬೆಂಗಳೂರು: ಶಾಲೆಯಲ್ಲಿ (School) ನಡೆಯುತ್ತಿದ್ದ ಖೋ ಖೋ ಪಂದ್ಯಾಟದ (Kho Kho Tournament) ವೇಳೆ ಪುಡಿ ಪುಂಡರು ನಶೆ ಏರಿಸಿಕೊಂಡು ಕೈಯಲ್ಲಿ ಡ್ರ್ಯಾಗರ್‌ ಹಿಡಿದು ಅಟ್ಟಹಾಸ ಮೆರೆದ ಘಟನೆ ಕೊತ್ತನೂರು ಬಳಿ ನಡೆದಿದೆ.

    ಮಂಗಳವಾರ ಸೊಣ್ಣಪ್ಪನಹಳ್ಳಿ ಶಿವಾಲಯ ಸರ್ಕಾರಿ ಪ್ರೌಢಶಾಲೆಯಲ್ಲಿ ಅಂತರ್‌ ಶಾಲಾ ಖೋ ಖೋ ಪಂದ್ಯಾಟ ಆಯೋಜನೆಗೊಂಡಿತ್ತು. ಈ ವೇಳೆ ತೀರ್ಪುಗಾರ ತಪ್ಪು ತೀರ್ಪು ನೀಡಿದ್ದಾರೆ ಎಂದು ಆರೋಪಿಸಿ ಸೊಣ್ಣಪ್ಪನಹಳ್ಳಿ ಹುಡುಗರು ಕಿರಿಕ್‌ ಮಾಡಿದ್ದಾರೆ. ಈ ವೇಳೆ ಪವನ್ , ಸುದೀಪ್ ಹಾಗೂ ಇತರರು ಏಕಾಏಕಿ ತೀರ್ಪುಗಾರರ ಮೇಲೆ ಮುಗಿಬಿದ್ದಿದ್ದಾರೆ. ಪಂದ್ಯದ ವೇಳೆ ಇವೆಲ್ಲ ಮಾಮೂಲಿ ಎಂದುಕೊಂಡು ಆಯೋಜಕರು ಸುಮ್ಮನಾಗಿದ್ದರು. ಇದನ್ನೂ ಓದಿ: ಜೈಲಿನಲ್ಲಿ ದರ್ಶನ್ ಸರ್ ನರಕ ಅನುಭವಿಸ್ತಿದ್ದಾರೆ: ಜೈಲಿನಲ್ಲಿದ್ಧ ಖೈದಿ ಸಿದ್ಧಾರೂಢ

    ಗಲಾಟೆ ಜಾಸ್ತಿ ಆಗುತ್ತಿದ್ದಂತೆ ಚಾಕು‌, ಡ್ರ್ಯಾಗರ್‌, ವಿಕೆಟ್‌ಗಳು ಹೊರಬಂದವು. ಶಾಲಾ ಮಕ್ಕಳ ಮುಂದೆಯೇ ಆಯುಧ ಪ್ರದರ್ಶಿಸಿ ಮಕ್ಕಳನ್ನೂ ಭಯಭೀತಗೊಳಿಸಿದರು. ಈ ವೇಳೆ ಪಂದ್ಯ ನೋಡಲು ಬಂದಿದ್ದ ಶಬ್ಬೀರ್ ಪುಂಡರ ಬಳಿ ಗಲಾಟೆ ಮಾಡದಂತೆ ಮನವಿ ಮಾಡಿದ್ದ. ಗಾಂಜಾ ಅಮಲಿನಲ್ಲಿದ್ದ ಯುವಕರು ಶಬ್ಬೀರ್ ತಲೆಗೆ ಚಾಕವಿನಿಂದ ಗುದ್ದಿ, ಹಲ್ಲೆ ನಡೆಸಿ ಮೊಬೈಲ್‌ ಪುಡಿ ಮಾಡಿದ್ದಾರೆ.

    ಆರೋಪಿಗಳ ಬಂಧನ ಬಳಿಕ ಈ ಹಿಂದೆ ಇವರ ಮೇಲೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎನ್ನುವುದು ತಿಳಿದುಬಂದಿದೆ. ಸದ್ಯ ಆರೋಪಿಗಳ ಮೇಲೆ ಆರ್ಮ್ಸ್ ಆಕ್ಟ್ ಅಡಿ ಪ್ರಕರಣ ದಾಖಲಾಗಿದೆ.

     

  • ಕ್ರೀಡಾ ವಿದ್ಯಾರ್ಥಿನಿಯರಿಗೆ ಸಹಾಯ ಮಾಡೋ ನೆಪದಲ್ಲಿ ಲೈಂಗಿಕ ಸುಖಕ್ಕಾಗಿ ಬೇಡಿಕೆ ಇಟ್ಟ ಕಾಮುಕ ಶಿಕ್ಷಕ ಅಂದರ್‌

    ಕ್ರೀಡಾ ವಿದ್ಯಾರ್ಥಿನಿಯರಿಗೆ ಸಹಾಯ ಮಾಡೋ ನೆಪದಲ್ಲಿ ಲೈಂಗಿಕ ಸುಖಕ್ಕಾಗಿ ಬೇಡಿಕೆ ಇಟ್ಟ ಕಾಮುಕ ಶಿಕ್ಷಕ ಅಂದರ್‌

    ಛತ್ತೀಸಗಡ: ವಿವಿಧ ಕ್ರೀಡೆಗಳಲ್ಲಿ ಮಿಂಚಲು ಸಹಾಯ ಮಾಡಿದ್ದಕ್ಕಾಗಿ ವಿದ್ಯಾರ್ಥಿನಿಯರಿಂದ ಲೈಂಗಿಕ ಸುಖಕ್ಕಾಗಿ ಬೇಡಿಕೆಯಿಟ್ಟ ಆರೋಪದ ಮೇಲೆ ಸರ್ಕಾರಿ ಶಾಲಾ ಶಿಕ್ಷಕ ಬಂಧನವಾಗಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

    ಛತ್ತೀಸ್‌ಗಢದ ಬಲೋದ್ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ವರದಿಯಾಗಿದ್ದು, ಆರೋಪಿ ಸಹಾಯಕ ಶಿಕ್ಷಕನನ್ನು 47 ವರ್ಷದ ದೀಪಕ್ ಕುಮಾರ್ ಸೋನಿ ಎಂದು ಗುರುತಿಸಲಾಗಿದೆ. ಶಾಲೆಯಲ್ಲಿ ಗಣಿತ ಶಿಕ್ಷಕನಾಗಿ ಕೆಲಸ ಮಾಡುತ್ತಿರುವ ಶಿಕ್ಷಕ ಅಂತರ ಶಾಲಾ ಆಟಗಳಲ್ಲಿ ಖೋ-ಖೋ ಮತ್ತು ಕಬಡ್ಡಿ ಪಂದ್ಯಾವಳಿಗಳಲ್ಲಿ ಹಲವಾರು ಪದಕಗಳನ್ನು ಗೆಲ್ಲುವಲ್ಲಿ ತನ್ನ ಶಾಲೆಯ ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ನೀಡುತ್ತಿದ್ದ ಎನ್ನಲಾಗಿದೆ. ಇದನ್ನೂ ಓದಿ: ಗುಂಪು ಘರ್ಷಣೆಗೆ ಇಬ್ಬರು ಬಲಿ – 58 ಜನರ ವಿರುದ್ಧ ದೂರು ದಾಖಲು

    ವರದಿ ಪ್ರಕಾರ, ಶಿಕ್ಷಕ ಬಲೋಡ್ ಜಿಲ್ಲೆಯ ಜುಂಗೇರಾ ಪ್ರಾಥಮಿಕ ಶಾಲೆಯಲ್ಲಿ ಗಣಿತ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಆರೋಪಿಯು ಮಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಖೋ-ಖೋ ಮತ್ತು ಕಬಡ್ಡಿ ತರಬೇತಿಯನ್ನೂ ನೀಡಿದ್ದಾನೆ. ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿನಿಯರಿಗೆ ದೀಪಕ್ ಕುಮಾರ್ ಸೋನಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ತಮ್ಮ ಶಿಕ್ಷಕರು ಅನುಚಿತವಾಗಿ ತಮ್ಮನ್ನು ಸ್ಪರ್ಶಿಸಿದ್ದಾರೆ ಎಂದು ಆರೋಪಿಸಿ ಐವರು ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರು ದೂರು ದಾಖಲಿಸಿದ್ದಾರೆ.

    KILLING CRIME

    ಮುಂಬರುವ ಖೋ-ಖೋ ಸ್ಪರ್ಧೆಯ ಬಗ್ಗೆ ಕೇಳಲು 8 ನೇ ತರಗತಿಯ ವಿದ್ಯಾರ್ಥಿನಿ ಫೋನ್‌ನಲ್ಲಿ ಕರೆ ಮಾಡಿದಾಗ ಶಿಕ್ಷಕನ ಅಸಲಿಯತ್ತು ಬಯಲಾಗಿದೆ. ಫೋನಲ್ಲಿ ಮಾತಾಡುವ ವೇಳೆ ಹುಡುಗಿಯ ತಾಯಿ ತನ್ನ ಮಗಳ ಬಳಿ ನಿಂತಿದ್ದು ಫೋನನ್ನು ಸ್ಫೀಕರ್‌ನಲ್ಲಿ ಹಾಕುವಂತೆ ಹೇಳಿದ್ದರು. ಶಿಕ್ಷಕನ ಅಸಭ್ಯ ಮಾತು ಕೇಳಿ ಬಾಲಕಿಯ ತಾಯಿ ಬೆಚ್ಚಿಬಿದ್ದಿದ್ದರು. ಈ ಬಳಿಕ ಶಿಕ್ಷನ ಅಸಲಿ ಮುಖ ಬಹಿರಂಗಗೊಂಡಿದೆ. ನಂತರ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಮತ್ತೊಮ್ಮೆ ಟೀಂ ಇಂಡಿಯಾದ ಚುಕ್ಕಾಣಿ ಹಿಡಿದ ದಾದಾ – ಭಾರತ ಮಹಾರಾಜರ ರಾಜನಾದ ಗಂಗೂಲಿ

    ಹುಡುಗಿಯರು ಶಿಕ್ಷಕನ ವರ್ತನೆಯನ್ನು ವಿರೋಧಿಸಿದಾಗ, ಶಿಕ್ಷಕ ಆಟಗಳಲ್ಲಿ ಪದಕಗಳನ್ನು ಗೆಲ್ಲಲು ಸಹಾಯ ಮಾಡುವುದರಿಂದ ಆತನ ಬೇಡಿಕೆಯನ್ನು ಒಪ್ಪಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾನೆ ಎಂದು ಸಿಟಿ ಕೊತ್ವಾಲಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ನವೀನ್ ಬೋರ್ಕರ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]