Tag: Khichdi

  • ದಾಲ್ ಖಿಚ್ಡಿ ಮಾಡುವ ಸರಳ ವಿಧಾನ ನಿಮಗಾಗಿ

    ದಾಲ್ ಖಿಚ್ಡಿ ಮಾಡುವ ಸರಳ ವಿಧಾನ ನಿಮಗಾಗಿ

    ಬೆಳಗಿನ ಉಪಹಾರಕ್ಕೆ ಪೌಷ್ಠಿಕಾಂಶವುಳ್ಳ ಆಹಾರ ಸೇವನೆ ಅತ್ಯವಶ್ಯಕವಾಗಿದೆ. ನೀವು ಪೌಷ್ಟಿಕ ಆಹಾರ, ರುಚಿಯಾದ ಆಹಾರ ಮಾಡಬೇಕು ಎಂದಿದ್ದವರು ದಾಲ್ ಖಿಚ್ಡಿ ಮಾಡಲು ಟ್ರೈ ಮಾಡಿ.

    ಬೇಕಾಗುವ ಸಾಮಗ್ರಿಗಳು:
    * ಅಕ್ಕಿ- 1 ಕಪ್
    * ಮೂಂಗ್ ದಾಲ್/ಹೆಸರು ಬೇಳೆ – ಅರ್ಧ ಕಪ್
    * ತುಪ್ಪ- ಅರ್ಧ ಕಪ್
    * ಅರಿಶಿಣ- 1 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಜೀರಿಗೆ- 1 ಚಮಚ
    * ಈರುಳ್ಳಿ- 1
    * ಶುಂಠಿ ಬೆಳ್ಳುಳ್ಳಿ ಪೇಸ್ಟ್- 2 ಚಮಚ
    * ಟೊಮೆಟೋ- 1
    * ಮೆಣಸಿನ ಪುಡಿ- 1 ಚಮಚ
    * ಗರಂ ಮಸಾಲ- ಸ್ವಲ್ಪ
    * ಕೊತ್ತಂಬರಿ ಸೊಪ್ಪು- ಸ್ವಲ್ಪ

    ಮಾಡುವ ವಿಧಾನ:
    * ಕುಕ್ಕರ್‌ಗೆ ಅಕ್ಕಿ, ಮೂಂಗ್ ದಾಲ್, ತುಪ್ಪ, ಅರಿಶಿಣ, ಉಪ್ಪು ನೀರು ಸೇರಿಸಿ ಬೇಯಿಸಬೇಕು.
    * ಪಾತ್ರೆಯಲ್ಲಿ ತುಪ್ಪ, ಜೀರಿಗೆ, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೆಟೋ ಸೇರಿಸಿ ಹುರಿಯಬೇಕು.
    * ನಂತರ ಅರಿಶಿಣ, ಮೆಣಸಿನ ಪುಡಿ, ಗರಂ ಮಸಾಲ ಮತ್ತು ಉಪ್ಪು ಸೇರಿಸಿ.

    * ನಂತರ ಇದಕ್ಕೆ ಬೇಯಿಸಿದ ಅಕ್ಕಿ ಮತ್ತು ದಾಲ್, ನೀರು ಸೇರಿಸಿ.
    * ಕೊತ್ತಂಬರಿ ಸೊಪ್ಪು ಸೇರಿಸಿ ಬೇಯಿಸಿದರೆ ದಾಲ್ ಖಿಚ್ಡಿ ಸವಿಯಲು ಸಿದ್ಧವಾಗುತ್ತದೆ.

  • ದರೋಡೆ ಸಮಯದಲ್ಲಿ ಕಿಚಡಿ ಮಾಡಿ ಸಿಕ್ಕಿಬಿದ್ದ ಕಳ್ಳ

    ದರೋಡೆ ಸಮಯದಲ್ಲಿ ಕಿಚಡಿ ಮಾಡಿ ಸಿಕ್ಕಿಬಿದ್ದ ಕಳ್ಳ

    ದಿಸ್ಪುರ್: ಮನೆಯೊಂದರಲ್ಲಿ ದರೋಡೆ ನಡೆಸಲು ಹೋಗಿದ್ದ ಕಳ್ಳನಿಗೆ ಹಸಿವೆಯಾಗಿದ್ದ ಕಾರಣ ಅಡುಗೆ ಮನೆಯಲ್ಲಿ ಕಿಚಡಿ ಬೇಯಿಸಲು ಹೋಗಿ ಸಿಕ್ಕಿ ಬಿದ್ದಿರುವ ಹಾಸ್ಯಕರ ಘಟನೆ ಗುವಾಹಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ವರದಿಗಳ ಪ್ರಕಾರ ಕಳ್ಳ ರಾತ್ರಿ ಹೊತ್ತು ಮನೆಯೊಂದಕ್ಕೆ ನುಗ್ಗಿದ್ದಾನೆ. ಈ ಸಂದರ್ಭದಲ್ಲಿ ಹಸಿದಿದ್ದ ಆತ ಮನೆಯ ಅಡುಗೆ ಮನೆಗೆ ಹೋಗಿ ಕಿಚಡಿ ಬೇಯಿಸಲು ಪ್ರಾರಂಭಿಸಿದ್ದಾನೆ. ಅಡುಗೆ ಮನೆಯಿಂದ ಬರುತ್ತಿದ್ದ ಶಬ್ಧವನ್ನು ಆಲಿಸಿದ ಮನೆಯವರು ತಕ್ಷಣ ಎಚ್ಚೆತ್ತುಕೊಂಡು ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇದನ್ನೂ ಓದಿ: ವಿಶ್ವದಲ್ಲೇ ಎತ್ತರದ ಆದಿಗುರು ಶಂಕರಚಾರ್ಯರ ಪ್ರತಿಮೆ ಸ್ಥಾಪನೆ!

    ಸ್ಥಳೀಯರು ಪೊಲೀಸರಿಗೆ ಇದರ ಬಗ್ಗೆ ಮಾಹಿತಿ ನೀಡಿದ್ದು, ಆತನನ್ನು ಬಂಧಿಸಲಾಗಿದೆ. ಈ ಹಾಸ್ಯಕರ ದರೋಡೆಯ ಘಟನೆಯನ್ನು ಅಸ್ಸಾಂ ಪೊಲೀಸರು ಟ್ಟಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಆಹಾರ ಕಳ್ಳನ ಕುತೂಹಲಕಾರಿ ಪ್ರಕರಣ! ಆಹಾರ ನಿಮ್ಮ ಆರೋಗ್ಯಕ್ಕೆ ಪ್ರಯೋಜನ ಉಂಟುಮಾಡುತ್ತದೆಯಾದರೂ ಕಳ್ಳತನದ ಸಮಯದಲ್ಲಿ ಕಿಚಡಿ ಬೇಯಿಸುವುದು ನಿಮ್ಮ ಯೋಗಕ್ಷೇಮಕ್ಕೆ ಹಾನಿಯುಂಟುಮಾಡುತ್ತದೆ. ಕಳ್ಳನನ್ನು ಬಂಧಿಸಲಾಗಿದೆ. ಹಾಗೂ ಗುವಾಹಟಿ ಪೊಲೀಸರು ಅವನಿಗೆ ಬಿಸಿ ಊಟವನ್ನು ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಗಿ ಟ್ಟಿಟ್ಟರ್‌ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಪ್ರತಿಯೊಬ್ಬರಿಗೂ ಓಮಿಕ್ರಾನ್‌ ಹರಡುತ್ತೆ, ಬೂಸ್ಟರ್‌ನಿಂದಲೂ ಅದನ್ನು ತಡೆಯಲು ಸಾಧ್ಯವಿಲ್ಲ: ICMR ವೈದ್ಯ

  • ಅಮಿತ್ ಶಾ ರ‍್ಯಾಲಿಯಲ್ಲಿ ಬರೋಬ್ಬರಿ 5000 ಕೆ.ಜಿ. ಕಿಚಡಿ ತಯಾರು

    ಅಮಿತ್ ಶಾ ರ‍್ಯಾಲಿಯಲ್ಲಿ ಬರೋಬ್ಬರಿ 5000 ಕೆ.ಜಿ. ಕಿಚಡಿ ತಯಾರು

    ನವದೆಹಲಿ: ಇಂದು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ದೆಹಲಿಯ ರಾಮಲೀಲಾ ಮೈದಾನದಲ್ಲಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಬರೋಬ್ಬರಿ 5,000 ಕೆಜಿ ಕಿಚಡಿ ತಯಾರು ಮಾಡುವ ಮೂಲಕ ವರ್ಲ್ಡ್ ರೆಕಾರ್ಡ್ ಮಾಡಿದೆ.

    ವಿಶ್ವ ದಾಖಲೆ ಸೃಷ್ಟಿಸುವ ಉದ್ದೇಶದಿಂದ ದಲಿತರ ಮನೆಗಳಿಂದ ಅಕ್ಕಿ ಮತ್ತು ಬೇಳೆಯನ್ನು ರಾಮಲೀಲಾ ಮೈದಾನಕ್ಕೆ ತರಿಸಿ ರ‍್ಯಾಲಿಯಲ್ಲಿ ಕಿಚಡಿಯನ್ನು ತಯಾರು ಮಾಡಲಾಗಿದೆ. ‘ಬಿಮ್ ಮಹಾಸಂಗಮ್ ವಿಜಯ್ ಸಂಕಲ್ಪ’ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಬೆಂಬಲಿಗರು ಹಾಗೂ ಕಾರ್ಯಕರ್ತರಿಗೆ ಕಿಚಡಿಯನ್ನು ವಿತರಿಸಲಾಗಿದೆ. ಈ ರ‍್ಯಾಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆಯುತ್ತಿದೆ.

    ನವೆಂಬರ್ 2017 ರಂದು ಖ್ಯಾತ ಬಾಣಸಿಗ ಸಂಜೀವ್ ಕಪೂರ್ ಅವರು 918 ಕೆಜಿ ಕಿಚಡಿ ತಯಾರಿಸುವ ಮೂಲಕ ವಿಶ್ವದಾಖಲೆ ಸೃಷ್ಟಿಸಿದ್ದರು. ಈ ಕಿಚಡಿಯನ್ನು ಸಂಜೀವ್ ಕಪೂರ್ ಅವರು ದೆಹಲಿಯಲ್ಲಿ ಆಹಾರ ಸಂಸ್ಕರಣಾ ಸಚಿವಾಲಯ ಆಯೋಜಿಸಿದ್ದ ಆಹಾರ ಮೇಳದಲ್ಲಿ ತಯಾರು ಮಾಡಿದ್ದರು.

    ಈ ರ‍್ಯಾಲಿಯಲ್ಲಿ ಅಮಿತ್ ಶಾ ಅವರು, ಬಿಜೆಪಿ ಸರ್ಕಾರ ದಲಿತ ಸಮುದಾಯಕ್ಕಾಗಿ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಮಾತನಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು, ಬಿಜೆಪಿ ಸರ್ಕಾರ ಸಮಾಜದಲ್ಲಿ ದಲಿತರು ಮತ್ತು ಕೆಳಹಂತದಲ್ಲಿರುವ ಜನರ ಅಭಿವೃದ್ದಿಗಾಗಿ ಯಾವುದೇ ಯೋಜನೆ ಜಾರಿಗೆ ತಂದಿಲ್ಲ ಎಂದು ನಿರಂತರವಾಗಿ ಕಾಂಗ್ರೆಸ್ ಬಗ್ಗೆ ಆರೋಪ ಮಾಡುತ್ತಿತ್ತು.

    ಈ ಹಿನ್ನೆಲೆಯಲ್ಲಿ ಅಮಿತ್ ಶಾ ದಲಿತರಿಗೆ ತಮ್ಮ ಸರ್ಕಾರ ಅವರಿಗಾಗಿ ಯಾವ ಯಾವ ಯೋಜನೆಯನ್ನು ಜಾರಿಗೆ ಮಾಡಿದೆ ಎಂಬುದನ್ನು ತಿಳಿಸಲು ಈ ರ‍್ಯಾಲಿಯನ್ನು ಆಯೋಜನೆ ಮಾಡಿದ್ದಾರೆ. ಜೊತೆಗೆ ದಲಿತರ ಮನೆಯಲ್ಲಿಯೇ ಅಕ್ಕಿ, ಬೇಳೆ ತರಿಸಿ ಕಿಚಡಿ ತಯಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

    ಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv