Tag: Kherson

  • ಯುದ್ಧದ ನಡುವೆಯೂ ತೆರೆಯುತ್ತಿದ್ದ ಉಕ್ರೇನ್‌ ಹೈಪರ್‌ಮಾರ್ಕೆಟ್‌ ರಷ್ಯಾ ಕ್ಷಿಪಣಿ ದಾಳಿಗೆ ಉಡೀಸ್‌!

    ಯುದ್ಧದ ನಡುವೆಯೂ ತೆರೆಯುತ್ತಿದ್ದ ಉಕ್ರೇನ್‌ ಹೈಪರ್‌ಮಾರ್ಕೆಟ್‌ ರಷ್ಯಾ ಕ್ಷಿಪಣಿ ದಾಳಿಗೆ ಉಡೀಸ್‌!

    – ಪುಟಿನ್‌ ಪಡೆ ದಾಳಿಗೆ ಉಕ್ರೇನ್‌ನ 21 ಮಂದಿ ಬಲಿ

    ಕೀವ್: ಉಕ್ರೇನ್‌ನ (Ukraine) ದಕ್ಷಿಣ ಖೆರ್ಸನ್‌ ಪ್ರದೇಶದ ಮೇಲೆ ರಷ್ಯಾ (Russia) ನಡೆಸಿದ ದಾಳಿಗೆ 21 ಮಂದಿ ಬಲಿಯಾಗಿದ್ದಾರೆ. ಶುಕ್ರವಾರದಿಂದ ಖೆರ್ಸನ್‌ (Kherson) ನಗರದಲ್ಲಿ ಅಧಿಕಾರಿಗಳು ಕರ್ಫ್ಯೂ ಘೋಷಿಸಿದ್ದಾರೆ.

    ರಷ್ಯಾದ ಕ್ಷಿಪಣಿಗಳು ರೈಲ್ವೆ ನಿಲ್ದಾಣ, ಮನೆಗಳು, ಹಾರ್ಡ್‌ವೇರ್ ಅಂಗಡಿ, ಸೂಪರ್‌ ಮಾರ್ಕೆಟ್‌ಗಳನ್ನೆಲ್ಲ ಹೊಡೆದುರುಳಿಸಿವೆ. ಘಟನೆಯಲ್ಲಿ 21 ಮಂದಿ ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ. ಇದನ್ನೂ ಓದಿ:  ಸೈಕಲಿನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಕಿರುಕುಳ – ವಿಡಿಯೋ ವೈರಲ್ ಬೆನ್ನಲ್ಲೇ ಪೇದೆ ಅಮಾನತು

    ಬುಧವಾರದಿಂದ ರಷ್ಯಾದ ಪಡೆಗಳು ಖೆರ್ಸನ್‌ ನಗರ ಮತ್ತು ಇತರೆ ಪ್ರದೇಶಗಳ ಮೇಲೆ ಬೃಹತ್‌ ಶೆಲ್‌ ದಾಳಿಯನ್ನು ನಡೆಸುತ್ತಿವೆ. ಯುದ್ಧದ ಸನ್ನಿವೇಶದಲ್ಲೂ ಖೆರ್ಸನ್‌ ನಗರದಲ್ಲಿ ಜನರಿಗೆ ಅಗತ್ಯ ವಸ್ತುಗಳ ಪೂರೈಕೆಗಾಗಿ ತೆರೆಯುತ್ತಿರುವ ಏಕೈಕ ಹೈಪರ್‌ಮಾರ್ಕೆಟ್‌ನಲ್ಲಿ ಶೆಲ್‌ ದಾಳಿಯಿಂದಾಗಿ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಖೆರ್ಸನ್‌ನಲ್ಲಿ ಶುಕ್ರವಾರದಿಂದ ಸೋಮವಾರದವರೆಗೆ ಕರ್ಫ್ಯೂ ವಿಧಿಸಲಾಗಿದೆ. ನಗರದ ಬೀದಿಗಳಲ್ಲಿ ಜನರ ಓಡಾಟಕ್ಕೆ ನಿಷೇಧ ವಿಧಿಸಲಾಗಿದೆ. ನಗರ ಪ್ರವೇಶಿಸುವುದು ಮತ್ತು ಹೊರ ಹೋಗುವುದಕ್ಕೂ ನಿರ್ಬಂಧ ಹೇರಲಾಗಿದೆ. ಆಹಾರ ಮತ್ತು ಔಷಧವನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ನಾಗರಿಕರಿಗೆ ಸಲಹೆ ನೀಡಲಾಗಿದೆ. ಇದನ್ನೂ ಓದಿ: ಯಾವುದೇ ಸಮಸ್ಯೆ ಇದ್ದಲ್ಲಿ ಕೆಳ ನ್ಯಾಯಾಲಯಕ್ಕೆ ಹೋಗಿ: ಕುಸ್ತಿಪಟುಗಳಿಗೆ ಸುಪ್ರೀಂ ಸೂಚನೆ

  • ಉಕ್ರೇನ್ ಮೇಲೆ ಯುದ್ಧ ಸಾರಿ ಕೈಸುಟ್ಟುಕೊಂಡ ರಷ್ಯಾ

    ಉಕ್ರೇನ್ ಮೇಲೆ ಯುದ್ಧ ಸಾರಿ ಕೈಸುಟ್ಟುಕೊಂಡ ರಷ್ಯಾ

    ಕೀವ್: ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾ ತನ್ನ ಸೇನಾ ಬಲದಲ್ಲಿ ಸಾಕಷ್ಟು ನಷ್ಟ ಅನುಭವಿಸಿರುವ ಕುರಿತು ವರದಿಯೊಂದು ಹೊರಬಿದ್ದಿದೆ.

    ರಷ್ಯಾ, ಉಕ್ರೇನ್ ಯುದ್ಧ ಆರಂಭವಾಗಿ ಇಂದಿಗೆ 23 ದಿನಗಳಾಗಿದೆ. ಕೀವ್ ವಶಪಡಿಸಿಕೊಳ್ಳಲು ರಷ್ಯಾ ಹಪಹಪಿಸುತ್ತಿದೆ. ಇತ್ತ ರಷ್ಯಾದ ದಾಳಿಗೆ ತಡೆ ಒಡ್ಡುತ್ತಿರುವ ಉಕ್ರೇನ್ ಕೂಡ ಹೋರಾಡುತ್ತಿದೆ. ಈ ನಡುವೆ ರಷ್ಯಾ ಸೇನೆಯ ಹಲವು ಯುದ್ಧೋಪಕರಣಗಳನ್ನು ಹೊಡೆದುರುಳಿಸಿರುವ ಬಗ್ಗೆ ಉಕ್ರೇನ್ ಸೇನೆ ಮಾಹಿತಿ ನೀಡಿರುವುದು ವರದಿಯಾಗಿದೆ. ಇದನ್ನೂ ಓದಿ: ವಿಶ್ವಸಂಸ್ಥೆ ಕೋರ್ಟ್‌ನಲ್ಲಿ ರಷ್ಯಾ ವಿರುದ್ಧ ಮತ ಚಲಾಯಿಸಿದ ಭಾರತದ ನ್ಯಾಯಾಧೀಶ

    ಉಕ್ರೇನ್ ಸೇನೆ ನೀಡಿರುವ ಮಾಹಿತಿ ಪ್ರಕಾರ ಈವರೆಗೆ ರಷ್ಯಾದ 14,200 ಸೈನಿಕರು, 93 ಯುದ್ಧ ವಿಮಾನ, 112 ಹೆಲಿಕಾಪ್ಟರ್, 450 ಟ್ಯಾಂಕ್, 205 ಮಿಲಿಟರಿ ಶಸ್ತ್ರಸಜ್ಜಿತ ವಾಹನ, 1,448 ಯುದ್ದೋಪಕರಣ ಸಾಗಾಟ ವಾಹನ, 72 ಎಮ್‍ಎಲ್‍ಆರ್‌ಎಸ್, 3 ಬೋಟ್, 879 ವಾಹನ, 60 ಇಂಧನ ಟ್ಯಾಂಕರ್, 12 ಡ್ರೋನ್‍ಗಳನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್ ತಿಳಿಸಿರುವ ಮಾಹಿತಿಯೊಂದನ್ನು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಇದನ್ನೂ ಓದಿ: ಸೂಟ್‍ಕೇಸ್‍ನಲ್ಲಿ 40 ಕೆಜಿ ಹಸಿರು ಬಟಾಣಿ ತುಂಬಿ ಸಾಗಿಸಿದ ಐಪಿಎಸ್ ಅಧಿಕಾರಿ

    ಉಕ್ರೇನ್, ರಷ್ಯಾದ ಸೇನಾಪಡೆಗಳಿಗೆ ಆದ ನಷ್ಟವನ್ನು ತಿಳಿಸಿದೆ. ಆದರೆ ಉಕ್ರೇನ್‍ಗೆ ಆದ ನಷ್ಟದ ಬಗ್ಗೆ ತಿಳಿಸಿಲ್ಲ. ಈವರೆಗೆ ರಷ್ಯಾದಿಂದ ಹೆಚ್ಚು ನಷ್ಟವನ್ನು ಉಕ್ರೇನ್ ಸೇನಾ ಪಡೆ ಅನುಭವಿಸಿದೆ ಎಂದು ವರದಿಯೊಂದು ತಿಳಿಸಿದ್ದು, ಆದರೆ ಈ ಬಗ್ಗೆ ಉಕ್ರೇನ್ ಸೇನಾ ಪಡೆ ಸ್ಪಷ್ಟಪಡಿಸಿಲ್ಲ. ರಷ್ಯಾ ಇದೀಗ ಶಾಲೆ, ಆಸ್ಪತ್ರೆ ಸೇರಿದಂತೆ ಜನವಸತಿ ಪ್ರದೇಶಗಳ ಮೇಲೆ ದಾಳಿ ಆರಂಭಿಸಿದೆ. ಇನ್ನೊಂದೆಡೆ ಸಂಧಾನ ಮಾತುಕತೆ ಕೂಡ ಪ್ರಗತಿಯಲ್ಲಿದೆ.