Tag: Kheos

  • ಹಿರಿಯನಟ ಶಶಿಕುಮಾರ್ ಪುತ್ರನ ಮತ್ತೊಂದು ಸಿನಿಮಾ ಬಿಡುಗಡೆಗೆ ಸಿದ್ಧ

    ಹಿರಿಯನಟ ಶಶಿಕುಮಾರ್ ಪುತ್ರನ ಮತ್ತೊಂದು ಸಿನಿಮಾ ಬಿಡುಗಡೆಗೆ ಸಿದ್ಧ

    ಹಿರಿಯ ನಟ ಶಶಿಕುಮಾರ್ (Sasikumar) ಪುತ್ರ ಅಕ್ಷಿತ್ (Akshit) ನಟನೆಯ, ಪಾರುಲ್ ಅಗರವಾಲ್ ಹಾಗೂ ಹೇಮಚಂದ್ರ ರೆಡ್ಡಿ ನಿರ್ಮಿಸಿರುವ ‘ಖೆಯೊಸ್’ (Kheos) ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಸಿನಿಮಾದಲ್ಲಿ ಅಕ್ಷಿತ್ ಶಶಿಕುಮಾರ್ ಹಾಗೂ ಸ್ಯಾಂಡಲ್ ವುಡ್ ಬೆಡಗಿ ಅದಿತಿ ಪ್ರಭುದೇವ (Aditi Prabhudev) ಈ ಚಿತ್ರದ ನಾಯಕ – ನಾಯಕಿಯಾಗಿ ಅಭಿನಯಿಸಿದ್ದಾರೆ. ಶಶಿಕುಮಾರ್ ಅವರು ಈ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿದ್ದು, ತಂದೆ – ಮಗ ಇಬ್ಬರೂ ಒಟ್ಟಿಗೆ ಅಭಿನಯಿಸಿರುವ ಮೊದಲ ಚಿತ್ರವಿದು. ಆರ್ ಕೆ ಚಂದನ್, ಸಿದ್ದು ಮೂಲಿಮನಿ ಮೊದಲಾದವರು, ತಾರಾಬಳಗದಲ್ಲಿದ್ದಾರೆ.

    ಡಾ.ಜಿ.ವಿ.ಪ್ರಸಾದ್ “ಖೆಯೊಸ್” ಚಿತ್ರದ ನಿರ್ದೇಶಕರು. ಅವರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಇದೊಂದು ಮೆಡಿಕಲ್ ಕಾಲೇಜಿನಲ್ಲಿ ನಡೆಯುವ ಕಥೆ. ಆಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಮರ್ಡರ್ ಮಿಸ್ಟರಿ ಜಾನರ್ ಎನ್ನಬಹುದು. ಮನಸ್ಸಿನಲ್ಲಾಗುವ ಗೊಂದಲ, ಅಸ್ತವ್ಯಸ್ತ ಇವುಗಳಿಗೆ “ಖೆಯೊಸ್” ಎನ್ನುತ್ತಾರೆ. ಫೆಬ್ರವರಿ 17 ಚಿತ್ರ ತೆರೆಗೆ ಬರಲಿದೆ.  ಜನವರಿ 26 ರಂದು “ಖೆಯೊಸ್” ಚಿತ್ರದ ತುಣುಕು ಬಿಡುಗಡೆಯಾಗಲಿದೆ. ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ಎನ್ನುತ್ತಾರೆ ನಿರ್ದೇಶಕ ಜಿ.ವಿ.ಪ್ರಸಾದ್. ಇದನ್ನೂ ಓದಿ: `ಕೆಜಿಎಫ್ 2′ ನಟಿ ರವೀನಾ ಟಂಡನ್ ಪುತ್ರಿ ರಾಶಾ ಬಾಲಿವುಡ್‌ಗೆ ಎಂಟ್ರಿ

    ವಿ.ನಾಗೇಂದ್ರ ಪ್ರಸಾದ್ ಹಾಗೂ ಜಿ.ವಿ.ಪ್ರಸಾದ್ ಬರೆದಿರುವ ಮೂರು ಹಾಡುಗಳು ಚಿತ್ರದಲ್ಲಿದ್ದು, ವಿಜಯ್ ಹರಿತ್ಸ ಸಂಗೀತ ನೀಡಿದ್ದಾರೆ. ದಿಲೀಪ್ ಕುಮಾರ್, ಸಂದೀಪ್ ವಳ್ಳೂರಿ ಛಾಯಾಗ್ರಹಣ ಹಾಗೂ ಮಧು ತುಂಬಿಕೆರೆ, ವೆಂಕಿ ಯುಡಿವಿ ಸಂಕಲನವಿರುವ “ಖೆಯೊಸ್” ಚಿತ್ರಕ್ಕೆ ಚೇತನ್ ಡಿಸೋಜ , ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನವಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಿರಿಯ ನಟ ಶಶಿಕುಮಾರ್ ಪುತ್ರನ ಚಿತ್ರಕ್ಕೆ ಧನಂಜಯ್ ಸಾಥ್: ಫಸ್ಟ್ ಲುಕ್ ರಿಲೀಸ್ ಮಾಡಿದ ಡಾಲಿ

    ಹಿರಿಯ ನಟ ಶಶಿಕುಮಾರ್ ಪುತ್ರನ ಚಿತ್ರಕ್ಕೆ ಧನಂಜಯ್ ಸಾಥ್: ಫಸ್ಟ್ ಲುಕ್ ರಿಲೀಸ್ ಮಾಡಿದ ಡಾಲಿ

    ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್‌ ಶಶಿಕುಮಾರ್ ಅಭಿನಯದ ಹೊಸ ಸಿನಿಮಾಗೆ ಡಾಲಿ ಧನಂಜಯ್ ಸಾಥ್ ಕೊಟ್ಟಿದ್ದಾರೆ. ಓ ಮೈ ಲವ್ ಚಿತ್ರದ ಬಳಿಕ ಅಕ್ಷಿತ್ ಖೆಯೊಸ್ ಎಂಬ ಹೊಸ ಸಿನಿಮಾದಲ್ಲಿ ಅಭಿನಯಿಸ್ತಿದ್ದು, ಈ ಚಿತ್ರದ ಫಸ್ಟ್ ಲುಕ್ ಗಣೇಶ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದೆ. ನಟರಾಕ್ಷಸ ಡಾಲಿ ಧನಂಜಯ ಸಿನಿಮಾದ ಫಸ್ಟ್ ಲುಕ್ ಅನಾವರಣ ಮಾಡಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಬಿಡುಗಡೆಯಾಗಿರುವ ಪೋಸ್ಟರ್ ನಲ್ಲಿ ಅಕ್ಷಿತ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

    ವೃತ್ತಿಯಲ್ಲಿ ವೈದ್ಯರಾಗಿರುವ ಜಿ ವೆಂಕಟೇಶ್ ಪ್ರಸಾದ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಅಕ್ಷಿತ್ ಗೆ ಜೋಡಿಯಾಗಿ ಅದಿತಿ ಪ್ರಭುದೇವ ನಟಿಸಿದ್ದು, ಇದೇ‌ ಮೊದಲ ಬಾರಿಗೆ ಶಶಿಕುಮಾರ್ ಹಾಗೂ ಅಕ್ಷಿತ್ ಶಶಿಕುಮಾರ್ ಒಟ್ಟಿಗೆ ತೆರೆಹಂಚಿಕೊಂಡಿದ್ದು, ಅಪ್ಪ-ಮಗನ ಜುಗಲ್ ಬಂದಿ ನೋಡಲು ಪ್ರೇಕ್ಷಕರು ಕಾತುರರಾಗಿದ್ದಾರೆ. ಇದನ್ನೂ ಓದಿ: ನೂಡಲ್ಸ್ ಬಿಡಿಸು ಅಂದ್ರೆ ಮೂಲಂಗಿ ಬಿಡಿಸ್ತಾಳೆ – ಸೋನು ಪೇಂಟಿಂಗ್‌ಗೆ ರಾಕೇಶ್ ಫುಲ್ ಶಾಕ್..!

    ಈಗಾಗಲೇ ಶೂಟಿಂಗ್ ಮುಗಿಸಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಖೆಯೊಸ್ ಚಿತ್ರಕ್ಕೆ ವೆಂಕಟೇಶ್ ಪ್ರಸಾದ್ ಕಥೆ ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ. ಆಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಅಕ್ಷಿತ್ ಅದಿತಿ ವೈದ್ಯರಾಗಿ ನಟಿಸಿದ್ದಾರೆ. ಸಿದ್ದು ಮೂಲಿಮನಿ, ಆರ್‌ಕೆ ಚಂದನ್ , ಶಿವಾನಂದ್ ಸಿಂದಗಿ, ಆರಾಧನಾ ಭಟ್ , ಮಿಮಿಕ್ರಿ ಗೋಪಿ ಮತ್ತು ನಾಗೇಂದ್ರ ಅರಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದಿ ಬ್ಲಾಕ್ ಪೆಬಲ್ ಎಂಟರ್ ಟೈನ್ಮೆಂಟ್ ನಡಿ ಪಾರುಲ್ ಅಗರ್ವಾಲ್, ಹೇಮಚಂದ್ರ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ವಿಜಯ್ ಹರಿಟ್ಸ್ ಸಂಗೀತ, ಸಂದೀಪ್ ವಲ್ಲೂರಿ,ದುಲಿಪ್ ಕುಮಾರ್ ಛಾಯಾಗ್ರಾಹಣ, ನಾಗೇಂದ್ರ ಅರಸ್ ಸಂಕಲನ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]