Tag: Khel Ratna

  • ಖೇಲ್‌ ರತ್ನ ಪ್ರಶಸ್ತಿಗೆ ಶಿಫಾರಸ್ಸುಗೊಳ್ಳದ ಶೂಟರ್ ಮನು ಭಾಕರ್ ಹೆಸರು; ತಂದೆ ಆಕ್ಷೇಪ

    ಖೇಲ್‌ ರತ್ನ ಪ್ರಶಸ್ತಿಗೆ ಶಿಫಾರಸ್ಸುಗೊಳ್ಳದ ಶೂಟರ್ ಮನು ಭಾಕರ್ ಹೆಸರು; ತಂದೆ ಆಕ್ಷೇಪ

    – ಒಲಿಂಪಿಕ್ಸ್‌ನಲ್ಲಿ 2 ಪದಕ ಗೆದ್ದು ಪ್ರಶಸ್ತಿಗಾಗಿ ಭಿಕ್ಷೆ ಬೇಡಿದ್ರೆ ಏನು ಪ್ರಯೋಜನ? ಎಂದು ಬೇಸರ

    ನವದೆಹಲಿ: ಮಹಿಳೆಯರ 10m ಏರ್ ಪಿಸ್ತೂಲ್ ಸ್ಪರ್ಧೆ ಮತ್ತು 10m ಪಿಸ್ತೂಲ್ ಡಬಲ್ಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಪ್ಯಾರಿಸ್ ಒಲಂಪಿಕ್ಸ್‌ನಲ್ಲಿ (Paris Olympics) ಐತಿಹಾಸಿಕ ಸಾಧನೆ ಮಾಡಿದ್ದ ಮನು ಭಾಕರ್ (Manu Bhaker) ಅವರನ್ನು ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಿಲ್ಲ ಎಂದು ಮೂಲಗಳು ಹೇಳಿವೆ.

    ಭಾರತೀಯ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಪ್ಯಾರಾ-ಅಥ್ಲೀಟ್ ಪ್ರವೀಣ್ ಕುಮಾರ್ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದು (Khel Ratna Nominations) ಮನು ಭಾಕರ್ ಅವರು ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸದ ಹಿನ್ನೆಲೆ ಅವರನ್ನು ಪರಿಗಣಿಸಿಲ್ಲ ಎಂದು ಕ್ರೀಡಾ ಇಲಾಖೆ ಹೇಳಿದೆ. ಇದನ್ನೂ ಓದಿ: ಹಣಕಾಸಿನ ವಂಚನೆ ತಡೆಗೆ ಆರ್‌ಬಿಐ ಅಭಿವೃದ್ಧಿಪಡಿಸಲಿದೆ AI ತಂತ್ರಜ್ಞಾನ! ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

    ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ವಿ.ರಾಮಸುಬ್ರಮಮ್ ನೇತೃತ್ವದ 12 ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು. ರಾಷ್ಟ್ರೀಯ ಕ್ರೀಡಾ ದಿನಾಚರಣೆಗೆ ಭಾರತದ ಅತ್ಯುನ್ನತ ಕ್ರೀಡಾ ಗೌರವವಾದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಹೆಸರು ಶಿಫಾರಸ್ಸು ಮಾಡಲು ಸೂಚಿಸಲಾಗಿತ್ತು.

    ಸಮಿತಿಯ ನಿರ್ಧಾರಕ್ಕೆ ಮನು ಭಾಕರ್ ತಂದೆ ರಾಮಕೃಷ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದು ಪ್ರಶಸ್ತಿಗಾಗಿ ಭಿಕ್ಷೆ ಬೇಡಿದರೆ ಏನು ಪ್ರಯೋಜನ? ಎಂದು ಪ್ರಶ್ನಿಸಿದ್ದಾರೆ. ಪ್ರಶಸ್ತಿಗಾಗಿ ನಾನು ಅರ್ಜಿ ಸಲ್ಲಿಸಿದ್ದೇನೆ ಸಮಿತಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು. ಇದನ್ನೂ ಓದಿ: Pune | ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಹರಿದ ಟ್ರಕ್ – ಇಬ್ಬರು ಮಕ್ಕಳು ಸೇರಿ ಮೂವರ ದುರ್ಮರಣ

    ಕ್ರಿಕೆಟಿಗರು ಅರ್ಜಿ ಸಲ್ಲಿಸದಿದ್ದರೂ ಮೊಹಮ್ಮದ್ ಶಮಿ ಅವರಿಗೆ ಈ ವರ್ಷದ ಆರಂಭದಲ್ಲಿ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆದರೆ ಒಂದೇ ಒಲಂಪಿಕ್ಸ್ ನಲ್ಲಿ ಎರಡು ಕಂಚು ಗೆದ್ದರೂ ನಮ್ಮನ್ನು ಪರಿಗಣಿಸಿಲ್ಲ. ಪ್ರಶಸ್ತಿಯನ್ನು ಒಬ್ಬ ಸರ್ಕಾರಿ ಅಧಿಕಾರಿ ನಿರ್ಧರಿಸುತ್ತಿದ್ದಾರೆ, ಮತ್ತು ಸಮಿತಿಯ ಸದಸ್ಯರು ತಮ್ಮ ಅಭಿಪ್ರಾಯವನ್ನು ನೀಡದೆ ಮೌನವಾಗಿದ್ದಾರೆ ನನಗೆ ಅರ್ಥವಾಗುತ್ತಿಲ್ಲ, ನೀವು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಿರುವ ರೀತಿ ಇದೇನಾ? ಎಂದು ಕೇಳಿದ್ದಾರೆ. ಇದನ್ನೂ ಓದಿ: Uttar Pradesh | ಖಾಲಿಸ್ತಾನ್‌ ಕಮಾಂಡೋ ಫೋರ್ಸ್‌ನ ಮೂವರು ಭಯೋತ್ಪಾದಕರು ಎನ್‌ಕೌಂಟರ್‌

  • `ಬಾಹುಬಲಿʼಯಿಂದ ಪಡೆದ ರಾಜಕೀಯ ಲಾಭದ ಬೆಲೆ ವೀರ ಹೆಣ್ಣು ಮಕ್ಕಳ ಕಣ್ಣೀರಿಗಿಂತ ಮಿಗಿಲಾದೀತೇ? – ರಾಗಾ ಪ್ರಶ್ನೆ

    `ಬಾಹುಬಲಿʼಯಿಂದ ಪಡೆದ ರಾಜಕೀಯ ಲಾಭದ ಬೆಲೆ ವೀರ ಹೆಣ್ಣು ಮಕ್ಕಳ ಕಣ್ಣೀರಿಗಿಂತ ಮಿಗಿಲಾದೀತೇ? – ರಾಗಾ ಪ್ರಶ್ನೆ

    – ಪ್ರಧಾನಿ ಅವರ ಕ್ರೌರ್ಯ ನೋಡಿದ್ರೆ ನನಗೆ ನೋವಾಗುತ್ತೆ
    – ದೇಶದ ಪ್ರತಿ ಹೆಣ್ಣು ಮಗಳಿಗೆ ಸ್ವಾಭಿಮಾನ ಮೊದಲು, ಪದಕ ಆಮೇಲೆ
    – ಮೋದಿ, ಕೇಂದ್ರ ಸರ್ಕಾರದ ವಿರುದ್ಧ ರಾಹುಲ್‌ ಗಾಂಧಿ ಕೆಂಡಾಮಂಡಲ

    ನವದೆಹಲಿ: ಇಂದು ಘೋಷಿತ ಬಾಹುಬಲಿಯಿಂದ ಪಡೆದ ರಾಜಕೀಯ ಲಾಭಗಳ ಬೆಲೆ ಈ ವೀರ ಹೆಣ್ಣು ಮಕ್ಕಳ ಕಣ್ಣೀರಿಗಿಂತ ಮಿಗಿಲಾದೀತೇ? ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ (Rahul Gandhi), ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಕುಸ್ತಿಪಟು ವಿನೇಶ್‌ ಫೋಗಟ್‌ (Vinesh Phogat) ನವದೆಹಲಿಯ ಕರ್ತವ್ಯ ಪಥದ ಮಾರ್ಗದಲ್ಲೇ ಖೇಲ್‌ ರತ್ನ, ಅರ್ಜುನ ಪ್ರಶಸ್ತಿಯನ್ನು (Khel Ratna And Arjuna Award) ಬಿಟ್ಟು ಹೋಗಿದ್ದಾರೆ. ಪ್ರಧಾನಿ ಕಚೇರಿಗೆ ಹೋಗದಂತೆ ದೆಹಲಿ ಪೊಲೀಸರು (Delhi Police) ತಡೆದಿದ್ದರಿಂದ ಕುಸ್ತಿಪಟು ಹೀಗೆ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ರಾಹುಲ್‌ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಕಚೇರಿಗೆ ಹೋಗದಂತೆ ತಡೆ; ಕರ್ತವ್ಯ ಪಥದಲ್ಲೇ ಖೇಲ್‌ ರತ್ನ, ಅರ್ಜುನ ಪ್ರಶಸ್ತಿ ಬಿಟ್ಟು ಹೋದ ಕುಸ್ತಿಪಟು 

    ತಮ್ಮ ಸೋಶಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ, ವಿನೇಶ್‌ ಫೋಗಟ್‌ ಅವರು ರಸ್ತೆಯಲ್ಲಿ ಪದಕ ಇಡುತ್ತಿರುವ ವೀಡಿಯೋ ತುಣುಕೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೇ, ದೇಶದ ಪ್ರತಿಯೊಬ್ಬ ಹೆಣ್ಣು ಮಗಳಿಗೂ ಮೊದಲು ಸ್ವಾಭಿಮಾನ, ಅದರ ನಂತರ ಯಾವುದೇ ಪದಕ ಅಥವಾ ಗೌರವ ಬರುತ್ತದೆ. ಇಂದು ‘ಘೋಷಿತ ಬಾಹುಬಲಿ’ಯಿಂದ ಪಡೆದ ರಾಜಕೀಯ ಲಾಭಗಳ ಬೆಲೆ ಈ ವೀರ ಹೆಣ್ಣು ಮಕ್ಕಳ ಕಣ್ಣೀರಿಗಿಂತ ಮಿಗಿಲಾದೀತೇ? ಪ್ರಧಾನಿಯವರು ರಾಷ್ಟ್ರದ ಕಾವಲುಗಾರ, ಅವರ ಇಂತಹ ಕ್ರೌರ್ಯವನ್ನ ನೋಡಿದರೆ ನೋವಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬ್ರಿಜ್ ಭೂಷಣ್ ನಿವಾಸದಿಂದ ಡಬ್ಲ್ಯುಎಫ್‍ಐ ಕಚೇರಿ ಸ್ಥಳಾಂತರ

    ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತೆ ವಿನೇಶ್‌ ಫೋಗಟ್‌ 2020 ರಲ್ಲಿ ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್ ರತ್ನ ಮತ್ತು 2016 ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದಿದ್ದರು. ಇತ್ತೀಚೆಗೆ ಪ್ರಧಾನಿಗೆ ಬರೆದಿದ್ದ ಬಹಿರಂಗ ಪತ್ರದಲ್ಲಿ ಪ್ರಶಸ್ತಿಗಳನ್ನು ಹಿಂದಿರುಗಿಸುವ ನಿರ್ಧಾರ ಪ್ರಕಟಿಸಿದ್ದರು. ಶನಿವಾರ ಪ್ರಶಸ್ತಿಯನ್ನು ಹಿಂದಿರುಗಿಸಲು ಕರ್ತವ್ಯ ಪಥದಲ್ಲಿ ತೆರಳುತ್ತಿದ್ದಾಗ ಮಾರ್ಗ ಮಧ್ಯದಲ್ಲೇ ಪೊಲೀಸರು ಕುಸ್ತಿಪಟುವನ್ನು ತಡೆದರು. ಇದರಿಂದ ವಿನೇಶ್‌ ರಸ್ತೆಯಲ್ಲೇ ಪದಕಗಳನ್ನ ಬಿಟ್ಟು ಹೋದರು. ಇದಕ್ಕೂ ಮುನ್ನ, ಸಾಕ್ಷಿ ಮಲಿಕ್ ಅವರು ಕುಸ್ತಿಗೆ ವೃತ್ತಿ ಬದುಕಿಗೆ ಕಣ್ಣೀರ ವಿದಾಯ ಹೇಳಿದ್ದರು. ಇದಾದ ಕೆಲ ದಿನಗಳ ನಂತರ ಬಜರಂಗ್ ಪೂನಿಯಾ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಿದರು. ಇದನ್ನೂ ಓದಿ: ಪಾಕಿಸ್ತಾನ ಸೂಪರ್‌ ಲೀಗ್‌ಗಿಂತಲೂ ಭಾರತದ IPL ದೊಡ್ಡದು – ಪಾಕ್‌ ಮಾಜಿ ಕ್ರಿಕೆಟಿಗ ಬಣ್ಣನೆ

    ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷರಾಗಿದ್ದಾಗ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧದ ಪ್ರತಿಭಟನೆಯಲ್ಲಿ ಈ ಮೂವರು ಕುಸ್ತಿಪಟುಗಳು ಮುಂಚೂಣಿಯಲ್ಲಿದ್ದರು. ಬಿಜೆಪಿ ಸಂಸದರ ವಿರುದ್ಧ ಹಲವಾರು ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಆದ್ರೆ ಬ್ರಿಜ್ ಭೂಷಣ್ ಅವರ ಆಪ್ತ ಸಹಾಯಕ ಸಂಜಯ್ ಸಿಂಗ್ ನೇತೃತ್ವದ ಸಮಿತಿಯು ಡಿಸೆಂಬರ್ 21 ರಂದು ಭಾರತದ ಕುಸ್ತಿ ಫೆಡರೇಶನ್‌ಗೆ ನಡೆದ ಚುನಾವಣೆಯಲ್ಲಿ ಪ್ರಚಂಡ ಬಹುಮತ ಸಾಧಿಸಿತು. ಹಾಗಾಗಿ ವಿನೇಶ್‌ ಫೋಗಟ್, ಸಾಕ್ಷಿ ಮಲಿಕ್‌, ಬಜರಂಗ್ ಪೂನಿಯಾ ಬೇಸರ ವ್ಯಕ್ತಪಡಿಸಿದ್ದರು. ಕ್ರೀಡೆಗೆ ಸಂಬಂಧಿಸಿದಂತೆ ಸಾಂವಿಧಾನಿಕ ನಿಬಂಧನೆಗಳನ್ನು ಅನುಸರಿಸದ ಕಾರಣ ಈ ಸಮಿತಿಯನ್ನು ಕ್ರೀಡಾ ಸಚಿವಾಲಯ ಡಿ.24 ರಂದು ಅಮಾನತುಗೊಳಿಸಿತು.

  • ಪ್ರಧಾನಿ ಕಚೇರಿಗೆ ಹೋಗದಂತೆ ತಡೆ; ಕರ್ತವ್ಯ ಪಥದಲ್ಲೇ ಖೇಲ್‌ ರತ್ನ, ಅರ್ಜುನ ಪ್ರಶಸ್ತಿ ಬಿಟ್ಟು ಹೋದ ಕುಸ್ತಿಪಟು

    ಪ್ರಧಾನಿ ಕಚೇರಿಗೆ ಹೋಗದಂತೆ ತಡೆ; ಕರ್ತವ್ಯ ಪಥದಲ್ಲೇ ಖೇಲ್‌ ರತ್ನ, ಅರ್ಜುನ ಪ್ರಶಸ್ತಿ ಬಿಟ್ಟು ಹೋದ ಕುಸ್ತಿಪಟು

    ನವದೆಹಲಿ: ಭಾರತದ ಕುಸ್ತಿಪಟುಗಳು ತಮ್ಮ ಪ್ರಶಸ್ತಿ ವಾಪ್ಸಿ ಅಭಿಯಾನವನ್ನು ಮುಂದುವರಿಸಿದ್ದಾರೆ. ಶನಿವಾರ ಕುಸ್ತಿಪಟು ವಿನೇಶ್‌ ಫೋಗಟ್‌ (Vinesh Phogat) ನವದೆಹಲಿಯ ಕರ್ತವ್ಯ ಪಥದ ಮಾರ್ಗದಲ್ಲೇ ಖೇಲ್‌ ರತ್ನ, ಅರ್ಜುನ ಪ್ರಶಸ್ತಿಯನ್ನು ಬಿಟ್ಟು ಹೋಗಿದ್ದಾರೆ. ಪ್ರಧಾನಿ ಕಚೇರಿಗೆ ಹೋಗದಂತೆ ದೆಹಲಿ ಪೊಲೀಸರು ತಡೆದಿದ್ದರಿಂದ ಕುಸ್ತಿಪಟು ಹೀಗೆ ಮಾಡಿದ್ದಾರೆ ಎನ್ನಲಾಗಿದೆ.

    ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಮಂಗಳವಾರ ಪ್ರಧಾನಿಗೆ ಬಹಿರಂಗ ಪತ್ರದಲ್ಲಿ ಪ್ರಶಸ್ತಿಗಳನ್ನು ಹಿಂದಿರುಗಿಸುವ ನಿರ್ಧಾರವನ್ನು ಪ್ರಕಟಿಸಿದ್ದರು. ಇದಕ್ಕೂ ಮುಂಚೆ, ಸಾಕ್ಷಿ ಮಲಿಕ್ ಅವರು ಕುಸ್ತಿಗೆ ಕಣ್ಣೀರ ವಿದಾಯ ಹೇಳಿದ್ದರು. ಇದಾದ ಕೆಲವು ದಿನಗಳ ನಂತರ ಬಜರಂಗ್ ಪುನಿಯಾ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದರು. ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಗೆ ಮಾಡಲು ಸಾಕಷ್ಟು ಕೆಲಸಗಳಿವೆ: ಕುಸ್ತಿ ಫೆಡರೇಷನ್‌ನಿಂದ ಬ್ರಿಜ್‌ ಭೂಷಣ್‌ ‘ಸನ್ಯಾಸತ್ವ’

    ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷರಾಗಿದ್ದಾಗ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯಲ್ಲಿ ಈ ಮೂವರು ಕುಸ್ತಿಪಟುಗಳು ಮುಂಚೂಣಿಯಲ್ಲಿದ್ದರು. ಬಿಜೆಪಿ ಸಂಸದರ ವಿರುದ್ಧ ಹಲವಾರು ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.

    ಕುಸ್ತಿಪಟು ಫೋಗಟ್‌, 2020 ರಲ್ಲಿ ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್ ರತ್ನ ಮತ್ತು 2016 ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದಿದ್ದರು. ಇದನ್ನೂ ಓದಿ: ನೂತನ ಕುಸ್ತಿ ಫೆಡರೇಶನ್‌ ಸಮಿತಿಯನ್ನೇ ಅಮಾನತುಗೊಳಿಸಿದ ಕ್ರೀಡಾ ಸಚಿವಾಲಯ

    ಬ್ರಿಜ್ ಭೂಷಣ್ ಅವರ ಆಪ್ತ ಸಹಾಯಕ ಸಂಜಯ್ ಸಿಂಗ್ ನೇತೃತ್ವದ ಸಮಿತಿಯು ಡಿಸೆಂಬರ್ 21 ರಂದು ಭಾರತದ ಕುಸ್ತಿ ಫೆಡರೇಶನ್‌ಗೆ ನಡೆದ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆದ್ದಿದ್ದಕ್ಕೆ ಫೋಗಟ್, ಎಂಎಸ್ ಮಲ್ಲಿಖ್, ಬಜರಂಗ್ ಪುನಿಯಾ ಬೇಸರ ವ್ಯಕ್ತಪಡಿಸಿದ್ದರು. ಕ್ರೀಡೆಗೆ ಸಂಬಂಧಿಸಿದಂತೆ ಸಾಂವಿಧಾನಿಕ ನಿಬಂಧನೆಗಳನ್ನು ಅನುಸರಿಸದ ಕಾರಣ ಈ ಸಮಿತಿಯನ್ನು ಕ್ರೀಡಾ ಸಚಿವಾಲಯ ಡಿ.24 ರಂದು ಅಮಾನತುಗೊಳಿಸಿತು.

  • ನೀರಜ್ ಚೋಪ್ರಾ ಸೇರಿದಂತೆ 12 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ

    ನೀರಜ್ ಚೋಪ್ರಾ ಸೇರಿದಂತೆ 12 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ

    ನವದೆಹಲಿ: ಒಲಿಂಪಿಕ್ಸ್​​ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ (Neeraj Chopra), ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಮತ್ತು ಫುಟ್ಬಾಲ್ ದಂತಕಥೆ ಸುನಿಲ್ ಛೆಟ್ರಿ ಸೇರಿದಂತೆ 12 ಕ್ರೀಡಾಪಟುಗಳನ್ನು ಈ ಬಾರಿಯ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ (Khel Ratna) ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

    NEERAJ

    ಪ್ಯಾರಾಲಿಂಪಿಕ್ಸ್ ಪದಕ ವಿಜೇತ, ಕನ್ನಡಿಗ ಐಎಎಸ್ ಅಧಿಕಾರಿ ಸುಭಾಶ್ ಯತಿರಾಜ್, ಕ್ರಿಕೆಟಿಗ ಶಿಖರ್ ಧವನ್ ಸೇರಿದಂತೆ 35 ಕ್ರೀಡಾಪಟುಗಳಿಗೆ ಅರ್ಜುನ ಅವಾರ್ಡ್ ಪ್ರಕಟಿಸಲಾಗಿದೆ. ಮೇಜರ್ ಧ್ಯಾನ್‍ಚಂದ್ ಖೇಲ್‍ರತ್ನ ಪ್ರಶಸ್ತಿಗೆ ಒಲಂಪಿಯನ್ ಅಥ್ಲಿಟ್ ನೀರಜ್ ಚೋಪ್ರಾ ಸೇರಿ 12 ಸಾಧಕರು ಭಾಜನರಾಗಿದ್ದಾರೆ. ಇದನ್ನೂ ಓದಿ:  ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

    ಒಲಂಪಿಯನ್‍ಗಳಾದ ಕುಸ್ತಿಪಟು ರವಿ ಕುಮಾರ್ ದಹಿಯಾ, ಹಾಕಿ ಆಟಗಾರ ಶ್ರೀಜೇಶ್, ಮನ್‍ಪ್ರೀತ್ ಸಿಂಗ್, ಬಾಕ್ಸರ್ ಲವ್ಲಿನಾ, ಫುಟ್ಬಾಲ್ ಆಟಗಾರ ಸುನೀಲ್ ಚೆಟ್ರಿ, ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್, ಪ್ಯಾರಾ ಒಲಂಪಿಯನ್‍ಗಳಾದ ಬ್ಯಾಡ್ಮಿಂಟನ್ ಆಟಗಾರ ಪ್ರಮೋದ್ ಭಗತ್, ಜಾವೆಲಿನ್ ತ್ರೋ ಕ್ರೀಡಾಪಟು ಸುಮಿತ್ ಅಂಟಿಲ್, ಶೂಟರ್ ಅವನಿ ಲಖರಾ, ಬ್ಯಾಡ್ಮಿಂಟನ್ ಆಟಗಾರ ಕೃಷ್ಣ ನಗರ್ ಮತ್ತು ಮನೀಶ್ ನರ್ವಾಲ್‍ಗೆ ಖೇಲ್‍ರತ್ನ ಪಶಸ್ತಿ ಘೋಷಣೆ ಆಗಿದೆ. ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಯನ್ನು ನವೆಂಬರ್ 13ರಂದು ದೆಹಲಿಯಲ್ಲಿ ಪ್ರದಾನ ಮಾಡಲಾಗುತ್ತದೆ.

  • ನೀರಜ್ ಚೋಪ್ರಾ ಸೇರಿದಂತೆ ಖೇಲ್ ರತ್ನಗೆ 11 ಸಾಧಕರ ಹೆಸರು ಶಿಫಾರಸು

    ನೀರಜ್ ಚೋಪ್ರಾ ಸೇರಿದಂತೆ ಖೇಲ್ ರತ್ನಗೆ 11 ಸಾಧಕರ ಹೆಸರು ಶಿಫಾರಸು

    ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ, ಅವನಿ ಲೇಖರಾ ಮತ್ತು ಮಹಿಳಾ ಕ್ರಿಕೆಟ್‍ನಲ್ಲಿ ಸಾಧನೆ ಮಾಡಿದ ಮಿಥಾಲಿ ರಾಜ್ ಸಹಿತ 11 ಕ್ರೀಡಾಪಟುಗಳ ಹೆಸರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

    ಇಂದು ಪ್ರಕಟಗೊಂಡ ಪ್ರಶಸ್ತಿ ಶಿಫಾರಸು ಪಟ್ಟಿಯಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ, ಪ್ಯಾರಾಲಂಪಿಕ್ಸ್ ಶೂಟಿಂಗ್‍ನಲ್ಲಿ ಚಿನ್ನದ ಪದಕ ಗೆದ್ದ ಅವನಿ ಲೇಖರಾ, ಮಹಿಳಾ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ರನ್ ಸಿಡಿಸಿ ವಿಶ್ವದಾಖಲೆ ಬರೆದಿರುವ ಮಿಥಾಲಿ ರಾಜ್ ಮತ್ತು ಫುಟ್‍ಬಾಲ್‍ನಲ್ಲಿ ಭಾರತದ ಪರ ಅತೀ ಹೆಚ್ಚು ಗೋಲ್ ಬಾರಿಸಿರುವ ಸುನೀಲ್ ಚೆಟ್ರಿ ಅವರ ಹೆಸರನ್ನೂ ಶಿಫಾರಸು ಮಾಡಲಾಗಿದೆ.  ಇದನ್ನೂ ಓದಿ: ಕೋವಿಡ್‍ನಿಂದ 41 ಗರ್ಭಿಣಿಯರು ಸಾವು, 149 ಮಂದಿ ಆತ್ಮಹತ್ಯೆ- ಕೇರಳ ಆರೋಗ್ಯ ಸಚಿವೆ

    ಈ ವರ್ಷ ವಿಶೇಷವಾಗಿ ಬದಲಾದ ಪ್ರಶಸ್ತಿಯ ಹೆಸರಿನ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಪಡೆಯಲಿದ್ದಾರೆ. ಈ ಹಿಂದೆ ರಾಜೀವ್ ಗಾಂಧಿ ಖೇಲ್ ರತ್ನ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡಲಾಗಿತ್ತು. ಆಗಸ್ಟ್ 6 ರಂದು ಪ್ರಧಾನಿ ನರೇಂದ್ರ ಮೋದಿ ಖೇಲ್ ರತ್ನ ಪ್ರಶಸ್ತಿಗೆ ಮರುನಾಮಕರಣ ಮಾಡಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಘೋಷಿಸಿದ್ದರು. ಇದನ್ನೂ ಓದಿ: ಮಂಡಿಯೂರಲು ಒಪ್ಪದ ಡಿ ಕಾಕ್ ಆಫ್ರಿಕಾ ತಂಡದಿಂದ ಔಟ್?

    ಖೇಲ್ ರತ್ನಗೆ ಶಿಫಾರಸುಗೊಂಡ ಕ್ರೀಡಾಪಟುಗಳು:
    ನೀರಜ್ ಚೋಪ್ರಾ (ಅಥ್ಲೆಟಿಕ್ಸ್), ರವಿಕುಮಾರ್ ದಹಿಯಾ (ಕುಸ್ತಿ), ಶ್ರೀಜೇಶ್ (ಹಾಕಿ) ಲವ್ಲಿನಾ (ಬಾಕ್ಸಿಂಗ್), ಅವನಿ ಲೆಖರಾ (ಶೂಟಿಂಗ್), ಸುನೀಲ್ ಚೆಟ್ರಿ (ಫುಟ್‍ಬಾಲ್), ಪ್ರಮೋದ್ ಭಗತ್ (ಬ್ಯಾಡ್ಮಿಂಟನ್), ಎಂ.ನರ್ವಾಲ್ (ಶೂಟಿಂಗ್), ಕೃಷ್ಣನಗರ್ (ಬ್ಯಾಡ್ಮಿಂಟನ್), ಮಿಥಾಲಿ ರಾಜ್(ಕ್ರಿಕೆಟ್) ಸುಮಿತ್ (ಅಥ್ಲೆಟಿಕ್ಸ್)

  • ಮುಂದೊಂದು ದಿನ ನರೇಂದ್ರ ಮೋದಿ ಸ್ಟೇಡಿಯಂಗೆ ಅಮಿತಾ ಶಾ ಪುತ್ರನ ಹೆಸರಿಡಬಹುದು: ಟಿಎಂಸಿ ಸಂಸದ

    ಮುಂದೊಂದು ದಿನ ನರೇಂದ್ರ ಮೋದಿ ಸ್ಟೇಡಿಯಂಗೆ ಅಮಿತಾ ಶಾ ಪುತ್ರನ ಹೆಸರಿಡಬಹುದು: ಟಿಎಂಸಿ ಸಂಸದ

    ನವದೆಹಲಿ: ಮುಂದೊಂದು ದಿನ ನರೇಂದ್ರ ಮೋದಿ ಸ್ಟೇಡಿಯಂಗೆ ಅಮಿತ್ ಶಾ ಅವರು ತಮ್ಮ ಪುತ್ರನ ಹೆಸರಿಡಬಹುದು ಎಂದು ಟಿಎಂಸಿ ಸಂಸದ ಮದನ್ ಮಿತ್ರ ವ್ಯಂಗ್ಯವಾಡಿದ್ದಾರೆ.

    ವಿಷಯಗಳ ವಿಷಯಾಂತರ ಮಾಡೋದು ಅವರ (ಬಿಜೆಪಿ) ಸಂಸ್ಕೃತಿ. ಇಂದು ಪ್ರಧಾನಿ ಮೋದಿ ಅವರು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರು ಬದಲಿಸಿದ್ದಾರೆ. ಬಹುಶಃ ಮುಂದೊಂದು ದಿನ ಅಮಿತ್ ಶಾ, ನರೇಂದ್ರ ಮೋದಿ ಸ್ಟೇಡಿಯಂ ಹೆಸರು ತೆಗೆದು ಪುತ್ರ ಜಯ್ ಶಾ ಹೆಸರಿಡುತ್ತಾರೆ ಅನ್ನಿಸುತ್ತೆ ಎಂದು ಟೀಕಿಸಿದ್ದಾರೆ. ಟಿಎಂಸಿಯ ಮತ್ತೋರ್ವ ಸಂಸದ ಸುಖೇಂದ್ರ ಕೇಶವ್ ರಾಯ್, ಇದೊಂದು ಕೆಳಮಟ್ಟದ ರಾಜಕೀಯ ಎಂದು ಕಿಡಿಕಾರಿದ್ದಾರೆ.

    ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಕೇಂದ್ರ ಸರ್ಕಾರ ಮೇಜರ್ ಧ್ಯಾನ್ ಚಂದ್ ಎಂದು ಬದಲಿಸಿದೆ. ಕೇಂದ್ರದ ಈ ನಿರ್ಣಯ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಮೋದಿ ಸರ್ಕಾರದ ಈ ನಿರ್ಣಯವನ್ನು ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳು ಖಂಡಿಸಿವೆ.

    1991-92 ರಲ್ಲಿ ಈ ಖೇಲ್ ರತ್ನ ಪ್ರಶಸ್ತಿಯನ್ನು ನೀಡಲು ಆರಂಭಿಸಿದ್ದು, ಕ್ರೀಡಾ ಸಾಧಕರಿಗೆ 25 ಲಕ್ಷ ರೂ. ನಗದು ಹಣವನ್ನು ಬಹುಮಾನವಾಗಿ ನೀಡಲಾಗುತ್ತದೆ. ಇದನ್ನೂ ಓದಿ: ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಹೆಸರು ಬದಲಾವಣೆ ಹಿಂದೆ ಮೋದಿ ಸೇಡಿನ ರಾಜಕಾರಣ: ಎಸ್. ಮನೋಹರ್

  • ರನ್ ಮಷಿನ್ ಕೊಹ್ಲಿಗೆ ಖೇಲ್ ರತ್ನ ಪ್ರಶಸ್ತಿ – ಯಾರಿಗೆ ಯಾವ ಪ್ರಶಸ್ತಿ?

    ರನ್ ಮಷಿನ್ ಕೊಹ್ಲಿಗೆ ಖೇಲ್ ರತ್ನ ಪ್ರಶಸ್ತಿ – ಯಾರಿಗೆ ಯಾವ ಪ್ರಶಸ್ತಿ?

    – ಕನ್ನಡಿಗ ಸಿಎ ಕುಟ್ಟಪ್ಪ ದ್ರೋಣಚಾರ್ಯ, ರೋಹನ್ ಬೋಪಣ್ಣಗೆ ಅರ್ಜುನ ಪ್ರಶಸ್ತಿ

    ನವದೆಹಲಿ: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ವೇಟ್ ಲಿಫ್ಟಿಂಗ್ ಮೀರಾಬಾಯಿ ಚಾನುಗೆ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

    ಬಾಕ್ಸಿಂಗ್ ಕೋಚ್ ಕನ್ನಡಿಗ ಸಿಎ ಕುಟ್ಟಪ್ಪ ಸೇರಿದಂತೆ ಎಂಟು ಮಂದಿ ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದಿದ್ದ ಶೂಟರ್ ರಾಹಿ ಸರ್ನೋಬತ್, ಅಥ್ಲೆಟ್ ಹಿಮಾದಾಸ್, ಟೆನ್ನಿಸ್ ಆಟಗಾರ ಕನ್ನಡಿಗ ರೋಹನ್ ಬೋಪಣ್ಣ, ಜಾವೆಲಿನ್ ಥ್ರೋ ಆಟಗಾರ ನೀರಜ್ ಚೋಪ್ರಾ ಸೇರಿದಂತೆ 20 ಮಂದಿ ಅರ್ಜುನ ಪ್ರಶಸ್ತಿ ಘೋಷಣೆಯಾಗಿದೆ. ಈ ಪ್ರಶಸ್ತಿಗಳನ್ನ ಸೆಪ್ಟೆಂಬರ್ 25ರಂದು ರಾಷ್ಟ್ರಪತಿ ಭವನದಲ್ಲಿ ವಿತರಿಸಲಾಗುತ್ತದೆ.

    https://twitter.com/IndiaSports/status/1042745314510163968

    ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರುವ ಕೊಹ್ಲಿ ಹೆಸರು ಈ ಹಿಂದೆ 2016 ಹಾಗೂ 2017 ರಲ್ಲೂ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿತ್ತು. 2017 ರಲ್ಲಿ ಕೊಹ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು. ಉಳಿದಂತೆ ಖೇಲ್ ರತ್ನ ಪ್ರಶಸ್ತಿ ಪಡೆದ 3ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಯನ್ನು ಕೊಹ್ಲಿ ಪಡೆದಿದ್ದಾರೆ. ಈ ಹಿಂದೆ 1997 ರಲ್ಲಿ ಸಚಿನ್ ತೆಂಡೂಲ್ಕರ್, 2007 ರಲ್ಲಿ ಎಂಎಸ್ ಧೋನಿ ಖೇಲ್ ರತ್ನ ಪ್ರಶಸ್ತಿ ಪಡೆದಿದ್ದರು. ಮಹಿಳಾ ಕ್ರಿಕೆಟ್ ತಂಡದ ಸ್ಮೃತಿ ಮಂದಾನ ಅರ್ಜುನ ಪ್ರಶಸ್ತಿ, ಕ್ರಿಕೆಟ್ ಕೋಚ್ ತಾರಕ್ ಸಿನ್ಹಾ ಜೀವಮಾನ ಸಾಧನೆಗಾಗಿ ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.

    https://twitter.com/PIB_India/status/1042713412621357056

    ರಾಜೀವ್ ಗಾಂಧಿ ಖೇಲ್‍ರತ್ನ ಪ್ರಶಸ್ತಿ: ವಿರಾಟ್ ಕೊಹ್ಲಿ (ಕ್ರಿಕೆಟ್), ಮೀರಾಬಾಯಿ ಚಾನು (ವೇಟ್‍ಲಿಫ್ಟಿಂಗ್).

    ದ್ರೋಣಾಚಾರ್ಯ ಪ್ರಶಸ್ತಿ: ಕುಟ್ಟಪ್ಪ (ಬಾಕ್ಸಿಂಗ್), ವಿಜಯ್ ಶರ್ಮಾ (ವೇಟ್‍ಲಿಫ್ಟಿಂಗ್), ಸಿ.ಎ. ಶ್ರೀನಿವಾಸ್ ರಾವ್ (ಟೇಬಲ್ ಟೆನ್ನಿಸ್), ಎಸ್.ಎಸ್. ಪನ್ನು (ಅಥ್ಲೆಟಿಕ್ಸ್), ಕ್ಲಾರೆನ್ಸ್ ಲೋಬೊ (ಹಾಕಿ), ತಾರಕ್ ಸಿನ್ಹಾ (ಕ್ರಿಕೆಟ್), ಜೀವನ್ ಕುಮಾರ್ ಶರ್ಮ (ಜೂಡೋ), ವಿ.ಆರ್. ಬೀಡು (ಅಥ್ಲೆಟಿಕ್ಸ್).

    ಧ್ಯಾನ್‍ಚಂದ್ ಪ್ರಶಸ್ತಿ : ಸತ್ಯದೇವ್ ಪ್ರಸಾದ್ (ಆರ್ಚರಿ), ಭರತ್ ಚೆಟ್ರಿ (ಹಾಕಿ), ಬಾಬ್ಬಿ ಅಲೋಶಿಯಸ್ (ಅಥ್ಲೆಟಿಕ್ಸ್), ದಾದು ಚೌಗುಲೆ (ಕುಸ್ತಿ).

    ಅರ್ಜುನ ಪ್ರಶಸ್ತಿ : ನೀರಜ್ ಚೋಪ್ರಾ (ಅಥ್ಲೆಟಿಕ್ಸ್), ಎನ್. ಸಿಕ್ಕಿ ರೆಡ್ಡಿ (ಬ್ಯಾಡ್ಮಿಂಟನ್), ಪೂಜಾ ಕಾದಿಯನ್ (ವುಶು), ಜಿನ್ಸನ್ ಜಾನ್ಸನ್ (ಅಥ್ಲೆಟಿಕ್ಸ್), ಹಿಮಾ ದಾಸ್ (ಅಥ್ಲೆಟಿಕ್ಸ್), ಸತೀಶ್ ಕುಮಾರ್ (ಬಾಕ್ಸಿಂಗ್), ಸ್ಮತಿ ಮಂಧನಾ (ಕ್ರಿಕೆಟ್), ಶುಭಂಕರ್ ಶರ್ಮ (ಗಾಲ್ಫ್), ಮನ್‍ಪ್ರೀತ್ ಸಿಂಗ್ (ಹಾಕಿ), ಸವಿತಾ ಪೂನಿಯ (ಹಾಕಿ), ರವಿ ರಾಥೋರ್ (ಪೋಲೊ), ರಾಹಿ ಸರನೋಬತ್ (ಶೂಟಿಂಗ್), ಅಂಕುರ್ ಮಿತ್ತಲ್ (ಶೂಟಿಂಗ್), ಶ್ರೇಯಸಿ ಸಿಂಗ್ (ಶೂಟಿಂಗ್), ಮಣಿಕಾ ಬಾತ್ರಾ (ಟೇಬಲ್ ಟೆನ್ನಿಸ್), ಜಿ. ಸಥಿಯನ್ (ಟೇಬಲ್ ಟೆನ್ನಿಸ್), ರೋಹನ್ ಬೋಪಣ್ಣ (ಟೆನ್ನಿಸ್), ಸುಮಿತ್ (ಕುಸ್ತಿ), ಅಂಕುರ್ ಧಾಮ (ಪ್ಯಾರಾ ಅಥ್ಲೆಟಿಕ್ಸ್), ಮನೋಜ್ ಸರ್ಕಾರ್ (ಪ್ಯಾರಾ ಅಥ್ಲೆಟಿಕ್ಸ್).

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv