Tag: Khatra Dangerous Cinema

  • ಅಪ್ಸರಾ ರಾಣಿ ಮೇಲೆ ರಾಮ್ ಗೋಪಾಲ್ ವರ್ಮಾಗೆ ಅಷ್ಟೊಂದು ಪ್ರೀತಿಯಾ?

    ಅಪ್ಸರಾ ರಾಣಿ ಮೇಲೆ ರಾಮ್ ಗೋಪಾಲ್ ವರ್ಮಾಗೆ ಅಷ್ಟೊಂದು ಪ್ರೀತಿಯಾ?

    ರಾಮ್ ಗೋಪಾಲ್ ವರ್ಮಾ ಅವರ ಖತ್ರಾ ಡೇಂಜರಸ್ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿರುವ ಅಪ್ಸರಾ ರಾಣಿ ವಿಚಿತ್ರ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಅದಕ್ಕೆ ರಾಮ್ ಗೋಪಾಲ್ ವರ್ಮಾ ಸಖತ್ತಾಗಿಯೇ ಉತ್ತರ ಕೊಟ್ಟಿದ್ದಾರೆ. ಇವಿಷ್ಟೂ ಆಗಿದ್ದು ಅವರ ಟ್ವಿಟರ್ ಖಾತೆಗಳಲ್ಲಿ ಅನ್ನುವುದು ವಿಶೇಷ. ಇದನ್ನೂ ಓದಿ : ಸಿನಿಮಾ ಶೀರ್ಷಿಕೆ ಮೂಲಕ ಅಪ್ಪುನ ನೆನಪಿಸಿಕೊಂಡ ಗೋಲ್ಡನ್ ಸ್ಟಾರ್ : ಗಣಿ-ಗುಬ್ಬಿ ಕಾಂಬಿನೇಷನ್ ಚಿತ್ರಕ್ಕೆ ‘ಬಾನದಾರಿಯಲ್ಲಿ’ ಟೈಟಲ್

    ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ಖತ್ರಾ ಡೇಂಜರಸ್’ ಸಿನಿಮಾದಲ್ಲಿ ಅಪ್ಸರಾ ರಾಣಿ ನಟಿಸಿದ್ದಾರೆ. ಇದೊಂದು ಲೆಸ್ಬಿಯನ್ ಜೋಡಿಯ ಕಥೆಯಾಗಿದ್ದು, ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಸಿನಿಮಾ ಬರುತ್ತಿದೆ ಎಂದು ಘೋಷಿಸಿಕೊಂಡಿದ್ದಾರೆ ವರ್ಮಾ. ಈ ಸಿನಿಮಾದಲ್ಲಿ ಅಪ್ಸರಾ ಒಂದು ಪಾತ್ರ ಮಾಡಿದ್ದರೆ, ಇವರ ಜತೆ ನೈನಾ ಗಂಗೂಲಿ ಮತ್ತೊಂದು ಪಾತ್ರವನ್ನು ನಿರ್ವಹಿಸಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ ಮತ್ತು ಟೀಸರ್ ಗಮನ ಸೆಳೆದಿವೆ.

     

    ಲೆಸ್ಬಿಯನ್ ಕಥೆಯಾಗಿದ್ದರೂ, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥಾ ಹಂದರವನ್ನು ಈ ಸಿನಿಮಾ ಹೊಂದಿದೆಯಂತೆ. ಹೇಳಿ ಕೇಳಿ ಸಲಿಂಗಿಗಳ ಕಾಮಕಥನ ಈ ಸಿನಿಮಾದಲ್ಲಿದೆ. ಹಾಗಾಗಿ ಅಪ್ಸರಾ ರಾಣಿ ಒಂದು ಪುಸ್ತಕವನ್ನು ಹಿಡಿದುಕೊಂಡು, ಹಾಟ್ ಹಾಟ್ ಆಗಿರುವ ಫೋಸ್ ಕೊಟ್ಟು ಫೋಟೋ ತಗೆಸಿಕೊಂಡಿದ್ದಾರೆ. ಅದನ್ನು ಪೋಸ್ಟ್ ಮಾಡಿ “ನೀವು ಪುಸ್ತಕವನ್ನು ಓದಲು ಬಯಸುತ್ತಿರೋ ಅಥವಾ ನನ್ನನ್ನು ಓದಲು ಬಯಸುತ್ತೀರೋ” ಎಂದು ಕೇಳಿದ್ದಾರೆ. ಅದಕ್ಕೆ ರಾಮ್ ಗೋಪಾಲ್ ವರ್ಮಾ ಕ್ಷಣವೂ ಯೋಚಿಸಿದೆ “ನಿನ್ನನ್ನು ಓದುತ್ತೇನೆ” ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ : ಜುಲೈ 28ರಂದು ಗುಮ್ಮನ ಕಥೆ – ಯುಗಾದಿ ದಿನ ಡಬಲ್ ಖುಷಿ ಕೊಟ್ಟ ‘ವಿಕ್ರಾಂತ್ ರೋಣ’ ಟೀಮ್

    ಇದೊಂದು ಸಿನಿಮಾ ಪ್ರಚಾರದ ತಂತ್ರವೂ ಆಗಿದ್ದು, ಅಪ್ಸರಾ ನಟನೆಗೆ ಅಭಿಮಾನಿಗಳು ಭೇಷ್ ಅಂದಿದ್ದಾರೆ. ರಾಮ್ ಗೋಪಾಲ್ ವರ್ಮಾ ಅವರಿಗೆ ಹಲವರು ಸಲಹೆಗಳನ್ನು ನೀಡಿದ್ದಾರೆ.