Tag: kharkiv

  • ಊಟಕ್ಕೆ ಹೊರಗೆ ಹೋದರೆ ವಾಪಸ್ ಬದುಕಿ ಬರುವ ನಂಬಿಕೆ ಇರಲಿಲ್ಲ: ಹಾಸನದ ವಿದ್ಯಾರ್ಥಿ

    ಊಟಕ್ಕೆ ಹೊರಗೆ ಹೋದರೆ ವಾಪಸ್ ಬದುಕಿ ಬರುವ ನಂಬಿಕೆ ಇರಲಿಲ್ಲ: ಹಾಸನದ ವಿದ್ಯಾರ್ಥಿ

    ಹಾಸನ: ರಷ್ಯಾ ದಾಳಿಗೆ ಸಿಲುಕಿರುವ ಉಕ್ರೇನ್ ದೇಶದ ಖಾರ್ಕಿವ್‌ನಲ್ಲಿ ಕಟ್ಟಡಗಳು ನಾಶವಾಗಿದ್ದು, ನಾವು ವಿದ್ಯಾಭ್ಯಾಸ ಮಾಡಲು ಹೋಗಿದ್ದ ಉಕ್ರೇನ್ ಇದೇನಾ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸದ್ಯದ ಉಕ್ರೇನ್ ಸ್ಥಿತಿಯ ಬಗ್ಗೆ ಹಾಸನದ ಗಗನ್ ಗೌಡ ಆತಂಕ ಹೊರಹಾಕಿದ್ದಾರೆ.

    ಎಂಬಿಬಿಎಸ್ ಓದಲು ಹೋಗಿದ್ದ ಗಗನ್ ಗೌಡ ಯುದ್ಧ ನಡೆಯುತ್ತಿದ್ದ ಖಾರ್ಕಿವ್ ಪ್ರದೇಶದಲ್ಲಿ ಸಿಲುಕಿಕೊಂಡಿದ್ದರು. ಯುದ್ಧದ ಸಂದರ್ಭ ಬಂಕರ್‌ನಲ್ಲಿ ರಕ್ಷಣೆ ಪಡೆದಿದ್ದ ಗಗನ್ ಊಟ, ನೀರಿಲ್ಲದೆ ಕಾಲ ಕಳೆದಿದ್ದೆವು. ಊಟಕ್ಕೆ ಹೊರಗೆ ಹೋದರೆ ಮತ್ತೆ ವಾಪಸ್ ಬರುವ ನಂಬಿಕೆ ಇರಲಿಲ್ಲ. ಹೀಗಾಗಿ ಜೀವ ಇದ್ದರೆ ಅಲ್ಲವೆ ಬದುಕು ಎಂದು ಹಸಿವನ್ನು ಸಹಿಸಿಕೊಂಡು ಬಂಕರ್‌ನಲ್ಲೇ ಇದ್ದೆವು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು. ಇದನ್ನೂ ಓದಿ: ಮತ್ತೆ 4 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲಿದ್ದಾರಾ ವಿಶಾಲ್ ಗಾರ್ಗ್?

    ಅಲ್ಲಿಯ ಪರಿಸ್ಥಿತಿ ಭಯಾನಕವಾಗಿತ್ತು. ನಾವು ಇದ್ದ ಸ್ಥಳದ ಸುತ್ತಮುತ್ತ ಬಾಂಬ್ ದಾಳಿಯಾಗುತ್ತಿದ್ದು, ಅದರ ಸದ್ದು ಆತಂಕ ಉಂಟುಮಾಡಿತ್ತು. ಅಂತಿಮವಾಗಿ ಕಾರ್ಕಿವ್ ಪ್ರದೇಶವನ್ನು ಕಾಲ್ನಡಿಗೆಯಲ್ಲಿ ತೊರೆದು, ರೈಲನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಂದೆವು ಎಂದು ತಿಳಿಸಿದರು. ಇದನ್ನೂ ಓದಿ: ಪುಟಿನ್‍ನ್ನು ತಡೆಯದಿದ್ದರೇ ಯಾರೂ ಸುರಕ್ಷಿತವಾಗಿರಲ್ಲ: ಉಕ್ರೇನ್ ಅಧ್ಯಕ್ಷರ ಪತ್ನಿ

    ನಾವು ಭಾರತಕ್ಕೆ ವಾಪಸ್ ಬರುವಲ್ಲಿ ನಮ್ಮ ಸರ್ಕಾರ ನಮಗೆ ಮಾಡಿದ ಸಹಾಯಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

  • ಉಕ್ರೇನ್ ವಾರ್ – ರಷ್ಯಾದ ಮೇಜರ್ ಜನರಲ್ ಸಾವು

    ಉಕ್ರೇನ್ ವಾರ್ – ರಷ್ಯಾದ ಮೇಜರ್ ಜನರಲ್ ಸಾವು

    ಕೀವ್: ಖಾರ್ಕಿವ್ ಯುದ್ಧದಲ್ಲಿ ರಷ್ಯಾದ ಜನರಲ್ ವಿಟಾಲಿ ಗೆರಾಸಿಮೊವ್ ಸೋಮವಾರ ಸಾವನ್ನಪ್ಪಿದ್ದು, ಹಿರಿಯ ಕಮಾಂಡರ್ ಕಳೆದುಕೊಂಡು ರಷ್ಯಾಗೆ ಮತ್ತೊಂದು ದೊಡ್ಡ ನಷ್ಟವುಂಟಾಗಿದೆ ಎಂದು ಉಕ್ರೇನ್ ತಿಳಿಸಿದೆ.

    ಮೇಜರ್ ಜನರಲ್ ವಿಟಾಲಿ ಗೆರಾಸಿಮೊವ್ ರಷ್ಯಾದ ಕೇಂದ್ರ ಮಿಲಿಟರಿ ಜಿಲ್ಲೆಯ 41 ನೇ ಸೈನ್ಯದ ಮೊದಲ ಉಪ ಕಮಾಂಡರ್ ಆಗಿದ್ದರು. ಎರಡನೇ ಚೆಚೆನ್ ಯುದ್ಧ ಮತ್ತು ಸಿರಿಯಾದಲ್ಲಿ ನಡೆದ ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳಲ್ಲಿ ವಿಟಾಲಿ ಗೆರಾಸಿಮೊವ್ ಅವರ ಪಾತ್ರವಿದ್ದು, ಅವರಿಗೆ 2014 ರಲ್ಲಿ ‘ಕ್ರೈಮಿಯಾ ಹಿಂದಿರುಗುವಿಕೆಗಾಗಿ ಪದಕವನ್ನು ನೀಡಲಾಗಿತ್ತು. ಇದನ್ನೂ ಓದಿ: ರೇಣುಕಾಚಾರ್ಯ, ಪ್ರತಾಪಸಿಂಹ ವಿರುದ್ಧದ 4 ಕೇಸ್‌ ವಾಪಸ್‌ ಪಡೆದ ಸರ್ಕಾರ- ಹೈಕೋರ್ಟ್‌ ಗರಂ

    ಈಗಾಗಲೇ ರಷ್ಯಾದ ಅನೇಕ ಹಿರಿಯ ರಕ್ಷಣಾ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ. ರಷ್ಯಾ ಸೈನ್ಯದಲ್ಲಿನ ಸಂವಹನ ಮತ್ತು ಘಟಕಗಳ ಸ್ಥಳಾಂತರಿಸುವಿಕೆಯೊಂದಿಗೆ ಗಮನಾರ್ಹ ಸಮಸ್ಯೆಗಳನ್ನು ಸೂಚಿಸುತ್ತದೆ ಎಂದು ಉಕ್ರೇನಿಯನ್ ರಕ್ಷಣಾ ಸಚಿವಾಲಯ ಹೇಳಿದೆ. ಇದನ್ನೂ ಓದಿ: ಬಿಹಾರ ವರನ ಕೈ ಹಿಡಿದ ಜರ್ಮನಿ ಮಹಿಳೆ

    ರಷ್ಯಾದ 7ನೇ ವಾಯುಸೇನೆ ವಿಭಾಗದ ಕಮಾಂಡಿಂಗ್ ಜನರಲ್ ಆಂಡ್ರೇ ಸುಖೋವೆಟ್ಸ್ಕಿ ಮತ್ತು 41 ನೇ ಕಂಬೈನ್ಡ್ ಆಮ್ರ್ಸ್ ಆರ್ಮಿಯ ಉಪ ಕಮಾಂಡರ್ ಅನ್ನು ಸ್ನೈಪರ್ ಮೃತಪಟ್ಟ ನಂತರ ಇದೀಗ ವಿಟಾಲಿ ಗೆರಾಸಿಮೊವ್ ಸಾವನ್ನಪ್ಪಿದ್ದಾರೆ.

  • ಉಕ್ರೇನ್‍ನ 4 ನಗರಗಳಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ

    ಉಕ್ರೇನ್‍ನ 4 ನಗರಗಳಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ

    ಕೀವ್: ರಷ್ಯಾ ಎರಡನೇ ಬಾರಿಗೆ ಉಕ್ರೇನ್‍ನಲ್ಲಿ ತಾತ್ಕಾಲಿಕವಾಗಿ ಕದನ ವಿರಾಮ ಘೋಷಿಸಿದ್ದು, ಕೀವ್, ಖಾರ್ಕಿವ್, ಸುಮಿ, ಮರಿಯುಪೋಲ್‍ನ ಜನರಿಗೆ ನಗರವನ್ನು ಬಿಟ್ಟು ತೆರಳಲು ಸೂಚಿಸಿದೆ.

    ರಷ್ಯಾ ಉಕ್ರೇನ್‍ನ ಮೇಲೆ ನಡೆಸುತ್ತಿರುವ ದಾಳಿ 12ನೇ ದಿನಕ್ಕೆ ಕಾಲಿಟ್ಟಿದ್ದು, ಎರಡನೇ ಬಾರಿಗೆ 4 ನಗರಗಳಲ್ಲಿ ಕದನ ವಿರಾಮ ಘೋಷಣೆ ಮಾಡಿದೆ. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 12:30ನಂತರ ತಾತ್ಕಾಲಿಕವಾಗಿ ಕದನ ವಿರಾಮ ಘೋಷಣೆ ಮಾಡಿದೆ.

    ಫ್ರಾನ್ಸ್ ಅಧ್ಯಕ್ಷರ ಸೂಚನೆ ಮೇರೆಗೆ ಕದನ ವಿರಾಮ ಘೋಷಿಸಲಾಗಿದೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಕದನ ವಿರಾಮಕ್ಕೆ ವೈಯಕ್ತಿಕವಾಗಿ ಕೋರಿಕೆಯನ್ನು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ 4 ನಗರಗಳಲ್ಲಿ ಕದನ ವಿರಾಮವನ್ನು ಘೋಷಿಸಿ, ನಾಗರಿಕರನ್ನು ತೆರಳುವಂತೆ ಸೂಚಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಕನದ ವಿರಾಮದ ನಂತರದಲ್ಲಿ ಉಕ್ರೇನ್‍ನ ಈ 4 ನಗರಗಳಲ್ಲಿ ರಷ್ಯಾ ಭಾರೀ ದಾಳಿ ನಡೆಸುವ ಸಾಧ್ಯತೆಯಿದೆ. ಇದನ್ನೂ ಓದಿ: ಮಧ್ಯೆ ಕೆಟ್ಟು ನಿಂತ ಬಸ್ – ರೊಮೆನಿಯಾ ತಲುಪದ 37 ಕನ್ನಡಿಗರು

    ಈಗಾಗಲೇ ಉಕ್ರೇನ್‍ನ ಅಣು ವಿದ್ಯುತ್ ಸ್ಥಾವರಗಳ ಮೇಲೆ ರಷ್ಯಾ ದಾಳಿ ಮಾಡಿದ್ದು, ಅಣು ವಿದ್ಯುತ್ ಸ್ಥಾವರಗಳ ಮೇಲೆ ದಾಳಿಯಿಂದ ದೊಡ್ಡ ಪ್ರಮಾದ ಉಂಟಾಗಿದೆ. ಚೆರ್ನೋಬಿಲ್, ಝಫೋರಿಝೀಯಾ ಎರಡು ಸ್ಥಾವರಗಳನ್ನು ರಷ್ಯಾ ಕೈವಶ ಮಾಡಿಕೊಂಡಿದೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ಧ – 14 ವರ್ಷದ ಬಳಿಕ ಕಚ್ಚಾತೈಲ ಬೆಲೆ ಭಾರೀ ಏರಿಕೆ

  • ಖಾರ್ಕಿವ್‌ನಲ್ಲಿ ಸಿಲುಕಿದ್ದ ಎಲ್ಲಾ ಭಾರತೀಯರ ರಕ್ಷಣೆ – ಎಂಇಎ

    ಖಾರ್ಕಿವ್‌ನಲ್ಲಿ ಸಿಲುಕಿದ್ದ ಎಲ್ಲಾ ಭಾರತೀಯರ ರಕ್ಷಣೆ – ಎಂಇಎ

    ನವದೆಹಲಿ: ಉಕ್ರೇನ್‌ನ 2 ನಗರಗಳಲ್ಲಿ ರಷ್ಯಾ 6 ಗಂಟೆಗಳ ಕದನ ವಿರಾಮ ಘೋಷಿಸಿದ ಬಳಿಕ ಭಾರತೀಯರನ್ನು ಸ್ಥಳಾಂತರಿಸುವ ಪ್ರಕ್ರಿಯೆ ವೇಗ ಪಡೆದುಕೊಂಡಿದೆ. ಇದೀಗ ಖಾರ್ಕಿವ್ ನಗರದಲ್ಲಿ ಯಾವುದೇ ಭಾರತೀಯರು ಸಿಲುಕಿಕೊಂಡಿಲ್ಲ ಎಂದು ಭಾರತೀಯ ವಿದೇಶಾಂಗ ಸಚಿವಾಲಯ(ಎಂಇಎ) ದೃಢಪಡಿಸಿದೆ.

    ಉಕ್ರೇನ್‌ನ ಪ್ರಮುಖ ನಗರಗಳಾದ ಖಾರ್ಕಿವ್‌ನಿಂದ ಎಲ್ಲಾ ಭಾರತೀಯರನ್ನು ರಕ್ಷಿಸಲಾಗಿದೆ. ಆದರೆ ಸುಮಿಯಲ್ಲಿ ಇನ್ನೂ 600ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗುವಲ್ಲಿ ನಾವು ಹೆಚ್ಚಿನ ಗಮನ ಹರಿಸುತ್ತಿದ್ದೇವೆ ಎಂದು ಎಂಇಎ ತಿಳಿಸಿದೆ. ಇದನ್ನೂ ಓದಿ: ರಾಯಭಾರ ಕಚೇರಿಯವರು ಕರೆದಾಗ ತಾಯಿಯೇ ಮಕ್ಕಳನ್ನು ಕರೆದಂತಹ ಅನುಭವ ಆಯ್ತು: ವಿದ್ಯಾರ್ಥಿನಿ ರುಬಿನಾ

    ಉಕ್ರೇನ್‌ನಲ್ಲಿ ಇನ್ನೂ ಎಷ್ಟು ಭಾರತೀಯರು ಸಿಲುಕಿದ್ದಾರೆ ಎಂಬುದನ್ನು ಸರ್ಕಾರ ನೋಡುತ್ತಿದೆ. ಇಂದು ಪಿಸೊಚಿನ್‌ಗೆ ಬಂದಿರುವ ಎಲ್ಲಾ ಭಾರತೀಯರನ್ನು ತವರಿಗೆ ಕರೆಸಿಕೊಳ್ಳುವ ಕಾರ್ಯವನ್ನು ಪೂರ್ಣಗೊಳಿಸುವಂತೆ ಸರ್ಕಾರ ಆದೇಶಿಸಿದೆ. ಸದ್ಯ ಪಿಸೊಚಿನ್‌ನಲ್ಲಿ 298 ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ. ಇಂದು ಈ ವಿದ್ಯಾರ್ಥಿಗಳ ಸ್ಥಳಾಂತರ ಕಾರ್ಯ ಪುರ್ಣಗೊಳ್ಳುವ ಭರವಸೆ ಇದೆ ಎಂದು ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಜೀವದ ಮೇಲೆ ಅಸೆ ಬಿಟ್ಟು, ಒಂದು ವಾರ ನಡೆದುಕೊಂಡು ಬಂದು ಉಕ್ರೇನ್ ದಾಟಿದೆ: ಸೀನ್ಯ

    ಕಳೆದ 24 ಗಂಟೆಗಳಲ್ಲಿ 5 ವಿಮಾನಗಳು ಭಾರತ ತಲುಪಿದ್ದು, ಸುಮಾರು 2,900 ವಿದ್ಯಾರ್ಥಿಗಳನ್ನು ಕರೆಸಿಕೊಳ್ಳಲಾಗಿದೆ. ಇದುವರೆಗೆ ಸುಮಾರು 13,300 ಜನರು ಭಾರತಕ್ಕೆ ಮರಳಿದ್ದಾರೆ. ಮುಂದಿನ 24 ಗಂಟೆಗಳಿಗೆ 13 ವಿಮಾನಗಳನ್ನು ನಿಯೋಜಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

  • ಜೀವ ಭಯದಲ್ಲಿ 40ಕಿ.ಮೀ ಯುದ್ಧಭೂಮಿಯಲ್ಲೇ ನಡೆದುಕೊಂಡು ಹೋದ ವಿದ್ಯಾರ್ಥಿಗಳು

    ಜೀವ ಭಯದಲ್ಲಿ 40ಕಿ.ಮೀ ಯುದ್ಧಭೂಮಿಯಲ್ಲೇ ನಡೆದುಕೊಂಡು ಹೋದ ವಿದ್ಯಾರ್ಥಿಗಳು

    ಬೀದರ್ : ಉಕ್ರೇನ್‍ನಲ್ಲಿ ಕರ್ನಾಟಕ ಮೂಲದ ನವೀನ್ ಸಾವಿನ ಬೆನ್ನಲ್ಲೇ ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿದ್ದು ಬೀದರ್ ಮೂಲದ ಶಶಾಂಕ್ ಹಾಗೂ ವಿವೇಕ್ ಇನ್ನೂ ಖಾರ್ಕಿವ್‍ನಲ್ಲೇ ಸಿಲುಕಿರುವುದು ಆತಂಕಕ್ಕೆ ಕಾರಣವಾಗಿದೆ.

    ಆತಂಕದಲ್ಲಿ ನಿನ್ನೆ ಖಾರ್ಕಿವ್‍ನಿಂದ ರೈಲ್ವೆ ಸ್ಟೇಷನ್‍ಗೆ ಹೋಗಿ ರೈಲು ಸಿಗದ ಕಾರಣ ಅಲ್ಲಿಂದ ಖಾರ್ಕಿವ್‍ನ ಪಿಶೋಚಿನ್‍ಗೆ ನಡೆದುಕೊಂಡು ಹೋಗಿ ತಂಗಿದ್ದಾರೆ. ಕ್ಷಿಪಣಿ, ಮಿಸೈಲ್ ಗಳ ಸ್ಫೋಟ, ಟ್ಯಾಂಕರ್ ಸದ್ದಿನ ನಡುವೆ ಜೀವ ಭಯದಲ್ಲಿಯೇ 40 ಕಿಲೋ ಮೀಟರ್ ನಡೆದುಕೊಂಡು ಹೋಗುತ್ತಾ ವಿದ್ಯಾರ್ಥಿಗಳು ಪಿಶೋಚಿನ್ ನಗರ ತಲುಪಿದ್ದಾರೆ. ಇದನ್ನೂ ಓದಿ: ನಮಗೆ ಇನ್ನೂ ಐದು ವರ್ಷ ಕೊಡಿ : ಅಮಿತ್ ಶಾ

    ಯುದ್ಧದ ನಡುವೆ ನಡೆಯುತ್ತಾ ಸಾಗಿದ ರೋಚಕದ ಬಗ್ಗೆ ವೀಡಿಯೋ ಕಾಲ್‍ನಲ್ಲಿ ತಾಯಿ ಜೊತೆ ಶಶಾಂಕ್ ಹಂಚಿಕೊಂಡಿದ್ದಾರೆ. ಇನ್ನೂ ಉಳಿದ ಅಮಿತ್  ಬಹುತೇಕ ಸೇಫಾಗಿದ್ದು ಖಾರ್ಕಿವ್‍ನಿಂದ ರೈಲು ಮೂಲಕ ಲ್ವಿವ್, ಲ್ವಿವ್ ಟೂ ಪೋಲ್ಯಾಂಡ್ ಕಡೆಯಿಂದ ಬರುತ್ತಿದ್ದಾರೆ. ಇದನ್ನೂ ಓದಿ: ವೆಲ್ ಕಮ್ ಬ್ಯಾಕ್! ನಿಮ್ಮ ಕುಟುಂಬಗಳು ನಿಮಗಾಗಿ ಉಸಿರು ಬಿಗಿಹಿಡಿದು ಕಾಯುತ್ತಿವೆ: ಸ್ಮೃತಿ ಇರಾನಿ

    ಬಸವಕಲ್ಯಾಣದ ವೈಷ್ಣವಿ ಕೂಡಾ ಖಾರ್ಕಿವ್ ನಿಂದ ರೈಲು ಮೂಲಕ ಹಂಗೇರಿಗೆ ಬಂದು ಸೇಫಾಗಿದ್ದು ಖಾರ್ಕಿವ್‍ನಲ್ಲಿಯೇ ಉಳಿದಿದ್ದಾರೆ. ಇದರಿಂದ ಇಬ್ಬರು ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಮನೆ ಮಾಡಿದೆ. ಇದನ್ನೂ ಓದಿ: ರಷ್ಯಾದ ಯುದ್ಧನೌಕೆಗಳು ಕ್ರೈಮಿಯಾವನ್ನು ಬಿಟ್ಟು ಒಡೆಸ್ಸಾದತ್ತ ಹೋಗುತ್ತಿವೆ: ಅಮೇರಿಕ

  • ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆಯಾಳಾಗಿರಿಸಿಕೊಂಡಿದೆ – ರಷ್ಯಾ ಆರೋಪ

    ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆಯಾಳಾಗಿರಿಸಿಕೊಂಡಿದೆ – ರಷ್ಯಾ ಆರೋಪ

    ಕೀವ್: ಯುದ್ಧ ಪೀಡಿತ ಉಕ್ರೇನ್‍ನಲ್ಲಿ ಸಿಲುಕಿರುವ ತನ್ನ ನಾಗರಿಕರನ್ನು ಸ್ಥಳಾಂತರಿಸಲು ಭಾರತವು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಈ ನಡುವೆ ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂದು ರಷ್ಯಾ ಆರೋಪಿಸಿದೆ.

    ಖಾರ್ಕಿವ್‍ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ರಷ್ಯಾ ಪ್ರಯತ್ನಿಸುತ್ತಿರುವಾಗ ಉಕ್ರೇನ್ ಪಡೆಗಳು ಭಾರತೀಯರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಬ್ರೀಫಿಂಗ್‍ನಲ್ಲಿ ತಿಳಿಸಿದೆ. ಇದನ್ನು ಓದಿ: ಅಕ್ರಮ ಶಸ್ತ್ರಾಸ್ತ್ರಗಳ ಬದಲಿಗೆ, ಯುಪಿ ಈಗ ಕ್ಷಿಪಣಿಗಳನ್ನು ತಯಾರಿಸುತ್ತಿದೆ: ಅಮಿತ್ ಶಾ

    ಈ ಕುರಿತಂತೆ ಮಾತನಾಡಿದ ಮೇಜರ್ ಜನರಲ್ ಇಗೊರ್ ಕೊನಾಶೆಂಕೋವ್, ನಮ್ಮ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಖಾರ್ಕಿವ್‍ನಲ್ಲಿ, ಉಕ್ರೇನಿಯನ್ ಅಧಿಕಾರಿಗಳು ಉಕ್ರೇನಿಯನ್ ಪ್ರದೇಶವನ್ನು ತೊರೆದು ಬೇರೆಡೆಗೆ ಹೋಗಲು ಪ್ರಯತ್ನಿಸಿದ ಭಾರತೀಯ ವಿದ್ಯಾರ್ಥಿಗಳ ದೊಡ್ಡ ಗುಂಪನ್ನು ಬಲವಂತವಾಗಿ ಬಂಧಿಸುತ್ತಿದ್ದಾರೆ.

    ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಸಶಸ್ತ್ರ ಪಡೆಗಳು ಸಿದ್ಧವಾಗಿವೆ ಮತ್ತು ಭಾರತದ ಕಡೆಯವರು ಪ್ರಸ್ತಾಪಿಸಿದಂತೆ ಅವರನ್ನು ತಮ್ಮ ಮಿಲಿಟರಿ ಸಾರಿಗೆ ವಿಮಾನಗಳು ಅಥವಾ ಭಾರತೀಯ ವಿಮಾನಗಳೊಂದಿಗೆ ರಷ್ಯಾದ ಪ್ರದೇಶದಿಂದ ಮನೆಗೆ ಕಳುಹಿಸಲಾಗುತ್ತದೆ ಎಂದಿದ್ದಾರೆ.

    ಮತ್ತೊಂದೆಡೆ ಉಕ್ರೇನ್ ಎಂಎಫ್‍ಎ ಕೂಡ ಭಾರತ, ಪಾಕಿಸ್ತಾನ, ಚೀನಾ ಮತ್ತು ಇತರ ದೇಶಗಳ ವಿದ್ಯಾರ್ಥಿಗಳನ್ನು ರಷ್ಯಾ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಿದೆ. ಇದನ್ನು ಓದಿ: ಪುಟಿನ್‌ ಜೊತೆ 2ನೇ ಬಾರಿ ಮೋದಿ ಮಾತುಕತೆ

  • ಈ ಕೂಡಲೇ ಖಾರ್ಕಿವ್ ತೊರೆಯಿರಿ: ಭಾರತೀಯರಿಗೆ ರಾಯಭಾರ ಕಚೇರಿಯಿಂದ ತುರ್ತು ಸಂದೇಶ

    ಕೀವ್: ಉಕ್ರೇನ್‍ನಲ್ಲಿರುವ ಭಾರತೀಯರಿಗೆ ರಾಯಭಾರ ಕಚೇರಿ ತಕ್ಷಣವೇ ಖಾರ್ಕಿವ್ ತೊರೆಯುವಂತೆ ತುರ್ತು ಸಲಹೆ ನೀಡಿದೆ. ಇಂದು ಸಂಜೆ 6 ಗಂಟೆ(ಭಾರತೀಯ ಕಾಲಮಾನ ರಾತ್ರಿ 9:30) ಒಳಗಾಗಿ ಪೆಸೊಚಿನ್, ಬಾಬಾಯೆ ಅಥವಾ ಬೆಜ್ಲ್ಯುಡೋವ್ಕಾ ವಸಾಹತುಗಳನ್ನು ತಲುಪುವಂತೆ ರಾಯಭಾರ ಕಚೇರಿ ತಿಳಿಸಿದೆ.

    ಖಾರ್ಕಿವ್‍ನಲ್ಲಿರುವ ಭಾರತೀಯರು ತಮ್ಮ ಸುರಕ್ಷತೆ ಹಾಗೂ ಭದ್ರತೆಗೆ ಈ ಕೂಡಲೇ ಖಾರ್ಕಿವ್ ಅನ್ನು ತೊರೆಯಬೇಕು. ಆದಷ್ಟು ಬೇಗ ಪೆಸೊಚಿನ್, ಬಾಬಾಯೆ ಅಥವಾ ಬೆಜ್ಲ್ಯುಡೋವ್ಕಾಗೆ ತಲುಪಿ ಎಂದು ಭಾರತೀಯ ರಾಯಭಾರಿ ಕಚೇರಿ ಟ್ವಿಟ್ಟರ್‍ನಲ್ಲಿ ತಿಳಿಸಿದೆ. ಇದನ್ನೂ ಓದಿ: ಉಕ್ರೇನ್‌ ಯುದ್ಧ – ಭಾರತದ ಮತ್ತೊಬ್ಬ ವಿದ್ಯಾರ್ಥಿ ಸಾವು

    ಈ ಹಿಂದೆ ಪೋಲೆಂಡ್‍ನಲ್ಲಿರುವ ರಾಯಭಾರಿ ಕಚೇರಿ ಉಕ್ರೇನ್‍ನಲ್ಲಿರುವ ಭಾರತೀಯರಿಗೆ ತುರ್ತು ಸಲಹೆ ನೀಡಿತ್ತು. ಪೋಲೆಂಡ್‍ಗೆ ತ್ವರಿತವಾಗಿ ಪ್ರವೇಶಿಸಲು ಬುಡೋಮಿಯಾರ್ಜ್ ಗಡಿಗೆ ತಕ್ಷಣ ಬರುವಂತೆ ಸಲಹೆ ನೀಡಿತ್ತು. ಇದನ್ನೂ ಓದಿ: ರಷ್ಯಾ- ಉಕ್ರೇನ್‌ ಯುದ್ಧ: ಕಚ್ಚಾ ತೈಲ ಬೆಲೆ ಭಾರೀ ಏರಿಕೆ

    ಈಗಾಗಲೇ ರಷ್ಯಾ ಉಕ್ರೇನ್‍ನ ಮುಖ್ಯ ನಗರಗಳಾದ ಕೀವ್ ಹಾಗೂ ಖಾರ್ಕಿವ್ ನಗರಗಳನ್ನು ಮುತ್ತಿಗೆ ಹಾಕಿ ನಿರಂತರ ದಾಳಿ ನಡೆಸುತ್ತಿದೆ. ರಷ್ಯಾದ ಅಟ್ಟಹಾಸಕ್ಕೆ ಉಕ್ರೇನ್‍ನ 6 ಸಾವಿರ ಸೈನಿಕರು ಹಾಗೂ ಸ್ಥಳೀಯರು ಪ್ರಾಣ ಬಿಟ್ಟಿದ್ದು, ಅದರಲ್ಲಿ ಒಬ್ಬ ಕರ್ನಾಟಕದ ವಿದ್ಯಾರ್ಥಿಯೂ ಕೊನೆಯುಸಿರೆಳೆದಿದ್ದಾರೆ.

  • ಖೆರ್ಸನ್ ನಗರ ರಷ್ಯಾ ವಶ, ಏಕಕಾಲದಲ್ಲಿ ಮೂರು ಕಡೆ ವೈಮಾನಿಕ ದಾಳಿ- 21 ಜನ ಸಾವು

    ಖೆರ್ಸನ್ ನಗರ ರಷ್ಯಾ ವಶ, ಏಕಕಾಲದಲ್ಲಿ ಮೂರು ಕಡೆ ವೈಮಾನಿಕ ದಾಳಿ- 21 ಜನ ಸಾವು

    ಕೀವ್: ಉಕ್ರೇನ್‌ ನಗರವನ್ನು ಕೈವಶ ಮಾಡಲೇಬೇಕೆಂದು ಹಠಕ್ಕೆ ಬಿದ್ದಿರುವ ರಷ್ಯಾ ಈಗ ಖರ್ಸನ್‌ ನಗರವನ್ನು ವಶಕ್ಕೆ ಪಡೆದಿದೆ. ನಗರವನ್ನು ವಶ ಪಡಿಸಿಕೊಳ್ಳಲು ಈಗ ಸರ್ಕಾರಿ ಕಟ್ಟಡದ ಮೇಲೆ ಭಾರೀ ಪ್ರಮಾಣದಲ್ಲಿ ದಾಳಿ ನಡೆಸುತ್ತಿದೆ. ಹೆರಿಗೆ ಆಸ್ಪತ್ರೆ, ಕೀವ್ ಸೇನಾ ಅಕಾಡಮಿ, ಪೊಲೀಸ್ ಹೆಡ್‍ಕ್ವಾಟರ್ಸ್ ಸೇರಿ ಉಕ್ರೇನ್‍ನ ಮೇಲೆ ರಷ್ಯಾ ಏಕಕಾಲದಲ್ಲಿ ಮೂರು ಕಡೆ ದಾಳಿ ಮಾಡಿದೆ. ದಾಳಿಯಲ್ಲಿ 21 ಜನರು ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

    ಉಕ್ರೇನ್‍ನ ಮೇಲೆ ರಷ್ಯಾದ ಆಕ್ರಮಣ ಇಂದು 7ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ದಾಳಿಗೆ ಉಕ್ರೇನ್‍ನ ಪ್ರಮುಖ ರಾಜ್ಯಗಳಾದ ಕೀವ್ ಮತ್ತು ಖಾರ್ಕಿವ್ ನಲುಗಿ ಹೋಗಿವೆ. ಇಂದು ರಷ್ಯಾ ಏಕಕಾಲದಲ್ಲಿ 3 ಕಡೆ ವೈಮಾನಿಕ ದಾಳಿ ನಡೆಸಿದೆ. ಕೀವ್, ಖಾರ್ಕಿವ್, ಖೇರ್ಸನ್‍ನಲ್ಲಿ ರಾಕೆಟ್, ಕ್ಷಿಪಣಿಗಳ ದಾಳಿ ನಡೆಸಿದೆ. ಏರ್‌ಪೋರ್ಟ್, ಝಿಟೋಮಿರ್ ಹೆರಿಗೆ ಆಸ್ಪತ್ರೆ, ಮಿಲಿಟರಿ ಅಕಾಡಮಿ, ಪೊಲೀಸ್ ಹೆಡ್‍ಕ್ವಾಟರ್ಸ್‍ಗಳ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆ 21ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, 112 ಜನರು ಗಾಯಗೊಂಡಿದ್ದಾರೆ. ಝಿಟೋಮಿರ್ ಹೆರಿಗೆ ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 21 ಜನರಿಗೆ ಗಂಭೀರ ಗಾಯಗಳಾಗಿವೆ.

    ಖೇರ್ಸನ್ ಏರ್‌ಪೋರ್ಟ್‍ನಲ್ಲಿ ಕ್ಷಿಪಣಿ ದಾಳಿ ಹಾಗೂ ಕೀವ್ ಸೆಂಟ್ರಲ್ ರೇಲ್ವೆ ಸ್ಟೇಶನ್‍ನಲ್ಲಿ ಗುಂಡಿನ ದಾಳಿ ನಡೆದಿದೆ. ಅಷ್ಟೇ ಅಲ್ಲದೇ ಜಲ ಮಾರ್ಗದಲ್ಲೂ ದಾಳಿ ತೀವ್ರಗೊಳಿಸಿದ್ದು, ಕಪ್ಪು ಸಮುದ್ರದಲ್ಲಿ ಸೇನೆಯನ್ನು ಹೆಚ್ಚಳ ಮಾಡಿದೆ. ಇದನ್ನೂ ಓದಿ: ಪಕ್ಕದಲ್ಲಿ ಬಾಂಬ್ ಬಿದ್ದರೂ ಊಟ, ವಸತಿ ನೀಡುತ್ತಿದೆ ಭಾರತೀಯ ರೆಸ್ಟೋರೆಂಟ್

    ಈಗಾಗಲೇ ರಷ್ಯಾ ಪಡೆಗಳು ಉಕ್ರೇನ್‍ನ ಖೆರ್ಸನ್ ನಗರ ವಶಪಡಿಸಿಕೊಂಡಿದೆ. ನಗರದ ರೈಲ್ವೆ ನಿಲ್ದಾಣ ಮತ್ತು ಬಂದರು ವಶಕ್ಕೆ ಪಡೆದಿದೆ. ಇಡೀ ನಗರದ ಮೇಲೆ ಅಸ್ತಿತ್ವ ಸಾಧಿಸುತ್ತಿದ್ದಾರೆ. ಕೀವ್, ಚೆರ್ನಿಹಿವ್, ಒಬ್ಲಾಸ್ಟ್‍ನ ಪೈರಿಯಾಟಿನ್ ಮತ್ತು ಮೈರೋರೋಡ್ ನಗರಗಳಿಗೆ ರಷ್ಯಾ ಪಡೆಗಳು ಬಂಕರ್‌ಗೆ ತೆರಳುವಂತೆ ಜನರಿಗೆ ಸೈರನ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ರಷ್ಯಾದಲ್ಲಿ ಆನ್‍ಲೈನ್ ಮಾರಾಟ ಸ್ಥಗಿತಗೊಳಿಸಿದ ಆಪಲ್

  • ಖಾರ್ಕಿವ್ ಶೆಲ್ ದಾಳಿ ಯುದ್ಧಾಪರಾಧ: ಉಕ್ರೇನ್ ಅಧ್ಯಕ್ಷ

    ಕೀವ್: ಉಕ್ರೇನ್‍ನ ಖಾರ್ಕಿವ್‍ನಲ್ಲಿ ಮಂಗಳವಾರ ನಡೆದ ರಷ್ಯಾದ ಶೆಲ್ ದಾಳಿಯನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಿರೋಧಿಸಿದ್ದಾರೆ. ಈ ದಾಳಿಯನ್ನು ಯುದ್ಧಾಪರಾಧ ಎಂದು ಕರೆದಿದ್ದಾರೆ.

    ಖಾರ್ಕಿವ್‍ನಲ್ಲಿ ನಡೆದ ರಷ್ಯಾದ ಶೆಲ್ ದಾಳಿಯನ್ನು ಯುದ್ಧಾಪರಾಧ ಎಂದು ವಿರೋಧಿಸಿದ ಝೆಲೆನ್ಸ್ಕಿ ಉಕ್ರೇನ್‍ನ ರಾಜಧಾನಿ ಕೀವ್ ಅನ್ನು ರಕ್ಷಿಸುವುದು ರಷ್ಯಾ ಪಡೆಯ ಪ್ರಮುಖ ಆದ್ಯತೆ ಎಂದು ಆಘಾತ ವ್ಯಕ್ತಪಡಿಸಿದ್ದಾರೆ.

    ಖಾರ್ಕಿವ್ ಮೇಲಿನ ದಾಳಿ ಯುದ್ಧಾಪರಾಧ. ಖಾರ್ಕಿವ್ ಹಾಗೂ ಕೀವ್, ರಷ್ಯಾದ ಮುಖ್ಯ ಗುರಿಯಾಗಿದೆ. ಇದೀಗ ಖಾರ್ಕಿವ್‍ನಲ್ಲಿ ಘಟಿಸಿರುವ ದುರಂತದಂತೆ ರಾಜಧಾನಿಯಲ್ಲೂ ದಾಳಿ ನಡೆಸುವುದು ರಷ್ಯಾದ ಗುರಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಖಾರ್ಕಿವ್‍ನ ಆಡಳಿತ ಕಚೇರಿ ಮೇಲೆ ಬಾಂಬ್ ದಾಳಿ- ಕಟ್ಟಡ ಸಂಪೂರ್ಣ ಧ್ವಂಸ

    ಮಂಗಳವಾರ ಖಾರ್ಕಿವ್‍ನಲ್ಲಿರುವ ಸರ್ಕಾರಿ ಪ್ರಧಾನ ಕಛೇರಿ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿ ಭಾರೀ ಹಾನಿಯನ್ನು ಮಾಡಿದೆ. ಶೆಲ್ ದಾಳಿಗೆ ಕರ್ನಾಟಕ ಮೂಲದ ವಿದ್ಯಾರ್ಥಿ ಸೇರಿದಂತೆ ಒಟ್ಟು 17 ಮಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ಸಾವು

    2ನೇ ಮಹಾಯುದ್ಧದ ಅಂತ್ಯದ ಬಳಿಕ ಇದೇ ಮೊದಲ ಬಾರಿಗೆ ಉಕ್ರೇನ್‍ನ ಖಾರ್ಕಿವ್ ಹಾಗೂ ಕೀವ್ ನಗರಗಳ ಮೇಲೆ ಬಾಂಬ್ ದಾಳಿ ನಡೆದಿದೆ. ಫೆಬ್ರವರಿ 24ರಂದು ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿ 1 ವಾರದಿಂದ ದೇಶಾದ್ಯಂತ ದಾಳಿ ನಡೆಸುತ್ತಿದೆ.

  • ಖಾರ್ಕಿವ್‍ನ ಆಡಳಿತ ಕಚೇರಿ ಮೇಲೆ ಬಾಂಬ್ ದಾಳಿ- ಕಟ್ಟಡ ಸಂಪೂರ್ಣ ಧ್ವಂಸ

    ಖಾರ್ಕಿವ್‍ನ ಆಡಳಿತ ಕಚೇರಿ ಮೇಲೆ ಬಾಂಬ್ ದಾಳಿ- ಕಟ್ಟಡ ಸಂಪೂರ್ಣ ಧ್ವಂಸ

    ಕೀವ್: ರಷ್ಯಾ ದಾಳಿಗೆ ಉಕ್ರೇನ್ ತತ್ತರಿಸಿದ್ದು, ಇಂದು ಖಾರ್ಕಿವ್‍ನ ಸೆಂಟ್ರಲ್ ಸ್ಕ್ವೇರ್ ಮೇಲೆ ರಷ್ಯಾ ದಾಳಿ ನಡೆಸಿದ್ದು, ಕಟ್ಟಡ ಸಂಪೂರ್ಣ ನಾಶವಾಗಿದೆ.

    ನಿನ್ನೆ ರಾತ್ರಿಯಿಡೀ ಕೀವ್ ಮೇಲೆ ರಷ್ಯಾ ದಾಳಿ ನಡೆಸಿದೆ. ರಷ್ಯಾ ದಾಳಿಗೆ ಉಕ್ರೇನ್‍ನ ಬೃಹತ್ ಕಟ್ಟಗಳು ಧ್ವಂಸವಾಗಿದೆ. ರಷ್ಯಾ ಜನವಸತಿ ಕೇಂದ್ರಗಳ ಮೇಲೂ ದಾಳಿ ಮಾಡುತ್ತಿದ್ದು, ಈಗ ಖಾರ್ಕಿವ್‍ನ ಕೇಂದ್ರದ ಮೇಲೆ ಬಾಂಬ್ ದಾಳಿ ಮಾಡಿದೆ. ಇದು ಸ್ಥಳೀಯ ಆಡಳಿತ ಕಚೇರಿ ಮೇಲೆ ರಷ್ಯಾ ದಾಳಿ ನಡೆಸಿದೆ. ಕೀವ್ ಮತ್ತು ಖಾರ್ಕಿವ್‍ನಲ್ಲಿ ಪರಿಸ್ಥಿತಿ ಶೋಚನೀಯವಾಗಿದೆ.

    ರಷ್ಯಾದಿಂದ ಉಕ್ರೇನ್‍ನ ಮೇಲೆ ವ್ಯಾಕ್ಯೂಮ್ ಬಾಂಬ್ ಪ್ರಯೋಗವಾಗುತ್ತಿದೆ. ನಿನ್ನೆ ರಾತ್ರಿಯಿಡೀ ದಾಳಿ ನಡೆಸಿದೆ. ಉಕ್ರೇನ್‍ನಲ್ಲಿ ಕ್ಷಿಪಣಿ ದಾಳಿ ನಿರಂತರವಾಗಿ ನಡೆಸುತ್ತಿದ್ದು, ಜನರು ಕ್ಷಣ ಕ್ಷಣಕ್ಕೂ ಭಯದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ರಷ್ಯಾ ಪಡೆಗಳು ನಗರಗಳ ಮೇಲೆ ಫಿರಂಗಿಗಳನ್ನು ಬಳಸುತ್ತಿವೆ. ಇದನ್ನೂ ಓದಿ: ಜಾರ್ಖಂಡ್ ದೋಣಿ ದುರಂತದಲ್ಲಿ 14 ಮಂದಿ ಸಾವು – ಸಿಎಂನಿಂದ 4 ಲಕ್ಷ ಪರಿಹಾರ ಘೋಷಣೆ

    ವ್ಯಾಕ್ಯೂಮ್ ಬಾಂಬ್ ಅಪ್ಪಳಿಸಿದರೆ ವಾತಾವರಣದ ಆಮ್ಲಜನಕ ಗ್ರಹಿಸಿ ಹೆಚ್ಚಿನ ಅನಾಹುತವಾಗುತ್ತದೆ. 300ಮೀ ದೂರಕ್ಕೆ ಭಾರೀ ಹಾನಿ ಉಂಟು ಮಾಡಬಲ್ಲದು. ಇದನ್ನು ಕೀವ್ ಮೇಲೆ ಪ್ರಯೋಗಿಸಲಾಗಿದೆ ಜೊತೆಗೆ ರಷ್ಯಾದಿಂದ ಪರಮಾಣು ರಹಿತ ಅತ್ಯಾಧುನಿಕ ಬಾಂಬ್‍ಗಳನ್ನು ಪ್ರಯೋಗ ಮಾಡಲಾಗುತ್ತಿದೆ ಎಂದು ಉಕ್ರೇನ್ ಆರೋಪಿಸಿದೆ.

    ಉಕ್ರೇನ್ ಮೇಲೆ 6ನೇ ದಿನ ಇನ್ನಷ್ಟು ಭೀಕರ ದಾಳಿಗೆ ರಷ್ಯಾ ಸನ್ನದ್ಧವಾಗಿದೆ. ರಾಜಧಾನಿ ಕೀವ್ ಹೊರಭಾಗದಲ್ಲಿ 40 ಮೈಲಿಯಷ್ಟು ಮಿಲಿಟರಿ ವಾಹನಗಳ ಸಾಲು ನಿಂತಿವೆ. 40 ಮೈಲಿ ದೂರದಷ್ಟು ಮಿಲಿಟರಿ ವಾಹನಗಳನ್ನು ರಷ್ಯಾ ಸನ್ನದ್ಧಗೊಳಿಸಿದೆ. ಯಾವುದೇ ಕ್ಷಣದಲ್ಲಾದರೂ ಉಕ್ರೇನ್ ಮೇಲೆ ಇನ್ನಷ್ಟು ಭೀಕರ ದಾಳಿ ನಿರೀಕ್ಷೆಯಿದೆ. ಇದನ್ನೂ ಓದಿ: ರಷ್ಯಾ ಅಧ್ಯಕ್ಷನಿಂದ ಬ್ಲ್ಯಾಕ್ ಬೆಲ್ಟ್ ವಾಪಸ್ ಪಡೆದ ವಿಶ್ವ ಟೇಕ್ವಾಂಡೋ