Tag: khanapura

  • ಗುಬ್ಬಿ ಮೇಲೆ ಬ್ರಹ್ಮಾಸ್ತ್ರ- ಖಾನಾಪುರ ಸಿಪಿಐ ಸಸ್ಪೆಂಡ್‌

    ಗುಬ್ಬಿ ಮೇಲೆ ಬ್ರಹ್ಮಾಸ್ತ್ರ- ಖಾನಾಪುರ ಸಿಪಿಐ ಸಸ್ಪೆಂಡ್‌

    – ಠಾಣೆಗೆ ಬಿಜೆಪಿ ನಾಯಕರ ಪ್ರವೇಶಕ್ಕೆ ಅನುಮತಿ ನೀಡಿದ್ದಕ್ಕೆ ಶಿಕ್ಷೆ

    ಬೆಳಗಾವಿ: ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಸಿಟಿ ರವಿ ವರ್ಸಸ್‌ ಲಕ್ಷ್ಮಿ ಹೆಬ್ಬಾಳ್ಕರ್‌ ಪ್ರಕರಣದಲ್ಲಿ ಖಾನಾಪುರ (Khanapura) ಸಿಪಿಐ ಅವರನ್ನು ಸರ್ಕಾರ ಅಮಾನತು ಮಾಡಿದೆ.

    ಹೌದು. ಸಿಟಿ ರವಿ (CT Ravi) ಅವರನ್ನು ರಾತ್ರಿಯಿಡಿ ಪೊಲೀಸರು ಸುತ್ತಾಡಿಸಿದ್ದಕ್ಕೆ ಬಿಜೆಪಿ, ಜೆಡಿಎಸ್‌ (BJP, JDS) ಆಕ್ರೋಶ ವ್ಯಕ್ತಪಡಿಸಿತ್ತು. ಇಲಾಖೆಯ ಕಾರ್ಯವೈಖರಿ ಬಗ್ಗೆ ಟೀಕೆ ಹೆಚ್ಚಾಗುತ್ತಿದ್ದಂತೆ ಈಗ ಖಾನಾಪುರ ಇನ್ಸ್ ಪೆಕ್ಟರ್ ಮಂಜುನಾಥ ನಾಯಕ್‌ (Manjunath Nayak) ಅವರನ್ನು ಅಮಾನತು ಮಾಡಿದೆ.  ಇದನ್ನೂ ಓದಿ: 6 ಜನರನ್ನು ಮದುವೆಯಾಗಿ ಹಣ, ಚಿನ್ನ ಕಳ್ಳತನ – 7ನೇ ಮ್ಯಾರೇಜ್‌ಗೆ ರೆಡಿಯಾಗಿದ್ದ ಲೇಡಿ ಅರೆಸ್ಟ್‌!

    ಅಸಲಿಗೆ ಖಾನಾಪುರ ಇನ್ಸ್‌ಪೆಕ್ಟರ್‌ ಮತ್ತು ಸಿಟಿ ರವಿಗೂ ಸಂಬಂಧವೇ ಇಲ್ಲ. ರವಿ ಅವರನ್ನು ಕಮಿಷನರೇಟ್ ಪೊಲೀಸರು ಪೊಲೀಸ್ ಠಾಣೆಗೆ ಕರೆತಂದದ್ದರು. ಖುದ್ದು ಬೆಳಗಾವಿ ಕಮಿಷನರ್, ಡಿಸಿಪಿಯೊಂದಿಗೆ ಸಿ ಟಿ ರವಿ ಬಂದಿದ್ದರು. ಕಮಿಷನರ್ ತಂದ ಆರೋಪಿಗೆ ಖಾನಾಪುರ ಇನ್ಸ್‌ಪೆಕ್ಟರ್‌ ಆಶ್ರಯ ನೀಡಿದ್ದರು. ಆಶ್ರಯ ಕೊಟ್ಟ ತಪ್ಪಿಗೆ ಅಮಾನತು ಶಿಕ್ಷೆಯೇ? ಈ ಮೂಲಕ ಕಿರಿಯ ಅಧಿಕಾರಿಗಳ ಮೇಲೆ ಹಿರಿಯ ಅಧಿಕಾರಿಗಳ ಸವಾರಿ ಮಾಡಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.

     

    ಖಾನಾಪುರ ಠಾಣೆಯಲ್ಲಿ ಸಿಟಿ ರವಿ ಇರು ವಿಷಯವನ್ನು ತಿಳಿದು ಅಶೋಕ್‌ ಅವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಅಶೋಕ್‌ ಪ್ರವೇಶವನ್ನು ಪೊಲೀಸರು ತಡೆದಿದ್ದರು. ಆಗ ಪ್ರತಿಪಕ್ಷ ನಾಯಕರನ್ನು ಒಳಗೆ ಬಿಡದಿದ್ರೆ ಹೇಗೆ? ನಿಮ್ಮ ಮೇಲೆಯೇ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದರು. ಆಗ ಹಿರಿಯ ಅಧಿಕಾರಿಗಳ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಅಶೋಕ್‌ ಸೇರಿದಂತೆ ಬಿಜೆಪಿ ನಾಯಕರನ್ನು ಸಿಪಿಐ ಮಂಜುನಾಥ್ ನಾಯಕ್ ಒಳಗಡೆ ಬಿಟ್ಟಿದ್ದರು.

    ಖಾನಾಪುರ ಠಾಣೆಯಲ್ಲಿ ಹಿರಿಯ ಅಧಿಕಾರಿಗಳು ಇದ್ದರು. ನಮ್ಮನ್ನ ಒಳಗೆ ಬಿಟ್ಟು ಹೊರಗೆ ಹೋಗಿದ್ದರು. ಪೊಲೀಸ್‌ ಅಧಿಕಾರಿಗಳು ಅವರೊಳಗೆ ಮಾತನಾಡುತ್ತಿದ್ದರು. ನಾವು ಒಳಗೆ ಮಾತನಾಡುತ್ತಿದ್ದೆವು ಎಂದು ಸಿಟಿ ರವಿ ಹೇಳಿದ್ದರು.

     

    ಸರ್ಕಾರಕ್ಕೆ ಪಬ್ಲಿಕ್‌ ಪ್ರಶ್ನೆ
    1. ಠಾಣೆಯೊಳಗೆ ಸಿ ಟಿ ರವಿ ಜತೆ ಬಿಜೆಪಿ ನಾಯಕರ ಭೇಟಿಗೆ ಅವಕಾಶ ಕೊಟ್ಟಿದ್ದು ತಪ್ಪೇ?
    2. ಬಿಜೆಪಿ ನಾಯಕರನ್ನು ಒಳಗಡೆ ಬಿಟ್ಟು ಮಾತನಾಡಲು ಅವಕಾಶ ಕೊಟ್ಟಿದ್ದು ಯಾವ ಶ್ರೇಣಿಯ ಅಧಿಕಾರಿ?
    3. ಹಿರಿಯ ಪೊಲೀಸ್ ಅಧಿಕಾರಿಗಳದ್ದೂ ತಪ್ಪಿದ್ದರೂ ಅವರ ಮೇಲೆ ಯಾಕಿಲ್ಲ?
    4. ಹಿರಿಯ ಅಧಿಕಾರಿಗಳ ಆದೇಶ ಇಲ್ಲದೇ ಖಾನಾಪುರ ಸಿಪಿಐ ಹಾಗೆ ನಡೆದುಕೊಳ್ಳಲು ಸಾಧ್ಯವೇ?

  • ಕಿರಿಯ ಮಗನ ಮದುವೆಗೆ ಅಡ್ಡಿಯಾಗುತ್ತೆ ಎಂದು ಮಾನಸಿಕ ಅಸ್ವಸ್ಥ ಮಗನನ್ನೇ ಕೊಂದ ತಂದೆ

    ಕಿರಿಯ ಮಗನ ಮದುವೆಗೆ ಅಡ್ಡಿಯಾಗುತ್ತೆ ಎಂದು ಮಾನಸಿಕ ಅಸ್ವಸ್ಥ ಮಗನನ್ನೇ ಕೊಂದ ತಂದೆ

    ಬೆಳಗಾವಿ: ಕಳೆದ ಮೇ 31ರಂದು ಪಟ್ಟಣದ ಹೊರವಲಯದ ಮಲಪ್ರಭಾ ನದಿತೀರದಲ್ಲಿ ಪತ್ತೆಯಾದ ಅಪರಿಚಿತ ಯುವಕನ ಅಸಹಜ ಸಾವಿನ ಪ್ರಕರಣವನ್ನು ಬೇಧಿಸಿರುವ ಖಾನಾಪುರ (Khanapura) ಠಾಣೆಯ ಪೊಲೀಸರು ಪ್ರಕರಣದ ಆರೋಪಿಯನ್ನು ಮಂಗಳವಾರ ಬಂಧಿಸಿದ್ದಾರೆ.

    ಮಾನಸಿಕವಾಗಿ ಅಸ್ವಸ್ಥನಾಗಿದ್ದ (Mentally Ill) ತನ್ನ ಹಿರಿಯ ಮಗ ಬದುಕಿರುವವರೆಗೆ ಕಿರಿಯ ಮಗನ ಮದುವೆಗೆ ಅಡಚಣೆಯಾಗುತ್ತದೆ ಎಂದು ಭಾವಿಸಿ ತಂದೆಯೇ ತನ್ನ ಹಿರಿಯ ಮಗನಿಗೆ ವಿಷವುಣಿಸಿ ಕೊಲೆಗೈದಿರುವುದಾಗಿ ಪೊಲೀಸರ ತನಿಖೆಯಲ್ಲಿ ಧೃಡಪಟ್ಟಿದೆ. ಬಂಧಿತ ತಂದೆಯನ್ನು ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

    ಏನಿದು ಘಟನೆ?
    ಖಾನಾಪುರ ಪಟ್ಟಣದ ಬಳಿ ಮಲಪ್ರಭಾ ನದಿತೀರದಲ್ಲಿ ಪತ್ತೆಯಾದ ಅಪರಿಚಿತ ಶವದ ಮರಣೋತ್ತರ ತನಿಖೆ ನಡೆಸಿದ್ದ ಪೊಲೀಸರಿಗೆ ಮೃತ ವ್ಯಕ್ತಿ ವಿಷ ಸೇವಿಸಿದ್ದು, ಜೊತೆಗೆ ಆತನ ತಲೆಗೆ ಬಲವಾಗಿ ಪೆಟ್ಟು ಬಿದ್ದಿರುವುದು ತಿಳಿದುಬಂದಿತ್ತು. ಹೀಗಾಗಿ ಪೊಲೀಸರು ಈ ಪ್ರಕರಣವನ್ನು ಅನುಮಾನಾಸ್ಪದ ಸಾವು ಎಂದು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

    ಪ್ರಕರಣ ದಾಖಲಾಗಿ ಕೆಲದಿನಗಳ ಬಳಿಕ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಆತ ಹುಕ್ಕೇರಿ ತಾಲೂಕಿನ ಬೋರಗಲ್ ಗ್ರಾಮದ ನಿವಾಸಿ ನಿಖಿಲ್ ರಾಜಕುಮಾರ ಮಗದುಮ್ಮ (24) ಎಂದು ಪೊಲೀಸರಿಗೆ ತಿಳಿದುಬಂದಿತ್ತು. ನಿಖಿಲ್ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ಜುಲೈ 7ರಂದು ಆತನ ಚಿಕ್ಕಪ್ಪ ಸಂತೋಷ್ ಮಗದುಮ್ಮ ಅವರನ್ನು ಠಾಣೆಗೆ ಕರೆಸಿ ವಿಚಾರಿಸಿದಾಗ ಅವರು ತಮ್ಮ ಅಣ್ಣ ರಾಜಕುಮಾರ ಶಂಕರ ಮಗದುಮ್ಮ (45) ನಿಖಿಲ್ ಕೊಲೆ ಮಾಡಿರುವುದಾಗಿ ತಿಳಿಸಿ ರಾಜಕುಮಾರ ವಿರುದ್ಧ ದೂರು ನೀಡಿದ್ದರು. ಇದನ್ನೂ ಓದಿ: ಕಾರು ಹತ್ತಿಸಿ ಮೂವರು ಮಕ್ಕಳ ಕೊಲೆಗೆ ಯತ್ನ!

    ರಾಜಕುಮಾರ ಅವರನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದ ಪೊಲೀಸರು ಅವರನ್ನು ವಿಚಾರಣೆ ನಡೆಸಿದಾಗ ತಮ್ಮ ಹಿರಿಯ ಮಗ ನಿಖಿಲ್ ಮಾನಸಿಕ ಅಸ್ವಸ್ಥನಿದ್ದು, ಆತ ಬದುಕಿರುವವರೆಗೆ ಕಿರಿಯ ಮಗ ನಿತೀಶ್‌ನ ಮದುವೆ ಮಾಡಲು ತೊಂದರೆ ಆಗುತ್ತದೆ ಎಂದು ಭಾವಿಸಿ ಆತನನ್ನು ಮೇ 30ರಂದು ಬೋರಗಲ್ ಗ್ರಾಮದ ತಮ್ಮ ಮನೆಯಿಂದ ಪಟ್ಟಣದ ಮಲಪ್ರಭಾ ನದಿಯ ಬಳಿ ಕರೆದುಕೊಂಡು ಹೋಗಿ ವಿಷ ಕುಡಿಸಿ, ಗಿಡಕ್ಕೆ ಜೋರಾಗಿ ತಲೆ ಹಾಯಿಸಿ ಕೊಲೆ ಮಾಡಿರುವುದಾಗಿ ತಿಳಿಸಿದ್ದಾರೆ.

    ಬೆಳಗಾವಿ ಎಸ್‌ಪಿ ಸಂಜೀವ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ನಿಖಿಲ್ ಅವರ ಕೊಲೆ ಪ್ರಕರಣವನ್ನು ಬೇಧಿಸಿರುವ ಖಾನಾಪುರ ಠಾಣೆಯ ಪಿಐ ಮಂಜುನಾಥ್ ನಾಯ್ಕ್ ಹಾಗೂ ಸಿಬ್ಬಂದಿ ರಾಜಕುಮಾರ ಶಂಕರ್ ಮಗದುಮ್ಮ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರ ಆದೇಶದನ್ವಯ ರಾಜಕುಮಾರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಹಾವು ಕಚ್ಚಿಸಿ ಉದ್ಯಮಿಯ ಕೊಲೆ – ಸಹಜ ಸಾವೆಂದು ಬಿಂಬಿಸಿದ ಹಾವಾಡಿಗ ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಖಾನಾಪುರದಲ್ಲಿ ಪೊಲೀಸರ ದಾಳಿ- ದಾಖಲೆ ಇಲ್ಲದ 53 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ

    ಖಾನಾಪುರದಲ್ಲಿ ಪೊಲೀಸರ ದಾಳಿ- ದಾಖಲೆ ಇಲ್ಲದ 53 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ

    ಬೆಳಗಾವಿ: ಸೂಕ್ತ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ಚಿನ್ನ, ಬೆಳ್ಳಿ ಆಭರಣ ಕಾರಿನ ಮೇಲೆ ದಾಳಿ ನಡೆಸಿ 53 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

    ಬೆಳಗಾವಿ (Belagavi) ಜಿಲ್ಲೆಯ ನಂದಗಡ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದು ಚಿನ್ನ, ಬೆಳ್ಳಿ ಆಭರಣ ಸಾಗಿಸುತ್ತಿದ್ದ ಕಾರಿನ ಸಮೇತ 53.33 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ ಮಾಡಿದ್ದಾರೆ. 21,25,304 ರೂ. ಮೌಲ್ಯದ 395.7 ಗ್ರಾಂ ಚಿನ್ನ (Gold) ಹಾಗೂ 19,08,420 ರೂ ಮೌಲ್ಯದ 28.065 ಕೆ.ಜಿ ಬೆಳ್ಳಿ (Silver) ವಶಕ್ಕೆ ತೆಗೆದುಕೊಂಡಿದ್ದಾರೆ.

    ಹಳಿಯಾಳದಿಂದ ಕಕ್ಕೇರಿಗೆ ಯಾವುದೇ ಬಿಲ್ ಇಲ್ಲದೆ ಕಾರಿನಲ್ಲಿ ಆಭರಣಗಳ ಸಾಗಾಟ ಮಾಡುತ್ತಿದೆ ಆರೋಪದ ಮೇಲೆ ಕಾರನ್ನು ಅಡ್ಡಗಟ್ಟಿ ತಪಾಸಣೆ ಮಾಡಿದಾಗ ಕಾರಿನಲ್ಲಿ ಚಿನ್ನ, ಬೆಳ್ಳಿ ಆಭರಣ ಜೊತೆಗೆ 13 ಲಕ್ಷ ರೂ. ಮೌಲ್ಯದ ಕಾರು ಸೇರಿ 53,33,724 ರೂ. ಮೌಲ್ಯದ ವಸ್ತುಗಳು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದನ್ನೂ ಓದಿ: ಹತ್ತು ವರ್ಷದಿಂದ ನಾಪತ್ತೆಯಾಗಿದ್ದ ನಟೋರಿಯಸ್ ರೌಡಿಶೀಟರ್‌ಗಳ ಬಂಧನ

    ಚುನಾವಣೆ ಹಿನ್ನೆಲೆಯಲ್ಲಿ ಖಾನಾಪುರ ಕ್ಷೇತ್ರ (Khanapura Constituency) ದಲ್ಲಿ ತಪಾಸಣೆ ವೇಳೆ ವಸ್ತುಗಳು ಪತ್ತೆಯಾಗಿದ್ದು, ಹಳಿಯಾಳ ಮೂಲದ ಧರ್ಮರಾಜ್ ಕುಟ್ರೆ ಎಂಬವರನ್ನ ನಂದಗಡ ಠಾಣೆ ಪೊಲೀಸರು ಬಂಧಿಸಿದ್ದಾರೆ. ಖಾನಾಪುರ ತಾಲೂಕಿನ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಖಾನಾಪುರದಲ್ಲಿ ಹೆರಿಗೆ ಆಸ್ಪತ್ರೆ ಸ್ಲ್ಯಾಬ್ ನಿರ್ಮಾಣ – ಅಂಜಲಿ ನಿಂಬಾಳ್ಕರ್ ಚಾಲನೆ

    ಖಾನಾಪುರದಲ್ಲಿ ಹೆರಿಗೆ ಆಸ್ಪತ್ರೆ ಸ್ಲ್ಯಾಬ್ ನಿರ್ಮಾಣ – ಅಂಜಲಿ ನಿಂಬಾಳ್ಕರ್ ಚಾಲನೆ

    ಬೆಳಗಾವಿ: ಖಾನಾಪೂರ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಬೃಹತ್ ನೂತನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸ್ಲ್ಯಾಬ್ ಕಾಮಗಾರಿಗೆ ಪೂಜೆ ಸಲ್ಲಿಸಿ ಕಾಂಕ್ರೀಟ್ ಹಾಕುವ ಮೂಲಕ ಶಾಸಕಿ ಅಂಜಲಿ ನಿಂಬಾಳ್ಕರ್ ಚಾಲನೆ ನೀಡಿದರು.

    ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಖಾನಾಪೂರ ತಾಲೂಕಿಗೆ ಹೆಮ್ಮೆಯ ವಿಷಯವಾದ ಈ ಎಂಸಿಎಚ್ ಆಸ್ಪತ್ರೆಯ ಕೆಲಸ ಚಾಲನೆ ಇದೆ. 15 ಕೋಟಿ ರೂ. ವೆಚ್ಚದಲ್ಲಿ 60 ಬೆಡ್ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಈ ಕೆಲಸದ ಸ್ಲ್ಯಾಬ್ ಹಾಕುವ ಕಾರ್ಯಕ್ರಮದ ಪೂಜೆ ನೇರವಿರಿಸಿದ್ದೇವೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ, ಆಶೀರ್ವಾದಬೇಕು. ಏಕೆಂದರೆ ಇದು ತಾಲೂಕಿಗೆ ಹೆಮ್ಮೆಯ ವಿಷಯ ದೊಡ್ಡ ಆಸ್ಪತ್ರೆ ನಾನು ಒಬ್ಬ ಸ್ತ್ರೀ ವೈದ್ಯೆಯಾಗಿರುವುದರಿಂದ ನನಗೂ ಹೆಮ್ಮೆಯ ವಿಷಯ ಎಂದಿದ್ದಾರೆ.  ಇದನ್ನೂ ಓದಿ: ನಾಳೆಯಿಂದ ಥಿಯೇಟರ್‌ ಹೌಸ್‌ ಫುಲ್‌- ಸರ್ಕಾರದಿಂದ ಅನುಮತಿ

    ಖಾನಾಪೂರ ತಾಲೂಕಿನಲ್ಲಿ ಬಡಜನರಿದ್ದಾರೆ. ಅವರಿಗೆ ಬೆಳಗಾವಿಗೆ ಹೋಗಿ ಹೆರಿಗೆ ಮಾಡಿಸಿಕೊಳ್ಳಲು ಕಷ್ಟವಾಗುತ್ತಿತ್ತು. ಇದನ್ನು ಗಮನಿಸಿ ಈ ಸುಸಜ್ಜಿತವಾದ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ವೈದ್ಯೆಯಾಗಿರುವ ನನಗೆ ಜನ ಶಾಸಕಿ ಮಾಡಿ ಆಶಿರ್ವಾದ ನೀಡಿದ್ದಾರೆ. ಅವರು ನೀಡಿದ ಆಶಿರ್ವಾದಕ್ಕೆ ಚಿರಋಣಿ. ಇನ್ನು ಸ್ವಲ್ಪ ತಿಂಗಳಿನಲ್ಲಿ ಇದನ್ನು ಲೋಕಾರ್ಪಣೆ ಮಾಡಿ ಸಾರ್ವಜನಿಕರಿಗೆ ಸಮರ್ಪಿಸಲಾಗುವುದು. ಈ ಮೂಲಕ ತಾಯಿ ಮತ್ತು ಮಕ್ಕಳ ಆರೈಕೆಗೆ ಹೆಚ್ಚಿನ ಒತ್ತು ನೀಡುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಕ್ಸಲ್ ನಿಗ್ರಹ ದಳ ಸಿಬ್ಬಂದಿಗೆ ವಿಶೇಷ ಆಹಾರ ಭತ್ಯೆ ಹೆಚ್ಚಿಸಿದ ಸರ್ಕಾರ

  • ಒಂದು ತಿಂಗಳು ಬಿಎಸ್‍ವೈಯೇ ಸಿಎಂ ಆಗಿ ಮುಂದುವರಿದ್ರೆ ಒಳ್ಳೆಯದು: ‘ಕೈ’ ಶಾಸಕಿ ನಿಂಬಾಳ್ಕರ್

    ಒಂದು ತಿಂಗಳು ಬಿಎಸ್‍ವೈಯೇ ಸಿಎಂ ಆಗಿ ಮುಂದುವರಿದ್ರೆ ಒಳ್ಳೆಯದು: ‘ಕೈ’ ಶಾಸಕಿ ನಿಂಬಾಳ್ಕರ್

    ಬೆಳಗಾವಿ: ಒಂದು ತಿಂಗಳಾದರೂ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿ ಮುಂದುವರಿದರೆ ಒಳ್ಳೆಯದು ಎಂದು ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಪರೋಕ್ಷವಾಗಿ ಹೇಳಿದ್ದಾರೆ.

    ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ವೇಳೆ ಸಿಎಂ ಬದಲಾವಣೆ ಬಗ್ಗೆ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಪರಿಸ್ಥಿತಿಯಲ್ಲಿ ಬಿಜೆಪಿ ಸಿಎಂ ಬದಲಾವಣೆ, ಮಂತ್ರಿ ಯಾರನ್ನು ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಅವರನ್ನು ದೇವರೇ ಕಾಪಾಡಬೇಕು ಎಂದರು.

    ಆಪರೇಷನ್ ಕಮಲ ಮಾಡಿ ಜನಾಶೀರ್ವಾದ ಮೀರಿ ಸರ್ಕಾರ ಮಾಡಿದರು. ಜನರ ಬಗ್ಗೆ ಬಿಜೆಪಿಯವರಿಗೆ ಕಾಳಜಿ ಇಲ್ಲ. ಇಂತಹ ಸಂದರ್ಭಗಳಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆ ಆಗ್ತಿದೆ, ಬಹಳ ದುಃಖದ ಪರಿಸ್ಥಿತಿ ಇದೆ. ನಾಯಕತ್ವ ಬದಲಾವಣೆ ವಿಚಾರ ಬಿಜೆಪಿಗೆ ಬಿಟ್ಟಿದ್ದು. ಆದರೆ ಇಂತಹ ಪರಿಸ್ಥಿತಿಯಲ್ಲಿ ಇವರೇ ಒಂದು ತಿಂಗಳು ಸಿಎಂ ಆಗಿ ಮುಂದುವರಿದ್ರೆ ಪರಿಹಾರ ಬೇಗ ಕೊಡಲು ಸಾಧ್ಯವಿದೆ ಎಂದು ಹೇಳಿದರು.

    ಕಡೇಪಕ್ಷ ಒಂದು ತಿಂಗಳು ಈಗಿನವರೇ ಸಿಎಂ ಆಗಿ ಮುಂದುವರಿದ್ರೆ ಒಳ್ಳೆಯದು. ಹೊಸ ಸಿಎಂ ಬಂದ್ಮೇಲೆ ಅಧಿಕಾರಿಗಳಿಗೆ ನಿರ್ದೇಶನ ಕೊಡಲು ಮತ್ತೆ ಲೇಟ್ ಆಗುತ್ತದೆ. ಜನರ ಪರವಾಗಿ ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡ್ತಾರೋ ಇಲ್ವೋ ಗೊತ್ತಿಲ್ಲ ಅದು ಅವರ ಪಕ್ಷದ ವಿಷಯ. ನನಗೆ ಈ ಬಗ್ಗೆ ಮಾತನಾಡಲು ಅಧಿಕಾರ ಇಲ್ಲ. ಆದರೆ ಜನರ ಪರ ತೀರ್ಮಾನ ಕೈಗೊಳ್ಳಬೇಕು ಅಂತ ಒಂದು ಆಸೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ರಣ ಮಳೆಗೆ ಮಹಾರಾಷ್ಟ್ರದಲ್ಲಿ 100 ಮಂದಿ ಬಲಿ- 1,000ಕ್ಕೂ ಹೆಚ್ಚು ಮಂದಿ ಸ್ಥಳಾಂತರ

    ಇದೇ ವೇಳೆ ಖಾನಾಪುರ ತಾಲೂಕಿನಲ್ಲಿ ಧಾರಾಕಾರ ಮಳೆ ವಿಚಾರ ಸಂಬಂಧ ಮಾತನಾಡಿ, 2019ರಲ್ಲೂ ಇದೇ ರೀತಿ ಪ್ರವಾಹ ಬಂದಿತ್ತು, ಈಗಾಗಲೇ ಖಾನಾಪುರದಲ್ಲಿ 521 ಮಿ.ಮೀ ಮಳೆಯಾಗಿದೆ. ಆಗಸ್ಟ್‍ನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆ ಇತ್ತು, ಈಗಾಗಲೇ ಆಗಿಬಿಟ್ಟಿದೆ ಎಂದರು. ಇದನ್ನೂ ಓದಿ:ಶ್ವಾನದ ಸವಿನೆನಪಿಗೆ ಕಂಚಿನ ಪ್ರತಿಮೆ – ಬಿಡಿಸಲಾಗದ ಮಾಲೀಕ, ಶ್ವಾನದ ನಂಟು

    ಜಿಲ್ಲಾ ಉಸ್ತುವಾರಿ ಸಚಿವ ಡಿಸಿಎಂ ಗೋವಿಂದ ಕಾರಜೋಳ ಜೊತೆ ಚರ್ಚೆ ನಡೆಸುತ್ತೇನೆ. ಮಳೆಯಿಂದ ಆದ ಹಾನಿಗೆ ಆದಷ್ಟು ಬೇಗ ಪರಿಹಾರ ನೀಡಲು ಮನವಿ ಮಾಡುತ್ತೇನೆ. ದುರ್ಗಾನಗರ, ಪೊಲೀಸ್ ತರಬೇತಿ ಕೇಂದ್ರ ಜಲಾವೃತ ಆಗಿದೆ. ಇನ್ನೂ ಮೂರು ದಿನ ಇದೇ ರೀತಿ ಮಳೆಯಾದ್ರೆ ಪರಿಸ್ಥಿತಿ ಬಿಗಡಾಯಿಸುತ್ತೆ. ನನ್ನ ಮನೆಯೂ ಸಂಪೂರ್ಣ ಜಲಾವೃತಗೊಂಡಿದೆ, ಕಳೆದ ವರ್ಷ ನನ್ನ ಮನೆಯ ಮೊದಲ ಮಹಡಿವರೆಗೆ ನೀರು ಬಂದಿತ್ತು. ಪರಿಹಾರ ಕೇಂದ್ರ ವ್ಯವಸ್ಥೆ ಬಗ್ಗೆ ತಾಲೂಕು ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.

    ಮಳೆಯಿಂದ ಹಲವು ರಸ್ತೆಗಳು ಜಲಾವೃತಗೊಂಡು ಸಂಪರ್ಕ ಕಡಿತವಾಗಿದೆ. ಖಾನಾಪುರ ತಾಲೂಕಿನಲ್ಲಿ ಹೊಲಕ್ಕೆ ಹೋಗಿದ್ದ ರೈತ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. ರೈತನ ಮೃತದೇಹ ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕರೆ ತರಲು ಆಗ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮೃತದೇಹ ಮನೆಯಲ್ಲಿ ಇಟ್ಟುಕೊಳ್ಳಲಾಗಲ್ಲ. ಈ ವರ್ಷವಾದರೂ ಸರ್ಕಾರ ಬೇಗ ಪರಿಹಾರ ಬೇಗ ಕೊಡಬೇಕು ಅಂತಾ ವಿನಂತಿ ಮಾಡ್ತೇನೆ ಎಂದರು.

  • ರೆಸಾರ್ಟ್‌ಗೆ ಬರಲಿಲ್ಲ ಅಂಜಲಿ ನಿಂಬಾಳ್ಕರ್- ಕುತೂಹಲ ಮೂಡಿಸಿದೆ ಶಾಸಕಿ ನಡೆ

    ರೆಸಾರ್ಟ್‌ಗೆ ಬರಲಿಲ್ಲ ಅಂಜಲಿ ನಿಂಬಾಳ್ಕರ್- ಕುತೂಹಲ ಮೂಡಿಸಿದೆ ಶಾಸಕಿ ನಡೆ

    ಬೆಂಗಳೂರು: ದೋಸ್ತಿ ಸರ್ಕಾರದ ವಿಕೆಟ್ ಇನ್ನೂ ಪತನವಾಗುತ್ತಾ ಎಂಬ ಅನುಮಾನವೊಂದು ಇದೀಗ ಮೂಡಿದೆ. ಯಾಕಂದ್ರೆ ಮೂರು ಪಕ್ಷಗಳ ಶಾಸಕರು ರೆಸಾರ್ಟ್ ವಾಸ್ತವ್ಯದ ಮೊರೆ ಹೋಗಿದ್ದಾರೆ. ಈ ಮಧ್ಯೆ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಅವರ ನಡೆ ತೀವ್ರ ಕುತೂಹಲ ಹುಟ್ಟಿಸಿದೆ.

    ಹೌದು. ರಾಜ್ಯ ರಾಜಕಾರಣ ರೆಸಾರ್ಟ್ ಗೆ ಶಿಫ್ಟ್ ಆಗಿದೆ. ಸತತ 8ನೇ ದಿನಗಳಿಂದ ಆಡಳಿತಯಂತ್ರ ಸಂಪೂರ್ಣ ಕುಸಿದುಬಿದ್ದಿದೆ. ತಮ್ಮ ನೂರಕ್ಕೂ ಹೆಚ್ಚು ಶಾಸಕರನ್ನು ಒಂದೇ ಕಡೆ ಇರಿಸಿಕೊಳ್ಳಲು ಬಿಜೆಪಿಯವರಿಗೆ ಸರಿಯಾದ ಜಾಗ ಸಿಕ್ಕಿಲ್ಲ. ದೇವನಹಳ್ಳಿ ಸಮೀಪದ ರಮಾಡಾ ರೆಸಾರ್ಟ್ ನಲ್ಲಿ 80 ಶಾಸಕರನ್ನು, ಸಾಯಿ ಲೀಲಾ ರೆಸಾರ್ಟ್ ನಲ್ಲಿ 22 ಶಾಸಕರನ್ನು ಬಿಜೆಪಿ ನಾಯಕರು ಬಿಗಿ ಭದ್ರತೆ ನಡುವೆ ಇರಿಸಿದ್ದಾರೆ.

    ಕಾಂಗ್ರೆಸ್ ನಾಯಕರಿಗೆ ರೆಸಾರ್ಟ್ ಸಿಕ್ಕಿಲ್ಲ. ಹೀಗಾಗಿ ಗೊರಗುಂಟೆಪಾಳ್ಯದ ತಾಜ್ ವಿವಾಂತ ಹೋಟೆಲ್‍ನಲ್ಲಿ ತನ್ನ ಶಾಸಕರನ್ನು ಕಾಂಗ್ರೆಸ್ ಇರಿಸಿದೆ. ಆದರೆ ಶುಕ್ರವಾರ ರಾತ್ರಿ ತಾಜ್ ವಿವಾಂತದಿಂದ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ನಿರ್ಗಮಿಸಿದ್ದು, ಅವರ ಈ ನಡೆ ಕುತೂಹಲ ಕೆರಳಿಸಿದೆ.

    ಜೆಡಿಎಸ್ ಶಾಸಕರು ಕಳೆದ ನಾಲ್ಕು ದಿನಗಳಿಂದ ದೇವನಹಳ್ಳಿ ಸಮೀಪದ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ನಲ್ಲಿ ಬೀಡುಬಿಟ್ಟಿದ್ದಾರೆ. ಸೋಮವಾರ ಸದನ ಆರಂಭವಾಗುವವರೆಗೆ ಎಲ್ಲರನ್ನು ರೆಸಾರ್ಟ್ ಗಳಲ್ಲಿ ಇರಿಸಿಕೊಳ್ಳಲಾಗುತ್ತದೆ. ಅಲ್ಲದೆ ಎಲ್ಲಾ ಕಡೆ ಟೈಟ್ ಸೆಕ್ಯೂರಿಟಿ ಕೈಗೊಳ್ಳಲಾಗಿದೆ.