Tag: Khanapur

  • ಪುರುಷತ್ವ ಹೆಚ್ಚಿಸುವ ಔಷಧಕ್ಕಾಗಿ ಚೀನಾಗೆ ಚಿಪ್ಪು ಹಂದಿ ಸಾಗಿಸುತ್ತಿದ್ದ ಗ್ಯಾಂಗ್ ಅರೆಸ್ಟ್

    ಪುರುಷತ್ವ ಹೆಚ್ಚಿಸುವ ಔಷಧಕ್ಕಾಗಿ ಚೀನಾಗೆ ಚಿಪ್ಪು ಹಂದಿ ಸಾಗಿಸುತ್ತಿದ್ದ ಗ್ಯಾಂಗ್ ಅರೆಸ್ಟ್

    ಬೆಳಗಾವಿ: ಅಕ್ರಮವಾಗಿ ಚೀನಾಗೆ (China) ಚಿಪ್ಪು ಹಂದಿ ಸಾಗಿಸುತ್ತಿದ್ದ ಗ್ಯಾಂಗ್ ಖೆಡ್ಡಾಗೆ ಬೀಳಿಸಿರುವ ಭರ್ಜರಿ ಕಾರ್ಯಾಚರಣೆ ಜಿಲ್ಲೆಯ ಖಾನಾಪುರ (Khanapur) ಅರಣ್ಯದಲ್ಲಿ ನಡೆದಿದೆ.

    ಭರ್ಜರಿ ಕಾರ್ಯಾಚರಣೆ ನಡೆಸಿದ ಅರಣ್ಯ ಅಧಿಕಾರಿಗಳು ಜೀವಂತ ಒಂದು ಚಿಪ್ಪು ಹಂದಿ, ಇಬ್ಬರು ಆರೋಪಿಗಳು ಅರೆಸ್ಟ್ ಮಾಡಿದ್ದಾರೆ.ಇದನ್ನೂ ಓದಿ: ಈ ಮೈಸೂರು ದಸರಾದ ಗಜಪಡೆ – ಅಭಿಮನ್ಯು & ಟೀಂ ಬಗ್ಗೆ ಇಲ್ಲಿದೆ ಫುಲ್‌ ಡಿಟೇಲ್ಸ್‌

    ನಾಲ್ಕು ಜನ ಆರೋಪಿಗಳು ರೈಲು ನಿಲ್ದಾಣದಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿರುವಾಗ ಕಂಡು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರು ವರ್ಷದ ನಾಲ್ಕೂವರೆ ಕೆಜಿ ತೂಕದ ಜೀವಂತ ಚಿಪ್ಪು ಹಂದಿಯನ್ನು ಅಧಿಕಾರಗಳು ವಶಕ್ಕೆ ಪಡೆದಿದ್ದಾರೆ.

    ಖಾನಾಪುರ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀತಾ ನಿಂಬರಗಿ ಮಾತನಾಡಿ, ಚಿಪ್ಪು ಹಂದಿಯನ್ನು ಪುರುಷತ್ವ ಹೆಚ್ಚಿಸುವ ಔಷಧ ತಯಾರಿಕೆಗಾಗಿ ಬಳಸಲಾಗುತ್ತದೆ. ಇದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬಲು ಬೇಡಿಕೆ ಇದೆ. ಖಾನಾಪುರದಿಂದ ಚೀನಾವರೆಗೂ ಚಿಪ್ಪು ಹಂದಿಯನ್ನು ಸಾಗಾಟ ಮಾಡುತ್ತಿದ್ದು, ಸಾಗಾಟ ಜಾಲವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ ಎಂದರು.

    ಖಾನಾಪುರದಿಂದ ಕಾರವಾರಕ್ಕೆ (Karwar) ಕಳಿಸಿ ಅಲ್ಲಿಂದ ಬೋಟ್ ಮೂಲಕ ಕೋಲ್ಕತ್ತಾಗೆ (Kolkatta) ಸಾಗಿಸುತ್ತಾರೆ. ಬಳಿಕ ಹಡಗಿನಲ್ಲಿ ಚೀನಾಕ್ಕೆ ಸಾಗಾಟ ಮಾಡುತ್ತಿದ್ದರು. ಸದ್ಯ ಚಿಪ್ಪು ಹಂದಿ ಸಾಗಾಟ ತಂಡದ ಶೋಧಕ್ಕಾಗಿ ಅಧಿಕಾರಿಗಳು ಬೆನ್ನು ಬಿದ್ದಿದ್ದಾರೆ. ಒಂದು ಪ್ರತ್ಯೇಕ ತಂಡ ರಚಸಿ ಕಳ್ಳಸಾಕಾಣೆ ತಂಡದ ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ನವರಾತ್ರಿ ವಿಶೇಷ – 1 | ಕೋಲ್ಕತ್ತಾದ ಕುರ್ಮಾತುಲಿ ಪಾರ್ಕ್‌ ದುರ್ಗಾ ಪೆಂಡಾಲ್‌ ಮಹತ್ವದ ನಿಮಗೆ ಗೊತ್ತೆ?

  • ನಿಮ್ಮನ್ನು ಅರೆಸ್ಟ್ ಮಾಡಿಸ್ತೀನಿ – ಬಸ್ ಬಿಡುವಂತೆ ಮನವಿ ಸಲ್ಲಿಸಲು ಬಂದಿದ್ದ ವಿದ್ಯಾರ್ಥಿಗಳಿಗೆ ತಹಶೀಲ್ದಾರ್ ಧಮ್ಕಿ!

    ನಿಮ್ಮನ್ನು ಅರೆಸ್ಟ್ ಮಾಡಿಸ್ತೀನಿ – ಬಸ್ ಬಿಡುವಂತೆ ಮನವಿ ಸಲ್ಲಿಸಲು ಬಂದಿದ್ದ ವಿದ್ಯಾರ್ಥಿಗಳಿಗೆ ತಹಶೀಲ್ದಾರ್ ಧಮ್ಕಿ!

    ಬೆಳಗಾವಿ: ಬಸ್ ಬಿಡುವಂತೆ ಮನವಿ ಸಲ್ಲಿಸಲು ತಹಶೀಲ್ದಾರರ ಕಚೇರಿಗೆ ಬಂದಿದ್ದ ಶಾಲಾ ವಿದ್ಯಾರ್ಥಿಗಳಿಗೆ (Students) ಖಾನಾಪುರ (Khanapur) ತಹಶೀಲ್ದಾರ್ (Tehsildar) ಧಮ್ಕಿ ಹಾಕಿರುವ ಘಟನೆ ನಡೆದಿದೆ.

    ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕರಂಜಾಳ, ಹಳಸಾಲ, ಬಾಲ್ಕಿ ಬಿಹೆಚ್ ಗ್ರಾಮದ ವಿದ್ಯಾರ್ಥಿಗಳು ಖಾನಾಪುರ ತಹಶೀಲ್ದಾರ್ ಪ್ರಕಾಶ್ ಗಾಯಕ್ವಾಡ್‌ಗೆ ಮನವಿ ಸಲ್ಲಿಸಲು ಹೋಗಿದ್ದರು. ಈ ವೇಳೆ ಪೊಲೀಸರನ್ನು ಕರೆಸಿ ನಿಮ್ಮನ್ನು ಅರೆಸ್ಟ್ ಮಾಡಿ ಒಳಗಡೆ ಹಾಕಿಸುತ್ತೇನೆ ಎಂದು ತಹಶೀಲ್ದಾರ್ ಮಕ್ಕಳ ಮೇಲೆ ದರ್ಪ ತೋರಿದ್ದಾರೆ.

    ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಮನವಿ ಸಲ್ಲಿಸಲು ತಹಶೀಲ್ದಾರರ ಕಚೇರಿಗೆ ವಿದ್ಯಾರ್ಥಿಗಳು ಬಂದಿದ್ದರು. ಶಾಲಾ ಮಕ್ಕಳ ಸಮಸ್ಯೆಗೆ ಧ್ವನಿಯಾಗಬೇಕಿದ್ದ ತಹಶೀಲ್ದಾರ್ ವರ್ತನೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಈ ವೇಳೆ ಆವಾಜ್ ಹಾಕಿದ ತಹಶೀಲ್ದಾರ್ ಪ್ರಕಾಶ್ ಗಾಯಕ್ವಾಡ್, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದೀರಿ ಎಂದು ಮಕ್ಕಳ ಮೇಲೆಯೇ ಆರೋಪಿಸಿದ್ದಾರೆ. ಇದನ್ನೂ ಓದಿ: ಕಳೆಗಟ್ಟಿದ ಹಾಸನಾಂಬೆ ದರ್ಶನೋತ್ಸವ ಸಂಭ್ರಮ – ಇಂದು ದೇವಿಯ ದರ್ಶನ ಪಡೆಯಲಿರುವ ಸಿಎಂ

    ಕಳೆದ ಹಲವಾರು ವರ್ಷಗಳಿಂದ ಬಸ್ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿಗಳು ಮನವಿ ಕೊಟ್ಟಿದ್ದರು. ಆದರೆ ಈವರೆಗೆ ಬಸ್ ಸೌಕರ್ಯ ಇಲ್ಲದೇ ಮಕ್ಕಳು ಪರದಾಟ ನಡೆಸಿದ್ದರು. ನಿತ್ಯ ನಡೆದುಕೊಂಡು ಹೋಗಿ ರಾತ್ರಿ ಮನೆ ಸೇರುವ ಪರಿಸ್ಥಿತಿ ನಿರ್ಮಾಣ ಆಗಿತ್ತು.

    ಖಾನಾಪುರದ ಬಹುತೇಕ ಗ್ರಾಮಗಳು ಕಾಡಂಚಿನ ಪ್ರದೇಶದಲ್ಲಿ ಇದ್ದು, ಕಾಡು ಪ್ರಾಣಿಗಳ ಹಾವಳಿಯೂ ಹೆಚ್ಚಾಗಿದೆ. ಹೀಗಾಗಿ ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಮನವಿ ಸಲ್ಲಿಸಲು ವಿದ್ಯಾರ್ಥಿಗಳು ಮುಂದಾಗಿದ್ದರು. ಇದನ್ನೂ ಓದಿ: ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದು ವೈದ್ಯ ಸಾವು

  • ನಿಂತಿದ್ದ ಲಾರಿಗೆ ಹಿಂಬದಿಯಿಂದ ಟ್ರಕ್ ಡಿಕ್ಕಿ – ಓರ್ವ ಸಾವು, ನಾಲ್ವರು ಗಂಭೀರ

    ನಿಂತಿದ್ದ ಲಾರಿಗೆ ಹಿಂಬದಿಯಿಂದ ಟ್ರಕ್ ಡಿಕ್ಕಿ – ಓರ್ವ ಸಾವು, ನಾಲ್ವರು ಗಂಭೀರ

    ಬೆಳಗಾವಿ: ನಿಂತಿದ್ದ ಲಾರಿಗೆ ಹಿಂಬದಿಯಿಂದ ಟ್ರಕ್ ಡಿಕ್ಕಿ (Accident) ಹೊಡೆದ ಪರಿಣಾಮ ಓರ್ವ ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಖಾನಾಪೂರದಲ್ಲಿ (Khanapur) ನಡೆದಿದೆ.

    ಮೃತನನ್ನು ಸಂಗರಗಾಳಿ ಗ್ರಾಮದ ನಾರಾಯಣ ಲಕ್ಷ್ಮೀಣ ಕಡೋಲ್ಕರ್ (65) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ನಾಲ್ವರ ಗುರುತು ಪತ್ತೆಯಾಗಿಲ್ಲ. ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಚೈತ್ರಾ ಡೀಲ್ ಕೇಸ್; ನನ್ನ ಹೆಸರು ಬಂದಿರೋದು ಬೇಸರವಾಗಿದೆ- ವಜ್ರದೇಹಿ ಮಠದ ಸ್ವಾಮೀಜಿ

    ಖಾನಾಪೂರ ತಾಲೂಕಿನ ನಾಯ್ಕಲ್ ಕತ್ರಿ ರಸ್ತೆ ಬಳಿ ಹತ್ತು ಚಕ್ರದ ಲಾರಿ ನಿಂತಿತ್ತು. ಈ ಲಾರಿಗೆ ಮಾಡಿಗುಂಜಿ ಕಡೆಯಿಂದ ಖಾನಾಪುರ ಕಡೆಗೆ ಬರುತ್ತಿದ್ದ ಮಿನಿ ಟ್ರಕ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಖಾನಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಹಳೇ ದ್ವೇಷಕ್ಕೆ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾತ್ರಿ ಮಲಗಲು ಜಾಗ ಸಿಗದೆ ಸ್ಮಶಾನದಲ್ಲೇ ಟೆಂಟ್ ಹಾಕಿದ ವಿದೇಶಿಗರು – ಹೌಹಾರಿದ ಜನ

    ರಾತ್ರಿ ಮಲಗಲು ಜಾಗ ಸಿಗದೆ ಸ್ಮಶಾನದಲ್ಲೇ ಟೆಂಟ್ ಹಾಕಿದ ವಿದೇಶಿಗರು – ಹೌಹಾರಿದ ಜನ

    ಬೆಳಗಾವಿ: ವಿದೇಶದಿಂದ ಬಂದು ದೇಶ ಸುತ್ತಿದ ವಿದೇಶಿಗರು (Foreigners) ಬೇರೆಲ್ಲೂ ಜಾಗ ಸಿಗದೆ ಸ್ಮಶಾನದಲ್ಲಿ (Cemetery) ರೆಸ್ಟ್ ಮಾಡಿರುವ ಘಟನೆ ಜಿಲ್ಲೆಯ ಖಾನಾಪುರ (Khanapur) ತಾಲೂಕಿನ ರುಮೇವಾಡಿ ಗ್ರಾಮದಲ್ಲಿ ನಡೆದಿದೆ.

    ಸ್ಮಶಾನ ಎಂದರೆ ದೂರ ಸರಿಯುವ ಜನರೇ ಹೆಚ್ಚು. ಇವರ ಮಧ್ಯೆ ಸ್ಮಶಾನದಲ್ಲಿಯೇ ವಿದೇಶಿಗರು ವಾಸ್ತವ್ಯ ಹೂಡಿದ್ದಾರೆ. ಬೆಳ್ಳಂಬೆಳಗ್ಗೆ ಸ್ಮಾಶಾನದಲ್ಲಿ ಗಾಢ ನಿದ್ದೆಗೆ ಜಾರಿದ್ದ ವಿದೇಶಿಗರನ್ನು ಕಂಡು ಖಾನಾಪುರದ ಜನರು ಹೌಹಾರಿದ್ದಾರೆ. ಇದನ್ನೂ ಓದಿ: ಸಚಿವ ಸತೀಶ್ ಜಾರಕಿಹೊಳಿ ತವರು ಜಿಲ್ಲೆಯ 20 ಗ್ರಾಮಗಳಲ್ಲಿ ಸುಸಜ್ಜಿತ ರಸ್ತೆಗಳೇ ಇಲ್ಲ!

    ಎರಡು ಬುಲೆಟ್ ಬೈಕ್ ಮೇಲೆ ರೈಡ್‌ಗೆ ಬಂದಿದ್ದ ವಿದೇಶಿಗರು ರಾತ್ರಿ ತಂಗಲು ಎಲ್ಲೂ ಜಾಗ ಸಿಗದ ಹಿನ್ನೆಲೆ ಸ್ಮಶಾನದಲ್ಲಿ ವಾಸ್ತವ್ಯ ಹೂಡಿದ್ದಾರೆ. ಜನ ಸೇರುತ್ತಿದ್ದಂತೆ ಎಚ್ಚರಗೊಂಡ ಅವರು ಯಾರೊಂದಿಗೂ ಮಾತನಾಡದೆ ಬೈಕ್ ಹತ್ತಿ ಹೊರಟು ಹೋಗಿದ್ದಾರೆ. ಇದನ್ನೂ ಓದಿ: ಫ್ರೀ ಬಸ್ ಘೋಷಣೆ ಬಳಿಕ ಮೊದಲ ವೀಕೆಂಡ್ – ಸರ್ಕಾರಿ ಬಸ್‌ಗಳು ಫುಲ್ ರಶ್

  • ಗ್ರಾಮದೇವತೆಗೆ ಉಡಿ ತುಂಬುವಾಗ ದಲಿತರಿಗೆ ಬಹಿಷ್ಕಾರ ಆರೋಪ

    ಗ್ರಾಮದೇವತೆಗೆ ಉಡಿ ತುಂಬುವಾಗ ದಲಿತರಿಗೆ ಬಹಿಷ್ಕಾರ ಆರೋಪ

    ಬೆಳಗಾವಿ: ಗ್ರಾಮ ದೇವತೆಗೆ ಉಡಿ ತುಂಬುವಾಗ ದಲಿತರಿಗೆ ಬಹಿಷ್ಕಾರ ಹಾಕಿದ ಆರೋಪ ಕೇಳಿ ಬಂದ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

    ಶುಕ್ರವಾರ ಗ್ರಾಮ ದೇವತೆ ಜಾತ್ರೆಯಲ್ಲಿ ಉಡಿ ತುಂಬುವ ಕಾರ್ಯಕ್ರಮವಿತ್ತು. ಈ ಸಂದರ್ಭದಲ್ಲಿ ದಲಿತ ಸಮುದಾಯದ ಮಹಿಳೆಯರಿಗೆ ದೇವಸ್ಥಾನದ ಗರ್ಭಗುಡಿಯೊಳಗೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಅಲ್ಲದೇ ದಲಿತರ ಹಣೆಗೆ ಅಂಗಾರ, ಭಂಡಾರ ಹಚ್ಚದ ಬಗ್ಗೆಯೂ ಆರೋಪ ಕೇಳಿ ಬಂದಿದೆ.

    ಅಲ್ಲದೇ ದಲಿತ ಸಮುದಾಯದವರಿಗೆ ಜಾತಿ ನಿಂದನೆ ಮಾಡಿ, ದಲಿತ ಯುವಕರ ಹೇರ್ ಕಟಿಂಗ್‍ಗೆ ನಿರಾಕರಣೆ ಮಾಡಲಾಗಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಬೆಳಗಾವಿ ಎಸಿ ರವೀಂದ್ರ ಕರಿಲಿಂಗಣ್ಣನವರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಉಮಾ ಸಾಲಿಗೌಡರ್, ಡಿವೈಎಸ್‍ಪಿ ಶಿವಾನಂದ ಕಟಗಿ ಸೇರಿ ಹಲವರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸವರ್ಣೀಯರು ಹಾಗೂ ದಲಿತರ ಮುಖಂಡರ ಜೊತೆಗೆ ಸಂಧಾನ ಸಭೆ ಮಾಡಿದರು. ಇದನ್ನೂ ಓದಿ: ಕಾಂಗ್ರೆಸ್‍ಗೆ ಮುಖ್ಯಮಂತ್ರಿ ಚಂದ್ರು ಗುಡ್ ಬೈ

    ಅಧಿಕಾರಿಗಳ ಎದುರೇ ದಲಿತರು ಹಲವು ಗಂಭೀರ ಆರೋಪ ಮಾಡಿದರು. ಗ್ರಾಪಂನಲ್ಲಿ ಸಭೆ ಕರೆದ ವೇಳೆ ಸವರ್ಣೀಯರು ದಲಿತರನ್ನು ಪ್ರತ್ಯೇಕವಾಗಿ ಕೂರಿಸುತ್ತಾರೆ ಎಂದು ಆರೋಪಿಸಿದರು. ಆದರೆ ದಲಿತರ ಆರೋಪಗಳನ್ನು ಸವರ್ಣೀಯರು ಅಲ್ಲಗಳೆದರು. ಉಡಿ ತುಂಬಲು ನಾವು ಯಾವುದೇ ನಿಬರ್ಂಧ ಹೇರಿಲ್ಲ ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ: ಬೆಳಗಾವಿಯಲ್ಲೂ ಪುರಾತನ ದೇವಾಲಯ ಒಡೆದು ಮಸೀದಿ ನಿರ್ಮಾಣ: ಅಭಯ್ ಪಾಟೀಲ್

    ಆದರೆ, ದಲಿತರು ಗ್ರಾಮದ ಇಬ್ಬರು ಮುಖಂಡರು, ಸಲೂನ್ ಶಾಪ್ ಮಾಲೀಕ ಹಾಗೂ ಈ ವಿಷಯ ಮೇಲಾಧಿಕಾರಿಗಳ ಗಮನಕ್ಕೆ ತರದ ಪಿಡಿಒ ವಿರುದ್ಧ ದೂರು ದಾಖಲಿಸುವಂತೆ ಪಟ್ಟು ಹಿಡಿದರು. ಎಫ್‍ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಸದ್ಯ ಸಂಧಾನ ಸಭೆ ಸಫಲವಾಗಿದ್ದು, ಮುಂದೆ ಎರಡೂ ಸಮುದಾಯದವರು ಅನ್ಯೋನ್ಯವಾಗಿ ಬಾಳಲು ಸೂಚನೆ ನೀಡಲಾಯಿತು.

  • ಮಹಿಳೆ ಮೇಲೆ ಅತ್ಯಾಚಾರ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಪೊಲೀಸರ ವಶ

    ಮಹಿಳೆ ಮೇಲೆ ಅತ್ಯಾಚಾರ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಪೊಲೀಸರ ವಶ

    ಬೆಳಗಾವಿ: ಎರಡು ತಿಂಗಳ ಹಿಂದೆ ಅತ್ಯಾಚಾರ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಖಾನಾಪೂರ ಪೊಲೀಸರು ಜಾಂಬೋಟಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಖಾನಾಪೂರ ತಾಲೂಕಿನ ಸಂಗರಗಾಳಿ ಗ್ರಾಮದ ನಿವಾಸಿ ಆಸ್ಟಿನ್ ಡುಮಿಂಗ್ ಮಸ್ಕರೇನ್ ಬಂಧಿತ. ಕಳೆದ ಎರಡು ತಿಂಗಳ ಹಿಂದೆ ಆಸ್ಟಿನ್ ವಿರುದ್ಧ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ವರದಿಯಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಆಸ್ಟಿನ್ ಪರಾರಿಯಾಗಿದ್ದನು. ಆತನ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು ಹರಸಾಹಸಪಟ್ಟಿದ್ದರು. ಇದನ್ನೂ ಓದಿ: ಸಿನಿಮೀಯ ರೀತಿ ದರೋಡೆಕೋರನನ್ನೇ ಹಿಡಿದ ಮನೆಯವರು

    CRIME 2

    ಜಾಂಬೋಟಿ ಗ್ರಾಮದಲ್ಲಿರುವ ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ಸುರೇಶ್ ನೇತೃತ್ವದಲ್ಲಿ ಖಾನಾಪುರ ಠಾಣೆಯ ಸಿಬ್ಬಂದಿ ಎಸ್.ಎಸ್.ತುರಮುಂದಿ, ಎಸ್.ಎಂ.ಸಾತಪ್ಪ ಅವರ, ಪ್ರಕಾಶ್ ಗಾಡಿವಡ್ಡರ ಮತ್ತು ಮಂಜುನಾಥ್ ಮುಸಳಿ ಅವರಿದ್ದ ಪೊಲೀಸರ ತಂಡ ಆಸ್ಟಿನ್‍ನನ್ನು ಬಂಧಿಸಿದ್ದು, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

    ಆಸ್ಟಿನ್ ವಿರುದ್ಧ ಅತ್ಯಾಚಾರದ ಜೊತೆಗೆ ಒಂದು ಕೊಲೆ ಹಾಗೂ ಅಕ್ರಮ ಗಾಂಜಾ ಸಾಗಾಟ ಪ್ರಕರಣವೂ ದಾಖಲಾಗಿದ್ದರಿಂದ ನ್ಯಾಯಾಧೀಶರು ಆತನಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. ಮೂರೂ ಪ್ರಕರಣಗಳ ವಿಚಾರಣೆ ಮುಂದುವರೆದಿದೆ. ಇದನ್ನೂ ಓದಿ: PSI ನೇಮಕಾತಿ ಅಕ್ರಮ – ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ ಮನೆಗೆ ಸಿಐಡಿ ದಾಳಿ

  • ಕೆಲಸದವನ ಜೊತೆ ಪ್ರಣಯದಾಟ – ಹೆಂಡ್ತಿ ಇನಿಯನಿಂದ ಕೊಲೆಯಾದ ಗಂಡ

    ಕೆಲಸದವನ ಜೊತೆ ಪ್ರಣಯದಾಟ – ಹೆಂಡ್ತಿ ಇನಿಯನಿಂದ ಕೊಲೆಯಾದ ಗಂಡ

    – ರುಂಡ ಕತ್ತರಿಸಿ ಬರ್ಬರವಾಗಿ ಕೊಲೆ

    ಬೆಳಗಾವಿ: ಡಿಸೆಂಬರ್ 25ರಂದು ನಡೆದಿದ್ದ ಫೋಟೋಗ್ರಾಫರ್ ಕೊಲೆ ಪ್ರಕರಣವನ್ನ ಬೆಳಗಾವಿ ಜಿಲ್ಲೆಯ ಖಾನಾಪುರ ಪೊಲೀಸರು ಬೇಧಿಸಿದ್ದು, ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಡಿ.25ರಂದು ಜಾಂಬೋಟಿಯಲ್ಲಿ ವಿಜಯ್ ಅವಲಕ್ಕಿ ಎಂಬವರ ಕೊಲೆಯಾಗಿತ್ತು. ಮೃತ ವಿಜಯ್ ಫೋಟೋ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದ ರಾಮಚಂದ್ರ ಸೇರಿ ಐವರನ್ನ ಪೊಲೀಸರು ಬಂಧಿಸಿದ್ದಾರೆ. ವಿಜಯ್ ನನ್ನು ಡಿ.25 ರಂದು ಬರ್ತ್ ಡೇ ಫೋಟೋ ತೆಗೆಯಬೇಕಿದೆ ಎಂದು ಆರೋಪಿ ರಾಮಚಂದ್ರ ಕರೆದುಕೊಂಡು ಹೋಗಿದ್ದನು. ಸಂಜೆ ಖಾನಾಪುರ ಅರಣ್ಯ ಪ್ರದೇಶದಲ್ಲಿ ರಾಮಚಂದ್ರ ತನ್ನ ಸಹಚರರ ಜೊತೆ ಸೇರಿ ವಿಜಯ್ ರುಂಡ ಕತ್ತರಿಸಿ ಕೊಲೆಗೈದಿದ್ದನು. ಕೊಲೆಯ ಬಳಿಕ ಆರೋಪಿಗಳೆಲ್ಲರೂ ಎಸ್ಕೇಪ್ ಆಗಿದ್ದರು.

    ಕೊಲೆ ಮಾಡಿದ್ಯಾಕೆ?: ಪ್ರಕರಣದ ಆರೋಪಿ ವಿಜಯ್ ಸ್ಟುಡಿಯೋದಲ್ಲಿ ಕೆಲಸ ಮಾಡಿಕೊಂಡಿದ್ದನು. ರಾಮಚಂದ್ರ ಮಾಲಕ ವಿಜಯ್ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ಈ ವಿಷಯ ತಿಳಿದ ವಿಜಯ್ ಆರೋಪಿಯನ್ನ ಕೆಲಸದಿಂದ ತೆಗೆದಿದ್ದರು. ಕೆಲಸದಿಂದ ತೆಗೆದ ಕೋಪದಲ್ಲಿ ಕೊಲೆ ಮಾಡಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ.

  • ಧಾರವಾಡದಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್ ಮರಾಠ ಪ್ರೇಮ

    ಧಾರವಾಡದಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್ ಮರಾಠ ಪ್ರೇಮ

    ಧಾರವಾಡ: ಮರಾಠ ಕ್ರಾಂತಿ ಮೋರ್ಚಾ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಮರಾಠಿ ಭಾಷಾ ಪ್ರೇಮ ಪ್ರದರ್ಶಿಸಿದ್ದಾರೆ.

    ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಬಂದ್ ಖಂಡಿಸಿ ನಡೆದ ಸಭೆಯಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಶಾಸಕಿ,ಸ ಮರಾಠ ಸಮಾಜಕ್ಕೆ 2ಎ ಮೀಸಲಾತಿ ನೀಡದಿದ್ದರೆ ಚುನಾವಣೆ ಬಹಿಷ್ಕಾರ ಮಾಡುತ್ತೇವೆ. ಮರಾಠ ಸಮಾಜದ ಬಗ್ಗೆ ಕಾಳಜಿ ಇದ್ದರೆ 2ಎ ಮೀಸಲಾತಿ ನೀಡಲಿ. ನಾವು ಕೂಡ ಸಮಾಜದ ಮುಖಂಡರಿಂದ ಪತ್ರ ಬರೆಯುತ್ತೇವೆ. ಏಳು ದಿನಗಳ ಒಳಗೆ ಮೀಸಲಾತಿ ನಿರ್ಣಯ ಮಾಡಬೇಕು. ಮೀಸಲಾತಿ ಮಾಡಿದ್ರೆ ಮಾತ್ರ ಮತ ಹಾಕುತ್ತೇವೆ. ಇಲ್ಲದಿದ್ದರೇ ಬೆಳಗಾವಿ, ಮಸ್ಕಿ, ಗ್ರಾಪಂ, ಜಿಪಂ ಎಲ್ಲ ಎಲೆಕ್ಷನ್ ಬಹಿಷ್ಕಾರ ಹಾಕ್ತೇವಿ ಎಂದು ಶಾಸಕಿ ಅಂಜಲಿ ಎಚ್ಚರಿಸಿದರು.

    ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯ ವಿಷಯದಲ್ಲಿ ನಾವು ಯಡಿಯೂರಪ್ಪ ಬಳಿ ಭಿಕ್ಷೆ ಕೇಳುತ್ತಿಲ್ಲ. ನಮಗೆ ಐವತ್ತು ಕೋಟಿಯಲ್ಲ, ಐನೂರು ಕೋಟಿ ಕೊಟ್ಟರೂ ಬೇಕಾಗಿಲ್ಲ. ಲಿಂಗಾಯತ ಸಮಾಜಕ್ಕೆ ಐನೂರು ಕೋಟಿ ಕೊಟ್ಟಿದೀರಿ. ಹಾಗೆಯೇ ಚುನಾವಣಾ ಗಿಮಿಕ್ ಅಂತಾ ಯಾವ ಸಮಾಜಕ್ಕೆ ಏನೇನು ಕೊಡ್ತಿರೋ ಕೊಡಿ. ಯಾವ ಜಾತಿಗೆ ಎಷ್ಟು ಮತ ಇದೆ ಅಷ್ಟು ಪ್ರಾಧಿಕಾರ ಮಾಡುತ್ತಾ ಹೋಗಲಿ ಎಂದರು.

    ಇದೇ ಸಂದರ್ಭದಲ್ಲಿ ಮರಾಠಿ ಭಾಷಾ ಪ್ರೇಮ ಪ್ರದರ್ಶಿಸಿದ ಅಂಜಲಿ, ಭಾಷಣದುದ್ದಕ್ಕೂ ಮರಾಠಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರು. ನನ್ನ ಖಾನಾಪುರ ಕ್ಷೇತ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಮರಾಠಿ ಭಾಷಿಕರು ಹೆಚ್ಚಿದ್ದಾರೆ. ಮಾರವಾಡಿ, ಲಿಂಗಾಯತರ, ಬ್ರಾಹ್ಮಣ ಯಾವುದೇ ಜಾತಿ ಇದ್ದರೂ ಮರಾಠಿ ಭಾಷಿಕರು ಹೆಚ್ಚಿದ್ದಾರೆ. ಅಲ್ಲಿ ಕನ್ನಡ ಮಾತನಾಡಿದರೆ ಅರ್ಥ ಆಗುವುದಿಲ್ಲ. ಅದಕ್ಕೆ ನಾವು ಅಲ್ಲಿ ಮರಾಠಿ ಭಾಷೆಯನ್ನೇ ಮಾತನಾಡುತ್ತೇವೆ ಎಂದ ಅವರು, ಬೆಂಗಳೂರಿನಲ್ಲೆ ಕನ್ನಡ ನಾಡಿನಲ್ಲೇ ಹುಟ್ಟಿದ ಜನರಿಗೆ ಕನ್ನಡ ಬರೋದಿಲ್ಲ. ಅವರು ತಮಿಳು, ತೆಲುಗು ಮಾತನಾಡುತ್ತಾರೆ. ಆದರೆ ಮರಾಠ ಸಮಾಜ ಕನ್ನಡ ಭಾಷೆ ಬಗ್ಗೆ ಅಭಿಮಾನ ಹೊಂದಿದ್ದೇವೆ ಎಂದರು.

  • ಬೆಂಗ್ಳೂರಿನಿಂದ ತಿರುಪತಿಗೆ ಪಾದಯಾತ್ರೆ ಕೈಗೊಂಡ ಶಾಸಕಿ ಅಂಜಲಿ ನಿಂಬಾಳ್ಕರ್

    ಬೆಂಗ್ಳೂರಿನಿಂದ ತಿರುಪತಿಗೆ ಪಾದಯಾತ್ರೆ ಕೈಗೊಂಡ ಶಾಸಕಿ ಅಂಜಲಿ ನಿಂಬಾಳ್ಕರ್

    ಬೆಳಗಾವಿ: ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಬೆಂಗಳೂರಿನಿಂದ ತಿರುಪತಿವರೆಗೆ ಸದ್ಭಾವನಾ ಪಾದಯಾತ್ರೆಯನ್ನು ಶನಿವಾರ ಬೆಳಗ್ಗೆ ಆರಂಭಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಶಾಸಕಿ ನಿಂಬಾಳ್ಕರ್ ಅವರು, ಸಶಕ್ತ ವರ್ತಮಾನ, ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥನೆ ನಡಿಗೆ. ನಮ್ಮ ಖಾನಾಪುರಕ್ಕಾಗಿ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಕೆಲವು ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.

    ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ತಮ್ಮ ಪತಿ, ಪೋಲಿಸ್ ಅಧಿಕಾರಿ ಐಜಿಪಿ ಹೇಮಂತ್ ನಿಂಬಾಳ್ಕರ್ ಸೇರಿದಂತೆ ತಮ್ಮ ಸಹೋದರರಾದ ಮಿಲಿಂದ್ ಮತ್ತು ಸುರೇಶ್ ಅವರೊಂದಿಗೆ ಬೆಂಗಳೂರಿನಿಂದ ತಿರುಪತಿವರೆಗೆ ಪಾದಯಾತ್ರೆ ಪ್ರಾರಂಭಿಸಿದ್ದಾರೆ. ಶನಿವಾರ ಬೆಳಗ್ಗೆ ಈ ಸದ್ಭಾವನಾ ಪಾದಯಾತ್ರೆ ಪ್ರಾರಂಭಿಸಿದ ಶಾಸಕಿ ಅಂಜಲಿ ಅವರು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲಿದ್ದಾರೆ. ಈ ಮೂಲಕ ತಮ್ಮ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ, ಜನತೆಯ ಸುಖ ಶಾಂತಿ, ನೆಮ್ಮದಿಯ ಬದುಕಿಗಾಗಿ ತಿಮ್ಮಪ್ಪನ ಮೊರೆ ಹೋಗಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಲ್ಲಿದ್ದಾರೆ.

  • ಸುಳ್ಳು ಅಫಿಡವಿಟ್ ಸಲ್ಲಿಸಿ ಸಿಕ್ಕಿ ಹಾಕಿಕೊಂಡ ಶಾಸಕ ಅರವಿಂದ್ ಪಾಟೀಲ್

    ಸುಳ್ಳು ಅಫಿಡವಿಟ್ ಸಲ್ಲಿಸಿ ಸಿಕ್ಕಿ ಹಾಕಿಕೊಂಡ ಶಾಸಕ ಅರವಿಂದ್ ಪಾಟೀಲ್

    ಬೆಳಗಾವಿ: ನಗರದಲ್ಲಿ ಮರಾಠಿಗರ ಪರ ಹೋರಾಟ ಮಾಡಿ ಪಕ್ಷೇತರರ ಅಭ್ಯರ್ಥಿಯಾಗಿ ಖಾನಾಪುರ ಕ್ಷೇತ್ರದಿಂದ ನಿಂತು ಗೆದ್ದಿದ್ದ ಶಾಸಕ ಅರವಿಂದ್ ಪಾಟೀಲ್‍ ಅವರಿಗೆ  ಈಗ ತನಿಖೆಯ ಬಿಸಿ ಕಾಣತೊಡಗಿದೆ.

    ಮರಾಠ ಪರ ಹೋರಾಟಗಾರ ಅಂತ ಹೇಳಿಕೊಂಡು ಬೆಳಗಾವಿಯನ್ನು ಮಹರಾಷ್ಟ್ರಕ್ಕೆ ಸೇರಿಸಬೇಕು ಅಂತ ಹೋರಾಟ ಮಾಡಿ ಈ ಬಾರಿ ಎಂಇಎಸ್‍ನಿಂದ ಖಾನಾಪುರ ಕ್ಷೇತ್ರಕ್ಕೆ ಮತ್ತೆ ಸ್ಪರ್ದೆ ಮಾಡಲು ಮುಂದಾಗಿದ್ದ ಅರವಿಂದ್ ಪಾಟೀಲ್‍ಗೆ 2013 ಚುನಾವಣೆಯ ಸಂದರ್ಬದಲ್ಲಿ ಸಲ್ಲಿಸಿರೋ ಅಫಿಡವಿಟ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ತನ್ನ ಪತ್ನಿ ಸುಜಾತ ಯಾವುದೇ ನೌಕರಿಯಲ್ಲಿ ಇಲ್ಲ ಮತ್ತು ಯಾವುದೇ ರೀತಿಯ ಆದಾಯ ತೆರಿಗೆ ಕಟ್ಟುತ್ತಿಲ್ಲ ಅಂತ ಘೋಷಣೆ ಮಾಡಿದ್ರು. ಆದ್ರೆ ಅರವಿಂದ್ ಪಾಟೀಲ್ ಪತ್ನಿ ರಾಜ್ಯ ಸರ್ಕಾರಿ ನೌಕರರಾಗಿದ್ದು ಹುಕ್ಕೇರಿ ತಾಲೂಕಿನ ಹಿಟ್ನಾ ಗ್ರಾಮದಲ್ಲಿರೋ ಮರಾಠಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಆರ್‍ಟಿಐ ಕಾರ್ಯಕರ್ತರು ದೂರನ್ನು ನೀಡಿದ್ದು ಇದನ್ನು ಗಂಬೀರವಾಗಿ ಪರಿಗಣಿಸಿರೋ ಚುನವಣಾ ಆಯೋಗ ಬೆಳಗಾವಿ ಚುನಾವಣಾ ಅಧಿಕಾರಿಗೆ ಅರವಿಂದ್ ಪಾಟೀಲ್ ವಿರುದ್ದ ಸೂಕ್ತ ಕ್ರಮ ಕೈಗೋಳ್ಳುವಂತೆ ನಿರ್ದೇಶನ ನೀಡಿದೆ.

    2007ರಿಂದ ಸುಜಾತ ಅವರು ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಮರಾಠಿಗರ ಪರವಾಗಿ ಹೋರಾಟ ಮಾಡಿಕೊಂಡು ಬಂದಿದ್ದ ಶಾಸಕ ಅರವಿಂದ್ ಪಾಟೀಲ್ ಪತ್ನಿ ರಾಜ್ಯ ಸರ್ಕಾರಿ ಮರಾಠಿ ಶಾಲೆಯಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದನ್ನು ಮರೆಮಾಚಿದ್ದರು. ಪತ್ನಿ ಕರ್ನಾಟಕ ರಾಜ್ಯದಲ್ಲಿ ಶಿಕ್ಷಕಿ ಆಗಿರೋದು ಗೊತ್ತಾದ್ರೆ ತಾಲೂಕಿನ ಜನ ಮತ ಹಾಕೋದಿಲ್ಲ ಅನ್ನೋ ಆತಂಕದಿಂದ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.