Tag: Khalistan flag

  • ಖಲಿಸ್ತಾನಿ ನಾಯಕರಿಗೆ ISI ಜೊತೆ ಲಿಂಕ್‌ ಇದೆ – ಪಂಬಾಜ್‌ ಪೊಲೀಸರಿಂದ ಸ್ಫೋಟಕ ಮಾಹಿತಿ

    ಖಲಿಸ್ತಾನಿ ನಾಯಕರಿಗೆ ISI ಜೊತೆ ಲಿಂಕ್‌ ಇದೆ – ಪಂಬಾಜ್‌ ಪೊಲೀಸರಿಂದ ಸ್ಫೋಟಕ ಮಾಹಿತಿ

    ಚಂಡೀಗಢ: ವಾರಿಸ್ ಪಂಜಾಬ್ ದೆ ಮುಖ್ಯಸ್ಥ ಅಮೃತ್‌ ಪಾಲ್‌ ಸಿಂಗ್‌ (Amritpal Singh) ಸೇರಿ ಇತರರು ಪಾಕಿಸ್ತಾನದ ಐಎಸ್‌ಐ (Pakistan ISI) ಜೊತೆಗೆ ಲಿಂಕ್‌ ಹೊಂದಿರುವ ಶಂಕೆಯಿದೆ ಎಂದು ಪಂಜಾಬ್‌ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಅಮೃತ್‌ಪಾಲ್‌ ಸಿಂಗ್‌ನನ್ನ ಬಂಧಿಸುವ ಕಾರ್ಯಾಚರಣೆ 3ನೇ ದಿನಕ್ಕೆ ಕಾಲಿಟ್ಟಿದ್ದು, ಪಂಜಾಬ್‌ ಐಜಿಪಿ ಸುಖಚೈನ್ ಸಿಂಗ್ ಗಿಲ್, ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್‌ ಸರ್ವೀಸಸ್‌ ಇಂಟಲಿಜೆನ್ಸ್‌ (ISI) ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಸುಖಚೈನ್ ಸಿಂಗ್ ಗಿಲ್, ಐಎಸ್‌ಐ ಜೊತೆಗಿನ ದೃಷ್ಟಿಕೋನದಿಂದಲೂ ಈ ಪ್ರಕರಣವನ್ನ ತನಿಖೆ ನಡೆಸಲಾಗುತ್ತಿದ್ದು, ಇದುವರೆಗೆ ಕಂಡುಬಂದಿರುವ ಅಂಶಗಳ ಪ್ರಕಾರ ಐಎಸ್‌ಐ ಸಹ ಇದರಲ್ಲಿ ಭಾಗಿಯಾಗಿರುವ ಶಂಕೆಯಿದೆ. ಜೊತೆಗೆ ವಿದೇಶಿ ನಿಧಿ ಬಳಕೆಯಾಗಿರುವ ಬಗ್ಗೆಯೂ ಅನುಮಾನವಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಖಲಿಸ್ತಾನಿ ಹೋರಾಟಗಾರ ಅಮೃತ್‌ಪಾಲ್‌ ಸಿಂಗ್‌ ಪರಾರಿ – ಪಂಜಾಬ್‌ ಹಲವೆಡೆ ಇಂಟರ್‌ನೆಟ್‌ ಸ್ಥಗಿತ

    ಸದ್ಯ ರಾಜ್ಯದಲ್ಲಿ ಪರಿಸ್ಥಿತಿ ಸ್ಥಿರವಾಗಿದೆ. ಶಾಂತಿ, ಸೌಹಾರ್ದತೆಗೆ ಭಂಗ ತರುವ ಪ್ರಯತ್ನ ಮಾಡಿದ್ದ 114 ಜನರನ್ನ ಬಂಧಿಸಲಾಗಿದೆ. ಮೊದಲ ದಿನ 78 ಮಂದಿ, 2ನೇ ದಿನ 34 ಮಂದಿ ಹಾಗೂ 3ನೇ ದಿನ ಇಬ್ಬರನ್ನ ಬಂಧಿಸಿದ್ದು, ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಖಲಿಸ್ತಾನಿ ನಾಯಕರು ಮಾನವ ಬಾಂಬರ್‌ಗಳನ್ನ ರೂಪಿಸುತ್ತಿದ್ದಾರೆ – ಗುಪ್ತಚರ ಇಲಾಖೆ ಮಾಹಿತಿ

    ಗುಪ್ತಚರ ಇಲಾಖೆ ಹೇಳಿದ್ದೇನು?
    ಅಮೃತ್‌ಪಾಲ್‌ ಸಿಂಗ್‌ ವ್ಯಸನಮುಕ್ತ ಕೇಂದ್ರಗಳು ಮತ್ತು ಗುರುದ್ವಾರದಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹ ಮಾಡುತ್ತಿದ್ದಾನೆ. ಅಲ್ಲದೇ ಯುವಕರನ್ನ ಆತ್ಮಾಹುತಿ ದಾಳಿಗೆ ತಯಾರಿಸುತ್ತಿದ್ದಾನೆ ಎಂದು ಗುಪ್ತಚರ ಇಲಾಖೆ ಈಗಾಗಲೇ ಮಾಹಿತಿ ನೀಡಿದೆ. ಈ ಬೆನ್ನಲ್ಲೇ ಭದ್ರತಾ ಪಡೆ ಎಚ್ಚೆತ್ತುಕೊಂಡಿದೆ. ಕಳೆದ ವರ್ಷ ಸಿಂಗ್‌ ದುಬೈನಿಂದ ಬಂದಿದ್ದ ಪಾಕಿಸ್ತಾನದ ಐಎಸ್‌ಐ ಮತ್ತು ಖಲಿಸ್ತಾನ್ ಪರ ಸಹಾನುಭೂತಿ ಹೊಂದಿರುವ ಅಮೃತ್‌ಪಾಲ್‌ ಸಿಂಗ್‌, ಯುವಕರನ್ನ ಮಾನವ ಬಾಂಬರ್‌ಗಳಾಗಲೂ ಮನವೊಲಿಸುವ ಕಾರ್ಯ ಮಾಡುತ್ತಿದ್ದಾನೆ ಎಂದು ಗುಪ್ತಚರ ಇಲಾಖೆ ತಿಳಿಸಿತ್ತು.

  • ಭಾರತ ಧ್ವಜ ಕೆಳಗಿಳಿಸಿ ಖಲಿಸ್ತಾನ್‌ ಧ್ವಜ ಹಾರಿಸಿದ ಪ್ರತ್ಯೇಕತಾವಾದಿಗಳು – ಭಾರತ ಸರ್ಕಾರ ಬೇಸರ

    ಭಾರತ ಧ್ವಜ ಕೆಳಗಿಳಿಸಿ ಖಲಿಸ್ತಾನ್‌ ಧ್ವಜ ಹಾರಿಸಿದ ಪ್ರತ್ಯೇಕತಾವಾದಿಗಳು – ಭಾರತ ಸರ್ಕಾರ ಬೇಸರ

    ಲಂಡನ್: ʼಖಲಿಸ್ತಾನ್‌ ಜಿಂದಾಬಾದ್‌..ʼ ಎಂದು ಕೂಗುತ್ತಾ ಖಲಿಸ್ತಾನ್‌ ಪ್ರತ್ಯೇಕತಾವಾದಿಗಳು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಿಂದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿರುವ ಘಟನೆ ನಡೆದಿದೆ. ಘಟನೆಗೆ ಬೇಸರ ವ್ಯಕ್ತಪಡಿಸಿರುವ ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯ ಬ್ರಿಟನ್‌ನ ಹಿರಿಯ ರಾಜತಾಂತ್ರಿಕರಿಗೆ ಸಮನ್ಸ್‌ ನೀಡಿದೆ.

    ಖಲಿಸ್ತಾನ್ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಮತ್ತು ಅವರ ಬೆಂಬಲಿಗರ ವಿರುದ್ಧ ಸಿಖ್ಖರ ಒಂದು ವರ್ಗದ ಪ್ರತಿಭಟನೆ ನಡೆಸುತ್ತಿದೆ. ಅಮೃತ್‌ಪಾಲ್‌ ಬಂಧನಕ್ಕೆ ಪಂಜಾಬ್‌ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಲ್ಲದೇ ಅಮೃತ್‌ಪಾಲ್‌ ಆಪ್ತರನ್ನು ವಶಕ್ಕೆ ಪಡೆದಿದೆ. ಇದೇ ಹೊತ್ತಿನಲ್ಲಿ ಲಂಡನ್‌ನಲ್ಲಿ ಖಲಿಸ್ತಾನ್ ಪ್ರತ್ಯೇಕತವಾದಿಗಳು‌ ಭಾರತದ ಧ್ವಜವನ್ನು ಕೆಳಗಿಳಿಸಿ ಘೋಷಣೆ ಕೂಗಿದ್ದಾರೆ. ಅಲ್ಲದೇ ಖಲಿಸ್ತಾನ್‌ ಧ್ವಜವನ್ನು ಹಾರಿಸಿದ್ದಾರೆ. ಈ ದೃಶ್ಯದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ: ಖಲಿಸ್ತಾನಿ ಹೋರಾಟಗಾರ ಅಮೃತ್‌ಪಾಲ್‌ ಸಿಂಗ್‌ ಪರಾರಿ – ಪಂಜಾಬ್‌ ಹಲವೆಡೆ ಇಂಟರ್‌ನೆಟ್‌ ಸ್ಥಗಿತ

    ಹೈಕಮಿಷನ್ ಆವರಣಕ್ಕೆ ಪ್ರವೇಶಿಸಲು ಹೇಗೆ ಅನುಮತಿಸಲಾಯಿತು? ಈ ಸಂದರ್ಭದಲ್ಲಿ ಬ್ರಿಟಿಷ್ ಭದ್ರತೆಯ ಸಂಪೂರ್ಣ ಅನುಪಸ್ಥಿತಿ ಕುರಿತು ವಿವರಣೆ ನೀಡುವಂತೆ ಭಾರತ ಸರ್ಕಾರ ಕೇಳಿದೆ. ಯುಕೆಯಲ್ಲಿರುವ ಭಾರತೀಯ ರಾಜತಾಂತ್ರಿಕ ಆವರಣ ಮತ್ತು ಸಿಬ್ಬಂದಿ ಭದ್ರತೆ ವಿಚಾರದಲ್ಲಿ ಯುಕೆ ಸರ್ಕಾರದ ಉದಾಸೀನತೆ ತೋರಿರುವುದು ಸರಿಯಲ್ಲ ಎಂದು ಸರ್ಕಾರ ಬೇಸರ ವ್ಯಕ್ತಪಡಿಸಿದೆ. ಇದನ್ನೂ ಓದಿ: ದೆಹಲಿ ಮೆಟ್ರೋ ಸೈಟ್ ಬಳಿ ಚೀಲದಲ್ಲಿತ್ತು ಮಹಿಳೆಯ ತಲೆ, ದೇಹದ ಇತರ ಭಾಗಗಳು

    ವೀಡಿಯೋದಲ್ಲಿ ಏನಿದೆ?
    ʼಖಲಿಸ್ತಾನ್‌ ಜಿಂದಾಬಾದ್‌ʼ ಎಂದು ಘೋಷಣೆ ಕೂಗುವ ಮೂಲಕ ಪ್ರತ್ಯೇಕತವಾದಿಗಳು, ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಿಂದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿದ್ದಾರೆ. ಅಲ್ಲದೇ ಖಲಿಸ್ತಾನ್‌ ಧ್ವಜವನ್ನು ಹಾರಿಸಿ ಪ್ರತಿಭಟನೆ ನಡೆಸಿದ್ದಾರೆ.

    ಕೋಮು ಸಂಘರ್ಷ ಹರಡಲು ಯತ್ನಿಸಿದ ಆರೋಪದಲ್ಲಿ, ಖಾಲಿಸ್ತಾನ್ ಪರ ಸಹಾನುಭೂತಿ ಹೊಂದಿರುವ ಸಿಖ್ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತ್‌ಪಾಲ್ ಸಿಂಗ್ ವಿರುದ್ಧ ಪಂಜಾಬ್ ಪೊಲೀಸರು ಕಳೆದ ಎರಡು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ವೇಳೆ ಆತನ ಆಪ್ತರನ್ನು ಬಂಧಿಸಿದ್ದಾರೆ. ಅಮೃತಪಾಲ್ ಸಿಂಗ್‌ ಅವರ 78 ಬೆಂಬಲಿಗರನ್ನು ಬಂಧಿಸಲಾಗಿದೆ.

  • ಹಿಮಾಚಲ ಅಸೆಂಬ್ಲಿ ಗೇಟ್‌ನಲ್ಲಿ ಖಲಿಸ್ತಾನ್ ಧ್ವಜ – ಸಿಎಂ ಜೈರಾಮ್ ಠಾಕೂರ್ ಕಿಡಿ

    ಹಿಮಾಚಲ ಅಸೆಂಬ್ಲಿ ಗೇಟ್‌ನಲ್ಲಿ ಖಲಿಸ್ತಾನ್ ಧ್ವಜ – ಸಿಎಂ ಜೈರಾಮ್ ಠಾಕೂರ್ ಕಿಡಿ

    ಶಿಮ್ಲಾ: ಭಾನುವಾರ ಬೆಳಗ್ಗೆ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ವಿಧಾನಸಭೆಯ ಮುಖ್ಯ ಗೇಟ್ ಹಾಗೂ ಗೋಡೆಯ ಮೇಲೆ ಖಲಿಸ್ತಾನ್ ಧ್ವಜಗಳನ್ನು ಕಟ್ಟಿರುವುದು ಕಂಡುಬಂದಿದೆ.

    ಭಾನುವಾರ ಮುಂಜಾನೆ ಗೇಟ್‌ಗಳ ಮೇಲೆ ಖಲಿಸ್ತಾನ್ ಧ್ವಜಗಳನ್ನು ಕಟ್ಟಿರುವ ಬಗ್ಗೆ ಕಾಂಗ್ರಾ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಅಸೆಂಬ್ಲಿ ಗೋಡೆಗಳ ಹೊರವಲಯದಲ್ಲಿ ಖಲಿಸ್ತಾನ್ ಪರ ಘೋಷಣೆಗಳೂ ಕಂಡುಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಡಾ. ನಿಪುನ್ ಜಿಂದಾಲ್ ಘಟನೆಯನ್ನು ಖಚಿತಪಡಿಸಿಕೊಂಡು, ಆರೋಪಿಗಳ ಪತ್ತೆಗೆ ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹುತಾತ್ಮ ಯೋಧ ಹರ್ದೀಪ್ ಸಿಂಗ್ ಕುಟುಂಬಕ್ಕೆ 1 ಕೋಟಿ ಪರಿಹಾರ ಘೋಷಿಸಿದ ಭಗವಂತ್ ಮಾನ್

    ಕೆಲವು ದುಷ್ಕರ್ಮಿಗಳು ತಾಪಿವನ್‌ನಲ್ಲಿರುವ ರಾಜ್ಯ ವಿಧಾನಸಭೆಯ ಗೇಟ್‌ನ ಹೊರಭಾಗದಲ್ಲಿ ಐದಾರು ಖಲಿಸ್ತಾನ್ ಧ್ವಜಗಳನ್ನು ಹಾಕಿದ್ದು, ಗೋಡೆಯ ಮೇಲೆ ಖಲಿಸ್ತಾನ್ ಜಿಂದಾಬಾದ್ ಘೋಷಣೆಗಳನ್ನೂ ಬರೆದಿದ್ದಾರೆ. ಇದೀಗ ಧ್ವಜಗಳನ್ನು ಹಾಗೂ ಬರಹಗಳನ್ನು ತೆರವುಗೊಳಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಡುರಸ್ತೆಯಲ್ಲಿ ಗೂಂಡಾಗಳಿಂದ 15 ಬಾರಿ ಫೈರಿಂಗ್ – ಇಬ್ಬರಿಗೆ ಗಾಯ

    ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಕೃತ್ಯವನ್ನು ಖಂಡಿಸಿ, ನಿಮಗೆ ಧೈರ್ಯವಿದ್ದರೆ ರಾತ್ರಿ ಹೊತ್ತಲ್ಲ, ಹಗಲಿನಲ್ಲಿ ಈ ಕೆಲಸ ಮಾಡಬೇಕಿತ್ತು ಎಂದು ಕಿಡಿಕಾರಿದ್ದಾರೆ. ಇದು ಪಂಜಾಬ್‌ನ ಕೆಲವು ಪ್ರವಾಸಿಗರ ಕೃತ್ಯದಂತೆ ಮೇಲ್ನೋಟಕ್ಕೆ ತೋರುತ್ತಿದೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.