Tag: Khaki

  • ಇದೇ ವರ್ಷ ತೆರೆಕಂಡಿದ್ವು ಚಿರು ನಟನೆಯ ಮೂರು ಸಿನಿಮಾಗಳು

    ಇದೇ ವರ್ಷ ತೆರೆಕಂಡಿದ್ವು ಚಿರು ನಟನೆಯ ಮೂರು ಸಿನಿಮಾಗಳು

    ಬೆಂಗಳೂರು: ಪ್ರತಿಭಾವಂತ, ಸದಾ ನಗುಮುಖದ ಯುವ ನಟ ಚಿರಂಜೀವಿ ಸರ್ಜಾ ಇಂದು ನಮ್ಮನ್ನ ಅಗಲಿದ್ದಾರೆ. ಅವರ ಸಾವಿನ ಸುದ್ದಿ ಸಾಂಡಲ್‍ವುಡ್ ನಟ, ನಟಿಯರು, ಕಲಾವಿದರು, ಅಭಿಮಾನಿಗಳಿಗೆ ಬರಸಿಡಿಲು ಬಡಿದಂತಾಗಿದೆ.

    ಚಿರು 2009ರಲ್ಲಿ ‘ವಾಯುಪುತ್ರ’ ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದರು. ಈ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಅವರ ಮಗನಾಗಿ ತೆರೆಹಂಚಿಕೊಂಡಿದ್ದರು. ಕನ್ನಡ ಚಿತ್ರರಂಗದ ಜೊತೆಗೆ ಉತ್ತಮ ಒಡನಾಟ ಹೊಂದಿದ್ದ ಕುಟುಂಬದಲ್ಲಿ ಬೆಳೆದ ಚಿರಂಜೀವಿ ಸರ್ಜಾ ಹಿರಿಯರಿಗೆ ಗೌರ, ಕಿರಿಯರಿಗೆ ಪ್ರೀತಿ ಕೊಟ್ಟು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

    ಚಿರಂಜೀವಿ ಸರ್ಜಾ ನಟನೆಯ ಮೂರು ಸಿನಿಮಾಗಳು ಇದೇ ವರ್ಷ ತೆರೆ ಕಂಡಿದ್ದವು. ಜನವರಿ ತಿಂಗಳಿನಲ್ಲಿ ‘ಖಾಕಿ’ ಸಿನಿಮಾ ತೆರೆಕಂಡಿತ್ತು. ನವೀನ್ ರೆಡ್ಡಿ ನಿರ್ದೇಶನದ ಈ ಸಿನಿಮಾ ಪಕ್ಕಾ ಕಮರ್ಷಿಯಲ್ ಮಾದರಿಯ ಸಿನಿಮಾವಾಗಿತ್ತು. ತರುಣ್ ಶಿವಪ್ಪ ಮತ್ತು ಮಾನಸಾ ತರುಣ್ ಜಂಟಿಯಾಗಿ ‘ಖಾಕಿ’ ಸಿನಿಮಾವನ್ನು ನಿರ್ಮಾಣ ಮಾಡಿದ್ದರು.

    ‘ಆ ದಿನಗಳು’ ಖ್ಯಾತಿಯ ಕೆ.ಎಂ. ಚೈತನ್ಯ ಜೊತೆಗೆ ಚಿರಂಜೀವಿ ಸರ್ಜಾ ಉತ್ತಮ ಒಡನಾಟ ಹೊಂದಿದ್ದರು. ಚೈತನ್ಯ ಅವರ ‘ಆಟಗಾರ’, ‘ಆಕೆ’, ‘ಅಮ್ಮ ಐ ಲವ್ ಯೂ’, ಹಾಗೂ ಈ ವರ್ಷ ಫೆಬ್ರವರಿಯಲ್ಲಿ ತೆರೆ ಕಂಡ ‘ಆದ್ಯಾ’ ಸಿನಿಮಾಗಳಲ್ಲಿ ಚಿರು ನಟಿಸಿದ್ದರು.

    ಮಾರ್ಚ್ 12ರಂದು ಸಿನಿಮಾ ತೆರೆ ಕಂಡಿದ್ದ ‘ಶಿವಾರ್ಜುನ’ ಸಿನಿಮಾವನ್ನು ಬಹಳ ಪ್ರೀತಿಯಿಂದ ಮಾಡಿದ್ದರು. ದುರಾದೃಷ್ಟವಶಾತ್ ಸಿನಿಮಾ ರಿಲೀಸ್ ಆದ ಎರಡೇ ದಿನಕ್ಕೆ ಕೊರೊನಾ ವೈರಸ್‍ನಿಂದಾಗಿ ಚಿತ್ರಮಂದಿರಗಳನ್ನು ಬಂದ್ ಮಾಡುವಂತೆ ಆದೇಶ ಹೊರಬಿದ್ದಿತ್ತು. ಹಾಗಾಗಿ ‘ಶಿವಾರ್ಜುನ’ ಸಿನಿಮಾ ಎರಡೇ ದಿನಕ್ಕೆ ಪ್ರದರ್ಶನವನ್ನು ನಿಲ್ಲಿಸಬೇಕಾಗ ಅನಿವಾರ್ಯತೆ ಎದುರಾಯಿಗಿತ್ತು.

    ಕೊರೊನಾ ಲಾಕ್‍ಡೌನ್‍ನಿಂದಾಗಿ ಮನೆಯಲ್ಲೇ ಉಳಿದಿದ್ದ ಚಿರು ಕುಟುಂಬದೊಂದಿಗೆ ಖುಷಿ, ಖುಷಿಯಾಗಿ ಕಾಲ ಕಳೆಯುತ್ತಿದ್ದರು. ಆದರೆ ನಿನ್ನೆ ರಾತ್ರಿಯಿಂದ ಅವರಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಇಂದು ಮಧ್ಯಾಹ್ನ 3:30ರ ಸುಮಾರಿಗೆ ಅಶೋಕಾ ಪಿಲ್ಲರ್ ಬಳಿ ಇರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ತಮ್ಮ 39ನೇ ವರ್ಷಕ್ಕೆ ಬಾರದ ಲೋಕಕ್ಕೆ ತೆರೆಳಿದ್ದಾರೆ.

  • ಕಾಮನ್‍ಮ್ಯಾನ್‍ನನ್ನು ಎಚ್ಚರಿಸಿದ ಖಾಕಿ ಸಿನಿಮಾ

    ಕಾಮನ್‍ಮ್ಯಾನ್‍ನನ್ನು ಎಚ್ಚರಿಸಿದ ಖಾಕಿ ಸಿನಿಮಾ

    ಮಾಸ್ ಟೀಸರ್, ಟ್ರೈಸರ್ ಮೂಲಕ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದ್ದ ಯುವ ಸಾಮ್ರಾಟ್ ಚಿರು ಸರ್ಜಾ ಅಭಿನುಯದ ‘ಖಾಕಿ’ ಚಿತ್ರ ಇಂದು ರಾಜ್ಯಾದ್ಯಂತ ಯಶಸ್ವಿಯಾಗಿ ಬಿಡುಗಡೆಯಾಗಿದೆ. ಮೊದಲ ದಿನ ಚಿತ್ರಕ್ಕೆ ಹೌಸ್ ಫುಲ್ ರೆಸ್ಪಾನ್ಸ್ ಸಿಕ್ಕಿದ್ದು ಚಿರು ಮಾಸ್ ಅಭಿನಯಕ್ಕೆ ಸಿನಿರಸಿಕರು ಫಿದಾ ಆಗಿದ್ದಾರೆ.

    ನವೀನ್ ರೆಡ್ಡಿ ಮೊದಲ ಬಾರಿ ಆ್ಯಆಕ್ಷನ್ ಕಟ್ ಹೇಳಿರುವ ಈ ಚಿತ್ರ ಯುವ ಸಾಮ್ರಾಟ್‍ಗೆ ಹೊಸ ಇಮೇಜ್ ತಂದುಕೊಡೋದ್ರಲ್ಲಿ ಡೌಟೇ ಇಲ್ಲ. ಆ ರೀತಿ ತಮ್ಮ ಅಭಿನಯವನ್ನು ತೆರೆ ಮೇಲೆ ತೋರಿದ್ದಾರೆ ಚಿರು ಸರ್ಜಾ. ರೆಗ್ಯುಲರ್ ಆಗಿ ಶುರುವಾಗೋ ಸಿನಿಮಾದಲ್ಲಿ ಪ್ಯಾರಲಲ್
    ಪೊಲೀಸ್ ಎಂಬ ಡಿಫರೆಂಟ್ ಕನ್ಸೆಪ್ಟ್ ತರೋ ಮೂಲಕ ನಿರ್ದೇಶಕ ನವೀನ್ ರೆಡ್ಡಿ ಗೆದ್ದಿದ್ದಾರೆ. ಎಲ್ಲೂ ಬೋರ್ ಹೊಡಿಸದೆ ಅಚ್ಚುಕಟ್ಟಾಗಿ ಚಿತ್ರಕಥೆ ಹೆಣೆದಿದ್ದಾರೆ ನಿರ್ದೇಶಕರು.

    ಕಾಮನ್‍ಮ್ಯಾನ್ ಪವರ್ ಏನು ಅನ್ನೋದನ್ನ ನಾಯಕ ನಟನ ಪಾತ್ರದ ಮೂಲಕ ಮನದಟ್ಟು ಮಾಡುವ ಮೂಲಕ ಪ್ರತಿಯೊಬ್ಬರೂ ವ್ಯವಸ್ಯೆಯಲ್ಲಾಗುವ ಅವ್ಯವಸ್ಥೆ ವಿರುದ್ಧ ಹೋರಾಟಕ್ಕೆ ನಿಂತ್ರೆ ಸಮಾಜದಲ್ಲಿ ಎಲ್ಲವನ್ನು ಸರಿದಾರಿಗೆ ತರಬಹುದು ಅನ್ನೋದನ್ನ ಖಾಕಿ ಚಿತ್ರ ಕಮರ್ಶಿಯಲ್ ಎಳೆಯಲ್ಲಿ ಹೇಳ ಹೊರಟಿದೆ. ಚಿರು ಆ ಪಾತ್ರವನ್ನು ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

    ಮಾಸ್ ಡೈಲಾಗ್‍ಗಳು ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ನಾಯಕಿ ಪಾತ್ರದಲ್ಲಿ ನಟಿಸಿರುವ ತಾನ್ಯ ಹೋಪ್ ನಾಯಕನಿಗೆ ಪ್ರತಿಹಂತದಲ್ಲಿ ಸಪೋರ್ಟ್ ಮಾಡುವ ಕ್ಯಾರೆಕ್ಟರ್ ಜೊತೆ ನಾಯಕನ ಮನದರಿಸಿಯಾಗಿ ಮಿಂಚಿದ್ದಾರೆ. ಛಾಯಾಸಿಂಗ್, ದೇವ್ ಗಿಲ್, ಶಿವಮಣಿ ತಮ್ಮ ಅಮೋಘ ಅಭಿನಯದಿಂದ ಮನಸೆಳೆಯುತ್ತಾರೆ. ಹಾಡುಗಳು ಚಿತ್ರದ ಪ್ಲಸ್ ಪಾಯಿಂಟ್ ಆಗಿದೆ. ಒಟ್ಟಿನಲ್ಲಿ ಖಾಕಿ ಚಿತ್ರ ಒಂದೊಳ್ಳೆ ಸಂದೇಶದ ಜತೆ ಚಿರು ಅಭಿಮಾನಿಗಳಿಗೆ ಭರಪೂರ ಮನರಂಜನೆಯನ್ನು ನೀಡುತ್ತೆ.

    ಚಿತ್ರ: ಖಾಕಿ
    ನಿರ್ದೇಶಕ: ನವೀನ್ ರೆಡ್ಡಿ.ಬಿ
    ಸಂಗೀತ: ರಿತ್ವಿಕ್ ಮುರಳೀಧರ್
    ಛಾಯಾಗ್ರಹಣ: ಬಾಲಾ
    ನಿರ್ಮಾಪಕ: ತರುಣ್ ಶಿವಪ್ಪ
    ತಾರಾಬಳ: ಚಿರಂಜೀವಿ ಸರ್ಜಾ, ತಾನ್ಯಾ ಹೋಪ್, ಛಾಯಾ ಸಿಂಗ್, ದೇವ್ ಗಿಲ್, ಶಿವಮಣಿ,
    ಇತರರು.

    ರೇಟಿಂಗ್: 3.5/5

  • ‘ಖಾಕಿ’ಯಲ್ಲಿ ಚಿರು ಕಾಮನ್ ಮ್ಯಾನ್!

    ‘ಖಾಕಿ’ಯಲ್ಲಿ ಚಿರು ಕಾಮನ್ ಮ್ಯಾನ್!

    ರುಣ್ ಶಿವಪ್ಪ ಅವರು ನಿರ್ಮಿಸುತ್ತಿರುವ, ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸುತ್ತಿರುವ `ಖಾಕಿ’ ತೆರೆಗೆ ಬರಲು ಸಿದ್ಧವಾಗಿದೆ. ಸಿನಿಮಾ ಸೆಟ್ಟೇರಿದಾಗಿನಿಂದ ಪೋಸ್ಟರ್ ನಿಂದಲೇ ಸದ್ದು ಮಾಡ್ತಿದ್ದ ಸಿನಿಮಾದ ಟೀಸರ್ ಹಾಗೂ ವಿಡಿಯೋ ಸಾಂಗ್ ಮೂಲಕವೂ ಜನಮನ ಗೆದ್ದಿತ್ತು. ಇದೀಗ ಸಿನಿಮಾದ ಕಂಪ್ಲೀಟ್ ಕೆಲಸ ಮುಗಿದಿದ್ದು, ಇದೇ 24 ರಂದು ತೆರೆಗೆ ಅಪ್ಪಳಿಸಲಿದೆ.

    ಬ್ಯಾಕ್ ಟು ಬ್ಯಾಕ್ ಆ್ಯಕ್ಷನ್ ಸಿನಿಮಾಗಳ ಮೂಲಕ ಕಾಣಿಸುತ್ತಿರುವ ಚಿರಂಜೀವಿ ಸರ್ಜಾ, ‘ಖಾಕಿ’ ಸಿನಿಮಾದಲ್ಲಿ ತನ್ನ ಖದರ್ ಲುಕ್ ನಲ್ಲಿ ಮಿಂಚ್ತಿದ್ದಾರೆ. ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾವಾಗಿದೆ. ಖಾಕಿ ಸಿನಿಮಾಗೆ ದಿ ಪವರ್ ಆಫ್ ಕಾಮನ್ ಮ್ಯಾನ್ ಅನ್ನೋ ಟ್ಯಾಗ್ ಲೈನ್ ಇಡಲಾಗಿದೆ. ಸಿನಿಮಾದಲ್ಲಿ ಚಿರಂಜೀವಿ ಸರ್ಜಾ, ಕೇಬಲ್ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮಾಸ್ ಅಂಶಗಳು ಹೈಲೈಟ್ ಆಗಿದ್ದು ‘ಖಾಕಿ’ ತೀರಾ ಭಿನ್ನವಾಗಿದೆ ಅಂತಾನೆ ಹೇಳಲಾಗ್ತಿದೆ. ಇದನ್ನೂ ಓದಿ: ‘ಖಾಕಿ’ಯಲ್ಲಿ ಅಬ್ಬರಿಸಿದ ಚಿರಂಜೀವಿ ಸರ್ಜಾ!

    ‘ಖಾಕಿ’ ಚಿತ್ರದ ಮತ್ತೊಂದು ವಿಶೇಷತೆ ಅಂದ್ರೆ ಚಿತ್ರಕ್ಕೆ ಮಾಸ್ ಟೈಟಲ್ ಇದ್ದರೂ ಕೂಡ, ಚಿತ್ರದಲ್ಲಿ ಚಿರು ಸರ್ಜಾ ಖಾಕಿ ತೊಟ್ಟಿಲ್ಲ. ಬದಲಿಗೆ ಕಾಮನ್ ಮ್ಯಾನ್ ಆಗಿಯೇ ದರ್ಶನ ಕೊಟ್ಟಿದ್ದಾರೆ. ನವೀನ್ ರೆಡ್ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ರಿತ್ವಿಕ್ ಸಂಗೀತ ನೀಡಿದ್ದಾರೆ. ಬಾಲಾ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಧನು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಚಿರಂಜೀವಿ ಸರ್ಜಾಗೆ ನಾಯಕಿಯಾಗಿ ತಾನ್ಯ ಹೋಪ್ ನಟಿಸಿದ್ದಾರೆ. ದೇವ್ ಗಿಲ್, ಶಿವಮಣಿ, ಶಶಿ, ನವ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಖಾಕಿ ಟೀಸರ್ ಲಾಂಚ್‍ಗೆ ಮುಹೂರ್ತ ಫಿಕ್ಸ್!

    ಖಾಕಿ ಟೀಸರ್ ಲಾಂಚ್‍ಗೆ ಮುಹೂರ್ತ ಫಿಕ್ಸ್!

    ಬೆಂಗಳೂರು: ಚಿರಂಜೀವಿ ಸರ್ಜಾ ಇದೀಗ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವುದು ಗೊತ್ತಿರೋ ವಿಚಾರವೇ. ಆ ಸಾಲಿನಲ್ಲಿ ಖ್ಯಾತ ನಿರ್ಮಾಪಕ ತರುಣ್ ಶಿವಪ್ಪ ನಿರ್ಮಾಣ ಮಾಡಿರೋ ‘ಖಾಕಿ’ ಚಿತ್ರ ತುಂಬಾನೇ ಕುತೂಹಲಕ್ಕೆ ಕಾರಣವಾಗಿದೆ. ಖಾಕಿ ಎಂಬ ಶೀರ್ಷಿಕೆಗೆ ಪವರ್ ಆಫ್ ಕಾಮನ್ ಮ್ಯಾನ್ ಎಂಬ ಟ್ಯಾಗ್ ಲೈನ್ ಇರೋದರಿಂದ ಈ ಸಿನಿಮಾ ಕಥೆಯೇನೆಂಬ ಬಗ್ಗೆ ಆರಂಭದಿಂದಲೇ ಚರ್ಚೆಗಳು ಶುರುವಾಗಿವೆ. ತರುಣ್ ಶಿವಪ್ಪ ಭಿನ್ನ ಕಥೆಗಳ ಅದ್ಧೂರಿಯಾದ ಚಿತ್ರಗಳ ನಿರ್ಮಾಣಕ್ಕೆ ಹೆಸರಾಗಿರುವವರು. ಅದಕ್ಕೆ ತಕ್ಕುದಾಗಿಯೇ ರೂಪುಗೊಂಡಿರೋ ಖಾಕಿ ಚಿತ್ರದ ಟೀಸರ್ ಬಿಡುಗಡೆಗೆ ಮುಹೂರ್ತ ಫಿಕ್ಸಾಗಿದೆ.

    ಅಕ್ಟೋಬರ್ ಮೂವತ್ತು ಅಂದರೆ, ಇದೇ ಬುಧವಾರ ಖಾಕಿ ಟೀಸರ್ ಲಾಂಚ್ ಆಗಲಿದೆ. ಈ ಚಿತ್ರವನ್ನು ನವೀನ್ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಇದು ನವೀನ್ ಪಾಲಿಗೆ ಮೊದಲ ಚಿತ್ರ. ಆದರೆ ಅವರು ಈ ಮೂಲಕ ಪಕ್ಕಾ ಮಾಸ್ ಕಥಾನಕವೊಂದನ್ನು ಪ್ರೇಕ್ಷಕರ ಮುಂದಿಡಲು ತಯಾರಾಗಿದ್ದಾರೆ. ಖಾಕಿ ಎಂಬ ಹೆಸರು ಕೇಳಿದಾಕ್ಷಣವೇ ಈ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಪೊಲೀಸ್ ಗೆಟಪ್ಪಿನಲ್ಲಿ ಮಿಂಚಿರಬಹುದೆನ್ನಿಸುತ್ತೆ. ಆದರೆ ಅವರಿಲ್ಲಿ ದಿ ಪವರ್ ಆಫ್ ಕಾಮನ್ ಮ್ಯಾನ್ ಎಂಬ ಟ್ಯಾಗ್‍ಲೈನಿಗೆ ತಕ್ಕುದಾದ ಪಾತ್ರದಲ್ಲಿ ನಟಿಸಿದ್ದಾರೆ. ಒಂದು ಮೂಲದ ಪ್ರಕಾರ ಅವರು ಈ ಚಿತ್ರದಲ್ಲಿ ಕೇಬಲ್ ಆಪರೇಟರ್ ಆಗಿ ಕಾಣಿಸಿಕೊಂಡಿದ್ದಾರಂತೆ. ಈ ವಿಚಾರ ಕೇಳಿ ನಿಮ್ಮೊಳಗೊಂದು ಅಚ್ಚರಿ ಮೂಡಿಕೊಂಡರೆ, ಅದು ಮತ್ತಷ್ಟು ಮಿರುಗಿಸವಂಥಾ ವಿಚಾರಗಳೇ ಈ ಸಿನಿಮಾದಲ್ಲಿ ಅಡಕವಾಗಿವೆಯಂತೆ.

    ಓರ್ವ ನಟನಾಗಿ ಚಿರಂಜೀವಿ ಸರ್ಜಾ ಅವರದ್ದು ವಿಶಿಷ್ಟವಾದ ಯಾನ. ಈವರೆಗೂ ಥರ ಥರದ ಪಾತ್ರಗಳಲ್ಲಿ ಕಂಗೊಳಿಸಿರೋ ಅವರು ಈ ಹಿಂದೆ ಸಿಂಗ ಚಿತ್ರದ ಮೂಲಕ ಪಕ್ಕಾ ಮಾಸ್ ಅವತಾರದಲ್ಲಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಆದರೆ ಖಾಕಿ ಚಿತ್ರದಲ್ಲಿ ಅದೆಲ್ಲವನ್ನೂ ಮೀರಿಸುವಂಥಾ ಮಾಸ್ ಸನ್ನಿವೇಶಗಳಿವೆಯಂತೆ. ಕಥೆಯ ವಿಚಾರದಲ್ಲಿಯೂ ತೀರಾ ಭಿನ್ನವಾಗಿರೋ ಖಾಕಿ ಚಿರು ಪಾಲಿಗೆ ಮತ್ತೊಂದು ಗೆಲುವು ದಕ್ಕಿಸಿಕೊಡಲಿರೋದು ಗ್ಯಾರೆಂಟಿ ಎಂಬಂಥಾ ವಾತಾವರಣವಿದೆ. ಈ ಹಿಂದೆ ಮಾಸ್ ಲೀಡರ್, ವಿಕ್ಟರಿ 2 ಚಿತ್ರಗಳ ಮೂಲಕ ಯಶಸ್ವಿ ನಿರ್ಮಾಪಕರೆನ್ನಿಸಿಕೊಂಡಿರುವವರು ತರುಣ್ ಶಿವಪ್ಪ. ಅವರು ಬಲು ಆಸ್ಥೆಯಿಂದಲೇ ಖಾಕಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರೀಕರಣ ಮುಗಿಸಿಕೊಂಡಿರೋ ಖಾಕಿ ಬಿಡುಗಡೆಯ ಹಂತದಲ್ಲಿದೆ. ಈ ಕ್ಷಣಗಳನ್ನು ಇನ್ನು ದಿನದೊಪ್ಪತ್ತಿನಲ್ಲಿಯೇ ಟೀಸರ್ ಮತ್ತಷ್ಟು ಕಳೆಗಟ್ಟುವಂತೆ ಮಾಡಲಿದೆ.

  • ಚಿರು ಸರ್ಜಾ ಈಗ ಸಖತ್ ಬ್ಯುಸಿ

    ಚಿರು ಸರ್ಜಾ ಈಗ ಸಖತ್ ಬ್ಯುಸಿ

    ಬೆಂಗಳೂರು: ಬಹುಶಃ ಕನ್ನಡ ಚಿತ್ರರಂಗದ ಬೇರಾವ ಸ್ಟಾರ್ ಗಳೂ ಇಲ್ಲದಷ್ಟು ಬ್ಯುಸಿ ಇರೋ ನಟ ಅಂದರೆ ಅದು ಚಿರಂಜೀವಿ ಸರ್ಜಾ. ಈಗಷ್ಟೇ ಸಿಂಗ ಸಿನಿಮಾದ ಹಾಡಿಗಾಗಿ ಬ್ಯಾಂಕಾಕ್ ಗೆ ಹೋಗಿ ಬಂದಿದ್ದಾರೆ. ರಾಜಮಾರ್ತಾಂಡ, ರಣಮ್, ಆಧ್ಯ, ಜುಗಾರಿ ಕ್ರಾಸ್ ಮತ್ತು ಖಾಕಿ ಸದ್ಯ ಚಿರು ನಟಿಸುತ್ತಿರುವ ಚಿತ್ರಗಳು. ಬ್ಯಾಕ್ ಟು ಬ್ಯಾಕ್ ಕಾಲ್ ಶೀಟ್ ಗಳನ್ನು ಕೊಟ್ಟು ಒಂದು ದಿನ ಕೂಡಾ ಪುರುಸೊತ್ತಿಲ್ಲದೆ ಚಿರು ಸಿನಿಮಾ ಚಿತ್ರೀಕರಣಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈಗಾಗಲೇ ಅನೌನ್ಸ್ ಆಗಿ ಚಿತ್ರೀಕರಣಗೊಳ್ಳುತ್ತಿರುವ ಸಿನಿಮಾಗಳೇ ಆರಕ್ಕಿಂತಾ ಹೆಚ್ಚಿವೆ. ಇದರ ಜೊತೆಗೆ ಧೈರ್ಯಂ ಖ್ಯಾತಿಯ ಶಿವ ತೇಜಸ್ ನಿರ್ದೇಶನದ ಸಿನಿಮಾ ಮತ್ತು ಅನಿಲ್ ಮಂಡ್ಯ ನಿರ್ದೇಶನದ ಚಿತ್ರಗಳೂ ಕ್ಯೂನಲ್ಲಿ ನಿಂತಿವೆ.

    ಸಾಲದೆಂಬಂತೆ ತರುಣ್ ಶಿವಪ್ಪ ನಿರ್ಮಾಣದ ಸಿನಿಮಾ ಕೂಡಾ ಆರಂಭಗೊಳ್ಳಲಿದೆ. ಇಷ್ಟು ಸಿನಿಮಾಗಳಲ್ಲಿ ಯಾವುದು ಮೊದಲು ಚಿತ್ರೀಕರಣ ಪೂರೈಸಿ, ಬಿಡುಗಡೆಗೆ ತಯಾರಾಗುತ್ತದೋ ಗೊತ್ತಿಲ್ಲ. ಈ ನಡುವೆ ಶಿವತೇಜಸ್ ಮತ್ತು ಅನಿಲ್ ಮಂಡ್ಯ ಸ್ಕ್ರಿಪ್ಟ್ ಕೆಲಸಗಳನ್ನೆಲ್ಲಾ ಮುಗಿಸಿ ಚಿರು ಡೇಟ್ಸ್ ಗಾಗಿ ಕಾದು ಕುಳಿತಿದ್ದಾರೆ. ಈ ಇಬ್ಬರ ಸಿನಿಮಾಗಳಲ್ಲಿ ಯಾವುದು ಮೊದಲು ಮುಹೂರ್ತ ಆಚರಿಸಿಕೊಳ್ಳುತ್ತದೋ ಎನ್ನುವ ಕುತೂಹಲ ಎಲ್ಲರದ್ದಾಗಿದೆ.

    ಚಿರು ಇಷ್ಟೊಂದು ಸಿನಿಮಾಗಳನ್ನು ಒಟ್ಟೊಟ್ಟಿಗೇ ಒಪ್ಪಿಕೊಂಡು ಬ್ಯುಸಿಯಾಗಿರೋದರ ನಡುವೆಯೇ ತಮ್ಮ ಪತ್ನಿ ಮೇಘನಾರಾಜ್ ಜೊತೆ ಹತ್ತು ದಿನಗಳ ಕಾಲ ಸ್ವಿಜರ್ ಲೆಂಡ್ ಟ್ರಿಪ್ಪಿಗೆ ಹೋಗಲು ಕೂಡಾ ಟೈಮು ಮಾಡಿಕೊಂಡಿದ್ದಾರೆ. ಇದೇ ತಿಂಗಳ ಮೂರನೇ ವಾರದ ಹೊತ್ತಿಗೆ ಚಿರು ದಂಪತಿ ಫಾರಿನ್ ಟ್ರಿಪ್ಪಿಗೆ ತೆರಳಲಿದೆ.

    ಒಟ್ಟಾರೆ ಚಿರು ಬ್ಯುಸಿಯಾಗಿರೋ ರೀತಿಯನ್ನು ನೋಡಿದರೆ ಮದುವೆಯಾದ ಮೇಲೆ ಅವರ ನಸೀಬು ಬದಲಾದಂತೆ ಕಾಣುತ್ತಿದೆ. ಯಾಕೆಂದರೆ, ವರ್ಷಕ್ಕೆ ಒಂದೋ ಎರಡೋ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದ ಚಿರು ಕೈಲೀಗ ಮುಕ್ಕಾಲು ಡಜನ್ ಸಿನಿಮಾಗಳಿವೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ‘ಖಾಕಿ’ ಇದು ಪೊಲೀಸ್ ಸ್ಟೋರಿ ಅಲ್ಲ!

    ‘ಖಾಕಿ’ ಇದು ಪೊಲೀಸ್ ಸ್ಟೋರಿ ಅಲ್ಲ!

    ಬೆಂಗಳೂರು: ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸುತ್ತಿರುವ ಮುಂದಿನ ಚಿತ್ರ `ಖಾಕಿ’ ಸಿನಿಮಾದ ಮುಹೂರ್ತ ಇಂದು ರಾಜಾಜಿನಗರ ಗಣೇಶ ದೇವಸ್ಥಾನದಲ್ಲಿ ನೆರವೇರಿತು.

    ಚಿತ್ರಕ್ಕೆ ಪತ್ನಿ ಮೇಘನಾರಾಜ್ ಅವರೇ ಕ್ಲ್ಯಾಪ್ ಮಾಡಿ ಶುಭಕೋರಿದ್ದು, ಮನಸಾ ತರುಣ್ ಕ್ಯಾಮೆರಾಗೆ ಚಾಲನೆ ನೀಡಿದರು. ಖಾಕಿ ಹೆಸರಿನ ಖಡಕ್ ಟೈಟಲ್ ಮೂಲಕ ನವೀನ್ ರೆಡ್ಡಿ ಮೊದಲ ಬಾರಿಗೆ ನಿರ್ದೇಶಕನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು, ದ ಪವರ್ ಆಫ್ ಕಾಮನ್ ಮ್ಯಾನ್ ಟ್ಯಾಗ್ ಲೈನನ್ನು ಸಿನಿಮಾಗೆ ನೀಡಿದ್ದಾರೆ.

    ಕೇಬಲ್ ಆಪರೇಟರ್ ಆಗಿ ಕಾರ್ಯನಿರ್ವಹಿಸುವ ಸಾಮಾನ್ಯ ಯುವಕನ ಪಾತ್ರದಲ್ಲಿ ಸರ್ಜಾ ಕಾಣಿಸಿಕೊಳ್ಳುತ್ತಿದ್ದಾರೆ. ಒಬ್ಬ ಸಾಮಾನ್ಯ ಯುವಕ ಸಂದರ್ಭವೊಂದರಲ್ಲಿ ಭ್ರಷ್ಟ ವ್ಯವಸ್ಥೆಯ ವಿರುದ್ಧ ನಿಂತು ಹೋರಾಡುವ, ಭ್ರಷ್ಟ ಪೋಲಿಸರು ಹಾಗೂ ರಾಜಕೀಯ ಶಕ್ತಿಗಳಿಂದ ತನ್ನವರನ್ನು ರಕ್ಷಿಸಿಕೊಳ್ಳುವ ನಾಯಕನ ಹೋರಾಟ ಕಂಡು ಮತ್ತಷ್ಟು ಯುವಕರು ಪ್ರೇರಣೆ ಪಡೆಯುವ ಕಥಾ ಹಂದರವನ್ನು ಸಿನಿಮಾ ಹೊಂದಿದೆ. ಚಿತ್ರಕ್ಕೆ ರಿತ್ವಿಕ್ ಸಂಗೀತ ಹಾಗೂ ಬಾಲು ಕ್ಯಾಮೆರಾವಿದ್ದು ನಾಯಕಿಗಾಗಿ ಹುಡುಕಾಟ ನಡೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv