Tag: KGF Kannada Movie

  • ಝೀರೋಗೆ ಸೆಡ್ಡು ಹೊಡೆದ ಕೆಜಿಎಫ್-ಗ್ಯಾಂಗ್‍ಸ್ಟರ್ ಅಲ್ಲ ಅದು ಗಾಯಗೊಂಡ ಹುಲಿಯ ಕಥೆ

    ಝೀರೋಗೆ ಸೆಡ್ಡು ಹೊಡೆದ ಕೆಜಿಎಫ್-ಗ್ಯಾಂಗ್‍ಸ್ಟರ್ ಅಲ್ಲ ಅದು ಗಾಯಗೊಂಡ ಹುಲಿಯ ಕಥೆ

    – ಎರಡನೇ ಟ್ರೇಲರ್ ನಲ್ಲಿ ರಿವೀಲ್ ಅಯ್ತು ಕಥೆಯ ತಿರುಳು

    ಬೆಂಗಳೂರು: ಈಗಾಗಲೇ ಭಾರತೀಯ ಸಿನಿ ಅಂಗಳದಲ್ಲಿ ಸಂಚಲನ ಸೃಷ್ಟಿಸುತ್ತಿರುವ ಕೆಜಿಎಫ್ ಚಿತ್ರದ ಎರಡನೇ ಟ್ರೇಲರ್ ಹೊರಬಂದಿದೆ. ಪ್ರತಿ ಹೆಜ್ಜೆಯನ್ನು ತುಂಬಾನೇ ಲೆಕ್ಕಹಾಕಿ ಇಡುತ್ತಿರುವ ಚಿತ್ರತಂಡ ಮತ್ತೊಂದು ರೋಮಾಂಚನದ ಟ್ರೇಲರ್ ನ್ನು ಬಿಡುಗಡೆ ಮಾಡಿದೆ. ಮೊದಲಿನಿಂದಲೂ ಖಡಕ್ ಡೈಲಾಗ್ ಮೂಲಕವೇ ಕೆಜಿಎಫ್ ಸದ್ದು ಮಾಡುತ್ತಿದೆ.

    ಕೆಜಿಎಫ್ ಕ್ರೇಜ್ ನೋಡಿದ್ರೆ ಇಡೀ ಭಾರತೀಯ ಸಿನಿಮಾ ಲೋಕವೇ ಚಂದನವನದತ್ತ ತಿರುಗಿ ನೋಡುವಂತೆ ಮಾಡುತ್ತಿದೆ ಎಂಬ ಆರೋಗ್ಯಕರ ಚರ್ಚೆಗಳು ಗಾಂಧಿನಗರದ ಗಲ್ಲಿಗಳಲ್ಲಿ ಆರಂಭವಾಗಿವೆ. ಸಸತ ಎರಡೂವರೆ ವರ್ಷಗಳಿಂದ ಸಿದ್ಧಗೊಂಡಿರುವ ಕೆಜಿಎಫ್ ಒಟ್ಟು ಎರಡು ಭಾಗಗಳಲ್ಲಿ ತೆರೆಕಾಣಲಿದೆ. ಮೊದಲ ಭಾಗ ಇದೇ ಡಿಸೆಂಬರ್ 21ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ. ಒಂದು ರೀತಿಯ ವಿಭಿನ್ನ ಕುತೂಹಲವನ್ನು ಚಿತ್ರ ಸೃಷ್ಟಿಸಿದೆ.

    ತೆಲುಗಿನ ಬಾಹುಬಲಿ ಸಿನಿಮಾದ ಬಳಿಕ ಇಷ್ಟೊಂದು ಕ್ರೇಜ್ ಹುಟ್ಟುಹಾಕಿರುವ ಸಿನಿಮಾ ಕನ್ನಡದ ಕೆಜಿಎಫ್. ಮಂಗಳವಾರ ಸಂಜೆ ಬಿಡುಗಡೆಯಾಗಿದ್ದ, ‘ಸಲಾಮ್ ರಾಕಿ ಭಾಯ್’ ಲಿರಿಕಲ್ ವಿಡಿಯೋ ಬಿಡುಗಡೆ ಮಾಡುವ ಮೂಲಕ ಒಬ್ಬ ಸಾಮಾನ್ಯ ಹುಡುಗ ಮುಂಬೈ ಭೂಗತ ಲೋಕದ ಅಧಿಪತಿಯಾದ ಕಥೆಯನ್ನು ಹೇಳಿತ್ತು. 70ರ ದಶಕದಲ್ಲಿ ಮುಂಬೈ ಅಧಿಪತಿಯಾಗುವ ರಾಕಿಯ ತಾಕತ್ತನ್ನು ಸಲಾಮ್ ರಾಕಿ ಭಾಯ್ ಹಾಡಿನ ಪದಗಳು ವರ್ಣನೆ ಮಾಡಿದ್ದವು. ಇದೀಗ ಹಿಂದಿಯ ಮತ್ತೊಂದು ಟ್ರೇಲರ್ ರಿವೀಲ್ ಆಗಿದ್ದು, ಚಿತ್ರದ ಮತ್ತೊಂದು ಶೇಡ್ ಇದರಲ್ಲಿ ತೋರಿಸಲಾಗಿದೆ.

    ಕೋಲಾರದ ಕೆಜಿಎಫ್ ನಲ್ಲಿ ಹುಟ್ಟುವ ಮಗು ಮುಂಬೈನಲ್ಲಿ ತನ್ನ ಹೆಜ್ಜೆಯನ್ನು ಮೂಡಿಸುತ್ತಾನೆ. ನೀನು ಹೇಗೆ ಬಾಳ್ತಿಯಾ ನನಗೆ ಗೊತ್ತಿಲ್ಲ. ಆದ್ರೆ ಸಾಯುವ ಮುನ್ನ ನೀನೊಬ್ಬ ಶ್ರೀಮಂತ, ಅತ್ಯಂತ ಶಕ್ತಿಯುಳ್ಳವನಾಗಿರಬೇಕು ಎಂದು ಮಗನಿಂದ ಮಾತು ಪಡೆದುಕೊಳ್ಳುವ ತಾಯಿ. ಮುಂಬೈ ಸೇರಿದ ಮೇಲೆ ಬದಲಾಗುವ ಬದುಕು. ಮತ್ತೆ ಕೋಲಾರ ಸೇರುವ ಹುಡುಗ. ಹೀಗೆ ಕಥೆಯ ಒಂದೊಂದು ಎಳೆಯನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ. ಅದೇ ರೀತಿಯಲ್ಲಿ ಇತರೆ ಕಲಾವಿದರ ಪಾತ್ರವನ್ನು ಇಲ್ಲಿ ಪರಿಚಯಿಸಲಾಗಿದೆ.

  • ಸಲಾಮ್ ರಾಕಿ ಭಾಯ್-ಕೆಜಿಎಫ್ ಲಿರಿಕಲ್ ವಿಡಿಯೋ ರಿಲೀಸ್

    ಸಲಾಮ್ ರಾಕಿ ಭಾಯ್-ಕೆಜಿಎಫ್ ಲಿರಿಕಲ್ ವಿಡಿಯೋ ರಿಲೀಸ್

    ಬೆಂಗಳೂರು: ದೇಶದ ಬಹುನಿರೀಕ್ಷಿತ ಯಶ್ ಅಭಿನಯದ ಸಿನಿಮಾ ಕೆಜಿಎಫ್ ಇದೇ ತಿಂಗಳು 21ರಂದು ಬಿಡುಗಡೆ ಆಗಲಿದೆ. ಇಂದು ಚಿತ್ರದ ‘ಸಲಾಮ್ ರಾಕಿ ಭಾಯ್’ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದ್ದು, ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲವನ್ನು ಹೆಚ್ಚು ಮಾಡುವಂತೆ ಮಾಡಿದೆ.

    ಕೋಲಾರದ ಕೆಜಿಎಫ್‍ನ ಓರ್ವ ಸಾಮಾನ್ಯ ಹುಡುಗ ಮುಂಬೈ ಭೂಗತ ಲೋಕದ ಅಧಿಪತಿ ಆದಾಗ ಚಿತ್ರದಲ್ಲಿ ಈ ಹಾಡು ಬರುತ್ತೆ ಎಂದು ಹೇಳಲಾಗುತ್ತಿದೆ. ಹಾಡಿನ ಪ್ರತಿಯೊಂದು ಸಾಲುಗಳು ಭೂಗತ ಲೋಕದ ಅಧಿಪತಿಯಾದ ರಾಕಿಯನ್ನು ವರ್ಣನೆ ಮಾಡುತ್ತಿವೆ. ಹಾಡಿನ ಚಿತ್ರೀಕರಣ ಸಂಪೂರ್ಣ 70ರ ದಶಕದ ಮಾದರಿಯಲ್ಲಿ ಮೂಡಿ ಬಂದಿದೆ. ಚಿತ್ರದ ಟ್ರೇಲರ್ ಈಗಾಗಲೇ 1 ಕೋಟಿಗೂ ಅಧಿಕ ವ್ಯೂವ್ ಪಡೆದುಕೊಂಡಿದೆ.

    ಚಿತ್ರದ ಟೀಸರ್ ಮತ್ತು ಟ್ರೇಲರ್ ಎರಡು ಕೆಜಿಎಫ್ ಇದೊಂದು ಭಿನ್ನ ಸಿನಿಮಾ ಅಂತಾ ಎಂಬುದನ್ನು ಸಾಬೀತು ಮಾಡಿದ್ದವು. ಖಡಕ್ ಹಿನ್ನೆಲೆ ಧ್ವನಿಯಿಂದ ಆರಂಭವಾಗಿದ್ದ ಟೀಸರ್ ಮತ್ತು ಟ್ರೇಲರ್ ಇದೊಂದು ಪಕ್ಕಾ ಮಾಸ್ ಆ್ಯಂಡ್ ಎಂಟರ್ ಟೈನ್ ಮೆಂಟ್ ಕಥೆ ಒಳಗೊಂಡಿದೆ ಎಂಬುದನ್ನು ಸಾರಿ ಹೇಳಿದ್ದವು. ಭೂಗತ ಲೋಕದ ಅಧಿಪತಿಯಾಗುವ ರಾಕಿ ಸಹ ಓರ್ವ ಮಗ. ತಾಯಿ ಮತ್ತು ಮಗನ ಪ್ರೀತಿಯನ್ನು ಚಿತ್ರದಲ್ಲಿ ಕಾಣಬಹುದು ಎಂದು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಈ ಹಿಂದೆ ಹೇಳಿದ್ದರು.

    ಸದ್ಯ ಹಾಡನ್ನು ಲಹರಿ ಮ್ಯೂಸಿಕ್ ಯುಟ್ಯೂಬ್ ಅಕೌಂಟ್ ನಲ್ಲಿ ನೋಡಬಹುದಾಗಿದೆ. ಲಹರಿ ಮ್ಯೂಸಿಕ್ ಸಂಸ್ಥೆ ಬರೋಬ್ಬರಿ 3 ಕೋಟಿ 60 ಲಕ್ಷ ರೂಪಾಯಿ ಖರ್ಚಿನಲ್ಲಿ ಆಡಿಯೋದ ಹಕ್ಕನ್ನು ಖರೀದಿಸಿದ್ದು ವಿಶೇಷವಾಗಿದೆ. ಇದು `ಕೆಜಿಎಫ್’ನ ಮೊದಲ ಹಾಡಾಗಿದ್ದು ಭಾರೀ ನಿರೀಕ್ಷೆ ಹುಟ್ಟಿಸಿದೆ. ಕ್ರಮೇಣವಾಗಿ ಒಂದೊಂದೇ ಹಾಡುಗಳು ರಿಲೀಸ್ ಆಗಲಿವೆ ಎಂದು ಚಿತ್ರತಂಡ ಹೇಳಿಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv