Tag: KGF chapter 2

  • ಕೆಜಿಎಫ್ 2 ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಪಡೆಯಲಿರುವ ವಿಶೇಷ ಅಭಿಮಾನಿ

    ಕೆಜಿಎಫ್ 2 ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಪಡೆಯಲಿರುವ ವಿಶೇಷ ಅಭಿಮಾನಿ

    ಬೆಂಗಳೂರು: ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿ ಕಾಯುತ್ತಿದ್ದಾರೆ. ಹೀಗಿರುವಾಗ ವಿಶೇಷ ಅಭಿಮಾನಿಯೊಬ್ಬರಿಗೆ ಈಗಾಗಲೇ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಕೊಡುವುದಾಗಿ ಪ್ರಶಾಂತ್ ನೀಲ್ ಅವರು ಹೇಳಿದ್ದಾರೆ.

    ಕೆಜಿಎಫ್ ಚಾಪ್ಟರ್ 2 ಬಿಡುಗಡೆ ದಿನಾಂಕ ಇನ್ನಷ್ಟೇ ಘೋಷಣೆ ಆಗಬೇಕಿದೆ. ಈ ಚಿತ್ರವನ್ನು ಫಸ್ಟ್ ಡೇ ಫಸ್ಟ್ ಶೋ ನೋಡಲು ಅಪಾರ ಅಭಿಮಾನಿಗಳು ಕಾಯುತ್ತಿದ್ದಾರೆ. ಹಾಗಂತ ಮೊದಲ ದಿನವೇ ಎಲ್ಲರಿಗೂ ಟಿಕೆಟ್ ಸಿಗುವುದಿಲ್ಲ. ಅದಕ್ಕಾಗಿ ಎಷ್ಟೋ ಜನರು ಹರಸಾಹಸ ಮಾಡುತ್ತಾರೆ. ಆದರೆ ಒಬ್ಬ ಅಭಿಮಾನಿಗೆ ತುಂಬ ಸುಲಭವಾಗಿ ಕೆಜಿಎಫ್ 2 ಚಿತ್ರದ ಮೊದಲ ದಿನ ಮೊದಲ ಶೋ ಟಿಕೆಟ್ ಸಿಗಲಿದೆ. ಅದು ಕೂಡ ಸ್ವತಃ ನಿರ್ದೇಶಕ ಪ್ರಶಾಂತ್ ನೀಲ್ ಕಡೆಯಿಂದ ಎಂಬುದು ಅಚ್ಚರಿಯ ವಿಚಾರವಾಗಿದೆ. ಇದನ್ನೂ ಓದಿ:  ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಯ ಶವ ಪತ್ತೆ

    ವೈವಸ್ವತ್ ತಾಂಡುಲ ಎಂಬ ಅಭಿಮಾನಿಗೆ ನಿರ್ದೇಶಕ ಪ್ರಶಾಂತ್ ಅವರು ಈ ಭರವಸೆ ನೀಡಿದ್ದಾರೆ. ಅಕ್ಕಿ ಕಾಳಿನ ಮೇಲೆ ಅಕ್ಷರಗಳನ್ನು ಬರೆಯುವ ಕಲಾವಿದ ವೈವಸ್ವತ್ ತಾಂಡುಲ. ಆ ಮೂಲಕ ಅವರು ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​ ನಲ್ಲಿ ದಾಖಲೆ ಮಾಡಿದ್ದಾರೆ. ಈಗ ಅವರು ಅಕ್ಕಿ ಕಾಳಿನ ಮೇಲೆ ಹೊಂಬಾಳೆ ಮತ್ತು ಕೆಜಿಎಫ್ ಎಂದು ಬರೆದು ಚಿತ್ರತಂಡಕ್ಕೆ ಕಳಿಸಿಕೊಟ್ಟಿದ್ದಾರೆ. ಈ ನಿರ್ಮಾಣ ಸಂಸ್ಥೆಯಿಂದ ಬಂದ ಸಿನಿಮಾಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಒಳಗೊಂಡ ಪತ್ರವನ್ನೂ ಬರೆದಿದ್ದಾರೆ.

    ಇದನ್ನು ಕಂಡು ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೆ ಖುಷಿ ಆಗಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು, ಹಾಯ್ ವೈವಸ್ವತ್ ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು. ಸಂಪರ್ಕದಲ್ಲಿ ಇರೋಣ. ನಿಮಗೆ ನಮ್ಮ ಕಡೆಯಿಂದ ಕೆಜಿಎಫ್ ಚಾಪ್ಟರ್ 2 ಚಿತ್ರದ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್‍ಗಳು ಸಿಗುತ್ತದೆ ಎಂದು ಹೇಳಿದ್ದಾರೆ.

    ಒಂದಿಲ್ಲೊಂದು ರೀತಿಯಲ್ಲಿ ಸಿನಿಪ್ರಿಯರು ಕೆಜಿಎಫ್ 2 ಬಗ್ಗೆ ತಮಗಿರುವ ನಿರೀಕ್ಷೆಯ ಮಟ್ಟವನ್ನು ತೋರ್ಪಡಿಸುತ್ತಿದ್ದಾರೆ. ಅದಕ್ಕೆ ಈಗೊಂದು ಹೊಸ ಉದಾಹರಣೆ ಸಿಕ್ಕಿದೆ. ಅದನ್ನು ಕಂಡು ನಿರ್ದೇಶಕ ಪ್ರಶಾಂತ್ ನೀಲ್ ಖುಷಿ ಆಗಿದ್ದಾರೆ. ಅಭಿಮಾನಿಗಳು, ಇಡೀ ಚಿತ್ರರಂಗವೇ ಸಿನಿಮಾವನ್ನು ತೆರೆಯ ಮೇಲೆ ನೋಡಲು ಸಿದ್ಧರಾಗಿದ್ದಾರೆ.

  • ನೀವು ನೀಡಿದ ಅಗಾಧ ಪ್ರೀತಿಗೆ ತುಂಬಾ ಧನ್ಯವಾದಗಳು – ಯಶ್

    ನೀವು ನೀಡಿದ ಅಗಾಧ ಪ್ರೀತಿಗೆ ತುಂಬಾ ಧನ್ಯವಾದಗಳು – ಯಶ್

    ಬೆಂಗಳೂರು: ನೀವು ನೀಡಿದ ಅಗಾಧ  ಪ್ರೀತಿಗೆ ತುಂಬಾ ಧನ್ಯವಾದಗಳು ಎಂದು ಯಶ್ ಹೇಳಿದ್ದಾರೆ.

    ಯಶ್ ಅಭಿಮಾನಿಗಳಿಗೆ ಈ ವಿಶೇಷ ಧನ್ಯವಾದ ಹೇಳಲು ಕಾರಣವಿದೆ. 6 ತಿಂಗಳ ಹಿಂದೆ ಜನವರಿ 7 ರಂದು ಕೆಜಿಎಫ್ ಚಾಪ್ಟರ್ 2 ಟೀಸರ್ ಬಿಡುಗಡೆಯಾಗಿತ್ತು. ಈಗ ಈ ಟೀಸರ್ ಒಟ್ಟು 20 ಕೋಟಿ ವೀಕ್ಷಣೆ ಕಂಡಿದೆ. ಹೀಗಾಗಿ ಯಶ್ ಅವರು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

    20 ಕೋಟಿ ವೀಕ್ಷಣೆ ಕಂಡ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲ್ಮ್ಸ್ 22 ಸೆಕೆಂಡಿನ ವಿಡಿಯೋವನ್ನು ಅಪ್ಲೋಡ್ ಮಾಡಿದೆ. ನಿರ್ದೇಶಕ ಪ್ರಶಾಂತ್ ನೀಲ್ ಸಹ 22 ಸೆಕೆಂಡ್ ವಿಡಿಯೋವನ್ನು ಟ್ವೀಟ್ ಮಾಡಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.  ಇದನ್ನೂ ಓದಿ: ಆಡಿಯೋ ಹಕ್ಕು ಮಾರಾಟದಲ್ಲಿ ಬಾಹುಬಲಿಯನ್ನ ಹಿಂದಿಕ್ಕಿದ ಕೆಜಿಎಫ್-2

    https://twitter.com/prashanth_neel/status/1416012561867182081

    ಒಟ್ಟು 2 ನಿಮಿಷ 16 ಸೆಕೆಂಡ್ ಇರುವ ಕೆಜಿಎಫ್ ಟೀಸರ್ ಗೆ  84 ಲಕ್ಷ ಲೈಕ್ ಸಿಕ್ಕಿದರೆ, 98 ಸಾವಿರ ಕಮೆಂಟ್ ಬಂದಿದೆ. ಈ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಕೆಜಿಎಫ್ ಸಿನಿಮಾ ಹೊಸ ಇತಿಹಾಸ ಸೃಷ್ಟಿಸಿದೆ.

    ಕೋವಿಡ್ ಕಾರಣದಿಂದ ಚಿತ್ರ ಬಿಡುಗಡೆಯ ದಿನಾಂಕ ಮುಂದೂಡಿಕೆಯಾಗಿದೆ. ಚಿತ್ರ ತಂಡ ಯಾವಾಗ ಚಿತ್ರ ಬಿಡುಗಡೆಯಾಗಲಿದೆ ಎಂಬುದನ್ನು ತಿಳಿಸಿಲ್ಲ.

    ಟೀಸರ್ ನಲ್ಲಿ ರಾಕಿ ಬಾಯ್ ಯಶ್, ಅಧೀರ ಸಂಜಯ್ ದತ್, ರಮೀಕಾ ಸೇನ್ ರವೀನಾ ಟಂಡನ್, ರೀನಾ ದೇಸಾಯಿ ಶ್ರೀನಿಧಿ ಶೆಟ್ಟಿ ಪಾತ್ರವನ್ನು ತೋರಿಸಲಾಗಿದೆ. ವಿಶೇಷವಾಗಿ ರಾಕಿ ಬಾಯ್ ಮಷಿನ್ ಗನ್‍ನಿಂದ ಜೀಪುಗಳ ಮೇಲೆ ಫೈರ್ ಮಾಡಿದ್ದು ಎರಡು ಜೀಪುಗಳು ಮೇಲಕ್ಕೆ ಹಾರಿವೆ. ಬಳಿಕ ಫೈರ್ ಮಾಡಿದ ಕೆಂಪಾದ ಗನ್‍ನಿಂದ ರಾಕಿ ಸಿಗರೇಟ್ ಹೊತ್ತಿಸುತ್ತಿರುವ ದೃಶ್ಯವನ್ನು ತೋರಿಸಲಾಗಿದೆ.

  • ಲಹರಿ ಮ್ಯೂಸಿಕ್ ಪಾಲಾಯ್ತು ಕೆಜಿಎಫ್ 2 ಆಡಿಯೋ ರೈಟ್ಸ್

    ಲಹರಿ ಮ್ಯೂಸಿಕ್ ಪಾಲಾಯ್ತು ಕೆಜಿಎಫ್ 2 ಆಡಿಯೋ ರೈಟ್ಸ್

    ಬೆಂಗಳೂರು: ಭಾರತೀಯ ಸಿನಿಮಾದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್-2ರ ಎಲ್ಲ ಹಾಡುಗಳ ಹಕ್ಕನ್ನು ಲಹರಿ ಸಂಸ್ಥೆ ತನ್ನದಾಗಿಸಿಕೊಂಡಿದೆ. ಲಹರಿ ಚಿತ್ರದ ಎಲ್ಲ ಹಾಡುಗಳನ್ನು ಭಾರೀ ಮೊತ್ತಕ್ಕೆ ಲಹರಿ ಸಂಸ್ಥೆ ಖರೀದಿಸಿದೆ.

    ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-2 ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಐದು ಭಾಷೆಯ ಎಲ್ಲ ಹಾಡುಗಳು ಲಹರಿ ಸಂಸ್ಥೆಯ ಲೈಬ್ರರಿ ಸೇರಿಕೊಂಡಿವೆ. ಕೆಜಿಎಫ್-2 ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ. ಈ ಹಿಂದೆ ಕೆಜಿಎಫ್ ಚಾಪ್ಟರ್-1ರ ಹಾಡುಗಳ ಹಕ್ಕನ್ನು ಲಹರಿ ಸಂಸ್ಥೆಯೇ ಖರೀದಿಸಿತ್ತು. ಕೆಲವೇ ದಿನಗಳಲ್ಲಿ ಕೆಜಿಎಫ್ ಹಾಡುಗಳ ಮಾರುಕಟ್ಟೆಗೆ ಬರಲಿವೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ:ದಾಖಲೆಗಳ ಧೂಳೆಬ್ಬಿಸಿದ ಕೆಜಿಎಫ್-2 – ‘ರಣಬೇಟೆಗಾರ’ನ ಅಬ್ಬರಕ್ಕೆ ಯೂಟ್ಯೂಬ್ ದಾಖಲೆಗಳೆಲ್ಲ ಉಡೀಸ್

    ಇದೇ ಜುಲೈ 16ರಂದು ಕೆಜಿಎಫ್ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಆದ್ರೆ ಕೊರೊನಾ ಎರಡನೇ ಅಲೆ ಹಿನ್ನೆಲೆ ಚಿತ್ರಮಂದಿರಗಳು ಸ್ತಬ್ಧಗೊಂಡಿವೆ. ಕರ್ನಾಟಕದಲ್ಲಿ ಅನ್‍ಲಾಕ್ ಪ್ರಕ್ರಿಯೆ ಆರಂಭವಾದ್ರೂ ಥಿಯೇಟರ್ ಗಳಿಗೆ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಕೆಲ ದಿನಗಳ ಹಿಂದೆ ಅಭಿಮಾನಿಗಳು ಆದಷ್ಟು ಬೇಗ ಚಿತ್ರವನ್ನು ರಿಲೀಸ್ ಮಾಡಬೇಕೆಂದು ಸೋಶಿಯಲ್ ಮೀಡಿಯಾ ಮೂಲಕ ಒತ್ತಾಯಿಸಿದ್ದರು. ಇದನ್ನೂ ಓದಿ: ಬಾಹುಬಲಿ ದಾಖಲೆ ಬ್ರೇಕ್ ಮಾಡಿದ ಕೆಜಿಎಫ್-2 -ಎಲ್ಲಾ ಸಿನಿಮಾಗಳ ದಾಖಲೆಗಳು ಉಡೀಸ್

  • ಅಭಿಮಾನಿಗಳ ಅಭಿಮಾನಕ್ಕೆ ರಾಕಿ ಭಾಯ್ ಸಲಾಂ

    ಅಭಿಮಾನಿಗಳ ಅಭಿಮಾನಕ್ಕೆ ರಾಕಿ ಭಾಯ್ ಸಲಾಂ

    ಬೆಂಗಳೂರು: ಕೆಜಿಎಫ್-2 ಚಿತ್ರದ ಟೀಸರ್ ನೋಡಿ ಯಶ್‍ಗೆ ಅಭಿಮಾನಿಗಳೂ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರ ಟೀಸರ್ ನಿಂದಲೇ ದಾಖಲೆ ನಿರ್ಮಿಸಲು ಹೊರಡುತ್ತಿದ್ದಂತೆ ಯಶ್ ಅಭಿಮಾನಿಗಳ ಪ್ರೀತಿ ಮತ್ತು ಸಹಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

    ಕೆಜಿಎಫ್-2 ಚಿತ್ರದ ಟೀಸರ್ ಗುರುವಾರ ರಾತ್ರಿ ಬಿಡುಗಡೆ ಗೊಳಿಸಿದ್ದರು. ಈಗಾಗಲೇ ಸುಮಾರು 10 ಕೋಟಿಗೂ ಅಧಿಕ ವ್ಯೂವ್, ಲೈಕ್ ಮತ್ತು ಕಮೆಂಟ್‍ಗಳನ್ನು ಹಾಕುವ ಮೂಲಕ ಕನ್ನಡ ಚಿತ್ರವೊಂದು ಎಲ್ಲಾ ಯೂಟ್ಯೂಬ್ ದಾಖಲೆಗಳನ್ನು ಪುಡಿಗಟ್ಟಿದೆ. ಈ ಸಂಭ್ರಮವನ್ನು ಇದೀಗ್ ಯಶ್ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ನೀವೂ ಪ್ರತಿಭಾರಿ ನನಗೆ ಜೊತೆಯಾಗಿದ್ದೀರಿ. ಹಾಗೆ ನೀವೂ ಕೊಟ್ಟಿರುವ ಅಪಾರವಾದ ಪ್ರೀತಿಯಲ್ಲಿ ನಾನೂ ಮುಳುಗೀದ್ದೇನೆ. ನಾನೂ ಯಾವತ್ತು ನಿಮ್ಮನ್ನು ರಂಜಿಸುತ್ತಿರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಜನವರಿ 8 ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದಂದು ಚಿತ್ರತಂಡ ಕೆಜಿಎಫ್-2 ಸಿನಿಮಾದ ಟೀಸರ್ ರೀಲಿಸ್ ಮಾಡಲು ಸಿದ್ಧತೆ ಮಾಡಿತ್ತು. ಆದರೆ ಜನವರಿ 7ರ ಸಂಜೆಯೇ ಟೀಸರ್ ನ ಕೆಲ ಕ್ಲಿಪ್ ಗಳು ಲೀಕ್ ಆಗಿತ್ತು. ಹೀಗಾಗಿ ಅದೇ ದಿನ ರಾತ್ರಿ ಚಿತ್ರತಂಡ ಟೀಸರ್ ರೀಲಿಸ್ ಮಾಡಿತ್ತು. ಕೆಜಿಎಫ್-2ರ ಟೀಸರ್ 10 ಕೋಟಿಗೂ ಅಧಿಕ ವೀಕ್ಷಣೆಯಾಗಿ ಸಾಗುತ್ತಿದ್ದು ಹೊಸ ಹೊಸ ದಾಖಲೆಯನ್ನು ಬರೆಯುತ್ತಿದೆ.

  • ಅಭಿಮಾನಿಗಳಲ್ಲಿ ರಾಕಿ ಬಾಯ್ ವಿಶೇಷ ಮನವಿ

    ಅಭಿಮಾನಿಗಳಲ್ಲಿ ರಾಕಿ ಬಾಯ್ ವಿಶೇಷ ಮನವಿ

    ಬೆಂಗಳೂರು: ಜನವರಿ 8ರಂದು ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್-2 ಚಲನಚಿತ್ರದ ಟ್ರೇಲರ್‍ನ್ನು 10ಗಂಟೆ 18 ನಿಮಿಷಕ್ಕೆ ಹೊಂಬಾಳೆ ಪೇಜ್‍ನಲ್ಲಿ ಬಿಡುಗಡೆ ಮಾಡುವುದಾಗಿ ರಾಕಿಂಗ್ ಸ್ಟಾರ್ ಯಶ್ ಘೋಷಿಸಿದ್ದಾರೆ. ಟ್ರೇಲರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಯಶ್ ತಮ್ಮ ಹುಟ್ಟುಹಬ್ಬದ ಸಿಹಿ ಹಂಚಲಿದ್ದಾರೆ.

    ಜನವರಿ 8 ರಂದು ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬವಾಗಿದ್ದು, ಈ ಬಾರಿ ಹುಟ್ಟುಹಬ್ಬದ ಆಚರಣೆಯನ್ನು ಅಭಿಮಾನಿಗಳು ತಮ್ಮನ್ನು ಮುಖಾಮುಖಿ ಭೇಟಿ ಮಾಡದೇ ಸಾಮಾಜಿಕ ಜಾಲತಾಣಗಳ ಮೂಲಕ ಹಾರೈಸುವಂತೆ ಯಶ್ ಅಭಿಮಾನಿಗಳೊಂದಿಗೆ ಕೇಳಿಕೊಂಡಿದ್ದಾರೆ.

     

    View this post on Instagram

     

    A post shared by Yash (@thenameisyash)

    ಪ್ರತಿ ವರ್ಷ ಹುಟ್ಟುಹಬ್ಬದಂದು ಸಾವಿರಾರೂ ಸಂಖ್ಯೆಯಲ್ಲಿ ಸೇರಿ ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾನ ಕರಿ ಛಾಯೆ ಆವರಿಸಿಕೊಂಡಿರುವ ಕಾರಣದಿಂದಾಗಿ ಎಲ್ಲಾ ಅಭಿಮಾನಿಗಳು ತಮ್ಮ ತಮ್ಮ ಮೂಲ ಸ್ಥಳಗಳಲ್ಲೇ ಇದ್ದು ಅಲ್ಲಿಂದಲೇ ಶುಭಹಾರೈಕೆ ಮಾಡಬೇಕೆಂದು ಇನ್ಟಾಗ್ರಾಂ ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಮನವಿ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by Prashanth Neel (@prashanthneel)

    ನಿಮ್ಮ ಪ್ರೀತಿ ಮತ್ತು ಅಭಿಮಾನ ನನ್ನ ಮೇಲೆ ಇದೇ ರೀತಿ ಮುಂದುವರಿಯಲಿ. ಕೊರೊನಾ ಸಾಂಕ್ರಾಮಿಕ ರೋಗ ಮತ್ತೆ ರಾಜ್ಯದಲ್ಲಿ ಆತಂಕ ಸೃಷ್ಟಿಸುತ್ತಿದೆ. ಜನಸಂಖ್ಯೆ ಹೆಚ್ಚಾಗಿ ಸೇರುವುದರಿಂದ ನಿಮಗೆ ಅಪಾಯ ಹೆಚ್ಚು. ನಿಮಗೆ ಅಪಾಯವಾದರೆ ನನಗೆ ಅದರಿಂದ ತುಂಬಾ ನೋವಾಗುತ್ತದೆ. ಹಾಗಾಗಿ ಈ ಬಾರಿ ನನ್ನ ಮನವಿಯಂತೆ ನಡೆದುಕೊಳ್ಳಿ ಎಂದು ಆಭಿಮಾನಿಗಳೊಂದಿಗೆ ಯಶ್ ಮನವಿ ಮಾಡಿಕೊಂಡಿದ್ದಾರೆ.

  • ಕೆಜಿಎಫ್ ಚಾಪ್ಟರ್ 2- ಡಿಸೆಂಬರ್ 21, 2020, ಬೆಳಗ್ಗೆ 10.08 ನಿಮಿಷ

    ಕೆಜಿಎಫ್ ಚಾಪ್ಟರ್ 2- ಡಿಸೆಂಬರ್ 21, 2020, ಬೆಳಗ್ಗೆ 10.08 ನಿಮಿಷ

    – ರಾಜಾಹುಲಿ ಫ್ಯಾನ್ಸ್ ಗೆ ರಾಕಿಂಗ್ ನ್ಯೂಸ್

    ಬೆಂಗಳೂರು: ಇದೇ ಡಿಸೆಂಬರ್ 21ರಂದು ರಾಮಾಚಾರಿ ಅಭಿಮಾನಿಗಳಿಗೆ ರಾಕಿಂಗ್ ನ್ಯೂಸ್ ಕೊಡಲು ಡೈರೆಕ್ಟರ್ ಪ್ರಶಾಂತ್ ನೀಲ್ ನಿರ್ಧರಿಸಿದ್ದಾರೆ. ಯೆಸ್ ಈ ಕುರಿತು ಪೋಸ್ಟ್‌  ಮಾಡಿರುವ ಪ್ರಶಾಂತ್ ನೀಲ್ ಡಿಸೆಂಬರ್ 21, 2020, ಬೆಳಗ್ಗೆ 10.08 ನಿಮಿಷಕ್ಕಾಗಿ ಕಾಯ್ತಿರಿ ಎಂದು ಹೇಳಿದ್ದಾರೆ.

    https://twitter.com/prashanth_neel/status/1335827495463968768

    ಕೆಜಿಎಫ್ ಚಾಪ್ಟರ್ -1 ತೆರೆ ಕಂಡು ಡಿಸೆಂಬರ್ 21ಕ್ಕೆ ಮೂರು ವರ್ಷವಾಗಲಿದೆ. ಅಂದುಕೊಂಡಂತೆ ಆಗಿದ್ರೆ ಕೆಜಿಎಫ್ ಇಡೀ ದೇಶದಾದ್ಯಂತ ಅಬ್ಬರಿಸುತ್ತಿತ್ತು. ಕೊರೊನಾದಿಂದ ಶೂಟಿಂಗ್ ಸ್ಥಗಿತಗೊಂಡ ಹಿನ್ನೆಲೆ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗುತ್ತಾ ಬಂದಿತ್ತು. ಇನ್ನು ಅಭಿಮಾನಿಗಳು ಸಿನಿಮಾ ಟೀಸರ್ ಬಿಡುಗಡೆ ಮಾಡಿ ಅಂತಾ ಟ್ವಿಟ್ಟರ್ ನಲ್ಲಿ ಒತ್ತಾಯಿಸಿದ್ದರು. ಇದೀಗ ಡಿಸೆಂಬರ್ 21, 2020, ಬೆಳಗ್ಗೆ 10.08 ನಿಮಿಷಕ್ಕೆ ಚಿತ್ರತಂಡದಿಂದ ಮಹತ್ವದ ಘೋಷಣೆಯೊಂದು ಹೊರ ಬೀಳಲಿದೆ.

    https://twitter.com/prashanth_neel/status/1340184082966200321

    ಕೆಲ ದಿನಗಳ ಹಿಂದೆ ಅಧೀರ ಮತ್ತು ರಾಕಿಯ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ನಡೆಯುತ್ತಿರುವ ಬಗ್ಗೆ ಪ್ರಶಾಂತ್ ನೀಲ್ ಮಾಹಿತಿ ನೀಡಿದ್ದರು. ಇತ್ತೀಚೆಗೆ ಗುಣಮುಖರಾಗಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸಂಜಯ್ ದತ್ ಡೂಪ್ ಸಹ ಬಳಸದೇ ಸಾಹಸ ದೃಶ್ಯಗಳಲ್ಲಿ ನಟಿಸಿದ್ದಾರೆ ಎಂದು ವರದಿ ಆಗಿತ್ತು.

     

  • ಪ್ರಭಾಸ್ ಜೊತೆ ಪ್ರಶಾಂತ್ ನೀಲ್ ಸಿನಿಮಾ- ಟ್ವಿಟ್ಟರ್‌ನಲ್ಲಿ ಟ್ರೆಂಡ್

    ಪ್ರಭಾಸ್ ಜೊತೆ ಪ್ರಶಾಂತ್ ನೀಲ್ ಸಿನಿಮಾ- ಟ್ವಿಟ್ಟರ್‌ನಲ್ಲಿ ಟ್ರೆಂಡ್

    ಬೆಂಗಳೂರು: ಕೆಜಿಎಫ್ ಸಿನಿಮಾ ಮೂಲಕ ದೇಶ, ವಿದೇಶಗಳಲ್ಲಿ ಜನಪ್ರಿಯತೆ ಗಳಿಸಿರುವ ನಿರ್ದೇಶಕ ಪ್ರಶಾಂತ್ ನೀಲ್, ಕೆಜಿಎಫ್-2 ಬಳಿಕ ಯಾವ ಪ್ರಾಜೆಕ್ಟ್ ನಲ್ಲಿ ತೊಡಗಿಕೊಳ್ಳುತ್ತಾರೆ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಈ ಕುರಿತು ಇದೀಗ ಸುಳಿವು ಸಿಕ್ಕಿದ್ದು, ಬಾಹುಬಲಿ ಖ್ಯಾತಿಯ ಪ್ರಭಾಸ್ ಜೊತೆ ಬಿಗ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಮಾತ್ರವಲ್ಲ ಟ್ವಿಟ್ಟರ್ ನಲ್ಲಿ ಟ್ರೆಂಡ್ ಸೃಷ್ಟಿಸಲಾಗಿದೆ.

    ಯಶ್ ಅಭಿನಯದ ಕೆಜಿಎಫ್ ಅಭೂತಪೂರ್ವ ಗೆಲುವಿನ ಬಳಿಕ ಪ್ರಶಾಂತ್ ನೀಲ್ ಅವರು ಮತ್ತೊಂದು ಸೀಕ್ವೆಲ್ ಮಾಡುತ್ತಿದ್ದು, ಕೆಜಿಎಫ್-2 ಸಹ ಭಾರೀ ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ ಚಿತ್ರೀಕರಣ ಅಂತಿಮ ಹಂತ ತಲುಪಿದ್ದು, ಇನ್ನೇನು ಬಿಡುಗಡೆಗೆ ತಯಾರಾಗುತ್ತಿದೆ. ಇದೇ ಸಂದರ್ಭದಲ್ಲಿ ಅಭಿಮಾನಿಗಳು ನಿರ್ದೇಶಕ ಪ್ರಶಾಂತ್ ನೀಲ್ ಅವರ ಮುಂದಿನ ಪ್ರಾಜೆಕ್ಟ್ ಯಾವುದು ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಈ ಕುರಿತು ಇದೀಗ ಹೊಂಬಾಳೆ ಫಿಲಂಸ್ ಸುಳಿವು ನೀಡಿದೆ.

    ಕಳೆದ ಕೆಲವು ದಿನಗಳಿಂದ ಪ್ರಶಾಂತ್ ನೀಲ್ ಅವರು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್‍ನಲ್ಲಿದ್ದು, ಪ್ರಭಾಸ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗಿದೆ. ಇದರ ಬೆನ್ನಲ್ಲೇ ಇಂದು ಹೊಂಬಾಳೆ ಫಿಲಂಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟರ್‍ವೊಂದನ್ನು ಬಿಡುಗಡೆ ಮಾಡಿದ್ದು, ಇದಕ್ಕೆ ಪುಷ್ಠಿ ಸಿಕ್ಕಂತಾಗಿದೆ. ಹೀಗಾಗಿ ಅಭಿಮಾನಿಗಳು ಈ ಕುರಿತು ಸಾಕಷ್ಟು ಚರ್ಚೆ ನಡೆಸುತ್ತಿದ್ದಾರೆ.

    ಆತ್ಮೀಯ ಕಲಾಭಿಮಾನಿಗಳೇ, ನೀವು ನಮ್ಮ ಸಿನಿಮಾಗಳನ್ನು ನಮಗಿಂತಲೂ ಹೆಚ್ಚು ಪ್ರೀತಿಸುತ್ತೀರಿ. ಈ ಪ್ರೀತಿ ಸದಾ ನಮ್ಮ ಮೇಲೆ ಇರಲಿ, ನಾವು ಮತ್ತೊಂದು ‘ಇಂಡಿಯನ್ ಸಿನಿಮಾ’ ಮೂಲಕ ನಿಮ್ಮ ಮುಂದೆ ಬರಲಿದ್ದೇವೆ. ಡಿಸೆಂಬರ್ 2ರಂದು ಮಧ್ಯಾಹ್ನ 2.09ಕ್ಕೆ ಹೊರ ಬೀಳಲಿರುವ ಘೋಷಣೆಗಾಗಿ ಹೃದಯವನ್ನು ತೆರೆದಿಟ್ಟುಕೊಂಡಿರಿ ಎಂದು ಹೊಂಬಾಳೆ ಫಿಲಂಸ್‍ನ ಟ್ವೀಟ್‍ನಲ್ಲಿ ಬರೆಯಲಾಗಿದೆ. ಈ ಕುರಿತು ಪೋಟೋವನ್ನು ಸಹ ಹಂಚಿಕೊಳ್ಳಲಾಗಿದೆ.

    ಹೊಂಬಾಳೆ ಫಿಲಂಸ್‍ನ ಪೋಸ್ಟರ್ ಇದೀಗ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು, ಪ್ರಶಾಂತ್ ನೀಲ್ ಅವರು ಕೆಜಿಎಫ್-2 ಬಳಿಕ ಪ್ರಭಾಸ್ ಹಾಗೂ ಜೂ.ಎನ್‍ಟಿಆರ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಹೊಂಬಾಳೆ ಫಿಲಂಸ್ ಟ್ವೀಟ್ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದ್ದರೂ, ಈ ಕುರಿತು ಪ್ರಶಾಂತ್ ನೀಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಅಭಿಮಾನಿಗಳು ಫುಲ್ ಕನ್ಫ್ಯೂಸ್ ಆಗಿದ್ದಾರೆ. ಒಟ್ನಲ್ಲಿ ಈ ಕುರಿತು ಟ್ವಿಟ್ಟರ್ ನಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.

    ಕೆಜಿಎಫ್ ಚಾಪ್ಟರ್-2 ಚಿತ್ರೀಕರಣಕ್ಕಾಗಿ ಬಾಲಿವುಡ್ ಹಿರಿಯ ನಟ ಸಂಜಯ್ ದತ್ ಅವರು ಹೈದಾರಾಬಾದ್‍ಗೆ ಲ್ಯಾಂಡ್ ಆಗಿದ್ದು, ಶೂಟಿಂಗ್ ಆರಂಭಿಸಿದ್ದಾರೆ. ಅಧೀರನ ಪಾತ್ರ ನಿರ್ವಹಿಸುತ್ತಿರುವ ಸಂಜು ಬಾಬಾ ಕ್ಯಾನ್ಸರ್‍ಗೆ ಚಿಕಿತ್ಸೆ ಪಡೆದು ಮರಳಿದ ಬಳಿಕ ಉತ್ಸಾಹದಿಂದಲೇ ಶೂಟಿಂಗ್‍ಗೆ ಆಗಮಿಸಿದ್ದಾರೆ. ಲಾಕ್‍ಡೌನ್ ಬಳಿಕ ಇತ್ತೀಚೆಗಷ್ಟೇ ಯಶ್ ಭಾಗದ ಚಿತ್ರೀಕರಣವನ್ನು ಉಡುಪಿಯಲ್ಲಿ ನಡೆಸಲಾಗಿತ್ತು. ಇದೆಲ್ಲದರ ನಡುವೆ ಇದೀಗ ಪ್ರಭಾಸ್ ಜೊತೆ ಪ್ರಶಾಂತ್ ನೀಲ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.

  • ಕೆಜಿಎಫ್ ರಾಕಿಗೆ ಡೆತ್ ನೋಟ್ ನೀಡಲು ಬಂದ ರಮಿಕಾ ಸೇನ್ ಫಸ್ಟ್ ಲುಕ್

    ಕೆಜಿಎಫ್ ರಾಕಿಗೆ ಡೆತ್ ನೋಟ್ ನೀಡಲು ಬಂದ ರಮಿಕಾ ಸೇನ್ ಫಸ್ಟ್ ಲುಕ್

    ಬೆಂಗಳೂರು: ಕೆಜಿಎಫ್ ದುನಿಯಾದ ರಾಕಿಗೆ ಡೆತ್ ನೋಟ್ ನೀಡಲು ಬಂದ ರಾಜಕಾರಣಿ ರಮೀಕಾ ಸೇನ್ ಫಸ್ಟ್ ಲುಕ್ ಔಟ್ ಆಗಿದೆ. ರಮೀಕಾ ಸೇನ್ ಪಾತ್ರದಲ್ಲಿ ನಟಿಸುತ್ತಿರುವ ರವೀನಾ ಟಂಡನ್ ಹುಟ್ಟುಹಬ್ಬದ ಹಿನ್ನೆಲೆ ಚಿತ್ರತಂಡ ಫಸ್ಟ್ ಲುಕ್ ಬಿಡುಗಡೆಗೊಳಿಸುವ ಮೂಲಕ ಬರ್ತ್ ಡೇ ಗಿಫ್ಟ್ ನೀಡಿದೆ.

    ಕನ್ನಡಕ್ಕೆ ಮೊದಲ ಬಾರಿಗೆ ಬಂದಿರುವ ರವೀನಾ ಟಂಡನ್ ಕೆಜಿಎಫ್ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೊದಲ ಭಾಗದಲ್ಲಿ ಕಾಣಿಸಿಕೊಂಡಿದ್ದ ಮಹಿಳಾ ರಾಜಕಾರಣಿಯಾಗಿ ರವೀನಾ ನಟಿಸುತ್ತಿದ್ದಾರೆ. ಕೆಜಿಎಫ್ ಲೋಕದಲ್ಲಿಯ ನಾಯಕ ರಾಕಿಗೆ ರಮೀಕಾ ಸೇನ್ ಡೆತ್ ನೀಡಲಿರುವ ವಿಷಯವನ್ನ ಚಿತ್ರತಂಡ ಈ ಹಿಂದೆ ಹೇಳಿಕೊಂಡಿತ್ತು. ಅಧಿವೇಶನದಲ್ಲಿ ಕೆಂಪು ಸೀರೆ ತೊಟ್ಟ ಆದೇಶಕ್ಕಾಗಿ ಕಾಯುತ್ತಿರುವ ರವೀನಾರ ಗಾಂಭೀರ್ಯದ ನೇರ ನೋಟ ನೋಡುಗರನ್ನ ಸೆಳೆಯುತ್ತಿದೆ.

    ರವೀನಾ ಟಂಡನ್ ಚಿತ್ರೀಕರಣಕ್ಕೆ ಆಗಮಿಸಿದ ವೇಳೆ ಚಿತ್ರತಂಡ ವಿಶೇಷವಾಗಿ ಬರಮಾಡಿಕೊಂಡಿತ್ತು. ರವೀನಾ ಮತ್ತು ಯಶ್ ಜೊತೆಗಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಕೆಲ ದಿನಗಳ ಹಿಂದೆ ಚಿತ್ರದ ರಾಕಿಯ ನಾಯಕಿ ರೀನಾ ಹುಟ್ಟುಹಬ್ಬದ ದಿನವೂ ಶ್ರೀನಿಧಿ ಶೆಟ್ಟಿಯವರ ಫಸ್ಟ್ ಲುಕ್ ಬಿಡುಗಡೆಗೊಳಿಸಲಾಗಿತ್ತು.

  • ಕತ್ತಿ ಹಿಡಿದು ಬೇಟೆಗೆ ಕಾಯ್ತಿರೋ ಅಧೀರನ ಲುಕ್ ಧಗ ಧಗ

    ಕತ್ತಿ ಹಿಡಿದು ಬೇಟೆಗೆ ಕಾಯ್ತಿರೋ ಅಧೀರನ ಲುಕ್ ಧಗ ಧಗ

    ಬೆಂಗಳೂರು: ಕೆಜಿಎಫ್ ಸಿನಿಮಾ ಮೂಲಕ ಚಂದನವನಕ್ಕೆ ಪ್ರವೇಶ ನೀಡಿರುವ ಸಂಜಯ್ ದತ್ ನಟನೆಯ ಅಧೀರನ ಲುಕ್ ಇಂದು ಅನಾವರಣಗೊಂಡಿದೆ.

    ಸಂಜಯ್ ದತ್ ಹುಟ್ಟುಹಬ್ಬದ ಹಿನ್ನೆಲೆ ಹೊಂಬಾಳೆ ಫಿಲಂಸ್ ಅಧೀರನ ಪೋಸ್ಟರ್ ಬಿಡುಗಡೆ ಮಾಡಿದೆ. ಕೈಯಲ್ಲಿ ಕತ್ತಿ ಹಿಡಿದು ಏನೋ ಯೋಚಿಸೋ ರೀತಿಯಲ್ಲಿ ಅಧೀರ ಕುಳಿತಿದ್ದು, ಫೋಟೋ ಸೋಶಿಯ್ ಮೀಡಿಯಾದಲ್ಲಿ ಧಗ ಧಗಿಸುತ್ತಿದೆ. ಇದರ ಜೊತೆಗೆ ಕ್ರೂರತನಗಳಿಂದ ಪ್ರಭಾವಿತನಾದ ನಿರ್ಭಿತ ಯೋಧ ಎಂದು ಬರೆಯಲಾಗಿದೆ.

    ಎರಡು ದಿನಗಳ ಹಿಂದೆ ಕೆಜಿಎಫ್ ಅಂಗಳದಿಂದ ದೊಡ್ಡ ಸುದ್ದಿ ಹೊರ ಬೀಳುವ ಮುನ್ಸೂಚನೆಯನ್ನು ನಿರ್ದೇಶಕ ಪ್ರಶಾಂತ್ ನೀಲ್ ನೀಡಿದ್ದರು. ರಾಕಿಯ ಜೊತೆಗಿನ ಯದ್ಧ ಅಧೀರನ ಯುದ್ಧ ಬಲುರೋಚಕವಾಗಿರಲಿದೆ ಎಂಬುದನ್ನು ಪೋಸ್ಟರ್ ಹೇಳುತ್ತಿದೆ. ಗರುಡನನ್ನ ಮುಗಿಸುವ ರಾಕಿಯ ಮುಂದಿನ ಯುದ್ಧ ಅಧೀರನೊಂದಿಗೆ ಇರಲಿದೆ. ಸಾವಿರಾರು ಜನರ ನಾಯಕನಾಗಿ ರಾಕಿ ಹೇಗೆ ತನ್ನ ಹೊಸ ಸಾಮ್ರಾಜ್ಯ ಕಟ್ಟಲಿದ್ದಾನೆ ಎಂಬು ಚಾಪ್ಟರ್-2ರಲ್ಲಿ ರಿವೀಲ್ ಆಗಲಿದೆ.

  • ಕೆಜಿಎಫ್ ಅಂಗಳದಲ್ಲಿ ಹೊಸ ಸಂಚಲನದ ಪಥ

    ಕೆಜಿಎಫ್ ಅಂಗಳದಲ್ಲಿ ಹೊಸ ಸಂಚಲನದ ಪಥ

    -ಕ್ರೂರ ದಾರಿಯಲ್ಲಿ ರಾಕಿ ಪಯಣ ಆರಂಭ

    ಬೆಂಗಳೂರು: ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನೊಂದಿಗೆ ತೆರೆಕಂಡ ಚಿತ್ರ ಕೆಜಿಎಫ್. ಈ ಸಿನಿಮಾ ಮಾಡಿದ್ದ ಸದ್ದು ಇಂದಿಗೂ ಮಾರ್ದನಿಸುತ್ತಿದೆ. ಕೆಜಿಎಫ್ ಮೊದಲ ಭಾಗದಲ್ಲಿ ನೋಡುಗರನ್ನು ಸೆರೆ ಹಿಡಿದಿರೋ ನಿರ್ದೇಶಕ ಪ್ರಶಾಂತ್ ನೀಲ್ ಇಂದಿಗೂ ಅವರನ್ನು ಉಳಿಸಿಕೊಳ್ಳುವದರ ಜೊತೆಗೆ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಸಿನಿಮಾ ಬಗ್ಗೆ ಹೊಸ ಹೊಸ ಅಪಡೇಟ್ ಗಳನ್ನು ನೀಡುತ್ತಾ ಬಂದಿದ್ದಾರೆ. ಇಂದು ಪೋಸ್ಟರ್ ಹಂಚಿಕೊಂಡಿರುವ ಪ್ರಶಾಂತ್ ನೀಲ್, ಇರೋದು ಕ್ರೂರ ಮಾರ್ಗ ಒಂದೇ ಎಂದು ಹೇಳಿದ್ದಾರೆ.

    https://twitter.com/prashanth_neel/status/1287606283223183360

    ಸಿನಿಮಾದ ಪ್ರತಿಯೊಂದು ಮಾಹಿತಿಯನ್ನು ಅತ್ಯಂತ ಅಚ್ಚುಕಟ್ಟಾಗಿ ಹೊಸತನದೊಂದಿಗೆ ಪ್ರಶಾಂತ್ ನೀಲ್ ನೀಡುತ್ತಾ ಬಂದಿದ್ದಾರೆ. ಅಂಧಕಾರದಲ್ಲಿ ಧಗ ಧಗಿಸುತ್ತಿರೋ ಜ್ವಾಲೆ, ಮುಂದೊಂದು ಯುದ್ಧಕ್ಕೆ ಬಾ ಅನ್ನುವಂತೆ ಬಿಂಬಿಸುವ ಕತ್ತಿಯುಳ್ಳ ಕೆಜಿಎಫ್ ಹೊಸ ಲುಕ್ ಅನಾವರಣಗೊಂಡಿದೆ. ಪೋಸ್ಟರ್ ಮೇಲೆ ಕ್ರೂರ ಮಾರ್ಗದ ಅನಾವರಣ ಜುಲೈ 29 ಬೆಳಗ್ಗೆ 10 ಗಂಟೆಗೆ ಎಂಬ ಸಾಲುಗಳನ್ನು ಬರೆಯಲಾಗಿದೆ.

    ಈ ಪೋಸ್ಟರ್ ಮೂಲಕ ಬುಧವಾರ ಕೆಜಿಎಫ್ ಅಭಿಮಾನಿಗಳಿಗೆ ಮತ್ತೊಂದು ಗಿಫ್ಟ್ ಸಿಗಲಿದೆ ಎಂಬುದನ್ನು ಚಿತ್ರತಂಡ ಹೇಳಿಕೊಂಡಿದೆ.

    ಕೆಜಿಎಫ್ ಮೊದಲ ಭಾಗದಲ್ಲಿ ಗರುಡನ ರುಂಡವನ್ನ ಚೆಂಡಾಡುವ ರಾಕಿ ಬಾಯ್ ಮುಂದಿನ ಜೀವನ ಹೇಗಿರುತ್ತೆ? ಬಂಗಾರದ ಗಣಿಯಲ್ಲಿ ರಾಕಿ ಹೇಗೆ ತನ್ನ ಸಾಮ್ರಾಜ್ಯ ಕಟ್ಟಿಕೊಳ್ಳುತ್ತಾನೆ? ರಾಕಿ ಸಾಗುವ ದಾರಿ ಹೇಗಿರುತ್ತೆ ಎಂಬಿತ್ಯಾದಿ ಪ್ರಶ್ನೆಗಳ ಉತ್ತರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.