‘ಕೆಜಿಎಫ್ 2′ (KGF 2) ಸಿನಿಮಾದ ಸೂಪರ್ ಸಕ್ಸಸ್ ನಂತರ ‘ಸಲಾರ್’ (Saalar) ಸಿನಿಮಾ ಮೂಲಕ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಬರುತ್ತಿದ್ದಾರೆ. ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್‌ವೊಂದನ್ನ ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ ರಂಗದ ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಸದ್ಯ ತೆಲುಗಿನತ್ತ ಮುಖ ಮಾಡಿದ್ದಾರೆ. ‘ಕೆಜಿಎಫ್ 2’ ಬಳಿಕ ಸಲಾರ್ ಕೈಗೆತ್ತಿಕೊಂಡಿದ್ದಾರೆ. ‘ಸಲಾರ್’ ಇದೊಂದು ಡಿಫರೆಂಟ್ ಕಂಟೆಂಟ್ ಇರುವ ಸಿನಿಮಾ ಆಗಿದ್ದು, ಪ್ರಭಾಸ್‌ಗೆ ಮೊದಲ ಬಾರಿಗೆ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಸಂಸ್ಥೆ (Hombale Films) ನಿರ್ಮಾಣದ ಈ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.
ಪ್ರಭಾಸ್‌ಗೆ ಜೋಡಿಯಾಗಿ ಶ್ರುತಿ ಹಾಸನ್ (Shruti Haasan) ನಟಿಸಿದ್ದಾರೆ. ಇಷ್ಟು ಪೋಸ್ಟರ್ ಲುಕ್‌ನಿಂದಲೇ ಸದ್ದು ಮಾಡ್ತಿದ್ದ ‘ಸಲಾರ್’ ಸಿನಿಮಾ ಮೊದಲ ಝಲಕ್ ತೋರಿಸಲು ಚಿತ್ರತಂಡ ನಿರ್ಧರಿಸಿದೆ. ಹೌದು.. ಇದೇ ಜುಲೈ 6ಕ್ಕೆ ಸಲಾರ್ ಸಿನಿಮಾದ ಮೊದಲ ಟೀಸರ್ ರಿಲೀಸ್ ಆಗಲಿದೆ. ಬೆಳಿಗ್ಗೆ 5:12ಕ್ಕೆ ಟೀಸರ್ ರಿವೀಲ್ ಮಾಡುವುದಾಗಿ ಚಿತ್ರತಂಡ ಬಿಗ್ ಅಪ್‌ಡೇಟ್ ನೀಡಿದೆ. ಈ ಮೂಲಕ ಅಭಿಮಾನಿಗಳಿಗೆ ಸಿಗಲಿದೆ ಸೂಪರ್ ಸರ್ಪ್ರೈಸ್. ಸಲಾರ್‌ಗಾಗಿ ಕಾಯುತ್ತಿದ್ದ ಫ್ಯಾನ್ಸ್ ಟೀಮ್ ಸಿಹಿಸುದ್ದಿ ನೀಡಿದೆ. ಜೊತೆಗೆ ಇದೇ ಸೆ.28ಕ್ಕೆ ತೆರೆಗೆ ಬರಲು ಸಲಾರ್ ಸಿದ್ಧವಾಗಿದೆ. ಇದನ್ನೂ ಓದಿ:ಕೊನೆಗೂ ತನ್ನ ಮಗುವಿನ ತಂದೆ ಬಗ್ಗೆ ಗುಟ್ಟು ರಟ್ಟು ಮಾಡಿದ ಇಲಿಯಾನಾ
ಸಾಲು ಸಾಲು ಸಿನಿಮಾಗಳ ಸೋಲಿನಿಂದ ಬೆಸತ್ತಿರುವ ಪ್ರಭಾಸ್‌ಗೆ(Prabhas) ‘ಸಲಾರ್’ ಸಿನಿಮಾ ಮೂಲಕ ಗೆಲುವು ಸಿಗುತ್ತಾ? ವೃತ್ತಿರಂಗದಲ್ಲಿ ಬಾಹುಬಲಿ ಹೀರೋಗೆ ಈ ಸಿನಿಮಾ ತಿರುವು ನೀಡುತ್ತಾ ಕಾಯಬೇಕಿದೆ. ಈ ಬಾರಿ ಪ್ರಭಾಸ್- ಪ್ರಶಾಂತ್ ನೀಲ್ ಕಾಂಬೋ ಅದೆಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತಿದೆ ಕಾದು ನೋಡಬೇಕಿದೆ.
ನ್ಯಾಷನಲ್ ಸ್ಟಾರ್ ಯಶ್- ರಾಧಿಕಾ ಪಂಡಿತ್ (Radhika Pandit) ಜೋಡಿ ಇತ್ತೀಚಿಗೆ ದಕ್ಷಿಣ ಕಾಶಿ ನಂಜನಗೂಡಿಗೆ ಭೇಟಿ ಕೊಟ್ಟಿದ್ದರು. ಮುಂದಿನ ಸಿನಿಮಾ ಬಗ್ಗೆ ಸದ್ಯದಲ್ಲೇ ಅಪ್‌ಡೇಟ್ ಕೊಡ್ತೀನಿ ಎಂದು ಯಶ್ (Yash) ಸಿಹಿಸುದ್ದಿ ನೀಡಿದ್ರು. ಈ ಬೆನ್ನಲ್ಲೇ ಯಶ್, ಫ್ಯಾಮಿಲಿ ಜೊತೆ ವೆಕೇಷನ್‌ಗೆ ಹೋಗಿದ್ದಾರೆ. ಹಳ್ಳಿಯ ಸುಂದರ ತಾಣಗಳಿಗೆ ಭೇಟಿ ನೀಡಿದ್ದಾರೆ. ಈ ಕುರಿತ ಫೋಟೋಗಳನ್ನ ನಟಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಮತ್ತೆ ಸ್ಟೈಲೀಶ್ ಆಗಿ ಕಾಣಿಸಿಕೊಂಡ ‘ಬಿಗ್ ಬಾಸ್’ ಸಾನ್ಯ ಅಯ್ಯರ್
‘ಕೆಜಿಎಫ್ 2’ (KGF2) ಸಿನಿಮಾದ ಸೂಪರ್ ಸಕ್ಸಸ್ ನಂತರ ಯಶ್ ಸೈಲೆಂಟ್ ಆಗಿದ್ದಾರೆ. ಸದ್ದಿಲ್ಲದೇ ಹೊಸ ಸಿನಿಮಾಗೆ ತಾಲೀಮು ನಡೆಸುತ್ತಿದ್ದಾರೆ. ಯಶ್ ಏನೇ ಮಾಡಿದ್ರು ಅದು ಸುದ್ದಿಯಾಗುತ್ತಿದೆ. ಹೀಗಿರುವಾಗ ತಮ್ಮ ಮುಂದಿನ ಚಿತ್ರದ ಬಗ್ಗೆ ಯಾವುದೇ ಸುಳಿವು ನೀಡದೇ ಸೈಲೆಂಟ್ ಆಗಿ ಕೆಲಸ ಮಾಡ್ತಿದ್ದಾರೆ. ಯಶ್- ರಾಧಿಕಾ ಕುಟುಂಬ ಪ್ರವಾಸದಲ್ಲಿದ್ದಾರೆ. ತಮ್ಮ ಮಕ್ಕಳಿಗೆ ಪ್ರಕೃತಿಯನ್ನು ಹತ್ತಿರದಿಂದ ತೋರಿಸುತ್ತಿದ್ದಾರೆ.
ಯಶ್ ದಂಪತಿಯ ಮುದ್ದಾದ ಮಕ್ಕಳು ಐರಾ, ಯಥರ್ವ್ ತಮ್ಮ ಬಾಲ್ಯವನ್ನು ಪ್ರಕೃತಿಯ ನಡುವೆ ಎಂಜಾಯ್ ಮಾಡ್ತಿದ್ದಾರೆ. ಯಶ್-ರಾಧಿಕಾ, ಹಳ್ಳಿಯ ಫಾರ್ಮ್ ಹೌಸ್‌ನಲ್ಲಿ ಸುತ್ತಾಡುತ್ತಿದ್ದಾರೆ. ಐರಾ- ಯಥರ್ವ್ ಇಬ್ಬರು ಹುಲ್ಲುಮಿಡತೆ ನೋಡುತ್ತಿರುವ ಫೋಟೋ ಸೇರಿದಂತೆ ಹಲವು ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ.
ಇನ್ನೂ ಯಶ್ (Yash 19)ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ಕೌತುಕ ನಿರ್ಮಾಣವಾಗಿದೆ. ಹಾಗೆಯೇ ರಾಧಿಕಾ ಪಂಡಿತ್ (Radhika Pandit) ಕಂಬ್ಯಾಕ್ ಬಗ್ಗೆ ಕೂಡ ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಅದರಲ್ಲೂ ಯಶ್- ರಾಧಿಕಾ ಒಟ್ಟಿಗೆ ನಟಿಸಿದ್ರೆ ಎಷ್ಟು ಚೆನ್ನಾಗಿರುತ್ತೆ ಅಭಿಮಾನಿಗಳು ಲೆಕ್ಕಚಾರ ಹಾಕ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಯಶ್ ಜೋಡಿಗೆ ಮನವಿ ಮಾಡ್ತಿದ್ದಾರೆ.
ಸಿನಿಮಾ ಕೆಲಸಗಳ ಮಧ್ಯೆಯೇ ಬಿಡುವು ಮಾಡಿಕೊಂಡು ಫ್ಯಾಮಿಲಿಗೆ ಟೈಮ್ ಕೊಟ್ಟಿದ್ದಾರೆ ಯಶ್. ಕಳೆದ ವಾರ ಯಶ್ ಅವರು ಮೈಸೂರು ಭಾಗದಲ್ಲಿ ಪ್ರವಾಸದಲ್ಲಿದ್ದರು. ನಾಗರ ಹೊಳೆ, ಬಂಡೀಪುರ ಅರಣ್ಯದಲ್ಲಿ ಸಫಾರಿ ನಡುವೆ ಶ್ರೀಕಂಠೇಶ್ವರ ದೇವರಿಗೆ ಪೂಜೆ ನೆರವೇರಿಸಿದ್ದಾರೆ. ಮೈಸೂರು ಯಶ್ ಅವರ ಹುಟ್ಟೂರು. ಅಲ್ಲದೇ, ಮೈಸೂರಿಗೆ ಹೋದಾಗೆಲ್ಲ ಯಶ್ ಹೀಗೆ ಪ್ರವಾಸ ಮಾಡುತ್ತಲೇ ಇರುತ್ತಾರೆ. ಇಷ್ಟದ ಸ್ಥಳಗಳಿಗೆ ಈ ಬಾರಿ ಹೆಂಡತಿ ಮತ್ತು ಹೆಂಡತಿ ಕುಟುಂಬವನ್ನು ಅವರು ಕರೆದುಕೊಂಡು ಹೋಗಿದ್ದಾರೆ. ಈ ಬಾರಿ ಮಕ್ಕಳಿಗೂ ತಮ್ಮ ಹುಟ್ಟೂರು ತೋರಿಸಿದ್ದಾರೆ ರಾಕಿಂಗ್ ಸ್ಟಾರ್.
ಸ್ಯಾಂಡಲ್‌ವುಡ್‌ನ ರ‍್ಯಾಂಬೋ ಬೆಡಗಿ ಆಶಿಕಾ ರಂಗನಾಥ್ (Ashika Ranganath) ಅವರು ಸದ್ಯ ಕನ್ನಡದ ಜೊತೆಗೆ ತೆಲುಗು- ತಮಿಳು ಚಿತ್ರರಂಗದಲ್ಲೂ ಆಕ್ಟೀವ್ ಆಗಿದ್ದಾರೆ. ಈ ನಡುವೆ ಕಾರ್ಯಕ್ರಮವೊಂದರಲ್ಲಿ ನಟಿ ಆಶಿಕಾ ಅವರು ತಮ್ಮ ಲೈಫ್ ಪಾರ್ಟನರ್ ಹೇಗಿರಬೇಕು ಎಂದು ಬಣ್ಣಿಸಿದ್ದಾರೆ. ಯಶ್ (Actor Yash) ತರ ಗಂಡ ಇರಬೇಕು ಎಂದು ಹೇಳಿಕೊಂಡಿದ್ದಾರೆ.
‘ಕ್ರೇಜಿ ಬಾಯ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ನಟಿ ಆಶಿಕಾ ರಂಗನಾಥ್, ಮುಗುಳುನಗೆ, ಮಾಸ್ ಲೀಡರ್, ರ‍್ಯಾಂಬೋ 2, ತಾಯಿಗೆ ತಕ್ಕ ಮಗ, ಮದಗಜ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ರು. ‘ಕೋಟಿಗೊಬ್ಬ-3’ನಲ್ಲಿ ಆಶಿಕಾ ರಂಗನಾಥ್, ಕಿಚ್ಚ ಸುದೀಪ್ (Kiccha Sudeep) ಜೊತೆ ಪಟಾಕಿ ಪೋರಿ ಹಾಡಿಗೆ ಸೊಂಟ ಬಳುಕಿಸಿದ್ದರು.
ಇತ್ತೀಚಿನ ಅವಾರ್ಡ್ ಕಾರ್ಯಕ್ರಮದಲ್ಲಿ ಯಂಗ್ ಸ್ಟಾರ್ ಐಕಾನ್ ಪ್ರಶಸ್ತಿಯೂ ಆಶಿಕಾ ರಂಗನಾಥ್‌ಗೆ ಲಭಿಸಿದೆ. ನಟಿ ಪ್ರಶಸ್ತಿ ಪಡೆದು ತುಂಬಾ ಖುಷಿಯಾಗಿದ್ದಾರೆ. ಬ್ಲ್ಯಾಕ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಈ ಪ್ರಶಸ್ತಿ ಪಡೆದ ನಂತರ ನಿರೂಪಕ ನಿರಂಜನ್ ದೇಶಪಾಂಡೆ ಅವರು ನಿಮ್ಮ ಬಾಯ್ ಫ್ರೆಂಡ್ ಯಾವ ರೀತಿ ಇರಬೇಕು ಎಂದು ಕೇಳ್ತಾರೆ. ಅದಕ್ಕೆ ಆಶಿಕಾ, ನಮ್ಮ ನಡುವೆ ತುಂಬಾ ಹೊಂದಾಣಿಕೆ ಇರಬೇಕು. ಪ್ರೀತಿ ತೋರಿಸಬೇಕು ಎಂದು ಆಶಿಕಾ ಹೇಳಿದ್ದಾರೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ‘ಜೋಶ್’ ನಟಿ ಸ್ನೇಹಾ ಆಚಾರ್ಯ
ನಿರಂಜನ್ ಸ್ಯಾಂಡಲ್‌ವುಡ್‌ನ ಹೀರೋ ಫೋಟೋಗಳನ್ನು ಹಾಕಿ. ಇದರಲ್ಲಿ ನಿಮ್ಮ ಮದುವೆ ಆಗೋ ಹುಡುಗ ಯಾವ ರೀತಿ ಇರಬೇಕು ಎಂದು ಕೇಳ್ತಾರೆ. ಅದಕ್ಕೆ ಆಶಿಕಾ, ಯಶ್ (Yash) ಸರ್ ಥರ ಗಂಡ (Husband) ಇರಬೇಕು ಎನ್ನಿಸುತ್ತೆ ಎಂದಿದ್ದಾರೆ. ನಾನು ಇವರನ್ನು ಓಡಿ ಹೋಗಿ ಪ್ರಪೋಸ್ ಮಾಡ್ತೀನಿ ಅಂದ್ರೆ ಯಾರನ್ನ ಎಂದು ನಿರೂಪಕ ಕೇಳಿದ್ದಾರೆ. ಅದಕ್ಕೆ ಆಶಿಕಾ, ಧ್ರುವ ಸರ್ಜಾ ಎಂದು ಹೇಳಿದ್ದಾರೆ.
ಚಂದನವನದ ಬೆಸ್ಟ್ ಜೋಡಿ ಯಶ್- ರಾಧಿಕಾ ಪಂಡಿತ್ (Radhika Pandit) ಅವರದ್ದು ಹಲವು ವರ್ಷಗಳು ಪ್ರೀತಿಸಿ ಬಳಿಕ ಮದುವೆ ಆಗಿದ್ದಾರೆ. ಅಲ್ಲದೇ ಇತರೆ ಜೋಡಿಗಳಿಗೆ ಮಾದರಿ ಆಗಿದ್ದಾರೆ. ಅವರ ರೀತಿ ಗಂಡ ಇರಬೇಕು ಎಂದುಕೊಳ್ಳುವುದು ಸಹಜ ಬಿಡಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಸ್ಯಾಂಡಲ್‌ವುಡ್‌ನ (Sandalwood) ನಟಿ ರಾಧಿಕಾ ಪಂಡಿತ್ (Radhika Pandit) ಅವರು ಮದುವೆ, ಮಕ್ಕಳ ಆರೈಕೆ ಅಂತಾ ಅಪ್ಪಟ ಗೃಹಿಣಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಅಪ್ಪಂದಿರ ದಿನಾಚರಣೆಗೆ ವಿಶೇಷವಾಗಿ ಶುಭಕೋರಿದ ಬೆನ್ನಲ್ಲೇ ತನ್ನ ಪೋಷಕರ ಮದುವೆ ವಾರ್ಷಿಕೋತ್ಸವಕ್ಕೆ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ದುಬೈನಲ್ಲಿ ನಡೆಯಿತು ಡಾ.ರಾಜ್ ಕಪ್ ಟೀಮ್ ಹರಾಜು ಪ್ರಕ್ರಿಯೆ
ಕನ್ನಡ ಸಿನಿಮಾರಂಗದಲ್ಲಿ ಬೆಸ್ಟ್ ನಟಿಯಾಗಿ ರಾಧಿಕಾ ಪಂಡಿತ್ ಮಿಂಚಲು ಅವರ ತಂದೆ- ತಾಯಿ ಶ್ರಮ, ತ್ಯಾಗ, ಬೆಂಬಲವೇ ಕಾರಣ. ಇಂದಿಗೂ ಯಶ್- ರಾಧಿಕಾ ಜೊತೆಯಿದ್ದು, ಅವರ ಪೋಷಕರು ಸಾಥ್ ನೀಡುತ್ತಿದ್ದಾರೆ. ಪೋಷಕರಾದ ಕೃಷ್ಣಪ್ರಸಾದ್ ಪಂಡಿತ್, ಮಂಗಳಾ ಪಂಡಿತ್ (Mangala Pandit) ದಂಪತಿಯ ಮದುವೆ ಆದ ದಿನ, ವಾರ್ಷಿಕೋತ್ಸವದ ಸಂಭ್ರಮವಾಗಿದೆ. ಹಾಗಾಗಿ ಸ್ವೀಟ್ ಆಗಿ ರಾಧಿಕಾ ಶುಭಕೋರಿದ್ದಾರೆ.
ಕೆಲಸದ ಮೇಲಿನ ಪ್ರೀತಿಯಿಂದ ಗೋವಾದಲ್ಲಿ ಶುರುವಾಗಿ ಇಲ್ಲಿವರೆಗೂ ತಂದು ನಿಲ್ಲಿಸಿದೆ. ಬೆಂಗಳೂರಿನಲ್ಲಿ ಒಂದು ಸೆಟ್ ಮೊಮ್ಮಕ್ಕಳು, ಚಿಕಾಗೋದಲ್ಲಿ ಇನ್ನೊಂದು ಸೆಟ್ ಮೊಮ್ಮಕ್ಕಳು. ನೀವು ಇಬ್ಬರೂ ಗಟ್ಟಿಯಾದ ಸಂಬಂಧವನ್ನು ಬೆಸೆಯುತ್ತೀರಿ. ವಾರ್ಷಿಕೋತ್ಸವದ ಶುಭಾಶಯಗಳು ಪಪ್ಪಾ & ಮಮ್ಮಿ ಎಂದು ರಾಧಿಕಾ ಪಂಡಿತ್ ಅವರು ತಮ್ಮ ಪೋಷಕರಿಗೆ ಪ್ರೀತಿಯಿಂದ ವಿಶ್ ಮಾಡಿದ್ದಾರೆ. ಜೊತೆಗೆ ಪೋಷಕರ ಜೊತೆಯಿರುವ ಚೆಂದದ ಫೋಟೋ ಕೂಡ ಶೇರ್ ಮಾಡಿದ್ದಾರೆ.
ಇನ್ನೂ ಯಶ್ 19 ಸಿನಿಮಾ ಬಗ್ಗೆ ಅಭಿಮಾನಿಗಳು ಎಂದು ನೋಡ್ತಿದ್ದಾರೆ. ‘ಕೆಜಿಎಫ್ 2’ ಸಕ್ಸಸ್ ನಂತರ ಯಶ್ ಮುಂದಿನ ಸಿನಿಮಾ ಬಗ್ಗೆ ಅಪ್‌ಡೇಟ್ ಸಿಗದೇ ನಿರಾಶರಾಗಿದ್ದಾರೆ. ರಾಧಿಕಾ ಪಂಡಿತ್ ಕೂಡ ಚಿತ್ರರಂಗಕ್ಕೆ ಅದ್ಯಾವಾಗ ರೀ -ಎಂಟ್ರಿ ಕೊಡುತ್ತಾರೆ ಅಂತಾ ಫ್ಯಾನ್ಸ್ ಎದುರು ನೋಡ್ತಿದ್ದಾರೆ.
ಕೊನೇ ಹಂತಕ್ಕೆ ಬಂದು ನಿಂತಿದೆ ಯಶ್ 19 (Yash 19) ಸಿನಿಮಾ. ಇನ್ನೂ ಆರಂಭವೇ ಆಗಿಲ್ಲ. ಅದು ಹೇಗೆ ಕೊನೆ ಹಂತ? ಪ್ರಶ್ನೆ ಏಳುತ್ತದೆ. ಉತ್ತರಕ್ಕೂ ಮುನ್ನ ಇದಕ್ಕೆಲ್ಲ ತಳಪಾಯ ಹಾಕಿದ ಆ ಮಹಿಳಾ ನಿರ್ದೇಶಕಿಯ ಸಿನಿಮಾ ಶ್ರದ್ಧೆ, ಭಕ್ತಿ ಹಾಗೂ ತ್ಯಾಗದ ಕತೆ ಕೇಳಲೇಬೇಕು. ಯಶ್ 19 ಚಿತ್ರದ ಆ ಮಲಯಾಳಂ ನಿರ್ದೇಶಕಿ ಯಾರು? ಹೇಗೆ ಯಶ್ ಮತ್ತು ನಿರ್ದೇಶಕಿ (Director) ಹೊಂದಿಕೊಂಡರು? ಎಂಟು ವರ್ಷದ ಮಗಳನ್ನು ಬಿಟ್ಟು ಆರು ತಿಂಗಳಿಂದ ಆ ಮಹಿಳೆ ಬೆಂಗಳೂರಿನಲ್ಲಿ ಹೇಗೆ ಕಾಯಕ ಮಾಡುತ್ತಿದ್ದಾರೆ? ಯಾವಾಗ ಆರಂಭ ರಾಕಿ ನಯಾ ಯುದ್ಧ? ಇಲ್ಲಿದೆ ಎಕ್ಸ್‌ಕ್ಲೂಸಿವ್ ಸ್ಟೋರಿ.
ಯಶ್ 19, ಭಕ್ತಗಣ ಈ ಸಿನಿಮಾದ ಸುದ್ದಿಯನ್ನು ಕೇಳಲು ತುದಿಗಾಲಲ್ಲಿ ನಿಂತಿದ್ದಾರೆ. ಬರೀ ಫ್ಯಾನ್ಸ್ ಮಾತ್ರ ಅಲ್ಲ, ಇಡೀ ವಿಶ್ವವೇ ರಾಕಿಭಾಯ್ ಇಡುವ ಹೊಸ ಹೆಜ್ಜೆಯನ್ನು ಕಣ್ಣುಜ್ಜಿಕೊಂಡು ಕಾಯುತ್ತಿದ್ದಾರೆ. ಕೆಜಿಎಫ್ ಮುಗಿದು ವರ್ಷವಾಗುತ್ತಾ ಬಂತು. ಇನ್ನೇನು ಮತ್ತೆ? ಈ ಪ್ರಶ್ನೆ ಕೇಳಿದವರಿಗೆ ಯಶ್ ಉತ್ತರ ಒಂದೇ. ‘ವೇಟ್ ಮಾಡಿ ಬ್ರದರ್…ಕಾದಷ್ಟು ಹಣ್ಣಿನ ರುಚಿ ಜಾಸ್ತಿ’ ಗಡ್ಡದ ಮೇಲೆ ಕೈ ಎಳೆದುಕೊಳ್ಳುತ್ತಿದ್ದಾರೆ. ಅದೀಗ ಮುಗಿವ ಹಂತಕ್ಕೆ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅದ್ದೂರಿಯಾಗಿ ಟೈಟಲ್ ಹಾಗೂ ಉಳಿದ ವಿವರ ಹರವಿಡಲಿದ್ದಾರೆ ಯಶ್.ಇದನ್ನೂ ಓದಿ:ಶಿಕ್ಷಕಿ ಜೊತೆ ಸಪ್ತಪದಿ ತುಳಿಯಲು ಸಜ್ಜಾದ ಪೈಲ್ವಾನ್ ಖ್ಯಾತಿಯ ನಟ
ಕನ್ನಡ ಸ್ಟಾರ್‌ಗಳನ್ನು ಬಿಡಿ. ಅವರನ್ನು ದಾಟಿ ಯಶ್ (Yash) ಮುಂದೆ ಹೋಗಿದ್ದಾರೆ. ಅಥವಾ ಜನರು ಹಾಗಂತ ಆಶೀರ್ವಾದ ಮಾಡಿದ್ದಾರೆ. ಇನ್ನೇನಿದ್ದರೂ ಅವರದ್ದು ಪ್ಯಾನ್ ಇಂಡಿಯಾ ಲೆವೆಲ್. ಅದಕ್ಕೆ ತಕ್ಕಂತೆ ಕತೆ, ಚಿತ್ರಕತೆ, ಮೇಕಿಂಗ್ ಮಾಡಬೇಕು. ಎರಡು ಮೂರು ವರ್ಷದಿಂದ ಇದಕ್ಕಾಗಿ ತಪಸ್ಸು ಮಾಡಿದ್ದಾರೆ. ಹಲವಾರು ಸ್ಟಾರ್ ಡೈರೆಕ್ಟರ್‌ಗಳು ಭೇಟಿ ಮಾಡಿದ್ದಾರೆ. ಎಲ್ಲರ ಕತೆ ಕೇಳಿದ್ದಾರೆ. ಅದ್ಯಾಕೊ.. ರಾಕಿಭಾಯ್ ಮನಸು ಹುಚ್ಚೆದ್ದು ಕುಣಿಯಲಿಲ್ಲ. ಈ ಪಾತ್ರ ಮಾಡಲೇಬೇಕು ಅನ್ನಿಸಲಿಲ್ಲ. ಹುರುಪು ಮೂಡಿಸಲಿಲ್ಲ. ಯಾರ ಬಳಿ ಇದೆ ನಂಗೆ ಹೊಂದುವ ಕತೆ. ಯಾರು ನನ್ನನ್ನು ಹ್ಯಾಂಡಲ್ ಮಾಡುತ್ತಾರೆ. ಯೋಚನೆ ಜಾರಿಯಲ್ಲಿತ್ತು. ಆಗಲೇ ಬಂದು ನಿಂತರು ಗೀತು ಮೋಹನ್‌ದಾಸ್.
ರಾಜಮೌಳಿ, ಶಂಕರ್, ಸುಕುಮಾರ್, ಬನ್ಸಾಲಿ ಹೀಗೆ ದೇಶದ ಎಲ್ಲ ಭಾಷೆಯ ಟಾಪ್ ಸ್ಟಾರ್ ಡೈರೆಕ್ಟರ್ ಜೊತೆಯೇ ಯಶ್ ಹೊಸ ಸಿನಿಮಾ ಮಾಡ್ತಾರೆ ಬಿಡಪ್ಪ. ಈ ರೀತಿ ಎಲ್ಲರೂ ಅಂದುಕೊಂಡಿದ್ದರು. ಆ ಸಮಯದಲ್ಲಿ ಇದೇ ಸಮಾಚಾರ ಎಲ್ಲೆಡೆ ಧಗಧಗಿಸುತ್ತಿತ್ತು. ಯಾರು ಯಾರು ಯಾರು ಡೈರೆಕ್ಟರ್? ಉತ್ತರ ಸಿಗಲಿಲ್ಲ. ಈಗ ಎಲ್ಲದಕ್ಕೂ ಪೂರ್ಣ ವಿರಾಮವನ್ನು ಇಟ್ಟಿದ್ದಾರೆ. ಅಫ್‌ಕೋರ್ಸ್ ಅಧಿಕೃತವಾಗಿ ಯಶ್ ಟೀಮ್ ಹೇಳಿಲ್ಲ. ಆದರೆ ಖಬರ್ ಮಾತ್ರ ಪಕ್ಕಾ ಅಂದ್ರ ಪಕ್ಕಾ. ಆಗಲೇ ನೋಡಿ ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಬೆಂಗಳೂರಿಗೆ ಕಾಲಿಟ್ಟಿದ್ದು, ಯಶ್‌ಗೆ ಕತೆ ಹೇಳಿದ್ದು ಮುಂದಾಗಿದ್ದು ಇತಿಹಾಸ. ಗೀತು, ಯಶ್ 19 ಚಿತ್ರಕ್ಕೆ ಕ್ಯಾಮೆರಾ ಹಿಡಿಯಲಿದ್ದಾರೆ ಅದರಲ್ಲಿ ನೋ ಡೌಟ್.
ಗೀತು ಮೋಹನ್‌ದಾಸ್ (Geethu Mohandas) ಈಗ ತಾನೇ ಈ ಹೆಸರನ್ನು ಕನ್ನಡಿಗರು ಕೇಳುತ್ತಿದ್ದಾರೆ. ಮಲಯಾಳಂನಲ್ಲಿ (Malyalam) ಇವರಿಗೆ ದೊಡ್ಡ ಹೆಸರಿದೆ. ಆದರೆ ಮಾಸ್ ಸಿನಿಮಾ ಕೆಟಗರಿಯಲ್ಲಿ ಅಲ್ಲ. ಇವರದ್ದು ಏನಿದ್ದರೂ ಒಂಥರಾ ಬ್ರಿಡ್ಜ್ ಅಥವಾ ಕಲಾತ್ಮಕ ಸಿನಿಮಾ. 42 ವರ್ಷದ ಗೀತು ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಾಲ ನಟಿ ಹಾಗೂ ನಟಿಯಾಗಿ ಮೂವತ್ತಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಾರೆ. ಅನೇಕ ಪ್ರಶಸ್ತಿ ಪಡೆದಿದ್ದಾರೆ. ಅದ್ಯಾಕೊ ಇವರಿಗೆ ನಿರ್ದೇಶನದ ಹುಡುಕಿ ಬಂದಿತು. ಆಗಲೇ ಇವರು ತಮ್ಮದೇ ಪ್ರೊಡಕ್ಷನ್ ಕಂಪನಿ ಸ್ಥಾಪಿಸಿದರು. ಕಿರು ಚಿತ್ರವನ್ನು ನಿರ್ಮಿಸಿ, ನಿರ್ದೇಶಿದರು. ಅದಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿಗಳು ದಕ್ಕಿದವು.
ಇಲ್ಲಿವರೆಗೆ ಗೀತು ನಿರ್ದೇಶನ ಮಾಡಿದ್ದು ಎರಡೇ ಸಿನಿಮಾ. ಲೈರ್ಸ್ ಡೀಸ್ ಮತ್ತು ಮೋತಾನ್. ಹಿಂದಿ ಹಾಗೂ ಮಲಯಾಳಂ ಭಾಷೆ. ಎರಡಕ್ಕೂ ರಾಷ್ಟ್ರ ಪ್ರಶಸ್ಸಿ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿ ಲೆಕ್ಕವಿಲ್ಲದಷ್ಟು ಸಿಕ್ಕವು. ಇವರ ಬಯೋಡೇಟಾ ಇಷ್ಟೇ. ಒಂದೇ ಒಂದು ಮಾಸ್ ಸಿನಿಮಾ ಮಾಡಿಲ್ಲ, ಮಾಸ್ ಹೀರೋಗೆ ಕ್ಯಾಮೆರಾ ಹಿಡಿದಿಲ್ಲ. ಅಂಥ ನಿರ್ದೇಶಕಿಯನ್ನು ಯಶ್ ಆಯ್ಕೆ ಮಾಡಿಕೊಂಡಿದ್ದಾರೆ. ಅದು ಹೇಗೆ ಸಾಧ್ಯ ಎಂದು ಕೇಳುವಂತಿಲ್ಲ. ಇಬ್ಬರ ನಡುವೆ ಕತೆ. ಚಿತ್ರಕತೆ ಮೇಕಿಂಗ್ ಎಲ್ಲ ವಿಷಯದಲ್ಲಿ ಹೊಂದಾಣಿಕೆ ಹುಟ್ಟಿದಾಗ ಮಾತ್ರ ಕೈ ಜೋಡಿಸಲು ಸಾಧ್ಯ ಅಲ್ಲವೆ? ಅದಾಗಿದ್ದಕ್ಕೇ ಕಳೆದ ಆರು ತಿಂಗಳಿಂದ ಗೀತು ಬೆಂಗಳೂರಿನಲ್ಲಿದ್ದಾರೆ. ಎಂಟು ವರ್ಷದ ಮಗಳನ್ನು ಕೇರಳದಲ್ಲೇ ಬಿಟ್ಟಿದ್ದಾರೆ.
ಗೀತು ಮೋಹನ್ ದಾಸ್‌ಗೆ ಏಳೆಂಟು ವರ್ಷದ ಮಗಳಿದ್ದಾಳೆ. ಹೆಸರು ಆರಾಧನಾ. ಹೆಚ್ಚು ಕಮ್ಮಿ ಐದಾರು ತಿಂಗಳಿಂದ ಬೆಂಗಳೂರಿನ ವೆಸ್ಟ್ ಎಂಡ್ ಹೋಟೆಲ್‌ನಲ್ಲಿದ್ದಾರೆ ಗೀತು. ಹಗಲು ರಾತ್ರಿ ದುಡಿಯುತ್ತಿದ್ದಾರೆ. ಕನ್ನಡ ಬರಲ್ಲ. ಆದರೂ ಎಲ್ಲ ವಿಭಾಗಕ್ಕೆ ಜೀವ ತುಂಬಿದ್ದಾರೆ. ಒಂದೊಂದು ದೃಶ್ಯಕ್ಕೂ ಪಕ್ಕಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಯಾವ್ಯಾವ ದೃಶ್ಯ, ಎಲ್ಲೆಲ್ಲಿ ಶೂಟಿಂಗು, ಸೆಟ್ಟು,ಸ್ಥಳ ಯಾವುದೂ ಹೋಗಲಿ ಬಿಡು ಎನ್ನುವಂತಿಲ್ಲ. ಎಲ್ಲವೂ ಕಾಗದದ ಮೇಲೆ ಮೂಡಬೇಕು. ಅದು ಕಾರ್ಯರೂಪಕ್ಕೆ ಬರಬೇಕು. ಹೀಗೆ ಇಡೀ ಸಹಾಯಕ ಹುಡುಗರ ತಂಡದ ಜವಾಬ್ದಾರಿ ಈ ಮಹಿಳೆ ಹೊತ್ತುಕೊಂಡಿದ್ದಾರೆ. ಅಫ್‌ಕೋರ್ಸ್ ಇದಕ್ಕೆಲ್ಲ ಇಂಚಿಂಚಾಗಿ ಗೈಡ್ ಮಾಡಲು ಯಶ್ ಇದ್ದೇ ಇದ್ದಾರೆ.
ಯಶ್ ತಲೆಯಲ್ಲಿ ಎಲ್ಲವೂ ನಿಕ್ಕಿಯಾಗಿದೆ. ಮುಂದೆ ಯಾವ ರೀತಿ ಹೆಜ್ಜೆ ಇಡಬೇಕು ? ಯಾವ ಕತೆ ಮಾಡಬೇಕು ? ಕೆಜಿಎಫ್‌ಗಿಂತ ಭಿನ್ನವಾಗಿ ಹಾಗೂ ಅದಕ್ಕಿಂತ ಎತ್ತರಕ್ಕೆ ಸಿನಿಮಾವನ್ನು ಹೇಗೆ ತೆಗೆದುಕೊಂಡು ಹೋಗಬೇಕು ? ನ್ಯಾಶನಲ್ ಮಾರ್ಕೆಟ್‌ಗೆ ನುಗ್ಗಿದ್ದೇವೆ…ಇನ್ನು ಇಂಟರ್‌ನ್ಯಾಶನಲ್ ಮಟ್ಟ ಮುಟ್ಟುವುದು ಹೇಗೆ ? ಯಾವ ರೀತಿ ಹಾಲಿವುಡ್‌ಗೆ ಸ್ಯಾಂಡಲ್‌ವುಡ್ ಖದರ್ ತೋರಿಸಬೇಕು ? ಇದೇ ಕ್ಷಣ ಕ್ಷಣ ತಲೆಯಲ್ಲಿ ಓಡಾಡುತ್ತಿದೆ. ನಿಯತ್ತಿನ ತಂತ್ರಜ್ಞರನ್ನು ಒಂದುಗೂಡಿಸಿದ್ದಾರೆ. ಎಲ್ಲರೂ ಶಿಸ್ತು, ಶ್ರದ್ಧೆ ಹಾಗೂ ನಿಯತ್ತಿಗೆ ಇನ್ನೊಂದು ಹೆಸರಾದವರು. ಅವರಿಂದಲೇ ಹೊಸ ಚಿತ್ರಕ್ಕೆ ತುಪ್ಪದ ದೀಪ ಬೆಳಗಲಿದ್ದಾರೆ. ಗೀತು ಮೋಹನ್ ದಾಸ್ ನಮ್ಮ ಯಶ್ ಯಾಗಕ್ಕೆ ಉಘೇ ಉಘೆ ಎಂದಿದ್ದಾರೆ. ಈ ಸುದ್ದಿ ಕೇಳುತ್ತಿದ್ದಂತೆಯೇ ಒಬ್ಬೊಬ್ಬರು ಒಂದೊಂದು ರೀತಿ ಮಾತಾಡುತ್ತಾರೆ…ಅಥವಾ ಮಾತು ಶುರು ಮಾಡುತ್ತಾರೆ. ಹೆಸರೇ ಕೇಳದ…ಮಾಸ್ ಸಿನಿಮಾ ನಿರ್ದೇಶಿಸದ ಹೆಣ್ಣು ಅದು ಹೇಗೆ ಈ ಚಿತ್ರಕ್ಕೆ ಜೀವ ತುಂಬುತ್ತಾಳೆ ? ಯಶ್ ಅದ್ಯಾಕೆ ಈಕೆಯನ್ನು ಒಪ್ಪಿಕೊಂಡರು ? ಗ್ಯಾಂಗ್‌ಸ್ಟರ್ ಕತೆಯನ್ನು ಈ ಮಹಿಳೆ ನಿರ್ದೇಶಿಸಿ ಗೆಲ್ಲುತ್ತಾಳಾ ? ಕುತೂಹಲ ಹೆಚ್ಚಾಗುತ್ತಿದೆ. ಉತ್ತರ ಸಿನಿಮಾ ಮಾತ್ರ ಕೊಡುತ್ತದೆ. ಅದಕ್ಕಾಗಿ ಇನ್ನು ಒಂದೂವರೆ ವರ್ಷವೋ ಎರಡು ವರ್ಷವೋ ಕಾಯಬೇಕು, ಬೇರೆ ದಾರಿ ಇಲ್ಲ.
ಕೆಜಿಎಫ್, ಕೆಜಿಎಫ್ 2 (KGF 2) ಸಿನಿಮಾ ಸಕ್ಸಸ್ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. ಕನ್ನಡದ ಸಿನಿಮಾಗಳಿಗೆ ಸೀಮಿತವಾಗದೇ ದೇಶದ ಎಲ್ಲೆಡೆ ಸಂಚಲನ ಮೂಡಿಸಿದ್ದಾರೆ. ಇದೀಗ ಯಶ್ (Yash) ಮನೆಗೆ ಹೊಸ ಕಾರು ಎಂಟ್ರಿ ಕೊಟ್ಟಿದೆ. ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಸಿನಿಮಾದ ಸಕ್ಸಸ್ ಬಳಿಕ ಐಷಾರಾಮಿ ಕಾರೊಂದನ್ನ ಖರೀದಿಸಿದ್ದಾರೆ.
ನ್ಯಾಷನಲ್ ಸ್ಟಾರ್ ಯಶ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಕಪ್ಪು ಬಣ್ಣದ ರೇಂಜ್ ರೋವರ್ (Range Rover Car) ಸ್ಪೆಷಲ್ ಎಡಿಷನ್ ಕಾರನ್ನ ಕೊಂಡುಕೊಂಡಿದ್ದಾರೆ. ಈ ಮೂಲಕ ಯಶ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಪೂಜೆಯ ಬಳಿಕ ಪತ್ನಿ ರಾಧಿಕಾ (Radhika Pandit) ಮತ್ತು ಮಕ್ಕಳ ಜೊತೆ ಕಾರಿನಲ್ಲಿ ಯಶ್ ಸುತ್ತಾಡಿದ್ದಾರೆ. ಬಳಿಕ ಮಕ್ಕಳೊಂದಿಗೆ ಕಾರಿನ ಜೊತೆ ಯಶ್ ದಂಪತಿ ಪೋಸ್ ನೀಡಿದ್ದಾರೆ. ಯಶ್ ಬ್ರೌನ್ ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಟೀ ಶರ್ಟ್ ಧರಿಸಿದ್ದರೆ, ನಟಿ ರಾಧಿಕಾ ಲೈಟ್ ಬಣ್ಣದ ಟಾಪ್ ಧರಿಸಿದ್ದಾರೆ.
ರಾಕಿಭಾಯ್ ಖರೀದಿಸಿರುವ ಕಾರು ರೇಂಜ್ ರೋವರ್‌ಗೆ 5 ಕೋಟಿ ರೂ. ಬೆಲೆಯದಾಗಿದೆ. ಎಲ್ಲಾ ಸೌಕರ್ಯಗಳಿರುವ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ. ದುಬಾರಿ ಕಾರಿನ ಜೊತೆಯಿರುವ ಯಶ್ ದಂಪತಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಈ ವಿಚಾರಕ್ಕೆ ನಟನೆಗೆ ಗುಡ್ ಬೈ ಹೇಳ್ತಾರಾ ’ಮಗಧೀರ’ ನಟಿ ಕಾಜಲ್?
ಇನ್ನೂ ಯಶ್ ನಟನೆಯ ಮುಂದಿನ ಸಿನಿಮಾ ಬಗ್ಗೆ ಯಾವುದು ಅಪ್‌ಡೇಟ್ ಸಿಗದೇ ಫ್ಯಾನ್ಸ್ ಕಂಗಲಾಗಿದ್ದಾರೆ. ರಾಕಿ ಭಾಯ್ 19ನೇ ಚಿತ್ರಕ್ಕಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಸ್ವತಃ ಯಶ್ ಅನೌನ್ಸ್ ಮಾಡುವವರೆಗೂ ಕಾದುನೋಡಬೇಕಿದೆ.
ನ್ಯಾಷನಲ್ ಸ್ಟಾರ್ ಯಶ್ ‘ಕೆಜಿಎಫ್ 2’ (KGF2) ಸಕ್ಸಸ್ ನಂತರ ಹೊಸ ಸಿನಿಮಾದ ತಯಾರಿಯಲ್ಲಿದ್ದಾರೆ. ಯಶ್ ಮುಂದಿನ ನಡೆ ಬಗ್ಗೆ ಯಾವುದೇ ಅಪ್‌ಡೇಟ್ ಸಿಗದೇ ಫ್ಯಾನ್ಸ್ ಬೇಸರದಲ್ಲಿದ್ದಾರೆ. ಈ ನಡುವೆ ಅಂಬಿ ಪುತ್ರನ ಮದುವೆಗೆ ಯಶ್- ರಾಧಿಕಾ ಜೋಡಿ ಮಸ್ತ್ ಆಗಿ ಎಂಟ್ರಿ ಕೊಟ್ಟಿದ್ದರು. ಜೋಡಿಯ ಲುಕ್‌ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಕುರಿತ ಹೊಸ ಫೋಟೋವನ್ನ ಈ ಸ್ಟಾರ್ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕೇಸರಿ ಸೀರೆಯುಟ್ಟ ರಮ್ಯಾ ಫೋಟೋ ವೈರಲ್
ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಹಾಟ್ ಟಾಪಿಕ್ ಅಂದರೆ ಯಶ್ ಮುಂದಿನ ಸಿನಿಮಾ, ಮತ್ತೊಂದು ಅಭಿಷೇಕ್ ಅಂಬರೀಶ್ ಮದುವೆ ವಿಚಾರ. ಅಂಬಿ ಪುತ್ರನ ಮದುವೆಯಲ್ಲಿ ಯಶ್ ದಂಪತಿ, ಪಿಂಕ್ ಬಣ್ಣದ ಉಡುಗೆಯಲ್ಲಿ ಸಖತ್ ಆಗಿ ಮಿಂಚಿದ್ರು. ಇವರ ಮುದ್ದಾದ ಜೋಡಿ ನೋಡಿ ದೃಷ್ಟಿ ತೆಗಿರೋ ಅಂತಾ ಫ್ಯಾನ್ಸ್ ಕಾಮೆಂಟ್ ಮಾಡ್ತಿದ್ದರು. ಈಗ ಮತ್ತೆ ನಟಿ ರಾಧಿಕಾ (Radhika Pandit), ಪತಿ ಜೊತೆಗಿನ ಹೊಸ ಫೋಟೋ ಶೇರ್ ಮಾಡಿದ್ದಾರೆ.
ಪಿಂಕ್ ಬಣ್ಣದ ಧಿರಿಸಿನಲ್ಲಿ ಮಸ್ತ್ ಫೋಟೋಶೂಟ್ ಶೇರ್ ಮಾಡಿದ್ದಾರೆ. ಲೈಫ್ ಇಸ್ ಬ್ಯೂಟಿಫುಲ್ ಅಂತಾ ಅಡಿಬರಹ ನೀಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡ್ತಿದ್ದಂತೆ ಫ್ಯಾನ್ಸ್, ನೀವು ಮತ್ತೆ ಒಟ್ಟಾಗಿ ನಟಿಸಿ ಸಿನಿಮಾ ಮಾಡಿ ಅಂತಾ ಯಶ್ ದಂಪತಿಗೆ ಮನವಿ ಮಾಡ್ತಿದ್ದಾರೆ. ಈ ವಿಶೇಷ ಬೇಡಿಕೆಯನ್ನ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುವ ಮೂಲಕ ಫ್ಯಾನ್ಸ್ ತಿಳಿಸಿದ್ದಾರೆ.
ಇನ್ನೂ ಕೆಜಿಎಫ್, ಕೆಜಿಎಫ್ 2 ಸಿನಿಮಾ ಸಕ್ಸಸ್ ಬಳಿಕ ಕಥೆಯ ಆಯ್ಕೆ ವಿಚಾರದಲ್ಲಿ ಯಶ್ (Yash) ಮತ್ತಷ್ಟು ಚ್ಯುಸಿಯಾಗಿದ್ದಾರೆ. ಅವರ ಮುಂದಿನ ನಡೆಯೇನು.? ಎಂಬುದನ್ನ ರಿವೀಲ್ ಮಾಡದೇ ಹೊಸ ಪ್ರಾಜೆಕ್ಟ್ ಬಗ್ಗೆ ತಯಾರಿ ಮಾಡ್ತಿದ್ದಾರೆ.
ನ್ಯಾಷನಲ್ ಸ್ಟಾರ್ ಯಶ್ ‘ಕೆಜಿಎಫ್ 2’ (KGF 2) ಸಿನಿಮಾದ ಸೂಪರ್ ಸಕ್ಸಸ್ ನಂತರ ಅವರ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಯಶ್ ಮುಂದಿನ ನಡೆ ಬಗ್ಗೆ ಏನೂ ತಿಳಿಯದೇ ಯಶ್ 19ಗಾಗಿ ಕಾದು ಕಾದು ಸುಸ್ತಾಗಿದ್ದಾರೆ. ಈ ನಡುವೆ ‘ಯಶ್ 19’ (Yash 19) ಸಿನಿಮಾ ಸೆಟ್‌ನದ್ದು, ಎನ್ನಲಾದ ಫೋಟೋ ಒಂದು ವೈರಲ್ ಆಗಿದೆ. ಈ ಫೋಟೋನ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಿದ್ದಾರೆ. ಇದನ್ನೂ ಓದಿ:RRR ಸಿನಿಮಾದ ಐರಿಶ್ ನಟ ರೇ ಸ್ಟೀವನ್ಸನ್ ನಿಧನ
ರಾಕಿ ಭಾಯ್ ಯಶ್ (Yash) ಮುಂದಿನ ಚಿತ್ರಕ್ಕೆ ಯಾರು ಡೈರೆಕ್ಟರ್ ಮಾಡುತ್ತಾರೆ ಎಂಬುದು ಇನ್ನೂ ರಿವೀಲ್ ಆಗಿಲ್ಲ. ಇತ್ತೀಚೆಗೆ ಶ್ರೀಲಂಕಾದಲ್ಲಿ ಶೂಟಿಂಗ್ ಸ್ಪಾಟ್ ಹುಡುಕೋಕೆ ಯಶ್ ಇತ್ತೀಚಿಗೆ ತೆರಳಿದ್ದರು ಎನ್ನುವುದು ಬಿಟ್ಟರೆ ಮತ್ತಾವುದೇ ಅಪ್‌ಡೇಟ್ ಸಿಕ್ಕಿಲ್ಲ. ಹೀಗಿರುವಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಒಂದು ವೈರಲ್ ಆಗಿದೆ. ಆದರೆ ಯಶ್ ತಮ್ಮ 19ನೇ ಸಿನಿಮಾ ಬಗ್ಗೆ ಸಾಕಷ್ಟು ಗುಟ್ಟು ಕಾಯ್ದುಕೊಂಡಿದ್ದಾರೆ. ಸಿನಿಮಾ ಬಗ್ಗೆ ಒಂದೇ ಒಂದು ವಿಚಾರ ಕೂಡ ಲೀಕ್ ಆಗದಂತೆ ನೋಡಿಕೊಳ್ತಿದ್ದಾರೆ. ಹೀಗಿರುವಾಗ ಸಿನಿಮಾ ಶೂಟಿಂಗ್ ಸ್ಥಳದ ಫೋಟೋ ಲೀಕ್ ಆಗೋಕೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ.
ವೈರಲ್ ಆದ ಫೋಟೋದಲ್ಲಿ ಯಶ್ ಕೂದಲು ಈಗ ಮತ್ತಷ್ಟು ಉದ್ದಕ್ಕೆ ಬೆಳೆದಿದೆ. ಇನ್ನು ಫೋಟೋದ ಶೇಡ್ ನೋಡಿದರೆ ಅದು ‘ಕೆಜಿಎಫ್’ ಸರಣಿಯನ್ನು ನೆನಪಿಸುತ್ತದೆ. ಇದು ಎಡಿಟೆಡ್ ಫೋಟೋ ಎಂದು ಕೂಡ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಜಿಎಫ್ 2 ಸಕ್ಸಸ್ ಬಳಿಕ ಯಶ್ ಮತ್ತೆ ಭರ್ಜರಿ ಗಳಿಸಲು ಯೋಚಿಸಿ ಭಾರೀ ತಯಾರಿಯೊಂದಿಗೆ ಹೆಜ್ಜೆ ಇಡ್ತಿದ್ದಾರೆ.
ಯಶ್ 19 ಸಿನಿಮಾ ಅಪ್‌ಡೇಟ್‌ಗಾಗಿ ಕಾದು ಸಾಕಾಗಿ ಫ್ಯಾನ್ಸ್ ಹೀಗೆ ಮಾಡಿದ್ದಾರಾ.? ಈ ಫೋಟೋನ ಅಭಿಮಾನಿಗಳಲ್ಲೇ ಯಾರೋ ವೈರಲ್ ಮಾಡಿರಬೇಕು ಎನ್ನುವ ಅನುಮಾನ ಮೂಡಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಯಶ್ ಅವರೇ ಸ್ಪಷ್ಟನೆ ನೀಡಲಿ ಎಂದು ಕಾದಿದ್ದಾರೆ. ಯಶ್ ಪ್ರತಿಕ್ರಿಯೆ ನೀಡುವವರೆಗೂ ಕಾದುನೋಡಬೇಕಿದೆ.
ತಾಜ್ ಮಹಲ್, ಕೃಷ್ಣ ಲೀಲಾ, ಕೃಷ್ಣ ರುಕ್ಮಿಣಿ ಖ್ಯಾತಿಯ ನಟ ಅಜಯ್ ರಾವ್ (Ajay Rao) ಇದೀಗ ಮತ್ತೊಂದು ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರಕ್ಕೆ ಕೆಜಿಎಫ್ (KGF 2) ಖ್ಯಾತಿಯ ನಟಿ ಅರ್ಚನಾ ಜೋಯಿಸ್ (Archana Jois) ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರಕ್ಕೆ ‘ಯುದ್ಧಕಾಂಡ’ ಎಂದು ಟೈಟಲ್ ಇಡಲಾಗಿದ್ದು, ಅಜಯ್ ರಾವ್ ತಮ್ಮದೇ ನಿರ್ಮಾಣ ಸಂಸ್ಥೆ ‘ಶ್ರೀಕೃಷ್ಣ ಆರ್ಟ್ಸ್ ಅಂಡ್ ಕ್ರಿಯೇಷನ್ಸ್’ ಮತ್ತು ‘ಅಜಯ್ ರಾವ್ ಪ್ರೊಡಕ್ಷನ್ಸ್’ ನಡಿ ನಿರ್ಮಾಣ ಮಾಡುತ್ತಿದ್ದಾರೆ.
‘ಯುದ್ಧಕಾಂಡ’ (Yudhkanda) ಎಂದಾಗ ಎಲ್ಲರಿಗೂ ನೆನಪಾಗೋದು ಲೆಜೆಂಡರಿ ರವಿ ಸರ್ ಸಿನಿಮಾ. ಆ ಸಿನಿಮಾದ ನಿರ್ದೇಶಕರಾದ ಕೆ. ವಿ ರಾಜು ಸರ್ ಜೊತೆ ನಾನು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇನೆ ಅದು ನನ್ನ ಅದೃಷ್ಟ. ಈ ಸಿನಿಮಾ ಲಾಂಚ್ ಮಾಡೋವಾಗ ಮೊದಲು ರವಿ ಸರ್ ಭೇಟಿ ಮಾಡಿ ಆಶೀರ್ವಾದ ತೆಗೆದುಕೊಂಡು ಬಂದೆ. ಒಳ್ಳೆದಾಗ್ಲಿ ಎಂದು ಆಶೀರ್ವಾದ ಮಾಡಿದ್ರು. ಆದ್ರೆ ಆಗ ಬಂದ ‘ಯುದ್ಧಕಾಂಡ’ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಇದು ರಿಮೇಕ್ ಸಿನಿಮಾ ಕೂಡ ಅಲ್ಲ ಎಂದು ಅಜಯ್ ರಾವ್ ಮಾಹಿತಿ ನೀಡುತ್ತಾರೆ.
‘ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 20 ವರ್ಷ ಆಯ್ತು. ನಟನಾಗಿ ಯಶಸ್ಸು, ಸೋಲು ಎರಡನ್ನು ನೋಡಿದ್ದೇನೆ. ಕೇವಲ ನಟನಾಗಿ ಉಳಿಯದೇ ಸಿನಿಮಾದ ಎಲ್ಲಾ ಕ್ಷೇತ್ರದಲ್ಲಿ ಪ್ರಯೋಗ ಮಾಡಬೇಕು ಎಂದುಕೊಂಡು ಬೆಂಗಳೂರಿಗೆ ಬಂದವನು ನಾನು. ಹೀರೋ ಆಗಿದ್ದವನು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿಯೂ ಮಾಡಿದ್ದೇನೆ. ಕೃಷ್ಣ ಲೀಲಾ ಸಿನಿಮಾ ಮೂಲಕ ನಿರ್ಮಾಪಕನೂ ಆಗಿದ್ದೇನೆ. ಇದೀಗ ಏಳು ವರ್ಷದ ನಂತರ ಎರಡನೇ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದೇನೆ ಎನ್ನುವುದು ಅಜಯ್ ರಾವ್ ಮಾತು. ಇದನ್ನೂ ಓದಿ:ಮದುವೆಯಾಗಿ 14 ಕಳೆದರೂ ಮಕ್ಕಳಾಗದ್ದಕ್ಕೆ ಮಹತ್ವದ ನಿರ್ಧಾರ ಕೈಗೊಂಡ ‘ಲಾಲಿಹಾಡು’ ನಟಿ
‘ಯುದ್ಧಕಾಂಡ’ ಸಿನಿಮಾವನ್ನು ಕಟಿಂಗ್ ಶಾಪ್ ಸಿನಿಮಾ ಖ್ಯಾತಿಯ ಪವನ್ ಭಟ್ ನಿರ್ದೇಶಿಸುತ್ತಿದ್ದಾರೆ. ಕಾರ್ತಿಕ್ ಶರ್ಮಾ ಕ್ಯಾಮೆರಾ ವರ್ಕ್, ಕೆ.ಬಿ.ಪ್ರವೀಣ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ‘ಯುದ್ಧಕಾಂಡ’ ಸಿನಿಮಾ ಈಗಾಗಲೇ ಶೇಕಡಾ 50 ರಷ್ಟು ಚಿತ್ರೀಕರಣ ಕೂಡ ಆಗಿದೆ.
ರಾಕಿಂಗ್ ಸ್ಟಾರ್ ಯಶ್ (Yash) ಮಾಧ್ಯಮಗಳ ಕಣ್ಣಿಗೆ ಬೀಳುವುದು ಅಪರೂಪವಾಗಿಬಿಟ್ಟಿದೆ. ಕೆಜಿಎಫ್ 2 (KGF 2) ಚಿತ್ರದ ಯಶಸ್ಸಿನ ನಂತರ ಅವರು ಮಾಧ್ಯಮಗಳ ಕಣ್ಣಿಗೆ ಬೀಳುವುದು ಕಡಿಮೆಯಾಗಿದೆ. ಏನಾದರೂ ಹೇಳುವುದಿದ್ದರೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ತಣ್ಣಗಾಗಿ ಬಿಡ್ತಾರೆ. ಹಾಗಾಗಿ ಯಶ್ ಅವರ ಮುಂದಿನ ಸಿನಿಮಾ (New Movie) ಅಂದರೆ, 19ನೇ ಸಿನಿಮಾದ ಬಗ್ಗೆ ಈವರೆಗೂ ಯಾವುದೇ ಅಪ್ ಡೇಟ್ ಸಿಕ್ಕಿಲ್ಲ.
ನಿನ್ನೆಯಷ್ಟೇ ಯಶ್ ಮತದಾನ ಮಾಡಲು ಹೊಸಕೆರೆಹಳ್ಳಿಗೆ ಬಂದಿದ್ದರು. ಯಶ್ ಬರುವುದನ್ನೇ ಕಾಯುತ್ತಿದ್ದ ಮಾಧ್ಯಮಗಳು ಇವತ್ತಾದರೂ ತಮ್ಮ ಮುಂದಿನ ಸಿನಿಮಾ ಬಗ್ಗೆ ಏನಾದರೂ ಮಾತನಾಡುತ್ತಾರೆ ಎನ್ನುವ ನಂಬಿಕೆ ಮಾಧ್ಯಮ ಮಿತ್ರರದ್ದಾಗಿತ್ತು. ಅಲ್ಲಿಯೂ ನುಣಿಚಿಕೊಂಡು ಬಿಟ್ಟರು ಯಶ್. ಅದು ಜಾಣ್ಮೆಯಿಂದ ಉತ್ತರ ನೀಡಿ, ಅಲ್ಲಿಂದ ಹೊರಟೇ ಬಿಟ್ಟರು. ಇದನ್ನೂ ಓದಿ:ಮರಾಠಿ ಚಿತ್ರರಂಗಕ್ಕೆ ಕಾಲಿಟ್ಟ ’ಕಾಂತಾರ’ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್
ಯಶ್ ಮತದಾನ ಮಾಡಿ ಬೂತ್ ನಿಂದ ಆಚೆ ಬರುತ್ತಿದ್ದಂತೆಯೇ ಮತದಾನದ ಬಗ್ಗೆ ಪ್ರಶ್ನೆಗಳನ್ನು ಮಾಡಲಾಯಿತು. ಆನಂತರ ಯಶ್ 19 ಸಿನಿಮಾ ಬಗ್ಗೆ ಏನು ಹೇಳ್ತೀರಿ ಅಂದರು ಮಾಧ್ಯಮದವರು. ನಗುತ್ತಲೇ ಕ್ಯಾಮೆರಾದತ್ತ ನೋಡಿದ ಯಶ್, ‘ಯಶ್ 19 (Yash 19) ಅಲ್ಲ, ಯಶ್ ವಯಸ್ಸು 37’ ಎಂದು ಅಲ್ಲಿಂದ ಹೊರಟೇ ಬಿಟ್ಟರು. ಅಲ್ಲಿಗೆ ಯಶ್ ಮುಂದಿನ ಸಿನಿಮಾ ಬಗ್ಗೆ ಮತ್ತೆ ಯಾವುದೇ ಅಪ್ ಡೇಟ್ ಸಿಗಲಿಲ್ಲ.
ಯಶ್ ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ಗೌಪ್ಯತೆಯನ್ನು ಕಾಪಾಡುತ್ತಿದ್ದಾರೆ. ಆದರೂ, ಒಂದಷ್ಟು ವಿಷಯಗಳು ಸೋರಿಕೆ ಆಗಿವೆ. ಅವರು ಮುಂದಿನ ಸಿನಿಮಾವನ್ನು ಶ್ರೀಲಂಕಾದಲ್ಲಿ ಚಿತ್ರೀಕರಣ ಮಾಡಲಿದ್ದಾರಂತೆ. ಮಲಯಾಳಂ ನಿರ್ದೇಶಕಿಯೇ ಅವರ ಮುಂದಿನ ಚಿತ್ರದ ನಿರ್ದೇಶಕಿ ಎಂದು ಹೇಳಲಾಗುತ್ತಿದೆ. ಇವೆಲ್ಲದಕ್ಕೂ ಅವರೇ ಉತ್ತರ ನೀಡಬೇಕು.