Tag: KGF-2

  • ರಾಕಿಭಾಯ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್- ಅಕ್ಟೋಬರ್‌ನಲ್ಲಿ Yash 19ಗೆ ಮುಹೂರ್ತ ಫಿಕ್ಸ್

    ರಾಕಿಭಾಯ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್- ಅಕ್ಟೋಬರ್‌ನಲ್ಲಿ Yash 19ಗೆ ಮುಹೂರ್ತ ಫಿಕ್ಸ್

    ಶ್ (Yash) ಕೊನೆಗೂ ಆ ಮಹಾ ನಿರ್ಧಾರಕ್ಕೆ ಬಂದಿದ್ದಾರೆ. ಯಾವಾಗ ಗುರು ಸಿನಿಮಾ ? ಹೀಗಂತ ಹೋದಲ್ಲಿ ಬಂದಲ್ಲಿ ಕೇಳುತ್ತಿದ್ದ ಜನರಿಗೆ ಉತ್ತರ ಹೇಳಲು ಅಖಾಡ ರೆಡಿ ಮಾಡಿಕೊಂಡಿದ್ದಾರೆ. ಈಗ ಎಲ್ಲವೂ ಮುಗಿದಿದೆ. ಎಲ್ಲವೂ ಸಜ್ಜಾಗಿದೆ. ಇನ್ನೇನು ಶೂಟಿಂಗ್ ಹೋಗುವುದೊಂದೇ ಬಾಕಿ. ಹಾಗಿದ್ದರೆ ಯಾವಾಗ ಯಶ್ 19 (Yash 19) ಸಿನಿಮಾ ಘೋಷಣೆ? ಅದಕ್ಕಾಗಿ ಇಷ್ಟು ವರ್ಷ ಮಾಡಿಕೊಂಡಿರುವ ತಯಾರಿ ಹೇಗಿದೆ? ಯಾವ ರೀತಿ ಯುದ್ಧಕ್ಕೆ ಇಳಿಯಲಿದೆ ರಾಕಿಭಾಯ್ ತಂಡ? ಇಲ್ಲಿದೆ ಮಾಹಿತಿ.

    ಇಡೀ ವಿಶ್ವವೇ ತಲೆ ಕೆಟ್ಟು ಕುಂತಿದೆ. ಆಗ ಈಗ ಎನ್ನುತ್ತಾ ಯಶ್ ಒಂದೂವರೆ ವರ್ಷ ಕಳೆದು ಬಿಟ್ಟರು. ಬರುತ್ತೀನಿ ಬರುತ್ತೀನಿ ಎನ್ನುತ್ತಲೇ ಇಷ್ಟು ತಿಂಗಳು ತಳ್ಳಿದರು. ಆದರೆ ಅದನ್ನು ತಳ್ಳಿಲ್ಲ. ಒಂದೊಂದು ದಿನ ಒಂದೊಂದು ತಿಂಗಳನ್ನು ಜಿಪುಣನಂತೆ ಖರ್ಚು ಮಾಡಿದ್ದಾರೆ. ಎಣಿಸಿ ಎಣಿಸಿ ತೂಕ ಮಾಡಿ ಕತೆ ಹೆಣೆಸಿದ್ದಾರೆ. ಅದಕ್ಕೆ ಚಿತ್ರಕತೆ ಪೋಣಿಸುವಾಗ ಮಗುವಂತೆ ಹಠ ಹಿಡಿದಿದ್ದಾರೆ. ಡೈಲಾಗ್ ಬರೆಸುವಾಗ ನಿದ್ದೆಗೆಟ್ಟಿದ್ದಾರೆ. ಇದ್ಯಾಕೆ ಹೀಗೆ? ಅದ್ಯಾಕೆ ಹಾಗೆ? ಹಾಗಿರಬೇಕಿತ್ತು. ಹೀಗಿದ್ದರೆ ಸೂಪರ್ ಸಲಹೆ ಕೊಡುತ್ತಾ ಎಲ್ಲರನ್ನೂ ಒಪ್ಪಿಸುತ್ತಾ ಸಿನಿಮಾ ಧ್ಯಾನ ಮಾಡುತ್ತಾ. ಈಗ ಹೊಸ ಅಂಗಿ ಪ್ಯಾಂಟು ಹಾಕಿಕೊಂಡು ನಿಂತಿದ್ದಾರೆ. ರಣರಂಗಕ್ಕೆ ಒಂದೇ ಹೆಜ್ಜೆ ಬಾಕಿ.

    ಅಯ್ಯೋ ಅದ್ಯಾವ ಕತೆ ಮಾಡ್ತಿದ್ದಾರೊ? ಇನ್ನೆಷ್ಟು ವರ್ಷ ಬೇಕೊ? ಈ ಯುಗದಲ್ಲೇ ಸಿನಿಮಾ ರಿಲೀಸ್ ಆಗುತ್ತಾ ಅಥವಾ ಇನ್ನೊಂದು ಯುಗ ಕಾಯಬೇಕಾ? ಬೆನ್ನ ಹಿಂದೆ ಮಾತಾಡಿಕೊಂಡವರಿಗೆ ಲೆಕ್ಕ ಇಲ್ಲ. ಕಾರಣ ಅವರಿಗೆ ಯಶ್ ತಲೆಯಲ್ಲಿ ಓಡುತ್ತಿರುವುದೇನು. ಮೆದುಳಲ್ಲಿ ಚೌಕಾಬಾರ ಹಾಕುತ್ತಿದ್ದ ಪ್ರಶ್ನೆಗಳೇನು. ಇರುವುದೆಲ್ಲವ ಬಿಟ್ಟು ಇನ್ಯಾವ ಕಡೆ ಮನಸು ತುಡಿಯುತ್ತಿದೆ? ಇಷ್ಟು ಮತ್ತು ಇದೆಲ್ಲ ಅರಿವಿಗೆ ಇರಲಿಲ್ಲ. ಅಫ್‌ಕೋರ್ಸ್ ಈಗಲೂ ಇಲ್ಲ. ಕಾರಣ ಸಿಂಪಲ್ ಮತ್ತು ಸಿಂಗಲ್. ಯಶ್ ದಿವ್ಯ ತಪಸ್ಸು ಅಷ್ಟೊಂದು ನಿಶ್ಯಬ್ದವಾಗಿದೆ. ರಣರಂಗ ಕೈ ಬೀಸಿ ಕರೆಯುತ್ತಿದೆ. ಇದನ್ನೂ ಓದಿ:ಕುಡಿದು ಬೈಕ್ ಸವಾರನೇ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ: ಚಂದ್ರಪ್ರಭಾ

    ನೀವಿದನ್ನು ಯೋಚಿಸಿರಲು ಸಾಧ್ಯ ಇಲ್ಲ. ಕಲ್ಪನೆ ಕೂಡ ಮಾಡಿಕೊಂಡಿರಲ್ಲ. ಹಾಗಿರುತ್ತಾ ಹೀಗಿರುತ್ತಾ ಎನ್ನುವ ಪ್ರಶ್ನೆ ಹಾಕಿಕೊಂಡು ಉತ್ತರ ಕೊಟ್ಟುಕೊಂಡು ಸುಮ್ಮನಿರುತ್ತೀರಿ. ಅದನ್ನೆಲ್ಲ ಮೀರಿ ಅದಕ್ಕೆಲ್ಲ ಸೆಡ್ಡು ಹೊಡೆದು ಇಲ್ಲಿವರೆಗೆ ಕೇಳದ ನೋಡದ ಜಗತ್ತನ್ನು ಅನಾವರಣ ಮಾಡಲಿದ್ದಾರೆ ಯಶ್. ಅದಕ್ಕಾಗಿಯೇ ಇಷ್ಟೊಂದು ಬೆವರು ಸುರಿಸುತ್ತಿದ್ದಾರೆ. ನಿರ್ದೇಶಕಿ ಗೀತು ಮೋಹನ್‌ದಾಸ್ ಸಾಥ್ ಕೊಟ್ಟಿದ್ದಾರೆ. ಎಂಟು ತಿಂಗಳಿಂದ ಅವರು ಬೆಂಗಳೂರಿನ ಪಂಚತಾರಾ ಹೋಟೆಲ್‌ನಲ್ಲಿ ನೆಲೆಸಿದ್ದಾರೆ. ಯಶ್ ಕನಸನ್ನು ತೆರೆ ಮೇಲೆ ತರಲು ಊಟ ಮರೆತಿದ್ದಾರೆ. ರಾಕಿ ಎಲ್ಲರಿಗೂ ಕೆಲಸ ವಿವರಿಸುತ್ತಾ ಹುರುಪು ತುಂಬುತ್ತಾ ಹೊಸಿಲಲ್ಲಿ ನಿಂತಿದ್ದಾರೆ. ರಣರಂಗದ ಅಂಗಳದಲ್ಲಿ ರಂಗೋಲಿ ನಗುತ್ತಿದೆ.

    ಈಗ ಮತ್ತು ಇಲ್ಲಿವರೆಗೆ ಎಲ್ಲರನ್ನು ಕಾಡುತ್ತಿದ್ದ ಪ್ರಶ್ನೆ ಒಂದೇ. ಇಷ್ಟೆಲ್ಲ ತಯಾರಿ ಮಾಡಿಕೊಂಡಿದ್ದರೂ ಯಾಕಿಷ್ಟು ಲೇಟು? ಉತ್ತರ ಇಲ್ಲಿದೆ. ಯಶ್ ಅದೊಂದು ಮಹಾ ಪ್ರಮಾಣ ಮಾಡಿದ್ದಾರೆ. ವರ್ಷವೋ ಎರಡು ವರ್ಷವೋ ಬೇಕಾಗಿಲ್ಲ. ಸಿನಿಮಾ ಮಾಡಿದರೆ ಹೀಗೇ ಇರಬೇಕು. ಎಲ್ಲರೂ ಬಹುಪರಾಕ್ ಹಾಕಬೇಕು. ಸಿನಿಮಾ ನೋಡದವರೂ ಥೇಟರ್‌ಗೆ ನುಗ್ಗಬೇಕು. ಅದಕ್ಕಿಂತ ಹೆಚ್ಚಾಗಿ ಹಾಲಿವುಡ್ ಲೆವೆಲ್‌ಗೆ ಕನ್ನಡ ಚಿತ್ರರಂಗ ಬೆಳೆಯಬೇಕು. ಈ ಶಪಥವೇ ತಡವಾಗಲು ಮುಖ್ಯ ಕಾರಣ. ಹಾಲಿವುಡ್ (Hollywood) ಶೈಲಿಯಲ್ಲಿ ಸ್ಟೋರಿ ಬೋರ್ಡ್ ತಯಾರಾಗಿದೆ. ಒಂದೊಂದು ಫ್ರೇಮ್ ಒಂದೊಂದು ಶಾಟ್ ಹೀಗಿರಬೇಕು. ಅಷ್ಟು ನಿಖರವಾಗಿ ಪ್ಲಾನ್ ಪಕ್ಕಾ ಆಗಿದೆ. ರಣರಂಗ ದೀಪ ಹಚ್ಚಿಕೊಂಡು ಕಾಯುತ್ತಿದೆ.

    ಮುಂದಿನ ತಿಂಗಳು ಅಕ್ಟೋಬರ್ ತಿಂಗಳಿನಲ್ಲಿ ದಿವ್ಯ ದಿನ ನೋಡಿಕೊಂಡು ಪೂಜೆ ನಡೆಸಲಾಗುತ್ತದೆ. ದೇಶ ವಿದೇಶದ ಮಾಧ್ಯಮಗಳ ಮುಂದೆ ಟೈಟಲ್ ಘೋಷಿಸಲಾಗುತ್ತದೆ. ಫಸ್ಟ್‌ ಲುಕ್ ಕೂಡ ಅನಾವರಣವಾಗಲಿದೆ. ಉಳಿದೆಲ್ಲ ವಿವರ ಅಂದೇ ಹೊರ ಬರಲಿದೆ. ಕೊನೆಗೂ ಯಶ್ ಭಕ್ತಗಣದ ನಿರೀಕ್ಷೆ ಕೊನೆ ಹಂತಕ್ಕೆ ಬಂದಿದೆ. ಬರೀ ಅವರಷ್ಟೇ ಅಲ್ಲ. ರಾಕಿಭಾಯ್ ಗಳಿಸಿರುವ ದೇಶ ವಿದೇಶದ ಕೋಟಿ ಕೋಟಿ ಜನರೂ ಅದೊಂದು ಕ್ಷಣಕ್ಕಾಗಿ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಕುಂತಿದ್ದಾರೆ. ಯಶ್ ಕುದುರೆ ಏರಿದ್ದಾರೆ. ಲಗಾಮು ಬಿಗಿಯಾಗಿ ಹಿಡಿದಿದ್ದಾರೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಆ ಘಳಿಗೆ ಇನ್ನೂ ದೂರ ಇಲ್ಲ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವರಮಹಾಲಕ್ಷ್ಮಿ‌ ಹಬ್ಬದ ಸೆಲೆಬ್ರೇಶನ್ ಫೋಟೋ ಹಂಚಿಕೊಂಡ ಯಶ್‌ ಜೋಡಿ

    ವರಮಹಾಲಕ್ಷ್ಮಿ‌ ಹಬ್ಬದ ಸೆಲೆಬ್ರೇಶನ್ ಫೋಟೋ ಹಂಚಿಕೊಂಡ ಯಶ್‌ ಜೋಡಿ

    ‘ಕೆಜಿಎಫ್ 2′ (KGF 2) ಹೀರೋ ಯಶ್-ರಾಧಿಕಾ ಪಂಡಿತ್ (Radhika Pandit) ಜೋಡಿ ಗ್ರ್ಯಾಂಡ್ ಆಗಿ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದಾರೆ. ಈ ಕುರಿತ ಸುಂದರ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ರಾಧಿಕಾ-ಯಶ್ ಶೇರ್ ಮಾಡಿದ್ದಾರೆ.

    ಸ್ಯಾಂಡಲ್‌ವುಡ್ ಸ್ಟಾರ್ ಜೋಡಿ ಯಶ್ (Yash) ದಂಪತಿ ಈ ಬಾರಿ ವರಮಹಾಲಕ್ಷ್ಮಿ ಹಬ್ಬವನ್ನ (ಆಗಸ್ಟ್ 25) ಅದ್ದೂರಿಯಾಗಿ ಆಚರಿಸಿದ್ದಾರೆ. ಲಕ್ಷ್ಮಿ ದೇವಿ ವಿಗ್ರಹಕ್ಕೆ ಅಲಂಕರಿಸಿ, ಪೂಜೆಯ ವಿಧಿ ವಿದಾನಗಳನ್ನ ಅಚ್ಚು ಕಟ್ಟಾಗಿ ಆಚರಿಸಿದ್ದಾರೆ. ಯಶ್ ಲೈಟ್ ಬಣ್ಣದ ಪಂಚೆ- ಶಲ್ಯ ಧರಿಸಿ ಮಿಂಚಿದ್ರೆ, ರಾಧಿಕಾ ಹಳದಿ ಬಣ್ಣದ ಸೀರೆ ನೇರಳೆ ಬಣ್ಣದ ಬಾರ್ಡರ್ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಮಕ್ಕಳಿಬ್ಬರು ಕೂಡ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ.

    ತಮ್ಮ ಮನೆಯ ವರಮಹಾಲಕ್ಷ್ಮಿ ಹಬ್ಬದ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ಸರ್ವರ ಜೀವನದಲ್ಲೂ ಸಂತೋಷ, ಆರೋಗ್ಯ- ಅಂತ್ಯವಿಲ್ಲದ ಸಮೃದ್ಧಿಯನ್ನು ನೀಡಲಿ ಎಂದು ಯಶ್ ಜೋಡಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಮುಂದಿನ ತಿಂಗಳು ಪತ್ನಿಗೆ ಡೆಲಿವರಿ ಡೇಟ್- 2ನೇ ಮಗುವಿನ ಬಗ್ಗೆ ಧ್ರುವ ಪ್ರತಿಕ್ರಿಯೆ

    ಈ ಫೋಟೋ ಶೇರ್ ಮಾಡ್ತಿದ್ದಂತೆ ಯಶ್ 19 9(Yash 19) ಅಪ್‌ಡೇಟ್ ಯಾವಾಗ ಅಣ್ಣ- ಅತ್ತಿಗೆ ಅಂತಾ ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ಗೋಗರೆದಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಶ್‌ ಆಯ್ತು ಈಗ ‘ರಾಮಾಯಣ’ ಆಫರ್‌ಗೆ ನೋ ಎಂದ ಆಲಿಯಾ ಭಟ್

    ಯಶ್‌ ಆಯ್ತು ಈಗ ‘ರಾಮಾಯಣ’ ಆಫರ್‌ಗೆ ನೋ ಎಂದ ಆಲಿಯಾ ಭಟ್

    ಬಾಲಿವುಡ್‌ನಲ್ಲಿ(Bollywood) ರಾಮಾಯಣ ಸಿನಿಮಾ ಮಾಡಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಈ ಹಿಂದೆ ರಾವಣನ ಪಾತ್ರದಲ್ಲಿ ನಟಿಸಲು ‘ಕೆಜಿಎಫ್ 2’ (KGF 2) ಹೀರೋ ಯಶ್‌ಗೆ(Yash) ಆಫರ್ ನೀಡಲಾಗಿತ್ತು. ಆದರೆ ರಾಕಿ ಭಾಯ್ ನೋ ಎಂದಿದ್ದರು. ಈಗ ಸೀತಾ ಪಾತ್ರದಲ್ಲಿ ನಟಿಸಲು ಬಂದ ಆಫರ್‌ನ್ನ ಆಲಿಯಾ ಭಟ್ ರಿಜೆಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಸುದೀಪ್ ಹುಟ್ಟುಹಬ್ಬ: ಮನೆಗೆ ಬರಬೇಡಿ, ಅಭಿಮಾನಿಗಳ ಭೇಟಿಗೆ ಸ್ಥಳ ಫಿಕ್ಸ್

    ಕೆಜಿಎಫ್ 2 ಬಳಿಕ ನ್ಯಾಷನಲ್ ಸ್ಟಾರ್ ಆಗಿ ಯಶ್ ಮಿಂಚುತ್ತಿದ್ದಾರೆ. ಬಾಲಿವುಡ್ ನಿರ್ದೇಶಕ, ನಿರ್ಮಾಪಕರ ಕಣ್ಣು ಯಶ್ ಮೇಲಿದೆ. ಸಾಕಷ್ಟು ಆಫರ್ಸ್‌ಗಳ ನಡುವೆ ಯಶ್ ರಾಮಾಯಣ ಸಿನಿಮಾಗೆ ನೋ ಎಂದಿದ್ದರು ಸಖತ್ ಸುದ್ದಿಯಾಗಿತ್ತು. ಈಗ ಆಲಿಯಾ ಭಟ್(Alia Bhatt) ಬೇಡವೇ ಬೇಡ ನಟಿಸಲ್ಲ ಅಂತಾ ಹೇಳಿರೋದು ಬಿಟೌನ್‌ನಲ್ಲಿ ಸದ್ದು ಮಾಡುತ್ತಿದೆ.

    ಇತ್ತೀಚೆಗೆ ಪುರಣಾಗಳ ಕಥೆ ಇಟ್ಟುಕೊಂಡು ಸಿನಿಮಾ ಮಾಡುವ ಪ್ರಯತ್ನ ನಡೆದಿದೆ. ಆ ಪೈಕಿ ಶಾಕುಂತಲಂ, ಆದಿಪುರುಷ್ ಸಿನಿಮಾಗಳು ಸೋತವು. ಹೀಗಿರುವಾಗ ನಿರ್ದೇಶಕ ನಿತೇಶ್ ತಿವಾರಿ ಅವರು ಮೂರು ಪಾರ್ಟ್‌ಗಳಲ್ಲಿ ರಾಮಾಯಣ (Ramayana) ಮಾಡಲು ಮುಂದಾಗಿದ್ದಾರೆ. ರಾಮನ ಪಾತ್ರಕ್ಕೆ ರಣಬೀರ್ ಕಪೂರ್, ಸೀತೆಯ ಪಾತ್ರಕ್ಕೆ ಆಲಿಯಾ ಭಟ್ ಹಾಗೂ ರಾವಣನ ಪಾತ್ರಕ್ಕೆ ಯಶ್ ಅವರನ್ನು ಆಯ್ಕೆ ಮಾಡಿಕೊಳ್ಳುವ ಆಲೋಚನೆ ನಿತೇಶ್‌ಗೆ ಇತ್ತು. ಆದರೆ, ಈಗ ಅವರ ಲೆಕ್ಕಾಚಾರ ಉಲ್ಟಾ ಆಗುತ್ತಿದೆ.

    ನಿತೇಶ್ ಅವರು ಈ ಮೂವರನ್ನೂ ಭೇಟಿ ಮಾಡಿ ಆಫರ್ ನೀಡಿದ್ದರು. ಈ ಮೊದಲೇ ಯಶ್ ಅವರು ಆಫರ್ ರಿಜೆಕ್ಟ್ ಮಾಡಿದ್ದರು. ಈಗ ಆಲಿಯಾ ಭಟ್ ಅವರು ಸ್ವಲ್ಪ ಸಮಯ ತೆಗೆದುಕೊಂಡು ಈ ಆಫರ್‌ಗೆ ನೋ ಎಂದಿದ್ದಾರೆ. ಇದಕ್ಕೆ ಕಾರಣ ಡೇಟ್ಸ್ ಹೊಂದಾಣಿಕೆ ಆಗದೇ ಇರುವುದು.

    ಸಿನಿಮಾಗಳ ಜೊತೆ ಮುದ್ದು ಮಗಳು ರಾಹಾ(Raha) ಆರೈಕೆಯಲ್ಲೂ ಬ್ಯುಸಿ ಇರುವ ಕಾರಣ, 3 ಪಾರ್ಟ್‌ಗಳಲ್ಲಿ ಬರುತ್ತಿರೋ ರಾಮಾಯಣಗೆ ಸಮಯ ಮೀಸಲಿಡುವುದು ಕಷ್ಟ ಎಂದು ಚಿತ್ರಕ್ಕೆ ನೋ ಹೇಳಿದ್ದಾರೆ ಆಲಿಯಾ ಭಟ್.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • KVN ಸಂಸ್ಥೆ ಬಿಗ್ ಅನೌನ್ಸ್‌ಮೆಂಟ್ – ಯಶ್ 19 ಮತ್ತೆ ಟ್ರೆಂಡಿಂಗ್

    KVN ಸಂಸ್ಥೆ ಬಿಗ್ ಅನೌನ್ಸ್‌ಮೆಂಟ್ – ಯಶ್ 19 ಮತ್ತೆ ಟ್ರೆಂಡಿಂಗ್

    ನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ (Kvn Productions) ಹೊಸ ಸಿನಿಮಾ ಬಗ್ಗೆ ಅಪ್‌ಡೇಟ್ ನೀಡೋದಾಗಿ ಅನೌನ್ಸ್ ಮಾಡಿದೆ. ಈ ಬೆನ್ನಲ್ಲೇ ಯಶ್ 19 (Yash 19) ಹ್ಯಾಷ್ ಟ್ಯಾಗ್ ಮತ್ತೆ ಟ್ರೆಂಡಿಂಗ್‌ನಲ್ಲಿದೆ. ನ್ಯಾಷನಲ್ ಸ್ಟಾರ್ ಯಶ್ ಮುಂದಿನ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್ ಸಿಗುವ ಬಗ್ಗೆ ಅಭಿಮಾನಿಗಳು ಎದುರು ನೋಡ್ತಿದ್ದಾರೆ.

    ಬಿಗ್ ಅನೌನ್ಸ್‌ಮೆಂಟ್ ಕಮ್ಮಿಂಗ್ ಸೂನ್ ಎಂದು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಯಶ್ 19 ಸಿನಿಮಾ ಅಪ್‌ಡೇಟ್ ಬಗ್ಗೆನೇ ಏನಾದ್ರೂ ಸುಳಿವು ಕೊಡ್ತಿದ್ದಾರಾ? ಎನ್ನುವ ಚರ್ಚೆ ಶುರುವಾಗಿದೆ. ಅಭಿಮಾನಿಗಳು ಬೇಗ ಹೇಳಿ ಎಂದು ಕೇಳುತ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಯಶ್ ತಮ್ಮ ಮುಂದಿನ ಸಿನಿಮಾ ಘೋಷಿಸುತ್ತಾರಾ? ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಇದನ್ನೂ ಓದಿ:ಎಲ್ಲೆಲ್ಲೂ ‘ಜೈಲರ್’ ಚಿತ್ರದ ಹವಾ, ನಿಲ್ಲುತ್ತಿಲ್ಲ ರಜನಿ ತಾಕತ್ತು

    ‘ಕೆಜಿಎಫ್ 2’ (KGF 2) ಸಿನಿಮಾ ತೆರೆಗೆ ಬಂದು ಒಂದೂವರೆ ವರ್ಷ ಕಳೆದಿದೆ. ಆದರೂ ಯಶ್ ಮುಂದಿನ ಚಿತ್ರದ ಬಗ್ಗೆ ಅಪ್‌ಡೇಟ್ ಸಿಗದೇ ಕಾತರದಿಂದ ಕಾಯ್ತಿದ್ದಾರೆ. ಈ ಹಿಂದೆ ಕೆವಿಎನ್ ಸಂಸ್ಥೆ ಜೊತೆ ಯಶ್ ಕೈಜೋಡಿಸುತ್ತಿದ್ದಾರೆ ಎನ್ನಲಾಗಿತ್ತು. ಈಗ ಕೆವಿಎನ್ ಟೀಮ್ ಕಡೆಯಿಂದ ಸಿನಿಮಾ ಅನೌನ್ಸ್‌ಮೆಂಟ್ ಎನ್ನುತ್ತಿದ್ದಂತೆ ಯಶ್ 19 ಹ್ಯಾಷ್‌ಟ್ಯಾಗ್ ಈಗ ಇಂಡಿಯಾ ಮಟ್ಟದಲ್ಲಿ ಟ್ರೆಂಡಿಂಗ್‌ನಲ್ಲಿದೆ.

    ಯಶ್ 19 ಚಿತ್ರಕ್ಕೆ ಯಾರು ನಿರ್ದೇಶನ ಮಾಡುತ್ತಾರೆ ಎನ್ನುವ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿದೆ. ಈ ಹಿಂದೆ ಯಶ್ 19 ಚಿತ್ರಕ್ಕೆ ನರ್ತನ್ ಹೆಸರು ಕೇಳಿ ಬಂದಿತ್ತು. ಆದರೆ ಕಥೆ ಸೆಟ್ ಆಗದ ಕಾರಣ ಅದು ಸಾಧ್ಯವಾಗಲಿಲ್ಲ. ಯಶ್ ಮುಂದಿನ ಚಿತ್ರಕ್ಕೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಆ್ಯಕ್ಷನ್ ಕಟ್ ಹೇಳುತ್ತಾರೆ ಎನ್ನುವ ಚರ್ಚೆ ಕೂಡ ಭಾರೀ ಸದ್ದು ಮಾಡಿತ್ತು. ಇನ್ನೊಂದು ಕಡೆ ಕೆಜಿಎಫ್‌ 3 ಸಿನಿಮಾ ಮಾಡ್ತಾರೆ ಎನ್ನಲಾಗಿತ್ತು. ಈ ಬಗ್ಗೆ ಯಾವುದೇ ಅಧಿಕೃತ ಅಪ್‌ಡೇಟ್ ಹೊರಬಿದ್ದಿಲ್ಲ. ವರಮಹಾಲಕ್ಷ್ಮಿ ಹಬ್ಬದಂದು (ಆಗಸ್ಟ್‌ 25) ಯಶ್ ಸಿನಿಮಾ ಬಗ್ಗೆ ಸಿಹಿಸುದ್ದಿ ಸಿಗಲಿದೆ ಎಂದು ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಅಭಿಮಾನಿಗಳ ನಿರೀಕ್ಷೆ ಪೂರೈಸುತ್ತಾ? ಎಂದು ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಡಬಲ್ ಇಸ್ಮಾರ್ಟ್’ ಚಿತ್ರೀಕರಣದಲ್ಲಿ ಸಂಜಯ್ ದತ್‌ಗೆ ಪೆಟ್ಟು- ಆಸ್ಪತ್ರೆಗೆ ದಾಖಲು

    ‘ಡಬಲ್ ಇಸ್ಮಾರ್ಟ್’ ಚಿತ್ರೀಕರಣದಲ್ಲಿ ಸಂಜಯ್ ದತ್‌ಗೆ ಪೆಟ್ಟು- ಆಸ್ಪತ್ರೆಗೆ ದಾಖಲು

    ‘ಕೆಜಿಎಫ್ 2′ (KGF 2) ಅಧೀರ ಸಂಜಯ್ ದತ್‌ಗೆ ‘ಡಬಲ್ ಇಸ್ಮಾರ್ಟ್’ (Double Ismart) ಚಿತ್ರೀಕರಣದ ವೇಳೆ ತಲೆಗೆ ಪೆಟ್ಟಾಗಿದೆ. ಶೂಟಿಂಗ್‌ಗಾಗಿ ಥೈಲ್ಯಾಂಡ್‌ನಲ್ಲಿ ಬೀಡು ಬಿಟ್ಟಿದ್ದ ಚಿತ್ರತಂಡ. ಶೂಟಿಂಗ್ ಸಂದರ್ಭದಲ್ಲಿ ಸಂಜಯ್ ದತ್ (Sanjay Dutt) ತಲೆಗೆ ಪೆಟ್ಟಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸಂಜಯ್ ದತ್ ಈಗ ತೆಲುಗಿನ ‘ಡಬಲ್ ಇಸ್ಮಾರ್ಟ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಬಿಗ್ ಬುಲ್ ಹೆಸರಿನ ವಿಲನ್ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಥೈಲ್ಯಾಂಡ್‌ನಲ್ಲಿ ನಡೆಯುತ್ತಿದೆ. ಈ ವೇಳೆ ಅವರಿಗೆ ಗಾಯ ಆಗಿದೆ ಎಂದು ವರದಿ ಆಗಿದೆ. ಖಡ್ಗದಲ್ಲಿ ಫೈಟ್ ಮಾಡುವ ದೃಶ್ಯವನ್ನು ಶೂಟ್ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ವೇಳೆ ಖಡ್ಗ ಅವರ ತಲೆಗೆ ತಾಗಿ ಗಾಯ ಆಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಗಾಯಕ್ಕೆ ಹೊಲಿಗೆ ಹಾಕಿಸಿಕೊಂಡು ಅವರು ಮರಳಿ ಸೆಟ್‌ಗೆ ಆಗಮಿಸಿದ್ದಾರೆ. ಬಳಿಕ ತಮ್ಮ ಭಾಗದ ಶೂಟಿಂಗ್‌ನ ಅವರು ಪೂರ್ಣಗೊಳಿಸಿ ಕೊಟ್ಟಿದ್ದಾರೆ. ಈ ಬಗ್ಗೆ ಚಿತ್ರತಂಡದ ಕಡೆಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಇದನ್ನೂ ಓದಿ:ಶಕ್ತಿಧಾಮದಲ್ಲಿ ಮಕ್ಕಳ ಜೊತೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಶಿವಣ್ಣ

    ಸಂಜಯ್ ದತ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ‘ಕೆಜಿಎಫ್ 2’ (KGF 2) ಚಿತ್ರದಲ್ಲಿ ಅಧೀರನ ಪಾತ್ರ ಮಾಡುವ ಮೂಲಕ ಅವರು ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾದರು. ಹೀಗಾಗಿ, ಅವರ ಬಗ್ಗೆ ಅಪ್‌ಡೇಟ್ ತಿಳಿದುಕೊಳ್ಳೋಕೆ ಫ್ಯಾನ್ಸ್ ಎದುರು ನೋಡ್ತಿರುತ್ತಾರೆ. ಈಗ ಅವರು ವಿದೇಶದಲ್ಲಿ ಗಾಯಗೊಂಡಿದ್ದಾರೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಅವರ ಬೇಗ ಚೇತರಿಸಿಕೊಳ್ಳಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ.

    ಸಂಜಯ್ ದತ್ ಗಾಯಗೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿದ್ದು ಇದೇ ಮೊದಲೇನು ಅಲ್ಲ. ಇತ್ತೀಚೆಗೆ ಅವರು ‘ಕೆಡಿ’ (KD) ಸಿನಿಮಾದ ಶೂಟ್‌ನಲ್ಲಿ ಪೆಟ್ಟು ಮಾಡಿಕೊಂಡರು ಎಂದು ಹೇಳಲಾಗಿತ್ತು. ನನಗೆ ಗಾಯ ಆಗಿದೆ ಎಂಬ ಸುದ್ದಿ ಆಧಾರ ರಹಿತ ಎಂದು ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದರು. ಸದ್ಯ ಈಗ ಹಬ್ಬಿರುವ ವದಂತಿಗೆ ಅವರ ಕಡೆಯಿಂದಲೇ ಸ್ಪಷ್ಟನೆ ಬರಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಜಯ ರಾಘವೇಂದ್ರಗೆ ಧೈರ್ಯ ತುಂಬಿದ ಯಶ್

    ವಿಜಯ ರಾಘವೇಂದ್ರಗೆ ಧೈರ್ಯ ತುಂಬಿದ ಯಶ್

    ಟ ವಿಜಯ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ (Spandana) ಅಂತಿಮ ದರ್ಶನದಲ್ಲಿ ಯಶ್ (Yash)  ಭಾಗಿಯಾಗಿದ್ದಾರೆ. ನೋವಿನಲ್ಲಿರೋ ಸ್ನೇಹಿತ ವಿಜಯಗೆ ಯಶ್ ತಬ್ಬಿ ಧೈರ್ಯ ತುಂಬಿದ್ದಾರೆ.

    ಬಿ.ಕೆ ಶಿವರಾಂ ಅವರ ನಿವಾಸಕ್ಕೆ ಯಶ್ ಭೇಟಿ ನೀಡಿದ್ದಾರೆ. ಕಣ್ಣೀರ ಕಡಲಲ್ಲಿರೋ ವಿಜಯಗೆ ಯಶ್ ಧೈರ್ಯ ತುಂಬಿದ್ದಾರೆ. ಸ್ನೇಹಿತನಿಗೆ ಶಕ್ತಿ ತುಂಬುವ ಮಾತುಗಳನ್ನಾಡಿದ್ದಾರೆ. ರಾಘು ಸಂಕಷ್ಟದ ಸಮಯದಲ್ಲಿ ಸಾಂತ್ವನ ಹೇಳಿದ್ದಾರೆ. ಇದನ್ನೂ ಓದಿ:ಸ್ಪಂದನಾ ಸಾವಿನ ಬಗ್ಗೆ ಅಪಪ್ರಚಾರ ಮಾಡಬೇಡಿ- ಮೇಘನಾ ರಾಜ್

    ವಿಜಯ ರಾಘವೇಂದ್ರ ಸ್ನೇಹಿತರಾದ ರಾಧಿಕಾ ಕುಮಾರಸ್ವಾಮಿ, ಧ್ರುವ ಸರ್ಜಾ, ರಕ್ಷಿತಾ ಪ್ರೇಮ್, ಅನುಶ್ರೀ, ಡಿಕೆಡಿ ಡ್ಯಾನ್ಸ್ ಟೀಮ್ ಸ್ಪಂದನಾ ಅಂತಿಮ ದರ್ಶನದಲ್ಲಿ ಭಾಗಿಯಾಗಿ ನೋವಿನಲ್ಲಿರೋ ವಿಜಯಗೆ ಸಾಂತ್ವಾನ ಹೇಳಿದ್ದಾರೆ. ಸದ್ಯ ಮಲ್ಲೇಶ್ವರಂನಲ್ಲಿರುವ ಅವರ ನಿವಾಸದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆಪ್ತರಿಗೆ, ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದಾರೆ.

    ಹರಿಶ್ಚಂದ್ರಘಾಟ್‌ನಲ್ಲಿ ಮಧ್ಯಾಹ್ನ 3:30ಕ್ಕೆ ಸ್ಪಂದನಾ ಅಂತ್ಯಕ್ರಿಯೆ ನಡೆಯಲಿದೆ. ಈಡಿಗ ಸಮುದಾಯದ ಸಂಪ್ರದಾಯದಂತೆ ಪೂಜೆ ಪುನಸ್ಕಾರ ನಡೆಸಿ ಬಳಿಕ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಅಂತ್ಯಕ್ರಿಯೆಗೆ ಪೂಜೆ ಪುನಸ್ಕಾರ ಹಿನ್ನೆಲೆ ಬಿಬಿಎಂಪಿಯಿಂದ ಕೂಡ ಸ್ವಚ್ಛತಾ ಕಾರ್ಯ ಮಾಡಲಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಂಜಾಬಿ ಸಿನಿಮಾದತ್ತ ‘ಕೆಜಿಎಫ್ 2’ ನಟ ಸಂಜಯ್‌ ದತ್

    ಪಂಜಾಬಿ ಸಿನಿಮಾದತ್ತ ‘ಕೆಜಿಎಫ್ 2’ ನಟ ಸಂಜಯ್‌ ದತ್

    ಬಾಲಿವುಡ್ ನಟ ಸಂಜಯ್ ದತ್‌ (Sanjay Dutt) ಅವರು ಇದೀಗ ದಕ್ಷಿಣ ಭಾರತದ ಸಿನಿಮಾಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ‘ಕೆಜಿಎಫ್ 2’ (KGF 2) ಸಿನಿಮಾದ ಸಕ್ಸಸ್ ನಂತರ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟ ಮಿಂಚ್ತಿದ್ದಾರೆ. ಈ ಬೆನ್ನಲ್ಲೇ ಪಂಜಾಬಿ ಸಿನಿಮಾಗೆ ಸಂಜಯ್ ದತ್ ಓಕೆ ಎಂದಿದ್ದಾರೆ. ಇದನ್ನೂ ಓದಿ:ರಾಜೀವ್ ಅಭಿನಯದ ‘ಉಸಿರೇ ಉಸಿರೇ ಚಿತ್ರದ ಫಸ್ಟ್ ಸಾಂಗ್ ರಿಲೀಸ್

    ಹಿಂದಿ ಚಿತ್ರರಂಗದಲ್ಲಿ ಸಂಜಯ್ ದತ್‌ಗೆ ಬೇಡಿಕೆಯಿದೆ. ಆದರೆ ಕೆಜಿಎಫ್ 2 ಸಿನಿಮಾದ ಯಶಸ್ಸಿನ ನಂತರ ಸಂಜಯ್ ದತ್ ವೃತ್ತಿ ಬದುಕನ್ನ ನೋಡುವ ರೀತಿ ಬದಲಾಗಿದೆ. ಪ್ರಸ್ತುತ ಜವಾನ್, ತಮಿಳಿನ ಲಿಯೋ, ತೆಲುಗಿನ ಡಬಲ್ ಇಸ್ಮಾರ್ಟ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಧೀರ ಬ್ಯುಸಿಯಾಗಿದ್ದಾರೆ.

    ಕಥೆ ಮತ್ತು ಪಾತ್ರಕ್ಕೆ ಹೆಚ್ಚು ಒತ್ತು ಕೊಡ್ತಿರೋ ಸಂಜಯ್ ದತ್, ಈಗ ಪಂಜಾಬಿ ನಿರ್ದೇಶಕನ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಡೈರೆಕ್ಟರ್ ಗಿಪ್ಪಿ ಗ್ರೆವಾಲ್ (Gippy Grewal) ಚಿತ್ರದ ಕಥೆ ಇಷ್ಟವಾಗಿ, ಸಂಜಯ್ ಓಕೆ ಎಂದಿದ್ದಾರೆ ಈ ಮೂಲಕ ಪಂಜಾಬಿ ಸಿನಿಮಾ ರಂಗಕ್ಕೆ ಮೊದಲ ಬಾರಿಗೆ ಪಾದಾರ್ಪಣೆ ಮಾಡ್ತಿದ್ದಾರೆ. ಚಿತ್ರಕ್ಕೆ ‘ಶೆರಾನ್‌ ದಿ ಕಮ್‌ ಪಂಜಾಬಿ’  ಎಂದು ಟೈಟಲ್‌ ಫಿಕ್ಸ್‌ ಮಾಡಲಾಗಿದೆ. ಸಂಜಯ್‌ ದತ್‌ ಪಾತ್ರದ ಬಗ್ಗೆಯಾಗಲಿ ಯಾವುದೇ ಮಾಹಿತಿ ಸಿಕ್ಕಿಲ್ಲ.

    ಪಂಜಾಬಿ (Panjabi Films) ಸಿನಿಮಾರಂಗದಲ್ಲಿ ಹಲವು ಸಿನಿಮಾ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿರುವ ಗಿಪ್ಪಿ ಜೊತೆ ಕೈ ಜೋಡಿಸಿರೋದರ ಬಗ್ಗೆ ಸಂಜಯ್ ದತ್ ಸೋಷಿಯಲ್ ಮೀಡಿಯಾ ಮೂಲಕ ಅನೌನ್ಸ್ ಮಾಡಿದ್ದಾರೆ. ಈ ಮೂಲಕ ಭಾಷೆಗೆ ಆಧ್ಯತೆ ಅನ್ನೊದಕ್ಕಿಂತ ಕಥೆ ಮತ್ತು ಪಾತ್ರಕ್ಕೆ ಮಹತ್ವ ಕೊಡ್ತಾರೆ ಅನ್ನೋದನ್ನ ನಟ ಸಂಜಯ್ ದತ್ ಪ್ರೂವ್ ಮಾಡಿದ್ದಾರೆ. ಒಟ್ನಲ್ಲಿ ಅಧೀರನ ನಯಾ ಅವತಾರವನ್ನ ತೆರೆಯ ಮೇಲೆ ಕಣ್ತುಂಬಿಕೊಳ್ಳೋಕೆ ಫ್ಯಾನ್ಸ್ ಕಾಯ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಕಾಣೆಯಾಗಿದ್ದಾರೆ ಯಶ್’ ಎಂದು ಪರಿತಪಿಸುತ್ತಿರುವ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಡಲಿದ್ದಾರೆ ರಾಕಿಭಾಯ್

    ‘ಕಾಣೆಯಾಗಿದ್ದಾರೆ ಯಶ್’ ಎಂದು ಪರಿತಪಿಸುತ್ತಿರುವ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಡಲಿದ್ದಾರೆ ರಾಕಿಭಾಯ್

    ಶ್ (Yash) ಕೊನೆಗೂ ಆ ನಿರ್ಧಾರಕ್ಕೆ ಬಂದಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ದಿವ್ಯ ದರ್ಶನ ನೀಡಲು ಸಜ್ಜಾಗಿದ್ದಾರೆ. ‘ಕಾಣೆಯಾಗಿದ್ದಾರೆ ಯಶ್’ ಹೀಗಂತ ಒದ್ದಾಡುತ್ತಿರುವ ಭಕ್ತಗಣಕ್ಕೆ ಉತ್ತರ ನೀಡಲು ಅಖಾಡ ಸಿದ್ದ ಮಾಡುತ್ತಿದ್ದಾರೆ. ಹಾಗಿದ್ದರೆ ಯಾವಾಗ ಯಶ್ ಹೊಸ ಸಿನಿಮಾ ಘೋಷಣೆ ಮಾಡಲಿದ್ದಾರೆ? ಈಗ ಯಾವ ದೇಶದಲ್ಲಿದ್ದಾರೆ? ಇದೆಲ್ಲದರ ನಡುವೆ ಅವರನ್ನು ಕಾಡುತ್ತಿರುವ ಗೊಂದಲವೇನು? ಅದಕ್ಕೆ ಪರಿಹಾರ ಏನು ಹುಡುಕಿದ್ದಾರೆ? ಇಲ್ಲಿದೆ ಅಪ್‌ಡೇಟ್

    ಕಾಣೆಯಾಗಿದ್ದಾರೆ ರಾಕಿಭಾಯ್  ಹೀಗಂತ ಕೆಲವು ದಿನಗಳ ಹಿಂದೆ ಪ್ರಕಟಣೆ ಹೊರಬಿದ್ದಿತ್ತು. ಆ ರೀತಿ ಹೇಳಿದ್ದು ಬೇರಾರೂ ಅಲ್ಲ. ಖುದ್ದು ಯಶ್ ಭಕ್ತಗಣ. ಇಷ್ಟು ವರ್ಷವಾದರೂ ಹೊಸ ಸಿನಿಮಾ ಬಗ್ಗೆ ಸಿಂಗಲ್ ಸುದ್ದಿ ಇಲ್ಲ. ಯಾವುದೇ ಅಪ್ ಡೇಟ್ ಇಲ್ಲ. ಎಲ್ಲ ಫ್ಯಾನ್ಸ್ ತಮ್ಮ ತಮ್ಮ ಹೀರೊ ಹೊಸ ಸಿನಿಮಾ ಸುದ್ದಿ ಹಾಕಿಕೊಂಡು ಎಂಜಾಯ್ ಮಾಡುತ್ತಿದ್ದಾರೆ. ಅಪ್‌ಡೇಟ್ ಸುದ್ದಿ ಕೊಟ್ಟು ಕೇಕೆ ಹೊಡೆಯುತ್ತಿದ್ದಾರೆ. ನೀವೂ ಏನೂ ಹೊಸ ಹಾಕುತ್ತಿಲ್ಲ. ನಮ್ಮ ಎಮೋಷನ್ಸ್ ಜೊತೆ ಆಟ ಆಡಬೇಡಿ ಬಾಸ್. ನಾವೇನು ಮಾಡಬೇಕು ಹೇಳಿ ಎಂದು ಗೋಳಾಡಿದ್ದರು. ಅದಕ್ಕೆ ಉತ್ತರ ಕೊಡುವ ಸಮಯ ಬಂದಿದೆ ಎನ್ನುತ್ತಿದ್ದಾರೆ ಖುದ್ದು ಯಶ್. ಇದನ್ನೂ ಓದಿ:‘ಬಾಹುಬಲಿ’ ಪ್ರಭಾಸ್ ಫೇಸ್‌ಬುಕ್ ಅಕೌಂಟ್ ಹ್ಯಾಕ್

    ಯು ಆರ್ ರೈಟ್, ಯಶ್ ಮೈ ಕೊಡವಿ ಎದ್ದು ನಿಂತಿದ್ದಾರೆ. ಎರಡು ವರ್ಷದಿಂದ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅದಕ್ಕೆ ಸಿದ್ಧತೆ ಅನ್ನೋದು ಸಣ್ಣ ಶಬ್ದವಾದೀತು. ಕಾರಣ ಅಷ್ಟೊಂದು ಇಂಚಿಂಚು ಮಾಹಿತಿ. ಸಣ್ಣ ಸಣ್ಣ ಡಿಟೇಲ್ಸ್, ಅಗುಳಿನಷ್ಟೂ ತಪ್ಪಾಗದ ಹೆಜ್ಜೆಯನ್ನು ಇಟ್ಟು ಕೊನೇ ಹಂತ ಬಂದು ಮುಟ್ಟಿದ್ದಾರೆ. ಕತೆ,ಚಿತ್ರಕತೆ, ಸಂಭಾಷಣೆ, ಕ್ಯಾಮೆರಾ, ಸಂಗೀತ, ಕಲಾ ನಿರ್ದೇಶನ ಮತ್ತು ಶೂಟಿಂಗ್ ಸ್ಥಳ, ಕಾಸ್ಟ್ಯೂಮ್ ಡಿಸೈನಿಂಗ್ ಒಂದೇ ಒಂದು ಗುಲಗಂಜಿ ತಪ್ಪಾಗದಂತೆ ಎಚ್ಚರ ವಹಿಸಿ ದೇವರಿಗೆ ತುಪ್ಪದ ದೀಪ ಹಚ್ಚಿದ್ದಾರೆ. ಜಗತ್ತಿನ ಹಾರೈಕೆ ಬೇಡಲು ನಿಮ್ಮ ಮುಂದೆ ಬರಲಿದ್ದಾರೆ.

    ಹೊಸ ಸಿನಿಮಾಕ್ಕಾಗಿ ತಪಸ್ಸು ಮಾಡುತ್ತಿದ್ದಾರೆ ರಾಕಿಭಾಯ್. ಅದಕ್ಕೊಂದು ತಂಡ ಕಟ್ಟಿಕೊಂಡಿದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ಕೆಲಸ ಒಪ್ಪಿಸಿದ್ದಾರೆ. ಯಾವುದೂ ಹಾದಿ ತಪ್ಪಬಾರದು. ಹಾಗೆ ನೋಡಿಕೊಂಡಿದ್ದಾರೆ. ಇದಕ್ಕೆ ಜೊತೆಯಾಗಿ ನಿಂತಿರುವುದು ನಿರ್ದೇಶಕಿ ಗೀತು ಮೋಹನ್‌ದಾಸ್ (Geethu Mohandas) ಮಲಯಾಳಂ ಮೂಲದ ನಿರ್ದೇಶಕಿಗೆ ಇದು ಮೊದಲ ಕಮರ್ಷಿಯಲ್ ಅಂಡ್ ಕನ್ನಡ ಕಮ್ ಪ್ಯಾನ್ ಇಂಡಿಯಾ ಸಿನಿಮಾ. ಇಬ್ಬರೂ ಹೇಗೆ ಸಿಕ್ಕರು. ಹೇಗೆ ಹೊಂದಿಕೊಂಡರು. ಹೇಗೆ ಇಂಥ ಮಹಾ ಯುದ್ಧಕ್ಕೆ ಕುದುರೆ ಏರಿದರು? ಎಲ್ಲವೂ ಸದ್ಯದಲ್ಲೇ ಹೊರಬೀಳಲಿದೆ. ಅದಕ್ಕೂ ಮುನ್ನ ಇನ್ನು ಮೂರು ನಾಲ್ಕು ವಾರಗಳಲ್ಲಿ ಯಶ್ (Yash) ಘೋಷಣೆ ಮಾಡೋದು ಶತಸಿದ್ಧ. ಇದನ್ನೂ ಓದಿ:ಚಾಮುಂಡಿ ತಾಯಿ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜಕುಮಾರ್

    ಆಗಸ್ಟ್ ತಿಂಗಳಲ್ಲೇ ಅನೌನ್ಸ್ ಮಾಡುತ್ತಾರಾ? ಅಫ್‌ಕೋರ್ಸ್‌ ಎಸ್ ಇದು ಸತ್ಯ. ಎಲ್ಲ ಅಂದರೆ ಎಲ್ಲವೂ ಆಚೀಚೆ ಆಗದಂತೆ ಸಜ್ಜಾಗಿದೆ. ಅದು ಯಾವ ಮಟ್ಟಿಗೆ ಪೂರ್ವ ತಯಾರಿ ಮಾಡಿಕೊಂಡಿದ್ದಾರೆ ಗೊತ್ತೆ? ಬಹುತೇಕ ಸಿನಿಮಾ ಮುಗಿಸಿದ್ದಾರೆ. ಅದನ್ನು ಶೂಟಿಂಗ್ ಮಾಡೋದೊಂದು ಬಾಕಿ. ಅದರ ಅರ್ಥ ಇಷ್ಟೇ. ಅಷ್ಟೊಂದು ಜತನದಿಂದ ಅಖಾಡ ರೆಡಿಯಾಗಿದೆ. ಯಾವುದನ್ನು ಎಲ್ಲಿ ಎಷ್ಟು ಹೇಗೆ? ಇಂಥ ಪ್ರತಿ ಪ್ರಶ್ನೆಗೆ ಕಾಗದದ ಮೇಲೆ ಉತ್ತರ ಬರೆದುಕೊಂಡಿದ್ದಾರೆ. ಅಂದುಕೊಂಡಿದ್ದನ್ನು ಚಿತ್ರೀಕರಣ ಮಾಡಬೇಕಷ್ಟೇ. ಅದೇನೂ ಸಣ್ಣ ಸವಾಲಲ್ಲ. ಆದರೆ ಇವರು ಮಾಡಿಕೊಂಡಿರುವ ತಯಾರಿ ಆ ಸವಾಲನ್ನು ಎಡಗೈಯಿಂದ ಸರಿಸುವಷ್ಟು ತಾಕತ್‌ವಾರ್ ಅಷ್ಟೇ ಉತ್ತರ.

    ಈಗ ಒಂದೇ ಒಂದು ಪ್ರಶ್ನೆ ರಾಕಿಭಾಯ್‌ಗೆ ತಲೆ ತಿನ್ನುತ್ತಿದೆ. ನಿಗ್ಗಿನಿಗಿ ಸವಾಲು ಕಾಡುತ್ತಿದೆ. ಅದೇನು ಗೊತ್ತೆ? ಈ ಹೊಸ ಸಿನಿಮಾವನ್ನು ಯಾವ ರೀತಿ ಅನೌನ್ಸ್ ಮಾಡಬೇಕು? ಇದು ಸಹಜ ಆತಂಕ ಹಾಗೂ ಗೊಂದಲ. ಎಲ್ಲರೂ ಎಲ್ಲ ರೀತಿಯಲ್ಲಿ ಸಿನಿಮಾ ಘೋಷಣೆ ಮಾಡಿದ್ದಾರೆ. ಯುಟ್ಯೂಬ್, ಸಾರ್ವಜನಿಕ, ಕಾರ್ಯಕ್ರಮ ಅಥವಾ ಇನ್ನೇನೋ ಸಂವಹನದಿಂದ ಟೈಟಲ್ ಘೋಷಣೆ ಮಾಡಿದ್ದಾರೆ. ಕೆಜಿಎಫ್(KGF), ಸಲಾರ್ (Salaar), ಕಲ್ಕಿ ಹೀಗೆ ಒಬ್ಬೊಬ್ಬರು ಒಂದೊಂದು ದಾರಿ ಹಿಡಿದಿದ್ದಾರೆ. ಇದೇ ರೀತಿ ಮಾಡಬೇಕಾ ಅಥವಾ ಇದನ್ನು ಬಿಟ್ಟು ಇನ್ನೊಂದು ದಾರಿ ಹಿಡಿಯಬೇಕಾ? ಯಾವುದು ಹೆಚ್ಚು ಜನರಿಗೆ ಮುಟ್ಟಲು ಸಾಧ್ಯ? ಈ ಪ್ರಶ್ನೆಗಳನ್ನು ಹರವಿಕೊಂಡು ಕುಳಿತಿದ್ದಾರೆ ರಾಕಿಭಾಯ್.

    ಇದಿಷ್ಟು ಸದ್ಯದ ಕಥನ ಹೂರಣ. ಬರೀ ಕನ್ನಡಿಗರು ಮಾತ್ರ ಅಲ್ಲ. ಇಡೀ ವಿಶ್ವವೇ ಯಶ್ ಮುಂದಿನ ನಡೆಯನ್ನು ಕುತೂಹಲದಿಂದ ಕಾಯುತ್ತಿದೆ. ಏನು ಮಾಡಲಿದ್ದಾರೆ? ಏನು ಮಾಡಬಹುದು? ಇಷ್ಟೆಲ್ಲ ಕಾಯಿಸಿ ಅದ್ಯಾವ ಊಟ ಬಡಿಸಬಹುದು? ಎಲ್ಲವೂ ಬರೀ ಪ್ರಶ್ನೆಗಳೇ. ಉತ್ತರ ಸಿಗಲು ಸಮಯ ಬೇಕು. ಆದರೆ ಒಂದು ಮಾತು ಸತ್ಯ. ಮನೆ ಕಟ್ಟಲು ಹೆಚ್ಚು ಸಮಯ ಬೇಕಾಗಲ್ಲ. ಆದರೆ ಅರಮನೆ ಕಟ್ಟಲು? ಬೇಕಪ್ಪಾ. ಬೇಕು ಎದ್ವಾತದ್ವಾ ಟೈಮು. ಅರಮನೆ ಅಂಗಳದಲ್ಲಿ ನಿಂತು ಹಬ್ಬ ಮಾಡಲು ಕಾಯುತ್ತಿದೆ ಭಕ್ತಗಣ. ಕಡ್ಡಿ ಗೀರಿ ಕೈಯಲ್ಲಿ ಹಿಡಿದುಕೊಂಡಿರಿ, ಬಂದೇ ಬಿಡ್ತಾರೆ ರಾಕಿಭಾಯ್. ಸರಪಟಾಕಿ ಹಿಡಿದುಕೊಂಡು ಹಚ್ಚಿದಾಗ ದೀಪಾವಳಿ ಪಕ್ಕಾ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗುಟ್ಟಾಗಿ ಮದುವೆಯಾದ್ರಾ ‘ಕೆಜಿಎಫ್’ ನಟಿ ಶ್ರೀನಿಧಿ ಶೆಟ್ಟಿ?

    ಗುಟ್ಟಾಗಿ ಮದುವೆಯಾದ್ರಾ ‘ಕೆಜಿಎಫ್’ ನಟಿ ಶ್ರೀನಿಧಿ ಶೆಟ್ಟಿ?

    ಮಂಗಳೂರಿನ ಬೆಡಗಿ ಶ್ರೀನಿಧಿ ಶೆಟ್ಟಿ (Srinidhi Shetty) ಅವರು ಈಗ ತಮ್ಮ ಮದುವೆಯ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಗುಟ್ಟಾಗಿ ನಟಿ ಮದುವೆಯಾಗಿದ್ದಾರೆ (Wedding) ಎಂದು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಆಗಿದೆ. ಇತ್ತೀಚಿಗೆ ನಟಿ ಶೇರ್ ಮಾಡಿರುವ ಫೋಟೋ ಮದುವೆ ಸುದ್ದಿಗೆ ಮತ್ತಷ್ಟು ಪುಷ್ಟಿ ಕೊಟ್ಟಿದೆ. ಅಷ್ಟಕ್ಕೂ ಆಗಿದ್ದೇನು.? ಇಲ್ಲಿದೆ ಡಿಟೈಲ್ಸ್

    ಮಾಡೆಲಿಂಗ್ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದ ಶ್ರೀನಿಧಿ ಶೆಟ್ಟಿ ಅವರು ಯಶ್‌ಗೆ (Yash) ನಾಯಕಿಯಾಗುವ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟರು. ಮೊದಲ ಸಿನಿಮಾದಲ್ಲೇ ತಮ್ಮ ಅಭಿನಯದ ಮೂಲಕ ಮನೆಮಾತಾದರು. ಕೆಜಿಎಫ್ 2ನಲ್ಲೂ (KGF 2) ನಟಿ ಮಿಂಚಿದ್ದರು. ಪ್ರಶಾಂತ್ ನೀಲ್ (PrashanthNeel) ನಿರ್ದೇಶನದ ಸಿನಿಮಾದಲ್ಲಿ ರೀನಾ ಪಾತ್ರಕ್ಕೆ ಜೀವ ತುಂಬಿದ್ದರು.

    ಬಳಿಕ ಚಿಯಾನ್ ವಿಕ್ರಮ್ ಜೊತೆ ‘ಕೋಬ್ರಾ’ (Cobra) ಸಿನಿಮಾದಲ್ಲಿ ನಟಿಸಿದರು. ಸಿನಿಮಾ ಸದ್ದು ಮಾಡದೇ ಇದ್ದರು. ಕೆಜಿಎಫ್ (KGF) ಬ್ಯೂಟಿ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆದರು. ಈಗ ಹೊಸ ಸಿನಿಮಾ ಅವಕಾಶಗಳನ್ನ ನಟಿ ಗಮನ ವಹಿಸುತ್ತಿದ್ದಾರೆ. ಇತ್ತೀಚಿಗೆ ಕೆಜಿಎಫ್ 3 ಕೂಡ ಅನೌನ್ಸ್ ಮಾಡಲಾಗಿದೆ. ಇದನ್ನೂ ಓದಿ:ಪಿಎಂ ನರೇಂದ್ರ ಮೋದಿ- ಫ್ರೆಂಚ್ ಪ್ರೆಸಿಡೆಂಟ್ ಜೊತೆ ಮ್ಯಾಡಿ ಊಟ

    ಈ ನಡುವೆ ನಟಿ ಶ್ರೀನಿಧಿ ತಮ್ಮ ಮದುವೆ ವಿಚಾರಕ್ಕೆ ಸಂಚಲನ ಮೂಡಿಸಿದ್ದಾರೆ. ಹೇಳದೇ ಕೇಳದೇ ನಟಿ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ನೆಟ್ಟಿಗರು ಬೇಸರ ಹೊರಹಾಕಿದ್ದಾರೆ. ಶ್ರೀನಿಧಿಗೆ ಈ ಮೊದಲೇ ಮದುವೆ ಆಗಿತ್ತಾ? ಅಥವಾ ಸದ್ದಿಲ್ಲದೇ ಮದುವೆ ಆಗಿಬಿಟ್ರಾ? ಒಂದು ಫೋಟೊ ಕೂಡ ಹೊರಗೆ ಬರಲಿಲ್ಲವಲ್ಲ ಅಂತೆಲ್ಲಾ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಆಕೆಯ ಹೊಸ ಇನ್ಸ್ಟಾಗ್ರಾಂ ಪೋಸ್ಟ್. ಆಕೆ ಹಂಚಿಕೊಂಡಿರುವ ಎರಡು ಫೋಟೊಗಳು ಇಂತಾದೊಂದು ಚರ್ಚೆಗೆ ಕಾರಣವಾಗಿದೆ. 4 ದಿನಗಳ ಹಿಂದೆ ಶ್ರೀನಿಧಿ ಶೆಟ್ಟಿ ಎರಡು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಹಳದಿ ಬಣ್ಣದ ಸೆಲ್ವಾರ್‌ನಲ್ಲಿ ಫೋನ್‌ನಲ್ಲಿ ಸೆಲ್ಫಿ ಹಿಡಿದುಕೊಂಡಿದ್ದಾರೆ. ಆದರೆ ಆ ಫೋಟೊಗಳಲ್ಲಿ ಆಕೆಯ ಬೈತಲೆಯಲ್ಲಿ ಸಿಂಧೂರ ಇಟ್ಟುಕೊಂಡಿದ್ದಾರೆ. ಸಾಮಾನ್ಯವಾಗಿ ಮದುವೆಯಾದ ಮಹಿಳೆಯರು ಮಾತ್ರ ಈ ರೀತಿ ಬೈತಲೆಯಲ್ಲಿ ಕುಂಕುಮ ಇಟ್ಟುಕೊಳ್ಳುತ್ತಾರೆ. ಅದೇ ಕಾರಣಕ್ಕೆ ಕೆಲವರು ಶ್ರೀನಿಧಿಗೆ ಮದುವೆ ಆಗಿಬಿಡ್ತಾ?ಎಂದು ಅಚ್ಚರಿ ವ್ಯಕ್ತಪಡಿಸ್ತಿದ್ದಾರೆ.

    ಅಂದಹಾಗೆ ಶ್ರೀನಿಧಿ ಶೆಟ್ಟಿಗೆ ಮದುವೆ ಆಗಿದೆ ಅನ್ನುವುದು ಸುಳ್ಳು. ಆದರೆ ಕೆಲ ಯುವತಿಯರು ಮದುವೆ ಆಗದಿದ್ದರೂ ಬೈತಲೆಗೆ ಕುಂಕುಮ ಇಟ್ಟುಕೊಳ್ಳುತ್ತಾರೆ. ಅದೇ ರೀತಿ ನಟಿ ಶ್ರೀನಿಧಿ ಶೆಟ್ಟಿ ಕೂಡ ಕುಂಕುಮ ಹಚ್ಚಿಕೊಂಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿ ಕ್ಲಾರಿಟಿ ಕೊಡುತ್ತಿದ್ದಾರೆ. ಒಟ್ನಲ್ಲಿ ಆಕೆಯ ಪೋಸ್ಟ್ ಕಾಮೆಂಟ್ ಬಾಕ್ಸ್‌ನಲ್ಲಿ ಈ ಬಗ್ಗೆ ಭಾರೀ ಚರ್ಚೆಯೇ ನಡೆಯುತ್ತಿದೆ. ಈ ಬಗ್ಗೆ ಶ್ರೀನಿಧಿ ಪ್ರತಿಕ್ರಿಯೆ ನೀಡುತ್ತಾರಾ? ಕಾದು ನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 18 ವಯಸ್ಸಿಗೆ ನಾಯಕಿಯಾಗಿ ಬಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ ರವೀನಾ ಟಂಡನ್ ಪುತ್ರಿ

    18 ವಯಸ್ಸಿಗೆ ನಾಯಕಿಯಾಗಿ ಬಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ ರವೀನಾ ಟಂಡನ್ ಪುತ್ರಿ

    ಬಾಲಿವುಡ್‌ನ (Bollywood) ಸ್ಟಾರ್ ಕಲಾವಿದರ ಮಕ್ಕಳು ಒಬ್ಬಬ್ಬರೇ ಸಿನಿರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಇದೀಗ ಈ ಸಾಲಿಗೆ ‘ಕೆಜಿಎಫ್ 2ʼ (KGF 2) ಖ್ಯಾತಿಯ ರವೀನಾ ಟಂಡನ್ ಮುದ್ದಿನ ಮಗಳು ರಾಶಾ ಬಿಟೌನ್‌ಗೆ ಲಗ್ಗೆ ಇಡ್ತಿದ್ದಾರೆ. ಸಾಕಷ್ಟು ದಿನಗಳಿಂದ ರವೀನಾ(Raveena Tandon) ಪುತ್ರಿ ನಟಿಸುತ್ತಾರೆ ಎಂಬ ಸುದ್ದಿಯಿತ್ತು. ಆದರೆ ಯಾರು ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿರಲಿಲ್ಲ. ಆದರೆ ಈಗ ನಾಯಕಿಯಾಗಿ ಮಿಂಚಲು ರಾಶಾಗೆ (Rasha) ವೇದಿಕೆ ಸಿದ್ಧವಾಗಿದೆ.

    ಚಿತ್ರರಂಗದಲ್ಲಿ ನಟ- ನಟಿಯರ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇದೆ. ಇದೀಗ ಮತ್ತೊಬ್ಬ ಸ್ಟಾರ್‌ಕಿಡ್ ನಟನೆಗೆ ಪದಾರ್ಪಣೆ ಮಾಡುವ ಸುದ್ದಿ ಕೇಳಿ ಬರುತ್ತಿದೆ. ಬಾಲಿವುಡ್‌ನ ಜನಪ್ರಿಯ ನಟಿ ರವೀನಾ ಟಂಡನ್ ಮತ್ತು ಅನಿಲ್ ಥಡಾನಿ ಅವರ ಪುತ್ರಿ ರಾಶಾ ಬಾಲಿವುಡ್‌ಗೆ ಎಂಟ್ರಿ ಕೊಡಲು ಸಕಲ ತಯಾರಿ ಮಾಡಿಕೊಂಡೇ ಬರುತ್ತಿದ್ದಾರೆ. ಇದೆಲ್ಲಕ್ಕೂ ಉತ್ತರ ಇಲ್ಲಿದೆ. ಇದನ್ನೂ ಓದಿ:ರಣಬೀರ್- ರಶ್ಮಿಕಾ ನಟನೆಯ ‘ಅನಿಮಲ್’ ಸಿನಿಮಾದ ನ್ಯೂ ರಿಲೀಸ್ ಡೇಟ್ ಅನೌನ್ಸ್

    ರಾಶಾಗೆ ಈಗ 18ರ ಹರೆಯ. ಈಕೆ ಈಗ ತಾಯಿ ರವೀನಾ ಅವರಂತೆಯೇ ಸಾಗಲು ಸಿದ್ಧತೆ ನಡೆಸಿದ್ದಾಳೆ. ರವೀನಾ ಅವರ ಮಗಳು ಸದ್ಯ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೇ ಇದ್ದರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ನಿರ್ದೇಶಕ ಅಭಿಷೇಕ್ ಕಪೂರ್ ತಮ್ಮ ಮುಂದಿನ ಚಿತ್ರದಲ್ಲಿ, ರವೀನಾ ಟಂಡನ್ ಮತ್ತು ಅನಿಲ್ ಥಡಾನಿ ಅವರ ಪುತ್ರಿ ರಾಶಾ ಅವರನ್ನು ಪರಿಚಯಿಸಲಿದ್ದಾರೆ. ಇದೊಂದು ಅಡ್ವೆಂಚರ್- ಆ್ಯಕ್ಷನ್ ಓರಿಯೆಂಟೆಡ್ ಚಿತ್ರವಾಗಿದ್ದು, ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಇನ್ನೂ ಅಜಯ್ ದೇವಗನ್ ಅವರ ಸೋದರಳಿಯ ಅಮನ್ ದೇವಗನ್ ಕೂಡ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಅಜಯ್ ದೇವಗನ್ ಅವರು ಹಿಂದೆಂದೂ ಮಾಡಿರದಂಥ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

    ಅಮನ್ ದೇವಗನ್- ರಾಶಾ ಅವರು ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕಿನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಆದರೆ ಮುಂದಿನ ವರ್ಷ ಫೆ.9ರಂದು ಸಿನಿಮಾ ರಿಲೀಸ್ ತೆರೆಗೆ ಬರುವ ಬಗ್ಗೆ ಚಿತ್ರತಂಡ ತಿಳಿಸಿದೆ. ರೋನಿ ಸ್ಕ್ರೀವ್‌ವಾಲಾ ಮತ್ತು ಪ್ರಾಗ್ಯಾ ಕಪೂರ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಒಟ್ನಲ್ಲಿ ಮಗಳ ಸಿನಿಮಾ ಲಾಂಚ್ ಬಗ್ಗೆ ರವೀನಾ ದಂಪತಿಗೆ ಖುಷಿಕೊಟ್ಟಿದೆ. ಸದ್ಯದಲ್ಲೇ ಈ ಬಗ್ಗೆ ಮತ್ತಷ್ಟು ಮಾಹಿತಿ ಸಿಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]