Tag: KGF-2

  • Toxic: ಯಶ್‌ಗೆ ಜೋಡಿಯಾಗಿ ಕನ್ನಡಕ್ಕೆ ಬರುತ್ತಿದ್ದಾರೆ ಕರೀನಾ

    Toxic: ಯಶ್‌ಗೆ ಜೋಡಿಯಾಗಿ ಕನ್ನಡಕ್ಕೆ ಬರುತ್ತಿದ್ದಾರೆ ಕರೀನಾ

    ನ್ಯಾಷನಲ್ ಸ್ಟಾರ್ ಯಶ್ ಅವರ 19ನೇ ಸಿನಿಮಾ ಯಾವುದು ಎಂಬುದಕ್ಕೆ ಈಗಾಗಲೇ ಉತ್ತರ ಸಿಕ್ಕಿದೆ. ‘ಕೆಜಿಎಫ್ 2’ ಸಕ್ಸಸ್ ಬಳಿಕ ‘ಟಾಕ್ಸಿಕ್’ (Toxic) ಚಿತ್ರಕ್ಕೆ ಯಶ್ (Yash) ಕೈಹಾಕಿದ್ದಾರೆ. ಈಗ ಚಿತ್ರದ ನಾಯಕಿ ಬಗ್ಗೆ ಚರ್ಚೆ ಶುರುವಾಗಿದೆ. ಯಶ್ ಸಿನಿಮಾದಲ್ಲಿ ಕರೀನಾ ಕಪೂರ್ (Kareena Kapoor) ಕನ್ನಡಕ್ಕೆ ಬರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:ಮಗು ಬಗ್ಗೆ ಸುಳಿವು ಕೊಟ್ಟ ದೀಪಿಕಾ ಪಡುಕೋಣೆ

    ಇದೇ ತಿಂಗಳು ಜನವರಿ 8ಕ್ಕೆ ಯಶ್ ಹುಟ್ಟುಹಬ್ಬವಿದೆ. ಅದೇ ದಿನ ‘ಟಾಕ್ಸಿಕ್’ ಚಿತ್ರದ ಟೀಸರ್ ರಿಲೀಸ್ ಮಾಡುವ ಬಗ್ಗೆ ಟಾಕ್ ಇದೆ. ಇದರ ಜೊತೆಗೆ ಈ ಚಿತ್ರಕ್ಕೆ ಬಾಲಿವುಡ್ ನಟಿಗೆ ಚಿತ್ರತಂಡ ಮಣೆ ಹಾಕುತ್ತಿದ್ದಾರೆ.

    ಸಂದರ್ಶನವೊಂದರಲ್ಲಿ ನಾನು ‘ಕೆಜಿಎಫ್’ (KGF) ಗರ್ಲ್ ಎಂದು ಯಶ್ ಬಗ್ಗೆ ಹಾಡಿಹೊಗಳಿದ್ದ ನಟಿ ಕರೀನಾ ಕಪೂರ್, ಈ ಹೇಳಿಕೆ ನೀಡಿದ ಒಂದೇ ತಿಂಗಳಲ್ಲೇ ಗುಡ್ ನ್ಯೂಸ್ ಸಿಕ್ಕಿದೆ. ಯಶ್ ಸಿನಿಮಾಗೆ ಕರೀನಾ ಕಪೂರ್ ಸಾಥ್ ನೀಡೋದು ಖಚಿತ ಎಂಬ ಸುದ್ದಿ ಇದೆ.

    ‘ಕೆಜಿಎಫ್’ ಸೀರಿಸ್ ಬಳಿಕ ಯಶ್ ಟಾಕ್ಸಿಕ್ ಹೇಗೆ ಕಾಣಿಸಿಕೊಳ್ಳಬಹುದು? ಲುಕ್ ಹೇಗಿರುತ್ತೆ? ಇಂತಹದ್ದೇ ಒಂದಿಷ್ಟು ಪ್ರಶ್ನೆಗಳು ಎದ್ದಿದ್ದವು. ಯಶ್ ಬರ್ತ್‌ಡೇಯಂದು ‘ಟಾಕ್ಸಿಕ್’ ಟೀಮ್ ಸರ್ಪ್ರೈಸ್ ಕೊಡಬಹುದು ಎಂಬ ನಿರೀಕ್ಷೆಯಿದೆ. ಇದೇ ದಿನ ಕರೀನಾ ಕಪೂರ್ ಬಗ್ಗೆ‌ ಕೂಡ ಸಿನಿಮಾ ತಂಡ ಏನಾದರೂ ಬಿಗ್ ಅಪ್‌ಡೇಟ್ ಕೊಡುತ್ತಾ ಕಾದುನೋಡಬೇಕಿದೆ.

  • ಪರಿಧಿಯೇ ಇಲ್ಲದ ಪ್ರೀತಿ, ನಿಷ್ಕಲ್ಮಶ ನಗು- ನ್ಯೂ ಇಯರ್‌ಗೆ ಯಶ್ ದಂಪತಿ ವಿಶ್ಸ್

    ಪರಿಧಿಯೇ ಇಲ್ಲದ ಪ್ರೀತಿ, ನಿಷ್ಕಲ್ಮಶ ನಗು- ನ್ಯೂ ಇಯರ್‌ಗೆ ಯಶ್ ದಂಪತಿ ವಿಶ್ಸ್

    ನ್ಯಾಷನಲ್ ಸ್ಟಾರ್ ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ತಮ್ಮ ಅಭಿಮಾನಿಗಳಿಗೆ ವಿಶೇಷವಾಗಿ ಶುಭಕೋರಿದ್ದಾರೆ. ಹೊಸ ವರ್ಷಕ್ಕೆ ಚೆಂದದ ಫೋಟೋ ಶೇರ್ ಮಾಡುವ ಮೂಲಕ ಯಶ್ ದಂಪತಿ ಸ್ಪೆಷಲ್‌ ಆಗಿ ವಿಶ್ಸ್ ತಿಳಿಸಿದ್ದಾರೆ.

    ಕುಟುಂಬ ಜೊತೆಗಿನ ಸಂಭ್ರಮದ ಫೋಟೋಗಳನ್ನ ಹಂಚಿಕೊಂಡು ಸ್ಪೆಷಲ್ ಆಗಿ ಶುಭಕೋರಿದ್ದಾರೆ. ಪರಿಧಿಯೇ ಇಲ್ಲದ ಪ್ರೀತಿ, ನಿಷ್ಕಲ್ಮಶ ನಗು, ಕನಸುಗಳನ್ನು ಸಾಕಾರಗೊಳಿಸಬಲ್ಲದು ಎಂದು ಯಶ್ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಕುಟುಂಬದಿಂದ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

    ಯಶ್ ಕಪ್ಪು ಬಣ್ಣದ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿದ್ರೆ, ಮೆರುನ್ ಬಣ್ಣದ ಡ್ರೆಸ್‌ನಲ್ಲಿ ರಾಧಿಕಾ ಪಂಡಿತ್ ಮಿಂಚಿದ್ದಾರೆ. ಇದನ್ನೂ ಓದಿ:ದಳಪತಿ ವಿಜಯ್ ನಟನೆಯ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್

    ಇನ್ನೂ ಯಶ್ ಕುಟುಂಬದಲ್ಲಿ ಪ್ರತಿ ಹಬ್ಬವನ್ನು ಸಡಗರದಿಂದ ಆಚರಿಸಿಕೊಳ್ಳುತ್ತಾರೆ. ಹಬ್ಬದ ಸಂಭ್ರಮದ ಫೋಟೋಗಳನ್ನ ನಟಿ ರಾಧಿಕಾ ಪಂಡಿತ್ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

    ಇತ್ತೀಚೆಗೆ ‘ಟಾಕ್ಸಿಕ್’ (Toxic Film) ಚಿತ್ರದ ಅಪ್‌ಡೇಟ್ ಅನ್ನು ಯಶ್ ಹಂಚಿಕೊಂಡಿದ್ದರು. ಈ ಮೂಲಕ ಯಶ್ 19 ಸಿನಿಮಾ ಯಾವುದು ಎಂಬುದಕ್ಕೆ ತೆರೆಯೆಳೆದಿದ್ದರು. ‘ಕೆಜಿಎಫ್ 2’ (KGF 2) ನಂತರ ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿಸಿದೆ.

  • ‘ಸಲಾರ್‌’ ಫಸ್ಟ್‌ ಸಾಂಗ್‌ ಔಟ್-‌ ಮತ್ತೆ ಮ್ಯಾಜಿಕ್‌ ಮಾಡ್ತು ಬಸ್ರೂರ್‌ ಮ್ಯೂಸಿಕ್‌

    ‘ಸಲಾರ್‌’ ಫಸ್ಟ್‌ ಸಾಂಗ್‌ ಔಟ್-‌ ಮತ್ತೆ ಮ್ಯಾಜಿಕ್‌ ಮಾಡ್ತು ಬಸ್ರೂರ್‌ ಮ್ಯೂಸಿಕ್‌

    ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್- ಪ್ರಭಾಸ್ ಕಾಂಬಿನೇಷನ್‌ನ ‘ಸಲಾರ್’ (Salaar) ಸಿನಿಮಾದ ಮೊದಲ ಹಾಡು ಇಂದು ಬಿಡುಗಡೆ ಆಗಿದೆ. ಒಟ್ಟು ಐದು ಭಾಷೆಗಳಲ್ಲಿ ಹಾಡು ಬಿಡುಗಡೆಯಾಗಿದೆ. ಮೊದಲ ಹಾಡಿಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಪೃಥ್ವಿರಾಜ್-ಪ್ರಭಾಸ್ (Prabhas) ಹಾಡು ಫ್ಯಾನ್ಸ್‌ಗೆ ಮೋಡಿ ಮಾಡಿದೆ.

    ‘ಆಕಾಶ ಗಡಿಯದಾಟಿ ತಂದಾನೋ ಬೆಳಕ ಕೋಟಿ’ ಎಂಬ ಹಾಡು ಕೆಜಿಎಫ್ ಸಾಂಗ್ ನೆನಪಿಸಿದೆ. ಸಲಾರ್‌ನಲ್ಲೂ ತಾಯಿ- ಮಗನ ಬಾಂಧವ್ಯ ತೋರಿಸಲಾಗಿದೆ. ಇಲ್ಲೂ ಕೆಜಿಎಫ್ ರವಿ ಬಸ್ರೂರು ಮ್ಯೂಸಿಕ್ ಮ್ಯಾಜಿಕ್ ಮಾಡಿದೆ. ಒಟ್ನಲ್ಲಿ ಸಲಾರ್ ಫಸ್ಟ್ ಸಾಂಗ್ ಅಭಿಮಾನಿಗಳಿಗೆ ಕಿಕ್ ಕೊಟ್ಟಿರೋದಂತೂ ನಿಜ.

    ಪ್ರಭಾಸ್ ಅಲ್ಲದೇ, ‘ಸಲಾರ್’ (Salaar) ಸಿನಿಮಾದಲ್ಲಿ ಮಲಯಾಳಂನ ಹೆಸರಾಂತ ನಟ ಪೃಥ್ವಿರಾಜ್ ಸುಕುಮಾರನ್ ಹೊಸಬಗೆಯ ಪಾತ್ರ ಮಾಡಿದ್ದಾರೆ. ಐದು ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬಂದಿದ್ದು ವಿಶೇಷವೆಂದರೆ ತಮ್ಮ ಪಾತ್ರಕ್ಕೆ ಐದೂ ಭಾಷೆಗಳಲ್ಲಿ ತಾವೇ ಡಬ್ ಮಾಡಿದ್ದಾರಂತೆ ಪೃಥ್ವಿರಾಜ್. ಇದನ್ನೂ ಓದಿ:Yash: ‘ಟಾಕ್ಸಿಕ್’ಗೆ ಶೃತಿ ಹಾಸನ್, ಜೆರೆಮಿಸ್ಟಾಕ್ ಸಾಥ್

    ಈಗಾಗಲೇ ಸಿನಿಮಾ ರಿಲೀಸ್‌ಗೆ ಸರ್ವಸಿದ್ಧತೆ ನಡೆದಿದೆ. ಈ ನಡುವೆ ಸಲಾರ್ ಸಿನಿಮಾಗೆ ಪ್ರಾದೇಶಿಕ ಸೆನ್ಸಾರ್ ಮಂಡಳಿಯ ಪ್ರಮಾಣ ಪತ್ರವನ್ನು ನೀಡಿದೆ. ತೀವ್ರಗತಿಯ ಸಾಹಸ ಸನ್ನಿವೇಶಗಳು ಇರುವ ಕಾರಣದಿಂದಾಗಿ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರವನ್ನು ಸೆನ್ಸಾರ್ ಮಂಡಳಿ ನೀಡಿದೆ. ಭಾರತದಲ್ಲಿನ ಪ್ರದರ್ಶನಕ್ಕಾಗಿ ‘ಎ’ ಮತ್ತು ಹೊರ ದೇಶದಲ್ಲಿನ ಪ್ರದರ್ಶನಕ್ಕಾಗಿ ಯು/ಎ ಪ್ರಮಾಣ ಪತ್ರ ಸಿಕ್ಕಿದೆ ಎನ್ನಲಾಗುತ್ತಿದೆ. ಸಿನಿಮಾದ ಒಟ್ಟು ಅವಧಿ 2 ಗಂಟೆ 55 ನಿಮಿಷ ಎಂದು ಹೇಳಲಾಗುತ್ತಿದೆ.

    ನಾನಾ ಕಾರಣಗಳಿಂದಾಗಿ ಸಿನಿಮಾ ಕುತೂಹಲ ಮೂಡಿಸಿದೆ. ಡಾರ್ಲಿಂಗ್ ಪ್ರಭಾಸ್ ನಾಯಕತ್ವದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಮೊನ್ನೆಯಷ್ಟೇ ‘ಸಲಾರ್’ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಫ್ರೆಂಡ್‌ಶಿಪ್ ಜೊತೆ ಸೇಡಿನ ಕಥೆ ಹೊಂದಿರುವ ಈ ಸಿನಿಮಾದಲ್ಲಿ ರಕ್ತ ಸಿಕ್ತವಾಗಿ ಪ್ರಭಾಸ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್‌ಗೆ ನಾಯಕಿಯಾಗಿ ಶ್ರುತಿ ಹಾಸನ್ (Shruti Haasan) ನಟಿಸಿದ್ದಾರೆ. 3 ನಿಮಿಷ 47 ಸೆಕೆಂಡ್ ಇರುವ ಈ ಟ್ರೈಲರ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಆ ಟ್ರೈಲರ್ ನೋಡಿದಾಗಲೇ ಚಿತ್ರಕ್ಕೆ ಯಾವ ಪ್ರಮಾಣ ಪತ್ರ ಸಿಗಬಹುದು ಎಂದು ಅಂದಾಜಿಸಲಾಗಿತ್ತು.

  • Yash 19: ಮುಂದಿನ ಚಿತ್ರದ ಬಗ್ಗೆ ಯಶ್ ಪ್ರತಿಕ್ರಿಯೆ

    Yash 19: ಮುಂದಿನ ಚಿತ್ರದ ಬಗ್ಗೆ ಯಶ್ ಪ್ರತಿಕ್ರಿಯೆ

    ನ್ಯಾಷನಲ್ ಸ್ಟಾರ್ ಯಶ್ (Yash) ಅವರು ಯಶ್ 19 ಸಿನಿಮಾ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಅವರ ಮುಂದಿನ ಚಿತ್ರದ ಅಪ್‌ಡೇಟ್‌ಗಾಗಿ ಪ್ರೇಕ್ಷಕರು ಕಳೆದ ಒಂದೂವರೆ ವರ್ಷದಿಂದ ಕಾಯುತ್ತಿದ್ದಾರೆ. ಹೀಗಿರುವಾಗ ತಮ್ಮ ಮುಂದಿನ ಚಿತ್ರದ ಬಗ್ಗೆ ಯಶ್ ಪ್ರತಿಕ್ರಿಯೆ ನೀಡಿದ್ದಾರೆ.

    ಯಶ್ ಸಮಾರಂಭವೊಂದರಲ್ಲಿ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ, ನನಗೆ ನಿಮ್ಮ ಕಾತರ ಅರ್ಥವಾಗುತ್ತದೆ. ನನ್ನನ್ನು ದೊಡ್ಡದಾಗಿ ಬೆನ್ನುತಟ್ಟಿದ್ದೀರ. ಆದರೆ ನಾನು ಸುಮ್ಮನೆ ಕೂತಿಲ್ಲ. ನಾನು ರಿಲ್ಯಾಕ್ಸ್ ಆಗುತ್ತಿಲ್ಲ. ಬದಲಿಗೆ ದೊಡ್ಡ ಮಟ್ಟದ ಕೆಲಸಕ್ಕೆ ಸಿದ್ಧತೆ ಮಾಡಿಕೊಳ್ಳುತ್ತೇನೆ. ಸಾಧಾರಣವಾದ ಕೆಲಸ ಮಾಡಲು ನನಗೆ ಇಷ್ಟವಿಲ್ಲ, ಎಲ್ಲರೂ ಹೆಮ್ಮೆ ಪಡುವಂತಹ ಕೆಲಸವನ್ನೇ ಮಾಡುತ್ತೇನೆ ಎಂದು ಯಶ್ ಮಾತನಾಡಿದ್ದಾರೆ.

    ಖಂಡಿತಾ ಸಿನಿಮಾ ಬಗ್ಗೆ ಅಪ್‌ಡೇಟ್ ಕೊಡುತ್ತೀನಿ. ಎಲ್ಲ ಊಟ ರೆಡಿಯಾದ ಮೇಲೆ ಬಡಿಸಿದರೇನೆ ಚೆಂದ. ಅರ್ಧಂಬರ್ಧ ಅಡುಗೆ ಮಾಡಿ ಊಟಕ್ಕೆ ಕರೆಯುವುದು ಸರಿ ಹೋಗುವುದಿಲ್ಲ. ನೀವೆಲ್ಲರೂ ಹೆಮ್ಮೆ ಪಡುವಂತಹ ಕೆಲಸ ಮಾಡುತ್ತೀನಿ ಎಂದು ಯಶ್ ಖುಷಿಯಿಂದ ಮಾತನಾಡಿದ್ದಾರೆ. ಇದನ್ನೂ ಓದಿ:ಮಾನ್ವಿತಾ ನಟನೆಯ ‘ಒನ್ ಅಂಡ್ ಆಫ್’ ಚಿತ್ರದ ಫಸ್ಟ್‌ ಲುಕ್‌ ಔಟ್‌

    ಕೆಜಿಎಫ್, ಕೆಜಿಎಫ್ 2 (KGF2) ಸಕ್ಸಸ್ ನಂತರ ಯಶ್ 19 ಚಿತ್ರ ಕೂಡ ಯಶಸ್ಸು ಕಾಣಲೇಬೇಕು ಅಂತ ರಾಕಿಭಾಯ್ ಪಣ ತೊಟ್ಟಿದ್ದಾರೆ. ಗೆಲುವಿನ ರುಚಿ ನೋಡಿರೋ ಯಶ್ ತಮ್ಮ ಮುಂದಿನ ಚಿತ್ರಕ್ಕೆ ಸಕಲ ಸಿದ್ಧತೆ ಮಾಡಿಕೊಂಡೇ ಮತ್ತೆ ಅಖಾಡಕ್ಕೆ ಇಳಿಯಲಿದ್ದಾರೆ. ಅಲ್ಲಿಯವರೆಗೂ ಕಾಯಬೇಕಿದೆ.

  • Yash 19: ದೀಪಾವಳಿಯಂದು ಯಶ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್

    Yash 19: ದೀಪಾವಳಿಯಂದು ಯಶ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್

    8000 ಕಿಲೋಮೀಟರ್ ಯಶ್ (Yash) ಪ್ರಯಾಣ ಯಾರಿಗಾಗಿ? ಯಾಕಾಗಿ? 40 ರಿಂದ 50 ದಿನಗಳ ವೃತ ಆ ಊರಲ್ಲಿ ಯಾರ ಜೊತೆಯಲ್ಲಿ? ಶ್ರೀಲಂಕಾದಲ್ಲಿ ಅದೇನು ಕೆಲಸ ರಾಕಿಂಗ್ ಸ್ಟಾರ್‌ಗೆ? ಹಗಲು-ರಾತ್ರಿ ಯಶ್ ಹಾಕಿಕೊಂಡಿರುವ ಗುರಿ ಮುಂದು. ಕಳೆದ ಕೆಲ ದಿನಗಳಲ್ಲಿ ರಾಕಿಂಗ್ ಸ್ಟಾರ್ ಎಲ್ಲೆಲ್ಲಿಗೆ ಹೋಗಿ ಬಂದ್ರು? ಯಾರನ್ನ ಭೇಟಿ ಮಾಡಿದ್ರು? ರಾಮಾಚಾರಿಯ ಈ ಶರವೇಗದ ಓಟದ ಹಿಂದಿರುವ ಅಸಲಿ ಕತೆ ಏನು? ಇಲ್ಲಿದೆ ಮಾಹಿತಿ.

    ಕೆಜಿಎಫ್ (KGF) ಹಿಟ್ ಆಯ್ತು, ಮತ್ಯಾಕೆ ಸಿನಿಮಾ ಅನೌನ್ಸ್ ಮಾಡ್ತಿಲ್ಲ ಜನ ಕೇಳ್ತಿದ್ದಾರೆ. ನಿರ್ಮಾಪಕರು ಸೂಟ್ ಕೇಸ್ ಹಿಡಿದು ವೆಸ್ಟ್ಎಂಡ್ ಯಶ್ ಆಫೀಸ್‌ಗೆ ಸುತ್ತಿ ಸುತ್ತಿ ಸುಸ್ತಾಗಿದ್ದಾರೆ. ಯಾವ ಪ್ರಶ್ನೆಗಳನ್ನೂ ಯಶ್ ತಮ್ಮ ಕೋಟೆಯೋಳಗೆ ಬಿಟ್ಟು ಕೊಂಡಿಲ್ಲ ಯಾರ ಸೂಟ್‌ಕೇಸ್‌ನಿಂದಲೂ ರಾಕಿಂಗ್ ಸ್ಟಾರ್ ಒಂದು ಕಿಲುಬು ಕಾಸು ಎತ್ತಿಕೊಂಡಿಲ್ಲ. ಕಾರಣ ಮೊದಲು ಕತೆ ರೆಡಿಯಾಗಬೇಕು. ಒಳ್ಳೆಯ ಕತೆಗೆ ಮಾತ್ರ ಗೆಲ್ಲೋ ಯೋಗ್ಯತೆ ಇರೋದು ಅನ್ನೊ ಸತ್ಯದ ಬೆನ್ನು ಬಿದ್ದಿದ್ದಾರೆ. ಈಗ ಎಲ್ಲವೂ ಫೈನಲ್ ಆಗಿದೆ. ಹೊಸ ಹೆಜ್ಜೆಗೆ ಯಶ್ ಮುನ್ನುಡಿ ಬರೆದಾಗಿದೆ. ಇದನ್ನೂ ಓದಿ:ಬೆಂಗಳೂರು ಕಂಬಳಕ್ಕೆ ಬರಲಿದ್ದಾರೆ ಅನುಷ್ಕಾ ಶೆಟ್ಟಿ, ಐಶ್ವರ್ಯಾ ರೈ

    ಯಶ್ 19 (Yash 19) ಸಿನಿಮಾದ ಫಸ್ಟ್ ಲುಕ್ ರೆಡಿಯಾಗಿ 2-3 ತಿಂಗಳಾಗಿದೆ. ಟೈಟಲ್ ಟೀಸರ್ ರೆಡಿಯಾಗಿ ಬಹಳ ದಿನಗಳಾಗಿವೆ. ಯಶ್ ಅದನ್ನ ಮತ್ತೆ ಮತ್ತೆ ಕಣ್ಣರಳಿಸಿ ನೋಡ್ತಿದ್ದಾರೆ. ಕಾರಣ ಒಂದು ಸಣ್ಣ ತಪ್ಪು ಕೂಡ ತಂಡದ ಕಡೆಯಿಂದ ಆಗಬಾರದು ಅಂತ. ಈಗ ಆಕಾಶ ತಿಳಿಯಾಗಿದೆ ಮುಂದೊಂದು ಮಹಾಮಳೆಗೆ ಬಾನು ಸಜ್ಜಾಗಿದೆ. ಯಶ್ ಸುಮಾರು 25 ದಿನ ಲಂಡನ್‌ನಲ್ಲಿ ಬೀಡು ಬಿಟ್ಟಿದ್ರು. ವಿದೇಶದಲ್ಲಿರುವ ಹಲವು ಟೆಕ್ನಿಷಿಯನ್ಸ್ ಭೇಟಿ ಮಾಡಿದ್ರು. ಮುಂದಿನ ಸಿನಿಮಾಗೆ ಬೇಕಾಗಿರುವ ಪೂರ್ವ ಭಾವಿ ತಯಾರಿ ಮಾಡಿಕೊಂಡ್ರು. 25 ದಿನದ ಜರ್ನಿಯಲ್ಲಿ ಒಂದು ಫೋಟೋ ಶೇರ್ ಮಾಡಲಿಲ್ಲ. ಒಬ್ಬರ ಹೆಸರು ರಿವಿಲ್ ಮಾಡಲಿಲ್ಲ. ಕಾರಣ ನಾವು ಮಾತಾಡೋದಲ್ಲ ನಮ್ಮ ಸಿನಿಮಾ ಮಾತಾಡ್ಬೇಕು ಅನ್ನೊ ಯಶ್ ನಿಲುವು. ಅಲ್ಲಿಂದ ರಾಕಿಭಾಯ್ ಪಯಣ ಸೀದಾ ಶ್ರೀಲಂಕಾಗೆ.

    ಲಂಡನ್‌ನಲ್ಲಿ ಕೆಲಸ ಮುಗಿಸಿ ಮನೆಗೆ ಬಂದು ಮಡದಿ, ಮಕ್ಕಳ ಮುಖ ನೋಡಿ ಮತ್ತೆ ಸೂಟ್‌ಕೇಸ್ ಜೊತೆ ಶ್ರೀಲಂಕಾಗೆ ಫ್ಲೈಟ್ ಹತ್ತಿದ್ರು. ಸುಮಾರು 15 ದಿನ ಶ್ರೀಲಂಕಾದಲ್ಲಿ ತಮ್ಮ ಮುಂದಿನ ಸಿನಿಮಾಗೆ ಬೇಕಾದ ಲೊಕೇಷನ್ ಫೈನಲ್ ಮಾಡಿಕೊಂಡಿ ಬಂದಿದ್ದಾರೆ. ಇದ್ರ ಜೊತೆ ಮಲೇಷಿಯಾದಲ್ಲಿ ಸ್ವಲ್ಪ ದಿನ ಸುತ್ತಾಡಿದ್ರು. ಅದು ಒಂದು ಶಾಪ್ ಓಪನಿಂಗ್ ವಿಚಾರ ಅಷ್ಟೇ ಅಂತಾರೆ ಯಶ್ ಆಪ್ತರು. ಆದ್ರೆ ಅಲ್ಲೂ ಒಂದಿಷ್ಟು ಸಿನಿಮಾ ಕೆಲಸಗಳನ್ನ ಮಾಡಿದ್ದಾರೆ ಅಂತಿದೆ ನಮ್ಮ ಮೂಲಗಳು.

    ಸದ್ಯ ಗೋವಾದಲ್ಲಿ ಬೀಡು ಬಿಟ್ಟಿದ್ದಾರೆ ಯಶ್. ಸಿನಿಮಾ ಕೆಲಸ ಶುರು ಮಾಡುವ ಮೊದಲು ಒಂದು ಸಣ್ಣ ರಿಲ್ಯಾಕ್ಸ್ ಮಾಡ್ತಿದ್ದಾರೆ. ಮಂಗಳವಾರ ಅಥವಾ ಬುಧವಾರ ಬೆಂಗಳೂರಿಗೆ ವಾಪಸ್ ಬರ್ತಾರೆ. ದೀಪಾವಳಿಗೆ ಸಿನಿಮಾ ಅನೌನ್ಸ್ ಮಾಡ್ತಾರೆ ಫ್ಯಾನ್ಸ್ ಪಟಾಕಿ ಹಚ್ಚುವ ಸುದ್ದಿ ಕೊಡ್ತಾರೆ. ಈ ಬಾರಿಯ ಯಶ್ ಹೋರಾಟ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಅಂತಿದೆ ಯಶ್ ಬಳಗ.

  • ರಾಕಿಭಾಯ್ ಅಭಿಮಾನಿಗಳಿಗೆ ಬುಧವಾರಕ್ಕೆ ಗುಡ್ ನ್ಯೂಸ್

    ರಾಕಿಭಾಯ್ ಅಭಿಮಾನಿಗಳಿಗೆ ಬುಧವಾರಕ್ಕೆ ಗುಡ್ ನ್ಯೂಸ್

    ರಾಕಿಭಾಯ್ ಯಶ್ ಅಭಿಮಾನಿಗಳಿಗೆ ನವೆಂಬರ್ 1 ವಿಶೇಷ ದಿನವಾಗಲಿದೆ. ಕನ್ನಡ ರಾಜ್ಯೋತ್ಸವದ ದಿನದಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಗಲಿದೆ ಎಂದು ಹೇಳಲಾಗಿತ್ತು. ಆದರೆ, ಅದರ ಬದಲಾಗಿ ಕೆಜಿಎಫ್ 2 ಸಿನಿಮಾ ರೀ ರಿಲೀಸ್ ಆಗುತ್ತಿದೆ. ಬೆಂಗಳೂರಿನ ಆಯ್ದ ಕೆಲವು ಚಿತ್ರಮಂದಿರಗಳಲ್ಲಿ ಕೆಜಿಎಫ್ 2 ಚಿತ್ರವನ್ನು ಮರುಬಿಡುಗಡೆ ಮಾಡಲಾಗಿತ್ತು. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಕೂಡ ಶುರುವಾಗಿದೆ.

    ಅಂದುಕೊಂಡಂತೆ ಆಗಿದ್ದರೆ, ನವೆಂಬರ್ (November) ಒಂದಕ್ಕೆ ಯಶ್ (Yash) ನಟನೆಯ ಹೊಸ ಸಿನಿಮಾದ (New Movie) ಅಪ್ ಡೇಟ್ ಸಿಗಲಿದೆ ಎನ್ನುವ ಮಾಹಿತಿ ಇತ್ತು. ಚಿತ್ರದ ಟೈಟಲ್ (Title) ಮತ್ತು ಟೀಸರ್ ಅನ್ನು ಏಕಕಾಲಕ್ಕೆ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿತ್ತು. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಲಿದ್ದು, ಕನ್ನಡ ರಾಜ್ಯೋತ್ಸವಕ್ಕೆ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಸಿಗಲಿದೆ ಎನ್ನುವ ಸುದ್ದಿ ಇತ್ತು. ಅದೀಗ ಪೋಸ್ಟ್ ಪಾನ್ ಆಗಿದೆ. ದೀಪಾವಳಿಗೆ ಈ ಎಲ್ಲ ಮಾಹಿತಿ ಹೊರ ಬೀಳಲಿವೆ ಎನ್ನುವುದು ಸದ್ಯದ ವರ್ತಮಾನ.

    ಯಶ್ ನಟನೆಯ ಹೊಸ ಸಿನಿಮಾದ ಅಪ್ ಡೇಟ್ ಬಗ್ಗೆ ಅಭಿಮಾನಿಗಳು ಹಲವು ತಿಂಗಳಿಂದ ಕಾಯುತ್ತಲೇ ಇದ್ದಾರೆ. ಈಗಾಗಲೇ ಹಲವು ವಿಷಯಗಳು ಗಾಂಧಿನಗರದಲ್ಲಿ ಹರಿದಾಡುತ್ತಿದ್ದರೂ, ಅವು ಯಾವವೂ ಅಧಿಕೃತ ಮಾಹಿತಿಯಲ್ಲ. ದೀಪಾವಳಿಗೆ (Deepavali) ಯಶ್ ನಟನೆಯ ಹೊಸ ಸಿನಿಮಾ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಸರ್ವ ಸಿದ್ಧತೆಯನ್ನು ಟೀಮ್ ಮಾಡಿಕೊಂಡಿದೆ.

    ಅಧಿಕೃತ ಮಾಹಿತಿಯನ್ನು ಯಶ್ ಹಂಚಿಕೊಳ್ಳದೇ ಇದ್ದರೂ ಚಿತ್ರದ ನಿರ್ದೇಶಕರು, ನಿರ್ಮಾಣ ಸಂಸ್ಥೆ, ನಾಯಕಿಯ ಹೆಸರು ಎಲ್ಲವೂ ಒಂದೊಂದೆ ಆಚೆ ಬಂದಿವೆ. ಅವೆಲ್ಲವೂ ಎಷ್ಟು ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೂ, ದಿನಕ್ಕೊಂದು ಮಾಹಿತಿಯಂತೂ ಸಿಗುತ್ತಿದೆ. ಅದನ್ನು ಓದಿಕೊಂಡು, ಕೇಳಿಕೊಂಡು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

    ಮೊನ್ನೆಯಷ್ಟೇ ಸಿನಿಮಾದ ನಾಯಕಿಯ ಹೆಸರು ಬಹಿರಂಗವಾಗಿತ್ತು. ಇದೀಗ ಸಿನಿಮಾದ ಶೂಟಿಂಗ್ ವಿವರಗಳು ಸಿಗುತ್ತಿವೆ. ಈಗಾಗಲೇ ಕಥೆ ಲಾಕ್ ಆಗಿದ್ದು, ಅಕ್ಟೋಬರ್ ನಲ್ಲಿ ಅಧಿಕೃತ ಘೋಷಣೆ ಮಾಡಿ, ಡಿಸೆಂಬರ್ 23ರಿಂದ ಚಿತ್ರೀಕರಣಕ್ಕೆ ಹೋಗಲು ಚಿತ್ರತಂಡ ರೆಡಿಯಾಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಟ್ವಿಟರ್ ನಲ್ಲಿ ಈ ವಿಷಯ ಟ್ರೆಂಡಿಂಗ್ ನಲ್ಲಿಯೂ ಇತ್ತು.

     

    ಈ ಚಿತ್ರಕ್ಕೆ ನಾಯಕಿಯಾಗಿ ಮಲಯಾಳಂ ನಟಿ ಸಂಯುಕ್ತಾ ಮೆನನ್ (Samyukta Menon)  ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಚಿತ್ರತಂಡದಿಂದ ಯಾವುದೇ ಮಾಹಿತಿ ಹೊರ ಬರದಿದ್ದರೂ, ಸಂಯುಕ್ತಾ ಹೆಸರು ಮಾತ್ರ ಜೋರಾಗಿ ಕೇಳಿ ಬರುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಶ್‌ಗೂ ಮುನ್ನ ಹೊಸ ಸಿನಿಮಾ ಅನೌನ್ಸ್ ಮಾಡಿದ ಶ್ರೀನಿಧಿ ಶೆಟ್ಟಿ

    ಯಶ್‌ಗೂ ಮುನ್ನ ಹೊಸ ಸಿನಿಮಾ ಅನೌನ್ಸ್ ಮಾಡಿದ ಶ್ರೀನಿಧಿ ಶೆಟ್ಟಿ

    ಕೆಜಿಎಫ್ ಬ್ಯೂಟಿ ಶ್ರೀನಿಧಿ ಶೆಟ್ಟಿ (Srinidhi Shetty) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಯಶ್‌ಗೂ (Yash)  ಮುನ್ನ ಹೊಸ ಚಿತ್ರದ ಬಗ್ಗೆ ಶ್ರೀನಿಧಿ ಶೆಟ್ಟಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಕೆಜಿಎಫ್ 2 ರಿಲೀಸ್ ಬಳಿಕ ಈಗ ಹೊಸ ಚಿತ್ರದ ಮೂಲಕ ಮೋಡಿ ಮಾಡಲು ನಟಿ ಸಜ್ಜಾಗಿದ್ದಾರೆ.

    ಕೆಜಿಎಫ್ 2 (KGF 2) ಸಿನಿಮಾ ಸೂಪರ್ ಸಕ್ಸಸ್ ಕಂಡ ಮೇಲೆ ಯಶ್ ಏನ್ಮಾಡ್ತಿದ್ದಾರೆ? ಯಾವಾಗ ತಮ್ಮ ಮುಂದಿನ ಸಿನಿಮಾ ಅನೌನ್ಸ್ ಮಾಡ್ತಾರೆ ಎಂದು ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಹೀಗಿರುವಾಗ ಯಶ್ ನಾಯಕಿ ಶ್ರೀನಿಧಿ, ಕನ್ನಡ ಬಿಟ್ಟು ತೆಲುಗು ಸಿನಿಮಾವೊಂದನ್ನ ಅನೌನ್ಸ್ ಮಾಡಿದ್ದಾರೆ. ಇದನ್ನೂ ಓದಿ:ರಾಷ್ಟ್ರಪತಿ ಮುರ್ಮು ಅವರಿಂದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ

    ‘ತೆಲುಸು ಕದಾ’ (Telusu Kada) ಎಂಬ ಚಿತ್ರಕ್ಕೆ ಶ್ರೀನಿಧಿ ಹೀರೋಯಿನ್ ಆಗಿದ್ದಾರೆ. ಸ್ಪೆಷಲ್ ಪ್ರೋಮೋ ಶೇರ್ ಮಾಡುವ ಮೂಲಕ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಕಾಸ್ಟ್ಯೂಮ್ ಡಿಸೈನರ್ ನೀರಜ್ ಕೋನಾ ಈಗ ಡೈರೆಕ್ಟರ್ ಆಗಿ ಬಡ್ತಿ ಪಡೆದಿದ್ದಾರೆ. ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಚಿತ್ರ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ‘ಡಿಜೆ ಟಿಲ್ಲು’ ಹೀರೋ ಸಿದ್ದುಗೆ ಶ್ರೀನಿಧಿ ನಾಯಕಿಯಾಗಿದ್ದಾರೆ.

    ಶ್ರೀನಿಧಿ ಅವರ ‘ತೆಲುಸು ಕದಾ’ ಎಂಬುದು ಮೊದಲ ತೆಲುಗು ಚಿತ್ರವಾಗಿದ್ದು, ಮತ್ತೊಬ್ಬ ನಟಿ ಈಗ ಕನ್ನಡದಿಂದ ತೆಲುಗಿಗೆ ಎಂಟ್ರಿ ಕೊಡ್ತಿದ್ದಾರೆ. ಈ ಹಿಂದೆ ‘ಕೆಜಿಎಫ್’ (KGF) ಚಿತ್ರದ ನಂತರ ಚಿಯಾನ್ ವಿಕ್ರಮ್ ಜೊತೆ ತಮಿಳು ಚಿತ್ರವೊಂದರಲ್ಲಿ ನಟಿಸಿದ್ದರು. ಇದೀಗ ಕೆಜಿಎಫ್ 2 ಬಳಿಕ ತೆಲುಗಿನತ್ತ ನಟಿ ಮುಖ ಮಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಂತ್ರಿಯೊಂದಿಗೆ ನನ್ನ ಪತ್ನಿಗೆ ಅಫೇರ್ ಇತ್ತು- ಶಾಕಿಂಗ್ ಹೇಳಿಕೆ ಕೊಟ್ಟ ಸಂಜಯ್ ದತ್

    ಮಂತ್ರಿಯೊಂದಿಗೆ ನನ್ನ ಪತ್ನಿಗೆ ಅಫೇರ್ ಇತ್ತು- ಶಾಕಿಂಗ್ ಹೇಳಿಕೆ ಕೊಟ್ಟ ಸಂಜಯ್ ದತ್

    ಬಾಲಿವುಡ್ (Bollywood) ನಟ ಸಂಜಯ್ ದತ್ (Sanjay Dutt) ಸಾಕಷ್ಟು ತಪ್ಪುಗಳನ್ನ ಮಾಡಿ, ಅದನ್ನ ತಿದ್ದಿಕೊಂಡು ಒಳ್ಳೆಯ ದಾರಿ ಹಿಡಿದಿದ್ದಾರೆ. ಬಳಿಕ ಅವರ ನಿಜ ಬದುಕು ಸಿನಿಮಾ ರೂಪದಲ್ಲಿ ತೆರೆ ಕಂಡಿತ್ತು. ಇದೀಗ ಕರಣ್ ಜೋಹರ್ ನಿರೂಪಣೆಯ ‘ಕಾಫಿ ವಿತ್ ಕರಣ್’ (Koffee With Karan) ಶೋನಲ್ಲಿ ಸಂಜಯ್ ಶಾಕಿಂಗ್ ಹೇಳಿಕೆಯೊಂದನ್ನ ಬಿಚ್ಚಿಟ್ಟಿದ್ದಾರೆ. ಮಂತ್ರಿಯೊಂದಿಗೆ ನನ್ನ ಪತ್ನಿಗೆ ಅಫೇರ್ ಇತ್ತು, ಅದಕ್ಕೆ ಆಕೆಯನ್ನ ಕೊಂದೆ ಎಂದು ಸಂಜಯ್ ದತ್ ಮಾತನಾಡಿದ್ದಾರೆ.

    ಇತ್ತೀಚೆಗೆ ಸಂಜಯ್ ದತ್, ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಶೋನಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಕರಣ್ ಜೊತೆ ಮಾತಾಡುವಾಗ ಸಂಜಯ್ ದತ್ ಕೆಲವು ವೈಯಕ್ತಿಕ ವಿಷಯಗಳನ್ನು ಹಂಚಿಕೊಂಡಿದ್ದರು. ಸಂಜಯ್ ಶೋನಲ್ಲಿ ನನ್ನ ಪತ್ನಿ ಮಂತ್ರಿಯೊಂದಿಗೆ ಅಫೇರ್ ಇಟ್ಟುಕೊಂಡಿದ್ದಳು. ಅವಳನ್ನು ಕೊಂದು ಬಿಟ್ಟೆ. ಅದೇ ಕರ್ಮ ಇಂದು ನನ್ನನ್ನು ಕಾಡುತ್ತಿದೆ ಎಂದು ಹೇಳಿದರು. ಆದರೆ ಅದು ಈ ಜನ್ಮದಲ್ಲಿ ಅಲ್ಲ. ತಮ್ಮ ಕಳೆದ ಜನುಮದಲ್ಲಿ ನಡೆದ ವಿಷಯ ಎಂದು ಹೇಳಿದ್ದಾರೆ. ಇದನ್ನೂ ಓದಿ:ಟ್ರೈಲರ್ ಮೂಲಕ ಕಿಚ್ಚು ಹಚ್ಚಿದ `ಇನಾಮ್ದಾರ್’ ಸಿನಿಮಾ

    ಅಶೋಕ ಸಾಮ್ರಾಜ್ಯವಿದ್ದ ಕಾಲದಲ್ಲಿ ನಾನು ರಾಜನಾಗಿದ್ದೆ. ನನ್ನ ಮಂತ್ರಿಯೊಂದಿಗೆ ನನ್ನ ಪತ್ನಿ ಅಫೇರ್ ಇಟ್ಟುಕೊಂಡಿದ್ದಳು. ನಾನು ಸಾಯಲಿ ಅಂತಾನೇ ಯುದ್ದಕ್ಕೆ ಕಳುಹಿಸಿದ್ದಳು. ಆದರೆ, ನಾನು ಸಾಕಷ್ಟು ಯೋಧರನ್ನು ಯುದ್ಧದಲ್ಲಿ ಸಾಯಿಸಿದೆ. ಯುದ್ದದ ನಂತರ ಇಬ್ಬರ ಮದ್ಯೆ ಇದ್ದ ಅಫೇರ್ ಬಗ್ಗೆ ಗೊತ್ತಾಗಿ, ನಾನು ನನ್ನ ಪತ್ನಿ ಹಾಗೂ ಮಂತ್ರಿ ಸಾಯಿಸಿ ಬಿಟ್ಟೆ ಎಂದು ಸಂಜಯ್ ದತ್ ಹೇಳಿದ್ದಾರೆ.

    ಕಳೆದ ಜನ್ಮದಲ್ಲಿ ಮಾಡಿದ್ದ ತಪ್ಪಿಗೆ ಈ ಜನ್ಮದಲ್ಲಿ ಅದರ ಕರ್ಮವನ್ನು ಅನುಭವಿಸಬೇಕಾಗಿದೆ. ಹಿಂದಿನ ಜನ್ಮದಿಂದಲೇ ನಾನು ಒಳ್ಳೆಯ ಕುಟುಂಬದಲ್ಲಿ ಹುಟ್ಟಿದೆ. ಹಾಗಾಗಿಯೇ ನಾನು ಈಗ ಬದುಕಿದ್ದೇನೆ. ಆ ಕಾರಣಕ್ಕೆ ನಾನು ಈ ವೃತ್ತಿಯಲ್ಲಿದ್ದೇನೆ ಎಂದು ಸಂಜಯ್ ಹೇಳಿದ್ದರು. ಅಲ್ಲದೆ, ತಾಯಿ ನರ್ಗೀಸ್ ದತ್, ಮೊದಲ ಪತ್ನಿ ರಿಚಾ ಶರ್ಮಾ ಕಳೆದುಕೊಂಡಿದ್ದು, ಜೈಲುವಾಸ ಇದೆಲ್ಲವೂ ಹೋದ ಜನ್ಮದ ಕರ್ಮದ ಫಲ ಎಂದು ಸಂಜಯ್ ದತ್ ಹೇಳಿಕೊಂಡಿದ್ದಾರೆ.

    ಸಂಜಯ್ ದತ್ (Sanjay Dutt) ನಿಜ ಬದುಕಿನಲ್ಲಿ ಮೂರು ಮದುವೆ ಆಗಿದ್ದಾರೆ. ಮೊದಲು ರೀಚಾ ಶರ್ಮಾ ಅವರನ್ನು 1987ರಲ್ಲಿ ಮದುವೆಯಾದರು. ರೀಚಾ ಮದುವೆಯ ಎರಡು ವರ್ಷಗಳ ಬಳಿಕ ಬ್ರೇನ್ ಟ್ಯೂಮರ್‌ನಿಂದ ಮರಣ ಹೊಂದಿದರು. ನಂತರ 1988ರಲ್ಲಿ ರಿಯಾ ಪಿಳ್ಳಯ್ ಅವರನ್ನು ಮದುವೆಯಾದರು. ಆದರೆ ಕಾರಣಾಂತರಗಳಿಂದ 2008ರಲ್ಲಿ ಇಬ್ಬರು ವಿಚ್ಛೇದನ ಪಡೆದುಕೊಂಡರು. ಮತ್ತೆ ಸಂಜಯ್ 2008ರಲ್ಲಿ ಮಾನ್ಯತಾ ಅವರನ್ನು ವಿವಾಹವಾದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಗಳ ಜೊತೆಗಿನ ಮುದ್ದಾದ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

    ಮಗಳ ಜೊತೆಗಿನ ಮುದ್ದಾದ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

    ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ (Radhika Pandit) ಅವರು ಮಗಳ ಜೊತೆಗಿನ ಮುದ್ದಾದ ಫೋಟೋವೊಂದನ್ನ ಶೇರ್ ಮಾಡಿದ್ದಾರೆ. ನಮ್ಮ ಪುಟ್ಟ ರಾಜಕುಮಾರಿ ಎಂದು ನಟಿ ರಾಧಿಕಾ ಪೋಸ್ಟ್ ಮಾಡಿದ್ದಾರೆ. ಮಗಳ ಕಾಲಿಗೆ ಬೂಟ್‌ ಹಾಕ್ತಿರೋ ಚೆಂದದ ಫೋಟೋ ಶೇರ್‌ ಮಾಡಿದ್ದಾರೆ.

     

    View this post on Instagram

     

    A post shared by Radhika Pandit (@iamradhikapandit)

    ಸೆ.24 ಹೆಣ್ಣು ಮಗಳ (Daughters Day 2023) ದಿನಾಚರಣೆಯಾಗಿದ್ದು, ಈ ಸಂದರ್ಭದಲ್ಲಿ ಮಗಳ ಜೊತೆಗಿನ ಕ್ಯೂಟ್ ಫೋಟೋಗಳನ್ನ ಶೇರ್ ಮಾಡಿದ್ದಾರೆ. ಜೊತೆಗೆ ಯಶ್- ರಾಧಿಕಾ ಇಬ್ಬರು ಐರಾಗೆ ಮುತ್ತು ಕೊಡುತ್ತಿರುವ ಫೋಟೋ ಎಲ್ಲರ ಗಮನ ಸೆಳೆದಿದೆ. ನಟಿಯ ಪೋಸ್ಟ್ ವೈರಲ್ ಆಗ್ತಿದ್ದಂತೆ ಯಶ್ 19 (Yash 19) ಸಿನಿಮಾ ಯಾವಾಗ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ. ಇದನ್ನೂ ಓದಿ:ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ದುನಿಯಾ ವಿಜಯ್ ಪುತ್ರಿಯರು

    ಇತ್ತೀಚಿಗೆ ಯಶ್ (Yash) ಕುಟುಂಬ ಗೋವಾದಲ್ಲಿ ಬೀಡು ಬಿಟ್ಟಿತ್ತು. ಕೆಲದಿನಗಳ ಕಾಲ ಕುಟುಂಬದ ಜೊತೆ ಒಂದೊಳ್ಳೆಯ ಸಮಯ ಕಳೆದಿದ್ದರು. ವೆಕೇಷನ್‌ನಲ್ಲಿ ಬ್ಯುಸಿಯಾಗಿದ್ದ ನಟ ಮತ್ತೆ ಸಿನಿಮಾ ಕೆಲಸಗಳತ್ತ ಗಮನ ನೀಡುತ್ತಿದ್ದಾರೆ.

    ಯಶ್ 19 (Yash 19) ಸಿನಿಮಾ ಅಕ್ಟೋಬರ್‌ನಲ್ಲಿ ಅಧಿಕೃತವಾಗಿ ಅನೌನ್ಸ್ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಕೆಜಿಎಫ್ 2 ಬಳಿಕ ಇಡೀ ದೇಶವೇ ಯಶ್ ಮುಂದಿನ ಸಿನಿಮಾಗಾಗಿ ಕಾಯ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಮುದ್ರ ತೀರದಲ್ಲಿ ಯಶ್‌ ಫ್ಯಾಮಿಲಿ- ಪುತ್ರಿ ಜೊತೆ ರಾಧಿಕಾ ತುಂಟಾಟ

    ಸಮುದ್ರ ತೀರದಲ್ಲಿ ಯಶ್‌ ಫ್ಯಾಮಿಲಿ- ಪುತ್ರಿ ಜೊತೆ ರಾಧಿಕಾ ತುಂಟಾಟ

    ಕೆಜಿಎಫ್ 2 (KGF 2) ಸಕ್ಸಸ್ ಬಳಿಕ ಸಿನಿಮಾದಿಂದ ನ್ಯಾಷನಲ್ ಸ್ಟಾರ್ ಯಶ್(Yash) ಬ್ರೇಕ್ ತೆಗೆದುಕೊಂಡಿದ್ದಾರೆ. ಕುಟುಂಬಕ್ಕೆ ಹೆಚ್ಚು ಸಮಯ ಮೀಸಲಿಡುತ್ತಿದ್ದಾರೆ. ಇದೀಗ ಸಮುದ್ರ ತೀರದಲ್ಲಿ ಕಾಲ ಕಳೆಯುತ್ತಿರುವ ಸುಂದರ ಫೋಟೋವನ್ನು ರಾಧಿಕಾ ಪಂಡಿತ್ (Radhika Pandit) ಹಂಚಿಕೊಂಡಿದ್ದಾರೆ. ನಟಿಯ ಹೊಸ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

    ರಾಧಿಕಾ ಪಂಡಿತ್ ಅವರು ಪ್ರತಿ ವಾರಾಂತ್ಯ ಫ್ಯಾನ್ಸ್‌ಗಾಗಿ ಹೊಸ ಪೋಸ್ಟ್ ಶೇರ್ ಮಾಡುತ್ತಾರೆ. ಈ ವಾರವೂ ಅದನ್ನು ಮುಂದುವರಿಸಿಕೊಂಡು ಹೋಗಿದ್ದಾರೆ. ರಾಧಿಕಾ ಪಂಡಿತ್ ಅವರು ಸಮುದ್ರ ತೀರದಲ್ಲಿ ಕುಳಿತಿದ್ದಾರೆ. ಯಶ್ ಕೂಡ ಅವರ ಜೊತೆ ಇದ್ದಾರೆ. ಯಶ್ ಹೆಗಲ ಮೇಲೆ ಆಯ್ರಾ ಯಶ್ ಕೂಡ ಕುಳಿತಿದ್ದಾರೆ. ಅವರ ಕುಟುಂಬದ ಚೆಂದದ ಫೋಟೋ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಇದನ್ನೂ ಓದಿ:‘ಸೋಮು ಸೌಂಡ್ ಇಂಜಿನಿಯರ್’ ಟೈಟಲ್ ಟ್ರ್ಯಾಕ್ : ಸೂರಿ ಶಿಷ್ಯನ ಚೊಚ್ಚಲ ಪ್ರಯತ್ನ

     

    View this post on Instagram

     

    A post shared by Radhika Pandit (@iamradhikapandit)

    ಯಶ್ 19 (Yash 19) ಸಿನಿಮಾಗಾಗಿ ರಾಕಿಭಾಯ್ ತೆರೆಮರೆಯಲ್ಲಿ ತಯಾರಿ ಮಾಡ್ತಿದ್ದಾರೆ. ಮುಂದಿನ ಸಿನಿಮಾ ಬಗ್ಗೆ ಅಧಿಕೃತವಾಗಿ ಅನೌನ್ಸ್ ಆಗುವವರೆಗೂ ತಮ್ಮ ಪ್ರಾಜೆಕ್ಟ್ ಬಗ್ಗೆ ಎಲ್ಲಿಯೂ ಲೀಕ್ ಆಗದಂತೆ ನಟ ನೋಡಿಕೊಳ್ತಿದ್ದಾರೆ. ಅಕ್ಟೋಬರ್‌ನಲ್ಲಿ ಯಶ್ ಮುಂದಿನ ಸಿನಿಮಾ ಬಗ್ಗೆ ಉತ್ತರ ಸಿಗಲಿದೆ ಎನ್ನಲಾಗುತ್ತಿದೆ.

    ಸ್ಯಾಂಡಲ್‌ವುಡ್ (Sandalwood) ಸಿಂಡ್ರೆಲಾ ರಾಧಿಕಾ ಪಂಡಿತ್ (Radhika Pandit) ನಟನೆಯ ಮೊಗ್ಗಿನ ಮನಸ್ಸು (Moggina Manasu) ಟು ಆದಿಲಕ್ಷ್ಮಿ ಪುರಾಣ ಸಿನಿಮಾವರೆಗೂ ಉತ್ತಮ ಸಿನಿಮಾಗಳನ್ನ ನೀಡಿ ಅಭಿಮಾನಿಗಳ ಪಾಲಿಗೆ ನೆಚ್ಚಿನ ನಾಯಕಿಯಾಗಿ ಮಿಂಚಿದವರು. ಈಗ ಮದುವೆ, ಸಂಸಾರ ಅಂತಾ ಕುಟುಂಬದ ಕಡೆಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಸಿನಿಮಾಗೆ ಕಮ್‌ಬ್ಯಾಕ್ ಆಗುವ ಬಗ್ಗೆ ನಟಿ ಮನಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]