Tag: KGF-2

  • ವ್ಯಾಲೆಂಟೈನ್‌ ದಿನದ ವಿಶೇಷ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

    ವ್ಯಾಲೆಂಟೈನ್‌ ದಿನದ ವಿಶೇಷ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

    ಸ್ಯಾಂಡಲ್‌ವುಡ್‌ನ ಮುದ್ದಾದ ಜೋಡಿ ಯಶ್- ರಾಧಿಕಾ ಪಂಡಿತ್ (Radhika Pandit) ಪ್ರೇಮಿಗಳ ದಿನವನ್ನು ಸೆಲೆಬ್ರೇಟ್ ಮಾಡಿದ್ದಾರೆ. ವ್ಯಾಲೆಂಟೈನ್ ದಿನದ ಸುಂದರ ಫೋಟೋಗಳನ್ನು ನಟಿ ರಾಧಿಕಾ ಹಂಚಿಕೊಂಡಿದ್ದಾರೆ.‌ ‘ಕೆಜಿಎಫ್‌ 2’ (KGF 2) ನಟನ ಫ್ಯಾಮಿಲಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಫೆ.14 ಪ್ರೇಮಿಗಳ ಪಾಲಿಗೆ ವಿಶೇಷ ದಿನ. ಅದರಲ್ಲಿ ಪ್ರೀತಿಸಿ ಮದುವೆಯಾಗಿರುವ ಯಶ್ (Yash) ಮತ್ತು ರಾಧಿಕಾ ದಂಪತಿಗೂ ವಿಶೇಷ ದಿನ ಎಂದು ಹೇಳಿದರೆ ತಪ್ಪಾಗಲಾರದು. ಚಂದನವನದ ಆದರ್ಶ ಜೋಡಿ ಯಶ್ ಮತ್ತು ರಾಧಿಕಾ ಇಂದು ಲವ್ಲಿ ಆಗಿ ಪ್ರೇಮಿಗಳ ದಿನಾಚರಣೆಯನ್ನು ಆಚರಿಸಿದ್ದಾರೆ. ಇದನ್ನೂ ಓದಿ:ಆಪ್ರೋ ಲುಕ್ ನಲ್ಲಿ ಧ್ರುವ ಸರ್ಜಾ: ಗೋವಾದಲ್ಲಿ ಕಾಣಿಸಿಕೊಂಡ ನಟ

    ದೂರದ ಊರಿನಲ್ಲಿ ಯಶ್ ಜೋಡಿ ತಮ್ಮ ಮಕ್ಕಳ ಜೊತೆ ಸಮಯ ಕಳೆದಿದ್ದಾರೆ. ಗೋಡೆಯ ಮೇಲೆ ಹಾರ್ಟ್ ಬಲೂನ್ ಹಾಕಿ ಕಲರ್‌ಫುಲ್ ಡ್ರೆಸ್ ಧರಿಸಿ ಮಿಂಚಿದ್ದಾರೆ. ಯಶ್ ಮತ್ತು ರಾಧಿಕಾ ಇಬ್ಬರು ಕಣ್ಣಿಗೆ ಕುಲ್ಲಿಂಗ್ ಗ್ಲ್ಯಾಸ್ ತೊಟ್ಟು ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ನನ್ನ ಶಾಶ್ವತ ಪ್ರೇಮಿಗಳೊಂದಿಗೆ ವ್ಯಾಲೆಂಟೈನ್ಸ್‌ ಡೇ ಲಂಚ್‌ ಎಂದು ನಟಿ ಕ್ಯಾಪ್ಷನ್‌  ನೀಡಿದ್ದಾರೆ.

    ಇನ್ನೂ ‘ಟಾಕ್ಸಿಕ್’ (Toxic) ಶೂಟಿಂಗ್‌ಗೆ ಬ್ರೇಕ್ ಕೊಟ್ಟು ಯಶ್ ತಮ್ಮ ಕುಟುಂಬಕ್ಕೆ ಸಮಯ ಮೀಸಲಿಟ್ಟಿದ್ದಾರೆ. ಯಶ್ ಪಕ್ಕಾ ಫ್ಯಾಮಿಲಿಮೆನ್ ಎಂಬುದು ಗೊತ್ತಿರುವ ವಿಚಾರ. ಎಷ್ಟೇ ಬ್ಯುಸಿ ಇದ್ದರೂ ಕುಟುಂಬಕ್ಕೆ ಸಮಯ ಕೊಡೋದ್ರಲ್ಲಿ ಯಶ್ ಯಾವತ್ತೂ ಹಿಂದೆ ಬಿದ್ದಿಲ್ಲ.

    ರಾಧಿಕಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿರೋದು ನೋಡಿ ಫ್ಯಾನ್ಸ್, ಅತ್ತಿಗೆ ಯಾವಾಗ ಮತ್ತೆ ಸಿನಿಮಾ ಮಾಡ್ತೀರಾ ಎಂದು ಸೋಷಿಯಲ್ ಮೀಡಿಯಾದಲ್ಲಿ ನಟಿಗೆ ಪ್ರಶ್ನೆ ಮಾಡಿದ್ದಾರೆ. ಸದ್ಯದಲ್ಲೇ ನಟಿ ಸಿನಿಮಾರಂಗಕ್ಕೆ ಎಂಟ್ರಿ ಕೊಡ್ತಾರೆ ಎಂಬ ಸುದ್ದಿ ಕೂಡ ಇದೆ. ರಾಧಿಕಾ ಕಡೆಯಿಂದ ಅಧಿಕೃತ ಮಾಹಿತಿ ಸಿಗುವವರೆಗೂ ಕಾದುನೋಡಬೇಕಿದೆ.

  • ಆಪ್ತ ಸಹಾಯಕನ ಮನೆಗೆ ಯಶ್ ಸರ್ಪ್ರೈಸ್ ಎಂಟ್ರಿ

    ಆಪ್ತ ಸಹಾಯಕನ ಮನೆಗೆ ಯಶ್ ಸರ್ಪ್ರೈಸ್ ಎಂಟ್ರಿ

    ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್ (Yash) ಸದ್ಯ ‘ಟಾಕ್ಸಿಕ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕೆಲಸದ ನಡುವೆಯೂ ತಮ್ಮ ಆಪ್ತ ಸಹಾಯಕನ ಮನೆಗೆ ಯಶ್ ಮತ್ತು ರಾಧಿಕಾ ದಂಪತಿ ಸರ್ಪ್ರೈಸ್ ವಿಸೀಟ್ ನೀಡಿದ್ದಾರೆ.

    ಯಶ್ ತನ್ನ ಸಿಬ್ಬಂದಿಗಳನ್ನು ಎಂದಿಗೂ ಮರೆಯೋದಿಲ್ಲ ಎಂಬುದನ್ನು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಚೇತನ್ ಎಂಬುವವರು ಕಳೆದ 10 ವರ್ಷಗಳಿಂದ ಯಶ್‌ಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಚೇತನ್ ತಂದೆಯಾಗಿದ್ದರು. ಹಾಗಾಗಿ ಶುಭಕೋರಲು ಸಹಾಯಕನ ಮನೆಗೆ ಯಶ್ ದಂಪತಿ ಎಂಟ್ರಿ ಕೊಟ್ಟಿದ್ದಾರೆ.

    ಸಹಾಯಕ ಚೇತನ್ ಮಗುವನ್ನು ಯಶ್ ತೊಡೆಯ ಮೇಲೆ ಮಲಗಿಸಿಕೊಂಡು ಮುದ್ದಾಡಿದ್ದಾರೆ. ಮನೆಗೆ ಬಂದಿರೋ ಯಶ್-ರಾಧಿಕಾರನ್ನು ಕಂಡು ಚೇತನ್ ಫುಲ್ ಖುಷಿಯಾಗಿದ್ದಾರೆ. ಮಗುವಿಗೆ ಯಶ್ ದುಬಾರಿ ಗಿಫ್ಟ್ ಅನ್ನು ಕೊಟ್ಟಿದ್ದಾರೆ. ಆಪ್ತ ಸಹಾಯಕನ ಮಗುವಿಗೆ ಚಿನ್ನದ ಚೈನ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಅಂದಹಾಗೆ, ‘ಕೆಜಿಎಫ್ 2’ ಸಿನಿಮಾದ ಸಕ್ಸಸ್ ನಂತರ ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆ ಯಶ್ ‘ಟಾಕ್ಸಿಕ್’ (Toxic) ಸಿನಿಮಾ ಮಾಡುತ್ತಿದ್ದಾರೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.

  • Toxic: ಯಶ್ ಸಿನಿಮಾ ಎಲ್ಲಿಗೆ ಬಂತು? ಇಲ್ಲಿದೆ ಬಿಗ್ ಅಪ್‌ಡೇಟ್

    Toxic: ಯಶ್ ಸಿನಿಮಾ ಎಲ್ಲಿಗೆ ಬಂತು? ಇಲ್ಲಿದೆ ಬಿಗ್ ಅಪ್‌ಡೇಟ್

    ಶ್ (Yash) ಮುಂದಿನ ಸಿನಿಮಾ ಅನೌನ್ಸ್ ಮಾಡಿದ ದಿನದಿಂದ ಈ ಪ್ರಾಜೆಕ್ಟ್ ಬಗ್ಗೆ ದಿನಕೊಂದು ಸುದ್ದಿ ಚಾಲ್ತಿಗೆ ಬರ್ತಿದೆ. ಕರೀನಾ ಕಪೂರ್ ಹೆಸರು ಕೆಲವು ದಿನ ಸದ್ದು ಮಾಡ್ತು ಈಗ ಶಾರುಖ್ ಖಾನ್ (Sharukh Khan) ಕಾಣಿಸಿಕೊಳ್ತಿದ್ದಾರೆ. ಅಸಲಿಗೆ ‘ಟಾಕ್ಸಿಕ್’ನಲ್ಲಿ (Toxic Film) ಈ ಕಲಾವಿದರು ಕೆಲಸ ಮಾಡ್ತಾರಾ? ಮಾತುಕತೆ ನಡೆದಿದ್ಯಾ? ಯಾರು ಯಾರು ಈ ಸಿನಿಮಾದಲ್ಲಿ ಇರುತ್ತಾರೆ? ಯಾವಾಗ ಮುಹೂರ್ತ ಆಗಲಿದೆ? ಈ ಬಗ್ಗೆ ಇಲ್ಲಿದೆ ಮಾಹಿತಿ.

    ಕೆಜಿಎಫ್ (KGF) ಬಳಿಕ ರಾಕಿಂಗ್ ಸ್ಟಾರ್ ಯೋಜನೆಗಳಲ್ಲಿ ಬಹಳಷ್ಟು ಬದಲಾವಣೆಗಳು ಕಂಡು ಬರುತ್ತಿವೆ. ಮುಂದಿನ ಸಿನಿಮಾ ಬಗ್ಗೆ ಯಶ್ ಮಾಡ್ತಿರುವ ಪ್ಲ್ಯಾನಿಂಗ್ ಬಹಳಷ್ಟು ಜನರ ನಿದ್ದೆ ಕೆಡಿಸಿದೆ. ಯಶ್ ಸಿನಿಮಾ ಅನೌನ್ಸ್ ಮಾಡಿದ ಕ್ಷಣದಿಂದ ‘ಟಾಕ್ಸಿಕ್’ ಬಗ್ಗೆ ದಿನಕ್ಕೊಂದು ಅಪ್‌ಡೇಟ್ ಬರುತ್ತಿದೆ. ಆದರೆ ಅದರ ಬಗ್ಗೆ ಯಶ್ ಎಲ್ಲೂ ಮಾತನಾಡ್ತಿಲ್ಲ. ಬದಲಾಗಿ ತಮ್ಮ ಸಿನಿಮಾದ ಕೆಲಸ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಗದಗದಲ್ಲಿ ನಡೆದ ಕರೆಂಟ್‌ ದುರಂತದಿಂದ ಅಭಿಮಾನಿಗಳ ಅಗಲಿಕೆಯಿಂದ ನೊಂದಿದ್ದ ಯಶ್ ಈಗ ಮತ್ತೆ ಕೆಲಸದಲ್ಲಿ ಮಗ್ನರಾಗಿದ್ದಾರೆ.

    ಕಳೆದ ಕೆಲವು ದಿನಗಳ ಹಿಂದೆ ಬಾಲಿವುಡ್ ನಟಿ ಕರೀನಾ ಕಪೂರ್ (Kareena Kapoor) ಮತ್ತು ಶಾರುಖ್ ಖಾನ್ (Sharukh Khan) ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸ್ತಾರೆ ಅಂತ ಮಾತು ಶುರುವಾಗಿತ್ತು. ಯಶ್ ಆಗಲಿ ತಂಡದವರಾಗಲಿ ಈ ಬಗ್ಗೆ ಮಾತನಾಡಲಿಲ್ಲ. ಉತ್ತರ ಕೊಡುವ ಬದಲು ಕೆಲಸ ಮುಂದುವರಿಸಿದ್ದರು. ಇದನ್ನೂ ಓದಿ:ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ನಿರ್ದೇಶಕ ಅಭಿಷೇಕ್ ಶೆಟ್ಟಿ

    ಈ ಬಗ್ಗೆ ಯಶ್ ಆಪ್ತವಲಯದಿಂದ ಬರುತ್ತಿರುವ ಅಪ್‌ಡೇಟ್ ಒಂದೇ ಎಲ್ಲವೂ ಟೈಮ್ ಬಂದಾಗ ರಿವೀಲ್ ಆಗಲಿದೆ. ಸಿನಿಮಾದಲ್ಲಿ ಬಹಳಷ್ಟು ಪಾತ್ರಗಳಿರುತ್ತದೆ. ಎಲ್ಲವೂ ಅಂದು ಕೊಂಡಂತೆ ಆದ್ಮೇಲೆ ತಂಡ ಅಫೀಷಿಯಲ್ ಆಗಿ ಅನೌನ್ಸ್ ಮಾಡುತ್ತಾರೆ. ಅಲ್ಲಿಯವರೆಗೆ ಯಾವುದನ್ನೂ ನಂಬಬೇಡಿ ಅನ್ನೋದು ಯಶ್ ಆಪ್ತವಲಯದಿಂದ ಬರುತ್ತಿರುವ ಸಂದೇಶ. ಅಲ್ಲಿಗೆ ಶಾರುಖ್ ಖಾನ್, ಕರೀನಾ ಕಪೂರ್ ಹೆಸರುಗಳಿಗೆ ಬ್ರೇಕ್ ಹಾಕಬೇಕಿದೆ ಅಷ್ಟೇ.

    ಹುಟ್ಟುಹಬ್ಬದಂದು ಅರ್ಧಕ್ಕೆ ಕೆಲಸ ನಿಲ್ಲಿಸಿ ಅಭಿಮಾನಿಗಳ ಮನೆ ಬಾಗಿಲಿಗೆ ಹೋಗಿದ್ದರು ಯಶ್. ಅರ್ಧಕ್ಕೆ ನಿಲ್ಲಿಸಿದ ಆ ಕೆಲಸವನ್ನ ಪೂರ್ತಿ ಮಾಡಿದ್ದಾರೆ. ಶೂಟಿಂಗ್ ಶುರು ಮಾಡಲು ಬೇಕಾದ ಅಂತಿಮ ಹಂತದ ಸಿದ್ಧತೆ ಮಾಡಿಕೊಳ್ತಿದ್ದಾರೆ. ಫೆಬ್ರವರಿ ಅಂತ್ಯದಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ‘ಟಾಕ್ಸಿಕ್’ (Toxic) ಮುಹೂರ್ತ ನಡೆಯಲಿದೆ. ಆಮೇಲೆ ಲಂಡನ್, ಶ್ರೀಲಂಕಾ, ಮಲೇಷಿಯಾದಲ್ಲಿ ಶೂಟಿಂಗ್ ನಡೆಯಲಿದೆ.

  • ಗದಗ ಕಟೌಟ್ ದುರಂತ: ಗಾಯಾಳುಗಳ ಕುಟುಂಬಕ್ಕೆ ಯಶ್ 1 ಲಕ್ಷ ಪರಿಹಾರ

    ಗದಗ ಕಟೌಟ್ ದುರಂತ: ಗಾಯಾಳುಗಳ ಕುಟುಂಬಕ್ಕೆ ಯಶ್ 1 ಲಕ್ಷ ಪರಿಹಾರ

    ಸ್ಟಾರ್ ನಟ ಯಶ್ (Yash) ಅವರ ಹುಟ್ಟುಹಬ್ಬದಂದು (ಜ.8) ರಾಕಿಭಾಯ್ ಕಟೌಟ್ ಕಟ್ಟಲು ಹೋಗಿ ಕರೆಂಟ್ ದುರಂತದಿಂದ ಮೂವರು ಮೃತಪಟ್ಟಿದ್ದರು. ಇನ್ನೂ ಮೂವರಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಯಶ್ ಮೃತ ಯುವಕರ ಕುಟುಂಬಕ್ಕೆ ಭೇಟಿಯಾಗಿ ಪರಿಹಾರ ಧನ ನೀಡಿದ್ದರು. ಚಿಕಿತ್ಸೆಯಲ್ಲಿದ್ದ ಗಾಯಾಳುಗಳಿಗೆ ಪರಿಹಾರ ನೀಡುವುದಾಗಿ ಯಶ್ ಭರವಸೆ ನೀಡಿ, ಯೋಗಕ್ಷೇಮ ವಿಚಾರಿಸಿದ್ದರು. ಇದೀಗ ಯಶ್ ನುಡಿದಂತೆ ನಡೆದುಕೊಂಡಿದ್ದಾರೆ. ಗಾಯಾಳುಗಳ ಕುಟುಂಬಕ್ಕೆ ನೇರವಾಗಿ 1 ಲಕ್ಷ ರೂ. ಅವರ ಖಾತೆಗೆ ವರ್ಗಾಯಿಸಿದ್ದಾರೆ. ಇದನ್ನೂ ಓದಿ:ತಂದೆ ಸಿ.ವಿ ಶಿವಶಂಕರ್ ಹಾದಿಯಲ್ಲಿ ಪುತ್ರ ವೆಂಕಟ್ ಭಾರದ್ವಾಜ್!

    ಯಶ್ (Yash) ಅವರ ಹುಟ್ಟುಹಬ್ಬಕ್ಕೆ ಬೃಹತ್ ಗಾತ್ರದ ಕಟೌಟ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶದಿಂದ 3 ಯುವಕರು ಸಾವನ್ನಪ್ಪಿದ ಘಟನೆ ಲಕ್ಷ್ಮೇಶ್ವರದ ಸೂರಣಗಿ ಗ್ರಾಮದಲ್ಲಿ ನಡೆದಿತ್ತು. ಹನುಮಂತ ಹರಿಜನ್ (24), ಮುರಳಿ ನಡುವಿನಮನಿ (20) ಹಾಗೂ ನವೀನ್ ಗಾಜಿ (20) ಎಂಬುವವರು ನಿಧನರಾಗಿದ್ದು, ಇನ್ನೂಳಿದ ಮೂವರಿಗೆ ಗಂಭೀರ ಗಾಯಗಳಾಗಿದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈಗ ಉಳಿದ ಗಾಯಾಳುಗಳ ಕುಟುಂಬಕ್ಕೆ ಯಶ್ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಜ.8ರಂದು ದುರಂತ ನಡೆದ ಸೊರಣಗಿ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ, ಅತಿಯಾದ ಅಭಿಮಾನ ಬೇಡ. ಇನ್ಮುಂದೆ ನನ್ನ ಹುಟ್ಟುಹಬ್ಬಕ್ಕೆ ಕಟೌಟ್ ಹಾಕಲೇಬೇಡಿ ಎಂದು ಯಶ್ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದರು.

  • ಮರ್ಯಾದಾ ಪುರುಷೋತ್ತಮ ರಾಮನಿಗೆ ನಮನ ಸಲ್ಲಿಸಿ ಗುಣಗಾನ ಮಾಡಿದ ಯಶ್‌

    ಮರ್ಯಾದಾ ಪುರುಷೋತ್ತಮ ರಾಮನಿಗೆ ನಮನ ಸಲ್ಲಿಸಿ ಗುಣಗಾನ ಮಾಡಿದ ಯಶ್‌

    500 ವರ್ಷಗಳ ಹೋರಾಟ ಮತ್ತು ಕಾಯುವಿಕೆ ಇಂದು (ಜ.22) ಅಂತ್ಯವಾಗಿದೆ. ಅಯೋಧ್ಯೆಯ (Ayodhya) ರಾಮಮಂದಿರದಲ್ಲಿ (Ram Mandir) ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿದೆ. ಈ ಸಂದರ್ಭದಲ್ಲಿ ‘ಕೆಜಿಎಫ್ 2’ (Kgf 2) ಸ್ಟಾರ್ ಯಶ್ (Yash) ಅವರು ಶ್ರೀರಾಮನಿಗೆ ಜೈ ಎಂದಿದ್ದಾರೆ. ನಮ್ಮೆಲ್ಲರಿಗೂ ಮಹಾದಿನ, ಮರ್ಯದಾ ಪುರುಷೋತ್ತಮ ರಾಮನಿಗೆ ನಮನ ಎಂದು ಯಶ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಶ್ರೀರಾಮ ಕುರಿತು ಕವಿತೆ ಬರೆದು ಕೊಂಡಾಡಿದ ಕಿಚ್ಚ

     

    View this post on Instagram

     

    A post shared by Yash (@thenameisyash)

    ಮರ್ಯಾದಾ ಪುರುಷೋತ್ತಮ ಭಗವಾನ್ ರಾಮನಿಗೆ ನಮನ, ಧಾರ್ಮಿಕ ಜೀವನದ ದ್ಯೋತಕ, ಉದಾಹರಣೆಯ ಮೂಲಕ ಮುನ್ನಡೆಸು, ಸಂಬಂಧಗಳಿಗೆ ಪೂಜ್ಯಭಾವನೆ, ಪ್ರತಿಕೂಲತೆಯಲ್ಲಿ ದೃಢತೆ ಮತ್ತು ಮಿತಿಯಿಲ್ಲದ ಸಹಾನುಭೂತಿ. ನಮಗೆಲ್ಲರಿಗೂ ನಿಜಕ್ಕೂ ಇಂದು ಮಹಾಕಾವ್ಯದ ದಿನ ಎಂದಿದ್ದಾರೆ. ಜೈ ಶ್ರೀ ರಾಮ್ ಎಂದು ನಟ ಯಶ್ (Yash) ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಅಯೋಧ್ಯೆಯ ಇಂದಿನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕನ್ನಡದ ರಿಷಬ್ ಶೆಟ್ಟಿ (Rishab Shetty), ಬಾಲಿವುಡ್ ನಟಿ ಕಂಗನಾ, ಅನುಪಮ್ ಖೇರ್, ಆಲಿಯಾ- ರಣ್‌ಬೀರ್ ದಂಪತಿ, ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ. ಕನ್ನಡದ ನಟ ಯಶ್, ಸುದೀಪ್ ಸೇರಿದಂತೆ ಅನೇಕರು ಅಯೋಧ್ಯೆಯ ಪ್ರಾಣ ಪ್ರತಿಷ್ಠಾಪನೆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

  • ಯಶ್‌ ನೋಡುವ ಕಾತರದಲ್ಲಿ ಬೈಕ್‌ ಅಪಘಾತ- ಅಭಿಮಾನಿ ಗಂಭೀರ

    ಯಶ್‌ ನೋಡುವ ಕಾತರದಲ್ಲಿ ಬೈಕ್‌ ಅಪಘಾತ- ಅಭಿಮಾನಿ ಗಂಭೀರ

    ಒಂದು ದುರ್ಘಟನೆ ಮಾಸುವ ಮುನ್ನವೇ ಮತ್ತೋರ್ವ ಯಶ್ (Yash) ಅಭಿಮಾನಿಗೆ (Fan) ಗಂಭೀರ ಗಾಯವಾಗಿದೆ. ಯಶ್‌ ನೋಡುವ ಕಾತರದಲ್ಲಿ ಬೈಕ್‌ ಅಪಘಾತವಾಗಿದೆ. ಅಭಿಮಾನಿ ನಿಖಿಲ್‌ ಗೌಡ (22) ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ಗದಗದ ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಗದಗ ಜಿಲ್ಲೆ ಸೊರಣಗಿ ಗ್ರಾಮದಲ್ಲಿ ಯಶ್ ಹುಟ್ಟುಹಬ್ಬದ ಅಂಗವಾಗಿ ತಡರಾತ್ರಿ ಕಟೌಟ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶದಿಂದ ಮುರಳಿ, ನವೀನ್, ಹನುಮಂತ ಎಂಬ ಮೂವರು ನಿಧನರಾಗಿದ್ದು, ಇನ್ನೂಳಿದ ಮೂವರು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಈ ವಿಚಾರ ತಿಳಿದ ಅಭಿಮಾನಿ ನಿಖಿಲ್ ಆಸ್ಪತ್ರೆಗೆ ಬರುವಾಗ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಗಾಯವಾಗಿದೆ. ಇದನ್ನೂ ಓದಿ:ವಿದ್ಯುತ್ ಸ್ಪರ್ಶ ದುರ್ಘಟನೆ ವೇಳೆ ಯಶ್ ಎಲ್ಲಿದ್ದರು?

    ಗದಗ ನಗರದ ತೇಜಾನಗರದಲ್ಲಿ ಈ ಘಟನೆ ನಡೆದಿದ್ದು, ಅಭಿಮಾನಿ ನಿಖಿಲ್ ಗೌಡ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಗಂಭೀರ ಸ್ಥಿತಿಯಲ್ಲಿರೋ ಗಾಯಾಳು ಅಭಿಮಾನಿಗಳ ಆರೋಗ್ಯ ವಿಚಾರಿಸಿದ ಯಶ್

    ಗಂಭೀರ ಸ್ಥಿತಿಯಲ್ಲಿರೋ ಗಾಯಾಳು ಅಭಿಮಾನಿಗಳ ಆರೋಗ್ಯ ವಿಚಾರಿಸಿದ ಯಶ್

    ಶ್ (Yash) ಹುಟ್ಟುಹಬ್ಬದ (Birthday) ಸಲುವಾಗಿ ಬೃಹತ್ ಗಾತ್ರದ ಕಟೌಟ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶದಿಂದ ಮೂವರು ಮೃತಪಟ್ಟಿದ್ದಾರೆ. ಇನ್ನುಳಿದ ಮೂವರಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಗಂಭೀರ ಪರಿಸ್ಥಿತಿಯಲ್ಲಿರೋ ಅಭಿಮಾನಿಗಳನ್ನು ನೋಡಲು ಯಶ್ ಗದಗದ ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದಾರೆ.

    ಗದಗ ಜಿಲ್ಲೆ ಸೊರಣಗಿ ಗ್ರಾಮದಲ್ಲಿ ಯಶ್ ಹುಟ್ಟುಹಬ್ಬದ ಅಂಗವಾಗಿ ತಡರಾತ್ರಿ ಕಟೌಟ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶದಿಂದ ಮುರಳಿ, ನವೀನ್, ಹನುಮಂತ ಎಂಬ ಮೂವರು ನಿಧನರಾಗಿದ್ದು, ಅವರ ಕುಟುಂಬಸ್ಥರಿಗೆ ಭೇಟಿಯಾಗಿ ಯಶ್ ಸಾಂತ್ವನ ಹೇಳಿದ್ದಾರೆ. ಕುಟುಂಬದ ಜೊತೆ ನಿಲ್ಲುವುದಾಗಿ ಯಶ್ ಭರವಸೆ ನೀಡಿದ್ದಾರೆ. ಇದನ್ನೂ ಓದಿ:ವಿದ್ಯುತ್ ಸ್ಪರ್ಶ ದುರ್ಘಟನೆ ವೇಳೆ ಯಶ್ ಎಲ್ಲಿದ್ದರು?

    ಈ ಅವಘಡದಲ್ಲಿ ಇನ್ನೂ ಮೂವರಿಗೆ ಕರೆಂಟ್ ಶಾಕ್‌ನಿಂದ ಗಂಭೀರ ಗಾಯಗಳಾಗಿದೆ. ಗದಗದ ಜೆಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಯಶ್ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ದುಃಖದ ಭಾವದಲ್ಲಿಯೇ ಹುಬ್ಬಳ್ಳಿ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಗೋವಾದತ್ತ ಯಶ್‌ ಮರಳಿದ್ದಾರೆ. ಒಟ್ನಲ್ಲಿ ಅಭಿಮಾನಿಗಳ ಮೇಲೆಟ್ಟಿರೋ ಯಶ್ ಅಭಿಮಾನಕ್ಕೆ ಫ್ಯಾನ್ಸ್ ಶ್ಲಾಘಿಸಿದ್ದಾರೆ.

  • ವಿದ್ಯುತ್ ಸ್ಪರ್ಶ ದುರ್ಘಟನೆ ವೇಳೆ ಯಶ್ ಎಲ್ಲಿದ್ದರು?

    ವಿದ್ಯುತ್ ಸ್ಪರ್ಶ ದುರ್ಘಟನೆ ವೇಳೆ ಯಶ್ ಎಲ್ಲಿದ್ದರು?

    ಟ ಯಶ್ (Yash) ಅವರ ಹುಟ್ಟುಹಬ್ಬದಂದು (ಜ.8) ಕಟೌಟ್ ನಿಲ್ಲಿಸಲು ಹೋಗಿ ವಿದ್ಯುತ್ ಸ್ಪರ್ಶದಿಂದ ಮೂವರು ಅಭಿಮಾನಿಗಳು ನಿಧನರಾಗಿದ್ದಾರೆ. ತಡರಾತ್ರಿ ಸಂಭವಿಸಿದ ದುರ್ಘಟನೆ ವೇಳೆ ಯಶ್ ಎಲ್ಲಿದ್ದರು, ಏನ್ಮಾಡ್ತಿದ್ದರು? ಎಂಬುದರ ಮಾಹಿತಿ ಇಲ್ಲಿದೆ.

    ಕೆಲಸದ ನಿಮಿತ್ತ ವಿದೇಶಕ್ಕೆ ತೆರಳಿ ಬಳಿಕ ಗೋವಾದಲ್ಲಿದ್ರು ಯಶ್. ದುರ್ಘಟನೆ ಸುದ್ದಿ ತಿಳಿದ ಕೂಡಲೇ ಯಶ್ ಹುಟ್ಟುಹಬ್ಬದ ಖುಷಿಗೆ ಬ್ರೇಕ್ ಹಾಕಿ ಗೋವಾದಿಂದ ಹುಬ್ಬಳ್ಳಿಗೆ ವಿಮಾನ ಮೂಲಕ ಹುಬ್ಬಳ್ಳಿ ಬಂದು ಅಲ್ಲಿಂದ ರಸ್ತೆ ಮಾರ್ಗವಾಗಿ ಗದಗದ ಸೊರಣಗಿ ಗ್ರಾಮಕ್ಕೆ ತೆರಳಿ ಮೃತರಾಗಿರೋ ಮೂವರು ಅಭಿಮಾನಿಗಳ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ತಿಳಿಸಿದ್ದಾರೆ.

    ‘ಟಾಕ್ಸಿಕ್’ ಸಿನಿಮಾಗಾಗಿ ಮಲೇಷಿಯಾ, ಶ್ರೀಲಂಕಾ ಸೇರಿದಂತೆ ಕೆಲವೊಂದು ಸ್ಥಳಗಳನ್ನ ಯಶ್ ಫೈನಲ್ ಮಾಡಲು ಹೋಗಿದ್ದರು. 2025ರ ಏಪ್ರಿಲ್‌ನಲ್ಲಿ ‘ಟಾಕ್ಸಿಕ್’ ಸಿನಿಮಾ ಬರೋದಾಗಿ ಯಶ್ ಅನೌನ್ಸ್ ಮಾಡಿರೋದ್ರಿಂದ ಅದಕ್ಕಾಗಿ ಸಕಲ ತಯಾರಿ ಕೂಡ ಮಾಡ್ತಿದ್ದಾರೆ. ಇದರ ನಡುವೆ ದುರಂತ ಸುದ್ದಿ ಕೇಳಿದ ಕೂಡಲೇ ಮೃತಪಟ್ಟಿರೋ ಮೂವರ ಅಭಿಮಾನಿಗಳ ಕುಟುಂಬಕ್ಕೆ ಭೇಟಿ ನೀಡಿ, ಅವರ ಆಕ್ರಂದನಕ್ಕೆ ಯಶ್‌ ಮಿಡಿದಿದ್ದಾರೆ.

    ಯಶ್ ಬರ್ತ್‌ಡೇಗಾಗಿ ಕಟೌಟ್ ನಿಲ್ಲಿಸುವುದಕ್ಕೆ ಹೋಗಿ ವಿದ್ಯುತ್ ಸ್ಪರ್ಶದಿಂದ ನಿಧನರಾಗಿರುವ ಮೂವರು ಅಭಿಮಾನಿಗಳ ಕುಟುಂಬಸ್ಥರನ್ನು ಯಶ್‌ ಭೇಟಿಯಾಗಿ ಕುಟುಂಬದ ಜೊತೆ ಇರೋದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ:ಮುತ್ತಣ್ಣನಾದ ಡೈನಾಮಿಕ್ ಪ್ರಣಂ ದೇವರಾಜ್

    ಮೃತರನ್ನು ಹನುಮಂತ ಹರಿಜನ್ (24), ಮುರಳಿ ನಡುವಿನಮನಿ (20) ಹಾಗೂ ನವೀನ್ ಗಾಜಿ (20) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಂಜುನಾಥ್, ಪ್ರಕಾಶ್ ಹಾಗೂ ಹನುಮಂತ ಎಂಬವರಿಗೆ ಗಂಭೀರ ಗಾಯಾಳಾಗಿವೆ. ಮಧ್ಯರಾತ್ರಿ 1 ಗಂಟೆ ವೇಳೆ ಕಟೌಟ್ ಕಟ್ಟುವ ವೇಳೆ ಈ ದುರ್ಘಟನೆ ನಡೆದಿದೆ. ಗಾಯಾಳುಗಳನ್ನು ಲಕ್ಷ್ಮೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

    ಮಧ್ಯರಾತ್ರಿ ವೇಳೆ, ಹತ್ತಾರು ಜನ ಯುವಕರು ಸೇರಿಕೊಂಡು ತಮ್ಮ ನೆಚ್ಚಿನ ನಟನ ಕಟೌಟ್ ಕಟ್ಟಲು ಮುಂದಾಗಿದ್ದಾರೆ. ರಾತ್ರಿ ಸಮಯ ಆಗಿದ್ದರಿಂದ ವಿದ್ಯುತ್ ತಂತಿ ಯುವಕರ ಗಮನಕ್ಕೆ ಬಂದಿಲ್ಲ. ಇದರಿಂದ ಈ ದುರ್ಘಟನೆ ಸಂಭವಿಸಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಸೂತಕದ ಛಾಯೆ ಮನೆ ಮಾಡಿದೆ.ಈ ಸಂಬಂಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಇನ್ಮುಂದೆ ನನ್ನ ಕಟೌಟ್ ಹಾಕಬೇಡಿ- ಅಭಿಮಾನಿಗಳಲ್ಲಿ ಯಶ್ ಮನವಿ

    ಇನ್ಮುಂದೆ ನನ್ನ ಕಟೌಟ್ ಹಾಕಬೇಡಿ- ಅಭಿಮಾನಿಗಳಲ್ಲಿ ಯಶ್ ಮನವಿ

    ರಾಕಿಂಗ್ ಸ್ಟಾರ್ ಯಶ್ (Yash) ಅವರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರೋ ಮೂವರು ಅಭಿಮಾನಿಗಳ ಕುಟುಂಬಕ್ಕೆ ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಇದೇ ವೇಳೆ, ಇನ್ಮುಂದೆ ನನ್ನ ಬ್ಯಾನರ್ ಎಲ್ಲೂ ಕಟ್ಟಬೇಡಿ, ಎಲ್ಲಿಯೂ ಕಟೌಟ್ ಹಾಕಬೇಡಿ ಎಂದು ಫ್ಯಾನ್ಸ್‌ಗೆ ಯಶ್ ಮನವಿ ಮಾಡಿದ್ದಾರೆ.

    ಗದಗದ ಸೊರಣಗಿ ಗ್ರಾಮದಲ್ಲಿ ಮೃತರಾಗಿರೋ ಮುರಳಿ, ನವೀನ್, ಹನುಮಂತ ಮೂವರ ಕುಟುಂಬಕ್ಕೂ ಯಶ್ ತೆರಳಿ ಭೇಟಿ ನೀಡಿ ಸಾಂತ್ವನ ಹೇಳಿದ್ದಲ್ಲದೇ ಅವರ ಜೊತೆ ಇರೋದಾಗಿ ಯಶ್ ಭರವಸೆ ನೀಡಿದ್ದಾರೆ. ಅವರ ಕುಟುಂಬಕ್ಕೆ ಏನು ಸಹಾಯ ಬೇಕೋ ಅದನ್ನು ಮಾಡುತ್ತೇನೆ ಎಂದು ಯಶ್ ಮಾತನಾಡಿದ್ದಾರೆ.

    ನಿಮ್ಮೊಂದಿಗೆ ನಾನು ಇದ್ದೇನೆ. ಯಾವುದೇ ಕಾರಣಕ್ಕೂ ಆತಂಕ ಬೇಡ ಎಂದಿದ್ದಾರೆ. ಈ ದುರ್ಘಟನೆ ಆಗಬಾರದಿದ್ದು, ನನಗೂ ತುಂಬಾ ದುಃಖ ಆಗಿದೆ ಎಂದು ಯಶ್ ಹೇಳಿದ್ದಾರೆ. ಇನ್ಮುಂದೆ ನನ್ನ ಬ್ಯಾನರ್ ಕಟ್ಟ ಬೇಡಿ, ಎಲ್ಲಿಯೂ ಕಟೌಟ್‌ಗಳನ್ನು ಹಾಕಬೇಡಿ ಎಂದು ಯಶ್ ಕೋರಿಕೆಯೊಂದನ್ನ ಮುಂದಿಟ್ಟಿದ್ದಾರೆ.

    ನಿಮ್ಮ ಪ್ರೀತಿಗೆ ನಾನು ಸದಾ ಆಭಾರಿಯಾಗಿದ್ದೇನೆ. ಈ ಘಟನೆಯಿಂದ ನನಗೆ ತುಂಬಾ ಬೇಸರವಾಗಿದೆ. ಅಭಿಮಾನಿಗಳ ಅಭಿಮಾನ ಮತ್ತು ನನ್ನ ಕೆಲಸದಿಂದ ಬದುಕು ರೂಪಿಸಿಕೊಂಡಿದ್ದೇನೆ. ಕಲಾವಿದರ ಮೇಲೆ ಅಭಿಮಾನ ಇರಲಿ ಆದರೆ ಈ ರೀತಿಯ ಅಭಿಮಾನ ಬೇಡ ಎಂದು ಯಶ್ ಮಾತನಾಡಿದ್ದಾರೆ.

    ಅಭಿಮಾನಿಗಳು ಅಭಿಮಾನದ ಜೊತೆ ಅವರ ಬದುಕು ರೂಪಿಸಿಕೊಂಡರೆ ನನಗೆ ಸಂತೋಷ. ಈ ಘಟನೆಯಿಂದಾಗಿ ನಾನು ಜನ್ಮದಿನ ಅಚರಣೆ ಮಾಡಬಾರದೆಂದು ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಜನ್ಮದಿನವೆಂದರೆ ನನಗೆ ಭಯವಾಗುತ್ತಿದೆ. ಕೋವಿಡ್ ಕಾರಣ ಜನ್ಮದಿನ ಆಚರಣೆಗೆ ಮುಂದಾಗಲಿಲ್ಲ ಯಶ್ ಮಾತನಾಡಿದ್ದರು. ಕುಟುಂಬಕ್ಕೆ ಸಹಾಯ ಮಾಡುವ ಬಗ್ಗೆ ಘೋಷನೆ ಮಾಡುವುದು ದೊಡ್ಡ ವಿಚಾರವಲ್ಲ. ಆದರೆ ಸದಾ ಅವರ ಕುಟುಂಬದ ಜೊತೆ ಇದ್ದೇ ಇರುತ್ತೇನೆ ಎಂದು ಯಶ್ ಭರವಸೆ ನೀಡಿದ್ದರು.

    ಯಶ್ ಹುಟ್ಟುಹಬ್ಬಕ್ಕೆ ಬೃಹತ್ ಗಾತ್ರದ ಕಟೌಟ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶದಿಂದ 3 ಜನ ಸಾವನ್ನಪ್ಪಿದ ಘಟನೆ ಲಕ್ಷ್ಮೇಶ್ವರದ ಸೂರಣಗಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ:ದುಬೈನಲ್ಲೂ ‘ಕಾಟೇರ’ಗೆ ಭರ್ಜರಿ ರೆಸ್ಪಾನ್ಸ್

    ಮೃತರನ್ನು ಹನುಮಂತ ಹರಿಜನ್ (24), ಮುರಳಿ ನಡುವಿನಮನಿ (20) ಹಾಗೂ ನವೀನ್ ಗಾಜಿ (20) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಂಜುನಾಥ್, ಪ್ರಕಾಶ್ ಹಾಗೂ ಹನುಮಂತ ಎಂಬವರಿಗೆ ಗಂಭೀರ ಗಾಯಾಳಾಗಿವೆ. ಮಧ್ಯರಾತ್ರಿ 1 ಗಂಟೆ ವೇಳೆ ಕಟೌಟ್ ಕಟ್ಟುವ ವೇಳೆ ಈ ದುರ್ಘಟನೆ ನಡೆದಿದೆ. ಗಾಯಾಳುಗಳನ್ನು ಲಕ್ಷ್ಮೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

  • ವಿದ್ಯುತ್‌ ಸ್ಪರ್ಶ ಘಟನೆ- ಮೃತಪಟ್ಟ ಮೂವರು ಅಭಿಮಾನಿಗಳ ಮನೆಗೆ ಭೇಟಿ ನೀಡಿ ಯಶ್‌ ಸಾಂತ್ವನ

    ವಿದ್ಯುತ್‌ ಸ್ಪರ್ಶ ಘಟನೆ- ಮೃತಪಟ್ಟ ಮೂವರು ಅಭಿಮಾನಿಗಳ ಮನೆಗೆ ಭೇಟಿ ನೀಡಿ ಯಶ್‌ ಸಾಂತ್ವನ

    ಟ ಯಶ್ (Yash) ಹುಟ್ಟುಹಬ್ಬದ ಸಲುವಾಗಿ ಕಟೌಟ್ ನಿಲ್ಲಿಸುವುದಕ್ಕೆ ಹೋಗಿ ವಿದ್ಯುತ್ ಸ್ಪರ್ಶದಿಂದ ನಿಧನರಾಗಿರುವ ಮೂವರು ಅಭಿಮಾನಿಗಳ ಕುಟುಂಬಸ್ಥರನ್ನು ಭೇಟಿ ಮಾಡಲು ರಾಕಿಂಗ್‌ ಸ್ಟಾರ್ ಗದಗದ ಸೊರಣಗಿ ಬಂದಿದ್ದಾರೆ. ಭದ್ರತೆಗಾಗಿ ಎಸ್ ಪಿ ವಾಹನದಲ್ಲಿ ಯಶ್ ಆಗಮಿಸಿದ್ದು, ಮೃತ‌ಪಟ್ಟ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವನ ನೀಡಿದ್ದಾರೆ.

    ಮೃತ ಮುರಳಿ ತಂದೆ ಕೈ ಹಿಡಿದು ಯಶ್‌ ಧೈರ್ಯ ತುಂಬಿದ್ದಾರೆ. 3 ಜನ ಮೃತರ ಮನೆಗೆ ಯಶ್‌ ಭೇಟಿ ನೀಡಿದ್ದಾರೆ. ಮೊದಲು ಮೃತ ಮುರಳಿ ಮನೆಗೆ ತೆರಳಿ, ಅವರ ತಂದೆಗೆ ಧೈರ್ಯ ಹೇಳಿ, ಮೃತ ನವೀನ್‌ ಗಾಜಿ ಮತ್ತು ಹನುಮಂತ ಹರಿಜನ್‌ ಮನೆಗೆ ಭೇಟಿ ಯಶ್‌ ಸಾಂತ್ವನ ಹೇಳಿದ್ದಾರೆ. ಇದನ್ನೂ ಓದಿ:ರವಿ ಬಸ್ರೂರ್ ಪುತ್ರನ ಚಿತ್ರಕ್ಕೆ ಇಂಜಿನಿಯರ್ ಶಶಿಕಿರಣ್ ಡೈರೆಕ್ಟರ್

    ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಹುಬ್ಬಳ್ಳಿಗೆ ಯಶ್ ಬಂದಿಳಿದಿದ್ದಾರೆ. ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವನ ಹೇಳಲು ಯಶ್ ಆಗಮಿಸಿದ್ದಾರೆ. ಯಶ್ ಹುಟ್ಟುಹಬ್ಬಕ್ಕೆ ಬೃಹತ್ ಗಾತ್ರದ ಕಟೌಟ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶದಿಂದ 3 ಜನ ಸಾವನ್ನಪ್ಪಿದ ಘಟನೆ ಲಕ್ಷ್ಮೇಶ್ವರ ಸೂರಣಗಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ:ವಿದ್ಯುತ್ ಸ್ಪರ್ಶಿಸಿ ಯಶ್ ಅಭಿಮಾನಿಗಳ ದುರ್ಮರಣ – ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ

    ಮೃತರನ್ನು ಹನುಮಂತ ಹರಿಜನ್ (24), ಮುರಳಿ ನಡುವಿನಮನಿ (20) ಹಾಗೂ ನವೀನ್ ಗಾಜಿ (20) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಂಜುನಾಥ್, ಪ್ರಕಾಶ್ ಹಾಗೂ ಹನುಮಂತ ಎಂಬವರಿಗೆ ಗಂಭೀರ ಗಾಯಾಳಾಗಿವೆ. ಮಧ್ಯರಾತ್ರಿ 1 ಗಂಟೆ ವೇಳೆ ಕಟೌಟ್ ಕಟ್ಟುವ ವೇಳೆ ಈ ದುರ್ಘಟನೆ ನಡೆದಿದೆ. ಗಾಯಾಳುಗಳನ್ನು ಲಕ್ಷ್ಮೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

    ಮಧ್ಯರಾತ್ರಿ ವೇಳೆ, ಹತ್ತಾರು ಜನ ಯುವಕರು ಸೇರಿಕೊಂಡು ತಮ್ಮ ನೆಚ್ಚಿನ ನಟನ ಕಟೌಟ್ ಕಟ್ಟಲು ಮುಂದಾಗಿದ್ದಾರೆ. ರಾತ್ರಿ ಸಮಯ ಆಗಿದ್ದರಿಂದ ವಿದ್ಯುತ್ ತಂತಿ ಯುವಕರ ಗಮನಕ್ಕೆ ಬಂದಿಲ್ಲ. ಇದರಿಂದ ಈ ದುರ್ಘಟನೆ ಸಂಭವಿಸಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಸೂತಕದ ಛಾಯೆ ಮನೆ ಮಾಡಿದೆ.ಈ ಸಂಬಂಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.