ಇಂದು (ಏ.22) ಭೂಮಿಯ (Earth Day) ದಿನಾಚರಣೆವಾಗಿದ್ದು, ಮಗನ ಜೊತೆ ಯಶ್ ಮತ್ತು ರಾಧಿಕಾ ಗಿಡ ನೆಟ್ಟಿದ್ದಾರೆ. ಪುಟ್ಟ ಕೈಗಳು ಸಹ ದೊಡ್ಡ ವ್ಯತ್ಯಾಸವನ್ನು ಮಾಡಬಹುದು ಎಂದು ನಟಿ ರಾಧಿಕಾ (Radhika Pandit) ಅಡಿಬರಹ ನೀಡಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಭೂಮಿ ದಿನದ ಶುಭಾಶಯಗಳು ಎಂದಿದ್ದಾರೆ. ಈ ಮೂಲಕ ವಿಶೇಷ ಸಂದೇಶ ಸಾರಿದ್ದಾರೆ ಯಶ್ ದಂಪತಿ.
ಸದ್ಯ ‘ಟಾಕ್ಸಿಕ್’ ಚಿತ್ರದ ಜೊತೆ ರಣ್‌ಬೀರ್ ಕಪೂರ್ ನಟನೆಯ ‘ರಾಮಾಯಣ’ ಚಿತ್ರದ ನಿರ್ಮಾಣಕ್ಕೆ ಯಶ್ ಸಾಥ್ ನೀಡುತ್ತಿದ್ದಾರೆ.
ಬಾಲಿವುಡ್ ಬೆಡಗಿ ರವೀನಾ ಟಂಡನ್ (Raveena Tandon) ಸದ್ಯ ಶೂಟಿಂಗ್‌ಗೆ ಬ್ರೇಕ್ ಹಾಕಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಪುತ್ರಿ ರಾಶಾ (Rasha) ಜೊತೆ ರವೀನಾ ಮಹಾರಾಷ್ಟ್ರದ (Maharashtra temple) ಗ್ರುಷ್ಣೇಶ್ವರ ಜ್ಯೋತಿರ್ಲಿಂಗ ಮಂದಿರ ಮತ್ತು ಶ್ರೀ ತ್ರಯಂಬಕೇಶ್ವರ ಶಿವ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಗ್ರುಷ್ಣೇಶ್ವರ ಜ್ಯೋತಿರ್ಲಿಂಗ ಮಂದಿರ ಮತ್ತು ಶ್ರೀ ತ್ರಯಂಬಕೇಶ್ವರ ಶಿವ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ರವೀನಾ. ಭೇಟಿ ನೀಡಿರುವ ಸುಂದರ ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ರವೀನಾ ಪುತ್ರಿ ರಾಶಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡೋಕೆ ಸಕಲ ತಯಾರಿ ನಡೆಯುತ್ತಿದೆ. ಒಂದಷ್ಟು ಸಿನಿಮಾ ಕಥೆಗಳ ಮಾತುಕತೆ ಕೂಡ ಆಗಿದೆ. ಸದ್ಯದಲ್ಲೇ ಅಧಿಕೃತ ಮಾಹಿತಿ ಹೋರಬೀಳಲಿದೆ. ಇದನ್ನೂ ಓದಿ:ತೆಲುಗು ನಟ ನಾನಿ ಜೊತೆ ಪೂಜಾ ಹೆಗ್ಡೆ ರೊಮ್ಯಾನ್ಸ್
ಅಂದಹಾಗೆ, ರವೀನಾ ಟಂಡನ್ (Raveena Tandon) ನಟನೆಯ ‘ಪಾಟ್ನಾ ಶುಕ್ಲಾ’ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಕೆಜಿಎಫ್- 3 ಸೇರಿದಂತೆ ಹಲವು ಸಿನಿಮಾಗಳು ಅವರ ಕೈಯಲ್ಲಿವೆ.
ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಕಳೆದ ಕೆಲ ದಿನಗಳಿಂದ ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಇದೀಗ ಈ ವಿಚಾರಕ್ಕೆ ಸಂಜಯ್ ದತ್ ಪ್ರತಿಕ್ರಿಯೆ ನೀಡಿದ್ದಾರೆ. ಹಬ್ಬಿರುವ ವದಂತಿಗೆ ನಟ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ನಾನು ರಾಜಕೀಯಕ್ಕೆ ಸೇರುತ್ತೇನೆ ಎಂಬ ಎಲ್ಲಾ ವದಂತಿಗಳಿಗೆ ತೆರೆ ಎಳೆಯಲು ನಾನು ಬಯಸುತ್ತೇನೆ. ನಾನು ಯಾವುದೇ ಪಕ್ಷಕ್ಕೆ ಸೇರುವುದಿಲ್ಲ. ಚುನಾವಣೆಗೆ ಕೂಡ ಸ್ಪರ್ಧಿಸುವುದಿಲ್ಲ. ನಾನು ರಾಜಕೀಯ ಕ್ಷೇತ್ರಕ್ಕೆ ಕಾಲಿಡಲು ನಿರ್ಧರಿಸಿದರೆ ಅದನ್ನು ಘೋಷಿಸುವ ಮೊದಲ ವ್ಯಕ್ತಿ ನಾನೇ ಆಗಿರುತ್ತೇನೆ ಎಂದು ವದಂತಿಗಳಿಗೆ ಸಂಜಯ್ ದತ್ ತೆರೆ ಎಳೆದಿದ್ದಾರೆ. ರಾಜಕೀಯಕ್ಕೆ ಬರುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್ 2 (KGF 2) ನಟ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ನಾನು ಗೋಮಾಂಸ ತಿನ್ನಲ್ಲ: ಆರೋಪಕ್ಕೆ ತಿರುಗೇಟು ನೀಡಿದ ಕಂಗನಾ
ಸಂಜಯ್ ದತ್ ಉತ್ತರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಒಳ್ಳೆಯ ನಿರ್ಧಾರ ಕೈಗೊಂಡ್ರಿ ರಾಜಕೀಯ ಬೇಡ, ಸಿನಿಮಾದಲ್ಲಿಯೇ ಮುನ್ನುಗ್ಗಿ ಎಂದು ಅಭಿಮಾನಿಗಳು ಬಗೆ ಬಗೆಯ ಕಾಮೆಂಟ್ ಹಾಕಿದ್ದಾರೆ.
ಸಂಜಯ್ ದತ್ ಕೈಯಲ್ಲಿ ಕನ್ನಡದ ‘ಕೆಡಿ’ (KD) ಸಿನಿಮಾ, ಡಬಲ್ ಇಸ್ಮಾರ್ಟ್ ಸೇರಿದಂತೆ ಹಲವು ಸಿನಿಮಾಗಳಿವೆ.
ನ್ಯಾಷನಲ್ ಸ್ಟಾರ್ ಯಶ್ ಸದ್ಯ ‘ಟಾಕ್ಸಿಕ್’ (Toxic Film) ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಕೆಲಸದ ನಡುವೆ ಇದೀಗ ನಟ ಅಜಯ್ ರಾವ್ (Ajay Rao) ದಂಪತಿಯನ್ನು ಯಶ್ (Yash) ಭೇಟಿಯಾಗಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ:ತೆಲುಗು, ತಮಿಳು ಸಿನಿಮಾ ಒಪ್ಪಿಕೊಂಡ ಆಶಿಕಾ ರಂಗನಾಥ್
‘ಕೆಜಿಎಫ್’ (KGF) ಸಕ್ಸಸ್ ನಂತರ ಟಾಕ್ಸಿಕ್ ಚಿತ್ರಕ್ಕಾಗಿ ಯಶ್ ಬ್ಯುಸಿಯಾಗಿದ್ದರು. ಈಗ ಶೂಟಿಂಗ್ ಭರದಿಂದ ಸಾಗುತ್ತಿದೆ. ನಯಾ ಲುಕ್‌ನಲ್ಲಿ ಯಶ್ ಕಾಣಿಸಿಕೊಳ್ತಿದ್ದಾರೆ. ಇದರ ನಡುವೆ ಯಶ್ ಮನೆಗೆ ಅಜಯ್ ರಾವ್ ಭೇಟಿ ನೀಡಿ ಕೆಲ ಕಾಲ ಸಮಯ ಕಳೆದಿದ್ದಾರೆ. ಅಜಯ್ ರಾವ್ ಅವರ ಮನೆ ಗೃಹಪ್ರವೇಶಕ್ಕೆ ಆಹ್ವಾನ ನೀಡಲು ಯಶ್-ರಾಧಿಕಾರನ್ನು (Radhika Pandit) ಭೇಟಿ ಆಗಿದ್ದಾರೆ ಎನ್ನಲಾಗಿದೆ.
ಸದ್ಯ ವೈರಲ್ ಆಗಿರುವ ಫೋಟೋ ನೋಡಿ, ಯಶ್ ತುಂಬಾ ಸಣ್ಣ ಆಗಿದ್ದಾರೆ ಅಲ್ವಾ? ಎಂದೆಲ್ಲಾ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಯಶ್ ಹೊಸ ಲುಕ್ ನೋಡಿ ಖುಷಿಪಟ್ಟಿದ್ದಾರೆ.
ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ (Sanjay Dutt) ಇದೀಗ ‘ಪುಷ್ಪ 2’ (Pushpa 2) ಅಡ್ಡಾಗೆ ಎಂಟ್ರಿ ಕೊಡ್ತಿದ್ದಾರೆ. ಅಲ್ಲು ಅರ್ಜುನ್ (Allu Arjun) ಮುಂದೆ ತೊಡೆ ತಟ್ಟೋಕೆ ಅಧೀರ ರೆಡಿಯಾಗುತ್ತಿದ್ದಾರೆ. ಹಾಗಾದ್ರೆ ಅದ್ಯಾವ ಪಾತ್ರದಲ್ಲಿ ‘ಕೆಜಿಎಫ್ 2’ (KGF 2) ನಟ ಆಕ್ಟ್ ಮಾಡ್ತಿದ್ದಾರೆ. ಇಲ್ಲಿದೆ ಮಾಹಿತಿ.
ಚಿತ್ರರಂಗದಲ್ಲಿ ಸದ್ಯ ಕಮಾಲ್ ಮಾಡ್ತಿರುವ ಸಿನಿಮಾ ಅಂದರೆ ಅದು ದಕ್ಷಿಣ ಭಾರತದ ಚಿತ್ರಗಳು. ಬಾಲಿವುಡ್ ಚಿತ್ರಗಳಿಗೆ ಕಿಮ್ಮತ್ತು ಕೊಡುವ ಕಾಲ ಕಮ್ಮಿಯಾಗಿದೆ. ಪ್ರೇಕ್ಷಕರು ಕೂಡ ಹಿಂದಿ ಚಿತ್ರ ಬಿಟ್ಟು ಕನ್ನಡ, ತೆಲುಗು, ತಮಿಳು, ಮಲಯಾಳಂ ಕಂಟೆಂಟ್‌ಗಳತ್ತ ಆಸಕ್ತಿ ತೋರುತ್ತಿದ್ದಾರೆ. ಹಾಗಾಗಿ ಸಂಜಯ್ ದತ್, ರವೀನಾ, ಅನುಪಮ್ ಖೇರ್ ಇದೀಗ ದಕ್ಷಿಣದ ಚಿತ್ರಗಳ ಕಡೆ ಒಲವು ತೋರಿಸುತ್ತಿದ್ದಾರೆ.
‘ಕೆಜಿಎಫ್ 2’ ಹಿಟ್ ಆದ್ಮೇಲಂತೂ ಕನ್ನಡ ಮತ್ತು ಸೌತ್ ಸಿನಿಮಾಗಳಿಗೆ ಸಂಜಯ್ ದತ್ ಹೆಚ್ಚು ಪ್ರಾಮುಖ್ಯತೆ ಕೊಡ್ತಿದ್ದಾರೆ. ಸದ್ಯ ‘ಪುಷ್ಪ 2’ (Pushpa 2) ಚಿತ್ರಕ್ಕೆ ಸಂಜಯ್ ದತ್ (Sanjay Dutt) ಎಂಟ್ರಿ ಕೊಡಲಿದ್ದಾರೆ. ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗೆಸ್ಟ್ ರೋಲ್ ಆಗಿದ್ರು, ಕೂಡ ಚಿತ್ರಕ್ಕೆ ತಿರುವು ಕೊಡುವ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಒಟ್ನಲ್ಲಿ ಸಂಜಯ್ ದತ್ ಪವರ್‌ಫುಲ್ ಪಾತ್ರದಲ್ಲಿಯೇ ಕಾಣಿಸಿಕೊಳ್ಳಲಿದ್ದಾರೆ.
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna) ನಟಿಸುತ್ತಿರುವ ಈ ಚಿತ್ರದಲ್ಲಿ ಸಂಜಯ್ ದತ್ ಅವತಾರ ಹೇಗಿರಲಿದೆ ಎಂಬುದರ ಬಗ್ಗೆ ಈಗಾಗಲೇ ಫ್ಯಾನ್ಸ್‌ಗೆ ಕುತೂಹಲ ಮೂಡಿಸಿದೆ. ಇದನ್ನೂ ಓದಿ:ಶರಣ್ ನಟನೆಯ ‘ಛೂ ಮಂತರ್’ ಚಿತ್ರದ ರಿಲೀಸ್ ಡೇಟ್ ಫಿಕ್ಸ್
ಅಂದಹಾಗೆ, ‘ಪುಷ್ಪ 2’ ಸಿನಿಮಾ ಇದೇ ಆಗಸ್ಟ್ 15ಕ್ಕೆ ರಿಲೀಸ್ ಆಗಲಿದೆ. ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.
‘ಕೆಜಿಎಫ್ 2′ (KGF2) ಸ್ಟಾರ್ ಯಶ್ (Yash) ಬಿಸಿಲ ನಾಡು ಮೆರವಣಿಗೆ ಹೊರಟಿದ್ದಾರೆ. ಮೊನ್ನೆ ಮೊನ್ನೆ ಇಲ್ಲಿದ್ದವರು ಈಗ ಸಡನ್ನಾಗಿ ಬಳ್ಳಾರಿ ಬಿಸಿಲಿನಲ್ಲಿ ನಿಂತು ಅಭಿಮಾನಿಗಳ ಕಣ್ಣಲ್ಲಿ ಮಳೆ ಸುರಿಸಿದ್ದಾರೆ. ಸದ್ಯ ರಾಜಕೀಯ ಎಂಟ್ರಿ ಬಗ್ಗೆ ಯಶ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಕರುವಿಗೆ ಬಾಟಲಿ ಹಾಲು ಕುಡಿಸಿದ ಯಶ್ ಮಗಳು ಐರಾ
ರಾಕಿಭಾಯ್ ಉತ್ತರ ಕರ್ನಾಟಕಕ್ಕೆ ಹಲವಾರು ಬಾರಿ ಹೋಗಿದ್ದಾರೆ. ಕೆರೆಯ ಜೀರ್ಣೋದ್ಧಾರ ಮಾಡಲು ಆ ನೆಲಕ್ಕೆ ಕಾಲಿಟ್ಟಿದ್ದರು. ಅದಾದ ಮೇಲೆ ಅನೇಕ ಸಾರಿ, ಬೇರೆ ಬೇರೆ ಕಾರಣಗಳಿಗೆ ಯಶ್ ಬಿಸಿಲ ನಾಡಿನಲ್ಲಿ ನಿಂತು ನೀರಾಗಿ ಬಂದಿದ್ದರು. ಈಗ ಮತ್ತೆ ಬಳ್ಳಾರಿಗೆ ಹೋಗಿದ್ದಾರೆ. ಬೆಂಗಳೂರಿನಿಂದ ಸ್ಪೆಶಲ್ ಪ್ರಯಾಣ ಮಾಡಿದ್ದಾರೆ. ರಾಕಿಭಾಯ್ ನಮ್ಮ ಊರಲ್ಲಿ? ಬಳ್ಳಾರಿ ಮಂದಿ ಹುಚ್ಚೆದ್ದು ಕುಣಿದಿದ್ದಾರೆ.
ಮೊದಲೇ ಅದು ಬಳ್ಳಾರಿ. ಗಣಿ ನಾಡು. ಧೂಳು, ಬಿಸಿಲು, ನೆಲ ಸುಡುವ ಕಾವು. ಅದರಲ್ಲೂ ಇದು ಬೇಸಿಕೆ ಕಾಲ. ನೆಲಕ್ಕೆ ಕಾಲು ಊರಲೇ ಸಾಧ್ಯ ಇಲ್ಲ. ಆದರೇನಂತೆ ಯಶ್ ಬಂದ ಮೇಲೆ ಬಿಸಿಲನ್ನು ಮರೆತು ಜನರು ಸೇರಿದ್ದರು. ಅದಕ್ಕೆ ಕಾರಣ ಹಂಚಿಕೆದಾರ ಸಾಯಿ ನಿರ್ಮಿಸಿದ ಅಮೃತೇಶ್ವರ ಸ್ಪಟಿಕ ಲಿಂಗ ದೇವಸ್ಥಾನದ ಉದ್ಘಾಟನೆ. ಇದೇ ಸಾಯಿ ‘ಕೆಜಿಎಫ್’ ಮೊದಲ ಭಾಗವನ್ನು ಆಂಧ್ರದಲ್ಲಿ ಹಂಚಿಕೆ ಮಾಡಿದ್ದರು. ಇದನ್ನೂ ಓದಿ:ತಮಿಳು, ಮಲಯಾಳಂ ಚಿತ್ರರಂಗಕ್ಕೆ ಕೆಆರ್ ಜಿ ಸ್ಟುಡಿಯೋಸ್ ಎಂಟ್ರಿ
‘ಕೆಜಿಎಫ್’ ಮೊದಲ ಭಾಗವನ್ನು ಅದ್ಧೂರಿಯಾಗಿ ಅಷ್ಟೇ ಪ್ಯಾಶಿನೇಟ್ ರೀತಿಯಲ್ಲಿ ಸಾಯಿ ಬಿಡುಗಡೆ ಮಾಡಿದ್ದರು. ಆಂಧ್ರದಲ್ಲಿ ಹಿಟ್ ಆಗಲು ಸಾಯಿ ಸಿನಿಮಾ ಪ್ರೀತಿ ಹಾಗೂ ವ್ಯಾಮೋಹವೂ ಕಾರಣವಾಗಿತ್ತು. ಅದಕ್ಕಾಗಿಯೇ ದೇವಸ್ಥಾನದ ಉದ್ಘಾಟನೆಗೆ ಬರುತ್ತೇನೆ ಎಂದಿದ್ದರು ಯಶ್. ಈಗ ಆ ಮಾತನ್ನು ಉಳಿಸಿಕೊಂಡಿದ್ದಾರೆ. ‘ಟಾಕ್ಸಿಕ್’ (Toxic) ಸಿನಿಮಾ ಇನ್ನೇನು ಆರಂಭವಾಗಲಿದೆ. ಅದರ ನಡುವೆಯೂ ಬಳ್ಳಾರಿ ಮಣ್ಣಿಗೆ ಶರಣಾಗಿದ್ದಾರೆ.
ರಾಜಕೀಯಕ್ಕೆ ಹೋಗುತ್ತಾರಾ ಯಶ್? ಕಾರಣ ಹಿಂದೊಮ್ಮೆ ಸುಮಲತಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಿದ್ದರು. ಮತ್ತೆ ಎಲೆಕ್ಷನ್ ಬಂದಿದೆ. ಈಗ ಏನು ಮಾಡುತ್ತಾರೆ ? ದರ್ಶನ್ ಜೊತೆ ಮತ್ತೆ ಕೈ ಜೋಡಿಸಿ ಜೋಡೆತ್ತಾಗುತ್ತಾರಾ? ಏನು ಯಶ್ ನಿಲುವೇನು? ಈ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿತ್ತು. ಅದಕ್ಕೆ ಉತ್ತರ ಯಶ್ ಕೊಟ್ಟಿದ್ದಾರೆ.
ನಾನು ರಾಜಕೀಯಕ್ಕೆ ಬರಲ್ಲ. ನನಗೆ ಆಸಕ್ತಿ ಇಲ್ಲ ಎಂದು ಸ್ಪಷ್ಟವಾಗಿ ಯಶ್ ಮಾತನಾಡಿದ್ದಾರೆ. ಸದ್ಯ ಯಶ್ ಮುಂದೆ ‘ಟಾಕ್ಸಿಕ್’ ಸಿನಿಮಾ ಬಿಟ್ಟು ಯಾವುದರ ಕಡೆ ಕೂಡ ಗಮನ ಕೊಡುತ್ತಿಲ್ಲ.
ಕೆಜಿಎಫ್, ಕೆಜಿಎಫ್ 2 (KGF 2) ಚಿತ್ರದ ಸಕ್ಸಸ್ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್ ಬಗ್ಗೆ ಸದಾ ಒಂದಲ್ಲಾ ಒಂದು ವಿಚಾರವಾಗಿ ಚಾಲ್ತಿಯಲ್ಲಿರುತ್ತಾರೆ. ಸುದ್ದಿಗೋಷ್ಠಿಯೊಂದರಲ್ಲಿ ಶಾರುಖ್ ಖಾನ್, ಕರೀನಾ ಕಪೂರ್ ‘ಟಾಕ್ಸಿಕ್’ ಚಿತ್ರಕ್ಕೆ ಎಂಟ್ರಿ ಕೊಡ್ತಾರಾ ಎಂಬ ವಿಚಾರಕ್ಕೆ ಯಶ್ ಸ್ಪಷ್ಟನೆ ನೀಡಿದ್ದರು. ಅದರಂತೆ ‘ಹನುಮಾನ್’ 2ನಲ್ಲಿ ರಾಕಿಬಾಯ್ ನಟಿಸ್ತಾರಾ ಎಂಬ ವಿಚಾರಕ್ಕೆ ಸ್ವತಃ ಯಶ್ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ವಿನ್ನರ್ ಕಾರ್ತಿಕ್ ತಂಗಿ ಮಗುವಿಗೆ ಚಿನ್ನದ ಗಿಫ್ಟ್ ಕೊಟ್ಟ ತನಿಷಾ
‘ಹನುಮಾನ್’ ಪಾರ್ಟ್ 2ನಲ್ಲಿ ನಾನು ನಟಿಸುತ್ತಿಲ್ಲ. ಈಗ ‘ಟಾಕ್ಸಿಕ್’ (Toxic) ಸಿನಿಮಾ ಬಿಟ್ಟು ಬೇರೆ ಕಡೆ ಯೋಚನೆ ಮಾಡುತ್ತಿಲ್ಲ. ಪರಭಾಷೆಯಿಂದ ಸಾಕಷ್ಟು ಸಿನಿಮಾಗಳು ನನ್ನನ್ನು ಅರಸಿ ಬಂದಿರೋದು ನಿಜ. ಆದರೆ ಯಾವ ಚಿತ್ರಕ್ಕೂ ನಾನು ಸಹಿ ಹಾಕಿಲ್ಲ ಎಂದು ಯಶ್ ಉತ್ತರಿಸಿದ್ದಾರೆ. ಅಲ್ಲಿಗೆ ಹನುಮಾನ್ 2ನಲ್ಲಿ ಯಶ್ ನಟಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ತೇಜ ಸಜ್ಜ ನಟಿಸಿರುವ ‘ಹನುಮಾನ್’ (Hanuman) ಸಿನಿಮಾ ಈಗಾಗಲೇ ಸೂಪರ್ ಡೂಪರ್ ಹಿಟ್ ಆಗಿದೆ. ಈ ಚಿತ್ರವನ್ನು ಪಾರ್ಟ್ 2 ಮಾಡಲು ತೆರೆಮರೆಯಲ್ಲಿ ಭರದಿಂದ ಸಿದ್ಧತೆ ನಡೆಯುತ್ತಿದೆ. ಹೀಗಿರುವಾಗ ಪ್ರದೀಪ್ ವರ್ಮಾ ಅವರ ನಿರ್ದೇಶನದಲ್ಲಿ ‘ಹನುಮಾನ್ ಪಾರ್ಟ್ 2’ ಮೂಡಿ ಬರಲಿದ್ದು, ಯಶ್ ಲೀಡ್ ರೋಲ್‌ನಲ್ಲಿ ನಟಿಸುತ್ತಾರೆ ಎಂದೇ ಸುದ್ದಿಯಾಗಿತ್ತು. ಅದಕ್ಕೆ ರಾಕಿಭಾಯ್ ಈಗ ಉತ್ತರ ನೀಡಿದ್ದಾರೆ.
‘ಟಾಕ್ಸಿಕ್’ ಶೂಟಿಂಗ್ ಇಷ್ಟರಲ್ಲೇ ಶುರು ಆಗಲಿದೆ. ದೊಡ್ಡ ಮಟ್ಟದ ಪ್ಲ್ಯಾನ್ ನಡೆಯುತ್ತಿದೆ. ‘ಟಾಕ್ಸಿಕ್’ (Toxic) ಚಿತ್ರದ ಬಗ್ಗೆ ಯಾವುದೇ ಕಾಂಪ್ರಮೈಸ್ ಇಲ್ಲದೇ ಮಾಡುತ್ತಿರುವ ಸಿನಿಮಾ ಆಗಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಯಶ್ ಹೇಳಿದ್ದಾರೆ.
ಡೈರೆಕ್ಟರ್ ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮೂಡಿ ಬರುತ್ತಿದೆ. ಕೆವಿಎನ್ ಸಂಸ್ಥೆ (KVN Productions) ಜೊತೆ ಯಶ್ ಕೈಜೋಡಿಸಿದ್ದಾರೆ.
ಕೆಜಿಎಫ್, ಕೆಜಿಎಫ್ 2 (KGF 2) ಸಿನಿಮಾ ಸಕ್ಸಸ್ ಕಂಡ ಮೇಲೆ ನ್ಯಾಷನಲ್ ಸ್ಟಾರ್ ಯಶ್ (Yash) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ‘ಟಾಕ್ಸಿಕ್’ (Toxic) ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸುತ್ತಾರೆ ಎಂದು ಸುದ್ದಿ ಹಬ್ಬಿತ್ತು ಇದು ನಿಜನಾ? ಎಂಬುದರ ಬಗ್ಗೆ ಸುದ್ದಿಗೋಷ್ಠಿಯೊಂದರಲ್ಲಿ ಯಶ್ ಸ್ಪಷ್ಟನೆ ನೀಡಿದ್ದಾರೆ.
‘ಟಾಕ್ಸಿಕ್’ ಶೂಟಿಂಗ್ ಇಷ್ಟರಲ್ಲೇ ಶುರು ಆಗಲಿದೆ. ದೊಡ್ಡ ಮಟ್ಟದ ಪ್ಲಾನ್ ನಡೀತಿದೆ. ‘ಟಾಕ್ಸಿಕ್’ ಚಿತ್ರದ ಬಗ್ಗೆ ಯಾವುದೇ ಕಾಂಪ್ರಮೈಸ್ ಇಲ್ಲದೇ ಮಾಡುತ್ತಿರುವ ಸಿನಿಮಾ ಆಗಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಯಶ್ ಹೇಳಿದ್ದಾರೆ. ‘ಟಾಕ್ಸಿಕ್’ ಶಾರುಖ್ ಖಾನ್ (Sharukh Khan) ನಟಿಸುತ್ತಿಲ್ಲ. ಈ ಸುದ್ದಿ ಸುಳ್ಳು, ಎನೀದರೂ ನಾನು ಮಾಹಿತಿ ನೀಡುತ್ತೇನೆ ಎಂದು ಕ್ಲ್ಯಾರಿಟಿ ಕೊಟ್ಟಿದ್ದಾರೆ.
ಡೈರೆಕ್ಟರ್ ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮೂಡಿ ಬರುತ್ತಿದೆ. ಕೆವಿಎನ್ ಸಂಸ್ಥೆ ಜೊತೆ ಯಶ್ ಕೈಜೋಡಿಸಿದ್ದಾರೆ.
‘ಕೆಜಿಎಫ್’ (KGF) ಸಿನಿಮಾದ ಸಕ್ಸಸ್ ನಂತರ ಯಶ್ ಮುಂದಿನ ಸಿನಿಮಾಗಳ ಬಗ್ಗೆ ಹೆಚ್ಚಿನ ಕಾಳಜಿ ತೋರಿಸುತ್ತಿದ್ದಾರೆ. ಟಾಕ್ಸಿಕ್ ಸಿನಿಮಾದಲ್ಲಿ ವಿಭಿನ್ನ ಪಾತ್ರವಿದೆ. ಯಾವ ತರಹದ ಕಥೆ? ಪಾತ್ರ ಹೇಗಿರಲಿದೆ ಎಂಬುದನ್ನು ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.
ಕೆಜಿಎಫ್, ಕೆಜಿಎಫ್ 2 (KGF 2) ಸಕ್ಸಸ್ ನಂತರ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಳ್ತಿದ್ದಾರೆ. ಎಲ್ಲರೂ ಕಾತರದಿಂದ ಎದುರು ನೋಡ್ತಿರುವ ಸಿನಿಮಾ ಅಂದರೆ ಅದು ಟಾಕ್ಸಿಕ್ ಚಿತ್ರ. ಸದ್ಯ ಯಶ್ (Yash) ತಮ್ಮ 19ನೇ ಸಿನಿಮಾ ಟಾಕ್ಸಿಕ್ ಪ್ರಾಜೆಕ್ಟ್ ಎಲ್ಲಿಗೆ ಬಂತು? ಎಂಬುದರ ಬಗ್ಗೆ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ್ದಾರೆ.
‘ಟಾಕ್ಸಿಕ್’ (Toxic) ಶೂಟಿಂಗ್ ಇಷ್ಟರಲ್ಲೇ ಶುರು ಆಗಲಿದೆ. ದೊಡ್ಡ ಮಟ್ಟದ ಪ್ಲಾನ್ ನಡೀತಿದೆ. ‘ಟಾಕ್ಸಿಕ್’ ಚಿತ್ರದ ಬಗ್ಗೆ ಯಾವುದೇ ಕಾಂಪ್ರಮೈಸ್ ಇಲ್ಲದೇ ಮಾಡುತ್ತಿರುವ ಸಿನಿಮಾ ಆಗಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಯಶ್ ಹೇಳಿದ್ದಾರೆ. ಇದನ್ನೂ ಓದಿ:ನಟಿಸಿದ ಸಿನಿಮಾಗಳು ತೋಪು- ಆದ್ರೂ ಶ್ರೀಲೀಲಾಗೆ ಭಾರೀ ಬೇಡಿಕೆ
ಇಂದು ಕನ್ನಡ ಸಿನಿಮಾರಂಗವನ್ನು ಪರಭಾಷಿಗರು ನೋಡುತ್ತಿರುವ ರೀತಿ ಬಗ್ಗೆ ಯಶ್ ಪ್ರತಿಕ್ರಿಯಿಸಿ, ಹೌದು ಇಂದು ಬೇರೇ ಚಿತ್ರರಂಗದವರು ನಮ್ಮನ್ನು ನೋಡುವ ರೀತಿ ಬದಲಾಗಿದೆ. ನನ್ನಿಂದ ಕನ್ನಡ ಚಿತ್ರರಂಗ ಅಲ್ಲ. ಚಿತ್ರರಂಗಕ್ಕಾಗಿ ನಾನು ಏನು ಮಾಡ್ಬೇಕು ಅಂತಾ ಸದಾ ಯೋಚನೆ ಮಾಡ್ತಿದ್ದೀನಿ. ಹೊಸ ಹೀರೋಗಳಿಗೆ ಬೆಂಬಲಿಸಿ. 4 ಜನ ಹೀರೋಗಳಿಗಷ್ಟೇ ಸಿನಿಮಾ ಮಾಡಿ ಅಂತಾ ಹೇಳೋದಲ್ಲ. ಮಾಡಿರುವ ಸಿನಿಮಾಗಳೆಲ್ಲ ಹಿಟ್ ಆಗಲ್ಲ. ಬರುತ್ತಿರುವ ಸಿನಿಮಾಗಳಿಗೆ ಸಪೋರ್ಟ್ ಮಾಡಿ ಎಂದು ಯಶ್ ಹೇಳಿದ್ದಾರೆ.
ಚಾನಲ್ ಸ್ಯಾಟಲೈಟ್ ರೈಟ್ಸ್ ತಗೋಬೇಕು. ಆಗ ಸಿನಿಮಾಗಳ ಸಂಖ್ಯೆ ಜಾಸ್ತಿ ಆಗುತ್ತದೆ. ಚಿತ್ರರಂಗದವರು ನೆಗೆಟಿವ್ ಆಗಿ ಥಿಂಕ್ ಮಾಡಬೇಡಿ. ಪ್ರಶಾಂತ್ ನೀಲ್ ‘ಉಗ್ರಂ’ ಸಿನಿಮಾ ಮಾಡಿದಾಗ ಯಾರೂ ಸ್ಯಾಟಲೈಟ್ ರೈಟ್ಸ್ ತೆಗೆದುಕೊಂಡಿಲ್ಲ. ರಿಲೀಸ್ ಆದ್ಮೇಲೆ ಎಲ್ಲಾ ಆ ಚಿತ್ರದ ಮಾತನಾಡಿದ್ದರು. ಪ್ರತಿಭೆ ಇರೋರನ್ನು ಬೆಳೆಸಿ, ಹೊಸಬರ ಸಿನಿಮಾಗಳಿಗೂ ಪ್ರೋತ್ಸಾಹ ನೀಡಿ ಎಂದು ಯಶ್ ಮನವಿ ಮಾಡಿದ್ದರು.
ಡೈರೆಕ್ಟರ್ ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮೂಡಿ ಬರುತ್ತಿದೆ. ಕೆವಿಎನ್ ಸಂಸ್ಥೆ ಜೊತೆ ಯಶ್ ಕೈಜೋಡಿಸಿದ್ದಾರೆ.
‘ಕೆಜಿಎಫ್ 2′ (KGF 2) ನಟ ಯಶ್ (Yash) ಇದೀಗ ಸೆಲೆಬ್ರಿಟಿ ಟ್ರೈನರ್ ಕಿಟ್ಟಿ ಅವರ ಹೊಸ ಜಿಮ್ ಉದ್ಘಾಟಿಸಿದ್ದಾರೆ. ಪ್ರೇಮಿಗಳ ದಿನಾಚರಣೆಯಂದು ಪಾನಿಪುರಿ ಕಿಟ್ಟಿ ಅವರ ಹೊಸ ಜಿಮ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಯಶ್ ಭಾಗಿಯಾಗಿ ಹಾರೈಸಿದ್ದಾರೆ. ಇದನ್ನೂ ಓದಿ:ವ್ಯಾಲೆಂಟೈನ್ ದಿನದ ವಿಶೇಷ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್
ಜಿಮ್ ಟ್ರೈನರ್ ಕಿಟ್ಟಿ ಮತ್ತು ಯಶ್ ಹಲವು ವರ್ಷಗಳಿಂದ ಸ್ನೇಹಿತರು. ಯಶ್‌ಗೆ ಕಿಟ್ಟಿ ಫಿಟ್‌ನೆಸ್ ಟ್ರೈನರ್ ಆಗಿದ್ದಾರೆ. ಈ ಹಿಂದೆ ಕಿಟ್ಟಿ ಅವರ ಹಳೆಯ ಜಿಮ್ ಬ್ರ್ಯಾಂಚ್‌ಗಳನ್ನು ಯಶ್ ಚಾಲನೆ ನೀಡಿದ್ದರು. ಈ ಬಾರಿ ಕತ್ರಿಗುಪ್ಪೆ ಮುಖ್ಯ ರಸ್ತೆಯಲ್ಲಿ ‘ಕಿಟ್ಟೀಸ್ ಮಸಲ್ ಪ್ಲಾನೆಟ್’ ಎಂಬ ಜಿಮ್‌ಗೆ ಯಶ್ ಚಾಲನೆ ನೀಡಿದ್ದಾರೆ.
ಹೊಸ ಬ್ರ್ಯಾಂಚ್ ಉದ್ಘಾಟನೆ ಕಾರ್ಯಕ್ರಮಕ್ಕೆ ಕರೆದಾಗ ವ್ಯಾಲೆಂಟೈನ್ ದಿನ ಎಂಬುದು ಅವರ ಅರಿವಿಗೆ ಇರಲಿಲ್ಲ. ನನಗೂ ಇದರ ಬಗ್ಗೆ ಐಡಿಯಾ ಇರಲಿಲ್ಲ. ಆದರೆ ಯಶ್ ಖಾಸಗಿ ಕೆಲಸ ಮುಗಿಸಿ ಉದ್ಘಾಟನೆಯಲ್ಲಿ ಭಾಗಿಯಾಗಿರೋದಾಗಿ ತಿಳಿಸಿದರು. ಬಳಿಕ ಸ್ನೇಹಿತ ಕಿಟ್ಟಿ ಹೊಸ ಹೆಜ್ಜೆಗೆ ಯಶ್ ಶುಭಕೋರಿದ್ದರು.
ಯಶ್ ಜೊತೆ ಅಜಯ್ ರಾವ್, ನೆನಪಿರಲಿ ಪ್ರೇಮ್, ಅಮೃತಾ ಪ್ರೇಮ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಜಿಮ್ ಟ್ರೈನರ್ ಕಿಟ್ಟಿಗೆ ಶುಭಹಾರೈಸಿದ್ದಾರೆ.