ನ್ಯಾಷನಲ್ ಸ್ಟಾರ್ ಯಶ್ ಅವರು ‘ಟಾಕ್ಸಿಕ್’ (Toxic Film) ಸಿನಿಮಾಗೂ ಮುನ್ನ ಸಲ್ಮಾನ್ ಖಾನ್ (Salman Khan) ಬ್ಯಾನರ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ‘ಆ್ಯಂಗ್ರಿ ಯಂಗ್ ಮ್ಯಾನ್’ (Angry Young Man) ಬಾಲಿವುಡ್ ಟ್ರೈಲರ್‌ನಲ್ಲಿ ಯಶ್ ಕಾಣಿಸಿಕೊಳ್ಳುವ ಮೂಲಕ ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದ್ದಾರೆ.

ಸಲ್ಮಾನ್ ಖಾನ್ ನಿರ್ಮಾಣದಲ್ಲಿ ಬಾಲಿವುಡ್‌ನ ರೈಟರ್ ಸಲೀಂ ಖಾನ್ ಮತ್ತು ಜಾವೇದ್ ಕುರಿತು ಡಾಕ್ಯುಮೆಂಟರಿ ಟ್ರೈಲರ್ ಅನ್ನು ರಿಲೀಸ್ ಮಾಡಲಾಗಿದೆ. ಈ ಡಾಕ್ಯುಮೆಂಟರಿ ಬಗ್ಗೆ ಸಲ್ಮಾನ್ ಖಾನ್, ಹೃತಿಕ್ ರೋಷನ್, ಜಯಾ ಬಚ್ಚನ್, ಬಿಗ್ ಬಿ ಸೇರಿದಂತೆ ಅನೇಕರು ಸಲೀಂ ಮತ್ತು ಜಾವೇದ್ ಅವರ ಸಾಧನೆ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಸೌತ್ ಚಿತ್ರರಂಗದಿಂದ ಯಶ್ (Actor Yash) ಒಬ್ಬರೇ ಟ್ರೈಲರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
View this post on Instagram
ಆ.20ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ‘ಆ್ಯಂಗ್ರಿ ಯಂಗ್ ಮ್ಯಾನ್’ ಡಾಕ್ಯುಮೆಂಟರಿ ಬಗ್ಗೆ ಮಾತನಾಡಿದ ಯಶ್, ಇವತ್ತು ಜನ ಯಾಕೆ ಆ ಡೈಲಾಗ್ ಹೇಳುತ್ತಾರೆ. ಅದನ್ನು ನೆನಪಿಡುತ್ತಾರೆ ಗೊತ್ತಾ? ಯಾಕೆಂದರೆ ಅವುಗಳು ಡೈಲಾಗ್‌ಗಳಾಗಿರಲಿಲ್ಲ. ಅದು ಫಿಲಾಸಫಿ ಆಗಿತ್ತು ಎಂದು ಯಶ್ ಮಾತನಾಡಿದ್ದಾರೆ. ಈ ಮೂಲಕ ಸಲ್ಮಾನ್ ಖಾನ್ ಬ್ಯಾನರ್‌ನಲ್ಲಿ ರಾಕಿ ಬಾಯ್ ಕಾಣಿಸಿಕೊಂಡಿದ್ದಾರೆ.
ಅಂದಹಾಗೆ, ಕಳೆದ ವಾರ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಮುಹೂರ್ತ ಕಾರ್ಯಕ್ರಮ ಸರಳವಾಗಿ ಜರುಗಿದೆ. ಶೂಟಿಂಗ್ ಕೂಡ ಭರದಿಂದ ಸಾಗುತ್ತಿದೆ. ಮುಂದಿನ ವರ್ಷ ಈ ಸಿನಿಮಾ ರಿಲೀಸ್ ಆಗಲಿದೆ.






ಅಂದಹಾಗೆ, ಇತ್ತೀಚೆಗೆ ಅಂಬಾನಿ ಮನೆ ಮಗನ ಮದುವೆಗೆ ಯಶ್ (Yash) ದಂಪತಿ ಹಾಜರಿ ಹಾಕಿದ್ದರು. ಈ ವೇಳೆ, ಯಶ್ ಹೊಸ ಲುಕ್ ಭಾರೀ ವೈರಲ್ ಆಗಿತ್ತು. ಅದರಂತೆ ರಾಧಿಕಾ ಪಂಡಿತ್, ಸೀರೆಯುಟ್ಟು ಸಿಂಪಲ್ ಆಗಿ ಭಾಗಿಯಾಗಿದ್ದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿತ್ತು.
ಸೆಲೆಬ್ರಿಟಿ ಹೇರ್ ಸ್ಟೈಲೀಸ್ಟ್ ಅಲೆಕ್ಸ್ ವಿಜಯಕಾಂತ್ ಅವರು ರಾಕಿ ಬಾಯ್ ಲುಕ್ ಬಗ್ಗೆ ಪ್ರತಿಕ್ರಿಯಿಸಿ, ಯಶ್ ಅವರ ಹೊಸ ಲುಕ್ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ಬಗ್ಗೆ ಫ್ಯಾನ್ ಚರ್ಚೆ ಮಾಡಿದರು. ಈ ಲುಕ್ ‘ಟಾಕ್ಸಿಕ್’ ಮಾಡಿರೋದು. ನಾನು ಕೂಡ ಕಥೆ ಕೇಳಿದಾಗ ಈ ಹೇರ್ ಸ್ಟೈಲ್ ಯಶ್ ಪಾತ್ರಕ್ಕೆ ಸೂಕ್ತವಾಗಿದೆ ಎಂದು ನನಗೆ ತಿಳಿದಿತ್ತು. ಯಶ್ ಪಾತ್ರಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುವ ‘ಪಾಂಪಡೋರ್’ ಶೈಲಿಯಲ್ಲಿ ಸ್ಟೈಲ್ ಮಾಡಿದ್ದೇವೆ ಎಂದಿದ್ದಾರೆ.
ಯಶ್ ಹೇರ್ ಸ್ಟೈಲ್ ಯಾವುದು ಅಂದರೆ ‘ಪಾಂಪಡೋರ್’ ಎಂದು ಕರೆಯಲಾಗುತ್ತದೆ ಎಂದಿದ್ದಾರೆ. ಈ ಸಿನಿಮಾದಲ್ಲಿ ನಿರ್ವಹಿಸುತ್ತಿರುವ ಪಾತ್ರಕ್ಕೆ ಸಖತ್ ಟ್ವಿಸ್ಟ್ ಕೂಡ ಇದೆ ಎಂದು ಅಲೆಕ್ಸ್ ಮಾತನಾಡಿದ್ದಾರೆ. ಇದನ್ನೂ ಓದಿ:




ರಿಜ್ವಿ ಕಾಲೇಜು ಬಳಿಯ ಕಾರ್ಟರ್ ರಸ್ತೆಯಲ್ಲಿ ರವೀನಾ ಅವರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಮೂವರಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಅವರ ತಲೆ ಮತ್ತು ಮೂಗಿಗೆ ಗಾಯಗಳಾಗಿವೆ. ಈ ಘಟನೆಯಿಂದ ರೊಚ್ಚಿಗೆದ್ದ ಸ್ಥಳಿಯರು ಕಾರು ಚಾಲಕನ ಮೇಲೆ ಹಲ್ಲೆ ಮಾಡುವುದಕ್ಕೆ ಮುಂದಾಗಿದ್ದಾರೆ. ಕಾರು ಚಾಲಕನ್ನು ಪಾರು ಮಾಡಲು ಬಂದ ನಟಿ, ತನ್ನ ಕಾರಿನಿಂದ ಇಳಿದು ಸಂತ್ರಸ್ತರಿಗೆ ನಿಂದಿಸಿದ್ದಾರೆ ಎನ್ನಲಾಗಿದೆ.





ಮಂಗಳೂರಿನ ಹೊರವಲಯದ ಕಿನ್ನಿಗೋಳಿ ತಮ್ಮ ಕುಟುಂಬದ ಮನೆ ತಾಳಿಪಾಡಿ ಗುತ್ತುವಿನಲ್ಲಿ ಈ ಹರಕೆ ನೇಮೋತ್ಸವ ನಡೆಯಿತು. ಈ ಹಿಂದೆ ತನ್ನ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತಂತೆ ಕಿನ್ನಿಗೋಳಿ ಸಮೀಪ ತಾಳಿಪಾಡಿ ಗುತ್ತುವಿನಲ್ಲಿ ಜಾರಾಂದಾಯ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆಸಲಾಯಿತು. ಇದನ್ನೂ ಓದಿ:
ಈ ವೇಳೆ, ಶ್ರೀನಿಧಿ ಶೆಟ್ಟಿಯವರ ಕುಟುಂಬ ವರ್ಗದವರು ಸಂಬಂಧಿಕರು ಪಾಲ್ಗೊಂಡಿದ್ದಾರೆ. ತನ್ನ ಯಶಸ್ಸಿನ ಹಿಂದೆ ಕುಟುಂಬದ ದೈವಗಳ ಆಶೀರ್ವಾದ ಇದ್ದು, ತನ್ನ ಇಷ್ಟಾರ್ಥ ಸಿದ್ಧಿಗಾಗಿ ಈ ಹರಕೆ ಹೇಳಿಕೊಂಡಿದ್ದರು. ಅದರಂತೆ ಇದೀಗ ಹರಕೆಯನ್ನು ಶ್ರೀನಿಧಿ ಶೆಟ್ಟಿ ಸಲ್ಲಿಸಿದ್ದಾರೆ. ಮುಂದೆ ಇನ್ನಷ್ಟು ಎತ್ತರಕ್ಕೆ ಏರುತ್ತೀಯ ಎಂದು ದೈವಗಳು ‘ಕೆಜಿಎಫ್’ ನಟಿಗೆ ಅಭಯ ನೀಡಿದೆ.

