Tag: KGF-2

  • ಛತ್ರಪತಿ ಶಿವಾಜಿ ಪಾತ್ರದಲ್ಲಿ ಕಾಣಿಸಿಕೊಳ್ಳುವಂತೆ ಯಶ್‌ಗೆ ಮಹಾರಾಷ್ಟ್ರ ಫ್ಯಾನ್ಸ್ ಮನವಿ

    ಛತ್ರಪತಿ ಶಿವಾಜಿ ಪಾತ್ರದಲ್ಲಿ ಕಾಣಿಸಿಕೊಳ್ಳುವಂತೆ ಯಶ್‌ಗೆ ಮಹಾರಾಷ್ಟ್ರ ಫ್ಯಾನ್ಸ್ ಮನವಿ

    ನ್ಯಾಷನಲ್ ಸ್ಟಾರ್ ಯಶ್ `ಕೆಜಿಎಫ್ ಚಾಪ್ಟರ್ 2′ ಸಿನಿಮಾ ಸಕ್ಸಸ್ ನಂತರ ವರ್ಲ್ಡ್ ವೈಡ್ ಫ್ಯಾನ್ಸ್ ಇದ್ದಾರೆ. ಈ ಚಿತ್ರದ ನಂತರ ಯಶ್ ಮುಂದಿನ ನಡೆ ಏನು ಎಂಬುದರ ಬಗ್ಗೆ ಸಖತ್ ಚರ್ಚೆ ಆಗುತ್ತಿದೆ. ದೇಶದ ಮೂಲೆ ಮೂಲೆಯಲ್ಲೂ ಅಭಿಮಾನಿಗಳ ಬಳಗ ಹೊಂದಿರುವ ಯಶ್‌ಗೆ ಮಹಾರಾಷ್ಟ್ರ ಫ್ಯಾನ್ಸ್ ಮನವಿಯೊಂದನ್ನ ಮಾಡಿದ್ದಾರೆ.

    `ಕೆಜಿಎಫ್’ ಸಿನಿಮಾ ಭರ್ಜರಿ ಸಕ್ಸಸ್ ನಂತರ ಯಶ್ ರೇಂಜೇ ಬೇರೇ ಲೆವೆಲ್‌ಗೆ ಹೋಗಿದೆ. ಯಶ್ ಸಿನಿಮಾ ಅಂದ್ರೆ ಕಾತರದಿಂದ ಕಾಯುತ್ತಾರೆ ಅಭಿಮಾನಿಗಳು. ಗಾಂಧಿನಗರದಲ್ಲಿ ಒಂದೇ ಚರ್ಚೆ ಯಶ್ ಮುಂದಿನ ಸಿನಿಮಾ ಯಾವುದು, ರಾಕಿಭಾಯ್ ಯಾವ ಅವತಾರವೆತ್ತಿದ್ರೆ ಚೆನ್ನಾಗಿರುತ್ತೆ ಅಂತಾ ಅಭಿಮಾನಿಗಳೇ ಲೆಕ್ಕಚಾರ ಹಾಕ್ತಿದ್ದಾರೆ. ಮಹಾರಾಷ್ಟ್ರದ ಅಭಿಮಾನಿಗಳು, ತಮ್ಮ ನಾಯಕ ಛತ್ರಪತಿ ಶಿವಾಜಿ ಅವತಾರದಲ್ಲಿ ಕಾಣಿಸಿಕೊಳ್ಳುವಂತೆ ಯಶ್‌ಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ:ಕಿಯಾರಾಗೆ ಸಿದ್ಧಾರ್ಥ್ ಮಲ್ಹೋತ್ರಾ ಕ್ಲಾಸ್: ಅಷ್ಟಕ್ಕೂ ಆಗಿದ್ದೇನು?

    ಯಶ್ ಈಗ ಕನ್ನಡದ ನಟನಾಗಿ ಉಳಿದಿಲ್ಲ. ವಿಶ್ವದ ಎಲ್ಲೆಡೆ ಅಭಿಮಾನಿಗಳ ಪ್ರೀತಿ ಗಿಟ್ಟಿಸಿಕೊಂಡಿರುವ ಯಶ್‌ಗೆ ಛತ್ರಪತಿ ಶಿವಾಜಿ ಅವತಾರದಲ್ಲಿ ಕಾಣಿಸಿಕೊಳ್ಳುವಂತೆ ಮಹಾರಾಷ್ಟ್ರದ ಫ್ಯಾನ್ಸ್ ಕೇಳಿಕೊಂಡಿದ್ದಾರೆ. ಶಿವಾಜಿ ಅವರ ಬಯೋಪಿಕ್ ಮಾಡುವಂತೆ ಕೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಛತ್ರಪತಿ ಶಿವಾಜಿ ಲುಕ್‌ನಲ್ಲಿ ಯಶ್ ಫ್ಯಾನ್ ಮೇಡ್ ಪೋಸ್ಟರ್ ಮಾಡಿ ಬಿಟ್ಟಿದ್ದಾರೆ.

    ಮರಾಠಿಗರಿಗೆ ಯಶ್, ಛತ್ರಪತಿ ಶಿವಾಜಿ ಪಾತ್ರದಲ್ಲಿ ನಟಿಸಬೇಕು. ಆ ಸಿನಿಮಾವನ್ನು ಮೂವಿ ಮಾಂತ್ರಿಕ ರಾಜಮೌಳಿ ನಿರ್ದೇಶನ ಮಾಡಬೇಕಂಬ ಆಸೆ. ಆದರಂತೆ ಕನ್ನಡದ ಯಶ್ ಅಭಿಮಾನಿಗಳಿಗೂ ಒಂದು ಆಸೆಯಿದೆ. ಇವರಿಗೆ ಯಶ್ ಇಮ್ಮಡಿ ಪುಲಕೇಶಿ ಅವತಾರೆವೆತ್ತಬೇಕು ಅಂತ ಆಸೆ. ಇವರಿಬ್ಬರ ಆಸೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಯಾರ ಆಸೆಯನ್ನು ಈಡೇರಿಸುತ್ತಾರೆ ಎಂಬುದನ್ನ ಕಾದುನೋಡಬೇಕಿದೆ.

  • 50ನೇ ದಿನಕ್ಕೆ ಕೆಜಿಎಫ್ 2 : ಶಾರುಖ್ ಖಾನ್ ಗೆ ಸಿನಿಮಾ ಮಾಡುತ್ತಾ ಹೊಂಬಾಳೆ ಫಿಲ್ಮ್ಸ್

    50ನೇ ದಿನಕ್ಕೆ ಕೆಜಿಎಫ್ 2 : ಶಾರುಖ್ ಖಾನ್ ಗೆ ಸಿನಿಮಾ ಮಾಡುತ್ತಾ ಹೊಂಬಾಳೆ ಫಿಲ್ಮ್ಸ್

    ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲ್ಸ್ಮ್ ಕಾಂಬಿನೇಷನ್ ನ, ಯಶ್ ನಟನೆಯ ಕೆಜಿಎಫ್ 2 ಸಿನಿಮಾ ಇನ್ನೆರಡು ದಿನಗಳಲ್ಲಿ 50 ದಿನ ಪೂರೈಸುತ್ತಿದೆ. ಈ ಸಂದರ್ಭದಲ್ಲಿ ಹೊಸ ಸಿನಿಮಾ ಘೋಷಣೆ ಆಗತ್ತಾ? ಅಥವಾ ಯಶ್ ಅವರ ಹೊಸ ಸಿನಿಮಾದ ಬಗ್ಗೆ ಅಪ್ ಡೇಟ್ ಸಿಗತ್ತಾ ಎಂದು ಕಾಯುವಂತಾಗಿತ್ತು. ಆದರೆ, ಹೊಸದೊಂದು ಸುದ್ದಿ ಬಂದಿದೆ ಹೊಂಬಾಳೆ ಅಂಗಳದಿಂದ. ಈಗಾಗಲೇ ಕನ್ನಡ, ತೆಲುಗು ಮತ್ತು ಮಲಯಾಳಂನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿರುವ ಈ ಸಂಸ್ಥೆ, ಸದ್ಯದಲ್ಲೇ ಬಾಲಿವುಡ್ ಗೂ ಕಾಲಿಡಲಿದೆಯಂತೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನಿಗೆ ಆಕ್ಸ್ ಫರ್ಡ್ ಯೂನಿವರ್ಸಿಟಿಯಲ್ಲಿ ಅವಮಾನ

    ಮಾಧ್ಯಮವೊಂದರ ಜೊತೆ ಮಾತನಾಡಿರುವ ನಿರ್ಮಾಪಕ ವಿಜಯ್ ಕಿರಗಂದೂರು, ‘ಈಗಾಗಲೇ ಮೂರು ಭಾಷೆಗಳಲ್ಲಿ ನೇರವಾಗಿ ಸಿನಿಮಾ ನಿರ್ಮಾಣ ಮಾಡಿದ್ದೇವೆ. ಬಾಲಿವುಡ್ ನಲ್ಲೂ ಸಿನಿಮಾ ಮಾಡುವ ಮಾತುಕತೆ ನಡೆದಿದೆ. ಅಂದುಕೊಂಡಂತೆ ಆದರೆ, ಮಾರ್ನಾಲ್ಕು ತಿಂಗಳಲ್ಲಿ ಬಾಲಿವುಡ್ ಸಿನಿಮಾ ಘೋಷಣೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ : ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?

    ಈಗಾಗಲೇ ಹೊಂಬಾಳೆ ಫಿಲ್ಮಸ್ ನಿರ್ಮಾಣದ ಕೆಜಿಎಫ್ 2 ಸಿನಿಮಾ ಹಿಂದಿಯಲ್ಲೇ ಅತೀ ಹೆಚ್ಚು ಹಣ ಮಾಡಿದೆ. ಕೆಲವೇ ದಿನಗಳಲ್ಲಿ ಕೇವಲ ಬಾಲಿವುಡ್ ನಲ್ಲೇ ಕೆಜಿಎಫ್ 2 ಸಿನಿಮಾ 500 ಕೋಟಿ ಬಾಚಲಿದೆ. ಹೀಗಾಗಿ ಬಾಲಿವುಡ್ ನಲ್ಲಿ ಸಿನಿಮಾ ಮಾಡಲು ಸಂಸ್ಥೆ ಮುಂದಾಗಿದೆ. ನಿರ್ದೇಶಕನಿಗಾಗಿ ಹುಡುಕಾಟ ಕೂಡ ಮಾಡಲಾಗುತ್ತಿದೆಯಂತೆ. ಇದನ್ನೂ ಓದಿ : ನಟ ಚೇತನ್ ಇಂದು ಕೋರ್ಟಿಗೆ ಹಾಜರ್

    ನಿರ್ಮಾಪಕರು ಆಪ್ತರ ಪ್ರಕಾರ ಮುಂದಿನ ದಿನಗಳಲ್ಲಿ ಹೊಂಬಾಳೆ ಫಿಲ್ಮಸ್ ಶಾರುಖ್ ಖಾನ್ ಗಾಗಿ ಸಿನಿಮಾ ಮಾಡಲಿದೆಯಂತೆ. ಈಗಾಗಲೇ ಮಾತುಕತೆ ಕೂಡ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರಕ್ಕಾಗಿಯೇ ನಿರ್ದೇಶಕರನ್ನು ಹುಡುಕುತ್ತಿದ್ದಾರಂತೆ. ಅಂದುಕೊಂಡಂತೆ ಆದರೆ, ಬಾಲಿವುಡ್ ನಲ್ಲಿ ಶಾರುಖ್ ಖಾನ್ ನಟನೆಯ ಚಿತ್ರದ ಹೊಂಬಾಳೆ ಮೊದಲ ಬಾಲಿವುಡ್ ಚಿತ್ರವಾಗಲಿದೆ.

  • `ಕೆಜಿಎಫ್’ ನಿರ್ದೇಶಕನಿಗೆ ಟಕ್ಕರ್ ಕೊಡಲು ಸಜ್ಜಾದ `ಪುಷ್ಪ’ ಡೈರೆಕ್ಟರ್ ಸುಕುಮಾರ್

    `ಕೆಜಿಎಫ್’ ನಿರ್ದೇಶಕನಿಗೆ ಟಕ್ಕರ್ ಕೊಡಲು ಸಜ್ಜಾದ `ಪುಷ್ಪ’ ಡೈರೆಕ್ಟರ್ ಸುಕುಮಾರ್

    `ಕೆಜಿಎಫ್’ ಸಿನಿಮಾ ಮತ್ತು ಪುಷ್ಪ ಚಿತ್ರ ಶುರುವಾದಗಿನಿಂದಲೂ ಈ ಎರಡು ಚಿತ್ರದ ನಿರ್ದೇಶಕರ ಮಧ್ಯೆ ಪೈಪೋಟಿ ನಡೆಯುತ್ತಲೇ ಇದೆ. ಇದೀಗ ʻಪುಷ್ಪ 2ʼ ಮತ್ತು ಸಲಾರ್ ಚಿತ್ರದಲ್ಲೂ ಈ ಪೈಪೋಟಿ ಪ್ರಶಾಂತ್ ನೀಲ್ ಮತ್ತು ಸುಕುಮಾರ್ ನಡುವೆ ಮುಂದುವರೆದಿದೆ.

    ಪ್ರಶಾಂತ್‌ನೀಲ್‌ಗೂ ಮತ್ತು ಪುಷ್ಪ ನಿರ್ದೇಶಕ ಸುಕುಮಾರ್‌ಗೂ ಸಿನಿಮಾಗಳ ವಿಚಾರವಾಗಿ ಖಡಕ್ ಪೈಪೋಟಿ ನಡೆಯುತ್ತಲೇ ಇದೆ. ಕೆಜಿಎಫ್‌ಗಿಂತ 10 ಪಟ್ಟು ಪುಷ್ಪ ಚಿತ್ರ ಉತ್ತಮವಾಗಿದೆ ಅಂತಾ ಹೇಳಿ ಕನ್ನಡಿಗರ ಕೆಂಗಣ್ಣಿಗೂ ಈ ಚಿತ್ರತಂಡ ಗುರಿಯಾಗಿತ್ತು. ಆದರೆ ಕೆಜಿಎಫ್ 2 ಚಿತ್ರದ ಸಕ್ಸಸ್ ಈ ಎಲ್ಲಾ ಕೊಂಕು ಮಾತಿಗೂ ಉತ್ತರ ಕೊಟ್ಟಿತ್ತು. ಅಂದಿನಿಂದ ಇವರೆಗೂ ನಮ್ಮ ಸಿನಿಮಾನೇ ಬೆಸ್ಟ್ ಅಂತಾ ಈ ಇಬ್ಬರ ನಿರ್ದೇಶಕರ ನಡುವೆ ಕಾದಾಟ ನಡೆಯುತ್ತಲೇ ಇದೆ. ಇದೀಗ ಸಲಾರ್ ಮತ್ತು `ಪುಷ್ಪ 2′ ಚಿತ್ರದವೆಗೂ ಮುಂದುವರೆದಿದೆ.

    `ಪುಷ್ಪ 2′ ಮತ್ತು ಸಲಾರ್ 2023ಕ್ಕೆ ತೆರೆಗೆ ಅಬ್ಬರಿಸಲು ಸಜ್ಜಾಗಿದೆ. ಪ್ರಶಾಂತ್ ನೀಲ್‌ಗೆ ಪೈಪೋಟಿ ನೀಡೋಕೆ ಅಂತಲೇ ಸುಕುಮಾರ್ ಕೂಡ ಚಿತ್ರಕಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಹಾಗಾಗಿನೇ ಮುಂದಿನ ವರ್ಷ ಈ ಎರಡು ಚಿತ್ರಗಳ ಮಧ್ಯೆ ಬಿಗ್ ಕ್ಲ್ಯಾಶ್‌ ಆಗುವ ಸಾಧ್ಯತೆಯಿದೆ. ಇದನ್ನೂ ಓದಿ: ಜಗ್ಗೇಶ್ ಗೆ ಡಬಲ್ ಖುಷಿ : ವರಮಹಾಲಕ್ಷ್ಮೀ ಹಬ್ಬಕ್ಕೆ ರಾಘವೇಂದ್ರ ಸ್ಟೋರ್ಸ್

    ದಾಖಲೆಗಳ ಮೇಲೆ ದಾಖಲೆ ಮಾಡಿರುವ ಯಶ್ ಮತ್ತು ಪ್ರಶಾಂತ್ ನೀಲ್ ಚಿತ್ರಕ್ಕೆ ಸುಕುಮಾರ್ ಸೆಡ್ಡು ಹೊಡೆಯುತ್ತಾರಾ. ಈ ಇಬ್ಬರಲ್ಲಿ ಯಾರು ಗೆಲ್ಲುತ್ತಾರೆ ಅನ್ನೋದು ಅಭಿಮಾನಿಗಳ ಕುತೂಹಲ. ಇದಕ್ಕೆಲ್ಲ ಉತ್ತರ ಸಿಗಬೇಕು ಅಂದ್ರೆ ರಿಲೀಸ್ ಆಗುವವರೆಗೂ ಕಾಯಲೇಬೇಕು.

  • ಒಟಿಟಿನಲ್ಲಿ ಉಚಿತವಾಗಿ ನೋಡಿ `ಕೆಜಿಎಫ್ 2′ ಸಿನಿಮಾ

    ಒಟಿಟಿನಲ್ಲಿ ಉಚಿತವಾಗಿ ನೋಡಿ `ಕೆಜಿಎಫ್ 2′ ಸಿನಿಮಾ

    ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಲೂಟಿ ಮಾಡುತ್ತಿದೆ. ಒಟ್ಟು 1200ಕ್ಕೂ ಅಧಿಕ ಕೋಟಿ ಕಲೆಕ್ಷನ್ ಮಾಡಿರುವ ಯಶ್ ಸಿನಿಮಾ ಇದೀಗ ಒಟಿಟಿಗೆ ಲಗ್ಗೆ ಇಡುತ್ತಿದೆ.

    kgf 2

    ಪ್ರಶಾಂತ್‌ನೀಲ್ ಮತ್ತು ಯಶ್ ನಟನೆಯ `ಕೆಜಿಎಫ್ 2′ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕೋಟಿ ಕೋಟಿ ಲೂಟಿ ಮಾಡುತ್ತಿರುವ ಯಶ್ ಚಿತ್ರ ಒಟಿಟಿನಲ್ಲಿ ತೆರೆ ಕಾಣಲು ಸಜ್ಜಾಗಿದೆ. ಈ ಕುರಿತು ಹೊಂಬಾಳೆ ಬ್ಯಾನರ್ ಕೂಡ ಟ್ವೀಟರ್ ಖಾತೆಯಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ. ಇದೇ ಜೂನ್ 3ರಂದು ಅಮೆಜಾನ್ ಪ್ರೈಂನಲ್ಲಿ `ಕೆಜಿಎಫ್ 2′ ಸಿನಿಮಾ ಪ್ರದರ್ಶನವಾಗಲಿದೆ.

    ರಾಂಕಿಂಗ್ ಸ್ಟಾರ್ ಯಶ್ ಮತ್ತು ಶ್ರೀನಿಧಿ ಶೆಟ್ಟಿ ನಟನೆಯ `ಕೆಜಿಎಫ್ 2′ ಜೂನ್ 3ಕ್ಕೆ ಒಟಿಟಿನಲ್ಲಿ ಬರಲು ಸಿದ್ಧವಾಗಿದೆ. ಇವರೆಗೂ 200 ರೂಪಾಯಿ ಕೊಟ್ಟ್ಟು ಕೆಜಿಎಫ್‌ ಚಿತ್ರ ನೋಡಬಹುದಿತ್ತು. ಈಗ ಮುಕ್ತಾಯವಾಗಿದ್ದು, ಫ್ರೈಂ ಮೆಂಬರ್‌ ಇರುವವರು ಮಾತ್ರ ಈ ಚಿತ್ರವನ್ನ ವೀಕ್ಷಿಸಬಹುದು. ಥಿಯೇಟರ್‌ನಲ್ಲೂ ಕಮಾಲ್ ಮಾಡುತ್ತಿರುವ `ಕೆಜಿಎಫ್ 2′ ಅಮೆಜಾನ್ ಪ್ರೈಂನಲ್ಲಿ ಮೋಡಿ ಮಾಡಲು ಸಜ್ಜಾಗಿದೆ. ಯಶ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

  • ಯಶ್ ಸಿನಿಮಾ ಹೊಸ ದಾಖಲೆ: `ಬಾಹುಬಲಿ 2’ಗೆ ಸೆಡ್ಡು ಹೊಡೆದ `ಕೆಜಿಎಫ್ 2′

    ಯಶ್ ಸಿನಿಮಾ ಹೊಸ ದಾಖಲೆ: `ಬಾಹುಬಲಿ 2’ಗೆ ಸೆಡ್ಡು ಹೊಡೆದ `ಕೆಜಿಎಫ್ 2′

    ಶ್ ನಟನೆಯ `ಕೆಜಿಎಫ್ 2′ ಸಿನಿಮಾ ಹೊಸ ದಾಖಲೆ ಬರೆದಿದೆ. ಚಿತ್ರ ರಿಲೀಸ್‌ಗೂ ಮೊದಲೇ ಸಾಕಷ್ಟು ದಾಖಲೆಗಳನ್ನ ಮಾಡಿತ್ತು. ಈಗ ಕೆಜಿಎಫ್ 2 ರಿಲೀಸ್ ಆಗಿ 50 ದಿನ ಕಳೆದರು. ಮತ್ತೆ ದಾಖಲೆ ಮೇಲೆ ದಾಖಲೆ ಮಾಡುತ್ತಿದೆ. ಅದರಲ್ಲೂ ಬಾಹುಬಲಿ 2ಗೆ ಸೆಡ್ಡು ಹೊಡೆದು ಕೆಜಿಎಫ್ 2 ಅಗ್ರಸ್ಥಾನದಲ್ಲಿದೆ.

    kgf 2

    ನ್ಯಾಷನಲ್ ಸ್ಟಾರ್ ಯಶ್ ಮತ್ತು ಪ್ರಶಾಂತ್ ನೀಲ್ ನಿರ್ದೇಶನದ `ಕೆಜಿಎಫ್ 2′ ಗೆಲುವಿನ ನಾಗಲೋಟದಲ್ಲಿದೆ. ಸದ್ಯ ಯಶ್ ಸಿನಿಮಾ ಹೊಸ ದಾಖಲೆ ಬರೆದಿದ್ದು, ಬಾಹುಬಲಿ 2ಗೆ ಸೆಡ್ಡು ಹೊಡೆದು ಮುಂದೆ ಬಂದಿದೆ. ಗಳಿಕೆಯ ವಿಚಾರದಲ್ಲಿ ಬಾಹುಬಲಿ 2 ಚಿತ್ರವನ್ನ ಕೆಜಿಎಫ್ 2 ಇನ್ನು ಮುಟ್ಟಿಲ್ಲ. ಆದರೆ ಟಿಕೆಟ್ ವಿಚಾರದಲ್ಲಿ ಬಾಹುಬಲಿ 2 ಸಿನಿಮಾವನ್ನು ಮೀರಿಸಿದೆ. ಇದನ್ನೂ ಓದಿ: ಶಾರುಖ್ ಖಾನ್ ಮನೆ ‘ಮನ್ನತ್’ ನೇಮ್ ಪ್ಲೇಟ್ ನಾಪತ್ತೆ: ಇದರ ಹಿಂದಿದೆ ಭಾರೀ ರಹಸ್ಯ

    `ಕೆಜಿಎಫ್ 2′ ಟಿಕೆಟ್ ಮಾರಾಟ ಆಗಿರುವ ವಿಚಾರದಲ್ಲಿ ಹೊಸ ಸಮೀಕ್ಷೆ ಹೊರ ಬಿದ್ದಿದೆ. ಟಿಕೆಟ್ ಬುಕ್ ಮಾಡುವಂತಹ ಬುಕ್ ಮೈ ಶೋ ಆಪ್‌ನಲ್ಲಿ ಕೆಜಿಎಫ್ 2 ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ಇಲ್ಲಿವರೆಗೂ ತೆರೆಕಂಡಂತಹ ಚಿತ್ರಗಳಲ್ಲಿ ಅತೀ ಟಿಕೆಟ್ ಸೇಲ್ ಆಗಿರುವುದು ಕೆಜಿಎಫ್ 2 ಚಿತ್ರವೇ ಆಗಿದೆ. ಒಟ್ಟು 17.1 ಮಿಲಿಯನ್ ಟಿಕೆಟ್ ಬುಕ್ ಮೈ ಶೋ ಮೂಲಕ ಮಾರಾಟವಾಗಿದೆ.

    `ಕೆಜಿಎಫ್ 2′ 17.1 ಮಿಲಿಯನ್ ಟಿಕೆಟ್ ಸೇಲ್ ಆಗಿದ್ರೆ, `ಬಾಹುಬಲಿ 2′ 16 ಮಿಲಿಯನ್ ಟಿಕೆಟ್ ಸೇಲ್ ಆಗಿದೆ. ಇನ್ನು ಮೂರನೇ ಸ್ಥಾನದಲ್ಲಿ ಆರ್‌ಆರ್‌ಆರ್ ಚಿತ್ರವಿದ್ದು 13.4 ಮಿಲಿಯನ್ ಟಿಕೆಟ್ ಮಾರಾಟವಾಗಿದೆ. ಈಗ ಯಶ್ ಸಿನಿಮಾ ಹೊಸ ದಾಖಲೆಗಳ ಸಾಲಿನಲ್ಲಿ ಸೇರುತ್ತಿರೋದನ್ನ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • ಆರ್‌ಆರ್‌ಆರ್ ಅಲ್ಲ, ಕೆಜಿಎಫ್ 2 ಸಿನಿಮಾ ನನ್ನ ಆಯ್ಕೆ ಎಂದ ಕಿಚ್ಚ ಸುದೀಪ್

    ಆರ್‌ಆರ್‌ಆರ್ ಅಲ್ಲ, ಕೆಜಿಎಫ್ 2 ಸಿನಿಮಾ ನನ್ನ ಆಯ್ಕೆ ಎಂದ ಕಿಚ್ಚ ಸುದೀಪ್

    ಸಿನಿಮಾ ರಂಗದ ಇತಿಹಾಸದಲ್ಲೇ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಟಾಪ್ ಚಿತ್ರಗಳಲ್ಲಿ `ಕೆಜಿಎಫ್ 2′ ಸಿನಿಮಾ ಕೂಡ ಸ್ಥಾನ ಗಿಟ್ಟಿಸಿಕೊಂಡಿದೆ. ಒಟ್ಟು 1227 ಕೋಟಿ ಗಳಿಕೆ ಮಾಡಿದ್ದು, ಹಿಂದಿಯಲ್ಲಿ 430ಕ್ಕೂ ಅಧಿಕ ಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಈ ಚಿತ್ರದ ಬಗ್ಗೆ ಹಲವು ಸ್ಟಾರ್‌ಗಳು ಪ್ರತಿಕ್ರಿಯೆ ನೀಡಿದ್ದರು. ಈಗ ಕಿಚ್ಚ ಸುದೀಪ್ ಕೂಡ ಈ ಚಿತ್ರದ ಕುರಿತು ಮಾತನಾಡಿದ್ದಾರೆ.

    ಈ ಹಿಂದೆ ಕೆಲ ಕಿಡಿಗೇಡಿಗಳು ಸುದೀಪ್ ಮಾತನಾಡಿದ್ದ ವಿಡಿಯೋವೊಂದು ಹರಿಬಿಟ್ಟು ತಂದಿಟ್ಟು ತಮಾಷೆ ನೋಡಿದ್ದರು. `ಕೆಜಿಎಫ್ 2′ ಚಿತ್ರದ ವಿರುದ್ಧ ಸುದೀಪ್ ಕಿಡಿಕರ‍್ತಿದ್ದಾರೆ ಅನ್ನೋ ಹಾಗೇ ಸುದ್ದಿ ಹಬ್ಬಿಸಿದ್ದರು. ಸುದೀಪ್ ನೀಡಿರೋ ಉತ್ತರ ಈಗ ಎಲ್ಲಾ ಗಾಸಿಪ್‌ ತೆರೆ ಎಳೆದಂತೆ ಆಗಿದೆ.

    ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ನೀಡಿದ ಸಂದರ್ಶನವೊಂದರಲ್ಲಿ ರ‍್ಯಾಪಿಡ್ ಫೈರ್ ಪ್ರಶ್ನೆಗಳಿಗೆ ಉತ್ತರಿಸಿದ್ದು, ಈ ವೇಳೆ ನನಗೆ ಕೆಜಿಎಫ್ ಸಿನಿಮಾ ಎಂದರೆ ಇಷ್ಟ ಅಂತಾ ಮಾತನಾಡಿದ್ದಾರೆ. ನಿರೂಪಕ ಆರ್‌ಆರ್‌ಆರ್ ಮತ್ತು ಕೆಜಿಎಫ್ ಚಿತ್ರದಲ್ಲಿ ಒಂದನ್ನು ಆಯ್ಕೆ ಮಾಡಿ ಅಂತಾ ಹೇಳಿದಾಗ ಥಟ್ ಅಂತ ಕೆಜಿಎಫ್ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಮಿಳು ಖ್ಯಾತ ನಟ ಸಿಂಬು ಮನೆಮುಂದೆ ಹೈಡ್ರಾಮಾ, ಸೀರಿಯಲ್ ನಟಿ ಧರಣಿ

    ಈ ವೇಳೆ ಬೇರೆ ಪ್ರಶ್ನೆಗಳಿಗೂ ಉತ್ತರಿಸಿರುವ ಕಿಚ್ಚ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ‌ ಆಯ್ಕೆ ಮಾಡಿ ಎಂದಾಗ ವಿರಾಟ್‌ನ ಆಯ್ಕೆ ಮಾಡಿದ್ದಾರೆ. ಅಜಯ್ ದೇವಗನ್ ಮತ್ತು ಸಲ್ಮಾನ್ ಖಾನ್ ಎಂದಾಗ ಸಲ್ಮಾನ್ ಖಾನ್‌ನ ಆಯ್ಕೆ ಮಾಡಿದ್ರು. ಟೆಸ್ಟ್ ಮತ್ತು ಟಿ20 ಅಲ್ಲಿ ಟಿ20 ಇಷ್ಟ ಅಂದ್ರು. ಬಳಿಕ ಆರ್‌ಆರ್‌ಆರ್ ಮತ್ತು ಕೆಜಿಎಫ್ ಚಿತ್ರದಲ್ಲಿ ಒಂದನ್ನು ಆಯ್ಕೆ ಮಾಡಿ ಅಂತಾ ಹೇಳಿದಾಗ ಥಟ್ ಅಂತ ಕೆಜಿಎಫ್ ಎಂದು ಹೇಳಿದ್ದಾರೆ. ಒಟ್ನಲ್ಲಿ `ಕೆಜಿಎಫ್’ ಚಿತ್ರಕ್ಕೆ ನನ್ನ ಸಹಮತವಿದೆ ಕೆಜಿಎಫ್ ಚಿತ್ರ ಇಷ್ಟ ಅಂತಾ ಹೇಳೋದರ ಮೂಲಕ ಎಲ್ಲಾ ಗಾಸಿಪ್‌ಗಳಿಗೂ ಸುದೀಪ್ ಫುಲ್ ಸ್ಟಾಪ್ ಇಟ್ಟಿದ್ದಾರೆ.

  • ಕೆಜಿಎಫ್ 2 ಪ್ರದರ್ಶನಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

    ಕೆಜಿಎಫ್ 2 ಪ್ರದರ್ಶನಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

    ಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಕೆಜಿಎಫ್ 2 ಸಿನಿಮಾ ಐವತ್ತನೇ ದಿನದ ಪ್ರದರ್ಶನಕ್ಕೆ ಹತ್ತಿರವಾಗುತ್ತಿದೆ. ವಿಶ್ವದಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿ, ಭರ್ಜರಿ ಪ್ರದರ್ಶನ ಕೂಡ ಕಂಡಿದೆ. 1,200 ಕೋಟಿ ರೂಪಾಯಿಯನ್ನು ಬಾಕ್ಸ್ ಆಫೀಸಿನಲ್ಲಿ ದೋಚಿದೆ. ಇಂತಹ ಸಿನಿಮಾದಲ್ಲಿ ಧೂಮ್ರಪಾನಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದ್ದು, ಅದರಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಹಾಗಾಗಿ ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಇದನ್ನೂ ಓದಿ : ತೆರೆಯ ಮೇಲೂ ಒಂದಾದ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ

    ಬೆಂಗಳೂರಿನ ಕ್ಯಾನ್ಸರ್ ರೋಗಿಗಳ ನೆರವು ಸಂಘವು ಹೈಕೋರ್ಟ್‌ಗೆ ‘ಕೆಜಿಎಫ್ 2’ ಸಿನಿಮಾವನ್ನು ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಇದೊಂದು ಸಮಾಜಿಕ ಕಳಕಳಿ ಇಲ್ಲದ ಸಿನಿಮಾ. ಧೂಮಪಾನವನ್ನು ವಿಜೃಂಭಿಸಲಾಗಿದೆ. ಇದರಿಂದಾಗಿ ಮಕ್ಕಳು ಮತ್ತು ಯುವಕರ ಮೇಲೆ ದುಷ್ಟಪರಿಣಾಮ ಬೀರಲಿದೆ ಎಂದು ಅರ್ಜಿಲಯಲ್ಲಿ ಉಲ್ಲೇಖಿಸಲಾಗಿತ್ತು. ಸಿನಿಮಾ ತಡೆ ಹಿಡಿದು, ಸೆನ್ಸಾರ್ ಮಂಡಳಿಯು ಕೊಟ್ಟಿರುವ ಯು/ಎ ಪ್ರಮಾಣ ಪತ್ರವನ್ನು ಹಿಂಪಡೆಯಬೇಕೆಂದು ಕೇಳಿತ್ತು. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್ ನಿಂದ ಮತ್ತೆರಡು ಪ್ಯಾನ್ ಇಂಡಿಯಾ ಸಿನಿಮಾ

    ನ್ಯಾಯಮೂರ್ತಿಗಳಾದ ರಿತುರಾಜ್ ಅವಸ್ತಿ ನೇತೃತ್ವದ ವಿಭಾಗೀಯ ಪೀಠವು ಈ ಅರ್ಜಿ ವಿಚಾರಣೆಯನ್ನು ನಡೆಸಿತು. ಈ ಸಂದರ್ಭದಲ್ಲಿ ಸರ್ಕಾರದ ಪರ ವಿಜಯಕುಮಾರ್ ಅವರು ವಾದ ಮಂಡಿಸಿ, ‘ಈಗಾಗಲೇ ಸಿನಿಮಾ ರಿಲೀಸ್ ಆಗಿದೆ. ಪ್ರದರ್ಶನವನ್ನೂ ಕಾಣುತ್ತಿದೆ. ಹಾಗಾಗಿ ಅರ್ಜಿ ವಿಚಾರಣೆಯ ಮಾನ್ಯತೆ ಕಳೆದುಕೊಂಡಿದೆ’ ಎಂದು ವಾದ ಮಂಡಿಸಿದರು. ಈ ವಾದವನ್ನು ಆಲಿಸಿದ ಪೀಠ ಅರ್ಜಿಯನ್ನು ವಜಾ ಮಾಡಿದೆ.

  • 39ನೇ ದಿನವೂ `ಕೆಜಿಎಫ್ 2′ ಗೆಲುವಿನ ಓಟ: 1221 ಕೋಟಿ ಬಾಚಿದ ಯಶ್ ಸಿನಿಮಾ

    39ನೇ ದಿನವೂ `ಕೆಜಿಎಫ್ 2′ ಗೆಲುವಿನ ಓಟ: 1221 ಕೋಟಿ ಬಾಚಿದ ಯಶ್ ಸಿನಿಮಾ

    ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ಚಿತ್ರ ರಿಲೀಸ್ ಆಗಿ 39 ದಿನ ಕಳೆದರು ಬಾಕ್ಸಾಫೀಸ್‌ನಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ವರ್ಲ್ಡ್ ವೈಡ್ ಯಶ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಕೆಜಿಎಫ್ 2 ಸಿನಿಮಾ ಒಟ್ಟು 1221.13 ಕೋಟಿ ಬಾಚಿದೆ.

    ಪ್ರಶಾಂತ್ ನೀಲ್ ಮತ್ತು ಯಶ್ ಕಾಂಬಿನೇಷನ್‌ನ `ಕೆಜಿಎಫ್ 2′ ಸಿನಿಮಾ 39 ದಿನ ಕಳೆದರು ಗೆಲುವಿನ ಓಟದಲ್ಲಿ ಹಿಂದೆ ಬಿದ್ದಿಲ್ಲ. ಸದ್ಯ ವರ್ಲ್ಡ್ ವೈಡ್ ಒಟ್ಟು 1221.13 ಕೋಟಿ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದೆ. ಇನ್ನು ಮುಂದೆ 2000 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ರು ಅಚ್ಚರಿ ಪಡಬೇಕಿಲ್ಲ.

    ಇತ್ತೀಚೆಗಷ್ಟೇ ಒಟಿಟಿನಲ್ಲಿ `ಕೆಜಿಎಫ್ 2′ ಚಿತ್ರ ತೆರೆಕಂಡಿತ್ತು. ಆದರು ಗಳಿಕೆಯಲ್ಲಿ ಎಲ್ಲೂ ಹಿಂದೆ ಬೀಳದೇ ಥಿಯೇಟರ್‌ನಲ್ಲಿ ಯಶ್ ಚಿತ್ರ ಭರ್ಜರಿ ಕಮಾಯಿ ಮಾಡುತ್ತಿದೆ. ಬಾಲಿವುಡ್ ಸಿನಿಮಾಗೆ ಈಗಲೂ ಖಡಕ್ ಪೈಪೋಟಿ ಕೊಡುತ್ತಾ ಯಶ್ ಚಿತ್ರ ಮುಂದೆ ಸಾಗುತ್ತಿದೆ.

    ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಶ್ ಜೊತೆ ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಸಂಜಯ್ ದತ್, ಇನ್ನು ಹಲವು ಕಲಾವಿರ ದಂಡೇ ಚಿತ್ರದಲ್ಲಿದೆ.

  • ಯಶ್ ಸಿನಿಮಾ ಹೊಸ ದಾಖಲೆ: 1200 ಕೋಟಿ ಗಳಿಕೆ ಮಾಡಿದ `ಕೆಜಿಎಫ್ 2′

    ಯಶ್ ಸಿನಿಮಾ ಹೊಸ ದಾಖಲೆ: 1200 ಕೋಟಿ ಗಳಿಕೆ ಮಾಡಿದ `ಕೆಜಿಎಫ್ 2′

    ದೇಶದ ಮೂಲೆ ಮೂಲೆಯಲ್ಲೂ ಸೌಂಡ್ ಮಾಡ್ತಿರೋ ಏಕೈಕ ಸಿನಿಮಾ ಅಂದ್ರೆ ಯಶ್ ನಟನೆಯ `ಕೆಜಿಎಫ್ 2′ ಸಿನಿಮಾ ಇದೀಗ ಮತ್ತೊಂದು ಹೊಸ ದಾಖಲೆ ಬರೆದಿದೆ. ಯಶ್ ಸಿನಿಮಾ, ಗಲ್ಲಾಪೆಟ್ಟಿಗೆಯಲ್ಲಿ ಒಟ್ಟು 1200 ಕೋಟಿ ಕಲೆಕ್ಷನ್ ಮಾಡಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.

    ನ್ಯಾಷನಲ್ ಸ್ಟಾರ್ ಯಶ್ `ಕೆಜಿಎಫ್ 2′ ಮೂಲಕ ದೇಶದ ಎಲ್ಲಾ ಚಿತ್ರಮಂದಿರದಲ್ಲೂ ಮಿರ ಮಿರ ಅಂತಾ ಮಿಂಚ್ತಿದ್ದಾರೆ. ಇನ್ನು ರಾಕಿಭಾಯ್ ಚಿತ್ರ ಥಿಯೇಟರ್‌ಗೆ ಲಗ್ಗೆಯಿಟ್ಟು 1 ತಿಂಗಳು ಕಳೆದರು, ಸಿನಿಮಾ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಇತ್ತೀಚೆಗಷ್ಟೇ ಭಾರತದಲ್ಲಿ 1000 ಸಾವಿರ ಕೋಟಿ ಬಾಚಿತ್ತು. ಈಗ 1200 ಕೋಟಿ ಕಲೆಕ್ಷನ್ ಮಾಡಿ, ನ್ಯೂ ರೆಕಾರ್ಡ್ ಬ್ರೇಕ್ ಮಾಡಿದೆ.

    kgf 2

    ಪ್ರಶಾಂತ್ ನೀಲ್ ಮತ್ತು ಯಶ್ ಕಾಂಬೀನೇಷನ್ ಸಿನಿಮಾಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದಾರೆ ಅನ್ನೋದಕ್ಕೆ ಬಾಕ್ಸಾಫೀಸ್ ಕಲೆಕ್ಷನ್ ಸಾಕ್ಷಿ. ಇದೀಗ 1200 ಕೋಟಿ ಕಲೆಕ್ಷನ್ ಮಾಡಿ, ಮುನ್ನುಗ್ಗುತ್ತಿದೆ. ಇನ್ನು ಆಮೀರ್ ಖಾನ್ ದಂಗಲ್ ಮತ್ತು ಪ್ರಭಾಸ್ ನಟನೆಯ `ಬಾಹುಬಲಿ 2′ ಚಿತ್ರದ ನಂತರ 1200 ಕೋಟಿ ಗಳಿಕೆ ಮಾಡಿದ ಭಾರತದ ಮೂರನೇ ಸಿನಿಮಾ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಇದನ್ನೂ ಓದಿ: ವಿಡಿಯೋ ಕಾಲ್ ಮಾಡಿಕೊಂಡೇ ಆತ್ಮಹತ್ಯೆಗೆ ಶರಣಾದ ನಟಿ

    ಸಾವಿರ ಕೋಟಿ ಕ್ಲಬ್‌ನಲ್ಲಿ ದಂಗಲ್ ಸಿನಿಮಾ ಮೊದಲ ಸ್ಥಾನದಲ್ಲಿದೆ. ಬಾಹುಬಲಿ ಮತ್ತು ಆರ್‌ಆರ್‌ಆರ್ ಸಿನಿಮಾ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದರೆ, ಇದೀಗ ಕನ್ನಡದ `ಕೆಜಿಎಫ್ 2′ ನಾಲ್ಕನೇ ಸ್ಥಾನದಲ್ಲಿದೆ.

  • ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾದ ಸ್ಟೋರಿ ಬಹಿರಂಗ!

    ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾದ ಸ್ಟೋರಿ ಬಹಿರಂಗ!

    ಕೆಜಿಎಫ್ 2 ಸಿನಿಮಾದ ಗೆಲುವಿನ ಖುಷಿಯಲ್ಲೇ ನಿರ್ದೇಶಕ ಪ್ರಶಾಂತ್ ನೀಲ್ , ತಮ್ಮ ಚೊಚ್ಚಲು ನಿರ್ದೇಶನದ ತೆಲುಗಿನ ‘ಸಲಾರ್’ ಸಿನಿಮಾದ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ವಾರದಿಂದಲೇ ಸಲಾರ್ ಸಿನಿಮಾದ ಶೂಟಿಂಗ್ ನಡೆಯಲಿದ್ದು, ಇದಕ್ಕೂ ಮುನ್ನ ಚಿತ್ರದ ಕಥೆಯನ್ನು ಸ್ವತಃ ಚಿತ್ರತಂಡವೇ ಸೋರಿಕೆ ಮಾಡಿದೆ. ಇದನ್ನೂ ಓದಿ:  ಫ್ಯಾಟ್‌ ಸರ್ಜರಿ ಎಫೆಕ್ಟ್‌ – ಕಿರುತೆರೆ ನಟಿ ಚೇತನಾ ರಾಜ್‌ ಸಾವು

    ಸಲಾರ್ ಸಿನಿಮಾದ ಕತೆಯ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಯಾಕೆಂದರೆ, ಈ ಸಿನಿಮಾ ಕನ್ನಡದ ‘ಉಗ್ರಂ’ ಸಿನಿಮಾದ ರಿಮೇಕ್ ಎಂದು ಹೇಳಲಾಗಿತ್ತು. ತಮ್ಮ ನಿರ್ದೇಶನದ ಉಗ್ರಂ ಸಿನಿಮಾವನ್ನು ತಾವೇ ತೆಲುಗಿನಲ್ಲಿ ಸಲಾರ್ ಹೆಸರಿನಲ್ಲಿ ರಿಮೇಕ್ ಮಾಡುತ್ತಿದ್ದಾರೆ ಎಂದೂ ಸುದ್ದಿ ಆಗಿತ್ತು. ಆನಂತರ ಈ ಕುರಿತು ಸ್ವತಃ ಪ್ರಶಾಂತ್ ನೀಲ್ ಪ್ರತಿಕ್ರಿಯೆ ನೀಡಿದ್ದರು. ಸಲಾರ್ ರಿಮೇಕ್ ಸಿನಿಮಾವಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಈಗ ಸಿನಿಮಾದ ಕಥೆಯ ಬಗ್ಗೆ ಸಣ್ಣದೊಂದು ಸುಳಿವು ಸಿಕ್ಕಿದೆ.

    ಇಂದು ಸಲಾರ್ ಸಿನಿಮಾದ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿರುವ ಚಿತ್ರತಂಡ, ಪೋಸ್ಟರ್ ನಲ್ಲಿ ಕೆಜಿಎಫ್ 2 ನೆನಪಿಸುವಂತಹ ಡೈಲಾಗ್ ವೊಂದನ್ನು ಬಳಸಿಕೊಳ್ಳಲಾಗಿದೆ. ಕೆಜಿಎಫ್ 2 ಸಿನಿಮಾ ಅಂದಾಕ್ಷಣ ತಕ್ಷಣವೇ ನೆನಪಿಗೆ ಬರುವ ಡೈಲಾಗ್ ‘ವೈಲೆನ್ಸ್.. ವೈಲೆನ್ಸ್.. ವೈಲೆನ್ಸ್..’ ಈ ಡೈಲಾಗ್ ಅನ್ನು ಸಲಾರ್ ಸಿನಿಮಾದಲ್ಲೂ ಬಳಸಿಕೊಂಡಿದ್ದಾರೆ ಪ್ರಶಾಂತ್ ನೀಲ್. ಇದನ್ನೂ ಓದಿ: ರಾಖಿ ಸಾವಂತ್ ಹೊಸ ಬಾಯ್‌ಫ್ರೆಂಡ್‌ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ

    ಇಂದು ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟರ್ ನಲ್ಲಿ ‘ದಿ ಮೋಸ್ಟ್ ವೈಲೆಂಟ್ ಮೆನ್, ಕಾಲ್ಡ್ ಒನ್ ಮ್ಯಾನ್, ದಿ ಮೋಸ್ಟ್ ವೈಲೆಂಟ್’ ಎಂದು ವಿಶೇಷ ಬರಹವನ್ನು ಹಾಕಿದ್ದಾರೆ. ಹಾಗಾಗಿ ಸಲಾರ್ ಕೂಡ ಮೋಸ್ಟ್ ವೈಲೆಂಟ್ ಆಗಿಯೇ ಇರಲಿದೆ ಎನ್ನುವ ಸೂಚನೆಯನ್ನು ಕೊಟ್ಟಿದ್ದಾರೆ. ಈ ಮೂಲಕ ವೈಲೆಂಟ್ ಪದವು ಅಷ್ಟು ಬೇಗ ಪ್ರಶಾಂತ್ ನೀಲ್ ಅವರಿಂದ ದೂರ ಹೋಗದು ಎನ್ನುವುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ.