Tag: KGF-2

  • ಎನ್.ಎಫ್.ಟಿ (NFT) ಮಾರುಕಟ್ಟೆಗೆ ಕನ್ನಡದ ಮತ್ತೊಬ್ಬ ಸೂಪರ್ ಸ್ಟಾರ್ ಎಂಟ್ರಿ

    ಎನ್.ಎಫ್.ಟಿ (NFT) ಮಾರುಕಟ್ಟೆಗೆ ಕನ್ನಡದ ಮತ್ತೊಬ್ಬ ಸೂಪರ್ ಸ್ಟಾರ್ ಎಂಟ್ರಿ

    ಕೆಜಿಎಫ್ ಸಿನಿಮಾದಲ್ಲಿ ಬಳಸಲಾದ ಬೈಕ್, ಯಶ್ ಪ್ರತಿಮೆ, ಗನ್ ಸೇರಿದಂತೆ ಹಲವು ವಸ್ತುಗಳನ್ನು ತದ್ರೂಪಿ ಮಾಡಿ, ಅವುಗಳನ್ನು ಎನ್.ಎಫ್.ಟಿ ಮೂಲಕ ಅಭಿಮಾನಿಗಳಿಗೆ ತಲುಪಿಸುವ ಕಾರ್ಯವನ್ನು ಎನ್.ಎಫ್.ಟಿ (NFT) ಮಾಡಿತ್ತು. ಇದೀಗ ಮತ್ತೊಬ್ಬ ಸ್ಯಾಂಡಲ್ ವುಡ್ ಸ್ಟಾರ್ ನಟರ ಸಿನಿಮಾಗೂ ಈ ಭಾಗ್ಯ ದೊರೆಯುತ್ತಿದೆ. ಸಿನಿಮಾ ರಿಲೀಸ್ ಗೂ ಮುನ್ನ ಇಂಥದ್ದೊಂದು ಕಾರ್ಯಕ್ಕೆ ಮುಂದಾಗಿದೆ ಎನ್.ಎಫ್.ಟಿ.

    ಬಾಲಿವುಡ್ ನಲ್ಲಿ ಈಗಾಗಲೇ ಸಾಕಷ್ಟು ಫೇಮಸ್ ಆಗಿರುವ ಈ ಮಾರುಕಟ್ಟಿಗೆ ಸೆಲೆಬ್ರಿಟಿಗಳು ಈಗಾಗಲೇ ಒಬ್ಬೊಬ್ಬರಾಗಿಯೇ NFT ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಾರೆ. ಕಮಲ್ ಹಾಸನ್, ಅಮಿತಾಭ್ ಬಚ್ಚನ್, ಸನ್ನಿ ಲಿಯೋನ್ ಈ ಸಾಲಿನಲ್ಲಿ ಗುರುತಿಸಿಕೊಂಡಿದ್ದು, ಇದೀಗ ಸೌತ್ ಇಂಡಸ್ಟ್ರೀಯ ಸೂಪರ್ ಸ್ಟಾರ್ ಒಬ್ರು NFT ವಲಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಈ  ಮೂಲಕ ಭಾರತೀಯ ಚಿತ್ರರಂಗದ ಬಿಗೆಸ್ಟ್ ಸಿನಿಮಾವೊಂದು ಶೀರ್ಘದಲ್ಲಿಯೇ NFT ಮಾರುಕಟ್ಟೆಗೆ ಎಂಟ್ರಿ ಕೊಡಲಿದೆಯಂತೆ. ಇದನ್ನೂ ಓದಿ : Breaking- ಫಹಾದ್ ಫಾಸಿಲ್ ಗಾಗಿ ಸಿನಿಮಾ ಮಾಡಲು ಮತ್ತೆ ತಮಿಳಿಗೆ ಹೊರಟ ಪವನ್ ಕುಮಾರ್

    ಮಾರ್ವೆಲ್ಸ್ ಸಿನಿಮಾ ಬಳಿಕ ಭಾರತೀಯ ಸಿನಿಮಾಗಳು NFT ಮಾರುಕಟ್ಟೆಯಲ್ಲಿ ರಾರಾಜಿಸಲು ಸಿದ್ಧವಾಗಿವೆ. ಪ್ಯಾನ್ ಇಂಡಿಯಾ ಸಿನಿಮಾ ಕಾನ್ಸೆಪ್ಟ್ ನಡಿ ಡಿಜಿಟಲ್ ಲೋಕದಲ್ಲಿ NFT ಹೊಸ ಕ್ರಾಂತಿಗೆ ನಾಂದಿ ಹಾಡಲು ಸಜ್ಜಾಗಿದ್ದು, ಪ್ಯಾನ್ ಇಂಡಿಯಾ ಸ್ಟಾರ್ ವೊಬ್ಬರು ತಮ್ಮದೇ ಸ್ವತಃ ಮಾರುಕಟ್ಟೆಯಲ್ಲಿ ಸಿನಿಮಾ ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ NFT ವಲಯದಲ್ಲಿ ಭಾರತೀಯ ಚಿತ್ರರಂಗ ದಾಖಲೆ ಬರೆಯುವ ನಿರೀಕ್ಷೆಯಲ್ಲಿದೆ.

    Live Tv
    [brid partner=56869869 player=32851 video=960834 autoplay=true]

  • ಸಲ್ಮಾನ್ ಖಾನ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ `ಕೆಜಿಎಫ್’ ಖ್ಯಾತಿಯ ರವಿ ಬಸ್ರೂರು

    ಸಲ್ಮಾನ್ ಖಾನ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ `ಕೆಜಿಎಫ್’ ಖ್ಯಾತಿಯ ರವಿ ಬಸ್ರೂರು

    ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಸದ್ಯ `ಕಭಿ ಈದ್ ಕಭಿ ದಿವಾಲಿ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗ ಈ ಚಿತ್ರಕ್ಕೆ ಕನ್ನಡಿಗನ ಎಂಟ್ರಿಯಾಗಿದೆ. ಸಲ್ಲು ಭಾಯ್ ಸಿನಿಮಾಗೆ `ಕೆಜಿಎಫ್’ ಖ್ಯಾತಿಯ ರವಿ ಬಸ್ರೂರು ಸಂಗೀತ ನೀಡಲಿದ್ದಾರೆ.

    ಸಲ್ಮಾನ್ ಖಾನ್ ಗಮನ ಸದ್ಯ `ಕಭಿ ಈದ್ ಕಭಿ ದಿವಾಲಿ’ ಸಿನಿಮಾ ಮೇಲಿದೆ. ಚಿತ್ರೀಕರಣಕ್ಕಾಗಿ ಸದ್ಯ ಹೈದರಾಬಾದ್‌ನಲ್ಲಿ ಬೀಡು ಬಿಟ್ಟಿದೆ. ಕಲಾವಿದರ ಆಯ್ಕೆ ಜತೆ ಮ್ಯೂಸಿಕ್‌ಗೂ ಆಧ್ಯತೆ ಕೊಡಲಾಗಿದೆ. ಹಾಗಾಗಿ ಕನ್ನಡದ ಪ್ರತಿಭಾನ್ವಿತ ಸಂಗೀತ ನಿರ್ದೇಶ ರವಿ ಬಸ್ರೂರು ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಇದನ್ನೂ ಓದಿ:`ರಾ ರಾ ರಕ್ಕಮ್ಮ’ ನಂತರ ನಾಳೆ ಮತ್ತೊಂದು ಸಾಂಗ್ ರಿಲೀಸ್: ವಿಕ್ರಾಂತ್ ರೋಣ

    `ಕೆಜಿಎಫ್’ ಚಾಪ್ಟರ್ 1 ಮತ್ತು 2 ಚಿತ್ರದ ಹಾಡಿನಿಂದ ಇಡೀ ದೇಶದ ಗಮನ ಸೆಳೆದಿರುವ ಕನ್ನಡಿಗ ರವಿ ಬಸ್ರೂರು ಅವರ ಸಂಗೀತಕ್ಕೆ ಈಗ ಬಾಲಿವುಡ್ ಕೂಡ ತಲೆಬಾಗಿದೆ. ಸಲ್ಮಾನ್ ಖಾನ್ ಚಿತ್ರಕ್ಕೆ ಸಂಗೀತ ನೀಡಲು `ಕೆಜಿಎಫ್’ ಖ್ಯಾತಿಯ ರವಿ ಬಸ್ರೂರು ಸಾಥ್ ನೀಡಲಿದ್ದಾರೆ. ಮುಂದಿನ ದಿನಗಳಲ್ಲಿ ಕನ್ನಡದ ಪ್ರತಿಭೆ ಬಾಲಿವುಡ್ ರಂಗದಲ್ಲೂ ಹೇಗೆಲ್ಲಾ ಮೋಡಿ ಮಾಡಬಹುದು ಅಂತಾ ಕಾದು ನೋಡಬೇಕಿದೆ.

    Live Tv

  • ಕೆಜಿಎಫ್ ನಟನ ಐಷಾರಾಮಿ ಕಾರು ಅಪಘಾತ

    ಕೆಜಿಎಫ್ ನಟನ ಐಷಾರಾಮಿ ಕಾರು ಅಪಘಾತ

    ಬೆಂಗಳೂರು: ಕೆಜಿಎಫ್ ಸಿನಿಮಾದಲ್ಲಿ ಅಭಿನಯಿಸಿದ್ದ ನಟ ಅವಿನಾಶ್ ಅವರ ಕಾರು ಬೆಂಗಳೂರಿನಲ್ಲಿ ಅಪಘಾತಕ್ಕೊಳಗಾಗಿದೆ.

    ಕೆಜಿಎಫ್ ಹಾಗೂ ಕೆಜಿಎಫ್ ಚಾಪ್ಟರ್-2 ಸಿನಿಮಾದಲ್ಲಿ ಆ್ಯಂಡ್ರೂಸ್ ಪಾತ್ರದಲ್ಲಿ ಅಭಿನಯಿಸಿದ್ದ ಬಿಎಸ್ ಅವಿನಾಶ್ ಅವರು ಬುಧವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ನಗರದ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಗೂಡ್ಸ್ ಲಾರಿಯೊಂದು ಕಾರಿಗೆ ಡಿಕಕಿ ಹೊಡೆದಿದ್ದು, ಅವಿನಾಶ್ ಅವರ ಬೆಂಕ್ ಕಾರು ಸಂಪೂರ್ಣ ಜಖಂಗೊಂಡಿದೆ. ಇದನ್ನೂ ಓದಿ: 45,000 ಸಾವಿರ ಬದಲಿಗೆ 1.42 ಕೋಟಿ ಸ್ಯಾಲರಿ ಹಾಕಿದ ಕಂಪನಿ – ಹಣ ಜೊತೆ ಉದ್ಯೋಗಿ ಎಸ್ಕೇಪ್

    ಅದೃಷ್ಟವಶಾತ್ ಘಟನೆಯಲ್ಲಿ ಅವಿನಾಶ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೀಗ ಕ್ಯಾಂಟರ್ ಚಾಲಕ ಶಿವಗೌಡನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅತಿಥಿ ಶಿಕ್ಷಕರಿಗೆ ಸರ್ಕಾರದಿಂದ ಗುಡ್‍ನ್ಯೂಸ್- 2,500 ರೂ. ಗೌರವ ಧನ ಹೆಚ್ಚಿಸಿ ಆದೇಶ

    ಕೆಜಿಎಫ್ ಸಿನಿಮಾ ರಾಕಿಂಗ್ ಸ್ಟಾರ್ ಯಶ್‍ಗೆ ನ್ಯಾಷನಲ್ ಸ್ಟಾರ್ ಪಟ್ಟ ತಂದುಕೊಟ್ಟಿತ್ತು. ಅಲ್ಲದೇ ಸಿನಿಮಾದಲ್ಲಿ ಸಖತ್ ಹೈಲೆಟ್ ಆಗಿ ಕಾಣಿಸಿಕೊಂಡಿದ್ದ ಅವಿನಾಶ್ ಅವರ ಪಾತ್ರ ಜನರ ಗಮನವನ್ನು ಬೇಗ ಸೆಳೆದಿತ್ತು. ಕೆಜಿಎಫ್ ಸಿನಿಮಾ ರೆಕಾರ್ಡ್ ಮಾಡುವುದರ ಜೊತೆಗೆ ಸಿನಿಮಾದಲ್ಲಿ ಅಭಿನಯಿಸಿದ್ದ ಎಲ್ಲಾ ಕಲಾವಿದರಿಗೂ ಹೆಸರು ತಂದು ಕೊಟ್ಟಿತ್ತು.

    Live Tv

  • ತಮಿಳು ಸಿನಿಮಾ ಮಾಡ್ತಾರಾ ಅಥವಾ ಕನ್ನಡದ ನಿರ್ದೇಶಕನಿಗೆ ಮಣೆ ಹಾಕ್ತಾರಾ ಯಶ್?

    ತಮಿಳು ಸಿನಿಮಾ ಮಾಡ್ತಾರಾ ಅಥವಾ ಕನ್ನಡದ ನಿರ್ದೇಶಕನಿಗೆ ಮಣೆ ಹಾಕ್ತಾರಾ ಯಶ್?

    ಶ್ ಸಿನಿಮಾ ವಿಚಾರದಲ್ಲಿ ದಿನಕ್ಕೊಂದು ಸುದ್ದಿ ಹರಿದಾಡುತ್ತಿವೆ. ಮೊನ್ನೆಯಷ್ಟೇ ಯಶ್ ಗಾಗಿ ಖ್ಯಾತ ನಿರ್ಮಾಪಕ ದಿಲ್ ರಾಜು ಸಿನಿಮಾವೊಂದನ್ನು ನಿರ್ಮಾಣ ಮಾಡಲು ಮುಂದೆ ಬಂದಿದ್ದು, 100 ಕೋಟಿ ರೂಪಾಯಿ ಆಫರ್ ಮಾಡಿದ್ದಾರೆ ಎಂದು ಸುದ್ದಿ ಆಯಿತು.  ಅದಕ್ಕೂ ಮುನ್ನ ಕೆವಿಎನ್ ಪ್ರೊಡಕ್ಷನ್ ಹೌಸ್ ಕಡೆಯಿಂದ  ಯಶ್ ಮುಂದಿನ ಸಿನಿಮಾ ನಿರ್ಮಾಣ ಅಂತಾಯಿತು. ತೆಲುಗು ಸಿನಿಮಾ ನಿರ್ದೇಶಕರಿಗೂ ಯಶ್ ಕಾಲ್ ಶೀಟ್ ಕೊಟ್ಟಿದ್ದಾರೆ  ಅನ್ನುವ ಸುದ್ದಿಯೂ ಹರಡಿತ್ತು. ಸದ್ಯ ನರ್ತನ್ ಜೊತೆ ಸಿನಿಮಾ ಮಾಡುವ ವಿಚಾರವೂ ಚಾಲ್ತಿಯಲ್ಲಿದೆ. ಇದೀಗ ಮತ್ತೊಂದು ಹೊಸ ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ.

    ರಜನಿಕಾಂತ್ ಸೇರಿದಂತೆ ಹಲವು ಖ್ಯಾತ ನಟರಿಗೆ ಅದ್ಭುತವಾದ ಸಿನಿಮಾಗಳನ್ನು ಕಟ್ಟಿಕೊಟ್ಟಿರುವ ಖ್ಯಾತ ನಿರ್ದೇಶಕ ಶಂಕರ್ ಜೊತೆ ಯಶ್ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಶಂಕರ್ ಕೂಡ ತಮ್ಮ ಸಿನಿಮಾದ ಮೂಲಕ ಸಾವಿರಾರು ಕೋಟಿ ಬಾಚಿದವರು. ಯಶ್ ನಟನೆಯ ಕೆಜಿಎಫ್ 2 ಚಿತ್ರ ಕೂಡ ಸಾವಿರ ಕೋಟಿ ಹಣ ಗಳಿಸಿದೆ. ಹಾಗಾಗಿ ಸಾವಿರದ ಸರದಾರರು ಒಟ್ಟಾಗಿ ಸಿನಿಮಾ ಮಾಡಲಿದ್ದಾರೆ ಎನ್ನುವುದು ಲೆಟೆಸ್ಟ್ ನ್ಯೂಸ್. ಇದನ್ನೂ ಓದಿ:ಶಾರುಖ್ ಖಾನ್ ನಟನೆಯ `ಜವಾನ್’ ಚಿತ್ರೀಕರಣದಲ್ಲಿ ನಯನತಾರಾ

    ಹಾಗಂತ ಯಾವುದೇ ತಂಡದಿಂದ ಬಂದಿರುವ ಹೇಳಿಕೆ ಇವಲ್ಲ. ಗಾಸಿಪ್ ರೀತಿಯಲ್ಲೂ ಹರಡಿರಬಹುದು. ಅಥವಾ ದಿಲ್ ರಾಜು ನಿರ್ಮಾಣದಲ್ಲಿ ಮೂಡಿ ಬರಲಿರುವ ಚಿತ್ರಕ್ಕೆ ಶಂಕರ್ ನಿರ್ದೇಶನ ಮತ್ತು ಯಶ್ ನಟ ಅಂತಾನೂ ಆಗಬಹುದು. ಒಟ್ಟಿನಲ್ಲಿ ಯಶ್ ಅವರ ಸಿನಿಮಾ ವಿಚಾರದಲ್ಲಿ ದಿನಕ್ಕೊಂದು ಸುದ್ದಿಗಳು ಹರಡುತ್ತಿವೆ. ಅಭಿಮಾನಿಗಳಿಗಂತೂ ಆ ಸುದ್ದಿಗಳು ಥ್ರಿಲ್ ನೀಡುತ್ತಿವೆ.

    Live Tv

  • ಎಲ್ಲಾ ಭಾಷೆಗಳಲ್ಲೂ 550 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದ `ಕೆಜಿಎಫ್ 2 ‘ ಆಲ್ಬಂ

    ಎಲ್ಲಾ ಭಾಷೆಗಳಲ್ಲೂ 550 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದ `ಕೆಜಿಎಫ್ 2 ‘ ಆಲ್ಬಂ

    ಚಿತ್ರರಂಗದಲ್ಲಿ `ಕೆಜಿಎಫ್ 2′ ಅಗ್ರ ಸ್ಥಾನದಲ್ಲಿದೆ. ಯಶ್ ಸಿನಿಮಾ ಶುರುವಿನಿಂದಲೂ ಸಾಕಷ್ಟು ದಾಖಲೆ ಮಾಡಿದೆ. ಆ ದಾಖಲೆಯ ಪಟ್ಟಿಯಲ್ಲಿ ಮತ್ತೊಂದು ದಾಖಲೆ ಸೇರಿದೆ. ಎಲ್ಲಾ ಭಾಷೆಗಳು ಸೇರಿ `ಕೆಜಿಎಫ್ 2′ ಸಾಂಗ್ಸ್ 550 ಮಿಲಿಯನ್ ಹೆಚ್ಚು ವಿವ್ಸ್ ಮಾಡಿ ಯೂಟ್ಯೂಬ್‌ನಲ್ಲಿ ಹೊಸ ದಾಖಲೆ ಮಾಡಿದೆ.

    ಪ್ರಶಾಂತ್ ನೀಲ್ ಮತ್ತು ಯಶ್ ಕಾಂಬಿನೇಷನ್‌ನ ಡೆಡ್ಲಿ ಸಿನಿಮಾ `ಕೆಜಿಎಫ್ 2′ ಏಪ್ರಿಲ್ 14ರಂದು ತೆರೆಕಂಡು ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ವಿಶ್ವದ ಎಲ್ಲಾ ಕಡೆ ಈ ಸಿನಿಮಾವನ್ನ ನೋಡಿ ಫ್ಯಾನ್ಸ್ ಅಪ್ಪಿ ಒಪ್ಪಿಕೊಂಡಿರು. ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡಿತ್ತು. ಚಿತ್ರದ ಶುರುವಿನಿಂದ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದೆ. ಈಗ `ಕೆಜಿಎಫ್ 2′ ಆಲ್ಬಂ ಸಾಂಗ್ಸ್ 550 ಮಿಲಿಯನ್‌ಗೂ ಹೆಚ್ಚು ವಿವ್ಸ್ ಗಿಟ್ಟಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ. ಇದನ್ನೂ ಓದಿ: ಡಿಸೆಂಬರ್ ನಲ್ಲಿ ಮದುವೆ ಆಗಲಿದ್ದಾರೆ ತಿಥಿ ಸಿನಿಮಾ ಖ್ಯಾತಿಯ ಪೂಜಾ

     

    View this post on Instagram

     

    A post shared by Hombale Films (@hombalefilms)

    ನರಾಚಿ ದೊರೆಯ ಕಥೆಯ ಜತೆ ಚಿತ್ರದ ರವಿ ಬಸ್ರೂರ್ ಸಂಯೋಜನೆ ಸಾಂಗ್ಸ್ ಕೂಡ ಸಿಕ್ಕಾಪಟ್ಟೆ ಮೋಡಿ ಮಾಡಿದೆ. ಒಂದಕ್ಕಿಂತ ಒಂದು ಸಾಂಗ್ ಅದ್ಭುತವಾಗಿ ಮೂಡಿ ಬಂದಿದೆ. ಇದೀಗ ಚಿತ್ರದ ಹಾಡುಗಳಿಗೆ 550ಕ್ಕೂ ಹೆಚ್ಚು ವಿವ್ಸ್ ಆಗಿ, `ಕೆಜಿಎಫ್ 2′ ತಂಡ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಒಟ್ನಲ್ಲಿ ರಾಕಿಭಾಯ್ ಫ್ಯಾನ್ಸ್ ಈ ಸುದ್ದಿ ಕೇಳಿ ಥ್ರಿಲ್ ಆಗಿದ್ದಾರೆ.

    Live Tv

  • ಯಶ್‌ ಮೇಲೆ ಬಾಲಿವುಡ್‌ ನಟಿಯರ ಕಣ್ಣು.!

    ಯಶ್‌ ಮೇಲೆ ಬಾಲಿವುಡ್‌ ನಟಿಯರ ಕಣ್ಣು.!

    `ಕೆಜಿಎಫ್ 2′ ಚಿತ್ರವನ್ನು ಅಭಿಮಾನಿಗಳು ಅಪ್ಪಿ ಒಪ್ಪಿಕೊಂಡ ಮೇಲೆ  `ಕೆಜಿಎಫ್ 3ಗಾಗಿ’ ಫ್ಯಾನ್ಸ್ ಕಾಯ್ತಿದ್ದಾರೆ. ‌ʻಕೆಜಿಎಫ್ 3ʼಗಾಗಿ ಅಭಿಮಾನಿಗಳು ಅಷ್ಟೇ ಕಾಯ್ತಿರೋದಲ್ಲ, ಬಾಲಿವುಡ್‌ ನಟಿಯರು ಕಾಯ್ತಿದ್ದಾರೆ. ಯಶ್ ಮೇಲೆ ಬಾಲಿವುಡ್‌ ನಟಿಮಣಿಯರು ಕಣ್ಣಿಟ್ಟಿದ್ದಾರೆ.

    ಯಶ್ ನಟನೆಯ `ಕೆಜಿಎಫ್ 2′ ಬ್ಲಾಕ್ ಬಸ್ಟರ್ ಚಿತ್ರದ ಬಳಿಕ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಈಗಾಗಲೇ ‘ಕೆಜಿಎಫ್ 3′ ಪ್ರಾಜೆಕ್ಟ್ ಬಗ್ಗೆ ಅನೌನ್ಸ್ ಮಾಡಿದ್ದಾರೆ. ಸಂದರ್ಶನದಲ್ಲಿವೊಂದರಲ್ಲಿ `ಕೆಜಿಎಫ್ 3′ ಸಿನಿಮಾ ಸೆಟ್ಟೇರುವ ಬಗ್ಗೆ ಸುಳಿವು ನೀಡಿದ್ದರು. ಯಶ್ ಹಾಗೂ ಪ್ರಶಾಂತ್ ನೀಲ್ ಸೃಷ್ಟಿಸಿದ ನರಾಚಿ ಕೋಟೆಯ ಚರಿತ್ರೆ ಕೇವಲ ಕರ್ನಾಟಕಕ್ಕಷ್ಟೇ ಅಲ್ಲ. ಇಡೀ ವಿಶ್ವವೇ ಇಷ್ಟಪಟ್ಟಿತ್ತು. ದೇಶದ ಮೂಲೆ ಮೂಲೆಯಲ್ಲೂ ರಾಕಿಭಾಯ್‌ನ ನೋಡಿ ಮೆಚ್ಚಿಕೊಂಡಿದ್ದರು. `ಕೆಜಿಎಫ್ 2′ ಆರ್ಭಟ ನೋಡಿ ಶಾಕ್ ಆಗಿರುವ ಬಾಲಿವುಡ್ ಮಂದಿ ಸಿನಿಮಾವನ್ನು ಹಾಡಿ ಹೊಗಳುತ್ತಿದ್ದಾರೆ. ಈ ಕಾರಣಕ್ಕೆ ಎಲ್ಲರ ಕಣ್ಣು `ಕೆಜಿಎಫ್ ಚಾಪ್ಟರ್ 3′ ಸಿನಿಮಾ ಮೇಲಿದೆ. ಅದರಲ್ಲೂ ಬಾಲಿವುಡ್ ಸ್ಟಾರ್ ನಟಿಯರು `ಕೆಜಿಎಫ್ 3’ ಸಿನಿಮಾ ಮೇಲೆ ಕಣ್ಣಿಟ್ಟಿದ್ದಾರೆ. ಇದನ್ನೂ ಓದಿ:ದಿಗಂತ್ ಬಾಳಲ್ಲಿ ನಡೀತು ಮತ್ತೊಂದು ದುರಂತ

    `ಆರ್‌ಆರ್‌ಆರ್’, `ಪುಷ್ಪ’ ಹಾಗೂ `ಕೆಜಿಎಫ್ 2′ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿತ್ತು. ಈ ಬಿರುಗಾಳಿಯನ್ನು ನೋಡಿದ ಬಳಿಕ ಬಾಲಿವುಡ್ ನಟಿಯರು `ಕೆಜಿಎಫ್ 3′ ಸಿನಿಮಾದಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಇವರೆಲ್ಲರೂ ಬಾಲಿವುಡ್ ಚಿತ್ರರಂಗದ ಟಾಪ್ ನಟಿಯರು ಅನ್ನುವುದು ವಿಶೇಷ. ಈಗಾಗಲೇ ಚಿತ್ರದ ನಿರ್ಮಾಪಕರ ಜೊತೆ ಬಾಲಿವುಡ್ ನಟಿಯರು ಸಿನಿಮಾದಲ್ಲಿ ನಟಿಸುವ ಆಸೆ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗುತ್ತಿದೆ.

    ಬಾಲಿವುಡ್ ನಟಿ ರವೀನಾ ಟಂಡನ್, ಸಂಜಯ್ ದತ್, ಮೌನಿ ರಾಯ್, ಇವರೆಲ್ಲರೂ ಕೆಜಿಎಫ್‌ನಲ್ಲಿ ನಟಿಸಿದ ಮೇಲೆ ಇವರ ಕೆರಿಯರ್ ಗ್ರಾಫ್ ಚೇಂಜ್ ಆಗಿದೆ. ಹಾಗಾಗಿ ಬಾಲಿವುಡ್ ಚೆಲುವೆಯರು ʻಕೆಜಿಎಫ್ ಚಾಪ್ಟರ್ 3ʼನಲ್ಲಿ ನಟಿಸಲು ನಾ ಮುಂದು ತಾ ಮುಂದು ಎನ್ನುತ್ತಿದ್ದಾರೆ.

    Live Tv

  • ʻಕೆಜಿಎಫ್‌ 2ʼ 50ನೇ ದಿನದ ಸೆಲೆಬ್ರೇಶನ್‌ನಲ್ಲಿ ಯಶ್‌ ಜೊತೆ ರಾಧಿಕಾ ಕಾಣಿಸಿಕೊಂಡಿದ್ದು ಹೀಗೆ

    ʻಕೆಜಿಎಫ್‌ 2ʼ 50ನೇ ದಿನದ ಸೆಲೆಬ್ರೇಶನ್‌ನಲ್ಲಿ ಯಶ್‌ ಜೊತೆ ರಾಧಿಕಾ ಕಾಣಿಸಿಕೊಂಡಿದ್ದು ಹೀಗೆ

    ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್, ಸಿನಿಮಾದಿಂದ ಕೊಂಚ ಬ್ರೇಕ್ ತೆಗೆದುಕೊಂಡು ಮಕ್ಕಳ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಆಗಾಗ ಹೊಸ ಬಗೆಯ ಫೋಟೋ ಹಂಚಿಕೊಳ್ಳುವುದರ ಮೂಲಕ ಸುದ್ದಿಯಲ್ಲಿರುತ್ತಾರೆ. ಈಗ ಪತಿ ಯಶ್ ಜೊತೆ ಸಖತ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿರೋ ಫೋಟೋ ಶೇರ್ ಮಾಡಿದ್ದಾರೆ.

     

    View this post on Instagram

     

    A post shared by Hombale Films (@hombalefilms)

    `ಮೊಗ್ಗಿನ ಮನಸ್ಸು’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದ ನಟಿ ರಾಧಿಕಾ ಪಂಡಿತ್, ಚಿತ್ರರಂಗದಲ್ಲಿ ಬೇಡಿಕೆಯಿರುವಾಗಲೇ ರಾಕಿಂಗ್ ಸ್ಟಾರ್ ಯಶ್ ಜತೆ ಹಸೆಮಣೆ ಏರಿದ್ದರು. ಈಗ ಇಬ್ಬರು ಮುದ್ದಾದ ಮಕ್ಕಳ ಜೊತೆ ತಾಯ್ತನದ ಖುಷಿಯಲ್ಲಿ ಅನುಭವಿಸುತ್ತಾ, ಮಡದಿಯಾಗಿ ಪತಿ ಯಶ್ ಅವರ ಯಶಸ್ಸಿಗೆ ಶ್ರಮಿಸುತ್ತಾ ಚಿತ್ರರಂಗದಿಂದ ಬ್ರೇಕ್ ತೆಗೆದು ಕೊಂಡಿದ್ದಾರೆ. ಇದನ್ನೂ ಓದಿ: ಕಮಲ್ ಹಾಸನ್ ಸಿನಿಮಾ ಮುಂದೆ ಅಕ್ಷಯ್ ಕುಮಾರ್ ಸಾಮ್ರಾಟ್ ಪೃಥ್ವಿರಾಜ್ ಡಲ್ಲೋ ಡಲ್ಲು

    ಸದ್ಯ `ಕೆಜಿಎಫ್ 2′ 50 ದಿನಗಳನ್ನ ಪೂರೈಸಿರೋ ಖುಷಿಯ ಜತೆಗೆ ಕೆಜಿಎಫ್ ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಬರ್ತಡೇ ಸಂಭ್ರಮದಲ್ಲಿ ಪತಿ ಯಶ್ ಜತೆ ರಾಧಿಕಾ ಪಂಡಿತ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾ ಕಣ್ಣಿಗೆ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಫೋಟೋಗೆ ಅಭಿಮಾನಿಗಳಿಂದ ಭರ್ಜರಿ ಲೈಕ್ಸ್ ಗಿಟ್ಟಿಸಿಕೊಳ್ಳುತ್ತಿದೆ. ಯಶ್ ಮತ್ತು ರಾಧಿಕಾ ಮುದ್ದಾದ ಜೋಡಿಯನ್ನ ನೋಡಿ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.

  • ಕೆಜಿಎಫ್ 2 ಐವತ್ತನೇ ದಿನದ ಸಂಭ್ರಮದಲ್ಲಿ ತೆಲುಗು ನಟ ಪ್ರಭಾಸ್

    ಕೆಜಿಎಫ್ 2 ಐವತ್ತನೇ ದಿನದ ಸಂಭ್ರಮದಲ್ಲಿ ತೆಲುಗು ನಟ ಪ್ರಭಾಸ್

    ಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ಕೆಜಿಎಫ್ 2 ಸಿನಿಮಾ ಐವತ್ತು ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಚಿತ್ರತಂಡವು ಭರ್ಜರಿ ಪಾರ್ಟಿಯೊಂದನ್ನು ಆಯೋಜನೆ ಮಾಡಿತ್ತು. ಈ ಸಂತೋಷ ಕೂಟದಲ್ಲಿ ತೆಲುಗಿನ ಹೆಸರಾಂತ ನಟ ಪ್ರಭಾಸ್ ಕೂಡ ಆಗಮಿಸಿದ್ದರು. ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲಿ ನಟಿಸುತ್ತಿರುವ ಪ್ರಭಾಸ್ ಬೆಂಗಳೂರಿಗೆ ಬಂದು ಹೊಂಬಾಳೆ ಫಿಲ್ಮ್ಸ್ ಸದಸ್ಯರಿಗೆ ಶುಭಾಶಯ ಹೇಳಿದರು. ಇದನ್ನೂ ಓದಿ : Exclusive : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯಸ್ಮರಣೆ : ಪುತ್ಥಳಿ ಅನಾವರಣ

    ಐವತ್ತು ದಿನಗಳ ಈ ಸಂಭ್ರಮವನ್ನು ದೊಡ್ಡಮಟ್ಟದಲ್ಲಿ ಮಾಡುತ್ತಾರೆ ಎಂಬ ನಿರೀಕ್ಷೆ ಅಭಿಮಾನಿಗಳಿಗೆ ಇತ್ತು. ಆದರೆ, ಸಿನಿಮಾ ತಂಡ ತಮಗೆ ಮಾತ್ರ ಸೀಮಿತ ಮಾಡಿಕೊಂಡು ಕೇಕ್ ಕತ್ತರಿಸುವ ಮೂಲಕ ಸಂಭ್ರಮ ಆಚರಿಸಿದೆ. ಐವತ್ತು ದಿನಗಳ ಸಂಭ್ರಮಕ್ಕೆ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ ಕಿರಗಂದೂರು ಸೇರಿದಂತೆ ಚಿತ್ರ ತಂಡ ಭಾಗಿ ಆಗಿತ್ತು. ಇದನ್ನೂ ಓದಿ : ಕೆಜಿಎಫ್ 2 ಐವತ್ತು ದಿನ ಪೂರೈಸಿದ ಬೆನ್ನಲ್ಲೆ ಮತ್ತೊಂದು ಹೊಸ ಸಿನಿಮಾ ರಿಲೀಸ್ ಘೋಷಣೆ

    400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಐವತ್ತು ದಿನ ಪೂರೈಸಿರುವ ಕೆಜಿಎಫ್ 2 ಈಗಾಗಲೇ ಸಾವಿರಾರು ಕೋಟಿ ರೂಪಾಯಿ ಗಳಿಕೆ ಮಾಡಿದೆ. ಬಾಕ್ಸ್ ಆಫೀಸಿನಲ್ಲಿ ದಾಖಲೆ ಬರೆದಿದೆ. ಬಾಲಿವುಡ್ ಮಂದಿಯನ್ನು ನಿದ್ದೆಗೆಡಿಸುವಂತೆ ಮಾಡಿದೆ. ಈಗಲೂ ಒಳ್ಳೆಯ ಗಳಿಕೆಯಲ್ಲೇ ಚಿತ್ರ ಸಾಗುತ್ತಿದೆ. ಬಹುಶಃ ನೂರು ದಿನಗಳನ್ನು ಪೂರೈಸಿದಾಗ ದೊಡ್ಡ ಮಟ್ಟದಲ್ಲಿ ಸಂಭ್ರಮಾಚಾರಣೆ ಮಾಡಬಹುದು ಎಂಬ ನಿರೀಕ್ಷೆ ಅಭಿಮಾನಿಗಳದ್ದು.

  • ಥಿಯೇಟರ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡುತ್ತಿರುವಾಗಲೇ ಓಟಿಟಿನಲ್ಲಿ `ಕೆಜಿಎಫ್ 2′ ರಿಲೀಸ್

    ಥಿಯೇಟರ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡುತ್ತಿರುವಾಗಲೇ ಓಟಿಟಿನಲ್ಲಿ `ಕೆಜಿಎಫ್ 2′ ರಿಲೀಸ್

    ಶ್ ನಟನೆಯ `ಕೆಜಿಎಫ್ 2′ ಬಾಕ್ಸಾಫೀಸ್‌ನಲ್ಲಿ ಭರ್ಜರಿ ದಾಖಲೆ ಮಾಡಿ, 50 ದಿನಗಳನ್ನು ಪೂರೈಸಿದೆ. ಈಗಲೂ ಜನರು ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ವೀಕ್ಷಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಈ ಬೆನ್ನಲ್ಲೇ `ಕೆಜಿಎಫ್ 2′ ಓಟಿಟಿಗೆ ಲಗ್ಗೆ ಇಟ್ಟಿದೆ. ಇದೀಗ ಓಟಿಟಿಯಲ್ಲಿ ಯಶ್ ಸಿನಿಮಾ ರಿಲೀಸ್ ಆಗಿದೆ.

    kgf 2ಪ್ರಶಾಂತ್ ನೀಲ್ ಮತ್ತು ಯಶ್ ಕಾಂಬಿನೇಷನ್ ಚಿತ್ರ `ಕೆಜಿಎಫ್ 2′ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಈಗ ಯಶ್ ಸಿನಿಮಾ ಓಟಿಟಿಗೆ ಲಗ್ಗೆ ಇಟ್ಟಿದೆ. ಅಮೆಜಾನ್ ಪ್ರೈಮ್ ಸದಸ್ಯರು ಕನ್ನಡ,ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ `ಕೆಜಿಎಫ್ 2′ ಚಿತ್ರವನ್ನ ಹೆಚ್ಚುವರಿ ವೆಚ್ಚವಿಲ್ಲದೇ ವೀಕ್ಷಿಸಬಹುದಾಗಿದೆ. ಮಧ್ಯರಾತ್ರಿ 12 ಗಂಟೆಯಿಂದ ಚಿತ್ರ ವೀಕ್ಷಣೆಗೆ ಲಭ್ಯವಾಗಿದೆ. ಇದನ್ನೂ ಓದಿ:ಬಿಗ್ ಬಾಸ್ ನಿರೂಪಣೆಗೆ ಸಮಂತಾ ಫಿಕ್ಸ್: ನಾಗಾರ್ಜುನ ಔಟ್.?

    ಇನ್ನು ನ್ಯಾಷನಲ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಸಂಜಯ್ ದತ್ ನಟಿಸಿರುವ `ಕೆಜಿಎಫ್ 2′ ಈಗಾಗಲೇ ಒಟ್ಟು 1240.9 ಕೋಟಿ ಗಳಿಸಿ, 1250 ಕೋಟಿ ಗಳಿಸುವತ್ತ ಮುನ್ನುಗ್ಗುತ್ತಿದೆ. ಹಿಂದಿ ಬಾಕ್ಸಾಫೀಸ್‌ನಲ್ಲಿ 430 ಕೋಟಿಗೂ ಅಧಿಕ ಕಲೆಕ್ಷನ್ ಮಾಡುತ್ತಿದೆ. ಒಟ್ನಲ್ಲಿ ಯಶ್ ಸಿನಿಮಾ ನೋಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ ವಿನಃ ಕಮ್ಮಿಯಾಗುತ್ತಿಲ್ಲ.‌

  • 400 ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿದ ಕೆಜಿಎಫ್ 2 : ಆದರೂ, ಯಶ್ ಅಭಿಮಾನಿಗಳಿಗೆ ನಿರಾಸೆ

    400 ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿದ ಕೆಜಿಎಫ್ 2 : ಆದರೂ, ಯಶ್ ಅಭಿಮಾನಿಗಳಿಗೆ ನಿರಾಸೆ

    ಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ‘ಕೆಜಿಎಫ್ 2’ ಸಿನಿಮಾ ಬಿಡುಗಡೆ ಆಗಿ ಇಂದಿಗೆ 50 ದಿನಗಳನ್ನು ಪೂರೈಸಿದೆ. ವಿಶ್ವದಾದ್ಯಂತ 400 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ 50 ದಿನಗಳನ್ನು ಪೂರೈಸುತ್ತಿದೆ ಎಂದು ಹೊಂಬಾಳೆ ಫಿಲ್ಮ್ಸ್ ಘೋಷಿಸಿದೆ. ಬಾಕ್ಸ್ ಆಫೀಸಿನಲ್ಲೂ ದಾಖಲೆ ಬರೆದ ಈ ಸಿನಿಮಾ 100 ದಿನಗಳತ್ತ ಮುನ್ನುಗ್ಗುತ್ತಿದೆ. ಇದನ್ನೂ ಓದಿ :  ಪಠ್ಯಪುಸ್ತಕದಲ್ಲಿ ನಮ್ಮ ರಾಜರ ಬಗ್ಗೆ 2 ಸಾಲು, ಮೊಘಲರ ಬಗ್ಗೆ ಜಾಸ್ತಿ ಉಲ್ಲೇಖ: ಅಕ್ಷಯ್ ಕುಮಾರ್

    KGF 2 Prakash raj (4)

    50ನೇ ದಿನದ ಸಂಭ್ರಮದಲ್ಲಿ ಯಶ್ ಅಭಿಮಾನಿಗಳು ವಿಶೇಷ ಸುದ್ದಿಯೊಂದಕ್ಕಾಗಿ ಕಾದಿದ್ದರು. ಇವರ ಹೊಸ ಸಿನಿಮಾ ಇಂದು ಘೋಷಣೆ ಆಗಲಿದೆ ಎಂದು ಸುದ್ದಿಯಾಗಿದ್ದರಿಂದ,  ಈ ಸಿನಿಮಾದ ಕುರಿತು ಯಾವೆಲ್ಲ ಮಾಹಿತಿಗಳು ಹೊರ ಬೀಳಲಿವೆ ಎಂದು ಕುತೂಹಲಗೊಂಡಿದ್ದರು. ಆದರೆ, ಅಂತಹ ಯಾವುದೇ ಸುದ್ದಿಯು ಇಂದು ಹೊರ ಬಂದಿಲ್ಲ. ಹಾಗಾಗಿ ಸಹಜವಾಗಿಯೇ ಯಶ್ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಇದನ್ನೂ ಓದಿ : ಪತ್ನಿ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಗೆದ್ದ ಹಾಲಿವುಡ್ ಸ್ಟಾರ್ ನಟ ಜಾನಿ ಡೆಪ್ : ನೂರಾರು ಕೋಟಿ ಪರಿಹಾರ

    50ನೇ ದಿನ ಪೂರೈಸಿದ ಹಿನ್ನೆಲೆಯಲ್ಲಿ ಸಿನಿಮಾ ನೋಡುಗರಿಗೆ ಗುಡ್ ನ್ಯೂಸ್ ಕೂಡ ನೀಡಿದೆ ಚಿತ್ರತಂಡ. ನಾಳೆಯಿಂದ ಕೆಜಿಎಫ್ 2 ಸಿನಿಮಾ ಓಟಿಟಿಯಲ್ಲಿ ಲಭ್ಯವಿದೆ. ಥಿಯೇಟರ್ ಗೆ ಬಂದು ಸಿನಿಮಾವನ್ನು ಕಣ್ತುಂಬಿಕೊಳ್ಳದವರು ಮನೆಯಲ್ಲೇ ಕೂತು ಓಟಿಟಿಯಲ್ಲಿ ವೀಕ್ಷಿಸಬಹುದಾಗಿದೆ. ಅಲ್ಲಿಯೂ ದಾಖಲೆ ಬರೆಯುವ ಮುನ್ಸೂಚನೆಗಳು ದಟ್ಟವಾಗಿದೆ. ಇದನ್ನೂ ಓದಿ : ಸರಾಯಿ ಜೊತೆ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ನಟಿ

    ಕೆಜಿಎಫ್ 2 ಹಿಂದಿಯಲ್ಲಿ ಭಾರೀ ಯಶಸ್ಸು ಕಂಡಿದ್ದು, 440 ಕೋಟಿಗೂ ಅಧಿಕ ಹಣ ಕೇವಲ ಬಾಲಿವುಡ್ ನಿಂದ ಬಂದಿದೆ ಎಂದು ಹೇಳಲಾಗುತ್ತಿದೆ. ಇತರ ಭಾಷೆಯೂ ಸೇರಿದಂತೆ ಸಾವಿರಾರು ಕೋಟಿಯನ್ನು ಗಳಿಸುವ ಮೂಲಕ ಕೆಜಿಎಫ್ 2 ದಾಖಲೆ ಬರೆದಿದೆ.