Tag: KGF-2

  • ಇಟಲಿ- ಬಾಂಗ್ಲಾ ಅಭಿಮಾನಿಗಳನ್ನ ಭೇಟಿಯಾದ ನ್ಯಾಷನಲ್ ಸ್ಟಾರ್ ಯಶ್

    ಇಟಲಿ- ಬಾಂಗ್ಲಾ ಅಭಿಮಾನಿಗಳನ್ನ ಭೇಟಿಯಾದ ನ್ಯಾಷನಲ್ ಸ್ಟಾರ್ ಯಶ್

    `ಕೆಜಿಎಫ್’ ಸಿನಿಮಾ ಬಂದ ಮೇಲೆ ಗಡಿ ದಾಟಿ ಬೆಳೆದಿರುವ ನಟ ಯಶ್‌ಗೆ ದೇಶದೆಲ್ಲೆಡೆ ಅಭಿಮಾನಿಗಳಿದ್ದಾರೆ. ರಾಕಿಭಾಯ್ ನಟನೆ ನೋಡಿದ ಮೇಲಂತೂ ಪರಭಾಷೆ, ಹೊರ ದೇಶದಲ್ಲೂ ಅಪಾರ ಅಭಿಮಾನಿಗಳಿದ್ದಾರೆ. ಇದೀಗ ವಿದೇಶದ ಪ್ರವಾಸದಲ್ಲಿರುವ ಯಶ್ ದಂಪತಿ, ಇಟಲಿ ಮತ್ತು ಬಾಂಗ್ಲಾ ಅಭಿಮಾನಿಗಳನ್ನ ಭೇಟಿಯಾಗಿದ್ದಾರೆ.

    ರಾಕಿಭಾಯ್ ಆಗಿ `ಕೆಜಿಎಫ್ 2′ ಚಿತ್ರದ ಭರ್ಜರಿ ಸಕ್ಸಸ್ ನಂತರ ಪತ್ನಿ ರಾಧಿಕಾ ಪಂಡಿತ್ ಜೊತೆ ವಿದೇಶದ ಪ್ರವಾಸದಲ್ಲಿರುವ ಯಶ್‌ಗೆ ಇಟಲಿ ಮತ್ತು ಬಾಂಗ್ಲಾ ದೇಶದ ಅಭಿಮಾನಿಗಳ ಭೇಟಿಯಾಗಿದೆ. ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸ್ಪೆಷಲ್ ಆಗಿ ಪೋಸ್ಟ್ ಮಾಡಿ, ತಮ್ಮ ಅಭಿಮಾನಿಗಳಿಗೆ ಯಶ್ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ:‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಲೀಕ್?

     

    View this post on Instagram

     

    A post shared by Yash (@thenameisyash)

    ನನ್ನ ಮೇಲಿನ ನಿಮ್ಮ ಪ್ರೀತಿ, ಗಡಿಯನ್ನು ಮೀರಿದೆ. ಇಟಲಿ ಮತ್ತು ಬಾಂಗ್ಲಾದೇಶದಿಂದ ಭೇಟಿಯಾದ ನನ್ನ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಯಶ್ ಪೋಸ್ಟ್ ಮಾಡಿದ್ದಾರೆ. ಇನ್ನು ಯಶ್ ಮುಂದಿನ ಸಿನಿಮಾದ ಅಪ್‌ಡೇಟ್‌ಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿದೇಶದಲ್ಲಿ ಜಾಲಿ ಮೂಡ್‌ನಲ್ಲಿದ್ದಾರೆ ಯಶ್- ರಾಧಿಕಾ ಪಂಡಿತ್

    ವಿದೇಶದಲ್ಲಿ ಜಾಲಿ ಮೂಡ್‌ನಲ್ಲಿದ್ದಾರೆ ಯಶ್- ರಾಧಿಕಾ ಪಂಡಿತ್

    ಚಂದನವನದ ಮುದ್ದಾದ ಜೋಡಿ ಅಂದ್ರೆ ಯಶ್ ಮತ್ತು ರಾಧಿಕಾ, ಸಾಕಷ್ಟು ಸಿನಿಮಾಗಳ ಮೂಲಕ ಗಮನ ಸೆಳೆದಿರುವ ರಾಂಕಿಂಗ್ ಸ್ಟಾರ್ ದಂಪತಿ ಸದ್ಯ ವೆಕೇಶನ್ ಮೂಡ್‌ನಲ್ಲಿದ್ದಾರೆ. ಯುರೋಪ್‌ನ ಬೀದಿ ಬೀದಿಗಳಲ್ಲಿ ಕೈ ಕೈ ಹಿಡಿದು ಜಾಲಿ ಮೂಡ್‌ನಲ್ಲಿದ್ದಾರೆ.

     

    View this post on Instagram

     

    A post shared by Radhika Pandit (@iamradhikapandit)

    `ಕೆಜಿಎಫ್ 2′ ಸಕ್ಸಸ್ ನಂತರ ಯಶ್ ಮುಂದಿನ ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಯಶ್ ಸದ್ಯ ಪತ್ನಿ ರಾಧಿಕಾ ಪಂಡಿತ್ ಜೊತೆ ವೆಕೇಶನ್ ಮೂಡ್‌ನಲ್ಲಿದ್ದಾರೆ. ಯುರೋಪ್‌ನ ಪ್ರಸಿದ್ಧ ತಾಣಗಳಿಗೆ ಭೇಟಿ ನೀಡಿ, ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಸದ್ಯ ರಾಧಿಕಾ ಪಂಡಿತ್ ಹೊಸ ಫೋಟೋ ಶೇರ್ ಮಾಡಿದ್ದು, ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದನ್ನೂ ಓದಿ:ಬಾಲಿವುಡ್ ನಟಿ ಐಶ್ವರ್ಯ ರೈ ಮತ್ತೆ ಗರ್ಭಿಣಿನಾ?

    ಬಾಲಿವುಡ್ ನಟಿ ಐಶ್ವರ್ಯ ರೈ ಮತ್ತೆ ಗರ್ಭಿಣಿನಾ?

    View this post on Instagram

     

    A post shared by Radhika Pandit (@iamradhikapandit)

    ನಮ್ಮ ನೆಚ್ಚಿನ ಜಾಗವಿದು, ಯಾರೋ ಹೇಳಿದ್ದರು ಇದು ಇಟಲಿ ಅಂತಾ ಆದರೆ ಅಲ್ಲಾ ಅಂತಾ ಅಡಿಬರಹ ನೀಡಿ, ಪತಿ ಜತೆಗಿನ ಸುಂದರ ಫೋಟೋಗಳನ್ನ ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ. ಇನ್ನು ʼಯಶ್ 19ʼ ಚಿತ್ರದ ಅಪ್‌ಡೇಟ್‌ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 100 ದಿನ ಪೂರೈಸಿದ ‘ಕೆಜಿಎಫ್ 2’ ಸಿನಿಮಾ: ಯಶ್ ಹೊಸ ಸಿನಿಮಾ ಅನೌನ್ಸ್ ಆಗಲೇ ಇಲ್ಲ

    100 ದಿನ ಪೂರೈಸಿದ ‘ಕೆಜಿಎಫ್ 2’ ಸಿನಿಮಾ: ಯಶ್ ಹೊಸ ಸಿನಿಮಾ ಅನೌನ್ಸ್ ಆಗಲೇ ಇಲ್ಲ

    ಕೆಜಿಎಫ್ 2 ಸಿನಿಮಾ ಇದೀಗ ನೂರು ದಿನಗಳ ಪೂರೈಸಿದೆ. ಹೀಗಾಗಿ ಅಭಿಮಾನಿಗಳಿಗೆ ಮತ್ತು ಸಿನಿಮಾ ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದೆ ಹೊಂಬಾಳೆ ಫಿಲ್ಮ್ಸ್‍. ನೂರು ದಿನಗಳನ್ನು ಪೂರೈಸಿರುವ ಸಂದರ್ಭದಲ್ಲಿ ಚಿತ್ರತಂಡದಿಂದ ಹೊಸ ಸುದ್ದಿ ಏನಾದರೂ ಸಿಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಈ ಸಾರಿಯೂ ಚಿತ್ರತಂಡ ನಿರಾಸೆ ಮೂಡಿಸಿದೆ.

    kgf 2

    ಕೆಜಿಎಫ್ 2 ಸಿನಿಮಾ ಐವತ್ತು ದಿನಗಳನ್ನು ಪೂರೈಸಿದ ಸಂದರ್ಭದಲ್ಲಿ ಯಶ್  ನಟನೆಯ ಹೊಸ ಸಿನಿಮಾದ ಘೋಷಣೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಅಂದು ಯಾವುದೇ ಮಾಹಿತಿ ಕೊಡಲಿಲ್ಲ. ಹಾಗಾಗಿ ಶತದಿನ ಸಂದರ್ಭದಲ್ಲಾದರೂ ಸಿಹಿ ಸುದ್ದಿ ಸಿಗಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಈ ಬಾರಿಯೂ ಯಶ್ ಸಿನಿಮಾ ಬಗ್ಗೆಯಾಗಲಿ ಅಥವಾ ಕೆಜಿಎಫ್ 3 ಸಿನಿಮಾ ಬಗ್ಗೆಯಾಗಲಿ ಯಾವುದೇ ಮಾಹಿತಿಯನ್ನು ನಿರ್ಮಾಣ ಸಂಸ್ಥೆ ನೀಡಿಲ್ಲ. ಇದನ್ನೂ ಓದಿ:`ಮಾರ್ಟಿನ್’ ಆ್ಯಕ್ಷನ್ ಸೀನ್‌ಗಾಗಿ ಧ್ರುವಾ ಸರ್ಜಾ- ಎ.ಪಿ ಅರ್ಜುನ್ ಭರ್ಜರಿ ತಯಾರಿ

    ತೆಲುಗಿನ ಪುಷ್ಪಾ ಸಿನಿಮಾದ ಭಾಗ 3 ಬಗ್ಗೆ ಸುದ್ದಿ ಹರಡುತ್ತಿದ್ದಂತೆಯೇ ಕೆಜಿಎಫ್ 3 ಸಿನಿಮಾದ ಬಗ್ಗೆಯೂ ಚರ್ಚೆ ನಡೆದಿದೆ. ಆದಷ್ಟು ಬೇಗ ಈ ಸುದ್ದಿಯನ್ನು ನಿರ್ದೇಶಕರಾಗಲಿ ಅಥವಾ ನಿರ್ಮಾಪಕರಾಗಲಿ ಹೇಳಲಿ ಎಂದು ನಿರೀಕ್ಷೆ ಮಾಡಲಾಗುತ್ತಿದೆ. ಆದರೆ, ಇನ್ನೆರಡು ವರ್ಷ ಈ ಸಿನಿಮಾ ಬರುವುದು ಅಸಾಧ್ಯ ಎನ್ನಲಾಗುತ್ತಿದೆ. ಆದರೆ, ಭಾಗ 3 ಬರುವುದು ಪಕ್ಕಾ ಎನ್ನುವ ಮಾಹಿತಿಯೂ ಹರಿದಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಪತ್ನಿ ರಾಧಿಕಾ ಪಂಡಿತ್ ಜೊತೆ ಯುರೋಪ್‌ಗೆ ಹಾರಿದ `ಕೆಜಿಎಫ್’ ಸ್ಟಾರ್ ಯಶ್

    ಪತ್ನಿ ರಾಧಿಕಾ ಪಂಡಿತ್ ಜೊತೆ ಯುರೋಪ್‌ಗೆ ಹಾರಿದ `ಕೆಜಿಎಫ್’ ಸ್ಟಾರ್ ಯಶ್

    ನ್ಯಾಷನಲ್ ಸ್ಟಾರ್ ಯಶ್ `ಕೆಜಿಎಫ್ 2′ ಸಕ್ಸಸ್ ನಂತರ `ಯಶ್ 19′ ಚಿತ್ರದ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಬೆನ್ನಲ್ಲೇ ಪತ್ನಿ ರಾಧಿಕಾ ಪಂಡಿತ್ ಜತೆ ಯಶ್ ಯೂರೋಪ್‌ಗೆ ಹಾರಿದ್ದಾರೆ. ವೆಕೇಷನ್ ಮೂಡ್‌ನಲ್ಲಿರುವ ಯಶ್ ದಂಪತಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿರುವ ಅಪ್‌ಡೇಟ್ ಅಂದ್ರೆ ಯಶ್ ಮುಂದಿನ ಸಿನಿಮಾ ಯಾವುದು. ಯಾವ ಅವತಾರದಲ್ಲಿ ರಾಕಿಭಾಯ್ ಕಾಣಿಸಿಕೊಳ್ತುತ್ತಾರೆ ಅಂತಾ ದಿನದಿಂದ ದಿನಕ್ಕೆ ಯಶ್ ಚಿತ್ರದ ಮೇಲಿನ ನಿರೀಕ್ಷೆ ಜಾಸ್ತಿ ಆಗುತ್ತಿದೆ. ಕೆಜಿಎಫ್ 2 ರಿಲೀಸ್ ಆಗಿ, ಗಲ್ಲಾಪೆಟ್ಟಿಗೆ ಲೂಟಿ ಮಾಡಿ 3 ತಿಂಗಳು ಕಳೆದಿದೆ. ಮುಂದಿನ ಚಿತ್ರದ ಅಪ್‌ಡೇಟ್ ತಿಳಿಸುವ ಬೆನ್ನಲ್ಲೇ ಯಶ್, ಪತ್ನಿ ರಾಧಿಕಾ ಪಂಡಿತ್ ಜತೆ ಯೂರೋಪ್‌ಗೆ ಹಾರಿದ್ದಾರೆ. ಇದನ್ನೂ ಓದಿ:ಗುಮ್ಮನ ಜೊತೆ ಬಂದ `ವಿಕ್ರಾಂತ್ ರೋಣ’ ಟೀಮ್: ಹೊಸ ಸಾಂಗ್‌ ರಿಲೀಸ್

     

    View this post on Instagram

     

    A post shared by Radhika Pandit (@iamradhikapandit)

    ಯುರೋಪ್‌ನ ಸ್ಲೋವೆನಿಯಾದಲ್ಲಿರುವ ಲೇಕ್ ಬ್ಲೆಡ್ ಚರ್ಚ್ ಎದುರು ಯಶ್ ಮತ್ತು ರಾಧಿಕಾ ಪೋಸ್ ನೀಡಿದ್ದಾರೆ. ಸದ್ಯ ಜಾಲಿ ಮೂಡನಲ್ಲಿರುವ ಯಶ್, ರಾಧಿಕಾ ಜೋಡಿಯ ಫೋಟೋ ನೋಡಿ ಫ್ಯಾನ್ಸ್ ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನು ನರ್ತನ್ ಜತೆಗಿನ ಯಶ್ ಮುಂದಿನ ಚಿತ್ರದ ಅಪ್‌ಡೇಟ್ ಫ್ಯಾನ್ಸ್ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಸ್ಕರ್ ರೇಸ್ ನಲ್ಲಿ ‘ಆರ್.ಆರ್.ಆರ್’ ಹೆಸರು, ‘ಕೆಜಿಎಫ್ 2’ ಯಾಕಿಲ್ಲ ಎಂದ ಅಭಿಮಾನಿಗಳು

    ಆಸ್ಕರ್ ರೇಸ್ ನಲ್ಲಿ ‘ಆರ್.ಆರ್.ಆರ್’ ಹೆಸರು, ‘ಕೆಜಿಎಫ್ 2’ ಯಾಕಿಲ್ಲ ಎಂದ ಅಭಿಮಾನಿಗಳು

    ಸ್ಕರ್ ಪ್ರಶಸ್ತಿಗಳ ಕುರಿತು ಇದೀಗ ಮತ್ತೊಂದು ಸುತ್ತಿನ ಚರ್ಚೆ ಶುರುವಾಗಿದೆ. ಈ ಬಾರಿ ಆಸ್ಕರ್ ಪ್ರಶಸ್ತಿ ರೇಸ್ ನಲ್ಲಿ ಆರ್.ಆರ್.ಆರ್ ಹೆಸರು ಕೇಳಿ ಬರುತ್ತಿದ್ದು, ಈ ಬಾರಿ ಈ ಸಿನಿಮಾ ಭಾರೀ ಪೈಪೋಟಿ ಮಾಡಲಿದೆ ಎಂದು ಅಂದಾಜಿಸಲಾಗುತ್ತಿದೆ. ಈ ಸಿನಿಮಾಗಿಂತಲೂ ಹೆಚ್ಚು ಸದ್ದು ಮಾಡಿದ್ದ ಕನ್ನಡದ ಕೆಜಿಎಫ್ 2 ಸಿನಿಮಾ ಹೆಸರು ಯಾಕೆ ರೇಸ್ ನಲ್ಲಿ ಕೇಳಿ ಬರುತ್ತಿಲ್ಲ ಎಂಬ ಪ್ರಶ್ನೆ ಕನ್ನಡ ಅಭಿಮಾನಿಗಳದ್ದು.

    ದಕ್ಷಿಣದ ಸಿನಿಮಾಗಳು ಒಂದೇ ಎಂದು ನಂಬಿಸುತ್ತಾ ಬರುತ್ತಿದ್ದರೂ, ಕನ್ನಡ ಮೂಲದ ಸಿನಿಮಾಗಳಿಗೆ ಅದಕ್ಕೆ ಸಿಗಬೇಕಾದ ಮನ್ನಣೆ ದೊರೆಯದೇ ಇರುವುದಕ್ಕೂ ಕೆಲವರು ಆಕ್ಷೇಪ ವ್ಯಕ್ತ ಪಡಿಸುತ್ತಿದ್ದಾರೆ. ಆರ್.ಆರ್.ಆರ್ ಸಿನಿಮಾಗಿಂತಲೂ ಕೆಜಿಎ‍ಫ್ 2 ಸಿನಿಮಾ ಹೆಚ್ಚು ಕಡೆ ರಿಲೀಸ್ ಆಗಿದೆ. ಬಾಕ್ಸ್ ಆಫೀಸಿನಲ್ಲು ಸದ್ದು ಮಾಡಿದೆ, ಇನ್ನೂ ಹಲವು ಕಡೆ ಪ್ರದರ್ಶನ ಕಾಣುತ್ತಿದೆ. ಕನ್ನಡದ ಸಿನಿಮಾವೊಂದು ಈ ಮಟ್ಟಕ್ಕೆ ಹೆಸರು ಮಾಡಿದ್ದರೂ ಆಸ್ಕರ್ ರೇಸ್ ನಲ್ಲಿ ಈ ಸಿನಿಮಾ ಇದೆ ಎಂದು ಎಲ್ಲೂ ಬಿಂಬಿತವಾಗಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ:ಅವಳಿ ಮಕ್ಕಳಿಗೆ ತಾಯಿಯಾಗಲಿದ್ದಾರಾ ಆಲಿಯಾ: ರಣ್‌ಬೀರ್‌ ಕೊಟ್ರು ಬ್ರೇಕಿಂಗ್‌ ನ್ಯೂಸ್

    ಕೆಜಿಎಫ್ 2 ಸಿನಿಮಾ ಬಾಲಿವುಡ್ ಮಂದಿಯನ್ನು ನಿದ್ದೆಗೆಡಿಸಿದೆ. ಬಾಕ್ಸ್ ಆಫೀಸಿನಲ್ಲಿ ಅತೀ ಹೆಚ್ಚು ಹಣಗಳಿಸಿದ್ದು ಹಿಂದಿಯಲ್ಲಿ. ಹಾಗಾಗಿ ಬಾಲಿವುಡ್ ನವರು ಆರ್.ಆರ್.ಆರ್ ಗೆ ಮಣೆ ಹಾಕಿ, ಕೆಜಿಎಫ್ 2 ಸಿನಿಮಾವನ್ನು ಹಿಂದಿಕ್ಕಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಆರೋಪ ಕೂಡ ಇದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಂತೂ ಭಾರೀ ಚರ್ಚೆ ಆಗುತ್ತಿದೆ. ಕನ್ನಡದ ಸಿನಿಮಾಗೆ ಮನ್ನಣೆ ಸಿಗಲೇಬೇಕು ಎಂದು ಹಲವರು ಒತ್ತಾಯಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನರ್ತನ್ ನಿರ್ದೇಶನದಲ್ಲಿ ಯಶ್ ನಟಿಸ್ತಾರಾ ಅಥವಾ ಇಲ್ಲವಾ? : ಒಂದು ವಾರ ಡೆಡ್ ಲೈನ್

    ನರ್ತನ್ ನಿರ್ದೇಶನದಲ್ಲಿ ಯಶ್ ನಟಿಸ್ತಾರಾ ಅಥವಾ ಇಲ್ಲವಾ? : ಒಂದು ವಾರ ಡೆಡ್ ಲೈನ್

    ಕೆಜಿಎಫ್ 2 ಸಿನಿಮಾದ ನಂತರ ಯಶ್ ಬೇಡಿಕೆ ತುಂಬಾ ಹೆಚ್ಚಿದೆ. ಕನ್ನಡವೂ ಸೇರಿದಂತೆ ಹಲವು ಭಾಷೆಯ ಸಿನಿಮಾ ನಿರ್ಮಾಪಕರು, ನಿರ್ದೇಶಕರು ಯಶ್ ಹಿಂದೆ ಬಿದ್ದಿದ್ದಾರೆ. ಇಷ್ಟೊಂದು ಬೇಡಿಕೆ ಇರುವಾಗ ಯಶ್ ಮೌನವಹಿಸಿದ್ದಾರೆ. ತಮಿಳು, ತೆಲುಗು,  ಕನ್ನಡ ಸಿನಿಮಾಗಳ ಬಗ್ಗೆ ಸುದ್ದಿ ಆಗುತ್ತಿದ್ದರೂ, ಯಾವುದಕ್ಕೂ ಪ್ರತಿಕ್ರಿಯಿಸದೆ ಬರುತ್ತಿರುವ ಸುದ್ದಿಗಳನ್ನು ಓದಿಕೊಂಡು ಸುಮ್ಮನಾಗಿದ್ದಾರೆ. ಆದರೂ, ಸುದ್ದಿಗಳು ಮಾತ್ರ ನಿಲ್ಲುತ್ತಿಲ್ಲ.

    ಈವರೆಗೂ ನರ್ತನ್ ನಿರ್ದೇಶನದ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆ ಎಂದು ಸುದ್ದಿ ಆಗಿತ್ತು. ಆ ಸಿನಿಮಾಗಾಗಿಯೇ ಯಶ್ ತಯಾರಿ ಆಗುತ್ತಿದ್ದಾರೆ ಎಂದೂ ಹೇಳಲಾಗಿತ್ತು. ಯಶ್ ಆಪ್ತರು ಕೂಡ ಈ ಸುದ್ದಿಯನ್ನು ಖಚಿತ ಪಡಿಸಿದ್ದರು. ಆದರೆ, ಒಂದು ವಾರದಿಂದ ನರ್ತನ್ ಸಿನಿಮಾದಲ್ಲಿ ಯಶ್ ನಟಿಸುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ನರ್ತನ್ ಸಿನಿಮಾಗೂ ಮುಂಚೆ, ಮತ್ತೊಂದು ಭಾರೀ ಬಜೆಟ್ ಸಿನಿಮಾದಲ್ಲಿ ಅವರು ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್

    ಈ ನಡುವೆ ನರ್ತನ್ ಮಾಧ್ಯಮವೊಂದರ ಜೊತೆ ಮಾತನಾಡಿ, ಸಿನಿಮಾ ರಂಗ ಅಂದರೆ, ಅಲ್ಲಿ ವದಂತಿಗಳು, ಗಾಸಿಪ್ ಗಳು ಇರಲೇಬೇಕು. ಯಶ್ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವುದು ಒಂದು ವಾರದೊಳಗೆ ಗೊತ್ತಾಗಲಿದೆ. ಬಹುಶಃ ಒಂದು ವಾರದಲ್ಲಿ ಸಿನಿಮಾ ಬಗ್ಗೆ ಕ್ಲ್ಯಾರಿಟಿ ಸಿಗಬಹುದು ಎಂದು ಹೇಳಿದ್ದಾರೆ. ಅಲ್ಲಿಗೆ ಒಂದು ವಾರದಲ್ಲಿ ಯಶ್ ಅವರ ಹೊಸ ಸಿನಿಮಾದ ಅಪ್ ಡೇಟ್ ಏನಾದರೂ ಸಿಗಬಹುದಾ ಕಾದುನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ಕನ್ನಡ, ಕನ್ನಡಿಗರನ್ನೇ ಮರೆತು ಬಿಟ್ಟರಾ ‘ಕೆಜಿಎಫ್ 2’ ನಿರ್ದೇಶಕ ಪ್ರಶಾಂತ್ ನೀಲ್ : ಏನಿದು ಹೊಸ ಆರೋಪ?

    ಕನ್ನಡ, ಕನ್ನಡಿಗರನ್ನೇ ಮರೆತು ಬಿಟ್ಟರಾ ‘ಕೆಜಿಎಫ್ 2’ ನಿರ್ದೇಶಕ ಪ್ರಶಾಂತ್ ನೀಲ್ : ಏನಿದು ಹೊಸ ಆರೋಪ?

    ಕೆಜಿಎಫ್ ನಂತರ ಪ್ರಶಾಂತ್ ನೀಲ್ ತೆಲುಗಿಗೆ ಹಾರಿದಾಗಲೇ ಒಂದಷ್ಟು ವಿರೋಧಗಳನ್ನು ಅವರು ಎದುರಿಸಬೇಕಾಯಿತು. ಕನ್ನಡದಲ್ಲೇ ಮೊಲದ ಸಿನಿಮಾ ಮಾಡಿ, ಕನ್ನಡದಲ್ಲೇ ಸಕ್ಸಸ್ ಕಂಡು, ದಿಢೀರ್ ಅಂತ ಬೇರೆ ಭಾಷೆಗೆ ಹೋಗುವುದು ಎಷ್ಟು ಸರಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವರು ಚರ್ಚೆ ಮಾಡಿದರು. ಭಾರತೀಯ ಸಿನಿಮಾ ರಂಗ ಒಂದೇ ಆಗಿರುವಾಗ, ಕನ್ನಡದ ಪ್ರತಿಭೆಯೊಬ್ಬರು ಬೇರೆ ಭಾಷೆಯಲ್ಲಿ ಸಿನಿಮಾ ಮಾಡುವುದು ತಪ್ಪೇನು ಅಂತ ಕೆಲವರು ಪ್ರಶ್ನೆ ಮಾಡಿದರು. ಕೆಲವರು ಇನ್ನಷ್ಟು ಸಿನಿಮಾಗಳನ್ನು ನೀಲ್ ಇಲ್ಲಿಯೇ ಮಾಡಬಹುದಿತ್ತು ಎಂದು ಕಾಮೆಂಟ್ ಮಾಡಿದರು.

    ಕೆಜಿಎಫ್ 2 ಮತ್ತೆ ಹಿಟ್ ಆಗುತ್ತಿದ್ದಂತೆಯೇ ಪ್ರಶಾಂತ್ ನೀಲ್ ಮೇಲಿನ ಮುನಿಸನ್ನು ಮರೆತು, ಮತ್ತೆ ಅವರನ್ನು ಗೌರವಿಸಿದರು. ಇದೀಗ ಅದೇ ಪ್ರಶಾಂತ್ ನೀಲ್ ಮೇಲೆ ಮತ್ತೆ ಕೆಲ ಕನ್ನಡಿಗರು ಮುನಿಸಿಕೊಂಡಿದ್ದಾರೆ. ಕಾರಣ ತಮಿಳು ಸಿನಿಮಾ. ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗಿದೆ. ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಇದೇ ಸಮಯದಲ್ಲೇ ಚಾರ್ಲಿ 777 ಸಿನಿಮಾ ಕೂಡ ರಿಲೀಸ್ ಆಗಿ, ಅದಕ್ಕೂ ಕೂಡ ಉತ್ತಮ ಪ್ರತಿಕ್ರಿಯೆ ಫಲಿತಾಂಶ ಸಿಕ್ಕಿದೆ. ಪ್ರಶಾಂತ್ ನೀಲ್ ತಮಿಳಿನ ವಿಕ್ರಮ್ ಸಿನಿಮಾ ಹೊಗಳಿ, ಕನ್ನಡದ ಯಾವ ಚಿತ್ರಗಳ ಬಗ್ಗೆಯೂ ಅವರು ಮಾತನಾಡುವುದಿಲ್ಲ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ:Breaking-ಬಿಗ್ ಬಾಸ್ ಸೀಸನ್ 8 ಶೂಟಿಂಗ್ ಶುರು: ಪ್ರೊಮೋ ಚಿತ್ರೀಕರಣದಲ್ಲಿ ಸುದೀಪ್ ಭಾಗಿ

    ಕನ್ನಡದ ಹಲವು ಸಿನಿಮಾಗಳು ಕೂಡ ಯಶಸ್ವಿ ಪ್ರದರ್ಶನ ಕಾಣುತ್ತಿವೆ. ಬಾಕ್ಸ್ ಆಫೀಸಿನಲ್ಲೂ ಗೆಲ್ಲುತ್ತಿವೆ. ಉತ್ತಮ ಕಂಟೆಂಟ್ ಹೊಂದಿರುವ ಚಿತ್ರ ಎಂಬ ಪ್ರಶಂಸೆಗೂ ಕಾರಣವಾಗುತ್ತಿವೆ. ಬೇರೆ ಬೇರೆ ಸಿನಿಮಾ ರಂಗ ಸಿಲೆಬ್ರಿಟಿಗಳು ಕನ್ನಡ ಸಿನಿಮಾಗಳನ್ನು ಹಾಡಿ ಹೊಗಳುತ್ತಿದ್ದಾರೆ. ಆದರೆ, ಪ್ರಶಾಂತ್ ನೀಲ್ ಆ ಸಿನಿಮಾಗಳ ಬಗ್ಗೆ ಒಂದೇ ಒಂದು ಮಾತುಗಳನ್ನೂ ಆಡದೇ, ತಮಿಳು ಸಿನಿಮಾ ಬಗ್ಗೆ  ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ. ಕನ್ನಡ, ಕನ್ನಡಿಗರ ಮೇಲೆ ಯಾಕೆ ಇಷ್ಟೊಂದು ತಾತ್ಸಾರ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವರು ಪ್ರಶ್ನೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಿಯಾನ್ ವಿಕ್ರಮ್ ಜೊತೆ ನಟಿಸಲು ಶ್ರೀನಿಧಿ ಶೆಟ್ಟಿ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ

    ಚಿಯಾನ್ ವಿಕ್ರಮ್ ಜೊತೆ ನಟಿಸಲು ಶ್ರೀನಿಧಿ ಶೆಟ್ಟಿ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ

    ನ್ನಡತಿ ಶ್ರೀನಿಧಿ ಶೆಟ್ಟಿ `ಕೆಜಿಎಫ್ 2′ ಚಿತ್ರದ ಯಶಸ್ಸಿನ ಅಲೆಯಲ್ಲಿದ್ದಾರೆ. ಸದ್ಯ ಚಿಯಾನ್ ವಿಕ್ರಮ್‌ಗೆ ನಾಯಕಿಯಾಗಿ `ಕೋಬ್ರಾ’ ಚಿತ್ರದಲ್ಲಿ ನಟಿಸಿರುವ ಶ್ರೀನಿಧಿ, ತಮ್ಮ ಸಂಭಾವನೆ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಕೆಜಿಎಫ್ ಸಕ್ಸಸ್ ನಂತರ ʻಕೋಬ್ರಾʼ ಚಿತ್ರಕ್ಕೆ ಬರೋಬ್ಬರಿ ಎರಡು ಪಟ್ಟು ಜಾಸ್ತಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

    ಯಶ್ ಜೊತೆ ಕೆಜಿಎಫ್‌ನಲ್ಲಿ ಮಿಂಚಿದ ನಂತರ ಈಗ ಚಿಯಾನ್ ವಿಕ್ರಮ್ ಜತೆ ಡ್ಯುಯೆಟ್ ಹಾಡಲು ಶ್ರೀನಿಧಿ ರೆಡಿಯಾಗಿದ್ದಾರೆ. ಸದ್ಯ ಗಾಂಧಿನಗರದಲ್ಲಿ ಶ್ರೀನಿಧಿ ಶೆಟ್ಟಿ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿರುವ ಬಗ್ಗೆ ಸಖತ್ ಸುದ್ದಿಯಲ್ಲಿದ್ದಾರೆ. ತಮಿಳಿನ ʻಕೋಬ್ರಾʼ ಚಿತ್ರಕ್ಕೆ ಭಾರಿ ಮೊತ್ತದ ಸಂಭಾವನೆಯನ್ನೇ ಪಡೆದಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:Breaking-ಬಿಗ್ ಬಾಸ್ ಸೀಸನ್ 8 ಶೂಟಿಂಗ್ ಶುರು: ಪ್ರೊಮೋ ಚಿತ್ರೀಕರಣದಲ್ಲಿ ಸುದೀಪ್ ಭಾಗಿ

    `ಕೆಜಿಎಫ್ 2′ ಸಿನಿಮಾಗೆ 3 ಕೋಟಿ ಸಂಭಾವನೆ ಪಡೆದಿದ್ದ ಶ್ರೀನಿಧಿ ಶೆಟ್ಟಿ, ಈಗ ತಮಿಳಿನ ಚೊಚ್ಚಲ ಚಿತ್ರಕ್ಕೆ 6 ರಿಂದ 7 ಕೋಟಿ ಸಂಭಾವನೆ ಪಡೆದಿದ್ದಾರಂತೆ. ನಟಿಸಿರುವ ಎರಡು ಚಿತ್ರದಲ್ಲೂ ಸಿಕ್ಕಾಪಟ್ಟೆ ಸೌಂಡ್ ಮಾಡಿರುವ ನಾಯಕಿ, ಈಗ ತಮ್ಮ ಸಂಭಾವನೆ ವಿಚಾರದಲ್ಲಿ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಮೊದಲ ಬಾರಿಗೆ ಚಿಯಾನ್‌ ವಿಕ್ರಮ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿರುವ ಕೆಜಿಎಫ್‌ ನಟಿ ಶ್ರೀನಿಧಿ ನಟನೆಯ ಚಿತ್ರ ʻಕೋಬ್ರಾʼ ಆಗಸ್ಟ್ 11ರಂದು ತೆರೆಗೆ ಅಬ್ಬರಿಸುತ್ತಿದೆ.  ಇನ್ನು ಕಾಲಿವುಡ್‌ನಲ್ಲಿ ಶ್ರೀನಿಧಿ ಶೆಟ್ಟಿ ಅದೆಷ್ಟರ ಮಟ್ಟಿಗೆ ಸೌಂಡ್ ಮಾಡುತ್ತಾರೆ ಅಂತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಮುಂದಿನ ಚಿತ್ರಕ್ಕಾಗಿ 15 ಕೆಜಿ ತೂಕ ಇಳಿಸಿಕೊಳ್ಳಲಿದ್ದಾರೆ ಯಶ್

    ಮುಂದಿನ ಚಿತ್ರಕ್ಕಾಗಿ 15 ಕೆಜಿ ತೂಕ ಇಳಿಸಿಕೊಳ್ಳಲಿದ್ದಾರೆ ಯಶ್

    ಕೆಜಿಎಫ್ 2 ಸೂಪರ್ ಹಿಟ್ ನಂತರ ಯಶ್ ಕುರಿತು ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಸುದ್ದಿಗಳು ಎಷ್ಟೇ ದೊಡ್ಡದಾಗಿ ಸದ್ದು ಮಾಡಿದರೂ, ಯಶ್ ಆಗಲಿ ಅಥವಾ ಅವರ ಟೀಮ್ ಆಗಲಿ ಯಾವುದನ್ನೂ ಖಚಿತಪಡಿಸುವುದಿಲ್ಲ. ಹಾಗಾಗಿ ಮತ್ತೆ ಮತ್ತೆ ಹೊಸ ಹೊಸ ಸುದ್ದಿಗಳು ಹುಟ್ಟುತ್ತಲೇ ಇವೆ. ಮೊನ್ನೆಯಷ್ಟೇ ಯಶ್ ಬಳಿ ಐದು ಸಿನಿಮಾಗಳಿಗೆ ಎಂದು ಸುದ್ದಿ ಆಗಿತ್ತು. ಶಂಕರ್ ಸೇರಿದಂತೆ ಹಲವು ನಿರ್ದೇಶಕರು ಯಶ್ ಕಾಲ್ ಶೀಟ್ ಗಾಗಿ ಕಾಯುತ್ತಿದ್ದಾರೆ ಎಂದೂ ಹೇಳಲಾಗಿದೆ.

    ಈ ನಡುವೆ ತಮ್ಮ ಪಾಡಿಗೆ ತಾವು ದೇಹವನ್ನು ಉರಿಗೊಳಿಸಿಕೊಳ್ಳುವಲ್ಲಿ ಯಶ್ ಬ್ಯುಸಿಯಾಗಿದ್ದಾರೆ. ಮುಂದಿನ ಸಿನಿಮಾವನ್ನು ಕನ್ನಡದಲ್ಲೇ ಮಾಡುವುದು ಪಕ್ಕಾ ಆಗಿರುವುದರಿಂದ ಮತ್ತು ಆ ಸಿನಿಮಾವನ್ನು ನರ್ತನ್ ನಿರ್ದೇಶನ ಮಾಡುತ್ತಿರುವುದರಿಂದ ಆ ಚಿತ್ರಕ್ಕಾಗಿ ಯಶ್ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಜಿಮ್ ತರಬೇತುದಾರ ಪಾನಿಪುರಿ ಕಿಟ್ಟ ಅವರ ಗರಡಿಯಲ್ಲಿ ಯಶ್ ದೇಹ ಹುರಿಗೊಳಿಸಿಕೊಳ್ಳುತ್ತಿದ್ದು 15 ಕೆಜಿ ತೂಕ ಇಳಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಬಹಿರಂಗವಾಗಿ ಕ್ಷಮೆ ಕೇಳಿದ ಮಲಯಾಳಂ ಖ್ಯಾತ ನಟ ಪೃಥ್ವಿ ಸುಕುಮಾರನ್

    ನರ್ತನ್ ನಿರ್ದೇಶನದ ಸಿನಿಮಾದಲ್ಲಿ ಯಶ್ ಮತ್ತೊಂದು ಬಗೆಯ ಪಾತ್ರವನ್ನು ಮಾಡಬೇಕಾಗಿರುವುದರಿಂದ ಕೆಜಿಎಫ್ ರಾಕಿಭಾಯ್ ತರಹವೇ ಈ ಪಾತ್ರವು ಕಾಣಬಾರದು ಎನ್ನುವ ಉದ್ದೇಶದಿಂದ ತೂಕವನ್ನು ಇಳಿಸಿಕೊಳ್ಳುವ ಕಸರತ್ತಿಗೆ ಕೈ ಹಾಕಿದ್ದಾರಂತೆ ಯಶ್. ಈಗಾಗಲೇ ಹಲವು ದಿನಗಳಿಂದ ಇದೇ ಕೆಲಸದಲ್ಲಿ ಯಶ್ ನಿರತರಾಗಿದ್ದಾರೆ ಎಂದು ಹೇಳುತ್ತಾರೆ ಅವರು ಆಪ್ತರು.

    Live Tv
    [brid partner=56869869 player=32851 video=960834 autoplay=true]

  • ಈ ಕಾರಣಕ್ಕಾಗಿ ಫ್ಯಾಮಿಲಿ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

    ಈ ಕಾರಣಕ್ಕಾಗಿ ಫ್ಯಾಮಿಲಿ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

    ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ನಟನೆಯಿಂದ ಅಂತರ ಕಾಯ್ದುಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದಾರೆ. ಹೊಸ ಬಗೆಯ ಫೋಟೋಸ್ ಮೂಲಕ ಆಗಾಗ ನೆಟ್ಟಿಗರ ಗಮನ ಸೆಳೆಯುತ್ತಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ 500ನೇ ಪೋಸ್ಟ್‌ಗಾಗಿ ವಿಶೇಷ ಫೋಟೋವನ್ನ ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ.

    `ಮೊಗ್ಗಿನ ಮನಸ್ಸು’ ಚಿತ್ರದಿಂದ ಸಿನಿಪಯಣ ಶುರು ಮಾಡಿದ್ದ ನಟಿ ಮದುವೆಯ ಬಳಿಕವೂ ಬೆಳ್ಳಿತೆರೆಯಲ್ಲಿ ಮಿಂಚಿದ್ದರು. `ಆದಿ ಲಕ್ಷ್ಮಿ ಪುರಾಣ’ ಚಿತ್ರದಲ್ಲಿ ಕಡೆಯದಾಗಿ ಕಾಣಿಸಿಕೊಂಡರು. ಮತ್ತೆ ರಾಧಿಕಾ ಅವರ ಕಂಬ್ಯಾಕ್‌ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಹೀಗಿರುವಾಗ ಅಭಿಮಾನಿಗಳ ಜತೆ ಸಾಮಾಜಿಕ ಜಾಲತಾಣದಲ್ಲಿ ನಿರಂತರ ಸಂಪರ್ಕದಲ್ಲಿದ್ದಾರೆ. ತಮ್ಮ ವೈಯಕ್ತಿಕ ಬದುಕಿನ ಸುಂದರ ಫೋಟೋಗಳನ್ನ ಶೇರ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಇದೀಗ ರಾಧಿಕಾ ಶೇರ್ ಮಾಡಿರುವ ಫೋಟೋ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ತೆಲುಗಿನ ಮಹೇಶ್ ಬಾಬುಗೆ ತಂದೆಯಾಗಿ ನಟಿಸ್ತಾರಾ ರಿಯಲ್ ಸ್ಟಾರ್ ಉಪೇಂದ್ರ

     

    View this post on Instagram

     

    A post shared by Radhika Pandit (@iamradhikapandit)

    ನಟಿಯ ಸೋಷಿಯಲ್‌ ಮೀಡಿಯಾದಲ್ಲಿ ಖಾತೆಯ 500ನೇ ಪೋಸ್ಟ್ ವಿಶೇಷ ಫೋಟೋನಿಂದ ಶೇರ್ ಮಾಡಿದ್ದಾರೆ. ರಾಧಿಕಾ ಜತೆ ಪತಿ ಯಶ್ ಮತ್ತು ಮುದ್ದಾದ ಇಬ್ಬರು ಮಕ್ಕಳು ಇರುವ ಚೆಂದದ ಫೋಟೋವನ್ನೇ ಶೇರ್ ಮಾಡಿದ್ದಾರೆ. ಮುದ್ದಾದ ಸ್ಮೈಲ್‌ನೊಂದಿಗೆ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿರೋ ಯಶ್ ಕುಟುಂಬ ಫೋಟೋ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಹ್ಯಾಪಿ ಕುಟುಂಬಕ್ಕೆ ಯಾರು ದೃಷ್ಟಿನು ಬೀಳದೇ ಇರಲಿ ಅಂತಾ ಮನಸಾರೆ ಶುಭಹಾರೈಸುತ್ತಿದ್ದಾರೆ. ಈಗ ರಾಧಿಕಾ ಕುಟುಂಬದ ನಯಾ ಫೋಟೋ ಸಖತ್ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]