ಇತ್ತೀಚೆಗಷ್ಟೇ ಬಿಡುಗಡೆಯಾದ ಕೆಜಿಎಫ್ 2 ಸಿನಿಮಾದಲ್ಲಿ ರಾಕಿಭಾಯ್ ನೆಚ್ಚಿನ ಚಾಚಾ ಪಾತ್ರದಲ್ಲಿ ಕಾಣಿಸಿಕೊಂಡಿರುವ, ಕನ್ನಡದ ಹೆಸರಾಂತ ನಟ ಹರೀಶ್ ರೈ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಯೂಟ್ಯೂಬ್ ವೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ತಾವು ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಕ್ಯಾನ್ಸರ್ ನಿಂದ ಈಗಾಗಲೇ ಸಖತ್ ಬಳಲುತ್ತಿರುವ ವಿಷಯವನ್ನೂ ಅವರು ಹಂಚಿಕೊಂಡಿದ್ದಾರೆ.

ಮೊದಲು ಹರೀಶ್ ರೈ ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದರಂತೆ. ಈ ಥೈರಾಯ್ಡ್ ಮುಂದೆ ಕ್ಯಾನ್ಸರ್ ಆಗಿ ಬದಲಾಗಿದೆಯಂತೆ. ಈಗದು ಗಂಭೀರ ಸ್ಥಿತಿಯಲ್ಲಿ ಇರುವುದರಿಂದ ಆರ್ಥಿಕ ಮುಗ್ಗಟ್ಟಿನ ನಡುವೆಯೇ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ ಎಂದು ಹರೀಶ್ ರೈ ಮಾತನಾಡಿದ್ದಾರೆ. ತಾವು ಆರ್ಥಿಕ ಸಂಕಷ್ಟದಲ್ಲಿ ಇರುವುದಾಗಿಯೂ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಈಗೀಗ ಚೈತ್ರಾ ಹಳ್ಳಿಕೇರಿ ಮುಖವಾಡ ಕಳಚ್ತಾ ಇದ್ದಾರೆ : ಸ್ಪೂರ್ತಿ ಗೌಡ

ಕನ್ನಡದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಹರೀಶ್ ರೈ, ನೆಗೆಟಿವ್ ಪಾತ್ರಗಳ ಮೂಲಕವೇ ಗುರುತಿಸಿಕೊಂಡವರು. ಕೆಜಿಎಫ್ 2 ಸಿನಿಮಾದಲ್ಲಿ ಅವರದ್ದು ಪಾಸಿಟಿವ್ ಪಾತ್ರವಾಗಿತ್ತು. ಹಾಗಾಗಿ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಈ ಗೆಲುವನ್ನು ಅವರು ಸಂಭ್ರಮಿಸಬೇಕು ಎನ್ನುವಷ್ಟರಲ್ಲಿ ಕ್ಯಾನ್ಸರ್ ಅವರನ್ನು ಹಿಂಡಿ ಹಿಪ್ಪಿ ಮಾಡುತ್ತಿದೆ. ಜೋಡಿ ಹಕ್ಕಿ, ತಾಯವ್ವ, ಸಂಜು ವೆಡ್ಸ್ ಗೀತಾ ಸೇರಿದಂತೆ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿರುವ ಹರೀಶ್, ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಹರೀಶ್ ರೈ ಅವರಿಗೆ ಕ್ಯಾನ್ಸರ್ ಆಗಿರುವ ವಿಚಾರ ಮಾಧ್ಯಮಗಳಲ್ಲಿ ಬರುತ್ತಿದ್ದಂತೆಯೇ ಆ ವಿಡಿಯೋವನ್ನು ನಟ ಅನಿರುದ್ಧ ಪೋಸ್ಟ್ ಮಾಡಿದ್ದು, ನಟನಿಗೆ ಸಹಾಯ ಮಾಡುವಂತೆ ವಿನಂತಿಸಿಕೊಂಡಿದ್ದಾರೆ. ಆದಷ್ಟು ಬೇಗ ಅವರು ಕ್ಯಾನ್ಸರ್ ನಿಂದ ಗೆದ್ದು ಬರಲಿ ಎಂದು ಹಾರೈಸಿದ್ದಾರೆ.












ದೇಶಾದ್ಯಂತ ರಾಖಿ ಹಬ್ಬ ಆಚರಿಸಿ ಸಂಭ್ರಮಿಸುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಸಹೋದರಿ ನಂದಿನಿ ಜತೆ ರಾಖಿ ಹಬ್ಬ ಆಚರಿಸಿದ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಮಕ್ಕಳು ಕೂಡ ರಕ್ಷೆಯ ಬಂಧನ ರಾಖಿ ಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ. ಈ ಸಂಭ್ರಮ ಫೋಟೋವನ್ನ ಅಭಿಮಾನಿಗಳೊಂದಿಗೆ ನಟಿ ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:




ದೇಶಾದ್ಯಂತ ರಾಖಿ ಹಬ್ಬವನ್ನು ಆಚರಿಸುತ್ತಿದ್ದಾರೆ. `ಕೆಜಿಎಫ್’ ಸ್ಟಾರ್ ಯಶ್ ಮನೆಯಲ್ಲೂ ರಾಖಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಪ್ರತಿವರ್ಷದಂತೆ ಈ ವರ್ಷವು ಕೂಡ ರಾಖಿ ಹಬ್ಬವನ್ನ ಆಚರಿಸಿದ್ದಾರೆ. ಸಹೋದರ ಸಹೋದರಿಯ ಬಂಧವನ್ನ ತೋರಿಸುವಂತಹ ಹಬ್ಬ ಇದಾಗಿದ್ದು, ಈ ಹಬ್ಬವನ್ನ ಯಶ್ ಮತ್ತು ಸಹೋದರಿ ನಂದಿನಿ ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಇದನ್ನೂ ಓದಿ:
`ವಿಕ್ರಾಂತ್ ರೋಣ’ ಸಿನಿಮಾದ ಯಶಸ್ಸಿನ ಅಲೆಯಲ್ಲಿರುವ ಸುದೀಪ್ ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದ ಸಂದರ್ಶನವೊಂದರಲ್ಲಿ ಯಶ್ ಕುರಿತು ಮಾತನಾಡಿದ ಕಿಚ್ಚನ ಮಾತು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ನಿರೂಪಕ, ನೀವು ಯಶ್ ಅವರನ್ನ ಯಾವುದೇ ಕಾರ್ಯಕ್ರಮ ಪರಿಚಯಿಸಬೇಕಾದರೆ ಹೇಗೆ ಸ್ವಾಗತ ಮಾಡುತ್ತೀರಿ ಎಂದು ಕೇಳಿದ್ದಾರೆ. ಇದನ್ನೂ ಓದಿ:
ಯಶ್ ಬಹಳ ಎನರ್ಜಿಟಿಕ್ ಆಕ್ಟರ್, ಅದ್ಬುತ ಕನಸುಗಾರ, ಸಾಧಕ ಎಂದಿದ್ದಾರೆ. ಈ ಪದಗಳಿಂದಲೇ ಅವರನ್ನ ಸ್ವಾಗತಿಸುತ್ತೇನೆ ಎಂದು ಸುದೀಪ್ ಮಾತನಾಡಿದ್ದಾರೆ. ಕಿಚ್ಚನ ಈ ಮಾತು ಕೇಳಿ ಯಶ್ ಫ್ಯಾನ್ಸ್ ದಿಲ್‌ಖುಷ್ ಆಗಿದ್ದಾರೆ. ಈ ಮೂಲಕ ಯಶ್ ಸಾಧನೆಯ ಬಗ್ಗೆ ಸುದೀಪ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

