Tag: KGF-2

  • ಹಾಲಿವುಡ್‌ಗೆ ಯಶ್‌ ಎಂಟ್ರಿ? ವಿಶ್ವದ ಟಾಪ್‌ ರೇಸರ್‌ ಲೇವಿಸ್‌ ಹ್ಯಾಮಿಲ್ಟನ್‌ ಭೇಟಿ

    ಹಾಲಿವುಡ್‌ಗೆ ಯಶ್‌ ಎಂಟ್ರಿ? ವಿಶ್ವದ ಟಾಪ್‌ ರೇಸರ್‌ ಲೇವಿಸ್‌ ಹ್ಯಾಮಿಲ್ಟನ್‌ ಭೇಟಿ

    `ಕೆಜಿಎಫ್ 2′(Kgf 2 Film) ಚಿತ್ರದ ಸಕ್ಸಸ್ ನಂತರ ಯಶ್ (Yash) ಮುಂದಿನ ಚಿತ್ರಕ್ಕಾಗಿ ಭರ್ಜರಿ ತಯಾರಿ ಮಾಡ್ತಿದ್ದಾರೆ. ಅದಕ್ಕಾಗಿ ಅಮೆರಿಕಾದಲ್ಲಿ ಸದ್ಯ ಯಶ್ ನೆಲೆಸಿದ್ದಾರೆ. ಹಾಲಿವುಡ್ ನಿರ್ದೇಶಕ ಜೆಜೆ ಪೆರ‍್ರಿ ಜೊತೆ ಕಾಣಿಸಿಕೊಂಡಿದ್ದ ಯಶ್, ಈಗ ಕಾರ್ ರೇಸರ್ ಲೇವಿಸ್ ಹ್ಯಾಮಿಲ್ಟನ್ (Lewis Hamilton) ಅವರನ್ನ ಭೇಟಿ ಮಾಡಿದ್ದಾರೆ.

    ನ್ಯಾಷನಲ್ ಸ್ಟಾರ್ ಆಗಿ ದಶದಿಕ್ಕುಗಳಲ್ಲೂ ಯಶ್ ಮಿಂಚ್ತಿದ್ದಾರೆ. `ಕೆಜಿಎಫ್ 2′ ಸೂಪರ್ ಸಕ್ಸಸ್ ನಂತರ ಯಶ್ ಮುಂದಿನ ನಡೆ ಮೇಲೆ ಎಲ್ಲರಿಗೂ ಕಣ್ಣಿದೆ. ಯಶ್ ಮುಂದಿನ ಪ್ರಾಜೆಕ್ಟ್ ಅಪ್‌ಡೇಟ್‌ಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ. ಇತ್ತೀಚೆಗೆ ಹಾಲಿವುಡ್ ನಿರ್ದೇಶಕರನ್ನ ಭೇಟಿ ಮಾಡಿದ್ದ ಯಶ್ ಈಗ ಫಾರ್ಮುಲಾ ಕಾರು ರೇಸರ್ ಲೇವಿಸ್ ಹ್ಯಾಮಿಲ್ಟನ್ ಜೊತೆ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಇದೀಗ ಸಖತ್ ವೈರಲ್ ಆಗುತ್ತಿದೆ.

    ಹ್ಯಾಮಿಲ್ಟನ್ ಅವರನ್ನ ಯಶ್ ಅಮೆರಿಕದ ಲಾಸ್ ಏಂಜಲ್ಸ್‌ನಲ್ಲಿ ಭೇಟಿ ಮಾಡಿದ್ದಾರೆ. ಜಗತ್ತಿನ ಅತ್ತುತ್ತಮ ಕಾರ್ ರೇಸರ್‌ನಲ್ಲಿ ಹ್ಯಾಮಿಲ್ಟನ್ ಕೂಡ ಒಬ್ಬರು. ಹಾಗಾಗಿ ಇವರಿಬ್ಬರ ಭೇಟಿ ಇದೀಗ ನೆಟ್ಟಿಗರ ಕುತೂಹಲಕ್ಕೆ ಕಾರಣವಾಗಿದೆ. ಯಶ್ ಮುಂದಿನ ಚಿತ್ರದಲ್ಲಿ ಕಾರ್ ರೇಸರ್ ಆಗಿ ಕಾಣಿಸಿಕೊಳ್ಳಲಿದ್ದಾರಾ ಎಂಬುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಇದನ್ನೂ ಓದಿ:ಕ್ಯಾಪ್ಟನ್ ಆದ ಆರ್ಯವರ್ಧನ್‌ ಗುರೂಜಿಗೆ ಮಗಳಿಂದ ಲವ್ಲಿ ವಿಶ್

     

    View this post on Instagram

     

    A post shared by Yash (@thenameisyash)

    ಹಾಲಿವುಡ್ ನಿರ್ದೇಶಕ ಜೆಜೆ ಪೆರ‍್ರಿ ಡೈರೆಕ್ಷನ್‌ನಲ್ಲಿ ಯಶ್ ಕಾರ್ ರೇಸರ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅದಕ್ಕಾಗಿ ಯಶ್ ಕಾರ್ ರೇಸಿಂಗ್ ತರಬೇತಿ ಪಡೆಯುತ್ತಿದ್ದಾರಾ ಎಂಬುದು ಯಶ್ ಅಭಿಮಾನಿಗಳ ಅಚ್ಚರಿ. ಎಲ್ಲದಕ್ಕೂ ಉತ್ತರ ರಾಕಿಭಾಯ್ ಕಡೆಯಿಂದಲೇ ಅಧಿಕೃತ ಅಪ್‌ಡೇಟ್ ಬರುವವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಗನ್ ಹಿಡಿದು ಫೀಲ್ಡಿಗಿಳಿದ ರಾಕಿಭಾಯ್: ಮುಂದಿನ ಸಿನಿಮಾಗೆ ಯಶ್ ತಯಾರಿ

    ಗನ್ ಹಿಡಿದು ಫೀಲ್ಡಿಗಿಳಿದ ರಾಕಿಭಾಯ್: ಮುಂದಿನ ಸಿನಿಮಾಗೆ ಯಶ್ ತಯಾರಿ

    ಸ್ಯಾಂಡಲ್‌ವುಡ್ (Sandalwood) ಮಾತ್ರವಲ್ಲ ಇಡೀ ಚಿತ್ರರಂಗವನ್ನೇ ಸದ್ಯ ಆಳ್ತಿರುವ ಯಶ್(Yash), ಗನ್ ಹಿಡಿದು ಫೀಲ್ಡ್ಗೆ ಇಳಿದಿದ್ದಾರೆ. `ಕೆಜಿಎಫ್ 2′ ಸಕ್ಸಸ್ ನಂತರ ಯಶ್ ಮುಂದಿನ ಸಿನಿಮಾಗಾಗಿ ಕಾಯ್ತಿರುವ ಫ್ಯಾನ್ಸ್‌ಗೆ `ಕೆಜಿಎಫ್ 3′ (KGF 3) ಬಗ್ಗೆ ಮುನ್ಸೂಚನೆ ಕೊಟ್ಟಿದ್ದಾರೆ.

    `ಕೆಜಿಎಫ್ 2′ (Kgf 2)ಸೂಪರ್ ಡೂಪರ್ ಸಕ್ಸಸ್ ನಂತರ ಚಿತ್ರಪ್ರೇಮಿಗಳು ಯಶ್ ಮುಂದಿನ ನಡೆ ಬಗ್ಗೆ ಕ್ಯೂರಿಯಸ್ ಆಗಿದ್ದಾರೆ. ರಾಕಿಭಾಯ್ ಮುಂದಿನ ಚಿತ್ರದ ಅಪ್‌ಡೇಟ್ ಬಗ್ಗೆ ಕಾದು ಕುಳಿತಿದ್ದಾರೆ. ಹೀಗಿರುವಾಗ ಯಶ್ ಗನ್ ಹಿಡಿದು ಫೀಲ್ಡ್‌ಗೆ ಇಳಿದಿದ್ದಾರೆ. ಅಷ್ಟೇ ಅಲ್ಲ, `ಕೆಜಿಎಫ್ 3′ ಚಿತ್ರದ ಬಗ್ಗೆ ಸುಳಿವು ಕೂಡ ನೀಡಿದ್ದಾರೆ. ಇದನ್ನೂ ಓದಿ:‘ಬಿಗ್ ಬಾಸ್’ ಶೋ ನಡೆಸಲು ಸಲ್ಮಾನ್ ಖಾನ್ ಗೆ 1000 ಕೋಟಿ ಸಂಭಾವನೆ: ಸತ್ಯ ಒಪ್ಪಿಕೊಂಡ ನಟ

    ಯಶ್ ಸದ್ಯ ತಮ್ಮ ಕುಟುಂಬದ ಜೊತೆ ಜಾಲಿ ಮೂಡ್‌ನಲ್ಲಿದ್ದಾರೆ. ಚಿತ್ರದ ಸಕ್ಸಸ್ ನಂತರ ಪತ್ನಿ ರಾಧಿಕಾ ಪಂಡಿತ್ ಜತೆ ದೇಶ ಸುತ್ತುತ್ತಿದ್ದಾರೆ. ಈ ವೇಳೆ ಮನರಂಜನೆಗಾಗಿ ಶೂಟಿಂಗ್ ಗೇಮ್ ಆಟವನ್ನು ಆಡಿದ್ದಾರೆ. ಈ ವೀಡಿಯೋ ಶೇರ್ ಮಾಡುವುದರ ಜೊತೆಗೆ ಟ್ವೀಟ್ ಕೂಡ ಮಾಡಿದ್ದಾರೆ.

    ʻಗುರಿಯನ್ನು ತಲುಪಲು ಯಾವಾಗಲೂ ಒಂದು ಮಾರ್ಗವಿದೆ. ಅದನ್ನು ಗುರುತಿಸುವುದೇ ಸವಾಲುʼ ಎಂದು ಪವರ್‌ಫುಲ್ ಸಂದೇಶದೊಂದಿಗೆ ಯಶ್ ಪೋಸ್ಟ್ ಮಾಡಿದ್ದಾರೆ. ಧನ್ಯವಾದಗಳು ಜೆಜೆ ಪರ‍್ರಿ, ಎಂತಹ ಅದ್ಭುತ ದಿನ. ಮುಂದಿನ ಬಾರಿ ಅದು ಕಲಾಶ್ನಿಕೋವ್ ಆಗಿರಬೇಕು ಎಂದು ಬರೆದುಕೊಂಡಿದ್ದಾರೆ. ಸದ್ಯ ಯಶ್ ಶೂಟಿಂಗ್ ಸಖತ್ ವೈರಲ್ ಆಗುತ್ತಿದೆ.

    ಈ ವೀಡಿಯೋ ಶೇರ್ ಮಾಡುವ ಮೂಲಕ ಯಶ್ `ಕೆಜಿಎಫ್ 3′ ಚಿತ್ರದ ಬಗ್ಗೆ ಸುಳಿವು ನೀಡಿದ್ರಾ ಎಂಬ ಪ್ರಶ್ನೆ ಇದೀಗ ಅಭಿಮಾನಿಗಳಲ್ಲಿ ಮೂಡಿದೆ. ಯಾವುದಕ್ಕೂ ಯಶ್ ಅಧಿಕೃತ ಸಿನಿಮಾ ಅಪ್‌ಡೇಟ್‌ಗೆ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಮಗಳ ಜೊತೆಗಿನ ಮುದ್ದಾದ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

    ಮಗಳ ಜೊತೆಗಿನ ಮುದ್ದಾದ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

    ಚಂದನವನದ ಧ್ರುವತಾರೆ ರಾಧಿಕಾ ಪಂಡಿತ್ (Radhika Pandit) ಚಿತ್ರರಂಗದಿಂದ ದೂರ ಸರಿದಿದ್ದರು ಕೂಡ ಹೊಸ ಬಗೆಯ ಫೋಟೋ ಮೂಲಕ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸೌಂಡ್ ಮಾಡುತ್ತಿರುತ್ತಾರೆ. ಇದೀಗ ಮಗಳು ಐರಾ ಜೊತೆ ರಾಧಿಕಾ ಪಂಡಿತ್ ಚೆಂದದ ಫೋಟೋವೊಂದನ್ನ ಶೇರ್ ಮಾಡಿದ್ದಾರೆ.

    ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಟಿ ರಾಧಿಕಾ ಪಂಡಿತ್, ಇದೀಗ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಮದುವೆಯ ಬಳಿಕ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿರುವ ನಟಿ ಆಗಾಗ ತಮ್ಮ ಹೊಸ ಫೋಟೋಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಈಗ ಮಗಳ ಜೊತೆಗಿನ ಮುದ್ದಾದ ಫೋಟೋವೊಂದನ್ನ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಪ್ರಥಮ್ ಮೆಂಟಲಿ ಟಾರ್ಚರ್ ಮಾಡುತ್ತಿದ್ದರು- ಬಿಗ್ ಬಾಸ್ ವಿನ್ನರ್ ಮೇಲೆ ಕಿಡಿಕಾರಿದ ಅಮೂಲ್ಯ

     

    View this post on Instagram

     

    A post shared by Radhika Pandit (@iamradhikapandit)

    ಅವಳು ತನ್ನ ತಂದೆಯ ನೋಟ, ವರ್ತನೆ ಸಹ ಹೊಂದಿರಬಹುದು. ಆದರೆ ನಾನು ಅವಳಲ್ಲಿ ನನ್ನನ್ನು ನೋಡುತ್ತೇನೆ. ನನ್ನ ಐರಾ ಎಂದು ರಾಧಿಕಾ ಪಂಡಿತ್ ಮಗಳ ಜೊತೆಗಿನ ಫೋಟೋ ಹಂಚಿಕೊಂಡು ತಮ್ಮ ಬಾಲ್ಯದ ಬಗ್ಗೆ ನಟಿ ನೆನಪಿಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • 1000 ಕೋಟಿ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್

    1000 ಕೋಟಿ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್

    `ಕೆಜಿಎಫ್ 2′( KGF 2) ಆದ್ಮೇಲೆ ಯಶ್ ಮುಂದಿನ ಸಿನಿಮಾ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. `ಕೆಜಿಎಫ್ 2′ ಸೂಪರ್ ಸಕ್ಸಸ್ ನಂತರ ಯಶ್(Yash) ಮುಂದಿನ ನಡೆಯೇನು ಎಂಬುದರ ಬಗ್ಗೆ ಚಿತ್ರರಸಿಕರು ಕ್ಯೂರಿಯಸ್ ಆಗಿದ್ದಾರೆ. ಇನ್ನೂ ಯಶ್ ಇದೇ ದಸರಾಗೆ ಅಧಿಕೃತ ಅಪ್‌ಡೇಟ್ ಕೊಡಲು ರೆಡಿಯಾಗಿದ್ದಾರೆ.

    ರಾಕಿಂಗ್ ಸ್ಟಾರ್ ಯಶ್ ಈಗಾಗಲೇ ವಿಭಿನ್ನ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದಾರೆ. ಕೆಜಿಎಫ್ ಪಾರ್ಟ್ 1 ಮತ್ತು ಪಾರ್ಟ್ 2 ಬಂದ ಮೇಲೆ ಯಶ್ ಮಾರುಕಟ್ಟೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹೀಗಿರುವಾಗ ಯಶ್ ಮುಂದಿನ ಸಿನಿಮಾ ಬಗ್ಗೆ ಚಿತ್ರರಂಗ ಮತ್ತು ಅಭಿಮಾನಿಗಳ ವಲಯದಲ್ಲಿ ರಾಕಿಭಾಯ್‌ ಮುಂದಿನ ಚಿತ್ರದ ಸಖತ್‌ ನಿರೀಕ್ಷೆಯಿದೆ. ಸದ್ಯ ಯಶ್, ಕಾಲಿವುಡ್ ನಿರ್ದೇಶಕ ಶಂಕರ್ (Director Shankar) ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.

    `ಮಫ್ತಿ’ ನಿರ್ದೇಶಕ ನರ್ತನ್ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ತಮಿಳಿನ ನಿರ್ದೇಶಕ ಶಂಕರ್ ಅವರ ಐತಿಹಾಸಿಕ ಸಿನಿಮಾಗೆ ಯಶ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 1000 ಕೋಟಿ ಬಜೆಟ್‌ನಲ್ಲಿ ಮೂಡಿಬರಲಿರುವ ಈ ಚಿತ್ರಕ್ಕೆ ಯಶ್ ಡಿಫರೆಂಟ್ ರೋಲ್‌ನಲ್ಲಿ ಮಿಂಚಲಿದ್ದಾರೆ. ಇದನ್ನೂ ಓದಿ:ಜೈಲಿನಿಂದ ಬಿಡುಗಡೆಯಾಗಿ ಒಂದು ವರ್ಷ: ಕೊನೆಗೂ ಮೌನ ಮುರಿದ ಶಿಲ್ಪಾ ಶೆಟ್ಟಿ ಪತಿ

    ಎಸ್. ವೆಂಕಟೇಶನ್ ಬರೆದಿರೋ `ವೇಲ್‌ಪರಿ’ ಹಿಸ್ಟಾರಿಕಲ್ ಕಾದಂಬರಿಯಲ್ಲಿ ಯಶ್ ನಟಿಸೋದು ಪಕ್ಕಾ ಎನ್ನಲಾಗುತ್ತಿದೆ. ಯಶ್ ಮತ್ತು ಶಂಕರ್ ಕಾಂಬಿನೇಷನ್ ಸಿನಿಮಾಗೆ ಕರಣ್ ಜೋಹರ್(Karan Johar)  ಬಂಡವಾಳ ಹೂಡಲಿದ್ದಾರೆ. 1000 ಕೋಟಿ ವೆಚ್ಚದಲ್ಲಿ ಬಹುಭಾಷೆಗಳಲ್ಲಿ ಈ ಚಿತ್ರ ಮೂಡಿ ಬರಲಿದೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡದ ಮತ್ತೊಂದು ಸಿನಿಮಾ ಸಾವಿರ ಕೋಟಿ ಲೆಕ್ಕಾಚಾರ: ವಿದೇಶಗಳಿಂದಲೂ ‘ಕಬ್ಜ’ಗೆ ಬೇಡಿಕೆ

    ಕನ್ನಡದ ಮತ್ತೊಂದು ಸಿನಿಮಾ ಸಾವಿರ ಕೋಟಿ ಲೆಕ್ಕಾಚಾರ: ವಿದೇಶಗಳಿಂದಲೂ ‘ಕಬ್ಜ’ಗೆ ಬೇಡಿಕೆ

    ಉಪೇಂದ್ರ (Upendra) ಮತ್ತು ಕಿಚ್ಚ ಸುದೀಪ್ (Kiccha Sudeep) ಕಾಂಬಿನೇಷನ್ ನ ‘ಕಬ್ಜ’ (Kabzaa) ಸಿನಿಮಾದ ಟೀಸರ್ ಕೆಲವೇ ಗಂಟೆಗಳಲ್ಲಿ 25 ಮೀಲಿಯನ್ ದಾಟುತ್ತಿದ್ದಂತೆಯೇ ಸಿನಿಮಾದ ಲೆಕ್ಕಾಚಾರವೇ ಬದಲಾಗುತ್ತಿದೆ. ಈ ಸಿನಿಮಾ ಮೊದಲು ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಬರೋಬ್ಬರಿ ಒಂಬತ್ತು ಭಾಷೆಗಳಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕ ಆರ್.ಚಂದ್ರು ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಬಾಕ್ಸ್ ಆಫೀಸ್ ಲೆಕ್ಕಾಚಾರ ಕೂಡ ಬದಲಾಗಿದೆ.

    ಕಬ್ಜ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದ್ದಂತೆಯೇ ಈ ಸಿನಿಮಾದ ಮೇಕಿಂಗ್ ಮತ್ತು ಗುಣಮಟ್ಟವನ್ನು ಕೆಜಿಎಫ್ ಚಿತ್ರಕ್ಕೆ ಹೋಲಿಸಲಾಯಿತು. ಅದ್ಧೂರಿ ಮೇಕಿಂಗ್, ಕ್ಯಾಮೆರಾ ವರ್ಕ್, ಶೂಟಿಂಗ್ ಮಾಡಿರುವ ಶೈಲಿ, ಹಿನ್ನೆಲೆ ಸಂಗೀತ, ಭಾರೀ ಸೆಟ್ ಇದೆಲ್ಲವನ್ನೂ ಗಮನಿಸಿ ಕನ್ನಡದ ಮತ್ತೊಂದು ಕೆಜಿಎಫ್ (KGF 2) ಸಿನಿಮಾ ಎಂದು ಕಬ್ಜವನ್ನು ಬಣ್ಣಿಸಲಾಯಿತು. ಹೀಗಾಗಿ ಸಿನಿಮಾ ವಿದೇಶದಲ್ಲೂ ಡಿಮಾಂಡ್ ಕ್ರಿಯೇಟ್ ಮಾಡಿದೆ. ಕೆಜಿಎಫ್ ಚಿತ್ರವು ಯಾವೆಲ್ಲ ದೇಶಗಳಲ್ಲಿ ಬಿಡುಗಡೆ ಆಯಿತೋ ಅಷ್ಟು ದೇಶಗಳಿಂದ ಕಬ್ಜ ಸಿನಿಮಾಗೆ ಬೇಡಿಕೆ ಬಂದಿದೆ.

    ಕಬ್ಜ ಸಿನಿಮಾದ ಟೀಸರ್ (Teaser) ಮಾಡಿದ ಮೋಡಿಯಿಂದಾಗಿ ಭಾರತದಲ್ಲೂ ಚಿತ್ರಕ್ಕೆ ಸಖಯ್ ಡಿಮಾಂಡ್ ಕ್ರಿಯೇಟ್ ಆಗಿದೆ ಎನ್ನಲಾಗುತ್ತಿದೆ. ಬಾಲಿವುಡ್, ತಮಿಳು ಹಾಗೂ ತೆಲುಗು ಸಿನಿಮಾ ರಂಗದ ಖ್ಯಾತ ವಿತರಕ ಸಂಸ್ಥೆಗಳು ಈಗಾಗಲೇ ನಿರ್ದೇಶಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಈ ಕುರಿತು ಮಾತನಾಡಿದ ನಿರ್ದೇಶಕ ಆರ್.ಚಂದ್ರು, (R. Chandru) ‘ಬೇರೆ ಬೇರೆ ಭಾಷೆಯಲ್ಲಿ ರಿಲೀಸ್ ಮಾಡಲು ವಿತರಕರು ಮುಂದೆ ಬಂದಿದ್ದಾರೆ. ಇನ್ನೂ ಅದು ಮಾತುಕತೆ ಹಂತದಲ್ಲಿದೆ. ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚೆ ಸಿನಿಮಾಗೆ ಡಿಮಾಂಡ್ ಕ್ರಿಯೆಟ್ ಆಗಿದೆ. ಅಲ್ಲದೇ, ಬೇರೆ ಬೇರೆ ದೇಶಗಳಿಂದಲೂ ಡಿಮಾಂಡ್ ಬರುತ್ತಿದೆ’ ಎನ್ನುತ್ತಾರೆ.

    ಈಗಾಗಲೇ ಕನ್ನಡದ ಕೆಜಿಎಫ್ 2 ಸಿನಿಮಾ ಸರ್ವ ರೀತಿಯಲ್ಲೂ ದಾಖಲೆ ಬರೆದಿದೆ. ಬಾಕ್ಸ್ ಆಫೀಸ್ (Box Office) ಅನ್ನೇ ನಡುಗಿಸಿದೆ. ಸಾವಿರಾರು ಕೋಟಿ ಬ್ಯುಸಿನೆಸ್ ಮಾಡುವ ಮೂಲಕ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದೆ. ಕಬ್ಜ ಸಿನಿಮಾದ ಲೆಕ್ಕಾಚಾರ ಕೂಡ ಇದೀಗ ಸಾವಿರ ಕೋಟಿಯಲ್ಲಿ ಶುರುವಾಗಿದೆ. ಬಾಲಿವುಡ್ ಚಿತ್ರ ವಿಮರ್ಶಕರು ಹಾಗೂ ಸಿನಿ ಟ್ರೇಡ್ ಅನಾಲಿಸಿಸ್ ಕೂಡ ಕೆಜಿಎಫ್ ಸಿನಿಮಾದೊಂದಿಗೆ ಕಬ್ಜವನ್ನು ಕಂಪೇರ್ ಮಾಡುತ್ತಿರುವುದರಿಂದ ಕಬ್ಜ ಕೂಡ ಮಾರುಕಟ್ಟೆಯನ್ನು ವಿಸ್ತರಿಸಬಹುದು ಎಂದು ವಿವರಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉಪೇಂದ್ರ ಬರ್ತಡೇ ಮತ್ತು ‘ಕಬ್ಜ’ ಸಿನಿಮಾದ ಟೀಸರ್ ಗಾಗಿ ಕಿಚ್ಚ ಸುದೀಪ್ ಕೂಡ ಕಾಯ್ತಿದ್ದಾರಂತೆ

    ಉಪೇಂದ್ರ ಬರ್ತಡೇ ಮತ್ತು ‘ಕಬ್ಜ’ ಸಿನಿಮಾದ ಟೀಸರ್ ಗಾಗಿ ಕಿಚ್ಚ ಸುದೀಪ್ ಕೂಡ ಕಾಯ್ತಿದ್ದಾರಂತೆ

    ನಾಳೆಯೊಂದು ದಿನ ಕಳೆದರೆ ನಾಡಿದ್ದು (ಸೆ.17) ಉಪೇಂದ್ರ ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್ ನ ‘ಕಬ್ಜ’ (Kabzaa) ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದೆ. ಈವರೆಗೂ ಕೇವಲ ಪೋಸ್ಟರ್, ಮೋಷನ್ ಪೋಸ್ಟರ್ ಅಷ್ಟನ್ನೇ ಬಿಡುಗಡೆ ಮಾಡಿದ್ದ ನಿರ್ದೇಶಕ ಆರ್.ಚಂದ್ರು ಇದೀಗ ಮೊದಲ ಬಾರಿಗೆ ಟೀಸರ್ (Teaser) ರಿಲೀಸ್ ಮಾಡುತ್ತಿದ್ದಾರೆ. ಈ ಟೀಸರ್ ಅನ್ನು ನೋಡಲು ಸ್ವತಃ ಕಿಚ್ಚ ಸುದೀಪ್ ಕಾಯುತ್ತಿದ್ದಾರಂತೆ. ಅಭಿಮಾನಿಗಳಿಗೂ ಕಡ್ಡಾಯವಾಗಿ ಈ ಟೀಸರ್ ನೋಡಿ ಎಂದು ವಿಡಿಯೋ ಮೂಲಕ ಸಂದೇಶ ನೀಡಿದ್ದಾರೆ ಸುದೀಪ್ (Sudeep).

    ಕಬ್ಜ ಸಿನಿಮಾದ ಟೀಸರ್ ಉಪೇಂದ್ರರ ಹುಟ್ಟು ಹಬ್ಬದ ದಿನಕ್ಕಾಗಿ ಬಿಡುಗಡೆ ಆಗುತ್ತಿದ್ದು, ಟೀಸರ್ ನೋಡಲು ನಾನಂತೂ ಎಕ್ಸೈಟ್ ಆಗಿದ್ದೇನೆ. ಎಲ್ಲರೂ ಈ ಸಿನಿಮಾಗೆ ಪ್ರೋತ್ಸಾಹಿಸಿ ಎಂದು ಕಿಚ್ಚ ಸುದೀಪ್ (Kiccha) ವಿಡಿಯೋ ಸಂದೇಶ ಕಳುಹಿಸಿದ್ದಾರೆ. ಈ ಸಿನಿಮಾದಲ್ಲಿ ಸ್ವತಃ ಸುದೀಪ್ ಕೂಡ ಹೊಸ ಬಗೆಯ ಪಾತ್ರ ಮಾಡಿದ್ದರಿಂದ ಸುದೀಪ್ ಮತ್ತು ಉಪೇಂದ್ರ ಅಭಿಮಾನಿಗಳು ಈ ಸಿನಿಮಾದ ಟೀಸರ್ ಗಾಗಿ ಕಾಯುತ್ತಿದ್ದಾರೆ. ಕೆಜಿಎಫ್ 2 ಸಿನಿಮಾದ ನಂತರ ಭಾರೀ ಬಜೆಟ್ ನಲ್ಲಿ ನಿರ್ಮಾಣ ಆಗಿರುವ ಮತ್ತೊಂದು ಕನ್ನಡ ಸಿನಿಮಾ ಇದಾಗಿದ್ದು, ಪ್ಯಾನ್ ಇಂಡಿಯಾ ಲೇವಲ್ ನಲ್ಲೇ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಇದನ್ನೂ ಓದಿ:‘ಥ್ಯಾಂಕ್ ಗಾಡ್’ ಚಿತ್ರದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ: ನಟ ಅಜಯ್ ದೇವಗನ್ ವಿರುದ್ಧ ದೂರು ದಾಖಲು

    ಒಟ್ಟು ಐದು ಭಾಷೆಗಳಲ್ಲಿ ಟೀಸರ್ ರಿಲೀಸ್ ಆಗುತ್ತಿದ್ದು, ಕನ್ನಡದ ಸಿನಿಮಾವೊಂದು ಭಾರತೀಯ ಸಿನಿಮಾ ರಂಗದಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಈಗಾಗಲೇ ಕಬ್ಜ ಸಿನಿಮಾ ಪ್ಯಾನ್ ಇಂಡಿಯಾ ಲೇವಲ್ ನಲ್ಲಿ ಹವಾ ಕ್ರಿಯೇಟ್ ಮಾಡಿದೆ. ನಿರ್ದೇಶಕ ಚಂದ್ರು, ಕಿಚ್ಚ ಸುದೀಪ್ ಮತ್ತು ಉಪೇಂದ್ರ (Upendra) ಇದೇ ಮೊದಲ ಬಾರಿಗೆ ಒಟ್ಟಾಗಿ ಕೆಲಸ ಮಾಡಿದ್ದು, ಕೆಜಿಎಫ್ 2 ಸಿನಿಮಾದಲ್ಲಿದ್ದ ತಾಂತ್ರಿಕ ತಂಡ ಕೂಡ ಈ ಚಿತ್ರಕ್ಕಾಗಿ ಕೆಲಸ ಮಾಡಿದೆ. ಹಾಗಾಗಿ ಕೆಜಿಎಫ್ 2 ಸಿನಿಮಾಗೆ ಕಬ್ಜವನ್ನು ಹೋಲಿಕೆ ಮಾಡಲಾಗುತ್ತಿದೆ.

    ಉಪ್ಪಿ ಹುಟ್ಟು ಹಬ್ಬವನ್ನು ಮತ್ತಷ್ಟು ರಂಗಾಗಿಸಲು ಕಬ್ಜ ನಿರ್ದೇಶಕ ಆರ್.ಚಂದ್ರು (R. Chandru) ಸಜ್ಜಾಗಿದ್ದು, ಉಪ್ಪಿ ಅಭಿಮಾನಿಗಳಿಗೆ ಭರ್ಜರಿ ಬಹುಮಾನವನ್ನೇ ಕೊಡಲಿದ್ದಾರಂತೆ. ‘ಕೆಜಿಎಫ್ 2’ (KGF 2) ಚಿತ್ರಕ್ಕೆ ಸಂಗೀತ ನೀಡಿದ್ದ ರವಿ ಬಸ್ರೂರ್ ಅವರೇ ಈ ಸಿನಿಮಾಗೂ ಸಂಗೀತ ನೀಡುತ್ತಿದ್ದು, ಟೀಸರ್ ಹೇಗೆ ಇರಲಿದೆ ಎನ್ನುವ ಕುತೂಹಲವಂತೂ ಮೂಡಿದೆ. ಚಂದ್ರು ಅವರು ಸೆರೆ ಹಿಡಿದಿರುವ ವಿಷ್ಯುವೆಲ್ಸ್, ರವಿ ಬಸ್ರೂರ್ ಮ್ಯೂಸಿಕ್ ಅಭಿಮಾನಿಗಳನ್ನು ಮೋಡಿ ಮಾಡುವದಂತೂ ಕಂಡಿತ.

    Live Tv
    [brid partner=56869869 player=32851 video=960834 autoplay=true]

  • ಹಿಂದಿ ಕಿರುತೆರೆಯಲ್ಲಿ ಬರಲಿದೆ `ಕೆಜಿಎಫ್ 2′ ಚಿತ್ರ: ರಾಕಿಭಾಯ್ ಎಂಟ್ರಿಗೆ ಕೌಂಟ್ ಡೌನ್

    ಹಿಂದಿ ಕಿರುತೆರೆಯಲ್ಲಿ ಬರಲಿದೆ `ಕೆಜಿಎಫ್ 2′ ಚಿತ್ರ: ರಾಕಿಭಾಯ್ ಎಂಟ್ರಿಗೆ ಕೌಂಟ್ ಡೌನ್

    ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ಈ ವರ್ಷದ ಸೂಪರ್ ಡೂಪರ್ ಸಿನಿಮಾವಾಗಿ ಹೊರಹೊಮ್ಮಿದೆ. ಕೋಟಿಗಟ್ಟಲೇ ಗಲ್ಲಾಪೆಟ್ಟಿಗೆಯಲ್ಲಿ ಲೂಟಿ ಮಾಡಿ, ಕೆಜಿಎಫ್ 2 ಅಗ್ರ ಸ್ಥಾನದಲ್ಲಿದೆ. ಈಗ ಹಿಂದಿ ಕಿರುತೆರೆಯಲ್ಲಿ ರಾಕಿಭಾಯ್ ಮಿಂಚಲು ಡೇಟ್ ಫಿಕ್ಸ್ ಆಗಿದೆ.

    `ಕೆಜಿಎಫ್ 1′ ಮತ್ತು `ಕೆಜಿಎಫ್ 2′ ಚಿತ್ರದ ಮೂಲಕ ಯಶ್ ಈಗಾಗಲೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಜಯಭೇರಿ ಬಾರಿಸಿದ್ದಾರೆ. ದೇಶ ವಿದೇಶದಲ್ಲೂ `ಕೆಜಿಎಫ್ 2′ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಚಿತ್ರಮಂದಿರಲ್ಲಿ ಮೋಡಿ ಮಾಡಿದ್ದ ಯಶ್ (Yash) ಚಿತ್ರ ಈಗ ಕಿರುತೆರೆಯಲ್ಲೂ ಇತಿಹಾಸ ಸೃಷ್ಟಿಸಲು ರೆಡಿಯಾಗಿದೆ.

    ತಾಯಿ ಮತ್ತು ಮಗನ ಸೆಂಟಿಮೆಂಟ್ ಜೊತೆ ರಗಡ್ ಲವ್ ಸ್ಟೋರಿ ಇದೆ. ರಾಕಿಭಾಯ್ ಖಡಕ್ ಆ್ಯಕ್ಷನ್‌ಗೆ ಈಗಾಗಲೇ ಸಿನಿರಸಿಕರು ಫಿದಾ ಆಗಿದ್ದಾರೆ. ಈಗ ಕಿರುತೆರೆಯಲ್ಲಿ ಮೊದಲ ಬಾರಿಗೆ `ಕೆಜಿಎಫ್ 2′ ಹಿಂದಿ ವರ್ಷನ್‌ನಲ್ಲಿ ಬರಲು ರೆಡಿಯಾಗಿದೆ. ಸೆಪ್ಟೆಂಬರ್ 18ಕ್ಕೆ ಹಿಂದಿಯ ಖಾಸಗಿ ಚಾನೆಲ್‌ನಲ್ಲಿ ರಾತ್ರಿ 8ಕ್ಕೆ ಪ್ರಸಾರವಾಗುತ್ತಿದೆ. ಇದನ್ನೂ ಓದಿ:‘ಬಿಗ್ ಬಾಸ್’ ಮನೆಯನ್ನು ವೇಶ್ಯಾಗೃಹಕ್ಕೆ ಹೋಲಿಸಿ ಆಕ್ರೋಶ ಹೊರಹಾಕಿದ ಸಿಪಿಐ ಮುಖಂಡ

    ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಹೀಗೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ಮಿಂಚಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಜೊತೆ ಯಶ್ ಖಡಕ್ ಅಭಿನಯಕ್ಕೆ ಫ್ಯಾನ್ಸ್ ಮನಸೋತಿದ್ದಾರೆ. ಈಗ ಹಿಂದಿ ಕಿರುತೆರೆಯಲ್ಲಿ ರಾಕಿಭಾಯ್‌ ಮಿಂಚಲು ಕೌಂಟ್‌ ಡೌನ್‌ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಯಶ್ ಮುಂದಿನ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿನಾ?

    ಯಶ್ ಮುಂದಿನ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿನಾ?

    ನ್ಯಾಷನಲ್ ಸ್ಟಾರ್ ಯಶ್ (Yash) `ಕೆಜಿಎಫ್ 2′ (Kgf 2) ಸಕ್ಸಸ್ ಖುಷಿಯಲ್ಲಿದ್ದಾರೆ. ಅವರ ಮುಂದಿನ ಸಿನಿಮಾ ಮೇಲೆ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ. ಹೀಗಿರುವಾಗ ಬಹುನಿರೀಕ್ಷಿತ ಯಶ್ 19 ಸಿನಿಮಾಗೆ ಪೂಜಾ ಹೆಗ್ಡೆ (Pooja Hegde) ನಾಯಕಿ ಎನ್ನಲಾಗುತ್ತಿದೆ. ಈ ಕುರಿತ ಸುದ್ದಿಗೆ ಸ್ವತಃ ಪೂಜಾ ಹೆಗ್ಡೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

    ಪುನೀತ್ ರಾಜ್‌ಕುಮಾರ್ (Puneeth Rajkumar) ಅವರಿಗೆ ನಮನ ಸಲ್ಲಿಸಲು ಈ ಬಾರಿ ಸೈಮಾ ಕಾರ್ಯಕ್ರಮವನ್ನ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾಡಲಾಗಿತ್ತು. ಎಲ್ಲಾ ಭಾಷೆಯ ಕಲಾವಿದರು ಬೆಂಗಳೂರಿನಲ್ಲಿ ಸೇರಿದ್ದರು. ಇದೇ ಕಾರ್ಯಕ್ರಮದಲ್ಲಿ ಪೂಜಾ ಹೆಗ್ಡೆ ಕೂಡ ಭಾಗವಹಿಸಿದ್ದರು. ಈ ವೇಳೆ ಪತ್ರಕರ್ತರೊಬ್ಬರು ನೀವು `ಯಶ್ 19′ (Yash 19) ಚಿತ್ರದಲ್ಲಿ ನಟಿಸುತ್ತಿದ್ದೀರಾ ಎಂದು ಕೇಳಿದ್ದಾರೆ. ಇದನ್ನೂ ಓದಿ:‘ಹನಿಮೂನ್’ ಗೂ ಮುನ್ನ ಮನೆದೇವರ ಆಶೀರ್ವಾದ ಪಡೆದ ನಟಿ ಮಹಾಲಕ್ಷ್ಮಿ ಹಾಗೂ ರವೀಂದರ್

    ಈ ಪ್ರಾಜೆಕ್ಟ್ ಬಗ್ಗೆ ಯಾವುದೇ ಐಡಿಯಾ ನನಗಿಲ್ಲ. ಮುಂದೇನು ಆಗತ್ತೋ ನೋಡೋಣ ಎಂದು ಪೂಜಾ ಹೆಗ್ಡೆ ಉತ್ತರಿಸಿದ್ದಾರೆ. ನನಗೆ ಕನ್ನಡದಲ್ಲಿ ಏನಾದರೂ ಮಾಡಬೇಕು ಎಂಬ ಯೋಜನೆ ಇದೆ ಎಂದು ಮನಬಿಚ್ಚಿ ಮಾತನಾಡಿದ್ದಾರೆ.

    ದಕ್ಷಿಣದ ಸಿನಿಮಾಗಳ ಮೂಲಕ ಮೋಡಿ ಮಾಡುತ್ತಿರುವ ನಟಿ ಪೂಜಾ ಹೆಗ್ಡೆ ಯಶ್ ಮುಂದಿನ ಸಿನಿಮಾಗೆ ನಾಯಕಿಯಾಗುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಬ್ಲೌಸ್ ಇಲ್ಲದೆ ಸೀರೆಯುಟ್ಟು ಮಿಂಚಿದ ಕೆಜಿಎಫ್ ನಟಿ ಮೌನಿ ರಾಯ್

    ಬ್ಲೌಸ್ ಇಲ್ಲದೆ ಸೀರೆಯುಟ್ಟು ಮಿಂಚಿದ ಕೆಜಿಎಫ್ ನಟಿ ಮೌನಿ ರಾಯ್

    ಕೆಜಿಎಫ್ ಚೆಲುವೆ ಮೌನಿ ರಾಯ್ ಸೀರಿಯಲ್, ಶೋ, ಬಾಲಿವುಡ್‌ನ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಆಗಾಗ ತಮ್ಮ ಹಾಟ್ ಫೋಟೋಶೂಟ್ ಮೂಲಕ ಮೌನಿ ರಾಯ್ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ.

     

    View this post on Instagram

     

    A post shared by mon (@imouniroy)

    ಬಾಲಿವುಡ್ ಬ್ಯೂಟಿ ಮೌನಿ ರಾಯ್ ಸಿನಿಮಾ ಮತ್ತು ವೈಯಕ್ತಿಕ ಬದುಕು ಎರಡು ಸರಿದೂಗಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ನಟಿ ಆಗಾಗ ಹಾಟ್ ಕ್ಯೂಟ್ ಫೋಟೋಶೂಟ್ ಮೂಲಕ ಪಡ್ಡೆ ಹೈಕ್ಳ ಹಾರ್ಟಿಗೆ ಲಗ್ಗೆ ಇಡುತ್ತಾರೆ. ಇದೀಗ ಬ್ಲೌಸ್ ಇಲ್ಲದೆ ಸೀರೆಯುಟ್ಟು ಮೌನಿ ರಾಯ್ ಮಿರ ಮಿರ ಅಂತಾ ಮಿಂಚಿದ್ದಾರೆ. ಇದನ್ನೂ ಓದಿ:ಬ್ರೀಜರ್ ಮೇಲೆ ಆಣೆಗೂ ರಾಕೇಶ್‌ನನ್ನು ಟೆಂಪರವರಿ ಥರ ನೋಡಿಲ್ಲ: ಸೋನು ಗೌಡ ಕಣ್ಣೀರು

     

    View this post on Instagram

     

    A post shared by mon (@imouniroy)

    ಇನ್ನು ಈ ವರ್ಷ ಸೂರಜ್ ಜತೆ ಗುರುಹಿರಿಯರ ಸಮ್ಮುಖದಲ್ಲಿ ಮೌನಿ ಹಸೆಮಣೆ ಏರಿದ್ದರು. ಇದೀಗ ಮದುವೆಯ ನಂತರ ಕೂಡ ನಟಿ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. `ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಖಡಕ್ ಆಗಿ ನಟಿಸಿರುವ ಮೌನಿ, ಈ ಚಿತ್ರದ ರಿಲೀಸ್‌ಗಾಗಿ ಕಾಯ್ತಿದ್ದಾರೆ.

     

    View this post on Instagram

     

    A post shared by mon (@imouniroy)

    `ನಾಗಿನ್’ ವೀಕೆಂಡ್ ಸೀರಿಯಲ್‌ನಲ್ಲಿ ಮೌನಿ ನಾಗಿಣಿ ಆಗಿ ಜನಮನ ಸೆಳೆದಿದ್ದರು. ಬಳಿಕ `ಕೆಜಿಎಫ್’ ಚಿತ್ರದಲ್ಲಿ ಯಶ್ ಜತೆ ಗಲಿ ಗಲಿ ಹಾಡಿಗೆ ಮೌನಿ ರಾಯ್ ಸೊಂಟ ಬಳುಕಿಸಿದ್ದರು. ಅಕ್ಷಯ್ ಕುಮಾರ್ `ಗೋಲ್ಡ್’ ಸಿನಿಮಾದಲ್ಲೂ ನಾಯಕಿಯಾಗಿ ಸೈ ಎನಿಸಿಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್ ನಲ್ಲೂ ಯಶ್ ನಂಬರ್-1 ನಟ ಎಂದು ಹೇಳಿ ಅಚ್ಚರಿ ಮೂಡಿಸಿದ ಶಾಹಿದ್ ಕಪೂರ್

    ಬಾಲಿವುಡ್ ನಲ್ಲೂ ಯಶ್ ನಂಬರ್-1 ನಟ ಎಂದು ಹೇಳಿ ಅಚ್ಚರಿ ಮೂಡಿಸಿದ ಶಾಹಿದ್ ಕಪೂರ್

    ಬಾಲಿವುಡ್ ನಲ್ಲಿ ಈವರೆಗೂ ಖಾನ್, ಕಪೂರ್ ಗಳೇ ನಂಬರ್ 1 ಸ್ಥಾನವನ್ನು ಅಲಂಕರಿಸಿದ್ದರು. ಇವರ ಹೊರತಾಗಿ ನಂಬರ್ ಗೇಮ್ ನಲ್ಲಿ ಯಾರೂ ಕಾಣಿಸಿಕೊಳ್ಳುತ್ತಿರಲಿಲ್ಲ. ಇಂಥದ್ದೊಂದು ಭದ್ರಕೋಟೆಯನ್ನು ಮೊದಲ ಬಾರಿಗೆ ಬೇಧಿಸಿದವರು ಕನ್ನಡದ ಹೆಮ್ಮೆಯ ನಟ ಯಶ್. ಕೆಜಿಎಫ್ 2 ಸಿನಿಮಾ 2022ರಲ್ಲಿ ಅತೀ ಹೆಚ್ಚು ಬಾಕ್ಸ್ ಆಫೀಸಿನಲ್ಲಿ ಗಳಿಕೆ ಮಾಡಿದ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 425 ಕೋಟಿ ಗಳಿಕೆ ಮಾಡುವ ಮೂಲಕ ದಾಖಲೆ ಬರೆದಿದೆ.

    ಈವರೆಗೂ ಯಾವ ಹಿಂದಿ ಸಿನಿಮಾವೂ ಮಾಡದೇ ಇರುವ ದಾಖಲೆಯನ್ನು ಕೆಜಿಎಫ್ 2 ಸಿನಿಮಾ ಮಾಡಿದ್ದರಿಂದ, ಬಾಲಿವುಡ್ ನಲ್ಲಿ ನಂಬರ್ 1 ನಟ ಯಾರು ಅಂತ ಕೇಳಿದರೆ, ಥಟ್ಟನೆ ಯಶ್ ನೆನಪಾಗುತ್ತಿದ್ದಾರೆ. ಇದು ಕನ್ನಡಿಗರು ಹೇಳುತ್ತಿರುವ ಮಾತಲ್ಲ, ಸ್ವತಃ ಬಾಲಿವುಡ್ ನ ಹೆಸರಾಂತ ನಟ ಶಾಹಿದ್ ಕಪೂರ್ ಅವರೇ ಹೇಳಿರುವ ಮಾತು. ಹಿಂದಿಯಲ್ಲೂ ಯಶ್ ಅವರೇ ನಂ.1 ನಟ ಎಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ:ಅಕ್ಷತಾ‌ ಜೊತೆ ರಾಕೇಶ್ ಅಡಿಗ ರೊಮ್ಯಾನ್ಸ್: ಸೋನು ಫುಲ್ ಗರಂ

    ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಹಿದ್, ಬಾಲಿವುಡ್ ನಲ್ಲಿ ಈ ವರ್ಷ ನಂಬರ್ ಒನ್  ಪಟ್ಟ ಯಾರಿಗೆ ಸಲ್ಲುತ್ತದೆ ಎಂದು ಪ್ರಶ್ನೆ ಮಾಡಿದಾಗ, ಕ್ಷಣವೂ ಯೋಚಿಸದೇ ‘ರಾಕಿಭಾಯ್’ ಎಂದು ಉತ್ತರಿಸುತ್ತಾರೆ ಶಾಹಿದ್. ಸ್ವತಃ ಈ ಉತ್ತರವನ್ನು ಕರಣ್ ಕೂಡ ಅರಗಿಸಿಕೊಳ್ಳುವುದಿಲ್ಲ. ಮತ್ತೆ ಪ್ರಶ್ನೆ ಮಾಡುತ್ತಾರೆ. ಆಗಲೂ ರಾಕಿ ಭಾಯ್ ಎನ್ನುವ ಉತ್ತರವೇ ಬರುತ್ತದೆ. ಅಷ್ಟರ ಮಟ್ಟಿಗೆ ಯಶ್ ಬಾಲಿವುಡ್ ಅನ್ನು ಆವರಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]