Tag: KGF-2

  • `ಕೆಜಿಎಫ್ 2′, `ಕಾಂತಾರ’ ಅಬ್ಬರಕ್ಕೆ ಬಾಲಿವುಡ್ ಬೆರಗು

    `ಕೆಜಿಎಫ್ 2′, `ಕಾಂತಾರ’ ಅಬ್ಬರಕ್ಕೆ ಬಾಲಿವುಡ್ ಬೆರಗು

    `ಕಾಂತಾರ’ (Kantara Film) ಚಿತ್ರದ ಓಟಕ್ಕೆ ಬಾಲಿವುಡ್ ಸಿನಿಮಾಗಳು ಮಕಾಡೆ ಮಲಗಿದೆ. ಬಿಟೌನ್ ಅಂಗಳದಲ್ಲಿ ಅಲ್ಲಿನ ಸಿನಿಮಾಗಳಿಗೆ ಸಿಗದ ಯಶಸ್ಸು ದಕ್ಷಿಣ ಸಿನಿಮಾಗಳಿಗೆ ಸಿಗುತ್ತಿದೆ. `ಕೆಜಿಎಫ್ 2′(Kgf 2), `ಕಾಂತಾರ’ ನಂತರ ಬಾಲಿವುಡ್ ಶೇಕ್ ಆಗಿದೆ.

    ಸಾಲು ಸಾಲು ಫ್ಲಾಪ್ ಸಿನಿಮಾಗಳನ್ನ ಕೊಡುತ್ತಿರುವ ಹಿಂದಿ ಚಿತ್ರರಂಗಕ್ಕೆ ದಕ್ಷಿಣದ ಸಿನಿಮಾಗಳ ಗೆಲುವು ಇದೀಗ ನುಂಗಲಾರದ ತುತ್ತಾಗಿದೆ. ಇದೀಗ ಪ್ರೇಕ್ಷಕರಿಗೂ ದಕ್ಷಿಣದ ಸಿನಿಮಾಗಳ ಕಂಟೆಂಟ್ ಇಷ್ಟವಾಗಿದೆ. ತನ್ನ ನೆಲದಲ್ಲೇ ಹಿಂದಿ ಸಿನಿಮಾಗಳಿಗೆ ನೆಲೆ ಇಲ್ಲದಂತೆ ಆಗಿದೆ. ರಿಷಬ್(Rishab Shetty) ನಟನೆಯ `ಕಾಂತಾರ’ ಚಿತ್ರದ ಸಕ್ಸಸ್ ಬಾಲಿವುಡ್ ಅನ್ನೇ ಆಳುತ್ತಿದೆ. ಇದನ್ನೂ ಓದಿ:ಸಿನಿಮಾವಾಗಲಿದೆ ವಿಜಯ್ ಮಲ್ಯ ವಂಚನೆ ಕಥೆ: ಮಲ್ಯ ಪಾತ್ರದಲ್ಲಿ ಅನುರಾಗ್

    ಇತ್ತೀಚಿನ ಹೊಂಬಾಳೆ ಬ್ಯಾನರ್‌ನ(Hombale Films) `ಕೆಜಿಎಫ್ 2′ ಮತ್ತು `ಕಾಂತಾರ’ ಸಕ್ಸಸ್‌ಗೆ ಬಾಲಿವುಡ್ ಬೆಚ್ಚಿ ಬಿದ್ದಿದೆ. ವರ್ಲ್ಡ್ ವೈಡ್ ಒಟ್ಟು `ಕೆಜಿಎಫ್ 2′ 1000 ಕೋಟಿ ರೂ. ಬಾಚಿದ್ರೆ, `ಕಾಂತಾರ’ 350 ಕೋಟಿ ರೂ. ಕಲೆಕ್ಷನ್ ಮಾಡಿದೆ.

    ಒಟ್ನಲ್ಲಿ ದಕ್ಷಿಣ ಸಿನಿಮಾಗಳಿಂದ ಬಾಲಿವುಡ್‌ಗೆ ಗಟ್ಟಿ ನೆಲೆ ಇಲ್ಲದಂತಾಗಿದೆ. ಮುಂಬರುವ ದಿನಗಳಲ್ಲಿ ಖಡಕ್ ಕಂಟೆಂಟ್ ಸಿನಿಮಾಗಳೊಂದು ಗೆದ್ದಿ ಬಿಗಿ ತೋರಿಸುತ್ತಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • `ಕೆಜಿಎಫ್ 2′ ಮುಂದೆ ಮುಗ್ಗರಿಸಿದ್ದ ʻಬೀಸ್ಟ್‌ʼ ಚಿತ್ರಕ್ಕೆ ಮತ್ತೆ ಗೆಲುವು

    `ಕೆಜಿಎಫ್ 2′ ಮುಂದೆ ಮುಗ್ಗರಿಸಿದ್ದ ʻಬೀಸ್ಟ್‌ʼ ಚಿತ್ರಕ್ಕೆ ಮತ್ತೆ ಗೆಲುವು

    ಭಾರತೀಯ ಚಿತ್ರರಂಗದಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿದ `ಕೆಜಿಎಫ್ 2′ (Kgf 2)   ಮುಂದೆ ಬೀಸ್ಟ್ ಸಿನಿಮಾ ಮುಗ್ಗರಿಸಿತ್ತು. ಯಶ್ ಚಿತ್ರದ ಮುಂದೆ ಥಳಪತಿ ವಿಜಯ್ ಸಿನಿಮಾ ಮಕಾಡೆ ಮಲಗಿತ್ತು. ಇದೀಗ ಆದರೆ ವಿಕ್ರಮ್ ಚಿತ್ರದ ಮುಂದೆ ʻಬೀಸ್ಟ್ʼ(Beast Film) ಗೆಲುವು ಸಾಧಿಸಿದೆ.

    `ಕೆಜಿಎಫ್ 2′ ಮತ್ತು ಬೀಸ್ಟ್ ಸಿನಿಮಾ ಒಂದು ದಿನದ ಅಂತರದಲ್ಲಿ ತೆರೆಕಂಡಿತ್ತು. ಯಶ್ (Yash) ನಟನೆಯ `ಕೆಜಿಎಫ್ 2′ 1000 ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಬೀಸ್ಟ್ ಹೀನಾಯವಾಗಿ ಸೋತಿತ್ತು. ಆದರೆ `ಬೀಸ್ಟ್’ ಚಿತ್ರದ ನಸೀಬು ಬದಲಾಗಿದೆ. ಕಮಲ್ ಹಾಸನ್ ನಟನೆಯ `ವಿಕ್ರಮ್’ ಚಿತ್ರದ ಮುಂದೆ ಗೆದ್ದು ಬೀಗಿದೆ. ಇದನ್ನೂ ಓದಿ:ನಟನೆಯತ್ತ ʻಕಾಂತಾರʼ ಹೀರೋ ರಿಷಬ್ ಪತ್ನಿ ಪ್ರಗತಿ ಶೆಟ್ಟಿ

    ದೀಪಾವಳಿ ಹಬ್ಬಕ್ಕೆ(Deepavali Festival) `ಬೀಸ್ಟ್’ ಮತ್ತು `ವಿಕ್ರಮ್'(Vikram) ಸಿನಿಮಾ ಟಿವಿಯಲ್ಲಿ ಪ್ರೀಮಿಯರ್ ಆಗಿತ್ತು. ಥಿಯೇಟರ್‌ನಲ್ಲಿ 426 ಕೋಟಿ ರೂ. ಲೂಟಿ ಮಾಡಿದ್ದ ವಿಕ್ರಮ್ ಸಿನಿಮಾ ಮುಂದೆ ಈಗ ಬೀಸ್ಟ್ ಗೆದ್ದಿದೆ. ವಾಹಿನಿಯ ಟಿಆರ್‌ಪಿ ರೇಟಿಂಗ್ ಪ್ರಕಾರ ಬೀಸ್ಟ್ 12.62 ರೇಟಿಂಗ್ ಸಿಕ್ಕಿದೆ. ವಿಕ್ರಮ್‌ಗೆ 4.42 ರೇಟಿಂಗ್ ಸಿಕ್ಕಿದೆ. ಈ ಮೂಲಕ ವಿಕ್ರಮ್ ಮುಂದೆ ಬೀಸ್ಟ್ ಗೆಲುವು ಸಾಧಿಸಿದೆ.

    `ಕೆಜಿಎಫ್ 2′ ಮುಂದೆ ಶೇಕ್ ಆಗಿದ್ದ ಬೀಸ್ಟ್ ಸಿನಿಮಾಗೆ ಇದೀಗ ಕಿರುತೆರೆಯ ಮೂಲಕ ಸಕ್ಸಸ್ ತಂದು ಕೊಟ್ಟಿದೆ. ಥಳಪತಿ ವಿಜಯ್ ಚಿತ್ರಕ್ಕೆ ಫ್ಯಾನ್ಸ್ ಮನಗೆದ್ದಿದೆ.

    Live Tv
    [brid partner=56869869 player=32851 video=960834 autoplay=true]

  • `ಕಾಂತಾರ’ ಸಿನಿಮಾ ನನ್ನದೇ: ರಿಷಬ್ ಸಿನಿಮಾ ಬಗ್ಗೆ ಯಶ್ ಪ್ರತಿಕ್ರಿಯೆ

    `ಕಾಂತಾರ’ ಸಿನಿಮಾ ನನ್ನದೇ: ರಿಷಬ್ ಸಿನಿಮಾ ಬಗ್ಗೆ ಯಶ್ ಪ್ರತಿಕ್ರಿಯೆ

    ರಿಷಬ್ ಶೆಟ್ಟಿ ನಟನೆಯ `ಕಾಂತಾರ'(Kantara Film) ಭಾರತೀಯ ಚಿತ್ರರಂಗದಲ್ಲಿ ಅಬ್ಬರಿಸುತ್ತಿದೆ. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಹೀಗಿರುವಾಗ ನ್ಯಾಷನಲ್ ಸ್ಟಾರ್ ಯಶ್, ʻಕಾಂತಾರʼ ಸಿನಿಮಾ ನನ್ನದೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಚಿತ್ರದ ಕುರಿತು ಮಾತನಾಡಿದ್ದಾರೆ.

    `ಕಾಂತಾರ’ ಚಿತ್ರದಲ್ಲಿ ರಿಷಬ್ ಶೆಟ್ಟಿ(Rishab Shetty) ನಟಿಸಿ, ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ. ದೇಶದ ಮೂಲೆ ಮೂಲೆಯಲ್ಲೂ ಕಾಂತಾರ ಸಿನಿಮಾಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಹೀಗಿರುವಾಗ ನಟ ಯಶ್ ಈಗ `ಕಾಂತಾರ’ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಯಶ್(Actor Yash) ನೀಡಿದ ಸಂದರ್ಶನದಲ್ಲಿ `ಕಾಂತಾರ’ ಸಿನಿಮಾ ನನ್ನದೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಶೆರ್ಲಿನ್ ಚೋಪ್ರಾ ವಿರುದ್ಧ ದೂರು ದಾಖಲಿಸಿದ ರಾಖಿ ಸಾವಂತ್

    `ಕಾಂತಾರ’ ಸಿನಿಮಾ ನನ್ನದೇ. ಕಾಂತಾರ ಕರ್ನಾಟಕದ(Karnataka) ಸಿನಿಮಾ. ನಮ್ಮ ಸಿನಿಮಾಗೆ ಎಲ್ಲಾ ಕಡೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ ಎಂದು ಯಶ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. `ಗರುಡ ಗಮನ ವೃಷಭ ವಾಹನ’, `ಚಾರ್ಲಿ 777′ ಸಿನಿಮಾಗಳು ಗಡಿ ಮೀರಿ ಚಿತ್ರ ಒಳ್ಳೆಯ ರೀಚ್ ಪಡೆದಿದೆ.

    ಕನ್ನಡ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆಯುತ್ತಿದೆ ಎಂದು ಯಶ್ ಮಾತನಾಡಿದ್ದಾರೆ. ಇನ್ನೂ ನಾನು ಪ್ಯಾನ್ ಇಂಡಿಯಾ ನಟನಾಗಿದ್ದರೂ, ನನಗೆ ಕನ್ನಡವೇ ಮೊದಲು ಎಂದು ಯಶ್ ಈ ವೇಳೆ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಜಕೀಯಕ್ಕೆ ಎಂಟ್ರಿ ಕೊಡ್ತೀರಾ..?- ರಾಕಿಂಗ್ ಸ್ಟಾರ್ ಯಶ್ ಹೇಳಿದ್ದು ಹೀಗೆ

    ರಾಜಕೀಯಕ್ಕೆ ಎಂಟ್ರಿ ಕೊಡ್ತೀರಾ..?- ರಾಕಿಂಗ್ ಸ್ಟಾರ್ ಯಶ್ ಹೇಳಿದ್ದು ಹೀಗೆ

    ಕೆಜಿಎಫ್ -2 (KGF-2) ಸಕ್ಸಸ್ ಬಳಿಕ ಮುಂದಿನ ಸಿನಿಮಾದ (Cinema) ತಯಾರಿಯಲ್ಲಿ ರಾಕಿಂಗ್ ಸ್ಟಾರ್ (RockingStar) ಯಶ್ ಫುಲ್ ಬ್ಯುಸಿಯಾಗಿದ್ದಾರೆ. ಈ ನಡುವೆ ಯಶ್ ರಾಜಕೀಯಕ್ಕೆ ಬರುತ್ತಾರೆ ಅನ್ನೋ ಚರ್ಚೆ ಹುಟ್ಟಿಕೊಂಡಿವೆ.

    ಈಗಾಗಲೇ ಅಂಬರೀಶ್, ಜಗ್ಗೇಶ್ (Jaggesh), ಶೃತಿ, ರಮ್ಯಾ (Ramya) ಹಾದಿಯಾಗಿ ಅನೇಕ ಸಿನಿ ದಿಗ್ಗಜರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಾಗೆಯೇ ಕೆಜಿಎಫ್-2 ಸಕ್ಸಸ್ ಬಳಿಕ ಅಭಿಮಾನಿಗಳ ಅಲೆ ಎದ್ದಿರೋದ್ರಿಂದ ಯಶ್ (Yash) ಕೂಡ ರಾಜಕೀಯಕ್ಕೆ (Politics) ಬರುತ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿದ್ದು, ಇದಕ್ಕೆ ಯಶ್ ಅವರೇ ಫುಲ್‌ಸ್ಟಾಪ್ ಇಟ್ಟಿದ್ದಾರೆ. ಈ ಬಗ್ಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಯಶ್ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಕೊನೆಗೂ KGF-3 ರಹಸ್ಯ ಬಿಚ್ಚಿಟ್ಟ ರಾಕಿಂಗ್ ಸ್ಟಾರ್ ಯಶ್

    `ಮೊದಲಿಗೆ ನಾನು ನನ್ನಲ್ಲಿ ಮತ್ತು ನನ್ನ ಸಿನಿ ಉದ್ಯಮದಲ್ಲಿ ಬಹಳಷ್ಟು ಬದಲಾವಣೆ ತರಲು ಬಯಸುತ್ತೇನೆ. ನನ್ನ ಮಿತಿಯಲ್ಲಿ, ನಾನು ಸಮಾಜದ ಕೆಲ ವಿಷಯಗಳನ್ನು ಬದಲಾಯಿಸಲು ಪ್ರಯತ್ನಿಸುತ್ತೇನೆ. ಅವಶ್ಯಕತೆಯಿದ್ದ ಕೆಲಸಗಳನ್ನು ಈಗಾಗಲೇ ಮಾಡುತ್ತಿದ್ದೇವೆ. ಅದರಿಂದ ಕೆಲವರ ಜೀವನ ಬದಲಾಯಿಸಿದೆ. ಅದಕ್ಕೆ ರಾಜಕೀಯವೇ ಬೇಕು ಅನ್ನುವಂತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೈವ ನರ್ತಕರ ಪವಿತ್ರ ಆಚರಣೆ ಗೌರವಿಸಿ- ಲಲಿತಾ ನಾಯಕ್‌ಗೆ ಖಾದರ್ ತಿರುಗೇಟು

    ಬಹಳಷ್ಟು ಜನ ರಾಜಕೀಯ ಕೆಟ್ಟದ್ದು, ಬರೀ ಭ್ರಷ್ಟಾಚಾರ ಅಂತಾರೆ, ರಾಜಕಾರಣಿಗಳು ಜನರ ದುಡ್ಡಲ್ಲೇ ಬದುಕುತ್ತಿದ್ದಾರೆ ಅಂತಾರೆ. ಅದು ಎಷ್ಟರಮಟ್ಟಿಗೆ ಸತ್ಯ ಅನ್ನೋದು ನನಗೆ ಗೊತ್ತಿಲ್ಲ. ಆದರೆ ನಾನು ಎಂದಿಗೂ ನಟನಾಗಿ ಇರುತ್ತೇನೆ. ರಾಜಕೀಯ ಕೃತಜ್ಞತೆಯಿಲ್ಲದ ಕೆಲಸ. ಅಲ್ಲಿಗೆ ನಾನು ಬರೋದಿಲ್ಲ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊನೆಗೂ KGF-3 ರಹಸ್ಯ ಬಿಚ್ಚಿಟ್ಟ ರಾಕಿಂಗ್ ಸ್ಟಾರ್ ಯಶ್

    ಕೊನೆಗೂ KGF-3 ರಹಸ್ಯ ಬಿಚ್ಚಿಟ್ಟ ರಾಕಿಂಗ್ ಸ್ಟಾರ್ ಯಶ್

    `ಕೆಜಿಎಫ್ 2′ (KGF-2) ಚಿತ್ರದ ಸಕ್ಸಸ್ ನಂತರ ಯಶ್ (Yash) ಮುಂದಿನ ಚಿತ್ರಕ್ಕಾಗಿ (Film) ಭರ್ಜರಿ ತಯಾರಿ ಮಾಡ್ತಿದ್ದಾರೆ.

    ನ್ಯಾಷನಲ್ ಸ್ಟಾರ್ ಆಗಿ ದಶದಿಕ್ಕುಗಳಲ್ಲೂ ಯಶ್ ಮಿಂಚ್ತಿದ್ದಾರೆ. `ಕೆಜಿಎಫ್ 2′ ಸೂಪರ್ ಸಕ್ಸಸ್ ನಂತರ ಯಶ್ ಮುಂದಿನ ನಡೆ ಮೇಲೆ ಎಲ್ಲರಿಗೂ ಕಣ್ಣಿದೆ. ಯಶ್ ಮುಂದಿನ ಪ್ರಾಜೆಕ್ಟ್ ಅಪ್‌ಡೇಟ್‌ಗಳಿಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ. ಇತ್ತೀಚೆಗೆ ಹಾಲಿವುಡ್ ನಿರ್ದೇಶಕರನ್ನ ಭೇಟಿ ಮಾಡಿದ್ದ ಯಶ್ ಇದೀಗ `ಕೆಜಿಎಫ್ 3′ (KGF-3) ಚಿತ್ರದ ಕುರಿತು ಒಂದಿಷ್ಟು ರಹಸ್ಯಗಳನ್ನ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಹಾಲಿವುಡ್‌ಗೆ ಯಶ್‌ ಎಂಟ್ರಿ? ವಿಶ್ವದ ಟಾಪ್‌ ರೇಸರ್‌ ಲೇವಿಸ್‌ ಹ್ಯಾಮಿಲ್ಟನ್‌ ಭೇಟಿ

    ಈ ಕುರಿತು ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಯಶ್, ಸದ್ಯ ಸ್ವಲ್ಪ ವಿರಾಮ ತೆಗೆದುಕೊಳ್ಳಲು ಬಯಸಿದ್ದೇನೆ. ಮುಂದಿನ ಸಿನಿಮಾದ ತಯಾರಿ ನಡೆಯುತ್ತಿದೆ. ಫಿಟ್‌ನೆಸ್ (Fitness), ಸ್ಕ್ರಿಪ್ಟ್‌ ಮಾತುಕತೆ ಈ ರೀತಿ ದೈನಂದಿನ ಕಾರ್ಯಕ್ರಮಗಳು ನಡೆಯುತ್ತಿವೆ. ಆದ್ರೆ ಕೆಜಿಎಫ್-3 ಸದ್ಯಕ್ಕಂತೂ ಇಲ್ಲ ಎಂದು ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ. ಇದನ್ನೂ ಓದಿ: ದೈವ ನರ್ತಕರ ಪವಿತ್ರ ಆಚರಣೆ ಗೌರವಿಸಿ- ಲಲಿತಾ ನಾಯಕ್‌ಗೆ ಖಾದರ್ ತಿರುಗೇಟು

    ಕೆಜಿಎಫ್ ಸಿನಿಮಾಗಾಗಿ (KGF Cinema) 5-6 ವರ್ಷ ಶ್ರಮ ಹಾಕಿದ್ದೇವೆ. ಅದರಂತೆ ಯಶಸ್ಸು ಕಂಡಿದ್ದೇವೆ. ಕೋವಿಡ್ ಪ್ಯಾಂಡಮಿಕ್‌ನಿಂದಾಗಿ ಟೈಂ ಎಷ್ಟು ಮುಖ್ಯ ಅನ್ನೋದು ನನಗೆ ಗೊತ್ತಾಗಿದೆ. ಹಾಗಾಗಿ ಕೆಜಿಎಫ್-2 ಸಿನಿಮಾ ನಂತರ ನನ್ನ ಫ್ಯಾಮಿಲಿಗೂ ಟೈಂ ಕೊಡುತ್ತಿದ್ದೇನೆ. ಇದೆಲ್ಲದರ ನಡುವೆ ಹೊಸ ಸಿನಿಮಾಗಳ ಬಗ್ಗೆ ಮಾತುಕತೆ ನಡೀತಿದೆ. ಸದ್ಯ ನಾನು ಹೊಸತೇನಾದರೂ ಮಾಡಬೇಕು ಅಂದುಕೊಂಡಿದ್ದೇನೆ. ಹಾಗಾಗಿ ಕೆಜಿಎಫ್-3 ಸಿನಿಮಾ ಸದ್ಯಕ್ಕೆ ಇಲ್ಲ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಗ ಯಥರ್ವ್ ಹುಟ್ಟುಹಬ್ಬಕ್ಕೆ ರಾಧಿಕಾ ಪಂಡಿತ್ ಲವ್ಲಿ ವಿಶ್

    ಮಗ ಯಥರ್ವ್ ಹುಟ್ಟುಹಬ್ಬಕ್ಕೆ ರಾಧಿಕಾ ಪಂಡಿತ್ ಲವ್ಲಿ ವಿಶ್

    `ಮೊಗ್ಗಿನ ಮನಸ್ಸು’ (Moggina Manasu) ಚಿತ್ರದ ಮೂಲಕ ಧ್ರುವತಾರೆಯಾಗಿ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ ಪ್ರತಿಭಾನ್ವಿತ ನಟಿ ರಾಧಿಕಾ ಪಂಡಿತ್(Radhika Pandit) ಇದೀಗ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಯಶ್ ಮತ್ತು ರಾಧಿಕಾ ದಂಪತಿಯ ಎರಡನೇ ಮಗ ಯಥರ್ವ್ ಬರ್ತ್‌ಡೇಗೆ ಪ್ರೀತಿಯಿಂದ ರಾಧಿಕಾ ಶುಭಹಾರೈಸಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by Radhika Pandit (@iamradhikapandit)

    ನ್ಯಾಷನಲ್ ಸ್ಟಾರ್ ಯಶ್(Yash) ಪತ್ನಿ ನಟಿ ರಾಧಿಕಾ ಪಂಡಿತ್ ಇದೀಗ ನಟನೆಯಿಂದ ದೂರ ಉಳಿದಿದ್ದಾರೆ. ಮಕ್ಕಳ ಪಾಲನೆಯಲ್ಲಿ ನಟಿ ರಾಧಿಕಾ ಪಂಡಿತ್ ಬ್ಯುಸಿಯಾಗಿದ್ದಾರೆ. ಸದ್ಯ ಮಗ ಯಥರ್ವ್ 3 ವರ್ಷ ತುಂಬಿರುವ ಖುಷಿಗೆ ಬ್ಯೂಟಿಫುಲ್ ಫೋಟೋಗಳನ್ನ ಶೇರ್ ಮಾಡಿ, ನಟಿ ಶುಭಹಾರೈಸಿದ್ದಾರೆ. ಇದನ್ನೂ ಓದಿ:`ಕಾಂತಾರ’ ಸಕ್ಸಸ್ ನಂತರ ರಿಷಬ್ ಶೆಟ್ಟಿ ಟೆಂಪಲ್ ರನ್


    ನನ್ನ ಮುದ್ದು ಕಂದ ನನ್ನ ಹೃದಯವನ್ನು ತುಂಬಿದ್ದಾನೆ. ಹ್ಯಾಪಿ ಬರ್ತ್‌ಡೇ ಯಥರ್ವ್, ಸದಾ ಖುಷಿಯಾಗಿರು ಲವ್ ಯೂ ಎಂದು ಪೋಸ್ಟ್ ಹಾಕಿ, ಲವ್ಲಿ ವಿಶ್ಸ್ ತಿಳಿಸಿದ್ದಾರೆ. ಅಭಿಮಾನಿಗಳು ಕೂಡ ವಿಶ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿನಿಮಾಗಿಂತ ಸುದ್ದಿಯಲ್ಲೇ ಉಳಿದು ಬಿಡ್ತಾರಾ ‘ಮಫ್ತಿ’ ಖ್ಯಾತಿಯ ನಿರ್ದೇಶಕ ನರ್ತನ್

    ಸಿನಿಮಾಗಿಂತ ಸುದ್ದಿಯಲ್ಲೇ ಉಳಿದು ಬಿಡ್ತಾರಾ ‘ಮಫ್ತಿ’ ಖ್ಯಾತಿಯ ನಿರ್ದೇಶಕ ನರ್ತನ್

    ಳೆದೊಂದು ವರ್ಷದಿಂದ ಮಫ್ತಿ (Mufti) ಖ್ಯಾತಿಯ ನಿರ್ದೇಶಕ ನರ್ತನ್ (Nartan) ಕೇವಲ ಸುದ್ದಿಯಾಗಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಅವರು ತಮ್ಮ ಸಿನಿಮಾದ ಬಗ್ಗೆ ಯಾವುದೇ ಮಾಹಿತಿಯನ್ನೂ ಹಂಚಿಕೊಳ್ಳುತ್ತಿಲ್ಲ. ಹಾಗಾಗಿಯೇ ಸದಾ ಗಾಸಿಪ್ ಕಾಲಂನಲ್ಲೇ ಉಳಿದುಬಿಟ್ಟಿದ್ದಾರೆ. ಕೆಜಿಎಫ್ 2 (KGF 2) ಸಿನಿಮಾ ಮುಗಿಯುತ್ತಿದ್ದಂತೆಯೇ ಯಶ್ ಗಾಗಿ ಅವರು ಸಿನಿಮಾ ಮಾಡಲಿದ್ದಾರೆ ಎಂದು ಸುದ್ದಿ ಆಯಿತು. ನರ್ತನ್ ಆಗಲಿ, ಯಶ್ ಆಗಲಿ ಖಚಿತ ಪಡಿಸೇ ಇದ್ದರೂ, ಸುದ್ದಿಯಂತೂ ಭರ್ಜರಿ ಸೇಲ್ ಆಯಿತು.

    ಕೆಲ ತಿಂಗಳ ಹಿಂದೆಯಷ್ಟೇ ಯಶ್ ಗಾಗಿ ನರ್ತನ್ ಸಿನಿಮಾ ಮಾಡುತ್ತಿಲ್ಲ ಎನ್ನುವ ಸುದ್ದಿ ಹೊರ ಬಿತ್ತು. ನರ್ತನ್ ಮಾಡಿದ ಕಥೆ ಸದ್ಯಕ್ಕೆ ಯಶ್ (Yash) ಗೆ ಒಪ್ಪುತ್ತಿಲ್ಲ. ಹಾಗಾಗಿಯೇ ಕಥೆಯನ್ನು ಯಶ್ ತಿರಸ್ಕರಿಸಿದ್ದಾರೆ ಎಂದು ಗಾಂಧಿನಗರ ಮಾತನಾಡಿಕೊಂಡಿತು. ಈ ಕುರಿತಾಗಿಯೂ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಒಂದೂವರೆ ವರ್ಷದಿಂದ ಯಶ್ ಗಾಗಿಯೇ ಕಥೆ ಬರೆದುಕೊಂಡಿದ್ದ ನರ್ತನ್ ಮುಂದೇನು ಮಾಡುತ್ತಾರೆ ಎನ್ನುವ ಚರ್ಚೆ ಕೂಡ ಶುರುವಾಯಿತು. ಇದೀಗ ಮತ್ತೆ ನರ್ತನ್ ಸುದ್ದಿಯಾಗಿದ್ದಾರೆ. ಇವರ ಸಿನಿಮಾದಲ್ಲಿ ಯಶ್ ಗೆ ಬದಲಾಗಿ ಬೇರೆ ನಟರೊಬ್ಬರು ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ

    ಯಶ್ ಜೊತೆ ನರ್ತನ್ ಸಿನಿಮಾಡುತ್ತಿಲ್ಲ ಎಂಬ ಸುದ್ದಿ ಹರಡುತ್ತಿದ್ದಂತೆಯೇ, ಇದೀಗ ಯಶ್ ಬದಲಾಗಿ ತೆಲುಗಿನ ರಾಮ್ ಚರಣ್ ತೇಜ ಅವರ ಹೆಸರು ಕೇಳಿ ಬರುತ್ತಿದೆ. ನರ್ತನ್ ಅವರ ಮುಂದಿನ ಸಿನಿಮಾದಲ್ಲಿ ರಾಮ್ ಚರಣ್ ತೇಜ (Ram Charan Teja) ಹೀರೋ ಆಗಿ ನಟಿಸಲಿದ್ದಾರೆ ಎನ್ನುವುದು ಲೆಟೆಸ್ಟ್ ನ್ಯೂಸ್. ದೊಡ್ಡಮಟ್ಟದಲ್ಲಂತೂ ಇದು ಸುದ್ದಿ ಆಗಿದೆ. ಆದರೆ, ಯಾವುದು ಸತ್ಯ, ಯಾವುದು ಸುಳ್ಳು ಎನ್ನುವುದನ್ನು ಅವರಿಬ್ಬರೇ ಹೇಳಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಕೆಜಿಎಫ್ 2 ದಾಖಲೆ ಉಡಿಸ್ ಮಾಡಿದ ಕಾಂತಾರ:  ಹೊಸ ದಾಖಲೆ ಘೋಷಿಸಿದ ಹೊಂಬಾಳೆ ಫಿಲ್ಮ್ಸ್

    ಕೆಜಿಎಫ್ 2 ದಾಖಲೆ ಉಡಿಸ್ ಮಾಡಿದ ಕಾಂತಾರ: ಹೊಸ ದಾಖಲೆ ಘೋಷಿಸಿದ ಹೊಂಬಾಳೆ ಫಿಲ್ಮ್ಸ್

    ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಮತ್ತೊಂದು ಹೊಸ ದಾಖಲೆಯನ್ನು ಕ್ರಿಯೇಟ್ ಮಾಡಿದೆ. ಅದು ಕೆಜಿಎಫ್ 2 ದಾಖಲೆಯನ್ನೂ ಉಡಿಸ್ ಮಾಡಿದೆ. ಈವರೆಗೂ ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮಾಹಿತಿಯನ್ನು ಸ್ವತಃ ನಿರ್ಮಾಪಕ ವಿಜಯ್ ಕಿರಗಂದೂರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಈವರೆಗೆ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ ಎಂಬ ಹೆಗ್ಗಳಿಕೆ. ಇನ್ನಷ್ಟು ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿ ‘ಕಾಂತಾರ’. ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಋಣಿ. ಧನ್ಯವಾದಗಳು ಕರ್ನಾಟಕ ಎಂದು ನಿರ್ಮಾಪಕ ವಿಜಯ್ ಕಿರಂಗದೂರ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಭೇಟಿ ಮಾಡಿ ಕಣ್ಣೀರಿಟ್ಟ ಜಪಾನ್ ಫ್ಯಾನ್ಸ್

    ಕಾಂತಾರ ಸಿನಿಮಾದ ಒಟ್ಟು ಗಳಿಕೆ 200 ಕೋಟಿ ಎಂದು ಅಂದಾಜಿಸಲಾಗಿದೆ. ಕನ್ನಡದಲ್ಲೇ ಅದು ನೂರು ಕೋಟಿ ಗಳಿಕೆ ಮಾಡಿದೆ. ಬಾಲಿವುಡ್ ನಲ್ಲೂ ಕಾಂತಾರ ಹಿಂದೆ ಬಿದ್ದಿಲ್ಲ. ಹಿಂದಿಯಲ್ಲಿ ಈವರೆಗೂ 22.25 ಕೋಟಿ ಹಣ ಹರಿದು ಬಂದಿದೆಯಂತೆ. ಕೆಜಿಎಫ್ 2 ಸಿನಿಮಾದ ನಂತರ ಕನ್ನಡ ಸಿನಿಮಾವೊಂದು ಈ ಪರಿ ಗಳಿಕೆ ಮಾಡಿದ ಹೆಗ್ಗಳಿಕೆ ಕಾಂತಾರದ್ದು.

    ಒಂದು ಕಡೆ ಬಾಕ್ಸ್ ಆಫೀಸಿನಲ್ಲಿ ಸಿನಿಮಾ ಸದ್ದು ಮಾಡುತ್ತಿದ್ದರೆ, ಮತ್ತೊಂದು ಕಡೆ ಹಿಂದೂ ಸಂಸ್ಕೃತಿಗೆ ಸಂಬಂಧಿಸಿದಂತೆ ಈ ಸಿನಿಮಾ ವಿವಾದಕ್ಕೆ ಕಾರಣವಾಗಿದೆ. ಚೇತನ್ ಮತ್ತು ಬೆಂಬಲಿಗರು ಸಿನಿಮಾದ ಬಗ್ಗೆ ಅಪಸ್ವರ ಎತ್ತಿದ್ದಾರೆ. ಹಿಂದೂಪರ ಸಂಘಟನೆಯ ಕಾರ್ಯಕರ್ತರು ಚೇತನ್ ವಿರುದ್ಧ ದಂಗೆ ಎದ್ದಿದ್ದಾರೆ. ಕೆಲವು ಕಡೆ ಚೇತನ್ ಮೇಲೆ ದೂರು ಕೂಡ ದಾಖಲಾಗಿವೆ.

    Live Tv
    [brid partner=56869869 player=32851 video=960834 autoplay=true]

  • ಅಕ್ಟೋಬರ್ 22ಕ್ಕೆ  ಜೀ ಪಿಚ್ಚರ್‌ನಲ್ಲಿ ಯಶ್ ನಟನೆಯ ‘ಕೆಜಿಎಫ್ 2’ ಪ್ರೀಮಿಯರ್

    ಅಕ್ಟೋಬರ್ 22ಕ್ಕೆ ಜೀ ಪಿಚ್ಚರ್‌ನಲ್ಲಿ ಯಶ್ ನಟನೆಯ ‘ಕೆಜಿಎಫ್ 2’ ಪ್ರೀಮಿಯರ್

    ಕೆಜಿಎಫ್ ಚಾಪ್ಟರ್ 2 , ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಸಿನಿಮಾ ಇಡೀ ವಿಶ್ವವೇ ಒಮ್ಮೆ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ ಕನ್ನಡದ ಹೆಮ್ಮೆ. ಅತ್ಯದ್ಭುತ ಮೇಕಿಂಗ್, ರಣರೋಚಕ ಕಥೆಯ ಮೂಲಕ ಚಿತ್ರ ಪ್ರೇಮಿಗಳ ಗಮನ ಸೆಳೆದು ಮನ ಗೆದ್ದಿದ್ದ ಸಿನಿಮಾ ಇದೇ ಅಕ್ಟೋಬರ್ 22 ಶನಿವಾರದಂದು ಮಧ್ಯಾಹ್ನ 1 ಗಂಟೆ ಮತ್ತು ಸಂಜೆ 7 ಗಂಟೆಗೆ ಕನ್ನಡಿಗರ ನೆಚ್ಚಿನ ಸಿನಿ ವಾಹಿನಿ ಜೀ ಪಿಚ್ಚರ್‌ನಲ್ಲಿ ಪ್ರಸಾರವಾಗಲಿದೆ.

    ಕೆಜಿಎಫ್ ಚಾಪ್ಟರ್ 1 ರ ಯಶಸ್ಸಿನ ನಂತರ ಸೃಷ್ಟಿಯಾದ ಕೆಜಿಎಫ್ ಚಾಪ್ಟರ್ 2 ಪ್ರೇಕ್ಷಕರ ನೀರಿಕ್ಷೆಗೂ ಮೀರಿ ಯಶಸ್ಸುಗಳಿಸಿದ ಚಿತ್ರ. ಬಿಡುಗಡೆಗೊಂಡ ಎಲ್ಲಾ ಭಾಷೆಗಳಲ್ಲೂ ಅದ್ಧೂರಿ ಪ್ರದರ್ಶನ ಕಂಡು ಎಲ್ಲರ ಮೆಚ್ಚುಗೆ ಗಳಿಸಿದ್ದು ಇದರ  ವಿಶೇಷವಾಗಿದೆ. ಅಷ್ಟೇ ಅಲ್ಲದೆ OTT ವೇದಿಕೆಯಲ್ಲೂ ಅತಿ ಹೆಚ್ಚು ವೀಕ್ಷಣೆ ಪಡೆದ ಚಲನಚಿತ್ರ ಇದಾಗಿದೆ. ಇದನ್ನೂ ಓದಿ:ಆಮದು ಮಾಡಿಕೊಂಡ ಧರ್ಮಗಳು ಎಂದು ಚೇತನ್ ಮತ್ತೆ ಕಿಡಿ

    ಸಾಂದರ್ಭಿಕ ಚಿತ್ರ

    ಬಾಕ್ಸ್ ಆಫೀಸ್‌ನ್ನು ಕೊಳ್ಳೆ ಹೊಡೆದು ದಾಖಲೆ ನಿರ್ಮಿಸಿರುವ ಈ ಚಿತ್ರ 1000 ಕೋಟಿ ಕ್ಲಬ್ ಸೇರಿದ ಕನ್ನಡದ ಮೊದಲ ಸಿನಿಮಾವಾಗಿದೆ.  ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಅರ್ಚನ ಜೋಯಿಸ್, ರಾಮಚಂದ್ರ ರಾಜು, ಶರಣ್ ಶೆಟ್ಟಿ ,ಅಯ್ಯಪ್ಪ ಶರ್ಮಾ, ಮಾಳವಿಕ ವಿನಾಶ್, ಮೋಹನ್ ಜುನೇಜಾ, ಪ್ರಕಾಶ್ ರಾಜ್, ಅಚ್ಯುತ್ ಕುಮಾರ್ ಸೇರಿದಂತೆ ಬಹುಭಾಷಾ ತಾರೆಯರೇ ಇದರಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲಂಸ್ ಅಡಿಯಲ್ಲಿ ನಿರ್ಮಾಣಗೊಂಡ ಈ ಸಿನಿಮಾಕ್ಕೆ ಪ್ರಶಾಂತ್ ನೀಲ್ ಅವರ ನಿರ್ದೇಶನವಿದೆ. ರವಿ ಬಸ್ರೂರ್ ಅವರು ಸಂಗೀತ ಸಂಯೋಜಿಸಿದ್ದರೆ ಭುವನ್ ಗೌಡ ಛಾಯಾಗ್ರಹಣ ಮಾಡಿದ್ದಾರೆ.

    ಇದೀಗ ನಮ್ಮ ಕನ್ನಡದ ಹೆಮ್ಮೆಯ ಕೆಜಿಎಫ್ ಚಾಪ್ಟರ್ 2 ಈಗಾಗಲೇ ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿ ಉತ್ತಮ ರೇಟಿಂಗ್ ಪಡೆದಿದೆ. ಇದೀಗ ಇದೇ ಶನಿವಾರ ಮಧ್ಯಾಹ್ನ 1ಗಂಟೆಗೆ ಹಾಗೂ ಸಂಜೆ 7ಗಂಟೆಗೆ ನಿಮ್ಮ ನೆಚ್ಚಿನ ಜೀ ಪಿಚ್ಚರ್‌ನಲ್ಲಿ ಪಿಚ್ಚರ್ ಪ್ರೀಮಿಯರ್ ಆಗಲಿದೆ. ಮತ್ತೊಂದು ವಿಶೇಷ ವಿಷಯವೆಂದರೆ 7ಗಂಟೆಗೆ ಸಿನಿಮಾ ಪ್ರಸಾರವಾಗುವ ವೇಳೆ ವಾಹಿನಿ ಒಂದು ಕಾಂಟೆಸ್ಟ್ ಹಮ್ಮಿಕೊಂಡಿದ್ದು ಅವರು ಕೇಳುವ ಪ್ರಶ್ನೆಗಳಿಗೆ ನೀವು ಸರಿಯಾದ ಉತ್ತರ ನೀಡಿ ಆಕರ್ಷಕ ಬಹುಮಾನ ಗೆಲ್ಲಬಹುದಾಗಿದೆ.

    Live Tv
    [brid partner=56869869 player=32851 video=960834 autoplay=true]

  • `ಕೆಜಿಎಫ್ 2’ಗೆ ಸೆಡ್ಡು ಹೊಡೆದ ಕಾಂತಾರ: 100 ಕೋಟಿ ಕಲೆಕ್ಷನ್‌ನತ್ತ ಸಿನಿಮಾ

    `ಕೆಜಿಎಫ್ 2’ಗೆ ಸೆಡ್ಡು ಹೊಡೆದ ಕಾಂತಾರ: 100 ಕೋಟಿ ಕಲೆಕ್ಷನ್‌ನತ್ತ ಸಿನಿಮಾ

    ಚಿತ್ರರಂಗದಲ್ಲಿ ಸದ್ಯ ಚಾಲ್ತಿಯಲ್ಲಿರುವ ಹೆಸರು ಒಂದೇ ಕಾಂತಾರ (Kantara Film) ಸಿನಿಮಾ. ರಿಷಬ್ ಶೆಟ್ಟಿ ನಿರ್ದೇಶನದ ದೈವದ ಕಥೆಗೆ ಚಿತ್ರರಸಿಕರು ಫಿದಾ ಆಗಿದ್ದಾರೆ. ಇನ್ನೂ ಕಲೆಕ್ಷನ್ ವಿಚಾರದಲ್ಲಿ `ಕೆಜಿಎಫ್ 2’ಗೆ(Kgf 2) ಸೆಡ್ಡು ಹೊಡೆದು `ಕಾಂತಾರ’ 100 ಕೋಟಿ ಕಲೆಕ್ಷನ್ ಮಾಡುವತ್ತ ಮುನ್ನುಗ್ಗುತ್ತಿದೆ.

    ಕನ್ನಡದ ಸಿನಿಮಾ `ಕಾಂತಾರ’ವನ್ನು ಅಭಿಮಾನಿಗಳು ಮುಗಿಬಿದ್ದು ನೋಡುತ್ತಿದ್ದಾರೆ. ರಿಷಬ್ (Rishab Shetty) ಕಲ್ಪನೆಯ ಸಿನಿಮಾಗೆ ಅಭಿಮಾನಿಗಳು ಭೇಷ್ ಎಂದಿದ್ದಾರೆ. ಇದೀಗ ಬಹುಭಾಷೆಗಳಲ್ಲಿ ರಿಲೀಸ್‌ಗೆ ಸಜ್ಜಾಗಿದೆ. `ಕೆಜಿಎಫ್ 2′ ಚಿತ್ರದ ಕಲೆಕ್ಷನ್ ಅನ್ನು ಮೀರಿ, ಕಾಂತಾರ ಸಿನಿಮಾ ಸೌಂಡ್ ಮಾಡುತ್ತಿದೆ. ಇದನ್ನೂ ಓದಿ:ಸೈಫ್ ಅಲಿ ಖಾನ್ ಪುತ್ರಿಯ ಜೊತೆ ಶುಭಮನ್ ಗಿಲ್ ಡೇಟಿಂಗ್

    ಕಾಂತಾರ ಸಿನಿಮಾ ಮೊದಲ ವಾರಕ್ಕಿಂತ ಎರಡನೇ ವಾರ 40%ರಷ್ಟು ಕಲೆಕ್ಷನ್ ಮಾಡಿದೆ. ಎರಡನೇ ವಾರದಲ್ಲಿ 36.50 ಕೋಟಿ ಗಳಿಕೆ ಮಾಡಿದೆ. ಗಲ್ಲಾಪೆಟ್ಟಿಗೆಯ ಒಟ್ಟು ಗಳಿಕೆ 62.75 ಕೋಟಿ ರೂಪಾಯಿ ಗಳಿಸಿದೆ. ಎರಡೇ ವಾರಕ್ಕೆ ನೂರು ಕೋಟಿ ಕ್ಲಬ್ ಮಾಡುತ್ತ ಮುನ್ನುಗ್ಗುತ್ತಿದೆ. ಈ ಮೂಲಕ `ಕೆಜಿಎಫ್ 2′ ದಾಖಲೆಯನ್ನ ಕಾಂತಾರ ಉಡೀಸ್ ಮಾಡಿದೆ.

    ಗಲ್ಲಾಪೆಟ್ಟಿಗೆ ಕಲೆಕ್ಷನ್ ಹೀಗಿದೆ.

    2ನೇ ಶುಕ್ರವಾರ-4.40 ಕೋಟಿ ರೂ.
    2ನೇ ಶನಿವಾರ- 6.50 ಕೋಟಿ ರೂ.
    2ನೇ ಭಾನುವಾರ-7.50 ಕೋಟಿ ರೂ.
    2ನೇ ಸೋಮವಾರ-4.75 ಕೋಟಿ ರೂ
    2ನೇ ಮಂಗಳವಾರ-4.60 ಕೋಟಿ ರೂ.
    2ನೇ ಬುಧವಾರ -4.50 ಕೋಟಿ ರೂ.
    2ನೇ ಗುರುವಾರ- 4.25 ಕೋಟಿ ರೂ.

    ಒಟ್ಟು- ರೂ. 62.75 ಕೋಟಿ ರೂ. ಕಾಂತಾರ ಕಲೆಕ್ಷನ್ ಮಾಡಿದೆ.

    Live Tv
    [brid partner=56869869 player=32851 video=960834 autoplay=true]